Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ - Vistara News

ಬೆಂಗಳೂರು

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

Murder case : ಬೆಂಗಳೂರಲ್ಲಿ ಯುವಕನೊಬ್ಬ ಕುಡಿದ ನಶೆಯಲ್ಲಿ ತನ್ನ ಸ್ನೇಹಿತರಿಂದಲೇ ಕೊಲೆಯಾಗಿ ಹೋಗಿದ್ದಾನೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

VISTARANEWS.COM


on

Murder case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ‌ ನಡೆಸಿ ಯುವಕನೊಬ್ಬನ ಕೊಲೆ (Murder case) ಮಾಡಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನೇಪಾಳಿ ಮೂಲದ ಬಾಲಾಜಿ ಮೃತ ದುರ್ದೈವಿ.

ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಬಾಲಾಜಿ ಸ್ನೇಹಿತರೊಂದಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಅಮಲಿನಲ್ಲಿ ಕ್ಯಾತೆ ತೆಗೆದು ಸ್ನೇಹಿತರೊಟ್ಟಿಗೆ ಜಗಳ ಶುರು ಮಾಡಿದ್ದ. ಜಗಳವು ವಿಕೋಪಕ್ಕೆ ತಿರುಗಿದ್ದು, ಬಾಲಜಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಮಾಡಲಾಗಿದೆ.

ಕೋಣನಕುಂಟೆ ಸಮುದಾಯ ಭವನ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಹಾಗೂ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಕೋರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: Student Death : ಬೆಂಗಳೂರಿನಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಹಳೇ ವೈಷಮ್ಯದಿಂದ ಗ್ರಾಮ ಪಂಚಾಯಿತಿ ಸದಸ್ಯನ ಕೊಚ್ಚಿ ಕೊಲೆ

ಹೊಸಕೋಟೆ: ಹಳೆ ವೈಷಮ್ಯದ (Old vengeance) ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರೊಬ್ಬರನ್ನು (Gram Panchayat Member) ಬರ್ಬರವಾಗಿ (Hacked to death) ಕೊಚ್ಚಿ ಕೊಲೆ (Murder Case) ಮಾಡಲಾಗಿದೆ. ಹೊಸಕೋಟೆ (Hosakote News) ತಾಲೂಕಿನ ಬೈಲನರಸಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಅಪಾಕ್ ಅಮೀರ್ ಖಾನ್ (45) ಮೃತ ಗ್ರಾಮ ಪಂಚಾಯತಿ ಸದಸ್ಯ. ಕಳೆದ ರಾತ್ರಿ ಅಟ್ಯಾಕ್ ಮಾಡಿ ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಹಾಕಲಾಗಿದೆ. ಅಪಾಕ್‌ ಅಮೀರ್‌ ಖಾನ್‌ ಗ್ರಾಮ ಪಂಚಾಯತಿ ಮುಂದೆ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಗ್ರಾಮದ ಮೆಹಬೂಬ್ ಎಂಬಾತ ನುಗ್ಗಿ ಬಂದು ಕೊಚ್ಚಿ ಕೊಂದು ಹಾಕಿದ್ದಾನೆ.

ಕೊಲೆ ನಂತರ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಟೆರೇಸ್ ಮೇಲೆ ನಿಂತು ಜಗಳ ನೋಡುತ್ತಿದ್ದ ಮಹಿಳೆಗೇ ಬಿತ್ತು ಗುಂಡೇಟು!

ನವದೆಹಲಿ: ಟೆರೇಸ್‌ನಲ್ಲಿ ನಿಂತು ಹೊಡೆದಾಟವನ್ನು ನೋಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ (Accident) ಗುಂಡು (shot) ತಾಗಿರುವ ಘಟನೆ ಉತ್ತರ ದೆಹಲಿಯ (north delhi) ದಯಾಲ್‌ಪುರದಲ್ಲಿ ನಡೆದಿದೆ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಗುಂಡು ಹಾರಿಸಿದಾಗ ಅದು ತಪ್ಪಿ ಟೆರೇಸ್ ಮೇಲೆ ನಿಂತು ಇವರ ಜಗಳ ನೋಡುತ್ತಿದ್ದ ಮಹಿಳೆಗೆ ತಗುಲಿದೆ ಎನ್ನಲಾಗಿದೆ.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಈಶಾನ್ಯ ದೆಹಲಿಯ ದಯಾಲ್‌ಪುರ್‌ನಲ್ಲಿ ಜುಲೈ 2ರಂದು ಶನಿವಾರ ಇಬ್ಬರ ನಡುವೆ ಜಗಳವಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, 17 ಲಕ್ಷ ರೂಪಾಯಿಗಾಗಿ ಇವರ ನಡುವೆ ನಡೆದ ವಾದವು ಜಗಳಕ್ಕೆ ತಿರುಗಿತ್ತು. ಈ ನಡುವೆ ಒಬ್ಬ ವ್ಯಕ್ತಿ ಪಿಸ್ತೂಲ್ ಎಳೆದು ಮತ್ತೊಬ್ಬ ವ್ಯಕ್ತಿಯತ್ತ ಗುಂಡು ಹಾರಿಸಿದ್ದಾನೆ. ಆದರೆ, ಬುಲೆಟ್ ತಪ್ಪಿ ಟೆರೇಸ್‌ನಿಂದ ಜಗಳವನ್ನು ಗಮನಿಸುತ್ತಿದ್ದ 48 ವರ್ಷದ ಮಹಿಳೆಗೆ ಹೊಡೆದಿದೆ.

ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳೆಯನ್ನು ಆಕೆಯ ಕುಟುಂಬದವರು ಜಿಟಿಬಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆರೋಪಿಗಳ ಪೈಕಿ ಬಬ್ಲು ಎಂಬಾತನಿಗೆ 17 ಲಕ್ಷ ರೂ.ಗಳನ್ನು ಸಾಲವಾಗಿ ನೀಡಿದ್ದಾಗಿ ದೂರುದಾರ ಹಾಶಿಮ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆತ ಬಬ್ಲುವನ್ನು ವಿಚಾರಿಸಲು ಹೋದಾಗ ವಾದವು ವಿಕೋಪಕ್ಕೆ ತಿರುಗಿದೆ. ಬಬ್ಲು ತನ್ನ ಸಹಚರರಾದ ಕಮರುಲ್, ಸುಹಾಲೆ ಮತ್ತು ಸಮ್ರುನ್‌ನೊಂದಿಗೆ ಬಂದಿದ್ದು, ಹಾಶಿಮ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ನಡುವೆ ಕಮರುಲ್ ಎಂಬಾತ ಹಾಶಿಮ್‌ ಮೇಲೆ ಗುಂಡು ಹಾರಿಸಿದ ಎನ್ನಲಾಗಿದೆ. ಆದರೆ ಇದು ಗುರಿ ತಪ್ಪಿ ಮಹಿಳೆಗೆ ಹೊಡೆದಿದೆ. ಗುಂಡಿನ ದಾಳಿಯ ಅನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಪೊಲೀಸರು ದೆಹಲಿಯ ಬ್ರಿಜ್‌ಪುರಿ ನಿವಾಸಿಗಳಾದ ಬಬ್ಲು (38) ಮತ್ತು ಕಮರುಲ್ (26) ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಪಿಸ್ತೂಲ್, ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Karnataka Assembly : ಗದ್ದಲದಲ್ಲೇ ಮುಕ್ತಾಯಗೊಂಡ ಮೂರನೇ ದಿನದ ವಿಧಾನಮಂಡಲ ಅಧಿವೇಶನ

Karnataka Assembly :ವಾಲ್ಮಿಕಿ ನಿಗಮದ ಹಗರಣ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್​ ಎಂಬುವರ ಡೆತ್ ನೋಟ್​ ಓದುವಾಗ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರನ್ನೇ ಬಿಟ್ಟಿದ್ದಾರೆ ಎಂಬುದ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅರೋಪಿಸಿದರು. ಬಳಿಕ ಬಿಜೆಪಿ ಹಾಗೂ ಜೆಡಿಎಸ್​ ಕಾರ್ಯಕರ್ತರು ಸದನದ ಬಾವಿಗೆ ಇಳಿದ ಪ್ರತಿಭಟನೆ ನಡೆಸಿದರು.

VISTARANEWS.COM


on

Karnataka Assembly
Koo

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ ಹಾಗೂ ಮುಡಾ ಸೈಟ್​ ಪ್ರಕರಣದ ವಿಧಾನ ಮಂಡಲ ಅಧಿವೇಶನದ (Karnataka Assembly) ಮೂರನೇ ದಿನವನ್ನೂ ಹಾಳುಗಡೆವಿತು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್​ ಮುಂದಾದರೆ, ಕಾಂಗ್ರೆಸ್​ ಮುಜುಗರದಿಂದ ತಪ್ಪಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿತು. ಆದರೆ ಪ್ರತಿಭಟನೆ ಹಾಗೂ ಪ್ರತಿರೋಧಗಳಿಂದಾಗಿ ಕಲಾಪದ ಅವಧಿ ನಷ್ಟವಾಯಿತು.

ವಾಲ್ಮಿಕಿ ನಿಗಮದ ಹಗರಣ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್​ ಎಂಬುವರ ಡೆತ್ ನೋಟ್​ ಓದುವಾಗ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರನ್ನೇ ಬಿಟ್ಟಿದ್ದಾರೆ ಎಂಬುದ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅರೋಪಿಸಿದರು. ಬಳಿಕ ಬಿಜೆಪಿ ಹಾಗೂ ಜೆಡಿಎಸ್​ ಕಾರ್ಯಕರ್ತರು ಸದನದ ಬಾವಿಗೆ ಇಳಿದ ಪ್ರತಿಭಟನೆ ನಡೆಸಿದರು.

ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ಸದಸ್ಯರು ವಿಧಾನ ಸೌಧದ ಗೇಟ್ ಬಳಿಯೂ ಪ್ರತಿಭಟನೆ ನಡೆಸಿದರು. ಸರ್ಕಾರವು ಹಗರಣಗಳನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ವಿಪಕ್ಷಗಳ ಸದಸ್ಯರು ಈ ವೇಳೆ ಆರೋಪಿಸಿದರು.

ಸಂಧಾನ ಸಭೆ

ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕೊಡುವಾಗ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿರುವ ಹಿನ್ನೆಲೆಯಲ್ಲಿಯ ಸ್ಪೀಕರ್​ ಯುಟಿ ಖಾದರ್ ಸಂಧಾನ ಸಭೆ ಕರೆದರು. ಆಡಳಿತ ಪಕ್ಷದ ಕಡೆಯಿಂದ ಸಿದ್ದರಾಮಯ್ಯ, ಎಚ್ ಕೆ ಪಾಟೀಲ್ ,ಜಾರ್ಜ್ ಹಾಗೂ ವಿಪಕ್ಷಗಳಿಂದ ಆರ್ ಆಶೋಕ್, ವಿಜೇಯೇಂದ್ರ, ಸುರೇಶ್ ಬಾಬು ಇದ್ದರು.

ಸಂಧಾನ ಸಭೆ ನಡೆಸಿದ ಬಳಿಕವೂ ವಿಪಕ್ಷಗಳ ಸದಸ್ಯರು ತಮ್ಮ ಹೋರಾಟವನ್ನ ಮುಂದುವರಿಸಿದ ಕಾರಣ ಕಲಾಪ ಬಹುತೇಕ ಗದ್ದಲದಲ್ಲಿಯೇ ಅಂತ್ಯಗೊಂಡಿತು.

