New Year Gift | ಹೊಸ ವರ್ಷದಿಂದ ಬಿಬಿಎಂಪಿಯ ಕೆಳ ಹಂತದ ನೌಕರರಿಗೆ ವೇತನ ಮೊದಲು ವಿತರಣೆ - Vistara News

ಬೆಂಗಳೂರು

New Year Gift | ಹೊಸ ವರ್ಷದಿಂದ ಬಿಬಿಎಂಪಿಯ ಕೆಳ ಹಂತದ ನೌಕರರಿಗೆ ವೇತನ ಮೊದಲು ವಿತರಣೆ

ಹೊಸ ವರ್ಷದಿಂದ ಬಿಬಿಎಂಪಿಯ ಕೆಳ ಹಂತದ ನೌಕರರಿಗೆ ವೇತನವನ್ನು ಮೊದಲು ವಿತರಿಸಲು ಆಯುಕ್ತರು ಸೂಚಿಸಿದ್ದಾರೆ. (New Year Gift) ಇದರಿಂದ ನೌಕರರಿಗೆ ಅನುಕೂಲವಾಗಲಿದೆ.

VISTARANEWS.COM


on

BBMP Office Bengaluru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹೊಸ ವರ್ಷಕ್ಕೆ ‌ಬೆಂಗಳೂರು ಮಹಾ ನಗರ ಪಾಲಿಕೆಯಿಂದ ಸಿಬಂದಿಗಳಿಗೆ ಕೊಡುಗೆ ಲಭಿಸಿದಂತಾಗಿದೆ. ಜನವರಿಯಿಂದ ಪಾಲಿಕೆಯ ಬಿ, ಸಿ, ಡಿ ವರ್ಗದ ನೌಕರರಿಗೆ (New Year Gift) ಮೊದಲು ವೇತನ ವಿತರಣೆಯಾಗಲಿದೆ.

ಇದುವರೆಗೆ ಎಲ್ಲ ಹಂತದ ಅಧಿಕಾರಿ ಮತ್ತು ನೌಕರರಿಗೆ ಒಂದೇ ಹಂತದಲ್ಲಿ ಸಂಬಳವನ್ನು ಬಿಬಿಎಂಪಿ ವಿತರಿಸುತ್ತಿತ್ತು. ಪ್ರತಿ ತಿಂಗಳಿನ ಎರಡನೇ ವಾರದಲ್ಲಿ ಬಿಬಿಎಂಪಿ ವೇತನ ನೀಡುತ್ತಿತ್ತು. ಇದಕ್ಕೆ ಪಾಲಿಕೆ ನೌಕರರು ಬೇಸರ ವ್ಯಕ್ತ ಪಡಿಸಿದ್ದರು. ನೌಕರರ ಈ ಬೇಸರವನ್ನು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಪರಿಹರಿಸಿದ್ದಾರೆ.

ವೇತನ ಹಂಚಿಕೆಯಲ್ಲಿ ಬದಲಾವಣೆ ಮಾಡಿದ್ದಾರೆ. ಈ ತಿಂಗಳಿನಿಂದ ಮೊದಲು ಕೆಳ ಹಂತದ ನೌಕರರಿಗೆ ವೇತನ ವಿತರಣೆಯಾಗಲಿದೆ. ಪಾಲಿಕೆಯ B,C,D ಹಂತದ ನೌಕರರಿಗೆ ಮೊದಲು ಸಂಬಳ, ಬಳಿಕ ಕಚೇರಿ ನಿರ್ವಹಣೆ ವೆಚ್ಚ, ನಂತರ ಗುತ್ತಿಗೆದಾರರಿಗೆ ಬಿಲ್ ಪಾವತಿ, ಇದಾದ ಬಳಿಕ ಐಎಸ್ ಸೇರಿದಂತೆ ಮೇಲಾಧಿಕಾರಿಗೆ ಸಂಬಳ ವೇತನ ನೀಡಲು ಸೂಚಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

HD Deve Gowda: ದೇವೇಗೌಡರಿಗೆ ಜನ್ಮದಿನ ಶುಭ ಕೋರಿದ ಮೋದಿ; ಮಾಜಿ ಪ್ರಧಾನಿಗೆ ಹಲಸಿನ ಹಣ್ಣು ಗಿಫ್ಟ್‌

HD Deve Gowda: ಎಚ್‌.ಡಿ. ದೇವೇಗೌಡರ ಹುಟ್ಟುಹಬ್ಬಕ್ಕೆ ಸೋಷಿಯಲ್‌ ಮೀಡಿಯಾ ಎಕ್ಸ್‌ ಮೂಲಕ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ದೇವೇಗೌಡ ಸೇವೆ ಗಣನೀಯವಾಗಿದ್ದು, ರಾಜಕೀಯ ವಲಯದಲ್ಲಿ ಅವರನ್ನು ಗೌರವದಿಂದ ಕಾಣಲಾಗುತ್ತದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅವರ ಆಸಕ್ತಿ ಗಮನಾರ್ಹವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

VISTARANEWS.COM


on

PM Modi wishes HD Deve Gowda on his 93rd birthday Jackfruit gift to former PM
Koo

ಬೆಂಗಳೂರು: ದಣಿವರಿಯದ ನಾಯಕ, ರಾಜಕೀಯ ಭೀಷ್ಮ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು (HD DeveGowda) ಇಂದು 93ರ ಹುಟ್ಟುಹಬ್ಬ (HD Deve Gowda birthday) ಆಚರಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ಶುಭಾಶಯ ಕೋರಿದ್ದಾರೆ. ಈ ವೇಳೆ ಪಕ್ಷದ ಕಾರ್ಯಕರ್ತನೊಬ್ಬ ತನ್ನ ನೆಚ್ಚಿನ ನಾಯಕನಿಗೆ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಿದ್ದಾನೆ. ದೇವೇಗೌಡರು ಅದರ ಪರಿಮಳವನ್ನು ಆಸ್ವಾದಿಸಿ ಖುಷಿಪಟ್ಟರು.

