Suicide Case: ಸಾಲದಿಂದ ರೈತ ಆತ್ಮಹತ್ಯೆ - Vistara News

ಚಿಕ್ಕಬಳ್ಳಾಪುರ

Suicide Case: ಸಾಲದಿಂದ ರೈತ ಆತ್ಮಹತ್ಯೆ

ಕೃಷಿ ಮಾಡಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕೋರೆನಹಳ್ಳಿ ಗ್ರಾಮದ ವೆಂಕಟೇಶ್ ಸಾಲಗಾರರ ಕಾಟ ತಾಳಲಾರದೆ ಆತ್ಮತ್ಯೆಗೆ ಶರಣಾಗಿದ್ದಾರೆ.

VISTARANEWS.COM


on

farmer suicide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಬಳ್ಳಾಪುರ: ಸಾಲದ ಸುಳಿಗೆ ಸಿಲುಕಿ ನೊಂದ. ಸಾಲಗಾರರ ಬಾಧ ತಡೆಯಲಾಗದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷಿ ಮಾಡಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕೋರೆನಹಳ್ಳಿ ಗ್ರಾಮದ ವೆಂಕಟೇಶ್ ಸಾಲಗಾರರ ಕಾಟ ತಾಳಲಾರದೆ ಆತ್ಮತ್ಯೆಗೆ ಶರಣಾಗಿದ್ದಾರೆ. ಇವರು ಸಿಪಿಐಎಂ ಪಕ್ಷದ ಮುಖಂಡ ಹಾಗೂ ಮಾಜಿ ಗ್ರಾಮ ಪಂಚಾಯತಿ ಸದಸ್ಯನಾಗಿ ಕೆಲಸ ಮಾಡಿದ್ದರು. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಬಿರುಗಾಳಿ ಮಳೆಗೆ ಜನರು ತತ್ತರ; ಸಿಡಿಲಿಗೆ ಎತ್ತುಗಳು ಬಲಿ, ನೆಲಕಚ್ಚಿದ ಬೆಳೆಗಳು

Karnataka Weather Forecast : ಬಿರುಗಾಳಿ ಸಹಿತ ಸುರಿದ ಮಳೆಗೆ (Rain News) ಬೀದರ್‌, ವಿಜಯನಗರ, ದಾವಣಗೆರೆ ರೈತರು ತತ್ತರಿಸಿ ಹೋಗಿದ್ದಾರೆ. ಸಾಲಸೋಲ ಮಾಡಿ ಖರೀದಿಸಿದ್ದ ಎತ್ತುಗಳು ಸಿಡಿಲಿಗೆ ಬಲಿಯಾದರೆ, ನೀರಿಲ್ಲದಿದ್ದರೂ ಟ್ಯಾಂಕರ್‌ ಮೂಲಕ ಕಷ್ಟ ಪಟ್ಟು ಬೆಳೆದಿದ್ದ ಬೆಳೆಯು ನೆಲಕಚ್ಚಿದೆ. ಸದ್ಯ ಬುಧವಾರದಂದು ಎಲ್ಲೆಲ್ಲಿ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಅಬ್ಬರಕ್ಕೆ ಜನ-ಜೀವನ ಅಸ್ತವ್ಯಸ್ತವಾಗಿದೆ. ಮುಂದಿನ 24 ಗಂಟೆಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ (Rain News) ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಮಧ್ಯ‌ ಮಹಾರಾಷ್ಟ್ರದಿಂದ ಕರ್ನಾಟಕ ಸೇರಿ ಕೇರಳದವರೆಗೆ ಸುಳಿಗಾಳಿಯ ಚಲನೆಯಿಂದ ಹವಾಮಾನದಲ್ಲಿ ವೈಪರಿತ್ಯ ಉಂಟಾಗಿದೆ. ಇದರ ಪ್ರಭಾವದಿಂದಾಗಿ ಇನ್ನೆರಡು ದಿನಗಳು ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.

