Viral News: ಹೆಣ್ಣು ಮಗು ಹೆತ್ತ ಮಂಗಳಮುಖಿ ಪುರುಷ! ಇದೆಲ್ಲ ಹೇಗಾಯ್ತು? - Vistara News

ಪ್ರಮುಖ ಸುದ್ದಿ

Viral News: ಹೆಣ್ಣು ಮಗು ಹೆತ್ತ ಮಂಗಳಮುಖಿ ಪುರುಷ! ಇದೆಲ್ಲ ಹೇಗಾಯ್ತು?

Viral News: ಇಂಗ್ಲೆಂಡ್‍‌ ಮಂಗಳಮುಖಿ ಪುರುಷರೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲದೇ ಮತ್ತೊಂದು ಮಗುವಿಗೂ ಅವರು ಯೋಚನೆ ಮಾಡುತ್ತಿದ್ದಾರೆ.

VISTARANEWS.COM


on

Transgender Man
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ವೈದ್ಯಕೀಯ ವಿಜ್ಞಾನದಲ್ಲಿ (Medical Science) ರೋಚಕ ಬೆಳವಣಿಗೆ ನಡೆದಿದೆ. ಪುರುಷನೊಬ್ಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ! ಹೌದು ನೀವು ಓದುತ್ತಿರುವುದು ಸತ್ಯ. ಇಂಗ್ಲೆಂಡ್‌ನಲ್ಲಿ 27 ವರ್ಷ ಮಂಗಳಮುಖಿ ಪುರುಷನೇ (Transgender Man) ಹೆಣ್ಣು ಮಗು (Baby Girl) ಹೆತ್ತಿದ್ದಾರೆ. ಆ ಮಂಗಳಮುಖಿ ಪುರುಷನ ಹೆಸರು ಕ್ಯಾಲೆಬ್ ಬೋಲ್ಡನ್(Caleb Bolden). ಕ್ಯಾಲೆಬ್ ಮತ್ತು ಆತನ ಪತ್ನಿ 25 ವರ್ಷ ವಯಸ್ಸಿನ ನಿಯಾಮ್ ಬೋಲ್ಡೆನ್ (Niamh Bolden) ಅವರ ಸಂತಸಕ್ಕೆ ಈಗ ಪಾರವೇ ಇಲ್ಲ. ಅಲ್ಲದೇ ಮತ್ತೊಂದು ಮಗುವನ್ನು ಮಾಡಿಕೊಳ್ಳುವ ಪ್ಲ್ಯಾನ್ ಕೂಡ ಈ ದಂಪತಿ ಹೊಂದಿದ್ದಾರೆ(Viral News).

ಮಂಗಳಮುಖಿ ಕ್ಯಾಲೆಬ್ ಯಾಕೆ ಗರ್ಭ ಧರಿಸಬೇಕಾಯಿತು ಎಂಬುದು ರೋಚಕವಾಗಿದೆ. ಮಂಗಳಮುಖಿ ಕ್ಯಾಲೆಬ್ ಹಾಗೂ ಆತನ ಪತ್ನಿ ನಿಯಾಮ್‌ಗೆ ಮಕ್ಕಳೆಂದರೆ ಪ್ರಾಣ. ನಿಯಾಮ್ ಮೂರು ಬಾರಿ ಗರ್ಭ ಧರಿಸಿದ್ದರು. ಆದರೆ, ಮೂರು ಬಾರಿಯೂ ಗರ್ಭಪಾತವದ್ದರಿಂದ ನಿಯಾಮ್ ಮತ್ತೆ ಮಕ್ಕಳನ್ನು ಹೆರುವ ಶಕ್ತಿಯನ್ನು ಕಳೆದುಕೊಂಡರು. ಆದರೆ, ಹೇಗಾದರೂ ಮಾಡಿ ಮಕ್ಕಳನ್ನು ಪಡೆಯಲೇಬೇಕೆಂದು ನಿರ್ಧರಿಸಿದ ದಂಪತಿ ಹೊಸ ದಾರಿಯನ್ನು ಕಂಡುಕೊಂಡರು. ಹೆಂಡತಿಯ ಬದಲಿಗೆ ಗಂಡ(ಮಂಗಳಮುಖಿ)ನೇ ಗರ್ಭ ಧರಿಸುವ ಬಗ್ಗೆ ಯೋಚನೆ ಮಾಡಿದರು. ಈಗ ಅದನ್ನು ನನಸಾಗಿಸಿಕೊಂಡಿದ್ದಾರೆ. ಅವರ ಮಡಿಲಲ್ಲಿ ಮುದ್ದಾದ ಹೆಣ್ಣು ಮಗುವಿದೆ.

ಮಗುವನ್ನು ಹೆರುವುದಕ್ಕೆ ಕ್ಯಾಲೆಬ್ ಸಾಕಷ್ಟು ಕಠಿಣ ಪರೀಕ್ಷೆಗಳನ್ನು ಮತ್ತು ಪ್ರಯೋಗಗಳಿಗೆ ಒಳಗಾಗಿದ್ದಾರೆ. 27 ತಿಂಗಳು ಕಾಲ ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಯಾವಾಗಲೂ ತಂದೆಯಾಗಬೇಕು ಎಂಬ ಹಂಬಲ ಹೊಂದಿದ್ದ ಕ್ಯಾಲೆಬ್ ಅವರು, 2022ರಲ್ಲಿ ಯಾವುದೇ ರೀತಿಯ ಔಷಧಗಳನ್ನು ಸೇವಿಸುವುದನ್ನು ನಿಲ್ಲಿಸಿದರು. ಆನ್‌ಲೈನ್‌ನಲ್ಲಿ ವೀರ್ಯ ದಾನಿಗಳಿಗಾಗಿ ಹುಡುಕಾಡಿದರು. 6 ತಿಂಗಳಲ್ಲೇ ದಾನಿ ಕೂಡ ಸಿಕ್ಕರು ಮತ್ತು ಪೋಷಕರಾಗುವ ದಾರಿ ತೆರೆದುಕೊಂಡಿತು.

