IAS prelims 2022: ಕೊನೆಯ ಕ್ಷಣದ ಸಿದ್ಧತೆ ಹೇಗಿರಬೇಕು, ಏನೇನು ಓದಬೇಕು ಗೊತ್ತೇ? - Vistara News

ಉದ್ಯೋಗ

IAS prelims 2022: ಕೊನೆಯ ಕ್ಷಣದ ಸಿದ್ಧತೆ ಹೇಗಿರಬೇಕು, ಏನೇನು ಓದಬೇಕು ಗೊತ್ತೇ?

ನಾಗರಿಕ ಸೇವಾ ಹುದ್ದೆಗಳಿಗೆ (ಐಎಎಸ್‌-ಐಎಫ್‌ಎಸ್‌) ಯುಪಿಎಸ್‌ಸಿಯು ಜೂನ್ 5ರಂದು ಪೂರ್ವಭಾವಿ ಪರೀಕ್ಷೆ ನಡೆಸುತ್ತಿದೆ. ಈ ಪರೀಕ್ಷೆಗೆ ಕೊನೆಯ ಕ್ಷಣದ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಗಮನಿಸಬೇಕಾದ ವಿಷಯಗಳು ಇಲ್ಲಿವೆ

VISTARANEWS.COM


on

UPSC Result 2022, more than 25 candidates from karnataka are cleared upsc examination
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಐಎಎಸ್ ಹಾಗೂ ಐಪಿಎಸ್ ಹುದ್ದೆಗಳ ನೇಮಕಕ್ಕೆ ಇದೇ ಜೂನ್ 5 ರಂದು ಪೂರ್ವಭಾವಿ (IAS prelims 2022) ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಯನ್ನು ಕೇವಲ ಮುಖ್ಯ (ಮೇನ್) ಪರೀಕ್ಷೆಗೆ ಅರ್ಹತೆ ನಿಗದಿಪಡಿಸಲು ನಡೆಸಲಾಗುತ್ತದೆ.

ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದಕ್ಕೆ ಇದುವೇ (IAS prelims 2022) ಮೊದಲ ಮೆಟ್ಟಿಲು. ಇದರಲ್ಲಿ ಯಶಸ್ವಿಯಾಗಬೇಕೆಂದು  ಲಕ್ಷಾಂತರ ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಆದರೆ ಪ್ರಿಲಿಮ್ಸ್ ನಲ್ಲಿ ಅರ್ಹತೆ ಪಡೆಯುವುದು ಅಂದಾಜು 15,000 ಮಂದಿ ಮಾತ್ರ.

ಹೀಗಾಗಿ ಈ ಪರೀಕ್ಷೆಗೆ ಹೆಚ್ಚು ಗಂಭೀರವಾಗಿ ಸಿದ್ಧತೆ ನಡೆಸದಿದ್ದರೆ ಯಶಸ್ಸು ಪಡೆಯುವುದು ಕಷ್ಟ. ಈ ಬಾರಿಯ ಪರೀಕ್ಷೆಗೆ ಉಳಿದಿರುವ ಕೆಲವೇ ದಿನಗಳನ್ನು ವ್ಯರ್ಥಮಾಡದೆ ಅಭ್ಯರ್ಥಿಗಳು ಸಿದ್ಧತೆ ನಡೆಸಲೇಬೇಕಾಗಿದೆ. ಇದಕ್ಕೆ ಕೆಲವು ಉಪಯುಕ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಸಮಗ್ರವಾಗಿರಲಿ ನಿಮ್ಮ ಅಧ್ಯಯನ

ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಈ ಕೊನೆಯ ದಿನಗಳಲ್ಲಿ ಹೆಚ್ಚಾಗಿ ಹೊಸ ವಿಷಯಗಳನ್ನು ಓದಲು ಹೋಗಬಾರದು. ಕಳೆದ ಒಂದು ವರ್ಷಗಳಿಂದ  ನೀವು ಮಾಡಿಕೊಂಡಿರುವ ಸಿದ್ಧತೆಗಳನ್ನು ಸಮಗ್ರವಾಗಿ ಅವಲೋಕನ ಮಾಡಿ. ನೀವು ಈಗಾಗಲೇ ಅಧ್ಯಯನ ಮಾಡಿದ ಸಂಗತಿಗಳನ್ನು ಮತ್ತೆ ಮನನ ಮಾಡದೇ ಹೋದರೆ ಪರೀಕ್ಷೆಯಲ್ಲಿ ಅವನ್ನು ನೆನಪು ಮಾಡಿಕೊಳ್ಳುವುದು ಸಾಧ್ಯವಿಲ್ಲ.

ಈ ರಿವಿಷನ್ ಸಮಯದಲ್ಲಿ, ನೀವು ಪ್ರಮುಖ ಅಂಶಗಳತ್ತ ಮಾತ್ರವೇ ಗಮನಹರಿಸಿ. ಇತಿಹಾಸ, ರಾಜನೀತಿ, ಭೂಗೋಳಶಾಸ್ತ್ರದಂತಹ ಸಾಂಪ್ರದಾಯಿಕ ವಿಭಾಗಗಳನ್ನು ಮಾತ್ರ ಮತ್ತೊಮ್ಮೆ ಓದಿ. ಒಂದು ದಿನದಲ್ಲಿ ಒಂದು ವಿಷಯವನ್ನು ಓದಿಮುಗಿಸುತ್ತಾ ಹೋಗಿ. ಸಾಕಷ್ಟು ತಯಾರಿಯ ಬಳಿಕವೂ ಇನ್ನೂ ಹಲವು ವಿಷಯಗಳು ಉಳಿದಿರುತ್ತವೆ. ಆದರೆ ಅವುಗಳನ್ನು ಪರೀಕ್ಷೆಗೆ ದಿನ ಹತ್ತಿರವಾಗುತ್ತಿದ್ದಂತೆಯೇ ಓದಬೇಡಿ. ಅಂದರೆ ಈಗಾಗಲೇ ನೀವು ಓದಿದ್ದನ್ನು ಪುನರಾವಲೋಕನ ಮಾಡಿ. ಬದಲಾಗಿ ಅಧ್ಯಯನ ವಿಷಯದ ವ್ಯಾಪ್ತಿಯನ್ನು ಹಿಗ್ಗಿಸಬೇಡಿ.

