Tata Motors | ಬಿಎಂಟಿಸಿಗೆ 921 ಎಲೆಕ್ಟ್ರಿಕ್​ ಬಸ್​ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡ ಟಾಟಾ ಮೋಟಾರ್ಸ್​ - Vistara News

ಆಟೋಮೊಬೈಲ್

Tata Motors | ಬಿಎಂಟಿಸಿಗೆ 921 ಎಲೆಕ್ಟ್ರಿಕ್​ ಬಸ್​ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡ ಟಾಟಾ ಮೋಟಾರ್ಸ್​

ಟಾಟಾ ಮೋಟಾರ್ಸ್​ನ (Tata Motors) ಎಲೆಕ್ಟ್ರಿಕ್​ ಬಸ್​ಗಳಾದ ಸ್ಟಾರ್​ ಬಸ್​ಗಳು ಬೆಂಗಳೂರಿನ ರಸ್ತೆಯಲ್ಲಿ ಓಡಾಡಲಿವೆ.

VISTARANEWS.COM


on

tata motors
ನವ ದೆಹಲಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಟಾಟಾ ಮೋಟಾರ್ಸ್​ನ ಎಲೆಕ್ಟ್ರಿಕ್​ ಬಸ್​.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಟಾಟಾ ಮೋಟಾರ್ಸ್​ (Tata Motors)ನ ಅಧೀನ ಸಂಸ್ಥೆಯಾಗಿರುವ ಟಿಎಂಎಲ್​ ಸ್ಮಾರ್ಟ್​ಸಿಟಿ ಮೊಬಿಲಿಟಿ ಸೊಲ್ಯುಶನ್ಸ್​ ಬೆಂಗಳೂರೂ ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 921 ಎಲೆಕ್ಟ್ರಿಕ್​ ಬಸ್​ಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿದೆ. ಶುಕ್ರವಾರ ಕಂಪನಿಯ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಮುಂದಿನ 12 ವರ್ಷಗಳ ಅವಧಿಗೆ ಬಸ್​ಗಳನ್ನು ಪೂರೈಕೆ ಮಾಡಲಿದೆ.

ಕಡಿಮೆ ಎತ್ತರದ ಮೆಟ್ಟಿಲುಗಳನ್ನು ಹೊಂದಿರುವ 12 ಮೀಟರ್​ ಉದ್ದದ ಟಾಟಾ ಸ್ಟಾರ್​ಬಸ್​ ಎಲೆಕ್ಟ್ರಿಕ್​ ವಾಹನಗಳನ್ನು ಈ ಒಪ್ಪಂದದ ಪ್ರಕಾರ ಟಾಟಾ ಮೋಟಾರ್ಸ್​ ಒದಗಿಸಬೇಕಾಗಿದೆ. ಇದು ನಗರದ ಪ್ರಯಾಣಕ್ಕೆ ಸೂಕ್ತವಾಗಿರುವ ಬಸ್​ಗಳೆಂದು ಕಂಪನಿ ಹೇಳಿದೆ.

ಭಾರತದ ನಾನಾ ನಗರಗಳ ಸಾರಿಗೆ ಸಂಸ್ಥೆಗಳಿಗೆ ಈಗಾಗಲೇ 730 ಬಸ್​ಗಳನ್ನು ಸರಬರಾಜು ಮಾಡಲಾಗಿದ್ದು, ಒಟ್ಟಾರೆ 5.5 ಕೋಟಿ ಕಿಲೋ ಮೀಟರ್​ ಓಡಾಟ ನಡೆಸಿವೆ ಎಂದು ಹೇಳಿದೆ.

ಒಪ್ಪಂದದ ಕುರಿತು ಮಾತನಾಡಿರುವ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ, ವಾಯುಮಾಲಿನ್ಯ ರಹಿತವಾಗಿರುವ ಈ ಬಸ್​ಗಳು ಬೆಂಗಳೂರಿನ ನಾಗರಿಕರಿಗೆ ಅನುಕೂಲ ಉಂಟು ಮಾಡಲಿವೆ. ಟಾಟಾ ಮೋಟಾರ್ಸ್​ನ ಎಲೆಕ್ಟ್ರಿಕ್​ ವಾಹನಗಳ ಕ್ಷೇತ್ರದಲ್ಲಿನ ಅನುಭವ ತಡೆ ರಹಿತ ಸೇವೆಗೆ ಪೂರಕವಾಗಿರಲಿದೆ, ಎಂದು ಹೇಳಿದ್ದಾರೆ.

ಒಪ್ಪಂದದ ಕುರಿತು ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿಮಿಟೆಡ್‌ನ ಸಿಇಒ ಅಸೀಮ್ ಕುಮಾರ್ ಮುಖೋಪಾಧ್ಯಾಯ ಮಾತನಾಡಿ “ಇದೊಂದು ಸ್ಮರಣೀಯ ಸಂದರ್ಭ. ಈ ಎಲೆಕ್ಟ್ರಿಕ್ ಬಸ್‌ಗಳು, ಬೆಂಗಳೂರಿನ ಪ್ರಯಾಣಿಕರಿಗೆ, ದೀರ್ಘಕಾಲದ, ಸುರಕ್ಷಿತ ಮತ್ತು ಆರಾಮದಾಯಕವಾದ ಸೇವೆ ಒದಗಿಸಲಿದೆ.”ಎಂದು ಹೇಳಿದರು.

ಇದನ್ನೂ ಓದಿ | TATA Motors | ನವೆಂಬರ್‌ 7ರಿಂದ ಟಾಟಾ ಮೋಟಾರ್ಸ್‌ ಕಾರುಗಳ ದರ ಏರಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Nitin Gadkari : ಕೆಟ್ಟದಾಗಿರುವ ಹೈವೆಗಳಿಗೆ ಟೋಲ್​ ಶುಲ್ಕ ಕಟ್ಟಬೇಡಿ; ನಿತಿನ್​ ಗಡ್ಕರಿ ಸೂಚನೆ

Nitin Gadkari: ಶುಲ್ಕವನ್ನು ಸಂಗ್ರಹಿಸಲು ಮತ್ತು ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಟೋಲ್​​ಗಳನ್ನು ಪರಿಚಯಿಸುವ ಅವಸರದಲ್ಲಿದ್ದೇವೆ. ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸುವಲ್ಲಿ ಬಳಕೆದಾರ ಶುಲ್ಕವನ್ನು ವಿಧಿಸಬೇಕು ಎಂದು ಗಡ್ಕರಿ ಅವರು ಹೇಳಿದ್ದಾರೆ.

