Murder case : ಮಿಡ್‌ನೈಟ್‌ನಲ್ಲಿ ಶ್ರೀರಾಂಪುರದಲ್ಲಿ ಹರಿದ ನೆತ್ತರು; ಸ್ನೇಹಿತನೇ ಹಂತಕ - Vistara News

ಬೆಂಗಳೂರು

Murder case : ಮಿಡ್‌ನೈಟ್‌ನಲ್ಲಿ ಶ್ರೀರಾಂಪುರದಲ್ಲಿ ಹರಿದ ನೆತ್ತರು; ಸ್ನೇಹಿತನೇ ಹಂತಕ

Murder case : ಶ್ರೀರಾಂಪುರದಲ್ಲಿ ಮಧ್ಯರಾತ್ರಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಹತ್ಯೆಯಾಗಿದ್ದಾನೆ. ಕೃತ್ಯದ ಬಳಿಕ ಹಂತಕರು ಪರಾರಿ ಆಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.

VISTARANEWS.COM


on

murder case in Bengaluru
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕ್ರೈಂ ರೇಟ್‌ ಹೆಚ್ಚಾಗುತ್ತಿದ್ದು, ಪೊಲೀಸರ ಭಯವಿಲ್ಲದಂತಾಗಿದೆ. ನಿನ್ನೆಯಷ್ಟೇ ಯುವಕನೊಬ್ಬ ಬರ್ಬರವಾಗಿ ಕೊಲೆಯಾಗಿದ್ದ, ಇದೀಗ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ (Murder case) ಹತ್ಯೆಯಾಗಿದ್ದಾನೆ. ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣಾ (Srirampura Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕುಮಾರ್ (39) ಕೊಲೆಯಾದವನು. ಸೋಮವಾರ ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಕೊಲೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಕುಮಾರ್‌ ಆತನ ಸ್ನೇಹಿತನಿಂದಲೇ ಕೊಲೆ ಆಗಿದ್ದಾನೆ. ಘಟನೆ ಸಂಬಂಧ ಶ್ರಿರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗೆ ಬಲೆ ಬೀಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಕೊಂಡಿದ್ದಾರೆ.

murder Case
ಕೊಲೆಯಾದ ಕುಮಾರ್‌

50 ಲಕ್ಷ ಹಣಕ್ಕೆ ಉರುಳಿತು ತಲೆ

ಕುಮಾರ್ ಹಾಗು ದಯಾಳ್ ಇಬ್ಬರು ಶ್ರೀರಾಂಪುರ ನಿವಾಸಿಗಳಾಗಿರುವ ಇವರದ್ದು 15 ವರ್ಷಗಳ ಸ್ನೇಹ. ಕಷ್ಟ ಸುಖಗಳಿಗೆ ಜೊತೆಯಾಗಿದ್ದವರು. ಹೀಗಿದ್ದವರ ಮಧ್ಯೆಯೇ ಹಣಕಾಸಿನ ವಿಚಾರಕ್ಕೆ ದುಶ್ಮನಿ ಶುರುವಾಗಿತ್ತು. ಅದೇ ದುಶ್ಮನಿ ಕೊಲೆ ಹಂತಕ್ಕೆ ತಲುಪಿತು. ಕುಮಾರ್ ಹೋಟೆಲ್ ಬ್ಯುಸಿನೆಸ್ ಮಾಡಿಕೊಂಡಿದ್ದರೆ, ದಯಾಳ್ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ. ಕಳೆದ 10 ವರ್ಷದಿಂದ ಕುಮಾರ್ ಮನೆ ಕಟ್ಟಬೇಕು, ಹೋಟೆಲ್ ಬ್ಯುಸಿನೆಸ್ ಇಂಪ್ರೂವ್ ಮಾಡಬೇಕು ಎಂದು ಹಂತ ಹಂತವಾಗಿ 50 ಲಕ್ಷ ರೂ. ಸಾಲ ಪಡೆದುಕೊಂಡಿದ್ದ.ಇತ್ತೀಚೆಗೆ ದಯಾಳ್ ಕೂಡ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ. ಹಾಗಾಗಿ ಕುಮಾರ್‌ಗೆ ಹಣ ವಾಪಸ್ಸು ಕೊಡುವಂತೆ ಬೆನ್ನು ಬಿದ್ದಿದ್ದ. ಆದರೆ ಕುಮಾರ್ ಬಳಿಯೂ ವಾಪಸ್ಸು ಕೊಡುವಷ್ಟು ಹಣ ಇರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಸಣ್ಣ ಪುಟ್ಟ ಜಗಳ ಕೂಡ ನಡೆಯುತ್ತಿತ್ತು.

