ಕರ್ನಾಟಕ
Wild Animal : ಗುಂಡ್ಲುಪೇಟೆಯಲ್ಲಿ ಕಾಣಿಸಿದ ಚಿರತೆ ಮರಿಗಳು; ಸತ್ತರೆ ಜೀವ ಕೊಡುತ್ತೀರಾ ಎಂದ ರೈತರು!
Wild Animal : ಗುಂಡ್ಲುಪೇಟೆಯಲ್ಲಿ ಚಿರತೆ ಮರಿಗಳು ಕಾಣಿಸಿಕೊಂಡಿವೆ. ಅವುಗಳ ರಕ್ಷಣೆಗೆ ತಾಯಿ ಚಿರತೆ ಸ್ಥಳ ಬದಲಾವಣೆ ಮಾಡುತ್ತಾ ಹೋಗುತ್ತಿದೆ. ಇದರಿಂದ ಸ್ಥಳೀಯ ರೈತರು ಭಯಭೀತಗೊಂಡಿದ್ದು, ಹೊಲಗಳಿಗೆ ಹೋಗಲು ಹೆದರುತ್ತಿದ್ದಾರೆ. ಕೂಡಲೇ ಅವುಗಳನ್ನು ಸೆರೆ ಹಿಡಿಯುವಂತೆ ಪಟ್ಟು ಹಿಡಿದಿದ್ದಾರೆ.
ಚಾಮರಾಜನಗರ: ರಾಜ್ಯದ ಹಲವು ಕಡೆ ಮಾನವ – ವನ್ಯ ಜೀವಿಗಳ (Wild Animal) ಸಂಘರ್ಷ ನಡೆಯುತ್ತಲೇ ಇವೆ. ಇದರಿಂದ ಸಾಕಷ್ಟು ಸಾವು – ನೋವುಗಳು ಸಂಭವಿಸಿವೆ. ಆಸ್ತಿ, ಬೆಳೆಗಳು ನಾಶವಾಗಿವೆ. ಆದರೂ, ಸಂಘರ್ಷಗಳು ನಿಂತಿಲ್ಲ. ಚಾಮರಾಜನಗರ ಸೇರಿದಂತೆ ಹಲವು ಕಡೆ ಒಮ್ಮೊಮ್ಮೆ ಆನೆಗಳ ದಾಳಿ (Elephant Attack) ನಡೆದರೆ, ಮತ್ತೆ ಕೆಲವು ಸಲ ಹುಲಿ, ಚಿರತೆಗಳ ದಾಳಿ (Tiger and leopard attacks) ನಡೆಯುತ್ತವೆ. ಇದರಿಂದ ಅಲ್ಲಿನ ನಾಗರಿಕರು ಕಂಗೆಟ್ಟು ಹೋಗಿದ್ದಾರೆ. ಈಗ ಗುಂಡ್ಲುಪೇಟೆ ತಾಲೂಕಿನಲ್ಲಿ ಚಿರತೆ ಮರಿಗಳು (Leopard cubs) ಕಾಣಿಸಿಕೊಂಡು ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ.
ಗುಂಡ್ಲುಪೇಟೆ ತಾಲೂಕು ಲಕ್ಕೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಮರಿ ಚಿರತೆಗಳ ರಕ್ಷಣೆಗಾಗಿ ತಾಯಿ ಚಿರತೆಯು ಗ್ರಾಮದ ಸುತ್ತಮುತ್ತ ಸಂಚರಿಸುತ್ತಿದೆ. ಇದರಿಂದ ಎಲ್ಲಿ ತಮ್ಮ ಮೇಲೆ ದಾಳಿ ಮಾಡುತ್ತದೆಯೋ ಎಂಬ ಆತಂಕದಲ್ಲಿ ಜನರಿದ್ದಾರೆ.
