Theft Case : ಮನೆಗೆಲಸದವರ ಮಾತು ಕದ್ದು ಕೇಳಿಸಿಕೊಂಡ; ಕೆ.ಜಿ ಗಟ್ಟಲೆ ಚಿನ್ನ ದೋಚಿದ್ದು, 12 ಗಂಟೆಯಲ್ಲೇ ಸಿಕ್ಕಾಕೊಂಡ! - Vistara News

ಬೆಂಗಳೂರು

Theft Case : ಮನೆಗೆಲಸದವರ ಮಾತು ಕದ್ದು ಕೇಳಿಸಿಕೊಂಡ; ಕೆ.ಜಿ ಗಟ್ಟಲೆ ಚಿನ್ನ ದೋಚಿದ್ದು, 12 ಗಂಟೆಯಲ್ಲೇ ಸಿಕ್ಕಾಕೊಂಡ!

Theft Case : ಮನೆಗೆಲಸದವರ ಮಾತು ಕದ್ದು ಕೇಳಿಸಿಕೊಂಡ ಚಾಲಾಕಿ ಕಳ್ಳನೊಬ್ಬ ಕೆ.ಜಿ ಗಟ್ಟಲೆ ಚಿನ್ನ ದೋಚಿ, ಕೃತ್ಯದ 12 ಗಂಟೆಯಲ್ಲೇ ಗ್ಯಾಂಗ್‌ ಪೂರ್ತಿ ಸಿಕ್ಕಿಹಾಕಿಕೊಂಡಿದ್ದಾರೆ.

VISTARANEWS.COM

on

Thief arrested for stealing gold in Bengaluru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮನೆಕೆಲಸದವರ ಮಾತನ್ನು ಕದ್ದು (Theft Case) ಕೇಳಿ ಹೀಗೂ ಕಳ್ಳತನದ ಪ್ಲ್ಯಾನ್ ಮಾಡಬಹುದಾ? ಇಂತಹದೊಂದು ಘಟನೆಗೆ ಬೆಂಗಳೂರಿನಲ್ಲಿ ನಡೆದಿದೆ. ಮನೆ ಕೆಲಸದವರ ಮಾತನ್ನು ಕದ್ದು ಕೇಳಿಸಿಕೊಂಡ ಖದೀಮ ಕೆ.ಜಿ ಗಟ್ಟಲೆ ಚಿನ್ನ ದೋಚಿದವನು, ಕೃತ್ಯ ನಡೆದ 12 ಗಂಟೆಯಲ್ಲೇ ಸಿಕ್ಕಿಕೊಂಡಿದ್ದಾನೆ. ಸಿನಿಮಾ ಸ್ಟೈಲ್‌ನಲ್ಲೇ ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧಿಯಾಗಿದ್ದಾನೆ. ಸನ್ಯಾಸಿ ನಂದೀಶ್ ಬಂಧಿತ ಆರೋಪಿ.

ದೇವಸ್ಥಾನಕ್ಕೆ ಹೋಗುವವರ ಮನೆ ಟಾರ್ಗೆಟ್ ಮಾಡುತ್ತಿದ್ದವನು ದೇವಸ್ಥಾನವೊಂದರಲ್ಲೇ ಸಿಕ್ಕಿಬಿದ್ದಿದ್ದಾನೆ. ರಾಯರ ದರ್ಶನಕ್ಕೆ ಹೋದವರ ಮನೆ ಕಳ್ಳತನ ಮಾಡಿ, ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಲು ಹೊರಟಿದ್ದ. ಒಂದೂವರೆ ಕೆ.ಜಿ ಚಿನ್ನ ಕದ್ದಿದ್ದ ಖತರ್ನಾಕ್ ಕಳ್ಳನ ಗ್ಯಾಂಗ್‌ ಅನ್ನು ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಮನೆಗೆಲಸದವರ ಮಾತನ್ನ ಕದ್ದು ಕೇಳಿಸಿಕೊಂಡವನು ಕಳ್ಳತನಕ್ಕೆ ಇಳಿದಿದ್ದ. ಖತರ್ನಾಕ್ ಪ್ಲ್ಯಾನ್ ಮಾಡಿಯೂ 12 ಗಂಟೆಯೊಳಗೆ ಪೊಲೀಸರ ಅತಿಥಿಯಾಗಿದ್ದಾನೆ. ಸನ್ಯಾಸಿ ನಂದೀಶ್, ನಂದೀಶ್ ಪ್ರತಾಪ್ ಬಂಧಿತ ಆರೋಪಿಗಳು. ಆರೋಪಿ ಹನುಮೇಗೌಡ ಎಂಬಾತ ಎಸ್ಕೇಪ್ ಅಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮನೆಯವರು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ ಎಂದು ಕೆಲಸದವರು ಮಾತಾಡಿದ್ದರು. ಇದನ್ನ ಪಕ್ಕದಲ್ಲೇ ನಿಂತು ಸನ್ಯಾಸಿ ಮಠ ನಂದೀಶ ಕೇಳಿಕೊಂಡಿದ್ದ. ಈ ವಿಚಾರವನ್ನು ತನ್ನ ಸ್ನೇಹಿತರಿಗೆ ಹೇಳಿ ಕಳ್ಳತನಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ಮನೆಯವರು ಮಂತ್ರಾಲಯಕ್ಕೆ ಹೊರಡುತ್ತಿದ್ದಂತೆ ಮನೆ ಬಳಿ ಕಾದು ಕುಳಿತಿದ್ದ ಈ ಕಿಡಿಗೇಡಿಗಳು, ಮನೆಯ ಹಿಂಬದಿ ಕಿಟಕಿಯನ್ನು ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಮನೆಗೆ ಎಂಟ್ರಿ ಕೊಟ್ಟಿದ್ದರು.