VISTARANEWS.COM


on

Nitin Gadkari
Koo

ಬೆಂಗಳೂರು: ಕಳಪೆ ಗುಣಮಟ್ಟದ ರಸ್ತೆಗಳಿದ್ದರೆ ವಾಹನಗಳ ಮಾಲೀಕರಿಗೆ ಹೆದ್ದಾರಿ ಅಧಿಕಾರಿಗಳು ಟೋಲ್ ಶುಲ್ಕ ವಿಧಿಸಬಾರದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ. ಪ್ರಸಕ್ತ (2024-25) ಹಣಕಾಸು ವರ್ಷದಲ್ಲಿ 5,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪರಿಚಯಿಸಲಾಗುವ ಜಿಪಿಎಸ್​ ಆಧಾರಿತ ಟೋಲ್ ಪಾವತಿ ವ್ಯವಸ್ಥೆಗಳ ಕುರಿತ ಜಾಗತಿಕ ಕಾರ್ಯಾಗಾರದಲ್ಲಿ ಮಾತನಾಡಿದ ಬಿಜೆಪಿ ನಾಯಕ, ” ಗುಣಮಟ್ಟದ ಸೇವೆಯನ್ನು ಒದಗಿಸದಿದ್ದರೆ, ನೀವು ಟೋಲ್ ವಿಧಿಸಬಾರದು” ಎಂದು ಹೇಳಿದ್ದಾರೆ.

“ಶುಲ್ಕವನ್ನು ಸಂಗ್ರಹಿಸಲು ಮತ್ತು ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಟೋಲ್​​ಗಳನ್ನು ಅಳಡಿಸಿಕೊಂಡು ಹೋಗಲಾಗುತ್ತಿದೆ. ಅದಕ್ಕೆ ಅವಸರ ಮಾಡಲಾಗುತ್ತಿದೆ. ವಾಸ್ತವದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸಿದರೆ ಮಾತ್ರ ಬಳಕೆದಾರ ಶುಲ್ಕ ವಿಧಿಸಬೇಕು. ಗುಂಡಿಗಳು ಮತ್ತು ಮಣ್ಣಿನಿಂದ ಕೂಡಿದ ರಸ್ತೆಗಳಲ್ಲಿ ನೀವು ಟೋಲ್ ವಿಧಿಸಿದರೆ, ಜನರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ” ಎಂದು ರಸ್ತೆ ಮತ್ತು ಸಾರಿಗೆ ಸಚಿವರು ಹೇಳಿದ್ದಾರೆ.

ಪ್ರಸ್ತುತ ಫಾಸ್ಟ್ತಾಗ್​ ವ್ಯವಸ್ಥೆಯಡಿ ಜಿಎನ್ಎಸ್ಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಯನ್ನು ಪರಿಚಯಿಸಲು ಸರ್ಕಾರಿ ಸ್ವಾಮ್ಯದ ಎನ್ಎಚ್ಎಐ ಉದ್ದೇಶಿಸಿದೆ. ಆರಂಭದಲ್ಲಿ ಆರ್​ಎಫ್​ಐಡಿ ಆಧಾರಿತ ಮತ್ತು ಜಿಎನ್ಎಸ್ಎಸ್ (ಗ್ಲೋಬಲ್ ನ್ಯಾವಿಗೇಷನ್​ ಸ್ಯಾಟ್​ಲೈಟ್​ ಸಿಸ್ಟಮ್​) ಆಧಾರಿತ ಟೋಲ್ ವ್ಯವಸ್ಥೆಗಳ ಮೂಳಕ ಹೈಬ್ರಿಡ್ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಗೌಪ್ಯತೆ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಮೊದಲು ವಾಣಿಜ್ಯ ವಾಹನಗಳಿಗೆ ಮತ್ತು ನಂತರ ಖಾಸಗಿ ವಾಹನಗಳಿಗೆ ಈ ವ್ಯವಸ್ಥೆ ಜಾರಿಗೆ ತರಲು ಎನ್ಎಚ್ಎಐ ಯೋಜಿಸಿದೆ. ವಂಚನೆ ಪತ್ತೆಹಚ್ಚಲು ಚಾಲಕರ ನಡವಳಿಕೆ ವಿಶ್ಲೇಷಣೆ ಮತ್ತು ಬ್ಯಾಕ್ ಎಂಡ್ ಡೇಟಾ ವಿಶ್ಲೇಷಣೆಯೂ ನಡೆಯಲಿದೆ.

ಬ್ಯಾಂಕ್​ನಿಂದ ಟೋಲ್​ ಸಾಲ

ಜಿಎನ್​ಎಸ್​ಎಸ್​ ಮೂಲಕ ಪಾವತಿ ವಿಧಾನಗಳನ್ನು ಪ್ರಿಪೇಯ್ಡ್​​ನಿಂದ ಪೋಸ್ಟ್​​​ಪೇಯ್ಡ್​ಗೆ ಬದಲಾಯಿಸಬಹುದು. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಪ್ರಯಾಣದ ಯೋಜನೆಗಳ ಆಧಾರದ ಮೇಲೆ ತ್ವರಿತ ಸಾಲ ನೀಡಬಹುದು ಎಂದು ಎನ್ಎಚ್ಎಐ ಹೇಳಿದೆ.

ಇದನ್ನೂ ಓದಿ:Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ

ಹೈಬ್ರಿಡ್ ವರ್ಷಾಶನ ಮಾದರಿ (ಎಚ್ಎಎಂ) ಅಡಿಯಲ್ಲಿ, ಹೆದ್ದಾರಿ ನಿರ್ಮಾಣವನ್ನು ಹೊಂದಿಕೊಳ್ಳುವ ಮತ್ತು ಮಾರುಕಟ್ಟೆ ಚಾಲಿತವಾಗಿಸಬಹುದು ಎಂದು ಗಡ್ಕರಿ ಮಂಗಳವಾರ ಹೇಳಿದ್ದಾರೆ. “ಗುತ್ತಿಗೆದಾರರು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ನಾನು ನಂಬುತ್ತೇನೆ.”

ಹೈಬ್ರಿಡ್ ಆನ್ಯುಟಿ ಮಾಡೆಲ್​ ಅಡಿಯಲ್ಲಿ, ಯೋಜನಾ ವೆಚ್ಚದ ಸುಮಾರು ಶೇಕಡಾ 40 ಸರ್ಕಾರ ಭರಿಸಿದರೆ, ಉಳಿದದ್ದನ್ನು ಗುತ್ತಿಗೆದಾರರು ಭರಿಸುತ್ತಾರೆ. “ಗುತ್ತಿಗೆದಾರರು ಯೋಜನೆಯ ಶೇಕಡಾ 60 ಕ್ಕಿಂತ ಹೆಚ್ಚು ಹೂಡಿಕೆ ಮಾಡಲು ಸಿದ್ಧರಿದ್ದರೆ ಸರ್ಕಾರವು ಅದಕ್ಕೂ ಬದ್ಧವಾಗಿರುತ್ತದೆ. ನಮಗೆ ಬೇಕಾಗಿರುವುದು ಒಪ್ಪಂದ ಮತ್ತು ಚಾಲಿತ ಮಾರುಕಟ್ಟೆ ” ಎಂದು ಗಡ್ಕರಿ ಹೇಳಿದ್ದಾರೆ.