PM Modi wishes HD Deve Gowda on his 93rd birthday Jackfruit gift to former PM

ಎಚ್‌.ಡಿ. ದೇವೇಗೌಡರ ಹುಟ್ಟುಹಬ್ಬಕ್ಕೆ ಸೋಷಿಯಲ್‌ ಮೀಡಿಯಾ ಎಕ್ಸ್‌ ಮೂಲಕ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ದೇವೇಗೌಡ ಸೇವೆ ಗಣನೀಯವಾಗಿದ್ದು, ರಾಜಕೀಯ ವಲಯದಲ್ಲಿ ಅವರನ್ನು ಗೌರವದಿಂದ ಕಾಣಲಾಗುತ್ತದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅವರ ಆಸಕ್ತಿ ಗಮನಾರ್ಹವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

ಹಲಸಿನ ಹಣ್ಣು ಕೊಟ್ಟ ಕಾರ್ಯಕರ್ತ

ಇನ್ನು ಕಟ್ಟಾ ಅಭಿಮಾನಿಯೊಬ್ಬ ದೇವೇಗೌಡರಿಗೆ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಿದ್ದಾನೆ. ಅದನ್ನು ಅಷ್ಟೇ ಪ್ರೀತಿಪೂರ್ವಕವಾಗಿ, ಖುಷಿ ಖುಷಿಯಿಂದ ದೇವೇಗೌಡ ಅವರು ಸ್ವೀಕರಿಸಿದರು. ಅಲ್ಲದೆ, ಆ ಹಲಸಿನ ಹಣ್ಣಿನ ಬಳಿಗೆ ತಮ್ಮ ಮೂಗನ್ನು ಇಟ್ಟು ಅದರ ಪರಿಮಳವನ್ನು ಆಸ್ವಾದಿಸಿದರು. ಕಾರ್ಯಕರ್ತನ ಗಿಫ್ಟ್‌ ಬಗ್ಗೆ ಬಹಳವೇ ಖುಷಿಪಟ್ಟರು.

ಈ ಅವಮಾನದಿಂದ ಪಾರು ಮಾಡು: ದೇವೇಗೌಡರ ಮೌನ ಪ್ರಾರ್ಥನೆ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಇಂದು ತಮ್ಮ ಹುಟ್ಟುಹಬ್ಬವನ್ನು ದೇವಾಲಯ ಭೇಟಿಯೊಂದಿಗೆ (Temple visit) ಸರಳವಾಗಿ ಆಚರಿಸಿಕೊಂಡಿದ್ದಾರೆ. ಮೊಮ್ಮಗ (Prajwal Revanna Case) ನೀಡಿದ ಏಟಿನಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ದೇವೇಗೌಡರು, ದೇವರ ಮುಂದೆ ಈ ಅವಮಾನದಿಂದ ಪಾರು ಮಾಡೆಂದು ಮೌನವಾಗಿ ಪ್ರಾರ್ಥಿಸಿದರು.

ಮೊಮ್ಮಗ ಪ್ರಜ್ವಲ್‌ ಪ್ರಕರಣ ತಂದಿಟ್ಟ ಸಂಕಷ್ಟದಿಂದ ನೊಂದಿರುವ ಗೌಡರು 92 ವರ್ಷದಲ್ಲಿ ಮೊದಲ ಬಾರಿಗೆ ಗಡ್ಡಧಾರಿಯಾಗಿದ್ದರು. ಇಂದು ಮನೆಯಿಂದ ಹೊರಗೆ ಬಂದು ದೇವಾಲಯಕ್ಕೆ ಹೊರಟ ಸಂದರ್ಭದಲ್ಲಿ ಮತ್ತೆ ನೀಟ್‌ ಶೇವ್‌ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಅವರು ಬೆಂಗಳೂರಿನ ಜೆಪಿ ನಗರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರೆಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಅವರು ಮತ್ತೆ ಮನೆ ಸೇರಿಕೊಂಡರು.

ಜನ್ಮದಿನವಾಗಿದ್ದರೂ ದೇವೇಗೌಡರ ನಿವಾಸದ ಮುಂದೆ ಇಂದು ಹಬ್ಬದ ವಾತಾವರಣ ಕಂಡುಬಂದಿಲ್ಲ. ಇಂದು ಯಾರನ್ನೂ ಭೇಟಿ ಆಗುವುದಿಲ್ಲ. ಇದ್ದಲ್ಲಿಂದಲೇ ಹಾರೈಸಿ ಎಂದು ದೇವೇಗೌಡರು ಸಂದೇಶ ರವಾನಿಸಿದ್ದಾರೆ. “ಇಂದು ನನ್ನ ಜನ್ಮ ದಿನ. ಮನೆ ಬಳಿ ಬಂದು ಯಾರೂ ಆಚರಣೆ ಮಾಡದಂತೆ ಮನವಿ ಮಾಡಿದ್ದೇನೆ. ಅವರು ಇದ್ದಲ್ಲಿಯೇ ಹಾರೈಸಿ ಎಂದು ಹೇಳಿದ್ದೇನೆ” ಎಂದಿದ್ದಾರೆ.

ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ

“ಪ್ರಜ್ವಲ್ ರೇವಣ್ಣ ಬಗ್ಗೆ, ರೇವಣ್ಣ ಪ್ರಕರಣ (HD Revanna Case) ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ಹೊರಗಡೆ ಹೋಗಿದ್ದಾರೆ. ರೇವಣ್ಣ ಪ್ರಕರಣದ ಜಾಮೀನು ಅರ್ಜಿ ಸೋಮವಾರ ವಿಚಾರಣೆ ಇದೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನಿನ ಪ್ರಕಾರ ಏನೇನು ಕ್ರಮ ಕೈಗೊಳ್ಳಬೇಕೊ ಅದನ್ನು ತೆಗೆದುಕೊಳ್ಳುವಂತೆ ಕುಮಾರಸ್ವಾಮಿಯವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಬಹಳ ಜನ ಇದ್ದಾರೆ. ಇದರಲ್ಲಿ ಯಾರೇ ಇದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. ಆ ಘಟನೆ ಬಗ್ಗೆ ಕುಮಾರಸ್ವಾಮಿಯವರು (HD Kumaraswamy) ಇಡೀ ನಮ್ಮ ಕುಟುಂಬದ ಪರವಾಗಿ ಮಾತನಾಡುತ್ತಾರೆ. ಕಾನೂನು ಏನಿದೆಯೋ ಆ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಆ ಕ್ರಮ ಕೈಗೊಳ್ಳೋದು ಸರ್ಕಾರದ ಜವಾಬ್ದಾರಿ ಅಂತ ಹೇಳಿದ್ದಾರೆ. ನಾನು ಅದನ್ನು ಪುನರುಚ್ಚರಿಸುತ್ತೇನೆ” ಎಂದು ದೇವೇಗೌಡರು ಹೇಳಿದರು.