ಜುಲೈ 8 ರಂದು ಕುಮಾರ್ ಮನೆ ಬಳಿ ಬಂದಿದ್ದ ದಯಾಳ್ ಹೊರಗೆ ಹೋಗೊಣಾ ಬಾ ಎಂದು ಕರೆದುಕೊಂಡು ಬಂದಿದ್ದ.ಮಧ್ಯರಾತ್ರಿವರೆಗೂ ಕುಡಿದು ಪಾರ್ಟಿ ಮಾಡಿದ್ದಾರೆ. ಈ ವೇಳೆ ಹಣಕಾಸಿನ ವಿಚಾರಕ್ಕೆ ಮತ್ತೆ ಗಲಾಟೆಯಾಗಿದೆ. ಶ್ರೀರಾಂಪುರ 5 ನೇ ಮುಖ್ಯರಸ್ತೆ ಬಳಿ ಮಾತಿಗೆ ಮಾತು ಬೆಳೆದು ದಯಾಳ್ ಹಾಗೂ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಚಾಕುವಿನಿಂದ ಇರಿದು ಕೊಂದಿದ್ದಾರೆ. 2.30ಕ್ಕೆ ಪೊಲೀಸರಿಗೆ ಈ ಮಾಹಿತಿ ಸಿಕ್ಕಿದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಜತೆಗೆ ಆರೋಪಿ ದಯಾಳ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.

ಇದನ್ನೂ ಓದಿ: Medical Negligence: ಕಣ್ಣು ಬಿಡುವ‌ ಮುನ್ನವೇ ಗರ್ಭದಲ್ಲೇ ಕಣ್ಮುಚ್ಚಿದ ಮಗು; ಕೆಸಿ ಜನರಲ್‌ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ!

ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ‌ ನಡೆಸಿ ಯುವಕನೊಬ್ಬನ ಕೊಲೆ (Murder case) ಮಾಡಲಾಗಿತ್ತು. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ನೇಪಾಳಿ ಮೂಲದ ಬಾಲಾಜಿ ಮೃತ ದುರ್ದೈವಿ.

ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಬಾಲಾಜಿ ಸ್ನೇಹಿತರೊಂದಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಅಮಲಿನಲ್ಲಿ ಕ್ಯಾತೆ ತೆಗೆದು ಸ್ನೇಹಿತರೊಟ್ಟಿಗೆ ಜಗಳ ಶುರು ಮಾಡಿದ್ದ. ಜಗಳವು ವಿಕೋಪಕ್ಕೆ ತಿರುಗಿದ್ದು, ಬಾಲಜಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಮಾಡಲಾಗಿತ್ತು.

ಕೋಣನಕುಂಟೆ ಸಮುದಾಯ ಭವನ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಹಾಗೂ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹತ್ಯೆಕೋರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸ್‌ಗೆ ಚಾಕುವಿನಿಂದ ಇರಿದ ರೌಡಿಶೀಟರ್‌ ಕಾಲಿಗೆ ಗುಂಡು

ಶಿವಮೊಗ್ಗ: ಬೆಳ್ಳಂ ಬೆಳಗ್ಗೆ ಶಿವಮೊಗ್ಗದಲ್ಲಿ (Shivamogga news) ರೌಡಿ ಶೀಟರ್ (rowdy sheeter) ಕಾಲಿಗೆ ಗುಂಡೇಟು ಹಾರಿಸಿ (shoot out) ಗಾಯಗೊಳಿಸಿ ಬಂಧಿಸಲಾಗಿದೆ. ಬಂಧಿಸಲು ಹೋದಾಗ ಈತ ಪೊಲೀಸ್‌ (Police) ಸಿಬ್ಬಂದಿ ಕಾಲಿಗೆ ಚಾಕುವಿನಿಂದ ಚುಚ್ಚಿ (Stabbing) ಗಾಯಗೊಳಿಸಿದ್ದ.

ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ತ್ಯಾಜ್ಯವಳ್ಳಿ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ರಜಾಕ್‌ ಎಂಬಾತ ಬಂಧಿತ ರೌಡಿ. ರಜಾಕ್ ಮೇಲೆ ಕೊಲೆ ಯತ್ನ ಸೇರಿ ಐದಾರು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಹೊಳೆಹೊನ್ನೂರು ಠಾಣೆ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ಈತನ ಬಂಧನಕ್ಕೆ ತೆರಳಲಾಗಿತ್ತು.

ಈ ಸಂದರ್ಭದಲ್ಲಿ ಆರೋಪಿ ರಜಾಕ್‌ ಪೊಲೀಸ್‌ ಸಿಬ್ಬಂದಿ ಅರ್ಜುನ್ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಸಿಬ್ಬಂದಿಯನ್ನು ಪಾರು ಮಾಡಲು ಹಾಗೂ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಲಕ್ಷ್ಮಿಪತಿ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡಿರುವ ಆರೋಪಿ ರಜಾಕ್ ಹಾಗೂ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Utthana Katha Spardhe 2024: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ; ಕಥೆ ತಲುಪಿಸಲು ಅ.10 ಕೊನೆಯ ದಿನ

Utthana Katha Spardhe 2024: ಸದಭಿರುಚಿಯ ಮಾಸಪತ್ರಿಕೆ ʼಉತ್ಥಾನʼ ವತಿಯಿಂದ ʼಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2024ʼ ಆಯೋಜಿಸಲಾಗಿದ್ದು, ಕಥೆಗಳನ್ನು ತಲುಪಿಸಲು ಅಕ್ಟೋಬರ್‌ 10 ಕೊನೆಯ ದಿನವಾಗಿದೆ. ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ 15 ಸಾವಿರ ರೂ., 2ನೇ ಬಹುಮಾನ 12 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ. ಹಾಗೂ ಐದು ಮೆಚ್ಚುಗೆಯ ಬಹುಮಾನಗಳು ತಲಾ 2 ಸಾವಿರ ರೂ. ಇರಲಿದೆ.

