Murder Case : ಸಾಲ ತೀರಿಸಲು ವೃದ್ಧೆ ಸುಶೀಲಮ್ಮಳ ಉಸಿರುಗಟ್ಟಿಸಿ ಕೊಂದ - Vistara News

ಬೆಂಗಳೂರು

Murder Case : ಸಾಲ ತೀರಿಸಲು ವೃದ್ಧೆ ಸುಶೀಲಮ್ಮಳ ಉಸಿರುಗಟ್ಟಿಸಿ ಕೊಂದ

Murder Case : ಮೈ ತುಂಬ ಸಾಲ ಮಾಡಿಕೊಂಡಿದ್ದ ಆರೋಪಿ ದಿನೇಶ್‌ ಸಾಲಗಾರರ ಕಾಟಕ್ಕೆ ಬೇಸತ್ತಿದ್ದ. ಹೀಗಾಗಿ ಸಾಲ ತೀರಿಸಲು ವೃದ್ಧೆ ಸುಶೀಲಮ್ಮ ಬಳಿ ಹಣ ಕೇಳಿದ್ದ. ಆದರೆ ನಿರಾಕರಿಸಿದ್ದಕ್ಕೆ ಉಸಿರುಗಟ್ಟಿಸಿ ಕೊಂದಿದ್ದಾನೆ.

VISTARANEWS.COM


on

Man murders old woman to pay off debts
ದಿನೇಶ್‌ ಡ್ರಮ್‌ ತರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೆ.ಆರ್.ಪುರಂ ಠಾಣೆ ವ್ಯಾಪ್ತಿಯ ನಿಸರ್ಗ ಲೇಔಟ್‌ನಲ್ಲಿ ನಡೆದ ವೃದ್ಧೆ ಸುಶೀಲಮ್ಮ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ (Murder Case) ದಿನೇಶ್‌ ತಪ್ಪೊಪ್ಪಿಕೊಂಡಿದ್ದಾನೆ. ಸುಶೀಲಮ್ಮಳನ್ನು ಉಸಿರುಗಟ್ಟಿಸಿ ಕೊಂದು, ನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಮಾಡಿ ಡ್ರಮ್‌ಗೆ ತುಂಬಿಸಿ ಪಾಳು ಮನೆ ಬಳಿ ಬೀಸಾಕಿದ್ದ.

ಆರೋಪಿ ದಿನೇಶ್‌ ನಾಲ್ಕು ವರ್ಷಗಳ ಹಿಂದೆ ಚೆನ್ನೈನ ನೇವಿಯಲ್ಲಿ ಮರ್ಚಂಟ್ ಆಗಿ ಕೆಲಸ ಮಾಡಿಕೊಂಡಿದ್ದ. ಸುಮಾರು 30 ಲಕ್ಷ ರೂ.ನಷ್ಟು ಸಾಲ ಮಾಡಿಕೊಂಡಿದ್ದ. ಹೀಗಾಗಿ ಅಲ್ಲಿ ಕೆಲಸ ಬಿಟ್ಟು ಬೆಂಗಳೂರಿನ ಕೆ.ಆರ್‌.ಪುರಂನಲ್ಲಿ ಮನೆ ಮಾಡಿಕೊಂಡಿದ್ದ. ಕೆಲಸ ಇಲ್ಲದೆ ರಾಜಕೀಯದಲ್ಲಿ ಭಾಗಿಯಾಗಲು ಯತ್ನಿಸಿ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ. ಆಗ ಸುಶೀಲಮ್ಮಳನ್ನು ಪರಿಚಯ ಮಾಡಿಕೊಂಡಿದ್ದ.

Murder Case in Bengaluru
ಆರೋಪಿ ದಿನೇಶ್‌ ಹಾಗೂ ಹತ್ಯೆಯಾದ ಸುಶೀಲಮ್ಮ

ಇತ್ತೀಚಿಗೆ ಸಾಲಗಾರರ ಕಾಟ ಜಾಸ್ತಿಯಾಗಿತ್ತು. ಸಾಲ ಕೊಟ್ಟವರು ದಿನೇಶ್‌ ಮನೆ ಬಳಿಯೇ ಬರುತ್ತಿದ್ದ ಕಾರಣಕ್ಕೆ ಬೇಸತ್ತಿದ್ದ. ಈ ನಡುವೆ ಸುಶೀಲಮ್ಮ ಆಸ್ತಿಯನ್ನು ಮಾರಾಟ ಮಾಡಿ, ಕೋಟ್ಯಾಂತರ ರೂ. ಹಣ ಬಂದಿತ್ತು. ಈ ವಿಷಯ ತಿಳಿದಿದ್ದ ದಿನೇಶ್‌ ಹಣದ ಸಹಾಯವನ್ನು ಕೇಳಿದ್ದ. ಆದರೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಆಕೆಯ ಮೈಮೇಲಿದ್ದ ಚಿನ್ನಾಭರಣದ ಮೇಲೆ ಕಣ್ಣು ಬಿದ್ದಿತ್ತು.

ಹೀಗಾಗಿ ಫೆ.24ರ ಮಧ್ಯಾಹ್ನ ದಿನೇಶ್‌ ವೃದ್ಧೆ ಸುಶೀಲಮ್ಮಳನ್ನು ಮನೆಗೆ ಕರೆಸಿಕೊಂಡಿದ್ದ. ನಂತರ ಉಸಿರುಗಟ್ಟಿಸಿ ಕೊಲೆ ಮಾಡಿ, ಮೈಮೇಲಿದ್ದ ಚಿನ್ನಾಭರಣ ದೋಚಿದ್ದ. ಚಿನ್ನ ಕದ್ದು ಖುಷಿಯಲ್ಲಿದ್ದ ದಿನೇಶ್‌ಗೆ ನಿರಾಸೆಯಾಗಿತ್ತು. ಯಾಕೆಂದರೆ ಕಿವಿಯ ಓಲೆ ಬಿಟ್ಟರೇ ಉಳಿದಿದ್ದೆಲ್ಲವೂ ರೋಲ್ಡ್ ಗೋಲ್ಡ್ ಆಗಿತ್ತು. ಹೀಗಾಗಿ ಅದೇ ಚಿನ್ನದ ಓಲೆಯನ್ನು ಅಡವಿಟ್ಟು, ಆ ಹಣದಲ್ಲೇ ಡ್ರಮ್ ಖರೀದಿ ಮಾಡಿದ್ದ.

