Job Alert: ಶಿವಮೊಗ್ಗ ಜಿಲ್ಲಾ ಕೋರ್ಟ್‌ನಲ್ಲಿದೆ ಉದ್ಯೋಗವಕಾಶ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ - Vistara News

ಉದ್ಯೋಗ

Job Alert: ಶಿವಮೊಗ್ಗ ಜಿಲ್ಲಾ ಕೋರ್ಟ್‌ನಲ್ಲಿದೆ ಉದ್ಯೋಗವಕಾಶ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

Job Alert: ಶಿವಮೊಗ್ಗ ಜಿಲ್ಲಾ ಕೋರ್ಟ್‌ನಲ್ಲಿ ಖಾಲಿ ಇರುವ 33 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ 2024ರ ಜನವರಿ 16.

VISTARANEWS.COM


on

court
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶಿವಮೊಗ್ಗ ಜಿಲ್ಲಾ ಕೋರ್ಟ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ (Shivamogga District Court Recruitment 2024). ಸುಮಾರು 33 ಹುದ್ದೆಗಳು ಖಾಲಿ ಇದ್ದು, ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ 2024ರ ಜನವರಿ 16 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಆಯ್ಕೆಯಾದವರಿಗೆ ಶಿವಮೊಗ್ಗದಲ್ಲಿ ಪೋಸ್ಟಿಂಗ್‌ ನೀಡಲಾಗುತ್ತದೆ. ಪ್ರೊಸೆಸ್ ಸರ್ವರ್- 5 ಮತ್ತು ಪಿಯೋನ್- 28 ಹುದ್ದೆಗಳಿವೆ. ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ/ ಕ್ಯಾಟಗರಿ-I ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಮತ್ತು ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಎಸ್‌ಸಿ / ಎಸ್‌ಟಿ / ಕ್ಯಾಟಗರಿ-I / ಪಿಎಚ್‌ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ., ಸಾಮಾನ್ಯ ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕವಾಗಿ ಪಾವತಿಸಬೇಕು. ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯ.

ಆಯ್ಕೆ ವಿಧಾನ ಮತ್ತು ವೇತನ

ಮೆರಿಟ್ ಲಿಸ್ಟ್​ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 19,950 ರೂ.- 37,900 ರೂ. (ಪ್ರೊಸೆಸ್ ಸರ್ವರ್) ಮತ್ತು 17,000-28,950 (ಪಿಯೋನ್) ಮಾಸಿಕ ವೇತನ ಲಭಿಸಲಿದೆ.

ಪಿಯೋನ್‌ ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಪ್ರೊಸೆಸ್ ಸರ್ವರ್ ಹುದ್ದೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅಧಿಸೂಚನೆಯನ್ನು ಗಮನಿಸಿ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.
  • ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಸಂವಹನ ಉದ್ದೇಶಕ್ಕಾಗಿ ಸರಿಯಾದ ಇ-ಮೈಲ್‌ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್ ಸಿದ್ಧವಾಗಿರಿಸಿಕೊಳ್ಳಿ.
  • ಪಿಯೋನ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
  • ಪ್ರೊಸೆಸ್ ಸರ್ವರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಸರಿಯಾದ ಮಾಹಿತಿ ನೀಡಿ ಅರ್ಜಿ ತುಂಬಿಸಿ. ಅಗತ್ಯವಾದ ಡಾಕ್ಯುಮೆಂಟ್‌, ಫೋಟೊ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ
  • Submit ಬಟನ್‌ ಕ್ಲಿಕ್‌ ಮಾಡಿ
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ನಂಬರ್‌ ಮತ್ತು ರಿಕ್ವೆಸ್ಟ್‌ ನಂಬರ್‌ ತೆಗೆದಿರಿಸಿ.