ಕ್ಯಾಲೆಬ್‌ ಅವರ ಗರ್ಭದಲ್ಲಿ ಮಗು ಬೆಳೆಯುತ್ತ ಹೋದಂತೆ, ಜನರ ಗಮನವನ್ನು ಅವರ ತಮ್ಮಡೆಗೆ ಸೆಳೆಯಲಾರಂಭಿಸಿದರು. ಜನರಿಂದ ಮಿಶ್ರ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಅವರ ಕುಟುಂಬಗಳ ಸದಸ್ಯರು ಮತ್ತು ಸ್ನೇಹಿತರು ಕ್ಯಾಲೆಬ್ ಹಾಗೂ ನಿಯಾಮ್ ಅವರಿಗೆ ಬೆಂಬಲವಾಗಿ ನಿಂತರೆ, ಕೆಲವರು ಅನುಮಾನಗಳನ್ನು ವ್ಯಕ್ತಪಡಿಸಿದರು. ಸಾಂಪ್ರದಾಯಿಕ ಲಿಂಗ ನಿಯಮಗಳನ್ನು ಮುರಿಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪುರುಷನೊಬ್ಬ ಗರ್ಭ ಧರಿಸುವುದನ್ನು ಅವರು ಪ್ರಶ್ನಿಸಿದರು. ಈ ಯಾವುದೇ ಟೀಕೆಗಳನ್ನು ಕ್ಯಾಲೆಬ್ ಅವರು ತಲೆ ಹಾಕಿಕೊಳ್ಳಲಿಲ್ಲ. ಅಂತಿಮವಾಗಿ 2023 ಮೇ ತಿಂಗಳಲ್ಲಿ ವೆಸ್ಟ್ ಸಫೊಲ್ಕ್ ಆಸ್ಪತ್ರೆಯಲ್ಲಿ ತಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಈ ಸುದ್ದಿಯನ್ನೂ ಓದಿ: Viral News: ನಲ್ಲನ ಭೇಟಿಗೆ ಇಡೀ ಊರಿನ ವಿದ್ಯುತ್‌ ಕಟ್‌ ಮಾಡಿದ ನಲ್ಲೆ; ಗ್ರಾಮಸ್ಥರ ಕೈಗೆ ಸಿಕ್ಕ ಬಳಿಕ ಏನಾಯ್ತು?

ಪುರುಷ ಗರ್ಭ ಧರಿಸುವ ಕಲ್ಪನೆಯೇ ಊಹಾತೀತ. ಹಾಗಾಗಿ, ಗರ್ಭ ಧರಿಸುವ ಇಡೀ ಪ್ರಕ್ರಿಯೆಯ ಕುರಿತು ಗೌಪ್ಯತೆಯನ್ನು ಆಯ್ಕೆ ಮಾಡಿಕೊಂಡರು. ಹಾಗಾಗಿ, ಅವರಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋಣೆಯನ್ನು ಒದಗಿಸಲಾಯಿತು. ಹಲವು ಅಡೆತಡೆಗಳನ್ನು ಎದುರಿಸಿ ಕೊನೆಗೆ ತಮ್ಮ ಮಡಿಲಲ್ಲಿ ಹೆಣ್ಣು ಮಗುವನ್ನು ಕಂಡಾಗ ತಾವು ಪಟ್ಟ ಕಷ್ಟವೇ ಅವರಿಗೆ ಲೆಕ್ಕಕ್ಕೆ ಬರಲಿಲ್ಲ. ಮಕ್ಕಳನ್ನು ಹೆರುವುದು ಏನಿದ್ದರೂ ಹೆಂಗಸರು ಎಂಬ ಸೃಷ್ಟಿಯ ನಿಯಮವನ್ನು ಈ ದಂಪತಿ ಸುಳ್ಳು ಮಾಡಿದ್ದಾರೆ. ಮನಸ್ಸು ಮಾಡಿದರೆ, ಪುರುಷ ಕೂಡ ಮಗುವಿಗೆ ಜನ್ಮ ನೀಡಬಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಅಪ್ಲೈ ಮಾಡಿ

Job Alert: ಸರ್ಕಾರಿ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುವವರಿಗೆ ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ ಗುಡ್‌ನ್ಯೂಸ್‌ ನೀಡಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 506 ಅಸಿಸ್ಟಂಟ್‌ ಕಮಾಂಡೆಂಟ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಮೇ 14. ಪದವಿ ಪಡೆದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

VISTARANEWS.COM


on

Job Alert
Koo

ನವದೆಹಲಿ: ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (Central Armed Police Forces)ಗಳಲ್ಲಿನ ಅಸಿಸ್ಟಂಟ್‌ ಕಮಾಂಡೆಂಟ್‌ಗಳು (ಎ ಹುದ್ದೆಗಳು) ಹುದ್ದೆ ಇದಾಗಿದೆ. ಬಾರ್ಡರ್‌ ಸೆಕ್ಯುರಿಟಿ ಫೋರ್ಸ್‌ (BSF), ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ (CRPF), ಸೆಂಟ್ರಲ್‌ ಇಂಡಸ್ಟ್ರೀಯಲ್‌ ಸೆಕ್ಯುರಿಟಿ ಫೋರ್ಸ್‌ (CISF), ಇಂಡೋ-ಟಿಬೆಟಿಯನ್ ಬಾರ್ಡರ್‌ ಪೋಲೀಸ್‌ (ITBP) ಮತ್ತು ಸಶಸ್ತ್ರ ಸೀಮಾ ಬಲ್‌ (SSB)ಗಳಲ್ಲಿ 506 ಹುದ್ದೆಗಳಿವೆ (UPSC CAPF Recruitment 2024). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು ಕೊನೆಯ ದಿನ ಮೇ 14 (Job Alert).

ಹುದ್ದೆಗಳ ವಿವರ

ಗಡಿ ಭದ್ರತಾ ಪಡೆ (ಬಿಎಸ್ಎಫ್)-186, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌)- 120, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)- 100, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)- 58, ಸಶಸ್ತ್ರ ಸೀಮಾ ಬಲ್ (ಎಸ್ಎಸ್‌ಬಿ)- 42 ಹುದ್ದೆಗಳಿವೆ. ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ ಮತ್ತು ವಯೋಮಿತಿ

ಅಭ್ಯರ್ಥಿಗಳು ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಕೆಯ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ, ಕೇಂದ್ರ ಸರ್ಕಾರಿ ನೌಕರ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಮಹಿಳಾ / ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಉಳಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 200 ರೂ. ಪಾವತಿಸಬೇಕು. ಲಿಖಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ (Physical Efficiency Test) ಅಥವಾ ದೈಹಿಕ ಮಾಪನ ಪರೀಕ್ಷೆ (Physical Measurement Test), ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆ ಆಗಸ್ಟ್‌ 4ರಂದು ನಡೆಯಲಿದೆ. ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

