ಟರ್ಕಿ ಭೂಕಂಪದ ಭೀಕರತೆ; ಎಲ್ಲೆಲ್ಲೂ ಶವಗಳು ಕೊಳೆತ ವಾಸನೆ, 94 ತಾಸು ತನ್ನ ಮೂತ್ರವನ್ನೇ ಕುಡಿದು ಬದುಕಿದ್ದ ಯುವಕ - Vistara News

ವಿದೇಶ

ಟರ್ಕಿ ಭೂಕಂಪದ ಭೀಕರತೆ; ಎಲ್ಲೆಲ್ಲೂ ಶವಗಳು ಕೊಳೆತ ವಾಸನೆ, 94 ತಾಸು ತನ್ನ ಮೂತ್ರವನ್ನೇ ಕುಡಿದು ಬದುಕಿದ್ದ ಯುವಕ

ಕಳೆದ ನಾಲ್ಕು ದಿನಗಳಿಂದ ಅವಶೇಷಗಳಡಿಯಲ್ಲೇ ಸಿಲುಕಿದ್ದ 17 ವರ್ಷದ ಹುಡುಗನೊಬ್ಬನನ್ನು ಈಗ ಹೊರತೆಗೆದು ರಕ್ಷಿಸಲಾಗಿದೆ. ಈ ಹುಡುಗ ನಾಲ್ಕು ದಿನ ಹೇಗಿದ್ದ ಎಂಬುದನ್ನು ಕೇಳಿದರೆ, ನಿಜಕ್ಕೂ ಮನಸಿಗೆ ಖೇದ ಅನ್ನಿಸುತ್ತದೆ.

VISTARANEWS.COM


on

Turkey Syria Earthquake Teenager Drank Urine Under Debris 4 Days
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟರ್ಕಿ-ಸಿರಿಯಾ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 24 ಸಾವಿರಕ್ಕೆ ಏರಿಕೆಯಾಗಿದೆ. ಸೋಮವಾರ (ಫೆ.6) ಟರ್ಕಿ ಮತ್ತು ಸಿರಿಯಾದಲ್ಲಿ 24ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿತ್ತು (Turkey Earthquake). ದೊಡ್ಡದೊಡ್ಡ ಅಪಾರ್ಟ್​ಮೆಂಟ್​ಗಳು ಕುಸಿದಿವೆ. ಭೂಮಿ ಬಾಯ್ಬಿಟ್ಟಿದೆ. ಕುಸಿದ ಮನೆಗಳ ಅವಶೇಷಗಳಡಿ ಸಿಲುಕಿದ ಜನರು ಅಲ್ಲಲ್ಲೇ ಪ್ರಾಣಬಿಡುತ್ತಿದ್ದಾರೆ. ಇಷ್ಟರ ಮಧ್ಯೆ ಕೆಲವರು ಜೀವ ಹಿಡಿದುಕೊಂಡು ಅಲ್ಲೇ ಮಲಗಿದ್ದಾರೆ. ಅಂಥವರನ್ನು ರಕ್ಷಿಸುವ ಕಾರ್ಯಾಚರಣೆಯೂ ಭರದಿಂದ ಸಾಗುತ್ತಿದೆ. ಟರ್ಕಿ-ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಭಾರತದಿಂದಲೂ ರಕ್ಷಣಾ ತಂಡಗಳು ತೆರಳಿವೆ. ಈಗೀಗ ಟರ್ಕಿ-ಸಿರಿಯಾದ ಭೂಕಂಪದ ಭೀಕರತೆ ಮತ್ತಷ್ಟು ಗೋಚರವಾಗುತ್ತಿದೆ. ಎಲ್ಲಿ ನೋಡಿದರೂ ಶವ ಕೊಳೆತ ವಾಸನೆ. ಕಲ್ಲುಮಣ್ಣುಗಳಡಿ ಸಿಕ್ಕಿ, ಅಲ್ಲಿಯೇ ಉಸಿರು ಚೆಲ್ಲಿರುವವರ ಮೃತದೇಹಗಳು ಕೊಳೆಯಲು ಪ್ರಾರಂಭಿಸಿದೆ.

ಟರ್ಕಿ-ಸಿರಿಯಾ ಭೂಕಂಪದ ಕರಾಳತೆ ತೋರಿಸುವ ಹಲವು ಫೋಟೋ-ವಿಡಿಯೊಗಳು, ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿವೆ. ಕಳೆದ ನಾಲ್ಕು ದಿನಗಳಿಂದ ಅವಶೇಷಗಳಡಿಯಲ್ಲೇ ಸಿಲುಕಿದ್ದ 17 ವರ್ಷದ ಹುಡುಗನೊಬ್ಬನನ್ನು ಈಗ ಹೊರತೆಗೆದು ರಕ್ಷಿಸಲಾಗಿದೆ. ಈ ಹುಡುಗ ನಾಲ್ಕು ದಿನ ಹೇಗಿದ್ದ ಎಂಬುದನ್ನು ಕೇಳಿದರೆ, ನಿಜಕ್ಕೂ ಮನಸಿಗೆ ಖೇದ ಅನ್ನಿಸುತ್ತದೆ. ಹೊರಗೆ ಬಂದ ಬಳಿಕ ಮಾತನಾಡಿದ ಅವನು ‘ನಾನು ಈ ನಾಲ್ಕೂ ದಿನ ಜೀವ ಹಿಡಿದಿಟ್ಟುಕೊಳ್ಳುವ ಸಲುವಾಗಿ, ನನ್ನ ಮೂತ್ರವನ್ನೇ ನಾನು ಕುಡಿಯುತ್ತಿದ್ದೆ’ ಎಂದು ತಿಳಿಸಿದ್ದಾನೆ.

