Aero India 2023: ಭಾರತದ ರಕ್ಷಣಾ ರಫ್ತು 2024ರಲ್ಲಿ 500 ಕೋಟಿ ಡಾಲರ್‌ ಗುರಿ: ಹೂಡಿಕೆದಾರರಿಗೆ ಸುವರ್ಣಾವಕಾಶ ಎಂದ ಪ್ರಧಾನಿ ಮೋದಿ Vistara News

Aero India

Aero India 2023: ಭಾರತದ ರಕ್ಷಣಾ ರಫ್ತು 2024ರಲ್ಲಿ 500 ಕೋಟಿ ಡಾಲರ್‌ ಗುರಿ: ಹೂಡಿಕೆದಾರರಿಗೆ ಸುವರ್ಣಾವಕಾಶ ಎಂದ ಪ್ರಧಾನಿ ಮೋದಿ

ಭಾರತವು ಇಂದು ಫೈಟರ್‌ ಪೈಲಟ್‌ ರೀತಿಯಲ್ಲಿ ಅತ್ಯಂತ ಎತ್ತರಕ್ಕೆ ಹಾರುವ, ಶೀಘ್ರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

VISTARANEWS.COM


on

aero-india-2023-prime-minister-narendra-modi-says-huge-opportunity-to-invest-in-defence-sector
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತದ ರಕ್ಷಣಾ ಕ್ಷೇತ್ರವು ಹಿಂದೆಂದಿಗಿಂತಳೂ ವೇಗವಾಗಿ ಮುನ್ನುತ್ತಿದ್ದು, 2024ರಲ್ಲಿ 500 ಕೋಟಿ ಡಾಲರ್‌ (5 ಬಿಲಿಯನ್‌ ಡಾಲರ್‌) ಗುರಿ ಹೊಂದಿದೆ. ಅನುಭವ, ಬೇಡಿಕೆ, ಕೌಶಲ್ಯ ಎಲ್ಲವನ್ನೂ ಹೊಂದಿರುವ ಭಾರತದಲ್ಲಿ, ಕರ್ನಾಟಕದಲ್ಲಿ ಹೂಡಿಕೆ ಮಾಡಲು ಇದು ಸುವರ್ಣಾವಕಾಶ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಯಲಹಂಕದ ವಾಯುನೆಲೆಯಲ್ಲಿ ಐದು ದಿನ ನಡೆಯಲಿರುವ ಏಷ್ಯಾದ ಅತ್ಯಂತ ದೊಡ್ಡ ಏರ್‌ ಶೋ, 14ನೇ ಆವೃತ್ತಿಯ ಏರೋ ಇಂಡಿಯಾಗೆ ಚಾಲನೆ ನೀಡಿ ಮಾತನಾಡಿದರು.

ಏರೋ ಇಂಡಿಯಾ ಆಯೋಜನೆಯು ಭಾರತದ ಹೆಚ್ಚುತ್ತಿರುವ ಶಕ್ತಿಯ ಪ್ರತೀಕ. ಇಷ್ಟು ದೇಶಗಳು ಭಾಗವಹಿಸುತ್ತಿರುವುದನ್ನು ನೋಡಿದರೆ, ಭಾರತದ ಕುರಿತು ವಿಶ್ವದ ವಿಶ್ವಾಸವನ್ನು ತೋರಿಸುತ್ತದೆ. ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದು ಮುನ್ನಡೆಯುತ್ತಿರುವ ಈ ಬಾರಿಯ ಏರೋ ಇಂಡಿಯಾದಲ್ಲಿ ಬೃಹತ್‌ ಕಂಪನಿಗಳಿಂದ ಸಣ್ಣ ಕೈಗಾರಿಕೆಗಳವರೆಗೆ ಪಾಲ್ಗೊಳ್ಳುವಿಕೆ ಕಾಣುತ್ತಿದೆ. ಆತ್ಮನಿರ್ಭರವಾಗುವ ಭಾರತದ ಶಕ್ತಿ ಹೀಗೇ ಮುಂದುವರಿಯಲಿ ಎಂದು ಆಶಿಸುತ್ತೇನೆ ಎಂದರು.

ಇಲ್ಲಿ ರಕ್ಷಣಾ ಸಚಿವರ ಕಾನ್‌ಕ್ಲೇವ್‌ ಹಾಗೂ ಸಿಇಒಗಳ ರೌಂಡ್‌ ಟೇಬಲ್‌ ಸಹ ಆಯೋಜನೆಯಾಗಿದೆ. ಇದರಿಂದ ಏರೋ ಇಂಡಿಯಾ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ. ಇದೆಲ್ಲ ಉಪಕ್ರಮಗಳಿಗಾಗಿ ರಕ್ಷಣಾ ಸಚಿವಾಲಯ ಹಾಗೂ ಕೈಗಾರಿಕಾ ವಲಯಕ್ಕೆ ಶುಭಾಶಯಗಳು ಎಂದು ಮೋದಿ ಹಾರೈಸಿದರು.