ಜಿಪಿಎಸ್​ ಮೂಲಕ ಟೋಲ್​ ಸಂಗ್ರಹ ಹೆಚ್ಚಳ

ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವನ್ನು ಪರಿಚಯಿಸುವುದರಿಂದ ಭಾರತದ ಒಟ್ಟು ಟೋಲ್ ಆದಾಯವನ್ನು ಕನಿಷ್ಠ 10,000 ಕೋಟಿ ರೂ.ಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಗಡ್ಕರಿ ಹೇಳಿದ್ದಾರೆ, 2023-24ರಲ್ಲಿ, ಭಾರತದಲ್ಲಿ ಒಟ್ಟು ಟೋಲ್ ಸಂಗ್ರಹವು 64,809.86 ಕೋಟಿ ರೂ.ಗೆ ತಲುಪಿದೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 35 ರಷ್ಟು ಹೆಚ್ಚಳವಾಗಿದೆ.

Continue Reading

ಕರ್ನಾಟಕ

Mahindra Paddy Walker: ಮಹೀಂದ್ರಾ ಕಂಪನಿಯಿಂದ ʻ6ಆರ್‌ಒ ಪ್ಯಾಡಿ ವಾಕರ್ʼ ಭತ್ತ ನಾಟಿ ಯಂತ್ರ ಬಿಡುಗಡೆ

Mahindra Paddy Walker: : ಭತ್ತವನ್ನು ಪ್ರಮುಖ ಬೆಳೆಯುವ ಕರ್ನಾಟಕವು ವಿಶ್ವ ದರ್ಜೆಯ ಅಕ್ಕಿಗೆ ಹೆಸರುವಾಸಿಯಾಗಿದೆ ಮತ್ತು ಭತ್ತದ ಯಾಂತ್ರೀಕರಣ ತಂತ್ರಜ್ಞಾನಗಳನ್ನು ಆರಂಭಿಕವಾಗಿ ಅಳವಡಿಸಿಕೊಂಡ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬೆಳೆಯಲಾಗುತ್ತದೆ. ಹೊಸ ಪರಿಹಾರವು ನೀರಿನ ಸಂರಕ್ಷಣೆ, ಕಡಿಮೆ ಪರಿಸರ ಮಾಲಿನ್ಯ ತಡೆಯುತ್ತದೆ.

VISTARANEWS.COM


on

Mahindra Paddy Walker
Koo

ಬೆಂಗಳೂರು : ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ʻಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ʼನ ʻಕೃಷಿ ಉಪಕರಣಗಳ ವಿಭಾಗವುʼ (ಫಾರ್ಮ್‌ ಎಕ್ವಿಪ್‌ಮೆಂಟ್‌ ಸೆಕ್ಟರ್‌-ಎಫ್‌ಇಎಸ್) ಹೊಸ 6 ಸಾಲು ಭತ್ತದ ನಾಟಿ (Mahindra Paddy Walker) ಯಂತ್ರವನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ 4ಆರ್‌ಒ ವಾಕ್ ಬಿಹೈಂಡ್‌ ನಾಟಿಯಂತ್ರ (ಎಂಪಿ 461) ಮತ್ತು 4 ಆರ್​ಒ ರೈಡ್-ಆನ್ (ಪ್ಲಾಂಟಿಂಗ್ ಮಾಸ್ಟರ್ ಪ್ಯಾಡಿ 4 ಆರ್​ಒ) ಅನ್ನು ಯಶಸ್ವಿಯಾಗಿ ಪರಿಚಯಿಸಿದ ನಂತರ, ಮಹೀಂದ್ರಾ ಅವರ ಹೊಸ ʻ6ಆರ್​ಒ ಪ್ಯಾಡಿ ವಾಕರ್ʼ ಭತ್ತದ ನಾಟಿ ಯಂತ್ರವು ಭತ್ತ ನಾಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹೀಂದ್ರಾದ ಸ್ಥಿತಿಗತಿಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: Mahindra XUV 3XO : ಮಹೀಂದ್ರಾದ ವಿಶೇಷ ದಾಖಲೆ; 60 ನಿಮಿಷದಲ್ಲಿ 50 ಸಾವಿರ ಕಾರು ಬುಕಿಂಗ್​!

ಈ ವಿಭಾಗದಲ್ಲಿ ಕಂಪನಿಯು ಈಗಾಗಲೇ ಮುಂಚೂಣಿ ಸ್ಥಾನ ಹೊಂದಿದ್ದು, ಇದನ್ನು ಮತ್ತಷ್ಟು ಉತ್ತಮಗೊಳಿಸಲು ಹೊಸ ಯಂತ್ರ ನೆರವಾಗಲಿದೆ. ಭತ್ತವನ್ನು ಪ್ರಮುಖ ಬೆಳೆಯುವ ಕರ್ನಾಟಕವು ವಿಶ್ವ ದರ್ಜೆಯ ಅಕ್ಕಿಗೆ ಹೆಸರುವಾಸಿಯಾಗಿದೆ ಮತ್ತು ಭತ್ತದ ಯಾಂತ್ರೀಕರಣ ತಂತ್ರಜ್ಞಾನಗಳನ್ನು ಆರಂಭಿಕವಾಗಿ ಅಳವಡಿಸಿಕೊಂಡ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬೆಳೆಯಲಾಗುತ್ತದೆ. ಹೊಸ ಪರಿಹಾರವು ನೀರಿನ ಸಂರಕ್ಷಣೆ, ಕಡಿಮೆ ಪರಿಸರ ಮಾಲಿನ್ಯ ತಡೆಯುತ್ತದೆ. ಇದರ ಜೊತೆಗೆ, ಕಾರ್ಮಿಕ-ಕೇಂದ್ರಿತ ತಂತ್ರಗಳಿಗೆ ಹೋಲಿಸಿದರೆ ಕಡಿಮೆ ಕಾರ್ಮಿಕ ವೆಚ್ಚ ಸೇರಿದಂತೆ, ಭತ್ತದ ಕೃಷಿಗೆ ಸಂಬಂಧಿಸಿದ ಒಟ್ಟಾರೆ ಲಾಭದಾಯಕತೆ ನೀಡುತ್ತದೆ.

ಹೊಸ ʻಮಹೀಂದ್ರಾ 6 ಆರ್​ಒ ಪ್ಯಾಡಿ ವಾಕರ್ʼ ಭತ್ತ ನಾಟಿ ಯಂತ್ರವು ಅತ್ಯುತ್ತಮ ಆಪರೇಟರ್ ದಕ್ಷತೆ ಒದಗಿಸುತ್ತದೆ. ನಿಖರತೆ ಮತ್ತು ಪರಿಣಾಮಕಾರಿ ನಾಟಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಭತ್ತದ ಕೃಷಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ. ಹಸ್ತಚಾಲಿತವಾಗಿ ನಿರ್ವಹಿಸಲ್ಪಡುವ ಹೊಸ ನಾಟಿ ಯಂತ್ರವು ವಿನ್ಯಾಸದಲ್ಲಿ ಚಿಕ್ಕದಾಗಿದೆ ಆಗಿದೆ ಮತ್ತು ಸೀಮಿತ ಸ್ಥಳಗಳಲ್ಲಿ ಸುಲಭವಾಗಿ ಇದನ್ನು ಕಾರ್ಯಾಚರಿಸಬಹುದಾಗಿದೆ.

ಆರು ಸಾಲುಗಳಲ್ಲಿ ಭತ್ತ ನಾಟಿ

ಏಕಕಾಲದಲ್ಲಿ ಆರು ಸಾಲುಗಳಲ್ಲಿ, ಒಂದೇ ಪಾಸ್ ನಲ್ಲಿ ಏಕರೂಪದ ನಾಟಿ ಮಾಡಲು ಇದು ಅವಕಾಶ ಕಲ್ಪಿಸಲಿದೆ. ಶಕ್ತಿ, ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯ ಮೇಲೆ ಗಮನ ಕೇಂದ್ರೀಕರಿಸಿ, ಹೊಸ ಭತ್ತ ನಾಟಿ ಯಂತ್ರವನ್ನು ತಯಾರಿಸಲಾಗಿದ್ದು, ಇದು ಹೆಚ್ಚು ಬಾಳಿಕೆ ಬರುವ ಗೇರ್‌ಬಾಕ್ಸ್ ಮತ್ತು 4-ಲೀಟರ್ ಸಾಮರ್ಥ್ಯದೊಂದಿಗೆ ಶಕ್ತಿಯುತ ಎಂಜಿನ್ ಅನ್ನು ಹೊಂದಿದೆ. ಇದು ಹೆಚ್ಚಿನ ಉತ್ಪಾದನೆ ಮತ್ತು ಕಡಿಮೆ ಇಂಧನ ಬಳಕೆಯನ್ನು ಖಾತರಿಪಡಿಸುತ್ತದೆ, ಭತ್ತದ ಕೃಷಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ಜೊತೆಗೆ ಸರ್ವೀಸ್‌ ಅಂತರ ಹೆಚ್ಚಿರುವ ಕಾರಣದಿಂದ ಸೇವಾ ವೆಚ್ಚವನ್ನು ಕಡಿಮೆ ಮಾಡುತ್ತದೆ.

2 ವರ್ಷಗಳ ಮರುಪಾವತಿ ಅವಧಿ ಮತ್ತು ಕೇವಲ 200 ಎಕರೆಗಳ ಕನಿಷ್ಠ ಕಾರ್ಯಾಚರಣಾ ಪ್ರದೇಶದೊಂದಿಗೆ, ಹೊಸ ಭತ್ತ ನಾಟಿ ಯಂತ್ರವು ಬಾಡಿಗೆ ವ್ಯವಹಾರಗಳಿಗೆ ಅತ್ಯುತ್ತಮ ಭವಿಷ್ಯ ಒದಗಿಸುತ್ತದೆ. ಕರ್ನಾಟಕದಲ್ಲಿ ಲಭ್ಯವಿರುವ ಮಹೀಂದ್ರಾದ ವ್ಯಾಪಕವಾದ ಕೃಷಿ ಯಂತ್ರೋಪಕರಣಗಳ ಡೀಲರ್ ನೆಟ್‌ವರ್ಕ್‌ ಮೂಲಕ ರೈತರು ಮನೆ ಬಾಗಿಲಿಗೆ ಸೇವೆ ಪಡೆಯಬಹುದು. ಇದನ್ನು ‘ಮಹೀಂದ್ರಾ ಸಾಥಿ’ ಎಂಬ ಹೊಸ ಬಳಕೆದಾರ-ಸ್ನೇಹಿ ಅಪ್ಲಿಕೇಶನ್ ಮೂಲಕ ಮೇಲ್ವಿಚಾರಣೆ ಮಾಡಬಹುದು. ಹೊಸ ಮಹೀಂದ್ರಾ ʻ6 ಆರ್ಒ ಪ್ಯಾಡಿ ವಾಕರ್ʼ ಮತ್ತು ಮಹೀಂದ್ರಾದ ಸಂಪೂರ್ಣ ಶ್ರೇಣಿಯ ಭತ್ತದ ನಾಟಿ ಯಂತ್ರಗಳನ್ನು ಮಹೀಂದ್ರ ಫೈನಾನ್ಸ್ ಮತ್ತು ಶ್ರೀರಾಮ್ ಫೈನಾನ್ಸ್‌ನಿಂದ ಅತ್ಯುತ್ತಮ ದರ್ಜೆಯ ಹಣಕಾಸು ಆಯ್ಕೆಗಳೊಂದಿಗೆ ನೀಡಲಾಗುವುದು.

Continue Reading

ಆಟೋಮೊಬೈಲ್

Doodle V3 E-Cycle: ‘ಕಲ್ಕಿ 2898 ಎಡಿ’ನಿಂದ ಪ್ರೇರಿತವಾದ ಇ-ಸೈಕಲ್ ಮಾರುಕಟ್ಟೆಗೆ

ದೇಶದಲ್ಲಿ ಮುಂಚೂಣಿಯಲ್ಲಿರುವ ಎಲೆಕ್ಟ್ರಿಕ್ ಸೈಕಲ್ ತಯಾರಕರಾದ ಮೋಟೋರಾಡ್ ಬಹುನಿರೀಕ್ಷಿತ ಪ್ರಭಾಸ್ ಅಭಿನಯದ “ಕಲ್ಕಿ: 2898 ಎಡಿ” ಯೊಂದಿಗೆ ವಿಶಿಷ್ಟ ಪಾಲುದಾರಿಕೆಯಲ್ಲಿ ಇ ಸೈಕಲ್ ಅನ್ನು ಪರಿಚಯಿಸುತ್ತಿದೆ.
“ಕಲ್ಕಿ ಲಿಮಿಟೆಡ್ ಎಡಿಷನ್ ಡೂಡಲ್” (Doodle V3 E-Cycle) ಎಂಬ ಹೆಸರಿನ ಈ ಸೈಕಲ್ ಚಲನಚಿತ್ರದ ಸಾಹಸಮಯ ಮನೋಭಾವ ಮತ್ತು ಭವಿಷ್ಯದ ಸೆಟ್ಟಿಂಗ್ ಅನ್ನು ಒಳಗೊಂಡಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