ಈ ಯುವಕನ ಹೆಸರು ಅದ್ನಾನ್​ ಮುಹಮ್ಮಟ್​ ಕೋರ್ಕುಟ್​. ಸೋಮವಾರ ರಾತ್ರಿ ತನ್ನ ಮನೆಯಲ್ಲಿ ಮಲಗಿದ್ದ. ಭೂಮಿ ನಡುಗಿ, ಮನೆಯೆಲ್ಲ ಕುಸಿದು ಬಿದ್ದಾಗ ಅವನಿಗೆ ಎಚ್ಚರವಾಯಿತು. ಆದರೆ ಅವನು ಸಿಮೆಂಟ್​-ಕಲ್ಲು, ಮಣ್ಣುಗಳಡಿ ಸಿಲುಕಿದ್ದ. ಥೇಟ್​ ಗರ್ಭದಲ್ಲಿ ಮಗು ಯಾವ ಸ್ಥಿತಿಯಲ್ಲಿ ಮಲಗಿರುತ್ತದೆಯೋ, ಅದೆ ಸ್ಥಿತಿಯಲ್ಲೇ ಮಲಗಿದ್ದ. ಅದೃಷ್ಟಕ್ಕೆ ಅವನ ಮೊಬೈಲ್​ಗೆ ಹಾನಿಯಾಗಿರಲಿಲ್ಲ. ಎರಡು ದಿನಗಳ ಕಾಲ ಅದರಲ್ಲಿ ಅವನು ಪ್ರತಿ 25ನಿಮಿಷಕ್ಕೆ ಒಮ್ಮೆ ಅಲಾರಾಂ ಬೆಲ್​ ಆಗುವಂತೆ ಮಾಡಿಕೊಂಡಿದ್ದ. ತಾನು ಸಂಪೂರ್ಣ ನಿದ್ದೆಗೆ ಜಾರಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದ. ಆದರೆ ಮೂರನೇ ದಿನಕ್ಕೆ ಮೊಬೈಲ್ ಬ್ಯಾಟರಿ ಖಾಲಿ ಆಗಿ ಅದೂ ಕೂಡ ಆಫ್​ ಆಯಿತು. 94 ತಾಸು ಹೀಗೆ ಇದ್ದವನನ್ನು ಈಗ ರಕ್ಷಣಾ ಪಡೆಗಳು ಹೊರಗೆ ಕರೆತಂದಿವೆ. ಸದ್ಯ ಅವನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

India Pakistan War: ಭಾರತಕ್ಕೆ ನುಗ್ಗಿದ ಪಾಕ್‌ನ 600 ಕಮಾಂಡೋಗಳು; ನಡೆಯುತ್ತಾ ಮತ್ತೊಂದು ಯುದ್ಧ?

India Pakistan War: ಪಾಕಿಸ್ತಾನದ 600 ಕಮಾಂಡೋಗಳು ಅಕ್ರಮವಾಗಿ ಜಮ್ಮು-ಕಾಶ್ಮೀರ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ ಎಂಬುದಾಗಿ ಪಾಕ್‌ ಆಕ್ರಮಿತ ಕಾಶ್ಮೀರದ (PoK) ಹೋರಾಟಗಾರ ಡಾ.ಅಮ್ಜದ್‌ ಅಯುಬ್‌ ಮಿರ್ಜಾ ಅವರು ಸ್ಫೋಟಕ ಮಾಹಿತಿ ನೀಡಿದ್ದಾರೆ. ಇದು ಭಾರತ ಹಾಗೂ ಪಾಕಿಸ್ತಾನದ ನಡುವಿನ ಮತ್ತೊಂದು ಯುದ್ಧಕ್ಕೆ ಮುನ್ನುಡಿಯಂತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

VISTARANEWS.COM


on

India Pakistan War
Koo

ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 1947-48ರಿಂದ ಇದುವರೆಗೆ ಪಾಕಿಸ್ತಾನವು ಭಾರತದ ವಿರುದ್ಧ ನಾಲ್ಕು ಬಾರಿ ಯುದ್ಧ (India Pakistan War) ಮಾಡಿದೆ ಹಾಗೂ ನಾಲ್ಕು ಬಾರಿಯೂ ಸೋತು ಸುಣ್ಣವಾಗಿದೆ. ಇಷ್ಟಾದರೂ, ಗಡಿಯಲ್ಲಿ ಉದ್ಧಟತನ ಮಾಡುವುದು, ಉಗ್ರರನ್ನು ಛೂ ಬಿಡುವುದನ್ನು ಮಾತ್ರ ಕುತಂತ್ರಿ ಪಾಕಿಸ್ತಾನ ಬಿಟ್ಟಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಈಗ ಪಾಕಿಸ್ತಾನದ 600 ಕಮಾಂಡೋಗಳು ಭಾರತವನ್ನು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಾರ್ಗಿಲ್‌ (Kargil War) ಮಾದರಿಯಲ್ಲೇ ಉಭಯ ದೇಶಗಳ ಮಧ್ಯೆ ಮತ್ತೊಂದು ಯುದ್ಧ ಆರಂಭವಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ಹೌದು, ಪಾಕಿಸ್ತಾನದ 600 ಕಮಾಂಡೋಗಳು ಅಕ್ರಮವಾಗಿ ಜಮ್ಮು-ಕಾಶ್ಮೀರ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ ಎಂಬುದಾಗಿ ಪಾಕ್‌ ಆಕ್ರಮಿತ ಕಾಶ್ಮೀರದ (PoK) ಹೋರಾಟಗಾರ ಡಾ.ಅಮ್ಜದ್‌ ಅಯುಬ್‌ ಮಿರ್ಜಾ ಅವರು ಸ್ಫೋಟಕ ಮಾಹಿತಿ ನೀಡಿರುವುದು ಇಂತಹದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. “ಪಾಕಿಸ್ತಾನದ ಎಸ್‌ಎಸ್‌ಜಿ ಜನರಲ್‌ ಆಫಿಸರ್‌ ಕಮಾಂಡಿಂಗ್‌ (ಜಿಒಸಿ) ಮೇಜರ್‌ ಜನರಲ್‌ ಆದಿಲ್‌ ರೆಹಮಾನಿಯು ಜಮ್ಮು ಪ್ರದೇಶದಲ್ಲಿ ದಾಳಿ ನಡೆಸುತ್ತಿದ್ದಾನೆ. ಪಾಕಿಸ್ತಾನದ 600 ಕಮಾಂಡೋಗಳು ಭಾರತಕ್ಕೆ ನುಗ್ಗಿದ್ದು, ಕುಪ್ವಾರದಲ್ಲಿ ಆಶ್ರಯ ಪಡೆದಿದ್ದಾರೆ” ಎಂಬುದಾಗಿ ಡಾ.ಅಮ್ಜದ್‌ ಅಯುಬ್‌ ಮಿರ್ಜಾ ಪೋಸ್ಟ್‌ ಮಾಡಿದ್ದಾರೆ.

