Matrimony Sites : ಮ್ಯಾಟ್ರಿಮೊನಿ ವರನ ಬಗ್ಗೆ ಇರಲಿ ಎಚ್ಚರ; ಆತನಿಗೆ ಡಜನ್‌ ಮದುವೆ ಆಗಿರಬಹುದು! - Vistara News

ಕರ್ನಾಟಕ

Matrimony Sites : ಮ್ಯಾಟ್ರಿಮೊನಿ ವರನ ಬಗ್ಗೆ ಇರಲಿ ಎಚ್ಚರ; ಆತನಿಗೆ ಡಜನ್‌ ಮದುವೆ ಆಗಿರಬಹುದು!

Matrimony Sites : ತಾನು ಅನುಕೂಲಸ್ಥ, ವೈದ್ಯ, ಎಂಜಿನಿಯರ್‌ ಎಂದು ಸುಳ್ಳು ಪ್ರೊಫೈಲ್‌ ಹಾಕಿಕೊಂಡು ವಂಚಿಸುವವರು ಇದ್ದಾರೆ. ಹೀಗಾಗಿ ಈ ನಿಟ್ಟಿನಲ್ಲಿ ವಿಚಾರಿಸಿ ಮದುವೆಯಾಗಿ, ಮದುವೆ ಮಾಡಿ ಎಂದು ಮೈಸೂರು ಪೊಲೀಸರು ಮನವಿ ಮಾಡಿದ್ದಾರೆ.

VISTARANEWS.COM


on

Matrimony fruad by mahesh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಮ್ಯಾಟ್ರಿಮೊನಿಯಲ್ಲಿ (Matrimony Sites) ವರನನ್ನು ಹುಡುಕುತ್ತಿದ್ದರೆ ಈ ಬಗ್ಗೆ ಎಚ್ಚರ ವಹಿಸಿ, ನೀವು ಹುಡುಕುವ ಸ್ಪುರದ್ರೂಪಿ, ಅನುಕೂಲಸ್ಥ, ಬುದ್ಧಿವಂತ, ಉದ್ಯೋಗವಂತ, ಸಿರಿವಂತ ವರನಿಗೆ ಈಗಾಗಲೇ ಡಜನ್‌ ಮದುವೆ (Dozen Marriage) ಆಗಿರಬಹುದು! ಇಲ್ಲವೇ ಆ ಸಾಲಿನಲ್ಲಿ ಆತ ಇರಲೂಬಹುದು. ಇನ್ನು ಅರ್ಧ ಡಜನ್‌ ಮಕ್ಕಳೂ ಇರಬಹುದು. ಹಾಗಾಗಿ ಆತುರ ಪಡಬೇಡಿ, ಪೂರ್ವಾಪರ ವಿಚಾರಿಸಿಯೇ ಮದುವೆ ಮಾಡಿಕೊಡಿ! ಇಂಥದ್ದೊಂದು ಮನವಿಯನ್ನು ಈಗ ಮೈಸೂರು ಪೊಲೀಸರು (Mysore Police) ಮಾಡಿದ್ದಾರೆ.

ಮೈಸೂರು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ (Mysuru DCP Law and Order Muthuraj) ಬುಧವಾರ (ಜುಲೈ 12) ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಆನ್‌ಲೈನ್‌ನಲ್ಲಿ ಮದುವೆ ಪ್ರಸ್ತಾಪ ಬಂದಾಗ ಪೂರ್ವಾಪರ ವಿಚಾರಿಸಬೇಕು. ಆಕರ್ಷಣೆಗೆ ಒಳಗಾಗಿ ಮದುವೆಗೆ ಆತುರ ಮಾಡಬಾರದು. ಈ ಬಗ್ಗೆ ಯುವತಿಯ ಕುಟುಂಬಸ್ಥರು ಜಾಗೃತಿ ವಹಿಸಬೇಕು. ಮಹಿಳೆಯ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಈ ಮಹೇಶ್ ಈಗ 12 ಮಹಿಳೆಯರಿಗೆ ಮೋಸ (Fraud Case) ಮಾಡಿದ್ದಾನೆ. ಇಂಥ ಹತ್ತಾರು “ಮಹೇಶ್‌” ಮ್ಯಾಟ್ರಿಮೊನಿ ಸೈಟ್‌ಗಳಲ್ಲಿ ಇರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Snake Cancer : ಕ್ಯಾನ್ಸರ್‌ ಪೀಡಿತ ನಾಗರ ಹಾವು ಸಾವು; ಯುವಕನಿಂದ ಅಂತ್ಯಸಂಸ್ಕಾರ

ಬೆಂಗಳೂರಿನ ಬನಶಂಕರಿ ಬಡಾವಣೆಯ ಮಹೇಶ್​ (35) ಕಾಲಕಾಲಕ್ಕೆ ಡಾಕ್ಟರ್​, ಎಂಜಿನಿಯರ್​, ಗುತ್ತಿಗೆದಾರ, ಉದ್ಯಮಿಯ ವೇಷ ಧರಿಸಿ ಬರೋಬ್ಬರಿ 12 ಮದುವೆಯಾಗಿ ಮಕ್ಕಳು ಮಾಡಿದ್ದಲ್ಲದೆ, ಲಕ್ಷಾಂತರ ರೂಪಾಯಿ ಪಡೆದು ನಾಪತ್ತೆಯಾಗುತ್ತಿದ್ದ. ಆದರೂ, ಈತನ ಬಗ್ಗೆ ಕಂಪ್ಲೇಂಟ್‌ ಕೊಡಲು ಈತನಿಂದ ಮೋಸ ಹೋದ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಮುತ್ತುರಾಜ್‌ ತಿಳಿಸಿದ್ದಾರೆ.

ಮಹೇಶ್ ಒಟ್ಟು 12 ಮದುವೆ ಆಗಿದ್ದಾನೆ. ಇವರ ಪೈಕಿ 6 ಮಹಿಳೆಯರಿಗೆ ಮಕ್ಕಳಿದ್ದಾರೆ. ಸುಲಭವಾಗಿ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಇಡುತ್ತಿದ್ದ. ಮನೆಯವರೂ ಸಹ ಹಿಂದು ಮುಂದು ನೋಡದೆ ಈತನಿಗೆ ಮದುವೆ ಮಾಡಿ ಕೊಟ್ಟು ಮೋಸ ಹೋಗುತ್ತಿದ್ದರು. ಈತ ವರ್ಷಕ್ಕೆ ಸರಾಸರಿ 20 ಲಕ್ಷ ಹಣವನ್ನು ಇದರಿಂದಲೇ ಸಂಪಾದಿಸುತ್ತಿದ್ದ. ಆದರೆ, ಆಸ್ತಿಯನ್ನೂ ಮಾಡಿಲ್ಲ. ಶೋಕಿಗಾಗಿ ದುಂದು ವೆಚ್ಚ ಮಾಡಿ ಈಗ ಜೈಲು ಸೇರಿದ್ದಾನೆ ಎಂದು ಅವರು ವಿವರಿಸಿದ್ದಾರೆ.

