Viral Video: ಅಮೆರಿಕ ಅಧ್ಯಕ್ಷ ಬೈಡೆನ್​ ಎನ್ನುವ ಬದಲು ಅಧ್ಯಕ್ಷ ಒಬಾಮಾ ಎಂದ ವೈಟ್​ಹೌಸ್​​ ಮಾಧ್ಯಮ ಕಾರ್ಯದರ್ಶಿ - Vistara News

ವಿದೇಶ

Viral Video: ಅಮೆರಿಕ ಅಧ್ಯಕ್ಷ ಬೈಡೆನ್​ ಎನ್ನುವ ಬದಲು ಅಧ್ಯಕ್ಷ ಒಬಾಮಾ ಎಂದ ವೈಟ್​ಹೌಸ್​​ ಮಾಧ್ಯಮ ಕಾರ್ಯದರ್ಶಿ

ವಿಶ್ವಬ್ಯಾಂಕ್​ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುವುದಾಗಿ ಡೇವಿಡ್​ ಮಾಲ್ಪಾಸ್​ ಅವರು ಘೋಷಣೆ ಮಾಡಿದ ಬೆನ್ನಲ್ಲೇ, ಆ ಸ್ಥಾನಕ್ಕೆ ಭಾರತ ಮೂಲದ, ಮಾಸ್ಟರ್​ಕಾರ್ಡ್​ ಕಂಪನಿಯ ಅಜಯ್​ ಬಾಂಗಾ ಹೆಸರನ್ನು ಯುಎಸ್​ ಅಧ್ಯಕ್ಷ ಜೋ ಬೈಡೆನ್​ ನಾಮ ನಿರ್ದೇಶನ ಮಾಡಿದ್ದಾರೆ. ಕರೀನ್​ ಜೀನ್​ ಪಿಯರ್ ಇದೇ ವಿಷಯ ಹೇಳುತ್ತಿದ್ದರು.

VISTARANEWS.COM


on

White House Press Secretary Calls Biden As President Obama
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಮೆರಿಕ ವೈಟ್​ಹೌಸ್​ (ಶ್ವೇತ ಭವನ)ನ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ, ಯುಎಸ್​ ಅಧ್ಯಕ್ಷ ಜೋ ಬೈಡೆನ್​ ಎಂದು ಹೇಳುವ ಬದಲು ಅಧ್ಯಕ್ಷ ಒಬಾಮಾ ಎಂದಿದ್ದಾರೆ. ಕರೀನ್​ ಜೀನ್​ ಪಿಯರ್ ಅವರು ಬಾಯ್ತಪ್ಪಿನಿಂದ ‘ಅಧ್ಯಕ್ಷ ಒಬಾಮಾ’ ಎಂದು ಹೇಳಿರುವ ವಿಡಿಯೊ ಕೂಡ ಎಲ್ಲೆಡೆ ವೈರಲ್ ಆಗುತ್ತಿದೆ.

ವಿಶ್ವಬ್ಯಾಂಕ್​ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುವುದಾಗಿ ಡೇವಿಡ್​ ಮಾಲ್ಪಾಸ್​ ಅವರು ಘೋಷಣೆ ಮಾಡಿದ ಬೆನ್ನಲ್ಲೇ, ಆ ಸ್ಥಾನಕ್ಕೆ ಭಾರತ ಮೂಲದ, ಮಾಸ್ಟರ್​ಕಾರ್ಡ್​ ಕಂಪನಿಯ ಅಜಯ್​ ಬಾಂಗಾ ಹೆಸರನ್ನು ಯುಎಸ್​ ಅಧ್ಯಕ್ಷ ಜೋ ಬೈಡೆನ್​ ನಾಮ ನಿರ್ದೇಶನ ಮಾಡಿದ್ದಾರೆ. ಇದೇ ವಿಷಯವನ್ನು ಮಾಧ್ಯಮಗಳ ಎದುರು ಪ್ರಸ್ತುತ ಪಡಿಸಲು ಕರೀನ್​ ಜೀನ್​ ಪಿಯರ್ ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಅದರಲ್ಲಿ ಮಾತನಾಡುವಾಗ ಬಾಯ್ತಪ್ಪಿ ‘ಅಧ್ಯಕ್ಷ ಒಬಾಮಾ’ ಎಂದಿದ್ದಾರೆ. ತಕ್ಷಣವೇ ಸರಿಪಡಿಸಿಕೊಂಡು ‘ಕ್ಷಮಿಸಿ, ಅಧ್ಯಕ್ಷ ಬೈಡೆನ್​’ ಎಂದು ಹೇಳಿದ್ದಾರೆ.

