Vladimir Putin: ವ್ಲಾದಿಮಿರ್‌ ಪುಟಿನ್‌ ಹೊಸ ಪ್ರೇಯಸಿಯಂತೆ ಈ ಬಾರ್ಬಿ ಚೆಲುವೆ! - Vistara News

ವಿದೇಶ

Vladimir Putin: ವ್ಲಾದಿಮಿರ್‌ ಪುಟಿನ್‌ ಹೊಸ ಪ್ರೇಯಸಿಯಂತೆ ಈ ಬಾರ್ಬಿ ಚೆಲುವೆ!

Vladimir Putin: ರಷ್ಯಾದ ಹಲವಾರು ಮಾಧ್ಯಮಗಳು ಮತ್ತು ಟೆಲಿಗ್ರಾಮ್ ಚಾನೆಲ್‌ಗಳು ಪುಟಿನ್ ಮತ್ತು ಮಿಜುಲಿನಾ ಅವರ ಸಂಬಂಧದ ಬಗ್ಗೆ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿವೆ.

VISTARANEWS.COM


on

vladimir putin mijulina
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕ್ರೆಮ್ಲಿನ್‌: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Vladimir Putin) ತನಗಿಂತ 32 ವರ್ಷ ಕಿರಿಯಳಾದ, ಬಾರ್ಬಿ ಡಾಲ್‌ನಂತೆ (Barbie Doll) ಕಾಣುವ ಈ ಚೆಲುವೆ ಜೊತೆ ಇತ್ತೀಚೆಗೆ ಸರಸವಾಡುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಈಕೆಯ ಹೆಸರು ಎಕಟೆರಿನಾ “ಕಟ್ಯಾ” ಮಿಜುಲಿನಾ (Ekaterina “Katya” Mizulina) . 39 ವರ್ಷ. ಈಕೆ ವೃತ್ತಿಯಿಂದ ಕಲಾ ಇತಿಹಾಸಕಾರ್ತಿ. ಈಕೆ ರಷ್ಯಾ ಪರ ಕಾರ್ಯ ನಿರ್ವಹಿಸುತ್ತಿರುವ ಸುರಕ್ಷಿತ ಇಂಟರ್ನೆಟ್ ಲೀಗ್‌ನ ಮುಖ್ಯಸ್ಥರಾಗಿದ್ದಾರೆ. ರಷ್ಯಾ ಮತ್ತು ಅದರ ಅಧ್ಯಕ್ಷರ ವಿರುದ್ಧ, ವಿಶೇಷವಾಗಿ ಉಕ್ರೇನ್ ಮೇಲಿನ ರಷ್ಯಾದ ಯುದ್ಧದ ಬಗ್ಗೆ ಯಾವುದೇ ಟೀಕೆ ಬಂದರೆ ಅದನ್ನು ಯಶಸ್ವಿಯಾಗಿ ಎದುರಿಸುವುದು ಈಕೆಯ ಕೆಲಸದ ಮುಖ್ಯ ಭಾಗವಾಗಿದೆ.

ಈಕೆ ರಷ್ಯಾದ ಸೆನೆಟರ್ ಎಲೆನಾ ಮಿಜುಲಿನಾ (69) ಅವರ ಮಗಳು. ಈಕೆ ಪುಟಿನ್ ಪರ ಮತ್ತು ಉಕ್ರೇನ್ ವಿರೋಧಿ. “ಕಟ್ಯಾ ಮಿಜುಲಿನಾ ಸಂಪೂರ್ಣವಾಗಿ ಪುಟಿನ್ ಅವರ ಅಭಿರುಚಿಗೆ ಸರಿಹೊಂದುವ ಮಹಿಳೆ. ಈ ಬಾರ್ಬಿ ಅಭಿರುಚಿ ಪುಟಿನ್‌ಗೆ ತುಂಬಾ ಇಷ್ಟ” ಎಂದು ರಷ್ಯಾದ ಮಾನವ ಹಕ್ಕುಗಳ ಪ್ರಚಾರಕಿ, ಓಲ್ಗಾ ರೊಮಾನೋವಾ ಅವರು ಉಕ್ರೇನ್‌ನ ಚಾನೆಲ್‌ಗೆ ತಿಳಿಸಿದ್ದಾರೆ.

71 ವರ್ಷದ ಪುಟಿನ್ ಅವರು ಒಲಿಂಪಿಕ್ ಜಿಮ್ನಾಸ್ಟ್ ಅಲೀನಾ ಕಬೇವಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿದ್ದವು. ಈ ಜೋಡಿಗೆ ಮೂರು ಮಕ್ಕಳು ಇದ್ದಾರೆ. ರಷ್ಯಾದ ಅಧ್ಯಕ್ಷ ಪುಟಿನ್‌ ತಮ್ಮ ಪತ್ನಿ ಲ್ಯುಡ್ಮಿಲಾಗೆ 30 ವರ್ಷಗಳ ದಾಂಪತ್ಯದ ಬಳಿಕ 2014ರಲ್ಲಿ ವಿಚ್ಛೇದನ ನೀಡಿದ್ದರು.

