Krishna Janmashtami: ಸೆ.6ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ; ಬೆಂಗಳೂರಿನಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ - Vistara News

ನೋಟಿಸ್ ಬೋರ್ಡ

Krishna Janmashtami: ಸೆ.6ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ; ಬೆಂಗಳೂರಿನಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

Krishna Janmashtami: ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಪಾಲಿಕೆ ಸುತ್ತೋಲೆ ಹೊರಡಿಸಿಲ್ಲ.

VISTARANEWS.COM


on

BBMP office
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ (Krishna Janmashtami) ಸೆ.6ರಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಇದನ್ನೂ ಓದಿ | Krishna Janmashtami : ವಿಸ್ತಾರ ನ್ಯೂಸ್‌ನಲ್ಲಿ ನಿಮ್ಮ ಮನೆಯ ಮುದ್ದು ಕೃಷ್ಣರ ದರ್ಶನ; ಇನ್ನೇಕೆ ತಡ ಫೋಟೊ ಕಳಿಸಿ!

ವಿಸ್ತಾರ ನ್ಯೂಸ್‌ನಲ್ಲಿ ನಿಮ್ಮ ಮನೆಯ ಮುದ್ದು ಕೃಷ್ಣರ ದರ್ಶನ; ಇನ್ನೇಕೆ ತಡ ಫೋಟೊ ಕಳಿಸಿ!

ಬೆಂಗಳೂರು: ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಜನಿಸಿದ್ದಾನೆ. ಅಷ್ಟಮಿಯ ಮಧ್ಯರಾತ್ರಿ ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಕೃಷ್ಣ ಹುಟ್ಟಿದ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ (Krishna Janmashtami) ಅಥವಾ ಗೋಕುಲಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಿಂದು ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ಇದೇ ವೇಳೆ ಮನೆಗಳಲ್ಲಿ ತಮ್ಮ ಪುಟಾಣಿ, ಮುದ್ದು ಕಂದಮ್ಮಗಳಿಗೆ ಶ್ರೀಕೃಷ್ಣನ ವೇಷವನ್ನು ಹಾಕಿ ಸಂಭ್ರಮಿಸುವ ಪರಿಪಾಠವೂ ಬೆಳೆದುಬಂದಿದೆ. ಜತೆಗೆ, ಪುಟಾಣಿಗಳ ಅಂಗಾಲಿಗೆ ಬಣ್ಣ ಹಚ್ಚಿ ಮನೆಯಲ್ಲಿ ಹೆಜ್ಜೆಯನ್ನಿಡಿಸಿ ಖುಷಿಪಡುತ್ತಾರೆ. ಚೆಂದ ಚೆಂದದ ಫೋಟೊಗಳನ್ನು ತೆಗೆದು ಸಂತಸಪಡುತ್ತಾರೆ. ಈಗ ನಿಮ್ಮ ಸಂತಸದ ಈ ಕ್ಷಣಕ್ಕೆ ವಿಸ್ತಾರ ನ್ಯೂಸ್‌ ವೇದಿಕೆಯನ್ನು ಒದಗಿಸುತ್ತಿದೆ. ನಿಮ್ಮ ಕಂದಮ್ಮಗಳಿಗೆ ಶ್ರೀಕೃಷ್ಣನ ವೇಷ ಹಾಕಿ ಫೋಟೊ ತೆಗೆದು ನಮಗೆ ಕಳುಹಿಸಿದರೆ, ಪ್ರಕಟಿಸಲಾಗುತ್ತದೆ.

Krishna Janmashtami photoshoot published in vistara news

ನಿಮ್ಮ ಮನೆಯ ಪುಟ್ಟ ಗೋಪಾಲನ ದರ್ಶನಕ್ಕೆ ನಾವು “ವಿಸ್ತಾರ ನ್ಯೂಸ್”‌ ಮೂಲಕ ಅವಕಾಶವನ್ನು ಕಲ್ಪಿಸುತ್ತಿದ್ದೇವೆ. ನೀವು ನಿಮ್ಮ ಮಗುವಿಗೆ ಶ್ರೀಕೃಷ್ಣನ ವೇಷ ಹಾಕಿ ಒಂದು ಚೆಂದದ ಭಂಗಿಯಲ್ಲಿ ಫೋಟೊ ತೆಗೆದು ನಮಗೆ ಕಳುಹಿಸಿದರೆ ಸಾಕು. ನಾವು ನಿಮ್ಮ ಮನೆಯ ಮುದ್ದು ಕೃಷ್ಣನ ಫೋಟೊವನ್ನು ಪ್ರಕಟಿಸುತ್ತೇವೆ.

Krishna Janmashtami photoshoot published in vistara news

ಇದಕ್ಕೆ ನೀವು ಮಾಡಬೇಕಾಗಿದ್ದು ಏನು?

ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ಶ್ರೀಕೃಷ್ಣನ ವೇಷವನ್ನು ನಿಮ್ಮ ಮನೆಯ ಕಂದಮ್ಮಗಳಿಗೆ ಹಾಕಿ ಫೋಟೊ ತೆಗೆಯಬೇಕು. ಆ ಫೋಟೊವನ್ನು ವಿಸ್ತಾರ ನ್ಯೂಸ್‌ನ ಮೊಬೈಲ್‌ ಸಂಖ್ಯೆ 9481024181 ಗೆ ವಾಟ್ಸಪ್‌ ಮಾಡಬೇಕು. ಫೋಟೊ ಜತೆಗೆ ಹೆಸರು ಹಾಗೂ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಫೋಟೊ ಕಳುಹಿಸಲು ಸೆಪ್ಟೆಂಬರ್‌ 6 ಕೊನೇ ದಿನಾಂಕವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Award Ceremony: 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಗೆ ಡಾ. ಬಿ. ಎಸ್. ಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

VISTARANEWS.COM


on

Award Ceremony
Koo

ಬೆಂಗಳೂರು: ಅ. ನ. ಕೃ. ಪ್ರತಿಷ್ಠಾನ ವತಿಯಿಂದ ಕಾದಂಬರಿ ಸಾರ್ವಭೌಮ ಅ. ನ. ಕೃ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 19ರಂದು ಬೆಳಗ್ಗೆ 10ಗಂಟೆಗೆ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್. ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 2022ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಹಾಗೂ 2023ನೇ ಸಾಲಿನ ಅ. ನ. ಕೃ. ಪ್ರಶಸ್ತಿಯನ್ನು ಡಾ. ಬಿ. ಎಸ್. ಸ್ವಾಮಿ ಅವರಿಗೆ ಪ್ರದಾನ (Award Ceremony) ಮಾಡಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರು ರಾಷ್ಟೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾಗಿದ್ದು, ಡಾ. ಬಿ. ಎಸ್. ಸ್ವಾಮಿ ಅವರು ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ.

