Murder mystery | ಮೊಬೈಲ್‌ ಸಿಮ್‌ ಬಿಡಿಸಿದ ಮಹಿಳೆಯ ಮರ್ಡರ್‌ ರಹಸ್ಯ - Vistara News

ಕ್ರೈಂ

Murder mystery | ಮೊಬೈಲ್‌ ಸಿಮ್‌ ಬಿಡಿಸಿದ ಮಹಿಳೆಯ ಮರ್ಡರ್‌ ರಹಸ್ಯ

ಸುಳಿವೇ ಸಿಗದೆ ನಾಪತ್ತೆಯಾದ ಮಹಿಳೆಯ ಕೊಲೆ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಮೊಬೈಲ್‌ ಸಿಮ್‌ ಪ್ರಕರಣ ಬಗೆಹರಿಸಲು ನೆರವಾಗಿದೆ.

VISTARANEWS.COM


on

murder
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅದು ಒಂದು ವರ್ಷದ ಹಿಂದಿನ ಮಿಸ್ಸಿಂಗ್ ಕೇಸ್. ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋಗಿದ್ದವಳು ದಿಢೀರ್ ನಾಪತ್ತೆಯಾಗಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೂ ಸಣ್ಣದೊಂದೇ ಒಂದು ಸುಳಿವು ಸಹ ಸಿಕ್ಕಿರಲಿಲ್ಲ. ಇದೀಗ ಈ ಪ್ರಕರಣವನ್ನು ಭೇದಿಸಲು ಮೊಬೈಲ್‌ ಸಿಮ್‌ ಸಹಾಯ ಮಾಡಿದೆ.

ವಿಠಲನಗರದಲ್ಲಿ ವಾಸವಾಗಿದ್ದ ಚಂದ್ರಕಲಾ ಎಂಬ ಮಹಿಳೆಯ ಕೊಲೆಗಾರರು ಬರೋಬ್ಬರಿ ಒಂದು ವರ್ಷದ ಬಳಿಕ ಸಿಕ್ಕಿಬಿದ್ದಿದ್ದಾರೆ. ಈಕೆ ತಂದೆ ತಾಯಿ ಸಾವಿನ ಬಳಿಕ ಒಂಟಿಯಾಗಿ ವಾಸವಾಗಿದ್ದರು. 40 ವರ್ಷವಾದರೂ ಮದ್ವೆಯಾಗಿರಲಿಲ್ಲ. ಮದುವೆಯಾಗಬೇಕೆಂದು ಸ್ನೇಹಿತೆ ಲಕ್ಷ್ಮಿ ಬಳಿ ಹೇಳಿಕೊಂಡಿದ್ದರು. ಆ ವೇಳೆ ತನ್ನ ಗಂಡನ ಸ್ನೇಹಿತ ನಾರಾಯಣ ಅಲಿಯಾಸ್ ನಾಣಿ ಎಂಬಾತನೊಂದಿಗೆ ಮದುವೆ ಮಾಡಿಸಲು ಲಕ್ಷ್ಮಿ ತೀರ್ಮಾನಿಸಿದ್ದಳು. ಪರಿಚಯ ಬೆಳೆದ ಬಳಿಕ ಚಂದ್ರಕಲಾ ಹಾಗೂ ನಾರಾಯಣ ಆಗಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಕೊನೆಗೆ ನೇರವಾಗಿ ಭೇಟಿಯಾಗಲು ನಾರಾಯಣ ಬೇಡಿಕೆ ಇಟ್ಟಿದ್ದ.

ಈ ನಡುವೆ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಲಕ್ಷ್ಮಿ ಹಾಗೂ ನಾರಾಯಣ, ನೇರವಾಗಿ ಭೇಟಿಯಾಗುವ ನೆಪದಲ್ಲಿ ಚಂದ್ರಕಲಾಳ ಕೊಲೆ ಮಾಡಿ ಚಿನ್ನಾಭರಣ ದೋಚಲು ಸ್ಕೆಚ್ ಹಾಕಿದ್ದರು. ಒಂಟಿಯಾಗಿದ್ದ ಚಂದ್ರಕಲಾ ಬಳಿ ಹಣ, ಆಭರಣಗಳಿರಬಹುದು ಎಂದು ಭಾವಿಸಿದ್ದರು. ಭೇಟಿಯ ನೆಪದಲ್ಲಿ ಚಂದ್ರಕಲಾ ಅವರನ್ನು ಮುತ್ತತ್ತಿ ಕಾಡಿಗೆ ಕರೆದೊಯ್ದು, ಅಲ್ಲಿ ಕೊಲೆ ಮಾಡಿದ್ದರು, ಬಳಿಕ ಯಾವುದೇ ಹಣ, ಕ್ಯಾಶ್ ಸಿಗದೆ ಬೆಂಗಳೂರಿಗೆ ವಾಪಸಾಗಿದ್ದರು.‌

ಇದನ್ನೂ ಓದಿ | ಮಗನಿಂದಲೇ ತಂದೆಯ ಕೊಲೆ: ಮಲಗಿದ್ದಲ್ಲಿಗೆ ಹೋಗಿ ಕೊಡಲಿಯಿಂದ ಕೊಚ್ಚಿದ!

ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸತ್ತವಳ ಸ್ನೇಹಿತರು, ಸಂಬಂಧಿಕರು, ಸಹೋದ್ಯೋಗಿಗಳ ಬಳಿ ವಿಚಾರಿಸಿದ್ದರೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಮೊಬೈಲ್ ಡಿಟೇಲ್ಸ್ ಚೆಕ್ ಮಾಡಿದಾಗ ಬ್ಯಾಟರಾಯನಪುರ ವ್ಯಾಪ್ತಿಯಲ್ಲೇ ಸ್ವಿಚ್ ಆಫ್ ಆಗಿತ್ತು. ಅತ್ತ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಹಲಗೂರು ಪೊಲೀಸರೂ ಸತ್ತವಳ ಮಾಹಿತಿ ಪತ್ತೆಯಾಗದ ಹಿನ್ನೆಲೆಯಲ್ಲಿ ಸಿ ರಿಪೋರ್ಟ್‌ಗೆ ಸಿದ್ಧತೆ ಮಾಡಿಕೊಂಡಿದ್ದರು. ಪ್ರಕರಣ ಕ್ಲೋಸ್‌ ಮಾಡುವ ಮುನ್ನ ಲಾಂಗ್ ಪೆಂಡಿಂಗ್ ಕೇಸ್‌ಗಳ ಮರು ಪರಿಶೀಲನೆ ನಡೆಸುವಾಗ, ಯಾವ ಕಾರಣದಿಂದ ಪತ್ತೆಯಾಗಿಲ್ಲ ಎಂದು ಮತ್ತೊಂದು ಸುತ್ತಿನ ತನಿಖೆ ನಡೆಸಲಾಯಿತು. ತನಿಖೆ ವೇಳೆ, ನಾಪತ್ತೆಯಾದ ಯುವತಿ ಮನೆಗೆ ಬರುತ್ತಿದ್ದ ಮಹಿಳೆ ಬಗ್ಗೆ ಮನೆ ಮಾಲೀಕನಿಂದ ಮಾಹಿತಿ ದೊರೆಯಿತು.

ಆ ಮಹಿಳೆ ಯಾರು ಅನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾದರು. ಆ ವೇಳೆ ಯುವತಿಯ ಸಿಮ್ ಎರಡು ಮೊಬೈಲ್‌ಗಳಲ್ಲಿ ಬಳಕೆಯಾಗಿರುವುದು ಬೆಳಕಿಗೆ ಬಂತು. ಆ ಎರಡನೇ ಮೊಬೈಲ್ ಯಾವುದು ಎಂದು ಪತ್ತೆ ಹಚ್ಚಿದ ಪೊಲೀಸರಿಗೆ ಹಂತಕಿ ಸಿಕ್ಕಿಬಿದ್ದಳು. ಮದುವೆ ಮಾಡಿಸುವ ನೆಪದಲ್ಲಿ ಯುವತಿಯನ್ನು ಕರೆದೊಯ್ದು ಕೊಲೆ ಮಾಡಿದ್ದ ಆರೋಪಿಗಳು ಒಂದು ವರ್ಷದ ಬಳಿಕ ಸಿಕ್ಕಿಬಿದ್ದು ಕಂಬಿ ಎಣಿಸುತ್ತಿದ್ದಾರೆ.

ಇದನ್ನೂ ಓದಿ | Praveen Nettaru | 8 ಗಂಟೆಯಿಂದಲೇ ಸುಳಿದಾಡುತ್ತಿದ್ದ ಹಂತಕರು, 8.40ಕ್ಕೆ ಮರ್ಡರ್‌, ಸಿಸಿಟಿವಿಯಲ್ಲಿ ದಾಖಲು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna Case: ಸಿಎಂ ಪತ್ರ ಬರೆದು ಚುರುಕು ಮುಟ್ಟಿಸಿದ ರಾಗಾ; ಎಸ್‌ಐಟಿ ಜೊತೆ ಸಭೆ ನಡೆಸಿ ಸಿಎಂ ಖಡಕ್‌ ಸೂಚನೆ

Prajwal Revanna Case: ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಸಹಿಸಲಾಗದು ಎಂದು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

VISTARANEWS.COM


on

prajwal revanna case cm siddaramaiah rahul gandhi
Koo

ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ಲೈಂಗಿಕ ಹಗರಣ (Pen Drive Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಎಸ್ಐಟಿ (SIT) ಅಧಿಕಾರಿಗಳೊಂದಿಗೆ ಇಂದು ಮಹತ್ವದ ಸಭೆ ನಡೆಸಿದರು. ಪ್ರಕರಣದ ಸಂಬಂಧ ಇದುವರೆಗಿನ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದಿದ್ದು, ಇನ್ನಷ್ಟು ತೀವ್ರವಾದ ತನಿಖೆ ನಡೆಸಲು ಖಡಕ್‌ ಸೂಚನೆ ನೀಡಿದರು. ಇದಕ್ಕೂ ಮುನ್ನ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸಿಎಂಗೆ ಪತ್ರ ಬರೆದು, ಪ್ರಕರಣದ ತನಿಖೆ ತೀವ್ರಗೊಳಿಸಲು ಸೂಚಿಸಿದರು.

ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದು ಲುಕ್ಔಟ್ ನೋಟಿಸ್ ಜೊತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು. ಬ್ಲೂ ಕಾರ್ನರ್‌ ನೋಟೀಸ್‌ ಜಾರಿ ಮಾಡುವಂತೆ ಸಿಬಿಐಗೆ ಮನವಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಲಾಯಿತು. ತನಿಖೆಯ ಪ್ರಗತಿ, ಮುಂದಿನ ತನಿಖೆಯ ದಿಕ್ಕು, ಪ್ರಸಕ್ತ ಕಾನೂನಾತ್ಮಕ ಪ್ರಕ್ರಿಯೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಡಿಜಿಐಜಿ ಅಲೋಕ್ ಮೋಹನ್, ಎಸ್ಐಟಿ ಮುಖ್ಯಸ್ಥ ಬಿಕೆ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಸಹಿಸಲಾಗದು ಎಂದು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಸೂಕ್ತ ಕ್ರಮಗಳೊಂದಿಗೆ ಬಂಧನಕ್ಕೆ ಮುಂದಾಗುತ್ತೇವೆ. ಸಿಬಿಐ ಬ್ಲೂಕಾರ್ನರ್ ನೋಟಿಸ್ ಹೊರಡಿಸುವ ಸಾಧ್ಯತೆ ಇದ್ದು ತನಿಖೆಗೆ ವೇಗ ಸಿಗಲಿದೆ. ವಿಮಾನ ನಿಲ್ದಾಣಗಳಿಂದ ಮಾಹಿತಿ ಸಿಕ್ಕ ಕೂಡಲೇ ಬಂಧಿಸಿ ಕರೆ ತರುವುದಾಗಿ ಅಧಿಕಾರಿಗಳು ತಿಳಿಸಿದರು.‌