VISTARANEWS.COM


on

By

Doodle V3 E-Cycle
Koo

ಪುಣೆ (Pune) ಮೂಲದ ಎಲೆಕ್ಟ್ರಿಕ್ ಬೈಸಿಕಲ್ ಕಂಪನಿಯಾದ ಇಮೊಟೊರಾಡ್ (EMotorad) ಇತ್ತೀಚೆಗೆ ಕಲ್ಕಿ ಸಹಭಾಗಿತ್ವದಲ್ಲಿ ಸೀಮಿತ ಆವೃತ್ತಿಯ ಇ-ಸೈಕಲ್ (Doodle V3 E-Cycle) ಅನ್ನು ಬಿಡುಗಡೆ ಮಾಡಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್ (Prabhas) ಅವರ ಅಭಿನಯದ ಮುಂಬರುವ ಆಕ್ಷನ್ ಚಿತ್ರ 2898 ಎಡಿ ಯಿಂದ (Kalki 2898 AD) ಪ್ರೇರಿತವಾದ ಇ ಸೈಕಲ್ ಇದಾಗಿದೆ.

ದೇಶದಲ್ಲಿ ಮುಂಚೂಣಿಯಲ್ಲಿರುವ ಎಲೆಕ್ಟ್ರಿಕ್ ಸೈಕಲ್ ತಯಾರಕರಾದ ಮೋಟೋರಾಡ್ ಬಹುನಿರೀಕ್ಷಿತ ಪ್ರಭಾಸ್ ಅಭಿನಯದ “ಕಲ್ಕಿ: 2898 ಎಡಿ” ಯೊಂದಿಗೆ ವಿಶಿಷ್ಟ ಪಾಲುದಾರಿಕೆಯಲ್ಲಿ ಇ ಸೈಕಲ್ ಅನ್ನು ಪರಿಚಯಿಸುತ್ತಿದೆ.
ಕಲ್ಕಿ: 2898 ಎಡಿ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದುಲ್ಕರ್ ಸಲ್ಮಾನ್, ದಿಶಾ ಪಟಾನಿ, ರಾಣಾ ದಗ್ಗುಬಾಟಿ ಮೊದಲಾದವರು ನಟಿಸಿದ್ದಾರೆ. “ಕಲ್ಕಿ ಲಿಮಿಟೆಡ್ ಎಡಿಷನ್ ಡೂಡಲ್” ಎಂಬ ಹೆಸರಿನ ಈ ಸೈಕಲ್ ಚಲನಚಿತ್ರದ ಸಾಹಸಮಯ ಮನೋಭಾವ ಮತ್ತು ಭವಿಷ್ಯದ ಸೆಟ್ಟಿಂಗ್ ಅನ್ನು ಒಳಗೊಂಡಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಕಲ್ಕಿ: 2898 ಎಡಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಆಕ್ಷನ್- ಸಾಹಸ ಚಲನಚಿತ್ರ. ಅದರ ದೃಶ್ಯ ವೈಭವ ಮತ್ತು ತಾರಾ ಬಳಗದ ಶಕ್ತಿಯನ್ನು ಸಂಯೋಜಿಸಿ ಇದನ್ನು ತಯಾರಿಸಲಾಗಿದೆ. ಮೊಟೊರಾಡ್ ನ ಸೀಮಿತ ಆವೃತ್ತಿಯ ಇ-ಸೈಕಲ್ ಜನಪ್ರಿಯ ಡೂಡಲ್ ವಿ3 ಮಾದರಿಯನ್ನು ಆಧರಿಸಿದೆ.

“ಕಲ್ಕಿ ಲಿಮಿಟೆಡ್ ಎಡಿಷನ್ ಡೂಡಲ್” ನ ಈ ವಿಶೇಷ ಆವೃತ್ತಿಯು ಚಲನಚಿತ್ರದಿಂದ ಪ್ರೇರಿತವಾದ ವಿಶೇಷ ಗ್ರಾಫಿಕ್ಸ್ ಮತ್ತು ಬಣ್ಣದ ಯೋಜನೆಗಳನ್ನು ಹೊಂದಿದೆ. ಇದು ಅಭಿಮಾನಿಗಳಿಗೆ ಸಂಗ್ರಹಿಸಬಹುದಾದಂತೆ ಮಾಡುತ್ತದೆ.
ಈ ವಿಶಿಷ್ಟವಾದ ಸೀಮಿತ ಆವೃತ್ತಿಯ ಡೂಡಲ್ ವಿ3 ಇ-ಸೈಕಲ್ ಅನ್ನು ಪರಿಚಯಿಸಲು ಪ್ರಭಾಸ್ ಅವರ ಇತ್ತೀಚಿನ ಚಲನಚಿತ್ರ ಕಲ್ಕಿಯೊಂದಿಗೆ ಸಹಕರಿಸಲು ನಾವು ರೋಮಾಂಚನಗೊಂಡಿದ್ದೇವೆ ಎಂದು ಇಮೊಟೊರಾಡ್‌ನ ಸಿಇಒ ಕುನಾಲ್ ಗುಪ್ತಾ ಹೇಳಿದರು.

ನಮ್ಮ ಪಾಲುದಾರಿಕೆಯು ನಾವೀನ್ಯತೆಗೆ ನಮ್ಮ ಬದ್ಧತೆ ಮತ್ತು ಉತ್ಪನ್ನಗಳನ್ನು ರಚಿಸುವ ನಮ್ಮ ಉತ್ಸಾಹವನ್ನು ಪ್ರತಿನಿಧಿಸುತ್ತದೆ. ಅದು ನಮ್ಮ ಗ್ರಾಹಕರ ಜೀವನಶೈಲಿ ಮತ್ತು ಆಸಕ್ತಿಗಳೊಂದಿಗೆ ಅನುರಣಿಸುತ್ತದೆ. ಅಭಿಮಾನಿಗಳಿಗೆ ಫ್ಯೂಚರಿಸ್ಟಿಕ್ ಇ-ಸೈಕಲ್ ಅನ್ನು ನೀಡಲು ನಾವು ಸಂತೋಷಪಡುತ್ತೇವೆ. ಅದು ಅವರಿಗೆ ನಿಕಟವಾಗಿ ಸಂಯೋಜಿಸಲು ಮತ್ತು ಅಂತಹ ಐಕಾನಿಕ್ ಚಲನಚಿತ್ರದ ಭಾಗವನ್ನು ಮನೆಗೆ ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

Doodle V3 E-Cycle


ಮುಂಗಡ ಬುಕ್ಕಿಂಗ್ ಲಭ್ಯ

ಇದರ ಬೆಲೆ 55,999 ರೂಪಾಯಿ. ಕಲ್ಕಿ ಲಿಮಿಟೆಡ್ ಎಡಿಷನ್ ಡೂಡಲ್ ಅನ್ನು ಮುಂಗಡವಾಗಿ ಬುಕ್ಕಿಂಗ್ ಮಾಡಲು 2,898 ರೂ. ಗಳ ಮುಂಗಡ ಪಾವತಿಯ ವಿಶೇಷ ಸೌಲಭ್ಯವೂ ಇದೆ.

