Karnataka Election: ಬಿಜೆಪಿ ಆಡಳಿತ ವಿರೋಧಿ ಅಲೆ ನನ್ನ ಗೆಲುವಿಗೆ ಶ್ರೀರಕ್ಷೆ: ಕಾಂಗ್ರೆಸ್‌ ಅಭ್ಯರ್ಥಿ ಡಿ. ಸುಧಾಕರ್ - Vistara News

ಚಿತ್ರದುರ್ಗ

Karnataka Election: ಬಿಜೆಪಿ ಆಡಳಿತ ವಿರೋಧಿ ಅಲೆ ನನ್ನ ಗೆಲುವಿಗೆ ಶ್ರೀರಕ್ಷೆ: ಕಾಂಗ್ರೆಸ್‌ ಅಭ್ಯರ್ಥಿ ಡಿ. ಸುಧಾಕರ್

Karnataka Election: ಹಿರಿಯೂರು ಕಾಂಗ್ರೆಸ್‌ ಅಭ್ಯರ್ಥಿ ಡಿ.ಸುಧಾಕರ್‌ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅವರು ಬಿಜೆಪಿ ಆಡಳಿತ ವಿರೋಧಿ ಅಲೆಯೇ ತಮಗೆ ಶ್ರೀರಕ್ಷೆ ಆಗಲಿದೆ ಎಂದು ಹೇಳಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಿರಿಯೂರು: ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ಮಾಜಿ ಸಚಿವ, ಹಿರಿಯೂರು ಕಾಂಗ್ರೆಸ್ ಅಭ್ಯರ್ಥಿ (Karnataka Election) ಡಿ. ಸುಧಾಕರ್ ಹೇಳಿದರು.

ಬುಧವಾರ ಚುನಾವಣಾ ಕಛೇರಿಗೆ ತೆರಳಿ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2018ರಲ್ಲಿ ಸೋತರೂ ಕ್ಷೇತ್ರದ ಶಾಸಕನ ಹೇಗೆಯೇ ಜನರ ಜತೆ ನಿಂತಿದ್ದೇನೆ. ಪ್ರತಿ ವಾರ ಹಳ್ಳಿಗಳಲ್ಲಿ ಸುತ್ತಾಡಿದ್ದೇನೆ. ನನ್ನ ಕಚೇರಿಯಲ್ಲಿ ಕುಳಿತು ಜನರ ಕಷ್ಟಗಳನ್ನು ಆಲಿಸಿ, ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸಿದ್ದೇನೆ. ಈ ಕ್ಷೇತ್ರದ ಮತದಾರರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ, ತಾಲೂಕಿನ ಜನತೆಗೆ ಸ್ವಚ್ಛ ಮತ್ತು ದಕ್ಷ ಆಡಳಿತವನ್ನು ಕೊಡುತ್ತೇನೆ. ಭ್ರಷ್ಟಾಚಾರ ರಹಿತವಾಗಿ, ಬಡವರಿಗೆ ನ್ಯಾಯಯುತ ಆಡಳಿತ ಕೊಡುತ್ತೇನೆ” ಎಂದರು.

“ಎದುರಾಳಿ ಆಗಿರುವುದು ಯಾವ ಪಕ್ಷ ಎಂದು ನನಗೆ ಗೊತ್ತಿಲ್ಲ. ಹಿಂದೆ ಹತ್ತು ವರ್ಷಗಳ ಕಾಲ ಶಾಸಕರಾಗಿದ್ದಾಗ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗಿದೆ. ನಾನೇ ಗೆಲ್ಲುತ್ತೇನೆ ಎಂದು ಕ್ಷೇತ್ರದಲ್ಲಿ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಒಳ್ಳೇ ಮಾರ್ಜಿನ್‌ನಿಂದ ಗೆಲ್ಲುತ್ತೇನೆ. ನನ್ನ ಕ್ಷೇತ್ರದ ಮತದಾರರು ಅಭೂತಪೂರ್ವ ಗೆಲುವು ಕೊಡುತ್ತಾರೆ ಎಂಬ ನಿರೀಕ್ಷೆ ಇದೆ” ಎಂದು ಗೆಲುವಿನ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Elections 2023 : ನಾಮಪತ್ರ ಸಲ್ಲಿಕೆಗೆ ಸುಧಾಕರ್‌ ರೆಡಿ; ಅಮ್ಮ, ಮನೆ ದೇವರ ಆಶೀರ್ವಾದ ಪಡೆದ ಆರೋಗ್ಯ ಸಚಿವ

ಇದಕ್ಕೂ ಮುನ್ನ ನಗರದ ತೇರು ಮಲ್ಲೇಶ್ವರ ದೇವಾಲಯ,‌ ನೇಕ್ ಬಿಬಿ ದರ್ಗಾ, ಚರ್ಚ್, ಮಸೀದಿ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ತೆರಳಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಾವಿರಾರು ಕಾರ್ಯಕರ್ತರೊಂದಿಗೆ ನಗರದ ರಂಜಿತಾ ಹೋಟೆಲ್‌ನಿಂದ ರೋಡ್ ಶೋ ನಡೆಸಿದರು. ಮಾಜಿ ಸಚಿವ ಡಿ.ಸುಧಾಕರ್ ಅವರಿಗೆ ಪತ್ನಿ ಹರ್ಷಿಣಿ ಸುಧಾಕರ್, ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು.

