ಪಾಪ್ ಸಂಗೀತದ​ ಐಕಾನ್​ ಶಕೀರಾ ಬದುಕಲ್ಲಿ ಹೊಸ ಲವ್ ಸ್ಟೋರಿ?; 60ವರ್ಷದ ನಟನಿಗೆ ಆಕೆ ಮೇಲೆ ವಿಪರೀತ ಆಸಕ್ತಿ ! - Vistara News

ಬಾಲಿವುಡ್

ಪಾಪ್ ಸಂಗೀತದ​ ಐಕಾನ್​ ಶಕೀರಾ ಬದುಕಲ್ಲಿ ಹೊಸ ಲವ್ ಸ್ಟೋರಿ?; 60ವರ್ಷದ ನಟನಿಗೆ ಆಕೆ ಮೇಲೆ ವಿಪರೀತ ಆಸಕ್ತಿ !

Page Six ಎಂಬ ವೆಬ್​ಸೈಟ್​ವೊಂದು ಈ ಬಗ್ಗೆ ವರದಿ ಮಾಡಿದೆ. ‘ಶಕೀರಾ ಮತ್ತು ಟಾಮ್​ ಕ್ರೂಸ್​ ಒಟ್ಟಾಗಿಯೇ ಕಾರ್​ ರೇಸ್​​ನಲ್ಲಿ ಪಾಲ್ಗೊಂಡಿದ್ದರು. ಟಾಮ್ ಕ್ರೂಸ್​ ಅವರು ಶಕೀರಾರನ್ನು ಅತ್ಯಂತ ಆಸಕ್ತಿಯಿಂದ ಹಿಂಬಾಲಿಸುತ್ತಿದ್ದರು ಎಂದು ಹೇಳಿದೆ.

VISTARANEWS.COM


on

Tom Cruise and Shakira Dating news In Hollywood
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾಲಿವುಡ್ ಅಂಗಳದಲ್ಲಿ ಹೊಸದೊಂದು ಪ್ರೀತಿ ಅರಳಿದ ಸುದ್ದಿ ವರದಿಯಾಗುತ್ತಿದೆ. ಸುಪ್ರಸಿದ್ಧ ಪಾಪ್​ ಗಾಯಕಿ ಶಕೀರಾ (Pop star shakira) ಮತ್ತು ನಟ ಟಾಮ್ ಕ್ರೂಸ್ (Tom Cruise) ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬುದೊಂದು ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ದಕ್ಷಿಣ ಫ್ಲೋರಿಡಾದ ಮೈಮಿಯಲ್ಲಿ ನಡೆದ 2023ನೇ ವರ್ಷದ ಫಾರ್ಮುಲಾ ಒನ್​ ಗ್ರ್ಯಾಂಡ್​ ಪ್ರಿಕ್ಸ್​ನಲ್ಲಿ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದರು. ಶಕೀರಾ ಮತ್ತು ಟಾಮ್​ ಕ್ರೂಸ್​ ಒಟ್ಟಾಗಿರುವ ಫೋಟೋ ಇಂಟರ್​​ನೆಟ್​​ನಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ​ ಫಾರ್ಮುಲಾ ಒನ್​ ಕಾರ್ ರೇಸ್​​ನಲ್ಲಿ ಶಕೀರಾ ಮತ್ತು ಟಾಮ್​ ಕ್ರೂಸ್ ಅವರು ಜತೆಗೇ ಇದ್ದು ಮಾತಾಡಿಕೊಂಡಿದ್ದರು. ಅದಾದ ಮೇಲೆ ಟಾಮ್ ಕ್ರೂಸ್ ಅವರು ಶಕೀರಾರಿಗೆ ಹೂವು ಕಳಿಸಿದ್ದಾರೆ ಎಂಬುದೊಂದು ವದಂತಿಯೂ ಜೋರಾಗಿಯೇ ಹರಡುತ್ತಿದೆ.