ರಷ್ಯಾದ ಹಲವಾರು ಮಾಧ್ಯಮಗಳು ಮತ್ತು ಟೆಲಿಗ್ರಾಮ್ ಚಾನೆಲ್‌ಗಳು ಪುಟಿನ್ ಮತ್ತು ಮಿಜುಲಿನಾ ಅವರ ಸಂಬಂಧದ ಬಗ್ಗೆ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿವೆ. ಅವರು ಇತ್ತೀಚೆಗೆ ಪರಸ್ಪರ ಹತ್ತಿರವಾಗಿದ್ದಾರೆ ಎಂದು ಹೇಳಿಕೊಂಡಿವೆ. ಆದರೆ ಪುಟಿನ್‌ ಆಗಲೀ ಮಿಜುಲಿನಾ ಆಗಲೀ ಏನೂ ಹೇಳಿಲ್ಲ.

ಕಟ್ಯಾ ಮಿಜುಲಿನಾ ಅವರು 2004ರಲ್ಲಿ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರಿಕನ್ ಸ್ಟಡೀಸ್‌ನಿಂದ ಕಲಾ ಇತಿಹಾಸ ಮತ್ತು ಇಂಡೋನೇಷಿಯನ್ ಭಾಷೆಯಲ್ಲಿ ಪದವಿ ಪಡೆದವರು. 2017ರಲ್ಲಿ ಸೇಫ್ ಇಂಟರ್ನೆಟ್ ಲೀಗ್‌ಗೆ ಸೇರುವ ಮೊದಲು ಚೀನಾಕ್ಕೆ ಭೇಟಿ ನೀಡಿದ ರಷ್ಯಾದ ಅಧಿಕೃತ ನಿಯೋಗಗಳಿಗೆ ಅನುವಾದಕರಾಗಿ ಕೆಲಸ ಮಾಡಿದರು.

ಈಕೆ ನ್ಯಾಟೋದ ಉಗ್ರ ವಿರೋಧಿ ಕೂಡ. “ಮೊದಲು ನಾವು ಉಕ್ರೇನ್ ಅನ್ನು ನಾಜಿಗಳಿಂದ ಸ್ವಚ್ಛಗೊಳಿಸುತ್ತೇವೆ. ನಂತರ ನಾವು ಗೂಗಲ್ ಮತ್ತು ವಿಕಿಪೀಡಿಯಾದ ಕಡೆ ಹೋಗುತ್ತೇವೆ” ಎಂದು ಅವರು 2022ರಲ್ಲಿ ಒಂದು ಭಾಷಣದಲ್ಲಿ ಹೇಳಿದ್ದರು.

ಪ್ರೇಯಸಿ ಕಬಯೇವಾಗಾಗಿಯೂ ಪುಟಿನ್ ರಹಸ್ಯವಾಗಿ ಲಕ್ಷಾಂತರ ಖರ್ಚು ಮಾಡುತ್ತಿದ್ದಾರೆ. ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಕಬಯೇವಾ ಮಾಸ್ಕೋದ ವಾಯುವ್ಯಕ್ಕೆ ಸುಮಾರು 250 ಮೈಲಿಗಳ ದೂರದಲ್ಲಿರುವ ವಾಲ್ಡೈ ಸರೋವರದ ಪುಟಿನ್ ಎಸ್ಟೇಟ್‌ನಲ್ಲಿರುವ ವಿಲ್ಲಾದಲ್ಲಿ ವಾಸಿಸುತ್ತಿದ್ದಾರೆ ಎಂದು ಇನ್ನೊಂದು ವರದಿ ಹೇಳಿದೆ.

ಇದನ್ನೂ ಓದಿ: Alexei Navalny: ರಷ್ಯಾ ಪ್ರತಿಪಕ್ಷದ ನಾಯಕ, ಪುಟಿನ್ ಕಡು ಟೀಕಾಕಾರ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಸಾವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಹಿಳೆ

French Yoga Teacher: ಹಸಿರು ಸೀರೆ ಧರಿಸಿ ಪದ್ಮಶ್ರೀ ಸ್ವೀಕರಿಸಿದ 101 ವರ್ಷದ ವಿದೇಶಿ ಯೋಗ ಶಿಕ್ಷಕಿ!

ಫ್ರಾನ್ಸ್ ನ 101 ವರ್ಷದ ಯೋಗ ಶಿಕ್ಷಕಿಯೊಬ್ಬರು (French Yoga Teacher) ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪುರಸ್ಕಾರ ಪಡೆದಿದ್ದಾರೆ. ಈ ಕುರಿತು ರಾಷ್ಟ್ರಪತಿ ಭವನದಿಂದ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

VISTARANEWS.COM


on

By

French Yoga Teacher
Koo

ನವದೆಹಲಿ: ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎಂಬುದನ್ನು ಇದೀಗ 101 ವರ್ಷದ ಫ್ರೆಂಚ್ ಯೋಗ ಶಿಕ್ಷಕಿ (French Yoga Teacher) ಸಾಬೀತು ಪಡಿಸಿದ್ದಾರೆ. ವಯಸ್ಸಿನ ಮಿತಿ ನಿಯಮಗಳನ್ನು ಮೀರಿ ಸುಮಾರು ನಾಲ್ಕು ದಶಕಗಳ ಕಾಲ ಯೋಗಕ್ಕೆ ಅವರು ನೀಡಿರುವ ಅಸಾಧಾರಣ ಕೊಡುಗೆಯನ್ನು ಗೌರವಿಸಿ ಶಾರ್ಲೆಟ್ ಚಾಪಿನ್ (Charlotte Chopin) ಅವರಿಗೆ ಭಾರತದ (India) ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ( Padma Shri award) ಅನ್ನು ನೀಡಿ ಗೌರವಿಸಲಾಯಿತು.