21ನೇ ಶತಮಾನದ ಹೊಸ ಭಾರತವು ಯಾವುದೇ ಅಕಾಶವನ್ನೂ ಕೈಬಿಡುವುದಿಲ್ಲ ಎಂದ ಮೋದಿ, ಇದಕ್ಕಾಗಿ ಶ್ರಮ ವಹಿಸುವುದರಿಂದಲೂ ನಾವು ಹಿಂದೆ ಸರಿಯುವುದಿಲ್ಲ. ಈ ಹಿಂದೆ ಅತಿ ದೊಡ್ಡ ರಕ್ಷಣಾ ಉಪಕರಣ ಆಮದು ರಾಷ್ಟ್ರವಾಗಿದ್ದ ಭಾರತ ಈಗ ಐವತ್ತಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಫ್ತು ಮತ್ತಷ್ಟು ಹೆಚ್ಚಾಗಲಿದೆ. ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಬಹುದೊಡ್ಡ ಅವಕಾಶವಿದೆ.

ಈ ಏಳೆಂಟು ವರ್ಷದಲ್ಲಿ ರಕ್ಷಣಾ ಕ್ಷೇತ್ರ ಬಹುದೊಡ್ಡ ಬದಲಾವಣೆ ಕಂಡಿದೆ. ಇದು ಕೇವಲ ಆರಂಭ. ಈಗ ನೂರೈವತ್ತು ಕೋಟಿ ಡಾಲರ್‌ ಮೊತ್ತದಷ್ಟು ಇರುವವ ಭಾರತದ ರಕ್ಷಣಾ ರಫ್ತು ಪ್ರಮಾಣವು 2024ರ ವೇಳೆಗೆ ಐದುನೂರು ಕೋಟಿ ಡಾಲರ್‌ಗೆ ಹೆಚ್ಚುವ ಗುರಿ ಹೊಂದಿದ್ದೇವೆ. ಇದಕ್ಕೆ ಏರೋ ಇಂಡಿಯಾ ಒಂದು ಚಿಮ್ಮು ಹಲಗೆಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಖಾಸಗಿ ಕ್ಷೇತ್ರ ಹಾಗೂ ಹೂಡಿಕೆದಾರರ ಪಾತ್ರ ಮಹತ್ವದ್ದು. ಹೆಚ್ಚೆಚ್ಚು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಎಂದು ಹೂಡಿಕೆದಾರರಿಗೆ ಕರೆ ನೀಡುತ್ತೇನೆ. ನಿಮ್ಮ ವ್ಯಾಪಾರಕ್ಕೆ ಹೊಸ ಅವಕಾಶಗಳನ್ನು ಇದು ಒದಗಿಸುತ್ತದೆ. ಅಮೃತಕಾಲದ ಭಾರತವು ಒಬ್ಬ ಫೈಟರ್‌ ಪೈಲಟ್‌ ರೀತಿ ಮುನ್ನುಗ್ಗುತ್ತಿದೆ. ಈಗಿನ ಭಾರತಕ್ಕೆ ಎತ್ತರಗಳನ್ನು ಏರಲು ಭಯ ಆಗುವುದಿಲ್ಲ. ಅತ್ಯಂತ ಉತ್ಸಾಹದಿಂದ ಎತ್ತರಕ್ಕೆ ಹಾರುವ, ವೇಗವಾಗಿ ಹೋಗುವ ಹಾಗೂ ಅತ್ಯಂತ ಶೀಘ್ರವಾಗಿ ನಿರ್ಧಾರ ಕೈಗೊಳ್ಳುವ ಫೈಟರ್‌ ಪೈಲಟ್‌ ರೀತಿಯಲ್ಲಿ ದೇಶವೂ ಮುನ್ನಡೆಯುತ್ತಿದೆ.

ಇದನ್ನೂ ಓದಿ: Aero India 2023 : ರಾಜ್ಯದಲ್ಲೇ ಹೊಸ ಏರೋಸ್ಪೇಸ್‌ ನೀತಿ, ವೈಮಾನಿಕ ಕ್ಷೇತ್ರದಲ್ಲಿ ಮಹತ್ಸಾಧನೆಗೆ ಅಣಿ ಎಂದ ಬೊಮ್ಮಾಯಿ

ಆದರೆ ಇಷ್ಟೆಲ್ಲ ಎತ್ತರಕ್ಕೆ ಹಾರಿದರೂ ನೆಲಕ್ಕೆ ಕಿವಿ ಕೊಟ್ಟಿದೆ. ನೆಲಮಟ್ಟದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿಯುತ್ತಿದೆ. ನಮ್ಮ ಎಲ್ಲ ನೀತಿ, ನಿರ್ಧಾರಗಳಲ್ಲಿ ನಿಯತ್ತು ಇದೆ. ಎಲ್ಲ ಕ್ಷೇತ್ರ ಹಾಗೂ ಹೂಡಿಕೆದಾರರೂ ಇದೆಲ್ಲದರ ಲಾಭವನ್ನು ಪಡೆದುಕೊಳ್ಳಬೇಕು. ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌ನಲ್ಲಿ ಮಾಡಿರುವ ಸುಧಾರಣೆಗಳು ವಿಶ್ವಾದ್ಯಂತ ಪ್ರಶಂಸೆಗೆ ಒಳಗಾಗುತ್ತಿದೆ. ಉದ್ಯಮಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಸರಳವಾಗಿಸಿದ್ದೇವೆ, ಅದರ ಅವಧಿಯನ್ನು ಹೆಚ್ಚಿಸಿದ್ದೇವೆ.

