Pothole | ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮತ್ತೊಬ್ಬ ಬೈಕ್‌ ಸವಾರ ಬಲಿ; ಸಾರ್ವಜನಿಕರ ಆಕ್ರೋಶ Vistara News

ಬೆಂಗಳೂರು

Pothole | ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮತ್ತೊಬ್ಬ ಬೈಕ್‌ ಸವಾರ ಬಲಿ; ಸಾರ್ವಜನಿಕರ ಆಕ್ರೋಶ

ಮಂಡ್ಯದಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ನಿವೃತ್ತ ಯೋಧರೊಬ್ಬರು ಮೃತಪಟ್ಟ ಬೆನ್ನಲ್ಲೇ ಇತ್ತ ಬೆಂಗಳೂರಿನಲ್ಲೂ ಬೈಕ್‌ ಸವಾರರೊಬ್ಬರು ರಸ್ತೆ ಗುಂಡಿಗೆ (Pothole) ಬಲಿಯಾಗಿದ್ದಾರೆ.

VISTARANEWS.COM


on

Pothole
ಮೃತ ಬೈಕ್‌ ಸವಾರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇಲ್ಲಿನ ರಾಜಾಜಿನಗರದ ರಾಜಕುಮಾರ್ ರೋಡ್‌ ಬಳಿ ರಸ್ತೆ ಗುಂಡಿಗೆ (Pothole) ಬೈಕ್‌ ಸವಾರರೊಬ್ಬರು ಮೃತಪಟ್ಟಿದ್ದಾರೆ. ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Pothole
<strong>ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ<strong>

ಸೋಮವಾರ (ನ.14) ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಆ್ಯಕ್ಟಿವ್ ಹೋಂಡಾದಲ್ಲಿ ಬಂದ ಸವಾರ, ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿದ್ದಾರೆ. ಈ ವೇಳೆ ಸ್ಕಿಡ್‌ ಆಗಿ ಸವಾರ ನೆಲಕ್ಕೆ ಬಿದ್ದಿದ್ದಾರೆ. ಅವರ ಸ್ಕೂಟರ್‌ ಪಕ್ಕದಲ್ಲಿಯೇ ಬರುತ್ತಿದ್ದ ಟ್ರ್ಯಾಕ್ಟರ್‌ವೊಂದು ಸವಾರನ ಮೇಲೆ ಹರಿದಿದೆ. ಇದರಿಂದ ಆ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅಕ್ಕಪಕ್ಕದಲ್ಲಿದ್ದ ಜನರು ಅವರ ರಕ್ಷಣೆಗೆ ಮುಂದಾದರಾದರೂ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಬೈಕ್‌ ಸವಾರ ಅದೇ ಏರಿಯಾದಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಉಳಿದಂತೆ ಸವಾರನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ರಸ್ತೆ ಅಗೆದು ಹಲವು ದಿನಗಳು ಕಳೆದರೂ ಇದರ ದುರಸ್ತಿಗೆ ಅಧಿಕಾರಿಗಳು ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಮತ್ತೆಷ್ಟು ಬಲಿ ಬೇಕೆಂದು ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ | Pothole | ರಸ್ತೆ ಗುಂಡಿ ತಪ್ಪಿಸಲು ಹೋಗಿ ಪ್ರಾಣ ತೆತ್ತ ನಿವೃತ್ತ ಯೋಧ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಉಡುಪಿ

Karnataka weather: ಬೆಂಗಳೂರಲ್ಲಿ ನಾಳೆ ಇಡೀ ದಿನ ಮೋಡ ಕವಿದ ವಾತಾವರಣ; ಇಲ್ಲಷ್ಟೇ ಮಳೆ ಸೂಚನೆ

Rain News: ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ.

VISTARANEWS.COM


on

By

Cloudy weather in Bengaluru for the entire day Rain Forecast
Koo

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಒಂದೆರಡು ಕಡೆಗಳಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ. ಜತೆಗೆ ಗುಡುಗು ಮಿಂಚಿನ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka weather Forecast) ನೀಡಿದೆ.

ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದರೆ, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ. ಇನ್ನೆರಡು ದಿನಗಳು ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದರೆ, ಉತ್ತರ ಕನ್ನಡದಲ್ಲಿ ಒಣಹವೆ ಇರಲಿದೆ.

ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಮೈಸೂರಲ್ಲಿ ಮಳೆ ನಿರೀಕ್ಷೆ ಇದೆ.

ಇದನ್ನೂ ಓದಿ: Model Fashion Life: ಕಲಾತ್ಮಕ ರೆಟ್ರೊ ಫ್ಯಾಷನ್ ಪ್ರಿಯೆ ಮಾಡೆಲ್ ಲುಸಿ ಸರೆರಿಯಾ

ಭಾಗಶಃ ಮೋಡ ಕವಿದ ವಾತಾವರಣ!

ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿಯಂದು ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಇರಲಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇಲ್ಲೆಲ್ಲ ಶುಷ್ಕ ವಾತಾವರಣ

ದಕ್ಷಿಣ ಒಳನಾಡಿ ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಹಾಗೂ ರಾಮನಗರ, ತುಮಕೂರು, ವಿಜಯನಗರದಲ್ಲಿ ಒಣಹವೆ ಇರಲಿದೆ. ಇನ್ನು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆಯೇ ಇರಲಿದೆ.

ಶನಿವಾರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವ ವರದಿ ಆಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ. ಮೂಲ್ಕಿ, ಪುತ್ತೂರು, ಮಂಗಳೂರು ವಿಮಾಣ ನಿಲ್ದಾಣದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಪಣಂಬೂರಲ್ಲಿ 2, ಮಣಿ, ಮಂಗಳೂರು, ಉಪ್ಪಿನಂಗಡಿ, ಶ್ರವಣಬೆಳಗೊಳದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕನಿಷ್ಠ ಉಷ್ಣಾಂಶ 13.9 ಡಿ.ಸೆ ವಿಜಯಪುರದಲ್ಲಿ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

TN Seetharam: ನನ್ನ ರಾಜಕೀಯ ಪ್ರವೇಶಕ್ಕೆ ಪ್ರೊ. ನಂಜುಂಡಸ್ವಾಮಿ ಕಾರಣ: ಸಿಎಂ ಸಿದ್ದರಾಮಯ್ಯ

TN Seetharam : ನನ್ನ ರಾಜಕೀಯ ಜೀವನ ಪ್ರವೇಶಕ್ಕೆ ಪ್ರೊ. ನಂಜುಂಡಸ್ವಾಮಿಯವರೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹಳೇ ಜೀವನವನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ, ತಾವು ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಜತೆಗೆ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ ಅವರು ಬದುಕಿನ ವಿವಿಧ ಸ್ತರಗಳ ಅನುಭವವಿರುವ ಕ್ರಿಯಾಶೀಲ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

VISTARANEWS.COM


on

TN Seetharam Book release function
Koo

ಬೆಂಗಳೂರು: ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ (TN Seetharam) ಅವರೊಂದಿಗೆ ನನಗೆ 40 ವರ್ಷಗಳ ಒಡನಾಟವಿದ್ದು, ಇವರು ಬದುಕಿನ ವಿವಿಧ ಸ್ತರಗಳ ಅನುಭವವಿರುವ ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅಲ್ಲದೆ, ಇದೇ ವೇಳೆ ತಮ್ಮ ರಾಜಕೀಯ ಜೀವನವನ್ನು (Political Life) ಮೆಲುಕು ಹಾಕಿದ ಸಿಎಂ, ಪ್ರೊ. ನಂಜುಂಡಸ್ವಾಮಿ (Prof Nanjundaswamy) ಅವರಿಂದಲೇ ತಾವು ರಾಜಕೀಯವನ್ನು ಪ್ರವೇಶ ಮಾಡಿದ್ದಾಗಿ ವಿವರಿಸಿದರು.

ಸಾವಣ್ಣ ಪ್ರಕಾಶನದಿಂದ ಹೊರತರಲಾದ ಖ್ಯಾತ ನಿರ್ದೇಶಕ, ಲೇಖಕ ಟಿ.ಎನ್.ಸೀತಾರಾಂ ಅವರ “ನೆನಪಿನ ಪುಟಗಳು” ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಟಿ.ಎನ್.ಸೀತಾರಾಂ ಸುಮಾರು 40 ವರ್ಷಗಳ ಒಡನಾಟವಿರುವ ಆಪ್ತ ಸ್ನೇಹಿತ. ನಾನು ಲಂಕೇಶ್ ಪತ್ರಿಕಾಲಯಕ್ಕೆ ಭೇಟಿ ನೀಡುತ್ತಿದ್ದೆ. ಕಾನೂನು ವಿದ್ಯಾರ್ಥಿಯಾಗಿದ್ದಾಗ ಪ್ರೊ. ನಂಜುಂಡಸ್ವಾಮಿಯವರು ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಆಗ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯಿದ್ದ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರು. ಸಮಾಜವಾದಿ ಯುವಜನಸಭಾದಲ್ಲಿ ನಾನು ಸದಸ್ಯನಾಗಲು ನೆರವಾದರು. 1971ರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ನಾನು ಭಾಗಿಯಾಗಿದ್ದೆ. ನನ್ನ ರಾಜಕೀಯ ಜೀವನ ಪ್ರಾರಂಭವಾಗಲು ಪ್ರೊ. ನಂಜುಂಡಸ್ವಾಮಿಯವರೇ ಕಾರಣ ಎಂದರು.