ನವದೆಹಲಿಯ (new delhi) ರಾಷ್ಟ್ರಪತಿ ಭವನದಲ್ಲಿ ( Rashtrapati Bhawan) ಗುರುವಾರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಹಸಿರು ಸೀರೆಯನ್ನು ಧರಿಸಿದ ಶಾರ್ಲೆಟ್ ಚಾಪಿನ್ ವೇದಿಕೆಯತ್ತ ನಡೆದು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಯೋಗ ಕ್ಷೇತ್ರದಲ್ಲಿ ಶಾರ್ಲೆಟ್ ಚಾಪಿನ್ ಅವರ ಪ್ರಯತ್ನವನ್ನು ಶ್ಲಾಘಿಸಿ ರಾಷ್ಟ್ರಪತಿಯವರ ಕಚೇರಿಯು ಎಕ್ಸ್ ನಲ್ಲಿ ಟ್ವೀಟ್ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯೋಗ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಶಾರ್ಲೆಟ್ ಚಾಪಿನ್ ಅವರಿಗೆ ಪ್ರದಾನ ಮಾಡಿದರು. ಅವರು ಪ್ರಸಿದ್ಧ ಫ್ರೆಂಚ್ ಯೋಗ ಶಿಕ್ಷಕಿಯಾಗಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯೋಗವನ್ನು ಕಲಿಸುತ್ತಿದ್ದಾರೆ ಮತ್ತು 101ನೇ ವಯಸ್ಸಿನಲ್ಲಿ ಯೋಗ ಶಿಕ್ಷಕರಾಗಿ ಸಕ್ರಿಯರಾಗಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.


ಶಾರ್ಲೆಟ್ ಚಾಪಿನ್ ಯಾರು?

ಚಾಪಿನ್ ಫ್ರಾನ್ಸ್ ಮೂಲದವರಾಗಿದ್ದು, ಪ್ರಸ್ತುತ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ವಯಸ್ಸಿನ ಮಿತಿಯ ಮಾನದಂಡಗಳನ್ನು ಮೀರಿ ಚಾಪಿನ್ ಅವರು 50 ವರ್ಷ ವಯಸ್ಸಿನ ಅನಂತರ ಯೋಗವನ್ನು ಕಲಿತರು. 1982 ರಲ್ಲಿ ಫ್ರಾನ್ಸ್ ನಲ್ಲಿ ಕಲಿಸಲು ಪ್ರಾರಂಭಿಸಿದರು. ಅವರು ದೇಶದಲ್ಲಿ ಯೋಗದ ಅಲೆಯನ್ನು ಸೃಷ್ಟಿಸಿದರು. ಇದು ಪ್ರಸಿದ್ಧ ಫಿಟ್ನೆಸ್ ಅಭ್ಯಾಸವನ್ನು ಮಾಡಿದರು. ಅವರು ಫ್ರೆಂಚ್ ಟಿವಿ ಶೋ, ‘ಫ್ರಾನ್ಸ್ ಗಾಟ್ ಇನ್‌ಕ್ರೆಡಿಬಲ್ ಟ್ಯಾಲೆಂಟ್’ ನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

2023ರ ಜುಲೈನಲ್ಲಿ ಅವರು ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳಲು ಫ್ರೆಂಚ್ ಪ್ರವಾಸದಲ್ಲಿದ್ದಾಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲ ಬಾರಿಗೆ ಪ್ಯಾರಿಸ್‌ನಲ್ಲಿ ಭೇಟಿಯಾದರು. ಯೋಗ ಕ್ಷೇತ್ರದಲ್ಲಿ ಅವರ ಅಸಾಧಾರಣ ಕೆಲಸದಿಂದ ಪ್ರಭಾವಿತರಾದ ಪ್ರಧಾನಿ, ಯೋಗದಲ್ಲಿ ಚಾಪಿನ್ ಅವರ ಆಳವಾದ ನಂಬಿಕೆ ಮತ್ತು ಫ್ರಾನ್ಸ್‌ನಲ್ಲಿ ಯೋಗವನ್ನು ಉತ್ತೇಜಿಸಲು ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.

ಯೋಗವು ಸಂತೋಷವನ್ನು ತರುತ್ತದೆ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಎಂದು ಜುಲೈನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದಾಗ ಚಾಪಿನ್ ಹೇಳಿದ್ದರು.

Continue Reading

ಪ್ರಮುಖ ಸುದ್ದಿ

PoK Crisis: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಂಗೆಯೆದ್ದ ಜನ, ಗಲಾಟೆ; ಭಾರತದ ಜತೆ ವಿಲೀನಕ್ಕೆ ಆಗ್ರಹ!

PoK Crisis: ಜಮ್ಮು-ಕಾಶ್ಮೀರ ಜಾಯಿಂಟ್‌ ಅವಾಮಿ ಆಕ್ಷನ್‌ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಇದರ ಹತ್ತಾರು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್‌ ಮಾಡಿದರೂ ನಿಯಂತ್ರಿಸಲು ಆಗುತ್ತಿಲ್ಲ ಎನ್ನಲಾಗಿದೆ.