VISTARANEWS.COM


on

utthana vaarshika katha spardhe the last date for submission of the story is october 10
Koo

ಬೆಂಗಳೂರು: ಸದಭಿರುಚಿಯ ಮಾಸ ಪತ್ರಿಕೆ ʼಉತ್ಥಾನʼ ವತಿಯಿಂದ ʼಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ 2024ʼ ಆಯೋಜಿಸಲಾಗಿದ್ದು, ಕಥೆಗಳನ್ನು ತಲುಪಿಸಲು ಅಕ್ಟೋಬರ್‌ 10 ಕೊನೆಯ ದಿನವಾಗಿದೆ. ಕಥಾ ಸ್ಪರ್ಧೆಯಲ್ಲಿ (Utthana Katha Spardhe 2024) ಮೊದಲ ಬಹುಮಾನ 15 ಸಾವಿರ ರೂ., ಎರಡನೇ ಬಹುಮಾನ 12 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ. ಹಾಗೂ ಐದು ಮೆಚ್ಚುಗೆಯ ಬಹುಮಾನಗಳು ತಲಾ 2 ಸಾವಿರ ರೂ. ಇರಲಿದೆ.

ಕಥಾ ಸ್ಪರ್ಧೆಯ ನಿಯಮಗಳು

ಕಥೆಗಳು ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು; ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.

ಬಹುಮಾನಿತ ಕಥೆ ‘ಉತ್ಥಾನ’ದಲ್ಲಿ ಪ್ರಕಟವಾಗುವವರೆಗೂ ಬೇರೆ ಎಲ್ಲೂ ಗ್ರಂಥರೂಪದಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ, ಪತ್ರಿಕೆ, ಆಕಾಶವಾಣಿ ಅಥವಾ ದೂರದರ್ಶನದಲ್ಲಾಗಲಿ ಪ್ರಕಟಣೆಗೆ, ಪ್ರಸಾರಕ್ಕೆ ಅವಕಾಶವಿಲ್ಲ.

ಪೋಸ್ಟ್‌ ಮೂಲಕ ಕಳುಹಿಸುವವರು: ಕಾಗದದ ಒಂದೇ ಮಗ್ಗುಲಲ್ಲಿ ಸ್ಪುಟವಾಗಿ ಬರೆದಿರಬೇಕು ಅಥವಾ ವಿರಳವಾಗಿ ಬೆರಳಚ್ಚು ಮಾಡಿರಬೇಕು. ಕಾರ್ಬನ್/ಜೆರಾಕ್ಸ್ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ.

ಇಮೇಲ್‌ ಮೂಲಕ ಕಳುಹಿಸುವವರು: ಕಥೆಯನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (ವರ್ಡ್ ಮತ್ತು ಪಿಡಿಎಫ್ 2 ರೂಪದಲ್ಲಿ) ಇ-ಮೇಲ್ ಮೂಲಕವೂ ಕಳುಹಿಸಬಹುದು. ಇ-ಮೇಲ್ ವಿಳಾಸ: utthanakathaspardhe@gmail.com

ಕಥೆ 3,000 ಪದಗಳ ಮಿತಿಯಲ್ಲಿ ಇರಬೇಕು.

ಹಸ್ತಪ್ರತಿಯನ್ನು ಹಿಂದಕ್ಕೆ ಕಳುಹಿಸುವ ಯಾವುದೇ ವ್ಯವಸ್ಥೆ ಇರುವುದಿಲ್ಲ

ಲೇಖಕರು ತಮ್ಮ ಹೆಸರು, ವಿಳಾಸ, ದೂರವಾಣಿ, ಕಿರುಪರಿಚಯ ಮುಂತಾದ ವಿವರಗಳನ್ನು ಕಥೆಯ ಜತೆಯಲ್ಲಿ ಬರೆಯದೆ, ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜತೆಗೆ ಲೇಖಕರ ಭಾವಚಿತ್ರವೂ ಇರಬೇಕು.
ಬಹುಮಾನಿತ ಕಥೆಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಸಂಪೂರ್ಣ ಹಕ್ಕು ‘ಉತ್ಥಾನ’ದ್ದು.

ತೀರ್ಪುಗಾರರ ಮೌಲ್ಯನಿರ್ಣಯಾನಂತರ ಫಲಿತಾಂಶವನ್ನು ‘ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ವಿಜೇತರಿಗೆ ಮಾತ್ರ ಪತ್ರ ಬರೆದು ತಿಳಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರ ವ್ಯವಹಾರ ಸಾಧ್ಯವಾಗದು. ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.

