RSS ಕಚೇರಿಯಲ್ಲಿ 50 ವರ್ಷ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ: ತಿರಂಗಾ ಯಾತ್ರೆ ನಾಟಕ ಎಂದ ಸಿದ್ದರಾಮಯ್ಯ - Vistara News

ಪ್ರಮುಖ ಸುದ್ದಿ

RSS ಕಚೇರಿಯಲ್ಲಿ 50 ವರ್ಷ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ: ತಿರಂಗಾ ಯಾತ್ರೆ ನಾಟಕ ಎಂದ ಸಿದ್ದರಾಮಯ್ಯ

ಕೆಪಿಸಿಸಿ ವತಿಯಿಂದ ಆಯೋಜಿಸಿರುವ ಪಾದಯಾತ್ರೆಯಲ್ಲಿ ಭಾಗವಹಿಸಿದ್ದೇನೆ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

Siddaramaiah gandhiji congress march
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನ ವರುಣಾ ವಿಧಾನಸಭೆ ಕ್ಷೇತ್ರದ ತಗಡೂರಿನಲ್ಲಿ ಇಂದು ಆಯೋಜಿಸಿದ್ದ ಪಾದಯಾತ್ರೆ ಆರಂಭಕ್ಕೂ ಮುನ್ನ ಮಹಾತ್ಮಾ ಗಾಂಧೀಜಿ ಪುತ್ಥಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಸ್ವಾತಂತ್ರ್ಯ ಲಭಿಸಿ 50 ವರ್ಷ ಕಳೆದರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್‌) ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ, ಇದೀಗ ತಿರಂಗಾ ಯಾತ್ರೆ ಎನ್ನುವುದೆಲ್ಲ ನಾಟಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ರಾಜ್ಯ ಕಾಂಗ್ರೆಸ್‌ ಪಕ್ಷದ ವತಿಯಿಂದ ಆಯೋಜಿಸಿರುವ ಪಾದಯಾತ್ರೆಯ ಸಲುವಾಗಿ ವರುಣ ಕ್ಷೇತ್ರದಲ್ಲಿ ಭಾಗವಹಿಸಲು ತೆರಳುವ ಮುನ್ನ ಮೈಸೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಹಾಗೂ ನಂತರ ವರುಣ ಕ್ಷೇತ್ರದಲ್ಲಿ ನಾಗರಿಕರನ್ನುದ್ದೇಶಿಸಿ ಮಾತನಾಡಿದ್ದಾರೆ.

ಆರ್‌ಎಸ್‌ಎಸ್‌ ಅಧ್ಯಕ್ಷರಾಗಿದ್ದ ಗೋಳ್ವಲ್ಕರ್‌, ಹಿಂದೂ ಮಹಾಸಭಾದ ಸಾರ್ವಕರ್, ರಾಷ್ಟ್ರಧ್ವಜವನ್ನು ವಿರೋಧಿಸಿದ್ದರು. ಬಿಜೆಪಿ ಮುಖವಾಣಿ ಆರ್ಗನೈಸರ್‌ ಎಂಬ ಪತ್ರಿಕೆ ವಿರೋಧ ಮಾಡಿತ್ತು. ನಾಗಪುರದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ 50 ವರ್ಷ ರಾಷ್ಟ್ರಧ್ವಜವನ್ನೇ ಹಾರಿಸಿರಲಿಲ್ಲ. ಅಲ್ಲಿಯವರೆಗೆ ಕೇವಲ ಭಗವಾಧ್ವಜ ಹಾರಿಸುತ್ತಿದ್ದರು. ಈಗ ಹರ್ ಘರ್ ತಿರಂಗ ಎಂದು ನಾಟಕ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆ ಆಗಲ್ವ?

ನಿಮಗೆ ಕೈಮುಗಿದು ಮನವಿ ಮಾಡುತ್ತೇನೆ, ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬೇಡಿ. ನೀವು ಹುಷಾರಾಗಿರಿ.
ಈ ಜೆಡಿಎಸ್‌ ಗಿರಾಕಿಗಳ ಬಗ್ಗೆ ಮಾತನಾಡಲ್ಲ ಎಂದ ಸಿದ್ದರಾಮಯ್ಯ, ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಘೋಷಣೆಯನ್ನು ಅಣಕಿಸಿದರು. ಇದು ಸಬ್ ಕ ವಿಕಾಸ್ ನಹೀ, ಸಬ್ ಕ ಸರ್ವನಾಶ್. ನಾನು ಸ್ವಾತಂತ್ರ್ಯ ಬರುವುದಕ್ಕೂ 12 ದಿನ ಮುಂಚೆ ಹುಟ್ಟಿದ್ದೆ. ಈ ನರೇಂದ್ರ ಮೋದಿ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ.
17 ವರ್ಷ ನೆಹರೂ ಪ್ರಧಾನಿ ಆಗಿದ್ದರು. ಆಗ ಆಣೆಕಟ್ಟೆ, ಸೈನ್ಯ, ಆಹಾರ ಉತ್ಪಾದನೆ, ಸಾಕ್ಷರತೆ ಇರಲಿಲ್ಲ. ಈಗ ಸಾಕ್ಷರತೆ ಪ್ರಮಾಣ ಶೇ. 78 ಇದೆ. ಆಗ ಅಮೆರಿಕದ ಮುಂದೆ ಊಟಕ್ಕೆ ಕೈಚಾಚುವ ಪರಿಸ್ಥಿತಿ ಇತ್ತು. ಎರಡು ಹೊತ್ತು ಊಟ ಮಾಡುವ ಶಕ್ತಿ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಇಂದಿರಾಗಾಂಧಿ, ಬಾಬೂ ಜಗಜೀವನ ರಾಮ್ ಆಹಾರ ಕ್ರಾಂತಿ ಮಾಡಿದರು. ಆಗೆಲ್ಲ ಈ ಬಿಜೆಪಿಯವರು ಎಲ್ಲಿದ್ದರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದನ್ನೂ ಓದಿ | ಸಿದ್ದರಾಮೋತ್ಸವಕ್ಕೆ ರಾಹುಲ್‌ ಬಂದಿದ್ರು; ಆಗಸ್ಟ್‌ 15ಕ್ಕೆ ಪ್ರಿಯಾಂಕಾ ಗಾಂಧಿ ಬರ್ತಾರ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