ಮನೆಯಲ್ಲಿದ್ದ 1ಕೆ.ಜಿ 800 ಗ್ರಾಂ ಚಿನ್ನ ಎಗರಿಸಿ ಕಾಲ್ಕಿತ್ತಿದ್ದರು. ಕದ್ದ ಎಲ್ಲ ಚಿನ್ನವನ್ನು ಕೂಡ ರೂಮಿನಲ್ಲೇ ಸನ್ಯಾಸಿ ಮಠ ನಂದೀಶ ಇಟ್ಟಿದ್ದ . ಇತ್ತ ಮನೆ ಮಾಲೀಕರು ಮಂತ್ರಾಲಯದಿಂದ ವಾಪಸು ಬಂದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿಟಿವಿ ಆಧಾರಿಸಿ ಆರೋಪಿಗಳ ಜಾಡು ಹಿಡಿದಿದ್ದ ಪೊಲೀಸರು, ಧರ್ಮಸ್ಥಳ ದರ್ಶನ ಮುಗಿಸಿ ವಾಪಸ್‌ ಬರುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1ಕೆಜಿ 800 ಗ್ರಾಂ ಚಿನ್ನ ಸೇರಿ 18 ಸಾವಿರ ನಗದು ವಶಕ್ಕೆ ಪಡೆದು, ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ.

ಜಂಗ್ಲಿ ಗ್ಯಾಂಗ್‌ ಅರೆಸ್ಟ್‌

ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡು ಬಂದು ಕ್ಷಣಾರ್ಧದಲ್ಲಿ ಬೀಗ ಹೊಡೆದು ಸಿಕ್ಕ ಸಿಕ್ಕ ವಸ್ತುಗಳನ್ನ ಕದ್ದು ಮನೆಗಳವು ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದ ಬೆಂಗಳೂರಿನ ಕುಖ್ಯಾತ ಮನೆಗಳ್ಳ ಜಂಗ್ಲಿ ಆ್ಯಂಡ್ ಗ್ಯಾಂಗ್ ಅರೆಸ್ಟ್ ಆಗಿದೆ. ಬೆಂಗಳೂರಿನ ಆರ್.ಆರ್. ನಗರ ಪೊಲೀಸರು ಜೈದೀಪು ಅಲಿಯಾಸ್ ಜಂಗ್ಲಿ, ಚಂದನ್ @ ಗುಂಡ, ಸತೀಶ್ @ಬುಡ್ಡ, ದೀಪಕ್ @ದೀಪು ಮತ್ತು ಮಿಥುನ್ @ ಮಿಲ್ಕಿ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 10.18 ಲಕ್ಷ ರೂ. ಮೌಲ್ಯದ 103 ಗ್ರಾಂ ಚಿನ್ನ, 2 ಕೆ.ಜಿ.ಗೂ ಅಧಿಕ ಬೆಳ್ಳಿ, ಮೂರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಗಳವು ಮಾಡಲಿಕ್ಕೆಂದೆ ಬೈಕ್ ಕಳ್ಳತನ ಮಾಡುತ್ತಿದ್ದರು. ಕದ್ದ ಬೈಕ್‌ಗಳಲ್ಲಿ ರೌಂಡ್ಸ್ ಹಾಕಿ ಒಂಟಿ ಮನೆಗಳನ್ನು ಗುರುತಿಸಿ ಕೈಚಳಕ ತೋರಿಸುತ್ತಿದ್ದರು. ಅದರಂತೆ ಕಳೆದ ಸೆಪ್ಟೆಂಬರ್ 17ರಂದು ಆರ್.ಆರ್.ನಗರದ ಗಟ್ಟಿಗೇರೆ ನಿವಾಸದಲ್ಲಿ ಚಂದ್ರಶೇಖರ ಎಂಬುವರ ಮನೆಗೆ ಕನ್ನಹಾಕಿದ್ದರು. ಆರೋಪಿಗಳ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬೆಂಗಳೂರಿನ ಕುಖ್ಯಾತ ಕಳ್ಳ ಎಸ್ಕೇಪ್ ಕಾರ್ತಿಕ್‌ನ ಶಿಷ್ಯನೇ ಈ ಜೈದೀಪು. ಇದೀಗ ಈ ಜಂಗ್ಲಿ ಗ್ಯಾಂಗ್‌ ಅರೆಸ್ಟ್‌ ಆಗಿದೆ.

ಇದನ್ನೂ ಓದಿ: Accident Case : ದಾವಣಗೆರೆಯಲ್ಲಿ ದುರಂತ; ಬಿಸಿ ನೀರು ಹಾಗೂ ಬಿಸಿ ಸಾಂಬಾರ್‌ ಬಿದ್ದು ಪ್ರತ್ಯೇಕ ಕಡೆ ಇಬ್ಬರು ಮಕ್ಕಳು ಸಾವು

ಚಿನ್ನ ಕದ್ದು ಸ್ನೇಹಿತರಿಗೆ ಮಾರಾಟ

ಚಿನ್ನಾಭರಣ ಕದ್ದು ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದ ಕಳ್ಳರ ಬಂಧನವಾಗಿದೆ. ವಿಲ್ಲಾಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ ಖದೀಮರು ಹಿಂದಿನ ಬಾಗಿಲಿನಿಂದ ಎಂಟ್ರಿ ಕೊಟ್ಟು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ರಾಮ್ ಕುಮಾರ್(23), ಇಸೈರಾಜ್ (27) ಬಂಧಿತ ಆರೋಪಿಗಳು. ಎಲ್ಲಾ ಮನೆಯಲ್ಲಿ ಮಲಗಿರುವ ಸಮಯದಲ್ಲೇ ಖದೀಮರು ಕನ್ನ ಹಾಕುತ್ತಿದ್ದರು. ಬೆಂಗಳೂರಿನ ಬಾಗಲೂರು ವ್ಯಾಪ್ತಿಯ ಕಣ್ಣೂರುಹಳ್ಳಿಯ ವಿಲ್ಲಾದಲ್ಲಿ ಕಳ್ಳರು ಕೈಚಳಕ ತೋರಿದ್ದರು.