ಇದನ್ನೂ ಓದಿ: Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಅಪಮಾನ ಮಾಡಿದ ಮೆಟ್ರೋ ಸಿಬ್ಬಂದಿ ವಜಾ

ತನ್ನದೇ ಮನೆಯಲ್ಲಿ ದಿನೇಶ್‌ ಅಜ್ಜಿಯ ಮೃತದೇಹದೊಂದಿಗೆ ಒಂದು ದಿನ ಕಳೆದಿದ್ದಾನೆ. ಫೆ. 24ರ ರಾತ್ರಿ ಅಜ್ಜಿಯ ಮೃತದೇಹವನ್ನು ಸಾಗಿಸಲು ಆಗಿಲ್ಲ. ಹೀಗಾಗಿ ದೇಹವನ್ನು ತುಂಡು ತುಂಡಾಗಿ ಕಟ್ ಮಾಡಿದ್ದಾನೆ. ನಂತರ ಕೆ.ಆರ್.ಪುರಂ ಬಸ್ ಸ್ಟ್ಯಾಂಡ್ ಬಳಿ ಡ್ರಮ್ ಹಾಗೂ ಡಸ್ಟ್ ಬೀನ್ ಕವರ್ ಖರೀದಿ ಮಾಡಿದ್ದಾನೆ. ಫೆ.25 ರ ಮುಂಜಾನೆ 3:30ಕ್ಕೆ ವೃದ್ಧೆಯ ದೇಹವನ್ನು ತುಂಡು ತುಂಡಾಗಿ ಕಟ್ ಮಾಡಿ ಡ್ರಮ್‌ಗೆ ತುಂಬಿ ಬಿಸಾಡಲು ಪ್ಲಾನ್‌ ಮಾಡಿದ್ದ. ಅದರಂತೆ ಆವಲಹಳ್ಳಿ ಕೆರೆಗೆ ಮೃತದೇಹದ ಕೆಲ ಭಾಗಗಳನ್ನು ಬಿಸಾಡಿ ಬಂದಿದ್ದ.

ಮೃತದೇಹ ಬಿಸಾಡುವ ಮುನ್ನ ಮನೆಯ ಮುಂಭಾಗದ ಬೀದಿ ದೀಪವನ್ನು ಆಫ್‌ ಮಾಡಿದ್ದ. ಆ ನಂತರ ಮೃತದೇಹವಿದ್ದು ಡ್ರಮ್ ತಗೆದುಕೊಂಡು ಹೋಗಿ ಪಾಳು ಮನೆ ಬಳಿ ಬಿಸಾಡಿ ಬಂದಿದ್ದ. ಪೊಲೀಸರು ಸಿಸಿ ಟಿವಿ ಪರಿಶೀಲನೆ ವೇಳೆ ಆರೋಪಿ ಚಹರೆ ಪತ್ತೆಯಾಗಿತ್ತು. ಪೊಲೀಸರು ಆರೋಪಿ ದಿನೇಶ್‌ನನ್ನು ತೀವ್ರ ವಿಚಾರಣೆ ನಡೆಸಿದಾಗ ಎಲ್ಲವನ್ನೂ ಬಾಯ್ಬಿಟ್ಟಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bangalore Rain: ಮಳೆ ಹಾನಿ ಬಗ್ಗೆ ಬೆಸ್ಕಾಂಗೆ ದೂರುಗಳ ಸುರಿಮಳೆ; ಉರುಳಿ ಬಿದ್ದ 176 ವಿದ್ಯುತ್ ಕಂಬ, 9 ಟ್ರಾನ್ಸ್‌ಫಾರ್ಮರ್‌ಗೆ ಹಾನಿ

Bangalore Rain: ಬೆಂಗಳೂರು ನಗರ ವ್ಯಾಪ್ತಿಯಲ್ಲಿ 74 ವಿದ್ಯುತ್ ಕಂಬಗಳು ಧರೆಗುರುಳಿದ್ದು, 102 ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿವೆ. ಇನ್ನು 9 ಟ್ರಾನ್ಸ್ ಫಾರ್ಮರ್‌ಗಳಿಗೆ ಮಳೆಯಿಂದ ಹಾನಿಯಾಗಿದೆ. ಇದರಿಂದ ಬೆಸ್ಕಾಂಗೆ ಕೋಟ್ಯಂತರ ರೂ. ನಷ್ಟವಾಗಿದೆ.

VISTARANEWS.COM


on

Bangalore Rain
ಬೆಂಗಳೂರಿನ ಬಿಟಿಎಂ ಲೇಔಟ್‌ನ 29ನೇ ಮುಖ್ಯ ರಸ್ತೆಗೆ ಬೃಹತ್ ಮರ ಬಿದ್ದಿದ್ದು, ತೆರವು ಕಾರ್ಯ ನಡೆಯುತ್ತಿದೆ.
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯು (Bangalore Rain) ಸಾಕಷ್ಟು ಅವಾಂತರ ಸೃಷ್ಟಿಸಿದೆ. ಹೀಗಾಗಿ ಬೆಸ್ಕಾಂ ಹೆಲ್ಪ್ ಲೈನ್‌ 1912ಗೆ ದೂರುಗಳ ಸುರಿಮಳೆಯೇ ಬಂದಿದ್ದು, ವಿದ್ಯುತ್‌ ಕಂಬಗಳು ಉರುಳಿರುವುದು, ಮರಗಳು ಬಿದ್ದಿರುವುದು, ವಿದ್ಯುತ್‌ ಕಡಿತ ಸೇರಿ ಹಲವು ಸಮಸ್ಯೆಗಳ ಬಗ್ಗೆ ಬರೋಬ್ಬರಿ 8745 ದೂರುಗಳು ದಾಖಲಾಗಿವೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಭಾನುವಾರ (ಜೂ.2) ಸುರಿದ ಮಳೆಯು (Heavy Rain) 133 ವರ್ಷಗಳ ರೆಕಾರ್ಡ್ ಬ್ರೇಕ್ ಮಾಡಿರುವುದು ಕಂಡುಬಂದಿದೆ.