ಪ್ರಜಾವಾಣಿ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, ಲೇಖಕ, ಉಪನ್ಯಾಸಕ ಡಾ. ಬಂಡ್ಲಹಳ್ಳಿ ವಿಜಯಕುಮಾ‌ರ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಇದನ್ನೂ ಓದಿ | ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ಡಾ. ಕೆ.ಆರ್. ಸಂಧ್ಯಾರೆಡ್ಡಿ, ಶಾ.ಮಂ. ಕೃಷ್ಣರಾವ್, ಎಂ. ವೆಂಕಟೇಶ್ ಅವರು ಉಪಸ್ಥಿತರಿರಲಿದ್ದು, ಮಾಜಿ ಅಡ್ವೊಕೇಟ್ ಜನರಲ್ ಹಾಗೂ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅ. ನ. ಕೃ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಗೌತಮ್ ಅ. ನ. ಕೃ, ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿರಲಿದ್ದಾರೆ.

2022ರ ಪ್ರಶಸ್ತಿ ಪುರಸ್ಕೃತರು: ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ

ಆರೂವರೆ ದಶಕಗಳ ಕಾಲ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಮಾಜಕಾರ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಎಸ್. ಆರ್. ರಾಮಸ್ವಾಮಿ ಅವರು (ಜನನ: 29-10-1937) ಕಳೆದ 45 ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆ ಮತ್ತು ‘ರಾಷ್ಟ್ರೋತ್ಥಾನ ಸಾಹಿತ್ಯ’ ಪ್ರಕಾಶನದ ಪ್ರಧಾನ ಸಂಪಾದಕರಾಗಿದ್ದಾರೆ.

ಸುಭಾಷ್‌ಚಂದ್ರ ಬೋಸ್ ಅವರ ಸಮಗ್ರ ಜೀವನಚರಿತ್ರೆ ‘ಕೋಲ್ಮಿಂಚು’ ಜಯಪ್ರಕಾಶ್ ನಾರಾಯಣ್ ವಲ್ಲಭಭಾಯಿ ಪಟೇಲ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಭಗಿನಿ ನಿವೇದಿತಾ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಜೀವನಚರಿತ್ರೆಗಳೂ ಸೇರಿ ಸುಮಾರು 60 ಗ್ರಂಥಗಳನ್ನು ಬರೆದಿದ್ದಾರೆ. ‘ಭಾರತದಲ್ಲಿ ಸಮಾಜಕಾರ್ಯ’, ‘ಸ್ವಾತಂತ್ರ್ಯೋದಯದ ಮೈಲಿಗಲ್ಲುಗಳು’ ಮೊದಲಾದ ಹಲವಾರು ಪ್ರತಿಷ್ಠಿತ ಕೃತಿಗಳಿಗೆ ವಿಸ್ತತ ಸ್ವತಂತ್ರ ಅವಲೋಕನ ಪ್ರಬಂಧಗಳನ್ನು ಬರೆದು ಸಂಪಾದನ ಮಾಡಿದ್ದಾರೆ.

ಅಭ್ಯುದಯ ಅರ್ಥಶಾಸ್ತ್ರದಲ್ಲಿ ಆಳವಾದ ಪರಿಶ್ರಮ ಮಾಡಿರುವ ಇವರು ಜಾಗತೀಕರಣದ ಹಿನ್ನೆಲೆಯಲ್ಲಿ ಬರೆದ ‘ಆರ್ಥಿಕತೆಯ ಎರಡು ಧ್ರುವ’ ಅರ್ಥಶಾಸ್ತ್ರ ಕ್ಷೇತ್ರದ ಒಂದು ಉನ್ನತ ಕೃತಿಯೆಂದು ಪರಿಗಣಿತವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಅರ್ಥಿಕ ಯೋಜನೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿರುವ ರಾಮಸ್ವಾಮಿಯವರ ‘ಶತಮಾನದ ತಿರುವಿನಲ್ಲಿ ಭಾರತ’ ಸಮಾಜವಿಜ್ಞಾನ ಕ್ಷೇತ್ರದ ಆ ವರ್ಷದ ಶ್ರೇಷ್ಠ ಕೃತಿಯೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿದೆ. ಬ್ರಿಟಿಷ್-ಪೂರ್ವ ಭಾರತದ ಉನ್ನತ ಸ್ಥಿತಿ ಕುರಿತ ಖ್ಯಾತ ಸಂಶೋಧಕ ಧರ್ಮಪಾಲ್ ಅವರ ಕೃತಿಗಳನ್ನು ಇವರು ಕನ್ನಡಕ್ಕೆ ಪರಿಚಯಿಸಿದ್ದಾರೆ. ಸ್ವದೇಶೀ ಚಿಂತನೆಯ ಪ್ರತಿಪಾದಕಗಳಾದ ಇವರ ಹಲವಾರು ಕೃತಿಗಳು ಪಥದರ್ಶಕವೆನಿಸಿವೆ.