ಇದನ್ನೂ ಓದಿ: Top 10 Motar Bike: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಬೈಕ್‌ಗಳಿವು

ವಿಶೇಷತೆ ಏನು?

ಕಲ್ಕಿ ಲಿಮಿಟೆಡ್ ಆವೃತ್ತಿಯು ವಿಶೇಷವಾದ “ಕಲ್ಕಿ: 2898ಎಡಿ” ನಿಂದ ಪ್ರೇರಿತವಾಗಿ ವಿನ್ಯಾಸಗೊಳಿಸಲಾಗಿದೆ. ಸುಲಭವಾಗಿ ಸಾಗಿಸಲು ಮಡಿಚಬಹುದಾದ ಫ್ರೇಮ್ ಇದರಲ್ಲಿದೆ. ವರ್ಧಿತ ಸ್ಥಿರತೆಗಾಗಿ ಫ್ಯಾಟ್ ಟೈರ್‌ಗಳು ಇದರ ವೈಶಿಷ್ಟ್ಯವಾಗಿದೆ. ವಿಶೇಷ ವಿನ್ಯಾಸದ ಜೊತೆಗೆ ಇ-ಸೈಕಲ್ ಅನ್ನು ಮಡಚಬಹುದು. ಇದು ನಗರ ಪ್ರಯಾಣಿಕರಿಗೆ ಸೂಕ್ತವಾಗಿದೆ. ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಉತ್ತಮ ಸ್ಥಿರತೆ ಮತ್ತು ಸೌಕರ್ಯಕ್ಕಾಗಿ ಇದರ ಟೈರ್‌ ಗಳು ಸೂಕ್ತವಾಗಿದೆ.

60ಕ್ಕಿಂತ ಹೆಚ್ಚು ಕಿ.ಮೀ. ವ್ಯಾಪ್ತಿ ಮತ್ತು 25ಕೆಎಂಪಿಹೆಚ್ ಗರಿಷ್ಠ ವೇಗವನ್ನು ಹೊಂದಿರುವ ಇದು ಬಹುಮುಖ ಕಾರ್ಯಕ್ಷಮತೆಗಾಗಿ ಐದು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ವಿಶಿಷ್ಟ ವಿನ್ಯಾಸ ಮತ್ತು ಸೀಮಿತ ಲಭ್ಯತೆಯೊಂದಿಗೆ ಕಲ್ಕಿ ಲಿಮಿಟೆಡ್ ಆವೃತ್ತಿಯ ಡೂಡಲ್ ಇ-ಸೈಕಲ್ ಉತ್ಸಾಹಿಗಳು ಮತ್ತು ಚಲನಚಿತ್ರದ ಅಭಿಮಾನಿಗಳಿಗೆ ಬೇಡಿಕೆಯ ಉತ್ಪನ್ನವಾಗಿದೆ.

Continue Reading

Latest

Top 10 Motar Bike: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಬೈಕ್‌ಗಳಿವು

Top 10 Motar Bike: ಬೈಕ್ ಶೋರೂಂಗೆ ಹೋದರೆ ಯಾವ ಬೈಕ್ ಖರೀದಿಸುವುದು ಯಾವುದನ್ನು ಬಿಡುವುದು ಎಂಬ ಗೊಂದಲ ಯುವಕರಲ್ಲಿ ಉಂಟಾಗುತ್ತದೆ. ಅಂತಹ ನ್ಯೂ ಮಾಡೆಲ್ ಬೈಕ್ ಗಳು ಒಂದರ ಮೇಲೆ ಒಂದು ಸ್ಪರ್ಧೆಯಲ್ಲಿ ನಿಂತಿರುತ್ತವೆ. ಹಾಗಾಗಿ ಬೈಕ್ ಕೊಳ್ಳಲು ಬಯಸುವ ಬೈಕ್ ಪ್ರಿಯರಿಗೆ ಮೇ 2024ರಲ್ಲಿ ಸ್ಪರ್ಧೆಯಲ್ಲಿರುವ ಟಾಪ್ 10 ಮೋಟಾರ್ ಸೈಕಲ್ ಗಳಾದ ಹೀರೊ ಮೊಟೊಕಾರ್ಪ್, ಹೋಂಡಾ ಶೈನ್, ಬಜಾಜ್ ಪಲ್ಸರ್ ಇತ್ಯಾದಿಗಳ ವಿವರ ಇಲ್ಲಿದೆ.

VISTARANEWS.COM


on

Top 10 Motar Bike
Koo

ಮಾರುಕಟ್ಟೆಗೆ ಪ್ರತಿವರ್ಷ ಹೊಸ ಹೊಸ ವಿಧದ ಮೋಟಾರು ಬೈಕ್(Motar Bike)ಗಳು ಬರುತ್ತವೆ. ಬೈಕ್ ಶೋರೂಂಗೆ ಹೋದರೆ ಯಾವ ಬೈಕ್ ಖರೀದಿಸುವುದು, ಯಾವುದನ್ನು ಬಿಡುವುದು ಎಂಬ ಗೊಂದಲ ಯುವಕರಲ್ಲಿ ಉಂಟಾಗುತ್ತದೆ. ಅಂತಹ ನ್ಯೂ ಮಾಡೆಲ್ ಬೈಕ್‌ಗಳು ಒಂದರ ಮೇಲೆ ಒಂದು ಸ್ಪರ್ಧೆಯಲ್ಲಿ ನಿಂತಿರುತ್ತವೆ. ಹಾಗಾಗಿ ಬೈಕ್ ಕೊಳ್ಳಲು ಬಯಸುವ ಬೈಕ್ ಪ್ರಿಯರಿಗೆ 2024ರಲ್ಲಿ ಸ್ಪರ್ಧೆಯಲ್ಲಿರುವ ಟಾಪ್ 10 ಮೋಟಾರ್ ಸೈಕಲ್ ಗಳ ವಿವರ ನೀಡುತ್ತಿದ್ದೇವೆ.