ರಾಹುಲ್‌ ಗಾಂಧಿ ಪತ್ರ

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಪತ್ರ ಬರೆದಿದ್ದು, “ಸಂತ್ರಸ್ತರಿಗೆ ರಕ್ಷಣೆ ಕೊಡಬೇಕು, ಯಾರೇ ಆದರೂ ಕಠಿಣ ಕ್ರಮ ತೆಗೆದುಕೊಳ್ಳಿ” ಎಂದು ಒತ್ತಾಯಿಸಿದ್ದಾರೆ. “ಸಹೋದರ, ಮಗನಂತೆ ನೋಡಿಕೊಳ್ಳುತ್ತಿದ್ದ ಅನೇಕರನ್ನು ಕ್ರೂರವಾಗಿ ಪ್ರಜ್ವಲ್ ನಡೆಸಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೇವರಾಜೇಗೌಡ ಮಾಹಿತಿ ತಿಳಿಸಿದ್ದರು ಎಂದು ತಿಳಿದು ನನಗೆ ಆಘಾತವಾಗಿದೆ. ಪ್ರಧಾನ ಮಂತ್ರಿಗಳ ಗಮನಕ್ಕೆ ತಂದರೂ ಅವರ ಪರವಾಗಿ ಪ್ರಚಾರ ಮಾಡಿದ್ದು ಮತ್ತೊಂದು ಶಾಕ್. ಭಾರತದಿಂದ ಆತ ಪಾರಾಗಲು ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ” ಎಂದು ಕೂಡ ಪತ್ರದಲ್ಲಿ ಬರೆದಿದ್ದಾರೆ.

“ಹರಿಯಾಣದ ಕುಸ್ತಿಪಟುಗಳು, ಮಣಿಪುರದ ಘಟನೆಗಳಲ್ಲಿ ಪ್ರಧಾನಿಗಳು ಮೌನ ವಹಿಸಿದ್ದಾರೆ. ತಾಯಂದಿರ, ಸಹೋದರಿಯರ ಪರವಾಗಿ ಹೋರಾಡುವ ನೈತಿಕ ಕರ್ತವ್ಯ ಕಾಂಗ್ರೆಸ್ ಪಕ್ಷದ್ದು. ಕರ್ನಾಟಕ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿ ಭಾರತಕ್ಕೆ ಕರೆ ತರುವ ಮನವಿ‌ ಮಾಡಲಾಗಿದೆ. ಸಂತ್ರಸ್ತರಿಗೆ ರಕ್ಷಣೆ ನೀಡಬೇಕಾಗಿದೆ ಎಂದು ರಾಗಾ” ಬರೆದಿದ್ದಾರೆ.

ಸಿಎಂ ಸಿದ್ದರಾಮಯ್ಯ X ಮುಖಾಂತರ ಭರವಸೆ

“ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರ, ಅನ್ಯಾಯಕ್ಕೆ ಒಳಗಾದ ಸಂತ್ರಸ್ತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಷಾಮೀಲಾಗಿದ್ದರೂ ಅವರನ್ನು ಕಾನೂನಿನ ಕೈಗಳಿಗೆ ಒಪ್ಪಿಸಲಾಗುವುದು. ನೊಂದವರ ಕಣ್ಣೀರು ಒರೆಸುವ ಜೊತೆಗೆ ಅವರ ನ್ಯಾಯದ ಹೋರಾಟದಲ್ಲಿ ನಮ್ಮ ಸರ್ಕಾರ ಜೊತೆ ನಿಲ್ಲಲಿದೆ ಎಂಬ ವಾಗ್ದಾನವನ್ನು @RahulGandhi ಅವರು ಸೇರಿದಂತೆ ನಾಡಿನ ಪ್ರತಿಯೊಬ್ಬರಿಗೂ ನೀಡುತ್ತಿದ್ದೇನೆ. ಸತ್ಯಮೇವ ಜಯತೇ..” ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್‌ ನೋಟೀಸ್!‌ ಏನಿದರ ಅಗತ್ಯ?

Continue Reading

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್‌ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್‌ ನೋಟೀಸ್!‌ ಏನಿದರ ಅಗತ್ಯ?

Prajwal Revanna Case: ಆರೋಪಿಯ ಚಲನವಲನಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಬ್ಲ್ಯೂ ಕಾರ್ನರ್ ನೋಟೀಸ್‌ ಜಾರಿಗೊಳಿಸಲಾಗುತ್ತದೆ. ಆರೋಪಿ ಬಗ್ಗೆ ಸುಳಿವು ಸಿಕ್ಕ ಬಳಿಕ ಆ ಮಾಹಿತಿಯನ್ನು ಸಿಐಡಿಗೆ ಸಿಬಿಐ ನೀಡಲಿದೆ. ಮತ್ತೆ ಇದನ್ನು ಆಧರಿಸಿ ಕೋರ್ಟ್‌ಗೆ ಮಾಹಿತಿ ‌ನೀಡಿ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಎಸ್ಐಟಿ ಮನವಿ ಮಾಡಬೇಕಿದೆ. ಸಿಬಿಐ, ಇಂಟರ್‌ಫೋಲ್‌ಗೆ ಮನವಿ ಮಾಡಿ ರೆಡ್ ಕಾರ್ನರ್ ನೊಟೀಸ್ ಪಡೆಯಲಿದೆ.

