ಉತ್ತರ ಕನ್ನಡ
ಹೆದ್ದಾರಿಗೆ ಬಂದು ದಾಟಲು ಪರದಾಡಿದ ಬುಸ್ ಬುಸ್ ನಾಗರ: ಸ್ವಲ್ಪ ಹೊತ್ತು ಅಸ್ತವ್ಯಸ್ತವಾಯಿತು ವಾಹನ ಸಂಚಾರ
ಹೆದ್ದಾರಿಯಲ್ಲಿ ಸಂಚಾರಿಸುತ್ತಿದ್ದವರಿಗೆ ಏಕಾಏಕಿ ರಸ್ತೆ ಮೇಲೆ ನಾಗರ ಹಾವು ಅಡ್ಡಲಾಗಿ ಬಂದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅತ್ತ ರಸ್ತೆ ದಾಟಲು ಆಗದೆ ಹಿಂತಿರುಗಿ ಹೋಗಲು ಆಗದೆ ಹಾವು ಪರದಾಡುತ್ತಿದ್ದರೆ, ಇತ್ತ ವಾಹನ ಸವಾರರು ಹಾವು ಸರಿಯುವುದನ್ನೇ ಕಾದು ಕುಳಿತ ಘಟನೆ ನಡೆದಿದೆ.
ಕಾರವಾರ: ಬೃಹತ್ ಗಾತ್ರದ ನಾಗರ ಹಾವೊಂದು ರಾಷ್ಟ್ರೀಯ ಹೆದ್ದಾರಿ ದಾಟಲು ಪರದಾಡಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹೊಳೆಗದ್ದೆ ಟೋಲ್ ಬಳಿ ನಡೆದಿದೆ.
ಸುಮಾರು 6 ಅಡಿ ಉದ್ದದ ನಾಗರ ಹಾವು ಹೆದ್ದಾರಿ ದಾಟುವ ನಿಟ್ಟಿನಲ್ಲಿ ರಸ್ತೆ ಮೇಲೆ ಬಂತು. ಅತ್ತ ದಾಟಲೂ ಆಗದೇ, ತಿರುಗಿಯೂ ಹೋಗದೇ ರಸ್ತೆಯಲ್ಲೇ ನಿಂತಿತ್ತು. ಇದರಿಂದಾಗಿ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಲಾಗದೇ ಸಂಚಾರಕ್ಕೆ ಅಡ್ಡಿಯುಂಟಾಗಿ, ಸುಮಾರು ಅರ್ಧ ಗಂಟೆ ಕಾಲ ಹಾವಿನಿಂದಾಗಿ ಅಡೆತಡೆಯುಂಟಾಗಿತ್ತು.
ಈ ವೇಳೆ ಸ್ಥಳೀಯರು ಉರಗ ಪ್ರೇಮಿ ಪವನ ನಾಯ್ಕಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಪವನ್ ಹೆದ್ದಾರಿಯಲ್ಲಿ ನಿಂತಿದ್ದ ನಾಗರಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಅದನ್ನು ರಸ್ತೆ ಸಮೀಪದಲ್ಲೇ ಇದ್ದ ಪೊದೆಗೆ ಬಿಟ್ಟಿದ್ದು, ಹಾವನ್ನು ಹಿಡಿದ ಬಳಿಕ ವಾಹನ ಸವಾರರು ನಿಟ್ಟುಸಿರು ಬಿಡುವಂತಾಯಿತು.