T20 World Cup 2007: ಭಾರತ ಪರ ಬೌಲಿಂಗ್​ನಲ್ಲಿ ಇರ್ಫಾನ್​ ಪಠಾಣ್​ (16 ಕ್ಕೆ 3), ಆರ್​.ಪಿ ಸಿಂಗ್​(24ಕ್ಕೆ 3), ಜೋಗಿಂದರ್ ಶರ್ಮಾ(20ಕ್ಕೆ 2) ವಿಕೆಟ್​ ಕಿತ್ತು ಮಿಂಚಿದ್ದರು.

VISTARANEWS.COM


on

T20 World Cup 2007
Koo

ಬೆಂಗಳೂರು: ಟಿ20 ಎಂಬ ಚುಟುಕು ಮಾದರಿಯ ಮೊದಲ ವಿಶ್ವಕಪ್(ICC World T20 2007) ಗೆದ್ದ ದಾಖಲೆ ಭಾರತ ತಂಡದ ಹೆಸರಿನಲ್ಲಿದೆ. 2007 ಸೆ. 24ರಂದು(T20 World Cup 2007) ಮಹೇಂದ್ರ ಸಿಂಗ್ ಧೋನಿ(ms dhoni) ನೇತೃತ್ವದ ಯುವ ಭಾರತ ತಂಡ ವಿಶ್ವಕಪ್ ಗೆದ್ದು ಬೀಗಿತ್ತು. ದುರಾದೃಷ್ಟವೆಂದರೆ ಆ ಬಳಿಕ ಭಾರತ ಇದುವರೆಗೂ ಒಂದೂ ಟ್ರೋಫಿ ಗೆದ್ದಿಲ್ಲ. ಇದೀಗ 17 ವರ್ಷಗಳ ಬಳಿಕ ಭಾರತ ಕಪ್​ ಗೆದ್ದು ಬೀಗೀತೇ ಎಂದು ಕಾದು ನೋಡಬೇಕಿದೆ. ಚೊಚ್ಚಲ ಟಿ20 ವಿಶ್ವಕಪ್​ ಫೈನಲ್​ನ ಮೆಲುಕು ನೋಟ ಇಂತಿದೆ.

ಅದು, ವೆಸ್ಟ್‌ ಇಂಡೀಸ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಹೀನಾಯವಾಗಿ ಸೋಲು ಕಂಡ ವರ್ಷವಾಗಿತ್ತು. ಈ ಸೋಲಿನಿಂದ ಕಂಗೆಟ್ಟಿದ್ದ ಸಚಿನ್​ ತೆಂಡೂಲ್ಕರ್​, ರಾಹುಲ್​ ದ್ರಾವಿಡ್​, ಸೌರವ್​ ಗಂಗೂಲಿ ಸೇರಿ ಖ್ಯಾತನಾಮ ಆಟಗಾರರು ಈ ಟೂರ್ನಿಯಲ್ಲಿ ಆಡಲು ಹಿಂದೇಟು ಹಾಕಿದರು. ಎಲ್ಲರು ವಿಶ್ರಾಂತಿ ಬಯಸಿದರು. ದಿಕ್ಕು ತೋಚದೆ ಬಿಸಿಸಿಐ ಆಗಿದ್ದಾಗಲಿ ಎಂದು ವಿಕೆಟ್‌ಕೀಪರ್ ಧೋನಿಗೆ ನಾಯಕತ್ವ ನೀಡಿ ಯುವ ಪಡೆಯನ್ನು ಕಣಕ್ಕಿಳಿಸಿತು. ಧೋನಿ ನೇತೃತ್ವದ ಯುವಪಡೆ ತಮ್ಮ ಮೊದಲ ಪ್ರಯತ್ನದಲೇ ಕಪ್​ ಗೆದ್ದು ಇತಿಹಾಸ ಸೃಷ್ಟಿಸಿತ್ತು.

ಹಲವು ಅಚ್ಚರಿ


ಕೂಟದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿ ಭಾರತ ತಂಡ ಫೈನಲ್ ಪ್ರವೇಶ ಪಡೆದಿತ್ತು. ಲೀಗ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಬಾಲ್ ಔಟ್ ಮುಖಾಂತರ ಜಯ ಸಾಧಿಸಿದ್ದ ಭಾರತ ಮತ್ತೊಂದು ಹೈ ವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿತ್ತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 157 ರನ್ ಗಳಿಸಿತು. ಗೌತಮ್ ಗಂಭೀರ್ 75 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ 30 ರನ್ ಕೊಡುಗೆ ನೀಡಿದ್ದರು. ಉಳಿದ ಯಾರಿಂದಲೂ ಹೇಳಿಕೊಳ್ಳುವ ಪ್ರದರ್ಶನ ತಂಡಕ್ಕೆ ಸಿಗಲಿಲ್ಲ. ಪಾಕ್ ಪರ ಉಮರ್ ಗುಲ್ ಮೂರು ವಿಕೆಟ್ ಕಿತ್ತಿದ್ದರು.

ಇದನ್ನೂ ಓದಿ T20 World Cup 2024: ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳು ಯಾರು?