ಇನ್ನು ಚಿರತೆಯು ಪ್ರತಿ ದಿನ ತನ್ನ ವಾಸಸ್ಥಳವನ್ನು ಬದಲಿಸುತ್ತಲೇ ಇದೆ. ಹೀಗಾಗಿ ಚಿರತೆ ಇಂಥ ಕಡೆಯೇ ಇದೆ ಎಂದು ತಿಳಿಯದಾಗಿದೆ. ಈಗ ಚಿರತೆ ಭಯದಿಂದ ಜಮೀನುಗಳಿಗೆ ಹೋಗಲು ರೈತರು ಹಿಂಜರಿಯುತ್ತಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಗೆ ದೂರು ನೀಡಿರುವ ಗ್ರಾಮಸ್ಥರು, ಮರಿ ಚಿರತೆಗಳನ್ನು ತೆಗೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದಾರೆ. ಇಷ್ಟಾದರೂ ಮರಿ ಚಿರತೆಗಳನ್ನು ತೆಗೆದುಕೊಂಡು ಹೋಗಲು ಅರಣ್ಯ ಇಲಾಖೆ ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ. ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೋನಿಟ್ಟರೂ ಸೆರೆ ಸಿಗದ ತಾಯಿ ಚಿರತೆ!
ಚಿರತೆ ಸೆರೆಗೆ ಈ ಭಾಗದಲ್ಲಿ ಅರಣ್ಯ ಇಲಾಖೆ ಬೋನು ಇಟ್ಟಿದೆ. ಆದರೆ, ತಾಯಿ ಚಿರತೆಯು ಬಹಳ ಚಾಲಾಕಿ ಇದ್ದು, ಇದುವರೆಗೂ ಬೋನಿಗೆ ಬೀಳದೆ ತಿರುಗಾಡುತ್ತಿದೆ. ಇದರಿಂದ ಅಸಮಾಧಾನಗೊಂಡಿರುವ ಸ್ಥಳೀಯ ನಾಗರಿಕರು, “ಚಿರತೆ ಸೆರೆಗಾಗಿ ಬೋನು ಇಟ್ಟರೆ ಪ್ರಯೋಜನವಿಲ್ಲ. ಸೆರೆ ಹಿಡಿಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ” ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.
ಜೀವ ವಾಪಸ್ ಕೊಡುತ್ತೀರಾ?
ನಾವು ನಿತ್ಯ ಜೀವ ಭಯದಲ್ಲೇ ಜಮೀನಿಗೆ ಹೋಗಬೇಕಿದೆ. ಎಲ್ಲಿ ಚಿರತೆಯು ನಮ್ಮನ್ನು ಕೊಂದು ಬಿಡುತ್ತದೋ ಎಂಬ ಭಯದಲ್ಲಿದ್ದೇವೆ. ಕುಟುಂಬಕ್ಕೆ ನಾವೇ ಆಧಾರವಾಗಿದ್ದೇವೆ. ನಾವು ಚಿರತೆ ದಾಳಿಯಿಂದ ಸತ್ತರೆ ಜೀವವನ್ನು ವಾಪಸ್ ತಂದು ಕೊಡುತ್ತೀರಾ? ನಮ್ಮ ಕುಟುಂಬಕ್ಕೆ ದಿಕ್ಕು ತೋರುತ್ತೀರಾ? ಹೆಂಡತಿ, ಮಕ್ಕಳಿಗೆ ಯಾರು ದಿಕ್ಕು? ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Ganesha Chaturthi 2023 : ಕೇರಳ, ಆಂಧ್ರಕ್ಕೆ ಹೋಗಲು ಸಿದ್ಧವಾಗಿದ್ದ ಪಿಒಪಿ ಗಣೇಶ ಮೂರ್ತಿ ಸೀಜ್!
ಇದು ಯಾವ ನ್ಯಾಯ?