VISTARANEWS.COM


on

prajwal revanna case blue corner notice
Koo

ಬೆಂಗಳೂರು: ಲೈಂಗಿಕ ಹಗರಣದ (Pen Drive Case) ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna case) ಪತ್ತೆಗೆ ಬ್ಲೂ ಕಾರ್ನರ್ ನೊಟೀಸ್ (Blue Corner Notice) ಜಾರಿ ಮಾಡಲು ಎಸ್ಐಟಿ (SIT) ಅಧಿಕಾರಿಗಳಿಂದ ಮನವಿ ಮಾಡಲಾಗಿದೆ. ಸಿಬಿಐಗೆ (CBI) ಈ ಕುರಿತು ಎಸ್‌ಐಟಿ ಮನವಿ ಮಾಡಿದ್ದು, ಇಂಟರ್‌ಪೋಲ್‌ (Interpol) ಮೂಲಕ ಇದನ್ನು ಜಾರಿ ಮಾಡಬೇಕಿದೆ.

ಆರೋಪಿಯ ಚಲನವಲನಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಬ್ಲ್ಯೂ ಕಾರ್ನರ್ ನೋಟೀಸ್‌ ಜಾರಿಗೊಳಿಸಲಾಗುತ್ತದೆ. ಆರೋಪಿ ಬಗ್ಗೆ ಸುಳಿವು ಸಿಕ್ಕ ಬಳಿಕ ಆ ಮಾಹಿತಿಯನ್ನು ಸಿಐಡಿಗೆ ಸಿಬಿಐ ನೀಡಲಿದೆ. ಮತ್ತೆ ಇದನ್ನು ಆಧರಿಸಿ ಕೋರ್ಟ್‌ಗೆ ಮಾಹಿತಿ ‌ನೀಡಿ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಎಸ್ಐಟಿ ಮನವಿ ಮಾಡಬೇಕಿದೆ. ಸಿಬಿಐ, ಇಂಟರ್‌ಫೋಲ್‌ಗೆ ಮನವಿ ಮಾಡಿ ರೆಡ್ ಕಾರ್ನರ್ ನೊಟೀಸ್ ಪಡೆಯಲಿದೆ.

ಸದ್ಯ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿಯ ಪತ್ತೆಗೆ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಯಾವ ದೇಶದಲ್ಲಿ ಇದ್ದಾರೆ ಎನ್ನುವುದು ಪತ್ತೆಯಾಗಬೇಕಿದೆ. ಈ ಬಗ್ಗೆ ಸಿಬಿಐಗೆ ಈಗಾಗಲೇ ಮನವಿ ಮಾಡಲಾಗಿದೆ. ಬ್ಲೂ ಕಾರ್ನರ್ ನೊಟೀಸ್ ಜಾರಿ ಮಾಡುವಂತೆ ಸಿಬಿಐಗೆ ಮನವಿ ಮಾಡಲಾಗಿದೆ. ನಿನ್ನೆಯವರೆಗೂ ಪ್ರಜ್ವಲ್‌ ಜರ್ಮನಿಯಲ್ಲಿ ಇದ್ದರು ಎಂಬ ಮಾಹಿತಿ ಇತ್ತು. ನಿನ್ನೆ ದುಬೈಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಪ್ರಜ್ವಲ್‌ ತಮ್ಮಲ್ಲಿರುವ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಬಳಸಿ ವಿದೇಶಯಾನ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.

ಬ್ಲೂ ಕಾರ್ನರ್ ನೊಟೀಸ್ ಜಾರಿಯಾದ ಬಳಿಕ ಇಂಟರ್‌ಪೋಲ್ ಇತರ ಕಡೆಗಳಿಗೂ ಆರೋಪಿಯ ಮಾಹಿತಿಯನ್ನು ಕಳಿಸಿ, ಆರೋಪಿಯ ನೆಲೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಯಾವ ದೇಶದಲ್ಲಿ ಇದ್ದಾರೆ, ಎಲ್ಲಿ ಲೊಕೇಟ್ ಆಗಿದ್ದಾರೆ ಅನ್ನುವ ಚಲನವಲನ ಪತ್ತೆ ಮಾಡುತ್ತಾರೆ. ಬಳಿಕ ಸಿಬಿಐಗೆ ಆರೋಪಿಯ ಚಲನವಲನ ಬಗ್ಗೆ ಮಾಹಿತಿ ನೀಡುತ್ತಾರೆ. ಸಿಬಿಐ ಮೂಲಕ ಎಸ್ಐಟಿಗೆ ಪ್ರಜ್ವಲ್ ಎಲ್ಲಿದ್ದಾರೆ ಅನ್ನುವ ಮಾಹಿತಿ ಸಿಗುತ್ತದೆ. ಹೀಗಾಗಿ ಈ ನೋಟೀಸ್‌, ಸುಳಿವು ಪಡೆಯಲು ಮುಖ್ಯವಾಗಿದೆ.