ವಿಲ್ಲಾ ಮಾಲೀಕ ರಮೇಶ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದ ಬಾಗಲೂರು ಪೊಲೀಸರು, ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇಬ್ಬರು ಆರೋಪಿಗಳ 252 ಗ್ರಾಂ ಚಿನ್ನಾಭರಣ ಕದ್ದು ಒಂದು ತಿಂಗಳ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಸಿಸಿಟಿವಿ, ಟವರ್ ಲೊಕೇಶನ್ ಟ್ರ್ಯಾಕ್ ಮಾಡಿ ಬಂಧಿಸಲಾಗಿದೆ. ಬಂಧನದ ಬಳಿಕ ಈ ಹಿಂದೆ ಕಳ್ಳತನ ಮಾಡಿದ್ದ ಮತ್ತೊಂದು ಪ್ರಕರಣವು ಬೆಳಕಿಗೆ ಬಂದಿದೆ. ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ಮಾಡಿದ್ದರು. ಬಂಧಿತರಿಂದ ಒಟ್ಟು 30 ಲಕ್ಷ ಮೌಲ್ಯದ 437 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಉಂಡ ಮನೆಗೆ ಕನ್ನ ಹಾಕಿದ್ದ ಖದೀಮ ಬಂಧನ

ಬೆಂಗಳೂರಿನಲ್ಲಿ ಉಂಡ ಮನೆಗೆ ಕನ್ನ ಹಾಕಿದ್ದ ಖತರ್ನಾಕ್ ಖದೀಮನ ಬಂಧನವಾಗಿದೆ. ಸಿದ್ದಾಪುರ ಪೊಲೀಸರಿಂದ ಚಿಕ್ಕಬಳ್ಳಾಪುರ ಮೂಲದ ನಾರಾಯಣಸ್ವಾಮಿ (33) ಎಂಬ ಆರೋಪಿ ಬಂಧನವಾಗಿದೆ. ಸಿದ್ದಾಪುರ ಠಾಣಾ ವ್ಯಾಪ್ತಿಯ ಯರ್ರಿಸ್ವಾಮಿ ಎಂಬ ಚಾಟೆಡ್ ಅಕೌಂಟ್ ಕಚೇರಿ ಹಣ ಕಳವು ಮಾಡಿದ್ದ. ಯರ್ರಿಸ್ವಾಮಿ ಬಳಿ ಕಾರ್ ಡ್ರೈವರ್ ಕಮ್ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ. ಅದೇ ಕಚೇರಿಯಲ್ಲಿ ನಾರಾಯಣಸ್ವಾಮಿ ಹೆಂಡತಿ ಸಹ ಕೆಲಸ ಮಾಡುತ್ತಿದ್ದಳು. ಯರ್ರಿಸ್ವಾಮಿ ಹಣ ಇಟ್ಟಿದ್ದ ಬಗ್ಗೆ ತಿಳಿದು ಸುಮಾರು 10.95 ಲಕ್ಷ ಹಣ ಎಗರಿಸಿದ್ದ. ಹಣ ಕದ್ದು ಕಾರ್ ಖರೀದಿ ಮಾಡಿ ಟ್ರಿಪ್ ಹೊಡೆಯುತ್ತಿದ್ದ.

ಕದ್ದ ಹಣದಲ್ಲಿ ವಿವೊ ಮೊಬೈಲ್ , ಚಿನ್ನದ ಸರ ಹಾಗೂ ಬ್ರಾಸ್ಲೆಟ್ , ಫಾಸ್ಟ್ರಾಕ್ ವಾಚ್ ಹಾಗೂ ಕಾರು ಖರೀದಿ ಮಾಡಿದ್ದ. ಕದ್ದ ಹಣದಲ್ಲೇ ಒಳ ಉಡುಪಿನಿಂದ ಹಿಡಿದು ಅಡಿಯಿಂದ ಮುಡಿವರೆಗೂ ಎಲ್ಲವನ್ನೂ ಖರೀದಿ ಮಾಡಿದ್ದ. ಈ ಕುರಿತು ಯರ್ರಿಸ್ವಾಮಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಿಸಿಟಿವಿ ಪರಿಶೀಲನೆ ವೇಳೆ ನಾರಾಯಣಸ್ವಾಮಿ ಡಸ್ಟ್ ಬಿನ್ ಕವರ್‌ನಲ್ಲಿ ಹಣ ಕದ್ದು ಹೋಗುವುದು ಗೊತ್ತಾಗಿತ್ತು. ಪ್ರಕರಣ ದಾಖಲಿಸಿ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ಮಾಲೀಕ ಕೊಟ್ಟ ಮಾಹಿತಿ ಮೇರೆಗೆ ಆರೋಪಿ ಬಂಧನವಾಗಿದೆ. ಬಂಧಿತನಿಂದ ಚೈನ್ , ಬ್ರಾಸ್ಲೆಟ್ , ವಿವೊ ಮೊಬೈಲ್ , ಕಾರು, ಫಾಸ್ಟ್ರಾಕ್ ವಾಚ್ ಹಾಗೂ 3.5 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.

ಸಿನಿಮಾ ಸ್ಟೈಲ್‌ನಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್

ಗ್ರಾಹಕರ ಆತ್ಮತೃಪ್ತಿಯೇ ಈ ಖತರ್ನಾಕ್ ಕಳ್ಳರು ಟಾರ್ಗೆಟ್ ಮಾಡುತ್ತಿದ್ದರು. ಕಸ್ಟಮರ್‌ಗಳಿಂದ ಆರ್ಡರ್ ಪಡೆದು ನಂತರ ಯಾವ ಬೈಕ್ ಬೇಕೋ ಅದೇ ಬೈಕ್ ಕಳ್ಳತನ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಖತರ್ನಾಕ್ ಬೈಕ್ ಕಳ್ಳ ಶಬಾಜ್ ಖಾನ್ ಹಾಗೂ ಓಂ ಇಬ್ಬರು ಬಂಧಿತ ಆರೋಪಿಗಳು. ಒಮ್ಮೆ ಬೈಕ್ ಕದ್ದು ಆನ್‌ಲೈನ್ ನಲ್ಲಿ ಮಾರಾಟ ಮಾಡಿದ್ದರು. ನಂತರ ಆನ್‌ಲೈನ್‌ನಲ್ಲಿ ಕಸ್ಟಮರ್‌ಗಳು ಒಬ್ಬರ ಮೂಲಕ ಮತ್ತೊಬ್ಬರ ಪರಿಚಯವಾಗಿತ್ತು.

