abhishek ambareesh and aviva bidapas grand reception in bangaloreAbhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ - Vistara News

ಕರ್ನಾಟಕ

Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್‌ ವಿಡಿಯೊ ಇಲ್ಲಿದೆ

Abhishek Ambareesh Reception: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಿಡಪ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರರಂಗದ ಗಣ್ಯರು, ಪ್ರಮುಖ ರಾಜಕೀಯ ನಾಯಕರು ಆಗಮಿಸಿ ದಂಪತಿಗೆ ಶುಭ ಕೋರಿದ್ದಾರೆ.

VISTARANEWS.COM


on

abhishek ambareesh wedding Reception
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Harassment Case : ಹೆಂಡತಿಗೆ ಅಶ್ಲೀಲ ವಿಡಿಯೊ ಕಳುಹಿಸಿದ ಗಂಡನಿಗೆ 1 ತಿಂಗಳ ಜೈಲು ಶಿಕ್ಷೆ!

Harassment Case : ಹೆಂಡತಿಗೆ ಅಶ್ಲೀಲ ವಿಡಿಯೊ ಕಳುಹಿಸಿದ ಗಂಡನಿಗೆ ಒಂದು ವರ್ಷ ಜೈಲಾಗಿದೆ. ಏನಿದು ವಿಚಿತ್ರ ಪ್ರಕರಣ ಅಂತೀರಾ? ಈ ವರದಿ ನೋಡಿ. ಇಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ ಅನ್ವಯವಾಗಿದೆ.

VISTARANEWS.COM


on

Harassment Case obscene video
Koo

ಬೆಂಗಳೂರು: ವ್ಯಕ್ತಿಯೊಬ್ಬ ವಿದೇಶದಲ್ಲಿರುವ ತನ್ನ ಹೆಂಡತಿಗೆ ಅಶ್ಲೀಲ ವಿಡಿಯೋ (Obscene Video) ಕಳುಹಿಸಿ ಜೈಲುಪಾಲಾಗಲು ಸಿದ್ಧನಾಗಿದ್ದಾನೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ (Employee in Private Company) ಈ ವ್ಯಕ್ತಿಯನ್ನು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ (Information Technology Act) ಆರೋಪಿ (Harassment Case) ಎಂದು ಗುರುತಿಸಲಾಗಿದೆ. ಆತನಿಗೆ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯ 1 ತಿಂಗಳು ಸಾದಾ ಜೈಲು ಶಿಕ್ಷೆ (one month Jail Term) ಮತ್ತು 45 ಸಾವಿರ ರೂ. ದಂಡ ವಿಧಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಕಾಯಿದೆ ಗಂಡ-ಹೆಂಡಿರ ನಡುವೆ ಹರಿದಾಡೋ ವಿಡಿಯೊಗಳಿಗೂ ಅನ್ವಯವಾಗುತ್ತದಾ ಎನ್ನುವುದು ನಿಮ್ಮ ಪ್ರಶ್ನೆ ಆಗಿರಬಹುದು. ಆದರೆ, ಈ ಪ್ರಕರಣದಲ್ಲಿ ಒಂದು ಟ್ವಿಸ್ಟ್‌ ಇದೆ. ಅದೇನೆಂದರೆ ಈ ಗಂಡ ಹೆಂಡತಿ ಈಗ ಇಂಥ ವಿಡಿಯೊಗಳನ್ನು ಹಂಚಿಕೊಂಡು ಖುಷಿಪಡುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಅವರಿಬ್ಬರ ನಡುವೆ ಜಗಳವಾಗಿ ಡೈವೋರ್ಸ್‌ ಕೇಸು ನಡೆಯುತ್ತಿದೆ.

ಅಂದ ಹಾಗೆ ಹೆಂಡತಿಗೆ ಅಶ್ಲೀಲ ವಿಡಿಯೊ ಕಳುಹಿಸಿ ಶಿಕ್ಷೆಗೆ ಒಳಗಾದ ಈ ವ್ಯಕ್ತಿಯ ಹೆಸರು ರಾಘವನ್‌ ಸಂಪತ್‌ (30). ರಾಘವನ್‌ ಸಂಪತ್‌ ಮತ್ತು ಯುವತಿ ನಡುವೆ 2016ರಲ್ಲಿ ಮದುವೆಯಾಗಿತ್ತು. ವಿದೇಶದಲ್ಲಿ ಉದ್ಯೋಗಿಯಾಗಿದ್ದ ಆಕೆ 2016ರಲ್ಲಿ ನಗರಕ್ಕೆ ಆಗಮಿಸಿ ಸಂಪತ್‌ ರಾಘವನ್‌ರನ್ನು ಮದುವೆಯಾಗಿದ್ದರು.

ಮುಂದೆ ಒಂದೇ ವರ್ಷದಲ್ಲಿ ಅವರಿಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತು ಮತ್ತು ಇಬ್ಬರೂ ಸೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಆದರೆ, ಅರ್ಜಿಯ ವಿಚಾರಣೆ ನಿಧಾನಕ್ಕೆ ನಡೆಯುತ್ತಿದೆ. ಈ ನಡುವೆ ಯುವತಿ ಮತ್ತು ಕೆಲಸದ ಸಲುವಾಗಿ ವಿದೇಶಕ್ಕೆ ಹೋಗಿದ್ದು, ಅಲ್ಲೇ ಇದ್ದರು.

