KUWJ Award : ವಿಸ್ತಾರ ನ್ಯೂಸ್‌ನ ಹರೀಶ್‌ ನಾಗರಾಜು ಸೇರಿ ಹಲವರಿಗೆ ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ - Vistara News

ಬೆಂಗಳೂರು

KUWJ Award : ವಿಸ್ತಾರ ನ್ಯೂಸ್‌ನ ಹರೀಶ್‌ ನಾಗರಾಜು ಸೇರಿ ಹಲವರಿಗೆ ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ

KUWJ Award : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ (KUWJ) ನೀಡುವ ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದೆ. ವಿಸ್ತಾರ ನ್ಯೂಸ್‌ನ ಅಸೋಸಿಯೇಟ್‌ ಎಕ್ಸಿಕ್ಯುಟಿವ್‌ ಎಡಿಟರ್‌ ಹರೀಶ್‌ ನಾಗರಾಜು (Harish Nagaraju) ಅವರಿಗೂ ಪ್ರಶಸ್ತಿ ಲಭಿಸಿದೆ.

VISTARANEWS.COM


on

Vistara News Harish Nagaraju and others to receive KUWJ annual awards
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು (KUWJ Award) ಪ್ರಕಟಿಸಲಾಗಿದೆ. ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಈ ಬಗ್ಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾಹಿತಿ ನೀಡಿದ್ದಾರೆ. ವಿದ್ಯುನ್ಮಾನ ಟಿ.ವಿ ವಿಭಾಗದಲ್ಲಿ ವಿಸ್ತಾರ ನ್ಯೂಸ್‌ನ ಅಸೋಸಿಯೇಟ್‌ ಎಕ್ಸಿಕ್ಯುಟಿವ್‌ ಎಡಿಟರ್‌ ಹರೀಶ್‌ ನಾಗರಾಜು ಅವರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಪ್ರಶಸ್ತಿಗಳ ವಿವರ ಹೀಗಿದೆ..

  1. 1.ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗಾಗಿ) ಸಣ್ಣವಂಡ ಕಿಶೋರ್ ನಾಚಪ್ಪ, ಮಡಿಕೇರಿ ಹಾಗೂ ಸಂಶುದ್ದೀನ್ ಕೆ.ಎಣ್ಣೂರು, ವಾರ್ತಾಭಾರತಿ, ಮಂಗಳೂರು
  2. 2.ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ) ಸಿ.ಎನ್.ಶಿವಶಂಕರ, ದೂರದರ್ಶನ ವರದಿಗಾರ, ಕೋಲಾರ ಹಾಗೂ ಎಂ.ಎನ್.ಯೋಗೇಶ್, ಪ್ರಜಾವಾಣಿ, ಮಂಡ್ಯ
  3. 3.ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿಗೆ) ಡಿ.ಉಮೇಶ್ ನಾಯ್ಕ, ವಿಜಯವಾಣಿ, ತರೀಕೆರೆ ಹಾಗೂ ಎಲ್.ದೇವರಾಜ್, ವಿಜಯ ಕರ್ನಾಟಕ
  4. 4.ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿಗೆ) ಚಂದ್ರಹಾಸ ಹಿರೇಮಳಲಿ, ಪ್ರಜಾವಾಣಿ, ಬೆಂಗಳೂರು ಹಾಗೂ ಎಸ್.ಶ್ರೀಧರ, ವಿಜಯ ಕರ್ನಾಟಕ, ರಾಮನಗರ
  5. 5.ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿಗೆ) ಮಂಜುನಾಥ, ಜಾದಗೆರೆ, ವಿಜಯ ಕರ್ನಾಟಕ, ಬೆಂಗಳೂರು ಹಾಗೂ ಇಬ್ರಾಹೀಂ ಖಲೀಲ್ ಬನ್ನೂರು, ವಾರ್ತಾಭಾರತಿ
  6. 6.ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶೆ) ಶಶಿಧರ ಹೆಗಡೆ, ನಂದಿಕಲ್, ವಿಜಯ ಕರ್ನಾಟಕ ಹಾಗೂ ಡಿ.ಎಚ್.ಸುಖೇಶ್, ಪಬ್ಲಿಕ್ ಟಿವಿ
  7. 7.ಮಂಗಳ ಎಂ.ಸಿ.ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆ ವಿಭಾಗ) ಕಾರಂತ ಪೆರಾಜೆ, ಅಡಿಕೆ ಪತ್ರಿಕೆ, ಪುತ್ತೂರು ರಾಘವೇಂದ್ರ ತೊಗರ್ಸಿ, ಸುಧಾ
  8. 8.ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ) ಕೆ.ಆರ್. ಯೋಗೀಶ, ಜನಮಿತ್ರ, ಕಡೂರು ತಾಜುದ್ದೀನ್ ಅಜಾದ್, ಡೆಕ್ಕನ್ ಹೆರಾಲ್ಡ್, ಕಲಬುರುಗಿ
  9. 9.ಅತ್ಯುತ್ತಮ ಪೋಟೋಗ್ರಫಿ: ಪಿ.ಕೆ.ಬಡಿಗೇರ, ಬೆಳಗಾವಿ ಹಾಗೂ ನಟರಾಜ್, ಹಾಸನ ಮತ್ತು ಅನುರಾಗ್ ಬಸವರಾಜು, ಮೈಸೂರು
  10. 10.ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ) ಪ್ರಕಾಶ್ ಎಸ್.ಶೇಟ್, ವಿಜಯವಾಣಿ, ಹುಬ್ಬಳ್ಳಿ ಹಾಗೂ ಅಮರೇಶ ದೇವದುರ್ಗ, ರಾಯಚೂರು.

ಇದನ್ನೂ ಓದಿ: Book Release: ಜ. 31ರಂದು ನಾಲ್ವರು ತಜ್ಞರ ಮಾತುಗಳು, ಆರು ಪುಸ್ತಕಗಳ ಲೋಕಾರ್ಪಣೆ

  1. 11.ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ವನ್ಯಪ್ರಾಣಿಗಳ ಕುರಿತ ಅತ್ಯುತ್ತಮ ಲೇಖನಕ್ಕೆ) ಅಖಿಲೇಶ್ ಚಿಪ್ಪಲಿ, ಪ್ರಜಾವಾಣಿ, ಶಿವಮೊಗ್ಗ
  2. 12.ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿಗೆ) ಶಶಿಕಾಂತ್ ಎಸ್.ಶಂಬಳ್ಳಿ, ಪ್ರಜಾವಾಣಿ ಹಾಗೂ ಬೀದರ್ ಪ್ರಕಾಶ್ ಬಾಳಕ್ಕನವರ್, ಪ್ರಜಾವಾಣಿ, ಬಾಗಲಕೋಟೆ
  3. 13.ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗೆ) ಪಿ.ಶಾಂತಕುಮಾರ್, ಕನ್ನಡ ಪ್ರಭ, ಅರಸೀಕೆರೆ ಹಾಗೂ ಹೆಚ್.ಕೆ.ರಾಘವೇಂದ್ರ, ಕೋಲಾರ ಪತ್ರಿಕೆ, ಕೋಲಾರ
  4. 14.ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ: ನಂಜುಂಡಪ್ಪ, ದೂರದರ್ಶನ ಮತ್ತು ಆಕಾಶವಾಣಿ, ತೃಪ್ತಿ ಕುಂಬ್ರಗೋಡು, ಉದಯವಾಣಿ ಎಚ್.ಆರ್.ಅಶ್ವಿನಿ, ವಿಜಯವಾಣಿ, ಬೆಂಗಳೂರು.
  5. 15. ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ ( ಅತ್ಯುತ್ತಮ ಕೃಷಿ ವರದಿ) ಬರಗೂರು ವಿರೂಪಾಕ್ಷಪ್ಪ, ಪ್ರಜಾಪ್ರಗತಿ, ಶಿರಾ, ತುಮಕೂರು ಜಿಲ್ಲೆ ಮಾಳಿಂಗರಾಯ ಪೂಜಾರ, ಲಕ್ಷ್ಮೀಶ್ವರ, ಗದಗ
  6. 16. ನಾಡಿಗೇರ ಕೃಷ್ಣರಾಯರ ಪ್ರಶಸ್ತಿ: ರಂಜಿತ್ ಅಶ್ವತ್, ವಿಶ್ವವಾಣಿ, ಎನ್. ರಾಘವೇಂದ್ರ, ಸಂಪಾದಕರು, ವಿನೋದ ಪತ್ರಿಕೆ
  7. 17.ಅತ್ಯುತ್ತಮ ಪುಟ ವಿನ್ಯಾಸ (ಡೆಸ್ಕ್) ಜಿ.ಎಂ.ಕೊಟ್ರೇಶ್, ಕನ್ನಡ ಪ್ರಭ ಹೆಚ್.ಕೆ.ರವೀಂದ್ರನಾಥ ಹೊನ್ನೂರು
  8. 18.ನ್ಯಾಯಾಲಯದ (ಕೋರ್ಟ್ ಬೀಟ್) ಅತ್ಯುತ್ತಮ ವರದಿ: ಎಸ್.ಶ್ಯಾಮ್ ಪ್ರಸಾದ್, ಪಿಟಿಐ, ಬೆಂಗಳೂರು
  9. 19.ಸುಣ್ಣವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ. (ಅತ್ಯುತ್ತಮ ಸೇನಾ ವರದಿಗೆ) ಅನುಕಾರ್ಯಪ್ಪ, ರಿಪಬ್ಲಿಕ್ ಕನ್ನಡ ಟಿವಿ, ಕೊಡಗು ಜಿಲ್ಲೆ
  10. 20.ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ ( ಇಂಗ್ಲೀಷ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ) ಪವನ್ ಕುಮಾರ್ ಹೆಚ್, ಡೆಕ್ಕನ್ ಹೆರಾಲ್ಡ್, ಉತ್ತರ ಕನ್ನಡ ಅಕ್ಷಯ ಪಿ.ವಿ., ಸ್ಟಾರ್ ಆಫ್ ಮೈಸೂರು, ಕೊಡಗು
  11. 21.ಟಿ.ಕೆ.ಮಲಗೊಂಡ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿ) ಸಿದ್ದು ಆರ್.ಜಿ.ಹಳ್ಳಿ, ಹಾವೇರಿ, ಪ್ರಜಾವಾಣಿ ಶಶಿಕಾಂತ್ ಮೆಂಡೇಗಾರ, ಬಿಜಾಪುರ.
  12. 22.ಅಪ್ಪಾಜಿಗೌಡ (ಸಿನಿಮಾ ಪ್ರಶಸ್ತಿ-ಚಲನಚಿತ್ರ ವರದಿಗೆ) ಅರುಣ್ ಕುಮಾರ, ಬೆಂಗಳೂರು ಬಬಿತಾ ಎಸ್. ವಿಜಯ ಕರ್ನಾಟಕ
  13. 23.ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ: ಬಿ.ಸಿ.ಚನ್ನೇಗೌಡ, ಚನ್ನರಾಯಪಟ್ಟಣ ಗುರುರಾಜ್ ಕುಲಕರ್ಣಿ, ಸಂಯುಕ್ತ ಕರ್ನಾಟಕ, ಬೀದರ್
  14. 24. ಬದರೀನಾಥ್ ಹೊಂಬಾಳೆ ಪ್ರಶಸ್ತಿ: ಕೆ.ಎನ್.ಪುಟ್ಟಲಿಂಗಯ್ಯ, ಸಂಪಾದಕರು, ಉದಯಕಾಲ ವೆಂಕಟೇಶ್ ಬಿ. ಇಮ್ರಾಪುರ, ಹೊಸ ದಿಗಂತ, ಗದಗ
  15. 25. ಅಭಿಮಾನಿ ಪ್ರಕಾಶನ ಪ್ರಶಸ್ತಿ: ವಿರೂಪಾಕ್ಷ ಕೆ. ಕವಟಗಿ, ವಿಜಯ ಕರ್ನಾಟಕ, ಚಿಕ್ಕೋಡಿ ಶಿವರಾಜ್ ಕೆಂಭಾವಿ, ಉದಯವಾಣಿ, ಲಿಂಗಸೂಗೂರು
  16. 26. ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ: ಎಂ.ಎನ್.ಅಹೋಬಳಪತಿ, ವಿಜಯ ಕರ್ನಾಟಕ, ಚಿತ್ರದುರ್ಗ ಶ್ರೀಧರ್ ನಾಯಕ್, ಹಿರಿಯ ಪತ್ರಕರ್ತರು
  17. 27. ರವಿ ಬೆಳಗೆರೆ ಪ್ರಶಸ್ತಿ: ಟಿ. ಗುರುರಾಜ್, ಸಂಪಾದಕರು, ಹಲೋ ಮೈಸೂರು ಜಗದೀಶ್ ಬೆಳ್ಳಿಯಪ್ಪ, ಟಿವಿ-9
  18. 28.ಅತ್ಯುತ್ತಮ ತನಿಖಾ ವರದಿ: ನ್ಯೂಸ್ ಫಸ್ಟ್, ಬೆಂಗಳೂರು (ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಹಗರಣ)

ಇದನ್ನೂ ಓದಿ: Hanuman Flag: ಧ್ವಜಸ್ತಂಭವನ್ನು ನಿರ್ಮಿಸಿದ್ದೇ ಹನುಮಾನ್‌ ಧ್ವಜ ಹಾರಿಸಲು; ಕಾಂಗ್ರೆಸ್‌ ಜನರ ಕ್ಷಮೆ ಕೇಳಲಿ: ವಿಜಯೇಂದ್ರ

ವಿದ್ಯುನ್ಮಾನ ಟಿ.ವಿ ವಿಭಾಗ: ಹರೀಶ್ ನಾಗರಾಜ್, ವಿಸ್ತಾರ ಟಿವಿ, ನವಿತಾ ಜೈನ್, ನ್ಯೂಸ್ 18, ರಾಚಪ್ಪ ಜೀ ಟಿವಿ ಹಾಗೂ ದಶರಥ, ಟಿವಿ-5, ಮನೋಜ್ ಕುಮಾರ್, ಪವರ್ ಟಿವಿ ಸೇರಿ ಮೋಹನ್ ರಾಜ್, ಕ್ಯಾಮರಾಮೆನ್ ಸುವರ್ಣ ಟಿವಿ ಲಭಿಸಿದೆ.

ಕೆಯುಡಬ್ಲೂಜೆ ವಿಶೇಷ ಪ್ರಶಸ್ತಿ

ನಿರ್ಮಲ ಎಲಿಗಾರ್ ಬೆಂಗಳೂರು ಹಾಗೂ ಪಿ.ಬಿ.ಹರೀಶ್ ರೈ ಮಂಗಳೂರು, ಪ್ರಕಾಶ್ ಮಸ್ಕಿ ರಾಯಚೂರು, ಕೆ.ಎಸ್.ಭಾಸ್ಕರ ಶೆಟ್ಟಿ ಬೆಂಗಳೂರು, ರಾಧಾಕೃಷ್ಣ ಭಟ್ ಭಟ್ಕಳ, ಉತ್ತರ ಕನ್ನಡ, ವೆಂಕಟೇಶ್ ಮೂರ್ತಿ ಕಲಬುರ್ಗಿ ಹಾಗೂ ಅರವಿಂದ ನಾವಡ, ಉಡುಪಿ ರಾಜಶೇಖರ ಜೋಗಿನ್ಮನೆ ರಮೇಶ್ ಪಾಳ್ಯ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Prajwal Revanna Case: ಈಗಾಗಲೇ ಕಿಡ್ನ್ಯಾಪ್‌ ಪ್ರಕರಣದಲ್ಲಿ ಬಂಧಿತರಾಗಿರುವ ಎಚ್‌.ಡಿ. ರೇವಣ್ಣ ಅವರು ತಾವು ಕಿಡ್ನ್ಯಾಪ್‌ ಮಾಡಿಲ್ಲ ಎಂದೇ ಹೇಳಿಕೊಂಡು ಬಂದಿದ್ದಾರೆ. ಈಗ ಸಂತ್ರಸ್ತೆಯ ವಿಡಿಯೊ ವೈರಲ್‌ ಆಗಿದ್ದು, ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ರೇವಣ್ಣ ಪರ ವಕೀಲರು ತಮ್ಮ ಕಕ್ಷಿದಾರರನ್ನು ವಿನಾಕಾರಣ ಟಾರ್ಗೆಟ್‌ ಮಾಡಿದ್ದು, ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಲ್ಲದೆ, ಎಸ್‌ಐಟಿ ತನಿಖಾ ಪ್ರಕ್ರಿಯೆಯೇ ಅನುಮಾನ ಮೂಡಿಸುವಂತಿದೆ ಎಂದು ವಾದ ಮಂಡಿಸಿದ್ದರು. ಈಗ ಈ ವಿಡಿಯೊವನ್ನೇ ಆಧಾರವಾಗಿಟ್ಟುಕೊಂಡು ಕೋರ್ಟ್‌ ಮುಂದೆ ಎಸ್‌ಐಟಿ ಹಾಗೂ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಹೆಚ್ಚಿದೆ.

VISTARANEWS.COM


on

Prajwal Revanna Case I was never kidnapped and son has made a false complaint Video of victim goes viral
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ ಎನ್ನಲಾದ ಮೈಸೂರಿನ ಕೆ.ಆರ್.‌ ನಗರದ ಮಹಿಳೆಯೊಬ್ಬರನ್ನು ಕಿಡ್ನ್ಯಾಪ್‌ ಮಾಡಿದ್ದಾರೆಂಬ ದೂರಿನ ಮೇಲೆ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ ಬಂಧಿತರಾಗಿದ್ದಾರೆ. ಅವರು ಜಾಮೀನು ಸಿಗದೆ ಪರದಾಟ ನಡೆಸುತ್ತಿರುವ ಈ ಹೊತ್ತಿನಲ್ಲಿ ಅಪಹರಣ ನಡೆದಿದೆ ಎನ್ನಲಾದ ಸಂತ್ರಸ್ತ ಮಹಿಳೆಯ ವಿಡಿಯೊ ವೈರಲ್‌ ಆಗಿದೆ. ಆಕೆ, ನನ್ನನ್ನು ಯಾರು ಅಪಹರಣ ಮಾಡಿಲ್ಲ. ನನ್ನ ಮಗ ತಪ್ಪು ತಿಳಿದು ದೂರು ಕೊಟ್ಟಿದ್ದಾನೆ ಎಂಬ ಹೇಳಿಕೆಯು ವಿಡಿಯೊದಲ್ಲಿದೆ.

ಈಗಾಗಲೇ ಕಿಡ್ನ್ಯಾಪ್‌ ಪ್ರಕರಣದಲ್ಲಿ ಬಂಧಿತರಾಗಿರುವ ಎಚ್‌.ಡಿ. ರೇವಣ್ಣ ಅವರು ತಾವು ಕಿಡ್ನ್ಯಾಪ್‌ ಮಾಡಿಲ್ಲ ಎಂದೇ ಹೇಳಿಕೊಂಡು ಬಂದಿದ್ದಾರೆ. ಈಗ ಸಂತ್ರಸ್ತೆಯ ವಿಡಿಯೊ ವೈರಲ್‌ ಆಗಿದ್ದು, ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ರೇವಣ್ಣ ಪರ ವಕೀಲರು ತಮ್ಮ ಕಕ್ಷಿದಾರರನ್ನು ವಿನಾಕಾರಣ ಟಾರ್ಗೆಟ್‌ ಮಾಡಿದ್ದು, ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಲ್ಲದೆ, ಎಸ್‌ಐಟಿ ತನಿಖಾ ಪ್ರಕ್ರಿಯೆಯೇ ಅನುಮಾನ ಮೂಡಿಸುವಂತಿದೆ ಎಂದು ವಾದ ಮಂಡಿಸಿದ್ದರು. ಈಗ ಈ ವಿಡಿಯೊವನ್ನೇ ಆಧಾರವಾಗಿಟ್ಟುಕೊಂಡು ಕೋರ್ಟ್‌ ಮುಂದೆ ಎಸ್‌ಐಟಿ ಹಾಗೂ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಹೆಚ್ಚಿದೆ.

ಏನಿದು ಕೇಸ್‌?

ಪ್ರಜ್ವಲ್‌ ರೇವಣ್ಣ ಅವರು ಅತ್ಯಾಚಾರ ನಡೆಸಿದ್ದಾರೆನ್ನಲಾದ ಮಹಿಳೆ ಮೈಸೂರಿನ ಕೆ.ಆರ್.‌ ನಗರ ನಿವಾಸಿಯಾಗಿದ್ದಾರೆ. ಆದರೆ, ಇವರನ್ನು ಸಾಕ್ಷಿ ನಾಶಕ್ಕಾಗಿ ಎಚ್‌.ಡಿ. ರೇವಣ್ಣ ಹಾಗೂ ಅವರ ಆಪ್ತ ಸತೀಶ್ ಬಾಬಣ್ಣ ಅಪಹರಣ ಮಾಡಿದ್ದಾರೆ ಎಂದು ಕೆ.ಆರ್. ನಗರದಲ್ಲಿ ಸಂತ್ರಸ್ತೆಯ ಪುತ್ರ ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಂತ್ರಸ್ತೆಯ ವಿಡಿಯೊ ರಿಲೀಸ್‌ ಆಗಿದೆ. ಇದರಲ್ಲಿ ಮಹಿಳೆಯು ಅಪಹರಣ ಪ್ರಕರಣಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ.

ನನ್ನನ್ನು ಯಾರೂ ಕಿಡ್ನ್ಯಾಪ್‌ ಮಾಡಿಲ್ಲ ಎಂದ ಮಹಿಳೆ!

“ನನ್ನನ್ನು ಯಾರೂ ಕಿಡ್ನ್ಯಾಪ್‌ ಮಾಡಿಲ್ಲ, ನಾನು ಎಲ್ಲಿಯೂ ಹೋಗಿಲ್ಲ. ನನ್ನ ಸಂಬಂಧಿಕರ ಮನೆಯಲ್ಲಿದ್ದೇನೆ. ರೇವಣ್ಣ ಆಗಲಿ, ಪ್ರಜ್ವಲ್ ರೇವಣ್ಣ ಆಗಲಿ, ಭವಾನಿ ಅಕ್ಕಾ ಆಗಲಿ, ಸತೀಶ್ ಬಾಬಾಣ್ಣ ಆಗಲಿ ಯಾರಿಂದಲೂ ತೊಂದರೆ ಆಗಿಲ್ಲ. ನನ್ನನ್ನು ಚೆನ್ನಾಗಿ ನೋಡಿಕೊಂಡು ಕಳಿಸಿಕೊಟ್ಟಿದ್ದಾರೆ. ನಾನು ಆರಾಮಾಗಿದ್ದೇನೆ. ಸಂಬಂಧಿಕರ ಮನೆಯಲ್ಲಿ ಟಿವಿ ನೋಡುವಾಗ ವಿಚಾರ ಗೊತ್ತಾಯಿತು. ಮೊಬೈಲ್‌ನಲ್ಲಿ ಬಂದ ವಿಡಿಯೊಗೂ ನನಗೂ ಯಾವುದೇ ಸಂಬಂಧ ಇಲ್ಲ. ಮನೆಯ ಬಳಿ ಯಾರು ಗಾಬರಿ ಆಗೋದು ಬೇಡ. ನಾನು ಸುರಕ್ಷಿವಾಗಿದ್ದೇನೆ. ಎಲ್ಲರೂ ಆರಾಮಾಗಿರಿ. ನಾಲ್ಕು ದಿನ ಸಂಬಂಧಿಕರ ಮನೆಗೆ ಹೋಗಿದ್ದೆ. ವಾಪಸ್‌ ಬರುತ್ತೇನೆ. ಎಲ್ಲಿ ಯಾರಿಗೆ ಮಾಹಿತಿ ಕೊಡಬೇಕೋ ಕೊಡುತ್ತೇನೆ. ಯಾರು ಮನೆ ಹತ್ತಿರ ಹೋಗಬೇಡಿ, ಪೊಲೀಸ್‌ನವರು ಟಾರ್ಚರ್ ಕೊಡಬೇಡಿ. ಎಲ್ಲರೂ ಗಾಬರಿಯಾಗುತ್ತಾರೆ. ನಾವು ಕೂಲಿ ಮಾಡಿಕೊಂಡು ಇರುವವರು ಹೊಟ್ಟೆ ಮೇಲೆ‌ ಹೊಡಿಯಬೇಡಿ. ಪೊಲೀಸಿನವರು ಮನೆ ಬಳಿ ಬಂದರೆ ಅಕ್ಕಪಕ್ಕದವರು ಏನೆಂದು ಕೊಳ್ಳುವುದಿಲ್ಲ. ಏನಾದರೂ ತೊಂದರೆಯಾದರೆ ನಾನೇ ಬಂದು ಹೇಳಿಕೆ ಕೊಡ್ತೇನೆ. ನನಗಾಗಲಿ, ಕುಟುಂಬದವರಿಗೆ ಆಗಲಿ, ಗಂಡನಿಗಾಗಲೀ ಏನಾದರೂ ತೊಂದರೆಯಾದರೆ ನೀವೇ ಜವಾಬ್ದಾರರು. ನನ್ನ ಮಗ ಗೊತ್ತಿಲ್ಲದೆ ಹೀಗೆ ಮಾಡಿಬಿಟ್ಟಿದ್ದಾನೆ. ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನಾನಾಗಿಯೇ ಸಂಬಂಧಿಕರ ಮನೆಗೆ ಬಂದಿದ್ದೇನೆ” ಎಂದು ಸಂತ್ರಸ್ತೆ ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

ಈ ವಿಡಿಯೊ ಮಾಡಿದ್ದು ಯಾರು?

ಸದ್ಯ ಎಸ್‌ಐಟಿ ವಶದಲ್ಲಿರುವ ಸಂತ್ರಸ್ತ ಮಹಿಳೆಯ ಈ ವಿಡಿಯೊವನ್ನು ಮಾಡಿದ್ದು ಯಾರು? ರಿಲೀಸ್ ಮಾಡಿದ್ದು ಯಾರು? ಎಂಬ ಪ್ರಶ್ನೆ ಈಗ ಎಸ್‌ಐಟಿಗೆ ತಲೆನೋವಾಗಿ ಕಾಡುತ್ತಿದೆ. ಹಾಗಾದರೆ, ತಾವು ವಶಕ್ಕೆ ಪಡೆಯುವ ಮೊದಲೇ ಈ ವಿಡಿಯೊವನ್ನು ಮಾಡಲಾಗಿತ್ತಾ? ಆದರೆ, ಮಹಿಳೆಯನ್ನ ಎಲ್ಲಿ ಇರಿಸಿ ಈ ವಿಡಿಯೊ ಮಾಡಲಾಗಿದೆ? ಈ ವಿಡಿಯೊವನ್ನು ಯಾವ? ಯಾರ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಲಾಗಿದೆ. ಈಕೆಯೇ ಆ್ಯಂಡ್ರಾಯ್ಡ್ ಮೊಬೈಲ್ ಅನ್ನು ಬಳಕೆ ಮಾಡುತ್ತಿದ್ದರೇ ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ತನಿಖೆ ನಡೆಸಬೇಕಿದೆ.

Continue Reading

ಮಳೆ

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Heavy Rain News : ರಾಜ್ಯದ ಹಲವು ಭಾಗಗಳಲ್ಲಿ ಮಳೆಯು (Karnataka Weather Forecast) ಅಬ್ಬರಿಸುತ್ತಿದೆ. ಗುಡುಗು ಸಹಿತ ಭಾರಿ ಗಾಳಿ ಮಳೆ ಅನಾಹುತಗಳು ಸಂಭವಿಸಿದೆ. ಭಾನುವಾರ ಚಿಕ್ಕಮಗಳೂರಲ್ಲಿ ವಿಪರೀತ ಮಳೆಯಾಗುತ್ತಿದ್ದರೆ, ಹುಬ್ಬಳ್ಳಿಯಲ್ಲಿ ಮಳೆ ಅವಾಂತರಕ್ಕೆ 40ಕ್ಕೂ ಹೆಚ್ಚು ಬೈಕ್‌ಗಳಿಗೆ ಹಾನಿಯಾಗಿದೆ. ಚಿಕ್ಕಬಳ್ಳಾಪುರದಲ್ಲಿ ಬೆಳೆಯು ನೆಲಕಚ್ಚಿದೆ.

VISTARANEWS.COM


on

By

Karnataka Weather Forecast Heavy rain in chikkmagalur
Koo

ಚಿಕ್ಕಮಗಳೂರು/ಬೆಂಗಳೂರು: ಭಾನುವಾರ ರಾಜ್ಯದ ವಿವಿಧೆಡೆ ವರುರ್ಣಾಭಟ (Karnataka Weather Forecast) ಜೋರಾಗಿದೆ. ಚಿಕ್ಕಮಗಳೂರಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಜೋರಾಗಿ ಸುರಿದ ಮಳೆಗೆ ಬೃಹತ್‌ ಗಾತ್ರದ ಮರವೊಂದು ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹಿಳೆಯ ಮೇಲೆ ಬಿದ್ದಿದೆ. ಮರದ ಅಡಿ ಸಿಲುಕಿದ ಮಹಿಳೆ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸವಿತಾ (48) ಮೃತ ದುರ್ದೈವಿ. ಚಿಕ್ಕಮಗಳೂರಿನ ಎನ್‌ಆರ್‌ ಪುರ ‌ತಾಲೂಕಿನ ಕಟ್ಟಿಮನಿ ಗ್ರಾಮದ ಬಳಿ ಘಟನೆ ನಡೆದಿದೆ.

ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ‌ಕಾರಿನ ಮೇಲೂ ಮರ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ‌ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳೀಯರು ಗಾಯಾಳುಗಳ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಎನ್ ಆರ್ ಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Karnataka Weather Forecast

ಇನ್ನೂ ಮಳೆಯ (Rain News) ಅವಾಂತರಕ್ಕೆ ಜನರು ಕಂಗಲಾಗಿದ್ದಾರೆ. ಚಿಕ್ಕಮಗಳೂರು ಮಲೆನಾಡಿನ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನ ಶಿರವಾಸೆ, ಮುತ್ತೋಡಿ, ಮಲಂದೂರು ಸುತ್ತಮುತ್ತ ಗುಡುಗು, ಸಿಡಿಲು ಬಿರುಗಾಳಿ ಸಹಿತ ನಿರಂತರ ಮಳೆಯಾಗುತ್ತಿದೆ. ಶಿರವಾಸೆ ಗ್ರಾ.ಪಂ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಕೂಲಿ ಕಾರ್ಮಿಕರು ಪರದಾಟ ಅನುಭವಿಸುತ್ತಿದ್ದಾರೆ. ಇತ್ತ ನಿರಂತರ ಮಳೆಯಿಂದಾಗಿ ರೈತರು, ಕಾಫಿ ಬೆಳೆಗಾರರಲ್ಲಿ ಸಂತಸ ಮೂಡಿದೆ. ಕಾಫಿನಾಡ ಬಯಲುಸೀಮೆ ಭಾಗದಲ್ಲೂ ಧಾರಾಕಾರ ಮಳೆಯಾಗಿದೆ. ಕಳೆದೊಂದು ಗಂಟೆಯಿಂದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಬಯಲು ಸೀಮೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತರೀಕೆರೆ, ಅಜ್ಜಂಪುರ ತಾಲೂಕಿನ ಹಲವು ಭಾಗಗಳಲ್ಲೂ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರದ ಕೋಟೆ, ಹಿರೇಮಗಳೂರು, ಜಯನಗರ ಶಂಕರಪುರ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಳಸಾಪುರ, ಬೆಳವಾಡಿ, ಮರ್ಲೆ, ತಿಳಿದಂತೆ ಹಲವು ಗ್ರಾಮಗಳಲ್ಲಿ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.

ಬೆಂಗಳೂರಲ್ಲೂ ಮಳೆ ಮೋಡಿ

ವೀಕೆಂಡ್‌ ಮೂಡ್‌ನಲ್ಲಿದ್ದ ಸಿಟಿ ಮಂದಿಗೆ ಮಳೆಯು ಮೋಡಿ ಮಾಡಿದೆ. ಬೆಂಗಳೂರಿನ ಉಲ್ಲಾಳ, ನಾಗರಬಾವಿ, ವಿಜಯನಗರ, ಶೇಷಾದ್ರಿಪುರಂ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಇತ್ತ ಕೆಲ ರಸ್ತೆಗಳಲ್ಲಿ ನೀರು ನಿಂತು ಕೆರೆಯಂತಾಗಿದೆ. ಪಾದಾಚಾರಿಗಳು ರಸ್ತೆ ದಾಟಲು ಆಗದೆ ಪರದಾಡುವಂತಾಗಿದೆ.

ಇದನ್ನೂ ಓದಿ: Karnataka Rain: ಸಿಡಿಲಾಘಾತಕ್ಕೆ ಕುರಿಗಳು ಬಲಿ; ಮೇವಿನ ಬಣವೆ ಭಸ್ಮ, ಮನೆಗಳಿಗೆ ಹಾನಿ

ಹುಬ್ಬಳ್ಳಿಯಲ್ಲಿ ಮಳೆ ಅವಾಂತರಕ್ಕೆ ಬೈಕ್‌ಗಳಿಗೆ ಹಾನಿ

ಹುಬ್ಬಳ್ಳಿಯಲ್ಲಿ ನಿನ್ನೆ ಶನಿವಾರ ಸುರಿದ ಮಳೆಯಿಂದ ಅವಾಂತರ‌ವೇ ಸೃಷ್ಟಿಯಾಗಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿದ್ದ 40ಕ್ಕೂ ಹೆಚ್ಚು ಬೈಕ್‌ಗಳಿಗೆ ಹಾನಿಯಾಗಿದೆ. ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಬೇಸ್ಮೇಂಟ್‌ನಲ್ಲಿ ಮಳೆ ನೀರು ನುಗ್ಗಿದ್ದು, ತಡೆಗೋಡೆ ಕುಸಿದು ಕೆಲವು ಬೈಕ್‌ಗಳಿಗೆ ಹಾನಿಯಾಗಿದೆ. ಕಾಂಪ್ಲೆಕ್ಸ್‌ ಸಿಬ್ಬಂದಿ ಮೆಕ್ಯಾನಿಕಲ್ ಕರೆದುಕೊಂಡು ಬಂದು ಬೈಕ್ ರೀಪೇರಿ ಮಾಡಿಸುತ್ತಿದ್ದಾರೆ.

Karnataka Weather Forecast

ಚಿಕ್ಕಬಳ್ಳಾಪುರ‌ದಲ್ಲಿ ನೆಲಕಚ್ಚಿದ ಪಪ್ಪಾಯಿ ಬೆಳೆ

ಮಳೆಯ ಆರ್ಭಟಕ್ಕೆ ಎರಡು ಎಕರೆ ಪಪ್ಪಾಯಿ ಬೆಳೆ ನೆಲಕಚ್ಚಿದೆ. ಕಟಾವಿಗೆ ಬಂದಿದ್ದ ಪಪ್ಪಾಯಿ‌ ಬೆಳೆ ಮಣ್ಣುಪಾಲಾಗಿದೆ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ದೇವರಗುಡಿಪಲ್ಲಿ ಗ್ರಾಮದ ವೆಂಕಟಶಿವಪ್ಪ ಎಂಬುವರಿಗೆ ಸೇರಿದ ಪಪ್ಪಾಯಿ ಬೆಳೆ ಕೊಯ್ಲಿಗೆ ಬಂದಿತ್ತು. ಇದೀಗ ಗುಡುಗು‌ ಸಿಡಿಲು ಸಮೇತ ಸುರಿದ ಮಳೆಗೆ ಬೆಳೆ ನಾಶವಾಗಿದ್ದು, ರೈತ ಕಂಗಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ.

ಮುಕ್ಕಾಲು ಕರ್ನಾಟಕಕ್ಕೆ ಆರೆಂಜ್‌ ಅಲರ್ಟ್‌

ರಾಜ್ಯಾದ್ಯಂತ ಮಳೆಯು ಅಬ್ಬರಿಸಲಿದ್ದು, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹವಾಮಾನ ಇಲಾಖೆಯು 23 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ ಹಾಗೂ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ.

ಶಿವಮೊಗ್ಗ, ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಭಾರಿ ಗಾಳಿ ಹಾಗೂ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿ ಕಲಬುರಗಿ, ವಿಜಯಪುರ, ಯಾದಗಿರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ. ಇನ್ನುಳಿದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: ನನಗೆ ಏಪ್ರಿಲ್20 ರಂದು ಸಿಕ್ಕ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಮಂಜು ಅವರಿಗೆ ಕೊಟ್ಟಿದ್ದೇನೆ. ಏಪ್ರಿಲ್ 21 ರಂದು ಅರಕಲಗೂಡು ಮಾರುತಿ ಕಲ್ಯಾಣ ಮಂಟಪದಲ್ಲಿ ಅವರಿಗೆ ನೀಡಿದ್ದೇನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿಡಿಯೊವನ್ನು ವೈರಲ್ ಮಾಡಿದ್ದರ ಹಿಂದೆ ಮಹಾ ನಾಯಕನ ಕೈವಾಡ ಇದೆ ಎಂದು ಹೇಳಿದ್ದರು. ಆ ಮಹಾ ನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಪೋಸ್ಟ್ ಮಾಡಿದ್ದಾನೆ. ಸದ್ಯ ನವೀನ್ ಗೌಡ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.

VISTARANEWS.COM


on

Prajwal Revanna Case Naveen Gowda post against MLA A Manju
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಸಿಗುತ್ತಿದೆ. ಪೆನ್‌ಡ್ರೈವ್‌ ಹಂಚಿಕೆಯ ಪ್ರಮುಖ ಆರೋಪ ಹೊತ್ತಿರುವ ನವೀನ್‌ ಗೌಡ ಈ ಸಂಬಂಧ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು, ಅರಕಲಗೂಡು ಶಾಸಕ ಎ. ಮಂಜು ಮೇಲೆ ಬೊಟ್ಟು ಮಾಡಿದ್ದಾನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿರುವ ಮಹಾ ನಾಯಕ ಇವರೇ ಎಂದು ಆರೋಪ ಮಾಡಿದ್ದಾನೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಫೇಸ್‌ಬುಕ್‌ನಲ್ಲಿ ನವೀನ್‌ ಗೌಡ ಹಾಕಿರುವ ಪೋಸ್ಟ್‌ನಲ್ಲಿ ಜೆಡಿಎಸ್‌ ಶಾಸಕ ಎ. ಮಂಜು ವಿರುದ್ಧ ನೇರವಾಗಿ ಆರೋಪ ಮಾಡಿದ್ದಾನೆ. ಆದರೆ, ನವೀನ್‌ ಗೌಡ ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಎಸ್‌ಐಟಿಯವರು ಶೋಧ ಕಾರ್ಯ ನಡೆಸುತ್ತಿರುವುದಾಗಿ ಹೇಳಿಕೊಂಡಿದೆ. ಈ ಮಧ್ಯೆ ನವೀನ್‌ ಗೌಡ ಮಾತ್ರ ರಾಜಾರೋಷವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಅನ್ನು ಹಂಚಿಕೊಳ್ಳತೊಡಗಿದ್ದಾನೆ.

ನವೀನ್‌ ಗೌಡನ ಪೋಸ್ಟ್‌ನಲ್ಲೇನಿದೆ?

ನನಗೆ ಏಪ್ರಿಲ್20 ರಂದು ಸಿಕ್ಕ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಮಂಜು ಅವರಿಗೆ ಕೊಟ್ಟಿದ್ದೇನೆ. ಏಪ್ರಿಲ್ 21 ರಂದು ಅರಕಲಗೂಡು ಮಾರುತಿ ಕಲ್ಯಾಣ ಮಂಟಪದಲ್ಲಿ ಅವರಿಗೆ ನೀಡಿದ್ದೇನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿಡಿಯೊವನ್ನು ವೈರಲ್ ಮಾಡಿದ್ದರ ಹಿಂದೆ ಮಹಾ ನಾಯಕನ ಕೈವಾಡ ಇದೆ ಎಂದು ಹೇಳಿದ್ದರು. ಆ ಮಹಾ ನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಪೋಸ್ಟ್ ಮಾಡಿದ್ದಾನೆ. ಸದ್ಯ ನವೀನ್ ಗೌಡ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.

ಎ. ಮಂಜುಗೂ ಸಂಕಷ್ಟ?

ಈಗಾಗಲೇ ಎಸ್‌ಐಟಿ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಮಧ್ಯೆ ಪೆನ್‌ಡ್ರೈವ್‌ ಅನ್ನು ಹಾಸನ ಜಿಲ್ಲಾದ್ಯಂತ ಹಂಚಿಕೆ ಮಾಡಿರುವ ಆರೋಪವನ್ನು ಹೊತ್ತಿರುವ ನವೀನ್‌ ಗೌಡ ಮಾಡಿರುವ ಪೋಸ್ಟ್‌ ಈಗ ಚರ್ಚೆಗೆ ಎಡೆಮಾಡಿ ಕೊಟ್ಟಿದೆ. ಈತನ ಪೋಸ್ಟ್‌ ಅನ್ನು ಆಧಾರವಾಗಿಟ್ಟುಕೊಂಡು ಎಸ್‌ಐಟಿಯವರು ಮುಂದಿನ ಕ್ರಮವನ್ನು ಕೈಗೊಂಡು ಮಂಜು ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರಾ? ಇಲ್ಲವೇ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಿದ್ದಾರಾ? ಅಥವಾ ಈ ಪೋಸ್ಟ್‌ ಅನ್ನು ನವೀನ್‌ ಗೌಡ ಯಾವ ಐಪಿ ಅಡ್ರೆಸ್‌ನಿಂದ ಮಾಡಿದ್ದಾನೆ ಎಂಬುದನ್ನು ತಿಳಿದುಕೊಂಡು ಶೋಧ ಕಾರ್ಯ ನಡೆಸಲಿದ್ದಾರೋ? ಎಂಬುದನ್ನು ನೋಡಬೇಕಿದೆ.

ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

ಇದು ಸೂಕ್ಷ್ಮ ವಿಷಯವಾಗಿದೆ. ಮಾತನಾಡುವಾಗ ಈ ಬಗ್ಗೆ ಎಚ್ಚರಿಕೆ ಇರಬೇಕು. ಬಾಯಿಗೆ ಬಂದಂತೆ ಹೇಳಿಕೆ ನೀಡಿದರೆ ಕಾನೂನು ಪ್ರಕಾರ ನಿಮ್ಮನ್ನೂ ಕರೆಸಿ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರು ಯಾರೋ, ಏನೇನನ್ನೋ ಹೇಳುತ್ತಾರೆ. ಪ್ರತಿಯೊಂದು ಸಾರ್ವಜನಿಕ ಹೇಳಿಕೆಗಳಿಗೆ ನಾವು ಉತ್ತರ ಕೊಡುವುದಕ್ಕೆ ಆಗಲ್ಲ. ಇದು ಗಂಭೀರವಾದ ಪ್ರಕರಣ ಆಗಿರುವುದರಿಂದ ಇದರ ಇನ್ವೆಸ್ಟಿಗೇಶನ್ ಆಗುವವರೆಗೂ ಕೂಡ ಯಾವುದೇ ಮಾಹಿತಿಯನ್ನು ಸಾರ್ವಜನಿಕ ವಲಯಕ್ಕೆ ತಿಳಿಸಲು ಆಗುವುದಿಲ್ಲ. ಈ ಕೇಸ್‌ ಬಗ್ಗೆ ಸಾರ್ವಜನಿಕರಾಗಲೀ ಅಥವಾ ರಾಜಕೀಯ ನಾಯಕರಗಾಲೀ, ಯಾವುದೇ ಹೇಳಿಕೆಗಳನ್ನು ಕೊಡುವಾಗ ಎಚ್ಚರಿಕೆಯಿಂದ ಕೊಡಬೇಕು. ಈ ವಿಚಾರದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವವರ ಮೇಲೆಯೂ ಕ್ರಮ ಆಗುತ್ತದೆ. ಯಾವುದೇ ರೀತಿಯ ಹೇಳಿಕೆ ಕೊಟ್ಟರೆ 41A ಪ್ರಕಾರ ಅವರನ್ನು ಕೂಡ ವಿಚಾರಣೆಗೆ ಕರೆಯಬೇಕಾಗುತ್ತದೆ. ಎಚ್.ಡಿ. ಕುಮಾರಸ್ವಾಮಿ ಪದೇ ಪದೆ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಈ ವಿಷಯವನ್ನು ಅವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಪ್ರಜ್ವಲ್‌ ಬಂಧನಕ್ಕೆ ಎಸ್‌ಐಟಿ ಟೀಂ ವಿದೇಶಕ್ಕೆ ಹೋಗಲ್ಲ

ಪ್ರಜ್ವಲ್ ರೇವಣ್ಣ ಬಂಧನಕ್ಕಾಗಿ ಎಸ್‌ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗುವ ಅವಕಾಶವಿಲ್ಲ. ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದೇವೆ. ಇಂಟರ್ ಪೋಲ್‌ನವರು ಅವರಿಗೆ ಇನ್ಫಾರ್ಮೇಷನ್ ಕೊಡುತ್ತಾರೆ. ಯಾವ ದೇಶದಲ್ಲಿ ಇದ್ದಾರೆ ಎಂಬುದನ್ನು ಗುರುತಿಸಿ ಸಿಬಿಐಗೆ ಮಾಹಿತಿಯನ್ನು ನೀಡಲಾಗುತ್ತದೆ. ಸಿಬಿಐನವರು ನಮಗೆ ಮಾಹಿತಿಯನ್ನು ನೀಡುತ್ತಾರೆ. ಆಮೇಲೆ ನಮ್ಮ ಏಜನ್ಸಿಗಳಿಗೂ ಈ ಬಗ್ಗೆ ಗೊತ್ತಾಗುತ್ತದೆ ಎಂದು ಡಾ. ಜಿ. ಪರಮೇಶ್ವರ್‌ ವಿವರಿಸಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ನಡೆಸಲಾಗುತ್ತದೆ. ಯಾವುದೇ ವಿಚಾರಗಳನ್ನು ಸಾರ್ವಜನಿಕ ವಲಯದಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಸದ್ಯ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆಯನ್ನು ನಡೆಸುತ್ತಿದೆ. ತನಿಖೆ ನಡೆಯುತ್ತಿರುವಾಗ ನಾನು ಹೇಳಿಕೆ ಕೊಡುವುದಿಲ್ಲ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

ಬಿಜೆಪಿಗೆ ಸೋಲಿನ ಭಯ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸ್ಥಾನ ಬರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ಜಿ. ಪರಮೇಶ್ವರ್‌, ಬಿಜೆಪಿ ನಾಯಕರಿಗೆ ಸೋಲಿನ ಭಯ ಶುರುವಾಗಿದೆ. ಅದಕ್ಕೆ ಪದೇ ಪದೆ ಈ ರೀತಿ ಹೇಳುತ್ತಿದ್ದಾರೆ. ಫಲಿತಾಂಶ ಬಂದ ಮೇಲೆ ನೋಡೋಣ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

3 ದಿನದಿಂದ ಕುಟುಂಬಸ್ಥರನ್ನು ಭೇಟಿಯಾಗದೆ ಜೈಲಲ್ಲಿ ರೇವಣ್ಣ ಪರದಾಟ; ಪತ್ರಿಕೆಯೇ ಸಂಗಾತಿ!

ಮೈಸೂರಿನ ಕೆ.ಆರ್. ನಗರದ ಸಂತ್ರಸ್ತೆಯ ಅಪಹರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ (HD Revanna) ಅವರು ಕಳೆದ ಮೂರು ದಿನಗಳಿಂದಲೂ ಕುಟುಂಬಸ್ಥರನ್ನು ಭೇಟಿಯಾಗದೆ ಪರದಾಡುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾನುವಾರ (ಮೇ 12) ಬೆಳಗ್ಗೆ ವೆಜ್‌ ಪಲಾವ್‌ ಸೇವಿಸಿದ ರೇವಣ್ಣ, ಕಾಫಿ ಕುಡಿದು, ಪೇಪರ್‌ ಓದಿದ್ದಾರೆ. ಕುಟುಂಬಸ್ಥರು, ಆಪ್ತರನ್ನು ಭೇಟಿಯಾಗದ ಕಾರಣ ಪತ್ರಿಕೆಯೇ ಅವರಿಗೆ ಸಂಗಾತಿಯಾದಂತಾಗಿದೆ. ಇದರ ಮಧ್ಯೆಯೇ, ರೇವಣ್ಣ ಅವರಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಎಚ್‌.ಡಿ.ರೇವಣ್ಣ ಅವರು ಯಾರನ್ನೂ ಭೇಟಿಯಾಗಲು ಸಾಧ್ಯವಾಗಿಲ್ಲ. ಇದರಿಂದಾಗಿ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಜೈಲಿನ ಬ್ಯಾರಕ್‌ನಲ್ಲಿ ಕೆಲ ಹೊತ್ತು ವಾಕ್‌ ಮಾಡಿದ ರೇವಣ್ಣ, ಬಳಿಕ ದೀರ್ಘ ಅವಧಿಗೆ ಪೇಪರ್‌ ಓದುತ್ತಲೇ ಕುಳಿತಿದ್ದರು ಎಂದು ಜೈಲಿನ ಮೂಲಗಳು ಮಾಹಿತಿ ನೀಡಿವೆ. ರೇವಣ್ಣ ಅವರು ಸೋಮವಾರ (ಮೇ 13) ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಅವರು ಪರಪ್ಪನ ಅಗ್ರಹಾರದಲ್ಲೇ ಇದ್ದಾರೆ.

ಲೈಂಗಿಕ ದೌರ್ಜನಕ್ಕೀಡಾದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಇದಾದ ಬಳಿಕ ಅವರು ಸಲ್ಲಿಸಿದ ರೆಗ್ಯುಲರ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌, ಜಾಮೀನು ನೀಡದೆ ಮೇ 13ಕ್ಕೆ ವಿಚಾರಣೆ ಮುಂದೂಡಿತ್ತು. ಹಾಗಾಗಿ, ಸೋಮವಾರ ಮತ್ತೆ ವಿಚಾರಣೆ ನಡೆಯಲಿದ್ದು, ರೇವಣ್ಣ ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

ಭವಾನಿ ರೇವಣ್ಣಗೆ 2ನೇ ನೋಟಿಸ್‌

ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೂ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಎರಡನೇ ನೋಟಿಸ್‌ ಜಾರಿ ಮಾಡಿದೆ. ಮೊದಲ ನೋಟಿಸ್ ಉತ್ತರಿಸದ ಹಿನ್ನೆಲೆಯಲ್ಲಿ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ. ರೇವಣ್ಣ ಮೇಲೆ ಕೇಳಿ ಬಂದಿರುವ ಅಪಹರಣ ಪ್ರಕರಣದಲ್ಲಿ ಕೇಸ್‌ನಲ್ಲಿ ಕುಮ್ಮಕ್ಕು ಕೊಟ್ಟ ಆರೋಪವನ್ನು ಭವಾನಿ ರೇವಣ್ಣ ಹೊತ್ತಿದ್ದಾರೆ. ಈ ಸಂಬಂಧ ಹಲವಾರು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ಸಿದ್ಧವಾಗಿದೆ. ಆದರೆ, ಭವಾನಿ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಭವಾನಿ ವಿಚಾರಣೆಗೆ ಹಾಜರಾಗದಿದ್ದರೆ ಎಸ್‌ಐಟಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ.

Continue Reading

ಕರ್ನಾಟಕ

MLC Election: ಪರಿಷತ್‌ ಚುನಾವಣೆಗೂ ಮುನ್ನ ಒಪಿಎಸ್‌ ಮರು ಜಾರಿಗೆ ಮುಂದಾಯ್ತಾ ಕಾಂಗ್ರೆಸ್‌ ಸರ್ಕಾರ?

MLC Election: ವಿಧಾನ ಸಭಾ ಚುನಾವಣೆ ಸಮಯದಲ್ಲಿ ಒಪಿಎಸ್‌ ಜಾರಿ ಮಾಡುವ ಭರವಸೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ನೀಡಿತ್ತು. ಇದೀಗ ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಒಪಿಎಸ್ ಜಾರಿ ಮಾಡಲು ಚಿಂತನೆ ಮಾಡುತ್ತಿದೆ ಎನ್ನಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ ನಾಯಕರು ಕೂಡ ಹಳೆಯ ಪಿಂಚಣಿ ಯೋಜನೆ ಮರು ಜಾರಿ ಮಾಡಲು ಸಿಎಂ ಹಾಗೂ ಡಿಸಿಎಂಗೆ ಮನವಿ ಮಾಡುತ್ತಿದ್ದಾರೆ.

VISTARANEWS.COM


on

Koo

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಗೆ (MLC Election) ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್‌ ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂರು ಶಿಕ್ಷಕರ ಕ್ಷೇತ್ರ ಮತ್ತು ಮೂರು ಪದವೀಧರ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿದ್ದು, ಚುನಾವಣೆಯಲ್ಲಿ (Legislative Council Elections) ಆರೂ ಸ್ಥಾನಗಳನ್ನೂ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್‌ ರೂಪಿಸುತ್ತಿದೆ. ಈ ನಡುವೆ ಮತದಾರರನ್ನು ಸೆಳೆಯಲು ರಾಜ್ಯ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯಾದ ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಜಾರಿ ಮಾಡಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ವಿಧಾನ ಸಭಾ ಚುನಾವಣೆ ಸಮಯದಲ್ಲಿ ಒಪಿಎಸ್‌ ಜಾರಿ ಮಾಡುವ ಭರವಸೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ನೀಡಿತ್ತು. ಇದೀಗ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಪೂರ್ವ ಭಾವಿ ಸಭೆಯಲ್ಲೂ ಒಪಿಎಸ್ (Old Pension Scheme) ಜಾರಿ ಬಗ್ಗೆ ಚರ್ಚೆಯಾಗಿರುವುದು ಕಂಡುಬಂದಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪರಿಷತ್‌ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್, ಕೆ.ಕೆ. ಮಂಜುನಾಥ್, ಚಂದ್ರಶೇಖರ ಪಾಟೀಲ್, ಶ್ರೀನಿವಾಸ ಹಾಗೂ ರಾಮೋಜಿ,‌ ಮರಿತ್ತಿಬ್ಬೇಗೌಡ ಭಾಗಿಯಾಗಿದ್ದರು. ಈ ವೇಳೆ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ, ತನ್ವೀರ್ ಸೇಠ್, ವಸಂತ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | 7th Pay Commission: 7ನೇ ವೇತನ ಆಯೋಗ; ವರದಿ ಜಾರಿಯಾದ್ರೆ ರಾಜ್ಯ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಲಿದೆ?

ಒಪಿಎಸ್ ಮರು ಜಾರಿ ಮಾಡಿದ್ರೆ ಗೆಲುವು ಖಚಿತ

ರಾಜ್ಯದಲ್ಲಿ ಒಪಿಎಸ್ ಮರು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರೆ ಗೆಲುವು ಖಚಿತ. ಹೀಗಾಗಿ ಒಪಿಎಸ್ ಬಗ್ಗೆ ಸರ್ಕಾರದ ನಿಲುವಿನ ಬಗ್ಗೆ ನೌಕರರಿಗೆ ಮನವರಿಕೆ ಮಾಡಿಕೊಡಿ ಎಂದು ಸಿಎಂ ಬಳಿ ಆಯನೂರು ಮಂಜುನಾಥ್ ಸೇರಿ ಕೈ ಅಭ್ಯರ್ಥಿಗಳು ಸಭೆಯಲ್ಲಿ ಮನವಿ ಮಾಡಿದ್ದಾರೆ. ಹೀಗಾಗಿ ನೌಕರರ ಮತದಾರರನ್ನು ಸೆಳೆಯಲು ಒಪಿಎಸ್‌ ಜಾರಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಲೋಕಸಭಾ ಚುನಾವಣೆ‌ ಬಳಿಕ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್‌ ಸಜ್ಜಾಗಿದ್ದು, 6 ವಿಧಾನ ಪರಿಷತ್ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಕೈ ಅಭ್ಯರ್ಥಿಗಳ ಪಟ್ಟಿ

  1. ನೈಋತ್ಯ ಶಿಕ್ಷಕರ ಕ್ಷೇತ್ರ – ಕೆ.ಕೆ. ಮಂಜುನಾಥ್
  2. ದಕ್ಷಿಣ ಶಿಕ್ಷಕರ ಕ್ಷೇತ್ರ – ಮರತಿಬ್ಬೇಗೌಡ
  3. ಆಗ್ನೇಯ ಶಿಕ್ಷಕರ ಕ್ಷೇತ್ರ – ಡಿ.ಟಿ.ಶ್ರೀನಿವಾಸ್
  4. ಈಶಾನ್ಯ ಪದವೀಧರ ಕ್ಷೇತ್ರ – ಡಾ.ಚಂದ್ರಶೇಖರ ಪಾಟೀಲ
  5. ನೈಋತ್ಯ ಪದವೀಧರ ಕ್ಷೇತ್ರ – ಆಯನೂರು ಮಂಜುನಾಥ್
  6. ಬೆಂಗಳೂರು ಪದವೀಧರ ಕ್ಷೇತ್ರ – ರಾಮೋಜಿ

ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ ವೇಳಾಪಟ್ಟಿ

ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕ: ಮೇ 16, 2024
ನಾಮಪತ್ರ ಪರಿಶೀಲನೆ: ಮೇ 17, 2024
ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: ಮೇ 20, 2024
ಮತದಾನ: ಜೂನ್‌ 03, 2024
ಫಲಿತಾಂಶ: ಜೂನ್‌ 06, 2024

Continue Reading
Advertisement
IPL 2024
ಐಪಿಎಲ್ 20249 mins ago

IPL 2024: ರಾಜಸ್ಥಾನ ವಿರುದ್ಧ ಗೆದ್ದು ಬೀಗಿದ ಚೆನ್ನೈ; ಪ್ಲೇಆಫ್‌ ಆಸೆ ಜೀವಂತ, ಆರ್‌ಸಿಬಿಗೆ ಹೆಚ್ಚಿದ ಒತ್ತಡ

French Yoga Teacher
ಮಹಿಳೆ35 mins ago

French Yoga Teacher: ಹಸಿರು ಸೀರೆ ಧರಿಸಿ ಪದ್ಮಶ್ರೀ ಸ್ವೀಕರಿಸಿದ 101 ವರ್ಷದ ವಿದೇಶಿ ಯೋಗ ಶಿಕ್ಷಕಿ!

Vande Bharat Express
ದೇಶ44 mins ago

Vande Bharat Express: ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರ ಪ್ರಾರಂಭ

ಕರ್ನಾಟಕ54 mins ago

Vijayapura News: ಮೀನುಗಳ ಮಾರಣ ಹೋಮ; ಬಿಸಿಲ ತಾಪಕ್ಕೆ 17 ಸಾವಿರ ಮತ್ಸ್ಯಗಳ ಸಾವು

Prajwal Revanna Case I was never kidnapped and son has made a false complaint Video of victim goes viral
ಕ್ರೈಂ54 mins ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Adhir Ranjan
ದೇಶ1 hour ago

Adhir Ranjan: ಅಂಬಾನಿ ದುಡ್ಡು ಕೊಟ್ಟರೆ ನಾವೂ ಸುಮ್ಮನಾಗುತ್ತೇವೆ ಎಂದ ಕಾಂಗ್ರೆಸ್‌ ನಾಯಕ; ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 hour ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

felicitation programme for SSLC student Harshita D M who got 2nd place in the state
ತುಮಕೂರು2 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ 2ನೇ ಸ್ಥಾನ ಪಡೆದ ಹರ್ಷಿತಾಗೆ ಸನ್ಮಾನ

130 crore crop compensation amount paid to Vijayanagara district says DC m S Diwakar
ವಿಜಯನಗರ2 hours ago

Vijayanagara News: ವಿಜಯನಗರ ಜಿಲ್ಲೆಗೆ 130 ಕೋಟಿ ರೂ. ಬೆಳೆ ಪರಿಹಾರ: ಡಿಸಿ

Prajwal Revanna Case Naveen Gowda post against MLA A Manju
ರಾಜಕೀಯ2 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast Heavy rain in chikkmagalur
ಮಳೆ1 hour ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ2 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ5 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ7 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ14 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

ಟ್ರೆಂಡಿಂಗ್‌