ಇದನ್ನೂ ಓದಿ: Pralhad Joshi: ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲು; ಪ್ರಲ್ಹಾದ್‌ ಜೋಶಿ

ಕಥೆ ತಲುಪಿಸುವ ವಿಳಾಸ

ಕಥೆಗಳನ್ನು ಅಕ್ಟೋಬರ್‌ 10ರೊಳಗೆ ವಿಳಾಸ: ಸಂಪಾದಕರು, ʼಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2024ʼ ಕೇಶವ ಶಿಲ್ಪ, ಕೆಂಪೇಗೌಡನಗರ, ಬೆಂಗಳೂರು-560004 ಇಲ್ಲಿಗೆ ತಲುಪಿಸಬೇಕು. ಮೊಬೈಲ್‌ 77954 41894, ದೂರವಾಣಿ: 080-26604673 ಇ-ಮೇಲ್: utthanakathaspardhe@gmail.com

Continue Reading

ವಾಣಿಜ್ಯ

kotak bank smart watch: ಮೊಬೈಲ್‌ ಬೇಕಿಲ್ಲ, ವಾಚ್‌ನಲ್ಲೇ ಆನ್‌ಲೈನ್‌ ಪೇಮೆಂಟ್‌! ಬಂದಿದೆ ಕೋಟಕ್-ಜಿಓಕ್ಯೂಐಐ ಸ್ಮಾರ್ಟ್ ವಾಚ್!

kotak bank smart watch: ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ (ಕೆಎಂಬಿಎಲ್/ಕೋಟಕ್) ಮತ್ತು ಜಿಓಕ್ಯೂಐಐ ಸಹಯೋಗದಲ್ಲಿ ಕೋಟಕ್-ಜಿಓಕ್ಯೂಐಐ ಸ್ಮಾರ್ಟ್ ವೈಟಲ್ ಪ್ಲಸ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಲಾಗಿದೆ. ರುಪೇ ಆನ್-ದ-ಗೋ ಮೂಲಕ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ ವಾಚ್ ಮೂಲಕ ಪಿನ್ ಹಾಕದೆಯೇ ರೂ. 5000ವರೆಗಿನ ಕಾಂಟಾಕ್ಟ್ ಲೆಸ್ ಪೇಮೆಂಟ್‌ಗಳನ್ನು ಮಾಡಬಹುದು ಅನ್ನುವುದು ವಿಶೇಷ. ಈ ವಿಶಿಷ್ಟವಾದ ಸ್ಮಾರ್ಟ್ ವಾಚ್‌ನ ಬೆಲೆ 3499 ರೂ. ಆಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

kotak bank smart watch
Koo

ಬೆಂಗಳೂರು: ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿ ಕ್ರಾಂತಿ (kotak bank smart watch) ಮಾಡುವ ನಿಟ್ಟಿನಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ (ಕೆಎಂಬಿಎಲ್/ಕೋಟಕ್) ಮತ್ತು ಜಿಓಕ್ಯೂಐಐ ಸಹಯೋಗದಲ್ಲಿ ಕೋಟಕ್-ಜಿಓಕ್ಯೂಐಐ ಸ್ಮಾರ್ಟ್ ವೈಟಲ್ ಪ್ಲಸ್ ಸ್ಮಾರ್ಟ್‌ವಾಚ್ (Smart Watch) ಬಿಡುಗಡೆ ಮಾಡಲಾಗಿದೆ. ರುಪೇ ಆನ್-ದ-ಗೋ ಮೂಲಕ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ ವಾಚ್ ಮೂಲಕ ಪಿನ್ ಹಾಕದೆಯೇ ರೂ. 5000ವರೆಗಿನ ಕಾಂಟಾಕ್ಟ್ ಲೆಸ್ ಪೇಮೆಂಟ್‌ಗಳನ್ನು ಮಾಡಬಹುದು ಅನ್ನುವುದು ವಿಶೇಷ. ಈ ವಿಶಿಷ್ಟವಾದ ಸ್ಮಾರ್ಟ್ ವಾಚ್‌ನ ಬೆಲೆ 3499 ರೂ. ಆಗಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್‌ನ ರಿಟೇಲ್ ಲಯಬಿಲಿಟೀಸ್ ಪ್ರೊಡಕ್ಟ್ ಹೆಡ್ ಆಂಡ್ ಚೀಫ್ ಮಾರ್ಕೆಟಿಂಗ್ ಆಫೀಸರ್ ರೋಹಿತ್ ಭಾಸಿನ್, ಈ ಸ್ಮಾರ್ಟ್ ವಾಚ್ ಉತ್ಪನ್ನವನ್ನು ಬಿಡುಗಡೆ ಮಾಡಿ ಮಾತನಾಡಿ, “ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆ ಉಂಟಾಗಿದೆ. ಗ್ರಾಹಕರು ಪದೇಪದೇ ಕಡಿಮೆ ಮೊತ್ತಗಳನ್ನು ಪಾವತಿ ಮಾಡಲು ನಗದು ರಹಿತ ಪೇಮೆಂಟ್ ವಿಧಾನವನ್ನೇ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಕೋಟಕ್-ಜಿಓಕ್ಯೂಐಐ ಸ್ಮಾರ್ಟ್ ವೈಟಲ್ ಪ್ಲಸ್ ಸ್ಮಾರ್ಟ್‌ ವಾಚ್ ಅನ್ನು ಬಿಡುಗಡೆ ಮಾಡಿದ್ದು, ಈ ಸಾಧನ ಇದ್ದರೆ ನಗದು, ಕಾರ್ಡ್‌ಗಳು ಅಥವಾ ಸ್ಮಾರ್ಟ್‌ಫೋನ್‌ಗಳು ಬೇಕಾಗಿಯೇ ಇಲ್ಲ. ಈ ಮೂಲಕ ಸುರಕ್ಷಿತ ಮತ್ತು ಸುಲಭ ಬ್ಯಾಂಕಿಂಗ್ ವ್ಯವಸ್ಥೆಯನ್ನು ಒದಗಿಸುತ್ತಿದ್ದೇವೆ” ಎಂದು ಹೇಳಿದರು.