ಇದರ ನಡುವೆ ಸಂಪತ್‌ ರಾಜ್‌ ಇರಲಾರದವನು ಇರುವೆ ಬಿಟ್ಟುಕೊಂಡ ಅನ್ನುವ ಹಾಗೆ ಒಂದು ಅಶ್ಲೀಲ ವಿಡಿಯೊವನ್ನು ಹೆಂಡತಿಗೆ ಈ ಮೇಲ್‌ ಮೂಲಕ ಕಳುಹಿಸಿದ್ದಾನೆ. ಸಾಲದ್ದಕ್ಕೆ ಅದರಲ್ಲಿ ಅಪಮಾನಕಾರಿ ಮಾಡುಗಳನ್ನು ಆಡಿದ್ದಾನೆ. ಇದು ಯಾವ ಅಶ್ಲೀಲ ವಿಡಿಯೊ ಎನ್ನುವುದು ಗೊತ್ತಿಲ್ಲ. ಅವರಿಬ್ಬರ ಖಾಸಗಿ ವಿಡಿಯೊನಾ ಅಥವಾ ಬೇರೆ ವಿಡಿಯೊನಾ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.

ವಿಡಿಯೊವನ್ನು ನೋಡಿದ ಯುವತಿ ತನ್ನ ಸೋದರನಿಗೆ ವಿಷಯ ತಿಳಿಸಿದ್ದಾಳೆ. ಆತ ಕೂಡಲೇ ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಗೆ ಹೋಗಿ ತನ್ನ ಬಾವನ ವಿರುದ್ಧ ದೂರು ದಾಖಲಿಸಿದ್ದಾನೆ. ಅದರ ಬೆನ್ನಿಗೆ ಯುವತಿ ಕೂಡಾ ವಿದೇಶದಿಂದ ಬಂದು ಸ್ವತಃ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ : Family Problem : ಹೆಂಡತಿಗೆ ಮಂಡೆ ಸರಿ ಇಲ್ಲ ಎಂದ ಗಂಡನಿಗೆ ಹೈಕೋರ್ಟ್‌ ದಂಡ!

ಇದೊಂದು ಗಂಭೀರ ಪ್ರಕರಣವೆಂದು ಪರಿಗಣಿಸಿ ಅದನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ತನಿಖಾಧಿಕಾರಿಗಳು ರಾಘವನ್‌ ವಿರುದ್ಧ ಐಟಿ ಕಾಯಿದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿಗೆ ಒಂದು ತಿಂಗಳ ಜೈಲು ಮತ್ತು 45 ಸಾವಿರ ರೂ. ದಂಡ ವಿಧಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಕಾಯಿದೆ ಪ್ರಕಾರ, ಅಶ್ಲೀಲ ವಿಡಿಯೊಗಳನ್ನು ಯಾರು ಯಾರಿಗೂ ಪ್ರಸರಣ ಮಾಡಬಾರದು. ಅದರಲ್ಲೂ ಇನ್ನೊಬ್ಬರ ಇಚ್ಛೆಗೆ ವಿರುದ್ಧವಾಗಿ ಮಾಡಲೇಬಾರದು. ಇಲ್ಲಿ ಗಂಡ-ಹೆಂಡತಿ ನಡುವೆ ವೈಮನಸ್ಯವಿತ್ತು. ಒಂದೊಮ್ಮೆ ವೈಮನಸ್ಯ ಇಲ್ಲದಿದ್ದರೂ ಆಕೆಗೆ ಅದು ಇಷ್ಟವಿಲ್ಲ ಎಂದಾದರೆ ಆಕ್ಷೇಪ ಮಾಡಲು ಕಾಯಿದೆಯಲ್ಲಿ ಅವಕಾಶವಿದೆ.

Continue Reading

Lok Sabha Election 2024

Lok Sabha Election 2024: ಮಂಡ್ಯದಿಂದ ಎಚ್‌ಡಿಕೆ ಕಣಕ್ಕೆ? ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಬದಲು?

Lok Sabha Election 2024: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಿನೇ ದಿನೆ ರಾಜಕೀಯ ಚಟುವಟಿಕೆ ಬಿರುಸುಗೊಳ್ಳುತ್ತಿವೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಸಿ.ಎಸ್.‌ ಪುಟ್ಟರಾಜು ಅವರೇ ಕಣಕ್ಕಿಳಿಯುತ್ತಾರೆ ಎನ್ನಲಾಗಿತ್ತು. ಆದರೆ, ಈಗ ಎಚ್.ಡಿ. ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಇವರು ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನೇ ಬದಲು ಮಾಡುವ ಲೆಕ್ಕಾಚಾರದಲ್ಲಿದೆ ಎಂದು ತಿಳಿದುಬಂದಿದೆ.