ಅನೇಕ ಹಿರಿಯ ಸಾಹಿತಿಗಳ ಒಡನಾಟದಲ್ಲಿದ್ದ ರಾಮಸ್ವಾಮಿಯವರು, ಡಿ.ವಿ.ಗುಂಡಪ್ಪ, ಸೀತಾರಾಮಯ್ಯ, ರಾಕ್ಲಪಲ್ಲಿ ಅನಂತಕೃಷ್ಣಶರ್ಮ, ವೀರಕೇಸರಿ ಸೀತಾರಾಮಶಾಸ್ತ್ರಿ, ತಿ. ತಾ. ಶರ್ಮ, ಪಿ. ಕೋದಂಡರಾವ್, ತೋಟಗಾರಿಕೆ ಋಷಿ ಎಂ. ಎಚ್. ಮರಿಗೌಡ ಮೊದಲಾದ ಧೀಮಂತರನ್ನು ಕುರಿತು ಬರೆದ ‘ದೀವಟಿಗೆಗಳು’, ‘ದೀಪ್ತಿಮಂತರು’ ಮತ್ತು ‘ದೀಪ್ತಶೃಂಗಗಳು’ – ಇವು ಅನುಪಮ ವ್ಯಕ್ತಿಚಿತ್ರಮಾಲಿಕೆಗಳಾಗಿವೆ. ಈಗಿನ ಜಗದ್‌ವ್ಯಾಪಿ ತುಮುಲಗಳ ಬೇರುಗಳಿರುವುದು ಎರಡು ಭಿನ್ನ ಜೀವನದೃಷ್ಟಿಗಳಲ್ಲಿ – ಎಂದು ಅವರ ‘ನಾಗರಿಕತೆಗಳ ಸಂಘರ್ಷ’ ಕೃತಿ ಪ್ರತಿಪಾದಿಸಿದೆ. ಅವರ ‘ಕೆಲವು ಇತಿಹಾಸ-ಪರ್ವಗಳು’ ಮತ್ತು ‘ಮರೆಯಬಾರದ ಇತಿಹಾಸಾಧ್ಯಾಯಗಳು’ ಮೈಲಿಗಲ್ಲುಗಳೆಂದು ಅಂಕಿತಗೊಂಡಿರುವ ಕೆಲವು ಇತಿಹಾಸ ಘಟನಾಸರಣಿಗಳ ಪರಾಮರ್ಶನೆಯಾಗಿವೆ. ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ರಾಜಾ ರಾಮಮೋಹನರಾಯ್ ಅವರಿಂದ ಜಯಪ್ರಕಾಶ ನಾರಾಯಣ್ ವರೆಗಿನ ಹತ್ತಾರು ಮಹನೀಯರ ಜೀವಿತಕಥನಗಳು `ನವೋತ್ಥಾನದ ಅಧ್ವರ್ಯುಗಳು’ ಮತ್ತು ‘ಹಲವರು ರಾಷ್ಟ್ರಾರಾಧಕರು’. ರಾಮಸ್ವಾಮಿಯವರ ‘ಕವಳಿಗೆ’ ಮತ್ತು ‘ಸಾಹಿತ್ಯ ಸಾನ್ನಿಹಿತ್ಯ ಉನ್ನತಮಟ್ಟದ ಸಾಹಿತ್ಯ ಪರಾಮರ್ಶಕ ಕೃತಿಗಳಾಗಿವೆ. ರಾಮಸ್ವಾಮಿಯವರು ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ 2000ಕ್ಕೂ ಹೆಚ್ಚು ಅಧ್ಯಯನಪೂರ್ಣ ಲೇಖನಗಳನ್ನು ಬರೆದಿದ್ದಾರೆ.

ಪತ್ರಿಕೋದ್ಯಮ ಸೇವೆಗಾಗಿ 2006ರಲ್ಲಿ ಇವರಿಗೆ ‘ಆರ್ಯಭಟ ಪ್ರಶಸ್ತಿ’ ದೊರೆತಿದೆ. ಸಾಹಿತ್ಯಸೇವೆಗಾಗಿ 2008ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಇವರಿಗೆ ದೊರೆತಿದೆ. 2011ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇವರ ಸುದೀರ್ಘ ಸಾಹಿತ್ಯಸೇವೆಗಾಗಿ ಗೌರವಾರ್ಥ ಡಾಕ್ಟರೇಟ್ ನೀಡಿದೆ. ದೀರ್ಘ ಪತ್ರಿಕೋದ್ಯಮ ಸೇವೆಗಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ‘ವರ್ಷದ ಶ್ರೇಷ್ಠ ವ್ಯಕ್ತಿ’ ಸಮ್ಮಾನ ದೊರೆತಿದೆ (2012). ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳ ಜೀವಮಾನ ಸಾಧನೆಗಾಗಿ 2015ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಪದವಿಯನ್ನು ಇವರಿಗೆ ನೀಡಲಾಗಿದೆ. ಕರ್ನಾಟಕ ಸರಕಾರವು 2022-23ರ ‘ಪಂಪಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

2023ರ ಪ್ರಶಸ್ತಿ ಪುರಸ್ಕೃತರು : ಡಾ. ಬಿ. ಎಸ್. ಸ್ವಾಮಿ

ಬಿ. ಸಿದ್ಧಲಿಂಗ ಸ್ವಾಮಿಯವರು ಮೂಲತಃ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯವರು. ವಿ. ಬಸವಲಿಂಗಪ್ಪ – ಶಿವನಾಗಮ್ಮ ದಂಪತಿಯ ಸುಪುತ್ರರಾದ ಇವರು ಎಂ. ಎ., ಪಿಎಚ್. ಡಿ. ಪದವೀಧರರು. ಐದು ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಇಪ್ಪತ್ತು ವರ್ಷ ಕಾರ್ಯನಿರ್ವಹಿಸಿ ಅನಂತರ ಗುಲ್ಬರ್ಗ, ಬೆಂಗಳೂರು, ಮಂಗಳೂರು ಬಾನುಲಿಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಹದಿನಾಲ್ಕು ವರ್ಷ ದುಡಿದು ನಿವೃತ್ತರಾದರು.

ಬಾನುಲಿಯ ಸುದೀರ್ಘ ಸೇವೆಯಲ್ಲಿ ಇವರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಪ್ರತಿಭಾವಂತರನ್ನು ಹುಡುಕಿ ಅವರನ್ನು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿ ಜನಾನುರಾಗಿಯಾದರು.
1967ರಲ್ಲಿ ಇವರ ಮೊದಲ ಕವನಸಂಗ್ರಹ ‘ಅಮೃತ’ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಆರು ದಶಕ ಲೇಖನಿಯನ್ನು ಕೆಳಗಿಡದೆ ಒಂದೇ ಸಮನೆ ಬರೆಯುತ್ತ ಸುಮಾರು ನಾಲ್ಕುನೂರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ‘ಕಲಿ ಭಾರತ’, ‘ಅಲ್ಲಮಪ್ರಭು’, ‘ಅಕ್ಕಮಹಾದೇವಿ’, ‘ಬಸವಣ್ಣ’ ಮಹಾಕಾವ್ಯಗಳೂ, ‘ಬೆಂಕಿಯಲ್ಲಿ ಅರಳಿದ ಹೂವು’ ನಂತಹ ಆತ್ಮಕಥನವೂ ಸೇರಿದೆ.