ಇನ್ನಷ್ಟು ಸಿಬ್ಬಂದಿ

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಇನ್ನಷ್ಟು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮತ್ತೆ ಎಂಟು ಮಂದಿ ಅಧಿಕಾರಿ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಮೂವರು ಇನ್ಸ್‌ಪೆಕ್ಟರ್ ಹಾಗೂ ಮಹಿಳಾ ಸಿಬ್ಬಂದಿ ಸೇರಿದಂತೆ ಐವರು ಸಿಬ್ಬಂದಿ ನಿಯೋಜಿಸಲಾಗಿದ್ದು, ಕೂಡಲೇ ಸಿಐಡಿ ಕಚೇರಿಯ ಎಸ್ಐಟಿಯಲ್ಲಿ ವರದಿ ಮಾಡಿಕೊಳ್ಳಲು ಆದೇಶಿಸಲಾಗಿದೆ. ಓರ್ವ ಎಸ್ಪಿ, ಇಬ್ಬರು ಇನ್ಸ್ಪೆಕ್ಟರ್ ಗಳು, ಒರ್ವ ಸಬ್ ಇನ್ಸ್ಪೆಕ್ಟರ್ ಹಾಗೂ ನಾಲ್ವರು ಸಿಬ್ಬಂದಿ ಸೇರಿ ಎಂಟು ಜನರ ನೇಮಕ ಮಾಡಲಾಗಿದೆ.

ರೇವಣ್ಣ ಮೇಲೂ ಲುಕೌಟ್‌ ನೋಟೀಸ್‌

ಎಚ್‌.ಡಿ. ರೇವಣ್ಣ (HD Revanna) ವಿರುದ್ಧವೂ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ. ದೇಶ ಬಿಟ್ಟು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ (Lookout Notice) ಜಾರಿ ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ಎಚ್.ಡಿ. ರೇವಣ್ಣ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್‌ ಅನ್ನು ಜಾರಿ ಮಾಡಿದ್ದಾರೆ.

ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಡಿ ಲುಕ್ ಔಟ್ ನೋಟಿಸ್‌ ಅನ್ನು ಜಾರಿ ಮಾಡಲಾಗಿದೆ. ಈಗ ಎಚ್.ಡಿ. ರೇವಣ್ಣ ಸಹ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಅವರು ದೇಶ ಬಿಟ್ಟು ಹೋದರೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ. ಇದೊಂದು ಹೈಪ್ರೊಫೈಲ್‌ ಕೇಸ್‌ ಆಗಿದ್ದು, ಸೂಕ್ಷ್ಮವಾಗಿ ತನಿಖೆ ನಡೆಸಬೇಕಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದಾರೆ.

ಇದರ ಜತೆಗೆ ರೇವಣ್ಣ ಅವರಿಗೆ ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್‌ ನೀಡುತ್ತಲೇ ಬರಲಾಗಿದೆ. ಇಷ್ಟಾದರೂ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದೆ.

ಇದನ್ನೂ ಓದಿ: Prajwal Revanna Case: ಮೊಮ್ಮಗನ ದೆಸೆಯಿಂದ ದೇವೇಗೌಡರ ಆರೋಗ್ಯ ಏರುಪೇರು, ಕುಟುಂಬದಿಂದ ತೀವ್ರ ನಿಗಾ

Continue Reading

ಬೆಂಗಳೂರು

Bribery Case : ಕಾಸಿನ ಜತೆಗೆ ಎಣ್ಣೆ ಕೊಟ್ರಷ್ಟೇ ಫೈಲ್‌ ಮೂಮ್ಮೆಂಟ್‌ ; ಇದು ಕುಡುಕ ಪಂಚಾಯಿತಿ ಪಿಡಿಓ ಲಂಚಾವತಾರ

Bribery Case: ಪಿಡಿಓ ಅಧಿಕಾರಿಯ ಲಂಚಾವತಾರಕ್ಕೆ ಜನರು ಸುಸ್ತಾಗಿದ್ದಾರೆ. ಸರ್ಕಾರಿ ಕೆಲಸ ಆಗಬೇಕೆಂದರೆ ಆ ಸರ್ಕಾರಿ ಅಧಿಕಾರಿಗೆ ಹಣದೊಂದಿಗೆ, ದುಬಾರಿ ಮದ್ಯದ ಬಾಟೆಲ್‌ ಕೊಡಿಸಲೇಬೇಕು.

VISTARANEWS.COM


on

By

Bribery Case in Bengaluru news
Koo

ಬೆಂಗಳೂರು: ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಮಾತು ಕೇವಲ ಗೋಡೆಗಳ ಮೇಲಿನ ಬರಹಕ್ಕೆ ಅಷ್ಟೇ ಸೀಮಿತವಾಗಿದೆ. ಕೆಲಸ ಮಾಡುವ ಜಾಗ ದೇವಾಲಯ ಎನ್ನುವ ಕಾಲ ಮಾಯವಾಗಿ ಬಹಳ ದಿನಗಳೇ ಕಳೆದಿವೆ. ಸದ್ಯ ಇಲ್ಲೊಬ್ಬ ಅಧಿಕಾರಿ ದೇವಾಲಯವನ್ನೇ ಅಪವಿತ್ರ (Bribery Case) ಮಾಡಿದ್ದಾನೆ. ಕೆಲಸ ಆಗ್ಬೇಕು ಸರ್ ಎಂದು ಆತನ ಬಳಿ ಹೋದರೆ ಹಣದ ಜತೆಗೆ ಎಣ್ಣೆಗೆ ಡಿಮ್ಯಾಂಡ್ ಮಾಡುತ್ತಾನೆ. ದುಡ್ಡು‌, ಡ್ರಿಂಕ್ಸ್ ಮುಂದಿಟ್ಟರೆ ಸಾಕು ರೂಲ್ಸ್ ಬ್ರೇಕ್ ಮಾಡಿ ನಿಮಗೆ ಬೇಕಾದ ರೆಕಾರ್ಡ್ಸ್ ರೆಡಿಯಾಗುತ್ತಂತೆ.