ಸರಣಿ ಮಾಕ್‌ಟೆಸ್ಟ್‌ ಬೇಡ

ಪರೀಕ್ಷೆಯ ಸಮದಲ್ಲಿ ಅಭ್ಯರ್ಥಿಗಳು ಆಗಾಗ ಒಂದರ ಹಿಂದೊಂದರಂತೆ ಆನ್‌ಲೈನ್‌ನಲ್ಲಿ ದೊರೆಯುವ ಮಾಕ್‌  ಟೆಸ್ಟ್ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಇದರಿಂದ ಪರೀಕ್ಷೆಯ ಒತ್ತಡ ಹೆಚ್ಚಾಗುವ ಸಾಧ್ಯತೆಯಿರುತ್ತದೆ.

ಇದಕ್ಕೆ ಬದಲಾಗಿ, ಯುಪಿಎಸ್‌ಸಿಯ ಹಿಂದಿನ ಹತ್ತು ವರ್ಷಗಳಲ್ಲಿ ನಡೆಸಿರುವ ಐಎಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ. ಅಲ್ಲದೇ ಎಸ್‌ಎಸ್‌ಸಿ ಮೊದಲಾದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಕಣ್ಣುಹಾಯಿಸಿ. ಏಕೆಂದರೆ ಈ ಪ್ರಶ್ನೆಗಳು ಪ್ರಿಲಿಮ್ಸ್‌ನಲ್ಲಿ ಪುನರಾವರ್ತನೆಯಾಗಬಹುದು. ಸಮಯದ ನಿರ್ವಹಣೆಯನ್ನು ಕಲಿತುಕೊಳ್ಳುವ ಉದ್ದೇಶದಿಂದ ಬೇಕಾದರೆ ನೀವು ಮಾಕ್‌ಟೆಸ್ಟ್‌ ಅಟೆಂಡ್‌ ಮಾಡಿ. ವಾರದಲ್ಲಿ ಒಮ್ಮೆ ಮಾಕ್‌ ಟೆಸ್ಟ್‌ ಅಂಟೆಂಡ್‌ ಮಾಡಿದರೆ ನಿಮ್ಮ ಓದಿನ ಸಾಮರ್ಥ್ಯ ಅಳೆದುಕೊಳ್ಳಲೂ ಅನುಕೂಲವಾಗುತ್ತದೆ.

ಇದು ನಿಮಗೆ ಗೊತ್ತಿರಲಿ

IAS prelims 2022
  • ಪ್ರಿಲಿಮ್ಸ್‌ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಅಧ್ಯಯನಕ್ಕೆ ಎನ್‌ಸಿಇಆರ್‌ಟಿ (NCERT) ಪುಸ್ತಕಗಳೇ ಗಟ್ಟಿ ಅಡಿಪಾಯ.
  • ಪರೀಕ್ಷೆಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ದಿನ ಪತ್ರಿಕೆ ಓದಲೇಬೇಕು. ಪತ್ರಿಕೆಯಲ್ಲಿನ ಪ್ರತಿ ಅಂಕಣ, ಸಂಪಾದಕೀಯ ಮತ್ತು ವಿದ್ಯಮಾನಗಳನ್ನು ಓದಿ ನಿಮ್ಮದೇ ದೃಷ್ಟಿಯಲ್ಲಿ ವಿಶ್ಲೇಷಿಸಬೇಕು.
  • ಪ್ರಿಲಿಮ್ಸ್‌ಗೆ ಅಧ್ಯಯನ ನಡೆಸುವಾಗ ಏನು ಓದಬೇಕೆಂಬುದಕ್ಕಿಂತ ಹೇಗೆ ಓದಬೇಕು ಎಂಬುದು ಬಹಳ ಮುಖ್ಯ. ಆದಷ್ಟು ಎಲ್ಲ ವಿಷಯಗಳನ್ನು ಓದಿದ್ದರೆ ಒಳ್ಳೆಯದು. ಒಂದು ವೇಳೆ ಪರೀಕ್ಷೆಯಲ್ಲಿ ವಿಫಲರಾದರೆ ಬೇಸರ ಪಡಬೇಡಿ, ಮತ್ತೆ ಪರೀಕ್ಷೆಗೆ ಸಿದ್ಧತೆ ನಡೆಸಲು ಇದರಿಂದ ಅನುಕೂಲವಾಯಿತು ಎಂದೇ ತಿಳಿಯಿರಿ.
  • ಪರೀಕ್ಷೆಯಲ್ಲಿ ಪತ್ರಿಕೆ-1, ಪತ್ರಿಕೆ-2 ಎಂಬ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ.  ಒಂದು ವರ್ಷದಿಂದ ಮತ್ತೊಂದು ವರ್ಷಕ್ಕೆ ಪ್ರಶ್ನೆ ಪತ್ರಿಕೆ ಭಿನ್ನವಾಗಿರುತ್ತವೆ.