ಇವರ ಸಾಹಿತ್ಯಸೃಷ್ಟಿಗೆ ಯಾವ ಸರಹದ್ದುಗಳೂ ಇಲ್ಲ. ಕಥೆ, ಕಾದಂಬರಿ, ಕವನ, ನಾಟಕ, ರೂಪಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಸಂಪಾದನೆ, ವೈಚಾಲಕ, ಹಾಸ್ಯ, ಜಾನಪದ, ಪ್ರವಾಸಕಥನ, ಜೀವನ ಚರಿತ್ರೆ, ವಚನಸಾಹಿತ್ಯ, ದಾಸಸಾಹಿತ್ಯ, ಮಕ್ಕಳ ಸಾಹಿತ್ಯ, ಬಿಡಿ ಬರೆಹಗಳು – ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿದ್ದಾರೆ. ಅನೇಕ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳನ್ನು ಬರೆದ ಕೈಗಳಿಂದಲೇ ಜಾನಪದ ಸಾಹಿತ್ಯಚರಿತ್ರೆಯ ಹದಿನೈದು ಸಂಪುಟಗಳು, ಮಲೆ ಮಾದೇಶ್ವರ ಕಾವ್ಯ ಸಂಪಾದನೆ ಮಾಡಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕ್ಷೇತ್ರಕಾರ್ಯ, ಸಂಪಾದನೆ, ವಿಶ್ಲೇಷಣ, ಸಂಗ್ರಹ ಮಾಡಿದ್ದಾರೆ. ಶಿಷ್ಟಸಾಹಿತ್ಯದಲ್ಲಿ ಡಾ. ಸ್ವಾಮಿಯವರ ಕೊಡುಗೆ ಸಣ್ಣದಲ್ಲ. ಕಾಳಿದಾಸನ ಸಾಹಿತ್ಯದ ಕುರಿತು ಬರೆಯಬಲ್ಲ ಡಾ. ಸ್ವಾಮಿಯವರು ಸೂರದಾಸನ ಸಾಹಿತ್ಯದ ಬಗೆಗೂ ಬರೆಯಬಲ್ಲರು. ಹರಿದಾಸ ಪರಂಪರೆಯ ಕುರಿತು ಹಲವು ವರ್ಷ ಸಂಶೋಧನೆ ಮಾಡಿ ಒಂದು ಬೃಹತ್ ಗ್ರಂಥ ಪ್ರಕಟಿಸಿದ್ದಾರೆ. ಅದಕ್ಕಾಗಿ ಅವರು ಊರೂರು ಅಲೆದು ಹಲಕಥಾಕಾರರನ್ನು ಸಂದರ್ಶಿಸಿ, ವಾಚನಾಲಯಗಳಲ್ಲಿ ತಿಂಗಳುಗಟ್ಟಲೆ ಕುಳಿತು ಸಂಶೋಧನೆ ಮಾಡಿದ್ದಾರೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

ಇವರ ಸಾಹಿತ್ಯಸೇವೆಯನ್ನು ಗಮನಿಸಿ ಕನ್ನಡಿಗರು ಅವರಿಗೆ ‘ಮಧುವೃತ’ ಎಂಬ ಗೌರವಗ್ರಂಥ ಅರ್ಪಿಸಿದ್ದಾರೆ.
ಇವರ ‘ಕವಿಚಕ್ರೇಶ್ವರ’ ಕಾದಂಬರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ(1974), ‘ಜಾನಪದ ಕಥಾಸಂಗಮ’ಕ್ಕೆ ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯ ಬಹುಮಾನ(1987), ‘ಮಹಾಜ್ಯೋತಿ ಮಾದೇಶ್ವರ’ ಕೃತಿಗೆ ಮುದ್ದಣ- ರತ್ನಾಕರವರ್ಣಿ ಪ್ರಶಸ್ತಿ, ‘ಜಾನಪದ ಸೌರಭ’, ಅಕ್ಕಮ್ಮ ಗಿರಿಗೌಡ ರುದ್ರಪ್ಪ ಪ್ರಶಸ್ತಿ (1996), ‘ತುಳುನಾಡ ಐಸಿರಿ’ಗೆ ಗೊರೂರು ಪ್ರತಿಷ್ಠಾನದ ಪ್ರಶಸ್ತಿ (1997), ಕದಂಬೋತ್ಸವದಲ್ಲಿ ಅಭಿನಂದನೆ(1998), ‘ಸಮಗ್ರ ನಾಟಕಗಳು’ಗೆ ಆರ್ಯಭಟ ಪ್ರಶಸ್ತಿ, ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ(2002), ‘ನಾಟಕ ರೂಪಕ’ ಕೃತಿಗೆ ಅತ್ತಿಮಬ್ಬೆ ಸಾಹಿತ್ಯಪ್ರತಿಷ್ಠಾನದ ಪ್ರಶಸ್ತಿ, ‘ಜಾನಪದಶ್ರೀ’ಗೆ ಕರ್ನಾಟಕ ಜಾನಪದ ಅಕಾಡೆಮಿ ಬಹುಮಾನ, ಇಂಥ ಅನೇಕ ಸಂಘಸಂಸ್ಥೆಗಳ ಬಹುಮಾನಗಳು, ಪ್ರಶಸ್ತಿಗಳು ಇವರಿಗೆ ಸಂದಿವೆ.

