ಕರ್ನಾಟಕ
ಶೌಚಾಲಯ ಕಟ್ಟಿಸಿದರೂ ಕೆಲವರಿಗೆ ತಂಬಿಗೆ ಹಿಡಿದರೇ ಆನಂದ: ಸಚಿವ ಈಶ್ವರಪ್ಪ
ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೆ ಸಂಪೂರ್ಣ ಗುರಿ ಸಾಧನೆ ಮಾಡಲಾಗಿದೆ. ಆದರೆ ಅನೇಕರು ಇಂದಿಗೂ ಅದನ್ನು ಬಳಸುತ್ತಿಲ್ಲ ಎನ್ನುವುದು ಸತ್ಯ ಎಂದಿದ್ದಾರೆ.
ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆ ರೂಪಿಸಿ, ಅನುದಾನ ನೀಡಿ ಪ್ರತಿ ಮನೆಯಲ್ಲಿ ಶೌಚಾಲಯ ನಿರ್ಮಿಸಿದರೂ ಅನೇಕರಿಗೆ ತಂಬಿಗೆ ಹಿಡಿದು ರಸ್ತೆ ಬದಿಯಲ್ಲೊ, ಮೈದಾನದಲ್ಲೊ ಕುಳಿತರೇ ಆನಂದ ಎಂದರೆ ನಾನೇನು ಮಾಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಸ್ವಚ್ಛ ಭಾರತ ಅಭಿಯಾನದಲ್ಲಿ ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೆ ಸಂಪೂರ್ಣ ಗುರಿ ಸಾಧನೆ ಮಾಡಲಾಗಿದೆ. ಪ್ರತಿ ಮನೆಯಲ್ಲಿ ಶೌಚಾಲಯ ನಿರ್ಮಾಣವೂ ಆಗಿದೆ. ಆದರೆ ಅನೇಕರು ಇಂದಿಗೂ ಅದನ್ನು ಬಳಸುತ್ತಿಲ್ಲ ಎನ್ನುವುದು ಸತ್ಯ. ಇದು ಆ ಜಾತಿ ಈ ಜಾತಿ ಎನ್ನದೆ ಎಲ್ಲರಲ್ಲೂ ಸಮಸ್ಯೆಯಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ನೀರಿನ ಸಮಸ್ಯೆ ಇರುವ ಕಾರಣಕ್ಕೆ ಶೌಚಾಲಯಯ ಬಳಕೆ ಕಡಿಮೆಯಿದೆ ಎಂಬ ಮಾತನ್ನು ಈಶ್ವರಪ್ಪ ನಿರಾಕರಿಸಿದ್ದಾರೆ. ಈ ಸಮಸ್ಯೆ ಅನೇಕ ವರ್ಷಗಳಿಂದಲೂ ಇದೆ. ತಂಬಿಗೆ ಕೊಂಡೊಯ್ಯುವವರು ಅದೇ ನೀರನ್ನು ಶೌಚಾಲಯದಲ್ಲಿ ಬಳಸಲು ಆಗುವುದಿಲ್ಲವೇ? ನೀರಿನ ಸಮಸ್ಯೆಗಿಂತಲೂ ಹೆಚ್ಚಾಗಿ ಇದು ಮಾನಸಿಕ ಬದಲಾವಣೆಯ ವಿಚಾರ. ಶೌಚಾಲಯ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಗ್ರಾಮ ಪಂಚಾಯಿತಿಗಳು, ಸ್ವಸಹಾಯ ಗುಂಪುಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಹಿಂದಿಗೆ ಹೋಲಿಕೆ ಮಾಡಿದರೆ ಈಗ ಸಮಸ್ಯೆ ಕಡಿಮೆಯಾಗಿದೆ, ಆದರೂ ಇನ್ನೂ ಈ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ ಎಂದರು.