ಕಾನೂನಿನ ಪ್ರಕಾರ ನಾವು ಕಾಡು ಪ್ರಾಣಿಯನ್ನು ಕೊಂದರೆ ನಮಗೆ ಜೈಲು ಶಿಕ್ಷೆ ಆಗುತ್ತದೆ. ಹಾಗಂತ ಕೊಲ್ಲದೇ ಇದ್ದರೆ ಅದು ನಮ್ಮ ಜೀವವನ್ನು ತೆಗೆಯುತ್ತದೆ. ಅದೇ ಚಿರತೆ ನಮ್ಮನ್ನು ಸಾಯಿಸಿದರೆ ನಮ್ಮ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಕೊಡಲಾಗುತ್ತದೆ. ಇದ್ಯಾವ ನ್ಯಾಯ? ಎಂದು ಅರಣ್ಯ ಇಲಾಖೆಯ ವಿರುದ್ಧ ರೈತ ಪ್ರಭುಸ್ವಾಮಿ ಎಂಬುವವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ
Cauvery Protest : ಸೆ. 26ರಂದು ಬೆಂಗಳೂರು ಬಂದ್; 150ಕ್ಕೂ ಅಧಿಕ ಸಂಘಟನೆಗಳ ಜಂಟಿ ಕರೆ, ಸ್ತಬ್ಧವಾಗಲಿದೆ ರಾಜಧಾನಿ
Cauvery Protest : ಸೆ. 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಅಂದು ಯಾವುದೇ ರೀತಿಯ ವ್ಯಾಪಾರ, ವಹಿವಾಟು, ಸಂಚಾರ, ಸಾರಿಗೆ, ಶಾಲೆ, ಕಾಲೇಜು ಇರುವುದಿಲ್ಲ ಎಂದು ಸಂಯೋಜಕರು ಹೇಳಿದ್ದಾರೆ.
ಬೆಂಗಳೂರು: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್ 26ರಂದು (ಮಂಗಳವಾರ) ಬೆಂಗಳೂರು ಬಂದ್‌ಗೆ (Bangalore bandh on September 26) ಕರೆ ನೀಡಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom Park Bangalore) ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ನೇತೃತ್ವದಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನಾ ಮತ್ತು ಸಮಾಲೋಚನಾ ಸಭೆಯಲ್ಲಿ (Cauvery Protest) ಸೆಪ್ಟೆಂಬರ್ 26ರಂದು ಬಂದ್‌ಗೆ ಕರೆ ನೀಡಲು ನಿರ್ಧರಿಸಲಾಯಿತು. ಸುಮಾರು 150ಕ್ಕೂ ಅಧಿಕ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಲಿದೆ ಎಂದು ಪ್ರಕಟಿಸಲಾಗಿದೆ.
ಕರ್ನಾಟಕ ಜಲಸಂರಕ್ಷಣಾ ಸಮಿತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ಅಪಾರ್ಟ್ ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಿದ್ದವು.
ಆಮ್ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಚಂದ್ರು (Mukhyamantri Chandru), ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shantakumar), ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್, ಜಯ ಕರ್ನಾಟಕ ಸಂಘಟನೆ ಮುಖಂಡರು, ಶಾಶ್ವತ ನೀರಾವರಿ ಹೋರಾಟ ಸಮಿತಿ, ಜಲ ಸಂರಕ್ಷಣಾ ಸಮಿತಿ ಮುಖಂಡರಿಂದ ಅಭಿಪ್ರಾಯ ಮಂಡನೆಯಾದ ಬಳಿಕ ಸೆ. 26ರಂದು ಬಂದ್‌ಗೆ ಕರೆ ನೀಡಲು ನಿರ್ಧರಿಸಲಾಯಿತು.
ರಾಜಸ್ತಾನಿ ಸಂಘಟನೆಗಳ ಒಕ್ಕೂಟದಿಂದಲೂ ಕಾವೇರಿ ಹೋರಾಟಕ್ಕೆ ಸಾಥ್
ʻʻಬಂದ್ ಮಾಡಿದ್ರೆ ನಾವು ಬೆಂಬಲ ಕೊಡ್ತೇವೆ. ಯಾಕೆಂದರೆ ಕಾವೇರಿ ಋಣ ನಮ್ಮ ಮೇಲೆಯೂ ಇದೆ. ಅದಕ್ಕಾಗಿ ನಾವು ಈ ಹೋರಾಟಕ್ಕೆ ಬೆಂಬಲ ಕೊಡ್ತೀವೆʼʼ ಎಂದ ರಾಜಸ್ತಾನಿ ಸಂಘಟನೆ ಮುಖ್ಯಸ್ಥರು ಹೇಳಿದರು.