ಭಾರತದಕಲ್ಲಿ ಬೇಡಿಕೆಯೂ ಇದೆ, ಸಾಮರ್ಥ್ಯವೂ ಇದೆ, ಅನುಭವವೂ ಇದೆ. ಸಹಜ ನ್ಯಾಯ ಹೇಳುವುದೆಂದರೆ ಇಲ್ಲಿ ಕೈಗಾರಿಕೆ ದಿನೇದಿನೇ ಬೆಳೆಯುತ್ತದೆ. ಇನ್ನು ಮುಂದೆಯೂ ರಕ್ಷಣಾ ಕ್ಷೇತ್ರ ವೇಗವಾಗಿ ಬೆಳೆಯಲಿದೆ. ಮುಂದಿನ ದಿನಗಳಲ್ಲಿ ಏರೋ ಇಂಡಿಯಾದ ಮತ್ತಷ್ಟು ವೈಭವಯುತ ಆಯೋಜನೆ ಮಾಡಲಿದ್ದೇವೆ ಎಂದು ನಿರೀಕ್ಷೆ ಹೊಂದಿದ್ದೇನೆ ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Aero India

Aero india 2023 : ರಕ್ಷಣಾ ಇಲಾಖೆಯಿಂದ 32 ಕಂಪನಿಗಳ ಜತೆ ಒಪ್ಪಂದ

ಏರೋ ಇಂಡಿಯಾದಲ್ಲಿ (Aero india 2023) ರಕ್ಷಣಾ ವಲಯಕ್ಕೆ ಅಗತ್ಯಕ್ಕೆ ತಕ್ಕ ಹಾಗೆ ಒಂಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

VISTARANEWS.COM


on

Aero India
Koo

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ (Aero india 2023) 35 ಕಂಪನಿಗಳ ಜತೆ ರಕ್ಷಣಾ ಇಲಾಖೆಯು ಒಪ್ಪಂದ ಮಾಡಿಕೊಂಡಿದೆ. ಬಂಧನ್ ಕಾರ್ಯಕ್ರಮದಡಿಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 2,930.98 ಕೋಟಿ ರೂಪಾಯಿ ಮೊತ್ತದ ಒಪ್ಪಂದ ನಡೆದಿದೆ. ಕಾರ್ಯಕ್ರಮದಲ್ಲಿ ಒಟ್ಟು 266 ಕಂಪನಿಗಳು ಪಾಲ್ಗೊಂಡಿದ್ದವು.

ಒಪ್ಪಂದಗಳಿಗೆ ಸಹಿ ಹಾಕಿದ ಕಂಪನಿಗಳು

ಬೆಲಾಟೆಕ್ಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್-630 ಕೋಟಿ, ಏಡಿನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್-500 ಕೋಟಿ, ಫಿಕ್ಸಲ್ ಸ್ಪೇಸ್ ಇಂಡಿಯಾ ಪ್ರೈ.ಲಿ-300 ಕೋಟಿ, ಡೈನಾಮೆಟಿಕ್ ಟೆಕ್ನಾಲಜೀಸ್-250 ಕೋಟಿ, ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ &ಏರೋಸ್ಪೇಸ್ ಟೆಕ್ನಾಲಜೀಸ್ , TESCOM-100 ಕೋಟಿ, ಡೆಲ್ಪ್ಟ್ (ಜೆ.ಕೆ.ಪೇಪರ್ ಲಿ.)-100 ಕೋಟಿ, ನೆಕ್ಸ್ಟ್ ಬಿಗ್ ಇನೋವೇಷನ್ ಲ್ಯಾಬ್ಸ್ ಲಿ.-100 ಕೋಟಿ, SASMOS HET ಟೆಕ್ನಾಲಜಿಸ್ ಲಿ.-75 ಕೋಟಿ, MS ವೇವ್ಸ್ ಮಷಿನ್-50 ಕೋಟಿ, ಭೂಮಿ ಎನ್ ಟೆಕ್ ಇಕ್ವಿಪ್ ಮೆಂಟ್ಸ್ ಪ್ರೈ.ಲಿ-50 ಕೋಟಿ, ಏರೋ ಪ್ಲಾಟಿನ್ ಟೆಕ್ನಾಲಜಿಸ್ ಪ್ರೈ.ಲಿ-30 ಕೋಟಿ, ಕಾಸ್ಟ್ ಕ್ರಾಪ್ಟ್-30 ಕೋಟಿ, ಡಕಂ ಏರೋಸ್ಪೇಸ್ ಟೆಕ್ನಾಲಜೀಸ್ ಪ್ರೈ.ಲಿ-25 ಕೋಟಿ, ಎಲ್ಡಾಸ್ ಟೆಕ್ನಾಲಜಿ-23 ಕೋಟಿ, ಟೆಕ್ಸಲ್ ಎಂಜಿನಿಯರ್ಸ್-20 ಕೋಟಿ.