Page Six ಎಂಬ ವೆಬ್​ಸೈಟ್​ವೊಂದು ಈ ಬಗ್ಗೆ ವರದಿ ಮಾಡಿದೆ. ‘ಶಕೀರಾ ಮತ್ತು ಟಾಮ್​ ಕ್ರೂಸ್​ ಒಟ್ಟಾಗಿಯೇ ಕಾರ್​ ರೇಸ್​​ನಲ್ಲಿ ಪಾಲ್ಗೊಂಡಿದ್ದರು. ಟಾಮ್ ಕ್ರೂಸ್​ ಅವರು ಶಕೀರಾರನ್ನು ಅತ್ಯಂತ ಆಸಕ್ತಿಯಿಂದ ಹಿಂಬಾಲಿಸುತ್ತಿದ್ದರು. ಅವರಿಬ್ಬರ ಮಧ್ಯೆ ಕೆಮೆಸ್ಟ್ರಿ ಇರುವುದು ಸ್ಪಷ್ಟವಾಗಿ ಕಾಣುತ್ತಿತ್ತು’ ಎಂದು ಅವರನ್ನು ಹತ್ತಿರದಿಂದ ನೋಡಿದವರೊಬ್ಬರು ತಿಳಿಸಿದ್ದಾಗಿ ಪೇಜ್ ಸಿಕ್ಸ್​ ವರದಿಯಲ್ಲಿ ಉಲ್ಲೇಖಿಸಿದೆ. ‘ಶಕೀರಾರಿಗೆ ಕೆಳಗೆ ಬೀಳಲು ಒಂದು ಮೆತ್ತನೆಯ ತಲೆದಿಂಬು ಬೇಕು. ಅದು ಟಾಮ್​ ಆಗಿರಬಹುದು. ಟಾಮ್ ಅವರು ನೋಡಲು ಸುಂದರವಾಗಿದ್ದಾರೆ, ಪ್ರತಿಭಾನ್ವಿತ’ ಅದರಾಚೆ ಜೋಕ್​ ಮಾಡಬೇಕು ಎಂದರೆ, ಶಕೀರಾ ಅವರು ಟಾಮ್​ಗಿಂತಲೂ ಎತ್ತರವಾಗೇನೂ ಇಲ್ಲ’ ಎಂದು ಮಾಧ್ಯಮದಲ್ಲಿ ಬರೆಯಲಾಗಿದೆ.

ಪಾಪ್​ ಸಂಗೀತದ ಐಕಾನ್ ಎಂದೇ ಬಿಂಬಿತರಾದ 46ವರ್ಷದ ಶಕೀರಾ ಅವರು ಕಳೆದ ವರ್ಷ ಜೂನ್​​ನಲ್ಲಿ ತಮ್ಮ 12 ವರ್ಷಗಳ ಸಂಗಾತಿ, ಖ್ಯಾತ ಫೂಟ್​ಬಾಲ್ ಆಟಗಾರ ಗೆರಾರ್ಡ್ ಪಿಕ್ವೆ ಅವರೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದರು. ಇವರಿಗೆ ಮಿಲನ್ ಮತ್ತು ಸಶಾ ಎಂಬ ಮಕ್ಕಳು ಇದ್ದಾರೆ. ಅಂದಹಾಗೇ ಈ ಗೆರಾರ್ಡ್​ ಮತ್ತು ಶಕೀರಾ ನಡುವಿನ ಸಂಬಂಧ ಮುರಿಯಲು ಕ್ಲಾರಾ ಚಿಯಾ ಮಾರ್ಟಿ ಎಂಬ 24ವರ್ಷದ ಯುವತಿ ಕಾರಣ. ಶಕೀರಾ ಅವರ ಫ್ಯಾನ್​ ಆಗಿದ್ದ ಈಕೆ ಬರುಬರುತ್ತ ಗೆರಾರ್ಡ್​ ಪಿಕ್ವೆ ಗರ್ಲ್​ಫ್ರೆಂಡ್ ಆಗಿ ಬದಲಾಗಿದ್ದಳು. ಗೆರಾರ್ಡ್​ ಜತೆಗಿನ ಸಂಬಂಧ ಮುರಿದ ಮೇಲೆ ಶಕೀರಾ ಒಬ್ಬಂಟಿಯಾಗಿಯೆ ಇದ್ದರು.

ಇದನ್ನೂ ಓದಿ: Fifa World Cup | ಕತಾರ್‌ನಲ್ಲಿ ಫುಟ್ಬಾಲ್‌ ಮಹಾ ಸಮರಕ್ಕೆ ಕ್ಷಣಗಣನೆ: ಪಂದ್ಯಗಳನ್ನು ಎಲ್ಲಿ ವೀಕ್ಷಿಸಬಹುದು?

