Viral Video: ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಬಾಲಕಿಗೆ ರಕ್ತ ಬರುವಂತೆ ಹೊಡೆದ ಮಹಿಳೆ! ವೈರಲ್ ಆಯ್ತು ವಿಡಿಯೊ - Vistara News

ವಿದೇಶ

Viral Video: ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಬಾಲಕಿಗೆ ರಕ್ತ ಬರುವಂತೆ ಹೊಡೆದ ಮಹಿಳೆ! ವೈರಲ್ ಆಯ್ತು ವಿಡಿಯೊ

ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಬಾಲಕಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಇರಾನ್ ದೇಶದಲ್ಲಿ ನಡೆದಿದೆ. ಬಾಲಕಿ ಅಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇರಾನ್: ಹಿಜಾಬ್ ವಿಚಾರದಲ್ಲಿ ಜಗಳ ಇಂದು ನಿನ್ನೆಯದಲ್ಲ. ಇಂದಿಗೂ ಅನೇಕ ರಾಷ್ಟ್ರಗಳಲ್ಲಿ ಹಿಜಾಬ್ ಕಡ್ಡಾಯವಾಗಿದೆ. ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೇ ಹಲ್ಲೆಗಳು ನಡೆಯುತ್ತವೆ. ಅದೇ ರೀತಿಯಲ್ಲಿ ಇರಾನ್ ದೇಶದಲ್ಲಿ ಹಿಜಾಬ್ ಧರಿಸಿಲ್ಲ ಎಂದು ಪುಟ್ಟ ಬಾಲಕಿಯ ಮೇಲೇ ರಕ್ತ ಬರುವಂತೆ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಬಾಲಕಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral Video: ಹೇ ಅಲ್ಲಾ, ನಮಗೆ ಮೋದಿಯನ್ನು ಕೊಡು, ಅವರೇ ಈ ದೇಶವನ್ನು ಸರಿ ಮಾಡಲಿ ಎಂದು ಬೇಡಿಕೊಂಡ ಪಾಕಿಸ್ತಾನಿ ಯುವಕ

ಬಾಲಕಿಯೊಬ್ಬಳು ರಸ್ತೆಯ ಬದಿಯಲ್ಲಿ ಜೋರಾಗಿ ಅಳುತ್ತಾ ಕುಳಿತಿದ್ದಾಳೆ. ಆಕೆಯ ಮೂಗಿನಿಂದ ರಕ್ತ ಸುರಿಯುತ್ತಿದೆ. ಈಗಾಗಲೇ ಅಧಿಕ ರಕ್ತ ಸೋರಿಕೆಯಾಗಿದ್ದು, ಬಾಲಕಿಯ ಬಟ್ಟೆಯೆಲ್ಲ ರಕ್ತವಾಗಿರುವ ದೃಶ್ಯ ವಿಡಿಯೊದಲ್ಲಿದೆ. ಇಬ್ಬರು ಮಹಿಳೆಯರು ಬಾಲಕಿಗೆ ಸಮಾಧಾನ ಮಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ಗಾಯಾಳುವಾಗಿರುವ ಬಾಲಕಿಯನ್ನು ಸಾರಾ ಶಿರಾಜಿ ಎಂದು ಗುರುತಿಸಲಾಗಿದೆ. ಆಕೆ ಎಲಿಮೆಂಟರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಆಕೆ ಶಾಲೆಗೆ ತೆರಳುತ್ತಿದ್ದಾಗ ಆಕೆಯ ಮೇಲೆ ರಜಿಯಾ ಹಫ್ತ್ ಬರದರನ್ ಹೆಸರಿನ ಮಹಿಳೆ ಹಲ್ಲೆ ನಡೆಸಿದ್ದಾರೆ. ಹಿಜಾಬ್ ಧರಿಸಿಲ್ಲವೆಂದು ಹಲ್ಲೆ ನಡೆಸಲಾಗಿದೆ. ಬಾಲಕಿಯ ಕುಟುಂಬಕ್ಕೂ ಕರೆ ಮಾಡಿ ಬೆದರಿಕೆ ನೀಡಿರುವುದಾಗಿ ಹೇಳಲಾಗಿದೆ.

ಇರಾನ್ ದೇಶದಲ್ಲಿ ಹಿಜಾಬ್ ಧರಿಸಿಲ್ಲವೆಂದು ಹಲ್ಲೆ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಹ್ಸಾ ಅಮಿನಿ ಹೆಸರಿನ ಯುವತಿಯನ್ನು ಹಿಜಾಬ್ ಧರಿಸಿಲ್ಲವೆನ್ನುವ ಕಾರಣಕ್ಕೆ ಬಂಧಿಸಲಾಗಿತ್ತು. ಆಕೆ ಪೊಲೀಸ್ ಠಾಣೆಯಲ್ಲೇ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಳು. ಇದು ರಾಷ್ಟ್ರಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

Sunita Williams: ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಯುನೈಟೆಡ್ ಲಾಂಚ್ ಅಲಯನ್ಸ್ ಅಟ್ಲಾಸ್ ವಿ ರಾಕೆಟ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಮೇಲಕ್ಕೆ ತೆರಳಿ ಕಕ್ಷೆಯ ಪ್ರಯೋಗಾಲಯದಲ್ಲಿ ತಂಗಲಿದ್ದಾರೆ. ಅಲ್ಲಿ ಅವರು ಸುಮಾರು ಒಂದು ವಾರ ಉಳಿಯುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

