Bus Accident | ಅತಿ ವೇಗ ತಂದ ಆಪತ್ತು; ಲಾರಿಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್‌ ಛಿದ್ರ - Vistara News

ಕರ್ನಾಟಕ

Bus Accident | ಅತಿ ವೇಗ ತಂದ ಆಪತ್ತು; ಲಾರಿಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್‌ ಛಿದ್ರ

ಲಾರಿಯನ್ನು ಓವರ್‌ ಟೆಕ್‌ ಮಾಡಲು ಹೋದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಅಪಘಾತಕ್ಕೀಡಾಗಿದ್ದು (Bus Accident), ಬಸ್ಸಿನಲ್ಲಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

VISTARANEWS.COM


on

bus accident
ಲಾರಿಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅವಸರವೇ ಅಪಘಾತಕ್ಕೆ ಕಾರಣ ಎಂದು ತಿಳಿದಿದ್ದರೂ ಕೆಎಸ್‌ಆರ್‌ಟಿಸಿ ಚಾಲಕನೊಬ್ಬ ಲಾರಿಯನ್ನು ಓವರ್‌ ಟೇಕ್‌ ಮಾಡಲು ಹೋಗಿ ಅಪಘಾತ (Bus Accident) ಸಂಭವಿಸಿದೆ. ನಗರದ ಜಕ್ಕೂರು ಫ್ಲೈಓವರ್‌ ಬಳಿ ಘಟನೆ ನಡೆದಿದೆ.

ಶನಿವಾರ ಬೆಳಗಿನ ಜಾವ ಅಪಘಾತ ಸಂಭವಿಸಿದೆ. ಚಾಲಕ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ್ದು, ಪರಿಣಾಮ ಬಸ್‌ ಮುಂಭಾಗ ಛಿದ್ರವಾಗಿದೆ. ದೇವನಹಳ್ಳಿಯಿಂದ ನಗರಕ್ಕೆ ಬರುತ್ತಿದ್ದ ವೇಳೆ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದಲ್ಲಿ ಆರೇಳು ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಕೆಲ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Accident Case | ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಬಿಕಾಂ ವಿದ್ಯಾರ್ಥಿನಿ ಸಾವು, ಇನ್ನೊಬ್ಬ ವಿದ್ಯಾರ್ಥಿ ಗಂಭೀರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Book Release: ಬೆಂಗಳೂರಿನಲ್ಲಿ ಜೂ.29ರಂದು ‘ಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ

Bengaluru News: ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ ವಿರಚಿತ “ಭಾವರಾಮಾಯಣ ರಾಮಾವತರಣ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ನಗರದ ಹೊಸಕೆರೆಹಳ್ಳಿಯ ಪಿ.ಇ.ಎಸ್‌. ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ. ಸಭಾಂಗಣದಲ್ಲಿ ಇದೇ ಜೂ. 29ರಂದು ಶನಿವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.

VISTARANEWS.COM


on

Bhaavaramayana Ramavatarana book release programme on June 29 in Bengaluru
Koo

ಬೆಂಗಳೂರು: ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠ ವಿರಚಿತ ʼಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ (Book Release) ಕಾರ್ಯಕ್ರಮವನ್ನು ನಗರದ ಹೊಸಕೆರೆಹಳ್ಳಿಯ ಪಿ.ಇ.ಎಸ್‌. ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ. ಸಭಾಂಗಣದಲ್ಲಿ ಇದೇ ಜೂ. 29ರಂದು ಶನಿವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರ ಇಳಿಕೆ

ಕಾರ್ಯಕ್ರಮದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾರು ಹಾಗೂ ಶ್ರೀಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಮತ್ತು ಪಿ.ಇ.ಎಸ್‌. ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಂ.ಆರ್‌. ದೊರೆಸ್ವಾಮಿ ಉಪಸ್ಥಿತರಿರುವರು.

ಇದನ್ನೂ ಓದಿ: Para Badminton Ranking: ಮೊದಲ ಬಾರಿಗೆ ವಿಶ್ವ ನಂ.1 ಸ್ಥಾನಕ್ಕೇರಿದ ಕನ್ನಡಿಗ ಸುಹಾಸ್‌ ಯತಿರಾಜ್