ಧಾರಕಾರ ಮಳೆ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ದೂರುಗಳು ಬಂದಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ 74 ವಿದ್ಯುತ್ ಕಂಬಗಳು ಧರೆಗುರುಳಿದ್ದು, 102 ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿವೆ. ಇನ್ನು 9 ಟ್ರಾನ್ಸ್‌ಫಾರ್ಮರ್‌ಗಳಿಗೆ ಮಳೆಯಿಂದ ಹಾನಿಯಾಗಿದೆ. ಭಾರಿ ಮಳೆಗೆ ಬೆಸ್ಕಾಂ ತತ್ತರಿಸಿದ್ದು, ತಡರಾತ್ರಿ ಸುರಿದ ಮಳೆಯಿಂದ ಬೆಸ್ಕಾಂಗೆ ಕೋಟ್ಯಂತರ ರೂ. ನಷ್ಟವಾಗಿದೆ.

ಬೆಂಗಳೂರಿನಲ್ಲಿ ಭಾನುವಾರ 111.2 ಮಿ.ಮೀ ಮಳೆ

ಬೆಂಗಳೂರಿನಲ್ಲಿ ಭಾನುವಾರ ಸಂಜೆ ಸುರಿದ ಮಳೆಯು 133 ವರ್ಷಗಳ ದಾಖಲೆಯನ್ನು ಮುರಿದಿದೆ. ರಾಜಧಾನಿಯಲ್ಲಿ ಮೇ 2ರಂದು 111.2 ಮಿ.ಮೀ ಮಳೆ ಸುರಿದಿದ್ದು, ಜೂನ್ ತಿಂಗಳಲ್ಲಿ ಆದ ದಾಖಲೆಯ ಮಳೆ ಇದಾಗಿದೆ. 1891 ಜೂನ್ 16 ರಂದು 101.6 ಮಿ.ಮೀ ಮಳೆಯಾಗಿತ್ತು. ಆದರೆ, ನೆನ್ನೆ ಸುರಿದ ಜೂನ್ ತಿಂಗಳ ಮಳೆ 133 ವರ್ಷಗಳ ದಾಖಲೆ ಮುರಿದಿದೆ ಎಂದು ವಿಸ್ತಾರನ್ಯೂಸ್‌ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

1891 ಜೂನ್ 16 ರಂದು 101.6 ಮಿ.ಮೀ ಮಳೆಯಾಗಿತ್ತು. 2013 ಜೂನ್ 1 ರಂದು 100 ಮಿ.ಮೀ ಮಳೆ ಹಾಗೂ 2009 ಜೂನ್ 11 ರಂದು 89.6 ಮಿ.ಮೀ ಮಳೆಯಾಗಿತ್ತು.

Bangalore Rain

ಇದನ್ನೂ ಓದಿ | Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

ಬೆಂಗಳೂರಿಗೆ ಮುಂಗಾರು ಶಾಕ್‌, ನೂರಾರು ಮರಗಳು ಧರೆಗೆ, ಅಪಾರ್ಟ್‌ಮೆಂಟ್‌ ನಿವಾಸಿಗಳು ಅಲ್ಲೇ ಲಾಕ್!‌

bangalore rain news

ಬೆಂಗಳೂರು: ಮುಂಗಾರು (monsoon) ಸಾಕಷ್ಟು ಅಬ್ಬರದಿಂದಲೇ ರಾಜಧಾನಿಯನ್ನು (Bangalore rain news) ಪ್ರವೇಶಿಸಿದೆ. ನಿನ್ನೆ ಸಂಜೆಯಿಂದ ಸುರಿದ ಭಾರಿ ಮಳೆಗೆ ನಗರದ (Bengaluru rain news) ಹಲವು ಕಡೆ ಮರಗಳು (trees fall) ಮುರಿದುಬಿದ್ದಿವೆ. ತಗ್ಗು ಪ್ರದೇಶಗಳಿಗೆ ನೀರು (water clogging) ನುಗ್ಗಿದೆ. ಬೆಳ್ಳಂದೂರಿನ ಒಂದು ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ಗೆ ನೀರು ನುಗ್ಗಿದ್ದು, ನಿವಾಸಿಗಳು ಮನೆಗಳಲ್ಲೇ ಲಾಕ್‌ ಆಗಿದ್ದಾರೆ.

“ನಿನ್ನೆ ಸುರಿದ ಭಾರಿ ಮಳೆಗೆ ನಗರದಲ್ಲಿ ಸುಮಾರು 260ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಬಹುತೇಕ ಜಯನಗರ. ಬಸವನಗುಡಿ ಸುತ್ತಮುತ್ತಲಿನಲ್ಲಿ 100ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಸದ್ಯ ಮರಗಳನ್ನು ತೆರವು ಮಾಡೋದಕ್ಕೆ ಬಿಬಿಎಂಪಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಚರಣೆ ಮಾಡುತ್ತಿದ್ದಾರೆ. ಮೊದಲು ಸಂಚಾರಕ್ಕೆ ಅನುಕೂಲ ಕಲ್ಪಿಸಲು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳ ತೆರವು ಮಾಡುತ್ತಿದ್ದೇವೆ. ಸಂಜೆ ವೇಳೆಗೆ ನಗರದ ಬಹುತೇಕ ಕಡೆ ಮರಗಳನ್ನು ತೆರವು ಮಾಡುತ್ತೇವೆ” ಎಂದು ಬಿಬಿಎಂಪಿ ಅರಣ್ಯ ವಿಭಾಗದ ಮುಖ್ಯಸ್ಥರು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