2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿ, ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿ ಸಚಿವರಾಗಿದ್ದ ಸುಧಾಕರ್ ಅವರು 2013ರಲ್ಲಿ ದಿವಂಗತ ಮಾಜಿ ಸಚಿವ ಎ. ಕೃಷ್ಣಪ್ಪ ವಿರುದ್ಧ ಕೂದಲೆಳೆ ಅಂತರದಲ್ಲಿ ಮತ್ತೊಮ್ಮೆ ಜಯ ಸಾಧಿಸಿದ್ದರು. ನಂತರ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸೋಲು ಕಂಡಿದ್ದರು. ಇದೀಗ ಐದನೇ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಕೂಲ್‌ ಆದ ಬೆಂಗಳೂರು; ನಾಳೆಗೆ ಉತ್ತರ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರ

Karnataka Weather Forecast : ಬೆಂಗಳೂರಿನಲ್ಲಿ ಜೋರಾಗಿ ಗಾಳಿ ಬೀಸಲಿದ್ದು, ವಾತಾವರಣ ಕೂಲ್‌ ಆಗಿರಲಿದೆ. ನಾಳೆಯೂ ಉತ್ತರ ಕನ್ನಡ ಸೇರಿದಂತೆ ಹಲವೆಡೆ ಮಳೆಯಾಗುವ (Rain News) ನಿರೀಕ್ಷೆ ಇದೆ.

VISTARANEWS.COM


on

By

karnataka weather Forecast
Koo

ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು (Karnataka Weather Forecast) ದುರ್ಬಲವಾಗಿತ್ತು. ಕರಾವಳಿ ಬಹುತೇಕ ಕಡೆಗಳಲ್ಲಿ (Rain News) ಮಳೆಯಾಗಿದೆ. ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡು ಮೂಲಕ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್‌ನಲ್ಲಿ 7 ಸೆಂ.ಮೀ ಮಳೆಯಾಗಿದೆ. ಜಗಲಬೆಟ್, ಲೋಂಡಾದಲ್ಲಿ 6, ಕದ್ರಾ 5 ಸೆಂ.ಮೀ ಮಳೆಯಾಗಿದೆ.

ಯಲ್ಲಾಪುರ, ಸಿದ್ದಾಪುರ, ಬೆಳಗಾವಿ ಪಿಟಿಒ, ಕಮ್ಮರಡಿ 3 ಸೆಂ.ಮೀ, ಮಂಕಿ, ಗೇರ್ಸೊಪ್ಪ, ಕಾರವಾರ ವೀಕ್ಷಣಾಲಯ, ಬನವಾಸಿಯಲ್ಲಿ 2 ಸೆಂ.ಮೀ ಮಳೆಯಾಗಿದೆ. ಸಿದ್ದಾಪುರ, ಗೋಕರ್ಣ, ಧರ್ಮಸ್ಥಳ, ಬೆಳ್ತಂಗಡಿ, ಹಳಿಯಾಳ, ಉಪ್ಪಿನಂಗಡಿ, ಔರಾದ್ , ಬೆಳಗಾವಿ ವಿಮಾನ ನಿಲ್ದಾಣ ವೀಕ್ಷಣಾಲಯ, ಸೋಮವಾರಪೇಟೆ, ಶೃಂಗೇರಿ ಎಚ್‌ಎಂಎಸ್, ಲಿಂಗನಮಕ್ಕಿ ಎಚ್‌ಎಂಎಸ್‌ನಲ್ಲಿ 1 ಸೆಂ.ಮೀ ಮಳೆಯಾಗಿದೆ.

ಮುಂದುವರಿಯಲಿದೆ ಮಳೆ ಅಬ್ಬರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯೊಂದಿಗೆ ನಿರಂತರ ಗಾಳಿಯ ವೇಗ 30-40 ಕಿ.ಮೀ ಬೀಸುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯ ಬಹುತೇಕ ಕಡೆಗಳಲ್ಲಿ ಗಾಳಿ ಸಹಿತ ಲಘುವಾಗಿ ಮಧ್ಯಮ ಮಳೆಯಾಗಲಿದೆ. ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಬೆಂಗಳೂರಲ್ಲಿ ಹಗುರ ಮಳೆ

ಮುಂದಿನ 24 ಗಂಟೆಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗವು 40-50 ಕಿ.ಮೀ ತಲುಪುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 21 ಡಿ.ಸೆ ಇರಲಿದೆ.