ಕುಮಾರಸ್ವಾಮಿಗೆ ಹೋರಾಟದ ಛಲ ಇದೆ

ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ದೇವರಾಜೇಗೌಡ 100 ಕೋಟಿ ರೂ. ಆಫರ್ ಆರೋಪದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಅವರು, “ಇದೆಲ್ಲದಕ್ಕೂ ಕುಮಾರಸ್ವಾಮಿಯವರು ಉತ್ತರ ಕೊಟ್ಟಿದ್ದಾರೆ. ನಾನು ಅದರ ಬಗ್ಗೆ ಮಾತನಾಡೊಲ್ಲ. ಕುಮಾರ ಸ್ವಾಮಿಯವರು ಎಲ್ಲ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಹೋರಾಟದ ಛಲ ಇದೆ. ಹೀಗಾಗಿ ಅವರು ಎಲ್ಲ ವಿಚಾರವನ್ನೂ ಹೇಳ್ತಾರೆ. ಜೂನ್ 4ರ ನಂತರ ನಾನು ಮಾಧ್ಯಮಗಳ ಮುಂದೆ ಮಾತಾಡ್ತೀನಿ. ಅಲ್ಲಿಯವರೆಗೂ ನಾನು ಯಾರ ಜೊತೆಯೂ ಮಾತನಾಡೊಲ್ಲ” ಎಂದಿದ್ದಾರೆ.

“ಇದರಲ್ಲಿ ಅನೇಕ ಜನ ಇದ್ದಾರೆ. ನಾನು ಅವರ್ಯಾರ ಹೆಸರನ್ನೂ ಹೇಳಲು ಹೋಗಲ್ಲ. ಈ ವಿಚಾರದಲ್ಲಿ ಯಾರ್ಯಾರು ಇದ್ದಾರೆ ಅವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನ್ಯಾಯ ಸಿಗಬೇಕು. ಯಾವ ಹೆಣ್ಣು ಮಕ್ಕಳು ಅಪಾಯಕ್ಕೆ ಸಿಕ್ಕಿದ್ದಾರೆ, ಅವರಿಗೆ ಪರಿಹಾರ ನೀಡಬೇಕು. ಈ ಎಲ್ಲ ವಿಚಾರಗಳನ್ನು ಕುಮಾರಸ್ವಾಮಿ ಬಿಡಿಸಿ ಬಿಡಿಸಿ ಹೇಳಿದ್ದಾರೆ. ಪ್ರಜ್ವಲ್ ಬಗ್ಗೆ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಯಾವ ತಕರಾರೂ ಇಲ್ಲ. ಆದರೆ ರೇವಣ್ಣ ಅವರ ಬಗ್ಗೆ ಮಾಡಿರುವುದು ರಾಜ್ಯದ ಜನತೆಗೆ ಗೊತ್ತಿದೆ. ಯಾವ ರೀತಿ ಕೇಸ್ ದಾಖಲು ಮಾಡಿದ್ದಾರೆ ಅಂತ ನೋಡಿ. ಒಂದು ಕೇಸ್, ಮೂರು ಬೇಲ್ ಕೊಟ್ಟಿದ್ದಾರೆ. ಇನ್ನೊಂದು ನಾಡಿದ್ದು ಜಡ್ಜ್‌ಮೆಂಟ್ ಇದೆ. ಅದು ಯಾವ ರೀತಿ ನಡೆಯಿತು ಅನ್ನೋದನ್ನ ನಾನು ವಿಶ್ಲೇಷಣೆ ಮಾಡಲ್ಲ” ಎಂದಿದ್ದಾರೆ.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್‌ ಕೇಸ್‌ನಲ್ಲಿ ಶಾಮೀಲಾಗಲು ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್; ದೇವರಾಜೇಗೌಡ ಆರೋಪ

ಇದು ರಾಜಕೀಯವಾಗಿ ದೇವೆಗೌಡರ ಕುಟುಂಬಕ್ಕೆ ಹಿನ್ನಡೆ ಉಂಟುಮಾಡುವ ಕೆಲಸವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಿಜ, ಒಟ್ಟಾರೆ ಏನು ನಡೆದಿದೆ, ದೇವರಾಜೇಗೌಡರ ಹೇಳಿಕೆಯಂತೆ, ಇದರಲ್ಲಿ ತುಂಬ ಜನ ಇದ್ದಾರೆ. ಬೇರೆ ಬೇರೆಯವರೆಲ್ಲ ಇದ್ದಾರೆ” ಎಂದಿದ್ದಾರೆ.

“ಇವತ್ತು ನನ್ನ 91 ವರ್ಷ ಮುಗಿಯಿತು. ನಾನು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ನಾನು ನನ್ನ ಅಭಿಮಾನಿಗಳಿಗೆ ಈ ವರ್ಷದ ಹುಟ್ಟುಹಬ್ಬದ ಆಚರಣೆ ಮಾಡಬಾರದು ಅಂತ ವಿನಂತಿಸಿದ್ದೇನೆ. ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ. ರಾಜ್ಯದ ಎಲ್ಲ ಅಭಿಮಾನಿಗಳಿಗೆ ಶುಭ ಕೋರುತ್ತೇನೆ” ಎಂದು ಅವರು ತಿಳಿಸಿದ್ದಾರೆ.