ಇದನ್ನೂ ಓದಿ: Pralhad Joshi: ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲು; ಪ್ರಲ್ಹಾದ್‌ ಜೋಶಿ

ಕೋಟಕ್–ಜಿಓಕ್ಯೂಐಐ ಸ್ಮಾರ್ಟ್ ವೈಟಲ್ ಪ್ಲಸ್ ವಾಚ್ ಅನ್ನು ಬಳಸುವ ಬಳಕೆದಾರರು ತಮ್ಮ ರಕ್ತದೊತ್ತಡ, ದೇಹದ ಉಷ್ಣತೆ ಮತ್ತು ಎಸ್ ಪಿ ಓ2 ಮಟ್ಟವನ್ನು ತಮ್ಮ ಮಣಿಕಟ್ಟಿನಲ್ಲಿಯೇ ಚೆಕ್ ಮಾಡಬಹುದು. ಜತೆಗೆ ಈ ಸ್ಮಾರ್ಟ್ ವಾಚ್ ಬಳಕೆದಾರ ಸ್ನೇಹಿ ಇಂಟರ್ಫೇಸ್ ಹೊಂದಿದ್ದು, ಸುಲಭವಾಗಿ ಪಾವತಿ ಮಾಡಲು ಅನುವು ಮಾಡಿಕೊಡುತ್ತದೆ. ಗ್ರಾಹಕರು ತಮ್ಮ ಕೋಟಕ್ ಖಾತೆಗಳಿಗೆ ಸುಲಭವಾಗಿ ಸೈನ್ ಇನ್ ಆಗಬಹುದು ಮತ್ತು ಸ್ಮಾರ್ಟ್ ವಾಚ್ ಅನ್ನು ಬಳಸಿಕೊಂಡು ಕಾಂಟಾಕ್ಟ್ ಲೆಸ್ ಪೇಮೆಂಟ್ ಅನ್ನು ಮಾಡಬಹುದು. ಈ ವಿಧಾನವು ಸಾಂಪ್ರದಾಯಿಕ ಕಾಂಟಾಕ್ಟ್ ಲೆಸ್ ಕಾರ್ಡ್‌ಗಳು ಮತ್ತು ಮೊಬೈಲ್ ಸಾಧನಗಳಂತೆಯೇ ಅದೇ ಮಟ್ಟದ ಸುರಕ್ಷತೆ ಮತ್ತು ಭದ್ರತೆಯನ್ನು ನೀಡುತ್ತದೆ.

ಈ ಕುರಿತು ಜಿಓಕ್ಯೂಐಐ ಸಂಸ್ಥಾಪಕ ಮತ್ತು ಸಿಇಓ ವಿಶಾಲ್ ಗೊಂಡಲ್ ಮಾತನಾಡಿ, “ಆರೋಗ್ಯವೇ ಭಾಗ್ಯ ಎಂಬುದು ಎಲ್ಲಾ ಕಾಲದಲ್ಲೂ ಪ್ರಸ್ತುತ ಅನ್ನಿಸುವ ಒಂದು ಗಾದೆ. ಮೊದಲೇ ರೋಗ ತಡೆಗಟ್ಟುವ ಪ್ರಕ್ರಿಯೆ ಮತ್ತು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಜಿಓಕ್ಯೂಐಐ ಯಾವಾಗಲೂ ನಂಬುತ್ತದೆ. ಅದಕ್ಕೆ ಪೂರಕವಾಗಿರುವ ಜಿಓಕ್ಯೂಐಐನ ಅತ್ಯಾಧುನಿಕ ಆರೋಗ್ಯ ಫೀಚರ್‌ಗಳ ಜತೆಗೆ ಕೋಟಕ್ ಬ್ಯಾಂಕ್‌ನ ಕಾಂಟಾಕ್ಟ್ ಲೆಸ್ ಪೇಮೆಂಟ್ ಫೀಚರ್ ಅನ್ನು ಸಂಯೋಜಿತಗೊಳಿಸಿರುವ ಸ್ಮಾರ್ಟ್ ವಾಚ್ ಅನ್ನು ಗ್ರಾಹಕರಿಗೆ ಒದಗಿಸುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ.

ಇದನ್ನೂ ಓದಿ: Hosanagara News: ಹಡ್ಲುಬೈಲು ಸರ್ಕಾರಿ ಶಾಲೆಗೆ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ

ಈ ಒಟ್ಟುಗೂಡುವಿಕೆ ಬಹಳ ಮುಖ್ಯವಾಗಿದೆ. ಯಾಕೆಂದರೆ ಈ ಸಹಯೋಗವು ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸುತ್ತದೆ, ಆರೋಗ್ಯ ಮತ್ತು ಸುರಕ್ಷತೆ ಕಾಪಾಡಿಕೊಳ್ಳಲು ಪ್ರೇರೇಪಿಸುತ್ತದೆ, ಸುರಕ್ಷಿತ ವಹಿವಾಟು ಮಾಡುವ ಸೌಲಭ್ಯಗಳನ್ನು ನೀಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಾಧನವು ಈ ಕಾಲಕ್ಕೆ ಅವಶ್ಯವಾಗಿ ಬೇಕಾದ ಆರೋಗ್ಯಕರ ಮತ್ತು ಪರಿಣಾಮಕಾರಿ ಜೀವನಶೈಲಿ ಕಾಪಾಡಿಕೊಳ್ಳಲು ಬೆಂಬಲ ಒದಗಿಸುತ್ತದೆ”ಎಂದು ಹೇಳಿದರು.