ಸಾಧಾರಣ ಗುರಿ ಬೆನ್ನತ್ತಿದ್ದ ಪಾಕ್​ ಓಂದೆಡೆ ವಿಕೆಟ್ ಬೀಳುತ್ತಿದ್ದರೂ ಮಿಸ್ಬಾ ಉಲ್ ಹಕ್ ನಿಂತು ಆಡುತ್ತಿದ್ದರು. ಕೊನೆಯ ಓವರ್ ನಲ್ಲಿ 13 ರನ್ ಬೇಕಾಗಿತ್ತು. ಕೈಯಲ್ಲಿ ಇದ್ದಿದ್ದು ಒಂದು ವಿಕೆಟ್. ಜೋಗಿಂದರ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಮಿಸ್ಬಾ ಮೂರನೇ ಎಸೆತವನ್ನು ಫೈನ್ ಲೆಗ್​ಗೆ ಸ್ಕೂಪ್ ಮಾಡಿದ್ದರು. ಆದರೆ ಚೆಂಡು ಶ್ರೀಶಾಂತ್ ಕೈ ಸೇರಿತ್ತು. ಪಾಕಿಸ್ತಾನ ಆಲ್​ಔಟ್​ ಆಯಿತು. ಭಾರತ ಕೇವಲ 5 ರನ್​ ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಇಲ್ಲಿದ ಧೋನಿ ಯುವ ಕೂಡ ಆರಂಭವಾಯಿತು. ಭಾರತ ಪರ ಬೌಲಿಂಗ್​ನಲ್ಲಿ ಇರ್ಫಾನ್​ ಪಠಾಣ್​ (16 ಕ್ಕೆ 3), ಆರ್​.ಪಿ ಸಿಂಗ್​(24ಕ್ಕೆ 3), ಜೋಗಿಂದರ್ ಶರ್ಮಾ(20ಕ್ಕೆ 2) ವಿಕೆಟ್​ ಕಿತ್ತು ಮಿಂಚಿದ್ದರು.

Continue Reading

ಪ್ರಮುಖ ಸುದ್ದಿ

Prajwal Revanna Case: ಹೇಗಿರುತ್ತೆ ಇಂದು ಪ್ರಜ್ವಲ್‌ ರೇವಣ್ಣಗೆ ಎಸ್‌ಐಟಿ ʼಸ್ವಾಗತʼ?

Prajwal Revanna Case: ಪ್ರಜ್ವಲ್ ರೇವಣ್ಣ ಬೋರ್ಡಿಂಗ್ ಖಚಿತ ನಂತರ ಎಸ್ಐಟಿಗೆ ಅಲರ್ಟ್ ಬರಲಿದೆ. ಇಮಿಗ್ರೇಶನ್ ತಂಡದೊಂದಿಗೆ ಎಸ್ಐಟಿ ಸಜ್ಜಾಗಲಿದೆ. ಟರ್ಮಿನಲ್ 2ಗೆ ಪ್ರಜ್ವಲ್ ಪ್ರಯಾಣಿಸುತ್ತಿರುವ ವಿಮಾನ ಬಂದ ಕೂಡಲೇ ವಿಮಾನದ ಬಳಿ ತೆರಳಲಿರುವ ಎಸ್ಐಟಿ ಹಾಗೂ ಸಿಐಎಸ್ಎಫ್ ಅಧಿಕಾರಿಗಳು, ಮೊದಲು ವಿಮಾನದಿಂದ ಪ್ರಜ್ವಲ್‌ನನ್ನು ಮಾತ್ರ ಡಿಬೋರ್ಡಿಂಗ್ ಮಾಡಿಸಲಿದ್ದಾರೆ.

VISTARANEWS.COM


on

prajwal revanna case airport
Koo

ಬೆಂಗಳೂರು: ಇಂದು ಮಧ್ಯರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda international Airport) ಅಶ್ಲೀಲ ವಿಡಿಯೋ (Obscene video) ಹಗರಣದ ಆರೋಪಿ, ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ, ಅವರನ್ನು ʼಸ್ವಾಗತಿಸಲುʼ ಎಸ್‌ಐಟಿ (SIT) ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

ಇಮಿಗ್ರೇಶನ್ ಡೆಸ್ಕ್‌ನಲ್ಲಿ (Immigration desk) ಸಿಐಎಸ್ಎಫ್ (CISF) ಹಾಗೂ ಎಸ್ಐಟಿ ತಂಡದ ತಲಾ ಓರ್ವ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ವಿಮಾನ ಆಗಮಿಸುವ ಮೂರು ಗಂಟೆ ಮುಂಚಿತವಾಗಿ ಇಮಿಗ್ರೇಶನ್ ಡೆಸ್ಕ್‌ಗೆ ಪ್ರಯಾಣಿಕರ ಪಟ್ಟಿ ಬರಲಿದೆ. Lufthansa ವಿಮಾನ ಕಂಪನಿಗೆ ಸೂಚನೆ ನೀಡಲಾಗಿದ್ದು, ಪ್ರಜ್ವಲ್ ರೇವಣ್ಣ ಮ್ಯೂನಿಚ್‌ನಲ್ಲಿ ಬೋರ್ಡಿಂಗ್ ಆಗುವ ಮಾಹಿತಿ ನೀಡಲು ಸೂಚನೆ ಕೊಡಲಾಗಿದೆ.