ಇದನ್ನೂ ಓದಿ: Kshatriya Samavesha: ಬೆಂಗಳೂರಿನಲ್ಲಿ ಭಾನುವಾರ ಬೃಹತ್ ಕ್ಷತ್ರಿಯ ಸಮಾವೇಶ
ಉತ್ತರ ಕನ್ನಡ
Bike Rally: ಯುಗಾದಿ ಪ್ರಯುಕ್ತ ಯಲ್ಲಾಪುರದಲ್ಲಿ ನಡೆದ ಬೈಕ್ ರ‍್ಯಾಲಿಗೆ ಅಭೂತಪೂರ್ವ ಬೆಂಬಲ
Bike Rally: ಯುಗಾದಿ ಪ್ರಯುಕ್ತ ಯಲ್ಲಾಪುರ ಪಟ್ಟಣದಲ್ಲಿ ನಡೆದ ಬೈಕ್ ರ‍್ಯಾಲಿಯಲ್ಲಿ ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಭಗವಾ ಧ್ವಜಗಳೊಂದಿಗೆ ಭಾಗವಹಿದ್ದವು.
ಯಲ್ಲಾಪುರ: ಯುಗಾದಿ ಪ್ರಯುಕ್ತ ಯಲ್ಲಾಪುರ ಪಟ್ಟಣದಲ್ಲಿ ಸೋಮವಾರ (ಮಾ.20) ಹಮ್ಮಿಕೊಳ್ಳಲಾದ ಬೈಕ್ ರ‍್ಯಾಲಿಯು (Bike Rally) ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಪಟ್ಟಣದ ಕಾಳಮ್ಮನಗರ ದೇವಸ್ಥಾನದಿಂದ ಆರಂಭವಾದ ಬೈಕ್ ರ‍್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ಗ್ರಾಮ ದೇವಿ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು. ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಭಗವಾ ಧ್ವಜಗಳೊಂದಿಗೆ ರ‍್ಯಾಲಿಯಲ್ಲಿ ಭಾಗವಹಿದ್ದವು. ಕಳೆದ ಬಾರಿಗಿಂತ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಯುವತಿಯರು ಸಹ ರ‍್ಯಾಲಿಯಲ್ಲಿ ಭಾಗವಹಿಸಿ ರ‍್ಯಾಲಿಯ ಮೆರುಗು ಹೆಚ್ಚಿಸಿದರು. ರ‍್ಯಾಲಿ ಸಾಗುವ ದಾರಿಯುದ್ದಕ್ಕೂ ಕೇಸರಿ ಧ್ವಜ ಹಾಗೂ ರಂಗೋಲಿ, ತಳಿರು ತೋರಣಗಳಿಂದ ಸಿಂಗರಿಸಿದ್ದರಿಂದ ಸಂಪೂರ್ಣ ಪಟ್ಟಣವು ಕೇಸರಿಮಯವಾಗಿತ್ತು.
ಇದನ್ನೂ ಓದಿ: Shama Sikander: ಪಡ್ಡೆ ಹುಡುಗರ ನಿದ್ದೆ ಕದ್ದ ಶಮಾ, ಬಿಕಿನಿ ಹಾಟ್ ಫೋಟೊ ಫುಲ್ ಹವಾ
ಬೈಕ್ ರ‍್ಯಾಲಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪ್ರಮುಖರಾದ ರಾಮು ನಾಯ್ಕ, ಯುವ ಮುಖಂಡ ವಿವೇಕ ಹೆಬ್ಬಾರ್, ಪ್ರಶಾಂತ ಹೆಗಡೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ.ಪಂ. ಸದಸ್ಯರಾದ ಆದಿತ್ಯ ಗುಡಿಗಾರ್, ಸೋಮೇಶ್ವರ್ ನಾಯ್ಕ, ಸತೀಶ ನಾಯ್ಕ, ಪ್ರಮುಖರಾದ ಪ್ರದೀಪ ಯಲ್ಲಾಪುರಕರ್, ರಜತ್ ಬದ್ದಿ, ಮುಂತಾದವರು ಇದ್ದರು. ಪೊಲೀಸ್ ಇಲಾಖೆಯ ಸಿಬ್ಬಂದಿಗಳು ರ‍್ಯಾಲಿಯುದ್ದಕೂ ನಿಗಾ ವಹಿಸಿ, ವಾಹನ ಸಂಚಾರವನ್ನು ಸಮರ್ಪಕವಾಗಿ ನಿರ್ವಹಿಸಿ ರ‍್ಯಾಲಿ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.