TN Seetharam Book release function

ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ನೆನಪು

ಜನತಾಪಾರ್ಟಿಯಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಪಕ್ಷದ ನಾಯಕರು ನನಗೆ ಪ್ರೋತ್ಸಾಹ ನೀಡಿದರು. ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದ ನಂತರ ರಾಮಕೃಷ್ಣ ಹೆಗಡೆಯವರಿಗೆ ಬೆಂಬಲ ಸೂಚಿಸಿದೆ. ಬಳಿಕ ಕಾವಲು ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. 1984ರಲ್ಲಿ ರೇಷ್ಮೆ ಸಚಿವನಾಗಿ ಕೆಲಸ ಮಾಡಿದೆ. 1985ರಲ್ಲಿ ಜನತಾದಳದ ಪರವಾಗಿ ನಿಂತು ಜಯ ಸಾಧಿಸಿದ ನಂತರ ಪಶುಸಂಗೋಪನೆ ಸಚಿವನಾಗಿ ಕೆಲಸ ನಿರ್ವಹಿಸಿದೆ. ಆ ಸಂದರ್ಭದಲ್ಲಿ ಕಾರಣಾಂತರಗಳಿಂದ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ತನ್ನ ಬಳಿಯಿದ್ದ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ನೆನಪುಗಳನ್ನು ಮುಖ್ಯಮಂತ್ರಿಯವರು ಸ್ಮರಿಸಿಕೊಂಡರು.

TN Seetharam Book release function

ಬಹುಮುಖ ಪ್ರತಿಭೆ

ಟಿ.ಎನ್. ಸೀತಾರಾಂ ಅವರು ಬದುಕಿನ ಎಲ್ಲ ಸ್ತರಗಳ ಅನುಭವ ಇರುವವರು. ಅವರ ವಿದ್ಯಾರ್ಥಿ ದೆಸೆ, ಸ್ನೇಹಿತರ ಒಡನಾಟ, ರಾಜಕೀಯ, ಕಲಾ ಸೇವೆಯಲ್ಲಿ ತೊಡಗಿರುವ ಸೀತಾರಾಂ ಅವರು ಬಹುಮುಖ ಪ್ರತಿಭೆ. ರಾಮಕೃಷ್ಣ ಹೆಗಡೆಯವರ ಆಪ್ತರಾಗಿರುವವರು. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಿದ್ದರೆ, ಶಾಸಕರಾಗುವ ಸಾಧ್ಯತೆಯೂ ಇತ್ತು. ರಾಮಕೃಷ್ಣ ಹೆಗಡೆಯವರಿಗೆ ಬಹಳ ಜನಪ್ರಿಯತೆ ಇದ್ದ ಕಾರಣ, ಜನತಾ ಪಾರ್ಟಿ ಪರವಾದ ಅಲೆ ಇತ್ತು. ಆದರೆ, ಅವರು ಚುನಾವಣಾ ರಾಜಕಾರಣದಲ್ಲಿ ಯಶಸ್ವಿಯಾಗಲಿಲ್ಲ. ಒಂದು ವೇಳೆ ಅವರು ಗೆದ್ದಿದ್ದರೆ, ನಮಗೆಲ್ಲ ರಾಜಕಾರಣದಲ್ಲಿ ಮುಂದೆ ಬರಲು ಅವಕಾಶ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈಗ ಅವರು ನೆನಪಿನ ಪುಟಗಳ ಪುಸ್ತಕವನ್ನು ಉತ್ತಮವಾಗಿ ಹಾಗೂ ಸತ್ಯವನ್ನೇ ಬರೆದಿದ್ದಾರೆ. ನನ್ನ ಉತ್ತಮ ಸ್ನೇಹಿತರಾಗಿರುವ ಟಿ.ಎನ್.ಸೀತಾರಾಂ ಅವರು ಬರೆದಿರುವ ಕೃತಿಯನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.

ಖ್ಯಾತ ನಟ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಅರಸು ನಂತರ ಅವರಂತೆಯೇ ಸರ್ವ ಜನಾಂಗದ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಎಂದರೆ ಸಿದ್ದರಾಮಯ್ಯ. ಅವರು ತಾವೇ ಮಾಡಿಸಿದ ಜಾತಿ ಜನಗಣತಿಯನ್ನು ಒಪ್ಪಿಕೊಂಡು, ಅದರ ಅನುಷ್ಠಾನಕ್ಕೆ ಮುಂದಾಬೇಕು ಎಂದು ಹೇಳಿದರು.

ಕೃತಿಯ ಲೇಖಕ ಟಿ.ಎನ್‌. ಸೀತಾರಾಮ್‌ ಮಾತನಾಡಿ, ತಮ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಡನಾಟವನ್ನು ನೆನಪಿಸಿಕೊಂಡರು. ಎತ್ತರಕ್ಕೇರಿದರೂ ಸ್ವಲ್ಪವೂ ಗರ್ವ ಇರದ ರಾಜಕಾರಣಿ ಎಂದರೆ ಸಿದ್ದರಾಮಯ್ಯ. ನಾನು ಹಲವಾರು ಮುಖ್ಯಮಂತ್ರಿಗಳೊಂದಿಗೆ ಒಡನಾಟ ಹೊಂದಿದ್ದರೂ, ಸಿದ್ದರಾಮಯ್ಯರನ್ನು ಹೆಚ್ಚು ಇಷ್ಟ ಪಡಲು ಇದೇ ಕಾರಣ ಎಂದು ಹೇಳಿದರು.

