Kannada Movies | ಒಗ್ಗಟ್ಟಿಗೆ ಸಾಕ್ಷಿಯಾದ ಸ್ಯಾಂಡಲ್‌ವುಡ್‌; ಇದು ತಾರೆಗಳ ಸಮಾಗಮ! - Vistara News

ಬೆಂಗಳೂರು

Kannada Movies | ಒಗ್ಗಟ್ಟಿಗೆ ಸಾಕ್ಷಿಯಾದ ಸ್ಯಾಂಡಲ್‌ವುಡ್‌; ಇದು ತಾರೆಗಳ ಸಮಾಗಮ!

ಕನ್ನಡ ಸಿನಿಮಾಗಳಲ್ಲಿ (Kannada Movies) ಹಲವಾರು ಇವೆಂಟ್‌ ಹಾಗೂ ಕಾರ್ಯಕ್ರಮಗಳಲ್ಲಿ ಸ್ಯಾಂಡಲ್‌ವುಡ್‌ ನಟ-ನಟಿಯರು ಭಾಗವಹಿಸಿ ಸಿನಿಮಾ ಯಶಸ್ಸಿಗೆ ಸಾಥ್‌ ನೀಡುತ್ತಿದ್ದಾರೆ.

VISTARANEWS.COM


on

Kannada Movies
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಶಸ್ವಿ ದೇವಾಡಿಗ, ಬೆಂಗಳೂರು
ಸ್ಯಾಂಡಲ್‌ವುಡ್‌ ವ್ಯಾಪ್ತಿ ವಿಸ್ತಾರಗೊಂಡಿದೆ. ಪ್ಯಾನ್‌ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿವೆ. ದೇಶ-ವಿದೇಶಗಳಲ್ಲಿ ಕನ್ನಡ ಚಲನಚಿತ್ರಗಳಿಗೆ (Kannada Movies) ಜನಮನ್ನಣೆ ಸಿಗುತ್ತಿವೆ. ಈ ನಡುವೆ ಚಂದನವನದಲ್ಲಿ ಸ್ಟಾರ್‌ ಇಸಂಗಳು ದೂರಾಗುತ್ತಿರುವ ಎಲ್ಲ ಸೂಚನೆಗಳೂ ಸ್ಪಷ್ಟವಾಗುತ್ತಿದ್ದು, ಒಬ್ಬರ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್‌ ನಟರು ಬೆನ್ನುತಟ್ಟುವ ಪರಿಪಾಠ ಆರಂಭವಾಗಿದೆ. ಈ ಮೂಲಕ ಸಿನಿಮಾ ಗೆಲ್ಲುತ್ತಿದೆ.

ಕೊರೊನಾ ನಂತರದ ದಿನಗಳಲ್ಲಿ ಸಾಕಷ್ಟು ಸಾಲು ಸಾಲು ಸಿನಿಮಾಗಳು ತೆರೆಗೆ ಅಪ್ಪಳಿಸಿವೆ. ಕೆಜಿಎಫ್‌ 2ರ ನಂತರ ಸಿನಿಮಾಗಳು ಒಂದರ ಮೇಲೊಂದು ಕಾಂಪಿಟೇಷನ್‌ನಲ್ಲಿ ಬಿಡುಗಡೆಗೊಂಡವು. ಒಟಿಟಿಗೆ ಮಾತ್ರ ಸೀಮಿತವಾಗಿದ್ದ ಪ್ರೇಕ್ಷಕರು ನಂತರದಲ್ಲಿ ಹಿಟ್‌ ಸಿನಿಮಾಗಳು ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಜನ ಸಹ ಥಿಯೇಟರ್‌ನತ್ತ ಮುಖ ಮಾಡುತ್ತಿದ್ದಾರೆ.

ಇದೀಗ ಸ್ಯಾಂಡಲ್‌ವುಡ್‌ ಸಿನಿಮಾಗಳ ಪ್ರಮೋಷನ್‌ ಭರದಿಂದ ಸಾಗಿದೆ. ಆದರೆ, ಈ ನಡುವೆ ಸೆಲೆಬ್ರಿಟಿಗಳು ತಮ್ಮ ಸಿನಿಮಾ ಮಾತ್ರವಲ್ಲದೆ ಇತರ ನಟ, ನಟಿಯರ ಸಿನಿಮಾಗಳನ್ನು ಪ್ರಮೋಟ್‌ ಮಾಡುವುದರ ಮೂಲಕ ಟ್ರೆಂಡ್‌ ಸೆಟ್ಟಿಂಗ್‌ಗೆ ನಾಂದಿ ಹಾಡುತ್ತಿದ್ದಾರೆ. ಸಿನಿಮಾಗಳ ಡೇಟ್‌ ಅನೌನ್ಸ್‌ ಆದ ಕೂಡಲೇ ಸೆಲೆಬ್ರಿಟಿಗಳು ತಮ್ಮ ಸೋಷಿಯಲ್‌ ಮೀಡಿಯಾ ಮೂಲಕ ಅವುಗಳ ಬಗ್ಗೆ ಮಾಹಿತಿ ಶೇರ್‌ ಮಾಡಿಕೊಂಡು, ಶುಭಾಶಯ ಕೋರುವ ಪರಿಪಾಠ ನಡೆಯುತ್ತಿದ್ದು, ಇಂತಹ ಹಲವಾರು ಉದಾಹರಣೆಗಳನ್ನು ಕಾಣಬಹುದಾಗಿದೆ.