VISTARANEWS.COM


on

Lok Sabha Election 2024 HD Kumaraswamy contest from Mandya and Congress candidate to be replaced
Koo

ಮಂಡ್ಯ: ಲೋಕಸಭಾ ಚುನಾವಣೆ (Lok Sabha Election 2024) ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ಕಸರತ್ತನ್ನು ಮಾಡುತ್ತಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ ತಮ್ಮ ಪಕ್ಷಗಳು ಕರ್ನಾಟಕದ ಅಭ್ಯರ್ಥಿಗಳಿಗೆ ಸಂಬಂಧಪಟ್ಟಂತೆ ಮೊದಲ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿವೆ. ಎರಡನೇ ಪಟ್ಟಿಯನ್ನು ಅಂತಿಮ ಮಾಡಿಡಲಾಗಿದ್ದು, ಯಾವುದೇ ಸಮಯದಲ್ಲಿ ಬೇಕಿದ್ದರೂ ಬಿಡುಗಡೆ ಮಾಡಬಹುದಾಗಿದೆ. ಈ ನಡುವೆ ಬಿಜೆಪಿಯ ಮೈತ್ರಿ ಪಕ್ಷ ಜೆಡಿಎಸ್‌ನಿಂದ (BJP JDS Alliance) ಅಭ್ಯರ್ಥಿಗಳ ಆಯ್ಕೆ ನಡೆದಿದೆಯಾದರೂ ಘೋಷಣೆ ಮಾತ್ರ ಬಾಕಿ ಇದೆ. ಈಗ ಬದಲಾದ ಸನ್ನಿವೇಶದಲ್ಲಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ (Mandya Lok Sabha constituency) ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಒಂದು ವೇಳೆ ಎಚ್‌ಡಿಕೆ ಇಲ್ಲಿ ಅಖಾಡಕ್ಕೆ ಇಳಿದಿದ್ದೇ ಆದಲ್ಲಿ ಕಾಂಗ್ರೆಸ್‌ನಲ್ಲಿ (Congress Karnataka) ಸಹ ಎಫೆಕ್ಟ್‌ ಹೊಡೆಯಲಿದ್ದು, ಅಭ್ಯರ್ಥಿಯೇ ಬದಲಾದರೂ ಆಶ್ಚರ್ಯ ಇಲ್ಲ ಎನ್ನುವ ಸ್ಥಿತಿ ಇದೆ ಎನ್ನಲಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಹಾಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಇನ್ನೂ ತಮ್ಮ ನಿರ್ಧಾರವನ್ನು ಪ್ರಕಟ ಮಾಡಿಲ್ಲ. ಅವರನ್ನು ಬಿಜೆಪಿ ಹೈಕಮಾಂಡ್‌ (BJP high command) ನಾಯಕರು ನವ ದೆಹಲಿಗೆ ಕರೆಸಿಕೊಂಡಿದ್ದು, ಮಾತುಕತೆ ನಡೆಸುತ್ತಿದ್ದಾರೆ. ಈ ಸಂಬಂಧ ಅವರು ಇನ್ನೂ ಡೆಲ್ಲಿಯಲ್ಲಿಯೇ ನೆಲೆಸಿದ್ದಾರೆ. ಅಲ್ಲಿನ ಚರ್ಚೆ ಬಳಿಕ ತಮ್ಮ ಮುಂದಿನ ನಡೆ ಏನೆಂಬುದು ಬೆಂಬಲಿಗರು ಹಾಗೂ ಕಾರ್ಯಕರ್ತರ ಜತೆ ಚರ್ಚೆ ನಡೆಸಿ ನಿರ್ಧಾರವನ್ನು ಪ್ರಕಟ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಅವರ ಮನವೊಲಿಕೆ ಮಾಡಿ ತಾವೇ ಚುನಾವಣೆಗೆ ಸ್ಪರ್ಧೆ ಮಾಡಿದರೆ ಹೇಗೆ ಎಂಬ ತರ್ಕಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಂದಿದ್ದಾರೆ ಎನ್ನಲಾಗಿದೆ. ‌

ಜೆಡಿಎಸ್‌ ನಾಯಕರಿಂದಲೂ ಒತ್ತಡ

ಇತ್ತ ಮಂಡ್ಯ ಜಿಲ್ಲೆಯ ಜೆಡಿಎಸ್ (JDS Karnataka) ನಾಯಕರು ಸಹ ಎಚ್.ಡಿ. ಕುಮಾರಸ್ವಾಮಿ ಅವರೇ ಕಣಕ್ಕಿಳಿದರೆ ಬೆಸ್ಟ್‌ ಎಂದು ಒತ್ತಾಯ ಮಾಡುತ್ತಿದ್ದಾರೆ. ಮಂಡ್ಯ ರಾಜಕೀಯವೇ ಬೇರೆ ರೀತಿ ಇದ್ದು, ಈ ಹೊತ್ತಿನಲ್ಲಿ ನಿಮ್ಮ ಸ್ಪರ್ಧೆಯೇ ಸೂಕ್ತ ಎಂದು ಹೇಳುತ್ತಿದ್ದಾರೆ. ಹೀಗಾಗಿ ಕೊನೇ ಕ್ಷಣದಲ್ಲಿ ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿಯೇ ಕಣಕ್ಕಿಳಿಯುತ್ತಾರೆ ಎಂದು ಜೆಡಿಎಸ್ ಮೂಲಗಳು ಹೇಳುತ್ತಿವೆ.