ಪ್ರಜ್ವಲ್ ರೇವಣ್ಣ ಬೋರ್ಡಿಂಗ್ ಖಚಿತ ನಂತರ ಎಸ್ಐಟಿಗೆ ಅಲರ್ಟ್ ಬರಲಿದೆ. ಇಮಿಗ್ರೇಶನ್ ತಂಡದೊಂದಿಗೆ ಎಸ್ಐಟಿ ಸಜ್ಜಾಗಲಿದೆ. ಟರ್ಮಿನಲ್ 2ಗೆ ಪ್ರಜ್ವಲ್ ಪ್ರಯಾಣಿಸುತ್ತಿರುವ ವಿಮಾನ ಬಂದ ಕೂಡಲೇ ವಿಮಾನದ ಬಳಿ ತೆರಳಲಿರುವ ಎಸ್ಐಟಿ ಹಾಗೂ ಸಿಐಎಸ್ಎಫ್ ಅಧಿಕಾರಿಗಳು, ಮೊದಲು ವಿಮಾನದಿಂದ ಪ್ರಜ್ವಲ್‌ನನ್ನು ಮಾತ್ರ ಡಿಬೋರ್ಡಿಂಗ್ ಮಾಡಿಸಲಿದ್ದಾರೆ.

ಪ್ರಜ್ವಲ್‌ಗೆ ಸಂಬಂಧಿಸಿದ ಲಗೇಜ್ ಹಾಗೂ ಬ್ಯಾಗ್ ನೇರವಾಗಿ ಇಮಿಗ್ರೇಶನ್ ಡೆಸ್ಕ್‌ಗೆ ತರಲು ಸೂಚಿಸಲಾಗುತ್ತದೆ. ಇಮಿಗ್ರೇಶನ್ ಡೆಸ್ಕ್ ಬಳಿ ಪ್ರಜ್ವಲ್ ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್‌ಗೆ ಸ್ಟಾಂಪ್ ಹಾಕಿಸಿಕೊಂಡು, ಸ್ಟಾಂಪ್ ಆದ ಕೂಡಲೇ ನೇರವಾಗಿ ಎಸ್ಐಟಿ ವಶಕ್ಕೆ ಪಡೆಯಲಾಗುತ್ತದೆ. ಪಾಸ್‌ಪೋರ್ಟ್‌, ವೀಸಾ ಇತ್ಯಾದಿಗಳನ್ನು ಜಪ್ತಿ ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್ ರೇವಣ್ಣ ಯಾವುದೇ ವಿಮಾನದಲ್ಲಿ ಬಂದರೂ ಇದೇ ಪ್ರಕ್ರಿಯೆ ನಡೆಯಲಿದೆ.

ಫ್ಲೈಟ್ ಟಿಕೆಟ್ ಬುಕ್‌ ಮಾಡಿರುವ ಆಧಾರದಂತೆ ಇಂದು ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯರಾತ್ರಿ 12.35ಕ್ಕೆ ಟರ್ಮಿನಲ್ 2ಗೆ ಆಗಮಿಸಲಿರುವ ಪ್ರಜ್ವಲ್ ಅನ್ನು ʼಸ್ವಾಗತಿಸಲುʼ ಟರ್ಮಿನಲ್ 2ನಲ್ಲಿ ಎಸ್ಐಟಿ ತಂಡ ಬೀಡು ಬಿಟ್ಟಿದೆ. ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ವಿಮಾನ ಹತ್ತಿದ್ದಾರೆಯೇ ಇಲ್ಲವೇ ಎಂಬುದು ಖಚಿತವಾಗಲಿದೆ.

ಪ್ರಜ್ವಲ್ ವಿಡಿಯೋ ಮಾಡಿ ಕಳಿಸಿರುವುದು ಎಲ್ಲಿಂದ ಎಂಬುದನ್ನು ನಿನ್ನೆಯೇ ಎಸ್‌ಐಟಿ ಪತ್ತೆ ಹಚ್ಚಿದೆ. ಯುರೋಪ್‌ನ ಹಂಗೇರಿನಿಂದ ಈ ವಿಡಿಯೋ ಬಿಡುಗಡೆಯಾಗಿದೆ. ಅಲ್ಲಿಂದ ಮ್ಯೂನಿಚ್‌ಗೆ ಬಂದು ಪ್ರಜ್ವಲ್‌ ವಿಮಾನ ಹಿಡಿಯಬೇಕಿದೆ. ಹಂಗೇರಿ, ಬುಡಾಪೆಸ್ಟ್‌, ಜರ್ಮನಿ ಎಂದು ಕಳೆದ ಒಂದು ತಿಂಗಳಿನಿಂದ ಪ್ರಜ್ವಲ್‌ ಓಡಾಡುತ್ತಿದ್ದಾರೆ. ಅವರು ಇಲ್ಲೆಲ್ಲಾ ತಮ್ಮ ಗೆಳೆಯರ ಆಶ್ರಯ ಪಡೆದಿದ್ದರೇ, ಎಲ್ಲಿ ತಂಗಿದ್ದರು ಎಂಬ ಮಾಹಿತಿ ದೊರೆಯಬೇಕಿದೆ.

ನಿಜಕ್ಕೂ ವಾಪಸಾಗ್ತಾರಾ ಪ್ರಜ್ವಲ್?‌

ಪ್ರಜ್ವಲ್ ರೇವಣ್ಣ ಕುಟುಂಬ ಸಲ್ಲಿಸಿದ ಜಾಮೀನು ಅರ್ಜಿಗಳೆಲ್ಲವೂ ಕೂಡ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಮುಂದೂಡಿಕೆ ಆಗುತ್ತಲೇ ಇವೆ. ಹೀಗಾಗಿ ಪ್ರತಿ ದಿನ ರೇವಣ್ಣ ಕುಟುಂಬ ಟೆನ್ಷನ್‌ನಲ್ಲಿರಬೇಕಾಗಿದೆ. ನಿನ್ನೆ ನಡೆದ ಭವಾನಿ ರೇವಣ್ಣ ಅವರ ಸುದೀರ್ಘ ವಿಚಾರಣೆ ಬಳಿಕವೂ ವಿಚಾರಣೆಯನ್ನು ಮುಂದೂಡಲಾಗಿದೆ. ಈ ಬೆಳವಣಿಗಯಿಂದ ಪ್ರಜ್ವಲ್ ವಾಪಾಸಾಗ್ತಾರಾ ಎಂಬುದೇ ಅನುಮಾನಕ್ಕೀಡು ಮಾಡಿದೆ.‌

