Job Alert: ಉದ್ಯೋಗ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಬಿಬಿಎಂಪಿಯಿಂದ ಬರೋಬ್ಬರಿ 11,307 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - Vistara News

ಉದ್ಯೋಗ

Job Alert: ಉದ್ಯೋಗ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಬಿಬಿಎಂಪಿಯಿಂದ ಬರೋಬ್ಬರಿ 11,307 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Job Alert: ಬೆಂಗಳೂರಿನಲ್ಲೇ ಕೆಲಸ ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್‌. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಬರೋಬ್ಬರಿ 11,307 ಡಿ ಗ್ರೂಪ್‌ನ ಪೌರ ಕಾರ್ಮಿಕರ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದೆ. ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 15. ಈ ಹುದ್ದೆಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಮಾತನಾಡಲು ತಿಳಿದಿರುವವರು ಅರ್ಜಿ ಸಲ್ಲಿಸಬಹುದು.

VISTARANEWS.COM


on

Job Alert
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಘನತ್ಯಾಜ್ಯ ನಿರ್ವಹಣೆ ಹಾಗೂ ವಿವಿಧ ಸ್ವಚ್ಛತಾ ಕಾರ್ಯಗಳ ನಿರ್ವಹಣೆಗಾಗಿ ಬರೋಬ್ಬರಿ 11,307 ಡಿ ಗ್ರೂಪ್‌ನ ಪೌರ ಕಾರ್ಮಿಕರ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದೆ (BBMP Recruitment 2024). ಘನತ್ಯಾಜ್ಯ ನಿರ್ವಹಣೆ ವಿಭಾಗದಡಿ ನೇಮಕಾತಿ ನಡೆಯಲಿದೆ. ಕನ್ನಡ ಬಲ್ಲವರು ಅರ್ಜಿ ಸಲ್ಲಿಸಬಹುದು. ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 15 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸ್ಥಳೀಯ ವೃಂದದ-ಹುದ್ದೆಗಳು, ಕಲ್ಯಾಣ ಕರ್ನಾಟಕ (KK)-905 ಮತ್ತು ಉಳಿಕೆ ಮೂಲ ವೃಂದ (RPC)-10,402 ಹುದ್ದೆಗಳಿವೆ. ಈ ಹುದ್ದೆಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಮಾತನಾಡಲು ತಿಳಿದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷ. ಅಭ್ಯರ್ಥಿಗಳು ಭಾರತೀಯ ನಾಗರೀಕರಾಗಿರಬೇಕು. ಬಿಬಿಎಂಪಿಯಲ್ಲಿ ನೇರ ಪಾವತಿ / ಕ್ಷೇಮಾಭಿವೃದ್ಧಿ / ದಿನಗೂಲಿ ಆಧಾರದಲ್ಲಿ ಎರಡು ವರ್ಷ ಕಡಿಮೆ ಇಲ್ಲದಂತೆ, ನಿರಂತರವಾಗಿ ಕೆಲಸ ನಿರ್ವಹಿಸಿರುವ ಮತ್ತು ಎರಡು ವರ್ಷಗಳಿಗೂ ಮೇಲ್ಪಟ್ಟು ಪಾಲಿಕೆಯಿಂದ ವೇತನ ಪಡೆಯುವವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಆಯ್ಕೆಯಾದವರಿಗೆ 17,000 ರೂ. – 28,950 ರೂ. ಮಾಸಿಕ ವೇತನ ದೊರೆಯಲಿದೆ.

BBMP Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ bbmp.gov.in.ಗೆ ಭೇಡಿ ನೀಡಿ.
  • ಈಗ ತೆರೆದುಕೊಳ್ಳುವ ಹೋಮ್‌ಪೇಜ್‌ನಲ್ಲಿ ಕಂಡು ಬರುವ ಪೌರಕಾರ್ಮಿಕರ ಹುದ್ದೆಗಳ ಅರ್ಜಿ ನಮೂನೆ Click here to View ಆಯ್ಕೆಯನ್ನು ಕ್ಲಿಕ್‌ ಮಾಡಿ.
  • ಈಗ ಕಂಡು ಬರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿ.
  • ಪ್ರಿಂಟ್‌ಔಟ್‌ ತೆಗೆದು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅದರಲ್ಲಿ ಕೇಳಿರುವ ದಾಖಲೆಗಳನ್ನು ಲಗತ್ತಿಸಿ.
  • ಭರ್ತಿ ಮಾಡಿದ ಅರ್ಜಿಯನ್ನು N.R. Square, Bengaluru -560002, Karnataka ಇಲ್ಲಿಗೆ ಸಲ್ಲಿಸಿ.