15 ರಿಂದ 20 ಸಾವಿರಕ್ಕೆ ಬೈಕ್ ಮಾರಾಟ ಮಾಡುತ್ತಿದ್ದರು. ಮಾರಾಟದ ವೇಳೆ ಯಾರಿಗಾದರೂ ಕಡಿಮೆ ಬೆಲೆಗೆ ಯಾವ ಬೈಕ್ ಬೇಕಾದರೂ ಕೊಡುತ್ತಿವಿ ಎಂದು ಹೇಳುತ್ತಿದ್ದರು. ಕಸ್ಟಮರ್ ಸಿಕ್ಕಾಗ ನಿಮಗೆ ಯಾವ ಮಾದರಿಯ, ಯಾವ ಮಾಡೆಲ್‌ನ ಯಾವ ಕಂಪನಿಯ ಬೈಕ್ ಬೇಕೆಂದು ಮಾಹಿತಿ ಪಡೆಯುತ್ತಿದ್ದರು. ಬೈಕ್ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಕದ್ದ ಹಣದಿಂದ ವಿಲಾಸಿ ಜೀವನ ನಡೆಸುತ್ತಿದ್ದರು. ಬಂಧಿತರಿಂದ ಒಟ್ಟು 12.5 ಲಕ್ಷ ಮೌಲ್ಯದ 13 ಬೈಕ್ ವಶಕ್ಕೆ ಪಡೆಯಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Theft Case : ಬೆಂಗಳೂರಿನಲ್ಲಿ ಒಂಟಿ ಮನೆಗಳನ್ನು ಟಾರ್ಗೆಟ್‌ ಮಾಡುತ್ತಿದ್ದ ಜಂಗ್ಲಿ ಗ್ಯಾಂಗ್‌ ಅರೆಸ್ಟ್‌

Theft Case : ಬೆಂಗಳೂರಿನಲ್ಲಿ ಒಂಟಿ ಮನೆಗಳನ್ನು ಟಾರ್ಗೆಟ್‌ ಮಾಡುತ್ತಿದ್ದ ಜಂಗ್ಲಿ ಗ್ಯಾಂಗ್‌ ಅನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

VISTARANEWS.COM

on

By

Theft case
Koo

ಬೆಂಗಳೂರು: ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡು ಬಂದು ಕ್ಷಣಾರ್ಧದಲ್ಲಿ ಬೀಗ ಹೊಡೆದು ಸಿಕ್ಕ ಸಿಕ್ಕ ವಸ್ತುಗಳನ್ನ ಕದ್ದು ಮನೆಗಳವು (Theft Case ) ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದ ಬೆಂಗಳೂರಿನ ಕುಖ್ಯಾತ ಮನೆಗಳ್ಳ ಜಂಗ್ಲಿ ಆ್ಯಂಡ್ ಗ್ಯಾಂಗ್ ಅರೆಸ್ಟ್ ಆಗಿದೆ. ಬೆಂಗಳೂರಿನ ಆರ್.ಆರ್. ನಗರ ಪೊಲೀಸರು ಜೈದೀಪು ಅಲಿಯಾಸ್ ಜಂಗ್ಲಿ, ಚಂದನ್ @ ಗುಂಡ, ಸತೀಶ್ @ಬುಡ್ಡ, ದೀಪಕ್ @ದೀಪು ಮತ್ತು ಮಿಥುನ್ @ ಮಿಲ್ಕಿ ಬಂಧಿತ ಆರೋಪಿಗಳಾಗಿದ್ದಾರೆ.

Theft case
Theft case

ಬಂಧಿತರಿಂದ 10.18 ಲಕ್ಷ ರೂ. ಮೌಲ್ಯದ 103 ಗ್ರಾಂ ಚಿನ್ನ, 2 ಕೆ.ಜಿ.ಗೂ ಅಧಿಕ ಬೆಳ್ಳಿ, ಮೂರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಗಳವು ಮಾಡಲಿಕ್ಕೆಂದೆ ಬೈಕ್ ಕಳ್ಳತನ ಮಾಡುತ್ತಿದ್ದರು. ಕದ್ದ ಬೈಕ್‌ಗಳಲ್ಲಿ ರೌಂಡ್ಸ್ ಹಾಕಿ ಒಂಟಿ ಮನೆಗಳನ್ನು ಗುರುತಿಸಿ ಕೈಚಳಕ ತೋರಿಸುತ್ತಿದ್ದರು. ಅದರಂತೆ ಕಳೆದ ಸೆಪ್ಟೆಂಬರ್ 17ರಂದು ಆರ್.ಆರ್.ನಗರದ ಗಟ್ಟಿಗೇರೆ ನಿವಾಸದಲ್ಲಿ ಚಂದ್ರಶೇಖರ ಎಂಬುವರ ಮನೆಗೆ ಕನ್ನಹಾಕಿದ್ದರು. ಆರೋಪಿಗಳ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬೆಂಗಳೂರಿನ ಕುಖ್ಯಾತ ಕಳ್ಳ ಎಸ್ಕೇಪ್ ಕಾರ್ತಿಕ್‌ನ ಶಿಷ್ಯನೇ ಈ ಜೈದೀಪು. ಇದೀಗ ಈ ಜಂಗ್ಲಿ ಗ್ಯಾಂಗ್‌ ಅರೆಸ್ಟ್‌ ಆಗಿದೆ.