ಪ್ರಜ್ವಲ್ ಬರುತ್ತಿದ್ದಂತೆ SIT ಅಧಿಕಾರಿಗಳು ಪ್ರಜ್ವಲ್‌ರನ್ನು ಬಂಧಿಸಲು ಸಿದ್ಧರಾಗಿದ್ದಾರೆ. ಅದಕ್ಕೂ ಮುನ್ನ ಹೈ ಅಲಟ್೯ ಆದ ಪ್ರಜ್ವಲ್ ರೇವಣ್ಣ, ಇದೇ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಅವಕಾಶ ನೀಡದ ನ್ಯಾಯಾಲಯ, ಮೊದಲು ಅವರು ಬರಲಿ ಆಮೇಲೆ ನೋಡೋಣ, ಮೇ 31ಕ್ಕೆ ಅರ್ಜಿ ವಿಚಾರಣೆ ಮಾಡೋಣ ಅಂತ ಹೇಳಿ SIT ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಸದ್ಯ 3 ಪ್ರಕರಣಗಳಲ್ಲೂ ನಿರೀಕ್ಷಣಾ ಜಾಮೀನಿಗೆ ಪ್ರಜ್ವಲ್‌ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ಪೊಲೀಸ್ ಠಾಣೆ, ಸೈಬರ್ ಕ್ರೈಂ ಠಾಣೆ, ಹೊಳೆನರಸೀಪುರ ಠಾಣೆಗಳಲ್ಲಿ ಕೇಸ್‌ ದಾಖಲಾಗಿವೆ.

ಮೈಸೂರಿನ ಕೆ.ಆರ್. ನಗರ ಠಾಣೆಯ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸ್ ವಿಚಾರದಲ್ಲಿ ಭವಾನಿ ರೇವಣ್ಣಗೆ ಬಂಧನದ ಭೀತಿ ಶುರುವಾಗಿದೆ. ಇದೇ ವಿಚಾರಕ್ಕೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, SIT ಕೂಡಾ ಆಕ್ಷೇಪಣಾ ಅರ್ಜಿ ಸಲ್ಲಿಸಿ ಯಾವುದೇ ಕಾರಣಕ್ಕೂ ಭವಾನಿ ರೇವಣ್ಣಗೆ ಜಾಮೀನು ಮಂಜೂರು ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ವಿಚಾರದ ಆದೇಶವನ್ನು ಮೇ 31ಕ್ಕೆ ಮುಂದೂಡಿದ್ದಾರೆ.

ತನಿಖೆಗೆ ಸಹಕರಿಸುವುದಾಗಿ ಪ್ರಜ್ವಲ್‌ ಹೇಳಿದ್ದಾರೆ. ಆದರೆ ನಿರೀಕ್ಷಣಾ ಜಾಮೀನು ಸಿಗದ ಹಿನ್ನೆಲೆಯಲ್ಲಿ, ಬಂಧನ ತಪ್ಪಿಸಿಕೊಳ್ಳಲು ಅಲ್ಲೇ ಉಳಿಯುವ ಚಿಂತನೆ ಮಾಡುವ ಸಾಧ್ಯತೆಯೂ ಇದೆ. ಕಳೆದ ಬಾರಿಯೂ SIT ವಿಚಾರಣೆಗೆ ಬರಲು ಪ್ರಜ್ವಲ್‌ ಒಂದು ವಾರ ಕಾಲಾವಕಾಶ ಕೇಳಿದ್ದರು. ಆದರೆ ಒಂದು ತಿಂಗಳ ನಂತರವೂ SIT ವಿಚಾರಣೆಗೆ ಬಂದಿಲ್ಲ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಆಗಮನಕ್ಕೆ ಕೌಂಟ್‌ಡೌನ್‌, ವಿಮಾನ ಏರ್ತಾರಾ ಇಲ್ವಾ?

Continue Reading

ಉದ್ಯೋಗ

Job Alert: ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿದೆ ಗುಡ್‌ನ್ಯೂಸ್‌; ಪಶುಪಾಲನಾ ನಿಗಮದಿಂದ 5,250 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Job Alert: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಬರೋಬ್ಬರಿ 5,250 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದ್ದು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನ ಜೂನ್‌ 2.

VISTARANEWS.COM


on

Job Alert
Koo

ಬೆಂಗಳೂರು: ಒಂದೊಳ್ಳೆ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ (Bhartiya Pashupalan Nigam Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BPNL Recruitment 2024). ಬರೋಬ್ಬರಿ 5,250 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದ್ದು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನ ಜೂನ್‌ 2 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಕೃಷಿ ನಿರ್ವಹಣಾ ಅಧಿಕಾರಿ (Farming Management Officer) – 250, ಕೃಷಿ ಅಭಿವೃದ್ಧಿ ಅಧಿಕಾರಿ (Farming Development Officer) – 1,250 ಮತ್ತು ಕೃಷಿ ಸ್ಫೂರ್ತಿ (Farming Inspiration) – 3,750 ಹುದ್ದೆಗಳು ಖಾಲಿ ಇವೆ. ಅಂಗೀಕೃತ ವಿಶ್ವ ವಿದ್ಯನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಕೃಷಿ ನಿರ್ವಹಣಾ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಕೃಷಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ದ್ವಿತೀಯ ಪಿಯುಸಿ ತೇರ್ಗಡೆ. ಇನ್ನು ಕೃಷಿ ಸ್ಫೂರ್ತಿ ಹುದ್ದೆಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ

ಕೃಷಿ ನಿರ್ವಹಣಾ ಅಧಿಕಾರಿ – 25-45 ವರ್ಷ, ಕೃಷಿ ಅಭಿವೃದ್ಧಿ ಅಧಿಕಾರಿ – 21-40 ವರ್ಷ ಮತ್ತು ಕೃಷಿ ಸ್ಫೂರ್ತಿ – 18-40 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವರ್ಗಕ್ಕೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ವರ್ಗಕ್ಕೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕದಲ್ಲಿ ವ್ಯತ್ಯಾಸವಿದೆ. ಕೃಷಿ ನಿರ್ವಹಣಾ ಅಧಿಕಾರಿ – 944 ರೂ., ಕೃಷಿ ಅಭಿವೃದ್ಧಿ ಅಧಿಕಾರಿ – 826 ರೂ. ಮತ್ತು ಕೃಷಿ ಸ್ಫೂರ್ತಿ – 708 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಒಂದೇ ತೆರನಾಗಿದ್ದು, ಆನ್‌ಲೈನ್‌ ಮೂಲಕ ಪಾವತಿಸಬೇಕು. ಆನ್‌ಲೈನ್‌ ಪರೀಕ್ಷೆ, ಡಾಕ್ಯುಮೆಂಟ್‌ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಮಾಸಿಕ ವೇತನ

ಕೃಷಿ ನಿರ್ವಹಣಾ ಅಧಿಕಾರಿ – 50,000 ರೂ., ಕೃಷಿ ಅಭಿವೃದ್ಧಿ ಅಧಿಕಾರಿ – 40,000 ರೂ. ಮತ್ತು ಕೃಷಿ ಸ್ಫೂರ್ತಿ – 25,000 ರೂ. ಮಾಸಿಕ ವೇತನ ಲಭ್ಯ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಅಗತ್ಯ ಮಾಹಿತಿಗಳನ್ನು ತುಂಬಿ.
  • ಅಗತ್ಯವಾದ ಡಾಕ್ಯುಮೆಂಟ್‌, ಫೋಟೊ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಎಲ್ಲವೂ ಸರಿ ಇದೆ ಎಂದು ಖಚಿತಪಡಿಸಿ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಇದನ್ನೂ ಓದಿ: Job Alert: ಗುಡ್‌ನ್ಯೂಸ್‌; ರೈಲ್ವೆ ಇಲಾಖೆಯಲ್ಲಿದೆ 1,202 ಹುದ್ದೆ: ಐಟಿಐ ಪಾಸಾದವರೂ ಅಪ್ಲೈ ಮಾಡಿ

Continue Reading

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್‌ ರೇವಣ್ಣ ಆಗಮನಕ್ಕೆ ಕೌಂಟ್‌ಡೌನ್‌, ವಿಮಾನ ಏರ್ತಾರಾ ಇಲ್ವಾ?

Prajwal Revanna Case: ಫ್ಲೈಟ್ ಟಿಕೆಟ್ ಬುಕ್‌ ಮಾಡಿರುವ ಆಧಾರದಂತೆ ಇಂದು ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯರಾತ್ರಿ 12.35ಕ್ಕೆ ಟರ್ಮಿನಲ್ 2ಗೆ ಆಗಮಿಸಲಿರುವ ಪ್ರಜ್ವಲ್ ಅನ್ನು ʼಸ್ವಾಗತಿಸಲುʼ ಟರ್ಮಿನಲ್ 2ನಲ್ಲಿ ಎಸ್ಐಟಿ ತಂಡ ಬೀಡು ಬಿಟ್ಟಿದೆ. ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ವಿಮಾನ ಹತ್ತಿದ್ದಾರೆಯೇ ಇಲ್ಲವೇ ಎಂಬುದು ಖಚಿತವಾಗಲಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ನಾಳೆ ಎಸ್ಐಟಿ (SIT) ಎದುರು ಹಾಜರಾಗುವುದಾಗಿ ಪ್ರಜ್ವಲ್ ರೇವಣ್ಣ (Prajwal Revanna Case) ಬಿಡುಗಡೆ ಮಾಡಿದ ವಿಡಿಯೋದಲ್ಲಿ (pen drive case) ಹೇಳಿರುವ ಹಾಗೂ ಇಂದು ಮಧ್ಯಾಹ್ನ ಜರ್ಮನಿಯ ಮ್ಯೂನಿಚ್‌ನಿಂದ ಪ್ರಜ್ವಲ್ ರೇವಣ್ಣ ಹೆಸರಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡಿರುವ ಹಿನ್ನೆಲೆಯಲ್ಲಿ, ಹಾಸನ ಸಂಸದರ (Hassan MP) ಬಂಧನಕ್ಕೆ ಪೊಲೀಸರು ಕ್ಷಣಗಣನೆ ಆರಂಭಿಸಿದ್ದಾರೆ.

ಫ್ಲೈಟ್ ಟಿಕೆಟ್ ಬುಕ್‌ ಮಾಡಿರುವ ಆಧಾರದಂತೆ ಇಂದು ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯರಾತ್ರಿ 12.35ಕ್ಕೆ ಟರ್ಮಿನಲ್ 2ಗೆ ಆಗಮಿಸಲಿರುವ ಪ್ರಜ್ವಲ್ ಅನ್ನು ʼಸ್ವಾಗತಿಸಲುʼ ಟರ್ಮಿನಲ್ 2ನಲ್ಲಿ ಎಸ್ಐಟಿ ತಂಡ ಬೀಡು ಬಿಟ್ಟಿದೆ. ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ವಿಮಾನ ಹತ್ತಿದ್ದಾರೆಯೇ ಇಲ್ಲವೇ ಎಂಬುದು ಖಚಿತವಾಗಲಿದೆ.