ಮಂಗಳವಾರದ ಬಂದ್ ಹೇಗಿರಲಿದೆ?
ಸಂಘಟನೆಗಳ ನಾಯಕರು ಮಾಡಿರುವ ಪ್ಲ್ಯಾನ್ ಪ್ರಕಾರ ಮುಂದಿನ ಮಂಗಳವಾರ ಎಲ್ಲಾ ಸಾರ್ವಜನಿಕ ಸೇವೆಗಳು ಸ್ಥಗಿತವಾಗಲಿವೆ.
-ಅಂಗಡಿ ಮುಂಗಟ್ಟುಗಳು ಬಂದ್
– ಎಲ್ಲ ರೀತಿಯ ಸಂಚಾರ ವ್ಯವಸ್ಥೆ ಸ್ಥಗಿತ
-ಶಾಲಾ ಕಾಲೇಜ್, ಸರ್ಕಾರಿ ಕಚೇರಿ ಕಾರ್ಯ ಚಟುವಟಿಕೆ ಸ್ಥಗಿತ
– ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್
ಹೀಗೆ ಹಾಲು, ತರಕಾರಿ, ಪತ್ರಿಕೆ, ಆಸ್ಪತ್ರೆ, ಮೆಡಿಕಲ್ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಬೇಕು ಎನ್ನುವುದು ಸಂಘಟಕರ ನಿರೀಕ್ಷೆಯಾಗಿದೆ.
ಅಂದು ಟೌನ್ ಹಾಲ್ ಬಳಿ ಬೃಹತ್ ಪ್ರತಿಭಟನೆ ನಡೆದು ನಂತರ ಫ್ರೀಡಂ ಪಾರ್ಕ್ ವರೆಗೂ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Cauvery Protest : ಕಾಂಗ್ರೆಸ್ ಪಕ್ಷ ತಮಿಳುನಾಡಿನ ಏಜೆಂಟ್ ಎಂದ ಬಿಎಸ್‌ವೈ, ಬಿಜೆಪಿಯಿಂದ ಬೀದಿಗಿಳಿದು ಹೋರಾಟ
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಜಯ ಕರ್ನಾಟಕ ಸಂಘಟನೆ
ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆ ಮತ್ತು ಸಮಾಲೋಚನೆಯಲ್ಲಿ ಪಾಲ್ಗೊಂಡ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬಳಿಕ ಪ್ರತ್ಯೇಕವಾಗಿ ವಿಧಾನಸೌಧ ಮುತ್ತಿಗೆಗೆ ತಯಾರಿ ನಡೆಸಿದರು. ಅವರನ್ನು ಬಳಿಕ ಬಂಧಿಸಲಾಯಿತು.
ಕರ್ನಾಟಕ
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
Suspicious death : ಚಿತ್ರದುರ್ಗದಲ್ಲಿ ಗೃಹಿಣಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೋಷಕರು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಇತ್ತ ಮೃತಳ ಪತಿ ಮಾರ್ಮಿಕವಾಗಿ ಸ್ಟೇಟಸ್‌ವೊಂದನ್ನು ಹಾಕಿದ್ದಾನೆ.
ಚಿತ್ರದುರ್ಗ: ಇಲ್ಲಿನ ಆಂಜನೇಯ ಕ್ಲಾತ್ ಬಳಿ ಮನೆಯಲ್ಲಿ ಗೃಹಿಣಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ (Suspicious death) ಪತ್ತೆಯಾಗಿದ್ದಾಳೆ. ಚಳ್ಳಕೆರೆ ನಗರದ ಸತ್ಯ ತೆಲಗಿ (21) ಮೃತಳು.