ಚಿನ್ನು ಕದ್ದು ಸ್ನೇಹಿತರಿಗೆ ಮಾರಾಟ

ಚಿನ್ನಾಭರಣ ಕದ್ದು ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದ ಕಳ್ಳರ ಬಂಧನವಾಗಿದೆ. ವಿಲ್ಲಾಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ ಖದೀಮರು ಹಿಂದಿನ ಬಾಗಿಲಿನಿಂದ ಎಂಟ್ರಿ ಕೊಟ್ಟು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ರಾಮ್ ಕುಮಾರ್(23), ಇಸೈರಾಜ್ (27) ಬಂಧಿತ ಆರೋಪಿಗಳು. ಎಲ್ಲಾ ಮನೆಯಲ್ಲಿ ಮಲಗಿರುವ ಸಮಯದಲ್ಲೇ ಖದೀಮರು ಕನ್ನ ಹಾಕುತ್ತಿದ್ದರು. ಬೆಂಗಳೂರಿನ ಬಾಗಲೂರು ವ್ಯಾಪ್ತಿಯ ಕಣ್ಣೂರುಹಳ್ಳಿಯ ವಿಲ್ಲಾದಲ್ಲಿ ಕಳ್ಳರು ಕೈಚಳಕ ತೋರಿದ್ದರು.

ವಿಲ್ಲಾ ಮಾಲೀಕ ರಮೇಶ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದ ಬಾಗಲೂರು ಪೊಲೀಸರು, ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇಬ್ಬರು ಆರೋಪಿಗಳ 252 ಗ್ರಾಂ ಚಿನ್ನಾಭರಣ ಕದ್ದು ಒಂದು ತಿಂಗಳ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಸಿಸಿಟಿವಿ, ಟವರ್ ಲೊಕೇಶನ್ ಟ್ರ್ಯಾಕ್ ಮಾಡಿ ಬಂಧಿಸಲಾಗಿದೆ. ಬಂಧನದ ಬಳಿಕ ಈ ಹಿಂದೆ ಕಳ್ಳತನ ಮಾಡಿದ್ದ ಮತ್ತೊಂದು ಪ್ರಕರಣವು ಬೆಳಕಿಗೆ ಬಂದಿದೆ. ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ಮಾಡಿದ್ದರು. ಬಂಧಿತರಿಂದ ಒಟ್ಟು 30 ಲಕ್ಷ ಮೌಲ್ಯದ 437 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಉಂಡ ಮನೆಗೆ ಕನ್ನ ಹಾಕಿದ್ದ ಖದೀಮ ಬಂಧನ

ಬೆಂಗಳೂರಿನಲ್ಲಿ ಉಂಡ ಮನೆಗೆ ಕನ್ನ ಹಾಕಿದ್ದ ಖತರ್ನಾಕ್ ಖದೀಮನ ಬಂಧನವಾಗಿದೆ. ಸಿದ್ದಾಪುರ ಪೊಲೀಸರಿಂದ ಚಿಕ್ಕಬಳ್ಳಾಪುರ ಮೂಲದ ನಾರಾಯಣಸ್ವಾಮಿ (33) ಎಂಬ ಆರೋಪಿ ಬಂಧನವಾಗಿದೆ. ಸಿದ್ದಾಪುರ ಠಾಣಾ ವ್ಯಾಪ್ತಿಯ ಯರ್ರಿಸ್ವಾಮಿ ಎಂಬ ಚಾಟೆಡ್ ಅಕೌಂಟ್ ಕಚೇರಿ ಹಣ ಕಳವು ಮಾಡಿದ್ದ. ಯರ್ರಿಸ್ವಾಮಿ ಬಳಿ ಕಾರ್ ಡ್ರೈವರ್ ಕಮ್ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ. ಅದೇ ಕಚೇರಿಯಲ್ಲಿ ನಾರಾಯಣಸ್ವಾಮಿ ಹೆಂಡತಿ ಸಹ ಕೆಲಸ ಮಾಡುತ್ತಿದ್ದಳು. ಯರ್ರಿಸ್ವಾಮಿ ಹಣ ಇಟ್ಟಿದ್ದ ಬಗ್ಗೆ ತಿಳಿದು ಸುಮಾರು 10.95 ಲಕ್ಷ ಹಣ ಎಗರಿಸಿದ್ದ. ಹಣ ಕದ್ದು ಕಾರ್ ಖರೀದಿ ಮಾಡಿ ಟ್ರಿಪ್ ಹೊಡೆಯುತ್ತಿದ್ದ.

ಕದ್ದ ಹಣದಲ್ಲಿ ವಿವೊ ಮೊಬೈಲ್ , ಚಿನ್ನದ ಸರ ಹಾಗೂ ಬ್ರಾಸ್ಲೆಟ್ , ಫಾಸ್ಟ್ರಾಕ್ ವಾಚ್ ಹಾಗೂ ಕಾರು ಖರೀದಿ ಮಾಡಿದ್ದ. ಕದ್ದ ಹಣದಲ್ಲೇ ಒಳ ಉಡುಪಿನಿಂದ ಹಿಡಿದು ಅಡಿಯಿಂದ ಮುಡಿವರೆಗೂ ಎಲ್ಲವನ್ನೂ ಖರೀದಿ ಮಾಡಿದ್ದ. ಈ ಕುರಿತು ಯರ್ರಿಸ್ವಾಮಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಿಸಿಟಿವಿ ಪರಿಶೀಲನೆ ವೇಳೆ ನಾರಾಯಣಸ್ವಾಮಿ ಡಸ್ಟ್ ಬಿನ್ ಕವರ್‌ನಲ್ಲಿ ಹಣ ಕದ್ದು ಹೋಗುವುದು ಗೊತ್ತಾಗಿತ್ತು. ಪ್ರಕರಣ ದಾಖಲಿಸಿ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ಮಾಲೀಕ ಕೊಟ್ಟ ಮಾಹಿತಿ ಮೇರೆಗೆ ಆರೋಪಿ ಬಂಧನವಾಗಿದೆ. ಬಂಧಿತನಿಂದ ಚೈನ್ , ಬ್ರಾಸ್ಲೆಟ್ , ವಿವೊ ಮೊಬೈಲ್ , ಕಾರು, ಫಾಸ್ಟ್ರಾಕ್ ವಾಚ್ ಹಾಗೂ 3.5 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Karnataka Rain : ಮಳೆ-ಗಾಳಿ ಜತೆಗೆ ಸಿಡಿಲು ಬಡಿದು ಇಬ್ಬರು ಸಾವು; ಜೈನ ಸಮುದಾಯ ಬಸದಿ ಶಿಖರಕ್ಕೆ ಹಾನಿ

Karnataka Weather Forecast : ಮಳೆ-ಗಾಳಿ (Karnataka Rain) ಜತೆಗೆ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಸಿಡಿಲು ಬಡಿದು ಜೈನ ಸಮುದಾಯ ಬಸದಿ ಶಿಖರಕ್ಕೆ ಹಾನಿಯಾಗಿದೆ.

