ಚಿತ್ರದುರ್ಗ
Accident News: ಕಾರು ಡಿಕ್ಕಿ, ಬೈಕ್ ಸವಾರ ಸಾವು
ಶಿವಗಂಗಾ ಗ್ರಾಮದ 23 ವರ್ಷದ ಆಕಾಶ್ ಮೃತ ದುರ್ದೈವಿ. ಹೊಳಲ್ಕೆರೆ ಧರ್ಮಸ್ಥಳ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ತಡರಾತ್ರಿ 12 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಚಿತ್ರದುರ್ಗ: ಕಾರು ಹಾಗೂ ಬೈಕ್ ನಡುವೆ ಭಾರಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ದುರ್ಘಟನೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೇಟ್ ಸಮೀಪ ನಡೆದಿದೆ.
ಶಿವಗಂಗಾ ಗ್ರಾಮದ 23 ವರ್ಷದ ಆಕಾಶ್ ಮೃತ ದುರ್ದೈವಿ. ಹೊಳಲ್ಕೆರೆ ಧರ್ಮಸ್ಥಳ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ತಡರಾತ್ರಿ 12 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಟಿ.ನುಲೇನೂರು ಗೇಟ್ ಸಮೀಪ ಇರುವ ಢಾಬಾಗೆ ಊಟಕ್ಕೆ ತೆರಳಿದ್ದ ಆಕಾಶ್ ಚಿತ್ರಹಳ್ಳಿ ಗೇಟ್ ದಾಟುವ ವೇಳೆ ಚಿತ್ರದುರ್ಗದ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಅಪಘಾತದಲ್ಲಿ ಕಾರು ಹಾಗೂ ಬೈಕ್ ಸಂಪೂರ್ಣ ಜಖಂ ಆಗಿವೆ. ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ: Road accident : ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಕರ್ನಾಟಕ
Hiriyur News: ಕಾಂಗ್ರೆಸ್ ಸೇರಿದ ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್; ಬಿಜೆಪಿಗೆ ಆಘಾತ
Hiriyur News: ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ ನಗರ ಸಭೆಯ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್ ಅವರನ್ನು ಮಾಜಿ ಸಚಿವ ಡಿ. ಸುಧಾಕರ್ ಅವರು ಪಕ್ಷಕ್ಕೆ ಬರ ಮಾಡಿಕೊಂಡರು.
ಹಿರಿಯೂರು: ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ನಗರಸಭೆಯ (city council) ಮಾಜಿ ಅಧ್ಯಕ್ಷ ಹಾಗೂ ಭೋವಿ ಸಮಾಜದ ನಾಯಕ ಟಿ. ಚಂದ್ರಶೇಖರ್ ಬಿಜೆಪಿಗೆ ಸದ್ದಿಲ್ಲದೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ್ದಾರೆ.
ಟಿ. ಚಂದ್ರಶೇಖರ್, ಎಸ್‌ಟಿ ಮೋರ್ಚಾ ಅಧ್ಯಕ್ಷ ಮಂಜುನಾಥ್, ತಿಮ್ಮಭೋವಿ, ರಂಗಸ್ವಾಮಿ ಸೇರಿದಂತೆ ಮತ್ತಿತರರನ್ನು ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಮಾಜಿ ಸಚಿವ ಡಿ. ಸುಧಾಕರ್ ಅವರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.