ಈತನ ಟಾರ್ಗೆಟ್‌ ಯಾರು?

ಈತ ಮ್ಯಾಟ್ರಿಮೊನಿ ಸೈಟ್‌ಗಳಲ್ಲಿ ತನ್ನ ಪ್ರೊಫೈಲ್‌ಗಳನ್ನು ಕ್ರಿಯೇಟ್‌ ಮಾಡಿ ಡಾಕ್ಟರ್‌, ಎಂಜಿನಿಯರ್‌, ಉದ್ಯಮಿ ಎಂದೆಲ್ಲ ಹಾಕಿಕೊಳ್ಳುತ್ತಿದ್ದ. ಕೊನೆಗೆ ಅಲ್ಲಿರುವ ಪ್ರೊಫೈಲ್‌ಗಳನ್ನು (Matrimony Profile) ಸರ್ಚ್‌ ಮಾಡಿ, ಜೀವನದಲ್ಲಿ ಸೆಟಲ್ ಆಗಿರುವವರು, ತುಂಬಾ ದುಡ್ಡು ಇರುವವರನ್ನು ಟಾರ್ಗೆಟ್‌ ಮಾಡಿಕೊಳ್ಳುತ್ತಿದ್ದ. ಬಳಿಕ ಅವರಿಗೆ ರಿಕ್ವೆಸ್ಟ್ ಕಳಿಸಿ, ಪುಸಲಾಯಿಸುತ್ತಿದ್ದ. ಇದನ್ನು ಕಂಡೊಡನೆ ವಧು ಅಥವಾ ಅವರ ಮನೆಯವರು ಬೇಸ್ತು ಬೀಳುತ್ತಿದ್ದರು ಎಂದು ಮಹೇಶನ ವಂಚನೆ ವೃತ್ತಾಂತವನ್ನು ಮುತ್ತುರಾಜ್‌ ವಿವರಿಸಿದ್ದಾರೆ.

ಮಾತುಕತೆಗೆ ಬಾಡಿಗೆ ತಂದೆ- ತಾಯಿ!

ಈತ ನೋಡಲು ಚೆನ್ನಾಗಿದ್ದಾನೆ. ಒಳ್ಳೆಯ ಡ್ರೆಸ್ ಹಾಕುತ್ತಾನೆ ಎಂಬುದನ್ನು ನೋಡಿ ಜನರು ನಂಬುತ್ತಿದ್ದರು. ಅಲ್ಲದೆ, ಮಹೇಶ್‌, ತಾನು ಡಾಕ್ಟರ್ ಆಗಿದ್ದು, ದೇಶದ ತುಂಬೆಲ್ಲ ಓಡಾಡುತ್ತಿರುತ್ತೇನೆ, ಅಂತೆಲ್ಲ ನಂಬಿಸುತ್ತಿದ್ದ. ಇಂತಹ ಗಂಡು ಸಿಕ್ಕಿದ್ದೇ ಪುಣ್ಯ ಅಂತ ನಂಬಿ ಮದುವೆ ಮಾಡಿಕೊಂಡು ಬಿಡುತ್ತಿದ್ದರು. ಅಲ್ಲದೆ, ಮದುವೆ ಮಾತುಕತೆಗೆ ಬಾಡಿಗೆ ತಂದೆ- ತಾಯಿಯನ್ನು (Fake parents) ಕರೆದುಕೊಂಡು ಹೋಗುತ್ತಿದ್ದ. ದುಡ್ಡು ಕೊಟ್ಟು ಕೂಲಿ ಕೆಲಸದವರನ್ನು ತಂದೆ- ತಾಯಿ ರೀತಿ ನಟಿಸಲು ಕರೆದೊಯ್ಯುತ್ತಿದ್ದ. ಕೆಲ ಪ್ರಕರಣಗಳಲ್ಲಿ ನಾನು ಅನಾಥ (Orphan Drama) ಎಂದು ಹೇಳಿಕೊಳ್ಳುತ್ತಿದ್ದ. ನೀವು ಸಹಕಾರ ಕೊಟ್ಟರೆ ಮದುವೆ ಆಗುತ್ತೇನೆ ಎಂದು ನಂಬಿಸುತ್ತಿದ್ದ. ಕೆಲವು ಕಡೆ ಮದುವೆಯಾದ ಒಂದು ವಾರದಲ್ಲೇ ಬಿಟ್ಟು ಹಣ, ಚಿನ್ನಾಭರಣ ಕದ್ದು (Theft of cash, jewellery) ಪರಾರಿ ಆಗಿದ್ದಾನೆ. ಆದರೂ ಮೋಸ ಹೋದವರು ದೂರು ಕೊಡಲು ಮುಂದೆ ಬರುತ್ತಿಲ್ಲ ಎಂದು ಮುತ್ತುರಾಜ್‌ ತಿಳಿಸಿದ್ದಾರೆ.

ಮದುವೆಯಾದ ಮಹಿಳೆಯರು ಒಬ್ಬರಿಗೊಬ್ಬರು ಸಂಪರ್ಕ ಮಾಡದಂತೆ ಪ್ಲ್ಯಾನ್ ಮಾಡಿದ್ದಾನೆ. ಮೊಬೈಲ್ ಸಿಮ್ ಕಾರ್ಡ್ (Mobile Sim Card) ಬದಲಿಸಿ ನಾಪತ್ತೆ ಆಗುತ್ತಿದ್ದ. ಈ ಕಾರಣಕ್ಕೆ ಬಹುತೇಕರು ಈತನನ್ನು ಹುಡುಕುವ ಗೋಜಿಗೆ ಹೋಗಿಲ್ಲ ಎಂದು ಡಿಸಿಪಿ ಮುತ್ತುರಾಜ್ ವಿವರಿಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ?

ಶಾದಿ ಡಾಟ್​ ಕಾಂನಲ್ಲಿ ಹೇಮಲತಾ ಎಂಬುವವರ ಸಂಪರ್ಕಕ್ಕೆ ಬಂದಿದ್ದ ಮಹೇಶ್​ ತಾನು ಡಾಕ್ಟರ್ ಎಂದು ಹೇಳಿಕೊಂಡಿದ್ದ. ಹೇಮಲತಾ ಸಹಜವಾಗಿಯೇ ಅವನನ್ನು ನಂಬಿದ್ದರು. ಇವರಿಬ್ಬರ ಮಧ್ಯೆ ಪರಿಚಯ ಬೆಳೆದು, ಮದುವೆಯ ತೀರ್ಮಾನವಾಯಿತು. ಹೇಮಲತಾ ಮತ್ತು ಮಹೇಶ್ ಇಬ್ಬರೂ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಇದೇ ವರ್ಷ ಜನವರಿ 1ರಂದು ಮದುವೆಯಾಗಿದ್ದರು. ಅದಾದ ಮೇಲೆ ಮಹೇಶ್ ಅಸಲಿ ರೂಪ ಬಯಲಿಗೆ ಬಂತು.