ಸಂಜೆ 5 ಗಂಟೆಗೆ ಕಲಾಸ್ನೇಹಿ ಹಾಗೂ ನರ್ತನಯೋಗ ಸಂಸ್ಥೆಯ ನಿರ್ದೇಶಕಿ ಸ್ನೇಹಾ ನಾರಾಯಣ ಮತ್ತು ಯೋಗೇಶ್‌ ಕುಮಾರ್‌ ಅವರಿಂದ ಭರತನಾಟ್ಯ, ಸಂಜೆ 5.30 ಕ್ಕೆ ನೂರಕ್ಕೂ ಹೆಚ್ಚು ಗಣ್ಯರಿಂದ ಪುಸ್ತಕ ಲೋಕಾರ್ಪಣೆ, ಶ್ರೀಸಂಸ್ಥಾನದವರೊಂದಿಗೆ ಸಂವಾದ, ಎನ್. ರವಿಶಂಕರ್‌ ಸಂವಾದಕರಾಗಿ ಪಾಲ್ಗೊಳ್ಳುವರು. ಮಂತ್ರಾಲಯ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ಜರುಗಲಿದೆ.

Continue Reading

ಕ್ರೈಂ

Honey Trap: ಎಂಎಲ್‌ಎ ಹರೀಶ್‌ ಗೌಡಗೆ ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್‌ ಸೆರೆ, ಇವರ ಖತರ್‌ನಾಕ್‌ ಐಡಿಯಾ ನೋಡಿ!

Honey Trap: ಹನಿಟ್ರ್ಯಾಪ್ ಮಾಡಿ ಕೋಟ್ಯಾಂತರ ರೂ. ಹಣಕ್ಕೆ ಬೆಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ್ದ ಆರೋಪಿಗಳು ಮೈಸೂರು, ಬೆಂಗಳೂರು ಸೇರಿ ವವಿಧೆಡೆ ಇಂತಹ ಕೃತ್ಯಗಳನ್ನು ಎಸಗಿದ್ದಾರೆ. ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಬೆಂಗಳೂರಿನ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

VISTARANEWS.COM


on

honey trap harish gowda
ಆರೋಪಿ ಸಂತೋಷ್‌, ಶಾಸಕ ಹರೀಶ್‌ ಗೌಡ
Koo

ಬೆಂಗಳೂರು: ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಹರೀಶ್‌ ಗೌಡ (MLA Harish Gowda) ಸೇರಿದಂತೆ ಹಲವು ವಿಐಪಿಗಳಿಗೆ ಹನಿಟ್ರ್ಯಾಪ್‌ (Honey Trap) ಗಾಳ ಹಾಕಿದ್ದ ಖತರ್‌ನಾಕ್‌ ಗ್ಯಾಂಗನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಇವರು ವಿಶಿಷ್ಟ ವಿಧಾನ ಅನುಸರಿಸಿ, ಹೋಟೆಲ್‌ಗಳ ರೂಮಿನಲ್ಲಿ ಉಳಿದುಕೊಳ್ಳುತ್ತಿದ್ದ ವಿಐಪಿಗಳನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ (Blackmail) ಮಾಡುತ್ತಿದ್ದರು ಎಂದು ಗೊತ್ತಾಗಿದೆ.

ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ ಶಾಸಕರು, ಸಚಿವರು, ಉದ್ಯಮಿಗಳು, ವಿಶ್ವ ವಿದ್ಯಾಲಯಗಳ ಕುಲಪತಿಗಳು ಸೇರಿ ವಿಐಪಿಗಳನ್ನು ಹನಿಟ್ರ್ಯಾಪ್ ಮಾಡಿ, ನಂತರ ಅವರದ್ದೇ ವಿಡಿಯೋ ಎನ್ನುವಂತೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬೆಂಗಳೂರು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ. ಈ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ.

ಸಮಾಜದ ಗಣ್ಯ ವ್ಯಕ್ತಿಗಳಿಗೆ ಹನಿಟ್ರಾಪ್ ಮೂಲಕ ಬ್ಲಾಕ್ ಮೇಲ್ ಮಾಡ್ತಿದ್ದವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೀಗೆ, ಹನಿಟ್ರ್ಯಾಪ್ ಮಾಡಿ ಕೋಟ್ಯಾಂತರ ರೂ. ಹಣಕ್ಕೆ ಬೆಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ್ದ ಆರೋಪಿಗಳು ಮೈಸೂರು, ಬೆಂಗಳೂರು ಸೇರಿ ವವಿಧೆಡೆ ಇಂತಹ ಕೃತ್ಯಗಳನ್ನು ಎಸಗಿದ್ದಾರೆ. ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಬೆಂಗಳೂರಿನ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶಾಸಕರು ನೀಡಿದ ದೂರಿನ ಅನ್ವಯ ಕೇಸ್ ದಾಖಲು ಮಾಡಿಕೊಂಡ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ.