ಎನ್‌ಪಿಸಿಐನ ಚೀಫ್ ರಿಲೇಷನ್ ಶಿಪ್ ಮ್ಯಾನೇಜ್ಮೆಂಟ್ ರಾಜೀತ್ ಪಿಳ್ಳೈ ಮಾತನಾಡಿ, “ಎನ್‌ಪಿಸಿಐ ಪರಿಚಯಿಸಿರುವ ಹೊಸ ರುಪೇ ಆನ್-ದ-ಗೋ ಅನ್ನು ಬಳಸಿಕೊಂಡು ಕಾಂಟಾಕ್ಟ್ ಲೆಸ್ ಪೇಮೆಂಟ್ ಸೌಲಭ್ಯ ಒದಗಿಸುವ ಸ್ಮಾರ್ಟ್ ವೈಟಲ್ ಪ್ಲಸ್ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿರುವುದು ನಮಗೆ ಸಂತೋಷದ ವಿಚಾರವಾಗಿದೆ. ಈ ಸಹಯೋಗವು ಬಳಕೆದಾರರಿಗೆ ತಮ್ಮ ದೈನಂದಿನ ವಹಿವಾಟುಗಳನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಮಾಡಲು ಅನುವು ಮಾಡಿಕೊಡುತ್ತದೆ. ಈ ಹೊಸ ವೈಶಿಷ್ಟ್ಯಗಳು ಕಾಂಟಾಕ್ಟ್ ಲೆಸ್ ಪೇಮೆಂಟ್ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಿದೆ. ಜತೆಗೆ ವಹಿವಾಟು ಮಾಡಲು ಸುಲಭವಾಗುವುದರಿಂದ ಬಳಕೆದಾರರ ಅನುಭವವನ್ನು ಉತ್ತಮಗೊಳಿಸುತ್ತದೆ. ಟೆಕ್ ಸ್ಯಾವಿ ಗ್ರಾಹಕರ ಕಾರಣದಿಂದ ಕಾಂಟಾಕ್ಟ್ ಲೆಸ್ ಪೇಮೆಂಟ್ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಉಂಟಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: Karnataka Weather : ಫಲ್ಗುಣಿ ಅಬ್ಬರಕ್ಕೆ ಮುಳುಗಿದ ದೇಗುಲಗಳು; ಆಗಸ್ಟ್‌ 5ರವರೆಗೆ ಭಾರಿ ಮಳೆ ಸಾಧ್ಯತೆ

ಕೋಟಕ್ ಬ್ಯಾಂಕ್ ಗ್ರಾಹಕರು ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಸ್ಮಾರ್ಟ್ ವಾಚ್ ಅನ್ನು ಖರೀದಿಸಬಹುದು. ಕೋಟಕ್ ಗ್ರಾಹಕರಲ್ಲದವರು ಈ ಸೌಲಭ್ಯವನ್ನು ಪಡೆಯಲು ಕೋಟಕ್‌ನಲ್ಲಿ ಖಾತೆಯನ್ನು ತೆರೆಯಬೇಕಾಗುತ್ತದೆ.

Continue Reading

ದೇಶ

Pralhad Joshi: ಕೇಂದ್ರ ಸರ್ಕಾರದಿಂದ 80 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ; ಪ್ರಲ್ಹಾದ್‌ ಜೋಶಿ

Pralhad Joshi: ಕೇಂದ್ರ ಸರ್ಕಾರ ದೇಶದ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಿಸುತ್ತಿದೆ ಎಂದು ತಿಳಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿದ್ದು, ಇದರ ಬಜೆಟ್ 11.80 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ.

VISTARANEWS.COM


on

Central government to distribute free food grains to 80 crore beneficiaries of the country says Pralhad Joshi
Koo

ನವದೆಹಲಿ: ಕೇಂದ್ರ ಸರ್ಕಾರ ದೇಶದ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಿಸುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು.

ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, “ಒಂದು ರಾಷ್ಟ್ರ ಒಂದು ಪಡಿತರ ಚೀಟಿ” ಮತ್ತು “ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ” ಯಡಿ ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Pralhad Joshi: ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲು; ಪ್ರಲ್ಹಾದ್‌ ಜೋಶಿ

2019ರಲ್ಲಿ ಶುರುವಾದ “ಒಂದು ರಾಷ್ಟ್ರ ಒಂದು ಪಡಿತರ ಚೀಟಿ” ಯೋಜನೆಯಡಿ ಸುಮಾರು 145 ಕೋಟಿ ವಹಿವಾಟು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಸಚಿವರು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿದ್ದು, ಇದರ ಬಜೆಟ್ 11.80 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ವಿವರಿಸಿದರು.