3 ವರ್ಷದ ಹಿಂದೆ ಪ್ರಜ್ವಲ್ ತೆಲಗಿ ಎಂಬಾತನೊಂದಿಗೆ ಸತ್ಯಳಾ ಮದುವೆ ಆಗಿತ್ತು. ಆತನೇ ಹತ್ಯೆ ಮಾಡಿ ನೇಣು ಹಾಕಿದ್ದಾನೆ ಎಂದು ಮೃತ ಪೋಷಕರು ಆರೋಪಿಸಿದ್ದಾರೆ. ಪ್ರಜ್ವಲ್ ದಿನನಿತ್ಯ ಕುಡಿದು ಬಂದು ಪತ್ನಿ ಸತ್ಯಾಳಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಸತ್ಯಳಿಗೆ ಇಲ್ಲ. ಅವಳ ಗಂಡನೇ ಅವಳನ್ನು ಹೊಡೆದು ಬಡಿದು ಕೊಲೆ ಮಾಡಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Road Accident : ಹಿಟ್ ಆ್ಯಂಡ್ ರನ್; ಬೈಕ್ ಸವಾರ ಸತ್ತರೂ ನೋಡದೆ ಹೋದ ಕಾರು ಚಾಲಕ!
ಆತನ ಸ್ಟೇಟಸ್‌ನಲ್ಲಿ ಏನಿದೆ?
ಇನ್ನು ಸತ್ಯಾಳ ಪತಿ ಪ್ರಜ್ವಲ್ ತನ್ನ ವಾಟ್ಸ್‌ಪ್ ಸ್ಟೇಟಸ್‌ನಲ್ಲಿ ಮಾರ್ಮಿಕವಾಗಿ ಬರಹವೊಂದನ್ನು ಹಾಕಿಕೊಂಡಿದ್ದಾನೆ. ಉಸಿರಿನ ತೊಂದರೆಯಿಂದ ಅಸುನೀಗಿದ ಹೆಣವೊಂದು ಚಿತೆಯಲ್ಲಿ ಉರಿಯುತ್ತಿತ್ತು. ಉರಿಯುತ್ತಿದ್ದ ಹೆಣವು ಒಣ ಕಟ್ಟಿಗೆಯೊಂದಿಗೆ ವಾಗ್ವಾದಕ್ಕಿಳಿದಿತ್ತು. ನನ್ನನ್ನೇಕೆ ಸುಡುತ್ತಿರುವೆ? ಇದಕ್ಕೆ ಒಣ ಕಟ್ಟಿಗೆಯ ಉತ್ತರ ಹೀಗಿತ್ತು. ನನ್ನ ಹಸಿರಾಗಿರಲು ಬಿಟ್ಟಿದ್ದರೆ ಇಂದು ನಿನ್ನ ಉಸಿರು ಉಳಿಯುತ್ತಿತ್ತು. ನಾನು ಬೆಂದು ಕೆಂಡವಾಗುತ್ತಿರಲಿಲ್ಲ, ನೀನು ಸುಟ್ಟು ಬೂದಿಯೂ ಆಗುತ್ತಿರಲಿಲ್ಲ ಎಂದು ಚಿತೆಯ ಫೋಟೊದೊಂದಿಗೆ ಮೇಲಿನ ಬರಹವನ್ನು ಪ್ರಜ್ವಲ್ ಹಾಕಿದ್ದಾನೆ.