ಇದನ್ನೂ ಓದಿ: Benefits Of Pongame: ಬಹೂಪಯೋಗಿ ಹೊಂಗೆ: ಏನೇನಿವೆ ಇದರ ಸದ್ಗುಣಗಳು?
ಉತ್ತರ ಕನ್ನಡ
Karnataka Election 2023: ಗಡಿ ಪ್ರದೇಶಗಳಲ್ಲಿ ಡ್ರಗ್ ದಂಧೆಕೋರರ ಮೇಲೆ ತೀವ್ರ ನಿಗಾ: ಜಿಲ್ಲಾಧಿಕಾರಿ ಸೂಚನೆ
Karnataka Election 2023: ಬಾರ್ಡರ್ ಚೆಕ್ ಪೋಸ್ಟ್‌ಗಳಲ್ಲಿ ಮದ್ಯ, ನಗದು, ಬೆಲೆಬಾಳುವ ಲೋಹಗಳು ಸಾಗಿಸುವ ವಾಹನಗಳ ಮೇಲೆ ಹೆಚ್ಚು ನಿಗಾ ವಹಿಸಬೇಕೆಂದು ಡಿಸಿ ಪ್ರಭುಲಿಂಗ ಕವಳಿಕಟ್ಟಿ ಸಲಹೆ ನೀಡಿದ್ದಾರೆ.
ಕಾರವಾರ: “ಕರ್ನಾಟಕ ರಾಜ್ಯದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ (Karnataka Election 2023) ಇರುವುದರಿಂದ ಅಂತಾರಾಜ್ಯ ಗಡಿ ಪ್ರದೇಶಗಳಲ್ಲಿ ಡ್ರಗ್ ದಂಧೆಕೋರರ ಮೇಲೆ ತೀವ್ರ ನಿಗಾ ಇರಿಸಲು ಕ್ರಮವಹಿಸಬೇಕು” ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಅಂತಾರಾಜ್ಯ ಗಡಿ ಪ್ರದೇಶಗಳ ಚೆಕ್ ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ ಒದಗಿಸಲು ಹಮ್ಮಿಕೊಂಡಿದ್ದ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, “ಬಾರ್ಡರ್ ಚೆಕ್ ಪೋಸ್ಟ್‌ಗಳಲ್ಲಿ ಮದ್ಯ, ನಗದು, ಬೆಲೆಬಾಳುವ ಲೋಹಗಳು, ಡ್ರಗ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಸಾಗಿಸುವ ವಾಹನಗಳ ಮೇಲೆ ಹೆಚ್ಚು ನಿಗಾ ವಹಿಸಬೇಕು” ಎಂದು ಅಂತಾರಾಜ್ಯ ಗಡಿ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: Swiss Open: ಸ್ವಿಸ್ ಓಪನ್ ಬ್ಯಾಡ್ಮಿಂಟನ್; ಪ್ರಶಸ್ತಿ ಉಳಿಸಿಕೊಳ್ಳಲಿದ್ದಾರಾ ಪಿ.ವಿ. ಸಿಂಧು?
“ಕರ್ನಾಟಕದ ಮದ್ಯದ ದರಕ್ಕಿಂತ ಗೋವಾ ರಾಜ್ಯದಲ್ಲಿ ಮದ್ಯದ ದರ ಅಗ್ಗವಾಗಿದೆ. ಈ ಕಾರಣದಿಂದ ಮದ್ಯ ಮಾರಾಟಗಾರರು ಗೋವಾದಿಂದ ಕರ್ನಾಟಕಕ್ಕೆ ಮದ್ಯವನ್ನು ಸಾಗಾಟ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಗಡಿಯಲ್ಲಿ ತೀವ್ರ ನಿಗಾ ವಹಿಸುವಂತೆ ಸೂಚಿಸಿದರು. ಈಗಾಗಲೇ ಕಾರವಾರ ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್ ಮತ್ತು ಜೋಯಿಡಾ ತಾಲೂಕಿನ ಅನ್‌ಮೋಡ್ ಚೆಕ್‌ಪೋಸ್ಟ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನೂ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಬೇಕು” ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್., ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ- 1 ಜಯಲಕ್ಷ್ಮಮ್ಮ, ಅಬಕಾರಿ ನಿರೀಕ್ಷಕರು ಜಗದೀಶ್ ಕುಲಕರ್ಣಿ ಉಪಸ್ಥಿತರಿದ್ದರು.
