Gold theft : ಕದ್ದ ಚಿನ್ನದೊಂದಿಗೆ ಪರಾರಿಯಾಗಿದ್ದ ವ್ಯಕ್ತಿ, ಗಿರವಿ ಅಂಗಡಿಯಲ್ಲಿ ಸಿಕ್ಕಿ ಬಿದ್ದ - Vistara News

ಕ್ರೈಂ

Gold theft : ಕದ್ದ ಚಿನ್ನದೊಂದಿಗೆ ಪರಾರಿಯಾಗಿದ್ದ ವ್ಯಕ್ತಿ, ಗಿರವಿ ಅಂಗಡಿಯಲ್ಲಿ ಸಿಕ್ಕಿ ಬಿದ್ದ

ಬೆಂಗಳೂರಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ವ್ಯಕ್ತಿ, ಕದ್ದ ಚಿನ್ನವನ್ನು ಗಿರವಿ ಅಂಗಡಿಯಲ್ಲಿ ಮಾರಾಟ ಮಾಡಲು ಯತ್ನಿಸುವಾಗ ಆಧಾರ್‌ ಕಾರ್ಡ್‌ ಕೊಟ್ಟಿದ್ದ. (Gold theft) ಈ ಸುಳಿವು ಆಧರಿಸಿ ಪೊಲೀಸರು ಬಂಧಿಸಿದರು.

VISTARANEWS.COM


on

gold theft
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮನೆಗಳ್ಳತನ ಮಾಡಿ ಚಿನ್ನದೊಂದಿಗೆ ಪರಾರಿಯಾಗಿದ್ದ ವ್ಯಕ್ತಿ, ಗಿರವಿ ಅಂಗಡಿಯಲ್ಲಿ ಬಂಗಾರ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರಿನಲ್ಲಿ (Gold theft) ನಡೆದಿದೆ.

ಮನೆಯಲ್ಲಿದ್ದ 220 ಗ್ರಾಂ ಚಿನ್ನಾಭರಣದ ಪೈಲಿ, ಗಡಿಬಿಡಿಯಲ್ಲಿ ಈತ 70 ಗ್ರಾಂ ಅನ್ನು ಕದ್ದಿದ್ದ. ಕಬೋರ್ಡ್ ಗೆ ಕೈ ಹಾಕಿದ ಬಳಿಕ, ಮೊದಲಿಗೆ ಸಿಕ್ಕ 70 ಗ್ರಾಂ ಚಿನ್ನಾಭರಣ ಸಮೇತ ಪರಾರಿಯಾಗಿದ್ದ. ಅಲ್ಲೆ ಪಕ್ಕದ ಬ್ಯಾಗ್ ನಲ್ಲಿ 150 ಗ್ರಾಂ ಚಿನ್ನ ಮತ್ತು 1 ಲಕ್ಷ ಹಣ ಇತ್ತೆಂಬುದು ಆತನಿಗೆ ಗಮನಕ್ಕೆ ಬಂದಿರಲಿಲ್ಲ. ಆರೋಪಿ ಪ್ರಶಾಂತ್ ಪಚ್ಚಿಯನ್ನು ಶೇಷಾದ್ರಿ ಪುರಂ ಪೊಲೀಸರು ಬಂಧಿಸಿದ್ದಾರೆ.

ಮನೆಕಳ್ಳತನ ಮಾಡಿದ ಪ್ರಶಾಂತ್‌, ಸದಾಶಿವನಗರದವರೆಗೂ ನಡೆದುಕೊಂಡು ಹೋಗಿದ್ದ. ಕೊನೆಗೆ ಆಟೋದಲ್ಲಿ ಹೋಗಿ ಮತ್ತಿಕೆರೆ ಸಮೀಪದ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನ ಅಡವಿಟ್ಟಿದ್ದ ಆರೋಪಿಗಾಗಿ ಪೊಲೀಸರು 150 ಸಿಸಿಟಿವಿಗಳಲ್ಲಿ ಹುಡುಕಾಟ ನಡೆಸಿದ್ದರು.

ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ಅಡವಿಟ್ಟಾಗ ಕೊಟ್ಟ ಆಧಾರ್ ಕಾರ್ಡ್ ಮೂಲಕ ಆರೋಪಿಯ ಸುಳಿವು ಲಭಿಸಿದೆ. ಪ್ರಶಾಂತ್ ಈ ಹಿಂದೆ ಯಶವಂತಪುರ ಸೇರಿ ಹಲವು ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. 70 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಆರೋಪಿಯಿಂದ ವಶಕ್ಕೆ ಪಡೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: 400 ಮಹಿಳೆಯರ ಮೇಲೆ ಪ್ರಜ್ವಲ್‌ ಮಾಸ್‌ ರೇಪ್‌ ಆರೋಪ; ರಾಹುಲ್ ಗಾಂಧಿ ವಿರುದ್ಧ ಡಿಜಿಗೆ ಜೆಡಿಎಸ್‌ ದೂರು

Prajwal Revanna Case: ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಜ್ವಲ್ ರೇವಣ್ಣ ಅವರಿಂದ 400 ಮಹಿಳೆಯರ ಮೇಲೆ ಮಾಸ್ ರೇಪ್ ಆಗಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಕುಪಿತಗೊಂಡಿರುವ ಜೆಡಿಎಸ್‌ ನಾಯಕರು ಈಗ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದೆ. ರಾಹುಲ್‌ ಗಾಂಧಿಗೆ ಎಸ್‌ಐಟಿ ಸಮನ್ಸ್ ನೀಡಬೇಕು ಎಂದು ಆಗ್ರಹಿಸಲಾಗಿದೆ.