ಇದನ್ನೂ ಗಮನಿಸಿ

  • ಈ ಹುದ್ದೆಗಳಿಗೆ ಯಾವುದೇ ಸಂದರ್ಶನ ನಿಗದಿಪಡಿಸಿಲ್ಲ.
  • ಅಪೂರ್ಣ ಅರ್ಜಿಗಳನ್ನು ಕಡ್ಡಾಯವಾಗಿ ಸ್ವೀಕರಿಸುವುದಿಲ್ಲ.
  • ಅರ್ಜಿಯೊಂದಿಗೆ ಕಡ್ಡಾಯವಾಗಿ ದಾಖಲೆಗಳನ್ನು ಲಗತ್ತಿಸಬೇಕು.
  • ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಪತ್ನಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದಿಲ್ಲ.
  • ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್‌ ಹಿನ್ನೆಲೆ ಹೊಂದಿರಬಾರದು.
  • ಈಗಾಗಲೇ ಗಂಭೀರ ಪ್ರಕರಣದ ಕಾರಣದಿಂದ ಕರ್ತವ್ಯದಿಂದ ತೆಗೆದು ಹಾಕಿರಬಾರದು.

ಇದನ್ನೂ ಓದಿ: Job Alert: ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನಲ್ಲಿದೆ 4,660 ಹುದ್ದೆ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Google Layoff: ವಿಶ್ವದ ಅತಿದೊಡ್ಡ ಟೆಕ್ ಕಂಪನಿ ಎನಿಸಿಕೊಂಡಿರುವ ಆಲ್ಫಾಬೆಟ್‌ ಇಂಕ್‌ ಒಡೆತನದ ಗೂಗಲ್‌ ಮತ್ತೆ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಗೂಗಲ್ ತನ್ನ ʼಕೋರ್ ತಂಡʼದಿಂದ ಸುಮಾರು 200 ಉದ್ಯೋಗಿಗಳನ್ನು ಕೈ ಬಿಟ್ಟಿದೆ. ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಂಜಿನಿಯರಿಂಗ್ ತಂಡದಿಂದ ಕನಿಷ್ಠ 50 ಉದ್ಯೋಗಿಗಳನ್ನು ವಜಾಗೊಳಿಸಲಾಗಿದ್ದು, ಭಾರತ ಮತ್ತು ಮೆಕ್ಸಿಕೊದಲ್ಲಿನ ಈ ಸ್ಥಾನಗಳಿಗೆ ಬದಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಕೆಲಸದಿಂದ ವಜಾಗೊಳಿಸಲ್ಪಟ್ಟ ಕಾರ್ಮಿಕರು ಕಂಪನಿಯಲ್ಲಿ ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕೃತರು ಮಾಹಿತಿ ನೀಡಿದ್ದಾರೆ.

VISTARANEWS.COM


on

Google Layoff
Koo

ನವದೆಹಲಿ: ವಿಶ್ವದ ಅತಿದೊಡ್ಡ ಟೆಕ್ ಕಂಪನಿ ಎನಿಸಿಕೊಂಡಿರುವ ಆಲ್ಫಾಬೆಟ್‌ ಇಂಕ್‌ ಒಡೆತನದ ಗೂಗಲ್‌ ಮತ್ತೆ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ (Google Layoff). ಗೂಗಲ್ ತನ್ನ ʼಕೋರ್ ತಂಡʼದಿಂದ ಸುಮಾರು 200 ಉದ್ಯೋಗಿಗಳನ್ನು ಕೈ ಬಿಟ್ಟಿದೆ. ಮಾತ್ರವಲ್ಲ ಕಂಪನಿಯು ತನ್ನ ಪುನರ್‌ ರಚನೆ ಪ್ರಕ್ರಿಯೆಯನ್ನು ಮುಂದುವರಿಸುತ್ತಿರುವುದರಿಂದ ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ ಕೆಲವು ಉದ್ಯೋಗಗಳನ್ನು ವಿದೇಶಕ್ಕೆ ಸ್ಥಳಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.

ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಂಜಿನಿಯರಿಂಗ್ ತಂಡದಿಂದ ಕನಿಷ್ಠ 50 ಉದ್ಯೋಗಿಗಳನ್ನು ವಜಾಗೊಳಿಸಲಾಗಿದ್ದು, ಭಾರತ ಮತ್ತು ಮೆಕ್ಸಿಕೊದಲ್ಲಿನ ಈ ಸ್ಥಾನಗಳಿಗೆ ಬದಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಗೂಗಲ್‌ನ ʼಕೋರ್ ತಂಡʼವು ಬಳಕೆದಾರರ ಸುರಕ್ಷತೆಗೆ ಕಾರ್ಯ ನಿರ್ವಹಿಸುತ್ತದೆ. ಜತೆಗೆ ತಾಂತ್ರಿಕ ಅಡಿಪಾಯವನ್ನು ಅಭಿವೃದ್ಧಿ ಪಡಿಸುತ್ತದೆ.

ಅಧಿಕೃತರು ಹೇಳಿದ್ದೇನು?

