wheeling with weapons | ರೀಲ್ಸ್‌ಗಾಗಿ ಮಾರಕಾಸ್ತ್ರ ಹಿಡಿದು ವೀಲಿಂಗ್; ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹ - Vistara News

ಕ್ರೈಂ

wheeling with weapons | ರೀಲ್ಸ್‌ಗಾಗಿ ಮಾರಕಾಸ್ತ್ರ ಹಿಡಿದು ವೀಲಿಂಗ್; ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹ

wheeling with weapons | ಬೆಂಗಳೂರಿನ ರಸ್ತೆಗಳಲ್ಲಿ ರೀಲ್ಸ್‌ಗಾಗಿ ಕೆಲವರು ಮಾರಾಕಾಸ್ರ್ರ ಹಿಡಿದು ಪುಂಡಾಟ ನಡೆಸುತ್ತಿರುವುದು ಕಂಡಬಂದಿದೆ.

VISTARANEWS.COM


on

wheeling with weapons
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಗರದಲ್ಲಿ ವೀಲಿಂಗ್ ಹಾವಳಿ ಹೆಚ್ಚಿರುವುದು ಗೊತ್ತೇ ಇದೆ. ಈಗ ಮಾರಕಾಸ್ತ್ರಗಳನ್ನು ಹಿಡಿದು ವೀಲಿಂಗ್ ಮಾಡುವುದು ಫ್ಯಾಷನ್ ಆಗಿದೆ. ನಗರದ ರಸ್ತೆಗಳಲ್ಲಿ ಕೆಲ ಪುಂಡರು, ಮಾರಕಾಸ್ತ್ರ ಹಿಡಿದು ವೀಲಿಂಗ್ (wheeling with weapons) ಮಾಡುವ ಜತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ ಅಪ್ಲೋಡ್ ಮಾಡುತ್ತಿರುವುದು ಕಂಡುಬಂದಿದೆ.

ನಗರದಲ್ಲಿ ಡಬಲ್ ರೋಡ್‌ಗಳಲ್ಲಿ ಪುಂಡರು ಅಟ್ಟಹಾಸ ಮೆರೆಯುತ್ತಿರುವುದು ಹೆಚ್ಚಾಗಿದೆ. ಮಾರುದ್ದದ ಲಾಂಗ್ ಹಿಡಿದು ರಸ್ತೆಗೆ ತಾಗಿಸಿ ಕಿಡಿಹೊತ್ತಿಸುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡುತ್ತಿದ್ದಾರೆ. ಇದರಿಂದ ಇತರ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ವೀಲಿಂಗ್‌ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದಲ್ಲಿ ಹೋಗುವ ವಾಹನ ಸವಾರರು ಅಪಘಾತಗಳಿಗೀಡಾಗುವ ಸಾಧ್ಯತೆಗಳಿವೆ. ಹೀಗಾಗಿ ವೀಲಿಂಗ್‌ ಮಾಡುವ ಪುಂಡರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Robbery case | ನ್ಯೂ ಇಯರ್ ಪಾರ್ಟಿ ಮುಗಿಸಿ ಬಂದವನಿಂದ 4.30 ಲಕ್ಷ ರೂಪಾಯಿ ದೋಚಿದ ಮಂಗಳಮುಖಿಯರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Passenger Arrest: ವಿಮಾನದಲ್ಲಿ ಗಗನಸಖಿ ನೀಡಿದ ನೀರು, ಆಹಾರ ಸೇವಿಸದ ಪ್ರಯಾಣಿಕನ ಬಂಧನ! ಕಾರಣ ಕುತೂಹಲಕರ!

Passenger Arrest: ಜೆಡ್ಡಾದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಪ್ರಯಾಣಿಕನೊಬ್ಬನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಏರ್ ಹೋಸ್ಟೆಸ್ ಪ್ರಯಾಣಿಕರಿಗೆ ನೀರು, ಚಹಾ ಮತ್ತು ಆಹಾರ ಸೇರಿದಂತೆ ಉಪಾಹಾರವನ್ನು ನೀಡುತ್ತಿದ್ದಾಗ ಆರೋಪಿ ಐದೂವರೆ ಗಂಟೆಗಳ ಪ್ರಯಾಣದ ಅವಧಿಯಲ್ಲಿ ಅವೆಲ್ಲವನ್ನೂ ನಿರಾಕರಿಸಿದ್ದಾನೆ. ಆತ ಆಹಾರವನ್ನು ನಿರಂತರವಾಗಿ ನಿರಾಕರಿಸಿದ್ದರಿಂದ ಶಂಕೆಗೊಂಡ ಏರ್ ಹೋಸ್ಟೆಸ್ ಕ್ಯಾಪ್ಟನ್‌ಗೆ ಮಾಹಿತಿ ನೀಡಿದಳು. ವಿಮಾನ ಇಳಿದಾದ ಬಳಿಕ ಅಧಿಕಾರಿಗಳು ಆತನನ್ನು ವಿಚಾರಿಸಿದಾಗ ಅಕ್ರಮ ಚಿನ್ನ ಕಳ್ಳ ಸಾಗಾಣಿಗೆ ಬೆಳಕಿಗೆ ಬಂತು.