ವಿಶ್ವವಿದ್ಯಾಲಯದ ಉಪಕುಲಪತಿಗಳೊಬ್ಬರು ಹೀಗೆ ಬ್ಲಾಕ್‌ಮೇಲ್‌ಗೆ ಒಳಗಾಗಿದ್ದು, ಈ ಬಗ್ಗೆ ಶಾಸಕ ಶಾಸಕ ಹರೀಶ್ ಗೌಡ ಅವರಿಗೆ ಮಾಹಿತಿ ನೀಡಿದ್ದರು. ಉಪಕುಲಪತಿಗಳ ಬೆಂಬಲಕ್ಕೆ ನಿಂತ ಶಾಸಕ ಹರೀಶ್‌ ಗೌಡ, ದೂರು ನೀಡಿ ಧೈರ್ಯ ಹೇಳಿದ್ದರು. ಆರೋಪಿಗಳ ಗ್ಯಾಂಗ್ ಪುನಃ ಶಾಸಕ ಹರೀಶ್‌ ಗೌಡ ವಿರುದ್ಧವೇ ಸುಳ್ಳು ಹನಿಟ್ರ್ಯಾಪ್ ಮಾದರಿ ವಿಡಿಯೋ ಸೃಜಿಸಿ ಬೆದರಿಕೆ ಹಾಕಲು ಮುಂದಾಗಿದೆ. ಈ ಪ್ರಕರಣ ಬೇಧಿಸಿದ ಸಿಸಿಬಿ ಪೊಲೀಸರಿಗೆ ಮೈಸೂರು ಮೂಲದ ಸಂತೋಷ್ ಮತ್ತು ಪುಟ್ಟರಾಜು ಎಂಬ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್ ಗ್ಯಾಂಗ್‌ನಲ್ಲಿ ಒರ್ವ ಯುವತಿ ಕೂಡ ಭಾಗಿಯಾಗಿದ್ದಾಳೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಆರೋಪಿಗಳು ಪ್ರಭಾವಿಗಳ ಸಂಪರ್ಕ ಮಾಡಿ ಅವರನ್ನು ಫಾಲೋ ಮಾಡುತ್ತಿದ್ದರು. ಬಳಿಕ ವಿಐಪಿಗಳನ್ನು ಭೇಟಿ ಮಾಡಿ ನಂಬರ್ ಪಡೆದುಕೊಳ್ಳುತ್ತಿದ್ದರು. ನಂತರ, ವಿಐಪಿಗಳ ಚಲನವಲನದ ಮೇಲೆ ಹದ್ದಿನ ಕಣ್ಣಿಡುತ್ತಿದ್ದ ಆರೋಪಿಗಳು ವಿಐಪಿಗಳು ಉಳಿದುಕೊಳ್ಳುತ್ತಿದ್ದ ಐಷಾರಾಮಿ ಹೋಟೆಲ್‌ಗಳ ರೂಮು ಬುಕಿಂಗ್, ಚೆಕ್-ಇನ್ ಹಾಗೂ ಚೆಕ್-ಔಟ್ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ವಿಐಪಿಗಳು ಹೋಟೆಲ್‌ನ ರೂಮು ಖಾಲಿ ಮಾಡಿಕೊಂಡು ಹೋದ ನಂತರ ಅವರು ಉಳಿದುಕೊಂಡಿದ್ದ ರೂಮ್ ಅನ್ನು ಬಾಡಿಗೆ ಪಡೆದು ಈ ಆರೋಪಿಗಳು ಅಲ್ಲಿ ಉಳಿದುಕೊಳ್ಳುತ್ತಿದ್ದರು.

ವಿಐಪಿಗಳು ಉಳಿದುಕೊಂಡ ರೂಮಿನಲ್ಲಿ ಯುವತಿಯನ್ನು ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ವಿಐಪಿಗಳು ಉಳಿದುಕೊಂಡ ರೂಮಿನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿರುವ ರೀತಿಯಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಬಳಿಕ ಆ ರೂಮಿನಲ್ಲಿ ಉಳಿದುಕೊಂಡಿದ್ದ ವಿಐಪಿ ಈ ಯುವತಿಯನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬ ರೀತಿಯಲ್ಲಿ ವಿಡಿಯೋ ಕ್ರಿಯೇಟ್ ಮಾಡಿ ಅದನ್ನು ವಿಐಪಿಗಳಿಗೆ ಕಳಿಸುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹಾಗೂ ಪೊಲೀಸರಿಗೆ ಕೊಡುವುದಾಗಿ ಬೆದರಿಕೆ ಒಡ್ಡಿ ಹಣ ಪೀಕುತ್ತಿದ್ದರು.