VISTARANEWS.COM


on

Sunita Williams
Koo

ನ್ಯೂಯಾರ್ಕ್‌: ಭಾರತೀಯ ಮೂಲದ ವಿಖ್ಯಾತ ಗಗನಯಾತ್ರಿ (Astronaut) ಸುನೀತಾ ಎಲ್. ವಿಲಿಯಮ್ಸ್ (Sunita Williams), ತಮ್ಮ ಮೂರನೇ ಬಾಹ್ಯಾಕಾಶ ಯಾತ್ರೆಯನ್ನು (Space mission) ನಡೆಸಲು ಸಜ್ಜಾಗಿದ್ದಾರೆ. ಅಮೆರಿಕದ ನಾಸಾ (NASA) ಸಂಸ್ಥೆಯ ಗಗನಯಾತ್ರಿಯಾದ ಸುನೀತಾ, ಪ್ರಸ್ತುತ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಪೈಲಟ್ ಆಗಲು ತರಬೇತಿ ಪಡೆಯುತ್ತಿದ್ದಾರೆ. ಇದು ಆ ವಾಹನದ ಮೊದಲ ಸಿಬ್ಬಂದಿ ವಿಮಾನ. ಮತ್ತು ಸುನೀತಾಗೆ ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಮೂರನೇ ಕಾರ್ಯಾಚರಣೆಯಾಗಿದೆ.

“ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಏಜೆನ್ಸಿಯ ಬೋಯಿಂಗ್ ಕ್ರೂ ಫ್ಲೈಟ್ ಪರೀಕ್ಷೆಯ ತಯಾರಿಗಾಗಿ NASA ಎರಡು ಉಡಾವಣೆಗಳನ್ನು ಆಯೋಜಿಸಿದೆ. ಏಪ್ರಿಲ್ 25ರಂದು EDTನಲ್ಲಿ ಹಾಗೂ ಮೇ 6ರಂದು ಫ್ಲೋರಿಡಾದ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದಲ್ಲಿ ಬಾಹ್ಯಾಕಾಶ ಉಡಾವಣಾ ಸಂಕೀರ್ಣ-41ರಿಂದ.”

ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಯುನೈಟೆಡ್ ಲಾಂಚ್ ಅಲಯನ್ಸ್ ಅಟ್ಲಾಸ್ ವಿ ರಾಕೆಟ್‌ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಮೇಲಕ್ಕೆ ತೆರಳಿ ಕಕ್ಷೆಯ ಪ್ರಯೋಗಾಲಯದಲ್ಲಿ ತಂಗಲಿದ್ದಾರೆ. ಅಲ್ಲಿ ಅವರು ಸುಮಾರು ಒಂದು ವಾರ ಉಳಿಯುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ಭಾಗವಾಗಿ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಸಿಬ್ಬಂದಿ ವಿಮಾನದ ಉಡಾವಣೆ, ಡಾಕಿಂಗ್ ಮತ್ತು ಭೂಮಿಗೆ ಹಿಂತಿರುಗುವುದು ಸೇರಿದಂತೆ ಸ್ಟಾರ್‌ಲೈನರ್ ಸಿಸ್ಟಮ್‌ನ ಸಾಮರ್ಥ್ಯಗಳನ್ನು ಪರೀಕ್ಷಿಸಲಾಗಿದೆ.

ಸುನಿತಾ ವಿಲಿಯಮ್ಸ್ ಅವರ ಪರಿಣತಿ

ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಹಾರಾಟದ ಮೊದಲ ಅನುಭವವು ಡಿಸೆಂಬರ್ 9, 2006ರಿಂದ ಜೂನ್ 22, 2007ರವರೆಗೆ ನಡೆಯಿತು. ʼಎಕ್ಸ್‌ಪೆಡಿಶನ್ 14/15ʼನೊಂದಿಗೆ ಪ್ರಾರಂಭವಾಯಿತು. ಅವರು STS-116ನ ಸಿಬ್ಬಂದಿಯೊಂದಿಗೆ ಸಾಗಿ ಫ್ಲೈಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಅವರು ಒಟ್ಟು 29 ಗಂಟೆ 17 ನಿಮಿಷಗಳ ನಾಲ್ಕು ಬಾಹ್ಯಾಕಾಶ ನಡಿಗೆಯೊಂದಿಗೆ ಮಹಿಳೆಯರ ದಾಖಲೆಯನ್ನು ಸ್ಥಾಪಿಸಿದರು. ಜೂನ್ 2007ರಲ್ಲಿ ಯಾನ ಮುಗಿಸಿ STS-117 ಸಿಬ್ಬಂದಿಯೊಂದಿಗೆ ಭೂಮಿಗೆ ಮರಳಿದರು.

ಜುಲೈ 14ರಿಂದ ನವೆಂಬರ್ 18, 2012ರವರೆಗೆ ಅವರ ಎರಡನೇ ಬಾಹ್ಯಾಕಾಶ ಯಾನ, ಎಕ್ಸ್‌ಪೆಡಿಶನ್ 32/33. ಅವರು ರಷ್ಯಾದ ಸೋಯುಜ್ ಕಮಾಂಡರ್ ಯೂರಿ ಮಾಲೆನ್‌ಚೆಂಕೊ ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ಫ್ಲೈಟ್ ಇಂಜಿನಿಯರ್ ಅಕಿಹಿಕೊ ಹೊಶೈಡ್ ಅವರೊಂದಿಗೆ ಕಝಾಕಿಸ್ತಾನ್‌ನ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಜುಲೈ 2012ರಂದು ಹೋದರು. ಕಕ್ಷೆಯ ಪ್ರಯೋಗಾಲಯದಲ್ಲಿ ಸಂಶೋಧನೆ ಮತ್ತು ಪರಿಶೋಧನೆ ನಡೆಸುತ್ತ ನಾಲ್ಕು ತಿಂಗಳು ಕಳೆದಳು.