VISTARANEWS.COM


on

Passenger Arrest
Koo

ನವದೆಹಲಿ: ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣ ಕೂಡ ಹೆಚ್ಚಾಗುತ್ತಿದೆ. ಜನರು ಅನೇಕ ರೀತಿಯಲ್ಲಿ ನಾನಾ ರೀತಿಯಲ್ಲಿ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಅಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಜೆಡ್ಡಾದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಎಐ 992ರಲ್ಲಿ ಗುದದ್ವಾರದಲ್ಲಿ ಚಿನ್ನವಿಟ್ಟುಕೊಂಡು ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು (Passenger Arrest) ಅಧಿಕಾರಿಗಳು ಬಂಧಿಸಿದ್ದಾರೆ.

ಏರ್ ಹೋಸ್ಟೆಸ್ ಪ್ರಯಾಣಿಕರಿಗೆ ನೀರು, ಚಹಾ ಮತ್ತು ಆಹಾರ ಸೇರಿದಂತೆ ಉಪಾಹಾರವನ್ನು ನೀಡುತ್ತಿದ್ದಾಗ ಆರೋಪಿ ಐದೂವರೆ ಗಂಟೆಗಳ ಪ್ರಯಾಣದ ಅವಧಿಯಲ್ಲಿ ಅವೆಲ್ಲವನ್ನು ನಿರಾಕರಿಸಿದ್ದಾನೆ. ಆತ ಆಹಾರವನ್ನು ನಿರಂತರವಾಗಿ ನಿರಾಕರಿಸಿದ್ದರಿಂದ ಅನುಮಾನಗೊಂಡ ಏರ್ ಹೋಸ್ಟೆಸ್ ಕ್ಯಾಪ್ಟನ್‍ಗೆ ಮಾಹಿತಿ ನೀಡಿದಳು. ಅವರು ಏರ್ ಟ್ರಾಫಿಕ್ ಕಂಟ್ರೋಲ್ ಮೂಲಕ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದರು. ವಿಮಾನದಿಂದ ಇಳಿದ ನಂತರ ಆರೋಪಿಯ ಮೇಲೆ ಕಣ್ಗಾವಲು ಇಡಲಾಗಿತ್ತು.

ಕಸ್ಟಮ್ಸ್ ಕ್ಲಿಯರೆನ್ಸ್ ಮೂಲಕ ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದಂತೆ ಅಧಿಕಾರಿಗಳು ಅವನನ್ನು ತಡೆದರು. ನಂತರ ಆತನನ್ನು ವಿಚಾರಿಸಿದಾಗ ಪ್ರಯಾಣಿಕನು ತನ್ನ ಗುದದ್ವಾರದಲ್ಲಿ ಚಿನ್ನದ ಪೇಸ್ಟ್ ಅನ್ನು ಅಡಗಿಸಿಟ್ಟಿದ್ದಾನೆ ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿದೆ, ಅದನ್ನು ಅವನು ನಾಲ್ಕು ಅಂಡಾಕಾರದ ಕ್ಯಾಫ್ಸುಲ್‍ಗಳ ರೂಪದಲ್ಲಿ ಹೊರಗೆ ತೆಗೆದಿದ್ದಾನೆ ಎನ್ನಲಾಗಿದೆ. ಆ ಮೂಲಕ ಸುಮಾರು 69,16,169 ರೂ ಮೌಲ್ಯದ ಸುಮಾರು 1096.76 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಜೆಡ್ಡಾದಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದಾಗಿ ಪ್ರಯಾಣಿಕ ಒಪ್ಪಿಕೊಂಡಿದ್ದು, ಕಸ್ಟಮ್ಸ್ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಧಿಕಾರಿಗಳು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ತನ್ನ ಫಾಲೋವರ್ಸ್‌ಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಖ್ಯಾತ ಮಾಡೆಲ್‌ಗೆ ಜೈಲು ಶಿಕ್ಷೆ!

ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಏರ್ ಹೋಸ್ಟೆಸ್ ಆಹಾರ ಅಥವಾ ಪಾನೀಯಗಳನ್ನು ನೀಡುತ್ತಾರೆ. ಒಂದು ವೇಳೆ ಪ್ರಯಾಣಿಕರು ಪದೇ ಪದೇ ಅದನ್ನು ನಿರಾಕರಿಸಿದರೆ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಯಾಕೆಂದರೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೆಲವು ವೇಳೆ ಹೊರದೇಶಗಳಿಗೆ ಕಳ್ಳಸಾಗಾಣಿಕೆಗಳು ಮಾಡುತ್ತಿರುತ್ತಾರೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ವಿಮಾನಯಾನ ಸಂಸ್ಥೆಗಳು ಮತ್ತು ಅಧಿಕಾರಿಗಳು ಪ್ರಯಾಣಿಕರ ಮೇಲೆ ಕಣ್ಗಾವಲು ಇಟ್ಟಿರುತ್ತಾರೆ.

Continue Reading

Latest

Murder Case: ನರ್ಸ್‌ ಜೊತೆ ಅಕ್ರಮ ಸಂಬಂಧ; ಪತ್ನಿ, ಇಬ್ಬರು ಮಕ್ಕಳನ್ನು ಕೊಂದ ಡಾಕ್ಟರ್‌!

Murder Case: ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಸೋನಿ ಫ್ರಾನ್ಸಿಸ್ ಜೊತೆ ಅಕ್ರಮ ಸಂಬಂಧದಲ್ಲಿದ್ದ ವೈದ್ಯ ಬೋಡಾ ಪ್ರವೀಣ್ ಎಂಬಾತ ಗೆಳತಿಯ ಜೊತೆ ಜೀವನ ನಡೆಸುವ ಉದ್ದೇಶದಿಂದ ಪತ್ನಿ ಮತ್ತು ಇಬ್ಬರು ಮಕ್ಕಳನ್ನೇ ಕ್ರೂರವಾಗಿ ಕೊಂದಿದ್ದಾನೆ. ಗೆಳತಿ ಸೋನಿ ಫ್ರಾನ್ಸಿಸ್ ಒತ್ತಾಯದ ಮೇರೆಗೆ ಹೆಂಡತಿಗೆ ಹೈಡೋಸ್ ಅರಿವಳಿಕೆ ಚುಚ್ಚುಮದ್ದನ್ನು ನೀಡಿ ಕೊಂದಿದ್ದಾನೆ. ಇನ್ನು ಇಬ್ಬರು ಹೆಣ್ಣುಮಕ್ಕಳನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಮೂಗು ಮತ್ತು ಬಾಯಿಯನ್ನು ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದಾನೆ.

VISTARANEWS.COM


on

Murder Case
Koo


ಹೈದರಾಬಾದ್: ಇಂದಿನ ಕಾಲದಲ್ಲಿ ಅಕ್ರಮ ಸಂಬಂಧಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಅಕ್ರಮ ಸಂಬಂಧಕ್ಕಾಗಿ ಜನರು ತಮ್ಮ ಪ್ರೀತಿಪಾತ್ರರನ್ನು ಕೊಲೆ (Murder Case ) ಮಾಡಲೂ ಹಿಂಜರಿಯುವುದಿಲ್ಲ. ಅಂತಹದೊಂದು ಘಟನೆ ಇದೀಗ ಹೈದರಾಬಾದ್‍ನಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಫಿಸಿಯೋಥೆರಪಿಸ್ಟ್ ತನ್ನ ಗೆಳತಿಯ ಒತ್ತಾಯದ ಮೇರೆಗೆ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಸುಮಾರು 45 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

32 ವರ್ಷದ ಬೋಡಾ ಪ್ರವೀಣ್ ತನ್ನ ಹೆಂಡತಿ, ಮಕ್ಕಳನ್ನು ಕೊಂದ ಆರೋಪಿ. ಪತ್ನಿ ಕುಮಾರಿ (29), ಪುತ್ರಿಯರಾದ ಕೃಷಿಕಾ (5) ಮತ್ತು ಕೃತಿಕಾ (3) ಕೊಲೆಯಾದ ಬಲಿಪಶುಗಳು. ಪ್ರವೀಣ್‍ಗೆ ಸೋನಿ ಫ್ರಾನ್ಸಿಸ್ ಎಂಬ ಗೆಳತಿ ಇದ್ದಳು. ಆಕೆ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಈತ ಆಕೆಯ ಜೊತೆ ಅಕ್ರಮ ಸಂಬಂಧದಲ್ಲಿದ್ದ. ಹಾಗಾಗಿ ಗೆಳತಿಯ ಜೊತೆ ಜೀವನ ನಡೆಸುವ ಉದ್ದೇಶದಿಂದ ಇದಕ್ಕೆ ಅಡ್ಡವಿದ್ದ ಪತ್ನಿ ಮತ್ತು ಮಕ್ಕಳನ್ನು ಕೊಲ್ಲುವ ಯೋಜನೆ ಮಾಡಿದ್ದಾನೆ.