ಅಹಿಂದಕ್ಕೆ ಅನ್ಯಾಯ ಮಾಡುವ ಕೆಲಸ ಸಿಎಂ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣದಿಂದ ಹೆಂಡ ಹಚ್ಚಿದ್ದಾರೆ. ಡೆತ್ ನೋಟ್ ನಲ್ಲಿ ಅಧಿಕಾರಿಗಳ ಹೆಸರನ್ನು ಮಾತ್ರ ಉಲ್ಲೇಖ ಮಾಡ್ತಾರೆ. ಸಚಿವರ ಹೆಸರು ಉಲ್ಲೇಖ ಮಾಡುತ್ತಾರೆ. ಇದೇ ವೇಳೆ ನಾಗೇಂದ್ರ ಕ್ಲಿನ್ ಚಿಟ್ ಪಡೆದು ಹೊರಗೆ ಬರ್ತಾರೆ ಅಂತ ಡಿಕೆ ಶಿವಕುಮಾರ್ ಹೇಳ್ತಾರೆ. ಸರ್ಕಾರದ ಮುಖವಾಡ ಬಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: Karnataka Job Reservation : ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಮೀಸಲು ವಿಚಾರ ಮುನ್ನೆಲೆಗೆ ತಂದ ಸರ್ಕಾರ; ಸಿಟಿ ರವಿ ಆರೋಪ

ವಿಧಾನ ಪರಿಷತ್​ನಲ್ಲೂ ಇದೇ ರೀತಿ ಪರಿಸ್ಥಿತಿ ಮುಂದುವರಿಯಿತು. ಹೆಚ್ಚು ಚರ್ಚೆಗಳು ನಡೆಯದೇ ಆರೋಪಗಳಲ್ಲೇ ಕೊನೆಯಾಯಿತು.

ಸಿಎಂ ಉತ್ತರ

ನಿಯಮ‌ 69ರ ಅಡಿಯಲ್ಲಿ ನಡೆದ ವಾಲ್ಮೀಕಿ ಅಭಿವೃದ್ಧಿ ನಿಗಮ ಕುರಿತಾದ ಚರ್ಚೆಗೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದಾರೆ. ಆರ್.ಅಶೋಕ್, ವಿಜಯೇಂದ್ರ ನನ್ನ ರಾಜೀನಾಮೆ ಕೇಳಿದ್ದಾರೆ. ಆರಗ ಜ್ಞಾನೇಂದ್ರ ಮಾಜಿ ಗೃಹ ಸಚಿವರು. ಇವರು ಎಸ್​ಐಟಿ ಹಿಂದಕ್ಕೆ ಪಡೆಯಿರಿ ಎಂದು ಹೇಳಿದ್ದಾರೆ. ನೀವು ಗೃಹ ಮಂತ್ರಿ ಆಗಿದ್ದಾಗಲೂ ಎಸ್​ಐಟಿ ಬಗ್ಗೆ ಹೀಗೆ ಹೇಳಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

26-5-2024 ರಂದು ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡರು. ಇವರು ತಮಿಳುನಾಡಿನ ಬೋವಿ ಸಮುದಾಯದವರು. ವಿರೋಧ ಪಕ್ಷದವರು ಸಾವಿರ ಸಾರಿ ದಲಿತ, ದಲಿತ ಅಂತ ಹೇಳುತ್ತಿದ್ದಾರೆ ಎಂದರು.

ಈ ಎಲ್ಲಾ ನಿಗಮಗಳ ಉದ್ದೇಶ ಆಯಾ ಸಮುದಾಯಗಳನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವುದೇ ಆಗಿದೆ. 2013 ಡಿಸೆಂಬರ್ ನಲ್ಲಿ ಎಸ್​​ಸಿಪಿ, ಟಿಸಿಪಿ ಕಾಯ್ದೆ ಜಾರಿ ಮಾಡಿದೆ. ನಾನು ಮುಖ್ಯಮಂತ್ರಿಯಾಗಿಯೇ ಜಾರಿ ಮಾಡಿದೆ. 24.1% ಅಭಿವೃದ್ಧಿ ಹಣ ಈ ಸಮುದಾಯದ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಕಡ್ಡಾಯ ಮಾಡಿದ್ದು ನಾನು. ಪ್ರತಿಪಕ್ಷಗಳು ಬರಿ ಮೊಸಳೆ ಕಣ್ಣೀರು ಹರಿಸುತ್ತವೆ ಎಂದರು.

ನಾನು ಹಿಂದಿನ ಸಿದ್ದರಾಮಯ್ಯ ಅಲ್ಲ ಅಂತ ಯತ್ನಾಳ್ ಅವರು ಹೇಳಿದರು. ಯತ್ನಾಳ್ ಅವರು ಕೂಡ ವಾಜಪೇಯಿ ಅವರ ಸಂಪುಟದಲ್ಲಿದ್ದ ಯತ್ನಾಳ್ ಆಗಿ ಉಳಿದಿಲ್ಲ ಎಂದರು. ಆರ್.ಅಶೋಕ್ ಮೂರು ಗಂಟೆ ನಾಲ್ಕು ನಿಮಿಷ ಸದನದಲ್ಲಿ ಆರೋಪಿಸಿದ್ದೆಲ್ಲಾ ಪತ್ರಿಕಾ ಸುದ್ದಿಗಳ ಆಧಾರದಲ್ಲಿ ಮಾತ್ರ. ಪರಿಶಿಷ್ಠ ಸಮುದಾಯಗಳ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಕೇಂದ್ರದ ಬಿಜೆಪಿಯಾಗಲಿ, ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಾಗಲಿ ಕಾಯ್ದೆಯನ್ನು ಏಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಇರುವವರೆಗೂ, ನಾನು ಇರುವವರೆಗೂ ಸಾಮಾಜಿಕ ನ್ಯಾಯಕ್ಕೆ ನಾವು ಬದ್ದರು. ನಿಮ್ಮಿಂದ ಸಾಮಾಜಿಕ ನ್ಯಾಯದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