ಪ್ರಮುಖವಾಗಿ ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಸೇರಿ ದಕ್ಷಿಣ ಒಳನಾಡಿನ ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗಲಿದೆ. ಇನ್ನೂ 30-40 ಕಿಮೀ ವೇಗದಲ್ಲಿ ಬಿರುಸಿನ ಗಾಳಿ ಬೀಸಲಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಇದನ್ನೂ ಓದಿ:Murder Case : ಕೊಲೆಯಾದ ಮಹಿಳೆಗೆ 20 ಹುಡುಗರ ಸಹವಾಸ! ಅವರಿಗೆ ಆಕೆ ಇಟ್ಟಿದ್ದ ಹೆಸರು ಆರೆಂಜ್, ಆ್ಯಪಲ್, ಬನಾನಾ ಇತ್ಯಾದಿ!

ಸಿಡಿಲಿಗೆ ಎತ್ತುಗಳು ಬಲಿ

ಬೀದರ್‌ನ ಔರಾದ್ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಸಿಡಿಲು ಬಡಿದು 2 ಎತ್ತುಗಳು ಮೃತಪಟ್ಟಿರುವ ಘಟನೆ ನಡೆದಿದೆ. ಸೋಮವಾರ ತಡರಾತ್ರಿಯಲ್ಲಿ ಭಾರಿ ಮಳೆಯೊಂದಿಗೆ ಸಿಡಿಲು ಬಡಿದಿದೆ. ಪರಿಣಾಮ ಸಾಗರ ಬಸವರಾಜ ಪಾಟೀಲ ಎಂಬುವವರಿಗೆ ಸೇರಿದ ಎತ್ತುಗಳು ಮೃತಪಟ್ಟಿವೆ.

ವಿಜಯನಗರದಲ್ಲಿ ಗಾಳಿ-ಮಳೆಗೆ ಹಾರಿದ ಶಾಮಿಯಾನ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡಾದ ಗ್ರಾಮದ ಬಳಿಯ ಆಂಜನೇಯ ದೇಗುಲದಲ್ಲಿ ಹನುಮ ಜಯಂತಿ ನಿಮಿತ್ತ ಶಾಮಿಯಾನ, ಲೈಟಿಂಗ್ ಹಾಕಲಾಗಿತ್ತು. ಆದರೆ ಜೋರಾಗಿ ಬೀಸಿದ ಗಾಳಿ, ಮಳೆಗೆ ಶಾಮಿಯಾನ, ಲೈಟಿಂಗ್ಸ್‌ ಹಾರಿ ಹೋಗಿತ್ತು. ಇದರಿಂದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿತ್ತು.

ತಡರಾತ್ರಿ ಬಿರುಗಾಳಿ ಸಹಿತ ಮಳೆಗೆ ಹತ್ತಾರು ಎಕರೆ ಪಪ್ಪಾಯಿ ಬೆಳೆ ನೆಲಕ್ಕೆ ಉರುಳಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ವಟ್ಟಮ್ಮನಹಳ್ಳಿ ಗ್ರಾಮದ ಮೂಗಪ್ಪ ಎಂಬುವರಿಗೆ ಸೇರಿದ 5 ಎಕರೆ ಪಪ್ಪಾಯಿ ಬೆಳೆ ಹಾಳಾಗಿದೆ. ಇದರಿಂದ ಅಂದಾಜು 5 ರಿಂದ 7 ಲಕ್ಷ ರೂಪಾಯಿ ಬೆಲೆ ಬಾಳುವ ಪಪ್ಪಾಯಿ ಬೆಳೆಗೆ ಹಾನಿಯಾಗಿದೆ. ಇದೇ ಗ್ರಾಮದ ಪತ್ರಿಗೌಡ ಹೊನ್ನೆಹಳ್ಳಿ ಎನ್ನುವವರ 3 ಎಕರೆ, ಕುಸುಮ ಅವರ 4 ಎಕರೆ ಪಪ್ಪಾಯಿ ಬೆಳೆ ನಷ್ಟವಾಗಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.