Bangalore rain news

ಬೃಹತ್ ಗಾತ್ರದ ಮರಗಳು, ಸಣ್ಣ ಮರಗಳು ಹಾಗೂ ಕೊಂಬೆಗಳು ಧರಾಶಾಯಿಯಾದವು. ಬಸವೇಶ್ವರನಗರದಲ್ಲೂ ಮರಗಳು ಧರೆಗುರುಳಿವೆ. 3ನೇ ಮುಖ್ಯರಸ್ತೆಯಲ್ಲಿ ಕಾರ್ ಮೇಲೆ ಮರ ಬಿದ್ದು ಕಾರ್ ಜಖಂ ಆಗಿದೆ. ಜಯನಗರದ ಕೃಷ್ಣರಾವ್ ಪಾರ್ಕ್ ಬಳಿ ಬೃಹತ್ ಗಾತ್ರದ ಮರ ಟ್ರಾನ್ಸ್‌ಫಾರ್ಮರ್‌ ಮೇಲೆ ಬಿದ್ದು ರಾತ್ರಿ ಇಡೀ ವಿದ್ಯುತ್ ಕಟ್‌ ಆಗಿದೆ. ಜಯನಗರ ಸುತ್ತಮುತ್ತ ಸುಮಾರು ‌50ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಗಿರಿನಗರದಲ್ಲಿ ಮರ ಬಿದ್ದು ಕಾರು ಹಾಗೂ ದ್ವಿಚಕ್ರ ವಾಹನ ಸಂಪೂರ್ಣ ನಜ್ಜು ಗುಜ್ಜು ಆಗಿದೆ.

ಹಲವು ತಗ್ಗು ಪ್ರದೇಶಗಳಲ್ಲಿ ಮನೆಗಳು ಜಲಾವೃತಗೊಂಡವು. ಕೊತ್ತನೂರು ಭಾಗದಲ್ಲಿ ರಸ್ತೆ ಹಾಗೂ ಮನೆಗಳು ಪೂರ್ತಿ ಸಂಪೂರ್ಣ ಜಲಾವೃತವಾಗಿದೆ. ಮನೆಯೊಳಗೆ ನೀರು ತುಂಬಿ ಮನೆ ಮಾಲೀಕರು ಇಡೀ ರಾತ್ರಿ ಜಾಗರಣೆ ಮಾಡಿದರು. ಸುಮಾರು 60ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ತುಂಬಿದೆ. ನಗರದ 8 ವಲಯಗಳಲ್ಲಿ ಮನೆಗಳಿಗೆ ನೀರು ತುಂಬಿ ಅಕ್ಕಿ, ಬೇಳೆ ಸೇರಿದಂತೆ ಇತರೆ ವಸ್ತುಗಳು ಹಾಳಾಗಿವೆ. ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಂತೆ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.

Bangalore rain news

ರಸ್ತೆಯಲ್ಲಿ ನೀರು ನಿಂತಿದ್ದು ಒಂದು ತರಹದ ಸಮಸ್ಯೆಯಾದರೆ, ವಿದ್ಯುತ್ ಕಂಬಗಳದ್ದು ಮತ್ತೊಂದು ಸಮಸ್ಯೆ. ಕಂಬಗಳು ಮುರಿದು ಬಿದ್ದಿವೆ. ಉಮಾ ಥಿಯೇಟರ್ ಬಳಿ 4 ವಿದ್ಯುತ್ ಕಂಬಗಳು ಗಾಳಿಯಿಂದ ಅರ್ಧಂಬರ್ಧ ಬಿದ್ದಿವೆ. 4 ವಿದ್ಯುತ್ ಕಂಬಗಳ ವಯರ್ ರಸ್ತೆಯಲ್ಲಿ ಬಿದ್ದರೆ ವಾಹನ ಸವಾರರ ಜೀವಕ್ಕೆ ಹಾನಿ ಸಾಧ್ಯತೆ ಇದೆ. ಲಾಲ್‌ಬಾಗ್‌ನಲ್ಲಿ ಮರ ಬಿದ್ದು ಕಾಂಪೌಂಡ್ ಕುಸಿತವಾಗಿದೆ.

ಇದನ್ನೂ ಓದಿ: Karnataka Weather : ಬೆಂಗಳೂರಿಗೆ ಆವರಿಸಿದ ಮುಂಗಾರು; ಹಲವೆಡೆ ಇಂದು ಗಾಳಿಯೊಂದಿಗೆ ಭಯಂಕರ ಮಳೆ

ನಿನ್ನೆ ಸುರಿದ ಮಳೆಗೆ ಬೆಳ್ಳಂದೂರಿನ ಗ್ರೀನ್ ಎಲಿಗೆನ್ಸ್ ಅಪಾರ್ಟ್ಮೆಂಟ್‌ನ ಬೇಸ್‌ಮೆಂಟ್‌ಗೆ ನೀರು ನುಗ್ಗಿದ್ದು, ನಾಲ್ಕು ಕಾರು, ಬೈಕ್‌ಗಳು ಮುಳುಗಿವೆ. ರಾಜಕಾಲುವೆ ನೀರು ಅಪಾರ್ಟ್ಮೆಂಟ್‌ನೊಳಗೆ ನುಗ್ಗಿದೆ. ಕಳೆದ ಮೂರು ದಿನದಿಂದ ಅಪಾರ್ಟ್ಮೆಂಟ್‌ಗೆ ವಿದ್ಯುತ್‌ ಸಂಪರ್ಕ ಕಟ್‌ ಆಗಿದೆ. ನಿವಾಸಿಗಳು ಅಪಾರ್ಟ್ಮೆಂಟ್‌ನಲ್ಲೇ ಲಾಕ್ ಆಗಿದ್ದಾರೆ. ಅಪಾರ್ಟ್ಮೆಂಟ್ ಬೇಸ್‌ಮೆಂಟ್‌ನಿಂದಲೇ ಓಡಾಡಲು ದಾರಿ ಆಗಿರುವ ಕಾರಣ, ಕತ್ತಿನವರೆಗೆ ನಿಂತಿರುವ ನೀರಿನಲ್ಲಿ ಓಡಾಡಲಾಗದೆ 40 ಫ್ಲಾಟ್ ಮಾಲೀಕರು ಅಲ್ಲೇ ಬಾಕಿ ಆಗಿದ್ದಾರೆ. ಪಕ್ಕದ ಕಾಂಪೌಂಡ್‌ಗೆ ಏಣಿ ಹಾಕಿ ಓಡಾಟ ಮಾಡುತ್ತಿದ್ದಾರೆ.