ಟಾಮ್​ ಕ್ರೂಸ್ ಅವರು ಅಮೆರಿಕನ್​ ನಟ ಮತ್ತು ನಿರ್ಮಾಪಕ ಇವರು ಮೂರು ಮದುವೆಯಾಗಿದ್ದರೂ ಸದ್ಯ ಯಾರೂ ಜತೆಯಲ್ಲಿ ಇಲ್ಲ. ಅವರಿಗೆ ಈಗ 60ವರ್ಷವಾಗಿದ್ದು ಇದೇ ಹೊತ್ತಲ್ಲಿ ಶಕೀರಾ ಜತೆ ಹೊಸ ಜೀವನ ಶುರು ಮಾಡುತ್ತಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಇಂಟರ್​ನೆಟ್​ನಲ್ಲಿ ಇವರ ಫೋಟೋ-ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಭಾವ ವ್ಯಕ್ತವಾಗಿದೆ. ಕೆಲವರು ಈ ಜೋಡಿಯನ್ನು ಇಷ್ಟಪಟ್ಟಿದ್ದಾರೆ. ಆದರೆ ಇನ್ನೂ ಕೆಲವರು ಇಷ್ಟವಿಲ್ಲ ಎನ್ನುತ್ತಿದ್ದಾರೆ. ‘ಶಕೀರಾರಿಂದ ದೂರ ಇರಿ’ ಎಂದು ಅನೇಕರು ಟಾಮ್​ ಕ್ರೂಸ್​ಗೆ ಸಲಹೆ ನೀಡುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Deepika Padukone: ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್‌: ಸಖತ್‌ ಸ್ಟೆಪ್ಸ್ ಹಾಕಿದ ಪ್ರೆಗ್ನೆಂಟ್‌ ನಟಿ!

Deepika Padukone ಈ ಜೋಡಿ ಮಾತ್ರವಲ್ಲದೇ ಹಲವು ಬಾಲಿವುಡ್‌ ಸೆಲೆಬ್ರಿಟಗಳು ವೇದಿಕೆಯಲ್ಲಿ ರಂಜಿಸಿದರು. ಶಾರುಖ್ ಅವರು 2023ರ ಹಿಟ್‌ ಚಿತ್ರ ʻಪಠಾಣ್‌ʼ ಸಿನಿಮಾದ ʻಜೂಮ್ ಜೋ ಪಠಾಣ್‌ʼ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿತ್ತು.

VISTARANEWS.COM


on

Deepika Padukone, Ranveer Singh perform on Galla Goodiyan
Koo

ಬೆಂಗಳೂರು: ಫೆಬ್ರವರಿ 29ರಂದು ದೀಪಿಕಾ (Deepika Padukone) ತಾವು ಪ್ರೆಗ್ನೆಂಟ್ ಎನ್ನುವ ವಿಚಾರ ರಿವೀಲ್ ಮಾಡಿದ್ದಾರೆ. ಇದಾದ ನಂತರ ಮೊದಲ ಬಾರಿಗೆ  ಜೋಡಿ ವೇದಿಕೆ ಮೇಲೆ ಪ್ರದರ್ಶನ ನೀಡಿದೆ. ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ದಂಪತಿ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ʻಗಲ್ಲಾ ಗುಡಿಯನ್‌ʼ (Galla Goodiyan) ಸಾಂಗ್‌ಗೆ ನೃತ್ಯ ಮಾಡಿದ್ದಾರೆ.

ವೈರಲ್‌ ಆದ ವಿಡಿಯೊದಲ್ಲಿ ರಣವೀರ್ ನೀಲಿ ಬಣ್ಣದ ಶೆರ್ವಾನಿಯನ್ನು ಧರಿಸಿದ್ದರೆ, ದೀಪಿಕಾ ಗೋಲ್ಡ್‌ನ್‌ ಮಿಶ್ರಿತ ಲೆಹೆಂಗಾವನ್ನು ಚಿನ್ನದ ಆಭರಣಗಳೊಂದಿಗೆ ಧರಿಸಿದ್ದರು. ಈ ಜೋಡಿ ಮಾತ್ರವಲ್ಲದೇ ಹಲವು ಬಾಲಿವುಡ್‌ ಸೆಲೆಬ್ರಿಟಗಳು ವೇದಿಕೆಯಲ್ಲಿ ರಂಜಿಸಿದರು. ಶಾರುಖ್ ಅವರು 2023ರ ಹಿಟ್‌ ಚಿತ್ರ ʻಪಠಾಣ್‌ʼ ಸಿನಿಮಾದ ʻಜೂಮ್ ಜೋ ಪಠಾಣ್‌ʼ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿತ್ತು. ಶಾರುಖ್‌ ಜತೆ ಅವರ ಪುತ್ರಿ ಸುಹಾನಾ ಖಾನ್, ಅಮಿತಾಭ್‌ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ, ಅನನ್ಯಾ ಪಾಂಡೆ ಮತ್ತು ಶನಯಾ ಕಪೂರ್ ಕೂಡ ಕುಣಿದು ಕುಪ್ಪಳಿಸಿದರು.

ಇದನ್ನೂ ಓದಿ: Deepika Padukone: ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ-ರಣವೀರ್: ಫ್ಯಾನ್ಸ್‌ಗೆ ಖುಷಿಯೋ ಖುಷಿ!