ಸಿ.ಎಸ್.‌ ಪುಟ್ಟರಾಜು ಏನು ಮಾಡ್ತಾರೆ?

ಇಷ್ಟು ದಿನಗಳ ಕಾಲ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು (CS Puttarajau) ಅವರೇ ಮೈತ್ರಿ ಅಭ್ಯರ್ಥಿ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅವರೂ ಸಹ ಈಗಾಗಲೇ ದೇವಸ್ಥಾನಗಳ ಭೇಟಿ ಸೇರಿದಂತೆ ಕೆಲವು ಮುಖಂಡರ ಜತೆ ಚರ್ಚೆ ನಡೆಸುತ್ತಿದ್ದಾರೆ. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಎಚ್.ಡಿ. ಕುಮಾರಸ್ವಾಮಿಯೇ ಕಣಕ್ಕಿಳಿದರೆ ಅವರು ಏನು ಮಾಡುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ಪುಟ್ಟರಾಜು ಅವರು ಕಟ್ಟರ್‌ ಜೆಡಿಎಸ್‌ ಆಗಿದ್ದರಿಂದ ಎಚ್‌ಡಿಕೆಗೆ ಬೆಂಬಲ ಕೊಡುತ್ತಾರೆ. ಹೀಗಾಗಿ ಇದು ಸಮಸ್ಯೆಯಾಗದು ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್‌ ಇದೆ.

ಮಾರ್ಚ್‌ 25ರಂದು ಎಚ್‌ಡಿಕೆ ಘೋಷಣೆ

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯ ಸ್ಪರ್ಧೆ ಸಂಬಂಧ ಮಾರ್ಚ್‌ 25ರಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಈ ವೇಳೆ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೋ ಇಲ್ಲವೇ ಸಿ.ಎಸ್.‌ ಪುಟ್ಟರಾಜು ಅವರನ್ನೇ ಅಭ್ಯರ್ಥಿಯಾಗಿ ಘೋಷಣೆ ಮಾಡಲಿದ್ದಾರೋ ಎಂಬುದು ಗೊತ್ತಾಗಲಿದೆ.

ಇದನ್ನೂ ಓದಿ: Lok Sabha Election 2024: ಜೆ.ಪಿ. ನಡ್ಡಾ ಜತೆ ಸುಮಲತಾ ಚರ್ಚೆ; ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದ ಸಂಸದೆ

ಬದಲಾಗ್ತಾರಾ ಕಾಂಗ್ರೆಸ್‌ ಅಭ್ಯರ್ಥಿ?

ಒಂದು ವೇಳೆ ಎಚ್.ಡಿ. ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿ ಆಗಿ ಕಣಕ್ಕಿಳಿದರೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನೇ ಬದಲು ಮಾಡುವ ಲೆಕ್ಕಾಚಾರದಲ್ಲಿದೆ ಎಂದು ತಿಳಿದು ಬಂದಿದೆ. ಸ್ಟಾರ್‌ ಚಂದ್ರು ದೊಡ್ಡ ಮಟ್ಟದ ಗುತ್ತಿಗೆದಾರರಾಗಿದ್ದು, ಹಣ ಬಲ ಭಾರಿ ಇದ್ದರೂ ಅವರಿಗೆ ಚುನಾವಣೆ ಹೊಸದು. ಆದರೆ, ಮಂಡ್ಯದ ಮಟ್ಟಿಗೆ ಕುಮಾರಸ್ವಾಮಿ ಮೇಲೆ ಜನರಿಗೆ ಸಾಫ್ಟ್‌ ಕಾರ್ನರ್‌ ಇದ್ದೇ ಇದೆ. ಹೀಗಾಗಿ ಎಚ್‌ಡಿಕೆ ಅಖಾಡಕ್ಕಿಳಿದರೆ ಅವರ ವಿರುದ್ಧ ಪ್ರಬಲವಾದ ಇನ್ನೊಬ್ಬ ಅಭ್ಯರ್ಥಿಯನ್ನು ಹಾಕುವ ಬಗ್ಗೆ ಕಾಂಗ್ರೆಸ್‌ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದೆಲ್ಲವೂ ಎಚ್‌ಡಿಕೆ ನಿರ್ಧಾರದ ಮೇಲೆ ನಿಂತಿದೆ.

Continue Reading

ಬೆಂಗಳೂರು

Explosives Found : ಬೆಂಗಳೂರಿನ ಶಾಲೆ ಬಳಿ ಬೃಹತ್‌ ಪ್ರಮಾಣದ ಸ್ಫೋಟಕ ಪತ್ತೆ, ಮತ್ತೆ ಆತಂಕ

Explosives found : ಬೆಂಗಳೂರಿನ ಶಾಲೆಯೊಂದರ ಬಳಿ ದೊಡ್ಡ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ಶಾಲೆಗಳಿಗೆ ಈ ಹಿಂದೆಯೇ ಬೆದರಿಕೆ ಇದ್ದುದನ್ನು ಪೋಷಕರು ನೆನಪು ಮಾಡಿಕೊಂಡಿದ್ದಾರೆ.