VISTARANEWS.COM


on

Prajwal Revanna Case JDS files complaint against Rahul Gandhi for Prajwal accused of mass rape of 400 women
Koo

ಬೆಂಗಳೂರು: ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ (Prajwal Revanna Case) ಮಾಸ್ ರೇಪ್ ಮಾಡಿದ್ದಾರೆ ಎಂದು ಬಹಿರಂಗ ಸಭೆಗಳ ಭಾಷಣದಲ್ಲಿ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಜೆಡಿಎಸ್ (JDS Karnataka) ದೂರು ನೀಡಿದೆ. ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪಕ್ಷ ಒತ್ತಾಯ ಮಾಡಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರು ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಗಳಲ್ಲಿ ಮಾಸ್ ರೇಪ್ ಬಗ್ಗೆ ಹೇಳಿದ್ದರು. ಇದೇ ಮಾಹಿತಿಯನ್ನು ಮಾಧ್ಯಮಗಳ ಮುಂದೆಯೂ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಾಹುಲ್‌ ಗಾಂಧಿಗೆ ಎಸ್‌ಐಟಿ ಸಮನ್ಸ್ ಜಾರಿ ಮಾಡಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಮಂಜೇಗೌಡ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್, ಬೆಂಗಳೂರು ನಗರದ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್ ಅವರಿದ್ದ ನಿಯೋಗ ಬುಧವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದರು.

ದೂರಿನಲ್ಲಿ ಇನ್ನೇನು ಇದೆ?

ಎಚ್.ಎಂ. ರಮೇಶ್ ಗೌಡ ಸಹಿ ಹಾಕಿರುವ ದೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಅನೇಕ ಗಂಭೀರ, ಗುರುತರ ಆರೋಪಗಳನ್ನು ಮಾಡಲಾಗಿದೆ.

ಕಾಂಗ್ರೆಸ್ ನಾಯಕ, ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರು, ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಮಾಡಿ ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಇದೊಂದು ಸಾಮೂಹಿಕ ಅತ್ಯಾಚಾರ. ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಇದೇ ಮೇ 2ರಂದು ಹೇಳಿಕೆ ನೀಡಿದ್ದರು.

ರಾಹುಲ್ ಗಾಂಧಿ ಅವರ ಹೇಳಿಕೆ, ಭಾಷಣ ಎಲ್ಲವೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮುದ್ರಣ ಮಾಧ್ಯಮದಲ್ಲಿಯೂ ವರದಿಯಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದೆ.

400 ಮಹಿಳೆಯರ ಮಾಹಿತಿ ರಾಹುಲ್‌ ಗಾಂಧಿಗೆ ಇದೆ!

ನೊಂದ ಮಹಿಳೆಯರ ನ್ಯಾಯ ಕೊಡಿಸುವುದನ್ನು ಕಡೆಗಣಿಸಿ ಒಬ್ಬ ಜನಪ್ರತಿನಿಧಿಯಾಗಿ ರಾಹುಲ್ ಗಾಂಧಿ ಅವರು ಇಂಥ ಹೇಳಿಕೆ ನೀಡಿರುವುದು ಕಾನೂನು ಉಲ್ಲಂಘನೆ ಆಗಿರುತ್ತದೆ. ನಾನೂರು ಮಹಿಳೆಯರ ಮೇಲೆ ಮಾಸ್ ರೇಪ್ ಆಗಿರುವ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಎಲ್ಲ ಮಾಹಿತಿ ಇದೆ. ಜತೆಗೆ ಅತ್ಯಾಚಾರಕ್ಕೆ ತುತ್ತಾದ ಅಷ್ಟೂ ಮಹಿಳೆಯರ ಮಾಹಿತಿ ಅವರಲ್ಲಿ ಇದೆ ಎನ್ನುವುದು ಅವರದೇ ಹೇಳಿಕೆಯಿಂದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 1860ರ ಅಡಿಯಲ್ಲಿ ಕೇಸ್ ದಾಖಲಿಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರಲ್ಲಿ ಜೆಡಿಎಸ್ ಪಕ್ಷ ಒತ್ತಾಯ ಮಾಡಿದೆ.

ರಾಜ್ಯ ಸರ್ಕಾರವೂ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದ್ದು, ಕೂಡಲೇ ಈ ತಂಡವು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿ ಇಲ್ಲಿಗೆ ಕರೆಸಬೇಕು. ನಾನೂರು ಮಹಿಳೆಯರು ಎಂದು ತಪ್ಪು ಮಾಹಿತಿ ನೀಡಿ, ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವಂತೆ ಮಾಡಿದ ಅವರ ವಿರುದ್ಧ ಕೂಡಲೇ ಸೆಕ್ಷನ್ 202, 1860ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಜೆಡಿಎಸ್ ಆಗ್ರಹಪಡಿಸಿದೆ.