ಇದನ್ನೂ ಓದಿ: Job Alert: ಅಪ್ರೆಂಟಿಸ್‌ ಟ್ರೈನಿಂಗ್‌; ಬೆಸ್ಕಾಂನಲ್ಲಿ 400 ಮಂದಿಗೆ ಅವಕಾಶ; ಇಂದೇ ಅರ್ಜಿ ಸಲ್ಲಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

Job Alert: ಗಮನಿಸಿ: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಮೇ 24 ಕೊನೆಯ ದಿನ

Job Alert: ಕರ್ನಾಟಕ ಪಬ್ಲಿಕ್ ಸರ್ವೀಸ್‌ ಕಮಿಷನ್ (KPSC) ಗ್ರೂಪ್‌ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸುಮಾರು 277 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಮೇ 24 ಕೊನೆಯ ದಿನ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ, ಗರಿಷ್ಠ ವಯಸ್ಸು 35 ವರ್ಷ. ಅರ್ಜಿ ಶುಲ್ಕವಾಗಿ ಸಾಮಾನ್ಯ ಅಭ್ಯರ್ಥಿಗಳು 300 ರೂ., ಇತರ ಹಿಂದುಳಿದ ಅಭ್ಯರ್ಥಿಗಳು 150 ರೂ. ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 50 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಾಗಿಲ್ಲ.

VISTARANEWS.COM


on

Job Alert
Koo

ಬೆಂಗಳೂರು: ಸರ್ಕಾರಿ ಉದ್ಯೋಗ ಹುಡುಕುವವರಿಗೆ ಗುಡ್‌ನ್ಯೂಸ್‌. ಕರ್ನಾಟಕ ಪಬ್ಲಿಕ್ ಸರ್ವೀಸ್‌ ಕಮಿಷನ್ (KPSC) ಗ್ರೂಪ್‌ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ(KPSC Group B (RPC) Recruitment 2024). ಸುಮಾರು 277 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಮೇ 24 ಕೊನೆಯ ದಿನ (Job Alert).