ದೀಪಿಕಾ ಪಡುಕೋಣೆ ಈಗ 2 ತಿಂಗಳ ಗರ್ಭಿಣಿ. ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಫೆ. 29ರ ಗುರುವಾರ ನಟಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜೋಡಿ ಪರಸ್ಪರ ಪ್ರೀತಿ ಮಾಡಿ ಮದುವೆಯಾಗಿತ್ತು. ಯಾವುದೇ ಕ್ಯಾಪ್ಷನ್​ ಇಲ್ಲ. ಮಗುವಿಗೆ ಸಂಬಂಧಿಸಿದ ಬಟ್ಟೆ, ಶೂ, ಮುಂತಾದ ವಸ್ತುಗಳಿರುವ ಚಿತ್ರವನ್ನು ಅವರು ಇನ್‌ಸ್ಟಾದಲ್ಲಿ ಪೋಸ್ಟ್​ ಮಾಡಿದ್ದರು. ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ.

Continue Reading

ಬಾಲಿವುಡ್

Shah Rukh Khan: ಅಂಬಾನಿ ಮಗನ ಮದುವೆ: ʻಜೈ ಶ್ರೀ ರಾಮ್’ ಎಂದ ಶಾರುಖ್‌ ಖಾನ್‌!

Shah Rukh Khan: ವಿಡಿಯೊವೊಂದರಲ್ಲಿ ಶಾರುಖ್ ಖಾನ್ ವೇದಿಕೆಗೆ ಬರುತ್ತಿದ್ದಂತೆ ʻಜೈ ಶ್ರೀ ರಾಮ್’. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿʼ ಎಂದು ಹೇಳಿದ್ದಾರೆ. ಶಾರುಖ್‌ ನಿರೂಪಣೆ ಜತೆಗೆ ಡ್ಯಾನ್ಸ್‌ ಮಾಡಿ ನೆರೆದಿದ್ದವರನ್ನು ರಂಜಿಸಿದ್ದಾರೆ.

VISTARANEWS.COM


on

Shah Rukh Khan chants Jai Shri Ram at Anant-Radhika pre-wedding
Koo

ಬೆಂಗಳೂರು: ನಟ ಶಾರುಖ್ ಖಾನ್ (Shah Rukh Khan) ಸೇರಿದಂತೆ ಹಲವು ಸೆಲೆಬ್ರಿಟಿಗಳು, ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ಮೂರು ದಿನಗಳ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದ್ದರು. ಎರಡನೇ ದಿನ ಶನಿವಾರ (ಮಾ.2) ಸಂಜೆ ನಡೆದ ಇವೆಂಟ್‌ನಲ್ಲಿ ಶಾರುಖ್‌, ಸಲ್ಮಾನ್‌ ಖಾನ್‌, ಆಮೀರ್‌ ಮೂವರು ಒಟ್ಟಿಗೆ ಡ್ಯಾನ್ಸ್‌ ಮಾಡಿದ್ದಾರೆ. ಶಾರುಖ್‌ ಅವರ ಹಲವಾರು ವೀಡಿಯೊಗಳು ಮತ್ತು ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಡಿಯೊವೊಂದರಲ್ಲಿ ಶಾರುಖ್ ವೇದಿಕೆಗೆ ಬರುತ್ತಿದ್ದಂತೆ ʻಜೈ ಶ್ರೀ ರಾಮ್’. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿʼಎಂದು ಹೇಳಿದ್ದಾರೆ. ಶಾರುಖ್‌ ನಿರೂಪಣೆ ಜತೆಗೆ ಡ್ಯಾನ್ಸ್‌ ಮಾಡಿ ನೆರೆದಿದ್ದವರನ್ನು ರಂಜಿಸಿದ್ದಾರೆ.

ಕಪ್ಪು ಕುರ್ತಾ, ಜಾಕೆಟ್ ಮತ್ತು ಪೈಜಾಮಾ ಧರಿಸಿ ಶಾರುಖ್‌ ವೇದಿಕೆಗೆ ಆಗಮಿಸಿದ್ದರು. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುತ್ತ, ‘ಜೈ ಶ್ರೀ ರಾಮ್’. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ. ನೀವು ನೃತ್ಯ ಪ್ರದರ್ಶನಗಳನ್ನು ನೋಡಿದ್ದೀರಿ. ಸಹೋದರರು, ಸಹೋದರಿಯರು ನೃತ್ಯ ಮಾಡಿದ್ದಾರೆ. ಇದೆಲ್ಲ ಒಗ್ಗಟ್ಟಿನಿಂದ ಮಾತ್ರ ಸಾಧ್ಯʼʼಎಂದು ಹೇಳಿರುವ ವಿಡಿಯೊ ವೈರಲ್‌ ಆಗಿದೆ.