Continue Reading

ಬೆಂಗಳೂರು

Book Release: ಬೆಂಗಳೂರಿನಲ್ಲಿ ಮೇ 12ರಂದು ಡಾ.ಗಣಪತಿ ಭಟ್‌ ಅವರ ʼಕನ್ನಡದಲ್ಲಿ ಶ್ರೀ ಶಂಕರʼ ಪುಸ್ತಕ ಲೋಕಾರ್ಪಣೆ

Book Release: ಬೆಂಗಳೂರಿನ ಬನಶಂಕರಿಯ ಸುಚಿತ್ರ ಫಿಲ್ಮ್‌ ಸೊಸೈಟಿಯ ನಾಣಿ ಸಭಾಂಗಣದಲ್ಲಿ ಮೇ 12ರಂದು ಬೆಳಗ್ಗೆ 10ಗಂಟೆಗೆ ಕನ್ನಡದಲ್ಲಿ ಶ್ರೀ ಶಂಕರ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

VISTARANEWS.COM


on

Book Release
Koo

ಬೆಂಗಳೂರು: ಅಯೋಧ್ಯಾ ಪ್ರಕಾಶನ ಪ್ರಕಟನೆಯ ಲೇಖಕ ಡಾ.ಗಣಪತಿ ಭಟ್‌ ಅವರ ʼಕನ್ನಡದಲ್ಲಿ ಶ್ರೀ ಶಂಕರ; ಶಾಂಕರ ಸ್ತೋತ್ರಗಳ ಭಾವಾನುಭವ (Book Release) ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಮೇ 12ರಂದು ಬೆಳಗ್ಗೆ 10ಗಂಟೆಗೆ ನಗರದ ಬನಶಂಕರಿಯ ಬಿ.ವಿ.ಕಾರಂತ್‌ ರಸ್ತೆಯ ಸುಚಿತ್ರ ಫಿಲ್ಮ್‌ ಸೊಸೈಟಿಯ ನಾಣಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದ ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್‌ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ.ಜಿ.ಬಿ. ಹರೀಶ, ವಾಗ್ಮಿ ಹಾಗೂ ಬಹುಭಾಷಾವಿದರು ಶತಾವಧಾನಿ ಆರ್‌. ಗಣೇಶ್‌ ಭಾಗವಹಿಸಲಿದ್ದಾರೆ.

ಇದನ್ನೂ ಓದಿ | Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Continue Reading

ಕರ್ನಾಟಕ

Wonderla Bengaluru: ತಾಯಂದಿರ ದಿನ ಹಿನ್ನೆಲೆ ವಂಡರ್‌ಲಾದಿಂದ ವಿಶೇಷ ಆಫರ್‌; 2 ಟಿಕೆಟ್‌ ಖರೀದಿಸಿದರೆ ತಾಯಿಗೆ ಫ್ರೀ ಎಂಟ್ರಿ!

Wonderla Bengaluru: ತಾಯಂದಿರ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ವಂಡರ್‌ಲಾದಲ್ಲಿ ಎರಡು ಟಿಕೆಟ್‌ ಖರೀದಿಸಿದರೆ ತಾಯಿಗೆ ಒಂದು ಟಿಕೆಟ್‌ ಉಚಿತವಾಗಿ ನೀಡಲಾಗುತ್ತದೆ.

VISTARANEWS.COM


on

Wonderla Bengaluru
Koo

ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ ಹಾಲಿಡೇಸ್ ತಾಯಂದಿರ ದಿನಾಚರಣೆ ಪ್ರಯುಕ್ತ ಎರಡು ಟಿಕೆಟ್‌ ಖರೀದಿಸಿದರೆ ತಾಯಿಗೆ ಒಂದು ಟಿಕೆಟ್‌ ಉಚಿತವಾಗಿ ನೀಡುತ್ತಿದೆ. ಮೇ 11 ಮತ್ತು 12 ರಂದು ಮಾತ್ರ ಈ ಆಫರ್‌ ಲಭ್ಯವಿದ್ದು, ಆನ್‌ಲೈನ್‌ ಅಥವಾ ಆಫ್‌ಲೈಫ್‌ ಎರಡರಲ್ಲೂ ಆಫರ್‌ ಸಿಗಲಿದೆ. ಪ್ರತಿಯೊಬ್ಬರ ಜೀವನದಲ್ಲೂ ತಾಯಿಯ ಪಾತ್ರ ದೊಡ್ಡ ಸ್ಥಾನವನ್ನು ಪಡೆದಿರಲಿದೆ. ಎಲ್ಲಾ ಅಮ್ಮಂದಿರ ಪ್ರೀತಿ ಮತ್ತು ವಾತ್ಸಲ್ಯಕ್ಕಾಗಿ ವಂಡರ್‌ಲಾ (Wonderla Bengaluru) ಈ ಕೊಡುಗೆಯನ್ನು ನೀಡುತ್ತಿದೆ.

ನಿಮ್ಮ ತಾಯಿಯನ್ನು ಆನಂದ ಪಡಿಸಲು ವಂಡರ್‌ಲಾ ಈ ಆಫರ್‌ ನೀಡುತ್ತಿದ್ದು, ಬೇಸಿಗೆ ಸಂದರ್ಭದಲ್ಲಿ ಎಲ್ಲಾ ತಾಯಂದಿರು ಸಂತಸ ಪಡಲು ಅಮ್ಯೂಸ್‌ಮೆಂಟ್‌ ಪಾರ್ಕ್‌ ಅತ್ಯುತ್ತಮ ಸ್ಥಳವಾಗಿದೆ. ನಿಮ್ಮ ತಾಯಿಯನ್ನು ವಂಡರ್‌ಲಾದಲ್ಲಿ ಆನಂದದಿಂದ ಉಪಚರಿಸುವ ಈ ಆಫರ್‌ ಹೆಚ್ಚು ಸಹಕಾರಿಯಾಗಲಿದೆ. ಆಸಕ್ತರು ಆನ್‌ಲೈನ್‌ನಲ್ಲಿ ವಂಡರ್‌ಲಾ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನೇರವಾಗಿ ಪಾರ್ಕ್‌ನಲ್ಲಿ ಕೊಡುಗೆ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿ, ಬೆಂಗಳೂರು: +91 80372 30333, +91 80350 73966

ಬೇಸಿಗೆ ರಜೆಯನ್ನು ಇನ್ನಷ್ಟು ಮಜವಾಗಿಸಲು ವಂಡರ್‌ಲಾದಲ್ಲಿ ʼಸಮ್ಮರ್‌ಲಾ ಫಿಯೆಸ್ಟಾ-2024ʼ: ಭರಪೂರ ಆಫರ್ಸ್‌