Continue Reading

ಚಿನ್ನದ ದರ

Gold Rate Today: ಬಂಗಾರದ ದರಗಳಲ್ಲಿ ಭಾರಿ ಏರಿಕೆ; ಇಂದು ಕೊಳ್ಳಲು ಮುಂದಾಗುತ್ತೀರಾ? ಗಮನಿಸಿ

Gold Rate Today: ಅಕ್ಷಯ ತದಿಗೆಯ ಬಳಿಕ ಚಿನ್ನದ ಮಾರುಕಟ್ಟೆಯಲ್ಲಿ ದಿನೇ ದಿನೆ ಏರಿಳಿಕೆ ಸಾಮಾನ್ಯವಾಗಿದೆ. ನಿನ್ನೆ ದರ ಇಳಿಕೆಯಾಗಿತ್ತು. ಇಂದು ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ.

VISTARANEWS.COM


on

gold rate today aditi
Koo

ಬೆಂಗಳೂರು: ಅಕ್ಷಯ ತದಿಗೆಯ ಬಳಿಕ ಚಿನ್ನದ ಮಾರುಕಟ್ಟೆಯಲ್ಲಿ ದಿನೇ ದಿನೆ ಏರಿಳಿಕೆ ಸಾಮಾನ್ಯವಾಗಿದೆ. ನಿನ್ನೆ ದರ ಇಳಿಕೆಯಾಗಿತ್ತು. ಇಂದು ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ. ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಕ್ರಮವಾಗಿ ₹80 ಹಾಗೂ ₹87 ಏರಿಕೆಯಾಗಿವೆ. ನಿನ್ನೆ ಚಿನ್ನದ ಬೆಲೆ ಗ್ರಾಂಗೆ 25 ರೂಪಾಯಿಗಳಷ್ಟು ಇಳಿಕೆಯಾಗಿತ್ತು.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,840ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹54,720 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹68,400 ಮತ್ತು ₹6,84,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,462 ಆಗಿದ್ದರೆ, ಎಂಟು ಗ್ರಾಂ ಬೆಲೆ ₹59,696 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹74,620 ಮತ್ತು ₹7,46,200 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹89, ಎಂಟು ಗ್ರಾಂ ₹712 ಮತ್ತು 10 ಗ್ರಾಂ ₹890ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,900 ಮತ್ತು 1 ಕಿಲೋಗ್ರಾಂಗೆ ₹89,000 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ68,55074,770
ಮುಂಬಯಿ68,40074,620
ಬೆಂಗಳೂರು68,40074,620
ಚೆನ್ನೈ68,50074,730

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Gold Rate Today: ಬಂಗಾರದ ಬೆಲೆ ಇನ್ನೂ ಇಳಿಕೆ; ಇಂದಿನ ಮಾರುಕಟ್ಟೆ ದರಗಳನ್ನು ಇಲ್ಲಿ ಗಮನಿಸಿಕೊಳ್ಳಿ

Continue Reading

ಕ್ರೈಂ

Prajwal Revanna Case: ವಿದೇಶದಿಂದ ಪ್ರಜ್ವಲ್‌ ಕರೆತರೋಕೆ ಎಸ್‌ಐಟಿ ಮಾಸ್ಟರ್‌ ಸ್ಟ್ರೋಕ್!‌

Prajwal Revanna Case: ಪ್ರಜ್ವಲ್‌ ಅನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡದೇ ಈ ಪ್ರಕರಣದಲ್ಲಿ ಮುಂದೆ ಯಾವ ವಿಚಾರಣೆಯನ್ನೂ ಮಾಡಲು ಅವಕಾಶವಿಲ್ಲ. ಹೀಗಾಗಿ ಜರ್ಮನಿಯಲ್ಲಿ ಸದ್ಯ ಇದ್ದಾರೆಂದು ಹೇಳಲಾಗಿರುವ ಪ್ರಜ್ವಲ್‌ ಅನ್ನು ದೇಶಕ್ಕೆ ಕರೆತರುವುದಕ್ಕೆ ಎಸ್‌ಐಟಿ ಮತ್ತೊಂದು ಹೊಸ ಪ್ಲಾನ್ ಮಾಡುತ್ತಿದೆ. ಅದರಂತೆ ಪ್ರಜ್ವಲ್ ಬ್ಯಾಂಕ್ ಅಕೌಂಟ್‌ಗಳನ್ನು ಸೀಝ್ ಮಾಡಲು ಮುಂದಾಗಿದೆ.

VISTARANEWS.COM


on

Prajwal Revanna Case pen drive and hard disk were found during the raids in Hassan and Bengaluru
Koo

ಬೆಂಗಳೂರು: ಅಶ್ಲೀಲ ವಿಡಿಯೋ (obscene video) ಪ್ರಕರಣದಲ್ಲಿ (pen drive case) ತನಿಖೆ ತಪ್ಪಿಸಿಕೊಳ್ಳಲು ವಿದೇಶಕ್ಕೆ ಹಾರಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna Case) ಅವರನ್ನು ಕರೆತರಲು ವಿಶೇಷ ತನಿಖಾ ಸಂಸ್ಥೆ (SIT) ಮಾಸ್ಟರ್‌ ಸ್ಟ್ರೋಕ್‌ ಕೊಡಲು ಮುಂದಾಗಿದೆ.

ಪ್ರಜ್ವಲ್‌ ಅನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡದೇ ಈ ಪ್ರಕರಣದಲ್ಲಿ ಮುಂದೆ ಯಾವ ವಿಚಾರಣೆಯನ್ನೂ ಮಾಡಲು ಅವಕಾಶವಿಲ್ಲ. ಹೀಗಾಗಿ ಜರ್ಮನಿಯಲ್ಲಿ ಸದ್ಯ ಇದ್ದಾರೆಂದು ಹೇಳಲಾಗಿರುವ ಪ್ರಜ್ವಲ್‌ ಅನ್ನು ದೇಶಕ್ಕೆ ಕರೆತರುವುದಕ್ಕೆ ಎಸ್‌ಐಟಿ ಮತ್ತೊಂದು ಹೊಸ ಪ್ಲಾನ್ ಮಾಡುತ್ತಿದೆ. ಅದರಂತೆ ಪ್ರಜ್ವಲ್ ಬ್ಯಾಂಕ್ ಅಕೌಂಟ್‌ಗಳನ್ನು ಸೀಝ್ ಮಾಡಲು ಮುಂದಾಗಿದೆ.