497 ಲಕ್ಷ ಮೆ. ಟನ್ ಆಹಾರ ಧಾನ್ಯ ವಿತರಣೆ

2023-24ರಲ್ಲಿ “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ” ಯೋಜನೆಯಡಿ, ಸುಮಾರು 81.35 ಕೋಟಿ ಫಲಾನುಭವಿಗಳಿಗೆ 497 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Job Alert: ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಐಟಿಐ ಪಾಸಾದವರು ಅಪ್ಲೈ ಮಾಡಿ

ಎಥೆನಾಲ್ ಉತ್ಪಾದನೆ ವೃದ್ದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಥೆನಾಲ್ ಉತ್ಪಾದನಾ ಸಾಮರ್ಥ್ಯ 1,589 ಕೋಟಿ ಲೀಟರ್‌ಗೆ ಏರಿದೆ. ಭಾರತದ ದೇಶೀಯ ಅಗತ್ಯಗಳನ್ನು ಪೂರೈಸಲು ಸಾಕಾಗುವಷ್ಟಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಇದೇ ವೇಳೆ ತಿಳಿಸಿದರು.

Continue Reading

ಕರ್ನಾಟಕ

Road Accident : ತಿರುಪತಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಬ್ರೇಕ್‌ ಫೇಲ್‌; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Road Accident : ತಿರುಪತಿ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಬ್ರೇಕ್‌ ಫೇಲ್‌ ಆಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಬೆಂಗಳೂರಿನಲ್ಲಿ ಕುಳಿತ ಜಾಗದಲ್ಲೇ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

VISTARANEWS.COM


on

By

Road Accident
Koo

ಕೋಲಾರ/ತಿರುಪತಿ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಮಡಲಂ ಬಳಿಯ ಭಾಕರಪೇಟ್ ಘಾಟ್‌ನಲ್ಲಿ (Road Accident) ತೆರುಳುತ್ತಿದ್ದ ಕಎಸ್‌ಆರ್‌ಟಿಸಿ ಬಸ್‌ವೊಂದು ಬ್ರೇಕ್ ಫೈಲ್ಯೂರ್‌ ಆಗಿ ಬಂಡೆಗೆ ಡಿಕ್ಕಿ ಹೊಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಪ್ರಪಾತವನ್ನು ತಪ್ಪಿಸಿದ ಚಾಲಕ ಬಸ್‌ ಅನ್ನು ಬೆಟ್ಟದ ಬಂಡೆಗೆ ಗುದ್ದಿಸಿದ್ದಾರೆ. ಬಸ್‌ನಲ್ಲಿದ್ದ 43 ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ತಿರುಪತಿಯ ರೂಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ ಮದನಪಲ್ಲಿ ಮಾರ್ಗವಾಗಿ ತಿರುಪತಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಯಾವುದೇ ಪ್ರಾಣ ಹಾನಿ ಆಗಿಲ್ಲ. ಕಂದಕ್ಕೆ ಬಸ್ ಬಿದ್ದಿದ್ದರೆ ಭಾರಿ ಆನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಚಂದ್ರಗಿರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಬಾಗೇಪಲ್ಲಿ ಡಿಪೋ ಮ್ಯಾನೇಜರ್ ಹಾಗೂ ಕೋಲಾರದ ಡಿಟಿಓ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಹೊರಟಿದ್ದಾರೆ.

ಇದನ್ನೂ ಓದಿ: Karnataka Weather : ಫಲ್ಗುಣಿ ಅಬ್ಬರಕ್ಕೆ ಮುಳುಗಿದ ದೇಗುಲಗಳು; ಆಗಸ್ಟ್‌ 5ರವರೆಗೆ ಭಾರಿ ಮಳೆ ಸಾಧ್ಯತೆ

ಕುಳಿತ ಜಾಗದಲ್ಲೇ ಮೃತಪಟ್ಟ ಕಾರ್ಮಿಕ

ಬೆಂಗಳೂರಿನ ಬಾಗಲಗುಂಟೆಯ ಇಂದಿರಾ ಕ್ಯಾಂಟೀನ್ ಬಳಿ ಕುಳಿತ ಸ್ಥಿತಿಯಲ್ಲೇ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ರಾಮನಗರ ನಿವಾಸಿ ಶಿವಲಿಂಗಯ್ಯ ಮೃತ ದುರ್ದೈವಿ. ಗಾರೆ ಕೆಲಸಕ್ಕಾಗಿ ರಾಮನಗರದಿಂದ ಬೆಂಗಳೂರಿಗೆ ಬಂದಿದ್ದ ಶಿವಲಿಂಗಯ್ಯ ಅವರು ನಿನ್ನೆ ಬುಧವಾರ ಇಂದಿರಾ ಕ್ಯಾಂಟೀನ್ ಬಳಿ ಕುಳಿತಿದ್ದರು. ಆದರೆ ಮರುದಿನ ಗಮನಿಸಿದ ಸ್ಥಳೀಯರು ಶಿವಲಿಂಗಯ್ಯ ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಯಗೊಂಡ ನಾಗರ ಹಾವಿಗೆ ಟ್ರೀಟ್ಮೆಂಟ್‌