ಕಾಂಗ್ರೆಸ್‌ನಲ್ಲಿದ್ದ ಟಿ. ಚಂದ್ರಶೇಖರ್ ಅವರು, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ನಂತರ ನಗರಸಭಾ ಅಧ್ಯಕ್ಷರಾಗಿದ್ದರು. ಬಳಿಕ ನಡೆದ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಶಾಸಕಿ ಕೆ. ಪೂರ್ಣಿಮಾ ಅವರ ಪತಿ ಡಿ.ಟಿ. ಶ್ರೀನಿವಾಸ್ ಅವರ ಜತೆಗಿದ್ದ ಚಂದ್ರಶೇಖರ್ ಅವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಂತರ ಕಾಯ್ದುಕೊಂಡಿದ್ದರು. ಇದೀಗ ಗುರುವಾರ (ಮಾ.30) ರಾತ್ರಿ ಮಾಜಿ ಸಚಿವ ಡಿ. ಸುಧಾಕರ್ ಅವರು ತಮ್ಮ ಮನೆಯಲ್ಲಿಯೇ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಚಂದ್ರಶೇಖರ್ ಅವರು ಬಿಜೆಪಿ ತೊರೆದಿರುವುದರಿಂದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಹಿನ್ನಡೆ ಉಂಟಾಗಲಿದೆ ಎಂಬ ವಿಶ್ಲೇಷಣೆ ಸಹ ಈ ವೇಳೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭೋವಿ ಸಮಾಜದ ಮತಗಳು ಹೆಚ್ಚು ಬಂದಿದ್ದವು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರಿಯಾಗಲಿದೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಪಕ್ಷ ಸೇರ್ಪಡೆ ಕುರಿತು ಮಾತನಾಡಿದ ಮಾಜಿ ಸಚಿವ ಡಿ. ಸುಧಾಕರ್, ಚಂದ್ರಶೇಖರ್ ಅವರು ಕಾಂಗ್ರೆಸ್‌ನ ತತ್ತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ವಾಪಸ್ ಬಂದಿದ್ದರಿಂದ ನಮಗೆ ಆನೆ ಬಲ ಬಂದಂತಾಗಿದೆ. ಕ್ಷೇತ್ರದಲ್ಲಿ ಭ್ರಷ್ಟಾಚಾರ, ಜನ ವಿರೋಧಿ ಆಡಳಿತ ಕೊನೆಗೊಂಡಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ
Karnataka Elections : ಕೂಡ್ಲಿಗಿ ಶಾಸಕ ಗೋಪಾಲಕೃಷ್ಣ ನಾಳೆ ಬಿಜೆಪಿಗೆ ರಾಜೀನಾಮೆ, ಕಾಂಗ್ರೆಸ್‌ಗೆ ಸೇರ್ಪಡೆ
ಕೂಡ್ಲಿಗಿ ಬಿಜೆಪಿ ಶಾಸಕ ಎನ್‌ವೈ ಗೋಪಾಲಕೃಷ್ಣ ಅವರು ಶುಕ್ರವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಳಿಕ ಕಾಂಗ್ರೆಸ್ ಸೇರಿ ಮೊಳಕಾಲ್ಮುರು ಕ್ಷೇತ್ರದ (Karnataka Elections) ಅಭ್ಯರ್ಥಿಯಾಗಲಿದ್ದಾರೆ.
ಚಿತ್ರದುರ್ಗ/ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದು ಕನ್ಫರ್ಮ್ ಆಗಿದೆ. ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಚಿತ್ರದುರ್ಗದ ಮೊಳಕಾಲ್ಮುರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಕ್ಕಾ ಮಾಡಿಕೊಂಡು ಬಿಜೆಪಿ ತೊರೆಯಲಿದ್ದಾರೆ. ಮೂಲ ಕಾಂಗ್ರೆಸಿಗರಾಗಿರುವ ಎನ್‌ವೈ ಗೋಪಾಲಕೃಷ್ಣ 2018ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ಶಾಸಕರಾಗಿದ್ದರು.
ಶುಕ್ರವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ
ಗೋಪಾಲಕೃಷ್ಣ ಅವರು ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಬಳಿಕ ಬಿಜೆಪಿಯನ್ನು ತೊರೆಯಲಿದ್ದಾರೆ. ಅವರು ಶುಕ್ರವಾರ ಶಿರಸಿಗೆ ತೆರಳಿ ಅಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ನೀಡಲಿದ್ದಾರೆ.
ಎನ್.ವೈ. ಗೋಪಾಲಕೃಷ್ಣ ಅವರು ಮೂಲತಃ ಮೊಳಕಾಲ್ಮುರು ಕ್ಷೇತ್ರದವರು. ಅಲ್ಲಿ ನಾಲ್ಕು ಬಾರಿ ಗೆದ್ದಿದ್ದರು. ಈ ಬಾರಿ ಬಿಜೆಪಿ ನಾಯಕ ಶ್ರೀರಾಮುಲು ಅವರು ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸದೆ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಬರಲಿದ್ದಾರೆ. ಇದು ಗೋಪಾಲಕೃಷ್ಣ ಅವರಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ಆದರೆ, ಕಳೆದ ಬಾರಿ ಮೊಳಕಾಲ್ಮುರುವಿನಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ. ಬಿ. ಯೋಗೇಶ್ ಬಾಬುಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆಗಳಿವೆ.
