Pralhad Joshi : ರಾಜ್ಯಕ್ಕೆ ಹೆಚ್ಚುವರಿ ರಾ.ಹೆ. ಪ್ರಾದೇಶಿಕ ಕಚೇರಿ;‌ ಗಡ್ಕರಿ ಮುಂದೆ ಪ್ರಲ್ಹಾದ್‌ ಜೋಶಿ ಬೇಡಿಕೆ - Vistara News

ಕರ್ನಾಟಕ

Pralhad Joshi : ರಾಜ್ಯಕ್ಕೆ ಹೆಚ್ಚುವರಿ ರಾ.ಹೆ. ಪ್ರಾದೇಶಿಕ ಕಚೇರಿ;‌ ಗಡ್ಕರಿ ಮುಂದೆ ಪ್ರಲ್ಹಾದ್‌ ಜೋಶಿ ಬೇಡಿಕೆ

Pralhad Joshi : ರಾಜ್ಯಕ್ಕೆ ಹೆಚ್ಚುವರಿ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.

VISTARANEWS.COM


on

National high way Pralhad Joshi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆ (National High way Project) ನಿರ್ದೇಶಕರ ಕಚೇರಿಗಳನ್ನು 19ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಹೆಚ್ಚುವರಿ ಪ್ರಾದೇಶಿಕ ಕಚೇರಿಗಳನ್ನು (NH Regional office) ಸ್ಥಾಪಿಸುವಂತೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Central Minister Nitin Gadkari) ಅವರಿಗೆ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ (Pralhad Joshi) ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಜೋಶಿ ಅವರು, ಪ್ರತಿ 12 ಯೋಜನಾ ನಿರ್ದೇಶಕರ ಕಚೇರಿಗೆ ಒಂದು ಪ್ರಾದೇಶಿಕ ಕಚೇರಿ ವ್ಯವಸ್ಥೆ ಈಗಾಗಲೇ ಕರ್ನಾಟಕದಲ್ಲೂ ಇದೆ. ಆದರೆ ಈಗ ಯೋಜನಾ ನಿರ್ದೇಶಕರ ಸಂಖ್ಯೆ ಹೆಚ್ಚಿದ್ದರಿದ ಹೆಚ್ಚುವರಿ ಪ್ರಾದೇಶಿಕ ಕಚೇರಿ (Regional Office) ಸ್ಥಾಪಿಸಲು ಮನವಿ ಸಲ್ಲಿಸಿದ್ದೇನೆಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಅತಿ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಂಕೋಲಾ-ಹುಬ್ಬಳ್ಳಿ- ವಿಜಾಪುರ ಚತುಷ್ಪಥಕ್ಕೆ ಮನವಿ

ಎಕ್ಸ್‌ಪ್ರೆಸ್ ಹೈವೇ ಮೇಲ್ದರ್ಜೆಗೆ ಏರಿಸುವ ಭಾರತಮಾಲಾ ಯೋಜನೆಯಡಿ ಅಂಕೋಲಾ-ಹುಬ್ಬಳ್ಳಿ- ವಿಜಾಪುರ ಹೆದ್ದಾರಿಯನ್ನು ನಾಲ್ಕು ಲೈನ್ ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವಂತೆ ಮನವಿ ಮಾಡಲಾಗಿದೆ.

ಧಾರವಾಡ ಹೆದ್ದಾರಿ ಸಂಪರ್ಕ ರಸ್ತೆಗಳ ಅನುಮೋದನೆಗೆ ಮನವಿ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳ ನಿರ್ಮಾಣಕ್ಕೆ ಅನುಮೋದನೆ ಮತ್ತು ಕೇಂದ್ರ ರಸ್ತೆಗಳ ನಿಧಿ ಬಿಡುಗಡೆ ಮಾಡುವಂತೆ ನಿತಿನ್ ಗಡ್ಕರಿ ಅವರ ಭೇಟಿ ವೇಳೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ನಿತಿನ್ ಗಡ್ಕರಿ ಅವರು ಈಗಾಗಲೇ ಹುಬ್ಬಳ್ಳಿ- ಧಾರವಾಡದ ಹಲವು ಆಂತರಿಕ ರಸ್ತೆ ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ಇನ್ನೂ ಹೆಚ್ಚಿನ ಆಂತರಿಕ ರಸ್ತೆಗಳ ಅಭಿವೃದ್ಧಿಗೆ ಸಿ.ಆರ್‌.ಎಫ್ ಅಡಿಯಲ್ಲಿ ಹೆಚ್ಚುವರಿ ಹಣ ನೀಡುವಂತೆ ಕೋರಲಾಗಿದೆ. ಇದಕ್ಕೆ ಗಡ್ಕರಿ ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ: Pralhad Joshi : ಅಯೋಧ್ಯೆಗೆ ಹೋದ್ರೆ ಕಾಂಗ್ರೆಸ್‌ಗೆ ಮುಸ್ಲಿಮರ ಮತ ತಪ್ಪೋ ಭಯ ಎಂದ ಪ್ರಲ್ಹಾದ್‌ ಜೋಶಿ

ನವಲಗುಂದ ಬೈಪಾಸ್ NH-218 ರಸ್ತೆ ಕರಡು ಅನುಮೋದನೆಗೆ ಮನವಿ

ಈಗಾಗಲೇ ನವಲಗುಂದ ಬೈಪಾಸ್ NH-218 ರಸ್ತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರಡು ಡಿ.ಪಿ.ಆರ್.ಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು, ಆದಷ್ಟು ಬೇಗ ಅನುಮೋದಿಸಿ ರಾಜ್ಯ ಸರ್ಕಾರಕ್ಕೆ ಮರಳಿಸುವಂತೆ ಕೋರಲಾಗಿದೆ.