VISTARANEWS.COM


on

PoK
Koo

ಶ್ರೀನಗರ:‌ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (PoK Crisisi) ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಸರ್ಕಾರ, ಅಧಿಕಾರಿಗಳ ವಿರುದ್ಧವೇ ಜನ ದಂಗೆ ಎದ್ದಿದ್ದಾರೆ. ಹಣದುಬ್ಬರ ಏರಿಕೆ (Inflation), ಹೆಚ್ಚಿನ ತೆರಿಗೆ ಹಾಗೂ ವಿದ್ಯುತ್‌ ಪೂರೈಕೆಯ ಕೊರತೆಯಿಂದಾಗಿ ಬೇಸತ್ತಿರುವ ಜನ ಸರ್ಕಾರದ ಕಚೇರಿಗಳು, ಪೊಲೀಸ್‌ ಅಧಿಕಾರಿಗಳ ಮೇಲೆಯೇ ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಪಾಕ್‌ ಆಕ್ರಮಿತ ಕಾಶ್ಮೀರವನ್ನು ಭಾರತದ ಜತೆ ವಿಲೀನಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಹಾಗಾಗಿ, ಪಿಒಕೆ ಮೇಲೆ ಪಾಕಿಸ್ತಾನದ (Pakistan) ನಿಯಂತ್ರಣವು ಪೂರ್ತಿ ಕೈತಪ್ಪಿಹೋಗಿದೆ ಎಂದು ಹೇಳಲಾಗುತ್ತಿದೆ.

ಹೌದು, ಕಳೆದ ಎರಡು ದಿನಗಳಿಂದ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಸುಮಾರು 10 ಜಿಲ್ಲೆಗಳಲ್ಲಿ ಜನ ಅಕ್ಷರಶಃ ದಂಗೆಯೆದ್ದಿದ್ದಾರೆ. ಮುಜಫರಾಬಾದ್‌ನಿಂದ ರಾವಲ್‌ಕೋಟ್‌ವರೆಗೆ ಜನ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಸೇನೆ ಹಾಗೂ ಪೊಲೀಸರ ವಾಹನಗಳ ಮೇಲೆ ಕಲ್ಲುತೂರಾಟ, ಸರ್ಕಾರಿ ಕಚೇರಿಗಳ ಮೇಲೆ ದಾಳಿ, ಪೊಲೀಸರ ಮೇಲೆ ಹಲ್ಲೆ ಸೇರಿ ಹಲವು ರೀತಿಯ ಹಿಂಸಾಚಾರ ಭುಗಿಲೆದ್ದಿದೆ. ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನವು ಪಿಒಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಭಾರತದ ಜತೆ ವಿಲೀನಕ್ಕೆ ಬೇಡಿಕೆ

ಭಾರತದ ಜತೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ವಿಲೀನಗೊಳಿಸಬೇಕು ಎಂಬುದು ಕೂಡ ಪ್ರತಿಭಟನಾಕಾರರ ಬೇಡಿಕೆಯಾಗಿದೆ. ಭಾರತದ ಪರ ಘೋಷಣೆಗಳು, ಭಾರತದ ಧ್ವಜ ಪ್ರದರ್ಶನಗಳು ಕೂಡ ನಡೆದಿವೆ. ಇನ್ನು, ಸ್ವಾತಂತ್ರ್ಯ ಬೇಕು, ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂಬ ಘೋಷಣೆಗಳು ಕೂಡ ಕೇಳಿಬಂದಿವೆ. ಪೊಲೀಸರು, ಭದ್ರತಾ ಸಿಬ್ಬಂದಿ ಹಾಗೂ ಜನರ ನಡುವಿನ ಸಂಘರ್ಷಕ್ಕೆ ಒಬ್ಬ ಪೊಲೀಸ್‌ ಅಧಿಕಾರಿ ಬಲಿಯಾಗಿದ್ದಾರೆ. ಪೊಲೀಸರು, ಸೈನಿಕರು ಸೇರಿ ಸುಮಾರು 90 ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಜನರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ಆಗುತ್ತಿಲ್ಲ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಿಂದ ಮಾಹಿತಿ ಲಭ್ಯವಾಗಿದೆ.

ಜಮ್ಮು-ಕಾಶ್ಮೀರ ಜಾಯಿಂಟ್‌ ಅವಾಮಿ ಆಕ್ಷನ್‌ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಇದರ ಹತ್ತಾರು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್‌ ಮಾಡಿದರೂ ನಿಯಂತ್ರಿಸಲು ಆಗುತ್ತಿಲ್ಲ ಎನ್ನಲಾಗಿದೆ. ಈಗಾಗಲೇ ಪಿಒಕೆ ನಮ್ಮದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಪಿಒಕೆ ಜನರೇ ಭಾರತದ ಜತೆ ವಿಲೀನಗೊಳ್ಳಲು ಬಯಸುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಇದರ ಬೆನ್ನಲ್ಲೇ, ಬಲೂಚಿಸ್ತಾನದ ಜತೆಗೆ ಪಿಒಕೆಯಲ್ಲೂ ದಂಗೆ ಶುರುವಾಗಿದೆ.

ಇದನ್ನೂ ಓದಿ: Pakistan Occupied Kashmir: ಪಾಕ್‌ ದಿವಾಳಿ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹಿಂಸೆಯ ಹಾವಳಿ; ನಾಗರಿಕ ದಂಗೆ ಶುರು?