UPSC CAPF Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • Registration ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಹೆಸರು ನೋಂದಾಯಿಸಿ. ಇದಕ್ಕಾಗಿ ನಿಮ್ಮ ಮೊಬೈಲ್‌ ನಂಬರ್‌, ಇ ಮೇಲ್‌ ಐಡಿ ನಮೂದಿಸಿ.
  • ಹೆಸರು ನೋಂದಾಯಿಸಿಕೊಂಡ ಬಳಿಕ ರಿಜಿಸ್ಟ್ರೇಷನ್‌ ನಂಬರ್‌ ಮತ್ತು ಪಾಸ್‌ವರ್ಡ್‌ ಬಳಿಸಿ ಲಾಗಿನ್‌ ಆಗಿ.
  • ವಿವರಗಳನ್ನು ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳು, ಸಹಿ ಮತ್ತು ಫೋಟೊವನ್ನು ನಿಗದಿತ ಅಳತೆಯಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರು ಮಾತ್ರ).
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿಯಾಗಿದ್ದರೆ ಅಪ್ಲಿಕೇಷನ್‌ ಫಾರಂ ಸಲ್ಲಿಸಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ ಔಟ್‌ ತೆಗೆದಿಡಿ.

ಇದನ್ನೂ ಓದಿ: Job Alert: ಕೋರ್ಟ್‌ನಲ್ಲಿದೆ 41 ಹುದ್ದೆ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

Continue Reading

ಕರ್ನಾಟಕ

Pejawar Swamiji: ದೇವಾಲಯಗಳ ಆಡಳಿತ ಸಂಪೂರ್ಣವಾಗಿ ಹಿಂದೂಗಳಿಗೆ ಒಪ್ಪಿಸಬೇಕು: ಪೇಜಾವರ ಶ್ರೀ

Pejawar Swamiji: ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಹಿಂದೂ ದೇವಾಲಯಗಳನ್ನು ಆಯಾ ಪ್ರದೇಶದ ಹಿಂದೂಗಳ ಆಡಳಿತಕ್ಕೆ ನೀಡಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ದೇಶದ ಬಹುತೇಕ ಅನ್ಯಧರ್ಮಿಯರ ಪ್ರಾರ್ಥನಾ ಮಂದಿರಗಳನ್ನು ಆಯಾ ಸಮುದಾಯಕ್ಕೆ ಬಿಟ್ಟುಕೊಡಲಾಗಿದೆ. ಆದರೆ ಹಿಂದೂ ದೇವಾಲಯಗಳ ಆಡಳಿತ ಮಾತ್ರ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರ ನಿಯಂತ್ರಿಸುತ್ತಿದೆ. ಇದು ಸರಿಯಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.

VISTARANEWS.COM


on

Administration of Hindu temples should be handed over to Hindus says Pejawara Shri
Koo

ಗಂಗಾವತಿ: ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಹಿಂದೂ ದೇವಾಲಯಗಳನ್ನು ಆಯಾ ಪ್ರದೇಶದ ಹಿಂದೂಗಳ ಆಡಳಿತಕ್ಕೆ ನೀಡಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ (Pejawar Swamiji) ಹೇಳಿದರು.

ನಗರದಲ್ಲಿ ಈ ಕುರಿತು ಮಾತನಾಡಿ, ದೇಶದ ಬಹುತೇಕ ಅನ್ಯ ಧರ್ಮಿಯರ ಪ್ರಾರ್ಥನಾ ಮಂದಿರಗಳನ್ನು ಆಯಾ ಸಮುದಾಯಕ್ಕೆ ಬಿಟ್ಟುಕೊಡಲಾಗಿದೆ. ಆದರೆ ಹಿಂದೂ ದೇವಾಲಯಗಳ ಆಡಳಿತ ಮಾತ್ರ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರ ನಿಯಂತ್ರಿಸುತ್ತಿದೆ. ಇದು ಸರಿಯಲ್ಲ. ಆಯಾ ಧರ್ಮದ ವ್ಯಾಪ್ತಿಗೆ ಆಯಾ ದೇಗುಲಗಳ ಆಡಳಿತ ನೀಡುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶ ಇದೆ. ಆದರೆ ಸರ್ಕಾರಗಳು ಎಲ್ಲಿಯೂ ಈ ಆದೇಶವನ್ನು ಜಾರಿಗೆ ತರುತ್ತಿಲ್ಲ. ಈ ಕಾರ್ಯ ತಕ್ಷಣದಿಂದ ಆಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ: SSLC 2 Exam Time Table : ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ರ ಡೇಟ್‌ ಫಿಕ್ಸ್‌; ವೇಳಾಪಟ್ಟಿ ಹೀಗಿದೆ

ಐಎಎಸ್‌ನಂತ ಪರೀಕ್ಷೆಯಲ್ಲಿ ದಲಿತರು ಹಿಂದುಳಿಯಲು ಅಥವಾ ಆಯಕಟ್ಟಿನ ಹುದ್ದೆಗೆ ಆಯ್ಕೆ ಹೊಂದದಿರಲು ಮುಖ್ಯ ಕಾರಣ ಮೇಲ್ವರ್ಗದವರು ಎಂಬ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಇದೊಂದು ಆಧಾರ ರಹಿತ ಆರೋಪ. ಪರೀಕ್ಷೆಗಳು ಎಲ್ಲರಿಗೂ ಒಂದೇ ಇರುತ್ತದೆ. ಎಲ್ಲರಿಗೂ ನೂರು ಅಂಕ ಇರುತ್ತದೆ. ಅಭ್ಯರ್ಥಿಗಳು ಗ್ರಹಿಸುವ ಸಾಮರ್ಥ್ಯದ ಮೇಲೆ ಅಂಕಗಳು ಸಿಗುತ್ತವೆಯೇ ವಿನಃ, ಮೇಲ್ವರ್ಗ ಮತ್ತು ಕೆಳವರ್ಗ ಎಂಬ ತಾರತಮ್ಯ ನೀತಿಯಿಂದಲ್ಲ ಎಂದರು.

ದೇಶದಲ್ಲಿ ಹಿಂದೂಗಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಶ್ರೀಗಳು, ದೇಶದಲ್ಲಿ ಸಮಾನ ನಾಗರಿಕ ಕಾಯ್ದೆ ಜಾರಿಯಾದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದಷ್ಟು ತ್ವರಿತವಾಗಿ ಮಸೂದೆ ಮಂಡನೆಯಾಗಿ ಕಾಯ್ದೆ ಜಾರಿಯಾಗಬೇಕು ಎಂದರು.