ಈ ಕಾರ್ಯಾಚರಣೆಗಳ ಸಮಯದಲ್ಲಿ ಅವರು ಹಲವು ಸಂಶೋಧನೆ ನಡೆಸಿದರು. ಬಾಹ್ಯಾಕಾಶ ನಡಿಗೆಗಳನ್ನು ನಡೆಸಿದರು ಮತ್ತು ಬಾಹ್ಯಾಕಾಶದ ಪರಿಶೋಧನೆಗೆ ಗಮನಾರ್ಹವಾಗಿ ಕೊಡುಗೆ ನೀಡಿದರು. ಸುನೀತಾ ವಿಲಿಯಮ್ಸ್ 50 ಗಂಟೆಗಳು ಮತ್ತು 40 ನಿಮಿಷಗಳ ಸಮಯದೊಂದಿಗೆ ದಾಖಲೆ ಸಮಯದ ಬಾಹ್ಯಾಕಾಶ ನಡಿಗೆ ದಾಖಲೆ ಮಾಡಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳು

ಅವರಿಗೆ ಅನೇಕ ಪ್ರಶಸ್ತಿಗಳು ಮತ್ತು ಗೌರವ ಸಂದಿವೆ. ಅವರು US ನೌಕಾಪಡೆಯ ನಿವೃತ್ತ ಕ್ಯಾಪ್ಟನ್. ಅವರಿಗೆ ಎರಡು ಬಾರಿ ರಕ್ಷಣಾ ಉನ್ನತ ಸೇವಾ ಪದಕ, ಲೀಜನ್ ಆಫ್ ಮೆರಿಟ್, ನೌಕಾಪಡೆಯ ಪ್ರಶಂಸಾ ಪದಕ ಎರಡು ಬಾರಿ, ನೌಕಾಪಡೆ ಮತ್ತು ಮೆರೈನ್ ಕಾರ್ಪ್ಸ್ ಸಾಧನೆ ಪದಕ ಮತ್ತು ಮಾನವೀಯ ಸೇವಾ ಪದಕ ನೀಡಲಾಗಿದೆ. ಪ್ರಸ್ತುತ ವಿಲಿಯಮ್ಸ್ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಕ್ರ್ಯೂ ಫ್ಲೈಟ್ ಟೆಸ್ಟ್ ಮಿಷನ್‌ನ ಪೈಲಟ್ ಆಗಲು ತರಬೇತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಭಾರತೀಯನನ್ನು ಇಳಿಸುವ ತನಕ ಬಿಡಲ್ಲ; ಇಸ್ರೋ ಅಧ್ಯಕ್ಷ ಮಹತ್ವದ ಘೋಷಣೆ

Continue Reading

ಪ್ರಮುಖ ಸುದ್ದಿ

PM Narendra Modi: “ಅಮೆರಿಕಕ್ಕೆ ಮೋದಿಯಂಥ ನಾಯಕ ಬೇಕು” ಜೆಪಿ ಮೋರ್ಗನ್‌ ಸಂಸ್ಥೆ ಸಿಇಒ ಜೇಮಿ ಶ್ಲಾಘನೆ

“ನರೇಂದ್ರ ಮೋದಿ (PM Narendra Modi) 40.0 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದಾರೆ. ಅಲ್ಲಿ ಶೌಚಾಲಯಗಳಿಲ್ಲದ 40 ಕೋಟಿ ಜನರು ಇದ್ದಾರೆ. ನಾವಿಲ್ಲಿ ಕೆಲಸಗಳನ್ನು ಹೇಗೆ ಮಾಡಬೇಕು ಎಂದು ಮೋದಿಯವರಿಗೆ ಈ ಬಗ್ಗೆ ಉಪನ್ಯಾಸ ನೀಡುತ್ತೇವೆ” ಎಂದು ಜೇಮಿ ಡೀಮನ್ ಹೇಳಿದ್ದಾರೆ.

VISTARANEWS.COM


on

pm narendra modi jp morgan jamie dimon
Koo

ಹೊಸದಿಲ್ಲಿ: ಅಮೆರಿಕಕ್ಕೆ (US) ನರೇಂದ್ರ ಮೋದಿ (PM Narendra Modi) ಅವರಂಥ ದೃಢ ನಾಯಕತ್ವದ (Leadership) ಅಗತ್ಯವಿದೆ. ಅವರು ಭಾರತದಲ್ಲಿ (India) ನಾವು ಊಹಿಸಲಸಾಧ್ಯವಾದಷ್ಟು ಕೆಲಸಗಳನ್ನು ಮಾಡಿದ್ದಾರೆ” ಎಂದು ಖ್ಯಾತ ಬಹುರಾಷ್ಟ್ರೀಯ ಸಂಸ್ಥೆ ಜೆಪಿ ಮೋರ್ಗನ್‌ನ ಸಿಇಒ ಜೇಮಿ ಡೀಮನ್‌ (JPMorgan CEO Jamie Dimon) ಹೇಳಿದ್ದಾರೆ.