VISTARANEWS.COM

on

By

Karnataka Rain
Koo

ಚಿಕ್ಕೋಡಿ: ಸಿಡಿಲು ಬಡಿದು ರೈತರೊಬ್ಬರು (Karnataka Rain) ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಭೀಮಪ್ಪ ಭಾಳಪ್ಪ ಮಂಗಳೂರ (56) ಮೃತ ದುರ್ದೈವಿ. ದನ ಕಾಯುತ್ತಿದ್ದ ಭೀಮಪ್ಪ ಭಾಳಪ್ಪ ಮನೆಗೆ ತೆರಳುವಾಗ ಸೋಮವಾರ ಸಂಜೆ ಹೊತ್ತಿಗೆ ಮಳೆ- ಗಾಳಿ ಜತೆಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸುರ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಜೈನ ಸಮುದಾಯ ಬಸದಿ ಶಿಖರಕ್ಕೆ ಹಾನಿಯಾಗಿದೆ. ಹೊಸೂರು ಗ್ರಾಮದ 1008 ಪಾರ್ಶ್ವನಾಥ ಜೈನ ಮಂದಿರಕ್ಕೆ ಹಾನಿಯಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಡಿಲಿನ ಅಬ್ಬರವು ಅವಾಂತರವೇ ಸೃಷ್ಟಿಯಾಗಿದೆ. ಕಳೆದ ಎರಡು ದಿನಗಳಿಂದ ಹುಕ್ಕೇರಿ ಬಾಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ತಾಲೂಕಗಳ ವಿವಿಧೆಡೆ ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆಯಾಗಿದೆ. ಮಳೆಯಿಂದ ರಸ್ತೆ ಮೇಲೆ ನೀರು ಹರಿದಿದೆ. ವರುಣನ ಆರ್ಭಟಕ್ಕೆ ಪ್ರಯಾಣಿಕರ ಪರದಾಡಿದರು. ಇತ್ತ ಮಳೆಯಿಂದ ಹಿಂಗಾರು ಬಿತ್ತನೆಗೆ ಸಜ್ಜಾದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಗಾಳಿ- ಮಳೆಗೆ ಹಾರಿ ಹೋದ ಕಾರ್ಖಾನೆಯ ಚಾವಣಿ

ಹಾವೇರಿ ಜಿಲ್ಲೆಯಲ್ಲಿ ತಡ ರಾತ್ರಿ ಸುರಿದ ಗಾಳಿ- ಮಳೆಗೆ ಕಾರ್ಖಾನೆಯ ಚಾವಣಿ ಹಾರಿಹೋಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಸನೀಲ್ ಎನ್ನುವವರಿಗೆ ಸೇರಿದ ಕಾರ್ಖಾನೆಯಲ್ಲಿದ್ದ ಮಷಿನ್ ಹಾಗು ಕಟ್ಟಡಕ್ಕೆ ಹಾನಿಯಾಗಿದೆ. ಜೋರಾಗಿ ಬೀಸಿದ ಗಾಳಿಗೆ ಚಾವಣಿ ಹಾರಿ ಹೋಗಿದೆ.

ರಾಯಚೂರಿನಲ್ಲೂ ಸಿಡಿಲು ಬಡಿದು ವ್ಯಕ್ತಿ ಸಾವು

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟಿದ್ದಾರೆ. ದುರಗಪ್ಪ (35) ಮೃತ ದುರ್ದೈವಿ. ರಾಯಚೂರಿನ ಲಿಂಗಸ್ಗೂರು ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗ್ರೇಡ್ -2 ತಹಶಿಲ್ದಾರ್ ಶಂಶಾಲಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲೂ ಅಬ್ಬರಿಸಿದ್ದ ಮಳೆ

ಕಾಫಿನಾಡ ಮಲೆನಾಡು ಭಾಗದಲ್ಲಿ ಸೋಮವಾರ ಸಂಜೆ ಮಳೆ ಅಬ್ಬರ ಜೋರಾಗಿತ್ತು. ಆಲಿಕಲ್ಲು ಮಳೆಗೆ ಮಲೆನಾಡಿಗರು ಹೈರಾಣಾದರು. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದಲ್ಲಿ ಭಾರೀ ಆಲಿಕಲ್ಲು ಮಳೆಯಾಗಿತ್ತು. ಹಸಿರ ಹುಲ್ಲಿನ ರಾಶಿ ಮೇಲೆ ಆಲಿಕಲ್ಲು ಹರಡಿದಂತೆ ಸುರಿದಿದೆ. ಅಕ್ಟೋಬರ್‌ನಲ್ಲಿ ಆಲಿಕಲ್ಲು ಮಳೆ ಕಂಡು ಮಲೆನಾಡಿಗರು ಕಂಗಲಾಗಿದ್ದು, ಕಾಫಿ ಬೆಳೆಗೆ ಹಾನಿಯಾಗುವ ಆತಂಕ ಇದೆ.

ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವೆ ಜಲಾವೃತಗೊಂಡಿತ್ತು. ಕಳಸ-ಬಾಳೆಹೊನ್ನೂರು ರಾಜ್ಯ ಹೆದ್ದಾರಿ ಬಂದ್ ಆಗಿತ್ತು. ಹೊರನಾಡು ಮಾರ್ಗದಲ್ಲಿ ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಮಾರ್ಗವು ಬಂದ್ ಆಗಿತ್ತು. ಸೇತುವೆ ಮೇಲೆ 2 ಅಡಿ ಎತ್ತರದಲ್ಲಿ ನೀರು ಹರಿಯುತ್ತಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಭಾರಿ ಮಳೆ ಹಿನ್ನೆಲೆ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Karnataka Weather Forecast : ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮಲೆನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

VISTARANEWS.COM

on

By

Karnataka Weather Forecast
Koo

ಬೆಂಗಳೂರು: ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಹಗುರದಿಂದ ಮಳೆಯಾಗಲಿದೆ.