ದಾವಣಗೆರೆಯಲ್ಲಿ ಬಾಳೆ ಬೆಳೆ ನಾಶ

ಸೋಮವಾರ ಸಂಜೆ ಸುರಿದ ಗಾಳಿ ಮಳೆಗೆ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿವೆ. ದಾವಣಗೆರೆಯ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ, ಜಮ್ಮಪುರ, ಹರಿಶಿನಗುಂಡಿ ಸೇರಿದಂತೆ ಹಲವು ಕಡೆ ಬೆಳೆ ನಾಶವಾಗಿದೆ. ಕಟ್ಟಿಗೆಹಳ್ಳಿ ಗ್ರಾಮದ ಸಿದ್ದಮ್ಮ, ಬಸವರಾಜಪ್ಪ ಎಂಬುವರಿಗೆ ಸೇರಿದ 20 ಎಕರೆ ಬಾಳೆ ತೋಟ ನೆಲಕಚ್ಚಿದೆ. ಬರಗಾಲದಲ್ಲಿ ಟ್ಯಾಂಕರ್ ನೀರು ಖರೀದಿ ಮಾಡಿ ಬಾಳೆ ಬೆಳೆಸಿದ್ದರು. ಆದರೆ ಗಾಳಿ ಮಳೆಗೆ ಬಾಳೆಯು ನೆಲಸಮವಾಗಿದೆ. ಕೂಡಲೇ ಹಾನಿಗೊಂಡ ಬೆಳೆಗೆ ಸರ್ಕಾರ ಪರಿಹಾರ ‌ನೀಡುವಂತೆ ಒತ್ತಾಯಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿಕ್ಕಬಳ್ಳಾಪುರ

Lok Sabha Election 2024: ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಗೆಲ್ಲುವುದು ನಿಶ್ಚಿತ: ಶಿವಕುಮಾರ್

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಡಿಸಿಎಂ ಡಿ.ಕೆ. ಶಿವಕುಮಾರ್ ಸೋಮವಾರ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾದನಾಯಕನಹಳ್ಳಿಯಲ್ಲಿ ಚುನಾವಣೆ ಪ್ರಚಾರ ನಡೆಸಿದರು.

VISTARANEWS.COM


on

DCM DK Shivakumar election campaign for Chikkaballapur Lok Sabha constituency Congress candidate Raksha Ramaiah
Koo

ಯಲಹಂಕ: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಡಿಸಿಎಂ ಡಿ.ಕೆ. ಶಿವಕುಮಾರ್ ಸೋಮವಾರ ಯಲಹಂಕದ ಮಾದನಾಯಕನಹಳ್ಳಿಯಲ್ಲಿ ಚುನಾವಣೆ ಪ್ರಚಾರ ಕೈಗೊಂಡು, (Lok Sabha Election 2024) ಮತಯಾಚಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾದನಾಯಕನಹಳ್ಳಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರೋಡ್ ಶೋ ನಡೆಸಿ, ಮತಯಾಚನೆ ನಡೆಸಿದರು.‌

ಬಳಿಕ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು.

ಇದನ್ನೂ ಓದಿ: Tulsi Gowda: ಮನೆಯಲ್ಲಿ ಕಾಲು ಜಾರಿ ಬಿದ್ದು ಪದ್ಮಶ್ರೀ ತುಳಸಿ ಗೌಡ ಅಸ್ವಸ್ಥ

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿ, ನುಡಿದಂತೆ ನಡೆದಿದ್ದೇವೆ ಎಂದರು.

ಈ ಬಾರಿ ಚುನಾವಣೆಯಲ್ಲಿ ಡಾ. ಕೆ. ಸುಧಾಕರ್ ಅವರನ್ನು ಸೋಲಿಸಬೇಕು ಎಂದು ಬಿಜೆಪಿಯವರೇ ನಿರ್ಧಾರ ಮಾಡಿದ್ದಾರೆ, ಹೀಗಾಗಿ ಸುಧಾಕರ್ ಸೋಲುವುದು ಖಚಿತ, ರಕ್ಷಾ ರಾಮಯ್ಯ ಗೆಲ್ಲುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Money Guide: ಮಕ್ಕಳಿಗೆ ಉಡುಗೊರೆ ಕೊಡಬೇಕೆ? ಅವರ ಹೆಸರಿನಲ್ಲಿ ಪಿಪಿಎಫ್‌ ಖಾತೆ ಆರಂಭಿಸಿ; ಇಲ್ಲಿದೆ ಸಂಪೂರ್ಣ ವಿವರ

ಈ ಸಂದರ್ಭದಲ್ಲಿ ಜಿ.ಸಿ. ಚಂದ್ರಶೇಖರ್, ವಿ.ಆರ್. ಸುದರ್ಶನ್‌ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.