ಐಜೆಪಿ ಮೋರ್ಗಾನ್ ಚೇಸ್ ಸಿಇಒ ಜೇಮಿ ಡಿಮೊನ್ ಅವರು ಮಂಗಳವಾರ ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ಮೋದಿ 40.0 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದಾರೆ. ಅಲ್ಲಿ ಶೌಚಾಲಯಗಳಿಲ್ಲದ 40 ಕೋಟಿ ಜನರು ಇದ್ದಾರೆ. ನಾವಿಲ್ಲಿ ಕೆಲಸಗಳನ್ನು ಹೇಗೆ ಮಾಡಬೇಕು ಎಂದು ಮೋದಿಯವರಿಗೆ ಈ ಬಗ್ಗೆ ಉಪನ್ಯಾಸ ನೀಡುತ್ತೇವೆ” ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಕಾರ್ಯಕ್ಷಮತೆಯನ್ನು ಜೇಮಿ ಶ್ಲಾಘಿಸಿದ್ದಾರೆ. “ಮೋದಿಯವರು ಭಾರತದಲ್ಲಿ ನಂಬಲಾಗದಂಥ ಶಿಕ್ಷಣ ವ್ಯವಸ್ಥೆ ಮತ್ತು ಮೂಲಸೌಕರ್ಯವನ್ನು ನೀಡುವ ಕೆಲಸ ಮಾಡುತ್ತಿದ್ದಾರೆ” ಎಂದಿದ್ದಾರೆ. “ಭಾರತದಲ್ಲಿ 70 ಕೋಟಿ ಜನರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಅವರಿಗೆ ಪಾವತಿ ವರ್ಗಾವಣೆಗಳು ನಡೆಯುತ್ತಿವೆ. ಅವರು ಭಾರತದಲ್ಲಿ ಊಹಾತೀತ ಶಿಕ್ಷಣ ವ್ಯವಸ್ಥೆ, ಮೂಲಸೌಕರ್ಯಗಳನ್ನು ಮಾಡಿದ್ದಾರೆ. ಪಿಎಂ ಮೋದಿ ಕಠಿಣ ವ್ಯಕ್ತಿತ್ವದರಾಗಿರುವುದರಿಂದ ಹಳೆಯ ಅಧಿಕಾರಶಾಹಿ ವ್ಯವಸ್ಥೆಯನ್ನು ಮುರಿದು ಅವರು ತಮ್ಮ ಇಡೀ ದೇಶವನ್ನು ಮೇಲೆತ್ತುತ್ತಿದ್ದಾರೆ. ಅಮೆರಿಕದಲ್ಲಿ ಅಂಥವರು ಸ್ವಲ್ಪ ಬೇಕಿದೆ,” ಎಂದಿದ್ದಾರೆ ಜೇಮಿ.

“ಅಲ್ಲಿ ಪ್ರತಿಯೊಬ್ಬ ನಾಗರಿಕನನ್ನು ಬೆರಳಚ್ಚು ಅಥವಾ ಕಣ್ಣುಗುಡ್ಡೆಯಿಂದ ಗುರುತಿಸಲಾಗುತ್ತದೆ” ಎಂದು 18 ವರ್ಷಗಳಿಂದ ಯುಎಸ್‌ನ ಅತಿ ದೊಡ್ಡ ಸಾಲದಾತ ಸಂಸ್ಥೆಯ ಮುಖ್ಯಸ್ಥ ಡಿಮನ್ ಹೇಳಿದರು. ಯುಎಸ್‌ನಲ್ಲಿ ರಾಷ್ಟ್ರೀಯ ಸಾಲ, ಹಣದುಬ್ಬರ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಭೌಗೋಳಿಕ ರಾಜಕೀಯ ಸಂಘರ್ಷಗಳ ಬಗ್ಗೆ ಡಿಮನ್‌ ಎಚ್ಚರಿಕೆ ನೀಡಿದರು. ಹಣದುಬ್ಬರ ಮತ್ತು ಅದರ ಜೊತೆಗೆ ಹೆಚ್ಚಿನ ಬಡ್ಡಿದರಗಳು ನಿರೀಕ್ಷೆಗಿಂತ ಹೆಚ್ಚು ಕಾಲ ಉಳಿಯಬಹುದು ಎಂದು ತಿಳಿಸಿದರು.

ಸಾಲದಾತರು ಮತ್ತು ನಿಯಂತ್ರಕರ ನಡುವೆ ಹೆಚ್ಚು ಸಾಮರಸ್ಯದ ಸಂಬಂಧಕ್ಕೆ ಅವರು ಕರೆ ನೀಡಿದ್ದು, ಹೆಚ್ಚು ಅಂತರ್ಗತ ಆರ್ಥಿಕ ಬೆಳವಣಿಗೆಯ ಅವಶ್ಯಕತೆಯಿದೆ ಎಂದರು. ಇತರ ದೇಶಗಳಿಗೆ ಹೋಲಿಸಿದರೆ US ಮಿಲಿಟರಿ ಶಕ್ತಿ, ರಾಜಕೀಯ ಧ್ರುವೀಕರಣ ಮತ್ತು ರಾಷ್ಟ್ರದ ಆರ್ಥಿಕ ಕಾರ್ಯಕ್ಷಮತೆ ಉತ್ತಮವಾಗಿವೆ ಎಂದಿದ್ದಾರೆ.