Continue Reading

ಮಳೆ

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Karnataka Rain : ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಭಾನುವಾರ ಸುರಿದ ಎರಡು ಗಂಟೆಯ ಮಳೆಗೆ ಹಳೆಯ ದಾಖಲೆಗಳನ್ನು ಮುರಿದು ಮುನ್ನುಗ್ಗಿದೆ. 133 ವರ್ಷದ ದಾಖಲೆಯನ್ನು ಬೆಂಗಳೂರು ಮಳೆ ರೆಕಾರ್ಡ್ ಬ್ರೇಕ್ ಮಾಡಿದೆ. ಜತೆಗೆ ಸೋಮವಾರವು ಹಲವೆಡೆ ಮಳೆಯು ಅಬ್ಬರಿಸಿದೆ.

VISTARANEWS.COM


on

By

Karnataka Rain
Koo

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru Rain) ಜೂನ್‌ ಮೊದಲ ವಾರವೇ ಮಳೆಯಲ್ಲಿ ರೆಕಾರ್ಡ್‌ ಬ್ರೇಕ್‌ ಮಾಡಿದೆ. ಜೂ.2ರ ಭಾನುವಾರ ಬೆಂಗಳೂರಿನಲ್ಲಿ 111.2 mm ಮಳೆಯಾಗಿದೆ. ಈ ಮೂಲಕ 133 ವರ್ಷಗಳ ದಾಖಲೆಯನ್ನು ಮುರಿದಿದೆ. ಬೆಂಗಳೂರಿನಲ್ಲಿ 1891ರ ಜೂನ್ 16ರಂದು 101.6 mm ಮಳೆ ಆಗಿತ್ತು. ಆದರೆ ನಿನ್ನೆ ಭಾನುವಾರ ಸುರಿದ ಜೂನ್ ತಿಂಗಳ ಮಳೆ 133 ವರ್ಷಗಳ ದಾಖಲೆ (Karnataka Rain) ಮುರಿದಿದೆ ಎಂದು ವಿಸ್ತಾರ ನ್ಯೂಸ್‌ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಾಖಲೆಯ ಮಳೆ ಅಬ್ಬರದ ಡಿಟೈಲ್ಸ್‌

ವರ್ಷ- ಮಳೆ ಪ್ರಮಾಣ
1891ರ ಜೂನ್ 16ರಂದು 101.6 mm
2013ರ ಜೂನ್‌ 1ರಂದು 100mm
2009ರ ಜೂನ್ 11ರಂದು 89.6 mm
2024ರ ಜೂನ್‌ 2ರಂದು 111.2 mm

ಇದನ್ನೂ ಓದಿ: Bangalore Rain News : ಬೆಂಗಳೂರಿನಲ್ಲಿ ಭಾರಿ ಮಳೆ; ಹಲವು ಕಡೆ ಉರುಳಿ ಬಿದ್ದ ಮರಗಳು, ಮೆಟ್ರೋ ಸಂಚಾರಕ್ಕೂ ಅಡಚಣೆ

ಚಿಕ್ಕಮಗಳೂರಲ್ಲಿ ಮಳೆಗೆ 50 ಎಕರೆ ಅಡಿಕೆ ತೋಟ ಜಲಾವೃತ

ಚಿಕ್ಕಮಗಳೂರು ಬಯಲುಸೀಮೆ ಭಾಗದಲ್ಲಿ ಸೋಮವಾರ (ಜೂ. 3) ಭಾರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ 50 ಎಕರೆ ಅಡಿಕೆ ತೋಟ ಜಲಾವೃತಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು, ಸಾದರಹಳ್ಳಿ ಗ್ರಾಮಗಳಲ್ಲಿ ಘಟನೆ ನಡೆದಿದೆ. ಗ್ರಾಮದ ಬಸವರಾಜು, ಲೋಕೇಶ್ ಸೇರಿದಂತೆ ಹಲವು ರೈತರ ತೋಟ ನೀರುಪಾಲಾಗಿದೆ. ಇನ್ನೂ ಚಿಕ್ಕಮಗಳೂರು, ಮುಡಿಗೆರೆ, ಕೊಪ್ಪ, ಶೃಂಗೇರಿ, ಎನ್‌ಆರ್ ಪುರದಲ್ಲಿ ನಿರಂತರ ಮಳೆಯಿಂದಾಗಿ ಜನ-ಜೀವನ ಅಸ್ತವ್ಯಸ್ತವಾಗಿದೆ. ಕೊಟ್ಟಿಗೆಹಾರ, ಚಾರ್ಮಾಡಿ, ಕಿಗ್ಗಾ, ಬಸರಿ ಕಟ್ಟೆ ಭಾಗದಲ್ಲೂ ವ್ಯಾಪಕ ಮಳೆಯಾಗುತ್ತಿದೆ.