ಇಲಾಖೆ ಉತ್ತಮ ಸಾಧನೆ
ತಮ್ಮ ಇಲಾಖೆಯ ಸಾಧನೆಗಳನ್ನು ಪ್ರಚಾರ ಮಾಡುವ ಸಲುವಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಈಶ್ವರಪ್ಪ ಮಾತನಾಡಿದರು. ಸ್ವಚ್ಛ ಭಾರತದಲ್ಲಿ 12 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಶೌಚಾಲಯ ನಿರ್ಮಾಣ ಆಗಿದೆ. 45-46 ಗ್ರಾಮ ಪಂಚಾಯಿತಿಗಳು ಸೇರಿ 4 ಕ್ಲಸ್ಟರ್ ರೂಪಿಸಲಾಗಿದೆ. ಈ ರೀತಿ ಪ್ರತಿ ಜಿಲ್ಲೆಗೂ ಕ್ಲಸ್ಟರ್ ರೂಪಿಸಿ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತದೆ. ನರೇಗಾ, ಮನೆಮನೆಗೆ ಗಂಗೆ ಯೋಜನೆಗಳ ಕುರಿತು ಏಪ್ರಿಲ್ 28-29ರಂದು ಮಂಗಳೂರಿನಲ್ಲಿ ರಾಜ್ಯದ ಎಲ್ಲ ಸಿಇಒಗಳಿಗೆ ತರಬೇತಿ ನೀಡಲಾಗುತ್ತಿದೆ. ಯಾವ ಜಿಲ್ಲೆಗಳು ಮುಂದೆ ಇವೆ, ಯಾವ ಜಿಲ್ಲೆಗಳು ಮುಂದೆ ಇವೆ, ಪರಸ್ಪರ ಅನುಭವ ಹಂಚಿಕೆ ನಡೆಯುತ್ತದೆ. ಈಗಾಗಲೆ 18 ತಿಂಗಳ ಅವಧಿಯಲ್ಲಿ 5,623 ಗ್ರಂಥಾಲಯ ಸ್ಥಾಪನೆ ಆಗಿವೆ. ಶಿಕ್ಷಣ ಇಲಾಖೆ ಅಡಿಯಲ್ಲಿದ್ದ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪಡೆದಿದ್ದೇವೆ. ಗ್ರಂಥಪಾಲಕರಿಗೆ ನೀಡುತ್ತಿದ್ದ ₹7 ಸಾವಿರ ಗೌರವಧನವನ್ನು ₹12 ಸಾವಿರಕ್ಕೆ ಹೆಚ್ಚಳ ಮಾಡಿದ್ದೇವೆ. ಸದ್ಯ 2,214 ಡಿಜಿಟಲ್ ಗ್ರಂಥಾಲಯಗಳು ನಿರ್ಮಾಣವಾಗಿದ್ದು, ಭವಿಷ್ಯದಲ್ಲಿ ಎಲ್ಲ ಗ್ರಂಥಾಲಯಗಳನ್ನೂ ಡಿಜಿಟಲ್ ಮಾಡಲಾಗುತ್ತದೆ. ಗ್ರಾಮ ಸಡಕ್ ಯೋಜನೆ ಗುರಿಯನ್ನೂ ಸಾಧಿಸಿದ್ದೇವೆ. ರಾಜ್ಯ ಸರ್ಕಾರದಿಂದಲೂ ಅಮೃತ ಗ್ರಾಮೋತ್ಥಾನ ಯೋಜನೆ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇಲಾಖೆ ಪ್ರಗತಿ ತೃಪ್ತಿಕರವಾಗಿದೆ ಎಂದು ಈಶ್ವರಪ್ಪ ಹೇಳಿದರು.
ಪ್ರತಿಪಕ್ಷಗಳು ಹಿಂದು ಮುಸ್ಲಿಂ ಗಲಾಟೆ ಮಾಡುತ್ತಿವೆ. ನಾವು ಅಭಿವೃದ್ಧಿ ಕಾಮಗಾರಿಗಳು, ಇಲಾಖೆ ಸಾಧನೆಗಳನ್ನು ಮುಂದಿಟ್ಟುಕೊಂಡು ಜನರಿಗೆ ಮನವರಿಕೆ ಮಾಡುತ್ತಿದ್ದೇವೆ.
-ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
ಹೆಚ್ಚಿನ ಓದಿಗಾಗಿ: ಬ್ರಿಟಿಷರಿಗೂ ಬಿಜೆಪಿಯವರಿಗೂ ವ್ಯತ್ಯಾಸವಿಲ್ಲ: ಕಮಲ ಪಕ್ಷದ ವಿರುದ್ಧ HDK ವಾಗ್ದಾಳಿ
ಕರ್ನಾಟಕ
Hosakerehalli Lake: ಕೆರೆಯಲ್ಲಿ ರಸ್ತೆ; ಡಿಕೆಶಿ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು
Hosakerehalli Lake: ಬೆಂಗಳೂರಿನ ಹೊಸಕೆರೆಹಳ್ಳಿ ಕೆರೆಯ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಇಬ್ಬರು ಮಹಿಳಾ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು: ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಹೊಸಕೆರೆಹಳ್ಳಿ ಕೆರೆಯ (Hosakerehalli Lake) ಮಧ್ಯೆ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದ ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ರಮ ಕೈಗೊಳ್ಳಲು ಸೂಚಿಸಿದ ಬೆನ್ನಲ್ಲೇ ಇಬ್ಬರು ಮಹಿಳಾ ಅಧಿಕಾರಿಗಳನ್ನು ಅಮಾನತು ಮಾಡಿ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಕೆ.ಲಕ್ಷ್ಮೀಸಾಗರ್ ಆದೇಶ ಹೊರಡಿಸಿದ್ದಾರೆ.
ಘನತ್ಯಾಜ್ಯ ವಿಭಾಗದ ಇಇ ಎಚ್.ಎಸ್.ಮೇಘ ಹಾಗೂ ಎಇ ಶಿಲ್ಪ ಅಮಾನತುಗೊಂಡ ಅಧಿಕಾರಿಗಳು. ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆಯ ಮಧ್ಯೆ ರಸ್ತೆ ನಿರ್ಮಾಣಕ್ಕೆ ಕಾರಣಕರ್ತರಾದ ಅಧಿಕಾರಿಗಳು, ಎಂಜಿನಿಯರ್‌ಗಳನ್ನು ಸೋಮವಾರ (ಜೂನ್ 5) ಸಂಜೆ ಒಳಗೆ ಸೇವೆಯಿಂದ ಅಮಾನತು ಮಾಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದ್ದರು. ಹೀಗಾಗಿ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ.
ಇದನ್ನೂ ಓದಿ | ಗ್ಲೋಬಲ್ ಬೆಂಗಳೂರು ಮಾಡಲು ಸಲಹಾ ಸಮಿತಿ; ಇದು ಡಿಕೆಶಿ ಮಾಸ್ಟರ್ ಪ್ಲ್ಯಾನ್!
ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಐಡಿಯಾ ಕೊಟ್ಟವರು ಯಾರು? ಯೋಜನೆ ರೂಪಿಸಿದವರು ಯಾರು? ಅನುಷ್ಠಾನಕ್ಕೆ ತಂದವರು ಯಾರು? ಯಾಕಾಗಿ ಇದನ್ನು ಮಾಡಿದಿರಿ? ಯಾರಿಗೆ ಅನುಕೂಲ ಮಾಡಿಕೊಡಲು ಮಾಡಿದಿರಿ? ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದೀರಿ ಎಂದು ಶಿವಕುಮಾರ್ ಅವರು ಸೋಮವಾರ ಮಧ್ಯಾಹ್ನ ಸಭೆಯಲ್ಲಿ ಬಿಬಿಎಂಪಿ ಆಯುಕ್ತರನ್ನು ಪ್ರಶ್ನಿಸಿದ್ದರು. ಅಧಿಕಾರಿಗಳು ಇದಕ್ಕೆ ಉತ್ತರಿಸಲು ತಡಬಡಾಯಿಸಿದರು. ತಕ್ಷಣವೇ ಉಪ ಮುಖ್ಯಮಂತ್ರಿಗಳು ಹೊಸಕೆರೆಹಳ್ಳಿ ಕೆರೆ ಭಾಗ ಮಾಡಿ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚನೆ ನೀಡಿದ್ದರು.
ಕರ್ನಾಟಕ
Koppal News: ಕನಕಗಿರಿಯಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Koppal News: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.