ಗೂಗಲ್ ಡೆವಲಪರ್ ಇಕೋಸಿಸ್ಟಮ್‌ನ ಉಪಾಧ್ಯಕ್ಷ ಅಸಿಮ್ ಹುಸೇನ್ ಕಳೆದ ವಾರ ಇಮೇಲ್‌ ಮೂಲಕ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ್ದರು. ಇದು ತಮ್ಮ ತಂಡದ ಅತಿದೊಡ್ಡ ಉದ್ಯೋಗಿಗಳ ಕಡಿತ ಎಂದು ಮೂಲಗಳು ತಿಳಿಸಿವೆ. ಕೆಲಸದಿಂದ ವಜಾಗೊಳಿಸಲ್ಪಟ್ಟ ಕಾರ್ಮಿಕರು ಕಂಪನಿಯಲ್ಲಿ ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕೃತರು ಹೇಳಿದ್ದಾರೆ. ಬೆಂಗಳೂರು, ಮೆಕ್ಸಿಕೊ ಮತ್ತು ಡಬ್ಲಿನ್‌ ನಗರಗಳಲ್ಲಿ ಕಂಪನಿಯ ಕಾರ್ಯಾಚರಣೆ ವಿಸ್ತರಿಸಲು ನಿರ್ಧರಿಸಿದೆ.

ಹಿಂದೆಯೂ ನಡೆದಿತ್ತು ಉದ್ಯೋಗ ಕಡಿತ

ಕೆಲವು ದಿನಗಳ ಹಿಂದೆಯೂ ಗೂಗಲ್‌ ಹಲವು ಉದ್ಯೋಗಿಗಳನ್ನು ಕಡಿತಗೊಳಿಸಿತ್ತು. ಕೃತಕ ಬುದ್ಧಿಮತ್ತೆ ಹಾಗೂ ಸ್ವಯಂಚಾಲಿತ ವ್ಯವಸ್ಥೆಯ ಅಳವಡಿಕೆಗೆ ಕಂಪನಿ ಮುಂದಾಗಿದೆ. ಹೀಗಾಗಿ ಈ ವರ್ಷದ ಜನವರಿಯಲ್ಲಿ ಎಂಜಿನಿಯರಿಂಗ್‌, ಹಾರ್ಡ್‌ವೇರ್‌ ಮತ್ತು ಅಸಿಸ್ಟಂಟ್‌ ಟೀಮ್‌ ವಿಭಾಗಗಳಿಂದ ಹಲವು ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಆ ವೇಳೆ ನೂರಾರು ಹಾರ್ಡ್‌ವೇರ್‌ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು. ಪಿಕ್ಸೆಲ್ (Pixel), ನೆಸ್ಟ್ (Nest) ಮತ್ತು ಫಿಟ್‌ಬಿಟ್‌ (Fitbit)ನಂತಹ ಉತ್ಪನ್ನಗಳನ್ನು ಮೇಲ್ವಿಚಾರಣೆ ಮಾಡುವ ಗೂಗಲ್ ತನ್ನ ತಂಡಗಳ ಪುನರ್‌ ವಿಂಗಡಣೆಗೆ ಮುಂದಾಗಿದ್ದು, ಅದರ ಭಾಗವಾಗಿ ಈ ಉದ್ಯೋಗ ಕಡಿತ ನಡೆದಿತ್ತು.

“1ಪಿ ಎಆರ್ (1P AR) ಹಾರ್ಡ್‌ವೇರ್‌ ತಂಡದ ಮೇಲೆ ಪರಿಣಾಮ ಬೀರುವ ಡಿಎಸ್‌ಪಿಎ(ಡಿವೈಸಸ್‌ & ಸರ್ವಿಸಸ್‌) ಯಲ್ಲಿನ ನೂರಾರು ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ. ನಮ್ಮ 1ಪಿ ಎಆರ್ ಹಾರ್ಡ್‌ವೇರ್ ತಂಡದಲ್ಲಿ ಬದಲಾವಣೆಗಳನ್ನು ಕೈಗೊಳ್ಳಲಾಗುತ್ತಿದೆʼʼ ಎಂದು ಗೂಗಲ್ ವಕ್ತಾರರು ತಿಳಿಸಿದ್ದರು. “ಫಿಟ್‌ಬಿಟ್‌ ಬಳಕೆದಾರರಿಗೆ ಉತ್ತಮ ಸೇವೆ ಸಲ್ಲಿಸಲು ಕಂಪನಿ ಬದ್ಧವಾಗಿದೆ. ವೈಯಕ್ತಿಕ ಎಐನೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಹೊಸತನವನ್ನು ತರಲು ಮತ್ತು ಪಿಕ್ಸೆಲ್ ವಾಚ್, ಮರುವಿನ್ಯಾಸಗೊಳಿಸಿದ ಫಿಟ್‌ಬಿಟ್‌ ಅಪ್ಲಿಕೇಶನ್, ಫಿಟ್‌ಬಿಟ್‌ ಪ್ರೀಮಿಯಂ ಸೇವೆ ಮತ್ತು ಫಿಟ್‌ಬಿಟ್‌ ಟ್ರ್ಯಾಕರ್ ಲೈನ್‌ನೊಂದಿಗೆ ಎಂದಿನೊಂದಿಗೆ ಕಾರ್ಯ ನಿರ್ವಹಿಸಲಿದೆʼʼ ಎಂದು ಕಂಪನಿ ಭರವಸೆ ನೀಡಿತ್ತು.

ಇದನ್ನೂ ಓದಿ: Tech Layoffs: 453 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಗೂಗಲ್ ಇಂಡಿಯಾ! ಇನ್ನಷ್ಟು ಜಾಬ್ ಕಡಿತ?