ಇದನ್ನೂ ಓದಿ: PM Narendra Modi: ಮಕ್ಕಳಾಗಿ ವಿಶ್ವನಾಯಕರು! ಎಐ ಮೋಡಿಯಲ್ಲಿ ನರೇಂದ್ರ ಮೋದಿ ನೋಡಿ

Continue Reading

ವಿದೇಶ

Noida Scrap Mafia: ಥೈಲ್ಯಾಂಡ್‌ನಲ್ಲಿ ಪೊಲೀಸ್‌ ಬಲೆಗೆ ಬಿದ್ದ ಗ್ಯಾಂಗ್‌ಸ್ಟರ್‌ ರವಿ ಕಾನಾ

Noida Scrap Mafia: ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸ್ಕ್ರ್ಯಾಪ್ ಮೆಟಲ್ ಮಾಫಿಯಾ ತಂಡದ ಮುಖ್ಯಸ್ಥ ಮತ್ತು ಗ್ಯಾಂಗ್‌ಸ್ಟರ್‌ ರವಿ ಕಾನಾ ಹಾಗೂ ಆತನ ಗೆಳತಿ ಕಾಜಲ್ ಝಾ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಲೆ ಮರೆಸಿಕೊಂಡಿದ್ದ ಅವರನ್ನು ಥೈಲ್ಯಾಂಡ್‌ನಲ್ಲಿ ಬಂಧಿಸಲಾಗಿದೆ. ಜನವರಿಯಲ್ಲಿ ಕಾನಾ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ರವಿ ಕಾನಾ ಆಲಿಯಾಸ್‌ ರವೀಂದ್ರ ನಗರ್ 16 ಸದಸ್ಯರ ಗ್ಯಾಂಗ್ ಹೊಂದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ಪ್ರಕರಣಗಳ ಆರೋಪಿಯಾದ ಆತನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದರು.

VISTARANEWS.COM


on

Noida Scrap Mafia
Koo

ನವದೆಹಲಿ: ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸ್ಕ್ರ್ಯಾಪ್ ಮೆಟಲ್ ಮಾಫಿಯಾ ತಂಡದ ಮುಖ್ಯಸ್ಥ ಮತ್ತು ಗ್ಯಾಂಗ್‌ಸ್ಟರ್‌ (Noida Scrap Mafia) ರವಿ ಕಾನಾ (Ravi Kana) ಹಾಗೂ ಆತನ ಗೆಳತಿ ಕಾಜಲ್ ಝಾ (Kajal Jha) ಅವರನ್ನು ಥೈಲ್ಯಾಂಡ್‌ನಲ್ಲಿ ಬಂಧಿಸಲಾಗಿದೆ. ನೋಯ್ಡಾ ಪೊಲೀಸರು ಥೈಲ್ಯಾಂಡ್‌ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಕಾನಾಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಅವರಿಗೆ ನೀಡಿದ್ದರು. ಈ ಕಾರಣದಿಂದ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಜನವರಿಯಲ್ಲಿ ಕಾನಾ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.

ಜನವರಿ 2ರಂದು ಗ್ರೇಟರ್ ನೋಯ್ಡಾದಲ್ಲಿ ಪೊಲೀಸರು ರವಿ ಕಾನಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ ಆತನ ವಿರುದ್ಧ ಕಠಿಣ ಉತ್ತರ ಪ್ರದೇಶ ಗ್ಯಾಂಗ್​ಸ್ಟರ್ ಮತ್ತು ಸಾಮಾಜಿಕ ವಿರೋಧಿ ಚಟುವಟಿಕೆಗಳ ತಡೆಗಟ್ಟುವಿಕೆ (Uttar Pradesh Gangsters and Anti-Social Activities (Prevention) Act) ಕಾಯ್ದೆಯಡಿ ದೂರು ದಾಖಲಿಸಲಾಗಿತ್ತು.

ರವಿ ಕಾನಾ ಆಲಿಯಾಸ್‌ ರವೀಂದ್ರ ನಗರ್ 16 ಸದಸ್ಯರ ಗ್ಯಾಂಗ್ ಹೊಂದ್ದಾನೆ. ಈ ಗ್ಯಾಂಗ್‌ ರೀಬಾರ್ ಮತ್ತು ಸ್ಕ್ರ್ಯಾಪ್ ವಸ್ತುಗಳ ಅಕ್ರಮ ಸಂಗ್ರಹಣೆ ಮತ್ತು ಮಾರಾಟದಲ್ಲಿ ತೊಡಗಿದೆ. ಸ್ಕ್ರ್ಯಾಪ್ ಡೀಲರ್ ಆಗಿದ್ದ ಕಾನಾ ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಸ್ಕ್ರ್ಯಾಪ್ ವಸ್ತುಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಮತ್ತು ಮಾರಾಟ ಮಾಡಲು ಪ್ರಾರಂಭಿಸಿದ ಬಳಿಕ ಕೋಟ್ಯಧಿಪತಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 2023ರ ಡಿಸೆಂಬರ್ 28ರಂದು ಕಾನಾ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣವೂ ದಾಖಲಾಗಿತ್ತು.

ಈ ಮೊದಲೇ ರವಿ ಮತ್ತು ಆತನ ಗುಂಪಿನ ವಿರುದ್ಧ ಸುಮಾರು 11 ಕೇಸ್‌ಗಳು ದಾಖಲಾಗಿದ್ದವು. ಇವರ ವಿರುದ್ಧ ಅಪಹರಣ, ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಿವೆ ಎಂದು ಗ್ರೇಟರ್‌ ನೋಯ್ಡಾದ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಗ್ರೇಟರ್ ನೋಯ್ಡಾ ಮತ್ತು ನೋಯ್ಡಾದಾದ್ಯಂತ ಗ್ಯಾಂಗ್ ಬಳಸುತ್ತಿದ್ದ ಹಲವು ಸ್ಕ್ರ್ಯಾಪ್ ಗೋದಾಮುಗಳ ಮೇಲೆ ಈಗಾಗಲೇ ದಾಳಿ ನಡೆಸಿ ಬೀಗಮುದ್ರೆ ಜಡಿಯಲಾಗಿದೆ. 