ಈಗಾಗಲೇ ಪ್ರಜ್ವಲ್ ಅಕೌಂಟ್‌ಗೆ ಲಕ್ಷಾಂತರ ರೂಪಾಯಿ ಹಣ ಬೆಂಗಳೂರಿನಿಂದ ಸಂದಾಯ ಆಗಿದೆ. ಅದರ ಮಾಹಿತಿಯನ್ನು ಎಸ್ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ಹೀಗಾಗಿ ಕೋರ್ಟ್ ಮೂಲಕ ಅನುಮತಿ ಪಡೆದು ಅಕೌಂಟ್ ಪ್ರೀಝ್ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಮೂಲಕ ಪ್ರಜ್ವಲ್ ಅನ್ನು ಆರ್ಥಿಕವಾಗಿ ಕಟ್ಟಿಹಾಕುವ, ಅಲ್ಲಿನ ಓಡಾಟ ಹಾಗೂ ವಸತಿಯನ್ನು ನಿರ್ಬಂಧಿಸುವ ಉದ್ದೇಶ ಇದೆ.

ಎಸ್ಐಟಿ ಮೂಲಗಳ‌ ಮಾಹಿತಿಯ ಪ್ರಕಾರ ಪ್ರಜ್ವಲ್ 7 ಬ್ಯಾಂಕ್ ಅಕೌಂಟ್‌ಗಳನ್ನು ಹೊಂದಿದ್ದಾರೆ. ಆ ಬ್ಯಾಂಕುಗಳ ಸಂಪೂರ್ಣ ಡೀಟೇಲ್ಸ್ ಅನ್ನು ಎಸ್ಐಟಿ ಪಡೆದುಕೊಂಡಿದೆ. ಹಲವು ಬ್ಯಾಂಕ್‌ಗಳಲ್ಲಿ ಇರುವ ಈ ಖಾತೆಗಳನ್ನು ಪ್ಯಾನ್‌ ನಂಬರ್‌ ಮೂಲಕ ಟ್ರ್ಯಾಕ್‌ ಮಾಡಿ, ಅವುಗಳನ್ನು ಸೀಝ್‌ ಮಾಡಲಾಗುತ್ತಿದೆ.

ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್; ದೇವರಾಜೇಗೌಡ ಆರೋಪ

ಹಾಸನ: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ (Devarajegowda) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪೆನ್‌ ಡ್ರೈವ್‌ ಪ್ರಕರಣದ ಹಿಂದೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಇದ್ದಾರೆ. ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಳಿ ಪೆನ್‌ಡ್ರೈವ್‌ ತರಿಸಿಕೊಂಡು ಎಲ್ಲವನ್ನೂ ರೆಡಿ ಮಾಡಿದ್ದು ಡಿಕೆಶಿ, ಇದರಲ್ಲಿ ಸುಮ್ಮನಾಗಲು 100 ಕೋಟಿ ರೂಪಾಯಿ ಆಫರ್‌ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹಾಸನ ಜೆಎಂಎಫ್‌ಸಿ ಕೋರ್ಟ್‌ ಹೊರಗೆ ಪೊಲೀಸ್‌ ವ್ಯಾನ್‌ನೊಳಗಿದ್ದ ವಕೀಲ ದೇವರಾಜೇಗೌಡ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್.ಆರ್. ಶಿವರಾಮೇಗೌಡ ಮೂಲ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಮಾತನಾಡಿದ್ದಲ್ಲ ಎಂದು ಹೇಳಿದರು.

ನಾಲ್ಕು ಜನ ಮಂತ್ರಿಗಳ ಕಮಿಟಿ ಎಂದು ನಾನು ಹೇಳಿದ್ದೆನಲ್ಲವೇ? ಅವರ ಬಗ್ಗೆ ಹೇಳುತ್ತೇನೆ. ಎನ್‌. ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಇನ್ನೊಬ್ಬ ಸಚಿವರನ್ನು ಈ ಪ್ರಕರಣವನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದಾರೆ. ಈಗ ನನ್ನ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಆದರೆ, ಅದ್ಯಾವುದಕ್ಕೂ ನಾನು ಒಪ್ಪಲಿಲ್ಲ ಎಂದು ದೇವರಾಜೇಗೌಡ ಹೇಳಿದರು.

ಇಷ್ಟೆಲ್ಲ ದೊಡ್ಡ ಹಗರಣವಾಗಿರುವುದರಿಂದ ಇದರ ಮೂಲಕ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರಲು ಹೋಗಿದ್ದರು. ನಮಗೆ ಸುಮಾರು 100 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದರು. ಅದರಲ್ಲಿ 5 ಕೋಟಿ ರೂಪಾಯಿ ಅಡ್ವಾನ್ಸ್ ಅನ್ನು ಬೋರಿಂಗ್ ಕ್ಲಬ್‌ನ ರೂಂ ನಂಬರ್ 110ಕ್ಕೆ ಕಳಿಸಿದ್ದರು. ಆ ಮೀಟಿಂಗ್‌ಗೆ ಚನ್ನರಾಯಪಟ್ಟಣದ ಎಂ.ಎ. ಗೋಪಾಲಸ್ವಾಮಿಯನ್ನು ಕಳಿಸಿದ್ದರು. ಐದು ಕೋಟಿ ರೂಪಾಯಿ ಕ್ಯಾಶ್‌ ಅನ್ನೂ ಕೊಟ್ಟು ಕಳಿಸಿದ್ದರು. ಈ 100 ಕೋಟಿ ರೂಪಾಯಿ ಆಫರ್ ಮಾಡಿದ್ದು ಡಿ.ಕೆ. ಶಿವಕುಮಾರ್ ಎಂದು ದೇವರಾಜೇಗೌಡ ಆರೋಪಿಸಿದರು.

ಒಪ್ಪದೇ ಇದ್ದಾಗ ಅಟ್ರಾಸಿಟಿ ಕೇಸ್

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಂಕ ತರಬೇಕು. ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವವನ್ನು ಹಾಳು ಮಾಡಬೇಕು ಎಂಬ ಕಾರಣಕ್ಕೆ ನನ್ನನ್ನು ಬಳಸಿಕೊಳ್ಳಲು ನೋಡಿದರು. ಅದಕ್ಕೆ ನಾನು ಒಪ್ಪದೇ ಇದ್ದಾಗ ಮೊದಲಿಗೆ ಅಟ್ರಾಸಿಟಿ ಕೇಸ್ ದಾಖಲು ಮಾಡಿದರು. ಅದರಲ್ಲಿ ಡಾಕ್ಯುಮೆಂಟ್ ಸಿಗಲಿಲ್ಲ ಎಂದು ದೇವರಾಜೇಗೌಡ ಹೇಳಿದರು.

ಇದನ್ನೂ ಓದಿ: HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌; ರೇವಣ್ಣ ವಿರುದ್ಧ ಸಂತ್ರಸ್ತೆ ಹೇಳಿಕೆಯಲ್ಲಿ ಭಾರಿ ಗೊಂದಲ!

ನನ್ನ ಮೇಲೆ ಸುಳ್ಳು ಕೇಸ್‌

ನನ್ನ ಮೇಲೆ ಹಾಕಲಾದ ಅಟ್ರಾಸಿಟಿ ಕೇಸ್‌ನಲ್ಲಿ ಯಾವುದೇ ಪ್ರಯೋಜನ ಆಗಿಲ್ಲವೆಂದು ಮತ್ತೊಬ್ಬಳ ಕೈಯಲ್ಲಿ 354a ಕೇಸ್ ಹಾಕಿಸಿದರು. ಅದೂ ವಿಫಲವಾದ ಮೇಲೆ ರೇಪ್ ಕೇಸ್ ಹಾಕಿಸಿದರು. ಈ ಅತ್ಯಾಚಾರ ಪ್ರಕರಣದಲ್ಲಿಯೂ ಅವರಿಗೆ ಯಾವುದೇ ದಾಖಲೆಗಳು ಸಿಗಲಿಲ್ಲ. ನಾಲ್ಕು ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ಪೆನ್‌ಡ್ರೈವ್‌ ಸಿಕ್ಕಿದ್ದನ್ನು ಕೋರ್ಟ್‌ನಲ್ಲಿ ಸೀಜ್‌ ಮಾಡಿದ್ದಾರೆ.

Continue Reading

ಪ್ರಮುಖ ಸುದ್ದಿ

HD Deve Gowda: ಈ ಅವಮಾನದಿಂದ ಪಾರು ಮಾಡು: 93ರ ಜನ್ಮದಿನಂದು ದೇವೇಗೌಡರ ಮೌನ ಪ್ರಾರ್ಥನೆ

HD Deve Gowda: ಮೊಮ್ಮಗ ಪ್ರಜ್ವಲ್‌ ಪ್ರಕರಣ ತಂದಿಟ್ಟ ಸಂಕಷ್ಟದಿಂದ ನೊಂದಿರುವ ಗೌಡರು 92 ವರ್ಷದಲ್ಲಿ ಮೊದಲ ಬಾರಿಗೆ ಗಡ್ಡಧಾರಿಯಾಗಿದ್ದರು. ಇಂದು
ಜನ್ಮದಿನದ ನಿಮಿತ್ತ ಮತ್ತೆ ನೀಟ್‌ ಶೇವ್‌ ಮಾಡಿಕೊಂಡ ಗೌಡರು ಮುಂಜಾನೆ ಬೆಂಗಳೂರಿನ ಜೆಪಿ ನಗರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರೆಳಿ ವಿಶೇಷ ಪೂಜೆ ಸಲ್ಲಿಸಿದರು.

VISTARANEWS.COM


on

hd deve gowda birthday
Koo

ಬೆಂಗಳೂರು: ದಣಿವರಿಯದ ನಾಯಕ, ರಾಜಕೀಯ ಭೀಷ್ಮ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು (HD Deve Gowda) ಇಂದು 93ರ ಹುಟ್ಟುಹಬ್ಬ (HD Deve Gowda birthday) ಆಚರಿಸಿಕೊಂಡಿದ್ದಾರೆ. ಆದರೆ ಸರಳವಾಗಿ ದೇವಾಲಯ ಭೇಟಿಯೊಂದಿಗೆ (Temple visit) ಆಚರಣೆ ಮುಗಿಸಿದ್ದು, ಯಾವುದೇ ಅದ್ಧೂರಿ ಸಂಭ್ರಮಾಚರಣೆಗೆ ತಡೆ ಹಾಕಿದ್ದಾರೆ. ಮೊಮ್ಮಗ (Prajwal Revanna Case) ನೀಡಿದ ಏಟಿನಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ ದೇವೇಗೌಡರು, ದೇವರ ಮುಂದೆ ಈ ಅವಮಾನದಿಂದ ಪಾರು ಮಾಡೆಂದು ಮೌನವಾಗಿ ಪ್ರಾರ್ಥಿಸಿದರು.

ಮೊಮ್ಮಗ ಪ್ರಜ್ವಲ್‌ ಪ್ರಕರಣ ತಂದಿಟ್ಟ ಸಂಕಷ್ಟದಿಂದ ನೊಂದಿರುವ ಗೌಡರು 92 ವರ್ಷದಲ್ಲಿ ಮೊದಲ ಬಾರಿಗೆ ಗಡ್ಡಧಾರಿಯಾಗಿದ್ದರು. ಇಂದು ಮನೆಯಿಂದ ಹೊರಗೆ ಬಂದು ದೇವಾಲಯಕ್ಕೆ ಹೊರಟ ಸಂದರ್ಭದಲ್ಲಿ ಮತ್ತೆ ನೀಟ್‌ ಶೇವ್‌ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಅವರು ಬೆಂಗಳೂರಿನ ಜೆಪಿ ನಗರ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರೆಳಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ಅವರು ಮತ್ತೆ ಮನೆ ಸೇರಿಕೊಂಡರು.