ಬೆಂಗಳೂರು: ಈ ಬೇಸಿಗೆಯ ಮಜವನ್ನು ಇನ್ನಷ್ಟು ಹೆಚ್ಚಿಸಲು ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ (Wonderla Bengaluru) ಬೆಂಗಳೂರು ಪಾರ್ಕ್‌ನಲ್ಲಿ ‘ಸಮ್ಮರ್‌ಲಾ ಫಿಯೆಸ್ಟಾ’ (Summer Fiesta 2024) ನಡೆಸುತ್ತಿದ್ದು, ಮೇ 31 ರವರೆಗೂ ಇರಲಿದೆ. ಸಮ್ಮರ್‌ಲಾ ಫಿಯೆಸ್ಟಾದಲ್ಲಿ ಸಾಕಷ್ಟು ಆಫರ್‌ಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿದ್ದು, ಅನೇಕ ಮೋಜಿನ ರೈಡ್‌, ವಾಟರ್‌ ಗೇಮ್‌ಗಳು, ಫುಡ್‌-ಫೆಸ್ಟಿವಲ್‌, ಡಿಜೆ ಮ್ಯೂಸಿಕ್‌ ಸೇರಿದಂತೆ ಅನೇಕ ವಿಶೇಷತೆಗಳು ಈ ಸಮ್ಮರ್‌ಲಾದಲ್ಲಿ ಇರಲಿವೆ. ಇದಲ್ಲದೆ, ಡೊಳ್ಳು ಕುಣಿತ, ಚಿಂಗಾರಿ ಮೇಳಗಳಂತಹ ವಿಶೇಷ ಸಾಂಸ್ಕೃತಿಕ ಪ್ರದರ್ಶನ ಹಾಗೂ ಮೆರವಣಿಗೆ ಇರಲಿವೆ. ವಾರಾಂತ್ಯದಲ್ಲಿ ನಿಮ್ಮನ್ನು ಇನ್ನಷ್ಟು ಉತ್ಸಾಹಿಗಳನ್ನಾಗಿ ಮಾಡಲು ಡಿಜೆ ಮ್ಯೂಸಿಕ್‌ ಸಹ ಆಯೋಜಿಸಲಾಗುತ್ತಿದೆ.

ಇನ್ನು ಭಾನುವಾರದಂದು ವಂಡರ್‌ಲಾ ರೆಸಾರ್ಟ್‌ನಲ್ಲಿ ಬೇಸಿಗೆಯ ಬ್ರಂಚ್‌ ಸಹ ಇರಲಿದೆ. ಈ ಎಲ್ಲಾ ಮನರಂಜನೆಗಳ ಮೇಲೂ ಸಾಕಷ್ಟು ರಿಯಾಯಿತಿ ಹಾಗೂ ಆಫರ್‌ಗಳು ಇದ್ದು, ಆಸಕ್ತರು ಭಾಗಿಯಾಗಿ ಈ ಬೇಸಿಗೆ ರಜೆಯನ್ನು ಇನ್ನಷ್ಟು ಸಂತಸದಿಂದ ಕಳೆಯಬಹುದು. ಈ ಎಲ್ಲಾ ಇತರ ಕೊಡುಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಿಲ್ಲಿ ಲಭ್ಯವಿರಲಿದೆ. ಪಾರ್ಕ್‌ನಲ್ಲಿ ಈಗ ಲಭ್ಯವಿರುವ ಹೊಸ ವಿಶೇಷ ಪಾನೀಯ ಕೌಂಟರ್‌ಗಳೊಂದಿಗೆ ಈ ಬೇಸಿಗೆಯ ಶಾಖವನ್ನು ತಣಿಸಲು ತಾಜಾ ಹಣ್ಣಿನ ಜ್ಯೂಸ್‌ಗಳು, ಋತುವಿನ ಅತ್ಯುತ್ತಮ ಆಮ್ರಾಸ್‌, ತಂಪಾದ ಮಜ್ಜಿಗೆ ಮತ್ತು ಬೇಸಿಗೆಯ ಪಾನೀಯಗಳು ಲಭ್ಯವಿರಲಿದೆ.

ಆಫರ್‌ಗಳ ವಿವರ ಇಲ್ಲಿದೆ

  • ವಂಡರ್‌ಲಾಗೆ ಭೇಟಿ ನೀಡಲು ಬಯಸುವವರಿಗೆ Early Bird ಹೆಸರಿನಲ್ಲಿ ಶೇ. 10ರಷ್ಟು ರಿಯಾಯಿತಿ ಸಿಗಲಿದೆ. ಈ ಕೊಡುಗೆ(Offer) ಪಡೆಯಲು ಮೂರು ದಿನಗಳ ಮುಂಚಿತವಾಗಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡಿಕೊಳ್ಳಬೇಕು.
  • ಜನ್ಮದಿನದ ಆಫರ್‌, ವಿಶೇಷವಾಗಿ ಮೇ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವವರಿಗೆ 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಉಚಿತವಾಗಿ ಸಿಗಲಿದೆ.
  • ಇನ್ನು, ವಿದ್ಯಾರ್ಥಿಗಳಿಗಾಗಿ ಹಾಲ್ ಟಿಕೆಟ್ ಆಫರ್ ಸಹ ಚಾಲ್ತಿಯಲ್ಲಿದೆ. 2023-2024ರ ಶೈಕ್ಷಣಿಕ ವರ್ಷದ 10ನೇ, 11ನೇ ಮತ್ತು 12ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಮೂಲ ಪರೀಕ್ಷೆಯ ಹಾಲ್ ಟಿಕೆಟ್‌ಗಳನ್ನು ಪ್ರಸ್ತುತಪಡಿಸಿ ಪಾರ್ಕ್ ಪ್ರವೇಶ ಟಿಕೆಟ್‌ಗಳ ಮೇಲೆ ಶೇ. 35ರಷ್ಟು ರಿಯಾಯಿತಿಯನ್ನು ಪಡೆಯಬಹುದು.
  • ವಂಡರ್‌ಲಾ ಕಾಲೇಜು ವಿದ್ಯಾರ್ಥಿಗಳಿಗೆ (16-24 ವರ್ಷ ವಯಸ್ಸಿನವರು) ತಮ್ಮ ಕಾಲೇಜು ಐಡಿ ಕಾರ್ಡ್‌ಗಳನ್ನು ಪ್ರಸ್ತುತಪಡಿಸಿದರೆ ಶೇ. 25ರಷ್ಟು ರಿಯಾಯಿತಿ ಪಡೆಯಲಿದ್ದಾರೆ, ಜೊತೆಗೆ, ವಿದ್ಯಾರ್ಥಿಗಳು ಆಹಾರ ಆಯ್ಕೆಗಳನ್ನು ಒಳಗೊಂಡಿರುವ ಕಾಂಬೊ ಪ್ಯಾಕೇಜ್‌ಗಳನ್ನು ಸಹ ಪಡೆಯಬಹುದು. ಆರಂಭಿಕ ಅರ್ಲಿ ಬರ್ಡ್‌ ಕೊಡುಗೆಯನ್ನು ಹೊರತುಪಡಿಸಿ, ಎಲ್ಲಾ ಇತರ ಕೊಡುಗೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್‌ಗಳಿಗೆ ಮಾನ್ಯವಾಗಿರುತ್ತವೆ. ಅತಿಥಿಗಳು ತಮ್ಮ ವಂಡರ್ಲಾ ಸಮ್ಮರ್ಲಾ ಫಿಯೆಸ್ಟಾ ಭಾಗವಾಗಿ ಮೇ 31 ರವರೆಗೆ ಪ್ರತಿ ಶನಿವಾರ ನಡೆಯುವ ವಂಡರ್ಲಾ ವಿಶೇಷ ಪೂಲ್ ಪಾರ್ಟಿಗಳೊಂದಿಗೆ ಭಾಗವಹಿಸಬಹುದು.