ಹಾಗಾಗಿ ಗೆಳತಿ ಸೋನಿ ಫ್ರಾನ್ಸಿಸ್ ಒತ್ತಾಯದ ಮೇರೆಗೆ ಮೇ 28 ರಂದು ಹೈಡೋಸ್ ಅರಿವಳಿಕೆ ಚುಚ್ಚುಮದ್ದನ್ನು ನೀಡುವ ಮೂಲಕ ಅವನು ತನ್ನ ಹೆಂಡತಿಯನ್ನು ಕೊಂದ. ಹಾಗೇ ಅವನು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಮೂಗು ಮತ್ತು ಬಾಯಿಯನ್ನು ಮುಚ್ಚಿ ಉಸಿರುಗಟ್ಟಿಸಿ ಕೊಂದ. ನಂತರ ತಲೆಮರೆಸಿಕೊಂಡ ಆರೋಪಿ ಪ್ರವೀಣ್ ಆಸ್ಪತ್ರೆಯಲ್ಲಿ ಸಣ್ಣ ಗಾಯಗಳ ಚಿಕಿತ್ಸೆ ಪಡೆದು ತಾನು ಅಂದುಕೊಂಡಂತೆ ಗೆಳೆತಿಯ ಜೊತೆ ಮುಂದಿನ ಜೀವನ ನಡೆಸಲು ಹೈದರಾಬಾದ್‍ಗೆ ಮರಳಿದ್ದ.

ಇತ್ತ ಪೊಲೀಸರು ಕುಮಾರಿ ಹಾಗೂ ಆಕೆಯ ಮಕ್ಕಳ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಿಖೆಯ ವೇಳೆ ಕಾರಿನಲ್ಲಿ ಸಿರಿಂಜ್ ಪತ್ತೆಯಾಗಿದೆ. ಹೆಚ್ಚಿನ ತನಿಖೆಗಾಗಿ ಪೊಲೀಸರು ಸಿರಿಂಜ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆರಂಭದಲ್ಲಿ ಅಪಘಾತ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ನಂತರ ಅದು ಕೊಲೆ ಎಂಬುದು ತಿಳಿಯಿತು.

ಇದನ್ನೂ ಓದಿ: ಮಧ್ಯವಯಸ್ಕ ಮಹಿಳೆಯ ಮೇಲೆ ಮಗನ ಸ್ನೇಹಿತನಿಂದಲೇ ಅತ್ಯಾಚಾರ!

ಪ್ರವೀಣ್ ಕೊಲೆ ಮಾಡಿರುವ ಅನುಮಾನದ ಮೇರೆಗೆ ಕೊಲೆ ನಡೆದ 48 ದಿನಗಳ ಬಳಿಕ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರವೀಣ್ ಹೈದರಾಬಾದ್‍ನ ಅಟ್ಟಾಪುರ್ ಪ್ರದೇಶದ ಜರ್ಮೆಂಟನ್ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಘಟನೆಯ ನಂತರ ಪ್ರವೀಣ್ ತನ್ನ ಗೆಳತಿ ಸೋನಿ ಫ್ರಾನ್ಸಿಸ್ ಅವರೊಂದಿಗೆ ಪ್ರತ್ಯೇಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರೆ ಪತ್ನಿ ಮತ್ತು ಮಕ್ಕಳ ಸಾವಿನ ಬಗ್ಗೆ ಆತನಿಗೆ ಯಾವುದೇ ಪಶ್ಚಾತ್ತಾಪ ಇರಲಿಲ್ಲ ಎನ್ನಲಾಗಿದೆ.

Continue Reading

ವೈರಲ್ ನ್ಯೂಸ್

Viral Video: 300 ಮೊಸಳೆಗಳಿರುವ ಕೆರೆಯಲ್ಲಿ ಬೈಕ್‌, ಕಾರು ಸ್ಟಂಟ್‌; ಹುಚ್ಚಾಟ ಮೆರೆದ ಯುವಕರಿಗೆ ಆಗಿದ್ದೇನು ಗೊತ್ತಾ?