Continue Reading

ಕರ್ನಾಟಕ

Police Suspended : ಠಾಣೆಯಲ್ಲೇ ಕೈಮಿಲಾಯಿಸಿದ ಪೊಲೀಸ್​ ಅಧಿಕಾರಿಗಳಿಬ್ಬರು ಸಸ್ಪೆಂಡ್​​

Police Suspended :ಹೆಡ್​ಕಾನ್​ಸ್ಟೇಬಲ್​ ನೇತ್ರಾವತಿ ಎಂಬುವರ ಜತೆ ಅತ್ಯಾಚಾರ ಪ್ರಕರಣವೊಂದರ ಕುರಿತು ಮಂಜುನಾಥ್ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಬಂದ ಅಂಜನಾಮೂರ್ತಿ ಅವರು ಲೈನ್ ಕಂಪ್ಯೂಟರ್​ನಲ್ಲಿ ಟೈಪ್ ಮಾಡಿ ಪುಕ್ಸಟ್ಟೆ ಸಂಬಳ ತಗೋತಿದ್ದೀಯ ಎಂದು ಹೇಳಿದ್ದರು. ಈ ವೇಳೆ ಸಿಟ್ಟಿಗೆದ್ದ ಮಂಜುನಾಥ್​, ಬೇರೆಯವರಿಗೆ ಹೆದರಿಸಿದಂತಲ್ಲ. ನೀನೇ ಬಂದು ಇನ್ವೆಷ್ಟಿಗೇಷನ್ ಮಾಡು ಎಂದು ಮರುತ್ತರ ನೀಡಿದ್ದರು.

VISTARANEWS.COM


on

Police Suspended
Koo

ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲೇ ಕಿತ್ತಾಡಿಕೊಂಡಿದ್ದ ಪೊಲೀಸ್ ಅಧಿಕಾರಿಗಳಿಬ್ಬರನ್ನು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್ ಅಮಾನತು (Police Suspended) ಮಾಡಿದ್ದಾರೆ. ವಿಚಾರದ ಬಗ್ಗೆ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಎಎಸ್​ಐ ಮಂಜುನಾಥ್ ಹಾಗೂ ಹೆಡ್​ಕಾನ್​​ಸ್ಟೇಬಲ್​ ಅಂಜನಾಮೂರ್ತಿ ಅಮಾನತುಗೊಂಡವರು.

ಠಾಣೆಯಲ್ಲಿ ಹೊಡೆದಾಡಿಕೊಂಡ ಕುರಿತು ತನಿಖೆ ನಡೆಸಿದಾಗ ಇಬ್ಬರ ತಪ್ಪೂ ಸಾಬೀತಾಗಿತ್ತು. ಹೀಗಾಗಿ ಅವರಿಬ್ಬರನ್ನೂ ಅಮಾನತು ಮಾಡಲು ಡಿಸಿಪಿ ಲೋಕೇಶ್ ಜಗಲಾಸರ್ ಆದೇಶ ಹೊರಡಿಸಿದ್ದಾರೆ. ಇವರಿಬ್ಬರೂ ಜುಲೈ 16ರಂದು ಠಾಣೆಯಲ್ಲಿ ಕರ್ತವ್ಯದ ಅವಧಿಯಲ್ಲಿ ಹೊಡೆದಾಡಿಕೊಂಡ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಇದು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬಂದಿತ್ತು.

ಏನಿದು ಗಲಾಟೆ?

ಪುಟ್ಟೇನಹಳ್ಳಿ ಪೊಲೀಸ್ ಸಿಬ್ಬಂದಿಗಳಾದ ಅವರಿಬ್ಬರೂ ಸಾರ್ವಜನಿಕರ ಮುಂದೆಯೇ ಕಿತ್ತಾಟ ನಡೆಸಿಕೊಂಡಿದ್ದರು. ಈ ವೇಳೆ ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿಕೊಂಡಿದ್ದರು. ಹೊರಗಡೆ ಬಂದ್ರೆ ಬೀದಿ ಹೆಣ ಮಾಡ್ತಿನಿ ಎಂದು ಪೊಲೀಸ್ ಠಾಣೆಯಲ್ಲಿಯೇ ಬೆದರಿಕೆ ಹಾಕಿಕೊಂಡಿದ್ದರು. ಈ ಬಗ್ಗೆ ಹೆಡ್​ಕಾನಸ್ಟೇಬಲ್​ ಅಂಜನಾಮೂರ್ತಿ ಜೀವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ದಾಖಲಾಗಿತ್ತು.

ಹೆಡ್​ಕಾನ್​ಸ್ಟೇಬಲ್​ ನೇತ್ರಾವತಿ ಎಂಬುವರ ಜತೆ ಅತ್ಯಾಚಾರ ಪ್ರಕರಣವೊಂದರ ಕುರಿತು ಮಂಜುನಾಥ್ ಮಾತನಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಬಂದ ಅಂಜನಾಮೂರ್ತಿ ಅವರು ಲೈನ್ ಕಂಪ್ಯೂಟರ್​ನಲ್ಲಿ ಟೈಪ್ ಮಾಡಿ ಪುಕ್ಸಟ್ಟೆ ಸಂಬಳ ತಗೋತಿದ್ದೀಯ ಎಂದು ಹೇಳಿದ್ದರು. ಈ ವೇಳೆ ಸಿಟ್ಟಿಗೆದ್ದ ಮಂಜುನಾಥ್​, ಬೇರೆಯವರಿಗೆ ಹೆದರಿಸಿದಂತಲ್ಲ. ನೀನೇ ಬಂದು ಇನ್ವೆಷ್ಟಿಗೇಷನ್ ಮಾಡು ಎಂದು ಮರುತ್ತರ ನೀಡಿದ್ದರು.