ವಿಶ್ವಬ್ಯಾಂಕ್​ಗೆ ಇಷ್ಟು ದಿನ ಅಧ್ಯಕ್ಷರಾಗಿದ್ದ ಡೇವಿಡ್​ ಮಾಲ್ಪಾಸ್ ಅವರು ಡೊನಾಲ್ಡ್ ಟ್ರಂಪ್​ರಿಂದ ನೇಮಕಗೊಂಡವರು. 2024ರ ಏಪ್ರಿಲ್​​ನಲ್ಲಿ ಅವರ ಅಧಿಕಾರ ಅವಧಿ ಮುಗಿಯುವುದಿತ್ತು. ಆದರೆ ಜೂನ್​​ನಲ್ಲಿ ತಾವು ಅಧಿಕಾರ ತ್ಯಜಿಸುವುದಾಗಿ ಹೇಳಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಅಜಯ್​ ಬಾಂಗಾ ಹೆಸರನ್ನು ಅಮೆರಿಕ ಅಧ್ಯಕ್ಷರು ನಾಮನಿರ್ದೇಶನ ಮಾಡಿದ್ದಾರೆ. ಸದ್ಯ ಅವರು ಜನರಲ್ ಅಟ್ಲಾಂಟಿಕ್​​ ಎಂಬ ಖಾಸಗಿ ಕಂಪನಿಯ ಉಪಾಧ್ಯಕ್ಷರಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ 30ವರ್ಷಗಳ ಅನುಭವ ಅವರದ್ದು. ಹಾಗೇ, ಇದೀಗ ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಮೂಲದ ವ್ಯಕ್ತಿಯೂ ಆಗಿದ್ದಾರೆ.

ಕರೀನ್ ಜೀನ್-ಪಿಯರ್ ವಿಡಿಯೊ:

ಹೀಗೆ ಯುಎಸ್​ ಅಧ್ಯಕ್ಷರು ಯಾವುದೇ ಹೊಸ ಘೋಷಣೆ ಮಾಡಿದಾಗಲೂ, ವೈಟ್ ಹೌಸ್​ನ ಮಾಧ್ಯಮ ಕಾರ್ಯದರ್ಶಿ ಸುದ್ದಿಗೋಷ್ಠಿ ಕರೆದು ಅದನ್ನು ತಿಳಿಸುತ್ತಾರೆ. ಅಂತೆಯೇ ಕರೀನ್ ಜೀನ್-ಪಿಯರ್ ಈ ವಿಷಯವನ್ನೂ ಪ್ರಕಟಿಸಿದರು. ಮಧ್ಯೆ ಒಂದು ಸಣ್ಣ ಎಡವಟ್ಟು ಮಾಡಿಕೊಂಡರು. ಅಂದಹಾಗೇ, ಈ ಪಿಯರ್​ ಅವರು ಸುದೀರ್ಘ ಕಾಲದಿಂದಲೂ ಬೈಡೆನ್​ಗೆ ಸಲಹೆಗಾರರಾಗಿದ್ದಾರೆ. ಬರಾಕ್​ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದಾಗ ಜೋ ಬೈಡೆನ್​ ಉಪಾಧ್ಯಕ್ಷರಾಗಿದ್ದರು. ಆಗಲೂ ಇದೇ ಜೀನ್​ ಪಿಯರ್​ ಬೈಡೆನ್​ಗೆ ಸಲಹೆಗಾರರಾಗಿದ್ದರು. 2022ರ ಮೇ ತಿಂಗಳಿಂದ ವೈಟ್ ಹೌಸ್​ ಮಾಧ್ಯಮ ಕಾರ್ಯದರ್ಶಿಯಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

Boat Capsizes: ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹಕ್ಕೆ ತುತ್ತಾಗಿ ಒಂದೇ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿತ್ತು. ಈ ವೇಳೆ ಒಂದು ದೋಣಿ ಮುಗುಚಿದೆ ಎನ್ನಲಾಗಿದೆ. ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಜಲಾವೃತಗೊಂಡಿದ್ದ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಬಳಿಕ ಮಗುಚಿ ಬೀಳುತ್ತಿರುವ ಭಯಾನಕ ದೃಶ್ಯವನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Boat Capsize
Koo

ಬ್ರೆಜಿಲ್‌: ಭೀಕರ ಪ್ರವಾಹದ ರಭಸಕ್ಕೆ ದೋಣಿಯೊಂದು ಮಗುಚಿರುವ ಘಟನೆ (Boat Capsizes) ಬ್ರೆಜಿಲ್‌(Brazil)ನಲ್ಲಿ ನಡೆದಿದೆ. ಭಾರೀ ಮಳೆಯಿಂದ ಪ್ರವಾಹ ಸ್ಥಿತಿ(Flood situation) ಎದುರಿಸುತ್ತಿರುವ ಬ್ರೆಜಿಲ್‌ನಲ್ಲಿ ನೂರಾರು ಜನರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಜಲಾವೃತಗೊಂಡಿದ್ದ ಸೇತುವೆಯಿಂದ ಕೆಳಗೆ ಬಿದ್ದಿದೆ. ಪರಿಣಾಮವಾಗಿ ಮಳೆಯಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 56ಕ್ಕೆ ಏರಿಕೆಯಾಗಿದ್ದು, 74 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು 67 ಮಂದಿ ಕಣ್ಮರೆಯಾಗಿದ್ದಾರೆ ಬ್ರೆಜಿಲ್‌ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಈ ಭೀಕರ ದುರ್ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗುತ್ತಿದೆ.

ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ಸುಲ್ ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹಕ್ಕೆ ತುತ್ತಾಗಿ ಒಂದೇ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿತ್ತು. ಈ ವೇಳೆ ಒಂದು ದೋಣಿ ಮುಗುಚಿದೆ ಎನ್ನಲಾಗಿದೆ. ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಜಲಾವೃತಗೊಂಡಿದ್ದ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಬಳಿಕ ಮಗುಚಿ ಬೀಳುತ್ತಿರುವ ಭಯಾನಕ ದೃಶ್ಯವನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಬ್ರೆಜಿಲ್‌ನಲ್ಲಿ ಕಳೆದ ಅನೇಕ ದಿನಗಳಿಂದ ಎಡೆಬಿಡದೇ ಮಳೆಯಾಗುತ್ತಿದ್ದು, ಭೂಕುಸಿತ, ಪ್ರವಾಹಕ್ಕೆ ಸಿಲುಕಿ ಜನ ತತ್ತರಿಸಿದ್ದಾರೆ.

ಇನ್ನು ನಾಲ್ಕು ತಿಂಗಳ ಹಿಂದೆ ಇಂತಹದ್ದೇ ಒಂದು ದುರಂತ ನಡೆದಿತ್ತು. ಗುಜರಾತ್‌ನ ವಡೋದಾರದ ಹರಿಣಿ ಸರೋವರದಲ್ಲಿ ಬೋಟ್ ಮಗುಚಿ 13 ಶಾಲಾ ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಮೃತಪಟ್ಟ ಘಟನೆ ನಡೆದಿತ್ತು.

ಇದನ್ನೂ ಓದಿ:Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್‌ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!

ಕಳೆದ ವಾರ ಕಾರವಾರದಲ್ಲೂ ಅರಬ್ಬೀ ಸಮುದ್ರದಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಒಂದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 4 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿತ್ತು. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾವಿನಕುರ್ವೆ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಾದೇವ ಖಾರ್ವಿ ಎಂಬವರ ಮಾಲಕತ್ವದ ಓಂ ಮಹಾಗಣಪತಿ ಹೆಸರಿನ ಬೋಟ್ ಮುಳುಗಡೆಯಾಗಿತ್ತು. ಬೆಳಿಗ್ಗೆ 5 ಗಂಟೆಯ ವೇಳೆಗೆ 4 ಮಂದಿ ಮೀನುಗಾರರು ಈ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅರಬ್ಬೀ ಸಮದ್ರದಲ್ಲಿ ಕಾಣಿಸಿಕೊಂಡ ಭಾರೀ ಗಾಳಿ ಮಳೆಗೆ ಬೋಟ್ ಪಲ್ಟಿಯಾಗಿದೆ. ಸ್ಥಳದಲ್ಲಿದ್ದ ಇನ್ನೊಂದು ಬೋಟ್‌ನವರಿಂದ ಮೀನುಗಾರರ ರಕ್ಷಣೆ ಮಾಡಲಾಗಿದೆ. ಬೋಟ್ ದುರ್ಘಟನೆಯಿಂದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿತ್ತು.

Continue Reading

ಪ್ರಮುಖ ಸುದ್ದಿ

Al Jazeera: ಹಮಾಸ್‌ ಉಗ್ರರ ಪರ ನಿಲುವು; ಇಸ್ರೇಲ್‌ನಲ್ಲಿ ಅಲ್‌ಜಜೀರಾ ಚಾನೆಲ್‌ ಬಂದ್‌ ಮಾಡಿದ ನೆತನ್ಯಾಹು!

Al Jazeera: ಕತಾರ್‌ ಮೂಲದ ಸುದ್ದಿವಾನಿಯಾದ ಅಲ್‌ಜಜೀರಾ, ಹಮಾಸ್‌ ಪರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಇಸ್ರೇಲ್‌ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂಬುದು ಇಸ್ರೇಲ್‌ ವಾದವಾಗಿದೆ. ಹಾಗಾಗಿ, ಚಾನೆಲ್‌ಅನ್ನು ಸ್ಥಗಿತಗೊಳಿಸಲು ಬೆಂಜಮಿನ್‌ ನೆತನ್ಯಾಹು ಅವರು ಆದೇಶಿಸಿದ್ದಾರೆ. ಪ್ರಧಾನಿಯ ಆದೇಶದ ಬೆನ್ನಲ್ಲೇ, ಚಾನೆಲ್‌ಗೆ ತೆರಳಿದ ಪೊಲೀಸರು ವಾಹಿನಿಯ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದ್ದಾರೆ.