ಬಿ.ಟೆಕ್‌ ವಿದ್ಯಾರ್ಹತೆಯುಳ್ಳವರಿಗೂ ಅವಕಾಶ

ಈ ಹಿಂದಿನ ಅಧಿಸೂಚನೆಯಲ್ಲಿನ ಜಲ ಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ 1) – 90 ಮತ್ತು ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) (ವಿಭಾಗ-1) – 10 ಹುದ್ದೆಗಳಿಗೆ ಇಲಾಖೆಯ ಪ್ರಸ್ತಾವನೆಯಂತೆ ನಿಗದಿಪಡಿಸಲಾಗಿದ್ದ ವಿದ್ಯಾರ್ಹತೆಯ ಕೋರ್ಸ್‌ಗಳಲ್ಲಿ ಕೇವಲ ಬಿಇ ಪದವಿಗಳನ್ನು ಮಾತ್ರ ಈ ಹಿಂದೆ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಪ್ರಸ್ತುತ ಸರ್ಕಾರ ಈ ಹುದ್ದೆಗಳಿಗೆ ಬಿ.ಟೆಕ್ ಪದವಿಯನ್ನು ಸಹ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಉಳಿದಂತೆ ಹಿಂದಿನ ಅಧಿಸೂಚನೆಯ ಷರತ್ತು ಅನ್ವಯ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸಹಾಯಕ ಎಂಜಿನಿಯರ್‌ (ಸಿವಿಲ್‌) (ವಿಭಾಗ 1)- 92 ಹುದ್ದೆ, ವಿದ್ಯಾರ್ಹತೆ: ಬಿ.ಇ / ಬಿ.ಟೆಕ್‌ (ಸಿವಿಲ್‌ ಎಂಜಿನಿಯರಿಂಗ್‌)
ಸಹಾಯಕ ಎಂಜಿನಿಯರ್‌ (ಸಿವಿಲ್‌) (ವಿಭಾಗ 1)-90 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್‌)
ಭೂ ದಾಖಲೆಗಳ ಸಹಾಯಕ ನಿರ್ದೇಶಕರು-24 ಹುದ್ದೆ, ವಿದ್ಯಾರ್ಹತೆ: ಪದವಿ (ಸಿವಿಲ್‌ ಎಂಜಿನಿಯರಿಂಗ್‌)
ಪತ್ರಾಂಕಿತ ವ್ಯವಸ್ಥಾಪಕರು / ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು-21 ಹುದ್ದೆ, ವಿದ್ಯಾರ್ಹತೆ: ಪದವಿ
ಸಹಾಯಕ ನಿರ್ದೇಶಕರು – 20 ಹುದ್ದೆ, ವಿದ್ಯಾರ್ಹತೆ: ಬಿ.ಇ / ಬಿ.ಟೆಕ್‌ (ಎಂಜಿನಿಯರಿಂಗ್‌) ಅಥವಾ ಎಂಬಿಎ
ಸಹಾಯಕ ಎಂಜಿನಿಯರ್‌ (ಮೆಕ್ಯಾನಿಕಲ್‌) (ವಿಭಾಗ-1) – 10 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ / ಪದವಿ (ಎಂಜಿನಿಯರಿಂಗ್‌)
ಕಾರ್ಖಾನೆಗಳ ಸಹಾಯಕ ನಿರ್ದೇಶಕರು – 7 ಹುದ್ದೆ, ವಿದ್ಯಾರ್ಹತೆ: ಪದವಿ (ಸಂಬಂಧಿತ ವಿಷಯದಲ್ಲಿ ಎಂಜಿನಿಯರಿಂಗ್‌)
ಬಾಯ್ಲರುಗಳ ಸಹಾಯಕ ನಿರ್ದೇಶಕರು – 3 ಹುದ್ದೆ, ವಿದ್ಯಾರ್ಹತೆ: (ಸಂಬಂಧಿತ ವಿಷಯದಲ್ಲಿ ಎಂಜಿನಿಯರಿಂಗ್‌)
ಭೂ ವಿಜ್ಞಾನಿ – 10 ಹುದ್ದೆ, ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ (ಜಿಯೋಲಜಿ / ಅಪ್ಲೈಡ್‌ ಜಿಯಾಲಜಿ.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ, ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಸಾಮಾನ್ಯ ಅಭ್ಯರ್ಥಿಗಳು 300 ರೂ., ಇತರ ಹಿಂದುಳಿದ ಅಭ್ಯರ್ಥಿಗಳು 150 ರೂ. ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 50 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಾಗಿಲ್ಲ.

ಪರಿಷ್ಕೃತ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Continue Reading

ಉದ್ಯೋಗ

Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆಗೆ ಇಂದು ಕೊನೆ ದಿನ

Job Alert: ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಇಂದು (ಮೇ 20). ಸಂಜೆ 5 ಗಂಟೆಯೊಳಗೆ ಅಪ್ಲೈ ಮಾಡಿ. ದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 70,000-1,00,000 ರೂ. ಮಾಸಿಕ ವೇತನ ದೊರೆಯಲಿದೆ.

VISTARANEWS.COM


on

Job Alert
Koo

ಬೆಂಗಳೂರು: ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್‌ (Neyveli Lignite Corporation Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (NLC Recruitment 2024). ಸುಮಾರು 36 ಎಕ್ಸಿಕ್ಯೂಟಿವ್‌ ಹುದ್ದೆಗಳಿದ್ದು, ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಇಂದು (ಮೇ 20) (Job Alert). ಗಮನಿಸಿ ಸಂಜೆ 5 ಗಂಟೆಯೊಳಗೆ ನಿಮ್ಮ ಅರ್ಜಿ ಸಲ್ಲಿಕೆಯಾಗಬೇಕು.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಕ್ಸಿಕ್ಯೂಟಿವ್‌-ಆಪರೇಷನ್‌: 24 ಮತ್ತು ಎಕ್ಸಿಕ್ಯೂಟಿವ್‌-ಮೈಂಟೆನೆನ್ಸ್‌: 12 ಹುದ್ದೆಗಳಿವೆ.
ಎಕ್ಸಿಕ್ಯೂಟಿವ್‌-ಆಪರೇಷನ್‌ ಹುದ್ದೆಗೆ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಎಕ್ಸಿಕ್ಯೂಟಿವ್‌-ಮೈಂಟೆನೆನ್ಸ್‌ ಹುದ್ದೆಗೆ ಸಿವಿಲ್/ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಹರು.