Viral Video: ರೀಲ್ಸ್‌ಗಾಗಿ ಅನೇಕ ಯುವಕರು ನೀರಿನಲ್ಲಿ ಬೈಕ್‌ ಮತ್ತು ಕಾರು ಚಲಾಯಿಸಿದ್ದಾರೆ. ಅಲ್ಲದದೇ ಕೆರೆಯ ಬದಿಯಲ್ಲಿ ಮೊಸಳೆಗಳು ಓಡಾಡುತ್ತಿರುವುದನ್ನೂ ವಿಡಿಯೋದಲ್ಲೀ ಕಾಣಬಹುದಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಕಾರು ಮತ್ತು ಏಳು ಬೈಕ್‌ ಸೇರಿ ಯುವಕರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

VISTARANEWS.COM


on

Viral Video
Koo

ಜೈಪುರ: ಇತ್ತೀಚೆಗೆ ಯುವಕರ ರೀಲ್ಸ್‌(Reels) ಹುಚ್ಚು ಎಂತೆಂಥಾ ಅಪಾಯವನ್ನು ತಂದೊಡ್ಡುತ್ತದೆ ಎಂದರೆ ಅದನ್ನು ಊಹಿಸಲೂ ಸಾಧ್ಯವಿಲ್ಲ. ಪ್ರಾಣವನ್ನೂ ಲೆಕ್ಕಿಸದೇ ರೀಲ್ಸ್‌ಗಾಗಿ ಸಾರ್ವಜನಿಕ ಸ್ಥಳದಲ್ಲಿ ಹುಚ್ಚಾಟ ಮೆರೆಯುತ್ತಿರುತ್ತಾರೆ. ಅಂತಹದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ. ಬರೋಬ್ಬರಿ 300 ಮೊಸಳೆಗಳ ಅಭಯಾರಣ್ಯದ(Crocodile Lake) ಕೆರೆಯಲ್ಲಿ ಅಪಾಯಕಾರಿ ಬೈಕ್‌, ಕಾರು ಸ್ಟಂಟ್‌ ಮಾಡುವ ಮೂಲಕ ಯುವಕರು ಹುಚ್ಚಾಟ ಮೆರೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ (Viral Video) ಆಗಿದ್ದು, ಪೊಲೀಸರು 20 ಮಂದಿ ಯುವಕರನ್ನು ಅರೆಸ್ಟ್‌ ಮಾಡಿದ್ದಾರೆ. ರಾಜಸ್ಥಾನದ ಆಲ್ವಾರ್‌ ಜಿಲ್ಲೆಯಲ್ಲಿರುವ ಸಿಲಿಸೆಹ್ರ್‌ ಮೊಸಳೆ ಪಾರ್ಕ್‌ನಲ್ಲಿ ಯುವಕರು ಹುಚ್ಚಾಟ ಮೆರೆದಿದ್ದಾರೆ.

ರೀಲ್ಸ್‌ಗಾಗಿ ಅನೇಕ ಯುವಕರು ನೀರಿನಲ್ಲಿ ಬೈಕ್‌ ಮತ್ತು ಕಾರು ಚಲಾಯಿಸಿದ್ದಾರೆ. ಅಲ್ಲದದೇ ಕೆರೆಯ ಬದಿಯಲ್ಲಿ ಮೊಸಳೆಗಳು ಓಡಾಡುತ್ತಿರುವುದನ್ನೂ ವಿಡಿಯೋದಲ್ಲೀ ಕಾಣಬಹುದಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಕಾರು ಮತ್ತು ಏಳು ಬೈಕ್‌ ಸೇರಿ ಯುವಕರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಗುರುಮೇಲ್ ಸಿಂಗ್ (28), ಯೋಗೇಶ್ (23), ಕೃಷ್ಣ (23), ಪುನೀತ್ (19), ಸಚಿನ್ (27), ಶಿವಚರಣ್ (29), ಎಲ್ಲರೂ ಸೊರ್ಖಾ ಕಾಲಾ ಗ್ರಾಮದ ನಿವಾಸಿಗಳು ಮತ್ತು ಉದಯ್ (18) ಬರೋಡಾದಿಂದ ಏಳು ವ್ಯಕ್ತಿಗಳನ್ನು ಅರೆಸ್ಟ್‌ ಮಾಡಲಾಗಿತ್ತು. ಮರುದಿನ 13 ಇತರರನ್ನು ಬಂಧಿಸಲಾಯಿತು.