ಈಗ ಪರೀಕ್ಷೆಗೆ ಹೆಚ್ಚು ಸಮಯವಿಲ್ಲದೇ ಇರುವುದರಿಂದ ನೀವು ಯಾವ ವಿಷಯದಲ್ಲಿ ವೀಕ್ ಇದ್ದೀರಿ ಎಂಬುದನ್ನು ಗಮನಿಸಿಕೊಂಡು, ಅದರತ್ತ ಹೆಚ್ಚು ತಲೆಕೆಡಿಸಿಕೊಳ್ಳದೇ ನೀವು ಹೆಚ್ಚು ಇಷ್ಟ ಪಡುವ ವಿಷಯಗಳತ್ತವೇ ನಿಮ್ಮ ಗಮನ ಕೇಂದ್ರೀಕರಿಸಿ. ಉದಾಹರಣೆಗೆ- ಗಣಿತ, ರೀಸನಿಂಗ್ ವಿಷಯಗಳು ನಿಮಗೆ ಕಷ್ಟವೆನಿಸಿದರೆ, ಸುಲಭವೆನಿಸುವ ಕಾಂಪ್ರಹೆನ್ಷನ್  ವಿಷಯವನ್ನು ಇನ್ನಷ್ಟು ಚೆನ್ನಾಗಿ ಓದಿಕೊಳ್ಳಿ.

ಸಮಯ ನಿರ್ವಹಣೆ ಕಲಿಯಿರಿ

ಈ ಪರೀಕ್ಷೆಯಲ್ಲಿ  ಎಲ್ಲ ಪ್ರಶ್ನೆಗಳಿಗೂ ಸಮಾನ ಅಂಕಗಳಿದ್ದರೂ, ಅವೆಲ್ಲಕ್ಕೂ ಅಷ್ಟೇ (ಸಮಾನ) ಸಮಯ ಬೇಕಿರುವುದಿಲ್ಲ. ಒಂದು ಪ್ರಶ್ನೆಗೆ ಉತ್ತರಿಸುವುದಕ್ಕಾಗಿಯೇ ಹೆಚ್ಚು ವೇಳೆಯನ್ನು ಹಾಳು ಮಾಡಬೇಡಿ. ಜಟಿಲವಾದ ಪ್ರಶ್ನೆಯನ್ನು ಕೈಬಿಟ್ಟು ಇನ್ನೊಂದು ಪ್ರಶ್ನೆಗೆ ಪ್ರಯತ್ನಿಸಿ.

IAS prelims 2022

ಹೆಚ್ಚು ಸಮಯ ಬೇಡುವ ಪ್ರಶ್ನೆಗೆ ಉತ್ತರಿಸಲೇ ಬೇಕೆಂದು ಹಟತೊಟ್ಟು ಸಮಯ ವ್ಯರ್ಥಮಾಡಬೇಡಿ. ಕೊನೆಗೆ ಸಮಯ ಉಳಿದಲ್ಲಿ, ಆ ಕ್ಲಿಷ್ಟಕರ ಪ್ರಶ್ನೆಯತ್ತ ಮತ್ತೆ ದೃಷ್ಟಿ ಹರಿಸಿ. ಪರೀಕ್ಷೆಯಲ್ಲಿಯು ನೀವು ಗುರುತಿಸಿದ ಉತ್ತರ ಸರಿಯಾಗಿದೆಯೇ ಎಂಬುದನ್ನು ಕನ್ ಫರ್ಮ್ ಮಾಡಿಕೊಳ್ಳಲು ಇತರ ಆಪ್ಷನ್‌ಗಳನ್ನು ವಿಶ್ಲೇಷಣೆಗೊಳಪಡಿಸುತ್ತಾ ಸಮಯವನ್ನು ವ್ಯರ್ಥ ಮಾಡಬೇಡಿ.

ಅಭ್ಯಾಸ ನಡೆಸುವಾಗಲೇ ವಿಷಯವನ್ನು ಸ್ಪಷ್ಟ ಮಾಡಿಕೊಳ್ಳುವುದರಿಂದ ಪರೀಕ್ಷೆಯಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯ. ಮಾಕ್ ಟೆಸ್ಟ್‌ಗಳನ್ನು ನೀವೇ ರೂಪಿಸಿ ಕೊಂಡು ಸಮಯ ನಿರ್ವಹಣೆ ಮಾಡುವುದನ್ನು ಕಲಿತುಕೊಳ್ಳಿ. ಯಾವ ವಿಷಯದ ಯಾವ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂಬುದರ ಅರಿವು ನಿಮಗಿರಲಿ.

ಸಿಲಬಸ್‌ನಂತೆ ಓದಿ

ಈ ಪರೀಕ್ಷೆಗೆ (IAS prelims 2022)ಸಿದ್ಧತೆ ನಡೆಸುವಾಗ ಮೊದಲು ಸಿಲಬಸ್ ಅನ್ನು ಸರಿಯಾಗಿ ನೋಡಿಕೊಳ್ಳಿ. ಹೆಚ್ಚು ಪ್ರಶ್ನೆಗಳನ್ನು ಕೇಳಬಹುದಾದ, ಸಿಲಬಸ್‌ನ ಭಾಗಗಳಿಗೆ ಒತ್ತು ಕೊಡಿ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡುವುದರಿಂದ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು.