VISTARANEWS.COM


on

Explosives found near School in Bengaluru
ಪ್ರಾತಿನಿಧಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಿನ ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ ಫೀಲ್ಡ್‌ನಲ್ಲಿರುವ ಜನಪ್ರಿಯ ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್ ಸ್ಫೋಟ ಪ್ರಕರಣ (Blast in Bengaluru) ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಮಾರ್ಚ್‌ 1ರಂದು ನಡೆದ ಈ ಘಟನೆಯ ರೂವಾರಿಯನ್ನು ಪತ್ತೆ ಹಚ್ಚಲು ಪೊಲೀಸರು ಇನ್ನೂ ಸಫಲರಾಗಿಲ್ಲ. ಅದರ ನಡುವೆಯೇ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ (Explosives found near school) ಮುಂಭಾಗದಲ್ಲಿ ದೊಡ್ಡ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿ (Explosives found) ಆತಂಕ ಮೂಡಿಸಿವೆ.

ಬೆಂಗಳೂರಿನ ಬೆಳ್ಳಂದೂರಿನ ಪ್ರಕ್ರಿಯಾ ಶಾಲೆ ಮುಂಭಾಗದ ಖಾಲಿ ಜಮೀನಿನಲ್ಲಿ ಬೃಹತ್‌ ಪ್ರಮಾಣದ ಜಿಲೆಟಿನ್ ಕಡ್ಡಿ, ಡಿಟೋನೇಟರ್​​ ಹಾಗೂ ಇತರ ಕೆಲವು ಸ್ಫೋಟಕಗಳು ಸಿಕ್ಕಿವೆ. ಈ ಸ್ಫೋಟಕಗಳನ್ನು ಟ್ರ್ಯಾಕ್ಟರ್‌ ಒಂದರಲ್ಲಿ ಇಟ್ಟಿರುವುದು ಪತ್ತೆಯಾಗಿದೆ.

ಬೆಳ್ಳಂದೂರು ಬಳಿಯ ಚಿಕ್ಕನಾಯಕನಹಳ್ಳಿ ದಿಣ್ಣೆಯ ಜಾಗದ ಮೇಲೆ ದಾಳಿ ಮಾಡಿದಾಗ ಈ ಸ್ಫೋಟಕಗಳು ಪತ್ತೆಯಾಗಿವೆ. ಮೆಲ್ನೋಟಕ್ಕೆ ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ಬಂಡೆಗಳನ್ನು ಸ್ಫೋಟಿಸಲು ಸ್ಫೋಟಕಗಳನ್ನು ಇಟ್ಟಿರುವ ಮಾಹಿತಿ ಇದೆಯಾದರೂ ಅಕ್ರಮವಾಗಿ ಸ್ಫೋಟಕ ವಸ್ತು ಸಂಗ್ರಹಿಟ್ಟಿರುವುದು ಸ್ಪಷ್ಟವಾಗಿದೆ.

ಸ್ಫೋಟಕ ವಸ್ತುಗಳನ್ನು ಹೀಗೆ ಸಾರ್ವಜನಿಕ ಜಾಗದಲ್ಲಿ ಇಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಪೊಲೀಸರು ಸ್ವಯಂಪ್ರೇರಿತರಾಗಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.

ಬಂಡೆ ಒಡೆಯಲು ಇಟ್ಟಿದ್ದ ಸ್ಪೋಟಕ ವಸ್ತುಗಳು ಇವೆಂದು ಹೇಳಲಾಗಿದ್ದರೂ ಲೆಸೆನ್ಸ್ ಇಲ್ಲದೇ ಅಕ್ರಮವಾಗಿ ಸಂಗ್ರಹ ಮಾಡಲಾಗಿದೆ. ಜಿಲೆಟಿನ್ ಕಡ್ಡಿಗಳು ಮತ್ತು ಹಾಗೂ ಬ್ಲಾಸ್ಟ್ ಮಾಡಲು ಇಟ್ಟಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : Blast in Bengaluru : ರಾಮೇಶ್ವರಂ ಕೆಫೆ ಸ್ಫೋಟ; ಶಂಕಿತ ಉಗ್ರ ಮಾಝ್‌ ಮುನೀರ್‌ NIA ವಶಕ್ಕೆ

Explosive found : ಶಾಲೆಗಳಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹೆಚ್ಚು ಆತಂಕ

ಕೆಲವು ವಾರಗಳ ಹಿಂದೆ ಎರಡು ಬಾರಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್‌ ಬೆದರಿಕೆ ಹಾಕಲಾಗಿತ್ತು. ಶಾಲೆಯ ಆವರಣದಲ್ಲಿ ಬಾಂಬ್‌ ಇಡಲಾಗಿದೆ ಎಂದು ಎಲ್ಲಾ ಶಾಲೆಗಳಿಗೆ ಈ ಮೇಲ್‌ ಮೂಲಕ ಪತ್ರ ಬರೆಯಲಾಗಿತ್ತು. ಇದರಿಂದ ಭಾರಿ ಆತಂಕ ಸೃಷ್ಟಿಯಾಗಿತ್ತು. ಶಾಲೆಗಳ ಆವರಣದಲ್ಲಿ ಸಂಪೂರ್ಣ ಹುಡುಕಾಟ ನಡೆಸಿದ ಬಳಿಕವಷ್ಟೇ ಇದೊಂದು ಸುಳ್ಳು ಬೆದರಿಕೆ ಕರೆ ಎಂದು ಗೊತ್ತಾಗಿತ್ತು. ಇದೀಗ ಶಾಲೆಯ ಆವರಣದಲ್ಲೇ ಸ್ಫೋಟಕ ಸಿಕ್ಕಿದಾಗ ಸಹಜವಾಗಿ ಆತಂಕ ಜೋರಾಗಿದೆ.