ಗೂಗಲ್ ಮಾತೃಸಂಸ್ಥೆಯಾಗಿರುವ ಆಲ್ಫಾಬೆಟ್ ಇಂಕ್ ಕೆಲವು ತಿಂಗಳ ಹಿಂದೆ ಒಟ್ಟು ಉದ್ಯೋಗಿಗಳ ಪೈಕಿ ಶೇ. 6 ಅಥವಾ 12000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಅದಾಗಿ ಕೆಲವೆ ತಿಂಗಳಲ್ಲಿ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. 2023ರ ಸೆಪ್ಟೆಂಬರ್‌ನಲ್ಲಿ ಬಂದ ವರದಿ ಪ್ರಕಾರ ಆಲ್ಫಾಬೆಟ್ ಕಂಪೆನಿಯಲ್ಲಿ ಸುಮಾರು 1,80,000 ಉದ್ಯೋಗಿಗಳಿದ್ದರು.

Continue Reading

ಉದ್ಯೋಗ

Job Alert: ಗಮನಿಸಿ; ಹಟ್ಟಿ ಚಿನ್ನದ ಗಣಿ ಕಂಪನಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

Job Alert: ಭಾರತದ ಚಿನ್ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪೆನಿ ಅಸಿಸ್ಟಂಟ್‌ ಫಾರ್‌ಮನ್‌, ಐಟಿಐ ಫಿಟ್ಟರ್‌, ಲ್ಯಾಬ್‌ ಅಸಿಸ್ಟಂಟ್‌ ಸೇರಿದಂತೆ ಸುಮಾರು 168 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ನಾಳೆ (ಮೇ 3) ಕೊನೆಯ ದಿನ. ಐಟಿಐ, ಡಿಪ್ಲೋಮಾ, ಪದವಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು.

VISTARANEWS.COM


on

Job Alert
Koo

ಬೆಂಗಳೂರು: ಭಾರತದ ಚಿನ್ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪೆನಿ (Hutti Gold Mines Company Limited)ಯು ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (HGML Recruitment 2024). ಅಸಿಸ್ಟಂಟ್‌ ಫಾರ್‌ಮನ್‌, ಐಟಿಐ ಫಿಟ್ಟರ್‌, ಲ್ಯಾಬ್‌ ಅಸಿಸ್ಟಂಟ್‌ ಸೇರಿದಂತೆ ಸುಮಾರು 168 ಹುದ್ದೆಗಳಿವೆ. ಐಟಿಐ, ಡಿಪ್ಲೋಮಾ, ಪದವಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ನಾಳೆ (ಮೇ 3). ಹೀಗಾಗಿ ಬೇಗ ಅಪ್ಲೈ ಮಾಡಿ (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಅಸಿಸ್ಟೆಂಟ್ ಫಾರ್‌ಮನ್‌ (ಗಣಿ)- 16 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಅಸಿಸ್ಟೆಂಟ್ ಫಾರ್‌ಮನ್‌ (ಮೆಟಲರ್ಜಿ)- 7 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಲ್ಯಾಬ್ ಅಸಿಸ್ಟೆಂಟ್- 1 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಅಸಿಸ್ಟೆಂಟ್ ಫಾರ್‌ಮನ್‌ (ಜಿಯಾಲಜಿ)- 3 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಅಸಿಸ್ಟೆಂಟ್ ಫಾರ್‌ಮನ್‌ (ಡೈಮಂಡ್ ಡ್ರಿಲ್ಲಿಂಗ್ / ಅಂಡರ್ ಗ್ರೌಂಡ್)- 2 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಅಸಿಸ್ಟೆಂಟ್ ಫಾರ್‌ಮನ್‌ (ಮೆಕ್ಯಾನಿಕಲ್)- 19 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಐಟಿಐ ಫಿಟ್ಟರ್ (ಗಣಿಗಾರಿಕೆ)- 56 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್‌ ಫಿಟ್ಟರ್‌
ಐಟಿಐ ಫಿಟ್ಟರ್ (ಮೆಟಲ್)- 26 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್‌ ಫಿಟ್ಟರ್‌
ಐಟಿಐ ಎಲೆಕ್ಟ್ರಿಕಲ್- 4 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್‌ ಎಲೆಕ್ಟ್ರಿಕಲ್
ಅಸಿಸ್ಟೆಂಟ್ ಫಾರ್‌ಮನ್‌ (ಸಿವಿಲ್)- 1 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಅಸಿಸ್ಟೆಂಟ್ ಫಾರ್‌ಮನ್‌ (ಎಲೆಕ್ಟ್ರಿಕಲ್)- 1 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ
ಸೆಕ್ಯುರಿಟಿ ಇನ್ಸ್‌ಪೆಕ್ಟರ್‌- 6 ಹುದ್ದೆ, ವಿದ್ಯಾರ್ಹತೆ: ಪದವಿ
ಐಟಿಐ ಫಿಟ್ಟರ್ (ಸರ್ವೆ)- 2 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್‌ ಫಿಟ್ಟರ್‌
ಸೆಕ್ಯುರಿಟಿ ಗಾರ್ಡ್- 24 ಹುದ್ದೆ, ವಿದ್ಯಾರ್ಹತೆ: ದ್ವಿತೀಯ ಪಿಯುಸಿ

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ- 1 ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 600 ರೂ., ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 300 ರೂ. ಮತ್ತು ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕರು / ಪಿಡಬ್ಲ್ಯುಡಿ ಅಭ್ಯರ್ಥಿಗಳು 100 ರೂ. ಅನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 20,920 ರೂ. – 48,020 ರೂ. ಮಾಸಿಕ ವೇತನ ಸಿಗಲಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ (ಉಳಿಕೆ ಮೂಲ / ಸ್ಥಳೀಯೇತರ ವೃಂದ).