ಇದನ್ನೂ ಓದಿ | Job News: ಕೇಂದ್ರ ಸರಕಾರಿ ನೌಕರಿಗೆ SSC ಪರೀಕ್ಷೆ ಬರೆಯಿರಿ

ಪರೀಕ್ಷೆ ಹತ್ತಿರವಿರುವಾಗ ನೀವು ಪ್ರತಿಯೊಂದು ವಿಷಯಕ್ಕೂ ಸಮಾನ ಮಹತ್ವವನ್ನು ನೀಡಬೇಡಿ. ಬದಲಾಗಿ, ಹೆಚ್ಚು ಪ್ರಶ್ನೆಗಳನ್ನು ಕೇಳಬಹುದಾದ, ಸಿಲಬಸ್‌ನ ವಿಷಯಗಳನ್ನು ಮತ್ತೆ ಅಭ್ಯಾಸ ನಡೆಸಿ. ಉದಾಹರಣೆಗೆ, ಪ್ರಾಚೀನ ಇತಿಹಾಸದಲ್ಲಿ ಕಲೆ, ಆಧುನಿಕ ಇತಿಹಾಸದಲ್ಲಿ (1885ರಿಂದ 1947ರ ಅವಧಿಯಲ್ಲಿನ) ಸ್ವಾತಂತ್ರ್ಯ ಹೋರಾಟ ಕುರಿತು ಹೆಚ್ಚು ಪ್ರಶ್ನೆಗಳಿರುತ್ತವೆ. ಆದ್ದರಿಂದ ಸ್ಮಾರ್ಟ್ ಆಗಿ, ಪರೀಕ್ಷೆಗೆ ಸಿದ್ಧರಾಗಿ.
ಆಲ್‌ ದಿ ಬೆಸ್ಟ್‌ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

KPTCL Recruitment: 902 ಹುದ್ದೆಗಳ ನೇಮಕಾತಿಗೆ ಕೆಪಿಟಿಸಿಎಲ್‌ ಆದೇಶ

KPTCL Recruitment: ಮಾರ್ಚ್‌ನಲ್ಲಿ ನೇಮಕ ಪ್ರಕ್ರಿಯೆ ಅಂತಿಮಗೊಂಡ 368 ಸಹಾಯಕ ಎಂಜಿನಿಯರ್‌(ವಿದ್ಯುತ್‌), 17 ಸಹಾಯಕ ಎಂಜಿನಿಯರ್(ಸಿವಿಲ್), 15-ಕಿರಿಯ ಎಂಜಿನಿಯರ್(ಸಿವಿಲ್) ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ, ಕೆಪಿಟಿಸಿಎಲ್‌ ನೇಮಕಾತಿ ಆದೇಶ ನೀಡಲಾಗಿದೆ.

VISTARANEWS.COM


on

KPTCL Recruitment
Koo

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು (ಕೆಪಿಟಿಸಿಎಲ್) ಒಟ್ಟು 902 ಹುದ್ದೆಗಳ ಭರ್ತಿಗೆ ನೇಮಕ (KPTCL Recruitment) ಆದೇಶ ಹೊರಡಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಮುನ್ನ ಅಂದರೆ ಕಳೆದ ಮಾರ್ಚ್‌ನಲ್ಲಿ ನೇಮಕ ಪ್ರಕ್ರಿಯೆ ಅಂತಿಮಗೊಂಡ 368 ಸಹಾಯಕ ಎಂಜಿನಿಯರ್‌(ವಿದ್ಯುತ್‌), 17 ಸಹಾಯಕ ಎಂಜಿನಿಯರ್(ಸಿವಿಲ್), 15-ಕಿರಿಯ ಎಂಜಿನಿಯರ್(ಸಿವಿಲ್) ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ ನೇಮಕಾತಿ ಆದೇಶ ನೀಡಲಾಗಿದೆ.

535 ಅಭ್ಯರ್ಥಿಗಳ ಪೈಕಿ 502 (ಕಿರಿಯ ಎಂಜಿನಿಯರ್) ಅಭ್ಯರ್ಥಿಗಳಿಗೆ ಬುಧವಾರ ಮತ್ತು ಗುರುವಾರ ಕೌನ್ಸಿಲಿಂಗ್‌ ನಡೆಸಲಾಗಿದೆ. ಈ ಪೈಕಿ 73 ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಪ್ರದೇಶ ವೃಂದಕ್ಕೆ ಸೇರಿದ್ದು, ಉಳಿದ 429 ಅಭ್ಯರ್ಥಿಗಳು ಇತರೆ ವೃಂದದವರಾಗಿದ್ದಾರೆ.

ಇನ್ನುಳಿದಂತೆ, 360 ಕಿರಿಯ ಸಹಾಯಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಶುಕ್ರವಾರ (ಮೇ 24, 2024) ಕಡೆಯ ದಿನವಾಗಿದೆ. ಸ್ವೀಕರಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕ್ರಮವಹಿಸಲಾಗುವುದು. ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೊಂಡ ನಂತರ, ಎಲ್ಲಾ ಅಭ್ಯರ್ಥಿಗಳ ವಿದ್ಯಾರ್ಹತೆ ಹಾಗೂ ಮೀಸಲು ಕೋರಿರುವ ದಾಖಲೆಗಳ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪಡೆದು ತ್ವರಿತವಾಗಿ ಸ್ಥಳ ನಿಯುಕ್ತಿ ಹಾಗೂ ನೇಮಕ ಆದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಟಿಸಿಎಲ್‌ ತಿಳಿಸಿದೆ.