ಇದನ್ನೂ ಓದಿ: Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

ಕಾರ್ಯಕ್ರಮದಲ್ಲಿ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಲೇಖಕರಿಯರ ಸಂಘದ ಅಧ್ಯಕ್ಷೆ, ಕವಯತ್ರಿ ಎಚ್‌.ಎಲ್‌. ಪುಷ್ಪಾ, ಪತ್ರಕರ್ತ ಹಾಗೂ ಸಾಹಿತಿ ಜೋಗಿ, ಸಾವಣ್ಣ ಪ್ರಕಾಶನದ ಜಮೀಲ್‌ ಸಾವಣ್ಣ ಉಪಸ್ಥಿತರಿದ್ದರು.

Continue Reading

ಕರ್ನಾಟಕ

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

Shiva Rajkumar: ನಟ ಶಿವರಾಜ್‌ ಕುಮಾರ್‌ ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಈಡಿಗ ಸಮಾವೇಶದಲ್ಲಿ ಆಫರ್‌ ನೀಡಿದ್ದಾರೆ. ಆದರೆ, ಸಿನಿಮಾ ಜೀವನದಿಂದ ನಾನು ಹೊರಗೆ ಬರಲ್ಲ. ನನಗೆ ರಾಜಕೀಯ ಬೇಡ ಎಂದು ನಯವಾಗಿಯೇ ತಿರಸ್ಕಾರ ಮಾಡಿದ್ದಾರೆ.

VISTARANEWS.COM


on

Actor Shivarajkumar rejects DKS offer
Koo

ಬೆಂಗಳೂರು: ನಟ ಶಿವರಾಜ್‌ಕುಮಾರ್‌ (Shiva Rajkumar) ಅವರಿಗೆ ಲೋಕಸಭೆಗೆ (Lok Sabha Election 2024) ಸ್ಪರ್ಧೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ (DCM DK Shivakumar) ಆಹ್ವಾನ ನೀಡಿದ್ದಾರೆ. ಆದರೆ, ಈ ಆಫರ್‌ ಅನ್ನು ಶಿವರಾಜ್‌ಕುಮಾರ್‌ ಅವರು ಅಷ್ಟೇ ನಯವಾಗಿ ತಿರಸ್ಕಾರ ಮಾಡಿದ್ದಾರೆ. ನನಗೆ ಬಣ್ಣ ಹಚ್ಚುವುದಷ್ಟೇ ಗೊತ್ತು. ನಮ್ಮ ತಂದೆಯವರು ನನಗೆ ಅದನ್ನು ಮಾತ್ರ ಹೇಳಿಕೊಟ್ಟಿದ್ದಾರೆ. ನಾನು ಅದನ್ನು ಮಾತ್ರವೇ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಬರುವುದಿಲ್ಲ. ಆದರೆ, ನನ್ನ ಹೆಂಡತಿ ಗೀತಾ (Geetha Shivarajkumar) ರಾಜಕೀಯ ಎಂದರೆ ಇಷ್ಟವಿದೆ. ಆಕೆ ರಾಜಕಾರಣದ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವಳು. ಹೆಂಡತಿ ಇಷ್ಟಪಟ್ಟಿದ್ದನ್ನು ನೆರವೇರಿಸುವವನೇ ಗಂಡ. ಹಾಗಾಗಿ ಆಕೆಗೆ ನನ್ನ ಬೆಂಬಲ ಇರುತ್ತದೆ ಎಂದು ನೇರವಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ವೇದಿಕೆಯಲ್ಲಿ ಕುಳಿತಿದ್ದಾಗ ನಾನು ನಟ ಶಿವರಾಜ್‌ಕುಮಾರ್‌ ಅವರಿಗೆ ಹೇಳಿದೆ. ನೀವು ರಾಜಕೀಯಕ್ಕೆ ಬಂದು ಬಿಡಿ. ನಿಮಗೆ ಲೋಕಸಭೆಗೆ ಟಿಕೆಟ್‌ ಕೊಡುತ್ತೇವೆ ಎಂದು ಹೇಳಿದೆ. ಅದಕ್ಕೆ ಶಿವಣ್ಣ ಅವರು ನಾನು ಈಗಾಗಲೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು. ಅದಕ್ಕೆ ನಾನು ಹೇಳಿದ್ದೇನೆಂದರೆ, ಎಲ್ಲರಿಗೂ ರಾಜಕೀಯದಲ್ಲಿ ಒಳ್ಳೆಯ ಅವಕಾಶ ಸಿಗುವುದಿಲ್ಲ. ಲೋಕಸಭೆಯನ್ನು ಪ್ರವೇಶ ಮಾಡುವ ಭಾಗ್ಯ ಸಿಗಲಾರದು. ನಿಮಗೆ ಈಗ ಆ ಅದೃಷ್ಟ ಬಂದಿದೆ ಬನ್ನಿ ಎಂದು ಹೇಳಿದ್ದೇನೆ ಎಂಬುದಾಗಿ ಹೇಳಿದರು.