ವಯೋಮಿತಿ ಮತ್ತು ಅರ್ಜಿ ಶುಲ್ಕ

Neyveli Lignite Corporation Limited recruitment ಅಧಿಸೂಚನೆ ಪ್ರಕಾರ ಗರಿಷ್ಠ ವಯೋಮಿತಿ 63 ವರ್ಷ. ಅರ್ಜಿ ಶುಲ್ಕವಾಗಿ ಮಾಜಿ ಯೋಧರು / ಎಸ್‌ಸಿ / ಎಸ್‌ಟಿ ವರ್ಗಕ್ಕೆ ಸೇರಿದವರು 354 ರೂ. ಮತ್ತು ಸಾಮಾನ್ಯ / ಇಡಬ್ಲ್ಯುಎಸ್‌ / ಒಬಿಸಿ ವಿಭಾಗದವರು 854 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ಪಾವತಿ ಮಾರ್ಗ ಅನುಸರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 70,000-1,00,000 ರೂ. ಮಾಸಿಕ ವೇತನ ದೊರೆಯಲಿದೆ. ಒಂದು ವರ್ಷದ ಅವಧಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಹೆಸರು ನೊಂದಾಯಿಸಿ.
  • NLC Executive Apply Online ಆಯ್ಕೆ ಕ್ಲಿಕ್‌ ಮಾಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಫೋಟೊಗಳನ್ನು ಸೂಚಿಸಿದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸರಿಯಾಗಿದ್ದರೆ ಅರ್ಜಿ ಸಲ್ಲಿಸಿ. ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಅಪ್‌ಲೋಡ್‌ ಮಾಡಬೇಕಾದ ದಾಖಲೆಗಳು

  • ಫೋಟೊ ಹೈ ಕ್ವಾಲಿಟಿಯಲ್ಲಿದ್ದು, 2023ರ ಅಕ್ಟೋಬರ್‌ 1ರ ಬಳಿಕ ತೆಗೆದಿರಬೇಕು.
  • ಅತ್ಯುತ್ತಮ ಕ್ಲಾಲಿಟಿಯ ಅಭ್ಯರ್ಥಿಯ ಸಹಿಯ ಫೋಟೊ.
  • ಹುಟ್ಟಿದ ದಿನಾಂಕವನ್ನು ಖಾತರಿಪಡಿಸುವ ದಾಖಲೆ.
  • ಎಸ್ಸೆಸ್ಸೆಲ್ಸಿ / ಶೈಕ್ಷಣಿಕ ಪ್ರಮಾಣ ಪತ್ರ.
  • ಆಧಾರ್‌ ಕಾರ್ಡ್‌ನ ಪ್ರತಿ.
  • ಜಾತಿ ಸರ್ಟಿಫಿಕೆಟ್‌.
  • ಮಾಜಿ ಯೋಧರಾಗಿದ್ದರೆ ಅದರ ದಾಖಲೆ.
  • ಫೋಟೊ ಮತ್ತು ಸಹಿಯ ಫೋಟೊ JPEG ಫಾರ್ಮಾಟ್‌ನಲ್ಲಿರಬೇಕು.
  • ದಾಖಲೆಗಳು, ಡಾಕ್ಯುಮೆಂಟ್‌ JPEG ಅಥವಾ PDF ಫಾರ್ಮಾಟ್‌ನಲ್ಲಿರುವುದು ಕಡ್ಡಾಯ.

ಇದನ್ನೂ ಓದಿ: Job Alert: ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Continue Reading

ಉದ್ಯೋಗ

Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ

Job Alert: ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ನಾಳೆ (ಮೇ 20). ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 70,000-1,00,000 ರೂ. ಮಾಸಿಕ ವೇತನ ದೊರೆಯಲಿದೆ.

