ಆಸ್ತಿ ವಿಚಾರಕ್ಕೆ ಮಗನಿಗೇ ಬೆಂಕಿಯಿಟ್ಟ ಅಪ್ಪ: ವಾರ ನರಳಿ ಪ್ರಾಣ ಬಿಟ್ಟ ಪುತ್ರ - Vistara News

ಕ್ರೈಂ

ಆಸ್ತಿ ವಿಚಾರಕ್ಕೆ ಮಗನಿಗೇ ಬೆಂಕಿಯಿಟ್ಟ ಅಪ್ಪ: ವಾರ ನರಳಿ ಪ್ರಾಣ ಬಿಟ್ಟ ಪುತ್ರ

ಸಾವಿಗೀಡಾಗುವುದಕ್ಕೂ ಮುನ್ನ ಅರ್ಪಿತ್‌ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಚಾಮರಾಜಪೇಟೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಸುರೇಂದ್ರನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

VISTARANEWS.COM


on

ಆರೋಪಿ ಸುರೇಂದ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆಸ್ತಿ ನಿರ್ವಹಣೆ ಹಾಗೂ ಲೆಕ್ಕಪತ್ರ ವಿಚಾರದಲ್ಲಿ ಗಲಾಟೆ ತಾರಕಕ್ಕೇರಿ ಪುತ್ರನಿಗೆ ತಂದೆಯೇ ಬೆಂಕಿ ಹಚ್ಚಿದ್ದು, ಒಂದು ವಾರ ಆಸ್ಪತ್ರೆಯಲ್ಲಿ ನರಳಿದ ಪುತ್ರ ಗುರುವಾರ ಅಸುನೀಗಿದ್ದಾನೆ.

ಬೆಂಗಳೂರಿನ ಆಜಾದ್‌ ನಗರದಲ್ಲಿ ವಾಸಿಸುತ್ತಿದ್ದ ಸುರೇಂದ್ರ ಫ್ಯಾಬ್ರಿಕೇಷನ್‌ ಕೆಲಸ ಮಾಡುತ್ತಿದ್ದ. ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣ, ಫ್ಯಾಬ್ರಿಕೇಷನ್‌ ಉದ್ಯಮದ ಅನೇಕ ವ್ಯವಹಾರಗಳನ್ನು ಪುತ್ರ ಅರ್ಪಿತ್‌ ನೋಡಿಕೊಳ್ಳುತ್ತಿದ್ದ. ಆದರೆ ವ್ಯವಹಾರದಲ್ಲಿ ಅರ್ಪಿತ್‌ ಏರುಪೇರು ಮಾಡಿದ್ದು, ಸುಮಾರು ಒಂದೂವರೆ ಕೋಟಿ ರೂ. ಲೆಕ್ಕ ನೀಡಿರಲಿಲ್ಲ ಎಂಬ ವಿಚಾರದಲ್ಲಿ ಅಪ್ಪ ಮಹನ ಮಧ್ಯೆ ಗಲಾಟೆ ನಡೆಯುತ್ತಿತ್ತು.

ಕಳೆದ ವಾರ ಇಬ್ಬರ ನಡುವೆ ಗೋಡೌನ್‌ನಲ್ಲಿ ಕೆಲಸಗಾರರ ಎದುರೇ ಜಗಳ ತಾರಕಕ್ಕೇರಿತ್ತು. ಈ ಸಮಯದಲ್ಲಿ ಕೋಪವನ್ನು ನಿಯಂತ್ರಿಸಿಕೊಳ್ಳದ ಸುರೇಂದ್ರ, ಗೋಡೌನ್‌ನಲ್ಲಿದ್ದ ಸ್ಪಿರಿಟ್‌ ತೆಗೆದುಕೊಂಡು ಅರ್ಪಿತ್‌ ಮೇಲೆ ಎರಚಿದ್ದಾನೆ. ಬೆಂಕಿಯ ಅಪಾಯವನ್ನು ಗಮನಿಸಿದ ಅರ್ಪಿತ್‌ ಗೋಡೌನ್‌ನಿಂದ ನಡೆದು ರಸ್ತೆಗೆ ಬಂದಿದ್ದಾನೆ. ಆಗಲೂ ಬಿಡದ ಸುರೇಂದ್ರ, ಬೆಂಕಿ ಕಡ್ಡಿಯಿಂದ ಬೆಂಕಿ ಹಚ್ಚಿದ್ದಾನೆ. ಬೆಂಕಿ ತಗಲುತ್ತಲೇ ಅರ್ಪಿತ್‌ ಅಲ್ಲಿಂದ ಓಡಿಹೋಗಿದ್ದಾನೆ. ಗೋಡೌನ್‌ನಿಂದ ಹೊರಬರುವ, ಬೆಂಕಿ ಹಚ್ಚುವ ಹಾಗೂ ಅರ್ಪಿತ್‌ ಓಡಿ ಹೋಗುವ ದೃಶ್ಯಾವಳಿಗಳು ಎದುರಿನ ಕಟ್ಟಡದ CCTV ಯಲ್ಲಿ ದಾಖಲಾಗಿದೆ.