Continue Reading

ವಿದೇಶ

Pig Kidney: ಹಂದಿಯ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು

Pig Kidney: ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ ಕಸಿ ಪಡೆದ ಮೊದಲ ವ್ಯಕ್ತಿ, ಇಂಗ್ಲೆಂಡ್‌ನ ವೇಮೌತ್‌ನ ನಿವಾಸಿ 62 ವರ್ಷದ ರಿಕ್ ಸ್ಲೇಮನ್ ಶಸ್ತ್ರ ಚಿಕಿತ್ಸೆ ನಡೆದ ಸುಮಾರು ಎರಡು ತಿಂಗಳ ನಂತರ ನಿಧನ ಹೊಂದಿದ್ದಾರೆ. ಆದರೆ ಅವರ ನಿಧನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಿಡ್ನಿ ಕಸಿಯ ಪರಿಣಾಮದಿಂದ ಅವರು ನಿಧನ ಹೊಂದಿದ್ದಾರೆ ಎಂಬುದಕ್ಕೆ ನಮಗೆ ಯಾವುದೇ ಸೂಚನೆ ಸಿಕ್ಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

VISTARANEWS.COM


on

Pig Kidney
Koo

ಬೋಸ್ಟನ್: ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ (Pig Kidney) ಕಸಿ ಪಡೆದ ಮೊದಲ ವ್ಯಕ್ತಿ, ಇಂಗ್ಲೆಂಡ್‌ನ ವೇಮೌತ್‌ನ ನಿವಾಸಿ 62 ವರ್ಷದ ರಿಕ್ ಸ್ಲೇಮನ್ (Rick Slayman) ಶಸ್ತ್ರ ಚಿಕಿತ್ಸೆ ನಡೆದ ಸುಮಾರು ಎರಡು ತಿಂಗಳ ನಂತರ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ರಿಕ್ ಸ್ಲೇಮನ್ ಅವರಿಗೆ ಹಂದಿಯ ಮೂತ್ರಪಿಂಡ ಕಸಿ ಮಾಡಲಾಗಿತ್ತು. ʼʼಹಂದಿ ಮೂತ್ರಪಿಂಡವು ಕನಿಷ್ಠ ಎರಡು ವರ್ಷಗಳವರೆಗೆ ಕಾರ್ಯ ನಿರ್ವಹಿಸುತ್ತದೆ ಎಂದು ನಂಬಿದ್ದೆವು. ಆದರೆ ರಿಕ್ ಸ್ಲೇಮನ್ ಅವರ ಹಠಾತ್‌ ನಿಧನ ಆಘಾತ ತಂದಿದೆʼʼ ಎಂದು ವೈದ್ಯರು ತಿಳಿಸಿದ್ದಾರೆ.

“ರಿಕ್ ಸ್ಲೇಮನ್ ಅವರ ಹಠಾತ್ ನಿಧನದಿಂದ ತೀವ್ರ ದುಃಖವಾಗಿದೆ. ಕಿಡ್ನಿ ಕಸಿಯ ಪರಿಣಾಮದಿಂದ ಅವರು ನಿಧನ ಹೊಂದಿದ್ದಾರೆ ಎಂಬುದಕ್ಕೆ ನಮಗೆ ಯಾವುದೇ ಸೂಚನೆ ಸಿಕ್ಕಿಲ್ಲ. ಸ್ಲೇಮನ್ ಅವರನ್ನು ವಿಶ್ವಾದ್ಯಂತದ ಕಿಡ್ನಿ ಸಮಸ್ಯೆ ಇರುವವರ ಭರವಸೆ ಎಂದೇ ಪರಿಗಣಿಸಲಾಗುತ್ತದೆ. ಸ್ಲೇಮನ್ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತಿದ್ದೇವೆʼʼ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಸ್ಲೇಮನ್ ಅವರಿಗೆ ಮಾರ್ಚ್ 16ರಂದು ಶಸ್ತ್ರಚಿಕಿತ್ಸೆ ನಡೆಸಿ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಟೈಪ್ 2 ಮಧುಮೇಹಿಯಾಗಿದ್ದ ಅವರು ಈ ಹಿಂದೆ 2018ರಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಆದಾಗ್ಯೂ ಐದು ವರ್ಷಗಳ ನಂತರ ಕಸಿ ಮಾಡಿಸಿಕೊಂಡಿದ್ದ ಮೂತ್ರಪಿಂಡ ವಿಫಲವಾಗಲು ಪ್ರಾರಂಭಿಸಿತು ಮತ್ತು ಅಂದಿನಿಂದ ಅವರು ಡಯಾಲಿಸಿಸ್‌ನಲ್ಲಿದ್ದರು.