ಅಲ್ವಾರ್ ಪೊಲೀಸ್ ಅಧೀಕ್ಷಕ ಆನಂದ್ ಶರ್ಮಾ ಅವರು, ಸಿಲಿಸೆರ್ಹ್ ಸರೋವರ ಮತ್ತು ನಟ್ನಿ ಕಾ ಬಾರಾದಂತಹ ಪ್ರವಾಸಿ ಸ್ಥಳಗಳ ಬಳಿ ಇಂತಹ ಸಾಹಸಗಳನ್ನು ಮಾಡುವ ಮೂಲಕ ಯಾರಾದರೂ ತಮ್ಮನ್ನು ಅಥವಾ ವನ್ಯಜೀವಿಗಳಿಗೆ ಅಪಾಯವನ್ನುಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಅಜಾಗರೂಕ ಕೃತ್ಯಗಳು ಭಾಗಿಯಾಗಿರುವವರ ಜೀವಕ್ಕೆ ಅಪಾಯವನ್ನುಂಟುಮಾಡುವುದು ಮಾತ್ರವಲ್ಲದೆ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ತೊಂದರೆಯಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಅಲ್ವಾರ್ ಪೊಲೀಸರು ಈ ಪ್ರದೇಶಗಳಲ್ಲಿ ಗಸ್ತು ತೀವ್ರಗೊಳಿಸಿದ್ದಾರೆ ಮತ್ತು ಪ್ರವಾಸಿಗರು ಮತ್ತು ವನ್ಯಜೀವಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದಾರೆ. ಕೆರೆಗೆ ಹೋಗುವ ಅನಧಿಕೃತ ರಸ್ತೆಗಳನ್ನೂ ಅಧಿಕಾರಿಗಳು ಮುಚ್ಚಿದ್ದಾರೆ. ಸಾಮಾಜಿಕ ಮಾಧ್ಯಮದ ಜನಪ್ರಿಯತೆಗಾಗಿ ಯುವಕರು ಇಂತಹ ಅಪಾಯಕಾರಿ ನಡವಳಿಕೆಯಿಂದ ದೂರವಿರಬೇಕು ಎಂದು ಪೊಲೀಸರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Viral Video: ಸಫಾರಿಯಲ್ಲಿ ಪ್ರವಾಸಿಗರ ಎದುರೇ ಸಿಂಹಗಳ ಕಾಮಕೇಳಿ!

Continue Reading

Latest

Sexual Harassment Case: ಜನಜಂಗುಳಿಯ ಮಧ್ಯೆ ಮಹಿಳೆಯ ಖಾಸಗಿ ಭಾಗಕ್ಕೆ ಕೈ ಹಾಕಿದ ಬಸ್‍ ಕಂಡಕ್ಟರ್‌!

Sexual Harassment Case: ಹೈದರಾಬಾದ್‌ನ ಮಹಿಳೆಯೊಬ್ಬರು ಬಸ್‌ನಲ್ಲಿ ತನಗಾದ ಕೆಟ್ಟ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಮಹಿಳೆಯೊಬ್ಬಳು ಮಣಿಕೊಂಡದಿಂದ ಹಿಮಾಯತ್ ನಗರಕ್ಕೆ ಹಿಂದಿರುಗಲು ಟಿಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಆ ವೇಳೆ ಬಸ್‌ನಲ್ಲಿ ಪ್ರಯಾಣಿಕರು ತುಂಬಿದ್ದರು. ಆಗ ಬಸ್ಸಿನ ಕಂಡಕ್ಟರ್ ಕಿಕ್ಕಿರಿದ ಬಸ್ಸಿನ ಅವಕಾಶವನ್ನು ತೆಗೆದುಕೊಂಡು ಆಕೆಯ ಎದೆ ಭಾಗ ಹಾಗೂ ಸೊಂಟದ ಕೆಳಗಿನ ಖಾಸಗಿ ಭಾಗವನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ.