ಐದಾರು ಶತಮಾನಗಳ ರಾಮಮಂದಿರ ನಿರ್ಮಾಣ ಕನಸು ಇಂದು ನನಸಾಗಿದೆ. ಇಲ್ಲಿಗೆ ನಮ್ಮ ಕಾರ್ಯ ಮುಗೀತು ಎಂದು ಸುಮ್ಮನೆ ಕೂರುವ ಹಾಗಿಲ್ಲ. ಆ ಮಂದಿರವನ್ನು ಸೂರ್ಯ-ಚಂದ್ರರು ಇರೋವರೆಗೂ ಉಳಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ.

ಇದನ್ನೂ ಓದಿ: Gold Rate Today: ಚಿನ್ನದ ಮಾರುಕಟ್ಟೆ ಇಳಿಮುಖ; 22 ಮತ್ತು 24 ಕ್ಯಾರಟ್‌ ಬಂಗಾರದ ದರಗಳಲ್ಲಿ ಇಳಿಕೆ

ಮಂದಿರದ ಮೇಲೆ ಯಾವುದೇ ದಾಳಿಯಾಗದಂತೆ, ಧಕ್ಕೆಯಾಗದಂತೆ ಸಂರಕ್ಷಣೆ ಮಾಡಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬ ಭಾರತೀಯ ಅದರಲ್ಲೂ ಮುಖ್ಯವಾಗಿ ಪ್ರತಿಯೊಬ್ಬ ಹಿಂದೂ ಈ ಕೆಲಸ ಮಾಡಬೇಕು. ಹಿಂದೂಗಳು ಹಿಂದೂಗಳಾಗಿ ಉಳಿದರೆ ಮಾತ್ರ ಈ ಕೆಲಸ ಸಾಧ್ಯ ಎಂದು ತಿಳಿಸಿದರು.

Continue Reading

ಕರ್ನಾಟಕ

SSLC Result 2024: ಎಸ್‌ಎಸ್‌ಎಲ್‌ಸಿ 2, 3ನೇ ಪರೀಕ್ಷೆ ಬರೆಯುವವರಿಗೆ ಗುಡ್‌ ನ್ಯೂಸ್‌! ಇರಲಿದೆ ಸ್ಪೆಷಲ್‌ ಕ್ಲಾಸ್‌

SSLC Result 2024: ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಬಂದಿಲ್ಲ. ಕೆಲವು ಕಟ್ಟುನಿಟ್ಟಿನ ಕ್ರಮದಿಂದಾಗಿ ಭಾರಿ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಶೇಕಡಾ 20ರಷ್ಟು ಗರೇಸ್‌ ಮಾರ್ಕ್ಸ್‌ ಅನ್ನು ಕೊಟ್ಟು ಪಾಸ್‌ ಮಾಡಲಾಗಿತ್ತು. ಮುಂದೆ ಬರುವ 2, 3ನೇ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಕ್ರಮವನ್ನು ತೆಗೆದುಕೊಂಡಿದೆ. ಅಂಥ ಮಕ್ಕಳಿಗೆ ಮುಂದಿನ ಒಂದು ತಿಂಗಳಲ್ಲಿ “ಪರಿಹಾರ ಬೋಧನೆ” ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ.

VISTARANEWS.COM


on

SSLC Result 2024 SSLC 2nd and 3rd exam aspirants to have special classes
Koo

ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. ಅಲ್ಲದೆ, ಫಲಿತಾಂಶವನ್ನು ಸುಧಾರಣೆ ಮಾಡಿಕೊಳ್ಳುವವರು, ಅನುತ್ತೀರ್ಣ ಹೊಂದಿದವರ ಸಲುವಾಗಿ ವಿಶೇಷ ಬೋಧನೆ ವ್ಯವಸ್ಥೆಯನ್ನು ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಅಂದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಬಂದಿಲ್ಲ. ಕೆಲವು ಕಟ್ಟುನಿಟ್ಟಿನ ಕ್ರಮದಿಂದಾಗಿ ಭಾರಿ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಶೇಕಡಾ 20ರಷ್ಟು ಗರೇಸ್‌ ಮಾರ್ಕ್ಸ್‌ ಅನ್ನು ಕೊಟ್ಟು ಪಾಸ್‌ ಮಾಡಲಾಗಿತ್ತು. ಮುಂದೆ ಬರುವ 2, 3ನೇ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಕ್ರಮವನ್ನು ತೆಗೆದುಕೊಂಡಿದೆ. ಅಂಥ ಮಕ್ಕಳಿಗೆ ಮುಂದಿನ ಒಂದು ತಿಂಗಳಲ್ಲಿ “ಪರಿಹಾರ ಬೋಧನೆ” ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ.

ಈ ಬಗ್ಗೆ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಪರಿಹಾರ ಕ್ರಮವಾಗಿ ಶಿಕ್ಷಣ ಇಲಾಖೆಯು ಪರೀಕ್ಷೆ-1 ರಲ್ಲಿ ಉತ್ತಮ ಸಾಧನೆ ಮಾಡದ ಅಥವಾ ತಮ್ಮ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲು ಬಯಸುವ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ಒಂದು ತಿಂಗಳಲ್ಲಿ ಪರಿಹಾರ ಬೋಧನೆಯನ್ನು ಆಯೋಜಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆ-2 ಮತ್ತು ಪರೀಕ್ಷೆ-3ಕ್ಕೆ ಉತ್ತಮವಾಗಿ ಸಿದ್ಧರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

ಶಿಕ್ಷಣ ಇಲಾಖೆ ಈ ಬಾರಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ. ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಡಲಾಗಿದೆ.

ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದ್ದು, ಶೇಕಡಾ 20 ಗ್ರೇಸ್ ಮಾರ್ಕ್ಸ್‌ ಕೊಟ್ಟರೂ ಕಡಿಮೆ ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿ ಹಿತದೃಷ್ಟಿಯಿಂದ ಗ್ರೇಸ್‌ ಮಾರ್ಕ್ಸ್‌ ನೀಡಿದೆ ಎನ್ನಲಾಗಿದೆ. ಒಟ್ಟು 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್‌ ಸಿಕ್ಕಿದೆ.