“ಕಣಿವೆಯ ಸ್ಥಳೀಯ ಜಿಹಾದಿ ಹೋರಾಟಗಾರರು ಪಾಕಿಸ್ತಾನದ ಪರವಾಗಿ ಹೋರಾಡಲು ಸಜ್ಜಾಗಿದ್ದಾರೆ. ಜಮ್ಮುವಿನಲ್ಲಿ ನಡೆಯುತ್ತಿರುವ ದಾಳಿಯ ಉಸ್ತುವಾರಿಯನ್ನು ಪಾಕಿಸ್ತಾನದ ಲೆಫ್ಟಿನೆಂಟ್‌ ಕರ್ನಲ್‌ ಶಾಹಿದ್‌ ಸಲೀಮ್‌ ಜಂಜುವಾ ವಹಿಸಿಕೊಂಡಿದ್ದಾನೆ. ಭಾರತೀಯ ಸೇನೆಯ 15 ಕಾರ್ಪ್ಸ್‌ ಯೋಧರೇ ಅವರ ಗುರಿಯಾಗಿದ್ದಾರೆ. ಇನ್ನೂ ಎರಡು ಬೆಟಾಲಿಯನ್‌ಗಳು ಜಮ್ಮು-ಕಾಶ್ಮೀರ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಲು ಮುಂದಾಗಿದ್ದಾರೆ” ಎಂದು ಎಚ್ಚರಿಸಿದ್ದಾರೆ. ಇದು ಈಗ ಆತಂಕದ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ.

ಗಡಿಯಲ್ಲಿ 2 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ

ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಉಪಟಳ ಜಾಸ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 2 ಸಾವಿರ ಗಡಿ ಭದ್ರತಾ ಪಡೆಯ (BSF) ಸಿಬ್ಬಂದಿಯನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ, ಗಡಿಯಲ್ಲಿ ಉಗ್ರರ ಉಪಟಳ, ಒಳನುಸುಳುವಿಕೆ, ದಾಳಿ, ಶಸ್ತ್ರಾಸ್ತ್ರ ಸಾಗಣೆ ಸೇರಿ ಹಲವು ಕೃತ್ಯಗಳು ಹೆಚ್ಚಾಗಿರುವ ಕಾರಣ ಹೆಚ್ಚಿನ ಭದ್ರತೆಗಾಗಿ ಬಿಎಸ್‌ಎಫ್‌ ಯೋಧರನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ವಾರ್ನಿಂಗ್‌ ಕೊಟ್ಟಿರುವ ಮೋದಿ

ಜುಲೈ 26ರ ಕಾರ್ಗಿಲ್‌ ವಿಜಯ ದಿವಸದಂದು ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. “ಭಯೋತ್ಪಾದನೆ ಮೂಲಕ ಭಾರತವನ್ನು ಗೆಲ್ಲುವ ಪಾಕಿಸ್ತಾನದ ಉದ್ದೇಶ ಎಂದಿಗೂ ಯಶಸ್ವಿ ಆಗುವುದಿಲ್ಲ. ಕಳೆದ ಯುದ್ಧಗಳಲ್ಲಿ ಸೋಲುಂಡಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದುವರೆಗೆ ಪಾಕಿಸ್ತಾನ ತನ್ನ ತಪ್ಪಿನ ಪಾಠ ಕಲಿತಿಲ್ಲ ಎಂದು ಗುಡುಗಿದ್ದರು.

ಇದನ್ನೂ ಓದಿ: ದೇಶಗಳ ಗಡಿ ಮೀರಿದ ಮತ್ತೊಂದು ಲವ್‌ಸ್ಟೋರಿ; ಪ್ರಿಯತಮನೊಂದಿಗೆ ಬಾಳಲು ರಾಜಸ್ಥಾನಕ್ಕೆ ಬಂದ ಪಾಕ್‌ ಮಹಿಳೆ

Continue Reading

ವೈರಲ್ ನ್ಯೂಸ್

ದೇಶಗಳ ಗಡಿ ಮೀರಿದ ಮತ್ತೊಂದು ಲವ್‌ಸ್ಟೋರಿ; ಪ್ರಿಯತಮನೊಂದಿಗೆ ಬಾಳಲು ರಾಜಸ್ಥಾನಕ್ಕೆ ಬಂದ ಪಾಕ್‌ ಮಹಿಳೆ

Indo-Pak Romance: ಪಾಕಿಸ್ತಾನದ ಮೆಹ್ವಿಶ್ ಎಂಬ ಮಹಿಳೆ ಗಡಿಯನ್ನು ದಾಟಿ, ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ವಿವಾಹಿತ ಪ್ರೇಮಿ ರೆಹಮಾನ್‌ನೊಂದಿಗೆ ಬಾಳಲು ರಾಜಸ್ಥಾನದ ಬಿಕಾನೇರ್ ಜಿಲ್ಲೆಗೆ ಆಗಮಿಸಿದ್ದಾರೆ. ವಿಶೇಷ ಎಂದರೆ ಮೆಹ್ವಿಶ್ ಮತ್ತು ರೆಹಮಾನ್‌ಗೆ ಈಗಾಗಲೇ ಬೇರೆ ಬೇರೆ ಮದುವೆಯಾಗಿದ್ದು ತಲಾ ಇಬ್ಬರು ಮಕ್ಕಳಿದ್ದಾರೆ. ಈ ಪೈಕಿ ಮೆಹ್ವಿಶ್ ವಿಚ್ಛೇಧನ ಪಡೆದುಕೊಂಡಿದ್ದರೆ ಸದ್ಯ ರೆಹಮಾನ್‌ ಪತ್ನಿ ಠಾಣೆ ಮೆಟ್ಟಿಲೇರಿದ್ದಾರೆ.