ಕಾನಾ ಮತ್ತು ಆತನ ಸಹಚರರ 120 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ನೋಯ್ಡಾ ಪೊಲೀಸರು ಹೇಳಿದ್ದಾರೆ. ಕಾನಾ ತನ್ನ ಗೆಳತಿ ಕಾಜಲ್‌ ಝಾಗೆ ದಕ್ಷಿಣ ದೆಹಲಿಯ ಐಷರಾಮಿ ಏರಿಯಾ ನ್ಯೂ ಫ್ರೆಂಡ್ಸ್‌ ಕಾಲನಿಯಲ್ಲಿ ಮೂರು ಅಂತಸ್ತಿನ ಬಂಗಲೆಯನ್ನು ಉಡುಗೊರೆಯಾಗಿ ಕೊಡಿಸಿದ್ದ. ಅದರ ಬೆಲೆ ಬರೋಬ್ಬರಿ 100 ಕೋಟಿ ರೂ. ಜನವರಿಯಲ್ಲಿ ಪೊಲೀಸರು ಆ ಐಷಾರಾಮಿ ಬಂಗಲೆಯ ಮೇಲೆ ದಾಳಿ ಬೀಗ ಜಡಿದು ಸೀಲ್‌ ಹಾಕಿದ್ದರು.

ಇದನ್ನೂ ಓದಿ: Kajal Jha: ಕಾಜಲ್‌ಗೆ ಸೇರಿದ 100 ಕೋಟಿ ರೂ. ಮೌಲ್ಯದ ಬಂಗಲೆ ಮೇಲೆ ಪೊಲೀಸರ ದಾಳಿ

ಕಾಜಲ್‌ ಝಾ ಕೆಲಸ ಹುಡುಕಿಕೊಂಡು ಬಂದು ರವಿ ಕಾನಾ ಗುಂಪು ಸೇರಿದ್ದಳು. ಕೆಲವೇ ದಿನಗಳಲ್ಲಿ ಆ ಗ್ಯಾಂಗ್‌ನ ಮುಖ್ಯ ಅಂಗವಾಗಿ ಬದಲಾದ ರೀತಿಯೇ ರೋಚಕ. ರವಿಗೆ ಸೇರಿದ ಎಲ್ಲ ಬೇನಾಮಿ ಆಸ್ತಿಯ ಲೆಕ್ಕಪತ್ರಗಳನ್ನು ಕಾಜಲ್‌ ಝಾ ನೋಡಿಕೊಳ್ಳುತ್ತಿದ್ದಳು. ರವಿಯ ಗ್ಯಾಂಗ್‌ ಜತೆಗೆ ಮನಸ್ಸಿನೊಳಗೂ ಜಾಗ ಪಡೆದಿದ್ದ ಕಾಜಲ್‌ ಅಪಾರ ಪ್ರಮಾಣದ ಆಸ್ತಿಯ ಒಡತಿಯೂ ಆಗಿದ್ದಳು. 

Continue Reading

ಪ್ರಮುಖ ಸುದ್ದಿ

BrahMos Missiles: ಫಿಲಿಪ್ಪೀನ್ಸ್‌ಗೆ ನಾಲ್ಕನೇ ಬ್ರಹ್ಮೋಸ್‌ ಕ್ಷಿಪಣಿ ಬ್ಯಾಟರಿ ಕಳುಹಿಸಲು ಭಾರತ ಸಜ್ಜು

BrahMos Missiles: ಬ್ರಹ್ಮೋಸ್ ಕ್ಷಿಪಣಿಗಳ ಮೂರು ‘ಬ್ಯಾಟರಿ’ಗಳನ್ನು ಈಗಾಗಲೇ ದ್ವೀಪ ರಾಷ್ಟ್ರಕ್ಕೆ ಹಸ್ತಾಂತರಿಸಲಾಗಿದೆ. 2022ರಲ್ಲಿ ಎರಡು ಮಿತ್ರರಾಷ್ಟ್ರಗಳು ಸಹಿ ಮಾಡಿದ USD 375 ಮಿಲಿಯನ್ ಒಪ್ಪಂದದ ಭಾಗವಾಗಿದೆ ಇದು. ಪ್ರತಿ ಬ್ಯಾಟರಿಯೂ ನಾಲ್ಕು ಲಾಂಚರ್‌ಗಳನ್ನು ಒಳಗೊಂಡಿದೆ. ಪ್ರತಿ ಲಾಂಚರ್‌ನಲ್ಲೂ 290 ಕಿಮೀ ವ್ಯಾಪ್ತಿಯ ಮೂರು ಕ್ಷಿಪಣಿಗಳಿರುತ್ತವೆ.