2024ರಲ್ಲಿ ಕಾರುಗಳು ತಮ್ಮ ಮಾರಾಟದಲ್ಲಿ ಕುಸಿತ ಕಂಡರೂ ದ್ವಿಚಕ್ರ ವಾಹನಗಳು ಮಾತ್ರ ಮಾರುಕಟ್ಟೆಯಲ್ಲಿ ಶೇ.1.59ರಷ್ಟು ಬೆಳವಣಿಯನ್ನು ಕಂಡಿವೆ. ಅದರಲ್ಲಿ 10 ಮೋಟಾರ್ ಸೈಕಲ್‌ಗಳ ಮಾರಾಟವು ಒಟ್ಟು 8.45 ಲಕ್ಷ ಯುನಿಟ್‌ಗಳನ್ನು ತಲುಪಿದೆ ಎನ್ನಲಾಗಿದೆ. ಹಾಗಾಗಿ ಈ ಬಾರಿ ಅಗ್ರಸ್ಥಾನದಲ್ಲಿರುವ ಮೋಟಾರ್ ಸೈಕಲ್ ಗಳ ವಿವರ ಇಲ್ಲಿದೆ.

Top 10 Motar Bike

1. ಹೀರೊ

ಹೀರೊ ಮೊಟೊಕಾರ್ಪ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮೋಟಾರ್ ಸೈಕಲ್ ಆಗಿದೆ. ಹೀರೊ ಸ್ಪ್ಲೆಂಡರ್ ಮೇ 2024ರಲ್ಲಿ 3,04,663 ಯುನಿಟ್‌ಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಆದರೆ ಕಳೆದ ವರ್ಷದ ಮಾರಾಟಕ್ಕಿಂತ 37,863 ಯುನಿಟ್‌ಗಳಷ್ಟು ಕಡಿಮೆ ಮಾರಾಟವಾಗಿದೆ. ಹಾಗಾಗಿ ಕಂಪನಿಯು ಮಾರಾಟದಲ್ಲಿ ಶೇಕಡಾ 11.05ರಷ್ಟು ಕುಸಿತವನ್ನು ಕಂಡಿದೆ. ಮೇ 2024ರಲ್ಲಿ 36.03 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ.
ಸ್ಪ್ಲೆಂಡರ್ ಹೊರತುಪಡಿಸಿ ದ್ವಿಚಕ್ರ ವಾಹನಗಳಾದ ಹೆಚ್‌ಎಫ್ ಡಿಲಕ್ಸ್ ಮತ್ತು ಪ್ಯಾಶನ್ ಕ್ರಮವಾಗಿ 4 ಮತ್ತು 10ನೇ ಸ್ಥಾನದಲ್ಲಿದೆ. ಹೀರೊ ಹೆಚ್ ಎಫ್ ಡಿಲಕ್ಸ್ ಮೇ 2024ರಲ್ಲಿ 87,143 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಆದರೆ ಕಳೆದ ವರ್ಷದ ಮಾರಾಟಕ್ಕಿಂತ 21,957 ಯುನಿಟ್ ಗಳಷ್ಟು ಕಡಿಮೆ ಮಾರಾಟವಾಗಿದೆ. ಹಾಗಾಗಿ ಕಂಪೆನಿಯು ಮಾರಾಟದಲ್ಲಿ ಶೇಕಡಾ-20.13ರಷ್ಟು ಕುಸಿತವನ್ನು ಕಂಡಿದೆ. ಹಾಗೇ ಹೀರೋ ಫ್ಯಾಶನ್ ಮೇ 2024ರಲ್ಲಿ 22,327 ಯುನಿಟ್ ಗಳನ್ನು ಮಾರಾಟ ಮಾಡಿತ್ತು. ಆದರೆ ಕಳೆದ ವರ್ಷದ ಮಾರಾಟಕ್ಕಿಂತ 507.04 ಪ್ರತಿಶತದಷ್ಟು ಬೆಳೆವಣಿಗೆಯನ್ನು ಕಂಡಿದೆ. ಹೀರೊ ಹೆಚ್ ಎಫ್ ಡಿಲಕ್ಸ್ ಮತ್ತು ಪ್ಯಾಶನ್ ಮೇ 2024ರಲ್ಲಿ ಕ್ರಮವಾಗಿ 10.31 ಶೇಕಡಾ ಮತ್ತು 2.64 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿವೆ.

Top 10 Motar Bike

1. ಹೋಂಡಾ

ಜಪಾನಿನ ವಾಹನ ತಯಾರಕ ಕಂಪನಿಯಾದ ಹೋಂಡಾ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹೋಂಡಾ ಶೈನ್ ಮೇ 2024ರಲ್ಲಿ 1,49,054 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ 45,355 ಯುನಿಟ್‌ಗಳಷ್ಟು ಹೆಚ್ಚು ಮಾರಾಟ ಮಾಡಿ 43.74 ಪ್ರತಿಶತದಷ್ಟು ಬೆಳೆವಣಿಗೆಯನ್ನು ಹೊಂದಿದೆ ಮತ್ತು 17.63 ಶೇ. ಮಾರುಕಟ್ಟೆ ಪಾಲನ್ನು ಹೊಂದಿದೆ.
ಹಾಗೆಯೇ ಹೋಂಡಾ ಯುನಿಕಾರ್ನ್ ಮೇ 2024ರಲ್ಲಿ 24,740 ಯುನಿಟ್ ಗಳನ್ನು ಮಾರಾಟ ಮಾಡುವುದರೊಂದಿಗೆ 8ನೇ ಸ್ಥಾನದಲ್ಲಿದೆ ಹಾಗೂ ಈ ವರ್ಷ 2.93 ಶೇಕಡಾ ಮಾರುಕಟ್ಟೆ ಪಾಲನ್ನು ಪಡೆದಿದೆ.

Top 10 Motar Bike

3. ಬಜಾಜ್

ಬಜಾಜ್ ಪಲ್ಸರ್ ಮೇ 2024ರಲ್ಲಿ 1,28,480 ಯುನಿಟ್ ಗಳನ್ನು ಮಾರಾಟ ಮಾಡುವ ಮೂಲಕ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ 77 ಯುನಿಟ್ ಗಳಷ್ಟು ಹೆಚ್ಚು ಮಾರಾಟ ಮಾಡಿ 0.06ರಷ್ಟು ಬೆಳವಣಿಗೆಯನ್ನು ಹೊಂದಿದೆ. ಮತ್ತು ಮೇ 2024ರಲ್ಲಿ 15.19 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ.
ಬಜಾಜ್ ಪ್ಲಾಟಿನಾ ಮೇ 2024ರಲ್ಲಿ 30,239 ಯುನಿಟ್ ಗಳನ್ನು ಮಾರಾಟ ಮಾಡಿ 7ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ -11,915ರಷ್ಟು ಕಡಿಮೆ ಮಾರಾಟ ಮಾಡಿ -28.27 ಪ್ರತಿಶತದಷ್ಟು ಕುಸಿತ ಕಂಡಿದೆ. ಇದು ಮೇ 2024ರಲ್ಲಿ 3.58 ಶೇಕಡಾ ಮಾಡುಕಟ್ಟೆಯ ಪಾಲನ್ನು ಹೊಂದಿದೆ.