ಕೊಪ್ಪಳ: ರಾಯಚೂರು ಜಿಲ್ಲೆಯ ರೇಖಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಒಬ್ಬ ಬಾಲಕ ಮೃತಪಟ್ಟು, 30ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಪ್ರಕರಣ ನಡೆದ ಬೆನ್ನಲ್ಲೇ ಅಂತಹುದೇ ಪ್ರಕರಣ ಜಿಲ್ಲೆಯಲ್ಲಿ (Koppal News) ನಡೆದಿದೆ. ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವೃದ್ಧೆಯೊಬ್ಬರು ಸಾವಿಗೀಡಾಗಿದ್ದು, 10ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.
ಹೊನ್ನಮ್ಮ ಶಿವಪ್ಪ (65) ಮೃತ ಮಹಿಳೆ. ಬಸರಿಹಾಳ ಗ್ರಾಮದಲ್ಲಿ ಸುಮಾರು ಮೂರು ದಿನಗಳಿಂದ ವಾಂತಿ- ಭೇದಿಯಿಂದ ಹಲವು ಜನರು ಬಳಲುತ್ತಿದ್ದರು. ಅಸ್ವಸ್ಥಗೊಂಡವರನ್ನು ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲುಷಿತ ನೀರು ಪೂರೈಕೆಯಾಗಿದೆ ಸ್ಥಳೀಯರು ಆರೋಪಿಸಿದ್ದಾರೆ. ವೃದ್ಧೆ ಸಾವು ಬಳಿಕ ದಿನದಿಂದ ದಿನಕ್ಕೆ ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಯ ಗಮನಕ್ಕೆ ತಾರದೆ ನಿರ್ಲಕ್ಷ್ಯ ವಹಿಸಿದ ಆರೋಪ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ.
ಇದನ್ನೂ ಓದಿ | ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್‌ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
ಟಯರ್ ಸಿಡಿದು ಪಲ್ಟಿ ಹೊಡೆದ ಕಾರು; ಐವರಿಗೆ ಗಾಯ
ಮಂಡ್ಯ: ಟಯರ್ ಸಿಡಿದು ಕಾರು ಪಲ್ಟಿಯಾಗಿದ್ದರಿಂದ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರ ವಲಯದ ಚಿಕ್ಕಮಂಡ್ಯ ಬಳಿ ಸೋಮವಾರ ನಡೆದಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರು ಮೂಲದ ಅರ್ಜುನ್, ಮಂಜುನಾಥ್ ಜಿ.ಅಡಿಗ, ಶ್ರೀಕಾಂತ್, ಕೃಷ್ಣ, ಮೂರ್ತಿ ಗಾಯಗೊಂಡವರು.
ಬೆಂಗಳೂರು ಕಡೆಯಿಂದ ಮೈಸೂರಿನತ್ತ ತೆರಳುತ್ತಿದ್ದಾಗ ಚಿಕ್ಕಮಂಡ್ಯ ಸಮೀಪಿಸುತ್ತಿದ್ದಂತೆ ಕಾರಿನ ಟಯರ್ ಸ್ಫೋಟಗೊಂಡಿದೆ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಕರ್ನಾಟಕ
World Environment Day: ಶಿವಮೊಗ್ಗದಲ್ಲಿ ಸಹಸ್ರ ವೃಕ್ಷಾರೋಪಣ; ಸಾವಿರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ
World Environment Day: ಶಿವಮೊಗ್ಗದ ತುಂಗಾ ಮೇಲ್ದಂಡೆ ಕಾಲುವೆಯ ಇಕ್ಕೆಲಗಳಲ್ಲಿ ಸಹಸ್ರ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಶಿವಮೊಗ್ಗ: ಪರಿಸರ ದಿನಾಚರಣೆ ನಿಮಿತ್ತ ವಿಸ್ತಾರ ನ್ಯೂಸ್ ಹಮ್ಮಿಕೊಂಡಿದ್ದ ಅಭಿಯಾನಕ್ಕೆ (World Environment Day) ಶಿವಮೊಗ್ಗದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ತುಂಗಾ ಮೇಲ್ದಂಡೆ ಕಾಲುವೆಯ ಇಕ್ಕೆಲಗಳಲ್ಲಿ ಸಹಸ್ರ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರಕಿದೆ. ನಗರ ವ್ಯಾಪ್ತಿಯ 11 ಕಿ.ಮೀ. ಉದ್ದದ ಕಾಲುವೆಯ ಎರಡೂ ಬದಿಗಳಲ್ಲಿ ಸಾವಿರ ಗಿಡಗಳನ್ನು ನೆಡುವ ಬೃಹತ್ ಅಭಿಯಾನಕ್ಕೆ ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಕಾರ್ಯವಾಹ ಪಟ್ಟಾಭಿರಾಮ ಚಾಲನೆ ನೀಡಿದರು.