ಹಲವು ವೇದಿಕೆಯಲ್ಲಿ ಸ್ಯಾಂಡಲ್‌ವುಡ್‌ ತಾರೆಗಳ ಸಮಾಗಮ

UI ಸಿನಿಮಾ

ಈ ಹಿಂದೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಯುಐ ಚಿತ್ರದ ಮುಹೂರ್ತದಲ್ಲಿ ಹಲವು ನಟರು ಭಾಗಿಯಾಗಿದ್ದರು. ನಟ ಕಿಚ್ಚ ಸುದೀಪ್‌ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ಶಿವರಾಜ್‌ಕುಮಾರ್‌ ಕ್ಯಾಮರಾ ಆನ್‌ ಮಾಡಿದ್ದರು. ಡಾಲಿ ಧನಂಜಯ, ವಸಿಷ್ಠ ಸಿಂಹ, ಕಬ್ಜ ನಿರ್ದೇಶಕ ಆರ್‌. ಚಂದ್ರು ಸಹ ಮುಹೂರ್ತದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು.

ಇದನ್ನೂ ಓದಿ | Liger | ಲೈಗರ್ ಸಿನಿಮಾದ ಥೀಮ್ ಸಾಂಗ್ ರಿಲೀಸ್‌: ಸಖತ್‌ ಮಾಸ್‌ ಸಾಂಗ್‌ ಎಂದ ಫ್ಯಾನ್ಸ್‌

ವಿಕ್ರಾಂತ್‌ ರೋಣ

ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ವಿಕ್ರಾಂತ್‌ ರೋಣ (Vikrant Rona Movie) ಟ್ರೈಲರ್‌ ಲಾಂಚ್‌ ಇವೆಂಟ್‌ನಲ್ಲಿಯೂ ಕನ್ನಡ ಚಿತ್ರರಂಗದ ನಟ-ನಟಿಯರು ಭಾಗಿಯಾಗಿದ್ದರು. ವಿಶೇಷವಾಗಿ ಇವೆಂಟ್‌ನಲ್ಲಿ ರವಿಚಂದ್ರನ್‌ ಹಾಗೂ ಶಿವಣ್ಣ ಮುಖ್ಯ ಅತಿಥಿಗಳಾಗಿದ್ದು, ರವಿಚಂದ್ರನ್‌ ವೇದಿಕೆ ಮೇಲೆ ಬರುವಾಗ ಕಿಚ್ಚ ಸುದೀಪ್‌ ಅವರನ್ನು ಕರೆದುಕೊಂಡು ವೇದಿಕೆ ಮೇಲೆ ಬಂದಿದ್ದರು. ಟ್ರೈಲರ್‌ ಲಾಂಚ್‌ ವೇಳೆ ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ, ಡಾಲಿ ಧನಂಜಯ್‌ ಹಾಗೂ ಅರವಿಂದ್‌ ರಮೇಶ್‌ ಸೇರಿದಂತೆ ಹಲವು ನಟರು ಭಾಗಿಯಾಗಿದ್ದರು.

ಗಾಳಿಪಟ-2

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಗಾಳಿಪಟ-2 (Gaalipata 2) ರಾಜ್ಯಾದ್ಯಂತ ಆಗಸ್ಟ್‌ 12ರಂದು ತೆರೆಗೆ ಬರಲು ಸಜ್ಜಾಗಿದೆ. ಗಾಳಿಪಟ-2 ಪ್ರೀ ರಿಲೀಸ್ ಇವೆಂಟ್ ಆಯೋಜನೆ ಮಾಡಿದ್ದು, ‘ಕರುನಾಡ ಚಕ್ರವರ್ತಿ’ ಶಿವರಾಜ್‌ಕುಮಾರ್, ‘ರಿಯಲ್ ಸ್ಟಾರ್’ ಉಪೇಂದ್ರ , ರಮೇಶ್ ಅರವಿಂದ್ ಸೇರಿದಂತೆ ಅನೇಕರು ಸಮಾರಂಭದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದರು. ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಅವರು ʻಪ್ರೀತಿ ಪುಸ್ತಕದ ಬದನೆಕಾಯಿ, ಸ್ನೇಹ ಪುಸ್ತಕದ ಬೆಂಡೆಕಾಯಿʼ ಡೈಲಾಗ್ ಹೇಳಿ ರಂಜಿಸಿದ್ದರು.

ತ್ರಿವಿಕ್ರಮ ಸಿನಿಮಾ

ಕ್ರೇಜಿ ಪುತ್ರನ ಚೊಚ್ಚಲ ಸಿನಿಮಾದ ಗ್ರ್ಯಾಂಡ್‌ ವೇದಿಕೆಯಲ್ಲಿ ವಿಕ್ರಮ್ ಅಲಿಯಾಸ್ ತ್ರಿವಿಕ್ರಮ ಸಿನಿಮಾ (Trivikrama Movie) ಪ್ರೀ ರಿಲೀಸ್ ಇವೆಂಟ್‌ ಲಾಂಚ್‌ಗೆ ಸ್ಯಾಂಡಲ್‌ವುಡ್‌ ದಂಡೇ ಬಂದಿತ್ತು. ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌, ಡಾಲಿ ಧನಂಜಯ್‌, ನಿರ್ದೇಶಕ ಪ್ರೇಮ್‌, ರಕ್ಷಿತಾ ಪ್ರೇಮ್‌, ಶರಣ್‌, ನೀನಾಸಂ ಸತೀಶ್‌, ಲೂಸ್ ಮಾದ ಯೋಗಿ, ಅಜೇಯ್‌ ರಾವ್‌, ಡಾರ್ಲಿಂಗ್‌ ಕೃಷ್ಣ, ತಾರಾ, ಶೃತಿ, ವಸಿಷ್ಠ ಸಿಂಹ, ನಿಶ್ವಿಕಾ ನಾಯ್ಡು ಹಾಗೂ ಮನುರಂಜನ್‌ ಸೇರಿದಂತೆ ಇನ್ನೂ ಹಲವರು ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಭಾಗಿಯಾಗಿದ್ದರು. ಅಲ್ಲದೆ ಹಲವಾರು ಪೋಸ್ಟರ್‌ ಹಾಗೂ ಟ್ರೈಲರ್‌ ಮತ್ತು ಹೊಸ ತಂಡಗಳಿಗೆ ಸ್ಯಾಂಡಲ್‌ವುಡ್‌ ತಾರಾ ವರ್ಗ ಸಾಥ್‌ ನೀಡುತ್ತಿದೆ.