ಕೊನೆಗೆ ಅವರು ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಳ್ಳಲು ಒಪ್ಪಿಗೆ ನೀಡಿದ್ದರು. ಈ ವೇಳೆ ಅವರು ಇದು ತಾನು ಎದುರಿಸುವಂತಹ ಸಮಸ್ಯೆ ಇರುವವರಿಗೆ ಭರವಸೆಯ ಬೆಳಕನ್ನು ಒದಗಿಸಲಿದೆ ಎಂದು ಹೇಳಿದ್ದರು. ಅದರಂತೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ವೈದ್ಯರ ಪ್ರಯೋಗ ಯಶಸ್ವಿಯಾಗಿತ್ತು. ಆ ಮೂಲಕ ರಿಕ್ ಸ್ಲೇಮನ್ ಹಂದಿ ಮೂತ್ರಪಿಂಡ ಕಸಿ ಸ್ವೀಕರಿಸಿದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ಬಳಿಕ ಮನೆಗೆ ತೆರಳಿದ್ದರು. ಅವರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ. ಮನೆಯಲ್ಲಿ ಚಿಕಿತ್ಸೆ ಮುಂದುವರಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು. ʼʼಸ್ಲೇಮನ್‌ಗೆ ಕಸಿ ಮಾಡಲಾದ ಹಂದಿಯ ಮೂತ್ರಪಿಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಕ್ತದಲ್ಲಿನ ತ್ಯಾಜ್ಯವನ್ನು ತೆಗೆದು ಹಾಕುತ್ತಿದ್ದು, ಮೂತ್ರವನ್ನು ಉತ್ಪಾದಿಸುತ್ತದೆ. ದೇಹದ ದ್ರವಗಳನ್ನು ಸಮತೋಲನಗೊಳಿಸುತ್ತದೆʼʼ ಎಂದು ಅಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಇದರಿಂದ ಮುಂಬರುವ ದಿನಗಳಲ್ಲಿ ಮಾನವನ ಮೇಲೆ ಪ್ರಾಣಿಗಳ ಅಂಗಾಂಗ ಕಸಿಯ ಪ್ರಯೋಗದ ಹೊಸ ಯುಗವೊಂದು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದೇ ವಿಶ್ಲೇಷಿಸಲಾಗಿತ್ತು.

ಈ ಹಿಂದೆ ಹಂದಿಯ ಹೃದಯವನ್ನು ಕಸಿ ಮಾಡಿದ ಕೆಲವೇ ವಾರಗಳಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಈ ಪ್ರಯೋಗ ಭರವಸೆ ಮೂಡಿತ್ತು.

ಇದನ್ನೂ ಓದಿ: Pig kidney: ಮನುಷ್ಯನಿಗೆ ಹಂದಿಯ ಕಿಡ್ನಿ ಅಳವಡಿಕೆ ಸಕ್ಸೆಸ್! ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

Continue Reading

ವಿದೇಶ

Pakistan Occupied Kashmir: ಪಾಕ್‌ ದಿವಾಳಿ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹಿಂಸೆಯ ಹಾವಳಿ; ನಾಗರಿಕ ದಂಗೆ ಶುರು?

ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಶನಿವಾರ ಘರ್ಷಣೆ ಸಂಭವಿಸಿದ ಅನಂತರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (Pakistan occupied Kashmir) ಉದ್ವಿಗ್ನತೆ ಹೆಚ್ಚಾಗಿದೆ. ಮುಜಫರಾಬಾದ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿರುವುದರಿಂದ ಮೀರ್‌ಪುರ, ಆಜಾದ್ ಜಮ್ಮು ಮತ್ತು ಕಾಶ್ಮೀರ (ಎಜೆಕೆ) ನಲ್ಲಿ ಮಾರುಕಟ್ಟೆ, ಶಾಲೆ ಮತ್ತು ಕಚೇರಿಗಳನ್ನು ಮುಚ್ಚಲಾಗಿದೆ.

VISTARANEWS.COM


on

By

Pakistan Occupied Kashmir
Koo

ಪಾಕ್ ಆಕ್ರಮಿತ ಕಾಶ್ಮೀರದ (Pakistan occupied Kashmir) ಕೆಲವು ಭಾಗಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು (protest) ಮುಂದುವರಿದಿದ್ದು, ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ನಾಗರಿಕರನ್ನು ಹತ್ಯೆ (murder) ಮಾಡಲಾಗಿದೆ. ಮುಜಫರಾಬಾದ್‌ನಲ್ಲಿ (Muzaffarabad) ಪ್ರತಿಭಟನಾಕಾರರನ್ನು ಪೊಲೀಸರು ನಿಯಂತ್ರಿಸಿದ್ದರೂ ಸಾಮಾನ್ಯ ಜನ ಜೀವನ ಮತ್ತು ವ್ಯವಹಾರಗಳು ಅಸ್ತವ್ಯಸ್ತಗೊಂಡಿದೆ.

ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಶನಿವಾರ ಘರ್ಷಣೆ ಸಂಭವಿಸಿದ ಅನಂತರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಮುಜಫರಾಬಾದ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿರುವುದರಿಂದ ಮೀರ್‌ಪುರ, ಆಜಾದ್ ಜಮ್ಮು ಮತ್ತು ಕಾಶ್ಮೀರ (jammu and kashmir) ನಲ್ಲಿ ಮಾರುಕಟ್ಟೆ, ಶಾಲೆ ಮತ್ತು ಕಚೇರಿಗಳನ್ನು ಮುಚ್ಚಲಾಗಿದೆ.

ಕಾರಣ ಏನು?

ಅವಾಮಿ ಆಕ್ಷನ್ ಕಮಿಟಿ (AAC) ಶುಕ್ರವಾರ ಹಣದುಬ್ಬರದ ವಿರುದ್ಧ ಪಿಒಕೆಯ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸಿತು. ಇದು ಪಾಕಿಸ್ತಾನಿ ಭದ್ರತಾ ಪಡೆಗಳ ಮೇಲೆ ಹಲ್ಲೆಗೆ ಕಾರಣವಾಗಿತ್ತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಮುಜಫರಾಬಾದ್‌ನಲ್ಲಿ ಮೇ 10 ರಂದು ನಡೆದ ಮುಷ್ಕರದಿಂದ ನಗರ ಸ್ತಬ್ಧವಾಗಿತ್ತು.