ದಾವಣಗೆರೆಯಲ್ಲಿ ಕೊಚ್ಚಿ ಹೋದ ಮಂಡಲೂರು ಸೇತುವೆ

ಭಾನುವಾರ ರಾತ್ರಿ ಸುರಿದ ಮಳೆಯಿಂದ ಮಂಡಲೂರು ಸೇತುವೆ ಕೊಚ್ಚಿ ಹೋಗಿದೆ. ದಾವಣಗೆರೆಯ ಮಂಡಲೂರಿನಿಂದ ಕಾಟಿಹಳ್ಳಿ ತಾಂಡಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಕೊಚ್ಚಿ ಹೋದ ಕಾರಣದಿಂದ ಸಂಚಾರಕ್ಕೆ ಅಡಚಣೆ ಆಗಿತ್ತು. ಮಂಡಲೂರು ಗ್ರಾಮಕ್ಕೆ ಬರಲು ಹೋಗಲು ಆಗದೆ ಕಾಟಿಹಳ್ಳಿ ತಾಂಡದ ಜನರಿಗೆ ತೊಂದರೆ ಅನುಭವಿಸಿದರು. ಸೇತುವೆ ತುರ್ತು ಕಾಮಗಾರಿ ಆರಂಭಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಕೊಡಗಿಗೂ ಎಂಟ್ರಿ ಕೊಟ್ಟ ಮುಂಗಾರು ಮಳೆ

ಸೋಮವಾರ ಕೊಡಗು ಜಿಲ್ಲೆಯ ಹಲವೆಡೆ ತುಂತುರು ಮಳೆ ಆರಂಭವಾಗಿದೆ. ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲ ವಾತವರಣವಿತ್ತು. ಸೋಮವಾರ ಮಧ್ಯಾಹ್ನದ ನಂತರ ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಮನ್ಸೂನ್ ಮಾದರಿಯ ವಾತಾವರಣ ಕಂಡು ಬಂತು. ಮಳೆಯಿಂದಾಗಿ ಕೊಡಗಿನ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿದೆ. ಇತ್ತ ದಿಢೀರ್‌ ಮಳೆಗೆ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಪರದಾಡಿದರು.

ಚಿತ್ರದುರ್ಗದಲ್ಲಿ ಮಳೆಗೆ ಬೆಳೆ ನಾಶ

ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಆರ್ಭಟಕ್ಕೆ ಮೊಳಕಾಲ್ಮುರು ತಾಲೂಕಿನಲ್ಲಿ ಅವ್ಯವಸ್ಥೆ ಆಗಿದೆ. ಪಕ್ಕುರ್ತಿ ಗ್ರಾಮದಲ್ಲಿ ಮಳೆಯಿಂದಾಗಿ ಶೇಂಗಾ, ಹತ್ತಿ, ಕಲ್ಲಂಗಡಿ, ಕನಕಾಂಬರ ಬೆಳೆ ನಾಶವಾಗಿದೆ. ಮಳೆ ರಭಸಕ್ಕೆ ನಾಲ್ಕು ಬೋರ್ವೆಲ್,ವಿದ್ಯುತ್ ಪರಿಕರ,ಪೈಪ್ ಲೈನ್ ಕೊಚ್ಚಿ ಹೋಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Rain News : ಮಳೆ ಬಂತು ಎಂದರೆ ಸಾಕು ಹಾವುಗಳ ಕಾಟ (Snake Rescue) ಹೆಚ್ಚಾಗುತ್ತದೆ. ಮಳೆ ಆಶ್ರಯ ಪಡೆಯಲು ಮನೆಗಳಿಗೆ ಹಾಗೂ ಸಿಕ್ಕ ಸಿಕ್ಕಲ್ಲಿ ಹಾವುಗಳು ನುಗ್ಗಿತ್ತಿವೆ. ಸದ್ಯ ನಿನ್ನೆ ಭಾನುವಾರದ ಸುರಿದ ಮಳೆಗೆ (Karnataka rain) ನೀರಿನಲ್ಲಿ ಹರಿದು ಬಂದ ಹಾವುವೊಂದು ಬೈಕ್‌ನಲ್ಲಿ ಸೇರಿಕೊಂಡು ಆತಂಕವನ್ನುಂಟು ಮಾಡಿತ್ತು.

VISTARANEWS.COM


on

By

Snake Rescue Snakes spotted in heavy rain
Koo

ಬೆಂಗಳೂರು: ಹಾವು ಎಂದರೆ ಎಂಥ ಗಟ್ಟಿ ಮನುಷ್ಯನಿಗಾದರೂ ಒಮ್ಮೆ ಭಯವಾಗುತ್ತದೆ. ದಾರಿಯಲ್ಲಿ ಹೋಗುತ್ತಿದ್ದಾಗ ಎದುರಿಗೆ ಕಂಡರೂ ಸಾಕು ಮೈ ಪೂರಾ ಬೆವರಿಬಿಡುತ್ತದೆ. ಅದೇ ಪಕ್ಕವೇ ಬಂದರೆ? ಗಂಟಲು ಒಣಗಿಬಿಡುತ್ತದೆ. ಇಲ್ಲಾಗಿದ್ದೂ ಅದೇ ಕಥೆ. ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ (Rain News) ಅಡಗಿದ್ದ ಹಾವುಗಳೆಲ್ಲವೂ ಹೊರ ಬರುತ್ತಿವೆ. ಹೀಗೆ ಮಳೆ (Karnataka rain) ನೀರಿನಲ್ಲಿ ಹರಿದು ಬಂದ ಹಾವೊಂದು (Snake Rescue) ಬೈಕ್‌ನಲ್ಲಿ ಸೇರಿಕೊಂಡು ಅವಾಂತರವನ್ನೇ ಸೃಷ್ಟಿಸಿತ್ತು.