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ (ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದ).

ಅರ್ಜಿ ಸಲ್ಲಿಸಲು ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಫೋನ್‌ ನಂಬರ್‌, ಇಮೇಲ್‌ ವಿಳಾಸ ನೀಡಿ ಹೆಸರು ನೋಂದಾಯಿಸಿ.
  • HGML Assistant Foreman, ITI Fitter Apply Online ಲಿಂಕ್‌ ಕ್ಲಿಕ್‌ ಮಾಡಿ
  • ಅಗತ್ಯ ಮಾಹಿತಿಗಳನ್ನು ಎಚ್ಚರಿಕೆಯಿಂದ ತುಂಬಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಮತ್ತೊಮ್ಮೆ ಖಚಿತ ಪಡಿಸಿ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: Job Alert: 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆ ಖಾಲಿ ಇದೆ; ಮೇ 2ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading

ಉದ್ಯೋಗ

Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ

Job Alert: ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್‌ 36 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 20. ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 70,000-1,00,000 ರೂ. ಮಾಸಿಕ ವೇತನ ದೊರೆಯಲಿದೆ.

VISTARANEWS.COM


on

Job Alert
Koo

ಬೆಂಗಳೂರು: ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್‌ (Neyveli Lignite Corporation Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (NLC Recruitment 2024). ಸುಮಾರು 36 ಎಕ್ಸಿಕ್ಯೂಟಿವ್‌ ಹುದ್ದೆಗಳಿದ್ದು, ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 20 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಕ್ಸಿಕ್ಯೂಟಿವ್‌-ಆಪರೇಷನ್‌: 24 ಮತ್ತು ಎಕ್ಸಿಕ್ಯೂಟಿವ್‌-ಮೈಂಟೆನೆನ್ಸ್‌: 12 ಹುದ್ದೆಗಳಿವೆ.
ಎಕ್ಸಿಕ್ಯೂಟಿವ್‌-ಆಪರೇಷನ್‌ ಹುದ್ದೆಗೆ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಎಕ್ಸಿಕ್ಯೂಟಿವ್‌-ಮೈಂಟೆನೆನ್ಸ್‌ ಹುದ್ದೆಗೆ ಸಿವಿಲ್/ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಹರು.

ವಯೋಮಿತಿ ಮತ್ತು ಅರ್ಜಿ ಶುಲ್ಕ

Neyveli Lignite Corporation Limited recruitment ಅಧಿಸೂಚನೆ ಪ್ರಕಾರ ಗರಿಷ್ಠ ವಯೋಮಿತಿ 63 ವರ್ಷ. ಅರ್ಜಿ ಶುಲ್ಕವಾಗಿ ಮಾಜಿ ಯೋಧರು / ಎಸ್‌ಸಿ / ಎಸ್‌ಟಿ ವರ್ಗಕ್ಕೆ ಸೇರಿದವರು 354 ರೂ. ಮತ್ತು ಸಾಮಾನ್ಯ / ಇಡಬ್ಲ್ಯುಎಸ್‌ / ಒಬಿಸಿ ವಿಭಾಗದವರು 854 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ಪಾವತಿ ಮಾರ್ಗ ಅನುಸರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 70,000-1,00,000 ರೂ. ಮಾಸಿಕ ವೇತನ ದೊರೆಯಲಿದೆ. ಒಂದು ವರ್ಷದ ಅವಧಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಆಯ್ಕೆ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಹೆಸರು ನೊಂದಾಯಿಸಿ.
  • NLC Executive Apply Online ಆಯ್ಕೆ ಕ್ಲಿಕ್‌ ಮಾಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಫೋಟೊಗಳನ್ನು ಸೂಚಿಸಿದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸರಿಯಾಗಿದ್ದರೆ ಅರ್ಜಿ ಸಲ್ಲಿಸಿ. ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಅಪ್‌ಲೋಡ್‌ ಮಾಡಬೇಕಾದ ದಾಖಲೆಗಳು