VISTARANEWS.COM


on

BrahMos Missiles
Koo

ಹೊಸದಿಲ್ಲಿ: ದಕ್ಷಿಣ ಚೀನಾ ಸಮುದ್ರದಲ್ಲಿ (South China Sea) ಚೀನಾದ ಒತ್ತಡದಿಂದಾಗಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ರಕ್ಷಣಾ ರಫ್ತಿಗೆ (defence exports) ಭಾರಿ ಉತ್ತೇಜನ ನೀಡುತ್ತಿರುವ ಭಾರತ (India), ಇಂದು ಫಿಲಿಪ್ಪೀನ್ಸ್‌ಗೆ (Philippines) ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ (BrahMos missiles, BrahMos supersonic cruise missiles) ಭೂ ಆವೃತ್ತಿಯ ನಾಲ್ಕನೇ ʼಬ್ಯಾಟರಿ’ಯನ್ನು (Battery) ಕಳುಹಿಸಲು ಮುಂದಾಗಿದೆ.

ಬ್ರಹ್ಮೋಸ್ ಕ್ಷಿಪಣಿಗಳ ಮೂರು ‘ಬ್ಯಾಟರಿ’ಗಳನ್ನು ಈಗಾಗಲೇ ದ್ವೀಪ ರಾಷ್ಟ್ರಕ್ಕೆ ಹಸ್ತಾಂತರಿಸಲಾಗಿದೆ. 2022ರಲ್ಲಿ ಎರಡು ಮಿತ್ರರಾಷ್ಟ್ರಗಳು ಸಹಿ ಮಾಡಿದ USD 375 ಮಿಲಿಯನ್ ಒಪ್ಪಂದದ ಭಾಗವಾಗಿದೆ ಇದು. ಪ್ರತಿ ಬ್ಯಾಟರಿಯೂ ನಾಲ್ಕು ಲಾಂಚರ್‌ಗಳನ್ನು ಒಳಗೊಂಡಿದೆ. ಪ್ರತಿ ಲಾಂಚರ್‌ನಲ್ಲೂ 290 ಕಿಮೀ ವ್ಯಾಪ್ತಿಯ ಮೂರು ಕ್ಷಿಪಣಿಗಳಿರುತ್ತವೆ. ಈ ಕ್ಷಿಪಣಿ ಸೂಪರ್‌ಸಾನಿಕ್ ವೇಗವನ್ನು ಹೊಂದಿದ್ದು, ಇದನ್ನು ಭೂಮಿ ಅಥವಾ ಹಡಗು ಆಧಾರಿತ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (BMDs) ವ್ಯವಸ್ಥೆಗಳಿಂದ ಪ್ರತಿಬಂಧಿಸುವುದು ತುಂಬಾ ಕಷ್ಟ.

ಬ್ರಹ್ಮೋಸ್‌ನ ಫಿಲಿಪೈನ್ಸ್ ಒಪ್ಪಂದದ ಮೂಲಕ, 2023-2024ರಲ್ಲಿ ಭಾರತದ ರಕ್ಷಣಾ ರಫ್ತು ₹21083 ಕೋಟಿಗಳನ್ನು ಮುಟ್ಟಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.32.5ರಷ್ಟು ಬೃಹತ್ ಬೆಳವಣಿಗೆಯಾಗಿದೆ. ಬ್ರಹ್ಮೋಸ್ ದಾಖಲೆ ಮಾರಾಟ ಕಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತವು ಈ ಸೂಪರ್‌ಸಾನಿಕ್ ಕ್ಷಿಪಣಿಗಳ ಹೆಚ್ಚಿನ ಆರ್ಡರ್‌ಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಕ್ಷಿಪಣಿ ರಫ್ತಿನಲ್ಲಿ ಭಾರತವು ಸಂತುಷ್ಟಿಯ ಮಟ್ಟವನ್ನು ಮುಟ್ಟಿದೆ. ನರೇಂದ್ರ ಮೋದಿ ಸರ್ಕಾರ ಇದೀಗ ಮುಂಬೈನಲ್ಲಿ ಸ್ಕಾರ್ಪೀನ್-ಕ್ಲಾಸ್ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸಲು ಮತ್ತು ಇಂಡೋನೇಷ್ಯಾ, ಮಲೇಷ್ಯಾ ಮುಂತಾದ ಮೂರನೇ ದೇಶಗಳಿಗೆ ಸರಬರಾಜು ಮಾಡಲು ಮಜಗಾಂವ್ ಡಾಕ್‌ಯಾರ್ಡ್ಸ್ ಲಿಮಿಟೆಡ್ ಮತ್ತು ಫ್ರೆಂಚ್ ನೇವಲ್ ಗ್ರೂಪ್ ನಡುವೆ ಜಂಟಿ ಉದ್ಯಮವನ್ನು ಸ್ಥಾಪಿಸಲು ಮುಂದಾಗಿದೆ.

ಪ್ರಸ್ತುತ ನಮ್ಮ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾನ್ ಅವರು ಫ್ರಾನ್ಸ್‌ ಸರ್ಕಾರದೊಂದಿಗೆ ಸಂವಹನ ನಡೆಸಲು ಫ್ರಾನ್ಸ್‌ಗೆ ಭೇಟಿ ನೀಡಿದ್ದು, ಭಾರತೀಯ ಮತ್ತು ಫ್ರೆಂಚ್ ರಕ್ಷಣಾ ವ್ಯವಹಾರ ಸರಪಳಿಯನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದಾರೆ. ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಗಾಢಗೊಳಿಸುವ ಪ್ರಯತ್ನದಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಟೌಲೌಸ್‌ನಲ್ಲಿರುವ ಫ್ರೆಂಚ್ ಜಲಾಂತರ್ಗಾಮಿ ನೆಲೆಗೆ ಭೇಟಿ ನೀಡಲಿದ್ದಾರೆ. ಭಾರತಕ್ಕೆ ಇನ್ನೂ ಮೂರು ಹೆಚ್ಚುವರಿ ಕಲ್ವೇರಿ (Kalveri- ಮಾರ್ಪಡಿಸಿದ ಸ್ಕಾರ್ಪೀನ್) ದರ್ಜೆಯ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕಾಗಿ ಫ್ರೆಂಚ್ ನೇವಲ್ ಗ್ರೂಪ್ ಈಗಾಗಲೇ MDLನೊಂದಿಗೆ ಮಾತುಕತೆ ನಡೆಸುತ್ತಿದೆ.