ಇದನ್ನೂ ಓದಿ: Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ಹೊರ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿದ್ದು, ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಹಂಚಿನಾಳ, ಯರಗೋಡಿ, ಕಡದರಗಡ್ಡಿ, ಯಳಗುಂದಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ನಡುಗಡ್ಡೆಯಲ್ಲಿ ವಾಸಿಸುವ ಜನರಿಗೆ ಸಂಪೂರ್ಣ ಜಲದಿಗ್ಭಂಧನ ಹಾಕಲಾಗಿದೆ. ರೈತರ ಪಂಪ್ ಸೆಟ್, ಪೈಪ್‌ಗಳು ಮುಳುಗಡೆಯಾಗಿದೆ.

ಇದೇ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿಕೊಂಡು ಕುರಿಗಾಹಿಗಳು ಪೇಚಿಗೆ ಸಿಲುಕಿದರು. ಮುಳುಗಡೆಯಾದ ಶೀಲಹಳ್ಳಿ ಸೇತುವೆ ಬಳಿಯ ಗುಡ್ಡದಲ್ಲಿ ಕುರಿಗಳನ್ನು ಮೇಯಲುಬಿಟ್ಟು,ಮೂವರು ಕುರಿಗಾಹಿಗಳು ಬೆಟ್ಟ ಇಳಿದಿದ್ದರು. ಈ ವೇಳೆ ಧುಮ್ಮಿಕ್ಕಿ ಹರಿಯಿತ್ತಿರುವ ನದಿ ನೋಡಿ‌ ಬೆಚ್ಚಿ ಬಿದ್ದರು. ಕೆಲಹೊತ್ತು ಹೇಗೆ ಸುರಕ್ಷಿತವಾಗಿ ಸ್ಥಳ ತಲುಪ ಬೇಕೆಂದು ಗೊತ್ತಾಗದೇ ಕಂಗಾಲಾಗಿದ್ದರು. ಸುಮಾರು ಒಂದು ಗಂಟೆ ಬೆಟ್ಟದಲ್ಲೇ ಅತ್ತಿತ್ತ ಓಡಾಡಿ, ಬಳಿಕ ಮತ್ತೊಂದು ದಡದಲ್ಲಿ ವ್ಯಕ್ತಿಯೊಬ್ಬ ಸೂಚಿಸಿದ ದಿಕ್ಕಿನತ್ತ ಹೊರಟು ಹೋದರು.

ಇತ್ತ ತುಂಗಭದ್ರಾ ಡ್ಯಾಂನಿಂದ 1,50,000 ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಿರುವುದರಿಂದ ರಾಯಚೂರಿನ ಎಲೆಬಿಚ್ಚಾಲಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ರಾಯರ ಜಪದ ಕಟ್ಟೆಗೆ ಮುಳುಗಿದೆ. ಜಪದ ಕಟ್ಟೆ ಬಳಿ ತೆರಳದಂತೆ ಆಡಳಿತ ಮಂಡಳಿ ಬ್ಯಾರಿಕೇಡ್ ಅಳವಡಿಸಿ-ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ. ರಾಯಚೂರಿನ ಕೃಷ್ಣಾ ತೀರದ ಮತ್ತೊಂದು ದೇವಸ್ಥಾನ ಜಲಾವೃತಗೊಂಡಿದೆ. ಕೊಪ್ಪರದಲ್ಲಿರೊ ಲಕ್ಷ್ಮೀ ನರಸಿಂಹ ದೇವಸ್ಥಾನ ಮುಳುಗುಡೆಯಾಗಿದೆ. ದೇವಸ್ಥಾನ ಜಲಾವೃತ ಹಿನ್ನೆಲೆ ಅರ್ಚಕರು ನೀರಲ್ಲೇ ನಡೆದುಕೊಂಡು ಹೋಗಿ ಪೂಜಾ ಕೈಂಕರ್ಯ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿತ್ರದುರ್ಗ

Theft Case : ಹಂದಿ ಕಳವು ವೇಳೆ ಪೊಲೀಸರಿಗೆ ಕಲ್ಲು ತೂರಿ ಎಸ್ಕೇಪ್‌ ಆಗಿದ್ದ ಆಂಧ್ರ ಗ್ಯಾಂಗ್‌ನ ಸದಸ್ಯ ಅರೆಸ್ಟ್‌

Theft Case : ಚಿತ್ರದುರ್ಗದಲ್ಲಿ ಅನುಮಾನಸ್ಪಾದವಾಗಿ ಓಡಾಡುತ್ತಿದ್ದ ಬೊಲೆರೋ ವಾಹನವನ್ನು ಅಡ್ಡಗಟ್ಟಲು ಮುಂದಾದ ಪೊಲೀಸ್‌ ಜೀಪ್‌ ಮೇಲೆ ಕಳ್ಳರು ಕಲ್ಲು ತೂರಿ ಎಸ್ಕೇಪ್‌ ಆಗಿದ್ದರು. ಇದೀಗ ಪರಾರಿ ಆಗಿದ್ದ ಆಂಧ್ರ ಗ್ಯಾಂಗ್‌ನ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