ಅಂದಹಾಗೇ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಪಿಡಿಓ ಲಂಚಾವತಾರದ ಕಥೆ ಇದು. ಕಣ್ಣೂರು ಗ್ರಾಮ ಪಂಚಾಯಿತಿ ಪಿಡಿಓ ಮುನಿಚಿಕ್ಕಯ್ಯ ಎಂಬಾತನ ಲಂಚಾವತಾರಕ್ಕೆ ಜನ ಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಲ್ಯಾಂಡ್ ಕನ್ವರ್ಷನ್ ಆಗದಿದ್ದರೂ ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡುತ್ತಾರೆ. ರೆವಿನ್ಯೂ ಸೈಟ್‌ಗಳ ಖಾತೆ ಮಾಡಿಕೊಳ್ಳಲು ಒಂದು ಲಕ್ಷ ರೂ. ಫಿಕ್ಸ್ ಮಾಡಿದ್ದರಂತೆ.

ಅರ್ಜಿದಾರನೊಬ್ಬ ಅಕ್ರಮವಾಗಿ ನಿರ್ಮಾಣವಾಗಿದ್ದ ಲೇಔಟ್‌ನ ಕಾಮಗಾರಿ ತಡೆಯೋದಕ್ಕೆ ಅರ್ಜಿ ನೀಡಿದ್ದರು. ನಿಮ್ಮ ಕೆಲಸ ಮುಗಿತು ಅಂದುಕೊಳ್ಳಿ‌.. ಆದರೆ ನನಗೆ ದುಬಾರಿ ಮದ್ಯದ ಬಾಟೆಲ್‌ ಕೊಡಿ ಎನ್ನುತ್ತಾನಂತೆ. ಈ ರೀತಿ ನೂರಾರು ಖಾತೆಯನ್ನು ಅಕ್ರಮ ಎಸಗಿದ್ದಾರೆ. ಅಕ್ರಮದ ಬಗ್ಗೆ ದೂರು ನೀಡಿದರೂ ಹಿರಿಯ ಅಧಿಕಾರಿಗಳಿಂದ ಯಾವುದೇ ಕ್ರಮ ಇಲ್ಲ ಅರ್ಜಿದಾರರು ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ:Accident News: ಬಿರುಗಾಳಿಗೆ ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ವ್ಯಕ್ತಿ ಸಾವು; ಬಿಸಿಲಾಘಾತಕ್ಕೆ ಇಬ್ಬರು ಬಲಿ

ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

ಕಜಕೀಸ್ತಾನ: ರೆಸ್ಟೋರೆಂಟ್‌ವೊಂದರಲ್ಲಿ ಮಾಜಿ ಸಚಿವನೋರ್ವ ತನ್ನ ಪತ್ನಿಯನ್ನು ದಾರುಣವಾಗಿ ಥಳಿಸಿದ್ದು, ಪರಿಣಾಮವಾಗಿ ಎಂಟು ಗಂಟೆಗಳಲ್ಲಿ ಆಕೆ ಕೊನೆಯುಸಿರೆಳೆದಿರುವ ಘಟನೆ ಕಜಕೀಸ್ತಾನ(Kajakistan)ದಲ್ಲಿ ನಡೆದಿದೆ. ಘಟನೆಯ ಶಾಕಿಂಗ್‌ ವಿಡಿಯೋ(Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಬೆಚ್ಚಿಬೀಳುವಂತಿದೆ. ಕಜಕೀಸ್ತಾನದ ಮಾಜಿ ಆರ್ಥಿಕ ಸಚಿವನಾಗಿದ್ದ ಕುವಾಂಡಿಕ್ ಬಿಶಿಂಬಾಯೆವ್ ತನ್ನ 31 ವರ್ಷದ ಸಲ್ತಾನೇಟ್‌ ನ್ಯೂಕೆನೋವಾ ಮೇಲೆ ಈ ಡೆಡ್ಲಿ ಅಟ್ಯಾಕ್‌(Deadly Attack) ಮಾಡಿದ್ದಾನೆ. ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಪತ್ನಿ ಕೂದಲು ಹಿಡಿದು ಎಳೆದು ತಂದ ಬಿಶಿಂಬಾಯೆವ್, ಆಕೆಯ ಮುಖಾಮೂತಿ ನೋಡದೇ ಚಚ್ಚುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾವಾಗಿ ಗಾಯಗೊಂಡಿದ್ದ ಸಲ್ತಾನೇಟ್‌ ನ್ಯೂಕೆನೋವಾ ಎಂಡು ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದಾಳೆ. ಈ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ವಿಚಾರಣೆ ವೇಳೆ ಸಿಸಿಟಿವಿ ವಿಡಿಯೋವನ್ನು ಪ್ರದರ್ಶಿಸಲಾಯಿತು. ಹೀಗಾಗಿ ಈ ವಿಚಾರ ಮತ್ತೊಮ್ಮೆ ಸುದ್ದಿಯಾಗಿದೆ. ಇನ್ನು ಈ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಮಧ್ಯ ಏಷ್ಯಾದ ರಾಷ್ಟಗಳ ಹತ್ತು ಸಾವಿರಕ್ಕೂ ಅಧಿಕ ಜನರು ಸಹಿ ಹಾಕಿರುವ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.