ಹು‌ಬ್ಬಳ್ಳಿ ಮೇಲ್ಸೇತುವೆ ಪ್ರಸ್ತಾವನೆ ತಲುಪಿಲ್ಲ

ಹುಬ್ಬಳ್ಳಿಯ ಕುಸುಗಲ್- ನರೇಂದ್ರ ಬೈಪಾಸ್ ಮತ್ತು ಚೆನ್ನಮ್ಮ ವೃತ್ತದಿಂದ ಬಿಡ್ನಾಳ್ ವರೆಗೆ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆ ಕೇಂದ್ರವನ್ನು ತಲುಪಿಲ್ಲ. ರಾಜ್ಯ ಸರ್ಕಾರ ಕೂಡಲೇ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲು ಕೋರಿದ್ದೇನೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಭೇಟಿ ವೇಳೆ ಶಾಸಕ ಅರವಿಂದ ಬೆಲ್ಲದ ಸಹ ಜತೆಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Karnataka Jobs Reservation: ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲು ಸಾಧ್ಯವೆ? ತೊಡಕುಗಳು ಏನೇನು?

ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75 ಮೀಸಲಾತಿ (Karnataka Jobs Reservation) ನಿಗದಿಪಡಿಸುವ ಕರಡು ಮಸೂದೆಗೆ ಕರ್ನಾಟಕದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಇದಕ್ಕೆ ಖಾಸಗಿ ಕಂಪನಿಗಳ ಪ್ರಮುಖರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸ್ಥಳೀಯರಿಂದ ಸಂತಸ ವ್ಯಕ್ತವಾಗಿದೆ. ಈ ಕಾಯಿದೆಯ ಹಿನ್ನೆಲೆ ಮುನ್ನೆಲೆ ಏನೇನು ಎಂಬ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Karnataka Jobs Reservation
Koo

ರಾಜ್ಯದ ಖಾಸಗಿ ಕೈಗಾರಿಕೆಗಳು (Private industry) ಹಾಗೂ ಇತರೆ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ. 50 ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ. 75ರಷ್ಟು ಮೀಸಲಾತಿ (Karnataka Jobs Reservation) ಕಡ್ಡಾಯಗೊಳಿಸಿರುವ ಕರಡು ಮಸೂದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramiah) ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ (karnataka Cabinet meeting) ಅನುಮೋದನೆ ನೀಡಿಲಾಗಿದ್ದು, ಇದಕ್ಕೆ ಉದ್ಯಮ ರಂಗದ ಪ್ರಮುಖರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆದರೆ, ಈ ಕಾಯಿದೆ ಜಾರಿಯಾದರೆ ಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯ ಸಿಗಲಿದೆ ಎಂಬ ಸಂತಸ ಸ್ಥಳೀಯ ಯುವ ಜನತೆಯಿಂದ ವ್ಯಕ್ತವಾಗುತ್ತಿದೆ.

ಈ ಮಸೂದೆಯಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ. 50ರಷ್ಟು ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ. 75ರಷ್ಟು ಸ್ಥಳೀಯರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುತ್ತದೆ. ಸಾಕಷ್ಟು ಅರ್ಹ ಅಭ್ಯರ್ಥಿಗಳು ಇಲ್ಲದೇ ಇದ್ದರೆ ಸರ್ಕಾರದ ಸಹಯೋಗದೊಂದಿಗೆ ಉದ್ಯಮವು ಮೂರು ವರ್ಷಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಅವರನ್ನು ತೊಡಗಿಸಿಕೊಳ್ಳಬೇಕು. ಪ್ರಸ್ತಾವಿತ ಕಾನೂನಿನ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಉದ್ಯಮಕ್ಕೆ ಮೂರು ವರ್ಷಗಳ ಕಾಲಾವಕಾಶ ನೀಡಲು ಸರ್ಕಾರ ಯೋಜನೆ ರೂಪಿಸುತ್ತಿದೆ.

ಮೂರು ವರ್ಷಗಳ ಆನಂತರವೂ ಉದ್ಯಮಕ್ಕೆ ಈ ಸಮಸ್ಯೆ ಎದುರಾದರೆ ತರಬೇತಿಯ ಅನಂತರವೂ ಸಾಕಷ್ಟು ಸೂಕ್ತ ಸ್ಥಳೀಯರು ಲಭ್ಯವಾಗದೇ ಇದ್ದರೆ ವಿಚಾರಣೆಯ ಅನಂತರ ಉದ್ಯಮವನ್ನು ಮೀಸಲಾತಿ ನಿಬಂಧನೆಗಳಿಂದ ವಿನಾಯಿತಿ ನೀಡುವ ಸರ್ಕಾರದ ಅಧಿಕಾರವನ್ನು ಮಸೂದೆ ಒದಗಿಸುತ್ತದೆ. ವೃತ್ತಿಪರರನ್ನು ನೇಮಿಸಿಕೊಳ್ಳಲು ಕಂಪೆನಿಗಳಿಗೆ ಅವಕಾಶವನ್ನು ಒದಗಿಸುತ್ತದೆ. ಆದರೆ ಈ ಅವಕಾಶ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ. 25ರಷ್ಟು ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ. 50ರಷ್ಟು ಸ್ಥಳೀಯರನ್ನು ಭರ್ತಿ ಮಾಡಿದರೆ ಮಾತ್ರ ಸಿಗುತ್ತದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

Karnataka Jobs Reservation


ಸ್ಥಳೀಯರು ಅಂದರೆ ಯಾರು?