VISTARANEWS.COM


on

Sexual Harassment Case
Koo


ಹೈದರಾಬಾದ್: ಕೆಟ್ಟ ಕಾಮುಕರೇ ತುಂಬಿರುವಂತಹ ಈ ಪ್ರಪಂಚದಲ್ಲಿ ಮಹಿಳೆಯರು ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಕಿರುಕುಳ(Sexual Harassment Case )ವನ್ನು ಅನುಭವಿಸುತ್ತಿದ್ದಾರೆ. ಕೆಲವು ಮಹಿಳೆಯರು ಮರ್ಯಾದೆಗೆ ಅಂಜಿ ಅದನ್ನು ಮುಚ್ಚಿದ್ದರೆ ಕೆಲವರು ಅದನ್ನು ಎದುರಿಸಿ ನಿಲ್ಲುತ್ತಾರೆ. ಅಂತಹದೊಂದು ಘಟನೆ ಹೈದರಾಬಾದ್‍ನ ಟಿಎಸ್ಆರ್‌ಟಿಸಿ ಬಸ್‍ನಲ್ಲಿ ನಡೆದಿದ್ದು, ಇದಕ್ಕೆ ಮಹಿಳೆ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಹೈದರಾಬಾದ್‍ನ ಮಹಿಳೆಯೊಬ್ಬಳು ಹಿಮಾಯತ್ ನಗರಕ್ಕೆ ಹಿಂದಿರುಗುವಾಗ ಟಿಎಸ್ಆರ್‌ಟಿಸಿ ಬಸ್‍ನಲ್ಲಿ ತನಗಾದ ಕೆಟ್ಟ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಸರ್ಕಾರಿ ಬಸ್ ಕಂಡಕ್ಟರ್ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದು ಆರೋಪ ಮಾಡಿದ್ದಾಳೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೈದರಾಬಾದ್‌ನ 21 ವರ್ಷದ ಮಹಿಳೆಯೊಬ್ಬಳು ಮಣಿಕೊಂಡದಿಂದ ಹಿಮಾಯತ್ ನಗರಕ್ಕೆ ಹಿಂದಿರುಗಲು 65 ಮೀ / 123 ಟಿಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಆ ವೇಳೆ ಬಸ್‍ನಲ್ಲಿ ಪ್ರಯಾಣಿಕರು ತುಂಬಿದ್ದರು. ಆಗ ಬಸ್ಸಿನ ಕಂಡಕ್ಟರ್ ಕಿಕ್ಕಿರಿದ ಬಸ್ಸಿನ ಅವಕಾಶವನ್ನು ತೆಗೆದುಕೊಂಡು ಆತ ಆಕೆಯ ಎದೆ ಭಾಗವನ್ನು ಸ್ಪರ್ಶಿಸಲು ಪ್ರಾರಂಭಿಸಿದ. ನಂತರ ಅವನು ಆಕೆಯ ಸೊಂಟದ ಕೆಳಗಿನ ಖಾಸಗಿ ಭಾಗವನ್ನು ಸ್ಪರ್ಶಿಸಿದನಂತೆ. ಹಾಗಾಗಿ ತಾನು ಜೋರಾಗಿ ಕೂಗಿ ಕೊಂಡಿರುವುದಾಗಿ ಪೋಸ್ಟ್‌ನಲ್ಲಿ ತಿಳಿಸಿದ್ದಾಳೆ. ಅಲ್ಲದೇ ಎಷ್ಟು ಜನ ಹದಿಹರೆಯದ ಹುಡುಗಿಯರು ಮೌನವಾಗಿ ಇದನ್ನು ಸಹಿಸಿಕೊಳ್ಳುತ್ತಾರೆ ಎಂಬುದು ತನಗೆ ತಿಳಿದಿಲ್ಲ. ಆದರೆ ಸರ್ಕಾರ ಇದಕ್ಕೆ ಪ್ರತಿಕ್ರಿಯಿಸಬೇಕೆಂದು ತಾನು ಬಯಸುವುದಾಗಿ ತಿಳಿಸಿದ್ದಾಳೆ. ಅದನ್ನು ಆಕೆ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ, ಬಿಆರ್ ಎಸ್ ನಾಯಕ ಕೆ.ಟಿ.ರಾಮರಾವ್, ಹೈದರಾಬಾದ್ ಪೊಲೀಸರು ಮತ್ತು ಮಹಿಳಾ ಸಂಘಗಳಿಗೆ ಟ್ಯಾಗ್ ಮಾಡಿದ್ದಾಳೆ.

ಇದನ್ನೂ ಓದಿ: ಬಾಸ್‌ ಜತೆ ಚಕ್ಕಂದವಾಡುತ್ತಿದ್ದ ಕಿಲಾಡಿ ಪತ್ನಿ; ಡ್ರೋನ್‌ ಬಳಸಿ ಪತ್ತೆ ಹಚ್ಚಿದ ಚಾಲಾಕಿ ಗಂಡ!