Top 10 Motar Bike

4. ಟಿವಿಎಸ್

ಮೇ 2024ರಲ್ಲಿ ಟಿವಿಎಸ್ ಅಪಾಚೆ ಮತ್ತು ಟಿವಿಎಸ್ ರೈಡರ್ ಎರಡನ್ನೂ ಒಳಗೊಂಡಂತೆ ಶೇಕಡಾ 8.89 ಮಾರುಕಟ್ಟೆ ಪಾಲನ್ನು ಹೊಂದಿದೆ. ಅಪಾಚೆ ಕಳೆದ ವರ್ಷದ 41,955 ಯುನಿಟ್ ಗಳಿಗೆ ಹೋಲಿಸಿದರೆ 2024ರಲ್ಲಿ 37,906 ಯುನಿಟ್ ಗಳನ್ನು ಮಾರಾಟ ಮಾಡಿದೆ. ಹಾಗಾಗಿ ಈ ಬೈಕ್ ಮಾರಾಟದಲ್ಲಿ ಶೇಕಡಾ 9.65ರಷ್ಟು ಕುಸಿತ ಕಂಡಿದೆ. ಟಿವಿಎಸ್ ರೈಡರ್ ಕಳೆದ ವರ್ಷದ 34,440 ಯುನಿಟ್ ಗೆ ಹೋಲಿಸಿದರೆ ಮೇ 2024ರಲ್ಲಿ 37,249 ಯುನಿಟ್ ಗಳನ್ನು ಮಾರಾಟ ಮಾಡಿದೆ. ಹಾಗಾಗಿ ಈ ಬೈಕ್ ಶೇಕಡಾ 8.16ರಷ್ಟು ಬೆಳವಣಿಗೆಯನ್ನು ಕಂಡಿದೆ. ಅಪಾಚೆ ಮತ್ತು ರೈಡರ್ ಇವೆರಡು ಬೈಕ್ ಗಳ ಮಾರುಕಟ್ಟೆ ಪಾಲು ಕ್ರಮವಾಗಿ 4.48 ಮತ್ತು 4.41 ಶೇಕಡಾ ಆಗಿದೆ.

ಇದನ್ನೂ ಓದಿ: Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

Top 10 Motar Bike

5. ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಆರ್ ಇ ಕ್ಲಾಸಿಕ್ 350 ಮೇ 2024ರಲ್ಲಿ 23,779 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 2,571 ಯುನಿಟ್‌ಗಳಷ್ಟು ಕಡಿಮೆ ಮಾರಾಟ ಮಾಡಿ 9.76 ಶೇಕಡಾ ಕುಸಿತವನ್ನು ಕಂಡಿದೆ. ಹಾಗಾಗಿ ಮೇ 2024ರಲ್ಲಿ 2.81 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ.

Continue Reading
Advertisement
Paris Olympics 2024
ಕ್ರೀಡೆ2 mins ago

Paris Olympics 2024: ಒಲಿಂಪಿಕ್ಸ್​ಗೆ ಅರ್ಹತೆ ಪಡೆದ​ ರಾಜ್ಯದ ಇಬ್ಬರು ಸ್ವಿಮ್ಮರ್​ಗಳು

Illegal ganja storage in Ballari Arrest of two accused Rs 19 10 lakh Valuable ganja seized
ಕರ್ನಾಟಕ38 mins ago

Ballari News: ಬಳ್ಳಾರಿಯಲ್ಲಿ ಅಕ್ರಮ ಗಾಂಜಾ ಸಂಗ್ರಹ; ಇಬ್ಬರು ಆರೋಪಿಗಳ ಬಂಧನ

Arvind Kejriwal
ದೇಶ39 mins ago

Arvind Kejriwal: ಪ್ಯಾಂಟ್‌ ಲೂಸ್‌ ಆಗಿದೆ, ಒಂದು ಬೆಲ್ಟ್‌ ಕೊಡಿ; ಕೋರ್ಟ್‌ಗೆ ಅರವಿಂದ್‌ ಕೇಜ್ರಿವಾಲ್‌ ಮನವಿ‌

Karnataka Weather Forecast
ಮಳೆ42 mins ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

Railway New Rules
Latest42 mins ago

Railway New Rules: ರೈಲು ಪ್ರಯಾಣಿಕರೇ, ಬರ್ತ್‌ನಲ್ಲಿ ಮಲಗುವ ಕುರಿತ ಈ ಹೊಸ ರೂಲ್ಸ್‌ ನೆನಪಿನಲ್ಲಿರಲಿ!

Ashada Sale 2024
ಫ್ಯಾಷನ್48 mins ago

Ashada Sale 2024: ಆಷಾಢ ಸೇಲ್‌ನಲ್ಲಿ ಶಾಪಿಂಗ್‌ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Fishermen Arrest
ದೇಶ2 hours ago

Fishermen Arrest: ಶ್ರೀಲಂಕಾ ನೌಕಾಪಡೆಯ ನಾವಿಕ ಸಾವು; 10 ಭಾರತೀಯ ಮೀನುಗಾರರ ವಿರುದ್ಧ ಕೇಸ್‌ ದಾಖಲು

IND vs ENG Semi Final
ಕ್ರೀಡೆ2 hours ago

IND vs ENG Semi Final: ಗಯಾನದಲ್ಲಿ ಭಾರೀ ಗಾಳಿ-ಮಳೆ ಶುರು; ರದ್ದಾಗುತ್ತಾ ಸೆಮಿಫೈನಲ್​ ಪಂದ್ಯ?

Bitcoin Scam
ಕರ್ನಾಟಕ2 hours ago

Bitcoin Scam: ಬಿಟ್‌ಕಾಯಿನ್‌ ಕೇಸ್; ಪೊಲೀಸರ ಮೇಲೆ ಜೀಪ್‌ ಹತ್ತಿಸಿದ್ದ DySP ಶ್ರೀಧರ್‌ ಪೂಜಾರ್‌ಗೆ ಜಾಮೀನು!

IND vs ENG
ಕ್ರೀಡೆ2 hours ago

IND vs ENG: ಸೆಮಿ ಪಂದ್ಯಕ್ಕೂ ಮುನ್ನ ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ನಾಯಕ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ42 mins ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ8 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