ಮತ್ತೊಂದು ಕ್ರೈಂ ಸುದ್ದಿ: ಊಟಕ್ಕೆ ಹೋಗಿದ್ದ ಸ್ನೇಹಿತರ ಜೊತೆ ಹಂತಕರ ಕಿರಿಕ್‌: ಮಾರಕಾಸ್ತ್ರಗಳಿಂದ ಅಟ್ಯಾಕ್!

ನಂತರ ಸುಪ್ರೀತ್‌ ಪರಿಸ್ಥಿತಿಯನ್ನು ಕಂಡ ಪರಿಚಯಸ್ಥರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಒಂದು ವಾರ ಚಿಕಿತ್ಸೆ ಪಡೆಯುತ್ತಲೇ ನೃಳಾಡುತ್ತಿದ್ದ ಅರ್ಪಿತ್‌ ಗುರುವಾರ ಕೊನೆಯುಸಿರೆಳೆದಿದ್ದಾನೆ. ಸಾವಿಗೀಡಾಗುವುದಕ್ಕೂ ಮುನ್ನ ಅರ್ಪಿತ್‌ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಇದರ ಆಧಾರದಲ್ಲಿ ಚಾಮರಾಜಪೇಟೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಸುರೇಂದ್ರನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Road Accident: ನಿರ್ಲಕ್ಷ್ಯದಿಂದ ಓಡಿಸಿ ಎಂಬಿಬಿಎಸ್‌ ವಿದ್ಯಾರ್ಥಿಯ ಜೀವ ತೆಗೆದ ಟ್ಯಾಂಕರ್ ಚಾಲಕ

Road Accident: ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 23 ವರ್ಷದ ಇಶಾನ್ ಎಂಬ ಎಂಬಿಬಿಎಸ್‌ ವಿದ್ಯಾರ್ಥಿಗೆ. ಎದುರುಗಡೆಯಿಂದ ಯಮನಂತೆ ಬಂದ ವಾಟರ್ ಟ್ಯಾಂಕರ್‌ ಅಪ್ಪಳಿಸಿದೆ. ವಿದ್ಯಾರ್ಥಿಗೆ ಗುದ್ದಿ, ಇಶಾನ್ ಮೇಲೆಯೇ ಹರಿದಿದೆ.

VISTARANEWS.COM


on

road accident mbbs student death
Koo

ಬೆಂಗಳೂರು: ವಾಟರ್‌ ಟ್ಯಾಂಕರ್‌ (Water Tanker) ಚಾಲಕನೊಬ್ಬನ (Tanker Driver) ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಗೆ ಎಂಬಿಬಿಎಸ್‌ ವಿದ್ಯಾರ್ಥಿಯೊಬ್ಬ (MBBS Student) ಬಲಿಯಾಗಿದ್ದಾನೆ. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಈ ರಸ್ತೆ ಅಪಘಾತ (Road Accident) ನಡೆದಿದೆ.

ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 23 ವರ್ಷದ ಇಶಾನ್ ಎಂಬ ಎಂಬಿಬಿಎಸ್‌ ವಿದ್ಯಾರ್ಥಿಗೆ. ಎದುರುಗಡೆಯಿಂದ ಯಮನಂತೆ ಬಂದ ವಾಟರ್ ಟ್ಯಾಂಕರ್‌ ಅಪ್ಪಳಿಸಿದೆ. ವಿದ್ಯಾರ್ಥಿಗೆ ಗುದ್ದಿ, ಇಶಾನ್ ಮೇಲೆಯೇ ಹರಿದಿದೆ. ಇಷ್ಟಾದರೂ ಚಾಲಕ ತಕ್ಷಣ ನಿಲ್ಲಿಸದೆ ಮುಂದೆ (Hit and Run) ಸಾಗಿದ್ದಾನೆ. ಚಲಿಸುತ್ತಿದ್ದ ಟ್ಯಾಂಕರ್ ಅನ್ನು ದ್ವಿಚಕ್ರ ವಾಹನ ಸವಾರರು ತಡೆದು ನಿಲ್ಲಿಸಿ ಚಾಲಕನನ್ನು ಹಿಡಿದಿದ್ದಾರೆ.

ಸ್ಥಳಕ್ಕೆ ಬಂದು ಮಗನ ಮೃತ ದೇಹ ನೋಡಿದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಬಿಕ್ಕಿ ಬಿಕ್ಕಿ ಅತ್ತ ತಾಯಿ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಶಾನ್ ಎಂಬಿಬಿಎಸ್ ಫೈನಲ್ ಇಯರ್ ಸ್ಟೂಡೆಂಟ್ ಆಗಿದ್ದು, ಇವರ ಕುಟುಂಬ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ವಾಸವಿತ್ತು. ನಿನ್ನೆ ಸಂಜೆ ಸ್ನೇಹಿತನನ್ನು ಮೀಟ್ ಆಗಲು ಥಣಿಸಂದ್ರ ಬಳಿ ಈತ ಬಂದಿದ್ದ ವೇಳೆ ದುರ್ಘಟನೆ ನಡೆದಿದೆ.

ಮದ್ಯ ಸೇವಿಸಿ ಹಳಿ ಮೇಲೆ ಮಲಗಿದ್ದವರ ಮೇಲೆ ಹರಿದ ರೈಲು, ಮೂವರು ಯುವಕರ ಸಾವು

ಕೊಪ್ಪಳ: ರೇಲ್ವೆ ಟ್ರ್ಯಾಕ್ (Railway Track) ಮೇಲೆ ಮದ್ಯ ಸೇವಿಸಿ (Liquor) ಅಲ್ಲೇ ಮಲಗಿದ್ದ ಯುವಕರ‌ ಮೇಲೆ ರೈಲು (Train Accident) ಹರಿದಿದ್ದು, ಸ್ಥಳದಲ್ಲಿಯೇ ಮೂರು ಜನ ಯುವಕರು ಸಾವಿಗೀಡಾಗಿದ್ದಾರೆ. ಈ ಘೋರ ದುರಂತ (Horrible Accident) ಕೊಪ್ಪಳ ಜಿಲ್ಲೆ (Koppala news) ಗಂಗಾವತಿ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮೃತ ಯುವಕರನ್ನು ಮೌನೇಶ್ ಪತ್ತಾರ(23), ಸುನೀಲ್ (23), ವೆಂಕಟ ಭೀಮನಾಯ್ಕ (20) ಎಂದು ಗುರುತಿಸಲಾಗಿದೆ. ಮೂವರೂ ಗಂಗಾವತಿಯವರಾಗಿದ್ದಾರೆ. ಇವರು ಕುಡಿದ ಮತ್ತಿನಲ್ಲಿ ರೇಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದರು ಎಂಬುದಕ್ಕೆ ಸ್ಥಳದಲ್ಲಿದ್ದ ಮದ್ಯದ ಬಾಟಲಿಗಳು ಸಾಕ್ಷಿಯಾಗಿವೆ. ರೈಲು ಹುಬ್ಬಳ್ಳಿಯಿಂದ ಸಿಂಧನೂರಿಗೆ ತೆರಳುತ್ತಿತ್ತು. ಮದ್ಯದ ಅಮಲಿನಲ್ಲಿ ರೈಲಿನ ಆಗಮನ ಯುವಕರಿಗೆ ಗೊತ್ತಾಗಿರಲಿಕ್ಕಿಲ್ಲ ಎನ್ನಲಾಗಿದೆ. ಗದಗ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆ ಅನಾಹುತ; ಮನೆಗೋಡೆ ಕುಸಿದು ಇಬ್ಬರು ಕಂದಮ್ಮಗಳು ಸೇರಿ 3 ಸಾವು

ಹಾವೇರಿ: ರಾಜ್ಯದಲ್ಲಿ ಮಳೆ ಅನಾಹುತ ಸೃಷ್ಟಿಸುತ್ತಿದೆ. ಹಾವೇರಿಯಲ್ಲಿ ಮಳೆಗೆ ಒದ್ದೆಯಾದ ಮನೆಗೋಡೆ ಕುಸಿದು ಎರಡು ಕಂದಮ್ಮಗಳು ಹಾಗೂ ಒಬ್ಬ ಮಹಿಳೆ ಸಾವಿಗೀಡಾಗಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ದುರಂತ ಸಂಭವಿಸಿದೆ.

ಅಮೂಲ್ಯ ಹಾಗೂ ಅನನ್ಯ ಮೃತಪಟ್ಟ ಎರಡು 2 ವರ್ಷದ ಅವಳಿಜವಳಿ ಕಂದಮ್ಮಗಳಾಗಿವೆ. ಇವರ ತಾಯಿ ಚೆನ್ನಮ್ಮ (30) ಕೂಡ ಮೃತಪಟ್ಟಿದ್ದಾರೆ. ಮನೆಯೊಳಗಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆ ಬೀಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ರಕ್ಷಣೆಗೆ ಧಾವಿಸಿದ್ದು, ಮೃತ ದೇಹಗಳನ್ನ ಹೊರ ತೆಗೆದು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಗಾಯಾಳುಗಳು ಸವಣೂರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Illicit relationship : ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ

Continue Reading

ಕ್ರೈಂ

Horrible Accident: ಮದ್ಯ ಸೇವಿಸಿ ಹಳಿ ಮೇಲೆ ಮಲಗಿದ್ದವರ ಮೇಲೆ ಹರಿದ ರೈಲು, ಮೂವರು ಯುವಕರ ಸಾವು

Horrible Accident: ಮೃತ ಯುವಕರನ್ನು ಮೌನೇಶ್ ಪತ್ತಾರ(23), ಸುನೀಲ್ (23), ವೆಂಕಟ ಭೀಮನಾಯ್ಕ (20) ಎಂದು ಗುರುತಿಸಲಾಗಿದೆ. ಮೂವರೂ ಗಂಗಾವತಿಯವರಾಗಿದ್ದಾರೆ. ಇವರು ಕುಡಿದ ಮತ್ತಿನಲ್ಲಿ ರೇಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದರು ಎಂಬುದಕ್ಕೆ ಸ್ಥಳದಲ್ಲಿದ್ದ ಮದ್ಯದ ಬಾಟಲಿಗಳು ಸಾಕ್ಷಿಯಾಗಿವೆ.

VISTARANEWS.COM


on

railway track horrible accident
Koo

ಕೊಪ್ಪಳ: ರೇಲ್ವೆ ಟ್ರ್ಯಾಕ್ (Railway Track) ಮೇಲೆ ಮದ್ಯ ಸೇವಿಸಿ (Liquor) ಅಲ್ಲೇ ಮಲಗಿದ್ದ ಯುವಕರ‌ ಮೇಲೆ ರೈಲು (Train Accident) ಹರಿದಿದ್ದು, ಸ್ಥಳದಲ್ಲಿಯೇ ಮೂರು ಜನ ಯುವಕರು ಸಾವಿಗೀಡಾಗಿದ್ದಾರೆ. ಈ ಘೋರ ದುರಂತ (Horrible Accident) ಕೊಪ್ಪಳ ಜಿಲ್ಲೆ (Koppala news) ಗಂಗಾವತಿ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮೃತ ಯುವಕರನ್ನು ಮೌನೇಶ್ ಪತ್ತಾರ(23), ಸುನೀಲ್ (23), ವೆಂಕಟ ಭೀಮನಾಯ್ಕ (20) ಎಂದು ಗುರುತಿಸಲಾಗಿದೆ. ಮೂವರೂ ಗಂಗಾವತಿಯವರಾಗಿದ್ದಾರೆ. ಇವರು ಕುಡಿದ ಮತ್ತಿನಲ್ಲಿ ರೇಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದರು ಎಂಬುದಕ್ಕೆ ಸ್ಥಳದಲ್ಲಿದ್ದ ಮದ್ಯದ ಬಾಟಲಿಗಳು ಸಾಕ್ಷಿಯಾಗಿವೆ. ರೈಲು ಹುಬ್ಬಳ್ಳಿಯಿಂದ ಸಿಂಧನೂರಿಗೆ ತೆರಳುತ್ತಿತ್ತು. ಮದ್ಯದ ಅಮಲಿನಲ್ಲಿ ರೈಲಿನ ಆಗಮನ ಯುವಕರಿಗೆ ಗೊತ್ತಾಗಿರಲಿಕ್ಕಿಲ್ಲ ಎನ್ನಲಾಗಿದೆ. ದೇಹಗಳು ಛಿದ್ರಛಿದ್ರವಾಗಿವೆ. ಗದಗ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆ ಅನಾಹುತ; ಮನೆಗೋಡೆ ಕುಸಿದು ಇಬ್ಬರು ಕಂದಮ್ಮಗಳು ಸೇರಿ 3 ಸಾವು

ಹಾವೇರಿ: ರಾಜ್ಯದಲ್ಲಿ ಮಳೆ ಅನಾಹುತ ಸೃಷ್ಟಿಸುತ್ತಿದೆ. ಹಾವೇರಿಯಲ್ಲಿ (Haveri news) ಮಳೆಗೆ ಒದ್ದೆಯಾದ ಮನೆಗೋಡೆ ಕುಸಿದು ಎರಡು ಕಂದಮ್ಮಗಳು ಹಾಗೂ ಒಬ್ಬ ಮಹಿಳೆ ಸಾವಿಗೀಡಾಗಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ದುರಂತ ಸಂಭವಿಸಿದೆ.

ಅಮೂಲ್ಯ ಹಾಗೂ ಅನನ್ಯ ಮೃತಪಟ್ಟ ಎರಡು 2 ವರ್ಷದ ಅವಳಿಜವಳಿ ಕಂದಮ್ಮಗಳಾಗಿವೆ. ಇವರ ತಾಯಿ ಚೆನ್ನಮ್ಮ (30) ಕೂಡ ಮೃತಪಟ್ಟಿದ್ದಾರೆ. ಮನೆಯೊಳಗಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆ ಬೀಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ರಕ್ಷಣೆಗೆ ಧಾವಿಸಿದ್ದು, ಮೃತ ದೇಹಗಳನ್ನ ಹೊರ ತೆಗೆದು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಗಾಯಾಳುಗಳು ಸವಣೂರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗಾಂಜಾ ನಶೆಯಲ್ಲಿ ಬಾಲಕಿಯರನ್ನು ಬೆದರಿಸಿದ ಪುಂಡರು

ಬೆಂಗಳೂರು: ಕಾರಿನಲ್ಲಿ ಬಂದ ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿ ಬಂದ ಪುಂಡರ ಗುಂಪೊಂದು, ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಶಾಲಾ ಬಾಲಕಿಯರಿಗೆ ಕಿರುಕುಳ ನೀಡಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ (Bangalore News). ಇನ್ನೋವಾ ಕಾರಿನಲ್ಲಿ ಬಂದಿದ್ದ ಪುಂಡರು ಕೃತ್ಯ ಎಸಗಿದ್ದು ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀರ ಮೇಲೂ ದಾಳಿ ಮಾಡಿದ್ದಾರೆ. ಬೆಂಗಳೂರಿನ ಎಚ್​ಎಎಲ್ ಬಳಿಯಿರುವ ಇರುವ ಖಾಸಗಿ ಶಾಲೆಯ ಮಕ್ಕಳ ಜೊತೆ ಅಸಭ್ಯ ವರ್ತನೆ ತೋರಲಾಗಿದೆ.

ಶಾಲಾ ಮಕ್ಕಳು ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾರನ್ನು ಫುಟ್​ಪಾತ್ ಮೇಲೆ ಹತ್ತಿಸಿದ್ದರು. ಬಳಿಕ ಮಕ್ಕಳಿಗೆ ಹೆದರಿಸಲು ಯತ್ನಿಸಿದ್ದ. ಈ ವೇಳೆ ಕಾರಿನಲ್ಲಿದ್ದ ಒಬ್ಬ ನಶೆಯಲ್ಲಿ ತೂರಾಡಿ ಕೆಳಗೆ ಬಿದ್ದಿದ್ದಾನೆ. ಅಲ್ಲದೆ ಮಕ್ಕಳ ಮುಂದೆಯೇ ಅಸಭ್ಯ ವರ್ತನೆ ತೋರಿದ್ದಾನೆ. ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಅವರ ಮೇಲೆ ದರ್ಪ ತೋರಿದ್ದಾರೆ. ಪ್ರಶ್ನೆ ಮಾಡಿದ ಸಾರ್ವಜನಿಕನ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದರು. ತಕ್ಷಣ ಪೊಲೀಸ್​ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೊಯ್ಸಳ ವಾಹನ ಬರುವಷ್ಟರಲ್ಲಿ ಕಾರಿನಲ್ಲಿದ್ದವು ಪರಾರಿಯಾಗಿದ್ದಾರೆ. ಗಾಂಜಾ ನಶೆ ಹಾಗು ಕುಡಿತದ ಅಮಲಿನಲ್ಲಿ ಕೃತ್ಯ ಎಸಗಿರುವ ಸಾಧ್ಯತೆ ಎಂದು ಸ್ಥಳೀಯರ ಶಂಕಿಸಿದ್ದಾರೆ. ಎಚ್​​ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಇದನ್ನೂ ಓದಿ: GT World Mall : ಜಿಟಿ ಮಾಲ್​ ಏಳು ದಿನಗಳ ಕಾಲ ಬಂದ್​, ಮಾಲೀಕರಿಂದಲೇ ಸ್ವಯಂಪ್ರೇರಿತ ಕ್ರಮ

Continue Reading

ಬೆಂಗಳೂರು

Lokayukta Raid: ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಶಾಕ್‌, ರಾಜ್ಯಾದ್ಯಂತ ಲೋಕಾಯುಕ್ತ ದಾಳಿ

Lokayukta Raid: ರಾಜ್ಯದ ಒಟ್ಟು 54 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು, 100 ಜನ ಅಧಿಕಾರಿಗಳು ಸ್ಥಳೀಯ ಪೊಲೀಸರನ್ನು ಬಳಸಿಕೊಂಡು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಲೋಕಾಯುಕ್ತದಲ್ಲಿ 12 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರು 3 ಪ್ರಕರಣ, ಮೈಸೂರು 2, ಶಿವಮೊಗ್ಗ 2, ಯಾದಗಿರಿ 1 ಸೇರಿ ಒಟ್ಟು 12 ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಇಂದು ದಾಳಿಗಳು ನಡೆದಿವೆ.

VISTARANEWS.COM


on

lokayukta raid mysore
ಮೈಸೂರಿನ ಕಾರ್ಮಿಕ ಇಲಾಖೆ ಇನ್ಸ್‌ಪೆಕ್ಟರ್ ಚೇತನ್ ಮನೆ
Koo

ಬೆಂಗಳೂರು: ಇಂದು ಮುಂಜಾನೆ ರಾಜ್ಯದಾದ್ಯಂತ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಭ್ರಷ್ಟಾಚಾರ ಆರೋಪ (Corruption) ದೂರು ದಾಖಲಾಗಿರುವ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ನಿದ್ರೆಯಿಂದ ಏಳುವ ಮೊದಲೇ ದಾಳಿ ನಡೆದಿದೆ.

ರಾಜ್ಯದ ಒಟ್ಟು 54 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು, 100 ಜನ ಅಧಿಕಾರಿಗಳು ಸ್ಥಳೀಯ ಪೊಲೀಸರನ್ನು ಬಳಸಿಕೊಂಡು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಲೋಕಾಯುಕ್ತದಲ್ಲಿ 12 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರು 3 ಪ್ರಕರಣ, ಮೈಸೂರು 2, ಶಿವಮೊಗ್ಗ 2, ಯಾದಗಿರಿ 1 ಸೇರಿ ಒಟ್ಟು 12 ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಇಂದು ದಾಳಿಗಳು ನಡೆದಿವೆ.

ಮೈಸೂರು: ಮೈಸೂರಿನಲ್ಲಿ ಕಾರ್ಮಿಕ ಇಲಾಖೆ ಇನ್ಸ್‌ಪೆಕ್ಟರ್ ಚೇತನ್ ಮನೆ ಮೇಲೆ ಲೋಕಾಯುಕ್ತ ರೈಡ್ ಮಾಡಿದೆ. ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಮೈಸೂರಿನ ಶಾರದಾದೇವಿ ನಗರದಲ್ಲಿರುವ ಚೇತನ್‌ ಮನೆ ಮೇಲೆ ದಾಳಿ ನಡೆದಿದೆ.

ತುಮಕೂರು: ಕೆಐಎಡಿಬಿ ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ನಾಗರಭಾವಿಯ 2ನೇ ಹಂತದಲ್ಲಿರುವ ವಾಸದ ಮನೆ, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕಚೇರಿ, ತುಮಕೂರು ನಗರದ ಬನಶಂಕರಿಯಲ್ಲಿರುವ ಮನೆ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಮನೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿರುವ ಫಾರಂಹೌಸ್, ತುಮಕೂರಿನ ಅಂತರಸನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕ) ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ತುಮಕೂರು ಲೋಕಾಯುಕ್ತ ಎಸ್.ಪಿ ಲಕ್ಷ್ಮೀ ಗಣೇಶ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬಿ.ಉಮಾಶಂಕರ್, ರಾಮಕೃಷ್ಣಯ್ಯ, ಇನ್ಸ್ಪೆಕ್ಟರ್‌ಗಳಾದ ಶಿವರುದ್ರಪ್ಪ ಮೇಟಿ, ಮಹಮ್ಮದ್ ಸಲೀಂ ಇನ್ನಿತರ ಅಧಿಕಾರಿಗಳ ತಂಡಗಳಿಂದ ದಾಳಿ ನಡೆದಿದೆ.

ಯಾರ್ಯಾರ ಮೇಲೆ ದಾಳಿ?

ತುಮಕೂರು – ಮುದ್ದುಕುಮಾರ್ ಅಡಿಷನಲ್ ಡೈರೆಕ್ಟರ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ ಡಿಪಾರ್ಟ್ಮೆಂಟ್
ಯಾದಗಿರಿ – ಬಲವಂತ್ ಯೋಜನ ನಿರ್ದೇಶಕ , ಯಾದಗಿರಿ ಜಿಲ್ಲಾ ಪಂಚಾಯತ್
ಬೆಂಗಳೂರು ಗ್ರಾಮಾಂತರ – ಸಿದ್ದಪ್ಪ ಹಿರಿಯ ಪಶು ವೈದ್ಯ ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ನರಸಿಂಹ ಮೂರ್ತಿ ಕೆ – ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಕಮೀಷನರ್ ಹೆಬ್ಬಗೋಡಿ
ಬೆಂಗಳೂರು ಸಿಟಿ – ಬಿವಿ ರಾಜ ಎಫ್ ಡಿ ಎ ಕೆಐ ಎ ಡಿಬಿ
ಬೆಂಗಳೂರು ಸಿಟಿ – ರಮೇಶ್ ಕುಮಾರ್ ಜಂಟಿ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ
ಬೆಂಗಳೂರು ಸಿಟಿ- ಅಕ್ತರ್ ಅಲಿ – ಡೆಪ್ಯೂಟಿ ಕಂಟ್ರೋಲರ್ ಮಾಪನಾ ಇಲಾಖೆ
ಶಿವಮೊಗ್ಗ – ಸಿ ನಾಗೇಶ್ – ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಭದ್ರಾವತಿ
ಶಿವಮೊಗ್ಗ ಪ್ರಕಾಶ್ – ಡೆಪ್ಯೂಟಿ ಡೈರೆಕ್ಟರ್ – ತೋಟಗಾರಿಕಾ ಇಲಾಖೆ
ಬೆಂಗಳೂರು ಸಿಟಿ – ಚೇತನ್ ಕುಮಾರ್ – ಕಾರ್ಮಿಕ‌ಇಲಾಖೆ ಅಧಿಕಾರಿ ಮಂಡ್ಯ ವಿಭಾಗ
ಬೆಂಗಳೂರು ಸಿಟಿ – ಆನಂದ್ ಸಿ ಎಲ್ – ಕಮೀಷನರ್ ಮಂಗಳೂರು ಮಹಾನಗರ ಪಾಲಿಕೆ
ಬೆಂಗಳೂರು ಸಿಟಿ – ಮಂಜುನಾಥ್ ಟಿ ಆರ್ – ಎಫ್ ಡಿಎ ಬೆಂಗಳೂರು‌ ನಾರ್ತ್ ಸಬ್ ಡಿವಿಷನ್ ಆಫೀಸರ್

ಇದನ್ನೂ ಓದಿ: DK Shivakumar: `ಲೋಕಾಯುಕ್ತಕ್ಕೆ ಕೊಟ್ಟ ಮೇಲೆ ಸಿಬಿಐಗೇನು ಕೆಲಸ?’ ಅಕ್ರಮ ಆಸ್ತಿ ಕೇಸ್‌ ಬಗ್ಗೆ ಡಿಕೆ ಶಿವಕುಮಾರ್‌ ಪ್ರಶ್ನೆ

Continue Reading

ಕರ್ನಾಟಕ

Police Suspended : ಠಾಣೆಯಲ್ಲೇ ಕೈಮಿಲಾಯಿಸಿದ ಪೊಲೀಸ್​ ಅಧಿಕಾರಿಗಳಿಬ್ಬರು ಸಸ್ಪೆಂಡ್​​

Police Suspended :ಹೆಡ್​ಕಾನ್​ಸ್ಟೇಬಲ್​ ನೇತ್ರಾವತಿ ಎಂಬುವರ ಜತೆ ಅತ್ಯಾಚಾರ ಪ್ರಕರಣವೊಂದರ ಕುರಿತು ಮಂಜುನಾಥ್ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಬಂದ ಅಂಜನಾಮೂರ್ತಿ ಅವರು ಲೈನ್ ಕಂಪ್ಯೂಟರ್​ನಲ್ಲಿ ಟೈಪ್ ಮಾಡಿ ಪುಕ್ಸಟ್ಟೆ ಸಂಬಳ ತಗೋತಿದ್ದೀಯ ಎಂದು ಹೇಳಿದ್ದರು. ಈ ವೇಳೆ ಸಿಟ್ಟಿಗೆದ್ದ ಮಂಜುನಾಥ್​, ಬೇರೆಯವರಿಗೆ ಹೆದರಿಸಿದಂತಲ್ಲ. ನೀನೇ ಬಂದು ಇನ್ವೆಷ್ಟಿಗೇಷನ್ ಮಾಡು ಎಂದು ಮರುತ್ತರ ನೀಡಿದ್ದರು.

VISTARANEWS.COM


on

Police Suspended
Koo

ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲೇ ಕಿತ್ತಾಡಿಕೊಂಡಿದ್ದ ಪೊಲೀಸ್ ಅಧಿಕಾರಿಗಳಿಬ್ಬರನ್ನು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್ ಅಮಾನತು (Police Suspended) ಮಾಡಿದ್ದಾರೆ. ವಿಚಾರದ ಬಗ್ಗೆ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಎಎಸ್​ಐ ಮಂಜುನಾಥ್ ಹಾಗೂ ಹೆಡ್​ಕಾನ್​​ಸ್ಟೇಬಲ್​ ಅಂಜನಾಮೂರ್ತಿ ಅಮಾನತುಗೊಂಡವರು.

ಠಾಣೆಯಲ್ಲಿ ಹೊಡೆದಾಡಿಕೊಂಡ ಕುರಿತು ತನಿಖೆ ನಡೆಸಿದಾಗ ಇಬ್ಬರ ತಪ್ಪೂ ಸಾಬೀತಾಗಿತ್ತು. ಹೀಗಾಗಿ ಅವರಿಬ್ಬರನ್ನೂ ಅಮಾನತು ಮಾಡಲು ಡಿಸಿಪಿ ಲೋಕೇಶ್ ಜಗಲಾಸರ್ ಆದೇಶ ಹೊರಡಿಸಿದ್ದಾರೆ. ಇವರಿಬ್ಬರೂ ಜುಲೈ 16ರಂದು ಠಾಣೆಯಲ್ಲಿ ಕರ್ತವ್ಯದ ಅವಧಿಯಲ್ಲಿ ಹೊಡೆದಾಡಿಕೊಂಡ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಇದು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬಂದಿತ್ತು.

ಏನಿದು ಗಲಾಟೆ?

ಪುಟ್ಟೇನಹಳ್ಳಿ ಪೊಲೀಸ್ ಸಿಬ್ಬಂದಿಗಳಾದ ಅವರಿಬ್ಬರೂ ಸಾರ್ವಜನಿಕರ ಮುಂದೆಯೇ ಕಿತ್ತಾಟ ನಡೆಸಿಕೊಂಡಿದ್ದರು. ಈ ವೇಳೆ ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿಕೊಂಡಿದ್ದರು. ಹೊರಗಡೆ ಬಂದ್ರೆ ಬೀದಿ ಹೆಣ ಮಾಡ್ತಿನಿ ಎಂದು ಪೊಲೀಸ್ ಠಾಣೆಯಲ್ಲಿಯೇ ಬೆದರಿಕೆ ಹಾಕಿಕೊಂಡಿದ್ದರು. ಈ ಬಗ್ಗೆ ಹೆಡ್​ಕಾನಸ್ಟೇಬಲ್​ ಅಂಜನಾಮೂರ್ತಿ ಜೀವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ದಾಖಲಾಗಿತ್ತು.

ಹೆಡ್​ಕಾನ್​ಸ್ಟೇಬಲ್​ ನೇತ್ರಾವತಿ ಎಂಬುವರ ಜತೆ ಅತ್ಯಾಚಾರ ಪ್ರಕರಣವೊಂದರ ಕುರಿತು ಮಂಜುನಾಥ್ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಬಂದ ಅಂಜನಾಮೂರ್ತಿ ಅವರು ಲೈನ್ ಕಂಪ್ಯೂಟರ್​ನಲ್ಲಿ ಟೈಪ್ ಮಾಡಿ ಪುಕ್ಸಟ್ಟೆ ಸಂಬಳ ತಗೋತಿದ್ದೀಯ ಎಂದು ಹೇಳಿದ್ದರು. ಈ ವೇಳೆ ಸಿಟ್ಟಿಗೆದ್ದ ಮಂಜುನಾಥ್​, ಬೇರೆಯವರಿಗೆ ಹೆದರಿಸಿದಂತಲ್ಲ. ನೀನೇ ಬಂದು ಇನ್ವೆಷ್ಟಿಗೇಷನ್ ಮಾಡು ಎಂದು ಮರುತ್ತರ ನೀಡಿದ್ದರು.

ಇದನ್ನೂ ಓದಿ: Natasa Stankovic : ಹಾರ್ದಿಕ್ ಪಾಂಡ್ಯಗೆ ಡೈವೋರ್ಸ್​ ನೀಡಿದ್ದೇನೆ; ಪತ್ನಿ ನತಾಶಾ ಹೇಳಿಕೆ

ಕೋಪಗೊಂಡ ಅಂಜನಾಮೂರ್ತಿ ಕಾಲೆತ್ತಿ ಒದಿಯಲು ಮುಂದಾಗಿದ್ದರು ಎನ್ನಲಾಗಿದೆ. ಅಲ್ಲದೆ, ಪೆನ್ಷನ್ ಬರದೇ ಇರೋ ಮಾಡ್ತಿನಿ ಎಂದು ಹೇಳಿ ಅವಾಚ್ಯ ಪದಗಳಿಂದ ನಿಂದಿಸಿದ್ದರಂತೆ. ಈ ಬಗ್ಗೆ ಮಂಜುನಾಥ್ ಅವರು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ತಮಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಎರಡು ಸಲ ಸ್ಟಂಟ್ ಹಾಕಿದ್ದೇನೆ. ಅಂಜನಾಮೂರ್ತಿಯಿಂದ ತೊಂದರೆ ಆಗುತ್ತಿದೆ ಎಂದು ಬರೆದುಕೊಂಡಿದ್ದರು.

Continue Reading
Advertisement
Kanwar Yatra
ದೇಶ4 mins ago

Kanwar Yatra: ಕನ್ವರ್‌ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ: ಯೋಗಿ ಆದಿತ್ಯನಾಥ್

Uttara kannada landslide 3
ಉತ್ತರ ಕನ್ನಡ17 mins ago

Uttara Kannada Landslide: 6 ಜನರ ಶವ ಪತ್ತೆ, ಇನ್ನೂ ನಾಲ್ವರಿಗಾಗಿ ಶೋಧ; ಭಾರಿ ಮಳೆ ನಡುವೆ ಮಣ್ಣು ತೆರವು

England vs West Indies
ಕ್ರೀಡೆ25 mins ago

England vs West Indies: ವೇಗದ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್

Karnataka Rain
ಮಳೆ29 mins ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Vaibhavi Jagdish Bold Photo shoot
ಸ್ಯಾಂಡಲ್ ವುಡ್29 mins ago

Vaibhavi Jagdish: ಬೋಲ್ಡ್‌ ಫೋಟೊ ಹಂಚಿಕೊಂಡು ಕಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ ಜೈ ಜಗದೀಶ್ ಪುತ್ರಿ!

Kannada Actress Many opportunities for this actress before the release Back Benchers'!
ಸ್ಯಾಂಡಲ್ ವುಡ್49 mins ago

Kannada Actress: `ಬ್ಯಾಕ್‍ ಬೆಂಚರ್ಸ್’ ಬಿಡುಗಡೆಗೂ ಮುನ್ನವೇ ಹಲವು ಅವಕಾಶಗಳು ಈ ನಟಿಗೆ!

Donald Trump
ವಿದೇಶ56 mins ago

Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ

ಪ್ರಮುಖ ಸುದ್ದಿ1 hour ago

Olympic Games: ಒಲಿಂಪಿಕ್ಸ್​ನಲ್ಲಿ ಮಹಿಳೆಯರು ಮೊದಲ ಬಾರಿಗೆ ಸ್ಪರ್ಧಿಸಿದ್ದು ಯಾವಾಗ?

Ram Pothineni double ismart second song out
ಟಾಲಿವುಡ್2 hours ago

Ram Pothineni: `ಡಬಲ್ ಇಸ್ಮಾರ್ಟ್’ ಸಿನಿಮಾದ ಎರಡನೇ ಹಾಡು ರಿಲೀಸ್!

UT Khader karnataka assembly live
ಪ್ರಮುಖ ಸುದ್ದಿ2 hours ago

Karnataka Assembly Live: ವಿಧಾನಸಭೆಯಲ್ಲಿ ಶಾಸಕರಿಗೆ ಮಧ್ಯಾಹ್ನ ಮಲಗಲು ವ್ಯವಸ್ಥೆ ಮಾಡಿಸಿದ ಸ್ಪೀಕರ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ29 mins ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ20 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ22 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ4 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ4 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ5 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ5 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

ಟ್ರೆಂಡಿಂಗ್‌