theft case
Koo

ಚಿತ್ರದುರ್ಗ : ಪೊಲೀಸರ ಮೇಲೆ (Theft Case) ಕಲ್ಲು ತೂರಿ ಆಂಧ್ರದ ಡೆಡ್ಲಿ ಕಳ್ಳರ ಗ್ಯಾಂಗ್‌ವೊಂದು ಎಸ್ಕೇಪ್‌ ಆಗಿತ್ತು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಘಟನೆ ನಡೆದಿತ್ತು. ಪೊಲೀಸರು ಏರ್ ಫೈರ್ ಮಾಡಿದರೂ ಜಗ್ಗದೆ ತಪ್ಪಿಸಿಕೊಂಡಿದ್ದರು. ಇದೀಗ ಒಂದೇ ವಾರದಲ್ಲಿ ಪ್ರಕರಣ ಭೇದಿಸಿದ ನಾಯಕನಹಟ್ಟಿ ಪೊಲೀಸರು, ಆಂಧ್ರ ಗ್ಯಾಂಗ್‌ನ ಓರ್ವನನ್ನು ಸೆರೆಹಿಡಿದಿದ್ದಾರೆ. ‌

ಆಂಧ್ರ ಗ್ಯಾಂಗ್‌ವೊಂದು ಕಳೆದ ಶನಿವಾರ ರಾತ್ರಿ ನಾಯಕನಹಟ್ಟಿಯಲ್ಲಿ ಹಂದಿ ಕಳ್ಳತನಕ್ಕೆ ಬಂದಿತ್ತು. ಹಂದಿ ಕಳ್ಳತನಕ್ಕೆ ಬಂದಿದ್ದ ಒರ್ವ ಶಂಕಿತ ಆರೋಪಿ ಅರೆಸ್ಟ್ ಆಗಿದ್ದ. ಆಂಧ್ರ ಮೂಲದ ಆನಂತಪುರ ನಗರದ ರಮಣ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುದಾಪುರ ಗ್ರಾಮದಲ್ಲಿ ಸ್ಥಳ ಮಹಜರ್ ನಡೆಸಿದ್ದಾರೆ.

ಬೊಲೆರೋ ವಾಹನದಲ್ಲಿ ಹಂದಿ ಕಳ್ಳತನಕ್ಕೆ ಬಂದಿದ್ದ 7 ಮಂದಿ ಕಳ್ಳರು ಪೊಲೀಸರಿಗೆ ಚಳ್ಳೇಹಣ್ಣು ತಿನಿಸಿ ಎಸ್ಕೇಪ್‌ ಆಗಿದ್ದರು. ಮಾತ್ರವಲ್ಲ ಹಿಡಿಯಲು ಬಂದ ಪೊಲೀಸರಿಗೆ ಕಲ್ಲು ತೂರಿದ್ದರು. ಈ ವೇಳೆ ಪಿಎಸ್‌ಐ ಶಿವಕುಮಾರ್ 4 ಸುತ್ತು ಏರ್ ಫೈರ್ ಮಾಡಿ, 25 ಕಿ.ಮೀ ದೂರ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದರು. ಕೊನೆಗೂ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜತೆಗೆ ಕಳ್ಳತನಕ್ಕೆ ಬಳಸಿದ್ದ ಬೊಲೆರೋ ಪಿಕಪ್ ವಾಹನ ಸೀಸ್ ಮಾಡಿದ್ದಾರೆ. ಉಳಿದ 7 ಮಂದಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Murder case : ಊಟ ಕೊಡಿಸುವ ನೆಪದಲ್ಲಿ ಕರೆದೊಯ್ದು ಮಹಿಳೆಯನ್ನು ಕೊಂದು, ಸುಟ್ಟು ಹಾಕಿದ ಕಿರಾತಕ

ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಹಂದಿ ಕಳ್ಳರು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಪೊಲೀಸ್‌ ಜೀಪ್ ಮೇಲೆ ಕಲ್ಲು ತೂರಿ ಕಳ್ಳರು ಕಾಲ್ಕಿತ್ತಿದ್ದರು. ಪೊಲೀಸರು ಏರ್ ಫೈರ್ ಮಾಡಿದರೂ ಜಗ್ಗದೆ ತಪ್ಪಿಸಿಕೊಂಡಿದ್ದರು. ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿ ಕಳ್ಳರನ್ನು ಹಿಡಿಯಲು ಪೊಲೀಸರು ಬೊಲೆರೋ ವಾಹನವನ್ನು ಅಡ್ಡ ಹಾಕಿದ್ದರು. ಈ ವೇಳೆ ಕಳ್ಳರು ಪೊಲೀಸರ ಮೇಲೆ ಕಲ್ಲು ತೂರಿದ್ದರು. ಏಕಾಏಕಿ ಕಳ್ಳರು ದಾಳಿ ಮಾಡಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಏರ್ ಫೈರಿಂಗ್ ಮಾಡಿದ್ದರು.