ಇದನ್ನೂ ಓದಿ: Honey trap : ಉದ್ಯಮಿಯ ಬೆತ್ತಲೆ ವಿಡಿಯೊ ತೆಗೆದು Honey trap; ಮುಸ್ಲಿಂ ಮಹಿಳೆ ಸಹಿತ ಮೂವರ ಸೆರೆ

Continue Reading

ಕಲಬುರಗಿ

Kalaburagi News: ಪಂಢರಪುರ, ತುಳಜಾಪುರ ಮಾದರಿಯಲ್ಲಿ ಗಾಣಗಾಪುರ ಕ್ಷೇತ್ರ ಅಭಿವೃದ್ಧಿ

Kalaburagi News: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಶ್ರೀ ದತ್ತಾತ್ರೇಯ ದೇವಾಸ್ಥಾನದ ಅಭಿವೃದ್ಧಿಯನ್ನು ಪಂಢರಪುರ, ತುಳಜಾಪುರ ಮಾದರಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.

VISTARANEWS.COM


on

Development of Gaanagapura kshethra on Pandharpur, Thulajapur model says DC Fauzia Tarannum
Koo

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಶ್ರೀ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಯನ್ನು ಪಂಢರಪುರ, ತುಳಜಾಪುರ ಮಾದರಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ (Kalaburagi News) ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ದತ್ತಾತ್ತೇಯ ದೇವಸ್ಥಾನದ ಹಾಗೂ ದೇವಸ್ಥಾನದ ವ್ಯಾಪ್ತಿ ಪ್ರದೇಶವನ್ನು ಅಭಿವೃದ್ಧಿಪಡಿಸಲು ತಯಾರಿಸಲಾದ ಮಾಸ್ಟರ್ ಪ್ಲಾನ್‌ಗೆ ಮಂಜೂರಾತಿ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಜತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಗಾಣಗಾಪುರ ಕ್ಷೇತ್ರ ಈ ಭಾಗದ ದೊಡ್ಡ ಕ್ಷೇತ್ರವಾಗಿದೆ. ಪ್ರತಿನಿತ್ಯ ನೂರಾರು ಭಕ್ತರು ದರುಶನ ಪಡೆಯಲು ಆಗಮಿಸುತ್ತಾರೆ. ಇದನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಅದರಂತೆ ಕೆಲಸ ಮಾಡಲಾಗುವುದು. ಭಕ್ತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗತ್ತದೆ ಎಂದರು.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರ ಇಳಿಕೆ

ಅಫಜಲಪುರ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಪ್ರಸಾದ ಯೋಜನೆ ಅಡಿಯಲ್ಲಿ ಪ್ತಸ್ತಾಪಿಸಲಾದ ಪ್ರಸ್ತಾವನೆಯನ್ನು ಆದ್ಯತೆ ಮೇರೆಗೆ ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಬೇಕು. ಎಲ್ಲಾ ಅಧಿಕಾರಿಗಳು ತಮಗೆ ನೀಡಿದ ಕೆಲಸ ಕಾರ್ಯಗಳನ್ನು ಜವಬ್ದಾರಿಯಿಂದ ನಿರ್ವಹಿಸಬೇಕು ಎಂದು ಸಭೆಯ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಮಾತನಾಡಿ, ದತ್ತಾತ್ತೇಯ ದೇವಸ್ಥಾನಕ್ಕೆ ಬಂದಂತಹ ಭಕ್ತರಿಗೆ ನಿತ್ಯ ಅಭಿಷೇಕ, ಪೂಜೆ ಮಾಡಲು ಪ್ರತ್ಯೇಕ ಅಭಿಷೇಕ ಕೋಣೆ ವ್ಯವಸ್ಥೆ ಮಾಡಬೇಕು, ಬಸ್ ಸ್ಟ್ಯಾಂಡ್‍ವರೆಗೆ ಹಾಗೂ ದೇವಸ್ಥಾನದಿಂದ ಹನುಮಾನ ದೇವಸ್ಥಾನದವರೆಗೆ ವಾಕ್ ವೇವ್ ಅಭಿವೃದ್ಧಿ ಮಾಡಬೇಕು ಎಂಬ ವಿಷಯವನ್ನು ಅಧಿಕಾರಿಗಳು ಚರ್ಚಿಸಿದರು.

ದತ್ತಾತ್ತೇಯ ದೇವಸ್ಥಾನದಲ್ಲಿ ವ್ಯಾಪ್ತಿಯಲ್ಲಿ ಬರುವ ಸಂಗಮ ದೇವಸ್ಥಾನ, ಕಲ್ಲೇಶ್ವರ ದೇವಸ್ಥಾನ ಹಾಗೂ ಚಿದಾನಂದ ದೇವಸ್ಥಾನಗಳ ಭದ್ರತಾ ಹಿತದೃಷ್ಟಿಯಿಂದ ಪ್ರತ್ಯೇಕ ಪೊಲೀಸ್ ಸಿಬ್ಬಂದಿಗಳನ್ನು ಪಂಢರಾಪುರ, ತುಳಜಾಪುರ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಶಾಸಕ ಮಾಲೀಕಯ್ಯ ವಿ. ಗುತ್ತೇದಾರ ಹೇಳಿದರು.