VISTARANEWS.COM


on

Indo-Pak Romance
Koo

ಜೈಪುರ: ಪ್ರೀತಿಗೆ ಕಣ್ಣಿಲ್ಲ ಎನ್ನುವ ಮಾತಿದೆ. ಜತೆಗೆ ಗಡಿಯ ಹಂಗೂ ಇಲ್ಲ. ಈಗಾಗಲೇ ಎರಡು ದೇಶಗಳ ಪ್ರೇಮಿಗಳು ಭಾಷೆ, ಧರ್ಮದ ಗಡಿಯನ್ನು ಮೀರಿ ಒಂದಾಗಿರುವುದನ್ನು ನೋಡಿದ್ದೇನೆ. ಬಹುತೇಕ ಸಂದರ್ಭದಲ್ಲಿ ಇದಕ್ಕೆ ಸೋಷಿಯಲ್‌ ಮೀಡಿಯಾವೇ ತಳಹದಿ ಎನ್ನುವುದು ವಿಶೇಷ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಪಾಕಿಸ್ತಾನದ ಮಹಿಳೆ, ಎರಡು ಮಕ್ಕಳ ತಾಯಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ಪ್ರಿಯತಮನ್ನು ಹುಡುಕಿಕೊಂಡು ರಾಜಸ್ಥಾನಕ್ಕೆ ಆಗಮಿಸಿದ್ದಾರೆ (Indo-Pak Romance). ಸದ್ಯ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News).

ಆನ್‌ಲೈನ್‌ ಪಬ್‌ ಜಿ ಗೇಮ್‌ ಆಡುವಾಗ ಪರಿಚಯವಾದ ಗ್ರೇಟರ್‌ ನೊಯ್ಡಾದ ಸಚಿನ್‌ ಮೀನಾ ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್‌ ವರ್ಷಗಳ ಹಿಂದೆ ಸಂಚಲನ ಮೂಡಿಸಿದ್ದರು. ಇದು ಕೂಡ ಅದನ್ನೇ ಹೋಲುವ ಘಟನೆ. ಇದೀಗ ಭಾರತಕ್ಕೆ ಬಂದ ಮಹಿಳೆಯ ಹೆಸರು 25 ವರ್ಷದ ಮೆಹ್ವಿಶ್. ಮೆಹ್ವಿಶ್ ಗಡಿಯನ್ನು ದಾಟಿ, ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ವಿವಾಹಿತ ಪ್ರೇಮಿ ರೆಹಮಾನ್‌ನೊಂದಿಗೆ ಬಾಳಲು ರಾಜಸ್ಥಾನದ ಬಿಕಾನೇರ್ ಜಿಲ್ಲೆಗೆ ಬಂದಿರುವುದು ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಲಾಹೋರ್‌ ಮೂಲದ ಮೆಹ್ವಿಶ್ ಮಾಧ್ಯಮಗಳೊಂದಿಗೆ ತಮ್ಮ ಲವ್‌ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. ಮೆಹ್ವಿಶ್‌ಗೆ 2 ವರ್ಷ ತುಂಬುವಷ್ಟರಲ್ಲಿ ತಾಯಿ ನಿಧನ ಹೊಂದಿದ್ದರು. 10ನೇ ವರ್ಷದಲ್ಲಿ ಅವರು ತಂದೆಯನ್ನು ಕಳೆದುಕೊಂಡರು. ಬಳಿಕ ಅವರು ಇಸ್ಲಾಮಾಬಾದ್‌ಗೆ ತೆರಳಿ ಸಹೋದರಿ ಶಹಿಮಾ ಅವರೊಂದಿಗೆ ವಾಸಿಸತೊಡಗಿದರು. ಬ್ಯೂಟಿ ಪಾರ್ಲರ್‌ ಕೋರ್ಸ್‌ ಮಾಡಿರುವ ಅವರು ಕಳೆದ ಒಂದು ದಶಕದಿಂದ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.

ಇಬ್ಬರು ಮಕ್ಕಳು

ಅಚ್ಚರಿ ಎಂದರೆ ಮೆಹ್ವಿಶ್‌ ವಿವಾಹಿತೆ. ಬಾದಮಿ ಬಾಘ್‌ ಎನ್ನುವವರನ್ನು ಅವರು ಕೆಲವು ವರ್ಷಗಳ ಹಿಂದೆ ವರಿಸಿದ್ದರು. ಈ ದಂಪತಿಗೆ 12 ಮತ್ತು 7 ವರ್ಷದ ಇಬ್ಬರು ಮಕ್ಕಳಿದ್ದಾರೆ. 2018ರಲ್ಲಿ ಈ ದಂಪತಿ ವಿಚ್ಚೇಧನ ಪಡೆದುಕೊಂಡಿದ್ದು, ಬಾದಮಿ ಬಾಘ್‌ ಮರುಮದುವೆಯಾಗಿದ್ದಾರೆ. ಬಳಿಕ ಮೆಹ್ವಿಶ್‌ಗೆ ಫೇಸ್‌ಬುಕ್‌ನಲ್ಲಿ ರೆಹಮಾನ್‌ ಪರಿಚಯವಾಗಿತ್ತು. 2022ರಂದು ಮೆಹ್ವಿಶ್‌ ತನ್ನ ಸಹೋದರಿಯೊಂದಿಗೆ ಚರ್ಚೆ ನಡೆಸಿ ಕುವೈತ್‌ನಲ್ಲಿ ಕೆಲಸ ಮಾಡುವ ರೆಹಮಾನ್‌ ಬಳಿ ಮದುವೆಯ ಪ್ರಸ್ತಾವ ಇಟ್ಟಿದ್ದರು. 2022ರ ಮಾರ್ಚ್‌ 16ರಂದು ಇಬ್ಬರು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿವಾಹಿತರಾಗಿದ್ದರು. ನಂತರ ಅವರು 2023ರಲ್ಲಿ ಉಮ್ರಾ ತೀರ್ಥಯಾತ್ರೆಯ ಸಮಯದಲ್ಲಿ ಮೆಕ್ಕಾದಲ್ಲಿ ಭೇಟಿಯಾಗಿ ತಮ್ಮ ಮದುವೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು.