ಕರ್ನಾಟಕದಲ್ಲಿ ಹುಟ್ಟಿರುವ, 15 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿರುವ, ಕನ್ನಡ ಭಾಷೆಯನ್ನು ಓದುವುದು ಮತ್ತು ಬರೆಯುವುದನ್ನು ಚೆನ್ನಾಗಿ ತಿಳಿದಿರುವವರನ್ನು ಸ್ಥಳೀಯರು ಎಂದು ಮಸೂದೆಯಲ್ಲಿ ವ್ಯಾಖ್ಯಾನಿಸಲಾಗಿದೆ.
ಈ ಕಾನೂನಿನ ಅಡಿಯಲ್ಲಿ ಪ್ರಯೋಜನವನ್ನು ಬಯಸುವವರು ಕನ್ನಡ ಮಾಧ್ಯಮದಲ್ಲಿ ಹಿರಿಯ, ಮಾಧ್ಯಮಿಕ ಹಂತದಲ್ಲಿ ಓದಿರುವವರು ರಾಜ್ಯ ಸರ್ಕಾರದ ಭಾಷಾ ಪ್ರಾವೀಣ್ಯತೆಯ ಪರೀಕ್ಷೆಯನ್ನು ತೇರ್ಗಡೆಗೊಳಿಸಬೇಕು.

ಆಡಳಿತಾತ್ಮಕ, ಆಡಳಿತಾತ್ಮಕವಲ್ಲದ ಹುದ್ದೆಗಳು ಯಾವುದು?

ಆಡಳಿತಾತ್ಮಕ ಹುದ್ದೆಗಳೆಂದರೆ ನಿರ್ದೇಶಕರನ್ನು ಹೊರತುಪಡಿಸಿ ಮೇಲ್ವಿಚಾರಣೆ, ತಾಂತ್ರಿಕ, ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಪಾತ್ರಗಳಲ್ಲಿನ ಸ್ಥಾನಗಳನ್ನು ಒಳಗೊಂಡಿದೆ. ಆಡಳಿತಾತ್ಮಕವಲ್ಲದ ಹೊರಗುತ್ತಿಗೆ ಉದ್ಯೋಗಗಳು ಸೇರಿದಂತೆ ಕ್ಲೆರಿಕಲ್ ಹುದ್ದೆಗಳು, ಅರೆ ಮತ್ತು ನುರಿತ ಕೆಲಸಗಾರರಂತಹ ಎಲ್ಲಾ ಇತರ ಹುದ್ದೆಗಳನ್ನು ಸೇರಿಸಲಾಗಿದೆ.

ಇದನ್ನು ಯಾರು ಜಾರಿಗೆ ತರುತ್ತಾರೆ?

ಈ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರವು ಏಜೆನ್ಸಿಯನ್ನು ನೇಮಿಸುತ್ತದೆ. ಬಹುತೇಕ ಕಾರ್ಮಿಕ ಇಲಾಖೆಯೇ ಇದನ್ನು ನಿರ್ವಹಿಸಲಿದೆ. ವ್ಯವಸ್ಥಾಪಕ ಮತ್ತು ನಿರ್ವಾಹಕೇತರ ಹುದ್ದೆಗಳ ನೇಮಕಾತಿಗಳ ಕುರಿತು ವರದಿ ಪಡೆಯಲು, ಅನುಸರಣೆ ಇಲ್ಲದಿದ್ದಲ್ಲಿ ವಿಚಾರಣೆ ನಡೆಸಲು ಏಜೆನ್ಸಿಗೆ ಅಧಿಕಾರವಿದೆ. ಕ್ಲೈಮ್‌ಗಳನ್ನು ಪರಿಶೀಲಿಸಲು ಏಜೆನ್ಸಿಯು ಉದ್ಯೋಗದಾತರಿಂದ ಯಾವುದೇ ದಾಖಲೆಗಳನ್ನು ಪಡೆಯಬಹುದು. ಅಗತ್ಯಬಿದ್ದರೆ ಉದ್ಯಮದೊಳಗೆ ಪ್ರವೇಶಿಸಿ ಪರಿಶೀಲಿಸುವ ಅಧಿಕಾರವೂ ಸಂಸ್ಥೆಯ ಅಧಿಕಾರಿಗಳಿಗೆ ಇರುತ್ತದೆ. ಪ್ರಸ್ತಾವಿತ ಕಾನೂನಿನ ಅನುಷ್ಠಾನಕ್ಕಾಗಿ ಪ್ರಾಧಿಕಾರವು ಸಹಾಯಕ ಕಾರ್ಮಿಕ ಆಯುಕ್ತರ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯನ್ನು ನೇಮಿಸಲಿದೆ.

Karnataka Jobs Reservation


ಕಾನೂನು ಪಾಲನೆಯಾಗದೇ ಇದ್ದರೆ?

ಪ್ರಸ್ತಾವಿತ ಕಾನೂನು ಸರಿಯಾಗಿ ಪಾಲನೆ ಆಗದೇ ಇದ್ದರೆ ಅಥವಾ ಕಾನೂನನ್ನು ಉಲ್ಲಂಘಿಸಿದರೆ ಕನಿಷ್ಠ 10,000 ರೂ.ನಿಂದ ಗರಿಷ್ಠ 25,000 ರೂ.ವರೆಗೆ ದಂಡವನ್ನು ನಿಗದಿಪಡಿಸಲಾಗಿದೆ. ಕಾನೂನಿನ ಉಲ್ಲಂಘನೆ ಮುಂದುವರಿದರೆ ದಂಡದ ಮೊತ್ತವನ್ನು 1 ಲಕ್ಷ ರೂ.ವರೆಗೆ ಹೆಚ್ಚಿಸಲಾಗುತ್ತದೆ. ಜೈಲು ಶಿಕ್ಷೆಯ ಬಗ್ಗೆ ಉಲ್ಲೇಖವಿಲ್ಲ. ಮಸೂದೆಯು ಆರು ತಿಂಗಳವರೆಗೆ ಕಾಲಾವಕಾಶ ನೀಡಲಿದೆ.

ಏನು ಇದರ ಪರಿಣಾಮ?