ಇತ್ತ ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ವ್ಯಕ್ತಿಯೊಬ್ಬ ಇಟ್ಟು ಹೋದ ಬಾಂಬ್‌ ಸ್ಫೋಟಗೊಂಡು ಹತ್ತು ಮಂದಿ ಗಾಯಗೊಂಡಿದ್ದರು. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸುತ್ತಿದ್ದರೂ ಆರೋಪಿ ಸಿಕ್ಕಿಲ್ಲ. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡಲಾಗಿದೆ. ಈ ಹಿಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರನ್ನೇ ಮತ್ತೆ ವಿಚಾರಣೆ ನಡೆಸಲಾಗುತ್ತಿದೆ. ರಾಜ್ಯದ ನಾನಾ ಭಾಗಗಳಲ್ಲಿ ಹುಡುಕಾಡಿದರೂ ಆರೋಪಿ ಸಿಗದೆ ಇರುವುದು ಚರ್ಚೆಗೆ ಕಾರಣವಾಗಿದೆ.

Continue Reading

ವೈರಲ್ ನ್ಯೂಸ್

Pralhad Joshi : ಸಂತೋಷ್‌ ಲಾಡ್‌ ದಿನಾ ಮೋದಿಗೆ ಬಯ್ಯೋದ್ಯಾಕೆ: ರಹಸ್ಯ ಬಿಚ್ಚಿಟ್ಟ ಜೋಶಿ!

Pralhad Joshi : ಸಂತೋಷ್‌ ಲಾಡ್‌ ಅವರು ದಿನವೂ ಮೋದಿಯನ್ನು ಬೈಯೋದ್ಯಾಕೆ: ಈ ಪ್ರಶ್ನೆಗೆ ಹಾಸ್ಯಮಯ ಉತ್ತರ ನೀಡಿದ್ದಾರೆ ಪ್ರಹ್ಲಾದ್‌ ಜೋಶಿ.. ಏನಂತಾರೆ ಕೇಳಿ!

VISTARANEWS.COM


on

Pralhad Joshi Santhosh lad
Koo

ಹುಬ್ಬಳ್ಳಿ: ರಾಜ್ಯದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ (Minister Santhosh Lad) ಅವರು ಇತ್ತೀಚೆಗೆ ಪ್ರಬಲ ಮೋದಿ ಟೀಕಾಕಾರನಾಗಿ (Critic of Narendra Modi) ಬದಲಾಗಿದ್ದಾರೆ. ತುಂಬ ಅಧ್ಯಯನ ಮಾಡಿ, ಮೋದಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಚರ್ಚೆಗಳಲ್ಲಿ, ಸಭೆಗಳಲ್ಲಿ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಹಾಗಿದ್ದರೆ ಸಂತೋಷ್‌ ಲಾಡ್‌ ಒಮ್ಮಿಂದೊಮ್ಮೆಗೆ ಹೀಗೆ ಪ್ರಖರ ಟೀಕಾಕಾರನಾಗಿ ಬದಲಾಗಿದ್ದು ಹೇಗೆ? ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಅವರಿಗೆ ಸ್ಪಷ್ಟ ಉತ್ತರ ಸಿಕ್ಕಿದೆಯಂತೆ!

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಹ್ಲಾದ್‌ ಜೋಶಿ ಅವರು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಂತೋಷ್‌ ಲಾಡ್‌ ಬೈಗುಳದ ರಹಸ್ಯ ತೆರೆದಿಟ್ಟಿದ್ದಾರೆ.

ಸಂತೋಷ್‌ ಲಾಡ್‌ ಅವರು ಇತ್ತೀಚೆಗೆ ನನ್ನನ್ನು ಮತ್ತು ಮೋದಿಯವರನ್ನು ನಿರಂತರವಾಗಿ ಬಯ್ಯುತ್ತಿದ್ದಾರೆ, ಟೀಕೆ ಮಾಡುತ್ತಿದ್ದಾರೆ. ಅವರು ಈ ರೀತಿಯ ಟೀಕೆ ಮಾಡುತ್ತಿರುವುದು ತಮ್ಮ ಸಚಿವ ಪದವಿ ಉಳಿಸಿಕೊಳ್ಳಲು. ಇದನ್ನು ಸ್ವತಃ ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಜೋಶಿ ಹೇಳಿದರು.