P-5 ಶಕ್ತಿಗಳು ಪರಮಾಣು-ಚಾಲಿತ ಸಾಂಪ್ರದಾಯಿಕ ಸಶಸ್ತ್ರ ದಾಳಿ ಜಲಾಂತರ್ಗಾಮಿ ನೌಕೆಗಳನ್ನು (SSN) ವೈರಿ ಸೈನ್ಯದ ತಡೆಗಟ್ಟುವಿಕೆಗೆ ಬಳಸುತ್ತಿರುವಾಗ, ಭಾರತವು ಇನ್ನೂ ತನ್ನ ಆಯ್ಕೆಗಳನ್ನು ಮೌಲ್ಯಮಾಪನ ಮಾಡುತ್ತಿದೆ. ದೀರ್ಘಾವಧಿಯ ಕಡಲ ಭದ್ರತೆಗಾಗಿ ಎಸ್‌ಎಸ್‌ಎನ್‌ಗಳನ್ನು ತಯಾರಿಸುವುದು ಅಥವಾ ಸಾಂಪ್ರದಾಯಿಕ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳನ್ನು ಹೊಂದುವುದು ಆಯ್ಕೆಗಳಾಗಿವೆ.

ಇದನ್ನೂ ಓದಿ: BrahMos Missiles: ನೌಕಾಪಡೆಗೆ ಭೀಮಬಲ; 200 ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ಕೇಂದ್ರ ಅಸ್ತು

Continue Reading
Advertisement
dina bhavishya read your daily horoscope predictions for April 25 2024
ಭವಿಷ್ಯ2 hours ago

Dina Bhavishya : ಇಂದು ಈ ನಾಲ್ಕು ರಾಶಿಯವರಿಗೆ 4 ಲಕ್ಕಿ ನಂಬರ್!

PM
ದೇಶ3 hours ago

ಪ್ರಧಾನಿ ವಿರುದ್ಧ ಪಿತೂರಿ ನಡೆಸುವುದು ದೇಶದ್ರೋಹ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ

Union Minister Pralhad Joshi Statement in Unakal
ಹುಬ್ಬಳ್ಳಿ3 hours ago

Lok Sabha Election 2024: ಹಿಂದೂ ಧರ್ಮದ ಉಳಿವಿಗಾಗಿ ಮತ್ತೆ ಮೋದಿ ಬೆಂಬಲಿಸಿ: ಪ್ರಲ್ಹಾದ್‌ ಜೋಶಿ

DC vs GT
ಕ್ರೀಡೆ4 hours ago

DC vS GT: ಗುಜರಾತ್​ ವಿರುದ್ಧ ಡೆಲ್ಲಿಗೆ ರೋಚಕ ಗೆಲುವು ; ಪ್ಲೇ ಆಫ್​ ರೇಸ್ ಜೀವಂತ

PUBG Love
ದೇಶ4 hours ago

PUBG Love: ಪಬ್ಜಿ ಆಡುವಾಗ ಸಿಕ್ಕ ಮುಸ್ಲಿಂ ಯುವಕನ ಜತೆ ಹಿಂದು ಯುವತಿ ಮದುವೆ; ಈಗ ಬಾಳೇ ನರಕ!

Nada Gheethe
ಪ್ರಮುಖ ಸುದ್ದಿ4 hours ago

‌Nada Geethe: ನಾಡಗೀತೆ ವಿವಾದ; ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ತಿರಸ್ಕಾರ ಮಾಡಿದ ಹೈಕೋರ್ಟ್

Sachin Tendulkar Birthday
ಕ್ರೀಡೆ5 hours ago

Sachin Tendulkar Birthday: ಎಐ ತಂತ್ರಜ್ಞಾನದ ಮೂಲಕ ತೆಂಡೂಲ್ಕರ್​ಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಐಸಿಸಿ

PM Narendra Modi
ಕರ್ನಾಟಕ5 hours ago

PM Narendra Modi: ಪ್ರಧಾನಿ ಮೋದಿಗೆ ‘ಪ್ರಾಮಿಸ್ಡ್ ನೇಷನ್’ ಪುಸ್ತಕ ಅರ್ಪಣೆ

Chikkaballapur Lok Sabha Constituency Congress candidate Raksha Ramaiah election campaign in Nelamangala
ಚಿಕ್ಕಬಳ್ಳಾಪುರ5 hours ago

Lok Sabha Election 2024: ನೆಲಮಂಗಲದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ

Sunetra Pawar
ದೇಶ5 hours ago

Sunetra Pawar: 25 ಸಾವಿರ ಕೋಟಿ ರೂ. ಹಗರಣ; ಅಜಿತ್‌ ಪವಾರ್‌ ಪತ್ನಿ ಸುನೇತ್ರಾಗೆ ಕ್ಲೀನ್‌ಚಿಟ್!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ22 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