ಇದನ್ನೂ ಓದಿ: Tomato price : ದಾವಣಗೆರೆಯಲ್ಲಿ ಟೊಮ್ಯಾಟೊಗೆ Z + ಸೆಕ್ಯುರಿಟಿ; ಶ್ವಾನದಳ ನೇಮಕ!

ಒಡವೆ ಕದ್ದು ಸಿಕ್ಕಿಬಿದ್ದ

ಮೊದಲು ಅವನು ಹೇಮಲತಾ ಬಳಿ 70 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ. ಕ್ಲಿನಿಕ್​ ತೆರೆಯಬೇಕು ಹಣ ಕೊಡು ಎಂದು ಹೇಳಿದ. ಆದರೆ ಹೇಮಲತಾ ಅದಕ್ಕೆ ಒಪ್ಪಲಿಲ್ಲ. ಕೇಳಿದರೂ ಹೇಮಲತಾ ಹಣ ಕೊಡದೆ ಇದ್ದಾಗ ಸಿಟ್ಟಾದ ಮಹೇಶ್​, ಆಕೆಯ ಹಣ, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ. ಬಳಿಕ ಹೇಮಲತಾ ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲು (complaint lodged) ಮಾಡಿದ್ದರು. ಇವನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಅಷ್ಟೂ ಕೇಸ್​ಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು. ಮಹೇಶ್ ವಿರುದ್ಧ ಬೆಂಗಳೂರಲ್ಲಿ ದಿವ್ಯಾ ಎಂಬುವರೂ ದೂರು ದಾಖಲಿಸಿದ್ದು ಗೊತ್ತಾಗಿತ್ತು. ಈಗ ವಿಚಾರಣೆ ವೇಳೆ ತಾನು ಈ ರೀತಿ 12 ಮದುವೆ ಆಗಿದ್ದಾಗಿ ಬಾಯಿ ಬಿಟ್ಟಿದ್ದಾನೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Pralhad Joshi: ಯುಪಿಎ ಕಾಲದಲ್ಲಿ ಸತ್ತ ಉಗ್ರನಿಗಾಗಿ ಸೋನಿಯಾ ಗಾಂಧಿ ಕಣ್ಣೀರಿಟ್ಟಿದ್ದರು: ಪ್ರಲ್ಹಾದ್‌ ಜೋಶಿ

Pralhad Joshi: ಉಗ್ರನ ಸಾವಿಗೆ ಕಣ್ಣೀರಿಟ್ಟ ನಾಯಕರು ಯಾರಾದರೂ ಇದ್ರೆ ಅದು ಸೋನಿಯಾ ಗಾಂಧಿ ಮಾತ್ರ. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ತುಷ್ಟೀಕರಣ ರಾಜಕಾರಣದ ಒಂದು ಭಾಗವಾಗಿಯೇ ಇದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

VISTARANEWS.COM


on

Pralhad Joshi
Koo

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ತುಷ್ಟೀಕರಣದ ಕೆಸರಲ್ಲೇ ಹೊರಳಾಡುತ್ತಿದೆ. ಅದರಿಂದ ಹೊರಗಡೆ ಬರುವ ಮಾನಸಿಕತೆಯೇ ಅದರ ನಾಯಕರಿಗೆ ಇಲ್ಲವಾಗಿದೆ. ಯುಪಿಎ ಕಾಲದಲ್ಲಿ ನಡೆದ ದೆಹಲಿಯ ಬಾಟ್ಲಾ ಹೌಸ್ ಪ್ರಕರಣದಲ್ಲಿ ಒಬ್ಬ ಉಗ್ರಗಾಮಿ ಮತ್ತು ಇನ್ಸ್‌ಪೆಕ್ಟರ್‌ ಮೋಹನ್ ಚಂದ್ ಶರ್ಮಾ ಹತರಾಗಿದ್ದರು. ಆದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಉಗ್ರ ಹತನಾಗಿದ್ದಕ್ಕೆ ಕಣ್ಣೀರಿಟ್ಟಿದ್ದರು ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯ ಹುಬ್ಬಳ್ಳಿಯ ಎಂ.ಆರ್. ಸಾಖರೆ ಶಾಲಾ ಆವರಣದಲ್ಲಿ ಭಾನುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ತುಷ್ಟೀಕರಣ ರಾಜಕಾರಣದ ಒಂದು ಭಾಗವಾಗಿಯೇ ಇದೆ. ಬಾಟ್ಲಾ ಹೌಸ್ ಪ್ರಕರಣದಲ್ಲಿ ಒಬ್ಬ ಅಮಾಯಕ ಮುಸಲ್ಮಾನ್ ಸತ್ತನೆಂದು ಸೋನಿಯಾ ಗಾಂಧಿ ರಾತ್ರಿಯಿಡಿ ನಿದ್ರೆ ಮಾಡದೇ ಕಣ್ಣೀರು ಹಾಕಿದ್ದರು. ಆದರೆ, ಇವರಿಗೆ ಒಬ್ಬ ಪೊಲೀಸ್ ಅಧಿಕಾರಿ ಪ್ರಾಣ ಬಿಟ್ಟಿರುವುದು ಗಣನೆಗೆ ಬರಲಿಲ್ಲ. ಉಗ್ರನ ಸಾವಿಗೆ ಕಣ್ಣೀರಿಟ್ಟ ನಾಯಕರು ಯಾರಾದರೂ ಇದ್ರೆ ಅದು ಸೋನಿಯಾ ಗಾಂಧಿ ಎಂದು ಜೋಶಿ ಹೇಳಿದರು.

ಇದನ್ನೂ ಓದಿ | Lok Sabha Election 2024: ಭ್ರಷ್ಟಾಚಾರ ನಿರ್ಮೂಲನೆಗೆ ಮೋದಿ ಸರ್ಕಾರ ಪಣ: ಸಚಿವ ಪ್ರಲ್ಹಾದ್‌ ಜೋಶಿ

ಮತಿಗೆಟ್ಟ ರಾಹುಲ್‌

ಯನಾಡಲ್ಲಿ ಕಣಕ್ಕಿಳಿದ ರಾಹುಲ್ ಗಾಂಧಿ ಕಾಂಗ್ರೆಸ್ ಧ್ವಜ ಬಿಟ್ಟು ಮುಸ್ಲಿಂ ಲೀಗ್ ಧ್ವಜ ಹಿಡಿದು ನಾಮಪತ್ರ ಸಲ್ಲಿಸಿ ಬಂದಿದ್ದಾರೆ. ರಾಹುಲ್ ಒಬ್ಬ ಮತಿಗೆಟ್ಟ, ಧೃತಿಗೆಟ್ಟ, ನಾಚಿಕೆಗೆಟ್ಟ ನಾಯಕ. ದೇಶವನ್ನು ತುಂಡು ಮಾಡಿದ ಮುಸ್ಲಿಂ ಲೀಗ್, ದೇಶದ ಹಿತ ಬಯಸದ ಮುಸ್ಲಿಂ ಲೀಗ್ ಅದು. ಅದರ ಧ್ವಜ ಹಿಡಿಯಲು ರಾಹುಲ್ ಬಾಬಾಗೆ ಕಿಂಚಿತ್ತೂ ನಾಚಿಕೆ ಆಗಲಿಲ್ಲವೇ? ಎಂದು ಜೋಶಿ ಪ್ರಶ್ನಿಸಿದರು.

ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದಲ್ಲೂ ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನೇ ಅನುಸರಿಸುತ್ತಿದೆ. ಸಿಎಂ, ಡಿಸಿಎಂ ಮತ್ತು ಗೃಹ ಸಚಿವರ ಪ್ರತಿಕ್ರಿಯೆ, ವರ್ತನೆ ನಿಜಕ್ಕೂ ದಂಗು ಬಡಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಆರ್ಟಿಕಲ್ 370 ಕಿತ್ತೆಸೆದರೆ, ಕಾಂಗ್ರೆಸ್ ಮತ್ತೆ ತರುತ್ತೇವೆ ಎನ್ನುತ್ತಿದೆ

ನರೇಂದ್ರ ಮೋದಿ ಅವರು, ಉಗ್ರರಿಗೆ ಆಶ್ರಯದಂತೆ ಇದ್ದ ಆರ್ಟಿಕಲ್ 370ಯನ್ನು ಕಿತ್ತೆಸೆದರೆ, ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ ಮತ್ತೆ ತರುತ್ತೇವೆ ಎನ್ನುತ್ತಿದೆ. ಇವರ ತುಷ್ಟೀಕರಣ ರಾಜಕಾರಣ ಪರಾಕಾಷ್ಟೆ ತಲುಪಿದೆ ಎಂದು ಹರಿ ಹಾಯ್ದರು.

ಮೂಲಭೂತವಾದ ಇರಬಾರದು

ದೇಶ ಅಭಿವೃದ್ಧಿ ಸಾಧಿಸಬೇಕಾದರೆ ಮೂಲಭೂತವಾದಿತನ ಇರಬಾರದು. ಪ್ರಧಾನಿ ನರೇಂದ್ರ ಮೋದಿ ಅವರು ಮೂಲಭೂತವಾದವನ್ನು ತೊಡೆದು ಹಾಕುತ್ತಿದ್ದಾರೆ. ದೇಶದಲ್ಲಿ ಸಂಪೂರ್ಣ ಉಗ್ರ ಚಟುವಟಿಕೆಗಳಿಗೆ ಕೊನೆಗಾಣಿಸಿದ್ದಾರೆ ಎಂದು ಹೇಳಿದರು.

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಜತೆಗೆ ಕರ್ನಾಟಕವನ್ನು, ಹುಬ್ಬಳ್ಳಿ – ಧಾರವಾಡವನ್ನು ಅಭಿವೃದ್ಧಿಯಲ್ಲಿ ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತೇವೆ. ಇದಕ್ಕಾಗಿ ಬಿಜೆಪಿಯನ್ನು ಮತ್ತೆ ಬೆಂಬಲಿಸಿ ಎಂದು ಸಚಿವ ಜೋಶಿ ಕರೆ ನೀಡಿದರು.

ಇದನ್ನೂ ಓದಿ | The Great Khali : ರಾಹುಲ್ ಗಾಂಧಿ ಸುಳ್ಳ ಎಂದು ಕರೆದ ಬಿಜೆಪಿ ನಾಯಕ ದಿ ಗ್ರೇಟ್ ಖಲಿ, ಇಲ್ಲಿದೆ ವಿಡಿಯೊ

ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಮೇಯರ್ ವೀಣಾ, ಸೀಮಾ ಮಸೂತಿ, ಅಮೃತ ದೇಸಾಯಿ ಉಪಸ್ಥಿತರಿದ್ದರು. ಸಮಾವೇಶ ಆರಂಭಕ್ಕೂ ಮುನ್ನ ನೇಹಾ ಹಿರೇಮಠಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Continue Reading

ಕರ್ನಾಟಕ

Lok Sabha Election: ಮೋದಿಯಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು, ನಾವು ಗ್ಯಾರಂಟಿ ಮೂಲಕ ಸ್ಪಂದಿಸಿದ್ದೇವೆ: ಸಿಎಂ

Lok Sabha Election 2024: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕೋಣನಕುಂಟೆ ಕ್ರಾಸ್‌ನಲ್ಲಿ ನಡೆದ ಬೃಹತ್ ಪ್ರಜಾಧ್ವನಿ -2 ಜನಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

VISTARANEWS.COM


on

Lok Sabha Election 2024
Koo

ಬೆಂಗಳೂರು: ಬೆಲೆ ಏರಿಕೆ ತಡೆಯುವುದಾಗಿ ಭಾರತೀಯರನ್ನು ನಂಬಿಸಿ ಅಧಿಕಾರಕ್ಕೆ ಬಂದ ಮೋದಿಯವರು ವಿಪರೀತ ಬೆಲೆ ಏರಿಕೆ ಮಾಡಿದ್ದರಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು. ನಾವು ಗ್ಯಾರಂಟಿಗಳ ಮೂಲಕ ಸ್ಪಂದಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕೋಣನಕುಂಟೆ ಕ್ರಾಸ್‌ನಲ್ಲಿ ನಡೆದ ಬೃಹತ್ ಪ್ರಜಾಧ್ವನಿ -2 ಜನಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಲೆ ಏರಿಕೆ ಭಾರತೀಯರ ಶತ್ರು. ನಾನು ಪ್ರಧಾನಿಯಾದರೆ ಬೆಲೆ ಏರಿಕೆ ತಡೆಯುವುದಾಗಿ ಇಡೀ ಭಾರತೀಯರನ್ನು ಮೋದಿ ನಂಬಿಸಿದ್ದರು. ಆದರೆ ಇದೇ ಮೋದಿ ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಸೇರಿ ಎಲ್ಲದರ ಬೆಲೆಯನ್ನೂ ಗಗನಕ್ಕೆ ಏರಿಸಿದರು ಎಂದು ಬೆಲೆ ಏರಿಕೆಯ ಪಟ್ಟಿ ನೀಡಿದರು.

ಇದನ್ನೂ ಓದಿ | Lok Sabha Election 2024: 10 ವರ್ಷದಲ್ಲಿ ಅಚ್ಚೇದಿನ್ ತರಲಾಗದವರು ಈಗ 23 ವರ್ಷ ಕೇಳುತ್ತಿರುವುದು ಹಾಸ್ಯಾಸ್ಪದ: ದಿನೇಶ್ ಗುಂಡೂರಾವ್

ಮೋದಿಯವರ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಮಧ್ಯಮ ವರ್ಗದ ಜನ ಮತ್ತು ದುಡಿಯುವ ವರ್ಗಗಳು ಹಾಗೂ ಬಡ ಜನರ ಬದುಕಿಗೆ ಸ್ಪಂದಿಸುವ ಉದ್ದೇಶದಿಂದ ನಾನು ಐದು ಗ್ಯಾರಂಟಿಗಳನ್ನು ರೂಪಿಸಿ ಐದನ್ನೂ ಜಾರಿ ಮಾಡಿದ್ದೇವೆ. ನಾವು ನುಡಿದಂತೆ ನಡೆದು ನಿಮ್ಮ ಮತಕ್ಕೆ ಗೌರವ ತಂದು ಘನತೆ ಹೆಚ್ಚಿಸಿದ್ದೇವೆ‌. ಈ ಅರ್ಹತೆಯಿಂದ ನಿಮ್ಮ ಎದುರಿಗೆ ನಿಂತು ಮತ ಕೇಳುತ್ತಿದ್ದೇವೆ ಎಂದರು.

ಬೆಂಗಳೂರಿನ ಕುಡಿಯುವ ನೀರಿಗೆ ಮೋದಿ ಅಡ್ಡಿ

ಬೆಂಗಳೂರಿನ ಕುಡಿಯುವ ನೀರಿನ ಮೇಕೆದಾಟು ಯೋಜನೆಗೆ ಅನುಮತಿ ಏಕೆ ಕೊಡುತ್ತಿಲ್ಲ ಮೋದಿಯವರೇ ಎಂದು ಪ್ರಶ್ನಿಸಿದ ಸಿ.ಎಂ. ಸಿದ್ದರಾಮಯ್ಯ ಅವರು, ನೀವೇ ಮೇಕೆದಾಟು ಯೋಜನೆಗೆ ಅನುಮತಿ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | DK Suresh: ಬೆಲೆ ಏರಿಕೆ, ಜಿಎಸ್‌ಟಿ ಹೊರೆಯೇ ಮೋದಿ ಗ್ಯಾರಂಟಿ: ಡಿ.ಕೆ. ಸುರೇಶ್

ಡಿ.ಕೆ.ಸುರೇಶ್ ರಾಜ್ಯದ ಧ್ವನಿಯಾಗಿ ಹೋರಾಟ ನಡೆಸ್ತಾರೆ

ಮೋದಿಯವರಿಂದ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯವನ್ನು, ನಿಮ್ಮ ತೆರಿಗೆ ಹಣಕ್ಕೆ ಆಗುತ್ತಿರುವ ದ್ರೋಹವನ್ನು ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿ ಪ್ರಶ್ನಿಸಿದವರು ಡಿ.ಕೆ.ಸುರೇಶ್ ಮಾತ್ರ. ಇವರು ಗೆದ್ದರೆ ನಮ್ಮ-ನಿಮ್ಮೆಲ್ಲರ ಧ್ವನಿಯಾಗಿ ಹೋರಾಟ ಮಾಡ್ತಾರೆ; ಇವರಿಗೆ ಆಶೀರ್ವದಿಸಿ ಪಾರ್ಲಿಮೆಂಟಿಗೆ ಕಳುಹಿಸಿ ಎಂದು ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು.

Continue Reading

ಕರ್ನಾಟಕ

Indigo Airlines: ಪ್ರಯಾಣಿಕರ ಲಗೇಜ್‌ ಬೆಂಗಳೂರಲ್ಲೇ ಬಿಟ್ಟು ಬೆಳಗಾವಿಗೆ ಬಂದ ವಿಮಾನ; ಮಾಜಿ ಸಿಎಂ ಬ್ಯಾಗ್‌ ಕೂಡ ಮಿಸ್ಸಿಂಗ್!‌

Indigo Airlines: ಸುಮಾರು 22 ಪ್ರಯಾಣಿಕರ ಬ್ಯಾಗ್‌ಗಳನ್ನು ವಿಮಾನದ ಸಿಬ್ಬಂದಿ ಬೆಂಗಳೂರಿನಲ್ಲಿಯೇ ಬಿಟ್ಟುಬಂದಿದ್ದಾರೆ. ಹೀಗಾಗಿ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

VISTARANEWS.COM


on

belagavi Airport
ಸಾಂದರ್ಭಿಕ ಚಿತ್ರ
Koo

ಬೆಳಗಾವಿ: ಪ್ರಯಾಣಿಕರನ್ನು ಹೊತ್ತೊಯ್ದ ಇಂಡಿಗೋ ವಿಮಾನ (Indigo Airlines) ಅವರ ಲಗೇಜ್‌ ಬ್ಯಾಗ್‌ಗಳನ್ನು ಬೆಂಗಳೂರಲ್ಲೇ ಬಿಟ್ಟು ಬಂದ ವಿಚಿತ್ರ ಘಟನೆ ಭಾನುವಾರ ನಡೆದಿದೆ. ನಗರಕ್ಕೆ ತಲುಪಿದ ನಂತರ ತಮ್ಮ ಬ್ಯಾಗ್ ಹುಡುಕಿ ಹುಡುಕಿ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಸಂಜೆ 5.55ಕ್ಕೆ ಬೆಂಗಳೂರಿನಿಂದ ಹೊರಟಿದ್ದ ವಿಮಾನ ಬೆಳಗಾವಿಗೆ ರಾತ್ರಿ 7.30ಕ್ಕೆ ತಲುಪಿತು. ಸುಮಾರು 22 ಪ್ರಯಾಣಿಕರ ಬ್ಯಾಗ್‌ಗಳನ್ನು ಸಿಬ್ಬಂದಿ ಬೆಂಗಳೂರಿನಲ್ಲಿಯೇ ಬಿಟ್ಟುಬಂದಿದ್ದಾರೆ. ಅದರಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಆಗಿಮಿಸಿದ್ದು, ಅವರ ಬ್ಯಾಗ್ ಸಹ ಮಿಸ್ಸಿಂಗ್ ಆಗಿದೆ. ಮಲೇಷಿಯಾ ವಿದ್ಯಾರ್ಥಿಗಳ ಬ್ಯಾಗ್ ದೊಡ್ಡದಿದ್ದವು, ಹೀಗಾಗಿ ಕೆಲ ಪ್ರಯಾಣಿಕರ ಬ್ಯಾಗ್ ಅಲ್ಲೇ ಇದೆ ಎಂದು ಸಿಬ್ಬಂದಿ ಹೇಳಿದ್ದಾರೆ.