ಇದನ್ನೂ ಓದಿ | Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ 54 ಹುದ್ದೆ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ರಾಜ್ಯಾದ್ಯಂತ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ವಿದ್ಯುತ್‌ ಪ್ರಸರಣ ಸೇವೆ ಒದಗಿಸುವುದು ನಮ್ಮ ಬದ್ಧತೆ. ಈ ನಿಟ್ಟಿನಲ್ಲಿ ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ನಡೆಸಿ, ಅಭ್ಯರ್ಥಿಗಳಿಗೆ ಕೆಲಸದ ಆದೇಶ ನೀಡಲಾಗಿದೆ. 902 ಹೊಸ ಉದ್ಯೋಗಿಗಳ ನೇಮಕದ ಮೂಲಕ ಕೆಪಿಟಿಸಿಎಲ್‌ ಇನ್ನಷ್ಟು ಬಲಗೊಂಡು, ಗುಣಮಟ್ಟದ ಸೇವೆಯನ್ನು ಮುಂದುವರಿಸಲಿದೆ. ಆಯ್ಕೆ ಪ್ರಕ್ರಿಯೆಯನ್ನುಅತ್ಯಂತ ಪಾರದರ್ಶಕ ಮತ್ತು ಸಮರ್ಥವಾಗಿ ನಡೆಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

Continue Reading

ಉದ್ಯೋಗ

Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ 54 ಹುದ್ದೆ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

Job Alert: ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 54 ಸ್ಥಾನಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಕೊನೆಯ ದಿನ ನಾಳೆ (ಮೇ 24). ಬಿಸಿಎ, ಬಿ.ಎಸ್‌ಸಿ, ಬಿ.ಇ. ಅಥವಾ ಬಿ.ಟೆಕ್‌, ಎಂಸಿಎ ಪದವಿ ಪಡೆದವರು ಈ ಸುವರ್ಣಾವಕಾಶ ಬಳಸಿಕೊಳ್ಳಿ.

VISTARANEWS.COM


on

Job Alert
Koo

ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (India Post Payments Bank) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (IPPB Recruitment 2024). ಇನ್ಫರ್ಮೇಷನ್‌ ಟೆಕ್ನಾಲಜಿ ಎಕ್ಸಿಕ್ಯೂಟಿವ್‌ ಹುದ್ದೆ ಇದಾಗಿದ್ದು, ಒಟ್ಟು 54 ಸ್ಥಾನಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಉದ್ಯೋಗದ ಸ್ಥಳ: ಚೆನ್ನೈ, ಮುಂಬೈ, ದೆಹಲಿ. ಬಿಸಿಎ, ಬಿಎಸ್‌ಸಿ ಓದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ನಾಳೆಯೇ (ಮೇ 24) ಕೊನೆಯ ದಿನ (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಕ್ಸಿಕ್ಯೂಟಿವ್‌ (ಅಸೋಸಿಯೇಟ್‌ ಕನ್ಸಲ್‍ಟೆಂಟ್‍) (Executive (Associate Consultant)- 28, ಎಕ್ಸಿಕ್ಯೂಟಿವ್‌ (ಕನ್ಸಲ್‍ಟೆಂಟ್‍) (Executive (Consultant) – 21 ಮತ್ತು ಎಕ್ಸಿಕ್ಯೂಟಿವ್‌ (ಸೀನಿಯರ್ ಕನ್ಸಲ್‍ಟೆಂಟ್‍)‌ (Executive (Senior Consultant) – 5 ಹುದ್ದೆಗಳಿವೆ. IPPB official notification ಪ್ರಕಾರ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿಸಿಎ, ಬಿ.ಎಸ್‌ಸಿ, ಬಿ.ಇ. ಅಥವಾ ಬಿ.ಟೆಕ್‌, ಎಂಸಿಎ ಪದವಿ ಪಡೆದಿರಬೇಕು. ಜತೆಗೆ 1ರಿಂದ 6 ವರ್ಷದವರೆಗೆ ಅನುಭವ ಹೊಂದಿರುವುದು ಕಡ್ಡಾಯ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 22 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ. ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 150 ರೂ. ಮತ್ತು ಉಳಿದೆಲ್ಲ ವರ್ಗಗಳ ಅಭ್ಯರ್ಥಿಗಳು 750 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ವಿಧಾನ ಬಳಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಆನ್‌ಲೈನ್‌ ಪರೀಕ್ಷೆ, ಗ್ರೂಪ್‌ ಡಿಸ್ಕಷನ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದ್ದು, ಆಯ್ಕೆಯಾದವರಿಗೆ 10,00,000 ರೂ.-25,00,000 ರೂ. ವಾರ್ಷಿಕ ವೇತನ ದೊರೆಯಲಿದೆ.

IPPB Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಕೆ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಮೊದಲು ನಿಮ್ಮ ಹೆಸರು ನೋಂದಾಯಿಸಿ.
  • ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಈಗ ತೆರೆದುಕೊಳ್ಳುವ IPPB Online Application Form ಅನ್ನು ಸರಿಯಾದ ಮಾಹಿತಿ ನೀಡಿ ಭರ್ತಿ ಮಾಡಿ.
  • ಅಗತ್ಯವಾದ ಡಾಕ್ಯುಮೆಂಟ್‌, ಫೋಟೊ, ಸಹಿ ಇತ್ಯಾದಿಯನ್ನು ಸರಿಯಾದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ನೀಡಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿಯಾಗಿದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ

Continue Reading

ಶಿಕ್ಷಣ

UPSC: ಐಇಎಸ್‌ / ಐಎಸ್‌ಎಸ್‌ಇ 2024 ಪರೀಕ್ಷೆಯ ದಿನಾಂಕ ಪ್ರಕಟ: ಇಲ್ಲಿದೆ ವೇಳಾಪಟ್ಟಿ

UPSC: ಕೇಂದ್ರ ಲೋಕ ಸೇವಾ ಆಯೋಗವು 2024ನೇ ಸಾಲಿನ ಇಂಡಿಯನ್ ಎಕನಾಮಿಕ್ ಸರ್ವಿಸ್ ಮತ್ತು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಎಕ್ಸಾಮಿನೇಷನ್ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಯುಪಿಎಸ್‌ಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಟೈಮ್‌ ಟೇಬಲ್‌ ಪ್ರಕಟಿಸಿದ್ದು, ಈ ಬಗ್ಗೆ ವಿವರ ಇಲ್ಲಿದೆ.

VISTARANEWS.COM


on

UPSC
Koo

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ (UPSC)ವು 2024ನೇ ಸಾಲಿನ ಇಂಡಿಯನ್ ಎಕನಾಮಿಕ್ ಸರ್ವಿಸ್ (Indian Economic Service-IES) / ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಎಕ್ಸಾಮಿನೇಷನ್ (Indian Statistical Service Examination-ISSE)ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಯುಪಿಎಸ್‌ಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಟೈಮ್‌ ಟೇಬಲ್‌ ಪ್ರಕಟಿಸಿದ್ದು, ಈ ಬಗ್ಗೆ ವಿವರ ಇಲ್ಲಿದೆ.

ಯಾವಾಗ, ಯಾವ ಪರೀಕ್ಷೆ?

ಯುಪಿಎಸ್‌ಸಿ ಐಇಎಸ್ / ಐಎಸ್ಎಸ್ಇ 2024 ಪರೀಕ್ಷೆಗಳು ಜೂನ್ 21ರಂದು ಆರಂಭವಾಗಲಿದ್ದು, 22, 23ರಂದು ನಡೆಯಲಿದೆ. ಈ ಪರೀಕ್ಷೆ ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಅಧ್ಯಯನ, ಸಾಮಾನ್ಯ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಭಾರತೀಯ ಅರ್ಥಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳಲ್ಲಿ ನಡೆಯಲಿದೆ. ಆರ್ಥಿಕ ಮತ್ತು ಸಂಖ್ಯಾಶಾಸ್ತ್ರೀಯ ಕ್ಷೇತ್ರಗಳಲ್ಲಿ ವೃತ್ತಿ ಜೀವನದ ನಡೆಸಲು ಬಯಸುವವರು ಈ ಪ್ರತಿಷ್ಠಿತ ಪರೀಕ್ಷೆಯ ವೇಳಾಪಟ್ಟಿಯನ್ನು ಎಚ್ಚರಿಕೆಯಿಂದ ಗಮನಿಸುವಂತೆ ಪ್ರಕಟಣೆ ತಿಳಿಸಿದೆ. ಪ್ರಶ್ನೆ ಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಜೂನ್‌ 21ರಂದು ಬೆಳಿಗ್ಗೆ 9 ಗಂಟೆಗೆ ಸಾಮಾನ್ಯ ಇಂಗ್ಲಿಷ್‌ ಮತ್ತು ಅಪರಾಹ್ನ 2.30ಕ್ಕೆ ಸಾಮಾನ್ಯ ಅಧ್ಯಯನ ಪರೀಕ್ಷೆ ನಡೆಯಲಿದೆ. ಜೂನ್‌ 22ರಂದು ಬೆಳಿಗ್ಗೆ 9 ಗಂಟೆಗೆ ಸಾಮಾನ್ಯ ಅರ್ಥಶಾಸ್ತ್ರ-I, ಸ್ಟ್ಯಾಟಿಸ್ಟಿಕ್ಸ್‌-I ಮತ್ತು ಅಪರಾಹ್ನ 2.30ರಿಂದ ಸಾಮಾನ್ಯ ಅರ್ಥಶಾಸ್ತ್ರ-II ಹಾಗೂ ಸ್ಟ್ಯಾಟಿಸ್ಟಿಕ್ಸ್‌-II ಎಕ್ಸಾಂ ಆಯೋಜಿಸಲಾಗಿದೆ. ಇನ್ನು ಜೂನ್‌ 23ರಂದು ಬೆಳಿಗ್ಗೆ 9 ಗಂಟೆಯಿಂದ ಸಾಮಾನ್ಯ ಅರ್ಥಶಾಸ್ತ್ರ-III ಮತ್ತು ಸ್ಟ್ಯಾಟಿಸ್ಟಿಕ್ಸ್‌-III ಹಾಗೂ ಅಪರಾಹ್ನ 2.30ರಿಂದ ಭಾರತೀಯ ಅರ್ಥಶಾಸ್ತ್ರ ಹಾಗೂ ಸ್ಟ್ಯಾಟಿಸ್ಟಿಕ್ಸ್‌-IV ಪರೀಕ್ಷೆ ನಡೆಯಲಿದೆ.

ವೇಳಾಪಟ್ಟಿ ವೀಕ್ಷಿಸಲು ಹೀಗೆ ಮಾಡಿ

  • ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ https://upsc.gov.in/ಗೆ ಭೇಟಿ ನೀಡಿ.
  • ಬಲಭಾಗದಲ್ಲಿ ಕಾಣಿಸುವ What’s New ಆಯ್ಕೆಯ ಕೆಳಗೆ ಕಂಡು ಬರುವ Examination Time Table: Indian Economic Service – Indian Statistical Service Examination, 2024 ಆಯ್ಕೆಯನ್ನು ಕ್ಲಿಕ್‌ ಮಾಡಿ.
  • ಈಗ ತೆರೆದುಕೊಳ್ಳುವ ಪುಟದಲ್ಲಿನ Document ಆಪ್ಶನ್‌ ಆಯ್ಕೆ ಮಾಡಿದರೆ ವೇಳಾಪಟ್ಟಿ ತೆರೆದುಕೊಳ್ಳುತ್ತದೆ.

Indian Economic Service – Indian Statistical Service Examinationನ ಟೈಮ್‌ ಟೇಬಲ್‌ ನೇರವಾಗಿ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ.

ಹಾಲ್‌ ಟಿಕೆಟ್‌ ಯಾವಾಗ?

ಈ ಪರೀಕ್ಷೆಗೆ 2024ರ ಏಪ್ರಿಲ್ 10ರಿಂದ 30ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಲಿಖಿತ ಪರೀಕ್ಷೆಯು ಗರಿಷ್ಠ 1,000 ಅಂಕಗಳನ್ನು ಹೊಂದಿದೆ. ಪ್ರವೇಶ ಪತ್ರ (Hall Ticket)ವನ್ನು ಪರೀಕ್ಷೆಯ ಏಳು ದಿನಗಳ ಮೊದಲು ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಬಹುದು. ಈ ಪರೀಕ್ಷೆಯ ಮೂಲಕ ಆಯ್ಕೆಯಾದ ಅಧಿಕಾರಿಗಳನ್ನು ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ಹಾಗೂ ಕಾರ್ಯಗತಗೊಳಿಸುವಲ್ಲಿ ಮತ್ತು ಸರ್ಕಾರದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಲು ನೇಮಿಸಲಾಗುತ್ತದೆ.

ಇದನ್ನೂ ಓದಿ: UPSC EXAM-2023: ಯುಪಿಎಸ್‌ಸಿ ಟಾಪರ್ ವಾಸಿಸುತ್ತಿದ್ದುದು ಮನೆಯಲ್ಲಲ್ಲ, ಈ ಜೋಪಡಿಯಲ್ಲಿ!

Continue Reading

ಉದ್ಯೋಗ

Job Alert: ಟಿಸಿಎಸ್‌ನಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ

Job Alert: ದೇಶದ ಐಟಿ ವಲಯದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನಲ್ಲಿ ಖಾಲಿ ಇರುವ ಸಾವಿರಾರು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಎನ್‌ಸಿಆರ್‌, ಪುಣೆ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ ಮುಂತಾದೆಡೆಗೆ ನೇಮಕಾತಿ ನಡೆಯಲಿದೆ. ವಿವಿಧ ಹುದ್ದೆಗಳಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಲು ಜುಲೈವರೆಗೂ ಅವಕಾಶ ನೀಡಲಾಗಿದೆ.

VISTARANEWS.COM


on

Job Alert
Koo

ಬೆಂಗಳೂರು: ಒಂದೊಳ್ಳೆ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ನಿಮಗೊಂದು ಗುಡ್‌ನ್ಯೂಸ್‌. ದೇಶದ ಐಟಿ ವಲಯದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನಲ್ಲಿ ಖಾಲಿ ಇರುವ ಸಾವಿರಾರು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. 1 ವರ್ಷದ ಕಾರ್ಯಾನುಭ ಇದ್ದವರೂ ಅರ್ಜಿ ಸಲ್ಲಿಸಬಹುದು (Tcs Recruitment 2024). ಬೆಂಗಳೂರು ಸೇರಿದಂತೆ ದೇಶಾದ್ಯಂತ ವಿವಿಧ ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ವಿವಿಧ ಹುದ್ದೆಗಳಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಲು ಜುಲೈವರೆಗೂ ಅವಕಾಶ ನೀಡಲಾಗಿದೆ (Job Alert).

ಹುದ್ದೆಗಳ ವಿವರ

ವೈರ್‌ಲೈನ್‌ – ವೈರ್‌ಲೆಸ್ ನೆಟ್‌ವರ್ಕ್‌ ಸೆಕ್ಯೂರಿಟಿ, ಆಪರೇಷನ್ ಎನೇಬಲ್ಮೆಂಟ್ -ಹ್ಯೂಮನ್ ರಿಸೋರ್ಸ್, ಇಪಿ ಡ್ರೈವ್
ಆಪರೇಷನ್‌ ಸ್ಪೆಷಲಿಸ್ಟ್‌, ಎಂಎಫ್‌ಜಿ ಇಯು ಡ್ರೈವ್, ಎನ್‌ಜಿಎಂ ಎಪಿಎಸಿ ಬಿಎಫ್‌ಎಸ್‌, ಕಸ್ಟಮರ್ ಸರ್ವೀಸ್, ಆ್ಯಕ್ಟಿವ್ ಡೈರೆಕ್ಟರಿ ಡೈರೆಕ್ಟರಿ, ಎಸ್‌ಸಿಸಿಎಂ, ವಿಂಡೋಸ್ ಅಡ್ಮಿನ್, ಜಾವ ಡೆವಲಪರ್, ಪಬ್ಲಿಕ್ ಕ್ಲೌಡ್ ಎಡಬ್ಲ್ಯೂಎಸ್ ಅಡ್ಮಿನ್, ಬ್ಯಾಕಪ್ ಅಡ್ಮಿನ್, ಸ್ಟೋರೇಜ್ ಅಡ್ಮಿನ್, DevOps Admin, ಮಿಡಲ್‌ವೇರ್ ಅಡ್ಮಿನ್, ಓಪೆನ್‌ಶಿಫ್ಟ್‌ ಅಡ್ಮಿನ್, ನೆಟ್‌ವರ್ಕ್ ಅಡ್ಮಿನ್, ಡಾಟಾಬೇಸ್ ಅಡ್ಮಿನ್, ಇಎಲ್‌ಕೆ ಅಡ್ಮಿನ್, ಸೆಕ್ಯೂರಿಟಿ ಎಸ್‌ಎಂಇ, ಟೀಮ್‌ ಸೆಂಟರ್, ಲಿನಕ್ಸ್‌ ಅಡ್ಮಿನ್,
ಮೆಕ್ಯಾನಿಕಲ್ ಡಿಸೈನ್, ಸರ್ವೀಸ್‌ನೌ ಡೆವಲಪರ್, ಓಪೆನ್‌ಸ್ಟಾಕ್‌ ಅಡ್ಮಿನ್, ನೆಟ್‌ವರ್ಕ್‌ ಟೆಸ್ಕಿಂಗ್ ಆ್ಯಂಡ್‌ ಆಟೋಮೇಷನ್, ಪ್ರೋಗ್ರೆಸ್ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್, ಜಾವ ಫುಲ್‌ಸ್ಟಾಕ್ ಡೆವಲಪರ್ ಮುಂತಾಹ ಹುದ್ದೆಗಳು ಖಾಲಿ ಇವೆ.