Continue Reading

ಕ್ರೈಂ

Threat Case: ʻಚುನಾವಣೆ ಪ್ರಚಾರ ಮಾಡಿದ್ರೆ ಹುಷಾರ್!‌ʼ ಎಂದು ಲಾಂಗ್‌ ಝಳಪಿಸಿದ ಜೆಡಿಎಸ್‌ ಮುಖಂಡ

ಕೋದಂಡಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆ ನಡೆಯುತಿದ್ದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ವಿ‌ ಶ್ರೀನಿವಾಸರೆಡ್ಡಿ (ಕೆವಿಎಸ್) ಎಂಬಾತ ಲಾಂಗ್‌ ತೋರಿಸಿ ಬೆದರಿಕೆ ಹಾಕಿದ್ದಾನೆ. “ಏ ನನ್ನ ಮಕ್ಳಾ, ಚುನಾವಣಾ ಪ್ರಚಾರ ಅಥವಾ ಮತದಾನದಲ್ಲಿ ಪಾಲ್ಗೊಂಡರೆ‌ ಕತ್ತರಿಸುತ್ತೇನೆ” ಎಂದು ಬೆದರಿಕೆ‌ (Threat Case) ಹಾಕಿದ್ದಾನೆ ಎನ್ನಲಾಗಿದೆ.

VISTARANEWS.COM


on

threat case chikkaballapur
Koo

ಚಿಕ್ಕಬಳ್ಳಾಪುರ: ರಾಜಕೀಯ ವೈಷಮ್ಯದ (Political rivalry) ಹಿನ್ನೆಲೆಯಲ್ಲಿ‌ ಚಿಂತಾಮಣಿಯಲ್ಲಿ (Chintamani) ಜೆಡಿಎಸ್‌ (JDS) ನಾಯಕನೊಬ್ಬ ಎದುರಾಳಿಗಳ ಮುಂದೆ ಲಾಂಗ್‌ ಝಳಪಿಸಿ ಆವಾಜ್ (Threat Case) ಹಾಕಿದ್ದಾನೆ. ಚುನಾವಣೆ ಪ್ರಚಾರ, ಮತದಾನದಲ್ಲಿ ಪಾಲ್ಗೊಂಡರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಕೋನಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಜೆಡಿಎಸ್ ಮುಖಂಡನಿಂದ ಕಾಂಗ್ರೆಸ್ ಬೆಂಬಲಿಗರಿಗೆ ಬೆದರಿಕೆ ಹಾಕಿದ ಆರೋಪವಿದೆ. ಗ್ರಾಮದಲ್ಲಿ ನಡೆಯುತ್ತಿದ್ದ ಪಲ್ಲಕ್ಕಿ ಉತ್ಸವದಲ್ಲಿ ಲಾಂಗು ಹಿಡಿದು ಬೆದರಿಕೆ ಹಾಕಿದ್ದಾನೆ. ಇದರ ವಿಡಿಯೋ ಸಾಕ್ಷಿ ಲಭ್ಯವಾಗಿದೆ.

ಕೋದಂಡಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆ ನಡೆಯುತಿದ್ದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ವಿ‌ ಶ್ರೀನಿವಾಸರೆಡ್ಡಿ (ಕೆವಿಎಸ್) ಎಂಬಾತ ಲಾಂಗ್‌ ತೋರಿಸಿ ಬೆದರಿಕೆ ಹಾಕಿದ್ದಾನೆ. “ಏ ನನ್ನ ಮಕ್ಳಾ, ಚುನಾವಣಾ ಪ್ರಚಾರ ಅಥವಾ ಮತದಾನದಲ್ಲಿ ಪಾಲ್ಗೊಂಡರೆ‌ ಕತ್ತರಿಸುತ್ತೇನೆ” ಎಂದು ಬೆದರಿಕೆ‌ ಹಾಕಿದ್ದಾನೆ ಎನ್ನಲಾಗಿದೆ. ಎದುರಾಳಿಗಳಾದ ಕಲ್ಯಾಣ್‌ ರೆಡ್ಡಿ ಹಾಗು ಆತನ ಕುಟುಂಬದವರನ್ನು ಅಟ್ಟಾಡಿಸಿ ಬೆದರಿಸಿದ್ದಾನೆ.