ಪ್ರಜ್ವಲ್ ವಿಡಿಯೋ ಮಾಡಿ ಕಳಿಸಿರುವುದು ಎಲ್ಲಿಂದ ಎಂಬುದನ್ನು ನಿನ್ನೆಯೇ ಎಸ್‌ಐಟಿ ಪತ್ತೆ ಹಚ್ಚಿದೆ. ಯುರೋಪ್‌ನ ಹಂಗೇರಿನಿಂದ ಈ ವಿಡಿಐೋ ಬಿಡುಗಡೆಯಾಗಿದೆ. ಅಲ್ಲಿಂದ ಮ್ಯೂನಿಚ್‌ಗೆ ಬಂದು ಪ್ರಜ್ವಲ್‌ ವಿಮಾನ ಹಿಡಿಯಬೇಕಿದೆ. ಹಂಗೇರಿ, ಬುಡಾಪೆಸ್ಟ್‌, ಜರ್ಮನಿ ಎಂದು ಕಳೆದ ಒಂದು ತಿಂಗಳಿನಿಂದ ಪ್ರಜ್ವಲ್‌ ಓಡಾಡುತ್ತಿದ್ದಾರೆ. ಅವರು ಇಲ್ಲೆಲ್ಲಾ ತಮ್ಮ ಗೆಳೆಯರ ಆಶ್ರಯ ಪಡೆದಿದ್ದರೇ, ಎಲ್ಲಿ ತಂಗಿದ್ದರು ಎಂಬ ಮಾಹಿತಿ ದೊರೆಯಬೇಕಿದೆ.

ಇನ್ನೊಂದೆಡೆ, ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ರೊಚ್ಚಿಗೆದ್ದಿರುವ ಮಹಿಳಾ ಸಂಘಟನೆಗಳು, ಕೆಂಪೇಗೌಡ ವಿಮಾನ ನಿಲ್ದಾಣದ ಮುಂದೆ ಪ್ರತಿಭಟನೆಗೆ ಇಳಿಯಲು ಸಿದ್ಧತೆ ನಡೆಸಿವೆ. ಹಾಸನದಲ್ಲಿ ಇಂದು ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ನೂರಕ್ಕೂ ಹೆಚ್ಚು ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಿಂದ 10 ಸಾವಿರಕ್ಕೂ ಹೆಚ್ಚು ಹೋರಾಟಗಾರರು ಆಗಮಿಸುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಸನದಲ್ಲಿ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿದೆ.

ನಿಜಕ್ಕೂ ವಾಪಸಾಗ್ತಾರಾ ಪ್ರಜ್ವಲ್?‌

ಪ್ರಜ್ವಲ್ ರೇವಣ್ಣ ಕುಟುಂಬ ಸಲ್ಲಿಸಿದ ಜಾಮೀನು ಅರ್ಜಿಗಳೆಲ್ಲವೂ ಕೂಡ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಮುಂದೂಡಿಕೆ ಆಗುತ್ತಲೇ ಇವೆ. ಹೀಗಾಗಿ ಪ್ರತಿ ದಿನ ರೇವಣ್ಣ ಕುಟುಂಬ ಟೆನ್ಷನ್‌ನಲ್ಲಿರಬೇಕಾಗಿದೆ. ನಿನ್ನೆ ನಡೆದ ಭವಾನಿ ರೇವಣ್ಣ ಅವರ ಸುದೀರ್ಘ ವಿಚಾರಣೆ ಬಳಿಕವೂ ವಿಚಾರಣೆಯನ್ನು ಮುಂದೂಡಲಾಗಿದೆ. ಈ ಬೆಳವಣಿಗಯಿಂದ ಪ್ರಜ್ವಲ್ ವಾಪಾಸಾಗ್ತಾರಾ ಎಂಬುದೇ ಅನುಮಾನಕ್ಕೀಡು ಮಾಡಿದೆ.‌

ಪ್ರಜ್ವಲ್ ಬರುತ್ತಿದ್ದಂತೆ SIT ಅಧಿಕಾರಿಗಳು ಪ್ರಜ್ವಲ್‌ರನ್ನು ಬಂಧಿಸಲು ಸಿದ್ಧರಾಗಿದ್ದಾರೆ. ಅದಕ್ಕೂ ಮುನ್ನ ಹೈ ಅಲಟ್೯ ಆದ ಪ್ರಜ್ವಲ್ ರೇವಣ್ಣ, ಇದೇ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಅವಕಾಶ ನೀಡದ ನ್ಯಾಯಾಲಯ, ಮೊದಲು ಅವರು ಬರಲಿ ಆಮೇಲೆ ನೋಡೋಣ, ಮೇ 31ಕ್ಕೆ ಅರ್ಜಿ ವಿಚಾರಣೆ ಮಾಡೋಣ ಅಂತ ಹೇಳಿ SIT ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಸದ್ಯ 3 ಪ್ರಕರಣಗಳಲ್ಲೂ ನಿರೀಕ್ಷಣಾ ಜಾಮೀನಿಗೆ ಪ್ರಜ್ವಲ್‌ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ಪೊಲೀಸ್ ಠಾಣೆ, ಸೈಬರ್ ಕ್ರೈಂ ಠಾಣೆ, ಹೊಳೆನರಸೀಪುರ ಠಾಣೆಗಳಲ್ಲಿ ಕೇಸ್‌ ದಾಖಲಾಗಿವೆ.