ಇನ್ನೂ ಕಳ್ಳರು ಕಲ್ಲು ತೂರಿದ್ದರಿಂದ ಪೊಲೀಸರ ಜೀಪಿನ ಗ್ಲಾಸ್ ಡ್ಯಾಮೇಜ್ ಆಗಿತ್ತು. ಸುಮಾರು 7 ಮಂದಿ ಗ್ಯಾಂಗ್‌ ಆಂಧ್ರಪ್ರದೇಶದ ರಿಜಿಸ್ಟ್ರೇಷನ್‌ ಹೊಂದಿದ್ದ ಬೊಲೆರೋ ವಾಹನದಲ್ಲಿ ಬಂದಿದ್ದರು. ಇದನ್ನೂ ಗಮನಿಸಿದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು, ತಡೆದು ಪರಿಶೀಲನೆಗೆ ಮುಂದಾಗಿದ್ದರು. ಈ ವೇಳೆ ಗಾಡಿ ನಿಲ್ಲಿಸದೇ ಖತರ್ನಾಕ್‌ ಕಳ್ಳರು, ಪೊಲೀಸರಿಗೆ ಕಲ್ಲು ತೂರಿದ್ದರು.

ದರೋಡೆಕೋರರು ಎಂಬ ಅನುಮಾನದಿಂದ ಪೊಲೀಸರು ಅಲರ್ಟ್ ಆಗಿದ್ದರು. ಬೊಸೇ ದೇವರಹಟ್ಟಿ, ಕೋಟೆ ನಗರ ಒಳ ಮಾರ್ಗದಲ್ಲಿ ಕುದಾಪುರ ಕಡೆ ಬರುತ್ತಿದ್ದ ಕಳ್ಳರಿಗೆ, ಪೊಲೀಸರು ಮನಮಯ್ಯನಹಟ್ಟಿ ಕುದಾಪುರ ಒಳ ಮಾರ್ಗದಲ್ಲಿ ಎದುರಾಗಿದ್ದರು. ನಾಯಕನಹಟ್ಟಿ ಠಾಣೆ ಪಿಎಸ್‌ಐ ಶಿವಕುಮಾರ್ ತಂಡ ಬೊಲೆರೋ ವಾಹನದಲ್ಲಿ ಬಂದಿದ್ದ ಕಳ್ಳರನ್ನು ಹಿಡಿಯಲು ಯತ್ನಿಸಿದ್ದರು. ಆದರೆ ಹಿರೇಹಳ್ಳಿ, ಬೇಡರೆಡ್ಡಿಹಳ್ಳಿ, ಬುಕ್ಕಂಬೂದಿ ಮಾರ್ಗದಲ್ಲಿ ಕಳ್ಳರು ಎಸ್ಕೇಪ್ ಆಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

Elephant attack : ಭಾರಿ ಮಳೆಗೆ (Karnataka Rain) ಜನರು ತತ್ತರಿಸಿ ಹೋಗಿದ್ದಾರೆ. ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ ಶುರುವಾಗಿದೆ. ಇತ್ತ ನದಿಗಳು ಉಕ್ಕಿ ಹರಿಯುತ್ತಿದ್ದು 150 ಮನೆಗಳು ಜಲಾವೃತಗೊಂಡಿದೆ.

VISTARANEWS.COM


on

By

Elephant attack
Koo

ಚಿಕ್ಕಮಗಳೂರು: ಮಳೆ (Karnataka Rain) ಮಧ್ಯೆ ಮಲೆನಾಡಲ್ಲಿ ಕಾಡಾನೆಗಳ ಕಾಟ (Elephant attack) ಶುರುವಾಗಿದೆ. 18 ಕಾಡಾನೆಗಳ ಹಿಂಡಿನಿಂದ ಮಲೆನಾಡಿಗರು ಕಂಗಾಲಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಪುರ, ಗಬ್ಬಳ್ಳಿ, ಕಾರ್ಬೈಲು ಗ್ರಾಮ ಸುತ್ತಮುತ್ತ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗುತ್ತಿದೆ.

ದಿನಕ್ಕೊಂದು ಹಳ್ಳಿಯಲ್ಲಿ ಕಾಡಾನೆಗಳು ಕಾಣಿಸುಕೊಳ್ಳುತ್ತಿದ್ದು, ಕಾಫಿ ತೋಟಗಳನ್ನು ನಾಶ ಮಾಡುತ್ತಿವೆ. ಮಳೆಯಿಂದ ನಾನಾ ಅವಾಂತರವೇ ಸೃಷ್ಟಿಯಾಗಿದೆ. ಇದೀಗ ಮತ್ತೆ ಕಾಡಾನೆಗಳ ದಾಳಿಯಿಂದ ಜನರು ಕಂಗಾಲಾಗಿದದಾರೆ. ಆನೆಗಳನ್ನ ಓಡಿಸುವಂತೆ ಮೂಡಿಗೆರೆಯ ಗ್ರಾಮೀಣ ಭಾಗದ ಜನರು ಆಗ್ರಹಿಸಿದ್ದಾರೆ.