ನಿನ್ನೆ ಭಾನುವಾರ ಮನೆಯಿಂದ ಹೊರಟ ಬೈಕ್‌ ಸವಾರನೊಬ್ಬನಿಗೆ ಮಳೆಯು ಎದುರಾಗಿತ್ತು. ದಿಢೀರ್‌ ಸುರಿದ ಮಳೆಯಿಂದಾಗಿ ಬೈಕ್‌ ಪಾರ್ಕ್‌ ಮಾಡಿ ರಸ್ತೆ ಬದಿಯ ನಿಲ್ದಾಣದಲ್ಲಿ ನಿಂತಿದ್ದ. ಮಳೆ ಕಡಿಮೆ ಆಯ್ತಲ್ಲ, ಇನ್ನೂ ಮನೆಗೆ ಹೋಗೋಣ ಅಂತ ಬೈಕ್‌ ಹತ್ರ ಬಂದರೆ ಬೈಕಿಂದ ಹಾವೊಂದು ಎದ್ದು ಬಂದಿದೆ. ಅಬ್ಬಾ.. ಹಾವು ಕಂಡೊಡನೆ ಹೇಗಾಗಿರಬೇಡ ಆ ಸವಾರನಿಗೆ! ಉಸಿರು ನಿಂತಂತೆ ಆಗಿದೆ. ಅಷ್ಟು ಜೋರು ಮಳೆಯಿಂದ ವಾತಾವರಣ ಕೂಲ್‌ ಆಗಿದ್ದರೂ ಆ ಸವಾರನಿಗೆ ಬೆವರುವಂತಾಗಿತ್ತು.

ಭಾರಿ ಮಳೆಗೆ ಹಾವೊಂದು ನೀರಲ್ಲಿ ಹರಿದು ಬಂದು ಬೈಕ್‌ನಲ್ಲಿ ಬೆಚ್ಚಗೆ ಕುಳಿತಿತ್ತು. ಅದೇ ಭಯದಲ್ಲಿ ಸವಾರ ದಿಕ್ಕು ತೋಚದಂತಾಗಿ ಬೈಕ್‌ನಿಂದ ದೂರ ಉಳಿದಿದ್ದ. ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞ ಹಾವು ಹಿಡಿದರು. ಆ ಬಳಿಕ ಸವಾರ ನಿಟ್ಟುಸಿರು ಬಿಟ್ಟರು.

ಇದನ್ನೂ ಓದಿ: Karnataka Rain : ಸಿಡಿಲಿಗೆ ಆಕಳು ಬಲಿ; ಹಲವೆಡೆ ಮಳೆ ಅವಾಂತರಕ್ಕೆ ಜನರು ತತ್ತರ

ಮಳೆಗಾಲದಲ್ಲಿ ಶುರುವಾದ ಹಾವುಗಳ ಕಾಟ

ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವ ಹಾವುಗಳು ಜನರನ್ನು ಬೆಚ್ಚಿಬೀಳಿಸುತ್ತಿದೆ. ಚಳಿ, ಶೀತಗಾಳಿ ಜಿಟಿ ಜಿಟಿ ಮಳೆ ಶುರುವಾದರೆ ಸಾಕು ಬೆಚ್ಚಗಿರುವ ಜಾಗ ಹುಡುಕಿಕೊಂಡು ಹೊರಬರುತ್ತಿವೆ. ಶೂ ಒಳಗೆ, ಹೆಲ್ಮೆಟ್‌ , ಸ್ಕೂಟರ್‌ನಲ್ಲಿ ಹಾವುಗಳು ಪ್ರತ್ಯಕ್ಷವಾಗುತ್ತಿವೆ. ಸದ್ಯ ಬೆಂಗಳೂರು ಮಂದಿಗೆ ಹಾವುಗಳ ಕಾಟ ಶುರುವಾಗಿವೆ.

Snake Rescue

ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ ಮತ್ತು ರಾಜರಾಜೇಶ್ವರಿನಗರ ವಲಯದಲ್ಲಿ ಹಾವುಗಳು ಹೆಚ್ಚು ಕಂಡು ಬರುತ್ತಿವೆ. ಭಾರಿ ಮಳೆಗೆ ಆಶ್ರಯಕ್ಕಾಗಿ ಮನೆಗಳಿಗೆ ಹಾವುಗಳು ನುಗ್ಗುತ್ತಿವೆ. ಇದು ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

MP Renukacharya : ಎಂ.ಪಿ ರೇಣುಕಾಚಾರ್ಯ, ಪುತ್ರನಿಗೆ ಫೋನ್‌ನಲ್ಲಿ ಕೊಲೆ ಬೆದರಿಕೆ

ಇಂದು ಬೆಳಗ್ಗೆ ಬೆದರಿಕೆ ಕರೆ ಬಂದಿದ್ದು, ʼನಿನಗೂ ನಿನ್ನ ಮಗನಿಗೂ ಇವತ್ತು ರಾತ್ರಿ ಒಳಗೆ ಮುಗಿಸ್ತೀವಿʼ ಎಂದು ಕರೆ ಮಾಡಿದವರು ಬೆದರಿಸಿದ್ದಾರೆ. 912250155161 ಹಾಗೂ 60695539248 ನಂಬರ್‌ಗಳಿಂದ ಕರೆ ಮಾಡಲಾಗಿದೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

VISTARANEWS.COM


on

MP Renukacharya
Koo

ಬೆಂಗಳೂರು: ಮಾಜಿ ಸಚಿವ, ಹೊನ್ನಾಳಿ (Honnali) ಮಾಜಿ ಶಾಸಕ, ಬಿಜೆಪಿ (BJP) ಮುಖಂಡ ಎಂಪಿ ರೇಣುಕಾಚಾರ್ಯ (MP Renukacharya) ಅವರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ (murder threat) ಒಡ್ಡಲಾಗಿದೆ. ಮಗನನ್ನೂ ಕೊಲೆ ಮಾಡುತ್ತೇವೆ ಎಂದು ಬೆದರಿಸಲಾಗಿದೆ.