ಇದನ್ನೂ ಓದಿ: BJP Important Party: ಜಗತ್ತಿನಲ್ಲೇ ಬಿಜೆಪಿ ಪ್ರಮುಖ ಪಕ್ಷ, 2024ರಲ್ಲೂ ಗೆಲುವು; ವಾಲ್‌ಸ್ಟ್ರೀಟ್ ಜರ್ನಲ್ ವರದಿ
ಉತ್ತರ ಕನ್ನಡ
Sirsi News: ಕನ್ನಡ ಭಾಷೆಯು ವ್ಯಕ್ತಿಯ ಯೋಗ್ಯತೆಯನ್ನು ಕಟ್ಟಿ ಕೊಡುತ್ತದೆ: ಗಂಗಾವತಿ ಪ್ರಾಣೇಶ
Sirsi News: ಮಕ್ಕಳಿಗೆ ಶುದ್ಧ ಕನ್ನಡ ಕಲಿಸಬೇಕು. ಮಾತೃ ಭಾಷೆ ಮೂಲಕ ಮನಸ್ಸಿನಲ್ಲಿ ಭಾವ ತುಂಬಿಸಲು ಸಾಧ್ಯವಿದೆ ಎಂದು ಗಂಗಾವತಿ ಪ್ರಾಣೇಶ ಹೇಳಿದ್ದಾರೆ.
ಶಿರಸಿ: “ಕನ್ನಡ ಭಾಷೆಯು ವ್ಯಕ್ತಿಯ ಯೋಗ್ಯತೆಯನ್ನು ಕಟ್ಟಿ ಕೊಡುತ್ತದೆ” ಎಂದು ಹಾಸ್ಯ ಚಕ್ರವರ್ತಿ, ಅಭಿನವ ಬೀಚಿ ಎಂದೇ ಪ್ರಸಿದ್ಧರಾದ ಗಂಗಾವತಿ ಪ್ರಾಣೇಶ (Gangavathi Pranesh) ಬಣ್ಣಿಸಿದರು.
ಅವರು ನಗರದ ಹೊರ ವಲಯದ ನಿಸರ್ಗ ಮನೆಯಲ್ಲಿ ನಡೆದ ಹಾಸ್ಯ ಸಂಜೆಯಲ್ಲಿ ಪಾಲ್ಗೊಂಡು ಮಾತನಾಡಿ,
“ಆಂಗ್ಲ ಭಾಷೆ ಎಂಬುದು ಭಾವ ಹಾಗೂ ವ್ಯಕ್ತಿಯ ವ್ಯಕ್ತಿತ್ವ ಕಟ್ಟಿ ಕೊಡುವುದಿಲ್ಲ. ಮಕ್ಕಳಿಗೆ ಶುದ್ಧ ಕನ್ನಡ ಕಲಿಸಬೇಕು. ಮಾತೃ ಭಾಷೆ ಮೂಲಕ ಮನಸ್ಸಿನಲ್ಲಿ ಭಾವ ತುಂಬಿಸಲು ಸಾಧ್ಯವಿದೆ” ಎಂದರು.