ಸ್ವಾಗತ

ಮೆಹ್ವಿಶ್ ಜುಲೈ 25ರಂದು ತನ್ನ ಕುಟುಂಬದೊಂದಿಗೆ ಇಸ್ಲಾಮಾಬಾದ್‌ನಿಂದ ವಾಘಾ ಗಡಿಗೆ ಆಗಮಿಸಿದರು. ಪಾಕಿಸ್ತಾನ ಮತ್ತು ಭಾರತೀಯ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ ನಂತರ 45 ದಿನಗಳ ಪ್ರವಾಸಿ ವೀಸಾದಲ್ಲಿ ಅವರು ಭಾರತ ಪ್ರವೇಶಿಸಿದ್ದರು. ರೆಹಮಾನ್ ಕುಟುಂಬವು ಆಕೆಯನ್ನು ಪಿಥಿಸರ್ ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತಿಸಿದೆ.

ಮೆಹ್ವಿಶ್ ಆಗಮನವು ಎಲ್ಲೆಡೆ ಸುದ್ದಿಯಾದ ಹಿನ್ನೆಲೆಯಲ್ಲಿ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳ ಅಧಿಕಾರಿಗಳು ತನಿಖೆ ನಡೆಸುತ್ತಿವೆ. ಸ್ಥಳೀಯ ಪೊಲೀಸರು ಕೂಡ ಪ್ರಶ್ನಿಸಿದ್ದಾರೆ ಹಾಗೂ ಪಾಸ್‌ಪೋರ್ಟ್‌ ಮತ್ತು ವೀಸಾವನ್ನು ಪರಿಶೀಲಿಸಿದ್ದಾರೆ. ರೆಹಮಾನ್‌ 2011ರಲ್ಲಿ ಭದ್ರಾ ಮೂಲದ ಫರೀದಾ ಎಂಬಾಕೆಯನ್ನು ವಿವಾಹವಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದು, ಫರೀದಾ ತನ್ನ ಮಕ್ಕಳೊಂದಿಗೆ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಕಾನೂನು ಪ್ರಕಾರ ಇವರು ವಿಚ್ಛೇಧನ ಪಡೆದುಕೊಂಡಿಲ್ಲ. ಇದೀಗ ತನ್ನ ಗಂಡನ ಪ್ರಿಯತಮೆ ಪಾಕಿಸ್ತಾನದಿಂದ ಬಂದಿರುವುದನ್ನು ತಿಳಿದು ಫರೀದಾ ಆಕೆಯ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಮೆಹ್ವಿಶ್ ಗೂಢಚಾರಿಯಾಗಿರಬಹುದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸಿನಿಮಾ ಕಥೆಯನ್ನು ಹೋಲುತ್ತದೆ ಎಂದಿದ್ದಾರೆ ನೆಟ್ಟಿಗರು.

ಇದನ್ನೂ ಓದಿ: Seema Haider: ಮತ್ತೆ ಸುದ್ದಿಯಾದ ಸೀಮಾ ಹೈದರ್‌; ಇದು ಗಡಿಯಾಚೆಗಿನ ಪ್ರೇಮ ಕಥೆಯೋ ಅಥವಾ ಪಾಕ್‌ ಗೂಢಚಾರಿಕೆಯೋ?

Continue Reading

ವಿದೇಶ

Israel Palestine War: ಹಿಜ್ಬುಲ್ಲಾ ದಾಳಿಗೆ 12 ಮಂದಿ ಸಾವು; ಇಸ್ರೇಲ್‌ನಿಂದ ಪ್ರತೀಕಾರದ ಎಚ್ಚರಿಕೆ

Israel Palestine War: ಶನಿವಾರ ಇಸ್ರೇಲ್‌ ನಿಯಂತ್ರಣದಲ್ಲಿರುವ ಗೋಲಾನ್‌ ಹೈಟ್ಸ್‌ ಪ್ರದೇಶದ ಮೇಲೆ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆ ನಡೆಸಿದ ರಾಕೆಟ್‌ ದಾಳಿಯಲ್ಲಿ ಮಕ್ಕಳು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, ಇದಕ್ಕೆ ಪ್ರತಿಕಾರ ತೀರಿಸುವುದಾಗಿ ಇಸ್ರೇಲ್‌ ಶಪಥ ಕೈಗೊಂಡಿದೆ. ಲೆಬನಾನ್‌ನಿಂದ ಹಾರಿಸಲಾದ ರಾಕೆಟ್ ಗೋಲನ್ ಹೈಟ್ಸ್‌ನ ಉತ್ತರದ ಡ್ರೂಜ್ ಪಟ್ಟಣವಾದ ಮಜ್ಡಾಲ್ ಶಾಮ್ಸ್‌ನಲ್ಲಿರುವ ಫುಟ್‌ಬಾಲ್ ಮೈದಾನಕ್ಕೆ ಅಪ್ಪಳಿಸಿ ಅಲ್ಲಿ ಆಟವಾಡುತ್ತಿದ್ದ ಮಕ್ಕಳು ಸೇರಿದಂತೆ ಹಲವರನ್ನು ಬಲಿ ಪಡೆದುಕೊಂಡಿದೆ.