ಇದನ್ನೂ ಓದಿ | Kangana Ranaut | ಎಮರ್ಜೆನ್ಸಿ ಸಿನಿಮಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಆಗಿ ಶ್ರೇಯಸ್ ತಲ್ಪಾಡೆ

ಹೀಗೆ ಇತ್ತೀಚೆಗೆ ಹಲವಾರು ದೊಡ್ಡ ದೊಡ್ಡ ನಾಯಕರು ಸೇರಿದಂತೆ ಹೊಸ ಸಿನಿಮಾಗಳಿಗೂ ಬೆನ್ನುತಟ್ಟಿ ಪ್ರೋತ್ಸಾಹ ನೀಡುವ ಮೂಲಕ ಸ್ಯಾಂಡಲ್‌ವುಡ್‌ ನಟರು ಔದಾರ್ಯವನ್ನು ತೋರುವುದಲ್ಲದೆ, ಇತರರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ. ಈ ಕಾರಣದಿಂದ ಕನ್ನಡ ಸಿನಿಮಾ ಜಗತ್ತು ಮತ್ತಷ್ಟು ಬೆಳೆಯಲು ಪೂರಕ ವಾತಾವರಣಕ್ಕೆ ಸಾಕ್ಷಿಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Pet Dog: ಅಪಾರ್ಟ್‌ಮೆಂಟ್‌ಗಳಲ್ಲಿ ನಾಯಿಗಳಿಗೆ ಮುಕ್ತ ಸ್ವಾತಂತ್ರ್ಯ! ಬಿಬಿಎಂಪಿ ಹೊಸ ಗೈಡ್‌‌ಲೈನ್ಸ್!!

Pet Dog: ವಸತಿ ಕಲ್ಯಾಣ ಸಂಘಗಳು ಹೌಸಿಂಗ್ ಸೊಸೈಟಿಗಳ ಒಳಗೆ ಯಾವುದೇ ರೀತಿಯ ಸಾಕುಪ್ರಾಣಿಗಳನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ. ಜತೆಗೆ ಇನ್ನುಮುಂದೆ ಕೋಲುಗಳಿಂದ ನಾಯಿಗಳನ್ನು ಓಡಿಸುವುದು ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ. ಜತೆಗೆ ಬಿಬಿಎಂಪಿ ಪ್ರಾಣಿಗಳಿಗೆ ಆಹಾರ ನೀಡುವಾಗ ಪಾಲಿಸಬೇಕಾದ ಮಾರ್ಗಸೂಚಿಯನ್ನೂ ಪ್ರಕಟಿಸಿದೆ. ಅದೇನು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Pet Dog
Koo

ಬೆಂಗಳೂರು: ಸಾಕುಪ್ರಾಣಿ ಪ್ರಿಯರಿಗೆ ಅದರಲ್ಲಿಯೂ ಶ್ವಾನಪ್ರಿಯರಿಗೆ (Pet Dog) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗುಡ್‌ನ್ಯೂಸ್‌ ನೀಡಿದೆ. ವಸತಿ ಕಲ್ಯಾಣ ಸಂಘಗಳು (RWA) ಹೌಸಿಂಗ್ ಸೊಸೈಟಿಗಳ ಒಳಗೆ ಯಾವುದೇ ರೀತಿಯ ಸಾಕುಪ್ರಾಣಿಗಳನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ನಾಗರಿಕ ಸಂಸ್ಥೆ ಕೂಡ ಇದನ್ನೇ ಒತ್ತಿ ಹೇಳಿದೆ. ಇದರ ಜತೆಗೆ ಬಿಬಿಎಂಪಿ ಸಾಕುಪ್ರಾಣಿಗಳಿಗೆ ಆಹಾರ ನೀಡುವ ಸಮುದಾಯಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

ನಾಗರಿಕ ಸಂಸ್ಥೆ ಹೊರಡಿಸಿದ ಮಾರ್ಗಸೂಚಿಯಲ್ಲಿ ಸಾಕುಪ್ರಾಣಿಗಳ ಬಗ್ಗೆ ಆರ್‌ಡಬ್ಲ್ಯುಎಗಳ ವರ್ತನೆಯ ಬಗ್ಗೆ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದೆ. ಸಾಕುಪ್ರಾಣಿಗಳ ಕುರಿತಾದ ಆರ್‌ಡಬ್ಲ್ಯುಎಗಳ ಬೈಲಾಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ ಮತ್ತು ಹೌಸಿಂಗ್ ಸೊಸೈಟಿಯೊಳಗೆ ಪ್ರಾಣಿಗಳ ಅಸ್ತಿತ್ವಕ್ಕೆ ಹಾನಿ ಮಾಡಬಾರದು ಎಂದು ಬಿಬಿಎಂಪಿ ಹೇಳಿದೆ. ಸಾಕುಪ್ರಾಣಿಗಳನ್ನು ಸಾಮಾನ್ಯ ಪ್ರದೇಶಗಳ ಪ್ರವೇಶಕ್ಕೆ ಅನುಮತಿಸಬೇಕು ಮತ್ತು ಲಿಫ್ಟ್‌ನಲ್ಲಿ ತೆರಳುವಾಗ ಮಾಸ್ಕ್‌ ಕಡ್ಡಾಯವಲ್ಲ ಎಂದೂ ತಿಳಿಸಿದೆ. ಇದರಿಂದ ಸಾಕುಪ್ರಾಣಿ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.