ದೇವಸ್ಥಾನಕ್ಕೆ ಬೇಕಾಗುವ ಎಲ್ಲ ರೀತಿಯಾಗಿ ಪ್ಲ್ಯಾನ್ ಮಾಡಿ, ಪ್ರಸ್ತಾವನೆಯನ್ನು ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಇದನ್ನೂ ಓದಿ: Para Badminton Ranking: ಮೊದಲ ಬಾರಿಗೆ ವಿಶ್ವ ನಂ.1 ಸ್ಥಾನಕ್ಕೇರಿದ ಕನ್ನಡಿಗ ಸುಹಾಸ್‌ ಯತಿರಾಜ್

ತಾಪಡೇ ಧರ್ಮಶಾಲೆಯ ಹತ್ತಿರ ಪಂಚಾಯತ್ ಜಾಗವಿದ್ದು, ಬಂದಂತಹ ಭಕ್ತರಿಗೆ ನೆರವಾಗುವಂತೆ ಶೌಚಾಲಯ ನಿರ್ಮಾಣ ಮಾಡಬೇಕು. ದತ್ತಾತ್ರೇಯ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ನಿರ್ಮಿಸಲಾದ ಕಿಂಡಿಯ ಕಿರಿದಾಗಿದ್ದು, ಭಕ್ತರಿಗೆ ದೇವರು ಕಾಣುವಂತೆ ದೊಡ್ಡದಾಗಿ ಮಾರ್ಪಡಿಸುವುದು ದೇವಸ್ಥಾನದ ಅರ್ಚಕರೊಂದಿಗೆ ಚರ್ಚಿಸಿ, ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದರು.

ವಿಶೇಷವಾಗಿ ದೇವಸ್ಥಾನಕ್ಕೆ ಪ್ರತಿ ಹುಣ್ಣೆಮೆಯ ದಿನದಂದು ನಾನಾ ರಾಜ್ಯಗಳಿಂದ ಭಕ್ತರು ದೇವರ ದರ್ಶನಕ್ಕಾಗಿ ಬರುತ್ತಾರೆ. ಬಂದಂತಹ ಭಕ್ತರು ತಮ್ಮ ಭಕ್ತಿ ಸೇವೆಯನ್ನು ಹಣದ ಮೂಲಕ ಸಂದಾಯ ಮಾಡುತ್ತಿದ್ದು, ಧಾರ್ಮಿಕ ದತ್ತಿ ಇಲಾಖೆಗೆ ಸರಿಯಾಗಿ ಪಾವತಿಯಾಗದೇ ಇರುವ ಕುರಿತು ಭಕ್ತಾಧಿಗಳು ದೂರು ನೀಡಿದ್ದು, ಪ್ರತಿ ಹುಣ್ಣೆಮೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ದೇವಾಲಯದ ವತಿಯಿಂದ ವಿಶೇಷ ದರ್ಶನಕ್ಕೆ ಪಾಳಿ ಪ್ರಕಾರ ರಸೀದಿಗಳನ್ನು ನೀಡಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಮಧ್ಯವರ್ತಿಗಳು ಕಂಡುಬರುತ್ತಾರೆ, ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಕ್ರಮ ಜರುಗಿಸಲು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಪೊಲೀಸರು ತಮಗೆ ನೀಡಿದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಕರ್ತವ್ಯ ಲೋಪ ಆಗದಂತೆ ಕ್ರಮವಹಿಸಬೇಕು. ದೇವಸ್ಥಾನದ ಹುಂಡಿ ಪೆಟ್ಟಿಗೆಯ ಎಣಿಕೆ ಕಾರ್ಯವನ್ನು ದೇವಸ್ಥಾನದ ಸಿಬ್ಬಂದಿ ಬದಲಾಗಿ ಬ್ಯಾಂಕ್ ಸಿಬ್ಬಂದಿ ಮುಖಾಂತರ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ಇದನ್ನೂ ಓದಿ: IRCTC: ಆನ್‌ಲೈನ್‌ನಲ್ಲಿ ರೈಲ್ವೇ ಟಿಕೆಟ್‌ ಬುಕ್ಕಿಂಗ್‌ ಮಾಡೋ ಮುನ್ನ ಹೊಸ ನಿಯಮದ ಬಗ್ಗೆ ಇರಲಿ ಗಮನ!