ಈ ಕುರಿತು ಶ್ರೀನಿವಾಸರೆಡ್ಡಿ ವಿರುದ್ಧ ಕಲ್ಯಾಣ್ ಕುಮಾರ್ ಪ್ರಾಣಬೆದರಿಕೆ ದೂರು ದಾಖಲಿಸಿದ್ದಾರೆ. ಕಲ್ಯಾಣ್ ಕುಮಾರ್ ಹಾಲಿ ಸಚಿವ ಡಾ. ಎಂ. ಸಿ‌ ಸುಧಾಕರ್ ಬೆಂಬಲಿಗರಾಗಿದ್ದು, ಚಿಂತಾಮಣಿ‌ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು

ಯಾದಗಿರಿ ನಗರದ ಶಹಾಪೂರ ಪೇಟ್ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರಿಂದ ದಲಿತ ಹಿಂದು ಯುವಕನ‌ (Murder Case ) ಹತ್ಯೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ರಾಕೇಶ್ (22) ಮೃತ ದುರ್ದೈವಿ.

ಭಾನುವಾರ ರಾತ್ರಿ ರಾಕೇಶ್‌ ಊಟ ಮಾಡಲು ಹೊರಗೆ ಬಂದಿದ್ದ. ಅನ್ಯಕೋಮಿನವರ ಮನೆಯಲ್ಲಿ ರೊಟ್ಟಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ಮನೆ ಸಮೀಪದಲ್ಲೇ ಇರುವ ರೊಟ್ಟಿ ಕೇಂದ್ರಕ್ಕೆ ರಾಕೇಶ್‌ ತೆರಳಿದ್ದ. ಈ ವೇಳೆ ಮನೆ ಬಾಗಿಲು ಬಡಿದು ರೊಟ್ಟಿ ಕೇಳಿದ್ದ, ಆದರೆ ರೊಟ್ಟಿ ಇಲ್ಲವೆಂದು ಕಳುಹಿಸಿದ್ದರು. ಮನೆಗೆ ವಾಪಸ್ ಬಂದ ರಾಕೇಶ್‌ ಖಾಲಿ ಹೊಟ್ಟೆಯಲ್ಲಿ ನಿದ್ರೆಗೆ ಜಾರಿದ್ದ.

ಸ್ವಲ್ಪ ಸಮಯದ ನಂತರ ರಾಕೇಶ್‌ ಮನೆಗೆ ಬಂದಿದ್ದ ಅನ್ಯಕೋಮಿನ ಯುವಕರು, ರೊಟ್ಟಿ ಕೇಳಲು ಮನೆಗೆ ಯಾಕೆ ಬಂದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಪ್ರಮುಖ ಆರೋಪಿ ಫೈಯಾಜ್ ಸೇರಿ ನಾಲ್ವರು ರಾಕೇಶ್‌ನ ಗುಪ್ತಾಂಗಕ್ಕೆ ಹಲ್ಲೆ ಮಾಡಿದ್ದಾರೆ. ಮಾರಣಾಂತಿಕ ಹಲ್ಲೆಗೊಳಗಾದ ರಾಕೇಶ್‌ ಉಸಿರುಚೆಲ್ಲಿದ್ದಾನೆ ಎಂದು ರಾಕೇಶ್ ತಾಯಿ ಆರೋಪಿಸಿದ್ದಾರೆ.

ಇನ್ನು ಹಿಂದು ಯುವಕನ‌ ಹತ್ಯೆ ಮರೆಮಾಚಲು ಪೊಲೀಸ್ ಇಲಾಖೆ ಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಭಾನುವಾರ ತಡರಾತ್ರಿ ಕೊಲೆ ನಡೆದಿದ್ದು, ಕೇಸ್ ದಾಖಲಿಸಿಕೊಂಡಿಲ್ಲ. ದಲಿತ ಕುಟುಂಬಕ್ಕೆ ಬಿಜೆಪಿ, ಹಿಂದು ಕಾರ್ಯಕರ್ತರು ಬೆಂಗಾವಲಾಗಿ ನಿಂತ ಕೂಡಲೇ ಎಚ್ಚೆತ್ತ ಪೊಲೀಸರು, ಕೊಲೆ ನಡೆದ 18 ಗಂಟೆಗಳ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಖುದ್ದು ಎಸ್‌ಪಿ ಜಿ.ಸಂಗೀತಾ ಅವರು ಸ್ಥಳದಲ್ಲಿ ನಿಂತು ಆಸ್ಪತ್ರೆಗೆ ರವಾನಿಸಿದ್ದರು.