ಮತ್ತೊಂದು ವಿಡಿಯೊದಲ್ಲಿ, ಶಾರುಖ್ ಅವರು 2023ರ ಹಿಟ್‌ ಚಿತ್ರ ʻಪಠಾಣ್‌ʼ ಸಿನಿಮಾದ ʻಜೂಮ್ ಜೋ ಪಠಾಣ್‌ʼ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಶಾರುಖ್‌ ಜತೆ ಅವರ ಪುತ್ರಿ ಸುಹಾನಾ ಖಾನ್, ಅಮಿತಾಭ್‌ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ, ಅನನ್ಯಾ ಪಾಂಡೆ ಮತ್ತು ಶನಯಾ ಕಪೂರ್ ಕೂಡ ಕುಣಿದು ಕುಪ್ಪಳಿಸಿದರು.

ಇದನ್ನೂ ಓದಿ: Shah Rukh Khan : ಶಾರುಖ್‌, ರಣವೀರ್‌ ಜತೆ ಪೋಸ್‌ ಕೊಟ್ಟ ಕ್ರಿಕೆಟಿಗ ಡ್ವೇನ್ ಬ್ರಾವೋ!

ಜೈ ಶ್ರೀರಾಮ್‌ ಎಂದ ಶಾರುಖ್‌

ಅನಂತ್ ಅವರು ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಮಗ. ಜುಲೈನಲ್ಲಿ ನಡೆಯಲಿರುವ ಮದುವೆಗೆ ನಾಲ್ಕು ತಿಂಗಳ ಮುಂಚಿತವಾಗಿ ಮೂರು ದಿನಗಳ ಪೂರ್ವ ವಿವಾಹ ಕಾರ್ಯಕ್ರಮ ನಡೆಯುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಆಮೀರ್ ಖಾನ್, ಸೈಫ್ ಅಲಿ ಖಾನ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಸೇರಿದಂತೆ ಹಲವರು ಗಣ್ಯರು ಭಾಗಿಯಾಗಿದ್ದರು.

Continue Reading

ಬಾಲಿವುಡ್

Anant Ambani: `ನಾಟು ನಾಟು’ಗೆ ಸಖತ್‌ ಸ್ಟೆಪ್ಸ್‌ ಹಾಕಿದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್‌!

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ, ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಉದ್ಯಮಿ ಮುಕೇಶ್‌ (Mukesh Ambani) ಅಂಬಾನಿ ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ವಿವಾಹ ಪೂರ್ವ ಸಂಭ್ರಮದ ಹಿನ್ನೆಲೆಯಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಸ್ವರ್ಗವೇ ಧರೆಗಿಳಿದಿತ್ತು.