ಇದನ್ನೂ ಓದಿ: Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

ಅಲ್ಲದೆ, ಪೆನ್ ಡ್ರೈವ್ ಹಂಚಿಕೆಯ ಬಗ್ಗೆಯೂ ಜೆಡಿಎಸ್ ಡಿಜಿ ಅವರ ಜತೆ ಮಾತುಕತೆ ನಡೆಸಿತು. ಎಸ್‌ಐಟಿ ಏಕಪಕ್ಷೀಯವಾಗಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ವಿನಾಕಾರಣ ಕಿರುಕುಳ ನೀಡುತ್ತಿದೆ. ಆದರೆ, ಪೆನ್ ಡ್ರೈವ್ ಹಂಚಿಕೆ ಆರೋಪಿಗಳ ಬಗ್ಗೆ ಮೌನ ವಹಿಸಿದೆ. ನ್ಯಾಯಾಲಯ ಜಾಮೀನು ನಿರಾಕರಿಸಿದ್ದರೂ ಈವರೆಗೆ ಅವರನ್ನು ಎಸ್ ಐಟಿ ಬಂಧನ ಮಾಡಿಲ್ಲ ಎಂದು ನಿಯೋಗ ದೂರಿತು.

Continue Reading

ಕ್ರೈಂ

Gas Leak deaths: ಮುಚ್ಚಿದ ಮನೆಯಲ್ಲಿ ಗ್ಯಾಸ್‌ ಸೋರಿಕೆ, ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ 4 ಮಂದಿ

Gas Leak deaths: ಮೃತಪಟ್ಟ ಕುಮಾರಸ್ವಾಮಿ ಕುಟುಂಬ ಎರಗನಹಳ್ಳಿ ಗ್ರಾಮದಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸವಿದೆ. 10×30 ಅಡಿ ಅಳತೆಯ ಪುಟ್ಟ ಮನೆಯಲ್ಲಿ ನಾಲ್ವರ ಕುಟುಂಬ ವಾಸವಿತ್ತು. ಮನೆಯ ಹಿಂಭಾಗ ಹಾಗೂ ಮುಂಭಾಗ ಮಾತ್ರ ಕಿಟಕಿ ವ್ಯವಸ್ಥೆಯಿದೆ. ಮನೆಯ ಯಜಮಾನ ಕುಮಾರಸ್ವಾಮಿ ಇಸ್ತ್ರೀ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

VISTARANEWS.COM


on

gas leak deaths mysore
Koo

ಮೈಸೂರು: ಮನೆಯೊಳಗೆ ಅಡುಗೆ ಅನಿಲ ಸೋರಿಕೆಯಾದ (Gas leakage) ಪರಿಣಾಮ ಒಂದೇ ಕುಟುಂಬದ ನಾಲ್ವರು ರಾತ್ರಿ ನಿದ್ರೆಯಲ್ಲೇ ಪ್ರಾಣ (Gas Leak deaths) ಬಿಟ್ಟಿದ್ದಾರೆ. ಕಿಟಕಿ ಬಾಗಿಲುಗಳು ಭದ್ರವಾಗಿ ಮುಚ್ಚಿದ್ದರಿಂದ, ಅಡುಗೆ ಅನಿಲ (LPG) ಹೊರಹೋಗಲು ಯಾವುದೇ ಕಿಂಡಿಯಿಲ್ಲದೆ ಬಂದ್‌ ಆಗಿದ್ದು, ನಾಲ್ವರ ಜೀವ ತೆಗೆದಿದೆ.

ಮೃತಪಟ್ಟ ನಾಲ್ವರು ಚಿಕ್ಕಮಗಳೂರು ಜಿಲ್ಲೆಯ ಸಕ್ಕರಾಯ ಪಟ್ಟಣ ಗ್ರಾಮದವರು. ಕುಮಾರಸ್ವಾಮಿ (45), ಮಂಜುಳಾ (39), ಮಕ್ಕಳಾದ ಅರ್ಚನಾ (19) ಸ್ವಾತಿ (17) ಸಾವನ್ನಪ್ಪಿದ್ದಾರೆ. ಸೋಮವಾರ ಕಡೂರಿನಲ್ಲಿ ಸಂಬಂಧಿಕರ ಮದುವೆ ಮುಗಿಸಿ ವಾಪಸ್ ಮನೆಗೆ ಬಂದಿದ್ದರು. ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದರು. ಬುಧವಾರ ಬೆಳಗಿನ ಜಾವ ಆದರೂ ಎದ್ದಿರಲಿಲ್ಲ. ಅನುಮಾನಗೊಂಡ ಸ್ಥಳೀಯರು ಬಾಗಿಲು ಬಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ನಾಲ್ವರ ಬಲಿ ಪಡೆಯಿತಾ ಗಾಳಿ ಬೆಳಕು ಇಲ್ಲದ ಮನೆ?