ಮೈಸೂರಿನ ಕೆ.ಆರ್. ನಗರ ಠಾಣೆಯ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸ್ ವಿಚಾರದಲ್ಲಿ ಭವಾನಿ ರೇವಣ್ಣಗೆ ಬಂಧನದ ಭೀತಿ ಶುರುವಾಗಿದೆ. ಇದೇ ವಿಚಾರಕ್ಕೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, SIT ಕೂಡಾ ಆಕ್ಷೇಪಣಾ ಅರ್ಜಿ ಸಲ್ಲಿಸಿ ಯಾವುದೇ ಕಾರಣಕ್ಕೂ ಭವಾನಿ ರೇವಣ್ಣಗೆ ಜಾಮೀನು ಮಂಜೂರು ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ವಿಚಾರದ ಆದೇಶವನ್ನು ಮೇ 31ಕ್ಕೆ ಮುಂದೂಡಿದ್ದಾರೆ.

ತನಿಖೆಗೆ ಸಹಕರಿಸುವುದಾಗಿ ಪ್ರಜ್ವಲ್‌ ಹೇಳಿದ್ದಾರೆ. ಆದರೆ ನಿರೀಕ್ಷಣಾ ಜಾಮೀನು ಸಿಗದ ಹಿನ್ನೆಲೆಯಲ್ಲಿ, ಬಂಧನ ತಪ್ಪಿಸಿಕೊಳ್ಳಲು ಅಲ್ಲೇ ಉಳಿಯುವ ಚಿಂತನೆ ಮಾಡುವ ಸಾಧ್ಯತೆಯೂ ಇದೆ. ಕಳೆದ ಬಾರಿಯೂ SIT ವಿಚಾರಣೆಗೆ ಬರಲು ಪ್ರಜ್ವಲ್‌ ಒಂದು ವಾರ ಕಾಲಾವಕಾಶ ಕೇಳಿದ್ದರು. ಆದರೆ ಒಂದು ತಿಂಗಳ ನಂತರವೂ SIT ವಿಚಾರಣೆಗೆ ಬಂದಿಲ್ಲ.

ಇದನ್ನೂ ಓದಿ: Prajwal Revanna Case: ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಟಿಕೆಟ್ ಬುಕ್; ನಾಳೆ ಮಧ್ಯಾಹ್ನ ಜರ್ಮನಿಯಿಂದ ಪ್ರಯಾಣ

Continue Reading
Advertisement
cylinder blast in Bengaluru
ಕ್ರೈಂ1 min ago

Fire Accident : ಗಾಢ ನಿದ್ರೆಯಲ್ಲಿರುವಾಗಲೇ ಸಿಲಿಂಡರ್‌ ಸ್ಫೋಟ; ಬೆಂಕಿಯ ಕೆನ್ನಾಲಿಗೆಗೆ ಐವರು ಗಂಭೀರ

T20 World Cup 2007
ಕ್ರಿಕೆಟ್22 mins ago

T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

Gold Rate Today
ಚಿನ್ನದ ದರ23 mins ago

Gold Rate Today: ತುಸು ಇಳಿಕೆ ಕಂಡ ಚಿನ್ನದ ಬೆಲೆ; ಇಲ್ಲಿದೆ ದರದ ವಿವರ

Munawar Faruqui second wife Mehzabeen Coatwala single mom and makeup artist
ಬಾಲಿವುಡ್23 mins ago

Munawar Faruqui:  ʻಬಿಗ್ ಬಾಸ್ 17ʼರ ವಿಜೇತ  ಮುನಾವರ್ ಫಾರೂಕಿ ಎರಡನೇ ಪತ್ನಿ ಸಿಂಗಲ್‌ ಪೇರೆಂಟ್‌!

Lokayukta Raid
ಕ್ರೈಂ44 mins ago

Lokayukta Raid : ಲಂಚಕ್ಕೆ ಕೈವೊಡ್ಡಿದ ಕೆಆರ್‌ ಆಸ್ಪತ್ರೆ ವೈದ್ಯನಿಗೆ 4 ವರ್ಷ ಶಿಕ್ಷೆ, 50 ಸಾವಿರ ರೂ. ದಂಡ

Illegal Bangla Immigrants
ಕ್ರೈಂ56 mins ago

Illegal Bangla Immigrants: ಸಿಸಿಬಿ ದಾಳಿ, ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Viral News
ವೈರಲ್ ನ್ಯೂಸ್59 mins ago

Viral News: ಸರ ಕದ್ದು ಪರಾರಿಯಾಗಲು ಬೈಕ್‌ ಏರಿದವರಿಗೆ ಕಾದಿತ್ತು ಶಾಕ್‌; ವಿಡಿಯೊ ಇಲ್ಲಿದೆ

PM Narendra Modi
ದೇಶ1 hour ago

PM Narendra Modi: ಮೋದಿ ಧ್ಯಾನ ಮಾಡುವುದು ನೀತಿ ಸಂಹಿತೆ ಉಲ್ಲಂಘನೆಯೆ? ಕಾನೂನು ತಜ್ಞರ ಅಭಿಪ್ರಾಯ ಹೀಗಿದೆ

Saanvi Sudeep New Tattoo Piku meaning
ಸ್ಯಾಂಡಲ್ ವುಡ್1 hour ago

Saanvi Sudeep: ಟ್ಯಾಟೂ ಹಾಕಿಸಿಕೊಂಡ ಕಿಚ್ಚ ಸುದೀಪ್‌ ಮುದ್ದಿನ ಮಗಳು: ʻPIKUʼ ಅರ್ಥ ಏನು?

Nandamuri Balakrishna Pushes Away Actress Anjali
ಟಾಲಿವುಡ್1 hour ago

Nandamuri Balakrishna: ಕುಡಿದು ಬಂದು ವೇದಿಕೆ ಮೇಲೆ ನಟಿ ಅಂಜಲಿಯನ್ನು ತಳ್ಳಿದ್ರಾ ಬಾಲಯ್ಯ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