MLA Muniratna: ಶಾಸಕ ಮುನಿರತ್ನಗೆ ಬೇಲ್ ಸಿಗುತ್ತಾ ಅಥವಾ ಜೈಲೇ ಗಟ್ಟಿಯಾಗುತ್ತಾ? ನಾಳೆಗೆ ಜಾಮೀನು ಅರ್ಜಿ ವಿಚಾರಣೆ - Vistara News

ಬೆಂಗಳೂರು

MLA Muniratna: ಶಾಸಕ ಮುನಿರತ್ನಗೆ ಬೇಲ್ ಸಿಗುತ್ತಾ ಅಥವಾ ಜೈಲೇ ಗಟ್ಟಿಯಾಗುತ್ತಾ? ನಾಳೆಗೆ ಜಾಮೀನು ಅರ್ಜಿ ವಿಚಾರಣೆ

MLA Muniratna : ಜಾತಿನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾದ ನಂತರ ನೋಟಿಸ್ ಕೂಡ ನೀಡದೆ ಮುನಿರತ್ನರನ್ನು ಬಂಧನ ಮಾಡಲಾಗಿದೆ. ಆದ್ದರಿಂದ ಮಧ್ಯಂತರ ಜಾಮೀನು ನೀಡುವಂತೆ ಶಾಸಕರ ಪರ ವಕೀಲರು ಮನವಿ ಮಾಡಿದರು. ವಾದ-ವಿವಾದ ಆಲಿಸಿದ ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

VISTARANEWS.COM


on

Court sends Mla Munirathna to judicial custody
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜಾತಿನಿಂದನೆ ಹಾಗೂ ಜೀವ ಬೆದರಿಕೆ ಆರೋಪದಲ್ಲಿ ಸಿಲುಕಿರುವ ಮಾಜಿ ಸಚಿವ ಕಂ ಶಾಸಕ ಮುನಿರತ್ನ (MLA Muniratna) ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಮಂಗಳವಾರ ಮುನಿರತ್ನ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದರು. 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಧೀಶ ಸಂತೋಷ್ ಗಜಾನನ ಭಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜುಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಡಿ ಬಂಧಿತನಾಗಿದ್ದ ಮಾಜಿ ಸಚಿವ ಮುನಿರತ್ನ ಈಗ ಜೈಲು ಪಾಲಾಗಿದ್ದಾರೆ. ಶಾಸಕ ಮುನಿರತ್ನ ವಿರುದ್ಧ ಜಾತಿನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಿತ್ತು.‌ ಪ್ರಕರಣ ಸಂಬಂಧ ಕಳೆದ ಎರಡು ದಿನಗಳಿಂದ ಮುನಿರತ್ನ ಅವರನ್ನು ವಿಚಾರಣೆ ನಡೆಸಿದ್ದ ಪೊಲೀಸರು ಮಂಗಳವಾರ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಹಾಜರು ಪಡಿಸಿದ್ದರು.

ಬಳಿಕ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುನಿರತ್ನ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು. ಮುನಿರತ್ನ ಪರ ವಕೀಲರು ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಮಧ್ಯಾಹ್ನ ಮೂರು ಗಂಟೆಗೆ ಕೋರ್ಟ್ ಅರ್ಜಿ ವಿಚಾರಣೆಯನ್ನು ನಡೆಸಿತು. ಈ ವೇಳೆ ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಹಾಜರಾಗಿ ವಾದ ಮಂಡಿಸಿದರು.