ವಾಟ್ಸಪ್ ಸ್ಟೇಟಸ್‌ನಲ್ಲಿ ಈ ರೀತಿಯ ಮಾರ್ಮಿಕವಾಗಿ ಸ್ಟೇಟಸ್ ಹಾಕಿದ್ದಕ್ಕೆ ಸತ್ಯಳ ಸಹೋದರ ಕಿಶೋರ್ ಗಂಭೀರ ಆರೋಪವನ್ನು ಮಾಡಿದ್ದಾರೆ. ಆತ ವಾಟ್ಸಪ್‌ನಲ್ಲಿ ಆ ಸ್ಟೇಟಸ್ ಹಾಕಿದ್ದು ಯಾಕೆ ? ನನ್ನ ತಂಗಿಯನ್ನು ಅವನೇ ಏನೋ ಮಾಡಿದ್ದಾನೆ. ಪೊಲೀಸರು ಈ ಸಂಬಂಧ ಸೂಕ್ತವಾದ ತನಿಖೆಯನ್ನು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇತ್ತ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಮೃತದೇಹವನ್ನು ಕೆಳಗಿಸಿ, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Cauvery Protest : ಕಾಂಗ್ರೆಸ್ ಪಕ್ಷ ತಮಿಳುನಾಡಿನ ಏಜೆಂಟ್ ಎಂದ ಬಿಎಸ್‌ವೈ, ಬಿಜೆಪಿಯಿಂದ ಬೀದಿಗಿಳಿದು ಹೋರಾಟ
Cauvery protest : ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‌ನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಸ್‌ವೈ ಅವರು ಕಾಂಗ್ರೆಸನ್ನು ತಮಿಳುನಾಡಿನ ಏಜೆಂಟ್ ಎಂದರು.
ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ (Cauvery protest) ರಾಜ್ಯದ ಹಿತಾಸಕ್ತಿ ಕಾಪಾಡಬೇಕಿದ್ದ ಕಾಂಗ್ರೆಸ್ ಪಕ್ಷ ತಮಿಳುನಾಡಿನ ಏಜೆಂಟ್ (Congress acting like Tamilnadu Agent) ರೀತಿಯಲ್ಲಿ ವರ್ತಿಸುತ್ತಿದೆ. ಸಚಿವರು ಕೂಡಾ ತಮಿಳುನಾಡಿನ ಪರ ದಲ್ಲಾಳಿಗಳಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನು ನಿಲ್ಲಿಸಲು ಮತ್ತು ರಾಜ್ಯಕ್ಕೆ ನ್ಯಾಯ ಸಿಗುವಂತೆ ಕಾನೂನಾತ್ಮಕ ಹೋರಾಟ ಸಂಘಟಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುವುದಕ್ಕಾಗಿ ಬಿಜೆಪಿ ವತಿಯಿಂದ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ (BJP Protest At Bangalore) ಅವರು ಮಾತನಾಡಿದರು.
ʻʻರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಹೇಳುವ ಮೊದಲೇ ನೀರು ಬಿಟ್ಟಿದೆ. ನಮ್ಮ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆʼʼ ಎಂದು ಆಕ್ಷೇಪಿಸಿರುವ ಬಿ.ಎಸ್ ಯಡಿಯೂರಪ್ಪ ಅವರು, ʻʻತಮಿಳುನಾಡಿನಿಂದ ತಜ್ಞರ ತಂಡ ಕಳಿಸಿ ಕಾವೇರಿಯಲ್ಲಿ ಎಷ್ಟು ನೀರಿದೆ ನೋಡಲಿ. ನಾವು ಸಂಕಷ್ಟದಲ್ಲಿದ್ದೇವೆ ಅಂತ ಗೊತ್ತಾಗಲಿʼʼ ಎಂದು ಹೇಳಿದರು.
ಕಾವೇರಿಯಲ್ಲಿ ನೀರಿಲ್ಲ ಅಂತ ಗೊತ್ತಿದ್ದರೂ ಹಗಲು ರಾತ್ರಿ ನೀರು ಬಿಟ್ಟು ರಾಜ್ಯವನ್ನು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲʼʼ ಎಂದು ಹೇಳಿದ ಯಡಿಯೂರಪ್ಪ, ಇದು ಬಿಜೆಪಿ ಬಿಜೆಪಿಯ ಸಾಂಕೇತಿಕ ಹೋರಾಟ. ಮುಂದೆ ಹಗಲು, ರಾತ್ರಿ ಹೋರಾಟ ಮುಂದುವರೆಸುತ್ತೇವೆ. ಎಲ್ಲಾ ಶಾಸಕ, ಸಂಸದರು ಸೇರಿ ಹೋರಾಟ ಮಾಡುತ್ತೇವೆ. ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಅವರೂ ಇನ್ನು ಮುಂದೆ ಒಂದು ಹನಿ ನೀರು ಬಿಡೋದಕ್ಕೆ ಆಗಲ್ಲ, ಬಿಡುವುದು ಸರಿಯಲ್ಲ ಎಂದಿದ್ದಾರೆʼʼ ಎಂದರು.