ಮೃತಪಟ್ಟ ಕುಮಾರಸ್ವಾಮಿ ಕುಟುಂಬ ಎರಗನಹಳ್ಳಿ ಗ್ರಾಮದಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಾಸವಿದೆ. 10×30 ಅಡಿ ಅಳತೆಯ ಪುಟ್ಟ ಮನೆಯಲ್ಲಿ ನಾಲ್ವರ ಕುಟುಂಬ ವಾಸವಿತ್ತು. ಮನೆಯ ಹಿಂಭಾಗ ಹಾಗೂ ಮುಂಭಾಗ ಮಾತ್ರ ಕಿಟಕಿ ವ್ಯವಸ್ಥೆಯಿದೆ. ಮನೆಯ ಯಜಮಾನ ಕುಮಾರಸ್ವಾಮಿ ಇಸ್ತ್ರೀ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಬಟ್ಟೆ ಇಸ್ತ್ರಿ ಪೆಟ್ಟಿಗೆಗೆ ಗ್ಯಾಸ್ ಬಳಸುತ್ತಿದ್ದರು. ಇದಕ್ಕಾಗಿ ಹೆಚ್ಚುವರಿ ಗ್ಯಾಸ್‌ ಸಿಲಿಂಡರ್‌ ಇಟ್ಟುಕೊಂಡಿದ್ದರು. ಇದರಿಂದಲೇ ಅನಿಲ ಸೋರಿಕೆಯಾಗಿದೆ.

ಸೋಮವಾರ ರಾತ್ರಿ ಮನೆಗೆ ಬಂದವರು ಎರಡು ಕಿಟಕಿ ಬಂದ್ ಮಾಡಿಕೊಂಡು ಮಲಗಿದ್ದರು. ರೂಂನಲ್ಲಿ ಗಂಡ ಹೆಂಡತಿ, ಹಾಲ್‌ನಲ್ಲಿ ಮಕ್ಕಳಿಬ್ಬರು ಮಲಗಿದ್ದರು. ಈ ವೇಳೆ ಸೋರಿಕೆಯಾದ ಅನಿಲ ಸೇವಿಸಿ ಎಲ್ಲರೂ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬ ಮಗಳಿಂದ ಬಾಗಿಲು ತೆಗೆಯುವ ವಿಫಲ ಯತ್ನ ನಡೆದಿದೆ. ಎಲ್ಲರ ಕಿವಿ ಮತ್ತು ಮೂಗು ಬಾಯಲ್ಲಿ ರಕ್ತ ಸೋರಿದೆ. ಅಂತಿಮವಾಗಿ ಕುಟುಂಬ ದುರಂತ ಅಂತ್ಯ ಕಂಡಿದೆ.

” ಮೊಬೈಲ್‌ ಕಾಲ್‌ ರಿಸೀವ್‌ ಮಾಡದ್ದರಿಂದ ಅನುಮಾನಪಟ್ಟ ಸಂಬಂಧಿಕರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಿಯರು ಪರಿಶೀಲಿಸಿ ನಮಗೆ ಮಾಹಿತಿ ನೀಡಿದರು. ನಾವು ಬಂದಾಗ ಗ್ಯಾಸ್ ವಾಸನೆ ಬರುತ್ತಿತ್ತು. ಮನೆಯ ಹಿಂದಿನ ಕಿಟಕಿ ತೆರೆದು ನೋಡಿದಾಗಲೂ ಸ್ಮೆಲ್ ಬರ್ತಿತ್ತು. ಫೈರ್ ಡಿಪಾರ್ಟ್ಮೆಂಟ್, ಎಫ್ಎಸ್ಐಲ್ ಬಂದು ಡೋರ್ ಒಪನ್ ಮಾಡಿದೆವು. ಮನೆಯಲ್ಲಿ ಮೂರು ಸಿಲಿಂಡರ್ ಇದೆ. ಗ್ಯಾಸ್‌ ಬಳಸಿ ಐರನ್ ಮಾಡ್ತಿದ್ದರು. ಮೇಲ್ನೋಟಕ್ಕೆ ಒಂದು ಸಿಲಿಂಡರ್ ಮಾತ್ರ ಲೀಕ್ ಆಗಿದೆ. ಉಳಿದ ಎರಡು ಸಿಲಿಂಡರ್ ಖಾಲಿ ಇತ್ತು” ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ.

ಇದನ್ನೂ ಓದಿ: Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ

Continue Reading

South Cinema

Rave party: ರೇವ್ ಪಾರ್ಟಿಯ ಕುರಿತು ತೆಲುಗು ನಟಿ ಆಶಿ ರಾಯ್ ಸ್ಫೋಟಕ ಹೇಳಿಕೆ!

Rave party: ರೇವ್‌ ಪಾರ್ಟಿಯಲ್ಲಿ ಹೇಮಾ ಮತ್ತು ಶ್ರೀಕಾಂತ್‌ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಇದೀಗ ಈ ಪಾರ್ಟಿಯಲ್ಲಿ ಆಶಿ ರಾಯ್‌ ಇದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಲುಗು ನಟಿ ಹೇಮಾ (telugu actress Hema) ಭಾಗಿಯಾಗಿದ್ದು, ಪೊಲೀಸ್‌ ವಶದಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅಲ್ಲಿ ತಾನಿರಲಿಲ್ಲ ಎಂದು ಹೇಮಾ ವಿಡಿಯೋ ಸಂದೇಶ ಹರಿಬಿಟ್ಟಿದ್ದು, ಈಗಾಗಲೇ ಪಾರ್ಟಿ ಮಾಡಿದ ಐವರನ್ನು ಬಂಧಿಸಲಾಗಿದೆ.