VISTARANEWS.COM


on

SRK Aamir Salman Come Together For Performance Anant Wedding
Koo

ಬೆಂಗಳೂರು: ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದ ಎರಡನೇ ದಿನ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಅವರು ʻನಾಟು ನಾಟುʼ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ಸಲ್ಮಾನ್‌ ತಮ್ಮ ಸಿಗ್ನೇಚರ್​ ಹುಕ್ ಸ್ಟೆಪ್ಸ್‌ ಹಾಕಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಶಾರುಖ್‌, ಸಲ್ಮಾನ್ ಮತ್ತು ಆಮೀರ್ ಹಲವು ವರ್ಷಗಳ ನಂತರ ಮತ್ತೆ ವೇದಿಕೆಯಲ್ಲಿ ಈ ಸಮಾರಂಭದ ಮೂಲಕ ಒಂದಾದರು. ಅಭಿಮಾನಿಗಳಿಗೆ ರೋಮಾಂಚನಕಾರಿ ಮತ್ತು ಮನರಂಜನೆಯ ಅನುಭವ ನೀಡಿದರು. ಶಾರುಖ್, ಸಲ್ಮಾನ್ ಮತ್ತು ಆಮೀರ್ ಈವೆಂಟ್‌ಗಾಗಿ ಕುರ್ತಾ ಮತ್ತು ಪೈಜಾಮಾಗಳನ್ನು ಧರಿಸಿದ್ದರು. ಈ ಮೂವರು ದಿಗ್ಗಜರು ʻಚೈಯಾ ಚೈಯಾʼ, ʻಮುಜ್ಸೆ ಶಾದಿ ಕರೋಗಿʼಯಿಂದ, ರಂಗ್ ದೇ ಬಸಂತಿವರೆಗೆ ಹಿಟ್‌ ಸಾಂಗ್‌ಗಳನ್ನು ಪ್ರದರ್ಶಿಸಿದರು. ಮತ್ತೊಂದು ವೀಡಿಯೊದಲ್ಲಿ, ಶಾರುಖ್‌ ಅವರು ಪಠಾಣ್‌ ಸಿನಿಮಾದ ʻಜೂಮ್ ಜೋ ಪಠಾಣ್‌ʼ ಹಾಡಿಗೆ ನೃತ್ಯ ಮಾಡಿದರು. ಮೂವರು ಖಾನ್‌ಗಳು ಮತ್ತೆ ಒಂದಾಗಿದ್ದನ್ನು ಕಂಡು ಅಭಿಮಾನಿಗಳು ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾರುಖ್‌, ಸಲ್ಮಾನ್ ಮತ್ತು ಆಮೀರ್ ಹೊರತುಪಡಿಸಿ, ಹಲವಾರು ಬಾಲಿವುಡ್ ತಾರೆಯರು ಈವೆಂಟ್‌ನಲ್ಲಿ ಕಾಣಿಸಿಕೊಂಡರು. ಇವರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಆಡ್ವಾಣಿ, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ವರುಣ್ ಧವನ್, ಅನಿಲ್ ಕಪೂರ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಸೇರಿದ್ದಾರೆ. ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಹಾಜರಿದ್ದರು. ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಕ್ರೀಡಾಪಟುಗಳು ಕೂಡ ಆಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Anant Ambani: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ಗೆ ಬಾಲಿವುಡ್‌ ಸೆಲೆಬ್ರಿಟಿಗಳು ಪೋಸ್‌ ಕೊಟ್ಟಿದ್ದು ಹೀಗೆ!

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ, ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಉದ್ಯಮಿ ಮುಕೇಶ್‌ (Mukesh Ambani) ಅಂಬಾನಿ ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ವಿವಾಹ ಪೂರ್ವ ಸಂಭ್ರಮದ ಹಿನ್ನೆಲೆಯಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಸ್ವರ್ಗವೇ ಧರೆಗಿಳಿದಿತ್ತು. ಸಾವಿರಾರು ಗಣ್ಯರ ಆಗಮನದ ಮಧ್ಯೆಯೇ ಅದ್ಧೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

Continue Reading

ಬಾಲಿವುಡ್

Anant Ambani: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ಗೆ ಬಾಲಿವುಡ್‌ ಸೆಲೆಬ್ರಿಟಿಗಳು ಪೋಸ್‌ ಕೊಟ್ಟಿದ್ದು ಹೀಗೆ!

Anant Ambani: ಅಂಬಾನಿ ಫ್ಯಾಮಿಲಿಯ ಈ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳು ಹೈ ಸೊಸೈಟಿ ಫ್ಯಾಷನ್‌ನ ಅನಾವರಣಕ್ಕೆ ಸಾಕ್ಷಿಯಾಗಲಿದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ಗೆ ಬಾಲಿವುಡ್‌ ಸೆಲೆಬ್ರಿಟಿಗಳು ಪೋಸ್‌ ಕೊಟ್ಟಿದ್ದು ಹೀಗೆ!

VISTARANEWS.COM


on

Anant Ambani wedding bollywood celebrities Pose
Koo

 ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ, ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಉದ್ಯಮಿ ಮುಕೇಶ್‌ (Mukesh Ambani) ಅಂಬಾನಿ ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ವಿವಾಹ ಪೂರ್ವ ಸಂಭ್ರಮದ ಹಿನ್ನೆಲೆಯಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಸ್ವರ್ಗವೇ ಧರೆಗಿಳಿದಿದೆ!

ಸಾವಿರಾರು ಗಣ್ಯರ ಆಗಮನದ ಮಧ್ಯೆ (Anant Ambani) ಅದ್ಧೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 

ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ಖ್ಯಾತ ಪಾಪ್‌ ಗಾಯಕಿ ರಿಹಾನಾ (Rihanna) ಅವರ ಲೈವ್‌ ಶೋ ಕೂಡ ಅದ್ಧೂರಿಯಾಗಿ ನೆರವೇರಿದೆ. 

ಮದುವೆ ಪೂರ್ವ ಸಂಭ್ರಮದಲ್ಲಿ ಶಾರುಖ್ ಖಾನ್, ಗೌರಿ ಖಾನ್, ಸಲ್ಮಾನ್ ಖಾನ್, ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಸದ್ಗುರು, ಅಕ್ಷಯ್ ಕುಮಾರ್, ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು. 