ಇದನ್ನೂ ಓದಿ: Mallikarjuna Kharge: ಪ್ರಧಾನಿ ಮೋದಿ ವಡೋದರಾ ಬಿಟ್ಟು ವಾರಣಾಸಿಗೆ ಓಡಲಿಲ್ಲವೇ?; ಖರ್ಗೆ ಕಿಡಿ

ಬಿಶಿಂಬಾಯೆವ್ (44) ಮಾಜಿ ಪ್ರಧಾನಿ ನರ್ಸುಲ್ತಾನ್ ನಜರ್ಬಯೇವ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ಹಿಸುತ್ತಿದ್ದ. 2018ರಲ್ಲಿ ಲಂಚ ಪ್ರಕರಣದಲ್ಲಿ ಆತ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಕಳೆದ ವರ್ಷದ ನವೆಂಬರ್‌ನಲ್ಲಿ ಆತನ ಪತ್ನಿ ಸಂಬಂಧಿಕರ ರೆಸ್ಟೋರೆಂಟ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಒಂದು ವಾರದವರೆಗೆ ಬಿಶಿಂಬಾಯೆವ್ ತನಗೇನು ಗೊತ್ತಿಲ್ಲ, ತಾನೊಬ್ಬ ಅಮಾಯಕ ಎಂಬಂತೆ ಪೊಲೀಸರ ಎದುರು ನಟಿಸಿದ್ದ. ಆತನ ವಿರುದ್ಧ ಸಾಕ್ಷ್ಯಾಧಾರ ಸಿಗದಂತೆ ರೆಸ್ಟೋರೆಂಟ್‌ ಮಾಲೀಕ, ಸಿಬ್ಬಂದಿಗಳೂ ಸಹಕರಿಸಿದ್ದರು. ಆದರೆ ಕೋರ್ಟ್‌ನಲ್ಲಿ ತಾನೇ ಆಕೆಯಲ್ಲಿ ಹೊಡೆದು ಸಾಯಿಸಿರೋದಾಗಿ ಒಪ್ಪಿಕೊಂಡಿದ್ದಾನೆ.

ವೈದ್ಯರ ಮಾಹಿತಿ ಪ್ರಕಾರ ಸಲ್ತಾನೇಟ್‌ ನ್ಯೂಕೆನೋವಾ ತಲೆಗೆ ಗಂಭೀರವಾಗಿ ಏಟು ಬಿದ್ದ ಕಾರಣ ಆಕೆ ಮೃತಪಟ್ಟಿದ್ದಳು. ಇನ್ನು ಆಕೆಯ ಸಹೋದರ ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ್ದು, ತನ್ನ ಸಹೋದರಿ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ಆಗಲೇಬೇಕೆಂದು ಒತ್ತಾಯಿಸಿದ್ದಾನೆ. ಈಗಾಗಲೇ ಮೃತಳಿಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ವಕೀಲರು ಕೋರ್ಟ್‌ಗೆ ಸಲ್ಲಿಸಿದ್ದಾರೆ. ರಷ್ಯಾದಂತೆ ಕಜಕೀಸ್ತಾದಲ್ಲೂ ಪುರುಷ ಪ್ರಧಾನ ಸಂಸ್ಕೃತಿ ಚಾಲ್ತಿಯಲ್ಲಿದ್ದು, ಹೀಗಾಗಿ ಕೌಟುಂಬಿಕ ಕಲಹ, ಲೈಂಗಿಕ ದೌರ್ಜನ್ಯ ಮೊದಲಾದ ಅಪರಾಧಗಳು ಹೆಚ್ಚಾಗಿವೆ.2018ರಲ್ಲಿ ವಿಶ್ವಸಂಸ್ಥೆ ನೀಡಿರುವ ವರದಿ ಪ್ರಕಾರ ಪ್ರತಿ ವರ್ಷ 400 ಕ್ಕೂ ಅಧಿಕ ಮಹಿಳೆಯರು ಕೌಟುಂಬಿಕ ಕಲಹಕ್ಕೆ ಬಲಿಯಾಗುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

CM Siddaramaiah: ಸಿಎಂ ಸಿದ್ದರಾಮಯ್ಯ ಬಗ್ಗೆ ಪೋಸ್ಟ್:‌ ಮಹೇಶ್‌ ವಿಕ್ರಂ ಹೆಗ್ಡೆ, ವಸಂತ್‌ ಗಿಳಿಯಾರ್ ಬಂಧನವಿಲ್ಲ

CM Siddaramaiah: ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಮಹೇಶ್‌ ವಿಕ್ರಮ್‌ ಹೆಗ್ಡೆ ಮತ್ತು ವಸಂತ್‌ ಗಿಳಿಯಾರ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಪೊಲೀಸರ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

VISTARANEWS.COM


on

cm siddaramaiah
Koo

ಬೆಂಗಳೂರು: ಸೋಶಿಯಲ್‌ ಮೀಡಿಯಾದಲ್ಲಿ (Social media) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಮಾನಹಾನಿ (derogatory) ಮಾಡುವಂತಹ ಪೋಸ್ಟ್‌ ಹಾಕಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ʼಪೋಸ್ಟ್‌ಕಾರ್ಡ್‌ʼ (Postcard) ಮುಖ್ಯಸ್ಥ ಮಹೇಶ್‌ ವಿಕ್ರಮ್‌ ಹೆಗ್ಡೆ (Mahesh Vikram Hegde) ಮತ್ತು ವಸಂತ್‌ ಗಿಳಿಯಾರ್‌ (Vasant Giliyar) ಅವರನ್ನು ಸದ್ಯಕ್ಕೆ ಬಂಧಿಸದಂತೆ ಪೊಲೀಸರಿಗೆ ಹೈಕೋರ್ಟ್‌ (Highcourt) ನಿರ್ದೇಶಿಸಿದೆ.

ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಮಹೇಶ್‌ ವಿಕ್ರಮ್‌ ಹೆಗ್ಡೆ ಮತ್ತು ವಸಂತ್‌ ಗಿಳಿಯಾರ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಪೊಲೀಸರ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮೇ 9ಕ್ಕೆ ವಿಚಾರಣೆ ಮುಂದೂಡಿತು. ಅಲ್ಲಿಯವರೆಗೆ ಅರ್ಜಿದಾರರನ್ನು ಬಂಧಿಸಬಾರದು ಎಂದು ಪೊಲೀಸರಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಿತು.