ಉತ್ತರ ಒಳನಾಡಿನಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗಲಿದೆ. ಉಳಿದಂತೆ ಬೀದರ್, ಕಲಬುರಗಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿಯಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಸುತ್ತಮುತ್ತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗಲಿದ್ದು, ಹಾಸನದಲ್ಲಿ ಸಾಧಾರಣ ಮಳೆಯಾಗಲಿದೆ. ಕರ್ನಾಟಕದ ಕರಾವಳಿಯಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾರಿ ಮಳೆಯಾಗಲಿದ್ದು, ಉಡುಪಿಯಲ್ಲಿ ಹಗುರದಿಂದ ಕೂಡಿರಲಿದೆ.

ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರಿನಲ್ಲಿ ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30 ಮತ್ತು 20 ಡಿಗ್ರಿ ಸೆಲಿಯಸ್ಸ್‌ ಇರಲಿದೆ. ಮಂಗಳವಾರದಂದು ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಉಡುಪಿ, ಉತ್ತರ ಕನ್ನಡ, ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು
ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Namma Metro: ಏರ್‌ಪೋರ್ಟ್‌ ನೀಲಿ ಮೆಟ್ರೋ ಮಾರ್ಗದಲ್ಲಿ‌ ಬದಲಾವಣೆ; ಎರಡು ನಿಲ್ದಾಣಗಳನ್ನು ಕೈಬಿಡಲು ಮುಂದಾದ ಬಿಎಂಆರ್‌ಸಿಎಲ್‌

Namma Metro : ಏರ್‌ಪೋರ್ಟ್‌ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿಯಲ್ಲಿ ಬಿಎಂಆರ್‌ಸಿಎಲ್‌ (BMRCL)ಕೆಲ ಬದಲಾವಣೆಗೆ ಮುಂದಾಗಿದೆ. ಎರಡು ನಿಲ್ದಾಣಗಳನ್ನು ಕೈಬಿಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

VISTARANEWS.COM

on

By

Namma Metro Blue line
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಿಗರ ಫೇವರೇಟ್‌ ಟ್ರಾನ್ಸ್‌ಪೋರ್ಟ್‌ ನಮ್ಮ ಮೆಟ್ರೋ ರೈಲು (Namma Metro) ತನ್ನ ಜಾಲ ವಿಸ್ತರಿಸುತ್ತಿದೆ. ನಗರದ ಅಷ್ಟ ದಿಕ್ಕುಗಳಲ್ಲೂ ಮೆಟ್ರೋ ಕಾಮಗಾರಿ (Namma Metro Blue Line) ನಡೆಯುತ್ತಿದೆ. ಇನ್ನು ಏರ್‌ಪೋರ್ಟ್‌ಗೂ ಸಹ ಮೆಟ್ರೋ ರೈಲು ಹತ್ತಿರವಾಗಿದೆ. ಆದರೆ ಈ ಏರ್‌ಪೋರ್ಟ್‌ ಮಾರ್ಗದಲ್ಲಿ ಈ ಮೊದಲು ನಿಗದಿಯಾಗಿದ್ದ ಎರಡು ನಿಲ್ದಾಣಗಳನ್ನು ಕೈಬಿಡಲು ಬಿಎಂಆರ್‌ಸಿಎಲ್‌ (BMRCL)ನಿರ್ಧಾರ ಮಾಡಿದೆ.

ಬಹುನಿರೀಕ್ಷಿತ ನಮ್ಮ ಮೆಟ್ರೋ ನೀಲಿ ಮಾರ್ಗ ಅಥವಾ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಪ್ರಯಾಣಿಕರಿಗೆ ಕೊಂಚ ನಿರಾಸೆ ಎದುರಾಗಿದೆ. ಪೂರ್ವ ನಿಗದಿಯಂತೆ ನಿರ್ಮಾಣವಾಗಬೇಕಿದ್ದ ಚಿಕ್ಕಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳನ್ನು ಕೈಬಿಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಚಿಕ್ಕಜಾಲ ನಿಲ್ದಾಣಕ್ಕೆ 130 ಕೋಟಿ ರೂ. ವೆಚ್ಚವಾದರೆ, ಬೆಟ್ಟಹಲಸೂರಿಗೆ 140 ಕೋಟಿ ರೂ. ವೆಚ್ಚವಾಗಬಹುದೆಂದು ಬಿಎಂಆರ್‌ಸಿಎಲ್‌ ನಮೂದಿಸಿತ್ತು. ಸದ್ಯ ಹಣಕಾಸಿನ ಸಮಸ್ಯೆಯಿಂದ ಈ ಎರಡು ನಿಲ್ದಾಣಗಳನ್ನು ಕೈ ಬಿಡಲು ಬಿಎಂಆರ್‌ಸಿಎಲ್‌ ಮುಂದಾಗಿದೆ.

ಬೆಟ್ಟಹಲಸೂರು ನಿಲ್ದಾಣಕ್ಕೆ ಬಿಎಂಆರ್‌ಸಿಎಲ್‌ ಖಾಸಗಿ ಸಂಸ್ಥೆಗಳಿಂದ ನೆರವು ಪಡೆದು ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿತ್ತು. ಆದರೆ ಇದೀಗ ನಿರಾಸಕ್ತಿ ತೋರಿದೆ. ಅಷ್ಟಕ್ಕೂ ಬೆಟ್ಟ ಹಲಸೂರು ಹಾಗೂ ಚಿಕ್ಕಜಾಲ ನಿಲ್ದಾಣಗಳು ಡಿಪಿಆರ್‌ (DPR)ನಲ್ಲಿ ನಮೂದು ಆಗಿರಲಿಲ್ಲ. ಹೀಗಾಗಿ ಇವುಗಳ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ನೀಡುವುದಿಲ್ಲ. ಸ್ಥಳೀಯ ನಿವಾಸಿಗಳು ನಿಲ್ದಾಣದ ಬೇಡಿಕೆ ಮುಂದಿಟ್ಟಿದ್ದರಿಂದ ಚಿಕ್ಕಜಾಲ ನಿಲ್ದಾಣಕ್ಕೆ ರಾಜ್ಯದ ಉನ್ನತಾಧಿಕಾರ ಸಮಿತಿ ಒಪ್ಪಿಗೆ ನೀಡಿತ್ತು.