VISTARANEWS.COM


on

Al Jazeera
Koo

ಟೆಲ್‌ ಅವಿವ್:‌ 2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ನಡೆಸಿದ ದಾಳಿಗೆ ತೀವ್ರ ಪ್ರಮಾಣದಲ್ಲಿ ಪ್ರತಿದಾಳಿ (Israel Hamas War) ನಡೆಸುತ್ತಿರುವ ಇಸ್ರೇಲ್‌ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಹಮಾಸ್‌ ಉಗ್ರರ ಅಡಗು ತಾಣವಾಗಿರುವ ಗಾಜಾ ನಗರದ ಮೇಲೆ ಇಸ್ರೇಲ್‌ ಸತತವಾಗಿ ದಾಳಿ ನಡೆಸಿ, ಉಗ್ರರನ್ನು ಸದೆಬಡಿಯುತ್ತಿದೆ. ಇಸ್ರೇಲ್‌ ದಾಳಿಯಲ್ಲಿ ನಾಗರಿಕರೂ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ, ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್‌ಜಜೀರಾ ಸುದ್ದಿವಾಹಿನಿಯನ್ನು ಇಸ್ರೇಲ್‌ ಸ್ಥಗಿತಗೊಳಿಸಿದೆ. ಚಾನೆಲ್‌ ಬಂದ್‌ ಮಾಡುವ ಕುರಿತು ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಘೋಷಣೆ ಮಾಡಿದ್ದಾರೆ.

“ಅಲ್‌ಜಜೀರಾ ಚಾನೆಲ್‌ಅನ್ನು ಇಸ್ರೇಲ್‌ನಲ್ಲಿ ಸ್ಥಗಿತಗೊಳಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹಾಗಾಗಿ, ಚಾನೆಲ್‌ಅನ್ನು ಸ್ಥಗಿತಗೊಳಿಸಲಾಗುತ್ತಿದೆ” ಎಂದು ಬೆಂಜಮಿನ್‌ ನೆತನ್ಯಾಹು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಕುರಿತು ಬೆಂಜಮಿನ್‌ ನೆತನ್ಯಾಹು ವಕ್ತಾರ (ಅರಬ್‌ ವರ್ಲ್ಡ್)‌ ಒಫಿರ್‌ ಜೆಂಡಲ್‌ಮ್ಯಾನ್‌ ಕೂಡ ಮಾಹಿತಿ ನೀಡಿದ್ದಾರೆ. “ಕೂಡಲೇ ಅಲ್‌ಜಜೀರಾ ಚಾನೆಲ್‌ಅನ್ನು ಸ್ಥಗಿತಗೊಳಿಸುತ್ತೇವೆ. ಕೇಬಲ್‌ ಹಾಗೂ ಸ್ಯಾಟಲೈಟ್‌ ಟೆಲಿವಿಷನ್‌ ಕಂಪನಿಗಳಿಂದ ಚಾನೆಲ್‌ಅನ್ನು ತೆಗೆಯಲಾಗುತ್ತದೆ. ವರದಿಗಾರರು ಕೂಡ ಕೆಲಸ ಮಾಡಲು ಬಿಡುವುದಿಲ್ಲ” ಎಂದು ತಿಳಿಸಿದ್ದಾರೆ. ಇದಾದ ಬೆನ್ನಲ್ಲೇ, ಚಾನೆಲ್‌ಗೆ ತೆರಳಿದ ಪೊಲೀಸರು ಸುದ್ದಿವಾಹಿನಿಯನ್ನು ಸ್ಥಗಿತಗೊಳಿಸಿದ್ದಾರೆ. ಇದಕ್ಕೆ ಅಲ್‌ಜಜೀರಾ ಪ್ರತಿಕ್ರಿಯಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದೆ.

ಕತಾರ್‌ ಮೂಲದ ಸುದ್ದಿವಾನಿಯಾದ ಅಲ್‌ಜಜೀರಾ, ಹಮಾಸ್‌ ಪರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಇಸ್ರೇಲ್‌ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂಬುದು ಇಸ್ರೇಲ್‌ ವಾದವಾಗಿದೆ. “ಇಸ್ರೇಲ್‌ ವಿರೋಧಿ ನೀತಿಯನ್ನು ಅಲ್‌ಜಜೀರಾ ಅನುಸರಿಸುತ್ತಿದೆ. ಅದು ಹಮಾಸ್‌ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿದೆ. ಇದು ದೇಶದ ಭದ್ರತೆಗೆ ಧಕ್ಕೆ ತರುವ ವಿಷಯವಾಗಿದೆ. ಹಾಗಾಗಿ, ಚಾನೆಲ್‌ ಸ್ಥಗಿತಗೊಳಿಸಲು ಆದೇಶಿಸಲಾಗಿದೆ” ಎಂದು ಇಸ್ರೇಲ್‌ ಸಚಿವರೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ನಾಗರಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್, ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರರನ್ನು ನಾಶ ಮಾಡುವ ಪಣತೊಟ್ಟು, ಸೇನಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ನಿರಂತರ ದಾಳಿಗಳಿಂದಾಗಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿವೆ. ಇಷ್ಟಾದರೂ ಇಸ್ರೇಲ್‌ ಪ್ರತಿದಾಳಿ ನಿಲ್ಲಿಸುತ್ತಿಲ್ಲ.

ಇದಕ್ಕೂ ಮೊದಲು ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ವಿರುದ್ಧ ಮಂಡಿಸಿದ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿತ್ತು. ಪ್ಯಾಲೆಸ್ತೀನ್‌ನ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲ್‌ ಆಕ್ರಮಣಕಾರಿ ನೀತಿಯನ್ನು ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಈ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿರುವುದು ವಿಶೇಷವಾಗಿತ್ತು. ಇದಾದ ನಂತರ ಇಸ್ರೇಲ್‌ ವಿರುದ್ಧ ಮಂಡಿಸಿದ ನಿರ್ಣಯದ ಮತದಾನದಿಂದ ಭಾರತ ದೂರ ಉಳಿದಿದೆ.

ಇದನ್ನೂ ಓದಿ: War and Love : ಹಮಾಸ್​ ಒತ್ತೆಯಾಳುವಾಗಿರುವ ಪ್ರಿಯತಮನಿಗಾಗಿ 6 ತಿಂಗಳಿಂದ ಕಾಯುತ್ತಿದ್ದಾಳೆ ಇಸ್ರೇಲ್​ ಯುವತಿ!

Continue Reading

ಕ್ರೈಂ

Viral News: ವಿಮಾನ ಪ್ರಯಾಣಿಕನ ಜೇಬಿನಲ್ಲಿತ್ತು ಎರಡು ಹಾವು!

ಪ್ರಯಾಣಿಕನೊಬ್ಬನ ಪ್ಯಾಂಟ್ ಕಿಸೆಯಲ್ಲಿದ್ದ ಎರಡು ಹಾವುಗಳನ್ನು ಫ್ಲೋರಿಡಾದ ಮಿಯಾಮಿಯ ವಿಮಾನ ನಿಲ್ದಾಣದಲ್ಲಿ (Viral News) ಭದ್ರತಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

VISTARANEWS.COM


on

By

Viral News
Koo

ಮಿಯಾಮಿ: ಪ್ರಯಾಣಿಕನೊಬ್ಬ ಪ್ಯಾಂಟ್‌ ಜೇಬಿನಲ್ಲಿ (Viral News) ಹಾವುಗಳನ್ನು (Snakes In Pant) ಸಾಗಿಸುತ್ತಿದ್ದ ಘಟನೆ ಫ್ಲೋರಿಡಾದ (Florida ) ಮಿಯಾಮಿಯ ವಿಮಾನ ನಿಲ್ದಾಣದಲ್ಲಿ (Miami Airport) ಬೆಳಕಿಗೆ ಬಂದಿದೆ. ಭದ್ರತಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ವೇಳೆ ಪ್ರಯಾಣಿಕನೊಬ್ಬ ಪ್ಯಾಂಟ್‌ನ ಜೇಬಿನಲ್ಲಿ ಹಾವುಗಳನ್ನು ಇಟ್ಟಿರುವುದನ್ನು ಪತ್ತೆ ಮಾಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭದ್ರತಾ ಅಧಿಕಾರಿಗಳು, ಏಪ್ರಿಲ್ 26ರಂದು ಚೆಕ್‌ಪಾಯಿಂಟ್‌ನಲ್ಲಿ ಪ್ರಯಾಣಿಕನೊಬ್ಬ ಪ್ಯಾಂಟ್‌ನಲ್ಲಿ ಹಾವುಗಳನ್ನು ಸಣ್ಣ ಚೀಲದಲ್ಲಿ ಇಟ್ಟು ಸಾಗಿಸುತ್ತಿರುವುದನ್ನು ಪತ್ತೆ ಮಾಡಿರುವ ಬಗ್ಗೆ ತಿಳಿಸಿದ್ದಾರೆ. ಸನ್‌ಗ್ಲಾಸ್ ಬ್ಯಾಗ್‌ನಲ್ಲಿ ಎರಡು ಸಣ್ಣ ಹಾವುಗಳನ್ನು ಪತ್ತೆ ಹಚ್ಚಿರುವ ಸಾರಿಗೆ ಭದ್ರತಾ ಆಡಳಿತದ (ಟಿಎಸ್‌ಎ) ವಕ್ತಾರರು ಹಾವುಗಳನ್ನು ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗಕ್ಕೆ ಒಪ್ಪಿಸಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಯಾಣಿಕನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ನಿಂತಿದ್ದಾಗ ಎಚ್ಚರಿಕೆ ಸದ್ದು ಕೇಳಿದಾಗ ಆತನೇ ತನ್ನ ಪ್ಯಾಂಟ್‌ನಲ್ಲಿ ಹಾವುಗಳಿವೆ ಎಂದು ಒಪ್ಪಿಕೊಂಡಿದ್ದಾನೆ. ಆತ ತನ್ನ ಚೀಲದಲ್ಲಿ ಈ ಹಾವುಗಳನ್ನು ಏಕೆ ಸಾಗಿಸುತ್ತಿದ್ದ ಎಂಬುದು ತಿಳಿದು ಬಂದಿಲ್ಲ. ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ.



ಬೇಬಿ ಡೈಪರ್ ನಲ್ಲಿತ್ತು ಗುಂಡು

ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಲಕ್ಷಣ ಘಟನೆ ನಡೆದಿದೆ. ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಬಿಸಾಡಬಹುದಾದ ಬೇಬಿ ಡೈಪರ್‌ನಲ್ಲಿ 17 ಗುಂಡುಗಳನ್ನು ಬಚ್ಚಿಟ್ಟಿರುವುದನ್ನು ಭದ್ರತಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ವಿಮಾನ ನಿಲ್ದಾಣದ ಭದ್ರತಾ ಚೆಕ್‌ಪಾಯಿಂಟ್‌ನಲ್ಲಿ ಎಕ್ಸ್-ರೇ ಯಂತ್ರದಲ್ಲಿ ಎಚ್ಚರಿಕೆ ಬಂದಿದ್ದರಿಂದ ಅಧಿಕಾರಿಗಳು ಪ್ರಯಾಣಿಕರ ಕ್ಯಾರಿ-ಆನ್ ಬ್ಯಾಗ್‌ನಿಂದ ಕ್ಲೀನ್ ಡೈಪರ್ ಅನ್ನು ತೆಗೆದು ನೋಡಿದಾಗ ಅದರಲ್ಲಿ ಬುಲೆಟ್ ತುಂಬಿದ ಡಯಾಪರ್ ಕಂಡು ಬಂದಿತ್ತು.

ಈ ಬಗ್ಗೆ ಪ್ರಯಾಣಿಕನನ್ನು ವಿಚಾರಿಸಿದಾಗ ತನಗೆ ಇದು ಗೊತ್ತೇ ಇಲ್ಲ ಎಂದು ಹೇಳಿದ್ದ. ತನ್ನ ಗೆಳತಿ ಅದನ್ನು ಇಟ್ಟುಕೊಳ್ಳುವಂತೆ ಸೂಚಿಸಿದ್ದಳು ಎಂದು ತಿಳಿಸಿದ್ದ ಎನ್ನಲಾಗಿದೆ.

ಬೆಂಗಳೂರಿನಲ್ಲೂ ಪತ್ತೆಯಾಗಿತ್ತು

ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಥಾಯ್ಲೆಂಡ್‌ನಿಂದ ಬಂದ ವ್ಯಕ್ತಿಯ ಬ್ಯಾಗ್‌ನಲ್ಲಿ 17 ಅತಿ ವಿಷಕಾರಿ ಕಾಳಿಂಗ ಸರ್ಪ , 55 ಚೆಂಡು ಹೆಬ್ಬಾವು ಮತ್ತು ಆರು ಕಾಪುಚಿನ್‌ ಕೋತಿ ಮರಿಗಳನ್ನು ಪತ್ತೆಯಾಗಿತ್ತು.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಏರ್ ಏಷಿಯಾ ವಿಮಾನದಲ್ಲಿ ಟರ್ಮಿನಲ್ 1ರಲ್ಲಿ ಬಂದಿಳಿದಿದ್ದ ವಿಮಾನದಿಂದ ಇಳಿದ ಪ್ರಯಾಣಿಕರ ವಿವರಗಳನ್ನು ಪಡೆದುಕೊಳ್ಳುತ್ತಿದ್ದಾಗ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದು ಕಂಡುಬಂದಿತ್ತು.

ಇದನ್ನೂ ಓದಿ: ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೌಲ್ವಿಯ ಬಂಧನ

ಕೂಡಲೇ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆತನ ಚೆಕ್‌ ಇನ್‌ ಲಗೇಜನ್ನು ಸ್ಕ್ಯಾನ್‌ ಮಾಡಿದರು. ಅದರಲ್ಲಿ ಹಾವು, ಕೋತಿಗಳು ಇರುವುದು ಕಂಡುಬಂತು. ಬಳಿಕ ಅವನನ್ನು ತಡೆ ಹಿಡಿದು ಹೆಚ್ಚಿನ ತಪಾಸಣೆ ನಡೆಸಿದಾಗ ಆತನ ಬಳಿ ವಿಷಕಾರಿ ಕಾಳಿಂಗ ಸರ್ಪ, ಹೆಬ್ಬಾವು ಮತ್ತು ಕೋತಿ ಮರಿಗಳನ್ನು ತಂದಿರುವುದು ಪತ್ತೆಯಾಗಿತ್ತು.