ನಾನು ಮತ್ತು ಲಾಡ್‌ ಆಗಾಗ ಫ್ಲೈಟ್‌ನಲ್ಲಿ ಸಿಗ್ತಾ ಇರುತ್ತೇವೆ. ದಿಲ್ಲಿಯಿಂದ ಬರುವಾಗ, ಬೆಂಗಳೂರಿನಿಂದ ಬರುವಾಗ ಸಿಗುತ್ತೇವೆ. ಮಾತಾಡಿಕೊಳ್ತೇವೆ. ಒಂದು ದಿನ ನಾನು ಕೇಳಿದೆ. ನೀವು ನನ್ನ ಮೇಲೆ ನಿರಂತರವಾಗಿ ಟೀಕೆ ಮಾಡ್ತಾ ಇರ್ತೀರಿ. ಅದೇನೂ ತೊಂದರೆ ಇಲ್ಲ. ನಾನು ಸಣ್ಣವನು. ಆದರೆ, ಮೋದಿ ಅವರ ಮೇಲೂ ದಾಳಿ ಮಾಡ್ತೀರಲ್ಲಾ, ನಿಮ್ಮ ಪರಿಸ್ಥಿತಿ ಏನು? ಎಂದು ಕೇಳಿದೆ.

ನಾನು ಮತ್ತು ಸಂತೋಷ್‌ ಲಾಡ್‌ ಹಿಂದಿಯಲ್ಲಿ ಮಾತಾಡೋದು ಜಾಸ್ತಿ. ಅವರು ಹಿಂದಿಯಲ್ಲಿ ಹೇಳಿದರು: ಕ್ಯಾ ಕರೂ ಸಾಬ್‌, ಊಪರ್‌ ಸೇ ಇನ್‌ಸ್ಟ್ರಕ್ಷನ್‌ ಹೈ, ಮೈ ಡೈಲಿ ಗಾಲಿ ನಹೀ ದಿಯಾ ತೋ ನೌಕರಿ ಚಲೀ ಜಾತೀ ಹೈ! (ಏನು ಮಾಡಲಿ ಸಾಹೇಬ್ರೆ.. ಮೇಲಿನಿಂದ ನನಗೆ ಸೂಚನೆ ಇದೆ. ದಿನಾ ಬಯ್ಯದೆ ಹೋದರೆ ನನ್ನ ಕೆಲಸವೇ ಹೋಗಿ ಬಿಡ್ತದೆ) ಎಂದು ಹೇಳಿದೆ.

ಆಗಿಂದ ನಾನು ತಲೆ ಕೆಡಿಸಿಕೊಂಡಿಲ್ಲ, ನೀವು ತಲೆ ಕೆಡಿಸಿಕೊಳ್ಳಬೇಡಿ. ಉತ್ತರ ಕೊಡುವಾಗ ಕೊಡ್ತೀನಿ ಎಂದು ಜೋಶಿಯವರು ಸಭೆಯಲ್ಲಿ ಹೇಳುವ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.

ಇದನ್ನೂ ಓದಿ : Lok Sabha Election 2024: ಈಶ್ವರಪ್ಪ ಬದಲಾಗುತ್ತಾರೆಂದ ಜೋಶಿ; ಕ್ಷೇತ್ರ ಬದಲಾವಣೆ ಆಗಲ್ಲ ಎಂದ ಬೊಮ್ಮಾಯಿ

Pralhad Joshi : ಸಂತೋಷ್‌ ಲಾಡ್‌ ಮಾಡಿದ ಪ್ರಮುಖ ಟೀಕೆಗಳೇನು?

  1. ಮೋದಿಯವರು ಅವರು ಯಾವುದೇ ಪತ್ರಿಕಾಗೋಷ್ಠಿ ಎದುರಿಸಲ್ಲ. ಎಲ್ಲವೂ ಪೂರ್ವ ನಿರ್ಧರಿತ ಮಾತು ಮಾತ್ರ. ಅವರು ನೇರ ಪ್ರಶ್ನೆಗೆ ಉತ್ತರ ನೀಡಿದರೆ ಅವರ ಬಂಡವಾಳ ಬಯಲಾಗುತ್ತದೆ.
  2. ಕಳೆದ ಬಾರಿ ಪುಲ್ವಾಮ ದಾಳಿಯಿಟ್ಟುಕೊಂಡು ಚುನಾವಣೆ ಎದುರಿಸಿದ ಬಿಜೆಪಿ, ಬಳಿಕ ಆ ಕುರಿತ ಚರ್ಚೆಯನ್ನೇ ಮಾಡಲಿಲ್ಲ.
  3. ಕಳೆದ 9 ವರ್ಷಗಳ ಕಾಲ ಶ್ರೀರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡಲಿಲ್ಲ. ಇದೀಗ ನಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ
  4. ದೇಶದ ಬಹುತೇಕ ಬಿಜೆಪಿ ನಾಯಕರು ಹಿಂದೂ -ಮುಸ್ಲಿಂ ಎಂದು ಮಾತನಾಡುತ್ತಿದ್ದಾರೆಯೇ ವಿನಃ ದೇಶದ ಸಮಸ್ಯೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ.
  5. ಬುಲೆಟ್ ಟ್ರೇನ್ ಬಿಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ವರೆಗೂ ಬುಲೆಟ್ ಟ್ರೇನ್ ಬರಲಿಲ್ಲ. ನಾವು ಟಿಕೆಟ್ ತೆಗೆದುಕೊಂಡು ಕಾಯುತ್ತಿದ್ದೇವೆ.
  6. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕರ್ನಾಟಕವನ್ನು ತಾಲಿಬಾನ್‌ಗೆ ಹೋಲಿಸಿದ್ದರು. ಆಗ ಯಾರೂ ಖಂಡಿಸಲಿಲ್ಲ. ಕಾಂಗ್ರೆಸ್ ಎಂದಾಕ್ಷಣ ಮಾಧ್ಯಮಗಳ ಎದುರು ಬಿಜೆಪಿ ನಾಯಕರು ಪ್ರತ್ಯಕ್ಷವಾಗಿಬಿಡುತ್ತಾರೆ.
Continue Reading
Advertisement
John Abraham Vedaa teaser out
ಬಾಲಿವುಡ್15 seconds ago