VISTARANEWS.COM


on

Rave party telugu actress Ashi Roy in party
Koo

ಬೆಂಗಳೂರು: ತಡರಾತ್ರಿ ಎಲೆಕ್ಟ್ರಾನಿಕ್‌ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದ ರೇವ್‌ ಪಾರ್ಟಿಯಲ್ಲಿ (Rave party) ತೆಲುಗು ನಟಿ ಹೇಮಾ (telugu actress Hema) ಭಾಗಿಯಾಗಿದ್ದು, ಪೊಲೀಸ್‌ ವಶದಲ್ಲಿದ್ದರು. ಆದರೆ ಅಲ್ಲಿ ತಾನಿರಲಿಲ್ಲ ಎಂದು ಹೇಮಾ ವಿಡಿಯೋ ಸಂದೇಶ ಹರಿಬಿಟ್ಟಿದ್ದರು. ಬಳಿಕ ಪೊಲೀಸರು, ಆಕೆ ಪಾರ್ಟಿಯಲ್ಲಿ ಭಾಗಿಯಾಗಿದ್ದನ್ನು ಖಚಿತಪಡಿಸಿದ್ದರು. ಈಗಾಗಲೇ ಪಾರ್ಟಿ ಆಯೋಜಿಸಿದ್ದ ಐವರನ್ನು ಬಂಧಿಸಲಾಗಿದೆ. ಈಗ ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ಮತ್ತೊಬ್ಬ ನಟಿ ಹೆಸರು ಕೇಳಿ ಬಂದಿದೆ. ತೆಲುಗಿನ ನಟಿ ಆಶಿ ರಾಯ್ ತಾನು ಪಾರ್ಟಿಯಲ್ಲಿ ಇದ್ದೆ ಎಂದು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.

ರೇವ್‌ ಪಾರ್ಟಿಯಲ್ಲಿ ಹೇಮಾ ಮತ್ತು ಶ್ರೀಕಾಂತ್‌ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಇದೀಗ ಈ ಪಾರ್ಟಿಯಲ್ಲಿ ಆಶಿ ರಾಯ್‌ ಇದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಆಶಿ ರಾಯ್‌ ವಿಡಿಯೊದಲ್ಲಿ ಮಾತನಾಡಿ ʻʻಅದೊಂದು ಬರ್ತ್‌ಡೇ ಪಾರ್ಟಿಯಾಗಿತ್ತು. ಒಳಗೆ ಏನು ನಡೀತಿತ್ತು ಎಂದು ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ದಯವಿಟ್ಟು ನೀವೆಲ್ಲ ನನ್ನ ಬೆಂಬಲಿಸಿ. ನಾನು ಕಷ್ಟಪಟ್ಟು ಉದ್ಯಮದಲ್ಲಿ ಬೆಳೆಯುತ್ತಿರುವ ಹುಡುಗಿ. ದಯವಿಟ್ಟು ನನಗೆ ಸಹಾಯ ಮಾಡಿʼʼ ಎಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಆಶಿ ರಾಯ್‌ ಹಲವು ಸಂದರ್ಶನದಲ್ಲಿ ಪಾರ್ಟಿಯಲ್ಲಿ ಹೇಮಾ ಅವರನ್ನು ನೋಡಿಲ್ಲ ಎಂದಿದ್ದಾರೆ. ಆಶಿರಾಯ್‌ ಅವರು ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Drone Prathap: ಡಿಫರೆಂಟ್‌ ಆಗಿ ಬರ್ತ್‌ಡೇ ಸೆಲೆಬ್ರೇಷನ್‌ಗೆ ಡ್ರೋನ್ ಪ್ರತಾಪ್ ಪ್ಲ್ಯಾನ್‌: ವೋಟ್‌ ಹಾಕಿದ್ದು ಸಾರ್ಥಕ ಅಂದ್ರು ಫ್ಯಾನ್ಸ್‌!

ರೇವ್‌ ಪಾರ್ಟಿಯಲ್ಲಿ ನಾನಿಲ್ಲ ಎಂದಿದ್ದ ತೆಲುಗು ನಟಿ ಹೇಮಾ

ಮೂಲಗಳ ಪ್ರಕಾರ, ಮುಜುಗರ ತಪ್ಪಿಸಲು ಅದೇ ಫಾರಂ ಹೌಸ್‌ನಲ್ಲೇ ವಿಡಿಯೋ ಚಿತ್ರೀಕರಿಸಿ ಹೇಮಾ ಅವರು ಹರಿಬಿಟ್ಟಿದ್ದರು. ಹೆಬ್ಬಗೋಡಿ ಫಾರ್ಮ್ ಹೌಸ್ ಒಳಗಡೆಯೇ ವಿಡಿಯೋ ಮಾಡಿ, ತಾನು ಹೈದರಾಬಾದ್‌ ಫಾರ್ಮ್ ಹೌಸ್‌ನಲ್ಲಿದ್ದೀನಿ ಎಂದು ಹೇಳಿದ್ದರು. ಆದರೆ ಪೊಲೀಸರು ಆಕೆಯ ತಪ್ಪು ಮಾಹಿತಿಯನ್ನು ಬಯಲು ಮಾಡಿದ್ದರು.