ಹೆಂಡತಿ ಇಷ್ಟಪಟ್ಟಿದ್ದನ್ನು ನೆರವೇರಿಸುವವನೇ ಗಂಡ

ಡಿ.ಕೆ. ಶಿವಕುಮಾರ್‌ ಭಾಷಣದ ಬಳಿಕ ಮಾತನಾಡಿದ ಶಿವರಾಜ್‌ಕುಮಾರ್‌, ನಾನು ರಾಜಕೀಯಕ್ಕೆ ಎಂದೂ ಬರಲಾರೆ. ನಮಗೆಲ್ಲ ರಾಜಕೀಯ ಬೇಡ ಸ್ವಾಮಿ. ಬಂಗಾರಪ್ಪ ಅವರ ಮಗಳನ್ನು ನಾನು ಮದುವೆಯಾಗಿದ್ದೇನೆ. ಅವರ ರಕ್ತದಲ್ಲಿ ರಾಜಕೀಯ ಇದೆ. ಅವರು ಮಾಡಲಿ. ಸಮಾಜಕ್ಕೆ ಯಾರಾದರೂ ಒಳ್ಳೆಯದನ್ನು ಮಾಡುತ್ತಾರೆಂದರೆ ಅದಕ್ಕೆ ನನ್ನ ಬೆಂಬಲ ಇದ್ದೇ ಇರುತ್ತದೆ. ಹೆಂಡತಿ ಇಷ್ಟಪಡುತ್ತಿರುವುದನ್ನು ನೆರವೇರಿಸಿದವನೇ ಗಂಡ. ಹಾಗಾಗಿ ಅವರಿಗೆ ನಾನು ಸಪೋರ್ಟ್‌ ಮಾಡುತ್ತೇನೆ ಎಂದು ಹೇಳಿದರು.

ಬಂಗಾರಪ್ಪ ಅವರೇ ನನ್ನನ್ನು ರಾಜಕೀಯಕ್ಕೆ ಕರೆದಿಲ್ಲ

ನಾನು ಗೀತಾ ಅವರನ್ನು ಮದುವೆಯಾದ ದಿನದಿಂದಲೂ ನಮ್ಮ ಮಾವನವರಾದ ಬಂಗಾರಪ್ಪ ಅವರಾಗಲೀ, ಭಾವ ಮೈದುನ ಮಧು ಬಂಗಾರಪ್ಪ ಅವರಾಗಲೀ ಎಂದೂ ಸಹ ನನಗೆ ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡಿಲ್ಲ. ಅದರಲ್ಲಿ ಆಸಕ್ತಿ ಇಲ್ಲ ಎಂಬ ಕಾರಣಕ್ಕೆ ಅವರು ನನ್ನನ್ನು ಕರೆಯಲಿಲ್ಲ. ನನಗೆ ಬಣ್ಣ ಹಚ್ಚುವುದು ಮಾತ್ರ ಗೊತ್ತಿದೆ. ನಮ್ಮ ತಂದೆಯವರಾದ ಡಾ. ರಾಜ್‌ಕುಮಾರ್‌ ಅವರು ನಮಗೆ ಅದನ್ನು ಮಾತ್ರ ಹೇಳಿಕೊಟ್ಟಿದ್ದಾರೆ ಎಂದು ಶಿವರಾಜ್‌ಕುಮಾರ್ ಹೇಳಿದರು. ‌

ಇದನ್ನೂ ಓದಿ: Congress Karnataka: ಸಿಎಂ ಈಡಿಗ ಪಾಲಿಟಿಕ್ಸ್‌; ಸಿದ್ದರಾಮಯ್ಯ ವಿರುದ್ಧ ಗುಡುಗಿದ ಬಿ.ಕೆ. ಹರಿಪ್ರಸಾದ್!

ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ

ರಾಜಕೀಯಕ್ಕೆ ಎಂದೇ ಒಳ್ಳೆ ಒಳ್ಳೆಯವರು ಇದ್ದಾರೆ. ಅವರು ರಾಜಕೀಯವನ್ನು ಮುಂದುವರಿಸಿಕೊಂಡು ಹೋಗಲಿ. ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಆಫರ್‌ ಅನ್ನು ನಯವಾಗಿಯೇ ತಿರಸ್ಕರಿಸಿದರು.

Continue Reading

ಕರ್ನಾಟಕ

Congress Karnataka: ಸಿಎಂ ಈಡಿಗ ಪಾಲಿಟಿಕ್ಸ್‌; ಸಿದ್ದರಾಮಯ್ಯ ವಿರುದ್ಧ ಗುಡುಗಿದ ಬಿ.ಕೆ. ಹರಿಪ್ರಸಾದ್!