ಒಟ್ಟಾರೆ ಮೆಟ್ರೋ ಮೂಲಕ ಏರ್‌ಪೋರ್ಟ್‌ಗೆ ಹೋಗುವ ಕಾಲ ಸನ್ನಿಹಿತ ಆಗುತ್ತಿದೆ. ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ ಸಹ ಭರದಿಂದ ಕಾಮಗಾರಿ ನಡೆಸುತ್ತಿದೆ. ಆದರೆ ಈ ಮಾರ್ಗದಲ್ಲಿ ಎರಡು ನಿಲ್ದಾಣಗಳ ನಿರ್ಮಾಣದಿಂದ ಬಿಎಂಆರ್‌ಸಿಎಲ್‌ ಹಿಂದೆ ಸರಿದಿದ್ದರಿಂದ ಅಲ್ಲಿನ ನಿವಾಸಿಗಳು ಹಾಗೂ ಪ್ರಯಾಣಿಕರು ನಿರಾಸೆಗೆ ಒಳಗಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Theft case
ಬೆಂಗಳೂರು3 ನಿಮಿಷಗಳು ago

Theft Case : ಬೆಂಗಳೂರಿನಲ್ಲಿ ಒಂಟಿ ಮನೆಗಳನ್ನು ಟಾರ್ಗೆಟ್‌ ಮಾಡುತ್ತಿದ್ದ ಜಂಗ್ಲಿ ಗ್ಯಾಂಗ್‌ ಅರೆಸ್ಟ್‌

Thief arrested for stealing gold in Bengaluru
ಬೆಂಗಳೂರು10 ನಿಮಿಷಗಳು ago

Theft Case : ಮನೆಗೆಲಸದವರ ಮಾತು ಕದ್ದು ಕೇಳಿಸಿಕೊಂಡ; ಕೆ.ಜಿ ಗಟ್ಟಲೆ ಚಿನ್ನ ದೋಚಿದ್ದು, 12 ಗಂಟೆಯಲ್ಲೇ ಸಿಕ್ಕಾಕೊಂಡ!

Two children die after hot water and hot sambar fall on them
ದಾವಣಗೆರೆ3 ಗಂಟೆಗಳು ago

Accident Case : ದಾವಣಗೆರೆಯಲ್ಲಿ ದುರಂತ; ಬಿಸಿ ನೀರು ಹಾಗೂ ಬಿಸಿ ಸಾಂಬಾರ್‌ ಬಿದ್ದು ಪ್ರತ್ಯೇಕ ಕಡೆ ಇಬ್ಬರು ಮಕ್ಕಳು ಸಾವು

Physical Abuse
ಕಲಬುರಗಿ3 ಗಂಟೆಗಳು ago

Physical Abuse : ಇನ್ಸ್ಟಾಗ್ರಾಮ್ ಲವ್‌; ಮದುವೆ ಆಗೋಣ ಬಾ ಎಂದವನು ಲಾಡ್ಜ್‌ಗೆ ಕರೆದೊಯ್ದು ಕೈಕೊಟ್ಟ ಪೊಲೀಸ್‌ ಪೇದೆ!

Karnataka Rain
ಪ್ರಮುಖ ಸುದ್ದಿ4 ಗಂಟೆಗಳು ago

Karnataka Rain : ಮಳೆ-ಗಾಳಿ ಜತೆಗೆ ಸಿಡಿಲು ಬಡಿದು ಇಬ್ಬರು ಸಾವು; ಜೈನ ಸಮುದಾಯ ಬಸದಿ ಶಿಖರಕ್ಕೆ ಹಾನಿ

Actor Govinda
ಬಾಲಿವುಡ್5 ಗಂಟೆಗಳು ago

Actor Govinda : ಬಾಲಿವುಡ್​ ನಟ ಗೋವಿಂದ ಕಾಲಿಗೆ ಗುಂಡೇಟು! ಮುಂಬೈ ಆಸ್ಪತ್ರೆಗೆ ದಾಖಲು

Superstar Rajinikanth is unwell Family members admitted to hospital in the middle of the night
ಸಿನಿಮಾ5 ಗಂಟೆಗಳು ago

Actor Rajinikanth: ಸೂಪರ್‌ ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರು; ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು

Karnataka Weather Forecast
ಮಳೆ10 ಗಂಟೆಗಳು ago

Karnataka Weather : ಭಾರಿ ಮಳೆ ಹಿನ್ನೆಲೆ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Dina Bhavishya
ಭವಿಷ್ಯ11 ಗಂಟೆಗಳು ago

Dina Bhavishya : ಪ್ರಮುಖ ಜನರೊಡನೆ ವ್ಯವಹರಿಸುವಾಗ ಈ ರಾಶಿಯವರು ಎಚ್ಚರಿಕೆಯಿಂದ ಮಾತನಾಡಿ

Namma Metro Blue line
ಬೆಂಗಳೂರು20 ಗಂಟೆಗಳು ago

Namma Metro: ಏರ್‌ಪೋರ್ಟ್‌ ನೀಲಿ ಮೆಟ್ರೋ ಮಾರ್ಗದಲ್ಲಿ‌ ಬದಲಾವಣೆ; ಎರಡು ನಿಲ್ದಾಣಗಳನ್ನು ಕೈಬಿಡಲು ಮುಂದಾದ ಬಿಎಂಆರ್‌ಸಿಎಲ್‌

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