ನಿರ್ಮಲ ತುಂಗಾ ಅಭಿಯಾನ ತಂಡ, ಪರ್ಯಾವರಣ ಸಂರಕ್ಷಣೆ, ಸರ್ಜಿ ಫೌಂಡೇಶನ್, ವಿಸ್ತಾರ ನ್ಯೂಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲಾಡಳಿತ, ತುಂಗಾ ಮೇಲ್ದಂಡೆ ಯೋಜನೆ, ಅರಣ್ಯ ಇಲಾಖೆ ಸಹಯೋಗ ನೀಡಿದ್ದು, ನಗರದ ಪರಿಸರ ಪ್ರೇಮಿಗಳು ಪರಿಸರ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಆರ್‌ಎಸ್‌ಎಸ್ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್, ಜಿಲ್ಲಾ ಸಂಘಚಾಲಕ ರಂಗನಾಥ, ಸರ್ಜಿ ಫೌಂಡೇಶನ್ ಮುಖ್ಯಸ್ಥ ಡಾ. ಧನಂಜಯ ಸರ್ಜಿ, ಮಾಚೇನಹಳ್ಳಿ ಕೈಗಾರಿಕಾ ವಸಾಹತು ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ದಿನೇಶ್ ಶೇಟ್, ತ್ಯಾಗರಾಜ ಮಿತ್ಯಾಂತ, ಬಾಲಕೃಷ್ಣ ನಾಯ್ಡು, ಗೊ.ಕೃ. ಭಾಗವತ್, ರಂಗಭೂಮಿ ಮಂಜು, ನಾಗಭೂಷಣ್ ಸ್ವಾಮಿ, ಕುಮಾರಿಪ್ರಣಮ್ಯ, ಪ್ರಣೀತಾ, ಮುಂತಾದವರು ಇದ್ದರು.
ಉತ್ತರ ಕನ್ನಡ
Uttara Kannada News: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
Uttara Kannada News: ಶಿರಸಿಯ ಹೊರವಲಯದ ವೇದ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದ್ದಾರೆ.
ಶಿರಸಿ: ಪರಿಸರ ಸಂರಕ್ಷಣೆಗೆ (Environmental protection) ಪ್ರತಿಯೊಬ್ಬರೂ (Everyone) ಕಂಕಣ ಬದ್ಧರಾಗಬೇಕು ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಹೊರವಲಯದ ವೇದ ಆರೋಗ್ಯ ಕೇಂದ್ರದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವೃಕ್ಷಾರೋಪಣ ನಡೆಸಿ ಮಾತನಾಡಿದ ಶ್ರೀಗಳು, ಪ್ರಧಾನಿ ನರೇಂದ್ರ ಮೋದಿ ಅವರೂ ಸ್ವಚ್ಛ ಭಾರತ, ಕಸ ಮುಕ್ತ ಭಾರತದ ಕನಸು ಕಂಡಿದ್ದಾರೆ. ಹುಕ್ಕೇರಿ ಮಠದಿಂದಲೂ ಪ್ಲಾಸ್ಟಿಕ್ ಚೀಲ ಮುಕ್ತ ಮಾಡುವಲ್ಲಿ ನಮ್ಮದೇ ಕೊಡುಗೆ ಕೊಡಬೇಕು ಎಂದು 2.80 ಲಕ್ಷ ಬಟ್ಟೆ ಚೀಲಗಳನ್ನು ಹೊಲಿಸಿ ವಿತರಣೆ ಮಾಡಿದ್ದೆವು ಎಂದರು.