Vedaa teaser out: ಜಾನ್ ಅಬ್ರಹಾಂ ನಟನೆಯ ಆ್ಯಕ್ಷನ್-ಪ್ಯಾಕ್ಡ್ ‘ವೇದಾ’ ಟೀಸರ್ ಔಟ್‌

Harassment Case obscene video
ಬೆಂಗಳೂರು6 mins ago

Harassment Case : ಹೆಂಡತಿಗೆ ಅಶ್ಲೀಲ ವಿಡಿಯೊ ಕಳುಹಿಸಿದ ಗಂಡನಿಗೆ 1 ತಿಂಗಳ ಜೈಲು ಶಿಕ್ಷೆ!

Mukesh Khanna rejects Ranveer Singh as Shaktimaan
ಬಾಲಿವುಡ್16 mins ago

Mukesh Khanna: ʻಶಕ್ತಿಮಾನ್ʼ ಆಗುವ ಯೋಗ್ಯತೆ ರಣವೀರ್‌ಗೆ ಇಲ್ಲ ಎಂದ ಮಹಾಭಾರತದ ʻಭೀಷ್ಮʼ!

narendra modi rumen radev
ದೇಶ25 mins ago

PM Narendra Modi: ಮೋದಿಗೆ ಥ್ಯಾಂಕ್ಸ್‌ ಹೇಳಿದ ಬಲ್ಗೇರಿಯಾ ಅಧ್ಯಕ್ಷ, ಮೋದಿ ಉತ್ತರ ಹೀಗಿತ್ತು

Lok Sabha Election 2024 HD Kumaraswamy contest from Mandya and Congress candidate to be replaced
Lok Sabha Election 202425 mins ago

Lok Sabha Election 2024: ಮಂಡ್ಯದಿಂದ ಎಚ್‌ಡಿಕೆ ಕಣಕ್ಕೆ? ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಬದಲು?

Ravichandran Ashwin
ಕ್ರೀಡೆ26 mins ago

IPL 2024: ಆರ್​ಸಿಬಿ-ಚೆನ್ನೈ ಪಂದ್ಯದ ಟಿಕೆಟ್​ಗಾಗಿ ಸಹಾಯ ಕೋರಿದ ಸ್ಟಾರ್​ ಆಟಗಾರ ಅಶ್ವಿನ್

Explosives found near School in Bengaluru
ಬೆಂಗಳೂರು44 mins ago

Explosives Found : ಬೆಂಗಳೂರಿನ ಶಾಲೆ ಬಳಿ ಬೃಹತ್‌ ಪ್ರಮಾಣದ ಸ್ಫೋಟಕ ಪತ್ತೆ, ಮತ್ತೆ ಆತಂಕ

KL Rahul
ಕ್ರೀಡೆ58 mins ago

IPL 2024: ಐಪಿಎಲ್​ಗೆ ಕನ್ನಡಿಗ ರಾಹುಲ್‌ ಫಿಟ್‌; ಆದರೆ…

Pralhad Joshi Santhosh lad
ವೈರಲ್ ನ್ಯೂಸ್1 hour ago

Pralhad Joshi : ಸಂತೋಷ್‌ ಲಾಡ್‌ ದಿನಾ ಮೋದಿಗೆ ಬಯ್ಯೋದ್ಯಾಕೆ: ರಹಸ್ಯ ಬಿಚ್ಚಿಟ್ಟ ಜೋಶಿ!

hanuman chalisa case
ಪ್ರಮುಖ ಸುದ್ದಿ1 hour ago

ಹನುಮಾನ್‌ ಚಾಲೀಸಾ ಕೇಸ್:‌ ಐದು ಮಂದಿ ಬಂಧನ, ಇಂದು ನಗರ್ತಪೇಟೆಯಲ್ಲಿ ಕೇಸರಿ ಹವಾ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina Bhavishya
ಭವಿಷ್ಯ6 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು17 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

Different Danny Filed Case Against Ravi Varma
ಬೆಂಗಳೂರು5 days ago

Different Danny : ಫೈಟ್‌ ಮಾಸ್ಟರ್ಸ್‌ ಫೈರ್‌ ಫೈಟಿಂಗ್‌; ರವಿವರ್ಮ ವಿರುದ್ಧ ಡಿಫರೆಂಟ್‌ ಡ್ಯಾನಿ ಸಮರ

ಟ್ರೆಂಡಿಂಗ್‌