ಗಮನಿಸಿ, ಒಂದೊಂದು ಹುದ್ದೆಗೂ ಅರ್ಜಿ ಸಲ್ಲಿಸಲು ಬೇರೆ ಬೇರೆ ದಿನಾಂಕ ಮತ್ತು ಕಾರ್ಯಾನುಭವ ನಿಗದಿ ಪಡಿಸಲಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಎನ್‌ಸಿಆರ್‌, ಪುಣೆ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ ಮುಂತಾದೆಡೆಗೆ ನೇಮಕಾತಿ ನಡೆಯಲಿದೆ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ನೀವು ಹುಡುಕುತ್ತಿರುವ ಆಸಕ್ತ ಹುದ್ದೆ ಸಿಕ್ಕಲ್ಲಿ ಅದರ ಮೇಲೆ ಕ್ಲಿಕ್ ಮಾಡಿ.
  • ನಂತರ ಈ ಹುದ್ದೆಯ ಕುರಿತು ಅರ್ಹತೆ, ರೋಲ್ ಕರ್ತವ್ಯ, ಅನುಭವ, ಇತರ ವಿವರಗಳು ಇರುತ್ತವೆ. ಓದಿಕೊಳ್ಳಿ.
  • ನಂತರ ‘Apply’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಇಮೇಲ್‌ ವಿಳಾಸ, ಪಾಸ್‌ವರ್ಡ್‌ ಮೂಲಕ ಸೈನ್‌ ಇನ್ ಆಗಿ, ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Job alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Continue Reading
Advertisement
Narendra Modi
ದೇಶ3 hours ago

Narendra Modi: ನನ್ನನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ; ಮಮತಾ ಬ್ಯಾನರ್ಜಿಗೆ ಮೋದಿ ಚಾಟಿ

ಕರ್ನಾಟಕ3 hours ago

Driving Bus With Umbrella: ಛತ್ರಿ ಹಿಡಿದು ಬಸ್ ಚಾಲನೆ; ಮೋಜಿಗಾಗಿ ವಿಡಿಯೊ ಮಾಡಿದ ಡ್ರೈವರ್‌, ಕಂಡಕ್ಟರ್‌ ಸಸ್ಪೆಂಡ್‌!

Vistara editorial
ಬೆಂಗಳೂರು3 hours ago

ವಿಸ್ತಾರ ಸಂಪಾದಕೀಯ: ಕಸ ವಿಲೇವಾರಿಗೆ ಹೊಸ ಸಂಸ್ಥೆ, ಜಾರಿಕೊಳ್ಳುವ ನೆಪ ಆಗದಿರಲಿ

SRH vs RR
ಕ್ರೀಡೆ3 hours ago

SRH vs RR: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್’; ಫೈನಲ್​ನಲ್ಲಿ ಕೆಕೆಆರ್ ವಿರುದ್ಧ ಕಣಕ್ಕೆ​

Electric Shock
ಕ್ರೈಂ4 hours ago

Electric Shock: ಲಿಂಗಸುಗೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Prajwal Revanna Case
ಕರ್ನಾಟಕ4 hours ago

Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ

Kangana Ranaut
ದೇಶ5 hours ago

Kangana Ranaut: ಈ ಗುಲಾಬಿಯು ನಿಮಗಾಗಿ; ಮೋದಿಗೆ ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದ ಕಂಗನಾ! Photo ಇದೆ

T20 World Cup 2024
ಕ್ರೀಡೆ5 hours ago

T20 World Cup 2024: ಕೊನೆಗೂ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ

Prajwal Revanna Case
ಕರ್ನಾಟಕ5 hours ago

Prajwal Revanna Case: ವಕೀಲ ದೇವರಾಜೇಗೌಡಗೆ ಇನ್ನೂ 14 ದಿನ ಜೈಲೇ ಗತಿ; ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

Yuzvendra Chahal
ಕ್ರಿಕೆಟ್5 hours ago

Yuzvendra Chahal: ಸಿಕ್ಸರ್​ ಹೊಡೆಸಿಕೊಂಡು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