ಸಭೆಯಲ್ಲಿ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಆಫ್ರೀನ್, ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ದೇವಾಲಯದ ಆರ್ಚಕರು, ತಾಲೂಕು ಪಂಚಾಯಿತಿ ಅಧ್ಯಕ್ಷರು, ಸಮಾಜದ ಮುಖಂಡರು ಭಾಗವಹಿಸಿದ್ದರು.

Continue Reading

ಪ್ರಮುಖ ಸುದ್ದಿ

CM Siddaramaiah: ಗಣಿ ಪರಿಸರ ಪುನಶ್ಚೇತನ ನಿಗಮದ ಸಭೆ; ಅಧಿಕಾರಿಗಳ ವಿಳಂಬ ಧೋರಣೆಗೆ ಸಿಎಂ ಗರಂ

CM Siddaramaiah: ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಪ್ರಗತಿ ಪರಿಶೀಲನಾ ಸಭೆ ಬುಧವಾರ ನಡೆಸಿದರು. ಕಾರ್ಯಾದೇಶ ಸಿಕ್ಕಿರುವ ಯೋಜನೆಗಳ ಅನುಷ್ಠಾನಕ್ಕೆ ಒಂದು ವಾರದೊಳಗೆ ಡಿ.ಪಿ.ಆರ್. ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ಸಿಎಂ ಸೂಚಿಸಿದ್ದಾರೆ.

VISTARANEWS.COM


on

CM Siddaramaiah
Koo

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಪ್ರಗತಿ ಪರಿಶೀಲನಾ ಸಭೆ ಬುಧವಾರ ನಡೆಯಿತು. ಈ ವೇಳೆ ಅಧಿಕಾರಿಗಳ ವಿಳಂಬ ಧೋರಣೆಗೆ ಗರಂ ಆದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕಾರ್ಯದರ್ಶಿಗಳಿಗೆ ತೀವ್ರ ತರಾಟೆ ತೆಗೆದುಕೊಂಡರು.