ಹಾವು ಮತ್ತು ಕೋತಿಯನ್ನು ತಂದಿರುವ ವ್ಯಕ್ತಿ ತಮಿಳುನಾಡಿನವನು ಎಂದು ತಿಳಿದು ಬಂದಿತ್ತು. ವನ್ಯ ಜೀವಿ ಕಳ್ಳಸಾಗಣೆದಾರ ಎಂದು ಗುರುತಿಸಿ ಆತನನ್ನು ಬಂಧಿಸಿ 1962ರ ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 110ರ ಅಡಿಯಲ್ಲಿಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Continue Reading

ವಿದೇಶ

Pakistan: ಪಾಕಿಸ್ತಾನಕ್ಕೂ ಕಾಲಿಟ್ಟ ಯೋಗ; ಅಧಿಕೃತವಾಗಿ ತರಗತಿ ಆರಂಭ

Pakistan: ಪಾಕಿಸ್ತಾನದ ಕ್ಯಾಪಿಟಲ್‌ ಡೆವಲಪ್‌ಮೆಂಟ್‌ ಪ್ರಾಧಿಕಾರ(CDA) ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಇಸ್ಲಾಮಾಬಾದ್‌ನ ಎಫ್-9 ಪಾರ್ಕ್‌ನಲ್ಲಿ ಉಚಿತ ಯೋಗ ತರಗತಿಗಳ ಜಾಹೀರಾತು ನೀಡಲಾಗಿದೆ. ಆರೋಗ್ಯ ಮತ್ತು ಕ್ಷೇಮಕ್ಕಾಗಿ ಅನೇಕರು ಈಗಾಗಲೇ ಈ ಉಚಿತ ಯೋಗ ತರಗತಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಿಡಿಎ ತಿಳಿಸಿದೆ.

VISTARANEWS.COM


on

Pakistan
Koo

ಇಸ್ಲಾಮಾಬಾದ್‌: ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶ ವಿದೇಶಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ(International Yoga Day)ಯನ್ನು ಆಚರಿಸಲಾಗುತ್ತಿದೆ. ಭಾರತದ ಮೂಲವಿರುವ ಈ ಯೋಗ (Yoga) ಪರಂಪರೆ ಪ್ರಪಂಚದ ಮೂಲೆ ಮೂಲೆಗೂ ಪಸರಿಸಿ ಪ್ರತಿವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಇದೀಗ ಭಾರತದ ಈ ಯೋಗ ಪರಂಪರೆ ನೆರೆಯ ರಾಷ್ಟ್ರ ಪಾಕಿಸ್ತಾನ(Pakistan)ಕ್ಕೂ ಕಾಲಿಟ್ಟಿದೆ. ಭಾರತೀಯ ಯೋಗ ಪದ್ಧತಿಗೆ ಮನಸೋತಿರುವ ಪಾಕಿಸ್ತಾನ ಅದನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಅಲ್ಲಲ್ಲಿ ಉಚಿತ ಯೋಗ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಪಾಕಿಸ್ತಾನದ ಕ್ಯಾಪಿಟಲ್‌ ಡೆವಲಪ್‌ಮೆಂಟ್‌ ಪ್ರಾಧಿಕಾರ(CDA) ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಬಗ್ಗೆ ಪೋಸ್ಟ್‌ವೊಂದನ್ನು ಮಾಡಿದ್ದು, ಇಸ್ಲಾಮಾಬಾದ್‌ನ ಎಫ್-9 ಪಾರ್ಕ್‌ನಲ್ಲಿ ಉಚಿತ ಯೋಗ ತರಗತಿಗಳ ಜಾಹೀರಾತು ನೀಡಲಾಗಿದೆ. ಆರೋಗ್ಯ ಮತ್ತು ಕ್ಷೇಮಕ್ಕಾಗಿ ಅನೇಕರು ಈಗಾಗಲೇ ಈ ಉಚಿತ ಯೋಗ ತರಗತಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಿಡಿಎ ತಿಳಿಸಿದೆ. ಈಗಿರುವ ಮಾಹಿತಿಯ ಪ್ರಕಾರ, ಪಾಕಿಸ್ತಾನದಲ್ಲಿ ಅಧಿಕೃತವಾಗಿ ಯೋಗ ತರಬೇತಿ ನೀಡುವುದಿಲ್ಲ. ಹಾಗಾಗಿ CDA ಜಾಹೀರಾತು ಹೆಚ್ಚು ಗಮನ ಸೆಳೆದಿದೆ. ಅನೇಕ ಜನ ಯೋಗಾಭ್ಯಾಸ ಮಾಡುತ್ತಿರುವ ಫೊಟೋವೊಂದನ್ನು ಹಂಚಿಕೊಂಡಿರುವ CDA, ಅನೇಕರು ಈಗಾಗಲೇ ತರಗತಿಗಳೊಗೆ ಸೇರ್ಪಡೆಯಾಗಿದ್ದಾರೆ. ಆರೋಗ್ಯಕ್ಕಾಗಿ ಈ ನಡೆ ಎಂದು ಪೋಸ್ಟ್‌ ಮಾಡಿದ್ದಾರೆ.