ಕಾಂಗ್ರೆಸ್ ಸರ್ಕಾರ ತಮಿಳುನಾಡಿನ ಏಜಂಟರಂತೆ ವರ್ತಿಸುವುದನ್ನು ಬಿಟ್ಟು ಸುಪ್ರೀಂ ಕೋರ್ಟಿನಲ್ಲಿ ಮನವಿ ಮಾಡಬೇಕು, ಸರಿಯಾಗಿ ವಾಸ್ತವಿಕ ಸ್ಥಿತಿಯನ್ನು ತಿಳಿಸಬೇಕು ಎಂದರು.
ಬಿಜೆಪಿ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿ
ಬೆಂಗಳೂರು ನಗರ ಬಿಜೆಪಿ ಘಟಕ ಆಯೋಜಿಸಿದ ಈ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ, ಸಂಸದರಾದ ಪಿ.ಸಿ. ಮೋಹನ್, ಶಾಸಕರಾದ ಗೋಪಾಲಯ್ಯ. ಶಾಸಕ ರವಿ ಸುಬ್ರಹ್ಮಣ್ಯ, ಸಿ.ಕೆ ರಾಮಮೂರ್ತಿ, ಉದಯ್ ಗರುಡಾಚಾರ್ ಭಾಗಿಯಾಗಿದ್ದಾರೆ.
ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಪ್ರತಾಪಸಿಂಹ ನಾಯಕ್, ಬಿಜೆಪಿ ಪ್ರಧಾನಕಾರ್ಯದರ್ಶಿಗಳಾದ ಅಶ್ವಥ್ ನಾರಾಯಣ್, ಸಿದ್ದರಾಜು ಸೇರಿದಂತೆ ಹಲವು ಭಾಗಿಯಾಗಿದ್ದಾರೆ. ಮಹಿಳೆಯರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಪರಾಜಿತ ಅಭ್ಯರ್ಥಿಗಳು, ಮಾಜಿ ಕಾರ್ಪೊರೇಟರ್ಸ್, ಕಾರ್ಯಕರ್ತರು ಭಾಗಿಯಾಗಿದ್ದಾರೆ.
ತಮಿಳುನಾಡಿನ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಡಿಸಿಎಂ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ನಾಯಕರು ಕಾವೇರಿ ನಮ್ಮದು, ತೊಲಗಲಿ, ತೊಲಗಲಿ ಕಾಂಗ್ರೆಸ್ ತೊಲಗಲಿ ಎಂದು ಘೋಷಣೆ ಕೂಗಿದರು. ಬಳಿಕ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ಪಾರ್ಟನರ್ ಕಾಪಾಡಲು ಮುಂದಾದ ಡಿ.ಕೆ. ಶಿವಕುಮಾರ್
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಗೋವಿಂದ ಕಾರಜೋಳ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯ ಅಧಃಪತನವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಪಾರ್ಟ್‌ನರ್ ಡಿಎಂಕೆಯನ್ನು ಕಾಪಾಡಲು ಮುಂದಾಗಿದ್ದಾರೆ. ಇದೇ ಡಿಕೆ ಶಿವಕುಮಾರ್ ಕಾವೇರಿ ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದರು. ಈಗ ಅದನ್ನು ಮರೆತಿದ್ದಾರೆ ಎಂದರು.