ಮಳೆಗೆ ಮನೆಗಳಿಗೆ ನುಗ್ಗುತ್ತಿರುವ ಹಾವುಗಳು

ಕೊಪ್ಪಳದಲ್ಲಿ ವ್ಯಾಪಕ ಮಳೆಗೆ ಆಶ್ರಯ ಪಡೆಯಲು ಮನೆಗಳಿಗೆ, ಗುಡಿಸಲಿಗೆ ಹಾವುಗಳು ನುಗ್ಗುತ್ತಿವೆ. ಹಾವುಗಳ ರಕ್ಷಣೆ ಮಾಡಿ ಉರಗ ಪ್ರೇಮಿ ಅನಿಲ್ ಕಾಡಿಗೆ ಬಿಡುತ್ತಿದ್ದಾರೆ. 1,500ಕ್ಕೂ ಹೆಚ್ಚು ಹಾವುಗಳ ರಕ್ಷಣೆ ಮಾಡಲಾಗಿದೆ. ಕೊಪ್ಪಳ ತಾಲೂಕಿ ಹಿಟ್ನಾಳ ಗ್ರಾಮದ ಸ್ನೇಕ್ ಅನಿಲ್ ಅವರು, ಮಳೆಗಾಲದಲ್ಲಿ ಹೆಚ್ಚು ಹಾವುಗಳ ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಾರೆ. ನಾಗರಹಾವು, ರಸೆಲ್ ವೈಪರ್, ಕಾಮನ್ ಕ್ರೇಟ್, ಕೇರೆ ಹಾವು, ತೋಳದ ಹಾವು, ನೀರು ಹಾವು, ಚೆಕ್ ಕೀಲ್ ಬ್ಯಾಕ್ಸ್ ಹಾವುಗಳ ರಕ್ಷಣೆ ಮಾಡಲಾಗಿದೆ.

ಭಾರಿ ಮಳೆಗೆ 150 ಮನೆಗಳು ಜಲಾವೃತ

ಘಟಪ್ರಭಾ ನದಿ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮ ಪತರಗುಟ್ಟಿದೆ. ಇದೊಂದೇ ಗ್ರಾಮದಲ್ಲಿ ಬೆಳಗಾಗುವಷ್ಟರಲ್ಲಿ 150 ಮನೆಗಳು ಜಲಾವೃತಗೊಂಡಿದೆ. ಗ್ರಾಮದಲ್ಲಿರುವ ಚರ್ಚ್‌ವರೆಗೂ ನೀರು ನುಗ್ಗಿದೆ. ಮನೆಗೆ ನೀರು ಬರುತ್ತಿದ್ದಂತೆ ಸಾಮಾಗ್ರಿಗಳನ್ನು ಬಿಟ್ಟು ಜನರು ಕಾಳಜಿ ಕೇಂದ್ರಕ್ಕೆ ಶಿಫ್ಟ್‌ ಆಗಿದ್ದಾರೆ. ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ನೆರೆ ಸಂತ್ರಸ್ತರ ಒತ್ತಾಯಿಸಿದ್ದಾರೆ. ನಮಗೆ ಪರಿಹಾರ ಬೇಡ ಮನೆಗಳನ್ನು ಕಟ್ಟಿಸಿಕೊಡಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Theft case : ಪೊಲೀಸ್‌ ಮನೆಯಲ್ಲಿ ಕಳ್ಳರ ಕಳ್ಳಾಟ; ಚಿನ್ನಾಭರಣ ಕದ್ದು ಎಸ್ಕೇಪ್‌

ಹರಿಯುವ ನೀರಿನಲ್ಲಿ ಪಂಪ್‌ಸೆಟ್‌ ತಂದ ರೈತರು

ನದಿ ತೀರದಲ್ಲಿ ಇಟ್ಟಿದ್ದ ಮೋಟಾರ್ ಪಂಪ್‌ಸೆಟ್‌ಗಳನ್ನು ಹೊರ ತೆಗೆಯಲು ರೈತರು ಹರಸಾಹಸ ಪಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಚನ್ನೂರು ಗ್ರಾಮದ ರೈತರು ಕಳೆದ ಎರಡು ತಿಂಗಳ ಹಿಂದೆ ನೀರು ಇಲ್ಲದೇ ಇದ್ದಾಗ, ನದಿ ಸಮೀಪ ಪಂಪ್ ಸೆಟ್ ಬಿಟ್ಟಿದ್ದರು. ಈಗ ನದಿಗೆ ನೀರು ಹರಿದು ಬರುತ್ತಿದ್ದು, ಪಂಪ್ ಸೆಟ್‌ಗಳು ಕೊಚ್ಚಿ ಹೋಗುವ ಆತಂಕವಿದೆ. ಈ ಕಾರಣಕ್ಕೆ ತೆಪ್ಪದ ಮೂಲಕ ತೆರಳಿ ಪಂಪ್ ಸೆಟ್ ತಂದಿದ್ದಾರೆ. ಹರಿಯುವ ನದಿ ನೀರಲ್ಲೇ ಜೀವದ ಹಂಗು ತೊರೆದು ಪಂಪ್ ಸೆಟ್ ಗಳನ್ನು ತಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮೈಸೂರು

Theft case : ಪೊಲೀಸ್‌ ಮನೆಯಲ್ಲಿ ಕಳ್ಳರ ಕಳ್ಳಾಟ; ಚಿನ್ನಾಭರಣ ಕದ್ದು ಎಸ್ಕೇಪ್‌

Theft case : ರಾತ್ರೋರಾತ್ರಿ ಪೊಲೀಸ್‌ವೊಬ್ಬರ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಕದ್ದಿದ್ದಾರೆ. ಕಳ್ಳರು ಇರುವಾಗಲೇ ಮನೆ ಮಾಲೀಕರು ಬಂದಾಗ ಚಾಕು ಚೂರಿ ತೋರಿಸಿ ಕಾಲ್ಕಿತ್ತಿದ್ದಾರೆ.