ಪ್ರಸ್ತಾವಿತ ಈ ಕಾನೂನು ಜಾರಿಯಾದರೆ 1.5 ಮಿಲಿಯನ್ ಉದ್ಯೋಗಿಗಳನ್ನು ಹೊಂದಿರುವ 245 ಬಿಲಿಯನ್ ಡಾಲರ್ ಮೌಲ್ಯದ ಬೆಂಗಳೂರು ತಂತ್ರಜ್ಞಾನ ಉದ್ಯಮದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗಲಿದೆ. ಯಾಕೆಂದರೆ ಇಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ಕನ್ನಡೇತರರು. ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ ಎಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರವು ರಾಜ್ಯದ ಜಿಡಿಪಿಗೆ ಶೇ. 25ರಷ್ಟು ಕೊಡುಗೆ ನೀಡುತ್ತದೆ. ಸ್ಥಳೀಯರಿಗೆ ಮೀಸಲಾತಿ ಜಾರಿಗೆ ತಂದರೆ ಉನ್ನತ ಪ್ರತಿಭೆಗಳು, ಕುಶಲತೆ ಹೊಂದಿರುವವರು ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಿಲ್ಲ ಎಂದು ಖಾಸಗಿ ಕಂಪನಿಗಳು ಈ ಕಾಯಿದೆ ವಿರೋಧಿಸಿ ಬೇರೆ ರಾಜ್ಯಗಳಿಗೆ ವಲಸೆ ಹೋಗಬಹುದು. ಇದರಿಂದ ರಾಜ್ಯಕ್ಕೆ ಹಿನ್ನಡೆ ಆಗಬಹುದು.

ರಾಜ್ಯ ಸರ್ಕಾರದ ಪ್ರಕಾರ ಬೆಂಗಳೂರು ಕರ್ನಾಟಕದ ಆರ್ಥಿಕತೆಗೆ ಶೇ. 43.86ರಷ್ಟು ಕೊಡುಗೆ ನೀಡುತ್ತಿದೆ. ಕಳೆದ ವರ್ಷ ಮಂಡಿಸಲಾದ 2022-23ರ ಬಜೆಟ್‌ನಲ್ಲಿ ರಾಜ್ಯ ಹಣಕಾಸು ಇಲಾಖೆಯ ಅಂದಾಜಿನ ಪ್ರಕಾರ ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕ ಶೇ. 7ರಷ್ಟು ಕೊಡುಗೆ ನೀಡುತ್ತಿದೆ. ಮಸೂದೆಯಲ್ಲಿನ ನಿರ್ಬಂಧಗಳು ಮುಂದಿನ ಐದು ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಮೌಲ್ಯದ ರಾಜ್ಯ ಸರ್ಕಾರದ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಾರೆ ಉದ್ಯಮ ತಜ್ಞರು.

Karnataka Jobs Reservation


ಬೇರೆ ರಾಜ್ಯಗಳಲ್ಲಿ ಈ ನಿರ್ಬಂಧ ಇದೆಯೇ?

ಭಾರತದ ಖಾಸಗಿ ವಲಯದಲ್ಲಿ ಉದ್ಯೋಗಗಳಲ್ಲಿ ಮೀಸಲಾತಿ ಕಾಯ್ದಿರಿಸಿದ ಮೊದಲ ರಾಜ್ಯಗಳಲ್ಲಿ ಆಂಧ್ರ ಪ್ರದೇಶ ಮತ್ತು ಹರಿಯಾಣ ಸೇರಿವೆ. ಎರಡೂ ರಾಜ್ಯಗಳು ಸಂಬಳದ ಮಿತಿಯೊಂದಿಗೆ ಉದ್ಯೋಗಗಳಿಗೆ ಮೀಸಲಾತಿಯನ್ನು ಒದಗಿಸಿವೆ. ಹರಿಯಾಣದಲ್ಲಿ 30,000 ರೂ. ಮಾಸಿಕ ವೇತನದ ಉದ್ಯೋಗಗಳಿಗೆ ಶೇ.75ರಷ್ಟು ಮೀಸಲಾತಿ ಅನ್ವಯಿಸುತ್ತದೆ. ಆಂಧ್ರದಲ್ಲಿ ಶೇ. 75ರಷ್ಟು ಮೀಸಲಾತಿಗೆ ಮಾಸಿಕ ವೇತನದ ಮಿತಿ 50,000 ರೂ. ಆಗಿದೆ.

ಕರ್ನಾಟಕ ಮಸೂದೆಯು ಸಂಬಳದ ಮಿತಿಯನ್ನು ವಿಧಿಸಿಲ್ಲ. ನಿರ್ದೇಶಕರನ್ನು ಹೊರತುಪಡಿಸಿ ಎಲ್ಲಾ ಖಾಸಗಿ ವಲಯದ ಉದ್ಯೋಗಗಳ ಮೇಲೆ ಕೋಟಾವನ್ನು ವಿಧಿಸುತ್ತದೆ. ಆದರೆ ಆಂಧ್ರಪ್ರದೇಶದಂತೆ ಕರ್ನಾಟಕವೂ ಸಹ ರಾಜ್ಯ ಶಾಸಕಾಂಗವು ಒಮ್ಮೆ ಅಂಗೀಕರಿಸಿದ ಕಾನೂನನ್ನು ಜಾರಿಗೆ ತರಲು ಉದ್ಯಮಕ್ಕೆ ಮೂರು ವರ್ಷಗಳನ್ನು ಒದಗಿಸಿದೆ.

ಇದನ್ನೂ ಓದಿ: Karnataka Jobs Reservation: ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ.75 ಮೀಸಲಾತಿ ಮಾತ್ರ; ಆಡಳಿತ ಹುದ್ದೆಗಳಲ್ಲಿ ಶೇ.50; ಉದ್ಯಮಿಗಳಿಗೆ ಬೆಚ್ಚಿತೇ ಸರ್ಕಾರ?