ವೆಬ್‌ ಕಾಸ್ಟಿಂಗ್‌ನಲ್ಲಿ ನಡೆದ ಪರೀಕ್ಷೆ

ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. ಮೊದಲ ಬಾರಿಗೆ ವೆಬ್‌ ಕಾಸ್ಟಿಂಗ್ ವಿಧಾನವನ್ನು ಪರಿಚಯಿಸಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಿಮೆಯಾಗಿರುವ ಫಲಿತಾಂಶವನ್ನು ಉತ್ತಮ ಪಡಿಸಲು ಸರ್ಕಾರ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ, ಒಂದು ಬಾರಿಯ ಕ್ರಮವಾಗಿ, 2024ರ ಎಲ್ಲ 3 ಎಸ್ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಎಲ್ಲ ವಿಷಯಗಳಲ್ಲಿ ನೀಡುವ ಕೃಪಾಂಕಗಳನ್ನು ಆಕರ್ಷಿಸಲು ಪಡೆಯಬೇಕಾದ ಅರ್ಹ ಅಂಕಗಳನ್ನು ಶೇ. 35 ರಿಂದ ಶೇ. 25ಕ್ಕೆ ಇಳಿಸಲಾಗಿದೆ ಮತ್ತು ಕೃಪಾಂಕದ ಪ್ರಮಾಣವನ್ನು ಶೇ. 10 ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮದ ನಂತರ ಒಟ್ಟಾರೆ ಫಲಿತಾಂಶವು, ಮೇಲಿನ ಕೋಷ್ಟಕದಲ್ಲಿನಂತೆ, 73.40% ಆಗಿದೆ. ಮುಂಬರುವ ವರ್ಷಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೂತನ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುವುದರಿಂದ ಫಲಿತಾಂಶ ವೃದ್ಧಿಯ ಅಗತ್ಯವಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ.

ಫಸ್ಟ್‌ ಬೆಂಚ್‌ಗೆ ಬಂದ ಉಡುಪಿ; ಲಾಸ್ಟ್‌ ಬೆಂಚ್‌ನಲ್ಲೇ ಉಳಿದ ಯಾದಗಿರಿ!

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್, ಶೇಕಡಾ 10.49% ರಷ್ಟು ಫಲಿತಾಂಶ ಕುಸಿತವಾಗಿದೆ. ಕಳೆದ ವರ್ಷ ಮೊದಲ ಸ್ಥಾನವನ್ನು ಚಿತ್ರದುರ್ಗ, ಎರಡನೇ ಸ್ಥಾನವನ್ನು ಮಂಡ್ಯ , ಮೂರನೇ ಸ್ಥಾನವನ್ನು ಹಾಸನ ಹಾಗೂ ಕೊನೆ ಸ್ಥಾನವನ್ನು ಯಾದಗಿರಿ ಪಡೆದಿತ್ತು. ಈ ವರ್ಷವೂ ಫಲಿತಾಂಶದಲ್ಲಿ ಯಾದಗಿರಿಯು ಕೊನೆ ಸ್ಥಾನವನ್ನೇ ಗಳಿಸಿದ್ದು, ಶೇಕಡಾವಾರು 50.59ರಷ್ಟು ಫಲಿತಾಂಶ ಬಂದಿದೆ. ಇನ್ನೂ ಉಡುಪಿ ಜಿಲ್ಲೆ ಕಳೆದ ಬಾರಿ 14ಕ್ಕೆ ಸ್ಥಾನದಲ್ಲಿತ್ತು, ಆದರೆ, ಈ ಬಾರಿ ಶೇ.94ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನವನ್ನು ಗಳಿಸಿದೆ. ದಕ್ಷಿಣ ಕನ್ನಡ ಎರಡನೇ ಹಾಗೂ ಶಿವಮೊಗ್ಗ ಮೂರನೇ ಸ್ಥಾನ ಗಳಿಸಿದೆ.

ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಇಂತಿದೆ

1) ಉಡುಪಿ- 94%
2) ದಕ್ಷಿಣ ಕನ್ನಡ-92.12%
3) ಶಿವಮೊಗ್ಗ -88.67%
4) ಕೊಡಗು- 88.67%
5) ಉತ್ತರ ಕನ್ನಡ-86.54%
6) ಹಾಸನ-86.28%
7) ಮೈಸೂರು-85.5%
8) ಶಿರಸಿ-84.64%
9)ಬೆಂಗಳೂರು ಗ್ರಾಮಾಂತರ-83.67%
10) ಚಿಕ್ಕಮಗಳೂರು-83.39%
11) ವಿಜಯಪುರ- 79.82%
12) ಬೆಂಗಳೂರು ದಕ್ಷಿಣ-79%
13) ಬಾಗಲಕೋಟೆ-77.92%
14)ಬೆಂಗಳೂರು ಉತ್ತರ- 77.09%
15) ಹಾವೇರಿ-75.85%
16) ತುಮಕೂರು-75.16%
17)ಗದಗ- 74.76%
18)ಚಿಕ್ಕಬಳ್ಳಾಪುರ- 73.61%
19)ಮಂಡ್ಯ-73.59%
20) ಕೋಲಾರ-73.57%
21)ಚಿತ್ರದುರ್ಗ-72.85%
22) ಧಾರವಾಡ-72.67%
23) ದಾವಣಗೆರೆ- 72.48%
24) ಚಾಮರಾಜನಗರ-71.59%
25) ಚಿಕ್ಕೋಡಿ-69.82%
26) ರಾಮನಗರ-69.53%
27) ವಿಜಯನಗರ-65.61%
28) ಬಳ್ಳಾರಿ-64.99%
29) ಬೆಳಗಾವಿ-64.93%
30) ಮಧುಗಿರಿ-62.44%
31) ರಾಯಚೂರು- 61.2%
32) ಕೊಪ್ಪಳ- 61.16%
33) ಬೀದರ್‌- 57.52%
34) ಕಲಬುರಗಿ- 53.04%
35) ಯಾದಗಿರಿ- 50.59%

ಮಾಧ್ಯಮವಾರು ಫಲಿತಾಂಶ

ಕನ್ನಡ – 69.34%
ಆಂಗ್ಲ – 88.29%
ಉರ್ದು – 63.49%
ಮರಾಠಿ – 69.32%
ತೆಲುಗು – 75.59%

ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ

625ಕ್ಕೆ 625 ಅಂಕವನ್ನು ಒಬ್ಬ ವಿದ್ಯಾರ್ಥಿ ಮಾತ್ರ ಪಡೆದುಕೊಂಡಿದ್ದಾರೆ. 624 ಅಂಕಗಳನ್ನು 7 ಮಂದಿ, 623 ಅಂಕಗಳನ್ನು 14 ಮಂದಿ ಹಾಗೂ 622 ಅಂಕಗಳನ್ನು 21 ಮಂದಿ, 621 ಅಂಕಗಳನ್ನು 44 ಮಂದಿ, 620 ಅಂಕಗಳನ್ನು 64 ಮಂದಿ ಅಂಕಗಳನ್ನು ಪಡೆದಿದ್ದಾರೆ.

