ಅಮೃತ ಭಾರತಿಗೆ ಕನ್ನಡದಾರತಿ: ರಾಜ್ಯಾದ್ಯಂತ ಮೊಳಗಿದ ಸ್ವಾತಂತ್ರ್ಯ ಕಹಳೆ - Vistara News

ಕರ್ನಾಟಕ

ಅಮೃತ ಭಾರತಿಗೆ ಕನ್ನಡದಾರತಿ: ರಾಜ್ಯಾದ್ಯಂತ ಮೊಳಗಿದ ಸ್ವಾತಂತ್ರ್ಯ ಕಹಳೆ

ರಾಜ್ಯಾದ್ಯಂತ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಯಿತು. ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದರೆ ವಿವಿಧೆಡೆ ಸಚಿವರು ಪಾಲ್ಗೊಂಡಿದ್ದರು.

VISTARANEWS.COM


on

ಅಮೃತ ಭಾರತಿಗೆ ಕನ್ನಡದಾರತಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ʼಅಮೃತ ಭಾರತಿಗೆ ಕನ್ನಡದಾರತಿʼ ಕಾರ್ಯಕ್ರಮಗಳು ರಾಜ್ಯಾದ್ಯಂತ ಶನಿವಾರ ನಡೆದವು. ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ 75 ಸ್ಥಳಗಳ ಕುರಿತು ಇಲಾಖೆ ಈಗಾಗಲೆ 75 ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದು, ಆ 75 ಸ್ಥಳಗಳಲ್ಲೂ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದರು. ʼಯಾವುದೇ ಹೋರಾಟ ಆಗಬೇಕಾದರೆ ಚಿಂತನೆ ಬಹಳ ಮುಖ್ಯ. ಕನ್ನಡಿಗರು ಪ್ರಗತಿಪರ ಚಿಂತಕರು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ದೇಶಕ್ಕೆ ಕನ್ನಡಿಗರ ಕೊಡುಗೆ ಬಹಳಷ್ಟಿದೆ. ಕನ್ನಡ ಪರಂಪರೆಯ ಮೂಲಕ ಭಾರತ ಪರಂಪರೆಗೆ ನಾಂದಿ ಹಾಡಬೇಕಿದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣದ ಚಿಂತನೆಯನ್ನು ಸರ್ಕಾರ ಹೊಂದಿದೆ. ಮೋದಿಯವರ ಗುರಿಯಾದ ಭಾರತದ 5 ಟ್ರಿಲಿಯನ್ ಆರ್ಥಿಕತೆಯಲ್ಲಿ ಕರ್ನಾಟಕದ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ. ದೂರದೃಷ್ಟಿಯ ಚಿಂತನೆಯಿಂದ ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಮೊದಲನೇ ಸ್ವಾತಂತ್ರ್ಯ ಹೋರಾಟವು ಲೋಕಮಾನ್ಯ ತಿಲಕ್‌, ವೀರಸಾವರ್ಕರ್‌ರಿಂದ ಪ್ರಾರಂಭವಾಯಿತು. ವೀರ ಸಾವರ್ಕರ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿನ ಕಾರಾಗೃಹದಲ್ಲಿ ಕಾಲಾಪಾನಿ ಶಿಕ್ಷೆಯನ್ನು ಅನುಭವಿಸಿದ್ದರು. ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗಿದ್ದ ವೀರ ಸಾವರ್ಕರ್ ಅವರು ದಿಟ್ಟ, ಧೀಮಂತ ನಾಯಕರಾಗಿದ್ದರು. ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು ಎಂದ ಲೋಕಮಾನ್ಯ ತಿಲಕರ ಚಿಂತನೆ, ಯೋಚನಾಶಕ್ತಿ ವಿಶಿಷ್ಟವಾದುದಾಗಿತ್ತು. ಸ್ವಾತಂತ್ರ್ಯ ಹೊರತುಪಡಿಸಿ, ಮಿಕ್ಕೆಲ್ಲವೂ ನಗಣ್ಯ ಎಂದ ಈ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ಪ್ರಥಮ ನಮಸ್ಕಾರಗಳು ಎಂದರು.