Congress Karnataka: ಬೆಂಗಳೂರಿನಲ್ಲಿ ನಡೆಯುತ್ತಿರುವ ಬೃಹತ್‌ ಈಡಿಗ ಸಮಾವೇಶದ ಬಗ್ಗೆ ಬಿ.ಕೆ. ಹರಿಪ್ರಸಾದ್ ತಮ್ಮ ಅತೃಪ್ತಿಯನ್ನು ಹೊರಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಅಗತ್ಯ ಬಿದ್ದರೆ ಪ್ರಶ್ನೆ ಮಾಡುವುದಾಗಿಯೂ ಹೇಳಿದ್ದಾರೆ. ಇನ್ನು ಈ ಸಮಾವೇಶದ ನೇತೃತ್ವವನ್ನು ಸಚಿವ ಮಧು ಬಂಗಾರಪ್ಪ ವಹಿಸಿಕೊಂಡಿದ್ದರೂ ಅದರ ಹಿಂದೆ ಸಿಎಂ ಸಿದ್ದರಾಮಯ್ಯ ಇದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದೇ ಈಗ ಹರಿಪ್ರಸಾದ್‌ ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದೆ.

VISTARANEWS.COM


on

BK Hariprasad and CM Siddaramaiah
Koo

ಬೆಂಗಳೂರು/ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಎಲ್ಲವೂ ಸರಿ ಇಲ್ಲ ಎಂಬುದು ಆಗಾಗ ಸಾಬೀತಾಗುತ್ತಲೇ ಇದೆ. ಪಕ್ಷ, ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿದ್ದರೂ ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ (MLC and senior Congress leader BK Hariprasad) ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಬೃಹತ್‌ ಈಡಿಗ ಸಮಾವೇಶದ (Idiga Conference) ಬಗ್ಗೆ ತಮ್ಮ ಅತೃಪ್ತಿಯನ್ನು ಹೊರಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಅಗತ್ಯ ಬಿದ್ದರೆ ಪ್ರಶ್ನೆ ಮಾಡುವುದಾಗಿಯೂ ಹೇಳಿದ್ದಾರೆ. ಇನ್ನು ಈ ಸಮಾವೇಶದ ನೇತೃತ್ವವನ್ನು ಸಚಿವ ಮಧು ಬಂಗಾರಪ್ಪ (Minister Madhu Bangarappa) ವಹಿಸಿಕೊಂಡಿದ್ದರೂ ಅದರ ಹಿಂದೆ ಸಿಎಂ ಸಿದ್ದರಾಮಯ್ಯ ಇದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದೇ ಈಗ ಹರಿಪ್ರಸಾದ್‌ ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಈಡಿಗ ಸಮಾವೇಶಕ್ಕೆ ಬಿ.ಕೆ. ಹರಿಪ್ರಸಾದ್‌ಗೆ ಆಹ್ವಾನ ಇಲ್ಲವೇ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಈ ಕಾರಣಕ್ಕಾಗಿಯೇ ಅವರು ಸಮಾವೇಶದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಈಡಿಗ ಸಮಾವೇಶದ ಹೆಸರಲ್ಲಿ ಅಹಿಂದ ಶಕ್ತಿ ಪ್ರದರ್ಶನಕ್ಕೆ ಮುಂದಾಗಲಾಗಿದೆ. ಏಕೆಂದರೆ, ನಾಲ್ಕು ತಿಂಗಳ ಹಿಂದೆ ಸಮಾವೇಶ ನಡೆಸಿ ಬಿ.ಕೆ. ಹರಿಪ್ರಸಾದ್‌ ಶಕ್ತಿ ಪ್ರದರ್ಶನ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಧು ಬಂಗಾರಪ್ಪ ವಿರುದ್ಧ ವಾಚಮಗೋಚರ ವಾಗ್ದಾಳಿ ನಡೆಸಿದ್ದರು. ಈ ನಡುವೆ ಈಡಿಗ ಸೇರಿದಂತೆ ಹಿಂದುಳಿದ ವರ್ಗಗಳ ಸಮಾವೇಶವನ್ನು ಈಗ ಹಮ್ಮಿಕೊಳ್ಳಲಾಗಿದೆ. ಇದರ ಉಸ್ತುವಾರಿಯನ್ನು ಸಚಿವ ಮಧು ಬಂಗಾರಪ್ಪ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: HD Kumaraswamy: ಕೊಬ್ಬರಿಗೆ ಬೆಂಬಲ ಬೆಲೆ; ಶೀಘ್ರ ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ: ಎಚ್‌ಡಿಕೆ

ಮಧು ಬಂಗಾರಪ್ಪ ಹಿಂದೆ ಇದ್ದಾರಾ ಸಿಎಂ ಸಿದ್ದರಾಮಯ್ಯ?