  • ಫೋಟೊ ಹೈ ಕ್ವಾಲಿಟಿಯಲ್ಲಿದ್ದು, 2023ರ ಅಕ್ಟೋಬರ್‌ 1ರ ಬಳಿಕ ತೆಗೆದಿರಬೇಕು.
  • ಅತ್ಯುತ್ತಮ ಕ್ಲಾಲಿಟಿಯ ಅಭ್ಯರ್ಥಿಯ ಸಹಿಯ ಫೋಟೊ.
  • ಹುಟ್ಟಿದ ದಿನಾಂಕವನ್ನು ಖಾತರಿಪಡಿಸುವ ದಾಖಲೆ.
  • ಎಸ್ಸೆಸ್ಸೆಲ್ಸಿ / ಶೈಕ್ಷಣಿಕ ಪ್ರಮಾಣ ಪತ್ರ.
  • ಆಧಾರ್‌ ಕಾರ್ಡ್‌ನ ಪ್ರತಿ.
  • ಜಾತಿ ಸರ್ಟಿಫಿಕೆಟ್‌.
  • ಮಾಜಿ ಯೋಧರಾಗಿದ್ದರೆ ಅದರ ದಾಖಲೆ.
  • ಫೋಟೊ ಮತ್ತು ಸಹಿಯ ಫೋಟೊ JPEG ಫಾರ್ಮಾಟ್‌ನಲ್ಲಿರಬೇಕು.
  • ದಾಖಲೆಗಳು, ಡಾಕ್ಯುಮೆಂಟ್‌ JPEG ಅಥವಾ PDF ಫಾರ್ಮಾಟ್‌ನಲ್ಲಿರುವುದು ಕಡ್ಡಾಯ.

ಅಪೂರ್ಣ ಅಪ್ಲಿಕೇಷನ್‌ ತಿರಸ್ಕೃರಿಸಲಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಭರ್ತಿ ಮಾಡಬೇಕು ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ: Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ

Continue Reading

ಪ್ರಮುಖ ಸುದ್ದಿ

Labour Day : ಮೇ 1ರಂದೇ ಕಾರ್ಮಿಕ ದಿನ ಆಚರಿಸುವುದು ಯಾಕೆ? ರಜೆ ಕೊಡಲು ಶುರು ಮಾಡಿದ್ದು ಯಾವಾಗ?

Labour Day: ಸಮಾಜಕ್ಕೆ ಕಾರ್ಮಿಕರ ಅಗತ್ಯತೆ ದೊಡ್ಡದು. ಹೀಗಾಗಿ ಅವರ ಹಕ್ಕುಗಳ ಬಗ್ಗೆಯೂ ಗಮನ ಹರಿಸಬೇಕು. ಹೀಗಾಗಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಪ್ರಪಂಚದಾದ್ಯಂತದ ಕಾರ್ಮಿಕರು ತಮ್ಮ ಸಾಧನೆಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ.

VISTARANEWS.COM


on

labour Day
Koo

ಬೆಂಗಳೂರು: ಕಾರ್ಮಿಕರು ಯಾವುದೇ ಸಮಾಜ ಅಥವಾ ದೇಶದ ಶಕ್ತಿ. ಅವರಿಂದಲೇ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ಕಾರ್ಮಿಕರು ರಾಷ್ಟ್ರೀಯ ಸಂಪತ್ತು. ಹೀಗೆ ಹಲವು ರೀತಿಯಲ್ಲಿ ಸಮಾಜದ ಅಭಿವೃದ್ಧಿಗೆ ನೆರವಾ ಗುವ ಕಾರ್ಮಿಕರಿಗಾಗಿಯೇ ಒಂದು ದಿನವಿದೆ. ಅದುವೇ ಕಾರ್ಮಿಕರ ದಿನ. ಅಂದರೆ ಮೇ1. ಜಗತ್ತಿನ ಹಲವಾರು ದೇಶಗಳಲ್ಲಿ ಕಾರ್ಮಿಕ ದಿನವನ್ನು (Labour Day ) ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ. ಈ ಸಂದರ್ಭವನ್ನು ‘ಮೇ ದಿನ’ ಅಥವಾ ಕಾರ್ಮಿಕರ ದಿನ ಎಂದೂ ಕರೆಯಲಾಗುತ್ತದೆ. ಈ ದಿನವನ್ನು ಕೆಲಸ ಮಾಡುವವರಿಗೆ ವಿಶ್ರಾಂತಿ ದಿನವಾಗಿ ಆಚರಿಸಲಾಗುತ್ತದೆ

ಸಮಾಜಕ್ಕೆ ಕಾರ್ಮಿಕರ ಅಗತ್ಯತೆ ದೊಡ್ಡದು. ಹೀಗಾಗಿ ಅವರ ಹಕ್ಕುಗಳ ಬಗ್ಗೆಯೂ ಗಮನ ಹರಿಸಬೇಕು. ಹೀಗಾಗಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಪ್ರಪಂಚದಾದ್ಯಂತದ ಕಾರ್ಮಿಕರು ತಮ್ಮ ಸಾಧನೆಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ. ಕಾರ್ಮಿಕ ದಿನವನ್ನು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದ ಇತಿಹಾಸ, ಮಹತ್ವ ಅರಿಯೋಣ.