ಯಾವ ರೀತಿ ಎದುರಾಗಲಿದೆ ಕಾನೂನು ತೊಡಕುಗಳು?

ಕರ್ನಾಟಕ ಸರ್ಕಾರ ಪ್ರಸ್ತಾಪಿಸಿರುವ ಈ ಕಾನೂನಿಗೆ ಕಾನೂನು ತೊಡಕುಗಳು ಎದುರಾಗಬಹುದು. ಹರಿಯಾಣವು ಸ್ಥಳೀಯ ಅಭ್ಯರ್ಥಿಗಳಿಗೆ ರಾಜ್ಯ ಉದ್ಯೋಗ ಕಾಯಿದೆಯನ್ನು 2020ರಲ್ಲಿ ಜಾರಿಗೊಳಿಸಿತು. ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ 30,000 ರೂ. ವರೆಗಿನ ವೇತನಕ್ಕಾಗಿ ಶೇ. 75ರಷ್ಟು ಮೀಸಲಾತಿಯನ್ನು ಒದಗಿಸಿತು. ಬಳಿಕ ಅದನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಇದು ಕಾನೂನನ್ನು ಸಂವಿಧಾನದ ಭಾಗ IIIರಲ್ಲಿ ಭಾರತದಾದ್ಯಂತ ಉದ್ಯೋಗ ಸ್ವಾತಂತ್ರ್ಯವನ್ನು ಒದಗಿಸುವ ಸಂವಿಧಾನದ 14 ಮತ್ತು 19ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು 2022ರಲ್ಲಿ ಹೈಕೋರ್ಟ್ ಈ ಕಾಯಿದೆಯನ್ನು ವಜಾಗೊಳಿಸಿತ್ತು.

Continue Reading

ಕರ್ನಾಟಕ

Kannada New Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದ ರಾಜ್ ಬಿ ಶೆಟ್ಟಿ ನಟನೆಯ ‘ರೂಪಾಂತರ’ ಚಿತ್ರ ಜು.26ಕ್ಕೆ ರಿಲೀಸ್‌

Kannada New Movie: “ಒಂದು ಮೊಟ್ಟೆಯ ಕಥೆ ” ಚಿತ್ರ ಮಾಡಿದ ತಂಡದೊಂದಿಗೆ “ರೂಪಾಂತರ” ಚಿತ್ರ ಮಾಡಿರುವುದು ಖುಷಿಯಾಗಿದೆ. ಲೈಟರ್ ಬುದ್ಧ ಫಿಲಂಸ್ ಮೂಲಕ ಈ ಚಿತ್ರವನ್ನು ಜುಲೈ 26ರಂದು ಬಿಡುಗಡೆ ಮಾಡುತ್ತಿರುವುದಾಗಿ ರಾಜ್ ಬಿ ಶೆಟ್ಟಿ ತಿಳಿಸಿದ್ದಾರೆ.

VISTARANEWS.COM


on

Raj B Shetty starrer roopanthara is releasing on July 26
Koo

ಬೆಂಗಳೂರು: ಇತ್ತೀಚೆಗಷ್ಟೆ ʼಟರ್ಬೋʼ ಮಳಯಾಳಂ ಚಿತ್ರದಲ್ಲಿ ವೆಟ್ರಿವೇಲ್ ಷಣ್ಮುಗಸುಂದರಂ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ “ರೂಪಾಂತರ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ‌. ಟ್ರೇಲರ್‌ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ (Kannada New Movie) ಜುಲೈ 26 ರಂದು ಬಿಡುಗಡೆಯಾಗುತ್ತಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ರೂಪಾಂತರ” ಚಿತ್ರದ ಕುರಿತು ಮಾತನಾಡಿದ ರಾಜ್ ಬಿ ಶೆಟ್ಟಿ, ‘ನಾವು ಮಂಗಳೂರಿನಲ್ಲಿ ಸಿನಿಮಾ ಮಾಡಬೇಕಾದರೆ ಮಾರ್ಕೆಟ್ ಬೇಡಿಕೆಗೂ ಹೊರತಾದ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಆಗ ಜನರು ಸಿನಿಮಾಗಳನ್ನು ನೋಡುತ್ತಾರೆ ಎಂಬ ಉದ್ದೇಶದಿಂದ ಸಿನಿಮಾ ಮಾಡಲು ಆರಂಭಿಸಿದ್ದೆವು. ಅದೇ ಉದ್ದೇಶದಿಂದ ಈ ಸಿನಿಮಾವನ್ನು ಮಾಡಿದ್ದೇವೆ.

“ರೂಪಾಂತರ” ನನಗೆ ಬಹಳ ಇಷ್ಟವಾದ ಸಿನಿಮಾ. ಏಕೆಂದರೆ ಈ ಚಿತ್ರದಲ್ಲಿ ನಾನು ನಟ ಮಾತ್ರ. ಸಂಭಾಷಣೆಗೆ ಸ್ವಲ್ಪ ಸಹಾಯ ಮಾಡಿದ್ದೇನೆ. ಮಿಕ್ಕಿದೆಲ್ಲಾ ಈ ತಂಡದ ಕನಸು. ನನ್ನ ಬಿಟ್ಟು ಬೇರೆ ಮುಖ್ಯಪಾತ್ರಗಳು ಈ ಚಿತ್ರದಲ್ಲಿದೆ. ಅವರೆಲ್ಲಾ “ರೂಪಾಂತರ” ಗೊಳ್ಳುವುದೇ ಚಿತ್ರದ ಕಥೆ. “ಒಂದು ಮೊಟ್ಟೆಯ ಕಥೆ ” ಚಿತ್ರ ಮಾಡಿದ ತಂಡದೊಂದಿಗೆ ಈ ಚಿತ್ರ ಮಾಡಿರುವುದು ಖುಷಿಯಾಗಿದೆ. ಲೈಟರ್ ಬುದ್ಧ ಫಿಲಂಸ್ ಮೂಲಕ ಚಿತ್ರವನ್ನು ಜುಲೈ 26ರಂದು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.