VISTARANEWS.COM


on

By

theft case
Koo

ಮೈಸೂರು: ತಡರಾತ್ರಿ ಮನೆ ಬೀಗ ಮುರಿದ ಕಳ್ಳರು (theft Case) ತಮ್ಮ ಕೈ ಚಳಕ ತೋರಿಸಿದ್ದಾರೆ. ಮೈಸೂರಿನ ಜೆ.ಪಿ ನಗರದ ಎರಡನೇ ಹಂತದಲ್ಲಿ ಘಟನೆ ನಡೆದಿದೆ. ಪೊಲೀಸರ ಮನೆಗೆ ನುಗ್ಗಿದ ಕಳ್ಳರು ಸಿನಿಮೀಯ ರೀತಿಯಲ್ಲಿ ಕದಿಯಲು ಮುಂದಾಗಿದ್ದರು. ಆದರೆ ಅವರ ಟೈಂ ಕೈಕೊಟ್ಟಿತ್ತು ಕಳ್ಳರು ಮನೆಯಲ್ಲಿರುವಾಗಲೇ ಮಾಲೀಕರು ಮನೆಗೆ ವಾಪಸ್‌ ಆಗಿದ್ದರು.

ಮನೆ ಮಾಲೀಕರನ್ನು ಕಂಡು ಗಾಬರಿಗೊಂಡ ಕಳ್ಳರು ಮಾರಾಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮನೆ ಮಂದಿಗೆಲ್ಲ ಚಾಕು ತೋರಿಸಿ ಎಸ್ಕೇಪ್ ಆಗಿದ್ದಾರೆ. ಎಸ್ಕೇಪ್ ಆಗುವ ವೇಳೆ ಕಳ್ಳತನಕ್ಕೆ ಬಳಸಿದ್ದ ಕಬ್ಬಿಣದ ರಾಡ್, ಸಲಾಕೆ ,ಎಲೆಕ್ಟ್ರಿಕ್ ಸಾಮಾನು, ಎರಡು ಬ್ಯಾಗ್ ಸೇರಿದಂತೆ ತಮ್ಮ ಲಗೇಜ್‌ಗಳನ್ನು ಬಿಟ್ಟು ಓಡಿಹೋಗಿದ್ದಾರೆ.

ಕಳ್ಳರು ಓಡಿ ಹೋದ ಬಳಿಕ ಮನೆಯೊಳಗೆ ತೆರಳಿ ನೋಡಿದಾಗ 135 ಗ್ರಾಂಗೂ ಅಧಿಕ ಚಿನ್ನಾಭರಣ ದೋಚಿರುವುದು ಖಚಿತವಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡಸಿದ್ದಾರೆ. ಕಳ್ಳರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇದನ್ನೂ ಓದಿ: Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

ಚಳ್ಳಕೆರೆ ಪೊಲೀಸರ ವಿರುದ್ಧವೇ ದೂರು ಕೊಟ್ಟ ಯುವಕ

ಯುವಕನೊಬ್ಬ ಚಳ್ಳಕೆರೆ ಪೊಲೀಸರ ವಿರುದ್ಧ ದೂರು ಕೊಟ್ಟಿದ್ದಾನೆ. ಚಿತ್ರದುರ್ಗದ ಚಳ್ಳಕೆರೆ ಡಿವೈಎಸ್‌ಪಿ ರಾಜಣ್ಣ ಅವರಿಗೆ ಪೃಥ್ವಿ ಎಂಬಾತ ದೂರು ನೀಡಿದ್ದಾನೆ. ದೂರಿನ ಪ್ರಕಾರ ಪೃಥ್ವಿ ಪ್ರವಾಸಕೆಂದು ಹೋದಾಗ ಆತನ ಫೋನ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಇದರಿಂದ ಗಾಬರಿಗೊಂಡ ಪೃಥ್ವಿ ತಾಯಿಈ ಸಂಬಂಧ ದೂರು ನೀಡಲು ಹೋದಾಗ ಚಳ್ಳೇಕರೆ ಪೊಲೀಸರು ದೂರು ಸ್ವೀಕರಿಸದೇ ನಿಂದಿಸಿ ಕಳಿಸಿದ್ದಾರೆ.