ಅಂತಾರಾಷ್ಟ್ರೀಯ ಕಾರ್ಮಿಕ ದಿನ 2024 ಇತಿಹಾಸ

ಅಂತಾರರಾಷ್ಟ್ರೀಯ ಕಾರ್ಮಿಕ ದಿನದ ಇತಿಹಾಸವು 1889 ರಲ್ಲಿ ಯುರೋಪ್, ಪ್ಯಾರಿಸ್​​ನಲ್ಲಿ ನಡೆದ ಸೋಶಿಯಲಿಸ್ಟ್​ ಪಾರ್ಟಿಗಳ ಮೊದಲ ಸಭೆ (ಇಂಟರ್​ನ್ಯಾಷನಲ್​ ಕಾಂಗ್ರೆಸ್​​) ಮೇ 1 ರಂದು ನಡೆಯಿತು. ಅದನ್ನು ಕಾರ್ಮಿಕರಿಗೆ ಸಮರ್ಪಿಸಲು ಮತ್ತು ಅದನ್ನು ಅಂತರರಾಷ್ಟ್ರೀಯ ಕಾರ್ಮಿಕ ದಿನ ಎಂದು ಘೋಷಣೆ ಮಾಡಲಾಯಿತು. 1886 ರಲ್ಲಿ, ಅಮೆರಿಕದ ಕೆಲವು ಭಾಗಗಳಲ್ಲಿ ಕಾರ್ಮಿಕರು ಗರಿಷ್ಠ ಎಂಟು ಗಂಟೆಗಳ ಕೆಲಸದ ದಿನಕ್ಕೆ ಒತ್ತಾಯಿಸಿ ಮುಷ್ಕರ ನಡೆಸಿದ್ದರು. ಮುಷ್ಕರದ ಮೂರನೇ ದಿನ ಚಿಕಾಗೋದಲ್ಲಿ ಹಿಂಸಾಚಾರ ಉಂಟಾಯಿತು. ಈ ಘಟನೆಯನ್ನು ‘ದಿ ಹೇಮಾರ್ಕೆಟ್ ಅಫೇರ್’ ಎಂದು ಕರೆಯಲಾಯಿತು. ಇದು ಅಂತರರಾಷ್ಟ್ರೀಯ ಕಾರ್ಮಿಕ ದಿನದ ಸ್ಥಾಪನೆಗೆ ಕಾರಣವಾಯಿತು.

ಅಂತಾರಾಷ್ಟ್ರೀಯ ಕಾರ್ಮಿಕ ದಿನ 2024 ಮಹತ್ವ

ಕಾರ್ಮಿಕರ ಹೋರಾಟ ಮತ್ತು ಕಠಿಣ ಪರಿಶ್ರಮವನ್ನು ಗುರುತಿಸುವುದು, ಅವರ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದು ಅವರನ್ನು ಶೋಷಣೆಗೆ ಒಳಗಾಗದಂತೆ ತಡೆಯುವುದು ಕಾರ್ಮಿಕ ದಿನಾಚರಣೆಯ ಉದ್ದೇಶ. ಈ ಸಂದರ್ಭದಲ್ಲಿ, ಕಾರ್ಮಿಕರು ನ್ಯಾಯಯುತ ವೇತನ ಮತ್ತು ಉತ್ತಮ ಕೆಲಸದ ಪರಿಸ್ಥಿತಿಗಳಿಗೆ ಒತ್ತಾಯಿಸಿ ಬೀದಿಗಳಲ್ಲಿ ಜಾಥಾ ನಡೆಸುತ್ತಾರೆ. ಮೇ ದಿನದಿಂದ ಕಾರ್ಮಿಕರು ಮತ್ತು ಕಾರ್ಮಿಕ ಚಳುವಳಿಯು ಮಾಡಿದ ಐತಿಹಾಸಿಕ ಹೋರಾಟಗಳು ಮತ್ತು ಲಾಭಗಳನ್ನು ಸ್ಮರಿಸಲಾಗುತ್ತದೆ.

ಇದನ್ನೂ ಓದಿ: Labour Day 2024: ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳಿವು

ಅಂತಾರಾಷ್ಟ್ರೀಯ ಕಾರ್ಮಿಕ ದಿನ 2024 ಧ್ಯೇಯ

ಪ್ರತಿ ವರ್ಷ, ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಆಚರಣೆಗಾಗಿ ಹೊಸ ಥೀಮ್ ಅನ್ನು ಘೋಷಿಸಲಾಗುತ್ತದೆ. ಬದಲಾಗುತ್ತಿರುವ ಹವಾಮಾನದಲ್ಲಿ ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು ಈ ವರ್ಷದ ಧ್ಯೇಯ.

ಕಾರ್ಮಿಕರ ದಿನದ ಬಗ್ಗೆ ವಾಸ್ತವಾಂಶಗಳು

ಮೊದಲ ಬಾರಿಗೆ ಯುಎಸ್ ಕಾರ್ಮಿಕ ದಿನವನ್ನು ಸೆಪ್ಟೆಂಬರ್ 5, 1882ರ ಮಂಗಳವಾರ ನ್ಯೂಯಾರ್ಕ್ ನಗರದಲ್ಲಿ ಕೇಂದ್ರ ಕಾರ್ಮಿಕ ಒಕ್ಕೂಟವು ಯೋಜಿಸಿತು. ಕಾರ್ಮಿಕ ಚಳುವಳಿಯನ್ನು ಗೌರವಿಸುವ ದಿನವನ್ನು ಆಯೋಜಿಸುವ ಕಲ್ಪನೆ ಕೆನಡಾದಲ್ಲಿ ಹುಟ್ಟಿತು. 1872 ರಲ್ಲಿ ಮುಷ್ಕರ ನಿರತ ಕಾರ್ಮಿಕರಿಗೆ ಬೆಂಬಲವನ್ನು ತೋರಿಸಲು ಅವರು ‘ಒಂಬತ್ತು ಗಂಟೆಗಳ ಚಳುವಳಿ’ ನಡೆಸಿದರು.