ಪ್ರತಿಭಟಕರರ ಶಾಂತಿಯುತ ಪ್ರದರ್ಶನಗಳಿಗೆ ಅಡ್ಡಿಯಾಗಿದ್ದರಿಂದ ಪ್ರತಿಭಟನೆ ಉಗ್ರ ರೂಪ ಪಡೆದಿತ್ತು.
ಎಎಸಿ ಹೆಚ್ಚಿನ ತೆರಿಗೆಗಳು, ವಿದ್ಯುತ್ ಬಿಲ್‌ಗಳು ಮತ್ತು ಹಣದುಬ್ಬರ ಹಠಾತ್ ಏರಿಕೆ ವಿರುದ್ಧ ಶುಕ್ರವಾರ ಎಎಸಿ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿತು. ಜನರ ಮನೆಗಳು ಮತ್ತು ಮಸೀದಿಗಳ ಸುತ್ತಲೂ ಪೊಲೀಸರು ಅಶ್ರುವಾಯು ಶೆಲ್ ಅನ್ನು ಆಶ್ರಯಿಸಿದಾಗ ಘರ್ಷಣೆಗಳು ಭುಗಿಲೆದ್ದಿತು.

ಇದರಿಂದ ಸಮಹ್ನಿ, ಸೆಹನ್ಸಾ, ಮೀರ್‌ಪುರ್, ರಾವಲಕೋಟ್, ಖುಯಿರಟ್ಟಾ, ತಟ್ಟಪಾನಿ ಮತ್ತು ಹಟ್ಟಿಯಾನ್ ಬಾಲಾ ಮುಂತಾದ ಪಿಒಕೆಯ ಬಹು ಭಾಗಗಳಲ್ಲಿ ಮುಷ್ಕರಕ್ಕೆ ಕರೆ ನೀಡಲಾಯಿತು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏನಾಗುತ್ತಿದೆ?

ಅವಾಮಿ ಕ್ರಿಯಾ ಸಮಿತಿಯು ಪಿಒಕೆಯ ಮುಜಫರಾಬಾದ್‌ಗೆ ಶಾಂತಿಯುತ ಮೆರವಣಿಗೆಗಳನ್ನು ಶುಕ್ರವಾರ ನಡೆಸಿತು, ವಿದ್ಯುತ್ ಬಿಲ್‌ಗಳ ಮೇಲೆ ವಿಧಿಸಲಾದ “ಅನ್ಯಾಯ” ತೆರಿಗೆಗಳ ವಿರುದ್ಧ ಪ್ರತಿಭಟಿಸಿತು. ಇದು ಹಣದುಬ್ಬರ ಗಗನಕ್ಕೇರಲು ಕಾರಣವಾಯಿತು. ಇಸ್ಲಾಂ ಗಢ್ ಬಳಿ ಪ್ರತಿಭಟನಾಕಾರರು ಮತ್ತು ಪೊಲೀಸರು ಘರ್ಷಣೆ ಮಾಡಿದಾಗ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದವು.

ಎಎಸಿ ಮುಜಫರಾಬಾದ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿತು. ]ಇದು ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತು. ಮೆರವಣಿಗೆಯನ್ನು ತಡೆಯಲು ಪೊಲೀಸರು ನಗರಕ್ಕೆ ಹೋಗುವ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಹಾಕಿದರು. ಇದು ಘರ್ಷಣೆಗೆ ಕಾರಣವಾಯಿತು. ರಾತ್ರಿಯ ದಾಳಿಯಲ್ಲಿ ಪೊಲೀಸರು ಅನೇಕ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿದಾಗ ಸಮಿತಿಯು ಶನಿವಾರ ಮುಷ್ಕರಕ್ಕೆ ಕರೆ ನೀಡಿತು.

ಪಿಒಕೆ ಸರ್ಕಾರವು ಈ ಪ್ರದೇಶದಲ್ಲಿ ಸೆಕ್ಷನ್ 144 ಅನ್ನು ವಿಧಿಸಿದರೆ, ಮೇ 10 ಮತ್ತು 11 ರಂದು ಶಿಕ್ಷಣ ಸಂಸ್ಥೆ ಮತ್ತು ಕಚೇರಿಗಳನ್ನು ಮುಚ್ಚಲಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಎಲ್ಲಾ ಜಿಲ್ಲೆಗಳಲ್ಲಿ ಶನಿವಾರ ಜನರು ಸಾವಿರಾರು ಸಂಖ್ಯೆಯಲ್ಲಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಸಾಮಾಜಿಕ ಮಾಧ್ಯಮಗಳಲ್ಲಿನ ವಿಡಿಯೋ ಮತ್ತು ಫೋಟೋಗಳಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ತಮ್ಮ ಲಾಠಿಗಳನ್ನು ಬಳಸಿರುವುದನ್ನು ತೋರಿಸಿತ್ತು. ಅಶ್ರುವಾಯು ಬಳಸಿ ಗುಂಪನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದರು. ಹಿಂಸಾತ್ಮಕ ಘರ್ಷಣೆಯ ಅನಂತರ ಶುಕ್ರವಾರ ಹತ್ತಾರು ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರು ಗಾಯಗೊಂಡಿದ್ದರು.