ನಾಳೆ ಉಳಿದ ಪ್ರಯಾಣಿಕರ ಬ್ಯಾಗ್ ತರಿಸಿಕೊಡಲಾಗುವುದು ಎಂದು ಸಿಬ್ಬಂದಿ ಹೇಳಿದ್ದು, ಇದಕ್ಕೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಬ್ಯಾಗ್ ಇಲ್ಲದೆ ಕಂಗೆಟ್ಟ ಹಲವು ಪ್ರಯಾಣಿಕರು ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿ, ಕಾಯುತ್ತಾ ಇದ್ದದ್ದು ಕಂಡುಬಂತು.

belagavi Airport

ಇದನ್ನೂ ಓದಿ | Viral News: ಬಿಸಿಗಾಳಿಯ ಸುದ್ದಿ ಓದುತ್ತಿದ್ದಾಗಲೇ ಲೈವ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಟಿವಿ ನಿರೂಪಕಿ

ಈ ಕುರಿತು ಮಾತನಾಡಿದ ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜನ್ ಮಾತನಾಡಿ, ವಿಮಾನದಲ್ಲಿ ಭಾರ ಹೆಚ್ಚಾಗಿರುವುದು ವಿಮಾನ ಟೇಕ್‍ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ಗೊತ್ತಾಗುತ್ತದೆ. ಆ ಸಂದರ್ಭದಲ್ಲಿ ಹೆಚ್ಚುವರಿ ಲಗೇಜ್‍ಗಳನ್ನು ಇಳಿಸಲಾಗುತ್ತದೆ. ಪ್ರಯಾಣಿಕರು ಆಗಲೇ ಹೊರಡುವ ಕ್ಷಣವಾಗಿರುವ ಕಾರಣ ಸಿಬ್ಬಂದಿಗೆ ಮುಂಚಿತವಾಗಿ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿಯೇ ಉಳಿದಿರುವ ಲಗೇಜ್‍ಗಳನ್ನು ಆಯಾ ಪ್ರಯಾಣಿಕರ ಮನೆಗೆ ಇಂಡಿಗೋ ಸಂಸ್ಥೆ ಸೋಮವಾರ ತಲುಪಿಸಲಿದೆ ಎಂದು ತಿಳಿಸಿದ್ದಾರೆ.

ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನೇತಾಡುವ ಯುವಕ; ಶಾಕಿಂಗ್‌ ವಿಡಿಯೊ ನೋಡಿ

Viral News

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಗಳಿಸಲು ಯುವ ಜನತೆ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ತಯಾರಿರುತ್ತಾರೆ. ತಮ್ಮ ಜೀವವನ್ನೇ ಅಪಾಯಕ್ಕೆ ತಳ್ಳಿ ಸಾಹಸ ನಡೆಸಿ ಅದನ್ನು ಚಿತ್ರೀಕರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ಮತ್ತೊಂದು ಉದಾಹರಣೆ ಇದು. ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ಯುವಕನೊಬ್ಬ ನೇತಾಡುತ್ತಿರುವುದನ್ನು ತೋರಿಸುವ ವಿಡಿಯೊ ವೈರಲ್‌ (Viral News) ಆಗಿದ್ದು, ನೆಟ್ಟಿಗರು ಒಂದು ಕ್ಷಣ ದಂಗಾಗಿದ್ದಾರೆ. ಜೀವವನ್ನೇ ಅಪಾಯಕ್ಕೆ ತಳ್ಳಬಹುದಾದ ಈ ಹುಚ್ಚು ಸಾಹಸ ನೋಡಿ ಅನೇಕರು ಆ ಯುವಕನಿಗೆ ಛೀಮಾರಿ ಹಾಕುತ್ತಿದ್ದಾರೆ.

ಚಲಿಸುತ್ತಿರುವ ಕಾರಿನ ಬಾಗಿಲಿಗೆ ತೊಟ್ಟಿಲಂತೆ ಕಟ್ಟಿರುವ ಪ್ಲಾಸ್ಟಿಕ್‌ನಲ್ಲಿ ಯುವಕನೊಬ್ಬ ಮಗುವಿನಂತೆ ಮಲಗಿರುತ್ತಾನೆ. ಕಾರು ಚಲಿಸುತ್ತಿರುವಾಗ ಆತ ಅದರಲ್ಲಿ ನೇತಾಡಿಕೊಂಡು ಆನಂದಿಸುತ್ತಾನೆ. ಚಾಲಕ ನಗುತ್ತ ಆ ಯುವಕನೊಂದಿಗೆ ತಮಾಷೆ ಮಾಡುತ್ತಾನೆ. ಹಿಂದಿನ ಸೀಟಿನಲ್ಲಿರುವ ಇನ್ನೋರ್ವ ಯುವಕನೂ ಈ ಹುಚ್ಚು ಸಾಹಸಕ್ಕೆ ಸಾಕ್ಷಿಯಾಗುತ್ತಾನೆ. ಈ ಕಾರು ಹೈವೆಯಲ್ಲಿ ಸಾಗುತ್ತಿರುತ್ತದೆ. ಇದು ವೈರಲ್‌ ವಿಡಿಯೊದಲ್ಲಿ ಕಂಡು ಬರುವ ದೃಶ್ಯ. ಇದನ್ನು ಎಲ್ಲಿ ಚಿತ್ರೀಕರಣಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.

ಈ ಪೋಸ್ಟ್ ಅನ್ನು ವಾರದ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ ಇದನ್ನು 90 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಎರಡು ದಶಲಕ್ಷಕ್ಕೂ ಹೆಚ್ಚು ಲೈಕ್‌ ದೊರೆತಿದೆ. ಸದ್ಯ ವಿಡಿಯೊ ನೋಡಿದ ನೆಟ್ಟಿಗರು ಈ ಯುವಕರ ಗುಂಪನ್ನು ತರಾಟೆಗೆ ತೆಗೆದುಕೊಂಡಿದೆ. ಸಾವರ್ಜನಿಕ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇಂತಹವರು ತಾವು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದ ಜತೆಗೆ ಇತರರನ್ನೂ ಅಪಾಯಕ್ಕೆ ಸಿಲುಕಿಸುತ್ತಾರೆ. ಅಂತಹ ಪ್ರವೃತ್ತಿಗೆ ಕಡಿವಾಣ ಹಾಕಲೇಬೇಕು. ಇಂತಹವರ ಚಾಲನಾ ಪರವಾನಗಿ ರದ್ದು ಪಡಿಸಬೇಕು ಎಂದು ನೆಟ್ಟಿಗರು ಅಧಿಕೃತರ ಗಮನ ಸೆಳೆದಿದ್ದಾರೆ.

Continue Reading

ಬೆಂಗಳೂರು

DK Suresh: ಬೆಲೆ ಏರಿಕೆ, ಜಿಎಸ್‌ಟಿ ಹೊರೆಯೇ ಮೋದಿ ಗ್ಯಾರಂಟಿ: ಡಿ.ಕೆ. ಸುರೇಶ್

DK Suresh: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಡಿ.ಕೆ. ಸುರೇಶ್ ಅವರು ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನಾರಾಯಣನಗರ, ರಾಮಂಜನೇಯನಗರ, ಉತ್ತರಹಳ್ಳಿ, ಗುಬ್ಬಲಾಳ, ಮತ್ತಿತರ ಕಡೆ ಭಾನುವಾರ ಚುನಾವಣೆ ಪ್ರಚಾರ ಮಾಡಿದರು.

VISTARANEWS.COM


on

DK Suresh
Koo

ಬೆಂಗಳೂರು: “ಬೆಲೆ ಏರಿಕೆ, ಜಿಎಸ್‌ಟಿ ಹೊರೆ, ನಿರುದ್ಯೋಗ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಗ್ಯಾರಂಟಿ” ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ (DK Suresh) ವಾಗ್ದಾಳಿ ನಡೆಸಿದರು.

ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ದಕ್ಷಿಣದ ವಿವಿಧೆಡೆ ಭಾನುವಾರ ಪ್ರಚಾರ ನಡೆಸಿದ ಅವರು, “ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದ ಕೇಳಲು ನಾನು ಬಂದಿದ್ದೇನೆ. ಈ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷವಾಗಿದೆ. ರಾಜ್ಯದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 10 ತಿಂಗಳಾಗಿವೆ. ಕಾಂಗ್ರೆಸ್ ಸರ್ಕಾರದ ಈ ಹತ್ತು ತಿಂಗಳ ಸಾಧನೆ ಏನು, ಕೇಂದ್ರ ಬಿಜೆಪಿ ಸರ್ಕಾರ 10 ವರ್ಷಗಳ ಸಾಧನೆ ಏನು ಎಂಬುದನ್ನು ಈ ಚುನಾವಣೆಯಲ್ಲಿ ಚರ್ಚೆ ಮಾಡಬೇಕು ಎಂದರು.

ನೀವೆಲ್ಲರೂ ಟಿವಿಗಳಲ್ಲಿ ಕಾಂಗ್ರೆಸ್‌ನ ಐದು ಗ್ಯಾರಂಟಿ ಹಾಗೂ ಮೋದಿ ಗ್ಯಾರಂಟಿ ಬಗ್ಗೆ ಜಾಹೀರಾತು ನೋಡುತ್ತಿದ್ದೀರಿ. ಇಲ್ಲಿರುವ ಜನರ ಪೈಕಿ ಮೋದಿ ಗ್ಯಾರಂಟಿ ಎಷ್ಟು ಜನರಿಗೆ ತಲುಪಿದೆ ಕೈ ಎತ್ತಿ. ಯಾರ ಖಾತೆಗೆ 15 ಲಕ್ಷ ಬಂದಿದೆ ಕೈ ಎತ್ತಿ. ಮೋದಿ ಬಹಳ ಒಳ್ಳೆಯವರು, ಅವರು 15 ಲಕ್ಷ ದುಡ್ಡು ಕೊಟ್ಟಿರಬೇಕು. ಇಲ್ಲೇ ಯಾರೋ ಮಧ್ಯದಲ್ಲಿ ಅದನ್ನು ತಿಂದಿರಬೇಕು. ನಿಮ್ಮ ಖಾತೆಗೆ ಬರಬೇಕಾದ 15 ಲಕ್ಷ ಹಣವನ್ನು ಯಾರ ಖಾತೆಗೆ ಕೊಟ್ಟಿದ್ದಾರೆ? ಅದಾನಿ ಖಾತೆಗೋ, ಅಂಬಾನಿ ಖಾತೆಗೋ? ಬಡವರ ಖಾತೆಗಾ? ರೈತರ ಖಾತೆಗಾ? ಯಾರ ಖಾತೆಗೆ ಎಂದು ನೀವು ಹುಡುಕಬೇಕು ಎಂದು ಹೇಳಿದರು.

ಇದನ್ನೂ ಓದಿ | Lok Sabha Election 2024: ಬಿಜೆಪಿಗೆ ಸೀಜ್‌ ಆದ ಹಣ ಕೊಟ್ಟಿದ್ದು ಏಕೆ? ಚುನಾವಣಾಧಿಕಾರಿಗಳ ವಿರುದ್ಧ ತನಿಖೆಗೆ ಸಚಿವ ಕೃಷ್ಣ ಬೈರೇಗೌಡ ಆಗ್ರಹ

ಬೆಲೆ ಏರಿಕೆ ಕಡಿಮೆ ಆಗಿದೆಯಾ? ಅಡುಗೆ ಎಣ್ಣೆ, ಅಕ್ಕಿ, ಸಕ್ಕರೆ, ಚಿನ್ನದ ಬೆಲೆ ಕಮ್ಮಿ ಆಗಿದೆಯಾ? ಚಿನ್ನ ಕೊಳ್ಳುವುದು ಇರಲಿ, ಚಿನ್ನದ ಅಂಗಡಿ ಕಡೆ ನೋಡಂಗೂ ಇಲ್ಲ. ಚಿನ್ನ 1 ಗ್ರಾಂಗೆ 7500 ಆಗಿದೆ. ನಮ್ಮ ಸರ್ಕಾರ ಬೆಲೆ ಏರಿಸಿದೆ ಎಂದು ನೀವೆಲ್ಲ ಟೀಕೆ ಮಾಡುತ್ತಿದ್ದಿರಿ. ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ 10 ಗ್ರಾಂಗೆ 27-28 ಸಾವಿರ ಇದ್ದ ಚಿನ್ನ, ಈಗ 75 ಸಾವಿರ ಆಗಿದೆ. ಇನ್ನು ಮನೆ ಕಟ್ಟಲು ಕಬ್ಬಿಣವಾದರೂ ತಗೋಬಹುದಾ? ಅದೂ ಇಲ್ಲ. ಅದರ ದರವನ್ನು 30 ಸಾವಿರದಿಂದ 75 ಸಾವಿರ ಮಾಡಿದ್ದಾರೆ. ಇದನ್ನೆಲ್ಲ ಯಾರಿಗೆ ಹೇಳಬೇಕು? ಎಂದು ಕಿಡಿಕಾರಿದರು.

ನಾನು ನಿಮ್ಮ ಕೆಲಸ ಮಾಡುವವನು, ಕೂಲಿ ಕೇಳಲು ಬಂದಿದ್ದೇನೆ

ನೀರಿನ ವಿಚಾರವಾಗಿ ಇಲ್ಲಿ ಅನೇಕರು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇಲ್ಲಿನ ನಿವಾಸಿಗಳು ನೀರು, ರಸ್ತೆ, ಆಟದ ಮೈದಾನ ಸೇರಿದಂತೆ ಅಭಿವೃದ್ಧಿ ಕೆಲಸಗಳ ಬಗ್ಗೆ ಮನವಿ ನೀಡಿದ್ದಾರೆ. ಈ ಬಾರಿ ಚುನಾವಣೆ ಸಮೀಪಿಸುತ್ತಿದ್ದು, ನಾನು ಮತ್ತೆ ಸ್ಪರ್ಧೆ ಮಾಡಿದ್ದೇನೆ. ನಾನು ನಿಮ್ಮ ಕೆಲಸ ಮಾಡುವವನು, ಕೂಲಿ ಕೇಳಲು ಬಂದಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೆ. ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಗಳಾಗಿ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾರೆ. ನಿಮ್ಮ ಎಲ್ಲಾ ಸಮಸ್ಯೆಗಳು ಅವರ ಇಲಾಖೆ ವ್ಯಾಪ್ತಿಯಲ್ಲಿ ಬರಲಿದೆ ಎಂದು ಡಿ.ಕೆ.ಸುರೇಶ್ ಹೇಳಿದರು.