ಆರು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು
ಎನ್. ಯಲ್ಲಪ್ಪ ಗೋಪಾಲಕೃಷ್ಣ ಅವರು ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನಾಲ್ಕು ಬಾರಿ ಮೊಳಕಾಲ್ಮುರುವಿನಿಂದ (1993ರಿಂದ 2013) ಶಾಸಕರಾಗಿದ್ದು, 2014ರಲ್ಲಿ ಕಾಂಗ್ರೆಸ್‌ನಿಂದ ಬಳ್ಳಾರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಅವರು 2018ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ಶಾಸಕರಾದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ನಂತರ 2018ರಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣ ಕೂಡ್ಲಿಗಿಯಿಂದ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಕಾಂಗ್ರೆಸ್‌ನಿಂದ ಟಿಕೆಟ್ ಪಕ್ಕಾ ಆಗಿದೆ
ಗೋಪಾಲಕೃಷ್ಣ ಅವರು ಎರಡು ದಿನದ ಹಿಂದೆ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಗುರುವಾರ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಜಮೀರ್ ಅಹ್ಮದ್ ನೇತೃತ್ವದಲ್ಲಿ ಜಮೀರ್ ಅಹಮದ್ ಅವರ ಮನೆಯಲ್ಲಿ ನಡೆದು ಟಿಕೆಟ್ ನೀಡಲು ಒಪ್ಪಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ ಟಿಕೆಟ್ ಸಿಗುವುದು ಪಕ್ಕಾ ಆದ ಮೇಲೆ ಗೋಪಾಲಕೃಷ್ಣ ಅವರು ಬಿಜೆಪಿ ಮತ್ತು ಶಾಸಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಅವರು ಪ್ರಕಟಿಸಿದರು.
ಇದನ್ನೂ ಓದಿ : Karnataka Election: ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ರಾಜೀನಾಮೆ ಅಂಗೀಕಾರ
ಕರ್ನಾಟಕ
Karnataka Election 2023: ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತ; ಎಚ್‌ಡಿಕೆ ಸಿಎಂ ಆಗಲು ನನ್ನನ್ನು ಬೆಂಬಲಿಸಿ: ರವೀಂದ್ರಪ್ಪ
ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತ ನೀಡುತ್ತದೆ. ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡಲಾಗುತ್ತದೆ. ವಯಸ್ಸಾದವರಿಗೆ ವೃದ್ಧಾಪ್ಯ ವೇತನ ಹೆಚ್ಚಳ, ರೈತರ ಮಕ್ಕಳನ್ನು ಮದುವೆ ಆದವರಿಗೆ ಎರಡು ಲಕ್ಷ ಹಣವನ್ನು ಖಾತೆಗೆ ನೀಡಲಾಗುವುದು ಎಂದು ಪಕ್ಷದ ಅಭ್ಯರ್ಥಿ ರವೀಂದ್ರಪ್ಪ ತಿಳಿಸಿದ್ದಾರೆ.
ಹಿರಿಯೂರು: ಜೆಡಿಎಸ್ ಬಡವರ ಪರವಾಗಿ ಇರುವ ಪಕ್ಷ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕ್ಷೇತ್ರದ ಅಭ್ಯರ್ಥಿಯಾಗಿರುವ ನನ್ನನ್ನು ಬೆಂಬಲಿಸುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಲ ನೀಡಿ ಎಂದು ನಿವೃತ್ತ ಮುಖ್ಯ ಎಂಜಿನಿಯರ್ ರವೀಂದ್ರಪ್ಪ ಹೇಳಿದರು.
ನಗರದ ನಂಜಯ್ಯನ ಕೊಟ್ಟಿಗೆ ಸೇರಿದಂತೆ ವಿವಿಧ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, “ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತ ನೀಡುತ್ತದೆ. ಕ್ಷೇತ್ರದಲ್ಲಿ ಮೂರು ಬಾರಿ ಪಕ್ಷಕ್ಕೆ ಶಿಕ್ಷೆ ವಿಧಿಸಿದ್ದೀರಿ, ನಾಲ್ಕನೇ ಬಾರಿಗೆ ನಿಮ್ಮ ಮುಂದೆ ಬಂದಿದ್ದೇವೆ. ಅವಕಾಶ ಮಾಡಿಕೊಡಿ” ಎಂದು ತಿಳಿಸಿದರು.
ಇದನ್ನೂ ಓದಿ: IPL 2023: ಐಪಿಎಲ್ನಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ
“ನಾನು ಇಲ್ಲಿನ ಸ್ಥಳೀಯ ಅಭ್ಯರ್ಥಿ, ದಿನ ಬೆಳಗಾದರೆ ನಿಮ್ಮ ಕೈಗೆ ಸಿಗುತ್ತೇನೆ. ಚಳ್ಳಕೆರೆ ಹಾಗೂ ಬೆಂಗಳೂರಿಗೆ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಈ ಕ್ಷೇತ್ರದ ಮಣ್ಣಿನ ಮಗನಿಗೆ ಜನ ಸೇವೆ ಮಾಡಲು ಅವಕಾಶ ನೀಡಿ” ಎಂದರು.