ಇದೆಲ್ಲ ನಿಷೇಧ

ಇದರ ಜತೆಗೆ ಕೋಲುಗಳಿಂದ ನಾಯಿಗಳನ್ನು ಓಡಿಸುವುದು ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿಸಲಾಗುವುದು ಮತ್ತು ಎಲ್ಲ ಸಾರ್ವಜನಿಕ ಉದ್ಯಾನಗಳು, ಟೆಕ್ ಪಾರ್ಕ್‌ಗಳು ಮತ್ತಿತರ ಸಂಸ್ಥೆಗಳು ತಮ್ಮ ಆವರಣದಲ್ಲಿ ಸಾಕುಪ್ರಾಣಿಗಳ ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದು ಬಿಬಿಎಂಪಿ ಸೂಚಿಸಿದೆ.

ಆಹಾರ ನೀಡುವಾಗ ಪಾಲಿಸಬೇಕಾದ ಮಾರ್ಗಸೂಚಿ

  • ಬೀದಿ ನಾಯಿಗಳಿಗೆ ಆಹಾರವನ್ನು ನೀಡುವವರು ಮಾಂಸ ಮತ್ತು ಸಕ್ಕರೆ ಬಿಸ್ಕೇಟುಗಳನ್ನು ತಪ್ಪಿಸಲು ಸೂಚಿಸಲಾಗಿದೆ. ಏಕೆಂದರೆ ಇವು ಅವುಗಳನ್ನು ಹೈಪರ್‌ ಆ್ಯಕ್ಟೀವ್‌ ಮಾಡುವ ಸಾಧ್ಯತೆ ಇದೆ.
  • ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಆಹಾರ ನೀಡಬಾರದು.
  • ಸೌಮ್ಯ ಆಹಾರವನ್ನು ಒದಗಿಸಲು ಸೂಚಿಸಲಾಗುತ್ತದೆ. ಏಕೆಂದರೆ ಇದು ಪ್ರಾಣಿಗಳು ಆಕ್ರಮಣಕಾರಿಯಾಗಿ ವರ್ತಿಸುವುದನ್ನು ತಡೆಯುತ್ತದೆ.
  • ಜಾಸ್ತಿ ಜನರ ಓಡಾಟ ಇದ್ದಾಗ ಆಹಾರವನ್ನು ನೀಡಬಾರದು.
  • ಸಾಕುಪ್ರಾಣಿಗಳ ಮಾಲೀಕರು ನೈರ್ಮಲ್ಯವನ್ನು ಕಾಪಾಡಬೇಕು ಮತ್ತು ಅವುಗಳನ್ನು ನಿಯಮಿತವಾಗಿ ಸ್ನಾನ ಮಾಡಿಸಿ ಆರೋಗ್ಯ ಪರಿಶೀಲಿಸುತ್ತಿರಬೇಕು.

ಇದನ್ನೂ ಓದಿ: Buddy Bench Conversations; ಸಾಕುನಾಯಿ ಗೋಪಿ ಮೂರ್ತಿ ಜತೆ ಸುಧಾಮೂರ್ತಿ ಭಾಗಿ

ಸಾಕು ನಾಯಿ ನಿಮ್ಮ ಮುಖ ನೆಕ್ಕುತ್ತದೆಯೆ? ಹುಷಾರ್‌!

ನೆಕ್ಕುವುದು ಪ್ರಾಣಿಗಳ ಸಹಜ ಚರ್ಯೆ. ಅದನ್ನು ನಿಲ್ಲಿಸಲಾಗದು. ನೀರು, ಆಹಾರವನ್ನು ಅವು ನೆಕ್ಕುವಷ್ಟೇ ಸಹಜವಾಗಿ ತಂತಮ್ಮ ಕೈ, ಕಾಲು, ಆಟದ ವಸ್ತುಗಳಿಂದ ಹಿಡಿದು ತಮ್ಮ ಮರ್ಮಾಂಗ ಅಥವಾ ವಿಸರ್ಜನೆಗಳವರೆಗೆ ಎಲ್ಲವನ್ನೂ ನೆಕ್ಕುತ್ತವೆ. ಇವೆಲ್ಲ ಪ್ರಾಣಿಗಳ ಪಾಲಿಗೆ ನೈಸರ್ಗಿಕ ವಿಷಯಗಳು. ಆದರೆ ಅದೇ ಬಾಯಲ್ಲಿ ನಮ್ಮ ಮುಖ-ಮೂತಿಗಳನ್ನೂ ನೆಕ್ಕುವುದೆಂದರೆ? ತಮ್ಮ ಆತ್ಮೀಯತೆಯನ್ನು ಪ್ರೀತಿಯನ್ನು ತೋರಿಸಿಕೊಳ್ಳಲು ನಮ್ಮ ಭಾಷೆ ಬಾರದ ಅವುಗಳಿಗೆ ನೆಕ್ಕುವುದು ಸಹಜವೇ ಆದರೂ, ನಮ್ಮ ಬಗ್ಗೆ ನಾವು ಯೋಚಿಸಿಕೊಳ್ಳಬೇಡವೇ ಎಂಬುದು ಪ್ರಶ್ನೆ.