ಒರೆಗಾನ್ 1887 ರಲ್ಲಿ ಕಾರ್ಮಿಕ ದಿನವನ್ನು ಕಾನೂನುಬದ್ಧ ರಜಾದಿನವಾಗಿ ಆಚರಿಸಿದ ಮೊದಲ ದೇಶ . 19ನೇ ಶತಮಾನದಲ್ಲಿ ಅಮೆರಿಕನ್ನರು ವಾರದಲ್ಲಿ ಏಳು ದಿನ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ನ್ಯೂಯಾರ್ಕ್ ನಗರದಲ್ಲಿ ಮೊದಲ ಬಾರಿ ಮೆರವಣಿಗೆ ನಡೆಸಿದ ಜಾಗದಲ್ಲಿ ಇನ್ನೂ ಕಾರ್ಮಿಕ ದಿನದ ಮೆರವಣಿಗೆ ಮಾಡಲಾಗುತ್ತದೆ. 1882 ರ ಕಾರ್ಮಿಕ ಮೆರವಣಿಗೆಯ ಉತ್ತರದ 20 ಬ್ಲಾಕ್​​ಗಳಲ್ಲಿನಡೆಯುತ್ತದೆ.

Continue Reading
Advertisement
United Nations
ವಿದೇಶ4 mins ago

United Nations: ಪಾಕಿಸ್ತಾನ ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ ಹೊಂದಿವೆ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

Karnataka Weather Forecast
ಮಳೆ9 mins ago

Karnataka Weather Forecast : ರಾಯಚೂರಲ್ಲಿ ಬಿಸಿಲಾಜ್ಞೆ; ಮಧ್ಯಾಹ್ನ 12-4ರ ವರೆಗೆ ಹೊರಬರದಂತೆ ಡಿಸಿ ಕಟ್ಟಾಜ್ಞೆ!

Rashmika Mandanna's younger sister Shiman
ಟಾಲಿವುಡ್21 mins ago

Rashmika Mandanna: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ತಂಗಿ ಈಗ ಹೇಗಿದ್ದಾರೆ?

Prajwal Revanna Case Wherever Prajwal escapes we will pick him up says CM Siddaramaiah
ಕ್ರೈಂ24 mins ago

Prajwal Revanna Case: ಪ್ರಜ್ವಲ್ ದುಬೈ ಅಲ್ಲ, ಎಲ್ಲಿ ಎಸ್ಕೇಪ್‌ ಆದ್ರೂ ಅಲ್ಲಿಂದ್ಲೇ ಹಿಡಿದುಕೊಂಡು ಬರುತ್ತೇವೆ: ಸಿಎಂ ಸಿದ್ದರಾಮಯ್ಯ

Devon Thomas
ಕ್ರೀಡೆ31 mins ago

Devon Thomas: ಟಿ20 ವಿಶ್ವಕಪ್​ಗೂ ಮುನ್ನ ವಿಂಡೀಸ್​ ಬ್ಯಾಟರ್​ಗೆ 5 ವರ್ಷ ನಿಷೇಧ ಹೇರಿದ ಐಸಿಸಿ

Prajwal Revanna Case If Prajwal and Revanna fails to appear infront of SIT they will be arrested says Dr Parameshwara
ಕ್ರೈಂ47 mins ago

Prajwal Revanna Case: ಪ್ರಜ್ವಲ್‌, ರೇವಣ್ಣಗೆ ಮತ್ತೊಂದು ನೋಟಿಸ್‌; ವಿಚಾರಣೆಗೆ ಬಾರದಿದ್ದರೆ ಅರೆಸ್ಟ್‌: ಡಾ. ಜಿ. ಪರಮೇಶ್ವರ್

gold rate today
ಚಿನ್ನದ ದರ1 hour ago

Gold Rate Today: ಚಿನ್ನದ ಬೆಲೆ ಮತ್ತೆ ಇಳಿಕೆ; 10 ಗ್ರಾಂ 22 ಕ್ಯಾರಟ್‌ ಬಂಗಾರದ ಬೆಲೆಯಲ್ಲಿ ₹500 ಕಡಿತ

Gurucharan Singh Taarak Mehta Ka Ooltah Chashmah actor planned disappearance
ಕಿರುತೆರೆ1 hour ago

Gurucharan Singh: ಎರಡು ವಾರ ಕಳೆದರೂ ಪತ್ತೆಯಾಗದ  ʻತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ ಖ್ಯಾತಿಯ ನಟ!

Ram Mandir
ದೇಶ1 hour ago

Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

MS Dhoni
ಕ್ರೀಡೆ1 hour ago

MS Dhoni: ಈಡೇರಿದ ಶತಾಯುಷಿ ಅಭಿಮಾನಿಯ ಆಸೆ; ಧೋನಿ ಭೇಟಿಯಾಗಿ ವಿಶೇಷ ಉಡುಗೊರೆ ಪಡೆದ ರಾಮದಾಸ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ18 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