Continue Reading

ಕರ್ನಾಟಕ

SSLC Result 2024: ಈ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾರೂ ಫೇಲ್‌ ಆಗಿಲ್ಲ! ಶಿಕ್ಷಣ ಇಲಾಖೆ ಹೀಗೆ ಹೇಳಿದ್ದು ಯಾಕೆ?

SSLC Result 2024: ಮಂಡಳಿಯು ಈಗಾಗಲೇ ಪರೀಕ್ಷೆ-1, 2, 3 ರ ಹೊಸ ಮಾದರಿಯನ್ನು ಪರಿಚಯಿಸಿದೆ. ಇದರಿಂದಾಗಿ ಮೊದಲನೆಯ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯು ಉತ್ತೀರ್ಣರಾಗದಿದ್ದರೆ, ಫಲಿತಾಂಶವನ್ನು ಫೇಲ್‌ ಎಂದು ನಮೂದು ಮಾಡಲಾಗುತ್ತಿಲ್ಲ. ಈ ವಿದ್ಯಾರ್ಥಿಗಳಿಗೆ ಬಾಕಿ 2 ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಆ ಪರೀಕ್ಷೆಗಳಲ್ಲಿ ಬರುವ ಗರಿಷ್ಠ ಅಂಕಗಳ ಆಧಾರದ ಮೇಲೆ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುವುದು. ಹೀಗಾಗಿ ಸದ್ಯಕ್ಕೆ ಯಾರನ್ನೂ ಫೇಲ್‌ ಎಂದು ಪ್ರಕಟಿಸುವ ನಿರ್ಧಾರವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ.

VISTARANEWS.COM


on

No one has failed in SSLC says Education Department
Koo

ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. ಇಷ್ಟಾದರೂ ಪರೀಕ್ಷೆಯಲ್ಲಿ ಯಾರೂ ಫೇಲ್‌ ಆಗಿಲ್ಲ. ಅಂದರೆ, ಫಲಿತಾಂಶವನ್ನು ನೋಡಿದ ವಿದ್ಯಾರ್ಥಿಗಳಿಗೆ ಆಘಾತವಾಗದಿರಲು ಕ್ರಮ ಕೈಗೊಳಳಲಾಗಿದೆ. ವಿದ್ಯಾರ್ಥಿಯು ಉತ್ತೀರ್ಣರಾಗದಿದ್ದರೆ, ವಿದ್ಯಾರ್ಥಿಯ ಫಲಿತಾಂಶವನ್ನು NC (Not Completed -ಪೂರ್ಣಗೊಳಿಸಲಾಗಿಲ್ಲ) ಎಂದು ತೋರಿಸಲಾಗುತ್ತದೆ.

ಮಂಡಳಿಯು ಈಗಾಗಲೇ ಪರೀಕ್ಷೆ-1, 2, 3 ರ ಹೊಸ ಮಾದರಿಯನ್ನು ಪರಿಚಯಿಸಿದೆ. ಇದರಿಂದಾಗಿ ಮೊದಲನೆಯ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯು ಉತ್ತೀರ್ಣರಾಗದಿದ್ದರೆ, ವಿದ್ಯಾರ್ಥಿಯ ಫಲಿತಾಂಶವನ್ನು NC-Not Completed (ಪೂರ್ಣಗೊಳಿಸಲಾಗಿಲ್ಲ) ಎಂದು ತೋರಿಸಲಾಗುತ್ತದೆ.

ಇದನ್ನೂ ಓದಿ: SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಈ ವೇಳೆ ಈ ವಿದ್ಯಾರ್ಥಿಗಳಿಗೆ ಬಾಕಿ 2 ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಆ ಪರೀಕ್ಷೆಗಳಲ್ಲಿ ಬರುವ ಗರಿಷ್ಠ ಅಂಕಗಳ ಆಧಾರದ ಮೇಲೆ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುವುದು. ಹೀಗಾಗಿ ಸದ್ಯಕ್ಕೆ ಯಾರನ್ನೂ ಫೇಲ್‌ ಎಂದು ಪ್ರಕಟಿಸುವ ನಿರ್ಧಾರವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ.

ಫಲಿತಾಂಶ ಕುಸಿತಕ್ಕೆ ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. ಇದಕ್ಕೆ ನೂತನವಾಗಿ ಸಿಸಿಟಿವಿ ಕಣ್ಗಾವಲಿನಲ್ಲಿ ವೆಬ್‌ಕಾಸ್ಟಿಂಗ್‌ ಮೂಲಕ ಪರೀಕ್ಷೆ ನಡೆಸಿದ್ದೇ ಕಾರಣ ಎಂದು ಶಿಕ್ಷಣ ಇಲಾಖೆ ಒಪ್ಪಿಕೊಂಡಿದೆ. ಈ ಕಾರಣದಿಂದಾಗಿಯೇ ಗ್ರೇಸ್‌ ಮಾರ್ಕ್ಸ್‌ ಕೊಡುವ ಪ್ರಮೇಯ ಬಂದಿದೆ ಎಂಬುದನ್ನು ಸೂಚ್ಯವಾಗಿ ಹೇಳಿದೆ.

2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್, ಶೇಕಡಾ 10.49 ರಷ್ಟು ಫಲಿತಾಂಶ ಕುಸಿತವಾಗಿದೆ. ಇದು ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಟ್ಟು ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳನ್ನು ಪಾಸ್‌ ಮಾಡಲಾಗಿದೆ. ಹಾಗಾದರೆ, ಈ ಫಲಿತಾಂಶವು ಏಕಾಏಕಿ ಕುಸಿತ ಕಾಣಲು ಏನು ಎಂಬುದನ್ನು ನೋಡಲು ಹೊರಟರೆ ಶಿಕ್ಷಣ ಇಲಾಖೆಯ ಕಠಿಣ ಕ್ರಮ ಎಂಬುದು ತಿಳಿಯುತ್ತದೆ. ಪ್ರತಿ ವರ್ಷ ಕೆಲವು ಕಡೆ ನಕಲು ಮಾಡಿದ ಆರೋಪಗಳು ಕೇಳಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ತೆಗೆದುಕೊಂಡ ಕ್ರಮವೇ ಇದಕ್ಕೆ ಕಾರಣ ಎಂಬ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ಬಂದಿದೆ.