ಜನ್ಮದಿನವಾಗಿದ್ದರೂ ದೇವೇಗೌಡರ ನಿವಾಸದ ಮುಂದೆ ಇಂದು ಹಬ್ಬದ ವಾತಾವರಣ ಕಂಡುಬಂದಿಲ್ಲ. ಇಂದು ಯಾರನ್ನೂ ಭೇಟಿ ಆಗುವುದಿಲ್ಲ. ಇದ್ದಲ್ಲಿಂದಲೇ ಹಾರೈಸಿ ಎಂದು ದೇವೇಗೌಡರು ಸಂದೇಶ ರವಾನಿಸಿದ್ದಾರೆ. “ಇಂದು ನನ್ನ ಜನ್ಮ ದಿನ. ಮನೆ ಬಳಿ ಬಂದು ಯಾರೂ ಆಚರಣೆ ಮಾಡದಂತೆ ಮನವಿ ಮಾಡಿದ್ದೇನೆ. ಅವರು ಇದ್ದಲ್ಲಿಯೇ ಹಾರೈಸಿ ಎಂದು ಹೇಳಿದ್ದೇನೆ” ಎಂದಿದ್ದಾರೆ.

“ಪ್ರಜ್ವಲ್ ರೇವಣ್ಣ ಬಗ್ಗೆ, ರೇವಣ್ಣ ಪ್ರಕರಣ (HD Revanna Case) ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ಹೊರಗಡೆ ಹೋಗಿದ್ದಾರೆ. ರೇವಣ್ಣ ಪ್ರಕರಣದ ಜಾಮೀನು ಅರ್ಜಿ ಸೋಮವಾರ ವಿಚಾರಣೆ ಇದೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನಿನ ಪ್ರಕಾರ ಏನೇನು ಕ್ರಮ ಕೈಗೊಳ್ಳಬೇಕೊ ಅದನ್ನು ತೆಗೆದುಕೊಳ್ಳುವಂತೆ ಕುಮಾರಸ್ವಾಮಿಯವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಬಹಳ ಜನ ಇದ್ದಾರೆ. ಇದರಲ್ಲಿ ಯಾರೇ ಇದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. ಆ ಘಟನೆ ಬಗ್ಗೆ ಕುಮಾರಸ್ವಾಮಿಯವರು (HD Kumaraswamy) ಇಡೀ ನಮ್ಮ ಕುಟುಂಬದ ಪರವಾಗಿ ಮಾತನಾಡುತ್ತಾರೆ. ಕಾನೂನು ಏನಿದೆಯೋ ಆ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ಕೈಗೊಳ್ಳಬೇಕೋ ಆ ಕ್ರಮ ಕೈಗೊಳ್ಳೋದು ಸರ್ಕಾರದ ಜವಾಬ್ದಾರಿ ಅಂತ ಹೇಳಿದ್ದಾರೆ. ನಾನು ಅದನ್ನು ಪುನರುಚ್ಚರಿಸುತ್ತೇನೆ” ಎಂದು ದೇವೇಗೌಡರು ಹೇಳಿದರು.

ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ದೇವರಾಜೇಗೌಡ 100 ಕೋಟಿ ರೂ. ಆಫರ್ ಆರೋಪದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಅವರು, “ಇದೆಲ್ಲದಕ್ಕೂ ಕುಮಾರಸ್ವಾಮಿಯವರು ಉತ್ತರ ಕೊಟ್ಟಿದ್ದಾರೆ. ನಾನು ಅದರ ಬಗ್ಗೆ ಮಾತನಾಡೊಲ್ಲ. ಕುಮಾರ ಸ್ವಾಮಿಯವರು ಎಲ್ಲ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಹೋರಾಟದ ಛಲ ಇದೆ. ಹೀಗಾಗಿ ಅವರು ಎಲ್ಲ ವಿಚಾರವನ್ನೂ ಹೇಳ್ತಾರೆ. ಜೂನ್ 4ರ ನಂತರ ನಾನು ಮಾಧ್ಯಮಗಳ ಮುಂದೆ ಮಾತಾಡ್ತೀನಿ. ಅಲ್ಲಿಯವರೆಗೂ ನಾನು ಯಾರ ಜೊತೆಯೂ ಮಾತನಾಡೊಲ್ಲ” ಎಂದಿದ್ದಾರೆ.

“ಇದರಲ್ಲಿ ಅನೇಕ ಜನ ಇದ್ದಾರೆ. ನಾನು ಅವರ್ಯಾರ ಹೆಸರನ್ನೂ ಹೇಳಲು ಹೋಗಲ್ಲ. ಈ ವಿಚಾರದಲ್ಲಿ ಯಾರ್ಯಾರು ಇದ್ದಾರೆ ಅವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನ್ಯಾಯ ಸಿಗಬೇಕು. ಯಾವ ಹೆಣ್ಣು ಮಕ್ಕಳು ಅಪಾಯಕ್ಕೆ ಸಿಕ್ಕಿದ್ದಾರೆ, ಅವರಿಗೆ ಪರಿಹಾರ ನೀಡಬೇಕು. ಈ ಎಲ್ಲ ವಿಚಾರಗಳನ್ನು ಕುಮಾರಸ್ವಾಮಿ ಬಿಡಿಸಿ ಬಿಡಿಸಿ ಹೇಳಿದ್ದಾರೆ. ಪ್ರಜ್ವಲ್ ಬಗ್ಗೆ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಯಾವ ತಕರಾರೂ ಇಲ್ಲ. ಆದರೆ ರೇವಣ್ಣ ಅವರ ಬಗ್ಗೆ ಮಾಡಿರುವುದು ರಾಜ್ಯದ ಜನತೆಗೆ ಗೊತ್ತಿದೆ. ಯಾವ ರೀತಿ ಕೇಸ್ ದಾಖಲು ಮಾಡಿದ್ದಾರೆ ಅಂತ ನೋಡಿ. ಒಂದು ಕೇಸ್, ಮೂರು ಬೇಲ್ ಕೊಟ್ಟಿದ್ದಾರೆ. ಇನ್ನೊಂದು ನಾಡಿದ್ದು ಜಡ್ಜ್‌ಮೆಂಟ್ ಇದೆ. ಅದು ಯಾವ ರೀತಿ ನಡೆಯಿತು ಅನ್ನೋದನ್ನ ನಾನು ವಿಶ್ಲೇಷಣೆ ಮಾಡಲ್ಲ” ಎಂದಿದ್ದಾರೆ.