ಈ ಕುರಿತು ಮಾತನಾಡಿದ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಳ್ಳಿ, ಬೇಸಿಗೆ ರಜೆಯನ್ನು ಇನ್ನಷ್ಟು ಉತ್ಸಾಹ ಭರಿತವನ್ನಾಗಿದಲು ವಂಡರ್‌ಲಾ “ಸಮ್ಮರ್ಲಾ ಫಿಯೆಸ್ಟಾ’ ಆಯೋಜಿಸಿದೆ. ಈ ಸಮ್ಮರ್ಲಾದಲ್ಲಿ ಇಡೀ ಕುಟುಂಬಗಳು, ಕಾಲೇಜು ಸ್ನೇಹಿತರು, ಮಕ್ಕಳು ಎಲ್ಲರೂ ತಮ್ಮ ಪ್ರೀತಿಪಾತ್ರರೊಂದಿಗೆ ಆಗಮಿಸಿ, ಆನಂದಿಸಬಹುದು.

ಸಮ್ಮರ್‌ಲಾ ಭಾಗವಾಗಿ ಫುಡ್‌ಫೆಸ್ಟಿವಲ್‌, ಸಾಂಸ್ಕೃತಿಕ ಮೆರವಣಿಗೆ, ಡಿಜೆ ಮ್ಯೂಸಿಕ್‌ ಸೇರಿದಂತೆ ಇನ್ನೂ ಅನೇಕ ಮನರಂಜನೆಗಳು ಇರಲಿವೆ. ಈ ಎಲ್ಲಾ ಮನರಂಜನೆಯೊಂದಿಗೆ ನಿಮ್ಮ ಸವಿನೆನಪನ್ನು ಅಚ್ಚಳಿಯದಂತೆ ಮಾಡುವುದೇ ನಮ್ಮ ವಂಡರ್‌ಲಾದ ಪ್ರಮುಖ ಉದ್ದೇಶ ಎಂದು ಹೇಳಿದರು.

ವಂಡರ್‌ಲಾ ಆನ್‌ಲೈನ್ ಪೋರ್ಟಲ್ ಮೂಲಕ ಅಥವಾ ನೇರವಾಗಿ ಪಾರ್ಕ್ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಮುಂಗಡವಾಗಿ ಬುಕ್ ಮಾಡುವ ಮೂಲಕ ಸಮ್ಮರ್ಲಾವನ್ನು ಆನಂದಿಸಿ.

ಇದನ್ನೂ ಓದಿ | Manali Tour: ಭೂಲೋಕದ ಸ್ವರ್ಗ ಮನಾಲಿಗೆ ಪ್ರವಾಸ ಮಾಡಲು ಯಾವ ಸಮಯ ಸೂಕ್ತ?

ಹೆಚ್ಚಿನ ಮಾಹಿತಿ ಮತ್ತು ಬುಕಿಂಗ್‌ಗಳಿಗಾಗಿ, www.wonderla.com ಗೆ ಭೇಟಿ ನೀಡಿ ಅಥವಾ +91 80372 30333, +91 80350 73966 ಅನ್ನು ಸಂಪರ್ಕಿಸಿ.

Continue Reading

ಕರ್ನಾಟಕ

UGCET 2024: ಯುಜಿಸಿಇಟಿ ಅರ್ಜಿ ತಿದ್ದುಪಡಿಗೆ ಅಂತಿಮ ಅವಕಾಶ ನೀಡಿದ ಕೆಇಎ; ಕೊನೆಯ ದಿನಾಂಕ ಯಾವಾಗ?

UGCET 2024: ಯುಜಿಸಿಇಟಿ-2024 ಅರ್ಜಿಯಲ್ಲಿ ಆರ್‌ಡಿ ಸಂಖ್ಯೆ ಹಾಗೂ ಇತರೆ ಕ್ಲೇಮ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ.

VISTARANEWS.COM


on

KEA
Koo

ಬೆಂಗಳೂರು: ಯುಜಿಸಿಇಟಿ-2024ಕ್ಕೆ (UGCET 2024) ಆನ್‌ಲೈನ್ ಅರ್ಜಿಯಲ್ಲಿ ನೀಡಿರುವ ಆರ್‌ಡಿ ಸಂಖ್ಯೆಗಳನ್ನು ಹಾಗೂ ಇತರೆ ಕ್ಲೇಮ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಕೆಇಎ ಅಂತಿಮ ಅವಕಾಶ ನೀಡಿದೆ. ಅಭ್ಯರ್ಥಿಗಳು ಮೇ 15ರ ರಾತ್ರಿ 11.59 ಗಂಟೆವರೆಗೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕೆಇಎ ನಡೆಸುವ ಸಿಇಟಿ-2024ರ ಆನ್‌ಲೈನ್ ಅರ್ಜಿಯಲ್ಲಿ ಆ‌ರ್‌ಡಿ ಸಂಖ್ಯೆಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅನೇಕ ಅಭ್ಯರ್ಥಿಗಳು ಮನವಿ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್‌ಡಿ ಸಂಖ್ಯೆಗಳನ್ನು ಹಾಗೂ ಇತರೆ ಕ್ಲೇಮ್‌ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮೇ 15ರ ರಾತ್ರಿ 11.59 ರವರೆಗೆ ಅಂತಿಮ ಅವಕಾಶ ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ ಸೈಟ್ http://kea.kar.nic.inಗೆ ಭೇಟಿ ನೀಡಬಹುದು.