ಇದಕ್ಕೆ ಪ್ರತಿಕ್ರಿಯಿಸಿದ ಟಿಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷ ವಿ.ಸಿ.ಸಜ್ಜನರ್, ಬಸ್ಸಿನ ಕಂಡಕ್ಟರ್ ವಿರುದ್ಧ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಇಂತಹ ಘಟನೆಗಳನ್ನು ಮತ್ತೆ ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹಾಗೇ ಸಂತ್ರಸ್ತೆ ಸೈಬರಾಬಾದ್ ಕಮಿಷನರೇಟ್‍ನ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಟಿಎಸ್ಆರ್‌ಟಿಸಿ ಎಂಡಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಮಹಿಳಾ ಸಂಘಗಳು ಈ ಘಟನೆಯನ್ನು ತಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಧನ್ಯವಾದ ತಿಳಿಸಿ, ಸಂತ್ರಸ್ತೆಯ ಸಹಾಯಕ್ಕೆ ನಿಲ್ಲುವುದಾಗಿ, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂಬುದಾಗಿ ತಿಳಿದುಬಂದಿದೆ.

Continue Reading
Advertisement
Virat kohli
ಪ್ರಮುಖ ಸುದ್ದಿ1 hour ago

Virat Kohli : ವಿರಾಟ್​ ಕೊಹ್ಲಿಯನ್ನು ಅವಮಾನಿಸಿದ ಅಮಿತ್​ ಮಿಶ್ರಾ ಬೆಂಡೆತ್ತಿದ ಯಶ್​ ದಯಾಳ್​

PM Narendra Modi
ದೇಶ1 hour ago

PM Narendra Modi: ಚುನಾವಣೆಯಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ರಾ ಮೋದಿ? ನಾಳೆ ಕಾರ್ಯಕರ್ತರ ದಿಢೀರ್ ಸಭೆ?

Jay Shah
ಪ್ರಮುಖ ಸುದ್ದಿ2 hours ago

Jay Shah : ಜಯ್​ ಶಾ ಮುಂದಿನ ಐಸಿಸಿ ಅಧ್ಯಕ್ಷ; ಕೊಲೊಂಬೊ ಸಭೆಯಲ್ಲಿ ತೀರ್ಮಾನ ಸಾಧ್ಯತೆ

Oil Tanker Capsizes
ವಿದೇಶ2 hours ago

Oil Tanker Capsizes:ತೈಲ ತುಂಬಿದ್ದ ಹಡಗು ಮುಳುಗಡೆ; ಕಣ್ಮರೆಯಾಗಿದ್ದ 8 ಭಾರತೀಯರು ಸೇರಿ ಒಟ್ಟು 9 ನಾವಿಕರ ರಕ್ಷಣೆ

ಪ್ರಮುಖ ಸುದ್ದಿ2 hours ago

Travel Influencer : ರೀಲ್ಸ್​ ಮಾಡುತ್ತಲೇ ಜಲಪಾತದ ಕಮರಿಗೆ ಬಿದ್ದು ಪ್ರಾಣಬಿಟ್ಟ 26 ವರ್ಷದ ಯುವತಿ

Viral Video
ವೈರಲ್ ನ್ಯೂಸ್2 hours ago

Viral Video: ಹೃದಯಾಘಾತದಿಂದ ಕೆಳಗ್ಗೆ ಬಿದ್ದು ಒದ್ದಾಡುತ್ತಿದ್ದವನ ಪಾಲಿಗೆ ದೇವರಂತೆ ಬಂದ್ಳು! ಈ ಮಹಿಳೆಯ ವಿಡಿಯೋ ಎಲ್ಲೆಡೆ ವೈರಲ್‌

Mosquitoes Bite
ಆರೋಗ್ಯ3 hours ago

Mosquitoes Bite: ಎಣ್ಣೆ ಹೊಡೆಯುವವರನ್ನು ಸೊಳ್ಳೆಗಳು ಕಚ್ಚುವುದು ಹೆಚ್ಚು! ಇದಕ್ಕಿದೆ ವೈಜ್ಞಾನಿಕ ಕಾರಣ!

Actress Hina Khan
Latest3 hours ago

Actress Hina Khan: ಕಿಮೋಥೆರಪಿ ಅನುಭವ ಹಂಚಿಕೊಂಡಿದ್ದಾರೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ಬಾಲಿವುಡ್‌ ನಟಿ

Naxalites Killed
ದೇಶ3 hours ago

Naxalites Killed: 6 ಗಂಟೆ ಭರ್ಜರಿ ಕಾರ್ಯಾಚರಣೆ; ಬರೋಬ್ಬರಿ 12 ನಕ್ಸಲರ ಎನ್‌ಕೌಂಟರ್

Walking Benefits
ಆರೋಗ್ಯ3 hours ago

Walking Benefits: ಊಟದ ಬಳಿಕ ಕಿರು ನಡಿಗೆಯಿಂದ ಸಿಗುವ ಆರೋಗ್ಯ ಲಾಭಗಳು ಏನೇನು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