ಇದು ರಾಜಕೀಯವಾಗಿ ದೇವೆಗೌಡರ ಕುಟುಂಬಕ್ಕೆ ಹಿನ್ನಡೆ ಉಂಟುಮಾಡುವ ಕೆಲಸವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಿಜ, ಒಟ್ಟಾರೆ ಏನು ನಡೆದಿದೆ, ದೇವರಾಜೇಗೌಡರ ಹೇಳಿಕೆಯಂತೆ, ಇದರಲ್ಲಿ ತುಂಬ ಜನ ಇದ್ದಾರೆ. ಬೇರೆ ಬೇರೆಯವರೆಲ್ಲ ಇದ್ದಾರೆ” ಎಂದಿದ್ದಾರೆ.

“ಇವತ್ತು ನನ್ನ 91 ವರ್ಷ ಮುಗಿಯಿತು. ನಾನು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ನಾನು ನನ್ನ ಅಭಿಮಾನಿಗಳಿಗೆ ಈ ವರ್ಷದ ಹುಟ್ಟುಹಬ್ಬದ ಆಚರಣೆ ಮಾಡಬಾರದು ಅಂತ ವಿನಂತಿಸಿದ್ದೇನೆ. ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ. ರಾಜ್ಯದ ಎಲ್ಲ ಅಭಿಮಾನಿಗಳಿಗೆ ಶುಭ ಕೋರುತ್ತೇನೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್‌ ಕೇಸ್‌ನಲ್ಲಿ ಶಾಮೀಲಾಗಲು ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್; ದೇವರಾಜೇಗೌಡ ಆರೋಪ

Continue Reading
Advertisement
Hyderabadi Biryani
ಪ್ರಮುಖ ಸುದ್ದಿ6 mins ago

Hyderabadi Biryani : ಎಸ್​ಆರ್​ಎಚ್​ ಅಭಿಮಾನಿಗಳೊಂದಿಗೆ ಹೈದ್ರಾಬಾದಿ ಬಿರಿಯಾನಿ ಸವಿದ ಹೇಡನ್ ಪುತ್ರಿ ಗ್ರೇಸ್​, ಇಲ್ಲಿದೆ ವಿಡಿಯೊ

Job Alert
ಉದ್ಯೋಗ11 mins ago

Job alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Sangeetha Sringeri Wore Lioness Logo On Her Belt
ಬಿಗ್ ಬಾಸ್13 mins ago

Sangeetha Sringeri: ಸಂಗೀತಾ ಶೃಂಗೇರಿ ಸೊಂಟದಲ್ಲಿ ʻಸಿಂಹಿಣಿʼ; ಸ್ಯಾಂಡಲ್​ವುಡ್​ ನಟಿಯ ರಗಡ್‌ ಪೋಸ್‌ !

swati maliwal bibhav kumar
ಪ್ರಮುಖ ಸುದ್ದಿ27 mins ago

Swati Maliwal: ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ ಬಂಧನ

PM Modi wishes HD Deve Gowda on his 93rd birthday Jackfruit gift to former PM
ರಾಜಕೀಯ27 mins ago

HD Deve Gowda: ದೇವೇಗೌಡರಿಗೆ ಜನ್ಮದಿನ ಶುಭ ಕೋರಿದ ಮೋದಿ; ಮಾಜಿ ಪ್ರಧಾನಿಗೆ ಹಲಸಿನ ಹಣ್ಣು ಗಿಫ್ಟ್‌

Virat kohli
ಕ್ರೀಡೆ36 mins ago

Virat kohli : ತಮ್ಮ ಜೀವನದ ಎರಡು ಆಘಾತಕಾರಿ ಸಂದರ್ಭಗಳನ್ನು ವಿವರಿಸಿದ ವಿರಾಟ್ ಕೊಹ್ಲಿ

Robbery case
ವಿಜಯಪುರ44 mins ago

Robbery Case : ಕ್ಯಾಂಟರ್‌ ಅಡ್ಡಗಟ್ಟಿದ ದರೋಡೆಕೋರರು; ಖಾರದ ಪುಡಿ ಎರಚಿ 32 ಲಕ್ಷ ರೂ. ದೋಚಿ ಪರಾರಿ

Nitin Gadkari
Lok Sabha Election 202453 mins ago

Nitin Gadkari: ಯಾವ ಸರ್ಕಾರದಿಂದಲೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ: ನಿತಿನ್‌ ಗಡ್ಕರಿ

Mother Teresa Series life in the works
ಸಿನಿಮಾ1 hour ago

Mother Teresa Series: 30 ಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ‘ಮದರ್ ಥೆರೆಸಾʼ ಸಿರೀಸ್‌!

Virat Kohli
ಪ್ರಮುಖ ಸುದ್ದಿ1 hour ago

Virat kohli : ಗವಾಸ್ಕರ್​​ಗೆ ವಿರಾಟ್​ ಕೊಹ್ಲಿಯನ್ನು ಬೈಯುವುದೇ ಕೆಲಸ, ಇದೀಗ ಮತ್ತೊಂದು ಬಾರಿ ಟೀಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ17 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