ಯುಜಿಸಿಇಟಿ-2024 ಅರ್ಜಿ ತಿದ್ದಪಡಿ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ತಿದ್ದುಪಡಿ ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮ

  1. ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ ಅಭ್ಯರ್ಥಿಗಳ ಲಾಗಿನ್ ಮೂಲಕ ತಿದ್ದುಪಡಿ ಮಾಡಿಕೊಳ್ಳುವುದು.
  2. ಲಿಂಕ್ ಆಯ್ಕೆ ಮಾಡಿದ ನಂತರ ಯಾವುದನ್ನು ಎಡಿಟ್ ಮಾಡಬೇಕು ಎಂಬುದನ್ನು ಸೆಲೆಕ್ಟ್ ಮಾಡಿ, ನಂತರ , (eligibility clause Update, RD details update, Course Update, Upload Documents, Reservation Claims, Special Category claims.) ತಿದ್ದುಪಡಿ ಮಾಡಿ
  3. Declaration button ಅನ್ನು ಆಯ್ಕೆ (Select) ಮಾಡುವ ಮೊದಲು ಪರಿಶೀಲಿಸಿ, ಒಂದು ಸಾರಿ Declaration button ಅನ್ನು ಆಯ್ಕೆ (Select) ಮಾಡಿದ ನಂತರ ಪುನಹ ತಿದ್ದುಪಡಿಮಾಡಿಕೊಳ್ಳಲು ಅವಕಾಶ ವಿರುವುದಿಲ್ಲ.
  4. ತಿದ್ದುಪಡಿ ಮಾಡಿಕೊಂಡ ನಂತರ ತಪ್ಪದೇ Declaration button ಅನ್ನು ಆಯ್ಕೆ (Select) ಮಾಡಿ ನಂತರ Final Submission ಅನ್ನು ಸಲ್ಲಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಅಭ್ಯರ್ಥಿಗಳು ಅರ್ಜಿಯಲ್ಲಿ ಮೊದಲು ಸಲ್ಲಿಸಿದ ಮಾಹಿತಿಯನ್ನೇ ಮುಂದಿನ ಎಲ್ಲಾ ಪ್ರಕ್ರಿಯೆಗೆ ಪರಿಗಣಿಸಲಾಗುವುದು.
  5. ನಂತರ ಮಾರ್ಪಡಿಸಿದ ಅರ್ಜಿಯನ್ನು ಮುದ್ರಿಸಿ ತಮ್ಮಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಮುದ್ರಿತ ಅರ್ಜಿಯ ಕನಿಷ್ಟ ಐದು ಪ್ರತಿಗಳು ತಮ್ಮಲ್ಲಿ ಇರುವುದು ಸೂಕ್ತ.

ಇದನ್ನೂ ಓದಿ | SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

Continue Reading
Advertisement
bomb hoax bengaluru
ಕ್ರೈಂ16 mins ago

Bomb Hoax: ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್, ತಪಾಸಣೆ

Team India Coach
ಕ್ರಿಕೆಟ್30 mins ago

Team India Coach: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ; ಮೇ 27 ಕೊನೆಯ ದಿನ

Job Alert
ಉದ್ಯೋಗ46 mins ago

Job Alert: ಎಚ್ಎ‌ಎಲ್‌ನಿಂದ 200 ಅಪ್ರೆಂಟಿಸ್‌ಗಳ ನೇಮಕ; ಐಟಿಐ ಪಾಸಾದವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

Narendra Modi
ದೇಶ53 mins ago

Narendra Modi: ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ-ಇಲ್ಲಿದೆ ಲೈವ್‌

HD Deve gowda prajwal revanna case
ಪ್ರಮುಖ ಸುದ್ದಿ1 hour ago

‌Prajwal Revanna Case: ಜೀವನದಲ್ಲಿ ಮೊದಲ ಬಾರಿಗೆ ಗಡ್ಡ ಬಿಟ್ಟ ದೇವೇಗೌಡರು; ವೈರಿನಾಶಕ್ಕೆ ಶಪಥ!

Thailand Open
ಕ್ರೀಡೆ1 hour ago

Thailand Open 2024: ಇಂದಿನಿಂದ ಥಾಯ್ಲೆಂಡ್‌ ಓಪನ್‌ ಟೂರ್ನಿ; ಚಿರಾಗ್‌-ಸಾತ್ವಿಕ್‌ ಜೋಡಿ ಮೇಲೆ ಪದಕ ಭರವಸೆ

US Sanction
ವಿದೇಶ2 hours ago

US sanction: ಇರಾನ್‌ ಜೊತೆ ವ್ಯಾಪಾರ ಒಪ್ಪಂದ ಬೇಡ; ಭಾರತಕ್ಕೆ ನಿರ್ಬಂಧದ ಎಚ್ಚರಿಕೆ ಕೊಟ್ಟ ಅಮೆರಿಕ

Prajwal Revanna Case Devaraje Gowda
ಕ್ರೈಂ2 hours ago

Prajwal Revanna Case: ವಕೀಲ ದೇವರಾಜೇಗೌಡ ಇಂದು ಪೊಲೀಸ್‌ ಕಸ್ಟಡಿಗೆ

Federation Cup
ಕ್ರೀಡೆ2 hours ago

Federation Cup: ಫೆಡರೇಷನ್ ಕಪ್‌ ಫೈನಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ನೀರಜ್ ಚೋಪ್ರಾ

Israel-Hamas Conflict
ವಿದೇಶ2 hours ago

Israel-Hamas Conflict: ಗಾಜಾದಲ್ಲಿ ಭಾರತೀಯ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ16 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ17 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ17 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ17 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ18 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ2 days ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಟ್ರೆಂಡಿಂಗ್‌