ಇದನ್ನೂ ಓದಿ: America v/s Russia:ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪಕ್ಕೆ ಅಮೆರಿಕ ಹೇಳಿದ್ದೇನು?

ಮೂವರು ಸಾವು

ಪಾಕಿಸ್ತಾನಿ ಪಡೆಗಳು ನಿರಾಯುಧ ನಾಗರಿಕರ ಮೇಲೆ ಗುಂಡು ಹಾರಿಸಿದ್ದು ಘರ್ಷಣೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪಿಒಕೆ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಹೇಳಿದ್ದಾರೆ.‌ ಮಿರ್ಜಾ ಅವರು ಭಾರತ ಸರ್ಕಾರದ ಮಧ್ಯಪ್ರವೇಶಕ್ಕೆ ಕರೆ ನೀಡಿದ್ದು, ಪರಿಸ್ಥಿತಿ ಕೈ ಮೀರುತ್ತಿದೆ. ಕೇಂದ್ರವು ದೂರ ಉಳಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಭಾರತವು ಈಗ ತನ್ನೆಲ್ಲ ಗಮನವನ್ನು ಪಾಕಿಸ್ತಾನಿ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಮೇಲೆ ಕೇಂದ್ರೀಕರಿಸಬೇಕು ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಈ ಆಕ್ರಮಿತ ಪ್ರದೇಶದ ಸ್ವಾತಂತ್ರ್ಯಕ್ಕೆ ಸಹಾಯ ಮಾಡಬೇಕು ಎಂದು ತಿಳಿಸಿದರು.

Continue Reading
Advertisement
prajwal revanna case
ಪ್ರಮುಖ ಸುದ್ದಿ29 mins ago

Prajwal Revanna Case: ಎಸ್‌ಐಟಿಗೆ ಸವಾಲೆಸೆದ ನವೀನ್‌ ಗೌಡ; ದೇವರಾಜೇಗೌಡ, ಪ್ರೀತಂಗೌಡ ಆಪ್ತರು ಎಸ್‌ಐಟಿ ಕಸ್ಟಡಿಗೆ?

Health Tips Kannada Stay away from these foods to get rid of acne
ಆಹಾರ/ಅಡುಗೆ30 mins ago

Health Tips Kannada: ಈ ಆಹಾರಗಳಿಂದ ದೂರವಿದ್ದರೆ ಮೊಡವೆ ಸಮಸ್ಯೆಯಿಂದ ಪಾರಾಗಬಹುದು!

Kannada New Movie meghashri starrer kuntebille goes on floor
ಸ್ಯಾಂಡಲ್ ವುಡ್45 mins ago

Kannada New Movie: `ಕುಂಟೆಬಿಲ್ಲೆ’ ಸಿನಿಮಾದ ಮುಹೂರ್ತ: ಶುಭಕೋರಿದ ಗಣ್ಯರು

Brinda Acharya Saavira Gungali Video Song Out
ಸ್ಯಾಂಡಲ್ ವುಡ್59 mins ago

Brinda Acharya: ‘ಸಾವಿರ ಗುಂಗಲಿ’ ಒಲವಿನ ಸವಾರಿ ಹೊರಟ ಬೃಂದಾ ಆಚಾರ್ಯ-ಭರತ್ ಬೋಪಣ್ಣ!

pm narendra Modi Varanasi road show
Lok Sabha Election 20241 hour ago

PM Nanrendra Modi: ನಾಳೆ ವಾರಾಣಸಿಯಲ್ಲಿ ಮೋದಿ 3ನೇ ಬಾರಿ ನಾಮಪತ್ರ ಸಲ್ಲಿಕೆ, ಇಂದು ವೈಭವದ ರೋಡ್‌ ಶೋ

Food Tips Kannada adulterated food effect health
ಲೈಫ್‌ಸ್ಟೈಲ್1 hour ago

Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Jyoti Rai seeks divine blessings at tirupathi
ಕಿರುತೆರೆ1 hour ago

Jyoti Rai: ವೈರಲ್ ವಿಡಿಯೊ ಬೆನ್ನಲ್ಲೇ ಜ್ಯೋತಿ ರೈ ಟೆಂಪಲ್‌ ರನ್‌!

Kochi Tour
ಪ್ರವಾಸ2 hours ago

Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?

Prajwal Revanna Case HD Revanna jailed
ಪ್ರಮುಖ ಸುದ್ದಿ2 hours ago

HD Revanna Jailed: ಇಂದು ಏನಾಗುತ್ತೆ ಎಚ್‌ಡಿ ರೇವಣ್ಣ ಭವಿಷ್ಯ? ಜಾಮೀನು ಅರ್ಜಿ ಮತ್ತೆ ವಿಚಾರಣೆ

ICMR  Good Health Guidelines
ಆರೋಗ್ಯ2 hours ago

ICMR Good Health Guidelines: ಆರೋಗ್ಯವಾಗಿರಲು ಎಷ್ಟು ಗಂಟೆ ನಿದ್ದೆ ಮಾಡಬೇಕು, ಎಷ್ಟು ಗಂಟೆ ಕೆಲಸ ಮಾಡಬೇಕು? ಆಹಾರ ಏನಿರಬೇಕು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather forecast karnataka rains
ಮಳೆ4 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ5 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ16 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ16 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ16 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ20 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ21 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

ಟ್ರೆಂಡಿಂಗ್‌