ಇದನ್ನೂ ಓದಿ : Aero India 2023 : ಏರೋ ಇಂಡಿಯಾದಲ್ಲಿ ಅಮೆರಿಕದ ಅತಿ ದೊಡ್ಡ ತಂಡ, ನೂತನ F-35 ಯುದ್ಧ ವಿಮಾನ ಪ್ರದರ್ಶನ

ವೈಭವ್ ಎಂಟರ್ ಪ್ರೈಸಸ್-20 ಕೋಟಿ, ಹಿಮಾನ್ಸಿ ಥರ್ಮಲ್ ಸೊಲ್ಯೂಷನ್ಸ್-16.28 ಕೋಟಿ, ಎವಿಟಮ್ ಟೆಕ್ನಾಲಜೀಸ್ -16 ಕೋಟಿ, ಆರವ ಏರೋಸ್ಪೇಸ್-16 ಕೋಟಿ, SST ಕಟಿಂಗ್ ಟೂಲ್ಸ್-15 ಕೋಟಿ, ಆಲ್ಟೀಸ್ ಏರೋಸ್ಪೇಸ್ ಪ್ರೈ.ಲಿ-15 ಕೋಟಿ, ಉದಯ್ ಎಂಟರ್ ಪ್ರೈಸಸ್-15 ಕೋಟಿ, ಸೋಮಾ ಆಟೋಮೇಶನ್-12 ಕೋಟಿ, IIGP ವಾಲ್ವ್ ಟೆಕ್ನಾಲಜೀಸ್ ಪ್ರೈ.ಲಿ-12 ಕೋಟಿ, ಲವೀರಾ ಟೆಕ್ನಾಲಜಿ ಪ್ರೈ.ಲಿ-11 ಕೋಟಿ, ಗರುಡ ಏರೋಟೆಕ್-10 ಕೋಟಿ, G S ಗಿಯರ್ಸ್ ಪ್ರೈ.ಲಿ-8 ಕೋಟಿ, ಇನ್ಫಿನಿಟಿ ಏರೋಟೆಕ್-7 ಕೋಟಿ, ಡಟಾಕ್ಯೂ ಸರ್ವೀಸಸ್ ಪ್ರೈ.ಲಿ-2.70 ಕೋಟಿ, ಬುರ್ಜಿ ಏರೋಸ್ಪೇಸ್-2 ಕೋಟಿ, ಜನರಸ್ ಏರೋಸ್ಪೇಸ್ & ಇನ್ಪಾರ್ಮೇಶನ್ ಟೆಕ್ನಾಲಜಿ ಪ್ರೈ.ಲಿ-320 ಕೋಟಿ, ಏಸೋನಾಟೆಕ್ ಮ್ಯಾನಿಫ್ಯಾಕ್ಚರಿಂಗ್ ಪ್ರೈ.ಲಿ-150 ಕೋಟಿ.

Continue Reading

Aero India

Aero India 2023: ರಾಷ್ಟ್ರದ ರಕ್ಷಣಾ ವಲಯ ಬೇಡಿಕೆಯ ಪೂರೈಕೆಯಲ್ಲಿ ರಾಜ್ಯದ ಪಾಲು ಶೇ.65: ಸಿಎಂ ಬೊಮ್ಮಾಯಿ

Aero India 2023: ನಮ್ಮ ದೇಶದ ರಕ್ಷಣಾ ವಲಯದ ಉತ್ಪಾದನಾ ಸಾಮರ್ಥ್ಯ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿದೆ ಮತ್ತು ದೇಶೀಯ ಸಂಸ್ಥೆಗಳು ನಮ್ಮ ಬೇಡಿಕೆಯನ್ನು ಪೂರೈಸುವ ಎಲ್ಲ ಸಾಮರ್ಥ್ಯ ಹೊಂದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

VISTARANEWS.COM


on

Approval for release of funds for various infrastructure projects in state cabinet meeting
Koo

ಬೆಂಗಳೂರು: ರಕ್ಷಣಾ ವಲಯದಲ್ಲಿ (Aero India 2023) ಬಂಧನ್‌ ಎನ್ನುವುದು ರಕ್ಷಣಾ ಇಲಾಖೆ ಮತ್ತು ಸಾರ್ವಜನಿಕ ಸಂಸ್ಥೆಗಳ ಮಧ್ಯೆ ಇರುವ ದೀರ್ಘಕಾಲದ ಸಂಬಂಧವಾಗಿದ್ದು, ರಾಷ್ಟ್ರದ ರಕ್ಷಣಾ ವಲಯ ಬೇಡಿಕೆಯ ಪೂರೈಕೆಯಲ್ಲಿ ರಾಜ್ಯದ ಪಾಲು ಶೇ.65 ರಷ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಏರೋ ಇಂಡಿಯಾ 2023ರ ಬಂಧನ್ – ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.