ಕೊಪ್ಪಳದಲ್ಲಿ ಕನ್ನಡದಾರತಿ

ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ದೀಪ ಬೆಳಗಿಸುವ ಮೂಲಕ ಹಾಗೂ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಬಿ.ಸಿ ನಾಗೇಶ್‌ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಗೇಶ್‌, ಪರಕೀಯರ ಆಕ್ರಮಣಕ್ಕೂ ಮುನ್ನ ನಮ್ಮ ದೇಶದಲ್ಲಿ ನ್ಯಾಯ, ಶಿಕ್ಷಣ ಸೇರಿದಂತೆ ವಿವಿಧ ತನ್ನದೆ ಆದ ವ್ಯವಸ್ಥೆ ಇತ್ತು. ಹಂಪೆಯಲ್ಲಿ ಮುತ್ತು ರತ್ನಗಳನ್ನು, ಚಿನ್ನವನ್ನು ಸೇರಿನಲ್ಲಿ ಅಳೆಯುವಂತಹ ವ್ಯವಸ್ಥೆ ಇತ್ತು. ಮೊಘಲರು, ಬ್ರಿಟಿಷರು ಮಾಡಿದಷ್ಟು ಅನ್ಯಾಯವನ್ನು ಈ ದೇಶಕ್ಕೆ ಬೇರೆಯವರು ಮಾಡಿಲ್ಲ.

ನಮ್ಮ ದೇವಸ್ಥಾನಗಳನ್ನು ಮೊಘಲರು ಒಡೆದು ಹಾಕಿದರು. ನಮ್ಮ ದೇಶದ ಸಂಸ್ಕತಿ, ಸ್ವಾಭಿಮಾನವನ್ನು ಕಿತ್ತುಕೊಳ್ಳುವಂತಹ ಪ್ರಯತ್ನ ಮಾಡಿದರು. ನಮ್ಮ ದೇಶದವರು ಬೇರೆ ದೇಶಗಳಿಗೆ ಹೋದರೂ ಅವರು ಖಡ್ಗ, ಕತ್ತಿ ಹಿಡಿದು ಹೋಗಲಿಲ್ಲ. ಅವರು ಜ್ಞಾನವನ್ನು ಹಿಡಿದು ಹೋದರು. ಬ್ರಿಟಿಷರು ಬುದ್ದಿವಂತಿಕೆಯಿಂದ, ಶಕ್ತಿಯಿಂದ ಈ ದೇಶದ ಮೇಲೆ ಆಕ್ರಮಣ ಮಾಡಲಿಲ್ಲ. ಕ್ರಾಂತಿಕಾರಿಗಳು ಬ್ರಿಟೀಷರ ನಿದ್ದೆಗೆಡಿಸಿದ್ದರು. ದೇಶದಾದ್ಯಂತ ಏಕಕಾಲದಲ್ಲಿ ನಡೆದಿದ್ದರೆ 1857 ರಲ್ಲಿಯೇ ನಮ್ಮ ಸ್ವಾತಂತ್ರ್ಯ ಸಿಕ್ಕಿರುತ್ತಿತ್ತು. ಸ್ವಾತಂತ್ರ್ಯ ಬಳಿಕ ಬಂದ ಸರ್ಕಾರಗಳು ಈ ಸತ್ಯವನ್ನು ಹೇಳಲಿಲ್ಲ ಎಂದರು.

ಕೊಪ್ಪಳದ ಸಾಹಿತ್ಯ ಭವನದಲ್ಲಿ ದೀಪ ಸಚಿವ ಬಿ.ಸಿ. ನಾಗೇಶ್

ಸಂಸದ ಸಂಗಣ್ಣ ಕರಡಿ ಮಾತನಾಡಿ, ಹಿಂದೂ ಮುಸ್ಲಿಮರು ಸಹೋದರತ್ವದಿಂದ ಬದುಕಬೇಕು. ಅವರವರ ಧರ್ಮವನ್ನು ಅವರು ಆಚರಿಸಬೇಕು. ಅವರನ್ನು ದೇಶದಿಂದ ಓಡಿಸಲು ಆಗುವುದಿಲ್ಲ. ರಾಜಕಾರಣಿಗಳು ಸೀದಾ ಆದಾಗ ಅಧಿಕಾರಿಗಳು ಸೀದಾ ಆಗುತ್ತಾರೆ. ಇತಿಹಾಸ ತಿಳಿಯದ ವ್ಯಕ್ತಿ ಇತಿಹಾಸ ನಿರ್ಮಿಸಲಾರ. ಸ್ವಾತಂತ್ರ್ಯದ ಆ ಕ್ಷಣಗಳನ್ನು ನಾವೆಲ್ಲರೂ ಮೆಲುಕು ಹಾಕಬೇಕು. ಭಾರತಕ್ಕೆ ಆಧ್ಯಾತ್ಮಿಕ ಹಿನ್ನೆಲೆಯಿದ್ದು ಭಾರತದ ಕೀರ್ತಿಯನ್ನು ಮೋದಿಯವರು ಹೆಚ್ಚಿಸಿದ್ದಾರೆ. ಅಂದಿನ ಸರ್ಕಾರ ಮಾಡಿದ ತಪ್ಪು ನಿರ್ಧಾರದಿಂದ ದೇಶ ಮುಂದೆ ಹೋಗಲು ಆಗಿಲ್ಲ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಸಂಕಲ್ಪ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಇದನ್ನೂ ಓದಿ | ಮೇ 28 ರಿಂದ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಆರಂಭ: ವಿ.ಸುನಿಲ್ ಕುಮಾರ್

ಉಡುಪಿಯಲ್ಲಿ ಅಮೃತ ಮಹೋತ್ಸವ

ಉಡುಪಿಯಲ್ಲಿ ಅಜ್ಜರಕಾಡು ಮೈದಾನದಲ್ಲಿ ನಡೆದ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಸಂಸದ ಪ್ರತಾಪ್ ಸಿಂಹ ಮಾತನಾಡಿದರು. ಸ್ವಾತಂತ್ರ್ಯದ ಪರಿಕಲ್ಪನೆ ಹುಟ್ಟುಹಾಕಿದ್ದೇ ವೀರಸಾವರ್ಕರ್‌. ಉಪವಾಸದಿಂದ ದೇಶ ಸ್ವತಂತ್ರವಾಗಲು ಸಾಧ್ಯವಿಲ್ಲ.

ವಿಶ್ವದ 63 ದೇಶಗಳು ಸ್ವತಂತ್ರವಾದದ್ದು ಕ್ರಾಂತಿಯಿಂದ. ಪಾಠದಲ್ಲಿ ನಮ್ಮ ಮೇಲಿನ ಆಕ್ರಮಣದ ಬಗ್ಗೆ ಮಾತ್ರ ಓದುತ್ತೇವೆ. ಚೋಳರು, ಚೇರರು ಗುಪ್ತರು ರಾಷ್ಟ್ರಕೂಟರು ಕದಂಬರು ಹೊಯ್ಸಳರು ಪೇಶ್ವೆಯನ್ನು ನಾವು ಮರೆತೇ ಬಿಟ್ಟೆವು. ತ್ರಿವರ್ಣ ಧ್ವಜದಲ್ಲಿ ಇಂದು ಗಾಂಧೀಜಿ ಚರಕ ಇರುತ್ತಿತ್ತು, ಅದರ ಬದಲಿಗೆ ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಹಾಕಿಸಿದ್ದು ವೀರ ಸಾವರ್ಕರ್.

ಉಡುಪಿಯಲ್ಲಿ ಅಜ್ಜರಕಾಡು ಮೈದಾನದಲ್ಲಿ ಸಂಸದ ಪ್ರತಾಪ್ ಸಿಂಹ

ಅಶೋಕ ಚಕ್ರ ಮುಂದೊಂದು ದಿನ ಸುದರ್ಶನ ಚಕ್ರ ಆಗುತ್ತದೆ. ಅಂಡಮಾನ್ ಬರ್ಮಾ ಜೈಲಿನಲ್ಲಿ ಇದ್ದವರು ನಿಜವಾದ ಸ್ವಾತಂತ್ರ ಹೋರಾಟಗಾರರು. ಕಾಲಾಪಾನಿ ಶಿಕ್ಷೆ ಅನುಭವಿಸಿದವರು ಸ್ವಾತಂತ್ರ ಹೋರಾಟಗಾರರು. ಪುಣೆಯ ಪ್ಯಾಲೇಸ್‌ನಲ್ಲಿ ಇದ್ದವರು ಸ್ವತಂತ್ರ ಹೋರಾಟಗಾರರ ಆಗಲು ಸಾಧ್ಯವಿಲ್ಲ ಎಂದು ಮಾತನಾಡಿದರು.

ಇದನ್ನೂ ಓದಿ | ಪಠ್ಯದಲ್ಲಿ ಬ್ರಾಹ್ಮಣೀಕರಣ ಮಾಡುತ್ತಿಲ್ಲ, ಇತಿಹಾಸ ಹಾಗೂ ರಾಷ್ಟ್ರೀಯತೆ ಇದೆ ಎಂದ ಸಚಿವ ನಾಗೇಶ್‌

ದೇಶಭಕ್ತಿ ಮತ್ತು ಹೊಣೆಗಾರಿಕೆಯಿಂದ ಬದುಕಬೇಕು: ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ ಜಿ.ಪಂ., ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮೂಡುಗೊಪ್ಪೆ ಗ್ರಾ.ಪಂ. ಸಹಯೋಗದಲ್ಲಿ ಹೊಸನಗರ ತಾಲೂಕಿನ ಬಿದನೂರು ಕೋಟೆ ಮೂಡುಗುಪ್ಪೆಯಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ, ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಋಣ ನಮ್ಮ ಮೇಲಿದ್ದು, ನಾವೆಲ್ಲ ದೇಶಭಕ್ತರಾಗಿ ಹೊಣೆಗಾರಿಕೆಯಿಂದ ಬದುಕಬೇಕಿದೆ. ಭಾರತ ಮಾತೆಯನ್ನು ಬ್ರಿಟಿಷರ ದಾಸ್ಯದಿಂದ ಬಂಧಮುಕ್ತಗೊಳಿಸುವುದಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು, ಹೋರಾಟದ ವೃತ್ತಾಂತವನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಹೊಸನಗರ ತಾಲೂಕಿನ ಬಿದನೂರು ಕೋಟೆ ಮೂಡುಗುಪ್ಪೆಯಲ್ಲಿ ಸಚಿವ ಆರಗ ಜ್ಞಾನೇಂದ್ರ

ಪತ್ರಕರ್ತ ಸಂತೋಷ್ ತಮ್ಮಯ್ಯ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬಿದನೂರು ಕೋಟೆ ಮೂಡುಗೊಪ್ಪೆ ಗ್ರಾ.ಪಂ ಅಧ್ಯಕ್ಷ ಕರುಣಾಕರ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಎಸಿ ಡಾ.ನಾಗರಾಜ್, ಹೊಸನಗರ ತಹಶೀಲ್ದಾರ್ ರಾಜೀವ್, ತಾ.ಪಂ ಇಒ ಪ್ರವೀಣ್ ಕುಮಾರ್, ಕನ್ನಡ ಸಂಸ್ಕ್ರತ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

ಮಡಿಕೇರಿಯಲ್ಲಿ ಕನ್ನಡದಾರತಿ

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಮಹತ್ವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ‌ ಚಾಲನೆ ನೀಡಿದರು. ಮಡಿಕೇಯ ವಿವಿಧ ಜಾನಪದ ಕಲಾತಂಡಗಳೊಂದಿಗೆ ಚೌಡೇಶ್ವರಿ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಸಂಪನ್ನಗೊಂಡಿತ್ತು. ಕೀಲುಗೊಂಬೆ ಕುಣಿತ, ಪೂಜಾ ಕುಣಿತ ಸೇರಿ ವಿವಿಧ ಕಲಾ ತಂಡದ ಜಾನಪದ ಕಲೆ ಎಲ್ಲರ ಮನೆಸೂರೆಗೊಳಿಸಿತು.

ಮೆರವಣಿಗೆ ಸಾಗುವಾಗ ದಾರಿ ಮದ್ಯೆ‌ ಗಣ್ಯ ಅತಿಥಿಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು‌. ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ರವಿಕುಶಾಲಪ್ಪ, ಶಾಸಕರಾದ ವೀಣಾ ಅಚ್ಚಯ್ಯ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಸಾಮಾಜಿಕ ಕಾರ್ಯಕರ್ತರಾದ ಸಿ.ಆರ್. ಪ್ರೇಮ್ ಕುಮಾರ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಸೇರಿದಂತೆ ಗಣ್ಯ ಅತಿಥಿಯಾಗಳು ಭಾಗವಹಿಸಿದ್ದರು.

ಇದನ್ನೂ ಓದಿ | ರೋಹಿತ್‌ ಚಕ್ರತೀರ್ಥರನ್ನು ಸುಮ್ಮನೆ ಟಾರ್ಗೆಟ್‌ ಮಾಡೋದ್ಯಾಕೆ ಎಂದ ಪ್ರತಾಪ ಸಿಂಹ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ನ್ಯಾಯಾಲಯ

VISTARANEWS.COM


on

ಮಂಗಳೂರು ನಗರವನ್ನು ಬೆಚ್ಚಿಬೀಳಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್‌ಗೆ ಬೆಂಗಳೂರಿನ ಎನ್‌ಐಎ (NIA) ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಈ ಸ್ಫೋಟ ಸಂಭವಿಸಿತ್ತು. ಆರೋಪಿ ಶಾರಿಕ್ ಸ್ಫೋಟಕ ತುಂಬಿದ್ದ ಕುಕ್ಕರ್ ಅನ್ನು ಸಾಗಿಸುತ್ತಿದ್ದಾಗಲೇ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ, ನಗರದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು. ಈ ಘಟನೆಯಲ್ಲಿ ಶಾರಿಕ್ ಮತ್ತು ಆಟೋ ಚಾಲಕ ಇಬ್ಬರೂ ಗಾಯಗೊಂಡಿದ್ದರು.

ದೇಶದ ಭದ್ರತೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದ ಈ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಿತ್ತು. ತನಿಖೆಯ ವೇಳೆ ಶಾರಿಕ್ ನಿಷೇಧಿತ ಉಗ್ರಗಾಮಿ ಸಂಘಟನೆಗಳಿಂದ ಪ್ರೇರಿತನಾಗಿದ್ದದ್ದು ಮತ್ತು ಡಾರ್ಕ್ ವೆಬ್ ಮೂಲಕ ವಿದೇಶಿ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದು ಬಾಂಬ್ ತಯಾರಿಕಾ ತರಬೇತಿ ಪಡೆದಿದ್ದ ಎಂಬ ಆಘಾತಕಾರಿ ಸತ್ಯಗಳು ಹೊರಬಂದಿದ್ದವು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಎನ್‌ಐಎ ಸಲ್ಲಿಸಿದ್ದ ಸಾಕ್ಷ್ಯಧಾರಗಳನ್ನು ಪುರಸ್ಕರಿಸಿ ಶಾರಿಕ್ ದೋಷಿ ಎಂದು ತೀರ್ಪು ನೀಡಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೇರಿದಂತೆ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಆತನಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಈ ತೀರ್ಪು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗುವವರಿಗೆ ಕಠಿಣ ಸಂದೇಶ ರವಾನಿಸಿದ್ದು, ಸಂತ್ರಸ್ತ ಆಟೋ ಚಾಲಕ ಮತ್ತು ಸಾರ್ವಜನಿಕರಿಗೆ ನ್ಯಾಯ ಸಿಕ್ಕಂತಾಗಿದೆ.

Continue Reading

Latest

ಹರಿಹರ ಪೀಠದಲ್ಲಿ ಲೆಕ್ಕ ಸಮರ: ವಚನಾನಂದ ಶ್ರೀ, ಟ್ರಸ್ಟಿಗಳ ನಡುವೆ ಆರೋಪ-ಪ್ರತ್ಯಾರೋಪ.

VISTARANEWS.COM


on

ಹರಿಹರದ ಪಂಚಮಸಾಲಿ ಮಠದಲ್ಲಿ ದಶಕಗಳಿಂದ ಇದ್ದ ಭಿನ್ನಾಭಿಪ್ರಾಯ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಮಠದ ಆಸ್ತಿ, ಭಕ್ತರ ದೇಣಿಗೆ ಮತ್ತು ಸರ್ಕಾರದ ಅನುದಾನದ ಲೆಕ್ಕಾಚಾರದ ವಿಚಾರವಾಗಿ ವಚನಾನಂದ ಸ್ವಾಮೀಜಿ ಹಾಗೂ ಮಠದ ಟ್ರಸ್ಟಿಗಳ ನಡುವೆ ತೀವ್ರ ಜಟಾಪಟಿ ಆರಂಭವಾಗಿದೆ. ಸೋಮವಾರ ಮಠದ ಆವರಣದಲ್ಲಿ ಉಭಯ ಬಣಗಳ ಬೆಂಬಲಿಗರು ಮುಖಾಮುಖಿಯಾಗಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡು, ಪೊಲೀಸರು ಬಿಗಿ ಬಂದೋಬಸ್ತ್ ಮಾಡುವಂತಾಯಿತು.

ಈ ವಿವಾದದ ಕೇಂದ್ರಬಿಂದು ಸರ್ಕಾರದ 10 ಕೋಟಿ ರೂಪಾಯಿ ಅನುದಾನ. ಮಠದಲ್ಲಿ ವಸತಿಗೃಹ ಮತ್ತು ಹಾಸ್ಟೆಲ್ ನಿರ್ಮಾಣಕ್ಕಾಗಿ ಬಂದಿದ್ದ ಈ ಹಣದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ವಚನಾನಂದ ಶ್ರೀಗಳು ಆರೋಪಿಸಿದ್ದಾರೆ. ಟ್ರಸ್ಟಿಗಳು ನಕಲಿ ಸಹಿ ಮಾಡಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ, ಆದರೆ ಕಟ್ಟಡಗಳೇ ನಿರ್ಮಾಣವಾಗಿಲ್ಲ ಎಂಬುದು ಶ್ರೀಗಳ ವಾದ. ಇದಕ್ಕೆ ಪ್ರತಿಯಾಗಿ ಟ್ರಸ್ಟಿಗಳು, “ನಾವು ಯಾವುದೇ ತಪ್ಪು ಮಾಡಿಲ್ಲ, ಎಲ್ಲವೂ ಪಾರದರ್ಶಕವಾಗಿದೆ” ಎಂದು ಹೇಳುತ್ತಾ 2008 ರಿಂದ 2026ರವರೆಗಿನ ಲೆಕ್ಕಪತ್ರದ ದಾಖಲೆಗಳೊಂದಿಗೆ ಮಠಕ್ಕೆ ಆಗಮಿಸಿ ಶ್ರೀಗಳ ವಿರುದ್ಧವೇ ಹರಿಹಾಯ್ದಿದ್ದಾರೆ.

ಮಠದ ಆವರಣದಲ್ಲಿ ನಡೆದ ಈ ಹೈಡ್ರಾಮಾದಲ್ಲಿ ಟ್ರಸ್ಟಿಗಳು ಶ್ರೀಗಳ ಉಚ್ಚಾಟನೆಗೆ ಪಟ್ಟು ಹಿಡಿದರೆ, ಶ್ರೀಗಳು ಮಾತ್ರ ತಾವು ಮಠ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಮಠದಲ್ಲಿ ನಡೆದಿರುವ ಲೂಟಿಯ ಬಗ್ಗೆ ಪೂರ್ಣ ತನಿಖೆಯಾಗಲಿ” ಎಂದು ಸ್ವಾಮೀಜಿ ಪಟ್ಟು ಹಿಡಿದು ಕುಳಿತಿದ್ದಾರೆ. ಭಕ್ತರ ಆಸ್ತಿಯಾಗಿರುವ ಮಠದಲ್ಲಿ ಈ ರೀತಿ ಲೆಕ್ಕದ ವಿಚಾರವಾಗಿ ಹಗ್ಗಜಗ್ಗಾಟ ನಡೆಯುತ್ತಿರುವುದು ಈಗ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ

Continue Reading

Latest

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ: ಮೇ 1ರಿಂದ ಬದಲಾಗಲಿವೆ ಎಲ್‌ಪಿಜಿ ನಿಯಮಗಳು

VISTARANEWS.COM


on

ದೇಶದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಗಳು ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆಯಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಮೇ 1ರಂದು ತೈಲ ಕಂಪನಿಗಳು ಹೊಸ ದರಗಳನ್ನು ಪ್ರಕಟಿಸಲಿವೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಪೆಟ್ರೋಲ್, ಡೀಸೆಲ್ ಜೊತೆಗೆ ಗ್ಯಾಸ್ ಬೆಲೆಯೂ ಗಗನಕ್ಕೇರುವ ಮುನ್ಸೂಚನೆ ಸಿಕ್ಕಿದೆ. ಈ ಬೆಲೆ ಏರಿಕೆಯು ಸಾಮಾನ್ಯ ಜನರ ಮನೆ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.

ಬೆಲೆ ಏರಿಕೆಯ ಜೊತೆಗೆ ಸರ್ಕಾರವು ಹೊಸ ಎಲ್‌ಪಿಜಿ ಸಂಪರ್ಕ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈಗ ಇರುವ ಗ್ರಾಹಕರಿಗೆ ಸಮರ್ಪಕವಾಗಿ ಗ್ಯಾಸ್ ಪೂರೈಸಲು ಪೆಟ್ರೋಲಿಯಂ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ. ಅಲ್ಲದೆ, ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿಯೂ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ನಗರ ಪ್ರದೇಶದಲ್ಲಿ 25 ದಿನ ಮತ್ತು ಗ್ರಾಮೀಣ ಪ್ರದೇಶದಲ್ಲಿ 45 ದಿನಗಳ ಅಂತರವಿದ್ದರೆ ಮಾತ್ರ ಮರು ಬುಕಿಂಗ್ (Refilling) ಮಾಡಲು ಸಾಧ್ಯವಾಗುತ್ತದೆ. ಇದರಿಂದಾಗಿ ಬೇಕಾಬಿಟ್ಟಿ ಗ್ಯಾಸ್ ಬುಕ್ ಮಾಡುವುದಕ್ಕೆ ಬ್ರೇಕ್ ಬೀಳಲಿದೆ.

ಗ್ಯಾಸ್ ವಿತರಣೆಯಲ್ಲಿ ಪಾರದರ್ಶಕತೆ ತರಲು ‘ಒಟಿಪಿ’ (OTP) ಆಧಾರಿತ ವಿತರಣಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಹಕರು ಸಿಲಿಂಡರ್ ಪಡೆಯುವಾಗ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಕೋಡ್ ನೀಡಿದ ನಂತರವೇ ವಿತರಣೆ ಮಾಡಲಾಗುತ್ತದೆ. ಪೂರೈಕೆಯ ಕೊರತೆಯಿಂದಾಗಿ ಈಗಾಗಲೇ ಬೆಂಗಳೂರಿನಂತಹ ನಗರಗಳ ಹೋಟೆಲ್‌ಗಳಲ್ಲಿ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆಯಿಂದ ಇರುವುದು ಒಳಿತು.

Continue Reading

Latest

ಮೇನಲ್ಲಿ ನಡೆಯಲಿದೆ ಪ್ಯಾನ್-ಐಐಟಿ ಬೆಂಗಳೂರು ಸಮ್ಮಿಟ್-2026

VISTARANEWS.COM


on

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಪ್ಯಾನ್ ಐಐಟಿ ಅಲ್ಯೂಮ್ನಿ ಇಂಡಿಯಾ ಅಸೋಸಿಯೇಷನ್ ಜಂಟಿಯಾಗಿ ಮೇ 16ರಂದು ನಗರದಲ್ಲಿ “ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026” ಆಯೋಜಿಸಿವೆ.
“ತಂತ್ರಜ್ಞಾನದಲ್ಲಿನ ಸ್ವಾಯತ್ತತೆ” ಎಂಬ ವಿಷಯದಡಿ ಈ ಸಮ್ಮಿಟ್ ನಡೆಯಲಿದೆ ಎಂದು ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ, ವಿಶೇಷವಾಗಿ ಬೆಂಗಳೂರು, ಇಂದು ಭಾರತದ ತಂತ್ರಜ್ಞಾನ ಮಹತ್ವಾಕಾಂಕ್ಷೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ದೇಶದ ಪ್ರಮುಖ ಜಿಡಿಪಿ ಕೊಡುಗೆ ನೀಡುವ ನಗರಗಳಲ್ಲಿ ಬೆಂಗಳೂರು ಒಂದಾಗಿದೆ, ವೆಂಚರ್ ಕ್ಯಾಪಿಟಲ್ ಹೂಡಿಕೆಗಳ ಪ್ರಮುಖ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.
ಸ್ಟಾರ್ಟ್‌ಅಪ್‌ಗಳ ನಿಧಿ ಸಂಗ್ರಹ ಹಾಗೂ ನವೀನ ಚಟುವಟಿಕೆಗಳಲ್ಲಿ ಮಹತ್ತರ ಪಾತ್ರವಹಿಸಿದ್ದು, ಸಾವಿರಾರು ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ವಿಶ್ವದ ಅತಿ ದೊಡ್ಡ ಪ್ರತಿಭಾ ಸಂಪನ್ಮೂಲಗಳಲ್ಲಿ ಒಂದನ್ನು ಹೊಂದಿರುವುದರಿಂದ ಬೆಂಗಳೂರು “ಪೂರ್ವದ ಸಿಲಿಕಾನ್ ವ್ಯಾಲಿ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ವಲಯ ಮತ್ತು ತಾಂತ್ರಿಕ ಕಂಪನಿಗಳ ಮೂಲಕ ಏರೋಸ್ಪೇಸ್, ರಕ್ಷಣಾ ಹಾಗೂ ಮೂಲ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕರ್ನಾಟಕ ಬಲವಾದ ನೆಲೆ ನಿರ್ಮಿಸಿತು. ಬಳಿಕ ಇನ್ಫೋಸಿಸ್, ಟಿಸಿಎಸ್, ಎಚ್‌ಸಿಎಲ್ ಮತ್ತು ವಿಪ್ರೋ ಮುಂತಾದ ಐಟಿ ದಿಗ್ಗಜಗಳ ಉದಯದೊಂದಿಗೆ ಭಾರತವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಅವರು ವಿವರಿಸಿದರು.
ಪ್ರಸ್ತುತ ಭಾರತ ಡೀಪ್ ಟೆಕ್, ಕೃತಕ ಬುದ್ಧಿಮತ್ತೆ ಮತ್ತು ವೈಜ್ಞಾನಿಕ ನವೀನತೆಯ ಹಂತಕ್ಕೆ ಸಾಗುತ್ತಿದೆ. ಈ ಹಂತದಲ್ಲಿ ಅಕಾಡೆಮಿಯಾ, ಕೈಗಾರಿಕೆ ಮತ್ತು ಸರ್ಕಾರಗಳ ನಡುವಿನ ಗಟ್ಟಿಯಾದ ಸಹಕಾರ ಅತ್ಯಾವಶ್ಯ. ತಂತ್ರಜ್ಞಾನ ಸ್ವಾಯತ್ತತೆ ಸಾಧಿಸಲು ಇದು ಪ್ರಮುಖ ಹಂತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ಯಾನ್-ಐಐಟಿ ಬೆಂಗಳೂರು ಸಮಿಟ್ 2026 ರೂಪುಗೊಂಡಿದೆ ಎಂದು ತಿಳಿಸಿದರು.
ಪ್ಯಾನ್ ಐಐಟಿ ಅಧ್ಯಕ್ಷರಾದ ಶ್ರೀ ಪ್ರಭಾತ್ ಕುಮಾರ್ (ಐ.ಆರ್.ಎಸ್) ಅವರು ಮಾತನಾಡಿ, ಸಮ್ಮಿಟ್‌ನಲ್ಲಿ ಉನ್ನತ ಮಟ್ಟದ ಪ್ಲೀನರಿ ಸೆಷನ್‌ಗಳು, ಆಳವಾದ ಪ್ಯಾನೆಲ್ ಚರ್ಚೆಗಳು ಹಾಗೂ ಎಐ, ರಕ್ಷಣಾ, ಸೆಮಿಕಂಡಕ್ಟರ್, ಇಂಧನ, ಮೊಬೈಲಿಟಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಮಾಂತರ ಚರ್ಚೆಗಳು ನಡೆಯಲಿವೆ ಎಂದರು.
23 ಐಐಟಿಗಳ 5 ಲಕ್ಷಕ್ಕೂ ಹೆಚ್ಚು ಅಲ್ಯೂಮ್ನಿಗಳ ಸಂಯುಕ್ತ ಚಿಂತನೆಯ ಫಲವಾಗಿರುವ ಈ ಸಮ್ಮಿಟ್, ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ, ವ್ಯವಹಾರ ಮತ್ತು ನೀತಿ ರೂಪಣೆಯಲ್ಲಿ ಸಕ್ರಿಯ ಸಮುದಾಯವನ್ನು ಒಂದೇ ವೇದಿಕೆಗೆ ತರಲಿದೆ. ನವೀನತೆ, ಉದ್ಯಮಶೀಲತೆ ಮತ್ತು ರಾಷ್ಟ್ರ ನಿರ್ಮಾಣದ ಮುಂದಿನ ಹಂತವನ್ನು ಉತ್ತೇಜಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