VISTARANEWS.COM


on

Israel Palestine War
Koo

ಜೆರುಸಲೇಂ: 2023ರ ಅಕ್ಟೋಬರ್‌ನಿಂದ ಹಮಾಸ್‌ ಉಗ್ರರು ಮತ್ತು ಇಸ್ರೇಲ್‌ ನಡುವೆ ನಿರಂತರ ಯುದ್ಧ ನಡೆಯುತ್ತಿದೆ (Israel Hamas War). ಈ ಮಧ್ಯೆ ಶನಿವಾರ ಇಸ್ರೇಲ್‌ ನಿಯಂತ್ರಣದಲ್ಲಿರುವ ಗೋಲಾನ್‌ ಹೈಟ್ಸ್‌ ಪ್ರದೇಶದ ಮೇಲೆ ಹಿಜ್ಬುಲ್ಲಾ (Hezbollah) ಭಯೋತ್ಪಾದಕ ಸಂಘಟನೆ ನಡೆಸಿದ ರಾಕೆಟ್‌ ದಾಳಿಯಲ್ಲಿ ಮಕ್ಕಳು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, ಇದಕ್ಕೆ ಪ್ರತಿಕಾರ ತೀರಿಸುವುದಾಗಿ ಇಸ್ರೇಲ್‌ ಶಪಥ ಕೈಗೊಂಡಿದೆ.

ಲೆಬನಾನ್‌ನಿಂದ ಹಾರಿಸಲಾದ ರಾಕೆಟ್ ಗೋಲನ್ ಹೈಟ್ಸ್‌ನ ಉತ್ತರದ ಡ್ರೂಜ್ ಪಟ್ಟಣವಾದ ಮಜ್ಡಾಲ್ ಶಾಮ್ಸ್‌ನಲ್ಲಿರುವ ಫುಟ್‌ಬಾಲ್ ಮೈದಾನಕ್ಕೆ ಅಪ್ಪಳಿಸಿ ಅಲ್ಲಿ ಆಟವಾಡುತ್ತಿದ್ದ ಮಕ್ಕಳು ಸೇರಿದಂತೆ ಹಲವರನ್ನು ಬಲಿ ಪಡೆದುಕೊಂಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu), ಇದಕ್ಕೆ ಹೆಜ್ಬುಲ್ಲಾ ಸಂಘಟನೆ ಭಾರಿ ಬೆಲೆ ತೆರೆಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಆದರೆ ಹಿಜ್ಬುಲ್ಲಾ ಈ ರಾಕೆಟ್ ದಾಳಿಯನ್ನು ನಿರಾಕರಿಸಿದೆ.

ದಾಳಿಯ ಹಿನ್ನೆಲೆಯಲ್ಲಿ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಇಸ್ರೇಲ್‌ಗೆ ಧಾವಿಸಿದ್ದಾರೆ. ಮುಂದಿನ ನಡೆಯ ಬಗ್ಗೆ ಚರ್ಚಿಸಲು ಅವರು ಭದ್ರತಾ ಕ್ಯಾಬಿನೆಟ್ ಕರೆದಿದ್ದಾರೆ.

ಶನಿವಾರ ಸಂಜೆ ಫುಟ್‌ಬಾಲ್‌ ಮೈದಾನದ ಮೇಲೆ ರಾಕೆಟ್‌ ದಾಳಿ ನಡೆದಿತ್ತು. ಇಸ್ರೇಲ್‌ ಮಿಲಿಟರಿ ನೆಲೆಗಳ ಮೇಲೆ ರಾಕೆಟ್‌ ಹಾರಿಸಿರುವುದಾಗಿ ಹಿಜ್ಬುಲ್ಲಾ ಈ ಹಿಂದೆ ಘೋಷಿಸಿತ್ತು. ಆದರೆ ಮಜ್ಡಾಲ್ ಶಾಮ್ಸ್‌ನಲ್ಲಿರುವ ಫುಟ್‌ಬಾಲ್ ಮೈದಾನದ ಮೇಲಿನ ದಾಳಿಯಲ್ಲಿ ನಿರಾಕರಿಸಿದೆ. “ಈ ಘಟನೆಯೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲʼʼ ಎಂದು ಹೇಳಿದೆ.

ರಾಕೆಟ್ ಇರಾನ್ ನಿರ್ಮಿತ ಫಲಾಕ್ -1 ಎನ್ನುವುದು ಖಚಿತವಾಗಿದೆ ಎಂದು ಎಂದು ಇಸ್ರೇಲ್ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ. ಇಸ್ರೇಲ್‌ ಸೇನಾ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಫಲಾಕ್ -1 ಕ್ಷಿಪಣಿಯನ್ನು ಹಾರಿಸುವುದಾಗಿ ಹಿಜ್ಬುಲ್ಲಾ ಶನಿವಾರ ಘೋಷಿಸಿತ್ತು. ಇಸ್ರೇಲ್‌ ರಕ್ಷಣಾ ಸಚಿವ ಯೋವ್ ಶೌರ್ಯ್ ಮಜ್ದಾಲ್ ಶಮ್ಸ್‌ಗೆ ಭೇಟಿ ನೀಡಿ, “ನಾವು ಶತ್ರುಗಳಿಗೆ ತಕ್ಕ ಪಾಠ ಕಲಿಸುತ್ತೇವೆʼʼ ಎಂದು ಹೇಳಿದ್ದಾರೆ. ದಕ್ಷಿಣ ಲೆಬನಾನ್‌ನ ಚೆಬಾ ಗ್ರಾಮದ ಉತ್ತರಕ್ಕಿರುವ ಪ್ರದೇಶದಿಂದ ರಾಕೆಟ್ ಉಡಾವಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಮೆರಿಕ ಹೇಳಿದ್ದೇನು?

ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜತಾಂತ್ರಿಕ ಪ್ರಯತ್ನಗಳನ್ನು ಮುನ್ನಡೆಸುತ್ತಿರುವ ಅಮೆರಿಕ ಇದನ್ನು ಭಯಾನಕ ದಾಳಿ ಎಂದು ಖಂಡಿಸಿದೆ ಆದರೆ ಹೆಜ್ಬುಲ್ಲಾವನ್ನು ನೇರವಾಗಿ ಹೆಸರಿಸಿಲ್ಲ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಇದುವರೆಗೆ ಲೆಬನಾನ್‌ನಲ್ಲಿ ಸುಮಾರು 350 ಹಿಜ್ಬುಲ್ಲಾ ಭಯೋತ್ಪದಕರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇತ್ತ ಲೆಬನಾನ್‌ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಸದಂತೆ ಇರಾನ್ ಭಾನುವಾರ ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಗಾಜಾ ಪಟ್ಟಿಯ ಖಾನ್‌ ಯೌನಿಸ್‌ (Khan Younis) ಪ್ರದೇಶದ ಮೇಲೆ ಇಸ್ರೇಲ್‌ ಭೀಕರ ದಾಳಿ ನಡೆಸಿದ್ದು, ಹಮಾಸ್‌ ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್‌ ಡೈಫ್ (Mohammed Deif)‌ ಎಂಬಾತನನ್ನು ಹತ್ಯೆ ಮಾಡಿತ್ತು.

ಇದನ್ನೂ ಓದಿ: Israel-Hamas Conflict: ಇಸ್ರೇಲ್‌ ಏರ್‌ಸ್ಟ್ರೈಕ್- ಹಮಾಸ್‌ ಕಮಾಂಡರ್‌ ಹತ್ಯೆ

Continue Reading

ದೇಶ

Pervez Musharraf: ಭಾರತ ವಿರೋಧಿ ಪರ್ವೇಜ್‌ ಮುಷರ‍್ರಫ್‌ಗೆ ಕೇರಳ ಬ್ಯಾಂಕ್‌ ಗೌರವ; ಭುಗಿಲೆದ್ದ ವಿವಾದ

Pervez Musharraf: ಕಾರ್ಗಿಲ್‌ ಯುದ್ಧದ ವಿಜಯಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಾಂಕ್‌ ಆಫ್‌ ಇಂಡಿಯಾದ ಉದ್ಯೋಗಿಗಳ ಒಕ್ಕೂಟವು ಜುಲೈ 27ರಂದು ಆಲಪ್ಪುಳದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇದೇ ವೇಳೆ, ರಾಜ್ಯ ಸಮಾವೇಶವೂ ನಡೆದಿದೆ. ಸಮಾವೇಶದಲ್ಲಿ ಹಲವು ಮಹನೀಯರಿಗೆ ಗೌರವ ಸಲ್ಲಿಸುವ ಪಟ್ಟಿಯಲ್ಲಿ ಪರ್ವೇಜ್‌ ಮುಷರ‍್ರಫ್‌ ಹೆಸರು ಕೂಡ ಸೇರಿದೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

VISTARANEWS.COM


on

Pervez Musharraf
Koo

ತಿರುವನಂತಪುರಂ: ಭಾರತ ವಿರೋಧಿಯಾಗಿದ್ದ, 1999ರಲ್ಲಿ ಕಾರ್ಗಿಲ್‌ ಯುದ್ಧಕ್ಕೆ ಕಾರಣನಾದ, ಜಮ್ಮು-ಕಾಶ್ಮೀರಕ್ಕೆ ಉಗ್ರರನ್ನು ಛೂ ಬಿಟ್ಟು ಅಶಾಂತಿಗೆ ಕಾರಣನಾದ ಪಾಕಿಸ್ತಾನದ (Pakistan) ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ‍್ರಫ್‌ಗೆ (Pervez Musharraf) ಕೇರಳದ ಬ್ಯಾಂಕ್‌ ಆಫ್‌ ಇಂಡಿಯಾ (BOI) ನೌಕರರ ಒಕ್ಕೂಟದಲ್ಲಿ ಗೌರವ ನಮನ ಸಲ್ಲಿಸಲು ತೀರ್ಮಾನಿಸಿದ್ದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಜುಲೈ 27ರಂದು ಕೇರಳದ ಆಲಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ವೇಜ್‌ ಮುಷರ‍್ರಫ್‌ಗೆ ಗೌರವ ಸಲ್ಲಿಸಲು ಕಾರ್ಯಕ್ರಮಕ್ಕೂ ಮೊದಲೇ ತೀರ್ಮಾನಿಸಿತ್ತು ಎಂದು ತಿಳಿದುಬಂದಿದೆ.