ಕೆಲವರ ಪಾಲಿಗೆ ಶ್ವಾನಗಳ ಎಂಜಲು ಅಪಾಯವನ್ನು ತಂದೊಡ್ಡಿದ ಉದಾಹರಣೆಗಳಿವೆ. ದೇಹದ ಪ್ರತಿರೋಧಕತೆ ಕಡಿಮೆ ಇರುವವರು, ವೃದ್ಧರು, ಪುಟ್ಟ ಮಕ್ಕಳು, ಗರ್ಭಿಣಿಯರು ಮತ್ತು ತೆರೆದ ಗಾಯಗಳು ಇರುವವರಿಗೆ ನಾಯಿಗಳಿಂದ ನೆಕ್ಕಿಸಿಕೊಳ್ಳುವುದು ತೊಂದರೆಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ, ಸಾಕು ನಾಯಿಗಳ ಬಾಯಲ್ಲಿರುವ ಬ್ಯಾಕ್ಟೀರಿಯಗಳು ಅವರ ಮಾಲೀಕರಿಗೆ ಅಂಥ ಅಪಾಯಕಾರಿಯಲ್ಲ ಎನ್ನಲಾಗುತ್ತದೆ. ಜೀವನುದ್ದಕ್ಕೂ ಪ್ರಾಣಿಗಳನ್ನು ಸಾಕುತ್ತಲೇ, ಅವುಗಳಿಂದ ಪಪ್ಪಿ ಕೊಡಿಸಿಕೊಳ್ಳುತ್ತಲೇ ಬದುಕಿದ ಬಹಳಷ್ಟು ಮಂದಿ ಆರೋಗ್ಯವಾಗಿಯೇ ಇದ್ದಾರೆ. ಆದಾಗ್ಯೂ, ಪ್ರಭೇದಗಳ ನಡುವೆ ವರ್ಗಾವಣೆಗೊಳ್ಳಬಹುದಾದ (ಉದಾ, ನಾಯಿಯಿಂದ ಮನುಷ್ಯರಿಗೆ) ರೋಗಾಣುಗಳು ಕೆಲವೊಮ್ಮೆ ತೀವ್ರ ಸಮಸ್ಯೆಗಳನ್ನು ತರುತ್ತವೆ.

ಇದರರ್ಥ ನಾಯಿ ಸಾಕುವ ಬಗ್ಗೆ, ಅವುಗಳನ್ನು ಪ್ರೀತಿಸುವ ಬಗ್ಗೆ ಅನುಮಾನ ಪಡಬೇಕು ಎಂದಲ್ಲ. ಣಿ ಪ್ರಿಯರ ಪಾಲಿಗೆ ಸಾಕು ಪ್ರಾಣಿಗಳನ್ನೊಮ್ಮೆ ಮುದ್ದಾಡುವುದು ದಿನದ ಮೆಚ್ಚಿನ ಕ್ಷಣಗಳಾಗಿರಬಹುದು. ಇದಾವುದೂ ತಪ್ಪಲ್ಲ. ಆದರೆ ಅವುಗಳಿಂದ ಮುಖ ನೆಕ್ಕಿಸಿಕೊಳ್ಳುವ ಮುನ್ನ ಜಾಗ್ರತೆ ಮಾಡಿ ಎನ್ನುತ್ತವೆ ಕೆಲವು ಅಧ್ಯಯನಗಳು.

Continue Reading

ಕ್ರೈಂ

Dog Meat: ನಾಯಿ ಮಾಂಸದ ಗಲಾಟೆ, ಪುನೀತ್‌ ಕೆರೆಹಳ್ಳಿ ಪೊಲೀಸ್‌ ಠಾಣೆಯಲ್ಲೇ ತೀವ್ರ ಅಸ್ವಸ್ಥ

Dog Meat: ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸ ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್‌ ಕೆರೆಹಳ್ಳಿ ಆರೋಪಿಸಿ, ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದಿದ್ದರು. ಪೊಲೀಸರು ಮಧ್ಯಪ್ರವೇಶಿಸಿದ್ದು, ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಭದ್ರತೆಯಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಮಾಂಸ ತುಂಬಿದ ನಾಲ್ಕು ವಾಹನಗಳು ರವಾನೆಯಾಗಿವೆ.

VISTARANEWS.COM


on

puneeth kerehalli dog meat
Koo

ಬೆಂಗಳೂರು: ಶಂಕಿತ ನಾಯಿ ಮಾಂಸದ (Dog Meat) ಪ್ರಕರಣದಲ್ಲಿ ಪೊಲೀಸರು (Bangalore Police) ವಶಕ್ಕೆ ಪಡೆದಿದ್ದ ಹಿಂದೂ ಹೋರಾಟಗಾರ (Hindu activist) ಪುನೀತ್‌ ಕೆರೆಹಳ್ಳಿ (Puneeth Kerehalli) ಪೊಲೀಸ್‌ ಠಾಣೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ಸೇರಿಸಲಾಗಿದೆ.

ನಿನ್ನೆ ಸಂಜೆ ಗಲಾಟೆ ನಡೆದಿದ್ದು, ಪುನೀತ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮಧ್ಯರಾತ್ರಿಯೇ ಅಸ್ವಸ್ಥರಾಗಿದ್ದ ಪುನೀತ್‌ರನ್ನು ಆಸ್ಪತ್ರೆಗೆ ಕರೆತಂದಿರಲಿಲ್ಲ. ಬೆಳಗಿನ ಜಾವ 4:45ಕ್ಕೆ ತೀವ್ರವಾಗಿ ಅಸ್ವಸ್ಥರಾದಾಗ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸ ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್‌ ಕೆರೆಹಳ್ಳಿ ಆರೋಪಿಸಿ, ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದಿದ್ದರು. ಪೊಲೀಸರು ಮಧ್ಯಪ್ರವೇಶಿಸಿದ್ದು, ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಭದ್ರತೆಯಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಮಾಂಸ ತುಂಬಿದ ನಾಲ್ಕು ವಾಹನಗಳು ರವಾನೆಯಾಗಿವೆ.