ರಕ್ಷಣೆ ಮತ್ತು ಏರೋಸ್ಪೇಸ್ ವಲಯವು ಸ್ಥಾಪಿತ ಕ್ಷೇತ್ರವಾಗಿದ್ದು, ಇದರಲ್ಲಿ ಅತ್ಯಂತ ಪರಿಣಿತರು ಮಾತ್ರ ಕೆಲಸವನ್ನು ಸಂಪೂರ್ಣಗೊಳಿಸಬಲ್ಲರು. ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದೊಂದಿಗೆ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ರಕ್ಷಣಾ ವಲಯವು ತೆರೆದುಕೊಂಡಿದೆ. ನಮ್ಮ ದೇಶದ ರಕ್ಷಣಾ ವ್ಯವಸ್ಥೆ ಬೇಡಿಕೆಯ ಶೇ.80 ರಷ್ಟನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ಪ್ರಧಾನಿಗಳ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಅಡಿಯಲ್ಲಿ ದೇಶದಲ್ಲಿಯೇ ತಯಾರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | Karnataka Budget: ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಬೇಕು ಪ್ರತ್ಯೇಕ ಅನುದಾನ: ಸಿಎಂಗೆ ಪ್ರೊ. ಎಂ.ಆರ್.‌ ದೊರೆಸ್ವಾಮಿ ಪತ್ರ

ನಮ್ಮ ಉತ್ಪಾದನೆ ಸಾಮರ್ಥ್ಯ ಅಂದುಕೊಂಡದ್ದಕ್ಕಿಂತ ಹೆಚ್ಚಿದೆ

ನಮ್ಮ ದೇಶದ ರಕ್ಷಣಾ ವಲಯದ ಉತ್ಪಾದನಾ ಸಾಮರ್ಥ್ಯ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿದೆ ಮತ್ತು ನಮ್ಮ ದೇಶದ ಉತ್ಪಾದನಾ ಸಂಸ್ಥೆಗಳು ನಮ್ಮ ಬೇಡಿಕೆಯನ್ನು ಪೂರೈಸುವ ಎಲ್ಲ ಸಾಮರ್ಥ್ಯ ಹೊಂದಿವೆ. ಎಂಎಸ್ಎಂಇ ಕೂಡ ಇದನ್ನು ಉತ್ಪಾದನೆ ಮಾಡಬಲ್ಲುದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಕ್ಷಣಾ ವಸ್ತುಗಳ ಉತ್ಪಾದನಾ ಸಂಸ್ಥೆಗಳು ಅತ್ಯುನ್ನತ ತಂತ್ರಜ್ಞಾನವನ್ನು ಹೊಂದಿದ್ದು, ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸಬಲ್ಲುದಾಗಿದೆ ಎಂದು ಹೇಳಿದರು.

ರಕ್ಷಣಾ ಕ್ಷೇತ್ರದಲ್ಲಿ ವಿಫುಲ ಅವಕಾಶ

ಉತ್ಪಾದನಾ ವಲಯದಲ್ಲಿ ಡೊಮೈನ್ ಬದಲಾವಣೆಯಿಂದ ವಿಫುಲ ಅವಕಾಶಗಳು ಸೃಷ್ಟಿಯಾಗಿವೆ. ಆದ್ದರಿಂದ ನಾವು ಮಹತ್ವಾಕಾಂಕ್ಷೆಯಿಂದ ವೈಜ್ಞಾನಿಕವಾಗಿ ಯೋಚನೆ ಮಾಡಬೇಕಿದೆ. ಈ ಎಲ್ಲ ವಿಷಯಗಳನ್ನು ಬಂಧನ್ ಹೆಸರಲ್ಲಿ ನಾವು ಒಟ್ಟಿಗೆ ತಂದಿದ್ದೇವೆ. ಇಂದು ಸಹಿ ಆಗಿರುವ ಎಲ್ಲ ಒಪ್ಪಂದಗಳು ಭವಿಷ್ಯದ ಅಗತ್ಯ, ಬೆಳವಣಿಗೆ ಮತ್ತು ಸಾಮರ್ಥ್ಯ ವೃದ್ಧಿಗೆ ಸಾಕ್ಷಿಯಾಗಲಿವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ | Payment aggregator : ರಿಲಯನ್ಸ್‌, ಜೊಮ್ಯಾಟೊ ಸೇರಿ 32 ಕಂಪನಿಗಳಿಗೆ ಪೇಮೆಂಟ್‌ ಅಗ್ರಿಗೇಟರ್‌ ಲೈಸೆನ್ಸ್ ವಿತರಣೆ