ಹೀಗಾಗಿ ಈ ಬಾರಿ ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿತ್ತು. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಇದರಿಂದಾಗಿ ಪರೀಕ್ಷಾ ಮೇಲ್ವಿಚಾರಕರು ಸಹ ಕಟ್ಟುನಿಟ್ಟಾಗಿ ಪರೀಕ್ಷೆಗಳನ್ನು ನಡೆಸಿದ್ದರು. ಇದರ ಪರಿಣಾಮವಾಗಿ ಒಟ್ಟಾರೆ ಫಲಿತಾಂಶವು ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ.

ಒಪ್ಪಿಕೊಂಡಿರುವ ಶಿಕ್ಷಣ ಇಲಾಖೆ

ಮೊದಲ ಬಾರಿಗೆ ವೆಬ್‌ ಕಾಸ್ಟಿಂಗ್ ವಿಧಾನವನ್ನು ಪರಿಚಯಿಸಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಿಮೆಯಾಗಿರುವ ಫಲಿತಾಂಶವನ್ನು ಉತ್ತಮ ಪಡಿಸಲು ಗ್ರೇಸ್‌ ಮಾರ್ಕ್ಸ್‌ ನಿರ್ಧಾರವನ್ನು ಕೈಗೊಂಡಿದ್ದಾಗಿ ಶಿಕ್ಷಣ ಇಲಾಖೆ ಹೇಳಿದೆ. ಅಂದರೆ, ನಕಲು ಮಾಡಲು ಸಾಧ್ಯವಾಗದ ಕಾರಣ ಹೆಚ್ಚಿನ ಕಡೆ ಫಲಿತಾಂಶ ಕುಸಿದಿದೆ ಎಂಬುದನ್ನು ಶಿಕ್ಷಣ ಇಲಾಖೆ ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗಿದೆ. ಇನ್ನು ಮುಂಬರುವ ವರ್ಷಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೂತನ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುವುದರಿಂದ ಫಲಿತಾಂಶ ವೃದ್ಧಿಯ ಅಗತ್ಯವಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ.

ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಈ ವರೆಗೆ ಇದ್ದ ಪಾಸಿಂಗ್‌ ಮಾರ್ಕ್ಸ್‌ ಶೇಕಡಾ 35 ಅನ್ನು ಶೇಕಡಾ 25ಕ್ಕೆ ಇಳಿಸಿದೆ. ಅಂದರೆ 35 ಅಂಕಗಳ ಬದಲಿಗೆ 25 ಅಂಕವನ್ನು ಪಡೆದ ವಿದ್ಯಾರ್ಥಿಯೂ ಪಾಸ್‌ ಎಂದು ಮಾಡಲಾಗಿದೆ. ಅಲ್ಲದೆ, ಕೃಪಾಂಕದ ಪ್ರಮಾಣವನ್ನು ಶೇ. 10 ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಎರಡೂ ಕ್ರಮದಿಂದಾಗಿ ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಈ ಕ್ರಮದ ನಂತರ ಒಟ್ಟಾರೆ ಫಲಿತಾಂಶವು ಶೇಕಡಾ 73.40ರಷ್ಟಾಗಿದೆ. ಇಲ್ಲದಿದ್ದರೆ ಭಾರಿ ಪ್ರಮಾಣದಲ್ಲಿ ಮಕ್ಕಳು ಅನುತ್ತೀರ್ಣರಾಗುತ್ತಿದ್ದರು.

ಫಸ್ಟ್‌ ಬೆಂಚ್‌ಗೆ ಬಂದ ಉಡುಪಿ; ಲಾಸ್ಟ್‌ ಬೆಂಚ್‌ನಲ್ಲೇ ಉಳಿದ ಯಾದಗಿರಿ!

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್, ಶೇಕಡಾ 10.49% ರಷ್ಟು ಫಲಿತಾಂಶ ಕುಸಿತವಾಗಿದೆ. ಕಳೆದ ವರ್ಷ ಮೊದಲ ಸ್ಥಾನವನ್ನು ಚಿತ್ರದುರ್ಗ, ಎರಡನೇ ಸ್ಥಾನವನ್ನು ಮಂಡ್ಯ , ಮೂರನೇ ಸ್ಥಾನವನ್ನು ಹಾಸನ ಹಾಗೂ ಕೊನೆ ಸ್ಥಾನವನ್ನು ಯಾದಗಿರಿ ಪಡೆದಿತ್ತು. ಈ ವರ್ಷವೂ ಫಲಿತಾಂಶದಲ್ಲಿ ಯಾದಗಿರಿಯು ಕೊನೆ ಸ್ಥಾನವನ್ನೇ ಗಳಿಸಿದ್ದು, ಶೇಕಡಾವಾರು 50.59ರಷ್ಟು ಫಲಿತಾಂಶ ಬಂದಿದೆ. ಇನ್ನೂ ಉಡುಪಿ ಜಿಲ್ಲೆ ಕಳೆದ ಬಾರಿ 14ಕ್ಕೆ ಸ್ಥಾನದಲ್ಲಿತ್ತು, ಆದರೆ, ಈ ಬಾರಿ ಶೇ.94ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನವನ್ನು ಗಳಿಸಿದೆ. ದಕ್ಷಿಣ ಕನ್ನಡ ಎರಡನೇ ಹಾಗೂ ಶಿವಮೊಗ್ಗ ಮೂರನೇ ಸ್ಥಾನ ಗಳಿಸಿದೆ.

ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಇಂತಿದೆ

1) ಉಡುಪಿ- 94%
2) ದಕ್ಷಿಣ ಕನ್ನಡ-92.12%
3) ಶಿವಮೊಗ್ಗ -88.67%
4) ಕೊಡಗು- 88.67%
5) ಉತ್ತರ ಕನ್ನಡ-86.54%
6) ಹಾಸನ-86.28%
7) ಮೈಸೂರು-85.5%
8) ಶಿರಸಿ-84.64%
9)ಬೆಂಗಳೂರು ಗ್ರಾಮಾಂತರ-83.67%
10) ಚಿಕ್ಕಮಗಳೂರು-83.39%
11) ವಿಜಯಪುರ- 79.82%
12) ಬೆಂಗಳೂರು ದಕ್ಷಿಣ-79%
13) ಬಾಗಲಕೋಟೆ-77.92%
14)ಬೆಂಗಳೂರು ಉತ್ತರ- 77.09%
15) ಹಾವೇರಿ-75.85%
16) ತುಮಕೂರು-75.16%
17)ಗದಗ- 74.76%
18)ಚಿಕ್ಕಬಳ್ಳಾಪುರ- 73.61%
19)ಮಂಡ್ಯ-73.59%
20) ಕೋಲಾರ-73.57%
21)ಚಿತ್ರದುರ್ಗ-72.85%
22) ಧಾರವಾಡ-72.67%
23) ದಾವಣಗೆರೆ- 72.48%
24) ಚಾಮರಾಜನಗರ-71.59%
25) ಚಿಕ್ಕೋಡಿ-69.82%
26) ರಾಮನಗರ-69.53%
27) ವಿಜಯನಗರ-65.61%
28) ಬಳ್ಳಾರಿ-64.99%
29) ಬೆಳಗಾವಿ-64.93%
30) ಮಧುಗಿರಿ-62.44%
31) ರಾಯಚೂರು- 61.2%
32) ಕೊಪ್ಪಳ- 61.16%
33) ಬೀದರ್‌- 57.52%
34) ಕಲಬುರಗಿ- 53.04%
35) ಯಾದಗಿರಿ- 50.59%

ಮಾಧ್ಯಮವಾರು ಫಲಿತಾಂಶ

ಕನ್ನಡ – 69.34%
ಆಂಗ್ಲ – 88.29%
ಉರ್ದು – 63.49%
ಮರಾಠಿ – 69.32%
ತೆಲುಗು – 75.59%

ಇದನ್ನೂ ಓದಿ: SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ

625ಕ್ಕೆ 625 ಅಂಕವನ್ನು ಒಬ್ಬ ವಿದ್ಯಾರ್ಥಿ ಮಾತ್ರ ಪಡೆದುಕೊಂಡಿದ್ದಾರೆ. 624 ಅಂಕಗಳನ್ನು 7 ಮಂದಿ, 623 ಅಂಕಗಳನ್ನು 14 ಮಂದಿ ಹಾಗೂ 622 ಅಂಕಗಳನ್ನು 21 ಮಂದಿ, 621 ಅಂಕಗಳನ್ನು 44 ಮಂದಿ, 620 ಅಂಕಗಳನ್ನು 64 ಮಂದಿ ಅಂಕಗಳನ್ನು ಪಡೆದಿದ್ದಾರೆ.

Continue Reading
Advertisement
Job Alert
ಉದ್ಯೋಗ41 seconds ago

Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಅಪ್ಲೈ ಮಾಡಿ

Kannada Serials TRP Puttakkana makkalu TOP one
ಕಿರುತೆರೆ10 mins ago

Kannada Serials TRP: ಟಾಪ್‌ 3ರಲ್ಲಿ ಇವೆ ಎರಡು ಧಾರಾವಾಹಿಗಳು; ʻಪುಟ್ಟಕ್ಕನ ಮಕ್ಕಳುʼ ಸೀರಿಯಲ್‌ನದ್ದೇ ಪಾರುಪತ್ಯ!

Self Harming Man commits suicide after falling from PG in Bengaluru
ಬೆಂಗಳೂರು12 mins ago

Self Harming: ಕಟ್ಟಡದ ಮೇಲಿಂದ ಬಿದ್ದು ಯುವಕ ಸೂಸೈಡ್‌

Atrocity on women
ದೇಶ14 mins ago

Atrocity on women: ಟಿಎಂಸಿ ಮುಖಂಡರ ವಿರುದ್ಧ ಅತ್ಯಾಚಾರ ಕೇಸ್‌; ಯೂ ಟರ್ನ್‌ ಹೊಡೆದ ದೂರುದಾರೆ

Money Guide
ಮನಿ-ಗೈಡ್18 mins ago

Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Virender Sehwag
ಕ್ರಿಕೆಟ್25 mins ago

Virender Sehwag: ಏಕದಿನ ವಿಶ್ವಕಪ್​ ಸೋಲಿಗೆ ಕೊಹ್ಲಿ, ರಾಹುಲ್​ ನೇರ ಕಾರಣ ಎಂದ ಮಾಜಿ ಆಟಗಾರ

Administration of Hindu temples should be handed over to Hindus says Pejawara Shri
ಕರ್ನಾಟಕ50 mins ago

Pejawar Swamiji: ದೇವಾಲಯಗಳ ಆಡಳಿತ ಸಂಪೂರ್ಣವಾಗಿ ಹಿಂದೂಗಳಿಗೆ ಒಪ್ಪಿಸಬೇಕು: ಪೇಜಾವರ ಶ್ರೀ

Navneet Rana
Lok Sabha Election 20241 hour ago

Navneet Rana: 15 ಸೆಕೆಂಡು ಕೊಟ್ಟರೆ ಸಾಕು, ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ; ಓವೈಸಿ ಸಹೋದರರ ವಿರುದ್ಧ ಬಿಜೆಪಿ ನಾಯಕಿ ಗುಡುಗು

SSLC Result 2024 SSLC 2nd and 3rd exam aspirants to have special classes
ಕರ್ನಾಟಕ2 hours ago

SSLC Result 2024: ಎಸ್‌ಎಸ್‌ಎಲ್‌ಸಿ 2, 3ನೇ ಪರೀಕ್ಷೆ ಬರೆಯುವವರಿಗೆ ಗುಡ್‌ ನ್ಯೂಸ್‌! ಇರಲಿದೆ ಸ್ಪೆಷಲ್‌ ಕ್ಲಾಸ್‌

SSLc Exam 2 time table
ಶಿಕ್ಷಣ2 hours ago

SSLC 2 Exam Time Table : ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2ರ ಡೇಟ್‌ ಫಿಕ್ಸ್‌; ವೇಳಾಪಟ್ಟಿ ಹೀಗಿದೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Result 2024 what is the reason for most of the students fail in SSLC
ಕರ್ನಾಟಕ3 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ3 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ3 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು4 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ4 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು5 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

ಟ್ರೆಂಡಿಂಗ್‌