ಇದೇ ಸಂದರ್ಭದಲ್ಲಿ, ಬಿಎನ್ಎಸ್ 132 ಆ್ಯಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ) ಹಾಗೂ 351 (2) ಸೆಕ್ಷನ್‌ ಆರೋಪದಡಿ ಕಾಟನ್ ಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದರು. ಠಾಣೆಯಲ್ಲಿ ಸುಸ್ತಾಗಿ ಮಲಗಿದ್ದ ಪುನೀತ್‌ನನ್ನು ಸಿಬ್ಬಂದಿಗಳು ಕೆಸಿ ಜನರಲ್‌ ಆಸ್ಪತ್ರೆಗೆ ವ್ಹೀಲ್‌ಚೇರ್‌ನಲ್ಲಿ ಕರೆದೊಯ್ದಿದ್ದು, ಈ ವೇಳೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಬೆಳಗಿನ ಜಾವ 4.45ಕ್ಕೆ ತೀವ್ರವಾಗಿ ಅಸ್ವಸ್ಥಗೊಂಡ ಆರೋಪಿಯನ್ನು ಆತುರಾತುರದಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಇಂದು ಅಬ್ದುಲ್‌ ರಜಾಕ್‌ ವಿಚಾರಣೆ

ನಾಯಿ ಮಾಂಸ ಸಾಗಾಟ ಆರೋಪದ ಕುರಿತು ಇಂದು ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಅಬ್ದುಲ್ ರಜಾಕ್ ವಿಚಾರಣೆ ಸಾಧ್ಯತೆ ಇದೆ. ನಿನ್ನೆ ವಿಚಾರಣೆಗೆ ಹಾಜರಾಗಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದು, ಈಗಾಗಲೇ ಮಾಂಸದ ಸ್ಯಾಂಪಲ್ ಲ್ಯಾಬ್‌ಗೆ ರವಾನಿಸಲಾಗಿದೆ. ಆರೋಪ ಹಿನ್ನೆಲೆಯಲ್ಲಿ ಮೊದಲು ಯಾವ ಪ್ರಾಣಿಯ ಮಾಂಸ ಎಂಬುದು, ನಂತರ ಮಾಂಸದ ಗುಣಮಟ್ಟದ ಬಗ್ಗೆಯೂ ಪರಿಶೀಲನೆ ನಡೆಯಲಿದೆ.

ಕಾನೂನು ನಿಯಮ ಮೀರಿದ್ದರೆ ಅಬ್ದುಲ್ ರಜಾಕ್‌ಗೆ ಕಾನೂನು ಸಂಕಷ್ಟ ಎದುರಾಗಬಹುದು. ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ತನಿಖೆ ನಡೆಯಲಿದ್ದು, ಆರೋಗ್ಯ ಇಲಾಖೆಯ ಕಾನೂನು ಅಡಿ ಕೂಡ ಅರೆಸ್ಟ್ ಮಾಡಬಹುದು. ನಿಯಮ ಉಲ್ಲಂಘನೆ ಮಾಡಿದ್ದರೆ ಏಳು ವರ್ಷದವರೆಗೆ ಜೈಲು ಶಿಕ್ಷೆ ಸಾಧ್ಯತೆ ಇದೆ.

ಒಟ್ಟು 90 ಥರ್ಮಾಕೋಲ್ ಬಾಕ್ಸ್‌ಗಳನ್ನು ಸೀಜ್ ಮಾಡಲಾಗಿದೆ. ಒಂದೊಂದರಲ್ಲಿ 30ರಿಂದ 40 ಕೆಜಿ ಮಾಂಸ ತರಿಸಲಾಗಿತ್ತು. ಒಂದೊಂದು ಬಾಕ್ಸ್‌ಗಳಲ್ಲಿ ಒಂದೊಂದು ರೀತಿಯ ಮಾಂಸವಿದೆ. ಒಂದು ಬಾಕ್ಸ್‌ನಲ್ಲಿ ತಲೆ, ಮತ್ತೊಂದರಲ್ಲಿ ದೇಹ, ಒಂದೊಂದರಲ್ಲಿ ಕಾಲುಗಳು, ಹೀಗಿದೆ. ಒಟ್ಟು ನಾಲ್ಕು ಟಾಟಾ ಏಸ್‌ಗಳಲ್ಲಿ ಮಾಂಸದ ಬಾಕ್ಸ್ ತರಿಸಲಾಗಿತ್ತು. ಎಲ್ಲವನ್ನೂ ಫ್ರೀಜರ್‌ನಲ್ಲಿ ಸ್ಟೋರ್ ಮಾಡಲಾಗಿದೆ.