ಇದನ್ನೂ ಓದಿ: Kiccha Sudeep: ಅಭಿಷೇಕ್ ಅಂಬರೀಷ್ಗೆ ಭರ್ಜರಿ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್!
ಒಂದು ವೃಕ್ಷವು ಸ್ವಚ್ಛ ಮನದಿಂದ ಎಷ್ಟೆಲ್ಲ ನೆರವಾಗುತ್ತದೆ. ಹಾಗೆ ಪರಿಸರದ ಉಳಿವಿಗೆ ಸರ್ವರೂ ಕಂಕಣ ಬದ್ಧರಾಗಬೇಕು. ಇಲ್ಲವಾದರೆ ಭವಿಷ್ಯಕ್ಕೆ ದೊಡ್ಡ ಕಂಟಕ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, 1974 ರಿಂದ ಪರಿಸರದ ದಿನ ಆಚರಣೆ ಮಾಡುತ್ತಿದ್ದೇವೆ. ಈ ಬಾರಿಯ ಘೋಷ ವಾಕ್ಯ ಪ್ಲಾಸ್ಟಿಕ್ ಮಾಲಿನ್ಯ ತಡೆಯಬೇಕು. ಎಲ್ಲರಿಗೂ ವೈಯಕ್ತಿಕ, ಸಾಮಾಜಿಕ, ಕೌಟುಂಬಿಕ, ಸಂಘಟಿತ ಜೀವನದಲ್ಲಿ ಪರಿಸರದ ಮಹತ್ವ ಅರಿವಿದೆ. ಆದರೆ, ಈ ಅರಿವನ್ನು ವೈಯಕ್ತಿಕ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು ಎಂದರು.
ಭವಿಷ್ಯದ ಜನಾಂಗದ ಭವಿಷ್ಯ ಅಂಧಕಾರಕ್ಕೆ ಹೋಗದಂತೆ ಪರಿಸರ ಸಂರಕ್ಷಿಸಬೇಕು. ಯಾರೂ ಉದಾಸೀನ ಮಾಡದೇ ಪರಿಸರ ಸಂರಕ್ಷಣೆ ಮಾಡಬೇಕು ಎಂದೂ ಹೇಳಿದರು.
ಇದನ್ನೂ ಓದಿ: Eco friendly Fashion: ಪರಿಸರ ಸ್ನೇಹಿ ಉಡುಪುಗಳಿಗೂ ಸಿಕ್ತು ಗ್ಲಾಮರ್ ಟಚ್
ಪ್ರಸಿದ್ಧ ವೈದ್ಯ ಡಾ. ವೆಂಕಟ್ರಮಣ ಹೆಗಡೆ ಮಾತನಾಡಿ, ಪ್ರಕೃತಿ ಸಂರಕ್ಷಣೆ ಎಲ್ಲರ ಜವಾಬ್ದಾರಿ. ನಿಸರ್ಗದ ಉಳಿದರೆ ಮಾತ್ರ ಎಲ್ಲ ಜೀವಿಗಳ ಉಳಿವು. ಈ ಸತ್ಯ ಅರಿತರೆ ಮಾತ್ರ ಪರಿಸರ ಉಳಿಸುವ ಜವಬ್ದಾರಿ ಹೃದಯದಿಂದ ಆರಂಭವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಗೀತಾ ಹೆಗಡೆ, ನಾರಾಯಣ ಹೆಗಡೆ ಸೇರಿದಂತೆ ಇತರರು ಇದ್ದರು.
-
ಕರ್ನಾಟಕ17 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ15 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ8 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ಕರ್ನಾಟಕ12 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ದೇಶ13 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ16 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಪರಿಸರ8 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ
-
ಕರ್ನಾಟಕ15 hours ago
ಕಲಬುರಗಿಯಲ್ಲಿ ಚಂಡಿಕಾ ಹೋಮದ ಬೆಂಕಿಯಲ್ಲಿ ಕಾಣಿಸಿಕೊಂಡ ದುರ್ಗಾ ದೇವಿ!; ಇಲ್ಲಿದೆ ನೋಡಿ ಫೋಟೊ