ಬೆಂಗಳೂರಿನಲ್ಲಿ ನಡೆಯುತ್ತಿರುವ ಈಡಿಗರ ಬೃಹತ್‌ ಸಮಾವೇಶದಲ್ಲಿ ಮುಂದೆ ಮಧು ಬಂಗಾರಪ್ಪ ಕಾಣಿಸಿಕೊಂಡರೂ ಅವರ ಹಿಂದಿನ ಶಕ್ತಿ ಸಿಎಂ ಸಿದ್ದರಾಮಯ್ಯ ಎಂಬ ಮಾತುಗಳು ರಾಜಕೀಯ ಪಡೆಸಾಲೆಗಳಲ್ಲಿ ಕೇಳಿಬರುತ್ತಿದೆ. ಸಿಎಂ ಸಿದ್ದರಾಮಯ್ಯ ಈ ಸಮಾವೇಶದ ಮುಖ್ಯ ಅತಿಥಿಯಾಗಿದ್ದಾರೆ. ಒಂದು ಜಾತಿಗೆ ಸೀಮಿತ ಮಾಡದೇ ಅಹಿಂದ ಸಮಾವೇಶ ರೀತಿಯಲ್ಲಿ ಆಯೋಜನೆ ಮಾಡಲಾಗಿದೆ. ಹೀಗಾಗಿ ಬಿ.ಕೆ. ಹರಿಪ್ರಸಾದ್‌ ವರ್ಸಸ್ ಸಿದ್ದರಾಮಯ್ಯ, ಮಧು ಬಂಗಾರಪ್ಪ ಎಂಬಂತೆ ಇದು ಬಿಂಬಿತವಾಗಿದೆ.

ಇದು ರಾಜಕೀಯ ಕುತಂತ್ರದ ಸಮಾವೇಶ: ಬಿ.ಕೆ. ಹರಿಪ್ರಸಾದ್

ಬೆಂಗಳೂರಿನಲ್ಲಿ ಈಡಿಗ ಸಮಾವೇಶವನ್ನು ಮಾಡುತ್ತಿದ್ದಾರೆ. ನಾನು ಹುಬ್ಬಳ್ಳಿಯಲ್ಲಿ ಇದ್ದೇನೆ. ಅವರಿಗೆ ಒಳ್ಳೆಯದಾಗಲಿ. ಈಡಿಗ ಸಂಘದಲ್ಲಿ ಬಹಳ ದೊಡ್ಡ ದೊಡ್ಡ ನಾಯಕರು ಸಂಘ ಕಟ್ಟಿದ್ದಾರೆ. ಸರ್ಕಾರದ ಗಮನ ಸೆಳೆಯಲು, ಸಮಾಜದ ಹಿತ ಕಾಪಾಡಲು ಸಂಘ ಇತ್ತು.‌ ಆದರೆ, ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನು ಮಾಡಿದ್ದಾರೆ? 50 ಲಕ್ಷ ಜನ ಸಂಖ್ಯೆ ಇದ್ದಾರೆ ಅಂತ ಹೇಳುತ್ತಿದಾರೆ. ಇವರು ಸಂಘದ ಹಿತಾಸಕ್ತಿ ಕಾಪಾಡಬಹುದಾ? ಇದು ರಾಜಕೀಯ ಕುತಂತ್ರದಿಂದ ಮಾಡಿದ ಸಮಾವೇಶ. ಇದರಿಂದ ಒಳ್ಳೆಯದಾಗುವುದಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಹುಬ್ಬಳ್ಳಿಯಲ್ಲಿ ಹೇಳಿದರು.

ಇದು ಕುತಂತ್ರದ ಸಮಾವೇಶ

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಬಿಲ್ಲವ ಸಮುದಾಯಕ್ಕೆ ಜಾಗ ಕೊಡಲಾಗಿತ್ತು. ಅದನ್ನು ಬಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ ಕೊಟ್ಟಿದ್ದಾರೆ. ಗುರುನಾರಾಯಣ ಅಧ್ಯಯನ ಪೀಠಕ್ಕೆ ಹಣ ಕೊಟ್ಟಿಲ್ಲ. ಸಮಾಜದ ಹಿತದೃಷ್ಟಿಯಿಂದ ಏನ ಮಾಡಿದ್ದಾರೆ ಅನ್ನೋದನ್ನು ಹೇಳಬೇಕು. ರಾಜಕೀಯ ಪ್ರೇರಿತ ಸಮಾವೇಶದಲ್ಲಿ ನಾನು ಭಾಗಿಯಾಗಲ್ಲ. ಈ ಸಮಾವೇಶ ರಾಜಕೀಯ ಕುತಂತ್ರದಿಂದ ಮಾಡುತ್ತಿರುವುದು ಎಂದಷ್ಟೇ ಹೇಳುತ್ತಿದ್ದೇನೆ. ಇದನ್ನು ನೀವು ಹೇಗಾದರೂ ಅರ್ಥೈಸಿಕೊಳ್ಳಿ ಎಂದು ಮಾಧ್ಯಮದವರಿಗೆ ಹೇಳಿದರು.