ಸೋನಿಯಾ ಗಾಂಧಿ ಮಧ್ಯಪ್ರವೇಶಿಸಲಿ ಎಂದ ಬೊಮ್ಮಾಯಿ
ಕಾವೇರಿ ವಿವಾದಕ್ಕೆ ಸಂಬಂಧಿಸಿ ಸುಲಭದ ದಾರಿ ಇದೆ. ನಿಮ್ಮ ಸ್ನೇಹಿತ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರಬರೆಯಿರಿ. ನಮ್ಮ ಬಳಿ ಕುಡಿಯುವ ನೀರಿಲ್ಲ ಅಂತ ಮನವರಿಕೆ ಮಾಡಿಕೊಡಿ ಎಂದು ಸಲಹೆ ನೀಡಿದರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.
ʻʻಕಾನೂನಿನ ಒಳಗೆ ರಾಜಕೀಯವಾಗಿ ನಿಲ್ಲಬೇಕಾದರೆ ಈ ವಿಷಯದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡಬೇಕು. ನೀರು ಕೇಳಬೇಡಿ, ಕರ್ನಾಟಕದಲ್ಲಿ ಸಂಕಷ್ಟ ಇದೆ ಅಂತ ಸ್ಟಾಲಿನ್‌ಗೆ ಹೇಳಬೇಕು. ಇದನ್ನು ಹೇಳಿದ್ರೆ ಸೋನಿಯಾ ಗಾಂಧಿ ಅವರಿಗೆ ಏನು ಅಧಿಕಾರ ಇದೆ ಅಂತಾರೆ. ಸಿದ್ದರಾಮಯ್ಯ ಅವರೇ, ಸೋನಿಯಾ ಗಾಂಧಿ ಅವರು ಇಬ್ಬರೂ ಸಿಎಂಗಳನ್ನು ಕೂರಿಸಿಕೊಂಡು ಮಾತನಾಡಿದರೆ ಆಗುತ್ತದೆ ಎಂದು ಸಲಹೆ ನೀಡಿದರು.
ಕರ್ನಾಟಕ
Road Accident : ಹಿಟ್ ಆ್ಯಂಡ್ ರನ್; ಬೈಕ್ ಸವಾರ ಸತ್ತರೂ ನೋಡದೆ ಹೋದ ಕಾರು ಚಾಲಕ!
Hit And Run case : ಬೆಂಗಳೂರಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ಹೆಚ್ಚಾಗುತ್ತಿದೆ. ವೇಗವಾಗಿ ಬಂದ ಕಾರೊಂದು ಬೈಕ್ ಸವಾರನ ಜೀವ ತೆಗೆದಿದೆ. ಅಪಘಾತ ಮಾಡಿದ (Road Accident) ಕಾರು ಚಾಲಕ ಪರಾರಿ ಆಗಿದ್ದಾನೆ.
ಬೆಂಗಳೂರು: ಬೆಂಗಳೂರಿನ ಕೆಂಗೇರಿ ಸಮೀಪದ ಗಾಣಕಲ್ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್‌ಗೆ (Hit And Run case) ಬೈಕ್ ಸವಾರ (Road Accident) ಬಲಿಯಾಗಿದ್ದಾನೆ. ಅಜಯ್ ಕುಮಾರ್ ಮೃತ ದುರ್ದೈವಿ.
ಚಿಕ್ಕೇಗೌಡನಪಾಳ್ಯ ಕಡೆಯಿಂದ ಉತ್ತರಹಳ್ಳಿ ರಸ್ತೆ ಕಡೆಗೆ ವೇಗವಾಗಿ ಬಂದ ಕಾರು, ಮುಂದೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಅಪಘಾತದ ಬಳಿಕ ಸ್ಥಳದಿಂದ ಕಾರು ಸಮೇತ ಚಾಲಕ ಪರಾರಿ ಆಗಿದ್ದಾನೆ. ಘಟನೆ ಸಂಬಂಧ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಕಾರು ಚಾಲಕನಿಗಾಗಿ ಹುಡುಕಾಟ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಪ್ರಮುಖ ಸುದ್ದಿ19 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಗ್ಯಾಜೆಟ್ಸ್22 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ದೇಶ21 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕರ್ನಾಟಕ15 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಉಡುಪಿ18 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
-
ಕ್ರೈಂ21 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ದೇಶ18 hours ago
Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