ಪ್ರಕರಣ ಸಂಬಂಧ ಯಾದಗಿರಿ ಎಸ್‌ಪಿ ಜಿ.ಸಂಗೀತಾ ಪ್ರತಿಕ್ರಿಯಿಸಿ, ನಮಗೆ ಕೊಲೆ ನಡೆದಿರುವ ಬಗ್ಗೆ ಗೊತ್ತೇ ಇಲ್ಲ. ಕೊಲೆಯಾದ ಯುವಕನ ಕುಟುಂಬಸ್ಥರು ಇನ್ನೂ ಏನು ಹೇಳಿಲ್ಲ. ದೂರು ಕೊಡಿ ಎಂದರೆ ಅವರು ಬಂದಿಲ್ಲ. ಪ್ರಕರಣ ಸಂಬಂಧ ಮಾಹಿತಿ ಕೇಳಿದರೆ, ರೊಟ್ಟಿ ಕೇಂದ್ರಕ್ಕೆ ಹೋಗಿದ್ದ ಎನ್ನುತ್ತಿದ್ದಾರೆ. ಅವರ ಹಿರಿಯರ ಜತೆ ಚರ್ಚಿಸಿ ನಂತರ ಬಂದು ದೂರು ಕೊಡುತ್ತಾರೆ. ದೂರು ಕೊಟ್ಟ ನಂತರ ವಿಚಾರಣೆ ಮಾಡಿ ಆರೋಪಿಯನ್ನು ಬಂಧಿಸುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ | Car Accident: ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಮಗು ಸಾವು; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Continue Reading

ಮಳೆ

Karnataka Weather : ಬೆಂಗಳೂರು ಕರಗಕ್ಕೆ ಅಡ್ಡಿಯಾಗುತ್ತಾ ಮಳೆ; ಮತ್ತೆ ಬಿಸಿ ಗಾಳಿ ಎಚ್ಚರಿಕೆ ಕೊಟ್ಟ ತಜ್ಞರು

Rain News : ರಾಜ್ಯದ ಹಲವೆಡೆ ಸುರಿದ ಮಳೆಯಿಂದಾಗಿ ವಾತಾವರಣವು ತಂಪಾಗಿತ್ತು. ಇದೀಗ ಮತ್ತೆ ಹೀಟ್‌ ವೇವ್‌ ಅಲರ್ಟ್‌ ನೀಡಲಾಗಿದ್ದು, ಬಿಸಿ ಗಾಳಿಗೆ ಜನರು ತತ್ತರಿಸಿ ಹೋಗಲಿದ್ದಾರೆ. ಮಳೆ ಮುನ್ಸೂಚನೆ ನಡುವೆಯೂ (Karnataka Weather Forecast) ಬಿಸಿ ಗಾಳಿ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯಾದ್ಯಂತ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಹಲವೆಡೆ ಗುಡುಗು, ಸಿಡಿಲಿನ ಎಚ್ಚರಿಕೆಯನ್ನು ನೀಡಲಾಗಿದೆ. ಇದರ ಜತೆಗೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೀಟ್‌ ವೇವ್‌ ಅಲರ್ಟ್‌ ನೀಡಲಾಗಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ರಾಮನಗರ, ಮಂಡ್ಯ, ಮೈಸೂರು, ತುಮಕೂರು ರಾಮನಗರ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಒಣಹವೆ ಇರಲಿದೆ. ಉತ್ತರ ಒಳನಾಡಿನ ಹಾವೇರಿ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದೆಡೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡದಲ್ಲಿ ಚದುರಿದಂತೆ ಹಾಗೂ ಉತ್ತರ ಕನ್ನಡ, ಉಡುಪಿಯಲ್ಲಿ ಹಗುರವಾದ ಮಳೆಯಾಗಲಿದೆ.

ಇದನ್ನೂ ಓದಿ: Health Tips: ಒಂದೇ ಕಡೆ ಕೂತಿರುತ್ತೀರಾ? ಸಮಸ್ಯೆಗಳು ಒಂದೆರಡಲ್ಲ!