Continue Reading
Advertisement
Latest20 minutes ago

ಇತಿಹಾಸ ಬರೆಯಲು ಸಜ್ಜಾದ ರನ್ ಮಷೀನ್: ಐಪಿಎಲ್ ಕ್ರಿಕೆಟ್‌ನಲ್ಲಿ ಕೊಹ್ಲಿ ಹೊಸ ರೆಕಾರ್ಡ್‌

Latest30 minutes ago

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ನ್ಯಾಯಾಲಯ

Latest1 hour ago

ಪಾಕಿಸ್ತಾನಕ್ಕೆ ಮತ್ತೊಂದು ಆರ್ಥಿಕ ಪೆಟ್ಟು: 3.5 ಬಿಲಿಯನ್ ಡಾಲರ್ ಸಾಲ ಮರುಪಾವತಿಗೆ ಯುಎಇ ಸೂಚನೆ

ಸಿನಿಮಾ2 hours ago

ಎಲೆಕ್ಷನ್ ಮುಗಿದರೂ ಮುಗಿಯದ ದಳಪತಿ ಆಸ್ತಿ ಸಂಘರ್ಷ: ಹೆಂಡತಿಗೆ ಕೊಟ್ಟ 12 ಕೋಟಿ ಸಾಲದ ರಹಸ್ಯವೇನು?

Latest2 hours ago

ಹರಿಹರ ಪೀಠದಲ್ಲಿ ಲೆಕ್ಕ ಸಮರ: ವಚನಾನಂದ ಶ್ರೀ, ಟ್ರಸ್ಟಿಗಳ ನಡುವೆ ಆರೋಪ-ಪ್ರತ್ಯಾರೋಪ.

Latest4 hours ago

RCB v/s GT ಪಂದ್ಯದ ವೇಳೆ ಭದ್ರತಾ ವೈಫಲ್ಯ: 240 ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸಿದ್ದೇಕೆ? ಹೊರಬಿತ್ತು ಶಾಕಿಂಗ್‌ ಸತ್ಯ!

Latest4 hours ago

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ: ಮೇ 1ರಿಂದ ಬದಲಾಗಲಿವೆ ಎಲ್‌ಪಿಜಿ ನಿಯಮಗಳು

Latest6 hours ago

ಮೇನಲ್ಲಿ ನಡೆಯಲಿದೆ ಪ್ಯಾನ್-ಐಐಟಿ ಬೆಂಗಳೂರು ಸಮ್ಮಿಟ್-2026

ಕರ್ನಾಟಕ7 hours ago

ಡಿಕೆಶಿ ಪದೇ ಪದೇ ದೆಹಲಿಗೆ ಹೋಗುತ್ತಿರುವುದೇಕೆ? ಸತೀಶ್ ಜಾರಕಿಹೊಳಿ ನೀಡಿದ ಆ ಗೊಂದಲದ ಹೇಳಿಕೆಯಲ್ಲಿದೆಯೇ ದೊಡ್ಡ ಸುಳಿವು

Latest7 hours ago

ಇರಾನ್‌ನಿಂದ ಹೊಸ ಶಾಂತಿ ಸಂಧಾನ: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕಕ್ಕೆ ಷರತ್ತುಬದ್ಧ ಪ್ರಸ್ತಾವನೆ ಸಲ್ಲಿಕೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