32 ಒಪ್ಪಂದಗಳಿಗೆ ರಾಜ್ಯ ಸಹಿ

ಬೆಂಗಳೂರಿನಲ್ಲಿ ಏರೋ ಸ್ಪೇಸ್ ಪಾರ್ಕ್ ಸ್ಥಾಪನೆ ಮತ್ತು ಅದರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅತ್ಯುತ್ತಮ ಕೊಡುಗೆ ನೀಡಿರುವ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ರಾಷ್ಟ್ರದ ಒಟ್ಟು ರಕ್ಷಣಾ ಉತ್ಪಾದನೆಯಲ್ಲಿ ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ ಸಂಸ್ಥೆಗಳು ಶೇ.65 ಪಾಲನ್ನು ಪೂರೈಸುತ್ತಿದೆ. 2900 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹೂಡಿಕೆಯ 32 ಒಪ್ಪಂದಗಳಿಗೆ ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳು ಸಹಿ ಹಾಕಿವೆ. ಈ ಏರೋ ಇಂಡಿಯಾ ಪ್ರದರ್ಶನ “ಟಾಕ್ ಆಫ್ ದಿ ಟೌನ್” ಆಗಿದೆ ಎಂದು ಸಿಎಂ ಹೇಳಿದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಸರ್ಕಾರದ ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮಾನೆ, ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್, ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.

Continue Reading

Aero India

Aero India 2023: ಏರೋಸ್ಪೇಸ್ ವಲಯದಲ್ಲಿ ಕರ್ನಾಟಕ ನಂ.1 ಆಗಲು ಅರ್ಹ: ಸಿಎಂ ಬೊಮ್ಮಾಯಿ

ಏರೊ ಇಂಡಿಯಾ-2023ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ವಿದೇಶಿ ಗಣ್ಯರು ಹಾಗೂ ಉದ್ಯಮಿಗಳಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ.

VISTARANEWS.COM


on

CM Basavaraj Bommai says Karnataka deserves to be no.1 in aerospace sector:
Koo

ಬೆಂಗಳೂರು: ಏರೋಸ್ಪೇಸ್ (Aero India 2023) ವಲಯದಲ್ಲಿ ಲಂಡನ್ ಮತ್ತು ಸಿಂಗಾಪುರದ ನಂತರ ಕರ್ನಾಟಕ ರಾಜ್ಯವಿದ್ದು, ಕರ್ನಾಟಕ ನಂ.1 ಸ್ಥಾನಕ್ಕೇರಲು ಎಲ್ಲ ಅರ್ಹತೆ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಏರೊ ಇಂಡಿಯಾ-2023ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ವಿದೇಶಿ ಗಣ್ಯರು ಹಾಗೂ ಉದ್ಯಮಿಗಳಿಗೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಮಾತನಾಡಿ, ಬೆಂಗಳೂರು ಸತತ 14 ಬಾರಿ ಏರ್ ಶೋ ಏರ್ಪಡಿಸಿದೆ. ದೇಶದ ಯಾವುದೇ ರಾಜ್ಯ ಇಷ್ಟೊಂದು ಏರ್ ಶೋ ಏರ್ಪಡಿಸಿಲ್ಲ. ಈ ಬಾರಿ ಅತಿ ದೊಡ್ಡ ಶೋ, ಹೆಚ್ಚಿನ ಉದ್ಯಮಿಗಳು ಭಾಗವಹಿಸುತ್ತಿದ್ದು, ಹೆಚ್ಚಿನ ಪ್ರದರ್ಶನಗಳು ನಡೆಯುತ್ತಿದೆ ಎಂದರು.

ಬೆಂಗಳೂರಿನಲ್ಲಿ ಅಪಾರ ಅವಕಾಶಗಳು ಇವೆ. ಎಂಜಿನಿಯರ್‌ಗಳು, ತಂತ್ರಜ್ಞರ ನಿರಂತರ ಶ್ರಮದಿಂದ ಏರ್ ಶೋ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಹಿರಿಯರು 1960ರಲ್ಲಿ ಇಲ್ಲಿ ಬಂಡವಾಳ ಹೂಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ತಂತ್ರಜ್ಞಾನ ಸಾಕಷ್ಟು ಬದಲಾವಣೆ ತಂದಿದೆ. ರಾಜ್ಯದ ಅಧಿಕಾರಿಗಳು ಯಶಸ್ಬಿಯಾಗಿ ಏರ್ ಶೋ ಆಯೋಜನೆ ಮಾಡಿದ್ದಾರೆ ಎಂದು ಅಭಿನಂದಿಸಿದರು.‌