ಬೆಂಗಳೂರಿಗಿಲ್ಲ ಮಳೆ ಭಾಗ್ಯ

ರಾಜಧಾನಿ ಬೆಂಗಳೂರಲ್ಲಿ ಶುಷ್ಕ ಹವಾಮಾನವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂಜಾನೆ ಭಾಗಶಃ ಮೋಡ ಕವಿದ ವಾತಾವರಣ ಇದ್ರೆ, ಮಧ್ಯಾಹ್ನ ಅಥವಾ ಸಂಜೆಗೆ ಆಕಾಶವು ನಿರ್ಮಲವಾಗಿರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಮತ್ತು 24 ಡಿ.ಸೆ ಇರಲಿದೆ.

ಒಳನಾಡಿಗೆ ಬಿಸಿ ಮುಟ್ಟಿಸಲಿದೆ ಗಾಳಿ

ಬೀದರ್‌, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ, ಕೋಲಾರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಇದೆ.

ಕರಾವಳಿಯಲ್ಲಿ ಬಿಸಿ ಮತ್ತು ಆರ್ದ್ರತೆ ವಾತಾವರಣ

ಮುಂದಿನ 5 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಜತೆಗೆ ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ 30-40 ಕಿ.ಮೀ ವ್ಯಾಪ್ತಿಯಲ್ಲಿ ರಭಸವಾದ ಗಾಳಿಯು ಬೀಸಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Dina Bhavishya
ಭವಿಷ್ಯ7 mins ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Bengaluru karaga
ಕರ್ನಾಟಕ3 hours ago

Bengaluru Karaga: ಐತಿಹಾಸಿಕ ಬೆಂಗಳೂರು ಕರಗಕ್ಕೆ ಅದ್ಧೂರಿ ಚಾಲನೆ; ಉತ್ಸವ ವೀಕ್ಷಿಸಲು ಹರಿದು ಬಂದ ಜನಸಾಗರ

vistara Editorial ವಿಸ್ತಾರ ಸಂಪಾದಕೀಯ
ದೇಶ5 hours ago

ವಿಸ್ತಾರ ಸಂಪಾದಕೀಯ: ರಕ್ಷಣಾ ರಫ್ತು ಕ್ಷೇತ್ರದಲ್ಲಿ ಬೆಳವಣಿಗೆ ನಮ್ಮ ಹೆಗ್ಗಳಿಕೆ

IPL 2024
ಪ್ರಮುಖ ಸುದ್ದಿ5 hours ago

IPL 2024 : ಸ್ಟೊಯ್ನಿಸ್​​ ಶತಕ, ಚೆನ್ನೈ ವಿರುದ್ಧ 6 ವಿಕೆಟ್​ ಗೆಲವು ಸಾಧಿಸಿದ ಲಕ್ನೊ

Voters' Pledge
ಬೆಂಗಳೂರು5 hours ago

Voters Pledge: ಸಹಕಾರ ಸಂಘಗಳ ಕಾರ್ಯದರ್ಶಿಗಳು, ಸಿಬ್ಬಂದಿಗೆ ಮತದಾನ ಪ್ರತಿಜ್ಞಾವಿಧಿ ಬೋಧನೆ

Lok Sabha Election 2024
Lok Sabha Election 20246 hours ago

Lok Sabha Election 2024: ರಾಹುಲ್‌ ಗಾಂಧಿಯ ಡಿಎನ್‌ಎ ಪರೀಕ್ಷಿಸಬೇಕು; ವಿವಾದ ಹುಟ್ಟುಹಾಕಿದ ಶಾಸಕ ಅನ್ವರ್ ಹೇಳಿಕೆ

DCM DK Shivakumar Election campaign for Bangalore Rural Lok Sabha Constituency Congress candidate DK Suresh In Ramanagara
ರಾಮನಗರ6 hours ago

Lok Sabha Election 2024: ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ತಾರತಮ್ಯ ಧೋರಣೆ: ಡಿ.ಕೆ. ಸುರೇಶ್

Priyanka Gandhi
ಕರ್ನಾಟಕ6 hours ago

Priyanka Gandhi: ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಮಂಗಳಸೂತ್ರ ಉಳಿಸೋದು ಗೊತ್ತಿಲ್ಲವೇ?; ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

Lok Sabha Election 2024
Lok Sabha Election 20247 hours ago

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Amit Shah
ಕರ್ನಾಟಕ7 hours ago

Amit Shah: ಬೆಂಗಳೂರಲ್ಲಿ ಅಮಿತ್‌ ಶಾ ಹವಾ; ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 mins ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