ಮಹೇಶ್‌ ವಿಕ್ರಮ್‌ ಹೆಗ್ಡೆ ಅವರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ ಮತ್ತು ವಾಟ್ಸಾಪ್‌ಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾನಹಾನಿ ಮಾಡುವಂತಹ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಜನರನ್ನು ಪ್ರಚೋದಿಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಿದ್ದಾರೆ. ಸಿದ್ದರಾಮಯ್ಯ ಅವರ ಫೋಟೊ ದುರ್ಬಳಕೆ ಮಾಡಿಕೊಂಡಿದ್ದಾರೆ. ಜತೆಗೆ, ಪೋಟೋವನ್ನು ಕೆಟ್ಟ ಮಾಹಿತಿಯೊಂದಿಗೆ ಬಳಕೆ ಮಾಡುವ ಮೂಲಕ ಸಿಎಂ ವರ್ಚಸ್ಸಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಹರೀಶ್‌ ನಾಗರಾಜು 2024ರ ಏ.9ರಂದು ಅರ್ಜಿದಾರರು ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಬೆಂಗಳೂರಿನ ಬಸವೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಅದನ್ನು ಆಧರಿಸಿ ಅರ್ಜಿದಾರರ ವಿರುದ್ಧ ಪಶ್ವಿಮ ವಿಭಾಗದ ಸಿಇಎನ್‌ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಬಂಧನ ಭೀತಿ ಎದುರಾದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: Prajwal Revanna Case: ವಿಡಿಯೊದಲ್ಲಿ ಪ್ರಜ್ವಲ್‌ ಮುಖ ಕಾಣಲ್ಲ; ಗಂಡಸ್ತನವಿದ್ದರೆ ರಾಹುಲ್‌ ಗಾಂಧಿಗೆ ನೋಟಿಸ್‌ ಕೊಡಿ: ಸಿಎಂಗೆ ಎಚ್‌ಡಿಕೆ ಸವಾಲು

Continue Reading
Advertisement
prajwal revanna case cm siddaramaiah rahul gandhi
ಪ್ರಮುಖ ಸುದ್ದಿ10 seconds ago

Prajwal Revanna Case: ಸಿಎಂ ಪತ್ರ ಬರೆದು ಚುರುಕು ಮುಟ್ಟಿಸಿದ ರಾಗಾ; ಎಸ್‌ಐಟಿ ಜೊತೆ ಸಭೆ ನಡೆಸಿ ಸಿಎಂ ಖಡಕ್‌ ಸೂಚನೆ

Rahul Gandhi
ದೇಶ19 mins ago

Rahul Gandhi: ಪ್ರಧಾನಿ ದ್ವಾರಕಾ ಪೂಜೆ ಒಂದು ನಾಟಕ; ಮತ್ತೆ ಸನಾತನ ಆಚರಣೆ ಬಗ್ಗೆ ರಾಹುಲ್‌ ಪ್ರಶ್ನೆ

Job Alert
ಉದ್ಯೋಗ22 mins ago

Job Alert: 313 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಡಿಪ್ಲೋಮಾ ಓದಿದವರು ಇಂದೇ ಅಪ್ಲೈ ಮಾಡಿ

prajwal revanna case blue corner notice
ಪ್ರಮುಖ ಸುದ್ದಿ25 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್‌ ನೋಟೀಸ್!‌ ಏನಿದರ ಅಗತ್ಯ?

Covishield Vaccine
ಬೆಂಗಳೂರು49 mins ago

Covishield vaccine: ಕೋವಿಶೀಲ್ಡ್‌ ಲಸಿಕೆಯಿಂದ ಸೈಡ್‌ ಎಫೆಕ್ಟ್‌ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

A Devendra Gowda passed away in Ballari
ಬಳ್ಳಾರಿ1 hour ago

A Devendra Gowda: ಎಂ. ಗೋನಾಳ್ ಗ್ರಾಮದ ಮುಖಂಡ ಎ. ದೇವೇಂದ್ರ ಗೌಡ ನಿಧನ

MI vs KKR
ಕ್ರೀಡೆ1 hour ago

MI vs KKR: ಮತ್ತೆ ಮುಂಬೈ ವಿರುದ್ಧ ಕೇಳಿಬಂದ ಟಾಸ್​ ಫಿಕ್ಸಿಂಗ್​ ಆರೋಪ

Amrutha Ramamoorthi has been rejected fifteen times
ಕಿರುತೆರೆ1 hour ago

Amrutha Ramamoorthi: ಆಡಿಷನ್‌ನಲ್ಲಿ ಬರೋಬ್ಬರಿ 15 ಬಾರಿ ರಿಜೆಕ್ಟ್ ಆಗಿದ್ದರಂತೆ ಈ ಖ್ಯಾತ ನಟಿ!

Viral Video
ವೈರಲ್ ನ್ಯೂಸ್1 hour ago

Viral Video:ʼವಡಾಪಾವ್‌ ಗರ್ಲ್‌ʼನ ಬೀದಿ ರಂಪಾಟ; ಸೋಶಿಯಲ್ ಮೀಡಿಯಾ ಸ್ಟಾರ್‌ನ ವಿಡಿಯೋ ಫುಲ್‌ ವೈರಲ್‌

IPL 2024
ಬೆಂಗಳೂರು1 hour ago

Traffic Restrictions: ಐಪಿಎಲ್‌ ಕ್ರಿಕೆಟ್‌; ಈ ರೋಡ್‌ನಲ್ಲಿ ಅಪ್ಪಿತಪ್ಪಿಯೂ ಪಾರ್ಕಿಂಗ್ ಮಾಡಬೇಡಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ22 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