ನಮ್ಮ ರಾಜ್ಯ ಯುವ ಪ್ರತಿಭಾವಂತ ಉದ್ಯಮಿಗಳು, ತಂತ್ರಜ್ಞರು, ಉದ್ಯಮಗಳು ಬೆಳೆಯಲು ಕಾರಣರಾಗಿದ್ದಾರೆ. ಯುವ ಪ್ರತಿಭಾವಂತರು ಇರುವುದರಿಂದ ಏರೊ ಸ್ಪೇಸ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಏರೊಸ್ಪೇಸ್ ನೀತಿ ರಾಜ್ಯದಲ್ಲಿದ್ದು, ಸಣ್ಣ ಕೈಗಾರಿಕೆಗಳು ಹಾಗೂ ಬೃಹತ್ ಉದ್ಯಮಗಳಿಗೆ ಸೂಕ್ತ ಅವಕಾಶಗಳಿವೆ. ನಾವು ಶೇ.65 ರಷ್ಟು ರಕ್ಷಣಾ ಪರಿಕರ ಉತ್ಪಾದನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶೇ.70 ರಷ್ಟು ಉತ್ಪಾದನೆ ಮಾಡುತ್ತೇವೆ.
ಈಗಾಗಲೇ ಅನೇಕರು ಇಲ್ಲಿ ಬಂಡವಾಳ ಹೂಡಿದ್ದಾರೆ, ಇನ್ನು ಅನೇಕರು ಬಂಡವಾಳ ಹೂಡುವ ಇಚ್ಛೆ ಹೊಂದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Sevalal Jayanthi: ಸಂತ ಸೇವಾಲಾಲ್‌ ಮಹಾಮಠ ಪ್ರತಿಷ್ಠಾನಕ್ಕೆ ₹10 ಕೋಟಿ ಅನುದಾನ: ಸಿಎಂ ಬೊಮ್ಮಾಯಿ

ಯುಎಸ್ ಕಾನ್ಸುಲೇಟ್ ರಾಯಭಾರಿ ಬೆಂಗಳೂರು ಏರೋ ಇಂಡಿಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಲ್ಲಿ ಉತ್ತಮ ಪರಿಸರ, ಆರ್ಥಿಕ ಪರಿಸ್ಥಿತಿಯಿದ್ದು, ನಮ್ಮ ಬೆಳವಣಿಗೆಯಲ್ಲಿ ನೀವು ಭಾಗಿದಾರರಾಗಿ ಎಂದು ಕರೆ ನೀಡಿದರು.

ಬೃಹತ್ ಕೈಗಾರಿಕಾ ಸಚಿವರಾದ ಮುರುಗೇಶ ನಿರಾಣಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣಾ ಹಾಜರಿದ್ದರು.

Continue Reading

Aero India

Aero India 2023: ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಹೂಡಿಕೆದಾರರಿಗೆ ಸರ್ಕಾರ ಆಹ್ವಾನ

ಭಾರತದಲ್ಲಿ ರಕ್ಷಣಾ ವಲಯದ ಉದ್ದಿಮೆಗೆ ಸರ್ಕಾರ ಉತ್ತೇಜನ ಮುಂದುವರಿಸಲಿದೆ. ಇದು ದೇಶವನ್ನು ಸ್ವಾವಲಂಬಿಯಾಗಿಸುವುದಲ್ಲದೆ, ಉದ್ಯೋಗ ಸೃಷ್ಟಿಗೆ ಕೂಡ ಸಹಕಾರಿ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Aero India 2023) ವಿವರಿಸಿದ್ದಾರೆ.

VISTARANEWS.COM


on

rajanath singh
Koo

ಬೆಂಗಳೂರು: ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ತೆರೆಯುವಂತೆ ಜಾಗತಿಕ ಮಟ್ಟದ ಹೂಡಿಕೆದಾರರು, ಉದ್ಯಮಿಗಳು, ನಾನಾ ಉತ್ಪನ್ನಗಳ ಮೂಲ ಉತ್ಪಾದಕರಿಗೆ (Global original equipment manufactures) ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆಹ್ವಾನಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ-ಇಂಡಿಯಾ ಏರ್‌ ಶೋದ (Aero India 2023) ನೇಪಥ್ಯದಲ್ಲಿ ಬಹು ರಾಷ್ಟ್ರೀಯ ಕಂಪನಿಗಳ ಸಿಇಒಗಳನ್ನು ಅವರು ಭೇಟಿಯಾದರು.