ಇದನ್ನೂ ಓದಿ: HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

ಸಿದ್ದರಾಮಯ್ಯ ಜತೆ ಅಷ್ಟೇನು ಚೆನ್ನಾಗಿ ಇಲ್ಲ

ನಾನು ರಾಜಕೀಯ ಕುತಂತ್ರಕ್ಕೆ ಬಗ್ಗಲ್ಲ. ನಾವು ಸಿಎಂ ಸಿದ್ದರಾಮಯ್ಯ ಅವರ ಜತೆ ಬಹಳ ಚೆನ್ನಾಗೇನೂ ಇಲ್ಲ. 2006ರಲ್ಲಿ ಅವರು ಪಕ್ಷಕ್ಕೆ ಬಂದಿರೋದು. ನನಗೆ ಅವರ ಜತೆಗೆ ಅಷ್ಟೇನೂ ಪರಿಚಯ ಇಲ್ಲ. ಯಾವ ಕಾರಣಕ್ಕೆ ನಾವು ಅಧಿಕಾರಕ್ಕೆ ಬಂದಿದ್ದೇವೆಯೋ ಅದನ್ನು ಮೊದಲು ಈಡೇರಿಸಬೇಕು. ಅದು ಆಗಿಲ್ಲವೆಂದಾದರೆ ನಾನು ಪ್ರಶ್ನೆ ಮಾಡುತ್ತೇನೆ. ಹನಿಮೂನ್ ಪೀರಿಯಡ್‌ ಮುಗಿಯಲಿ ನೋಡೋಣ. ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದರು.

Continue Reading
Advertisement
Naveen Ammembala
ದಕ್ಷಿಣ ಕನ್ನಡ3 mins ago

ಹೈಪರ್ ಲೋಕಲ್ ಸುದ್ದಿಗೂ ಅಭ್ಯುದಯ ಪತ್ರಿಕೋದ್ಯಮಕ್ಕೂ ಅವಿನಾಭಾವ ಸಂಬಂಧ: ನವೀನ್ ಅಮ್ಮೆಂಬಳ

Chhattisgarh to be CM Vishnu has two deputies and Raman Singh Speaker
ದೇಶ21 mins ago

ಛತ್ತೀಸ್‍‌ಗಢ ಸಿಎಂ ವಿಷ್ಣುಗೆ ಇಬ್ಬರು ಡೆಪ್ಯುಟಿಗಳು; ರಮಣ್ ಸಿಂಗ್ ಸ್ಪೀಕರ್

Rambhapuri seer and MB Patil
ಕರ್ನಾಟಕ38 mins ago

ಎಂ.ಬಿ. ಪಾಟೀಲ್‌ಗೆ ನೀರಾವರಿ ಖಾತೆ ಸಿಗಬೇಕಿತ್ತು; ಡಿಕೆಶಿಗೆ ಕೊಟ್ಟಿದ್ದಕ್ಕೆ ರಂಭಾಪುರಿ ಶ್ರೀ ಬೇಸರ!

India U19 vs Pakistan U19
ಕ್ರಿಕೆಟ್39 mins ago

U19 Asia Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ 8 ವಿಕೆಟ್​ ಸೋಲು

Reliance Retail launches beauty retail store 'Tira' in Bengaluru
ದೇಶ54 mins ago

Reliance Retail: ಯಲಹಂಕದಲ್ಲಿ ರಿಲಯನ್ಸ್ ರೀಟೇಲ್‌ನ ‘ಟಿರಾ’ ಮಳಿಗೆ ಆರಂಭ

South Africa vs India 1
ಕ್ರಿಕೆಟ್1 hour ago

IND vs SA: ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ವಿಳಂಬ

Shri Ram Janmabhoomi Mandir carvings are wonderful
ದೇಶ1 hour ago

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಅದ್ಭುತ ಕಲಾಕೃತಿಗಳು!

Bus-jeep accident
ಉಡುಪಿ1 hour ago

Road Accident: ಕಾರ್ಕಳ ಬಳಿ ಖಾಸಗಿ ಬಸ್‌-ಜೀಪ್ ನಡುವೆ ಭೀಕರ ಅಪಘಾತ; 12 ಮಂದಿಗೆ ಗಂಭೀರ ಗಾಯ

Killers who killed lawyer for property in kalaburagi
ಕರ್ನಾಟಕ2 hours ago

ವಕೀಲನ ಹತ್ಯೆ ಮಾಡಿ ರಕ್ತದ ಕೈಯಲ್ಲೇ ದಂಪತಿಯಿಂದ ಹಣ ಪಡೆದಿದ್ದ ಸುಪಾರಿ ಕಿಲ್ಲರ್ಸ್‌!

air india
ಉದ್ಯೋಗ2 hours ago

Job Alert: ಏರ್‌ ಇಂಡಿಯಾದಲ್ಲಿದೆ ಉದ್ಯೋಗಾವಕಾಶ; ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ5 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ7 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ15 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