ಇದನ್ನೂ ಓದಿ: Natasa Stankovic : ಹಾರ್ದಿಕ್ ಪಾಂಡ್ಯಗೆ ಡೈವೋರ್ಸ್​ ನೀಡಿದ್ದೇನೆ; ಪತ್ನಿ ನತಾಶಾ ಹೇಳಿಕೆ

ಕೋಪಗೊಂಡ ಅಂಜನಾಮೂರ್ತಿ ಕಾಲೆತ್ತಿ ಒದಿಯಲು ಮುಂದಾಗಿದ್ದರು ಎನ್ನಲಾಗಿದೆ. ಅಲ್ಲದೆ, ಪೆನ್ಷನ್ ಬರದೇ ಇರೋ ಮಾಡ್ತಿನಿ ಎಂದು ಹೇಳಿ ಅವಾಚ್ಯ ಪದಗಳಿಂದ ನಿಂದಿಸಿದ್ದರಂತೆ. ಈ ಬಗ್ಗೆ ಮಂಜುನಾಥ್ ಅವರು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ತಮಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಎರಡು ಸಲ ಸ್ಟಂಟ್ ಹಾಕಿದ್ದೇನೆ. ಅಂಜನಾಮೂರ್ತಿಯಿಂದ ತೊಂದರೆ ಆಗುತ್ತಿದೆ ಎಂದು ಬರೆದುಕೊಂಡಿದ್ದರು.

Continue Reading

ಪ್ರಮುಖ ಸುದ್ದಿ

Shiradi Ghat: ಭೂಕುಸಿತ; ಶಿರಾಡಿ ಘಾಟ್​ನಲ್ಲಿ ಸಂಚಾರ ನಿಷೇಧ ​; ಬೆಂಗಳೂರು- ಮಂಗಳೂರು ಸಂಪರ್ಕ ಬಹುತೇಕ ಕಟ್​

Shiradi Ghat :

VISTARANEWS.COM


on

Shiradi Ghat
Koo

ಹಾಸನ: ಹಾಸನ ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಘಾಟ್​ ಪ್ರದೇಶದ ಹಲವಡೆ ಗುಡ್ಡ ಕುಸಿತದ ಪ್ರಕಣಗಳು ಉಂಟಾಗುತ್ತಿವೆ. ಅಂತೆಯೇ ಶಿರಾಡಿ ಘಾಟ್​ನಲ್ಲಿ (Shiradi Ghat) ಗುಡ್ಡ ಕುಸಿತ ಸಂಭವಿಸಲಿದೆ ಎಂಬ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ಮೂಲಕ ಪ್ರಯಾಣವನ್ನು ನಿಷೇಧ ಮಾಡ ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 278ರಲ್ಲಿ ರಾತ್ರಿ ವೇಳೆ ವಾಹನಗಳು ಸಾಗದಂತೆ ಕೊಡಗು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಡಿಕೇರಿ ಮೂಲಕ ಸಾಗುವ ಈ ರಸ್ತೆಯೂ ಬಂದ್ ಆಗಿರುವ ಕಾರಣ ಮಂಗಳೂರು ಮತ್ತು ಬೆಂಗಳೂರು (Bangalore To Mangalore) ನಡುವಿನ ಸಂಪರ್ಕ ಬಹುತೇಕ ಕಡಿತಗೊಂಡಿದೆ. ಇನ್ನು ಚಾರ್ಮಾಡಿ ಘಾಟ್ ಒಂದೇ ಉಳಿದಿದ್ದು ಅದರ ಮೇಲೆ ವಾಹನ ದಟ್ಟಣೆ ಜಾಸ್ತಿಯಾಗಲಿದೆ. ಆ ರಸ್ತೆಯಲ್ಲೂ ಅಲ್ಲಲ್ಲಿ ಗುಡ್ಡ ಕುಸಿತದ ಪ್ರಕಣಗಳು ಸಂಭವಿಸುತ್ತಿರುವುದರಿಂದ ಸಂಚಾರ ಸುರಕ್ಷಿತವಲ್ಲ.

ಶಿರಾಡಿಘಾಟ್ ನ ದೊಡ್ಡತಪ್ಪು ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿತ್ತು. ಅಲ್ಲಿ ಇನ್ನಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆಗಳಿವೆ. ಜುಲೈ 18ರಿಂದ ಅನ್ವಯವಾಗುವಂತೆ ಈ ರಸ್ತೆಯ ಮೂಲಕ ಪ್ರಯಾಣ ಮಾಡದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ರಸ್ತೆ ದುರಸ್ತಿ ಆಗುವ ತನಕ ಎಲ್ಲ ರೀತಿಯ ವಾಹನ ಸಂಚಾರ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ನಿರಂತರ ಮಳೆ ಸುರಿಯುತ್ತಿರುವ ಕಾರಿನ ಮತ್ತಷ್ಟು ಭೂ ಕುಸಿತದ ಉಂಟಾಗುವ ಸಾಧ್ಯತೆಗಳಿವೆ. ಮುಂಜಾಗ್ರತಾ ಕ್ರಮವಾಗಿ ಸಂಚಾರ ನಿಷೇಧಿಸಿ ಡಿಸಿ ಸಿ ಸತ್ಯಭಾಮ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಿಂದ -ಮಂಗಳೂರಿಗೆ ತೆರಳುವ ವಾಹನಗಳು ಚಾರ್ಮಾಡಿ ಘಾಟ್ ಮೂಲಕ ಅವರ ಸೂಚನೆ ನೀಡಿದ್ದಾರೆ.