ಜಾಗತಿಕ ಉತ್ಪಾದಕರು ಭಾರತದಲ್ಲಿ ಜಂಟಿಯಾಗಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬಹುದು. ಇಲ್ಲಿಂದಲೇ ಜಗತ್ತಿಗೆ ರಫ್ತು ಮಾಡಬಹುದು ಎಂದು ಅವರು ಆಹ್ವಾನಿಸಿದರು. ಜನರಲ್‌ ಆಟೋಮಿಕ್ಸ್‌, ಬೋಯಿಂಗ್‌, ಎಂಬ್ರೇರ್‌, ರಾಫೆಲ್‌ ಅಡ್ವಾನ್ಸ್‌ಡ್‌ ಡಿಫೆನ್ಸ್‌ ಸಿಸ್ಟಮ್ಸ್‌ ಸೇರಿದಂತೆ ಹಲವಾರು ಕಂಪನಿಗಳ ಮುಖ್ಯಸ್ಥರು ಈ ಸಂದರ್ಭ ಸಭೆಯಲ್ಲಿ ಭಾಗವಹಿಸಿದ್ದರು.

ಉದ್ದಿಮೆ ಸ್ಥಾಪಿಸುವವರಿಗೆ ಭೂಮಿ, ಮೂಲಸೌಕರ್ಯಕ್ಕೆ ತಗಲುವ ವೆಚ್ಚ, ಸರ್ಕಾರದ ರೀತಿ-ನೀತಿ, ಉತ್ತೇಜನ, ಮಾನವ ಸಂಪನ್ಮೂಲದ ಲಭ್ಯತೆ, ದೇಶೀಯ ರಕ್ಷಣಾ ವಲಯದ ಮಾರುಕಟ್ಟೆಯ ವಿವರಗಳನ್ನು ಸಚಿವರು ನೀಡಿದರು.

ಭಾರತವು ರಕ್ಷಣಾ ವಲಯದ ಉತ್ಪಾದನೆಯನ್ನು ಉತ್ತೇಜಿಸುತ್ತೆ. ಭಾರತ ಈ ವಲಯದಲ್ಲಿ ಸ್ವಾವಲಂಬಿಯಾಗಲು ಹಾಗೂ ಉದ್ಯೋಗ ಸೃಷ್ಟಿಗೆ ಇದು ಮಹತ್ತರ ಪಾತ್ರ ವಹಿಸಲಿದೆ ಎಂದರು. ರಕ್ಷಣಾ ಉದ್ಯಮ ಕಾರಿಡಾರ್‌ಗಳ ಸ್ಥಾಪನೆಗೆ ಉತ್ತರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳು ಘೋಷಿಸಿರುವ ಇನ್ಸೆಂಟಿವ್‌ಗಳನ್ನೂ ಸಚಿವರು ಪ್ರಸ್ತಾಪಿಸಿದರು.

ಸ್ವದೇಶಿ ಎಲ್‌ಸಿಎ ಎಂಜಿನ್‌ ಉತ್ಪಾದನೆಗೆ ಸಿದ್ಧತೆ: ಭಾರತವು ಶೀಘ್ರದಲ್ಲಿಯೇ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಎಂಜಿನ್‌ಗಳನ್ನು ತಯಾರಿಸಲಿದೆ ಎಂದು (light combat aircraft engine) ಡಿಆರ್‌ ಡಿಒ ಮುಖ್ಯಸ್ಥ ಸಮೀರ್ ಕಾಮತ್‌ ತಿಳಿಸಿದ್ದಾರೆ.

Continue Reading
Advertisement
Kodagu News
ಕರ್ನಾಟಕ4 mins ago

ಕೊಡಗು ಜಿಲ್ಲೆಯ ಹೊಳೆಯಲ್ಲಿ ತಾಯಿ, ಇಬ್ಬರು ಯುವತಿಯರ ಶವ ಪತ್ತೆ; ಸಾವಿಗೆ ಕಾರಣ?

Ishwar Sahu
ದೇಶ50 mins ago

ಮುಸ್ಲಿಮರಿಂದ ಹತ್ಯೆಗೀಡಾದ ಯುವಕನ ತಂದೆ 7 ಬಾರಿಯ ಕಾಂಗ್ರೆಸ್ ಶಾಸಕನನ್ನು ಸೋಲಿಸಿದರು!

Jyothi Reddy CEO of American Company
ಅಂಕಣ53 mins ago

Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

Venkataramana Reddy
ದೇಶ1 hour ago

ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

Complaint to CM Siddaramaiah
ಕರ್ನಾಟಕ1 hour ago

Complaint to CM : ಸಿಎಂಗೆ ದೂರು ನೀಡಬೇಕೇ? ಈ ನಂಬರ್‌ಗೆ ಕರೆ ಮಾಡಿ!

women enjoying in rain
ಉಡುಪಿ2 hours ago

Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

Mizoram Election Result
ದೇಶ2 hours ago

Mizoram Election Result: ಮಿಜೋರಾಂ ಫಲಿತಾಂಶಕ್ಕೆ ಕ್ಷಣಗಣನೆ; ಯಾರಿಗೆ ಗೆಲುವು?

4 state election results shows us that, freebies are not the way for win elections
ದೇಶ2 hours ago

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

ead your daily horoscope predictions for december 4th 2023
ಪ್ರಮುಖ ಸುದ್ದಿ3 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Sphoorti Salu
ಸುವಚನ3 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ3 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ20 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