VISTARANEWS.COM


on

Job Alert
Koo

ಬೆಂಗಳೂರು: ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್‌ (Neyveli Lignite Corporation Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (NLC Recruitment 2024). ಸುಮಾರು 36 ಎಕ್ಸಿಕ್ಯೂಟಿವ್‌ ಹುದ್ದೆಗಳಿದ್ದು, ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ನಾಳೆ (ಮೇ 20) (Job Alert). ಗಮನಿಸಿ ಸಂಜೆ 5 ಗಂಟೆಯೊಳಗೆ ನಿಮ್ಮ ಅರ್ಜಿ ಸಲ್ಲಿಕೆಯಾಗಬೇಕು.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಕ್ಸಿಕ್ಯೂಟಿವ್‌-ಆಪರೇಷನ್‌: 24 ಮತ್ತು ಎಕ್ಸಿಕ್ಯೂಟಿವ್‌-ಮೈಂಟೆನೆನ್ಸ್‌: 12 ಹುದ್ದೆಗಳಿವೆ.
ಎಕ್ಸಿಕ್ಯೂಟಿವ್‌-ಆಪರೇಷನ್‌ ಹುದ್ದೆಗೆ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಎಕ್ಸಿಕ್ಯೂಟಿವ್‌-ಮೈಂಟೆನೆನ್ಸ್‌ ಹುದ್ದೆಗೆ ಸಿವಿಲ್/ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಹರು.

ವಯೋಮಿತಿ ಮತ್ತು ಅರ್ಜಿ ಶುಲ್ಕ

Neyveli Lignite Corporation Limited recruitment ಅಧಿಸೂಚನೆ ಪ್ರಕಾರ ಗರಿಷ್ಠ ವಯೋಮಿತಿ 63 ವರ್ಷ. ಅರ್ಜಿ ಶುಲ್ಕವಾಗಿ ಮಾಜಿ ಯೋಧರು / ಎಸ್‌ಸಿ / ಎಸ್‌ಟಿ ವರ್ಗಕ್ಕೆ ಸೇರಿದವರು 354 ರೂ. ಮತ್ತು ಸಾಮಾನ್ಯ / ಇಡಬ್ಲ್ಯುಎಸ್‌ / ಒಬಿಸಿ ವಿಭಾಗದವರು 854 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ಪಾವತಿ ಮಾರ್ಗ ಅನುಸರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 70,000-1,00,000 ರೂ. ಮಾಸಿಕ ವೇತನ ದೊರೆಯಲಿದೆ. ಒಂದು ವರ್ಷದ ಅವಧಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಹೆಸರು ನೊಂದಾಯಿಸಿ.
  • NLC Executive Apply Online ಆಯ್ಕೆ ಕ್ಲಿಕ್‌ ಮಾಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಫೋಟೊಗಳನ್ನು ಸೂಚಿಸಿದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸರಿಯಾಗಿದ್ದರೆ ಅರ್ಜಿ ಸಲ್ಲಿಸಿ. ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಅಪ್‌ಲೋಡ್‌ ಮಾಡಬೇಕಾದ ದಾಖಲೆಗಳು

  • ಫೋಟೊ ಹೈ ಕ್ವಾಲಿಟಿಯಲ್ಲಿದ್ದು, 2023ರ ಅಕ್ಟೋಬರ್‌ 1ರ ಬಳಿಕ ತೆಗೆದಿರಬೇಕು.
  • ಅತ್ಯುತ್ತಮ ಕ್ಲಾಲಿಟಿಯ ಅಭ್ಯರ್ಥಿಯ ಸಹಿಯ ಫೋಟೊ.
  • ಹುಟ್ಟಿದ ದಿನಾಂಕವನ್ನು ಖಾತರಿಪಡಿಸುವ ದಾಖಲೆ.
  • ಎಸ್ಸೆಸ್ಸೆಲ್ಸಿ / ಶೈಕ್ಷಣಿಕ ಪ್ರಮಾಣ ಪತ್ರ.
  • ಆಧಾರ್‌ ಕಾರ್ಡ್‌ನ ಪ್ರತಿ.
  • ಜಾತಿ ಸರ್ಟಿಫಿಕೆಟ್‌.
  • ಮಾಜಿ ಯೋಧರಾಗಿದ್ದರೆ ಅದರ ದಾಖಲೆ.
  • ಫೋಟೊ ಮತ್ತು ಸಹಿಯ ಫೋಟೊ JPEG ಫಾರ್ಮಾಟ್‌ನಲ್ಲಿರಬೇಕು.
  • ದಾಖಲೆಗಳು, ಡಾಕ್ಯುಮೆಂಟ್‌ JPEG ಅಥವಾ PDF ಫಾರ್ಮಾಟ್‌ನಲ್ಲಿರುವುದು ಕಡ್ಡಾಯ.
Continue Reading