ಮಂಗಳೂರಿನವರು ಮಂಗಳೂರಿಗರಿಗೆ ಸಿನಿಮಾ ಮಾಡುತ್ತಾರೆ ಎಂಬ ಮಾತಿದೆ‌. ಆದರೆ ಈ ಚಿತ್ರವನ್ನು ನಾವು ಬೆಂಗಳೂರಿನಲ್ಲಿ ಮಾಡಿದ್ದೇವೆ‌. ರಾಜ್ ಬಿ ಶೆಟ್ಟಿ ಅವರನ್ನು ಹೊರತು ಪಡಿಸಿ ಮಿಕ್ಕೆಲ್ಲ ನಟರು ಬೇರೆ ಬೇರೆ ಪ್ರಾಂತ್ಯದವರು. ಇದೇ 26 ರಂದು ಚಿತ್ರ ಬಿಡುಗಡೆಯಾಗಲಿದೆ‌. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸುಹಾನ್ ಪ್ರಸಾದ್.

ಐದು ಪ್ರಮುಖ ಪಾತ್ರಗಳ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ರಾಜ್ ಬಿ ಶೆಟ್ಟಿ ಸೇರಿದಂತೆ ಚಿತ್ರತಂಡದ ಸಹಕಾರದಿಂದ ಈ ಚಿತ್ರ ಚೆನ್ನಾಗಿ ಬಂದಿದೆ ಎನ್ನುತ್ತಾರೆ ನಿರ್ದೇಶಕ ಮಿಥಿಲೇಶ್ ಎಡವಲತ್.

ಚಿತ್ರದಲ್ಲಿ ನಟಿಸಿರುವ ಅಂಜನ್ ಭಾರದ್ವಾಜ್ ಹಾಗೂ ಲೇಖಾ ನಾಯ್ಡು ಅವರು ತಮ್ಮ ಪಾತ್ರದ ಕುರಿತು ಮಾತನಾಡಿದರು. ಹಾಡುಗಳ ಕುರಿತು ಮಿಥುನ್ ಮುಕುಂದನ್ ಮಾಹಿತಿ ನೀಡಿದರು.

ರಾಜ್ ಬಿ ಶೆಟ್ಟಿ, ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮತ್ತಿರರ ತಾರಗಣ ಈ ಚಿತ್ರಕ್ಕಿದೆ. ಭುವನೇಶ್ ಮಣಿವಣ್ಣನ್ ಸಂಕಲನ ಹಾಗೂ ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ನಿರ್ಮಾಣ ವಿನ್ಯಾಸವಿರುವ “ರೂಪಾಂತರ ” ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ: Uttara Kannada News: ಸ್ಥಳೀಯ ಯುವ ಜನತೆಗೆ ಉದ್ಯೋಗವಕಾಶ ಸೃಷ್ಟಿಸಿ: ಡಾ. ರಮಣ ರೆಡ್ಡಿ

ಟರ್ಬೋ ಚಿತ್ರವನ್ನು ಕರ್ನಾಟಕದಾದ್ಯಂತ ಯಶಸ್ವಿಯಾಗಿ ಹಂಚಿಕೆ ಮಾಡಿದ ಲೈಟರ್ ಬುದ್ದ ಫಿಲಂಸ್ ಈ ಚಿತ್ರವನ್ನೂ ಹಂಚಿಕೆ ಮಾಡುತ್ತಿದೆ. “ರೂಪಾಂತರ” ಟ್ರೇಲರ್ ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಬಾಲಕೃಷ್ಣ ಅರ್ವನಕರ್ ತಿಳಿಸಿದ್ದಾರೆ.

Continue Reading

ಕರ್ನಾಟಕ

Media Connect: ಮೀಡಿಯಾ ಕನೆಕ್ಟ್‌ಗೆ ಭರವಸೆಯ ಪಿಆರ್‌ ಸೇವಾ ಪ್ರಶಸ್ತಿ

Media Connect: ಬೆಂಗಳೂರಿನಲ್ಲಿ ಏಷ್ಯಾ ಟುಡೆ ಮೀಡಿಯಾ ವತಿಯಿಂದ ಆಯೋಜಿಸಲಾಗಿದ್ದ ಪ್ರೈಡ್‌ ಆಫ್‌ ನೇಷನ್‌ ಅವಾರ್ಡ್‌ 2024 ಕಾರ್ಯಕ್ರಮದಲ್ಲಿ ಮೀಡಿಯಾ ಕನೆಕ್ಟ್‌ಗೆ “ಕರ್ನಾಟಕದ ವರ್ಷದ ಅತ್ಯಂತ ಭರವಸೆಯ ಹೆಲ್ತ್‌ಕೇರ್ ಪಿಆರ್ ಸೇವಾ ಸಂಸ್ಥೆ” ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮೀಡಿಯಾ ಕನೆಕ್ಟ್‌ ಸಂಸ್ಥೆಯ ಸಂಸ್ಥಾಪಕಿ ದಿವ್ಯಾ ರಂಗೇನಹಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು.

VISTARANEWS.COM


on

PR Seva Award for Media Connect in Bengaluru
Koo

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಸೇವೆ ಸಲ್ಲಿಸಿದ ಮೀಡಿಯಾ ಕನೆಕ್ಟ್‌ ಸಂಸ್ಥೆ (Media Connect) ಮತ್ತೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ನಗರದಲ್ಲಿ ಏಷ್ಯಾ ಟುಡೆ ಮೀಡಿಯಾ ವತಿಯಿಂದ ಆಯೋಜಿಸಲಾಗಿದ್ದ ಪ್ರೈಡ್‌ ಆಫ್‌ ನೇಷನ್‌ ಅವಾರ್ಡ್‌ 2024 ಕಾರ್ಯಕ್ರಮದಲ್ಲಿ ಮೀಡಿಯಾ ಕನೆಕ್ಟ್‌ಗೆ “ಕರ್ನಾಟಕದ ವರ್ಷದ ಅತ್ಯಂತ ಭರವಸೆಯ ಹೆಲ್ತ್‌ಕೇರ್ ಪಿಆರ್ ಸೇವಾ ಸಂಸ್ಥೆ” ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಇದನ್ನೂ ಓದಿ: Paris Olympics 2024 : 8 ಚಿನ್ನ, 1 ಬೆಳ್ಳಿ, 3 ಕಂಚು: ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಸಾಧನೆಗಳ ವಿವರ ಇಲ್ಲಿದೆ

ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮೀಡಿಯಾ ಕನೆಕ್ಟ್‌ ಸಂಸ್ಥೆಯ ಸಂಸ್ಥಾಪಕಿ ದಿವ್ಯಾ ರಂಗೇನಹಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು. ಬೆಳಗಾವಿ ಸಂಸದ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪ್ರಸಿದ್ಧ ಬಾಲಿವುಡ್ ನಟ ಗುಲ್ಶನ್ ಗ್ರೋವರ್‌, ಬೆಂಗಳೂರು ಗ್ರಾಮಾಂತರ ಸಂಸದ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಅವರು ದಿವ್ಯಾ ರಂಗೇನಹಳ್ಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಇದನ್ನೂ ಓದಿ: Olympic Games History: ಒಲಿಂಪಿಕ್ಸ್​ನಲ್ಲಿ ಗ್ರೀಸ್​ ದೇಶಕ್ಕೆ ವಿಶೇಷ ಮಾನ್ಯತೆ ನೀಡುವುದೇಕೆ?

ಕಳೆದ ಹತ್ತು ವರ್ಷಗಳಿಂದ ಪಿಆರ್‌ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೀಡಿಯಾ ಕನೆಕ್ಟ್ ಸಂಸ್ಥೆ ತನ್ನ ಕ್ಲೈಂಟ್‌ಗಳಿಗೆ ಅತ್ಯುತ್ತಮ ಸೇವೆ ನೀಡಿದ್ದಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಈಗಾಗಲೆ ಪಡೆದುಕೊಂಡಿದ್ದು, ಇದೀಗ ಮತ್ತೊಂದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

Continue Reading

ಕರ್ನಾಟಕ

Pralhad Joshi: ಬೇಳೆ ದರ ಇಳಿಕೆಗೆ ಕೇಂದ್ರದಿಂದ ಕ್ರಮ: ಪ್ರಲ್ಹಾದ್‌ ಜೋಶಿ

Pralhad Joshi: ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ತೊಗರಿ, ಕಡಲೆ ಮತ್ತು ಉದ್ದು ಮತ್ತಿತರ ಬೇಳೆಗಳ ಬೆಲೆಯಲ್ಲಿ ಶೇ.4ರಷ್ಟು ಕುಸಿತ ಕಂಡಿದೆ. ಹಾಗಿದ್ದರೂ ವ್ಯಾಪಾರಿಗಳು ದರ ಇಳಿಸದಿರುವುದು ಗಮನಕ್ಕೆ ಬಂದಿದೆ. ಎಲ್ಲ ವರ್ತಕರು ಬೇಳೆ- ಕಾಳು ಬೆಲೆ ಕಡಿಮೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಸೂಚಿಸಿದ್ದಾರೆ.

VISTARANEWS.COM


on

Action to reduce pulses price says Union Minister Pralhad Joshi
Koo

ನವದೆಹಲಿ: ಬೇಳೆ-ಕಾಳು ಬೆಲೆ ಇಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನವದೆಹಲಿಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ ಸಚಿವರು ಈ ಬಗ್ಗೆ ತ್ವರಿತ ಕ್ರಮಕ್ಕೆ ಸಲಹೆ ನೀಡಿದ್ದಾರೆ.

ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ತೊಗರಿ, ಕಡಲೆ ಮತ್ತು ಉದ್ದು ಮತ್ತಿತರ ಬೇಳೆಗಳ ಬೆಲೆಯಲ್ಲಿ ಶೇ.4ರಷ್ಟು ಕುಸಿತ ಕಂಡಿದೆ. ಹಾಗಿದ್ದರೂ ವ್ಯಾಪಾರಿಗಳು ದರ ಇಳಿಸದಿರುವುದು ಗಮನಕ್ಕೆ ಬಂದಿದೆ. ಎಲ್ಲ ವರ್ತಕರು ಬೇಳೆ- ಕಾಳು ಬೆಲೆ ಕಡಿಮೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.

ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಧಾನ್ಯಗಳು ಲಭಿಸುವಂತೆ ಮಾಡಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದೂ ಸಚಿವರು ಇದೇ ವೇಳೆ ಹೇಳಿದರು.

ಇದನ್ನೂ ಓದಿ: Karnataka Rain: ವರುಣಾರ್ಭಟಕ್ಕೆ ರಾಜ್ಯದ ಹಲವೆಡೆ ನದಿಗಳು ಉಕ್ಕಿ ಹರಿದು ನೆರೆ ಸೃಷ್ಟಿ; ಕುಸಿದ ಸೇತುವೆಗಳು!