ಗುಡ್ಡ ಕುಸಿತದ ಭೀತಿ, ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್​​

ಮಡಿಕೇರಿ: ಕೊಡುಗು ಸೇರಿದಂತೆ ರಾಜ್ಯದ ಎಲ್ಲೆಡೆ ಸತತ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ (Rain News). ಹೀಗಾಗಿ ಘಟ್ಟ ಪ್ರದೇಶಗಳಲ್ಲಿ ಗುಡ್ಡ ಕುಸಿತ ಪ್ರಕರಣಗಳು ಸಂಭವಿಸುತ್ತಿವೆ. ಗುಡ್ಡದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳ ಆತಂಕ ಇದರಿಂದಾಗಿ ಹೆಚ್ಚಾಗಿದೆ. ಇದೇ ವೇಳೆ ಕರ್ನಾಟಕದ ಪ್ರಮುಖ ಘಾಟಿಗಳಲ್ಲಿ ಹಾದು ಹೋಗಿರುವ ರಸ್ತೆ ಇಕ್ಕೆಲಗಳಲ್ಲಿ ಮಣ್ಣು ಕುಸಿತ ಉಂಟಾಗುತ್ತಿರುವ ಕಾರಣ ಮಡಿಕೇರಿ ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ 275 ಬಂದ್ ಮಾಡಲಾಗಿದೆ.

ಇದನ್ನೂ ಓದಿ: Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

ಮಡಿಕೇರಿ ಮಂಗಳೂರು ರಸ್ತೆಯ ಕರ್ತೋಜಿ ಬಳಿ ಗುಡ್ಡ ಕುಸಿಯುವ ಭೀತಿ ಉಂಟಾಗಿದ್ದು, ಯಾವುದೇ ಕ್ಷಣದಲ್ಲಿ ಗುಡ್ಡ ಜಾರಿ ರಸ್ತೆಗೆ ಬರುವ ಸಾಧ್ಯತೆಗಳಿವೆ. ಹೀಗಾಗಿ ಜುಲೈ 18ರಿಂದ 22ರವರೆಗೆ ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ 275 ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಗುರುವಾರದಿಂದ 5 ದಿನಗಳ ಕಾಲ ರಾತ್ರಿ 8ರಿಂದ ಬೆಳಗ್ಗೆ 6 ಗಂಟೆವರೆಗೆ ಅಧಿಕಾರಿಗಳು ರಸ್ತೆ ಪ್ರಯಾಣಕ್ಕೆ ನಿರ್ಬಂಧ ಹೇರಿದ್ದಾರೆ ಕರ್ತವ್ಯ ನಿರತ ಅಧಿಕಾರಿಗಳ ವಾಹನ ಹೊರತುಪಡಿಸಿ ಉಳಿದ ವಾಹನ ಸಂಚಾರ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಡ್ಡ ಕುಸಿಯು ಭೀತಿ ಹುಟ್ಟಿಸಿರುವ ಗುಡ್ಡದ ಮಣ್ಣು ತೆರವು ಕಾರ್ಯ ಆರಂಭ ಮಾಡಲಾಗಿದೆ. ಅದೇ ರೀತಿ ಮಡಿಕೇರಿ ಬಳಿ ಬ್ಯಾರಿಕೇಡ್ ಹಾಕಿ ವಾಹನಗಳು ಮುಂದಕ್ಕೆ ಸಾಗದಂತೆ ಅಧಿಕಾರಿಗಳು ತಡೆಯುತ್ತಿದ್ದಾರೆ ಅದೇ ರೀತಿ ದಕ್ಷಿಣ ಕನ್ನಡದ ಮಾಣಿ ಬಳಿಯಲ್ಲೇ ವಾಹನಗಳಿಗೆ ತಡೆದು ಚಾರ್ಮಾಡಿ ಮಾರ್ಗವಾಗಿ ಹೋಗುವಂತೆ ಸೂಚನೆ ನೀಡಲಾಗುತ್ತಿದೆ. ರಸ್ತೆ ಬಂದ್ ಮಾಡುವ ನಿರ್ಧಾರ ತೆಗೆದುಕೊಂಡಿರು ಕಾರಣ ವಾಹನ ಸವಾರರು ಪರದಾಡುವಂತಾಗಿದೆ, ಮಂಗಳೂರು ಕಡೆ ಹೋಗುವ ವಾಹನ ಸವಾರರ‌ ಪರದಾಡುವಂತಾಗಿದೆ.

Continue Reading

ಪ್ರಮುಖ ಸುದ್ದಿ

Rain News : ಪ್ರಯಾಣಿಕರೇ ಗಮನಿಸಿ; ಗುಡ್ಡ ಕುಸಿತದ ಭೀತಿ, ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್​​

Rain News : ಮಡಿಕೇರಿ ಮಂಗಳೂರು ರಸ್ತೆಯ ಕರ್ತೋಜಿ ಬಳಿ ಗುಡ್ಡ ಕುಸಿಯುವ ಭೀತಿ ಉಂಟಾಗಿದ್ದು, ಯಾವುದೇ ಕ್ಷಣದಲ್ಲಿ ಗುಡ್ಡ ಜಾರಿ ರಸ್ತೆಗೆ ಬರುವ ಸಾಧ್ಯತೆಗಳಿವೆ. ಹೀಗಾಗಿ ಜುಲೈ 18ರಿಂದ 22ರವರೆಗೆ ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ 275 ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