“ಹಿಂದೆ ಡಿ. ಮಂಜುನಾಥ್ ಅವರನ್ನು ಗೆಲ್ಲಿಸಿದ್ದು ಬಿಟ್ಟರೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ. ಮೂರು ಬಾರಿ ಪಕ್ಷವನ್ನು ತಿರಸ್ಕರಿಸಲಾಗಿದೆ. ಈ ಚುನಾವಣೆಯಲ್ಲಿ ಒಂದು ಅವಕಾಶ ನೀಡಿ” ಎಂದರು.
“ಜೆಡಿಎಸ್ ಅಭಿವೃದ್ಧಿಯ ಪರವಾಗಿರುವ ಪಕ್ಷವಾಗಿದೆ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡಲಾಗುತ್ತದೆ. ವಯಸ್ಸದಾವರಿಗೆ ವೃದ್ಧಾಪ್ಯ ವೇತನ ಹೆಚ್ಚಳ, ರೈತರ ಮಕ್ಕಳನ್ನು ಮದುವೆ ಆದವರಿಗೆ ಎರಡು ಲಕ್ಷ ಹಣವನ್ನು ಖಾತೆಗೆ ನೀಡಲಾಗುವುದು. ಇಂತಹ ಹತ್ತು ಹಲವಾರು ಯೋಜನೆಗಳು ಜಾರಿಗೆ ಬರಲಿವೆ” ಎಂದು ತಿಳಿಸಿದರು.
“ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗಳು ಪಂಚೇಂದ್ರಿಯಗಳು ಇದ್ದಂತೆ. ಈ ಯೋಜನೆಗಳಲ್ಲಿ ರೈತ ಶಕ್ತಿ ಉದ್ಯೋಗ, ಸ್ತ್ರೀ ಸಬಲೀಕರಣ, ಶಿಕ್ಷಣ, ಆರೋಗ್ಯ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ” ಎಂದರು.
ಇದನ್ನೂ ಓದಿ: Bypolls 2023: ಪಂಜಾಬ್, ಯುಪಿ, ಮೇಘಾಲಯ, ಒಡಿಶಾ ರಾಜ್ಯದ 5 ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆ
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಜೆಜಿ ಹಳ್ಳಿ ಮಂಜುನಾಥ್, ರಾಮಮೂರ್ತಿ, ದಿನೇಶ್ ಸೇರಿದಂತೆ ಇತರರು ಇದ್ದರು.
ಕರ್ನಾಟಕ
Hosadurga News: ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ; ರೈತರ ಸಮಸ್ಯೆ ಕೇಳೋರಿಲ್ಲ
Hosadurga News: ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆಯಿಂದಾಗಿ ರೈತರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಖರೀದಿ ಕೇಂದ್ರಕ್ಕೆ ರಾಗಿ ತಂದು ನಾಲ್ಕು ದಿನವಾದರೂ ತೂಕಕ್ಕೆ ಹಾಕುತ್ತಿಲ್ಲ. ದಲ್ಲಾಳಿಗಳ ಹಾವಳಿ ಮಿತಿಮೀರಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.
ಹೊಸದುರ್ಗ: ರಾಗಿ ಖರೀದಿ ಕೇಂದ್ರದಲ್ಲಿ (ragi procurement centre) ಸರಿಯಾದ ವ್ಯವಸ್ಥೆಗಳಿಲ್ಲದೆ, ರೈತರು ಪರದಾಡುವಂತಾಗಿದೆ. ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಉಂಟಾಗಿದೆ. ರೈತರ ಗೋಳು ಕೇಳೋರಿಲ್ಲ ಎನ್ನುವಂತಾಗಿದೆ.