ಯೋಗದ ಮೂಲ ಭಾರತವಾಗಿರುವುದರಿಂದ ಪಾಕಿಸ್ತಾನದಲ್ಲಿ ಅನೇಕ ಸಂಸ್ಥೆಗಳು ಯೋಗಾಭ್ಯಾಸಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಅದಾಗ್ಯೂ ಕೆಲವು ಜನರು ತಮ್ಮ ಮನೆಯಲ್ಲೇ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಇದೀಗ ಬಹಿರಂಗವಾಗಿ ಯೋಗ ತರಗತಿಗಳು ಆರಂಭವಾಗಿರುವುದನ್ನು ಅನೇಕರು ಸ್ವಾಗತಿಸಿದ್ದಾರೆ. ಅದೂ ಅಲ್ಲದೇ ತರಗತಿಗೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು CDA ಕ್ರಮವನ್ನು ಖಂಡಿಸಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್‌ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಶೋಕ್‌ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು.

ಇದನ್ನೂ ಓದಿ:Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್‌ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!

2015 ಜೂನ್ 21ರಂದು ಚೊಚ್ಚಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಶ್ ಸಚಿವಾಲಯದ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ರಾಜಪಥದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, 21 ಯೋಗ ಆಸನಗಳನ್ನು ಅಭ್ಯಾಸಿಸಲಾಯಿತು. ಯೋಗವು 6,000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರತಿವರ್ಷ ಯೊಗದ ದಿನಾಚರಣೆಯು ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ.

Continue Reading
Advertisement
ED Raid
ದೇಶ1 min ago

ED Raid: ಇಡಿ ಭರ್ಜರಿ ಬೇಟೆ; ಕಾಂಗ್ರೆಸ್‌ ಮುಖಂಡನ ಆಪ್ತ ಕಾರ್ಯದರ್ಶಿ ಮನೆಯಿಂದ 25 ಕೋಟಿ ರೂ. ವಶ

Mahanati Show Gagana Comedy About Rishi actor
ಕಿರುತೆರೆ12 mins ago

Mahanati Show: ‘ಮಹಾನಟಿʼ ವೇದಿಕೆಯಲ್ಲಿ ನಟ ರಿಷಿ ಫೋನ್‌ ನಂಬರ್‌ ಕೇಳಿದ ಚಿತ್ರದುರ್ಗದ ಗಗನಾ!

amethi unrest
ದೇಶ26 mins ago

Amethi Unrest: ಕಾಂಗ್ರೆಸ್‌ ಕಚೇರಿ ಮೇಲೆ ಕಿಡಿಗೇಡಿಗಳಿಂದ ಅಟ್ಯಾಕ್‌; ಬಿಜೆಪಿಯ ದುಷ್ಕೃತ್ಯ ಎಂದು ಆರೋಪ

Paris Olympics
ಕ್ರೀಡೆ1 hour ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ​ಭಾರತದ ಪುರುಷರ & ಮಹಿಳೆಯರ ರಿಲೇ ತಂಡ

Prajwal Revanna Case
ಕರ್ನಾಟಕ1 hour ago

Prajwal Revanna Case: ಗಂಡ, ಮಗನ ಕೇಸ್‌ನಿಂದ ಭವಾನಿ ರೇವಣ್ಣಗೂ ಕಾನೂನು ಕಂಟಕ?

Boat Capsize
ವೈರಲ್ ನ್ಯೂಸ್1 hour ago

Boat Capsizes: ಜಲಾವೃತ ಸೇತುವೆಗೆ ದೋಣಿ ಡಿಕ್ಕಿ; ಶಾಕಿಂಗ್‌ ವಿಡಿಯೋ ವೈರಲ್‌

T20 World Cup 2024
ಕ್ರೀಡೆ2 hours ago

T20 World Cup 2024: ಟಿ20 ವಿಶ್ವಕಪ್​ಗೆ ಪಾಕ್​ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ

Megha Dhade bigg boss marathi winner crptic post about rahul gandhi
ಸಿನಿಮಾ2 hours ago

Megha Dhade: ನಮ್ಮ ದೇಶ ಬಿಟ್ಟು ನರಕಕ್ಕೆ ಹೋಗಿ ಎಂದು ರಾಹುಲ್‌ ಗಾಂಧಿ ವಿರದ್ಧ ʻಬಿಗ್‌ ಬಾಸ್‌ʼ ವಿಜೇತೆ ಆಕ್ರೋಶ!

Prajwal Revanna Case
ಕರ್ನಾಟಕ2 hours ago

Prajwal Revanna Case: ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

Sunil Narine
ಕ್ರೀಡೆ2 hours ago

Sunil Narine: ಅತ್ಯಧಿಕ ಸಿಕ್ಸರ್​ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನೀಲ್​ ನರೈನ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ6 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ15 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ17 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ17 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