ಆಲಿಯಾ ಭಟ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಣಬೀರ್ ಕಪೂರ್, ನೀತು ಕಪೂರ್, ಅನನ್ಯಾ ಪಾಂಡೆ, ಜಾಹ್ನವಿ ಕಪೂರ್, ಶನಯಾ ಕಪೂರ್, ಶ್ರದ್ಧಾ ಕಪೂರ್, ಸೋನಮ್ ಕಪೂರ್ ಅಹುಜಾ, ಅನಿಲ್ ಕಪೂರ್, ಡೇವಿಡ್ ಧವನ್, ಎಂಎಸ್ ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ನೆಹ್ವಾಲ್, ಹಾರ್ದಿಕ್ ಪಾಂಡ್ಯ ಜಾಫ್ರಿ, ಅಮೀರ್ ಖಾನ್, ಸುಹಾನಾ ಖಾನ್, ರಿಯಾ ಕಪೂರ್, ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಜಾನ್ ಅಬ್ರಹಾಂ, ಕರಿಷ್ಮಾ ಕಪೂರ್, ಅಟ್ಲೀ, ರಾಮ್ ಚರಣ್, ಮನೀಶ್ ಮಲ್ಹೋತ್ರಾ, ಮಾಧುರಿ ದೀಕ್ಷಿತ್ ನೇನೆ, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತರರ ಇದ್ದರು.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಂಭ್ರಮಾಚರಣೆ ಮಾರ್ಚ್ 3ರವರೆಗೆ ನಡೆಯಲಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ ಆಯೋಜಿಸಲಾಗಿದೆ.

ಗುಜರಾತ್‌ನ ಜಾಮ್ ನಗರದ ಮೊಟಿಖ್ ವಾಡಿಯಲ್ಲಿ ನಡೆಯಲಿರುವ ಈ ಗ್ರ್ಯಾಂಡ್‌ ಕಾರ್ಯಕ್ರಮಗಳಲ್ಲಿ ಒಂದೊಂದು ದಿನವೂ ಒಂದೊಂದು ಬಗೆಯ ಡ್ರೆಸ್‌ಕೋಡ್‌ ನಿಗಧಿಪಡಿಸಲಾಗಿದೆ.

ಇದನ್ನೂ ಓದಿ: Anant Ambani: ಅನಂತ್ ಅಂಬಾನಿ ನೇತೃತ್ವದಲ್ಲಿ ವನ್ಯಜೀವಿಗಳಿಗಾಗಿ 3000 ಎಕರೆಯ ‘ವಂತಾರ’ ; ಏನಿದೆ ಇಲ್ಲಿ?

 ಪ್ರತಿ ಕಾರ್ಯಕ್ರಮಕ್ಕೂ ಹೊಂದುವಂತೆ ಡ್ರೆಸ್‌ಕೋಡ್‌ ರೂಪಿಸಲಾಗಿದೆ. ಅಷ್ಟೇ ಏಕೆ! ಭಾಗವಹಿಸುವ ಸೆಲೆಬ್ರೆಟಿಗಳಿಗೆ ಸಹಾಯವಾಗುವಂತೆ ಮೇಕಪ್‌ ಆರ್ಟಿಸ್ಟ್‌ನಿಂದಿಡಿದು ಎಲ್ಲಾ ಸೌಲಭ್ಯಗಳನ್ನು ಅಲ್ಲಿಯೇ ಕಲ್ಪಿಸಲಾಗಿದೆ ಎನ್ನುತ್ತವೆ ಮೂಲಗಳು.

ಅಂಬಾನಿ ಫ್ಯಾಮಿಲಿಯ ಈ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳು ಹೈ ಸೊಸೈಟಿ ಫ್ಯಾಷನ್‌ನ ಅನಾವರಣಕ್ಕೆ ಸಾಕ್ಷಿಯಾಗಲಿದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

2023ರ ಜನವರಿಯಲ್ಲಿ ಅನಂತ್​ ಹಾಗೂ ರಾಧಿಕಾ ನಿಶ್ಚಿತಾರ್ಥ ನಡೆದಿತ್ತು. ಇದೀಗ ಮದುವೆಗೆ ಸಿದ್ಧತೆಗಳು ಜೋರಾಗಿವೆ. ಮದುವೆ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ದುಬಾರಿ ಉಡುಗೊರೆಗಳನ್ನು ನೀಡುವುದು ಅಂಬಾನಿ ಕುಟುಂಬದ ಸಂಪ್ರದಾಯ. 