VISTARANEWS.COM


on

Rain News;
Koo

ಮಡಿಕೇರಿ: ಕೊಡುಗು ಸೇರಿದಂತೆ ರಾಜ್ಯದ ಎಲ್ಲೆಡೆ ಸತತ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ (Rain News). ಹೀಗಾಗಿ ಘಟ್ಟ ಪ್ರದೇಶಗಳಲ್ಲಿ ಗುಡ್ಡ ಕುಸಿತ ಪ್ರಕರಣಗಳು ಸಂಭವಿಸುತ್ತಿವೆ. ಗುಡ್ಡದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳ ಆತಂಕ ಇದರಿಂದಾಗಿ ಹೆಚ್ಚಾಗಿದೆ. ಇದೇ ವೇಳೆ ಕರ್ನಾಟಕದ ಪ್ರಮುಖ ಘಾಟಿಗಳಲ್ಲಿ ಹಾದು ಹೋಗಿರುವ ರಸ್ತೆ ಇಕ್ಕೆಲಗಳಲ್ಲಿ ಮಣ್ಣು ಕುಸಿತ ಉಂಟಾಗುತ್ತಿರುವ ಕಾರಣ ಮಡಿಕೇರಿ ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ 275 ಬಂದ್ ಮಾಡಲಾಗಿದೆ.

ಜಿಲ್ಲಾಧಿಕಾರಿ ಹೊರಡಿಸಿದ ಆದೇಶ ಪ್ರತಿ ಈ ಕೆಳಗೆ ಇದೆ

ಮಡಿಕೇರಿ ಮಂಗಳೂರು ರಸ್ತೆಯ ಕರ್ತೋಜಿ ಬಳಿ ಗುಡ್ಡ ಕುಸಿಯುವ ಭೀತಿ ಉಂಟಾಗಿದ್ದು, ಯಾವುದೇ ಕ್ಷಣದಲ್ಲಿ ಗುಡ್ಡ ಜಾರಿ ರಸ್ತೆಗೆ ಬರುವ ಸಾಧ್ಯತೆಗಳಿವೆ. ಹೀಗಾಗಿ ಜುಲೈ 18ರಿಂದ 22ರವರೆಗೆ ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ 275 ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಗುರುವಾರದಿಂದ 5 ದಿನಗಳ ಕಾಲ ರಾತ್ರಿ 8ರಿಂದ ಬೆಳಗ್ಗೆ 6 ಗಂಟೆವರೆಗೆ ಅಧಿಕಾರಿಗಳು ರಸ್ತೆ ಪ್ರಯಾಣಕ್ಕೆ ನಿರ್ಬಂಧ ಹೇರಿದ್ದಾರೆ ಕರ್ತವ್ಯ ನಿರತ ಅಧಿಕಾರಿಗಳ ವಾಹನ ಹೊರತುಪಡಿಸಿ ಉಳಿದ ವಾಹನ ಸಂಚಾರ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಡ್ಡ ಕುಸಿಯು ಭೀತಿ ಹುಟ್ಟಿಸಿರುವ ಗುಡ್ಡದ ಮಣ್ಣು ತೆರವು ಕಾರ್ಯ ಆರಂಭ ಮಾಡಲಾಗಿದೆ. ಅದೇ ರೀತಿ ಮಡಿಕೇರಿ ಬಳಿ ಬ್ಯಾರಿಕೇಡ್ ಹಾಕಿ ವಾಹನಗಳು ಮುಂದಕ್ಕೆ ಸಾಗದಂತೆ ಅಧಿಕಾರಿಗಳು ತಡೆಯುತ್ತಿದ್ದಾರೆ ಅದೇ ರೀತಿ ದಕ್ಷಿಣ ಕನ್ನಡದ ಮಾಣಿ ಬಳಿಯಲ್ಲೇ ವಾಹನಗಳಿಗೆ ತಡೆದು ಚಾರ್ಮಾಡಿ ಮಾರ್ಗವಾಗಿ ಹೋಗುವಂತೆ ಸೂಚನೆ ನೀಡಲಾಗುತ್ತಿದೆ. ರಸ್ತೆ ಬಂದ್ ಮಾಡುವ ನಿರ್ಧಾರ ತೆಗೆದುಕೊಂಡಿರು ಕಾರಣ ವಾಹನ ಸವಾರರು ಪರದಾಡುವಂತಾಗಿದೆ, ಮಂಗಳೂರು ಕಡೆ ಹೋಗುವ ವಾಹನ ಸವಾರರ‌ ಪರದಾಡುವಂತಾಗಿದೆ.

ಹಾಸನದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿತ; ಬೆಳಗಾವಿಯಲ್ಲಿ ರಸ್ತೆಗೆ ಉರುಳಿದ ಬೃಹತ್‌ ಬಂಡೆಗಲ್ಲು

ಹಾಸನ: ಚಲಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿದಿದ್ದು, ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎತ್ತಿನಹಳ್ಳ ಬಳಿ ಘಟನೆ (Karnataka Rain) ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಮಣ್ಣು ಕುಸಿದಿದೆ. ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿ ಮಣ್ಣು ತೆರವುಗೊಳಿಸಿದರು.

ಹಾಸನದ ಸಕಲೇಶಪುರ ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಮಠಸಾಗರದ ಬಳಿ ನೀರು ನಿಂತು ಕೃಷ್ಣಾಪುರ ಸಂಪರ್ಕ ಕಡಿತಗೊಂಡಿದೆ. ಹಳ್ಳ ಉಕ್ಕಿ ಹರಿದ ಪರಿಣಾಮ ಕಾಫಿ, ಅಡಿಕೆ ತೋಟಗಳು ಜಲಾವೃತಗೊಂಡಿದೆ. ರಸ್ತೆ ಸಂಪರ್ಕ ಕಡಿತ‌ ಹಿನ್ನೆಲೆಯಲ್ಲಿ‌ ರೋಗಿಗಳನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗದೆ ಪರದಾಟ ಅನುಭವಿಸಿದರು.