ಕಾರ್ಗಿಲ್‌ ಯುದ್ಧದ ವಿಜಯಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಾಂಕ್‌ ಆಫ್‌ ಇಂಡಿಯಾದ ಉದ್ಯೋಗಿಗಳ ಒಕ್ಕೂಟವು ಜುಲೈ 27ರಂದು ಆಲಪ್ಪುಳದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇದೇ ವೇಳೆ, ರಾಜ್ಯ ಸಮಾವೇಶವೂ ನಡೆದಿದೆ. ಸಮಾವೇಶದಲ್ಲಿ ಹಲವು ಮಹನೀಯರಿಗೆ ಗೌರವ ಸಲ್ಲಿಸುವ ಪಟ್ಟಿಯಲ್ಲಿ ಪರ್ವೇಜ್‌ ಮುಷರ‍್ರಫ್‌ ಹೆಸರು ಕೂಡ ಸೇರಿಸಿತ್ತು. ಇದರಿಂದಾಗಿ ಬ್ಯಾಂಕ್‌ ಆಫ್‌ ಇಂಡಿಯಾದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬ್ಯಾಂಕ್‌ಗಳ ಎದುರು ಜನ ಪ್ರತಿಭಟನೆ ನಡೆಸಿದ್ದಾರೆ. ಇದಾದ ನಂತರ, ಒಕ್ಕೂಟವು ಗೌರವಕ್ಕೆ ಪಾತ್ರರಾಗುವವರ ಪಟ್ಟಿಯಿಂದ ಪರ್ವೇಜ್‌ ಮುಷರ‍್ರಫ್‌ ಹೆಸರು ತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ಪಾಲಿ ಜಾರ್ಜ್‌ ನಗರದಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾದ 23ನೇ ರಾಜ್ಯ ಸಮಾವೇಶ ನಡೆದಿದೆ. ಕಾಂಗ್ರೆಸ್‌ ಸಂಸದ ಕೆ.ಸಿ.ವೇಣುಗೋಪಾಲ್‌ ಅವರು ಸಮಾವೇಶವನ್ನು ಉದ್ಘಾಟಿಸಿದರು. ಇದೇ ವೇಳೆ, ಕಾರ್ಗಿಲ್‌ ಯುದ್ಧದ ವಿಜಯ, ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸಲಾಯಿತು. ಅಲ್ಲದೆ, ನಟರು, ಗಾಯಕರು, ನೃತ್ಯಪಟುಗಳು, ಕ್ರೀಡಾಪಟುಗಳು, ಹೋರಾಟಗಾರರು ಸೇರಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು.

ಪರ್ವೇಜ್‌ ಮುಷರ‍್ರಫ್‌ಗೆ ಗೌರವ ಸಲ್ಲಿಸಲು ಮುಂದಾಗಿದ್ದ ಬ್ಯಾಂಕ್‌ ಆಫ್‌ ಇಂಡಿಯಾದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಬ್ಯಾಂಕ್‌ ಆಫ್‌ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ದೇಶದ್ರೋಹದ ಕೃತ್ಯ ಎಂದೆಲ್ಲ ಜನ ಟೀಕಿಸಿದ್ದಾರೆ. ರಾಜ್ಯ ಬಿಜೆಪಿ ಘಟಕದ ನಾಯಕರು ಕೂಡ ಇದನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: Narendra Modi: ಮೋದಿ ಎಚ್ಚರಿಕೆಗೆ ಪಾಕಿಸ್ತಾನ ಥಂಡಾ; ಗಡಿಯಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ!

Continue Reading
Advertisement
Road Accident jigani anekal
ಬೆಂಗಳೂರು ಗ್ರಾಮಾಂತರ9 mins ago

Road Accident: ಕುಡಿದ ಮತ್ತಿನಲ್ಲಿ ಕಾರು ಹರಿಸಿದ ಚಾಲಕ, ಒಬ್ಬನ ಸಾವು, ಇಬ್ಬರಿಗೆ ಗಾಯ

India Pakistan War
ದೇಶ20 mins ago

India Pakistan War: ಭಾರತಕ್ಕೆ ನುಗ್ಗಿದ ಪಾಕ್‌ನ 600 ಕಮಾಂಡೋಗಳು; ನಡೆಯುತ್ತಾ ಮತ್ತೊಂದು ಯುದ್ಧ?

ITR Filing
ಮನಿ-ಗೈಡ್28 mins ago

ITR Filing: ಐಟಿಆರ್ ಸಲ್ಲಿಕೆ; ಜುಲೈ 31ರ ಗಡುವು ತಪ್ಪಿಸಿಕೊಂಡರೆ ಎಷ್ಟು ದಂಡ?

peenya flyover
ಪ್ರಮುಖ ಸುದ್ದಿ32 mins ago

Peenya flyover: ಇಂದಿನಿಂದ ಪೀಣ್ಯ ಮೇಲ್ಸೇತುವೆ ಎಲ್ಲ ವಾಹನಗಳಿಗೆ ಮುಕ್ತ

bbmp lorry road accident
ಬೆಂಗಳೂರು53 mins ago

Road Accident: ಬೆಂಗಳೂರಿನಲ್ಲಿ ಕಸದ ಲಾರಿಯ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿ

Lakshadweep Tour
Latest58 mins ago

Lakshadweep Tour: ಲಕ್ಷದ್ವೀಪದಲ್ಲಿ ಪ್ರವಾಸಿಗರನ್ನು ಸೆಳೆಯುವ ಪಂಚರತ್ನಗಳಿವು

Monsoon Healthy Cooking Tips
ಆರೋಗ್ಯ1 hour ago

Monsoon Healthy Cooking Tips: ಮಳೆಗಾಲದಲ್ಲಿ ಸೊಪ್ಪಿನ ಅಡುಗೆ ಮಾಡುವ ಮುನ್ನ ಈ ಎಚ್ಚರಿಕೆಗಳನ್ನು ವಹಿಸಿ

Vastu Tips
ಧಾರ್ಮಿಕ1 hour ago

Vastu Tips: ಈ ವಾಸ್ತು ನಿಯಮ ಪಾಲಿಸಿ; ಹಣಕಾಸಿನ ಸಮಸ್ಯೆಯಿಂದ ಪಾರಾಗಿ

Nonstick Pans
ಆರೋಗ್ಯ2 hours ago

Nonstick Pans: ನಾನ್‌ಸ್ಟಿಕ್‌ ಪಾತ್ರೆಗಳ ತಪ್ಪು ಬಳಕೆಯಿಂದಲೂ ಜ್ವರ ಬಾಧಿಸುತ್ತದೆ!

karnataka Weather Forecast
ಮಳೆ2 hours ago

Karnataka Weather : ಒಳನಾಡಿನಲ್ಲಿ ಬ್ರೇಕ್‌ ಕೊಟ್ಟು, ಕರಾವಳಿ- ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ14 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ16 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ18 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ19 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