ರಾಗಿ ಮಾರಲು ಬಂದು ನಾಲ್ಕು ದಿನವಾದರೂ ತೂಕ ಹಾಕುವ ಹಾಗಿಲ್ಲ. ಸಂಜೆ 4 ಗಂಟೆಯಾದರೂ ಒಂದು ಚೀಲ ರಾಗಿ ಇಳಿಸಲ್ಲ. ಸೀನಿಯಾರಿಟಿ ಪಾಲನೆ ಮಾಡುತ್ತಿಲ್ಲ. ರೈತರ ಬದಲಾಗಿ ದಲ್ಲಾಳಿಗಳು ರಾಗಿಯನ್ನು ಮೊದಲು ತೂಕ ಮಾಡುತ್ತಾರೆ. ಲಾರಿಗೆ ಲೋಡ್ ಮಾಡಲು ಇಲ್ಲಿ ಹಮಾಲರದ್ದೇ ಪಾರುಪತ್ಯ. ರೈತರ ವಾಹನಗಳಿಗೆ ರಕ್ಷಣೆ ಇಲ್ಲ. ಕುಡಿಯಲು ನೀರಿಲ್ಲ. ಬೀದಿ ದೀಪ ಇಲ್ಲ. ರಾತ್ರಿ ವೇಳೆ ಬ್ಯಾಟರಿ ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ನಿಗಮದ ವ್ಯವಸ್ಥಾಪಕ ಶಿವಕುಮಾರ್ ಅವರು ಕೇಂದ್ರಕ್ಕೆ ಆಗಮಿಸಿದಾಗ ರೈತರು ಮುತ್ತಿಗೆ ಹಾಕಿ ಪ್ರಶ್ನಿಸಿದರು.
ಇದನ್ನೂ ಓದಿ: Weekend With Ramesh: ʻನಾನು ಆಡೋದೇ ಇಲ್ಲ.. ನನ್ನ ಬಾಡಿನೇ ಆಡೋದುʼ ಎಂದ ಪ್ರಭುದೇವ: ಹೇಗಿದೆ ಪ್ರೋಮೊ?
“ಸರ್ಕಾರದ ಪ್ರಕಾರ 50 ಕೆ.ಜಿ ರಾಗಿ ತೂಗಬೇಕು. ಆದರೆ 52 ಕೆಜಿ ರಾಗಿ ತೂಗುತ್ತಾರೆ. ತೂಕ ಕಡಿಮೆ ಇದ್ದರೆ ಅನ್ಲೋಡ್ ಮಾಡಲ್ಲ. 50 ಕೆ.ಜಿ ತೂಕ ಚೀಲವನ್ನು ಅನ್ಲೋಡ್ ಮಾಡಿ ಜರಡಿಗೆ ಹಾಕಲು ಹಮಾಲರು ಕಳೆದ ಬಾರಿ 15 ರೂ. ತೆಗೆದುಕೊಳ್ಳುತ್ತಿದ್ದರು. ಈ ಬಾರಿ 40 ರೂ. ಮಾಡಿದ್ದಾರೆ. ಇನ್ನು ಕ್ವಾಲಿಟಿ ಚೆಕ್ ಮಾಡುವವರಿಗೆ 200 ರೂ. ಕೊಡಬೇಕು. ಚೀಟಿ ಕೊಡುವವರಿಗೆ 500 ರೂ. ಕೊಡಬೇಕು. ಒಟ್ಟಾರೆ ಹೆಚ್ಚಿಗೆ ತೂಗಿದ 2 ಕೆಜಿ ರಾಗಿಗೆ ಹಣ ಕೊಡಬೇಕು ಅಥವಾ ರಾಗಿ ವಾಪಸ್ ನೀಡಬೇಕು” ಎಂದು ಕೊಂಡಜ್ಜಿ ಗ್ರಾಮದ ರೈತ ಶಶಿಧರ್ ಹೇಳಿದರು.
ಇದನ್ನೂ ಓದಿ: SC ST Reservation: ಮುಂದುವರಿದ ಬಂಜಾರರ ಆಕ್ರೋಶ; ಶಿವಮೊಗ್ಗ, ದಾವಣಗೆರೆಯಲ್ಲಿ ಪ್ರತಿಭಟನೆ ಬಿಸಿ
ಇದಕ್ಕೆ ಪ್ರತಿಕ್ರಿಯಿಸಿದ ವ್ಯವಸ್ಥಾಪಕ ಶಿವಕುಮಾರ್, “ಹೆಚ್ಚಿಗೆ ತೂಕ ಮಾಡಲು ಹಾಗೂ ಹಣ ತೆಗೆದುಕೊಳ್ಳಲು ನಾವು ಹೇಳಲಿಲ್ಲ. ನಮಗೂ ಹಮಾಲರಿಗೂ ಸಂಬಂಧವಿಲ್ಲ. ಹಾಗೇನಾದರೂ ಹಣ ಸುಲಿಗೆ ಮಾಡಿದ್ದರೆ ಅಂತಹವರನ್ನು ಸಸ್ಪೆಂಡ್ ಮಾಡುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: DCGI : ನಕಲಿ ಔಷಧ ತಯಾರಿಸಿದ 18 ಕಂಪನಿಗಳ ಲೈಸೆನ್ಸ್ ರದ್ದು
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ6 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ7 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಪ್ರಮುಖ ಸುದ್ದಿ15 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕ್ರಿಕೆಟ್22 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್22 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ18 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್19 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