ಇದನ್ನೂ ಓದಿ: Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತ

ಭಾರಿ ಮಳೆಗೆ ಶಿರಾಡಿಘಾಟ್‌ನ ಮತ್ತೊಂದು ಕಡೆ ಗುಡ್ಡ ಕುಸಿದಿದೆ. ಹಾಸನದ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪ ಘಟನೆ ನಡೆದಿದೆ. ಒಂದು ನೂರಾರು ಮೀಟರ್ ಎತ್ತರದಿಂದ ಕೆಳಗೆ ಗುಡ್ಡ ಕುಸಿದಿದೆ. ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರಾಗಿದ್ದಾರೆ. ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ದೌಡಾಯಿಸಿದ್ದು, ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿದೆ.

ಗುಡ್ಡ ಕುಸಿತದಿಂದ ಸುಮಾರು 10 ಕಿಮಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಕ್, ಲಾರಿ ಟ್ಯಾಕರ್ ಓಡಾಟಕ್ಕೆ ತಾತ್ಕಾಲಿಕ ತಡೆಹಿಡಿಯಲಾಗಿದೆ. ಅತ್ತ ಚಾರ್ಮಾಡಿ ಘಾಟ್‌ನಲ್ಲೂ ಪ್ರಯಾಣ ದುಸ್ಥರ ಹಿನ್ನೆಲೆಯಲ್ಲಿ ಹಾಸನದಲ್ಲಿಯೇ ವಾಹನ ನಿಲ್ಲಿಸಲು ಸೂಚನೆ ನೀಡಲಾಗಿದೆ. ಸದ್ಯ ಸಕಲೇಶಪುರದವರೆಗೆ ತೆರಳಲು ಸಾರಿಗೆ ಬಸ್‌ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಂಗಳೂರು ಕಡೆಗೆ ಹೋಗುವ ಬಸ್‌ಗಳಿಗೂ ಹಾಸನ ತಾಲೂಕಿನ ಕಂದಲಿ ಬಳಿ ತಡೆಹಿಡಯಲಾಗಿದೆ.

Continue Reading
Advertisement
Bangladesh Violence
ವಿದೇಶ1 hour ago

Bangladesh Violence: ಬಾಂಗ್ಲಾ ಧಗ ಧಗ; ಭುಗಿಲೆದ್ದ ಹಿಂಸಾಚಾರಕ್ಕೆ 35 ಮಂದಿ ಬಲಿ

Karnataka Assembly
ಪ್ರಮುಖ ಸುದ್ದಿ2 hours ago

Karnataka Assembly : ಗದ್ದಲದಲ್ಲೇ ಮುಕ್ತಾಯಗೊಂಡ ಮೂರನೇ ದಿನದ ವಿಧಾನಮಂಡಲ ಅಧಿವೇಶನ

Udhayanidhi Stalin
ದೇಶ2 hours ago

Udhayanidhi Stalin: ತಮಿಳುನಾಡು ಉಪ ಮುಖ್ಯಮಂತ್ರಿಯಾಗಿ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್?

The Ambani family gave a wedding special reception to the staff and housekeepers
ದೇಶ2 hours ago

Anant Radhika Wedding: ಸಿಬ್ಬಂದಿ, ಮನೆಗೆಲಸದವರಿಗೆ ಮದುವೆಯ ಭರ್ಜರಿ ಔತಣಕೂಟ ನೀಡಿದ ಅಂಬಾನಿ ಫ್ಯಾಮಿಲಿ!

Police Suspended
ಕರ್ನಾಟಕ3 hours ago

Police Suspended : ಠಾಣೆಯಲ್ಲೇ ಕೈಮಿಲಾಯಿಸಿದ ಪೊಲೀಸ್​ ಅಧಿಕಾರಿಗಳಿಬ್ಬರು ಸಸ್ಪೆಂಡ್​​

Train Derail
ದೇಶ3 hours ago

Train Derail: “ಪ್ರಚಾರದ ಗೀಳು ಬಿಟ್ಟು ರೈಲುಗಳ ಸುರಕ್ಷತೆ ಬಗ್ಗೆ ಗಮನ ಹರಿಸಿ”- ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

Natasa Stankovic
ಪ್ರಮುಖ ಸುದ್ದಿ4 hours ago

Natasa Stankovic : ಹಾರ್ದಿಕ್ ಪಾಂಡ್ಯಗೆ ಡೈವೋರ್ಸ್​ ನೀಡಿದ್ದೇನೆ; ಪತ್ನಿ ನತಾಶಾ ಹೇಳಿಕೆ

Neet UG
ದೇಶ4 hours ago

NEET UG 2024: ನೀಟ್‌ ಅಕ್ರಮ; ನಾಲ್ವರು ಏಮ್ಸ್‌ ವಿದ್ಯಾರ್ಥಿಗಳು ಸಿಬಿಐ ಬಲೆಗೆ

Farmers should get crop insurance immediately says MP BY Raghavendra
ಶಿವಮೊಗ್ಗ4 hours ago

Shivamogga News: ಕೂಡಲೇ ಬೆಳೆ ವಿಮೆ ಮಾಡಿಸಿಕೊಳ್ಳಲು ಸಂಸದ ಬಿ.ವೈ. ರಾಘವೇಂದ್ರ ಮನವಿ

Guru Puja Mahotsav and Sangeethotsava from July 19th at Kaiwara Srikshethra Sadguru Sri Yoginareyan Mutt
ಚಿಕ್ಕಬಳ್ಳಾಪುರ4 hours ago

Kaivara Tatayya: ಕೈವಾರ ಶ್ರೀ ಯೋಗಿನಾರೇಯಣ ಮಠದಲ್ಲಿ ಜು.19ರಿಂದ ಗುರುಪೂಜಾ ಮಹೋತ್ಸವ, ಸಂಗೀತೋತ್ಸವ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ8 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ10 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ4 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ5 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