ಅಬ್ದುಲ್ ರಜಾಕ್ ಹೇಳಿಕೆ

ಎರಡು ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತದೆ. ಇವತ್ತು ಎರಡು ಸಾವಿರ ಕೆಜಿ ಮಾಂಸ ಬಂದಿದೆ. ಹನ್ನೆರಡು ವರ್ಷದಿಂದ ಈ ವ್ಯವಹಾರ ನಡೀತಿದೆ. ಯಾವುದೇ ಆಹಾರ ಇಲಾಖೆ ಬಂದು ಚೆಕ್ ಮಾಡಲಿ. ರಾಜಸ್ಥಾನದ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ. ಪುನೀತ್ ಕೆರೆಹಳ್ಳಿ ಅದನ್ನು ನಾಯಿ ಅಂತಿದ್ದಾರೆ. ಹಣ ವಸೂಲಿ ಮಾಡೋಕೆ ಈ ರೀತಿ ಮಾಡ್ತಾ ಇದಾರೆ. ನಾಳೆ ಈ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತೇವೆ. ಈ ಬಗ್ಗೆ ಪುನೀತ್ ಕೆರೆಹಳ್ಳಿ ವಿರುದ್ಧ ದೂರು ಕೊಡುತ್ತೇವೆ ಎಂದು ಮಾಂಸ ಸಾಗಾಟಗಾರ ಅಬ್ದುಲ್‌ ರಜಾಕ್‌ ಹೇಳಿದ್ದಾರೆ.

ಇದನ್ನೂ ಓದಿ: Dog Meat: ಬೆಂಗಳೂರಿಗೆ ಬಂತು ಟನ್‌ಗಟ್ಟಲೇ ನಾಯಿ ಮಾಂಸ; ಅಬ್ದುಲ್ ರಜಾಕ್ ವಿರುದ್ಧ ಆರೋಪ!

Continue Reading

ಮಳೆ

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

Karnataka Weather Forecast : ರಾಜ್ಯಾದ್ಯಂತ ಮಳೆ (Rain News) ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ವಾರಾಂತ್ಯದಲ್ಲಿ 7 ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ ಮಾಡಲಾಗಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಅತಿ ಹೆಚ್ಚು ಮಳೆಯಾಗುವ (Karnataka Weather Forecast) ಸಾಧ್ಯತೆಯಿದೆ. ಮಲೆನಾಡಿನಲ್ಲಿ ಹಗುರದಿಂದ ಮಧ್ಯಮದೊಂದಿಗೆ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನ ಚದುರಿದಂತೆ ಹಗುರದಿಂದ ಮಳೆಯಾಗುವ (Rain News) ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಮಧ್ಯಮದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ ಸೇರಿದಂತೆ ತುಮಕೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೋಲಾರದಲ್ಲೂ ಮಳೆಯಾಗಲಿದೆ.

ಇದನ್ನೂ ಓದಿ: Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

ಮಲೆನಾಡು ಜಿಲ್ಲೆಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲಿ ವ್ಯಾಪಕ ಸಾಧಾರಣದಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗಲಿದೆ.

ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕವಾಗಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಆರೆಂಜ್‌ ಅಲರ್ಟ್‌

ಗುಡುಗು ಜತೆಗೆ ಭಾರಿ ಮಳೆಯೊಂದಿಗೆ 40-50 ಕಿ.ಮೀ ಗಾಳಿಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Bengaluru News: ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನ ಆಯೋಜಿಸಿ: ಸ್ಪೀಕರ್‌ ಯು.ಟಿ.ಖಾದರ್‌ ಸೂಚನೆ

Bengaluru News: ಕನ್ನಡ ಕಲಿಕಾ ತರಗತಿಗಳಲ್ಲಿ ಕನ್ನಡ ಕಲಿತ ಮಲೆಯಾಳಿ ಭಾಷಿಕರಿಗಾಗಿ ಹಾಗೂ ಕೇರಳದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಕನ್ನಡ ಮತ್ತು ಮಲೆಯಾಳಿ ಭಾಷಿಕರ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.

VISTARANEWS.COM


on

Inauguration of Kannada learning classes for Malayali speakers
Koo

ಬೆಂಗಳೂರು: ಕನ್ನಡ ಕಲಿಕಾ ತರಗತಿಗಳಲ್ಲಿ ಕನ್ನಡ ಕಲಿತ ಮಲೆಯಾಳಿ ಭಾಷಿಕರಿಗಾಗಿ ಹಾಗೂ ಕೇರಳದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಕನ್ನಡ ಮತ್ತು ಮಲೆಯಾಳಿ ಭಾಷಿಕರ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ (Bengaluru News) ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಲೆಯಾಳಿ ಭಾಷಿಕರಿಗೆ ಕನ್ನಡ ಕಲಿಕಾ ತರಗತಿಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚು ಭಾಷೆಯನ್ನು ಕಲಿಯುವವರು ಹೆಚ್ಚು ಸಾಧನೆ, ಯಶಸ್ಸು ಪಡೆಯುತ್ತಾರೆ. ನಾವು ಬೇರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ಭಾಷೆಗೆ ಗೌರವ ಕೊಟ್ಟು ಭಾಷೆ ಕಲಿಯಲು ಮುಂದಾಗಬೇಕು. ಕರ್ನಾಟಕ ರಾಜ್ಯದಲ್ಲಿರುವ ಮಲೆಯಾಳಿ ಭಾಷಿಕರು ಕನ್ನಡ ಭಾಷೆ ಕಲಿಯುತ್ತಿರುವುದು ನಿಮ್ಮ ವ್ಯಕ್ತಿತ್ವ, ಆತ್ಮ ವಿಶ್ವಾಸ ಹೆಚ್ಚಿಸುವ ಜತೆಗೆ ಕರ್ನಾಟಕ ರಾಜ್ಯಕ್ಕೆ ಕೊಡುಗೆ ನೀಡಲು ಮುಂದಾಗಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಇದನ್ನೂ ಓದಿ: Wonderla Offer: ವಂಡರ್‌ಲಾದಿಂದ ವಿಶೇಷ ಆಫರ್‌; 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಫ್ರೀ!