ಇದೀಗ ಪ್ರಿ ವೆಡ್ಡಿಂಗ್‌ ಸಮಾರಂಭಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳು ಪಾಪರಾಜಿಗಳಿಗೆ ಪೋಸ್‌ ಕೊಟ್ಟಿರುವ ಫೋಟೊ ವೈರಲ್‌ ಆಗಿದೆ.

ಕುಟುಂಬದ ಜತೆ ಸೆಲೆಬ್ರಿಟಿಗಳು ಪೋಸ್‌ ಕೊಟ್ಟಿದ್ದಾರೆ.

Continue Reading
Advertisement
Mother attack to child
ಬೆಂಗಳೂರು23 mins ago

Bengaluru News : ಛೇ.. ಇವಳೆಂಥಾ ತಾಯಿ? ಬುದ್ಧಿ ಕಲಿಸಲು 3 ವರ್ಷದ ಮಗುವನ್ನು ಕೂಡಿಹಾಕಿದ್ದಳಂತೆ!

Robin Minz
ಪ್ರಮುಖ ಸುದ್ದಿ24 mins ago

Accident News : 3.6 ಕೋಟಿ ರೂ. ಪಡೆದ ಬುಡಕಟ್ಟು ಸಮುದಾಯದ ಐಪಿಎಲ್ ಆಟಗಾರನಿಗೆ ಬೈಕ್ ಅವಘಡದಲ್ಲಿ ಗಾಯ

Elephant Attack New
ಕೊಡಗು38 mins ago

Elephant Attack : ನಿಶಾನಿ ಬೆಟ್ಟದಲ್ಲಿ ಆನೆ ದಾಳಿಗೆ ವೃದ್ಧ ಬಲಿ; ಟ್ರೆಕಿಂಗ್‌ಗೆ ಹೋದವರಿಗೆ ಕಂಡಿತು ಶವ

Yuva Rajkumar And Shiva Rajkumar Dance Together obbane shiva song
ಸ್ಯಾಂಡಲ್ ವುಡ್41 mins ago

Yuva Movie: ಡ್ಯಾನ್ಸ್ ಮೂವ್ಸ್‌ನಲ್ಲಿ ಕಿಚ್ಚು ಹಚ್ಚಿದ ದೊಡ್ಮನೆ ಕುಡಿಗಳು: ಯಾರು ಬೆಸ್ಟ್?

Team India
ಕ್ರೀಡೆ53 mins ago

WTC Ranking : ಭಾರತ ತಂಡವೀಗ ನಂಬರ್​ 1

BY Vijayendra
ಬೆಂಗಳೂರು1 hour ago

BY Vijayendra : ಬಿಜೆಪಿ ಸಂಕಲ್ಪ ಪತ್ರಕ್ಕಾಗಿ ರಾಜ್ಯದಲ್ಲಿ3 ಲಕ್ಷ ಜನರ ಅಭಿಪ್ರಾಯ ಸಂಗ್ರಹ; ಬಿ.ವೈ ವಿಜಯೇಂದ್ರ

Encounter In Kanker
ದೇಶ2 hours ago

Encounter In Kanker: ಛತ್ತೀಸ್‌ಗಢದಲ್ಲಿ ಮಾವೋವಾದಿಗಳೊಂದಿಗೆ ಎನ್‌ಕೌಂಟರ್‌; ಕಾನ್ಸ್‌ಟೇಬಲ್‌ ಹುತಾತ್ಮ

Job layoff
ಪ್ರಮುಖ ಸುದ್ದಿ2 hours ago

Viral Video : ಕೆಲಸ ಹೋದ ಬೇಜಾರಲ್ಲಿ ಯುವತಿ ಮಾಡಿದ ಕ್ರಿಯೇಟಿವ್​ ವಿಡಿಯೊಗೆ ಬಂತು ಸಿಕ್ಕಾಪಟ್ಟೆ ಆಫರ್​ಗಳು!

Tamannaah to star next in Odela 2
ಟಾಲಿವುಡ್2 hours ago

Vasishta Simha: ಮಿಲ್ಕಿ ಬ್ಯೂಟಿ ಜತೆ ಮೆರವಣಿಗೆ ಹೊರಟ ಕನ್ನಡದ ಸಿಂಹ!

Varalaxmi Sarathkumar gets engaged Nicholai Sachdev
South Cinema2 hours ago

Varalaxmi Sarathkumar:‌ 14 ವರ್ಷದ ಪ್ರೀತಿಗೆ 38ನೇ ವಯಸ್ಸಿನಲ್ಲಿ ನಿಶ್ಚಿತಾರ್ಥದ ಮುದ್ರೆ ಹಾಕಿದ ಮಾಣಿಕ್ಯ ನಟಿ!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ10 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು21 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು1 day ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