ಕನ್ನಡದಲ್ಲಿ ಪ್ರಾಂತೀಯ ಭಾಷೆಗಳು ಸಾಕಷ್ಟು ಸಿಗುತ್ತವೆ. ಕನ್ನಡದಲ್ಲಿ ಎಷ್ಟೊಂದು ಶಬ್ದಗಳಿವೆ ಎಂದು ವಿವರಿಸಿ ಮಾತನಾಡಿದ ಪ್ರಾಣೇಶ್, ಶುದ್ಧ ಹವೆ, ಒಳ್ಳೆಯ ಪರಿಸರದ ಜತೆ ಶುದ್ಧ ಆಹಾರ ಕೂಡ ಬಳಸಬೇಕು. ನಿಸರ್ಗ ಮನೆ ನಾವು ಹೇಗೆ ಆರೋಗ್ಯ ಸರಿಯಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಇಲ್ಲಿ ಇದು ಹಿಂಸೆಯಲ್ಲ. ಹತ್ತು ದಿನದ ಚಿಕಿತ್ಸೆ ಬಳಿಕ ಮನೆಯಲ್ಲೂ ಅದನ್ನು ಅನುಸರಿಸಬೇಕಿದೆ” ಎಂದರು.
“ಮೊಬೈಲ್ ಅನ್ನು ಬಹಳ ಹೊತ್ತ ಹಿಡಿದುಕೊಂಡರೆ ನಾವು ಕುಳಿತುಕೊಳ್ಳುವ ಭಂಗಿ ಕೂಡ ಬದಲಾಗುತ್ತದೆ. ಅತಿಯಾದ ಮೊಬೈಲ್ ಸಹವಾಸ ಒಳಿತಲ್ಲ” ಎಂದು ಸಲಹೆ ನೀಡಿದರು.
ಪ್ರಸಿದ್ಧ ಹಾಸ್ಯ ಕಲಾವಿದ ಬಸವರಾಜ್ ಮಹಾಮನಿ ಮಾತನಾಡಿ, “ಒಂದೊಂದು ಮಾತಿನಲ್ಲಿಯೂ ಹಾಸ್ಯ ನೋಡಬಹುದು. ಮನೆ ಮನೆಯಲ್ಲಿ ಹಾಸ್ಯವಿದೆ. ಹಾಸ್ಯವನ್ನು ಹಾಸ್ಯವಾಗಿ ಸ್ವೀಕಾರ ಮಾಡಬೇಕು. ಯಾವುದೇ ಕಲೆಯಾದರೂ ಆ ಕಲೆಯನ್ನು ಉಳಿಸಬೇಕಾಗಿದೆ. ಮುಖ್ಯವಾಗಿ ದೇಶೀಯ ಕಲೆ ಉಳಿಸಿ ಬೆಳೆಸಬೇಕಿದೆ. “ತಂದೆ ತಾಯಿ, ಗುರು ಹಿರಿಯರ ಮಾತು ಕೇಳಿ ಜೀವನವನ್ನು ಸುಖವಾಗಿ ನಡೆಸಬೇಕು” ಎಂದು ಹೇಳಿದರು.
ಇದನ್ನೂ ಓದಿ: Ugadi Mens Fashion: ಯುವಕರ ಯುಗಾದಿ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಆಕರ್ಷಕ ಸ್ಲಿಮ್‌ಫಿಟ್ ಕುರ್ತಾಗಳು
ನಿಸರ್ಗ ಮನೆಯ ವೈದ್ಯ, ಲೇಖಕ ಡಾ. ವೆಂಕಟರಮಣ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಬಳಿಕ ತುಳಸಿ ಹೆಗಡೆ ಅವರಿಂದ ವಿಶ್ವಶಾಂತಿ ಸರಣಿಯ ವಂಶೀ ವಿಲಾಸ ಯಕ್ಷನೃತ್ಯ ರೂಪಕ ಪ್ರದರ್ಶನ ನಡೆಯಿತು.