ಮಲೆಯಾಳಿ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಇಲ್ಲಿಗೆ ನಿಲ್ಲಬಾರದು. ಈ ಯೋಜನೆ ಹೆಚ್ಚು ವಿಸ್ತೃತವಾಗಿ ಪ್ರತಿ ಜಿಲ್ಲೆಗಳಲ್ಲಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಪ್ರಾಧಿಕಾರದಿಂದ ಆಗಬೇಕು. ಪ್ರಾಧಿಕಾರದಿಂದ ಆಯೋಜಿಸಿದ್ದ ಕನ್ನಡ ಕಲಿಕಾ ತರಗತಿಗಳಲ್ಲಿ ಕನ್ನಡ ಕಲಿತ ಮಲೆಯಾಳಿ ಭಾಷಿಕರಿಗಾಗಿ ಹಾಗೂ ಕೇರಳದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಕನ್ನಡ ಮತ್ತು ಮಲೆಯಾಳಿ ಭಾಷಿಕರ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ಜೀವನ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಭಾಷೆ ತುಂಬಾ ಪ್ರಮುಖವಾದುದು. ಹೆಚ್ಚು ಭಾಷೆ ಕಲಿತಷ್ಟು ವ್ಯಕ್ತಿತ್ವ ವಿಕಾಸನ ಆಗುವುದರೊಂದಿಗೆ ನಮ್ಮಲ್ಲಿನ ಜ್ಞಾನವೂ ಹೆಚ್ಚಾಗುತ್ತದೆ.

ಬೇರೆ ಬೇರೆ ಭಾಷೆಗಳಲ್ಲಿರುವ ಒಳ್ಳೆಯ ವಿಚಾರಗಳು ಕನ್ನಡಿಗರಿಗೆ ಪರಿಚಯವಾಗಬೇಕೆಂಬ ಉದ್ದೇಶದಿಂದ ಹಲವು ಪುಸ್ತಕಗಳನ್ನು ಅನುವಾದ ಮಾಡಿಸಲಾಗಿದೆ. ಕನ್ನಡ ಭಾಷೆಯಿಂದ ಮಲೆಯಾಳಿ ಭಾಷೆಗೆ ಮಲೆಯಾಳಿ ಭಾಷೆಯಿಂದ ಕನ್ನಡ ಭಾಷೆಗೆ ಹೆಚ್ಚೆಚ್ಚು ಕೃತಿಗಳು ಅನುವಾದವಾಗಬೇಕು. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕನ್ನಡ ಮತ್ತು ಮಲೆಯಾಳಿ ಭಾಷಿಕರ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕರಾದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಭಾರತದ ಒಕ್ಕೂಟ ವ್ಯವಸ್ಥೆ ಬಹಳ ಬಲಿಷ್ಠವಾಗಿ ಉಳಿಯಲು ರಾಜ್ಯಗಳ ಭಾಷೆಗಳು ಪ್ರಮುಖವಾದುದು. ಭಾಷೆ ದುರ್ಬಲವಾದರೆ ದೇಶದ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತದೆ. 2011ರ ಜನಗಣತಿ ಪ್ರಕಾರ ಭಾರತದಲ್ಲಿ 19,509 ತಾಯ್ನುಡಿಗಳಿವೆ. ರಾಜ್ಯದಲ್ಲಿ 230ಕ್ಕೂ ಹೆಚ್ಚು ಭಾಷೆಗಳಿವೆ. ನಾವು ಎಲ್ಲರೂ ಸೇರಿ ರಾಜ್ಯ ಭಾಷೆಯನ್ನು ಬೆಳೆಸಬೇಕು ಅದರ ಜತೆಗೆ ಸಣ್ಣ ಭಾಷೆಗಳನ್ನು ಬೆಳೆಸಬೇಕು ಎಂದರು.

ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸುಧಾಕರನ್ ರಾಮಂತಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮತ್ತು ಮಲೆಯಾಳಂ ಮಿಷನ್ ಕೇರಳ ಸರ್ಕಾರ ಮತ್ತು ಕನ್ನಡ ಕಲಿಕಾ ಯೋಜನೆ ಸಂಚಾಲಕ ಟಾಮಿ ಜೆ. ಅಲುಂಕಲ್ ಉಪಸ್ಥಿತರಿದ್ದರು.

Continue Reading
Advertisement
Pet Dog
ಬೆಂಗಳೂರು9 seconds ago

Pet Dog: ಅಪಾರ್ಟ್‌ಮೆಂಟ್‌ಗಳಲ್ಲಿ ನಾಯಿಗಳಿಗೆ ಮುಕ್ತ ಸ್ವಾತಂತ್ರ್ಯ! ಬಿಬಿಎಂಪಿ ಹೊಸ ಗೈಡ್‌‌ಲೈನ್ಸ್!!

puneeth kerehalli dog meat
ಕ್ರೈಂ19 mins ago

Dog Meat: ನಾಯಿ ಮಾಂಸದ ಗಲಾಟೆ, ಪುನೀತ್‌ ಕೆರೆಹಳ್ಳಿ ಪೊಲೀಸ್‌ ಠಾಣೆಯಲ್ಲೇ ತೀವ್ರ ಅಸ್ವಸ್ಥ

Family Drama Film Review
ಸಿನಿಮಾ32 mins ago

Family Drama Film Review: ಹೊಸ ಅನುಭವ ನೀಡುವ ಫ್ಯಾಮಿಲಿ ಡ್ರಾಮಾ

Michel Phelps ರಾಜಮಾರ್ಗ ಅಂಕಣ
ಅಂಕಣ56 mins ago

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

Aadhaar Update
ವಾಣಿಜ್ಯ1 hour ago

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Health Tips Kannada
ಆರೋಗ್ಯ1 hour ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ2 hours ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ2 hours ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ2 hours ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ2 hours ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ13 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ14 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ15 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ16 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