ಪೊಲೀಸರು ಬಲವಂತವಾಗಿ ಡೋರ್ ತೆಗಿಸಿ ಒಳಹೋಗಿದ್ದು, ಸದ್ಯ ಫಾರ್ಮ್ ಹೌಸಿನ ಇಂಚಿಂಚನ್ನೂ ಬಿಡದೆ ಜಾಲಾಡುತ್ತಿದ್ದಾರೆ. 3 ಜನ ಡ್ರಗ್ ಪೆಡ್ಲರ್‌ಗಳು, ಆಯೋಜಕ ವಾಸು ಸೇರಿ ಐದು ಜನರನ್ನು ಬಂಧಿಸಲಾಗಿದೆ. ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್‌ಗಳೂ ಭಾಗಿಗಳಾಗಿದ್ದರು. ಇವರು ಯಥೇಚ್ಛವಾಗಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು. ವಾಸು ಹುಟ್ಟಿದ ಹಬ್ಬಕ್ಕೆ ಪಾರ್ಟಿ ಆಯೋಜಿಸಿದ ಆರ್ಗನೈಸರ್ ಅರುಣ್, ಸಿದ್ಧಿಕಿ, ರಣಬೀರ್, ನಾಗಬಾಬುರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾದಕ ವಸ್ತು ಸಿಕ್ಕಿದಂತಹ ಐಷಾರಾಮಿ ಮರ್ಸಿಡಿಸ್‌ ಬೆಂಜ್‌, ರೇಂಜ್ ರೋವರ್, ಆಡಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಪೊಲೀಸರು ರೇವ್‌ ಪಾರ್ಟಿಯಲ್ಲಿದ್ದ 101 ಮಂದಿಯನ್ನೂ ಕೂರಿಸಿಕೊಂಡು, ಯಾರ್ಯಾರು ಡ್ರಗ್ಸ್‌ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿಸುತ್ತಿದ್ದಾರೆ. ಮೆಡಿಕಲ್‌ ಟೀಮನ್ನು ಫಾರಂ ಹೌಸ್‌ಗೆ ಕರೆಸಲಾಗಿದ್ದು, ಮೆಡಿಕಲ್‌ ಮುಗಿಯುವವರೆಗೆ ಎಲ್ಲ ಅತಿಥಿಗಳನ್ನೂ ಫಾರಂ ಹೌಸ್‌ ತೊರೆಯದಂತೆ ನಿರ್ಬಂಧಿಸಲಾಗಿದೆ. ಸದ್ಯ 30 ಜನ ಹುಡುಗಿಯರು, 71 ಜನ ಪುರುಷರು ಹೀಗೆ ಒಟ್ಟು 101 ಜನರ ವಿಚಾರಣೆ ನಡೆಯುತ್ತಿದೆ.

Continue Reading

ರಾಜಕೀಯ

Phone tapping: ಗೃಹ ಸಚಿವರಿಗೆ ಅಶೋಕ್‌ ರೈಟಿಂಗ್‌ನಲ್ಲಿ ಕಂಪ್ಲೇಂಟ್‌ ಕೊಡಲಿ; ಫೋನ್‌ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

Phone tapping: ಫೋನ್‌ ಕದ್ದಾಲಿಕೆ ಆಗುತ್ತಿದೆ ಎಂದಾದರೆ ಈ ಬಗ್ಗೆ ಗೃಹ ಸಚಿವರಿಗೆ ಬರವಣಿಗೆ ಮೂಲಕ ದೂರು ಕೊಡಲಿ. ಅವರ ಕಾಲದಲ್ಲೆಲ್ಲ ಮಾಡಿದ್ದರಲ್ಲವೇ? ಯಾರ ಯಾರ ಕಾಲದಲ್ಲಿ ಫೋನ್‌ ಕದ್ದಾಲಿಕೆ ಮಾಡಿದ್ದಾರೆಂಬುದು ಗೊತ್ತಿದೆ. ಅಶೋಕ್‌ ಹೋಮ್ ಮಿನಿಸ್ಟರ್ ಆಗಿದ್ದವರು, ಕೆಲವರು ಚೀಫ್‌ ಮಿನಿಸ್ಟರ್ ಆಗಿದ್ದವರು ಮಾಡಿರುವ ಫೋನ್‌ ಟ್ಯಾಪಿಂಗ್‌ ಬಗ್ಗೆ ನಮಗೂ ರಿಪೋರ್ಟ್‌ ಬಂದಿತ್ತು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಈ ಮೂಲಕ ವಿಧಾನಸಭಾ ವಿಪಕ್ಷ ನಾಯಕ ಆರ್.‌ ಅಶೋಕ್‌ಗೆ ತಿರುಗೇಟು ನೀಡಿದ್ದಾರೆ.