ಇತ್ತ ಪೃಥ್ವಿ ಪ್ರವಾಸದಿಂದ ವಾಪಸ್‌ ಬಂದಾಗ ಠಾಣೆಯಲ್ಲಿ ನಡೆದದ್ದನ್ನು ಹೇಳಿದ್ದಾರೆ. ಹೀಗಾಗಿ ಪೃಥ್ವಿ ತನ್ನ ತಾಯಿ ಜತೆಗೆ ವಾಪಸ್‌ ಚಳ್ಳಕೆರೆ ಠಾಣೆಗೆ ತೆರಳಿ, ದೂರು ಸ್ವೀಕರಿಸದ ಸಂಬಂಧ ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು ಪೃಥ್ವಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ ತಾಯಿ ಮುಂದೆಯೇ ಅವಾಚ್ಯವಾಗಿ ನಿಂದಿಸಿದ್ದಾರೆ. ಪೊಲೀಸರ ನಡೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದಕ್ಕೆ ಮೊಬೈಲ್ ಕಸಿದು, ವಿಡಿಯೋ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಹಲ್ಲೆ ಮಾಡಿದ್ದಲ್ಲದೇ ಮೊಬೈಲ್‌ ಕಸಿದು ಸಾಕ್ಷ್ಯವನ್ನು ನಾಶ ಮಾಡಿದವರ‌ ಮೇಲೆ‌ ಕ್ರಮ ಕೈಗೊಳ್ಳಿ ಎಂದು ಡಿವೈಎಸ್‌ಪಿ ಪೃಥ್ವಿ ದೂರು ನೀಡಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Women Suicide
ಪ್ರಮುಖ ಸುದ್ದಿ17 mins ago

Women Suicide : ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಲೈವ್​ ವಿಡಿಯೊ ಮಾಡುತ್ತಾ ನೇಣು ಹಾಕಿಕೊಂಡು ಆತ್ಮಹತ್ಯೆ

HD kumaraswamy
ಪ್ರಮುಖ ಸುದ್ದಿ33 mins ago

HD kumaraswamy : ಆಸ್ಪತ್ರೆಯಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಡಿಸ್ಚಾರ್ಜ್

Viral Video
ಪ್ರಮುಖ ಸುದ್ದಿ45 mins ago

Viral Video : 25 ವರ್ಷದ ಕನ್ಯೆಯನ್ನು ಮದುವೆಯಾದ 70 ವರ್ಷದ ಮುದುಕ ಕಲೀಮುಲ್ಲಾ!

Tamil Nadu News
ದೇಶ1 hour ago

Tamil Nadu News : ತಮಿಳುನಾಡಿನಲ್ಲಿ 24 ಗಂಟೆಯೊಳಗೆ ಇಬ್ಬರು ಪ್ರತಿಪಕ್ಷ ನಾಯಕರ ಕಗ್ಗೊಲೆ

School Teacher
ಪ್ರಮುಖ ಸುದ್ದಿ2 hours ago

School Teacher : ಶಾಲಾ ಕೊಠಡಿಯಲ್ಲೇ ಚಾಪೆ ಹಾಸಿ, ಮಕ್ಕಳಿಗೆ ಗಾಳಿ ಹಾಕಲು ಹೇಳಿ ಗಡದ್ದಾಗಿ ನಿದ್ದೆ ಹೊಡೆದ ಟೀಚರ್​!

ಪ್ರಮುಖ ಸುದ್ದಿ2 hours ago

Paris Olympics 2024 : ಪುರಷರ 10 ಮೀಟರ್​ ಏರ್​ರೈಫಲ್​​ ಸ್ಪರ್ಧೆಯಲ್ಲಿ ಫೈನಲ್​ಗೇರಿದ ಅರ್ಜುನ್ ಬಬುಟಾ

Manu Bhaker
ಪ್ರಮುಖ ಸುದ್ದಿ3 hours ago

Manu Bhaker : ಭಾರತಕ್ಕೆ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಪದಕ ತಂದುಕೊಟ್ಟ ಮನು ಭಾಕರ್ ಯಾರು? ಅವರ ಹಿನ್ನೆಲೆಯೇನು?

Turmeric Stains
ಲೈಫ್‌ಸ್ಟೈಲ್3 hours ago

Turmeric Stains: ಬಟ್ಟೆಯ ಮೇಲಿನ ಅರಶಿನ ಕಲೆ ಹೋಗಲಾಡಿಸಲು ಇಲ್ಲಿದೆ ಸರಳ ಉಪಾಯ

Puttamadegowda
ಕರ್ನಾಟಕ3 hours ago

Puttamadegowda: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ತಂದೆ ಅನಾರೋಗ್ಯದಿಂದ ನಿಧನ

Shirur landslide
ಕ್ರೈಂ3 hours ago

Shirur landslide: ಶಿರೂರು ಭೂಕುಸಿತ; ಇನ್ನೂ ಪತ್ತೆಯಾಗದವರ ಶೋಧ ಕಾರ್ಯಾಚರಣೆ ಕೈಬಿಟ್ಟ ಜಿಲ್ಲಾಡಳಿತ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ6 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ8 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ10 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ11 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ1 day ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