ನೀವು ನನಗೆ ಆಶೀರ್ವಾದ ಮಾಡಿದರೆ, ನಾನು ನಿಮಗೆ ಹೆಚ್ಚಿನ ಸಹಾಯ ಮಾಡಬಹುದು. ನಾನು ಇಲ್ಲಿ ಹೊಲ ಬಿತ್ತಿ, ಬೇರೆಕಡೆ ಫಸಲು ಕೀಳಲು ಆಗುವುದಿಲ್ಲ. ಹಳ್ಳಿ ಭಾಷೆಯಲ್ಲಿ ಎಲ್ಲಿ ನಾವು ಉಳುಮೆ ಮಾಡುತ್ತೇವೋ ಅಲ್ಲೇ ಫಸಲು ತೆಗೆಯಬೇಕು ಎಂಬ ಮಾತಿದೆ. ಅದೇ ರೀತಿ ನಿಮಗೆ ಕೆಲಸ ಮಾಡಿಕೊಟ್ಟು ಬೇರೆಯವರಿಗೆ ಮತ ಕೇಳಲು ಆಗುವುದಿಲ್ಲ ಎಂದು ತಿಳಿಸಿದರು.

ಈ ಭಾಗಕ್ಕೆ ನಾನು ನೀರು ಪೂರೈಸಿರುವ ಕಾರಣ ನಿಮ್ಮ ಭೂಮಿ ಬೆಲೆ ಚದರಡಿಗೆ 8-10 ಸಾವಿರ ಇದೆ. ನೀರು ಇಲ್ಲವಾಗಿದ್ದರೆ ನಿಮ್ಮ ಆಸ್ತಿ ಮೌಲ್ಯ 3-4 ಸಾವಿರ ಇನ್ನು ಕಡಿಮೆಯಾಗಿರುವುದು. ರಾಜಕಾರಣ ಐದು ವರ್ಷಕ್ಕೊಮ್ಮೆ ಬರುತ್ತದೆ. ನಾವು ಯಾವುದಕ್ಕೂ ಹಿಂದೆ ಮುಂದೆ ನೋಡದೇ ಈ ಭಾಗದ ಅನುಕೂಲವಾಗಲಿ ಎಂದು ಕೆಲಸ ಮಾಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಯಾರು ಕೆಲಸ ಮಾಡಿರುತ್ತಾರೋ ಅವರಿಗೆ ನೀವು ಸಹಕಾರ ನೀಡಬೇಕು.

ಇದನ್ನೂ ಓದಿ | Lok Sabha Election 2024: 10 ವರ್ಷದಲ್ಲಿ ಅಚ್ಚೇದಿನ್ ತರಲಾಗದವರು ಈಗ 23 ವರ್ಷ ಕೇಳುತ್ತಿರುವುದು ಹಾಸ್ಯಾಸ್ಪದ: ದಿನೇಶ್ ಗುಂಡೂರಾವ್

ಇಲ್ಲಿರುವ ನೀರಿನ ಬವಣೆಯನ್ನು ಬಗೆಹರಿಸುವ ಶಕ್ತಿ ದೇವರು ನಮಗೆ ನೀಡಿದ್ದು, ನೀವು ಆಶೀರ್ವಾದ ಮಾಡಬೇಕು. ನೀವು ಆಶೀರ್ವಾದ ಮಾಡಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕಿ ಕೊಡುತ್ತೇನೆ. ನಾನು ಕೆಲಸ ಮಾಡುತ್ತೇನೆ, ಕೆಲಸ ಮಾಡುವವರನ್ನು ಉಪಯೋಗಿಸಿಕೊಳ್ಳಿ. ಉಪಯೋಗಿಸಿಕೊಳ್ಳದೇ, ಅಪಪ್ರಚಾರಗಳಿಗೆ ಬಲಿಯಾಗಬೇಡಿ ಎಂದು ಹೇಳಿದರು.

Continue Reading
Advertisement
Pralhad Joshi
ಕರ್ನಾಟಕ3 mins ago

Pralhad Joshi: ಯುಪಿಎ ಕಾಲದಲ್ಲಿ ಸತ್ತ ಉಗ್ರನಿಗಾಗಿ ಸೋನಿಯಾ ಗಾಂಧಿ ಕಣ್ಣೀರಿಟ್ಟಿದ್ದರು: ಪ್ರಲ್ಹಾದ್‌ ಜೋಶಿ

Lok Sabha Election 2024
ಕರ್ನಾಟಕ28 mins ago

Lok Sabha Election: ಮೋದಿಯಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು, ನಾವು ಗ್ಯಾರಂಟಿ ಮೂಲಕ ಸ್ಪಂದಿಸಿದ್ದೇವೆ: ಸಿಎಂ

The Great Khal
ಪ್ರಮುಖ ಸುದ್ದಿ33 mins ago

The Great Khali : ರಾಹುಲ್ ಗಾಂಧಿ ಸುಳ್ಳ ಎಂದು ಕರೆದ ಬಿಜೆಪಿ ನಾಯಕ ದಿ ಗ್ರೇಟ್ ಖಲಿ, ಇಲ್ಲಿದೆ ವಿಡಿಯೊ

IPL 2024
ಪ್ರಮುಖ ಸುದ್ದಿ48 mins ago

IPL 2024 : ಗುಜರಾತ್​ ತಂಡಕ್ಕೆ3 ವಿಕೆಟ್​ ವಿಜಯ, ಪಂಜಾಬ್​ಗೆ ಬಿಡದ ಸೋಲಿನ ನಂಟು

belagavi Airport
ಕರ್ನಾಟಕ50 mins ago

Indigo Airlines: ಪ್ರಯಾಣಿಕರ ಲಗೇಜ್‌ ಬೆಂಗಳೂರಲ್ಲೇ ಬಿಟ್ಟು ಬೆಳಗಾವಿಗೆ ಬಂದ ವಿಮಾನ; ಮಾಜಿ ಸಿಎಂ ಬ್ಯಾಗ್‌ ಕೂಡ ಮಿಸ್ಸಿಂಗ್!‌

Viral News
ವೈರಲ್ ನ್ಯೂಸ್60 mins ago

Viral News: ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನೇತಾಡುವ ಯುವಕ; ಶಾಕಿಂಗ್‌ ವಿಡಿಯೊ ನೋಡಿ

Sportsmanship
ಕ್ರೀಡೆ1 hour ago

Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

DK Suresh
ಬೆಂಗಳೂರು2 hours ago

DK Suresh: ಬೆಲೆ ಏರಿಕೆ, ಜಿಎಸ್‌ಟಿ ಹೊರೆಯೇ ಮೋದಿ ಗ್ಯಾರಂಟಿ: ಡಿ.ಕೆ. ಸುರೇಶ್

soil
ಕೃಷಿ2 hours ago

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

Narendra modi
ದೇಶ2 hours ago

Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ19 hours ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ1 day ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20241 day ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20241 day ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ1 day ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ2 days ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ2 days ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ3 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ5 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

ಟ್ರೆಂಡಿಂಗ್‌