ಶಾಸಕ ಮುನಿರತ್ನ ಶನಿವಾರ ತಿರುಪತಿಗೆ ಹೊರಟಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾದ ಕೂಡಲೇ ತರಾತುರಿಯಲ್ಲಿ ಬಂಧನ ಮಾಡಲಾಗಿದೆ. ಆರೋಪಿಗೆ 41ಎ ಅಡಿಯಲ್ಲಿ ನೋಟಿಸ್ ನೀಡಬೇಕಿತ್ತು. ಆದರೆ ಪ್ರಕರಣ ದಾಖಲಾದ ನಂತರ ನೋಟಿಸ್ ಕೂಡ ನೀಡದೆ ಬಂಧನ ಮಾಡಲಾಗಿದೆ. ಆದ್ದರಿಂದ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ಸೆ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಬುಧವಾರ ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆ

ಬಳಿಕ ಸರ್ಕಾರದ ಪರ ವಕೀಲ ಪ್ರದೀಪ್ ಅವರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಒಂದು ದಿನ ಕಾಲಾವಕಾಶ ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದರು. ಎರಡು ಕಡೆ ವಾದ- ಪ್ರತಿವಾದ ಆಲಿಸಿದ ಕೋರ್ಟ್ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು. ಕೋರ್ಟ್ ಆದೇಶ ಪಡೆದ ಪೊಲೀಸರು ಮುನಿರತ್ನರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದರು‌. ಇದಕ್ಕೂ ಮೊದಲು ಶಾಸಕ ಮುನಿರತ್ನರನ್ನು ಪೊಲೀಸರು ಕೋರ್ಟ್‌ನಿಂದ ನೇರವಾಗಿ ಬೌರಿಂಗ್ ಆಸ್ಪತ್ರೆಗೆ ಕರೆತಂದರು. ಜನರಲ್ ಚೆಕಪ್ ಮಾಡಿಸಲು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋದರು. ಜಾತಿ ನಿಂದನೆ ಮತ್ತು ಬೆದರಿಕೆ ಆಡಿಯೋದಿಂದ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ. ಸದ್ಯ ನಾಳೆ ಬುಧವಾರ ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಬೇಲ್ ಸಿಗುತ್ತಾ, ಅಥವಾ ಜೈಲೇ ಗಟ್ಟಿ ಆಗುತ್ತಾ ಕಾದು ನೋಡಬೇಕಿದೆ.

ಕೇಳದೆ ನೋಡದೆ ಕಾಮೆಂಟ್‌ ಮಾಡಲ್ಲ- ಸುಮಲತಾ

ಮುನಿರತ್ನ ಆಡಿಯೋ ವಿಚಾರವಾಗಿ ನಟಿ ಸುಮಲತಾ ಪ್ರತಿಕ್ರಿಯಿಸಿದರು. ನಾನು ಕೇಳದೆ, ನೋಡದೆ ಇರುವುದರ ಬಗ್ಗೆ ಕಾಮೆಂಟ್‌ ಮಾಡುವುದು ಸರಿಯಲ್ಲ.‌ ಅದರ ಬಗ್ಗೆ ಮಾಹಿತಿ ತಿಳಿದುಕೊಂಡು ಮಾತಾಡುತ್ತೇನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Kiccha Sudeep: ಬಿಗ್‌ಬಾಸ್‌ಗೆ ಕಿಚ್ಚ ಸುದೀಪ್ ವಿದಾಯ; ಇದೊಂದೆ ರೀಸನ್‌ಗೆ ಹೊರಬಂದ್ರಾ ಬಾದ್‌ ಶಾ

Kiccha Sudeep: ಕಿಚ್ಚ ಸುದೀಪ್‌ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳುತ್ತಿದ್ದಾರೆ. ಬಿಗ್‌ಬಾಗ್‌ ಸೀಸನ್‌ 11 ನನ್ನ ಕಡೆಯ ನಿರೂಪಣೆ ಆಗಿದೆ ಎಂದು ಎಕ್ಸ್‌ ಮಾಡಿದ್ದಾರೆ. ಇಷ್ಟಕ್ಕೂ ಸುದೀಪ್‌ ಹೀಗೆ ಹೇಳಲು ಅಸಲಿ ಕಾರಣ ಏನು. ಅದ್ಯಾವ ರೀಸನ್‌ಗೆ ಬಿಗ್‌ಬಾಸ್‌ ಮನೆಯಿಂದ ಹೊರ ಬರುತ್ತಿದ್ದಾರೆ?

VISTARANEWS.COM


on

By

This will be my last season as a host for BBK By Kichcha Sudeepa
Koo

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗುವ ಮೊದಲೇ ಕಿಚ್ಚ ಸುದೀಪ್‌ (Kiccha Sudeep) ಈ ಬಾರಿ ನಿರೂಪಣೆ ಮಾಡುವುದಿಲ್ಲ ಎನ್ನಲಾಗಿತ್ತು. ಆದರೆ ವಾಪಸ್‌ ಅವರ ಸಾರಥ್ಯದಲ್ಲೇ ಬಿಗ್‌ ಬಾಸ್‌ ಸೀಸನ್‌ 11 ಅದ್ಧೂರಿಯಾಗಿ ಆರಂಭಗೊಂಡಿತ್ತು. ಆದರೆ ಇದೇ ಬಿಗ್‌ಬಾಗ್‌ ವೀಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಸುದೀಪ್‌ ಶಾಕ್‌ ಕೊಟ್ಟಿದ್ದಾರೆ. ಬಿಗ್​ಬಾಸ್​ಗೆ ಬಾದ್ ಶಾ ಕಿಚ್ಚ ಸುದೀಪ್ ವಿದಾಯ ಹೇಳುತ್ತಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಕನ್ನಡ ಕಿರುತೆರೆಯ ಬಿಗೆಸ್ಟ್‌ ರಿಯಾಲಿಟಿ ಶೋ ಬಿಗ್‌ಬಾಸ್ 11ನೇ ಸೀಸನ್‌ಗೆ (Bigg Boss Kannada) ಕಿಕ್ ಸ್ಟಾರ್ಟ್ ಸಿಕ್ಕಿದೆ. ಕನ್ನಡ ಟೆಲಿವಿಷನ್ ಲೋಕದಲ್ಲಿ ದೊಡ್ಮನೆಯ ಕಲರವ ಶುರುವಾಗಿದೆ. ಭಿನ್ನ -ವಿಭಿನ್ನ ಹದಿನೇಳು ಸ್ಪರ್ಧಿಗಳು ಈ ಬಾರಿಯ ಕನ್ನಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟು ಗೇಮ್‌ ಆಡ್ತಿದ್ದಾರೆ. ಇಷ್ಟು ದಿನದಿಂದ ಒಂದು ಲೆಕ್ಕ ಈಗಿನಿಂದ ಇನ್ನೊಂದು ಲೆಕ್ಕವನ್ನು ಬಿಗ್ ಬಾಸ್ ಶುರುಮಾಡಿದ್ದು, ಸ್ವರ್ಗ- ನರಕದ ಆಟವಾಡುತ್ತಿರುವಾಗಲೇ ಕಿಚ್ಚ ಸುದೀಪ್‌ ಶಾಕ್‌ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ಬಿಗ್‌ ಬಾಸ್‌ 11 ನನ್ನ ಕೊನೆಯ ಸೀಸನ್‌ ಎಂದು ಹೇಳಿದ್ದಾರೆ.

ಬಿಗ್‌ಬಾಸ್‌ ಸೀಸನ್‌ 11ಕ್ಕೂ ಉತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು, ಈ ಕಾರ್ಯಕ್ರಮಕ್ಕೆ ಹಾಗೂ ನನಗೆ ತೋರಿದ ಪ್ರೀತಿಗೆ ಇದು ಸಾಕ್ಷಿಯಾಗಿದೆ. ಒಟ್ಟಿಗೆ 10 + 1 ಸೀಸನ್‌ ಸೇರಿ 11 ವರ್ಷಗಳ ಉತ್ತಮ ಪ್ರಯಾಣವಾಗಿದೆ. ಬಿಗ್‌ಬಾಸ್‌ನ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ಈ ನಿರ್ಧಾರವನ್ನು ಕಲರ್ಸ್‌ ಸಂಸ್ಥೆ ಮತ್ತು ಇಷ್ಟು ವರ್ಷಗಳು ಬಿಗ್‌ಬಾಸ್‌ನನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ. ಈ ಸೀಸನ್‌ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಸಹ ನಿಮ್ಮೆಲ್ಲರನ್ನೂ ಅತ್ಯುತ್ತಮವಾಗಿ ರಂಜಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಸುದೀಪ್ ಬಿಗ್ ಬಾಸ್ ತೊರೆಯುತ್ತಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸುದೀಪ್‌ ಟ್ವೀಟ್‌ ಮಾಡಿರುವುದು ಎಲ್ಲೆಡೆ ವೈರಲ್‌ ಆಗಿದೆ. ಹಿಂದೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚ ಸುದೀಪ್‌ ಬಿಗ್‌ಬಾಗ್‌ ಕಾರ್ಯಕ್ರಮದಿಂದ ಹೊರ ಬರುತ್ತಾರೆ ಎನ್ನಲಾಗಿತ್ತು. ಅವರ ಜಾಗಕ್ಕೆ ನಟ ರಮೇಶ್ ಅರವಿಂದ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಬ್ಬರಲ್ಲಿ ಒಬ್ಬರು ಹೋಸ್ಟ್‌ ಮಾಡಲಿದ್ದಾರೆ ಎನ್ನಲಾಗಿತ್ತು. ರಮೇಶ್‌ ಅರವಿಂದ ವೀಕೆಂಡ್ ವಿತ್ ರಮೇಶ್ ಮತ್ತು ಕೋಟ್ಯಾಧಿಪತಿ, ಮಹಾನಟಿ ಶೋ ಮೂಲಕ ವೀಕ್ಷಕರನ್ನು ತಲುಪಿದ್ದರು.

Continue Reading

ಬೆಂಗಳೂರು

BBMP : ಬೆಂಗಳೂರು ಕಸ ವಿಲೇವಾರಿ ಮಾಡಲು 30 ವರ್ಷಕ್ಕೆ ಗುತ್ತಿಗೆ ನೀಡಲು ಸರ್ಕಾರದಿಂದ ಗ್ರೀನ್ ಸಿಗ್ನಲ್!

BBMP : ಬೆಂಗಳೂರು ಕಸ ವಿಲೇವಾರಿ ಮಾಡಲು 30 ವರ್ಷಕ್ಕೆ ಗುತ್ತಿಗೆ ನೀಡಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

VISTARANEWS.COM


on

By

BBMP
Koo

ಬೆಂಗಳೂರು: ಬೆಂಗಳೂರು ಕಸ ವಿಲೇವಾರಿ ಮಾಡಲು 30 ವರ್ಷಕ್ಕೆ ಗುತ್ತಿಗೆ ನೀಡಲು ರಾಜ್ಯ ಸರ್ಕಾರದಿಂದ (BBMP) ಗ್ರೀನ್ ಸಿಗ್ನಲ್ ಸಿಕ್ಕಿದೆ. ಬೃಹತ್‌ ಬೆಂಗಳೂರು ಪಾಲಿಕೆ ಕಳೆದ ವಾರ ಮುಂದಿನ 30 ವರ್ಷದ ಗುತ್ತಿಗೆ ಸಂಬಂಧ ತ್ಯಾಜ್ಯ ವಿಲೇವಾರಿ ಡ್ರಾಫ್ಟ್ ಸಲ್ಲಿಸಿತ್ತು. ಇದೀಗ ಪಾಲಿಕೆ ಕಾರ್ಯ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ 30 ವರ್ಷಕ್ಕೆ ಕಸ ವಿಲೇವಾರಿ ಗುತ್ತಿಗೆ ಯೋಜನೆ ಬಹುದೊಡ್ಡ ಭ್ರಷ್ಟಾಚಾರ ಎಂದಿದ್ದರು. ಇದೀಗ ಯೋಜನೆಗೆ ಐದೇ ತಿಂಗಳಲ್ಲಿ ಒಪ್ಪಿಗೆ ನೀಡಿ ರಾಜ್ಯ ಸರ್ಕಾರ ಜಾರಿಗೆ ಸೂಚಿಸಿದೆ. ಈ ಮೂಲಕ ನಗರದ ಕಸ ವಿಲೇವಾರಿ ಪ್ರಕ್ರಿಯೆಯಲ್ಲಿ ಬಿಬಿಎಂಪಿ ಮಹತ್ವದ ಹೆಜ್ಜೆ ಇಟ್ಟಿದೆ.

ಬಿಬಿಎಂಪಿ ಕಸ ಡ್ರಾಫ್ಟ್‌ನಲ್ಲಿ ಏನೇನಿದೆ?

  • -ಬೆಂಗಳೂರಿನ ಕಸ ವಿಲೇವಾರಿ ಗುತ್ತಿಗೆ 30 ವರ್ಷಕ್ಕೆ ಅನ್ವಯ
  • -ಒಂದೇ ಕಂಪೆನಿಗೆ 30 ವರ್ಷಕ್ಕೆ ಕಸ ವಿಲೇವಾರಿ ಟೆಂಡರ್
  • -30 ವರ್ಷದ ಗುತ್ತಿಗೆ ಪಡೆಯಲು ಓಪನ್ ಬಿಡ್ ನಡೆಸಲಿರುವ ಪಾಲಿಕೆ
  • -ಅತಿ ಕಡಿಮೆಗೆ ಬಿಡ್ ಮಾಡುವ ಸಂಸ್ಥೆಗೆ ಗುತ್ತಿಗೆ ನೀಡಲು ಪಾಲಿಕೆ ನಿರ್ಧಾರ
  • -ಎಂಟು ವಲಯದಲ್ಲಿ ಒಬ್ಬ/ಕಂಪೆನಿಗೆ ಕಸ ವಿಲೇವಾರಿ ಹೊಣೆ
  • -ಮನೆಯಿಂದ ಕಸ ಸಂಗ್ರಹ, ಸಾರಿಗೆ ಹಾಗೂ ವಿಲೇವಾರಿ ಎಲ್ಲವೂ ಗುತ್ತಿಗೆದಾರರದ್ದೇ ಹೊಣೆ
  • -ಪಾಲಿಕೆ ವಾಹನಗಳು, ಪೌರಕಾರ್ಮಿಕರು ಬಳಸಲೇಬೇಕು ಎನ್ನುವ ಒತ್ತಡವಿಲ್ಲ
  • -ಬಳಸಿದರೆ ಅದರ ಸಂಪೂರ್ಣ ನಿರ್ವಹಣೆ ಕೂಡ ಅದೇ ಕಂಪೆನಿಯದ್ದು
  • -ಸದ್ಯ ಪ್ರತಿ ದಿನ ನಗರದಲ್ಲಿ 5 ಸಾವಿರ ಅಧಿಕ ಟನ್ ಕಸ ಉತ್ಪತ್ತಿ
  • -5 ಸಾವಿರ ಟನ್ ಲೆಕ್ಕದಲ್ಲಿ ಸದ್ಯ ವಾರ್ಷಿಕವಾಗಿ 480 ಕೋಟಿ ವೆಚ್ಚ
  • -ಈ ಹೊಸ ಯೋಜನೆಯಲ್ಲಿ 6,566 ಟನ್ ಲೆಕ್ಕದಲ್ಲಿ ಟೆಂಡರ್ ನೀಡಲು ಮುಂದು
  • -ಇದರ ಪ್ರಕಾರ ವಾರ್ಷಿಕವಾಗಿ 730 ಕೋಟಿ ನೀಡಲಿರುವ ಪಾಲಿಕೆ
  • -ಪ್ರತಿ ವರ್ಷ ಮೂಲ ವಿಲೇವಾರಿ ಬೆಲೆಗೆ 10% ನಷ್ಟು ಏರಿಕೆ
  • -ಸದ್ಯ ದಿನಕ್ಕೆ 1.80 ಕೋಟಿ ಕಸ ವಿಲೇವಾರಿಗೆ ಖರ್ಚು
  • -ಹೊಸ ಯೋಜನೆ ಪ್ರಕಾರ 30 ವರ್ಷಕ್ಕೆ 33 ಕೋಟಿ ಪ್ರತಿ ದಿನ ವೆಚ್ಚ
  • -ಅದರಂತೆ 30 ವರ್ಷಕ್ಕೆ ವಾರ್ಷಿಕವಾಗಿ 12 ಸಾವಿರ ಕೋಟಿ ವೆಚ್ಚ ಮಾಡಲಿರುವ ಬಿಬಿಎಂಪಿ
  • -ಹೊಸ ಪ್ರಸ್ತಾವನೆ ಪ್ರಕಾರ ಪಾಲಿಕೆ ಬೊಕ್ಕಸಕ್ಕೆ ಸುಮಾರು 40% ಹೆಚ್ಚುವರಿ ಹೊರೆ

ಬಿಬಿಎಂಪಿ‌ ಆಯುಕ್ತ ತುಷಾರ್ ಗಿರಿನಾಥ್ ಈ ಸಂಬಂಧ ಮಾಹಿತಿ ನೀಡಿದ್ದಾರೆ. 30 ವರ್ಷದ ಕಸದ ಟೆಂಡರ್ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ನಾವು ಈ ಬಗ್ಗೆ ಸವಿಸ್ತಾರವಾದ ಡ್ರಾಫ್ಟ್ ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದವಿ. ಇಂದು ಅಧಿಕೃತವಾಗಿ ಸಹಿಯಾಗಿ ವಾಪಸ್ ನಮ್ಮ‌ ಕೈ ಸೇರಲಿದೆ. ಮುಂದಿ‌ನ 30 ವರ್ಷದ ಕಸ ವಿಲೇವಾರಿ ಸಂಪೂರ್ಣ ಮಾಹಿತಿ ಡ್ರಾಫ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಶೀಘ್ರವೇ ಓಪನ್ ಟೆಂಡರ್ ಮಾಡಲು ಮುಂದಾಗುತ್ತೇವೆ. ಕಾನೂನು ಪ್ರಕಾರವೇ ಟೆಂಡರ್‌ಗೆ ಬಿಡ್ ನಡೆಸಿ ಗುತ್ತಿಗೆ ನೀಡುತ್ತೇವೆ ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ಜಿಟಿ ಜಿಟಿ ಮಳೆಗೆ ಬೆಂಗಳೂರು ಕೂಲ್‌ ಕೂಲ್‌; ಮುಂದಿನ 4 ದಿನಗಳು ವರ್ಷಧಾರೆ

Karnataka Rain : ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯ ಸಿಂಚನವಾಗಲಿದೆ. ಸೋಮವಾರ ಬೆಳಗಿನಂದಲೇ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ವಾತಾವರಣ ಕೂಲ್‌ ಆಗಿದೆ.

VISTARANEWS.COM


on

By

Karnataka Rain
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಜಿಟಿ ಜಿಟಿ ಮಳೆಯಾಗುತ್ತಿದ್ದು, ವಾತಾವರಣ ಕೂಲ್‌ ಆಗಿದೆ. ಮಲ್ಲೇಶ್ವರಂ, ಶಾಂತಿನಗರ, ಶಿವಾಜಿನಗರ, ಹೆಬ್ಬಾಳ, ಜಯನಗರ ಸೇರಿದಂತೆ ನಸುಕಿನ ಜಾವದಿಂದ ಮಳೆ ಶುರುವಾಗಿದೆ. ಹಲವೆಡೆ ಮಂಜಿ ಹೊದಿಕೆ ಇದ್ದು, ದಿನವಿಡಿ ಇದೇ ರೀತಿಯ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. ಮುಂದಿನ ನಾಲ್ಕು ದಿನ ಬೆಂಗಳೂರಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 17ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಕುರಿತು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.

Road Accident in chikkmagaluru
Road Accident in chikkmagaluru

ಮಳೆಗೆ ರಸ್ತೆ ತಿರುವಿನಲ್ಲಿ ಟಿಟಿ ವಾಹನ ಪಲ್ಟಿ

ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಂಪಿಗೆಖಾನ್ ಬಳಿ ಘಟನೆ ನಡೆದಿದೆ. ಟಿಟಿ ವಾಹನದಲ್ಲಿ ಬೆಂಗಳೂರಿನಿಂದ ಹೊರನಾಡಿಗೆ ಬಂದಿದ್ದರು. ಅನ್ನಪೂರ್ಣೇಶ್ವರಿ ದರ್ಶನ ಮುಗಿಸಿ ಹೊರಟಾಗ ಅವಘಡ ಸಂಭವಿಸಿದೆ. 15 ಜನ ಪ್ರಯಾಣಿಕರಲ್ಲಿ 9 ಜನರಿಗೆ ಗಾಯವಾಗಿದ್ದು ಕಳಸ, ಮೂಡಿಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಳೆ ಹಾಗೂ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರದಲ್ಲೂ ಮಳೆಯಾಟ

ಬಂಗಾಳ ಕೊಲ್ಲಿ ಸೈಕ್ಲೋನ್ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಇನ್ನೂ ಮೂರು ದಿನಗಳ‌ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನ, ಆಂಧ್ರಪ್ರದೇಶದ ಗಡಿಗೆ ಹೊಂದಿರುವ ಕೋಲಾರದಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಮಳೆ ಹೆಚ್ಚಾದರೆ ತೋಟಗಾರಿಕ ಬೆಳೆಗಳಾದ ಹೂ , ಬಿನ್ಸ್ ,ಟೊಮ್ಯಾಟೊ, ಜೋಳಕ್ಕೆ ಹಾನಿಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Murder Case : ಕುಡಿದ ಅಮಲಿನಲ್ಲಿ ಬಾಟೆಲ್‌ನಿಂದ ಸ್ನೇಹಿತನ ಕುತ್ತಿಗೆ ಚುಚ್ಚಿ‌ ಕೊಲೆ ಮಾಡಿದ ಕುಚಿಕು ಗೆಳೆಯ

Murder Case : ಕುಡಿದ ಅಮಲಿನಲ್ಲಿ ಬಾಟೆಲ್‌ನಿಂದ ಸ್ನೇಹಿತನ ಕತ್ತಿಗೆ ಚುಚ್ಚಿ‌ ಕುಚಿಕು ಗೆಳೆಯನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

By

murder case
ಕೊಲೆ ಆರೋಪಿ ಉಮೇಶ್‌
Koo

ಬೆಂಗಳೂರು: ಬೆಂಗಳೂರಿನಲ್ಲಿ ಕುಚಿಕು ಗೆಳೆಯನಿಂದಲೇ ಯುವಕನೊರ್ವ (Murder case) ಕೊಲೆಯಾಗಿದ್ದಾನೆ. ಬೆಂಗಳೂರಿನ ಸ್ಯಾಟ್‌ಲೈಟ್ ನಿಲ್ದಾಣದ ಬಳಿಯ ಕಲಾ ವೈನ್ಸ್ ಬಾರ್‌ನಲ್ಲಿ ಘಟನೆ ನಡೆದಿದೆ. ಕಸ್ತೂರಿ ನಗರದ ನಿವಾಸಿ ಸೋನು (25) ಕೊಲೆಯಾದವನು.

ಸೋನು ತನ್ನ ಕುಚಿಕು ಗೆಳೆಯನ ಜತೆಯಲ್ಲಿ ಕೂತು ಮದ್ಯ ಸೇವಿಸುತ್ತಿದ್ದ. ಈ ವೇಳೆ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಬಾರ್‌ನಲ್ಲೇ ಸೋನುನನ್ನು ಕೊಂದು ಹಾಕಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ಭಾನುವಾರ ರಾತ್ರಿ 10:45ರ ಸುಮಾರಿಗೆ ಘಟನೆ ನಡೆದಿದೆ. ಆರೋಪಿ ಮತ್ತು ಕೊಲೆಯಾದವನು ಸ್ನೇಹಿತರು. ಇಬ್ಬರು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಹಳೇ ಜಗಳದ ವಿಚಾರದ ತೆಗೆದು ಗಲಾಟೆಯಾಗಿದೆ. ಬಾಟಲ್‌ನಿಂದ ಸೋನು ಕತ್ತಿಗೆ ಚುಚ್ಚಿ‌ ಕೊಲೆ ಮಾಡಿದ್ದಾನೆ. ಉಮೇಶ್ (28) ಕೊಲೆ ಮಾಡಿದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
This will be my last season as a host for BBK By Kichcha Sudeepa
ಬೆಂಗಳೂರು1 ಗಂಟೆ ago

Kiccha Sudeep: ಬಿಗ್‌ಬಾಸ್‌ಗೆ ಕಿಚ್ಚ ಸುದೀಪ್ ವಿದಾಯ; ಇದೊಂದೆ ರೀಸನ್‌ಗೆ ಹೊರಬಂದ್ರಾ ಬಾದ್‌ ಶಾ

BBMP
ಬೆಂಗಳೂರು4 ಗಂಟೆಗಳು ago

BBMP : ಬೆಂಗಳೂರು ಕಸ ವಿಲೇವಾರಿ ಮಾಡಲು 30 ವರ್ಷಕ್ಕೆ ಗುತ್ತಿಗೆ ನೀಡಲು ಸರ್ಕಾರದಿಂದ ಗ್ರೀನ್ ಸಿಗ್ನಲ್!

Karnataka Rain
ಮಳೆ5 ಗಂಟೆಗಳು ago

Karnataka Rain : ಜಿಟಿ ಜಿಟಿ ಮಳೆಗೆ ಬೆಂಗಳೂರು ಕೂಲ್‌ ಕೂಲ್‌; ಮುಂದಿನ 4 ದಿನಗಳು ವರ್ಷಧಾರೆ

murder case
ಬೆಂಗಳೂರು5 ಗಂಟೆಗಳು ago

Murder Case : ಕುಡಿದ ಅಮಲಿನಲ್ಲಿ ಬಾಟೆಲ್‌ನಿಂದ ಸ್ನೇಹಿತನ ಕುತ್ತಿಗೆ ಚುಚ್ಚಿ‌ ಕೊಲೆ ಮಾಡಿದ ಕುಚಿಕು ಗೆಳೆಯ

Dina Bhavishya
ಭವಿಷ್ಯ11 ಗಂಟೆಗಳು ago

Dina Bhavishya: ಈ ರಾಶಿಯವರು ಆತುರದ ತೀರ್ಮಾನ ತೆಗೆದುಕೊಳ್ಳುವುದು ಬೇಡ

karnataka Rain
ಮಳೆ23 ಗಂಟೆಗಳು ago

Karnataka Rain : ನಿರಂತರ ಮಳೆಗೆ ಮನೆಗಳು ನೆಲಸಮ; ಕಾಲುವೆ ಒಡೆದು ಜಮೀನು ಜಲಾವೃತ

Road Accident
ರಾಯಚೂರು1 ದಿನ ago

Road Accident : ರಾಯಚೂರಿನಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಸವಾರರಿಬ್ಬರು ಸಾವು

Road Accident
ಶಿವಮೊಗ್ಗ1 ದಿನ ago

Road Accident: ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಪಲ್ಟಿ; ಯುವಕ ಸಾವು, ಹಲವರು ಗಂಭೀರ

Munirathnas honeytrap case gets a twist Names of influential leaders revealed in probe
ಬೆಂಗಳೂರು1 ದಿನ ago

MLA Muniratna: ಮುನಿರತ್ನ ಹನಿಟ್ರ್ಯಾಪ್ ಕೇಸ್‌ಗೆ ಟ್ವಿಸ್ಟ್; ತನಿಖೆಯಲ್ಲಿ ಬಯಲಾಯ್ತು ಪ್ರಭಾವಿ ನಾಯಕರ ಹೆಸರು

Murder case
ಬೆಂಗಳೂರು ಗ್ರಾಮಾಂತರ1 ದಿನ ago

Murder Case : ಬನ್ನೇರುಘಟ್ಟದಲ್ಲಿ ಮಗನಿಂದಲೇ ತಂದೆಯ ಬರ್ಬರ ಹತ್ಯೆ

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