ಸಭೆಯ ಮುಖ್ಯಾಂಶಗಳು

  1. ಕೆಎಂಇಆರ್‌ಸಿಗೆ CEPMIZ ಯೋಜನೆಯಡಿ ಒಟ್ಟು 24,996.30 ಕೋಟಿ ರೂ. ಒದಗಿಸಲಾಗಿದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಒದಗಿಸಲಾಗಿದೆ.
  2. ಇದರಲ್ಲಿ ಯೋಜನೆಗಳ ಆಯ್ಕೆ ಹಾಗೂ ಕಾಮಗಾರಿಗಳ ಪ್ರಗತಿಯ ಮೇಲ್ವಿಚಾರಣಾ ಪ್ರಾಧಿಕಾರ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರು ಒಟ್ಟು 7928.78 ಕೋಟಿ ರೂ. ಮೊತ್ತದ 358 ಯೋಜನೆಗಳನ್ನು ಅನುಮೋದಿಸಿದ್ದಾರೆ.
  3. ಈ ಪೈಕಿ ಒಟ್ಟು 3469.41 ಕೋಟಿ ರೂ. ವೆಚ್ಚದ 182 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 135 ಯೋಜನೆಗಳಿಗೆ ಟೆಂಡರ್‌ ಕರೆಯಲಾಗಿದ್ದು, 47 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. 23 ಕಾಮಗಾರಿಗಳನ್ನು ವಿವಿಧ ಸಂಸ್ಥೆಗಳಿಗೆ ವಹಿಸಲಾಗಿದೆ.
  4. ಈ ಯೋಜನೆಗಳ ಅನುಷ್ಠಾನಕ್ಕೆ ಒಂದು ವಾರದೊಳಗೆ ಡಿ.ಪಿ.ಆರ್. ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದರು.
  5. ಯೋಜನೆಗಳ ಸಕಾಲಿಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂಬಂಧಿಸಿದ ಇಲಾಖೆಯಲ್ಲಿ ಯೋಜನಾ ಮೇಲ್ವಿಚಾರಣೆ ಘಟಕ ಸ್ಥಾಪಿಸುವಂತೆ ಸೂಚಿಸಿದರು.
  6. ವರ್ಷ ಕಳೆದರೂ DPR ಆಗದೇ ಇದ್ದುದಕ್ಕೆ ಕಾರ್ಯದರ್ಶಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಸಿಎಂ. ಅಧಿಕಾರಿಗಳ ವಿಳಂಬ ಧೋರಣೆಗೆ ಗರಂ ಆಗಿ ಎಚ್ಚರಿಸಿದರು.
  7. ಇದು ವಿಶೇಷ ಕಾರ್ಯಕ್ರಮವಾಗಿದ್ದು, ಟೆಂಡರ್‌ನ ವಾಡಿಕೆಯ ಷರತ್ತುಗಳು ಅನ್ವಯಿಸುವುದಿಲ್ಲ. ಟೆಂಡರ್‌ನಲ್ಲಿ ನಿಗಮವು ವಾರದೊಳಗೆ ಬಿಲ್‌ ಪಾವತಿಸಲಾಗುವುದರಿಂದ ಯಾವುದೇ mobilization advance ನೀಡಲಾಗದು ಎಂಬುದನ್ನು ಗುತ್ತಿಗೆದಾರರಿಗೆ ಸ್ಪಷ್ಟ ಪಡಿಸಲು ಸೂಚಿಸಿದರು.
  8. ರೈಲ್ವೆ ಯೋಜನೆಗಳಿಗೆ 5271.96 ಕೋಟಿ ರೂ. , ಕುಡಿಯುವ ನೀರಿನ ಯೋಜನೆಗಳಿಗೆ 4929.84 ಕೋಟಿ ರೂ., ಆರೋಗ್ಯ ಕ್ಷೇತ್ರಕ್ಕೆ 1915.78 ಕೋಟಿ ರೂ., ಪರಿಸರ ಪುನಃಸ್ಥಾಪನೆಗೆ 2655.17 ಕೋಟಿ ರೂ., ರಸ್ತೆಗಳು ಮತ್ತು ಸಂವಹನ ಯೋಜನೆಗಳಿಗೆ 2559.17 ಕೋಟಿ ರೂ. , ವಸತಿ ಯೋಜನೆಗಳಿಗೆ 1193.98 ಕೋಟಿ ರೂ. ನಿಗದಿ ಪಡಿಸಲಾಗಿದೆ.
  9. ವಸತಿ ಯೋಜನೆಗಳಡಿ ಫಲಾನುಭವಿಗಳನ್ನು ಶೀಘ್ರವೇ ಗುರುತಿಸಲು ಸೂಚಿಸಿದರು.
  10. ಸಣ್ಣ ನೀರಾವರಿ ಇಲಾಖೆ 14 ಯೋಜನೆಗಳ ಪೈಕಿ 7 ಯೋಜನೆಗಳ ಕಾಮಗಾರಿ ಆರಂಭಿಸಲಾಗಿದೆ. ಉಳಿದ 7 ಯೋಜನೆಗಳ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಿ ಕಾಮಗಾರಿ ಅನುಷ್ಠಾನ‌ಮಾಡುವಂತೆ ಸಿಎಂ ಸೂಚಿಸಿದರು.
  11. ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಶಾಲೆಗಳ ಕಟ್ಟಡ ದುರಸ್ತಿ, ಕೊಠಡಿ, ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲು ಸೂಚನೆ.
  12. ಅಂಗನವಾಡಿ ಕಟ್ಟಡ, ವಿದ್ಯಾರ್ಥಿ ನಿಲಯಗಳು ಮತ್ತಿತರ ಯೋಜನೆಗಳಿಗೆ ಒತ್ತು ನೀಡುವಂತೆ ಸೂಚನೆ.
  13. ಲಭ್ಯವಿರುವ ಅನುದಾನದಲ್ಲಿ ಈ ನಾಲ್ಕೂ ಜಿಲ್ಲೆಗಳು ಮಾದರಿ ಜಿಲ್ಲೆಗಳಾಗಿ ಅಭಿವೃದ್ಧಿ ಮಾಡುವಂತೆ ಅಭಿವೃದ್ಧಿ ಆಯುಕ್ತರಿಗೆ ಸೂಚಿಸಿದರು. ಮುಂದಿನ ಸಭೆಯಲ್ಲಿ ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಹ ಭಾಗವಹಿಸುವಂತೆ ಸೂಚಿಸಿದರು.
  14. ಕಾಮಗಾರಿಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿಯ ಗುಣಮಟ್ಟವನ್ನು ಖಾತರಿಪಡಿಸಬೇಕು ಎಂದರು.
  15. ಗಣಿ ಬಾಧಿತ ಜಿಲ್ಲೆಗಳಲ್ಲಿ ಮಾಲಿನ್ಯದ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಇದ್ದು, ತೃಪ್ತಿಕರ ಹಂತಕ್ಕೆ ತಲುಪಿದೆ ಎಂದು ಅಧಿಕಾರಿಗಳು ವಿವರಿಸಿದರು.

ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | CM Siddaramaiah: ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿರೋದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದ ಸಿಎಂ

ಸಿಎಂ ಭೇಟಿಯಾದ ಹಾಪ್‌ಕಾಮ್ಸ್ ಪದಾಧಿಕಾರಿಗಳು

ಬೆಂಗಳೂರಿನ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‌ಕಾಮ್ಸ್) ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ನಿರ್ದೇಶಕ ಮಂಡಳಿಯ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು ಹಾಗೂ ನಸೀರ್‌ ಅಹ್ಮದ್‌, ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ, ಶಾಸಕರಾದ ಕೊತ್ತೂರು ಮಂಜುನಾಥ್, ಹಾಪ್‌ಕಾಮ್ಸ್‌ ಅಧ್ಯಕ್ಷ ಗೋಪಾಲಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಉಮೇಶ್‌ ಮಿರ್ಜಿ ಮತ್ತು ನಿರ್ದೇಶಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Continue Reading
Advertisement
Bhaavaramayana Ramavatarana book release programme on June 29 in Bengaluru
ಕರ್ನಾಟಕ1 min ago

Book Release: ಬೆಂಗಳೂರಿನಲ್ಲಿ ಜೂ.29ರಂದು ‘ಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ

Varthur Santhosh Animal Transport Rules Violation Allegation
ಕ್ರೈಂ5 mins ago

Varthur Santhosh: ಹಳ್ಳಿಕಾರ್ ರೇಸ್ ನಡೆಸಲು ಸಜ್ಜಾಗುತ್ತಿದ್ದ ವರ್ತೂರು ಸಂತೋಷ್​ ವಿರುದ್ಧ ಪ್ರಕರಣ ದಾಖಲು

Hijab Ban
ದೇಶ5 mins ago

Hijab Ban: ತರಗತಿಯಲ್ಲಿ ಹಿಜಾಬ್‌, ಬುರ್ಖಾ ನಿಷೇಧ; ಕಾಲೇಜು ಆದೇಶ ಎತ್ತಿಹಿಡಿದ ಹೈಕೋರ್ಟ್‌

honey trap harish gowda
ಕ್ರೈಂ11 mins ago

Honey Trap: ಎಂಎಲ್‌ಎ ಹರೀಶ್‌ ಗೌಡಗೆ ಹನಿಟ್ರ್ಯಾಪ್ ಮಾಡಿದ್ದ ಗ್ಯಾಂಗ್‌ ಸೆರೆ, ಇವರ ಖತರ್‌ನಾಕ್‌ ಐಡಿಯಾ ನೋಡಿ!

Kangana Ranaut Chirag Paswan In Parliament
ಬಾಲಿವುಡ್23 mins ago

Kangana Ranaut: ಸಂಸತ್ತಿನ ಹೊರಗೆ ಕೈ ಕುಲುಕಿ ಸಂತಸದ ಕ್ಷಣ ಹಂಚಿಕೊಂಡ ಚಿರಾಗ್ ಪಾಸ್ವಾನ್-ಕಂಗನಾ!

Viral Video
Latest41 mins ago

Viral Video: ಸಿಮೆಂಟ್, ಕಲ್ಲಿನಿಂದ ವಾಷಿಂಗ್ ಮೆಷಿನ್ ತಯಾರಿಸಿದ ಮಹಿಳೆ; ಹೇಗೆ ಕೆಲಸ ಮಾಡುತ್ತೆ ನೋಡಿ!

Terrorist Killed
ದೇಶ41 mins ago

Terrorist Killed: ಮುಂದುವರಿದ ಉಗ್ರರ ಬೇಟೆ; ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

Viral Video
Latest45 mins ago

Viral Video: ಮುಂದಿನ ಐದು ಸಾಲಿನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ! ಇದು ಸ್ವಾಮೀಜಿಯೊಬ್ಬರ ಕಂಡೀಷನ್‌!

AFG vs SA Semi Final
ಕ್ರೀಡೆ52 mins ago

AFG vs SA Semi Final: ಚೊಚ್ಚಲ ಫೈನಲ್​ ನಿರೀಕ್ಷೆಯಲ್ಲಿ ಆಫ್ಘನ್​-ದಕ್ಷಿಣ ಆಫ್ರಿಕಾ; ಯಾರಿಗೆ ಒಲಿಯಲಿದೆ ಗೆಲುವಿನ ಲಕ್?​

Development of Gaanagapura kshethra on Pandharpur, Thulajapur model says DC Fauzia Tarannum
ಕಲಬುರಗಿ58 mins ago

Kalaburagi News: ಪಂಢರಪುರ, ತುಳಜಾಪುರ ಮಾದರಿಯಲ್ಲಿ ಗಾಣಗಾಪುರ ಕ್ಷೇತ್ರ ಅಭಿವೃದ್ಧಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