ಉದ್ಯೋಗ

Job alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Job alert: ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 54 ಸ್ಥಾನಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಕೊನೆಯ ದಿನ ಮೇ 24. ಬಿಸಿಎ, ಬಿ.ಎಸ್‌ಸಿ, ಬಿ.ಇ. ಅಥವಾ ಬಿ.ಟೆಕ್‌, ಎಂಸಿಎ ಪದವಿ ಪಡೆದವರು ಈ ಸುವರ್ಣಾವಕಾಶ ಬಳಸಿಕೊಳ್ಳಿ.

VISTARANEWS.COM


on

Job Alert
Koo

ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (India Post Payments Bank) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (IPPB Recruitment 2024). ಇನ್ಫರ್ಮೇಷನ್‌ ಟೆಕ್ನಾಲಜಿ ಎಕ್ಸಿಕ್ಯೂಟಿವ್‌ ಹುದ್ದೆ ಇದಾಗಿದ್ದು, ಒಟ್ಟು 54 ಸ್ಥಾನಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಉದ್ಯೋಗದ ಸ್ಥಳ: ಚೆನ್ನೈ, ಮುಂಬೈ, ದೆಹಲಿ. ಬಿಸಿಎ, ಬಿಎಸ್‌ಸಿ ಓದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 24 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಕ್ಸಿಕ್ಯೂಟಿವ್‌ (ಅಸೋಸಿಯೇಟ್‌ ಕನ್ಸಲ್‍ಟೆಂಟ್‍) (Executive (Associate Consultant)- 28, ಎಕ್ಸಿಕ್ಯೂಟಿವ್‌ (ಕನ್ಸಲ್‍ಟೆಂಟ್‍) (Executive (Consultant) – 21 ಮತ್ತು ಎಕ್ಸಿಕ್ಯೂಟಿವ್‌ (ಸೀನಿಯರ್ ಕನ್ಸಲ್‍ಟೆಂಟ್‍)‌ (Executive (Senior Consultant) – 5 ಹುದ್ದೆಗಳಿವೆ. IPPB official notification ಪ್ರಕಾರ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿಸಿಎ, ಬಿ.ಎಸ್‌ಸಿ, ಬಿ.ಇ. ಅಥವಾ ಬಿ.ಟೆಕ್‌, ಎಂಸಿಎ ಪದವಿ ಪಡೆದಿರಬೇಕು. ಜತೆಗೆ 1ರಿಂದ 6 ವರ್ಷದವರೆಗೆ ಅನುಭವ ಹೊಂದಿರುವುದು ಕಡ್ಡಾಯ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 22 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ. ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 150 ರೂ. ಮತ್ತು ಉಳಿದೆಲ್ಲ ವರ್ಗಗಳ ಅಭ್ಯರ್ಥಿಗಳು 750 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ವಿಧಾನ ಬಳಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಆನ್‌ಲೈನ್‌ ಪರೀಕ್ಷೆ, ಗ್ರೂಪ್‌ ಡಿಸ್ಕಷನ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದ್ದು, ಆಯ್ಕೆಯಾದವರಿಗೆ 10,00,000 ರೂ.-25,00,000 ರೂ. ವಾರ್ಷಿಕ ವೇತನ ದೊರೆಯಲಿದೆ.