ಧಾರವಾಡದಲ್ಲಿ ಗಾಯಗೊಂಡ ನಾಗರ ಹಾವಿಗೆ ವೈದ್ಯರು ಆರೈಕೆ ಮಾಡಿದ್ದಾರೆ. ಧಾರವಾಡದ ಸಾಧುನವರ್ ಎಸ್ಟೇಟ್ ಬಳಿ ಹಾವೊಂದು ಬಿದ್ದಿತ್ತು. ಬೈಕ್ ಸವಾರರು ಗಾಯಗೊಂಡಿದ್ದ ಹಾವಿಗೆ ಆರೈಕೆ ಮಾಡಿದ್ದಾರೆ. ಪ್ರಾಣಿ ಪ್ರಿಯ ಸೋಮಶೇಖರ್ ಮೊದಲು ಆರೈಕೆ ಮಾಡಿ ಬಳಿಕ ಕೃಷಿ ವಿವಿಯ ವೈದ್ಯ ಡಾ.ಅನಿಲ್ ಪಾಟೀಲ್‌ರಿಂದ ಚಿಕಿತ್ಸೆ ನೀಡಿದ್ದಾರೆ. ಮುಂದೆ ಹೋಗಲಾರದೆ ಸ್ಥಿತಿಯಲ್ಲಿದ್ದ ಹಾವಿಗೆ ಚಿಕಿತ್ಸೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Former minister B Sriramulu alleged that the Congress government is not interested in the construction of the Kampli bridge
ಬಳ್ಳಾರಿ5 mins ago

Ballari News: ಕಂಪ್ಲಿ ಸೇತುವೆ ನಿರ್ಮಿಸಲು ಆಸಕ್ತಿ ವಹಿಸದ ಕಾಂಗ್ರೆಸ್ ಸರ್ಕಾರ; ಶ್ರೀರಾಮುಲು ಆರೋಪ

Whatsapp Shutdown
ತಂತ್ರಜ್ಞಾನ9 mins ago

Alternative to Whatsapp: ವಾಟ್ಸಾಪ್ ಸ್ಥಗಿತಗೊಂಡರೆ ಏನ್‌ ಮಾಡೋದು? ಇಲ್ಲಿದೆ ಪರ್ಯಾಯ ಆ್ಯಪ್‌ಗಳ ಪಟ್ಟಿ

Kerala Floods
ದೇಶ57 mins ago

Kerala Floods: ಕೇರಳದಲ್ಲಿ ಪ್ರವಾಹ; ಪ್ರಾಣವನ್ನೇ ಒತ್ತೆ ಇಟ್ಟು ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದ ಪತಿ, Video ಇದೆ

Paris Olympics 2024
ಪ್ರಮುಖ ಸುದ್ದಿ59 mins ago

Paris Olympics 2024 : ಒಲಿಂಪಿಕ್ಸ್​ನಲ್ಲಿ ವಿವಾದ; ಮಹಿಳೆ ವಿರುದ್ಧ ಸ್ಪರ್ಧಿಸಲು ಬಾಕ್ಸಿಂಗ್​ ಕಣಕ್ಕೆ ಇಳಿದ ಪುರುಷ!

vyasana mukta dinacharane programme in hosapete
ವಿಜಯನಗರ1 hour ago

Vijayanagara News: ಹೊಸಪೇಟೆಯಲ್ಲಿ ವ್ಯಸನ ಮುಕ್ತ ದಿನಾಚರಣೆ; ಜನ ಜಾಗೃತಿ

utthana vaarshika katha spardhe the last date for submission of the story is october 10
ಬೆಂಗಳೂರು1 hour ago

Utthana Katha Spardhe 2024: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ; ಕಥೆ ತಲುಪಿಸಲು ಅ.10 ಕೊನೆಯ ದಿನ

World Breastfeeding Week
ಆರೋಗ್ಯ2 hours ago

World Breastfeeding Week: ವಿಶ್ವ ಸ್ತನ್ಯಪಾನ ಸಪ್ತಾಹ; ಹಾಲುಣಿಸಿದರೆ ಮಗುವಿಗೆ ಮಾತ್ರವಲ್ಲ, ತಾಯಿಗೂ ಲಾಭ!

Saree Fashion
ಫ್ಯಾಷನ್2 hours ago

Saree Fashion: ಕಂಟೆಂಪರರಿ ಪ್ರಿಂಟೆಡ್‌ ವಿನ್ಯಾಸದಲ್ಲೂ ಬಂತು ಆರ್ಗನ್ಜಾ ಸೀರೆ!

kotak bank smart watch
ವಾಣಿಜ್ಯ2 hours ago

kotak bank smart watch: ಮೊಬೈಲ್‌ ಬೇಕಿಲ್ಲ, ವಾಚ್‌ನಲ್ಲೇ ಆನ್‌ಲೈನ್‌ ಪೇಮೆಂಟ್‌! ಬಂದಿದೆ ಕೋಟಕ್-ಜಿಓಕ್ಯೂಐಐ ಸ್ಮಾರ್ಟ್ ವಾಚ್!

Paris Olympics 2024
ಪ್ರಮುಖ ಸುದ್ದಿ2 hours ago

Paris Olympics 2024 : ಭಾರತದವರೇ ಆದ ಎಚ್​ಎಸ್​ ಪ್ರಣಯ್​ ಸೋಲಿಸಿ ಕ್ವಾರ್ಟರ್​​ ಫೈನಲ್ಸ್​ಗೇರಿದ ಲಕ್ಷ್ಯ ಸೇನ್​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ8 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ9 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ9 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