ಇಂದು ಬೆಳಗ್ಗೆ ಬೆದರಿಕೆ ಕರೆ ಬಂದಿದ್ದು, ʼನಿನಗೂ ನಿನ್ನ ಮಗನಿಗೂ ಇವತ್ತು ರಾತ್ರಿ ಒಳಗೆ ಮುಗಿಸ್ತೀವಿʼ ಎಂದು ಕರೆ ಮಾಡಿದವರು ಬೆದರಿಸಿದ್ದಾರೆ. 912250155161 ಹಾಗೂ 60695539248 ನಂಬರ್‌ಗಳಿಂದ ಕರೆ ಮಾಡಲಾಗಿದೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ರೈತ ವಿರೋಧಿ ಸರಕಾರ: ರೇಣುಕಾಚಾರ್ಯ

ಈ ಸರ್ಕಾರ ರೈತ ವಿರೋಧಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದ ಸಂದರ್ಭದಿಂದ ಇಲ್ಲಿಯವರೆಗೆ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಆತ್ಮಹತ್ಯೆಗೆ ಕಾರಣ ಕಂಡುಹಿಡಿದು ಸಾಲ ಮನ್ನಾ ಮಾಡುವುದು ಸೇರಿದಂತೆ ರೈತಪರ ಯೋಜನೆಗಳನ್ನು ರೂಪಿಸಬೇಕು ಎಂದಿದ್ದಾರೆ.

ಅಮಾನತು ಆದೇಶ ಹಿಂಪಡೆಯಬೇಕು: ಚನ್ನಗಿರಿ ಪೊಲೀಸ್‍ ಠಾಣೆ ಮೇಲೆ ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆ ನಡೆದರೂ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಂಡಿಲ್ಲ. ಬದಲಿಗೆ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ ಹಾಗೂ ಪೊಲೀಸ್‍ ಇನ್‌ಸ್ಪೆಕ್ಟರ್ ನಿರಂಜನ ಅವರನ್ನು ಹೊಣೆಗಾರರನ್ನಾಗಿಸಿ ಅಮಾನತುಗೊಳಿಸಿ, ತುಷ್ಟೀಕರಣ ನೀತಿ ಅನುಸರಿಸಿರುವುದು ಖಂಡನೀಯ. ಸರ್ಕಾರ ಕೂಡಲೇ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಚಂದ್ರಶೇಖರ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಿ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರು ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ನಿಗಮದ ಬಹುಕೋಟಿ ಹಗರಣ ಹಾಗೂ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಬಿಜೆಪಿ ಫೈರ್‌ ಬ್ರ್ಯಾಂಡ್‌ಗಳ ಸೋಲು ಗೆಲುವಿನ ಲೆಕ್ಕಾಚಾರ ಹೇಗಿದೆ? ಎಕ್ಸಿಟ್‌ ಪೋಲ್‌ ಹೇಳೋದೇನು?

Continue Reading
Advertisement
Hornbill bird sighting in Gangavathi
ಕರ್ನಾಟಕ2 mins ago

Hornbill Bird: ಗಂಗಾವತಿಯಲ್ಲಿ ‘ಹಾರ್ನ್‌ಬಿಲ್’ ಪಕ್ಷಿ ಪ್ರತ್ಯಕ್ಷ

Samsung Big TV Days Sale Exciting offer on big TVs
ದೇಶ5 mins ago

Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

Davangere Lok Sabha Constituency
ದಾವಣಗೆರೆ8 mins ago

Davangere Lok Sabha Constituency: ದಾವಣಗೆರೆಯಲ್ಲಿ ನಾರಿಶಕ್ತಿ ಕದನ, ಯಾರು ಗೆದ್ದರೂ ಇತಿಹಾಸ

Rahul Dravid
ಕ್ರಿಕೆಟ್9 mins ago

Rahul Dravid: ರೋಹಿತ್​, ಕೊಹ್ಲಿ, ಪಂತ್​ ಸೇರಿ ಎಲ್ಲ ಆಟಗಾರರಿಗೆ ಖಡಕ್​ ಎಚ್ಚರಿಕೆ ನೀಡಿದ ಕೋಚ್​ ದ್ರಾವಿಡ್​

Kannada New Movie Mandela nari shrinivas
ಸ್ಯಾಂಡಲ್ ವುಡ್9 mins ago

Kannada New Movie: `ಮಂಡೇಲಾ’ ಚಿತ್ರಕ್ಕೆ ನಾರಿ ಶ್ರೀನಿವಾಸ್ ನಾಯಕ!

Election Result 2024
ಪ್ರಮುಖ ಸುದ್ದಿ15 mins ago

Election Result 2024: ಇಂಡಿ ಒಕ್ಕೂಟ ಸಭೆ ಸೇರಿದ್ದ ಸ್ಥಳದಲ್ಲೇ ವಾಸ್ತುದೋಷ, ಅಂದು ಅಮವಾಸ್ಯೆ ಬೇರೆ; ಹಾಗಾಗಿ…

Fact Check
Fact Check26 mins ago

Fact Check: ಸೋಲುವ ಭೀತಿಯಲ್ಲಿ ಬ್ಯಾಂಕಾಕ್‌ಗೆ ಹಾರಲು ಸಿದ್ಧರಾದ್ರಾ ರಾಹುಲ್‌ ಗಾಂಧಿ? ವೈರಲ್‌ ಆಗಿರುವ ಬೋರ್ಡಿಂಗ್‌ ಪಾಸ್‌ನ ಅಸಲಿಯತ್ತೇನು?

Benefits Of Walk After Meal
ಆರೋಗ್ಯ30 mins ago

Benefits Of Walk After Meal: ಊಟದ ಬಳಿಕ ಲಘುವಾದ ವಾಕಿಂಗ್‌ ಮಾಡಿ, ಆರೋಗ್ಯದಲ್ಲಿನ ಬದಲಾವಣೆ ನೋಡಿ!

Dead Body Found Bodies found floating in Cauvery river
ಕ್ರೈಂ36 mins ago

Dead Body Found : ಕಾವೇರಿ ನದಿಯಲ್ಲಿ ತೇಲಿ ಬಂದ ಶವಗಳು; ನೋಡಲು ಮುಗಿಬಿದ್ದ ಜನರು

Ram Charan Instagram story of daughter Klin Kaara receiving bujji
ಟಾಲಿವುಡ್36 mins ago

Ram Charan: ರಾಮ್‌ಚರಣ್‌ ಮಗಳಿಗೆ ಸಿಕ್ತು ಪ್ರಭಾಸ್‌ರಿಂದ ಪುಟಾಣಿ ಬುಜ್ಜಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