VISTARANEWS.COM


on

Phone tapping case Let Ashok file a complaint to Home Minister DK Shivakumar hits back at phone tapping allegations
Koo

ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಕೇಳಿಬಂದಿರುವ ಫೋನ್‌ ಕದ್ದಾಲಿಕೆ (Phone tapping) ಆರೋಪವು ದಿನೇ ದಿನೆ ವಾಕ್ಸಮರಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಮೊದಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದರು. ಬಳಿಕ ಇದಕ್ಕೆ ಧ್ವನಿಗೂಡಿಸಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೇಳಿದ್ದರು. ಈಗ ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದು, ಅಶೋಕ್‌ ಅವರಿಗೆ ಗೃಹ ಸಚಿವರಿಗೆ ಬರವಣಿಗೆ ಮೂಲಕ ದೂರು ಕೊಡಲು ಹೇಳಿ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಸರ್ಕಾರ ಫೋನ್‌ ಕದ್ದಾಲಿಕೆ ಮಾಡುತ್ತಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಕ್ಕೆ ತಿರುಗೇಟು ನೀಡಿದರು.

ಫೋನ್‌ ಕದ್ದಾಲಿಕೆ ಆಗುತ್ತಿದೆ ಎಂದಾದರೆ ಈ ಬಗ್ಗೆ ಗೃಹ ಸಚಿವರಿಗೆ ಬರವಣಿಗೆ ಮೂಲಕ ದೂರು ಕೊಡಲಿ. ಅವರ ಕಾಲದಲ್ಲೆಲ್ಲ ಮಾಡಿದ್ದರಲ್ಲವೇ? ಯಾರ ಯಾರ ಕಾಲದಲ್ಲಿ ಫೋನ್‌ ಕದ್ದಾಲಿಕೆ ಮಾಡಿದ್ದಾರೆಂಬುದು ಗೊತ್ತಿದೆ. ಅಶೋಕ್‌ ಹೋಮ್ ಮಿನಿಸ್ಟರ್ ಆಗಿದ್ದವರು, ಕೆಲವರು ಚೀಫ್‌ ಮಿನಿಸ್ಟರ್ ಆಗಿದ್ದವರು ಮಾಡಿರುವ ಫೋನ್‌ ಟ್ಯಾಪಿಂಗ್‌ ಬಗ್ಗೆ ನಮಗೂ ರಿಪೋರ್ಟ್‌ ಬಂದಿತ್ತು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ನಿಮ್ಮ ಸುತ್ತ ಮುತ್ತ ಇರುವವರೇ ಮಾಹಿತಿ ನೀಡಿದ್ದಾರೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಬಹಳ ಸಂತೋಷ. ಅವರು ಯಾರು ಯಾರು ಮಾಹಿತಿ ಕೊಟ್ಟಿದ್ದಾರೆಂಬುದರ ಬಗ್ಗೆ ಅಪ್ಡೇಟ್ ಕೊಡುವುದಕ್ಕೆ ಹೇಳಿ ಎಂದು ಮಾಧ್ಯಮವರಿಗೆ ಹೇಳಿದರು.

ಸಿಬಿಐಗೆ ಫೋನ್‌ ಕದ್ದಾಲಿಕೆ ಪ್ರಕರಣ ವಹಿಸಲಿ: ಸರ್ಕಾರಕ್ಕೆ ಅಶೋಕ್‌ ಸವಾಲು

ಫೋನ್‌ ಕದ್ದಾಲಿಕೆಯನ್ನು ರಾಜ್ಯ ಸರ್ಕಾರವೇ ಮಾಡುತ್ತಿದೆ. ಇದು ಸುಳ್ಳು ಎಂದಾದರೆ ಕೂಡಲೇ ಈ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿ. ಅವರು ತಪ್ಪು ಮಾಡಿಲ್ಲ ಎಂದಾದರೆ ಕೂಡಲೇ ಸಿಬಿಐಗೆ ತನಿಖೆ ಹೊಣೆಯನ್ನು ಒಪ್ಪಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಮಂಗಳವಾರ ಮಾಧ್ಯಮದವರ ಮುಂದೆ ಸವಾಲು ಹಾಕಿದ್ದರು.

ಫೋನ್‌ ಟ್ಯಾಪಿಂಗ್‌ ಬಗ್ಗೆ ಮಾಜಿ ಸಿಎಂ ಎಚ್‌.ಡಿ.‌ ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಪೊಲೀಸ್‌ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಅವರಿಂದ ತಿಳಿದುಕೊಂಡು ಹೇಳಿರಬಹುದು. ಫೋನ್‌ ಟ್ಯಾಪ್‌ ಮಾಡುವುದು ಅಕ್ರಮವಾಗಿದ್ದು, ಹಣ ಕೊಟ್ಟರೆ ಚೀನಾದಿಂದ ಉಪಕರಣ ಸಿಗುತ್ತದೆ. ರಾಜ್ಯಕ್ಕೆ ಇಂತಹ ಉಪಕರಣ ಎಷ್ಟು ಬಂದಿದೆ? ಎಲ್ಲೆಲ್ಲಿದೆ ಎಂದು ಪತ್ತೆ ಮಾಡಬೇಕು. ವಿರೋಧ ಪಕ್ಷಗಳ ನಾಯಕರ ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂದು ನನಗೂ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: Murder Case: ಯುವತಿ ಪ್ರಬುದ್ಧ ಸಾವು ಆತ್ಮಹತ್ಯೆಯಲ್ಲ, ಕೊಲೆ: ತಾಯಿ ದೂರು

ಸರ್ಕಾರ ಮಾಡಿಲ್ಲವಾದರೆ ತನಿಖೆಗೆ ಕೊಡಲಿ

ಫೋನ್‌ ಟ್ಯಾಪ್‌ ಮಾಡುವವರನ್ನು ಜೈಲಿಗೆ ಕಳುಹಿಸಬೇಕು. ಹಿಂದೆಯೂ ಈ ರೀತಿ ಪೊಲೀಸ್‌ ಅಧಿಕಾರಿಗಳು ಮಾಡಿ ತನಿಖೆಗೆ ಒಳಗಾಗಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸರ್ಕಾರ ಇದನ್ನು ಮಾಡಿಲ್ಲವೆಂದು ಎದೆ ಮುಟ್ಟಿ ಹೇಳುವುದಾದರೆ ತನಿಖೆಗೆ ನೀಡಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲಿ ಎಂದು ಆರ್‌. ಅಶೋಕ್ ಒತ್ತಾಯಿಸಿದ್ದರು.

Continue Reading
Advertisement
PM Narendra Modi
ದೇಶ9 mins ago

PM Narendra Modi: “ನನ್ನನ್ನು ದೇವರೇ ಭೂಮಿಗೆ ಕಳಿಸಿದ್ದಾನೆ..”; ಭಾರೀ ಸದ್ದು ಮಾಡ್ತಿದೆ ಪ್ರಧಾನಿ ಮೋದಿ ಈ ಹೇಳಿಕೆ

Prajwal Revanna Case JDS files complaint against Rahul Gandhi for Prajwal accused of mass rape of 400 women
ಕ್ರೈಂ15 mins ago

Prajwal Revanna Case: 400 ಮಹಿಳೆಯರ ಮೇಲೆ ಪ್ರಜ್ವಲ್‌ ಮಾಸ್‌ ರೇಪ್‌ ಆರೋಪ; ರಾಹುಲ್ ಗಾಂಧಿ ವಿರುದ್ಧ ಡಿಜಿಗೆ ಜೆಡಿಎಸ್‌ ದೂರು

gas leak deaths mysore
ಕ್ರೈಂ55 mins ago

Gas Leak deaths: ಮುಚ್ಚಿದ ಮನೆಯಲ್ಲಿ ಗ್ಯಾಸ್‌ ಸೋರಿಕೆ, ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ 4 ಮಂದಿ

Rave party telugu actress Ashi Roy in party
South Cinema1 hour ago

Rave party: ರೇವ್ ಪಾರ್ಟಿಯ ಕುರಿತು ತೆಲುಗು ನಟಿ ಆಶಿ ರಾಯ್ ಸ್ಫೋಟಕ ಹೇಳಿಕೆ!

Hemant Soren
Lok Sabha Election 20241 hour ago

Hemant Soren: ಹೇಮಂತ್‌ ಸೊರೆನ್‌ಗೆ ಮತ್ತೊಮ್ಮೆ ಹಿನ್ನಡೆ; ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

CM City Rounds Vijayanagar Canal Siddaramaiah warns to Chief engineer will be suspended if not resolved within this year
ಬೆಂಗಳೂರು1 hour ago

CM City Rounds: ವಿಜಯನಗರ ರಾಜಕಾಲುವೆ; ಈ ವರ್ಷದೊಳಗೆ ಪರಿಹರಿಸದಿದ್ದರೆ ಮುಖ್ಯ ಎಂಜಿನಿಯರ್‌ ಸಸ್ಪೆಂಡ್‌: ಸಿಎಂ ವಾರ್ನಿಂಗ್

Boat Capsizes
ದೇಶ2 hours ago

Boat Capsizes: ಭೀಕರ ದೋಣಿ ದುರಂತ; ಪುಟ್ಟ ಮಕ್ಕಳು ಸೇರಿ 6 ಜನ ನೀರುಪಾಲು

List of Movies Releasing From may 24
ಟಾಲಿವುಡ್2 hours ago

List of Movies Releasing: ಈ ವಾರ ಬಿಡುಗಡೆಗೆ ಸಜ್ಜಾಗಿವೆ ಈ ಸಾಲು ಸಾಲು ಸಿನಿಮಾಗಳು!

Prashant Kishor
ದೇಶ2 hours ago

Prashant Kishor: 3ನೇ ಅವಧಿಯ ಮೋದಿ ಸರ್ಕಾರದಿಂದ ಈ 4 ಕ್ರಾಂತಿಕಾರಕ ಬದಲಾವಣೆ; ಪ್ರಶಾಂತ್‌ ಕಿಶೋರ್‌ ಭವಿಷ್ಯ

Viral Video
ವೈರಲ್ ನ್ಯೂಸ್2 hours ago

Viral Video: ರಸ್ತೆ ಜಗಳದಿಂದ ತಪ್ಪಿಸಿಕೊಳ್ಳುವುದು ಹೇಗೆ? ಬೆಂಗಳೂರು ಪೊಲೀಸರ ವಿಡಿಯೊ ಪಾಠ ಇಲ್ಲಿದೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ9 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ22 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