IPPB Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಕೆ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಮೊದಲು ನಿಮ್ಮ ಹೆಸರು ನೋಂದಾಯಿಸಿ.
  • ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಈಗ ತೆರೆದುಕೊಳ್ಳುವ IPPB Online Application Form ಅನ್ನು ಸರಿಯಾದ ಮಾಹಿತಿ ನೀಡಿ ಭರ್ತಿ ಮಾಡಿ.
  • ಅಗತ್ಯವಾದ ಡಾಕ್ಯುಮೆಂಟ್‌, ಫೋಟೊ, ಸಹಿ ಇತ್ಯಾದಿಯನ್ನು ಸರಿಯಾದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ನೀಡಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿಯಾಗಿದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಗುಡ್‌ನ್ಯೂಸ್‌: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಪಿಎಸ್‌ಸಿ; ಇಲ್ಲಿದೆ ಹೊಸ ವೇಳಾಪಟ್ಟಿ

Continue Reading
Advertisement
Robert Vadra
ದೇಶ16 mins ago

Robert Vadra: ಸ್ವಂತ ಬಲದಿಂದ ರಾಜಕೀಯಕ್ಕೆ ಬರುವೆ, ಗಾಂಧಿ ಹೆಸರು ಬಳಸಲ್ಲ; ರಾಬರ್ಟ್‌ ವಾದ್ರಾ ಶಪಥ!

IPL 2024
ಕ್ರೀಡೆ36 mins ago

IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

Talking Digital Safety for Teens programme by Meta in Bengaluru
ಕರ್ನಾಟಕ47 mins ago

Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

MLC Election North East Graduates Constituency Election Prohibitory order imposed in Vijayanagar district from June 1
ವಿಜಯನಗರ50 mins ago

MLC Election: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ವಿಜಯನಗರ ಜಿಲ್ಲೆಯಲ್ಲಿ ಜೂ.1ರಿಂದ ನಿಷೇಧಾಜ್ಞೆ ಜಾರಿ

Artificially ripened fruits
ಕರ್ನಾಟಕ50 mins ago

Artificially Ripened Fruits: ಬಾಳೆ, ಮಾವಿನ ಹಣ್ಣಿನಿಂದ ಕ್ಯಾನ್ಸರ್: ದೂರು ಸಲ್ಲಿಕೆ

Legal action if drought relief money is credited to farmers loans says Dr Sushila
ಯಾದಗಿರಿ51 mins ago

Yadgiri News: ಬರ ಪರಿಹಾರದ ಹಣ ರೈತರ ಸಾಲಕ್ಕೆ ಜಮಾ ಮಾಡಿಕೊಂಡರೆ ಕಾನೂನು ಕ್ರಮ: ಡಿಸಿ

Shree Bevinalamma Devi Jaladhi Mahotsav celebration in koratagere taluk
ತುಮಕೂರು54 mins ago

Tumkur News: ವಿಜೃಂಭಣೆಯಿಂದ ನಡೆದ ಶ್ರೀ ಬೇವಿನಳಮ್ಮ ದೇವಿ ಜಲಧಿ ಮಹೋತ್ಸವ

udupi Shree Bhandarakeri math annual award programme in bengaluru
ಕರ್ನಾಟಕ56 mins ago

Bengaluru News: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ: ಪೇಜಾವರ ಶ್ರೀ

5 foreign coins found in anjanadri temple hundi counting
ಕರ್ನಾಟಕ58 mins ago

Koppala News: ಅಂಜನಾದ್ರಿ ದೇಗುಲ ಹುಂಡಿ ಎಣಿಕೆ; 5‌ ವಿದೇಶಿ ನಾಣ್ಯಗಳು ಪತ್ತೆ

IPL 2024
ಪ್ರಮುಖ ಸುದ್ದಿ1 hour ago

IPL 2024 : ಮುಂಬೈ ಕಳಪೆ ಪ್ರದರ್ಶನಕ್ಕೆ ಪಾಂಡ್ಯ ಅಲ್ಲ ರೋಹಿತ್​ ಕಾರಣ ಎಂದ ಹರ್ಭಜನ್ ಸಿಂಗ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು10 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು11 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