ಸಣ್ಣ ಸಣ್ಣ ವ್ಯಾಪಾರದ ಮಳಿಗೆಗಳಲ್ಲಿ ಮಾತ್ರ ತೊಗರಿ, ಉದ್ದು, ಕಡಲೆ ಬೇಳೆ ಬೆಲೆ ಇಳಿಸಲಾಗಿದೆ. ಆದರೆ, ದೊಡ್ಡ ದೊಡ್ಡ ವ್ಯಾಪಾರಿ ಮಳಿಗೆಗಳಲ್ಲಿ ಬೆಲೆ ಇಳಿಸದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಇದರ ವಿರುದ್ಧ ಕ್ರಮಕ್ಕೆ ಮುಂದಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಬೇಳೆಗಳ ಬೆಲೆಯನ್ನು ಕೂಡಲೇ ಇಳಿಸುವಂತೆ ಈ ದೊಡ್ಡ ವರ್ತಕರಿಗೂ ಸೂಚನೆ ನೀಡಲಾಗಿದೆ. ಈ ನಿರ್ದೇಶನ ಅನುಸರಿಸಲು ವಿಫಲವಾದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಸಿದ್ದಾರೆ

2025ಕ್ಕೆ ಜಿಡಿಪಿ ಶೇ.7ರಷ್ಟು ಬೆಳವಣಿಗೆ

ಐಎಂಎಫ್ ವರದಿ ಪರಿಷ್ಕರಿಸಿದ್ದು, 2025 ರಲ್ಲಿ ಭಾರತದ ಜಿಡಿಪಿ (GDP) ಬೆಳವಣಿಗೆ ಶೇ.7 ರಷ್ಟು ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕತೆಯ ಸಾಲಿನಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಉನ್ನತ ಸ್ಥರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂಬುದಕ್ಕೆ ಐಎಂಎಫ್‌ನ ಈ ವರದಿಯೇ ನಿದರ್ಶನ ಎಂದು ಜೋಶಿ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: Paris Olympics 2024 : 8 ಚಿನ್ನ, 1 ಬೆಳ್ಳಿ, 3 ಕಂಚು: ಒಲಿಂಪಿಕ್ಸ್ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಸಾಧನೆಗಳ ವಿವರ ಇಲ್ಲಿದೆ

ಭಾರತದ ಬೆಳವಣಿಗೆಯು ಆರ್ಥಿಕ ವರ್ಷ 2025 ರಲ್ಲಿ ಶೇ.7ರಷ್ಟು ಜಿಡಿಪಿ (GDP) ಬೆಳವಣಿಗೆಯ ಮುನ್ಸೂಚನೆ ನೀಡಿದ್ದು, ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಬಣ್ಣಿಸಿದ್ದಾರೆ.

Continue Reading
Advertisement
Kapil Dev
ಕ್ರೀಡೆ12 mins ago

Kapil Dev : ಟಿ20 ವಿಶ್ವ ಕಪ್ ಚಾಂಪಿಯನ್ಸ್​ ಕೊಹ್ಲಿ, ರೋಹಿತ್ ಶ್ಲಾಘಿಸಿದ 1983ರ ವಿಶ್ವ ಕಪ್ ವಿಜೇತ ಕಪಿಲ್​ ದೇವ್​​

Hand Painted lehenga Fashion
ಫ್ಯಾಷನ್13 mins ago

Hand Painted lehenga Fashion: ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿದ ರಾಧಿಕಾ ಮರ್ಚೆಂಟ್‌ ಹ್ಯಾಂಡ್‌ ಪೇಂಟೆಡ್‌ ಲೆಹೆಂಗಾ!

Karnataka Jobs Reservation
ರಾಜಕೀಯ14 mins ago

Karnataka Jobs Reservation: ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲು ಸಾಧ್ಯವೆ? ತೊಡಕುಗಳು ಏನೇನು?

UP CM DCM
ದೇಶ15 mins ago

UP CM v/s DCM: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ; ಯೋಗಿ ತಲೆದಂಡ ಪಕ್ಕಾನಾ?

ಕ್ರೀಡೆ33 mins ago

KL Rahul : ಆಮಿರ್​ ಖಾನ್ ಮನೆ ಪಕ್ಕದಲ್ಲೇ 20 ಕೋಟಿ ಫ್ಲ್ಯಾಟ್ ಖರೀದಿಸಿದ ರಾಹುಲ್, ಅಥಿಯಾ ದಂಪತಿ

Raj B Shetty starrer roopanthara is releasing on July 26
ಕರ್ನಾಟಕ35 mins ago

Kannada New Movie: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದ ರಾಜ್ ಬಿ ಶೆಟ್ಟಿ ನಟನೆಯ ‘ರೂಪಾಂತರ’ ಚಿತ್ರ ಜು.26ಕ್ಕೆ ರಿಲೀಸ್‌

PR Seva Award for Media Connect in Bengaluru
ಕರ್ನಾಟಕ38 mins ago

Media Connect: ಮೀಡಿಯಾ ಕನೆಕ್ಟ್‌ಗೆ ಭರವಸೆಯ ಪಿಆರ್‌ ಸೇವಾ ಪ್ರಶಸ್ತಿ

Action to reduce pulses price says Union Minister Pralhad Joshi
ಕರ್ನಾಟಕ39 mins ago

Pralhad Joshi: ಬೇಳೆ ದರ ಇಳಿಕೆಗೆ ಕೇಂದ್ರದಿಂದ ಕ್ರಮ: ಪ್ರಲ್ಹಾದ್‌ ಜೋಶಿ

Minister Mankala Vaidya instructed to file a case against IRB and National Highways officers
ಕರ್ನಾಟಕ42 mins ago

Uttara Kannada News: ಐಆರ್‌ಬಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ: ಸಚಿವ ಮಂಕಾಳ ವೈದ್ಯ ಸೂಚನೆ

Passenger Arrest
Latest52 mins ago

Passenger Arrest: ವಿಮಾನದಲ್ಲಿ ಗಗನಸಖಿ ನೀಡಿದ ನೀರು, ಆಹಾರ ಸೇವಿಸದ ಪ್ರಯಾಣಿಕನ ಬಂಧನ! ಕಾರಣ ಕುತೂಹಲಕರ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