ಉತ್ತರ ಕನ್ನಡ
Fire Accident: ಕಡ್ಲೆ ಗ್ರಾಮದಲ್ಲಿರುವ ರಂಗ ಭೂಮಿಕಾ ಅಲಂಕಾರ ಸಾಮಗ್ರಿಗೆ ಬೆಂಕಿ; 15 ಲಕ್ಷ ರೂ. ಹಾನಿ
Fire Accident: ರಂಗ ಭೂಮಿಕಾ ಅಲಂಕಾರ ಸಾಮಗ್ರಿಗಳಿಗೆ ಅಕಸ್ಮಾತ್ ಬೆಂಕಿ ತಗುಲಿ 15 ಲಕ್ಷ ರೂಪಾಯಿ ಅಂದಾಜಿನ ಸಾಮಗ್ರಿಗಳು ಪೂರ್ತಿ ಸುಟ್ಟು ಹೋಗಿವೆ.
ಹೊನ್ನಾವರ: ಹೆಸರಾಂತ ರಂಗ ನಟ, ವರ್ಣಾಲಂಕಾರ ಪ್ರವೀಣರಾದ ದಾಮೋದರ ನಾಯ್ಕ (ದಾಮು) ಇವರ ಕಡ್ಲೆಯಲ್ಲಿರುವ ರಂಗ ಭೂಮಿಕಾ ಅಲಂಕಾರ ಸಾಮಗ್ರಿಗಳಿಗೆ ಅಕಸ್ಮಾತ್ ಬೆಂಕಿ ತಗುಲಿ (Fire Accident) 15 ಲಕ್ಷ ರೂಪಾಯಿ ಅಂದಾಜಿನ ಸಾಮಗ್ರಿಗಳು ಪೂರ್ತಿ ಸುಟ್ಟು ಹೋಗಿದ್ದು, ಇನ್ನಷ್ಟು ಸಾಮಗ್ರಿ ಅರ್ಧ ಸುಟ್ಟಿವೆ.
ಜಿಲ್ಲೆಯಲ್ಲಿ ಮಾತ್ರವಲ್ಲ ಹಂಪೆ ಉತ್ಸವ ಮೊದಲಾದ ಕಡೆ ಸಭಾ ವೇದಿಕೆ ಮತ್ತು ಸಭಾಗೃಹದ ಅಲಂಕಾರಕ್ಕೆ ಫೈಬರ್‌ನಿಂದ ತಯಾರಿಸಿದ ಅರಮನೆ, ಕಂಬಗಳು, ಆನೆ, ಮೊದಲಾದವುಗಳನ್ನು ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ಬಳಸಿ ಸುಂದರ ವೇದಿಕೆ ಸಿದ್ಧಪಡಿಸುತ್ತಿದ್ದ ದಾಮೋದರ ನಾಯ್ಕ 10-15 ಜನರಿಗೆ ಕೆಲಸ ಕೊಟ್ಟಿದ್ದರು. ಆದಾಯ ತರುವ ಈ ಸೀಜನ್‌ನಲ್ಲಿ ತಮ್ಮ ದುಡಿಮೆಯ ಉಳಿತಾಯದ ಬಂಡವಾಳವೆಲ್ಲ ಬೆಂಕಿಗಾಹುತಿಯಾಯಿತು ಎಂದು ದಾಮೋದರ ನಾಯ್ಕ ನೊಂದುಕೊಂಡಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ತರಗೆಲೆಯಂತೆ ವಸ್ತುಗಳು ಉರಿದು ಹೋದವು. ಪೊಲೀಸ್ ಮತ್ತು ಅಗ್ನಿಶಾಮಕ ದಳದವರು ಸಾರ್ವಜನಿಕರ ಸಹಕಾರದ ಮೇರೆಗೆ ಬೆಂಕಿ ನಂದಿಸಿದ್ದರೂ ಹಲವು ವಸ್ತುಗಳು ಕರಕಲಾಗಿವೆ.
ಇದನ್ನೂ ಓದಿ: Lokayukta Raid: ರಾಣೆಬೆನ್ನೂರು ಪಿಎಸ್‌ಐ, ವಾಹನ ಚಾಲಕ ಲೋಕಾಯುಕ್ತ ಬಲೆಗೆ; 40 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದರು
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ22 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್23 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್7 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ11 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ11 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು