ಜೆಸಿಬಿ ಬಕೆಟ್‌ನಿಂದಲೇ ಬಾಲಕನ ಶವವನ್ನು ಪಕ್ಕಕ್ಕೆ ಸರಿಸಿದ ಕ್ರೂರಿ ಚಾಲಕ - Vistara News

ಕ್ರೈಂ

ಜೆಸಿಬಿ ಬಕೆಟ್‌ನಿಂದಲೇ ಬಾಲಕನ ಶವವನ್ನು ಪಕ್ಕಕ್ಕೆ ಸರಿಸಿದ ಕ್ರೂರಿ ಚಾಲಕ

ಕುಡಿದ ಮತ್ತಿನಲ್ಲೇ ಜೆಸಿಬಿ ಓಡಿಸಿದ್ದು ಮೊದಲ ತಪ್ಪು. ಬಾಲಕನಿಗೆ ಡಿಕ್ಕಿ ಹೊಡೆದು ಸಾಯುವಂತೆ ಮಾಡಿದ್ದು ಎರಡನೆ ತಪ್ಪು, ಶವವನ್ನು ಬದಿಗೆ ಸರಿಸಿ ಪರಾರಿಯಾಗಿದ್ದು ಮೂರನೇ ತಪ್ಪು, ಅಲ್ಲಿಂದಲೂ ಜೆಸಿಬಿ ಇಟ್ಟು ಓಡಲು ಯತ್ನಿಸಿದ್ದು ನಾಲ್ಕನೇ ತಪ್ಪು. ಈ ಎಲ್ಲ ತಪ್ಪುಗಳಿಗೆ ಪ್ರತಿಯಾಗಿ ಸಾರ್ವಜನಿಕರು ಅವನನ್ನು ಚೆನ್ನಾಗಿ ಥಳಿಸಿದ್ದಾರೆ.

VISTARANEWS.COM


on

boy death mangalore
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಗಳೂರು: ಮದ್ಯದ ನಶೆಯಲ್ಲಿದ್ದ ಜೆಸಿಬಿ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕನೊಬ್ಬ ಬಲಿಯಾದ ಘಟನೆ ವಿಟ್ಲ ಬಳಿ ನಡೆದಿದೆ. ಮೃತಪಟ್ಟ ಬಾಲಕನ ಶವವನ್ನು ಜೆಸಿಬಿ ಬಕೆಟ್‌ನಿಂದಲೇ(ಕೊಕ್ಕಿನಿಂದ) ಪಕ್ಕಕ್ಕೆ ಸರಿಸಿ ತೆರಳಿದ್ದ ಆ ಕ್ರೂರಿ ಚಾಲಕ.

ಬಂಟ್ವಾಳ ತಾಲೂಕು ಕನ್ಯಾನದ ಕಣಿಯೂರು ನಿವಾಸಿ ಹಸೈನಾರ್‌ ಎಂಬವರ ಪುತ್ರ ಮಹಮ್ಮದ್‌ ಅಖಿಲ್‌ (8) ಸೈಕಲ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ಕನ್ಯಾನದ ಉದ್ಯಮಿಯೊಬ್ಬರ ಮನೆಗೆ ಹೋಗುತ್ತಿದ್ದ ಜೆಸಿಬಿ ಅಖಿಲ್‌ಗೆ ಡಿಕ್ಕಿ ಹೊಡೆದಿದೆ. ಬಾಲಕ ನೆಲಕ್ಕೆ ಬಿದ್ದಾಗ ಗದಗ ಮೂಲದ ಚಾಲಕ ಸಾದಿಕ್ ಆತನನ್ನು ಜೆಸಿಬಿಯ ಮುಂಭಾಗದಿಂದ ಬದಿಗೆ ಸರಿಸಿ ತಾನು ಹೋಗಬೇಕಾದ ಕೆಲಸದ ಜಾಗಕ್ಕೆ ಹೋಗಿದ್ದಾನೆ! ಅಷ್ಟೇ ಅಲ್ಲ ತನ್ನ ಬದಲಿಗೆ ಬೇರೊಬ್ಬ ಚಾಲಕ ಬರುತ್ತಾನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಅಷ್ಟು ಹೊತ್ತಿಗೆ ವಿಷಯ ಊರಿನಲ್ಲೆಲ್ಲ ಗೊತ್ತಾಗಿ ಅವರು ಚಾಲಕನಿಗಾಗಿ ಹುಡುಕಿದ್ದಾರೆ.

ಕೆಲವರಿಗೆ ಜೆಸಿಬಿ ಹೋಗಿರುವುದು ತಿಳಿದು ಉದ್ಯಮಿಯ ಮನೆಗೆ ಹೋಗಿ ಚಾಲಕನನ್ನು ಹಿಡಿದು ಹಾಕಿದರು. ಚಾಲಕ ಆಗಲೂ ಕುಡಿತದ ಮತ್ತಿನಲ್ಲಿದ್ದ ಎಂದು ಹೇಳಲಾಗಿದೆ.‌ ಊರಿನವರು ಸೇರಿ ಚಾಲಕನಿಗೆ ಚೆನ್ನಾಗಿ ಥಳಿಸಿದ್ದಾರೆ. ವಿಟ್ಲ ಪೊಲೀಸರು ಚಾಲಕ ಸಾದಿಕ್‌ನನ್ನು ಬಂಧಿಸಿ ಜೆಸಿಬಿಯನ್ನು ವಶಕ್ಕೆ ಪಡೆದಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Cyber Crime | ಲಕ್ಷ ಹಣ ಕಳೆದುಕೊಂಡ ಬಿಎಸ್‌ಎಫ್‌ ಯೋಧ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೌಲ್ವಿಯ ಬಂಧನ

ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮತ್ತು ಸುದರ್ಶನ್ ಟೆಲಿವಿಷನ್ ಚಾನೆಲ್‌ನ ಮುಖ್ಯ ಸಂಪಾದಕ, ಬಿಜೆಪಿಯ ತೆಲಂಗಾಣ ಶಾಸಕ ರಾಜಾ ಸಿಂಗ್ ಹಾಗೂ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಪಾಕಿಸ್ತಾನ ಮತ್ತು ನೇಪಾಳದ ಸಹಚರರೊಂದಿಗೆ ಸೇರಿಕೊಂಡು ಬೆದರಿಕೆ ಹಾಕಿದ ಆರೋಪದ ಮೇಲೆ ಮೌಲ್ವಿಯನ್ನು ಗುಜರಾತ್‌ನ ಸೂರತ್‌ನಲ್ಲಿ ಶನಿವಾರ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಮೌಲ್ವಿ ಸೊಹೆಲ್ ಅಬೂಬಕರ್ ತಿಮೋಲ್ (27) ಎಂದು ಗುರುತಿಸಲಾಗಿದೆ.

VISTARANEWS.COM


on

arrest
Koo

ಗಾಂಧಿನಗರ: ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮತ್ತು ಸುದರ್ಶನ್ ಟೆಲಿವಿಷನ್ ಚಾನೆಲ್‌ನ ಮುಖ್ಯ ಸಂಪಾದಕ, ಬಿಜೆಪಿಯ ತೆಲಂಗಾಣ ಶಾಸಕ ರಾಜಾ ಸಿಂಗ್ ಹಾಗೂ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಪಾಕಿಸ್ತಾನ ಮತ್ತು ನೇಪಾಳದ ಸಹಚರರೊಂದಿಗೆ ಸೇರಿಕೊಂಡು ಬೆದರಿಕೆ ಹಾಕಿದ ಆರೋಪದ ಮೇಲೆ ಮೌಲ್ವಿ (Maulvi)ಯನ್ನು ಗುಜರಾತ್‌ನ ಸೂರತ್‌ನಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ʼʼಬಂಧಿತ ಆರೋಪಿಯನ್ನು ಮೌಲ್ವಿ ಸೊಹೆಲ್ ಅಬೂಬಕರ್ ತಿಮೋಲ್ (27) ಎಂದು ಗುರುತಿಸಲಾಗಿದೆ. ಈತ ಕಾರ್ಖಾನೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಜತೆಗೆ ಮುಸ್ಲಿಂ ಮಕ್ಕಳಿಗೆ ಇಸ್ಲಾಂ ಬಗ್ಗೆ ಬೋಧನೆ ಮಾಡುತ್ತಿದ್ದʼʼ ಎಂದು ಸೂರತ್ ಪೊಲೀಸ್ ಆಯುಕ್ತ ಅನುಪಮ್ ಸಿಂಗ್ ಗೆಹ್ಲೋಟ್ ವಿವರಿಸಿದ್ದಾರೆ.

ʼʼಹಿಂದೂ ಸನಾತನ ಸಂಘದ ರಾಷ್ಟ್ರೀಯ ಅಧ್ಯಕ್ಷ ಉಪದೇಶ್ ರಾಣಾ ಅವರನ್ನು ಹತ್ಯೆ ಮಾಡಲು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮತ್ತು 1 ಕೋಟಿ ರೂ.ಗಳ ‘ಸುಪಾರಿ’ ನೀಡಲು ಸೊಹೆಲ್ ಅಬೂಬಕರ್ ತಿಮೋಲ್ ಪಾಕಿಸ್ತಾನ ಮತ್ತು ನೇಪಾಳದ ಸಹಚರರೊಂದಿಗೆ ಸೇರಿ ಪಿತೂರಿ ನಡೆಸಿರುವುದು ತನಿಖೆ ವೇಳೆ ಕಂಡುಬಂದಿದೆʼʼ ಎಂದು ಗೆಹ್ಲೋಟ್ ಹೇಳಿದ್ದಾರೆ.

“ಬಂಧಿತ ಸೊಹೆಲ್ ಅಬೂಬಕರ್ ತಿಮೋಲ್ ಬಳಿಯಿಂದ ಉಪದೇಶ್‌ ರಾಣಾ ಅವರ ಹತ್ಯೆಗೆ 1 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿರುವುದು ಸೇರಿದಂತೆ ಹಲವು ಪ್ರಮುಖ ಸಾಕ್ಷಿಗಳನ್ನು ಗುರುತಿಸಲಾಗಿದೆ. ಜತೆಗೆ ಮೊಬೈಲ್ ಫೋನ್‌ನಲ್ಲಿ ಹಲವು ಪ್ರಮುಖ ದಾಖಲೆಗಳು ದೊರೆತಿವೆ. ಹತ್ಯೆ ನಡೆಸುವ ಉದ್ದೇಶದಿಂದ ಆತ ಪಾಕಿಸ್ತಾನ ಮತ್ತು ನೇಪಾಳದ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ” ಎಂದು ಗೆಹ್ಲೋಟ್ ತಿಳಿಸಿದ್ದಾರೆ.

“ಈ ವರ್ಷದ ಮಾರ್ಚ್‌ನಲ್ಲಿ ಉಪದೇಶ್‌ ರಾಣಾ ಅವರಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ತಿಮೋಲ್ ಭಾಗಿಯಾಗಿರುವುದು ಕಂಡು ಬಂದಿದೆ. ಸುದರ್ಶನ್ ಟಿವಿಯ ಪ್ರಧಾನ ಸಂಪಾದಕ ಸುರೇಶ್ ಚವ್ಹಾಂಕೆ, ಬಿಜೆಪಿ ನಾಯಕಿ ನೂಪುರ್ ಶರ್ಮಾ ಮತ್ತು ಹೈದರಾಬಾದ್ ಶಾಸಕ ರಾಜಾ ಸಿಂಗ್ ಅವರಿಗೆ ಜೀವ ಬೆದರಿಕೆ ಹಾಕುವ ಬಗ್ಗೆ ಆರೋಪಿ ಮತ್ತು ಸಹಚರರು ಚರ್ಚಿಸುತ್ತಿದ್ದರು. ಆತನ ಮೊಬೈಲ್‌ನಲ್ಲಿ ದೊರೆತ ಫೋಟೊ ಮತ್ತು ಇತರ ವಿವರಗಳು ಇದನ್ನು ದೃಢಪಡಿಸುತ್ತದೆ. ಈ ಉದ್ದೇಶಕ್ಕಾಗಿ ಅವರು ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಯೋಜನೆ ರೂಪಿಸುತ್ತಿದ್ದರುʼʼ ಎಂದು ಹೇಳಿದ್ದಾರೆ.

ʼʼಆರೋಪಿಗಳು ಹಿಂದುತ್ವ ನಾಯಕರನ್ನು ಹತ್ಯೆ ಮಾಡುವ ಬಗ್ಗೆ ಮಾತನಾಡಿದ್ದಾರೆ ಮತ್ತು ಕಮಲೇಶ್ ತಿವಾರಿ (2019ರಲ್ಲಿ ಕೊಲೆಗೀಡಾದ ಉತ್ತರ ಪ್ರದೇಶ ಮೂಲದ ಹಿಂದೂ ಸಮಾಜ ಪಾರ್ಟಿಯ ಅಧ್ಯಕ್ಷ) ಅವರ ಹತ್ಯೆಯ ಬಗ್ಗೆ ಚರ್ಚಿಸಿದ್ದಾರೆʼʼ ಎಂದು ಗೆಹ್ಲೋಟ್ ತಿಳಿಸಿದ್ದಾರೆ. ʼʼಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಸಲುವಾಗಿ ತಿಮೋಲ್ ಶೀಘ್ರದಲ್ಲೇ ರಾಣಾ ಅವರನ್ನು ಕೊಲ್ಲಲು ಬಯಸಿದ್ದ ಎನ್ನುವ ಅಂಶ ಆತನ ಮೆಸೇಜ್‌ ಮೂಲಕ ಬಹಿರಂಗಗೊಂಡಿದೆʼʼ ಎಂದು ಅವರು ವಿವರಿಸಿದ್ದಾರೆ.

ಅಂತಾರಾಷ್ಟ್ರೀಯ ಸಿಮ್

ಪಾಕಿಸ್ತಾನ ಮತ್ತು ನೇಪಾಳಕ್ಕೆ ಸೇರಿದ ಫೋನ್ ಸಂಖ್ಯೆಗಳನ್ನು ಹೊಂದಿರುವ ದೋಗರ್ ಮತ್ತು ಶೆಹನಾಜ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ತಿಮೋಲ್‌ನನ್ನು ಸಂಪರ್ಕಿಸಿದ್ದಾರೆ ಎನ್ನುವ ವಿಚಾರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಅಪರಾಧ ವಿಭಾಗದ ಪ್ರಕಟಣೆ ತಿಳಿಸಿದೆ. ಪೊಲೀಸರ ಪ್ರಕಾರ, ತಿಮೋಲ್‌ ತನ್ನ ಗುರುತನ್ನು ರಹಸ್ಯವಾಗಿಡಲು ಲಾವೋಸ್‌ನಿಂದ ಅಂತಾರಾಷ್ಟ್ರೀಯ ಸಿಮ್ ಖರೀದಿಸಿದ್ದ. ಚಾಟ್ ಅಪ್ಲಿಕೇಶನ್‌ನಲ್ಲಿ ಹಿಂದೂ ಧರ್ಮದ ವಿರುದ್ಧ ಭಾಷಣಗಳನ್ನು ಬರೆದಿದ್ದ ಮತ್ತು ಕಮಲೇಶ್ ತಿವಾರಿಯಂತೆ ರಾಣಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Love Jihad: ಹಿಂದು ಎಂಬಂತೆ ಬಿಂಬಿಸಿ, ಯುವತಿಯನ್ನು ನಂಬಿಸಿ, ಕೊನೆಗೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ!

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) (ಧರ್ಮ, ಜನಾಂಗದ ಮೇಲೆ ಉದ್ದೇಶಪೂರ್ವಕ ನಿಂದನೆ ಅಥವಾ ದಾಳಿಯಲ್ಲಿ ತೊಡಗುವುದು), 467, 468 ಮತ್ತು 471 (ದಾಖಲೆಗಳು ಅಥವಾ ಎಲೆಕ್ಟ್ರಾನಿಕ್ ದಾಖಲೆಗಳನ್ನು ನಕಲು ಮಾಡುವುದು) ಮತ್ತು ಸೆಕ್ಷನ್ 120 (ಬಿ) ಕ್ರಿಮಿನಲ್ ಪಿತೂರಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಿಮೋಲ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Continue Reading

ವೈರಲ್ ನ್ಯೂಸ್

Viral Video: ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದೇ ಬಿಟ್ಟ ಜನ; ಶಾಕಿಂಗ್‌ ವಿಡಿಯೋ ವೈರಲ್‌

Viral Video: ಗುರು ಗ್ರಂಥ ಸಾಹೀಬ್‌ ಗ್ರಂಥದ ಪುಟಗಳನ್ನು ಹರಿದು ಭಕ್ಷೀಸ್‌ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಆಗ ಕೆಲವು ಜನರ ಗುಂಪು ಆತನನ್ನು ಹಿಡಿದಿದ್ದಾರೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಇಡೀ ಗ್ರಾಮಕ್ಕೆ ಹಬ್ಬಿತ್ತು. ತಕ್ಷಣ ಅನೇಕ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಭಕ್ಷೀಸ್‌ನನ್ನು ಮನಬಂದಂತೆ ಥಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಕ್ಷೀಸ್‌ ಸ್ಥಳದಲ್ಲೇ ಅಸುನೀಗಿದ್ದಾನೆ.

VISTARANEWS.COM


on

Viral Video
Koo

ಪಂಜಾಬ್‌: ಸಿಖ್ಖರ ಪವಿತ್ರ ಗ್ರಂಥವನ್ನು ಹರಿದು ಹಾಕಿದನೆಂದು 19 ವರ್ಷದ ಯುವಕನನ್ನು ಜನ ಹೊಡೆದು ಕೊಂದಿರುವ ಘಟನೆ ಪಂಜಾಬ್‌(Panjab)ನಲ್ಲಿ ನಡೆದಿದೆ. ಬಂದಾಳ ಗ್ರಾಮದಲ್ಲಿರುವ ಗುರುದ್ವಾರದ ಬಳಿ ಈ ಘಟನೆ ನಡೆದಿದ್ದು, ತಲ್ಲಿ ಗುಲಾಮ್‌ ಗ್ರಾಮದ ನಿವಾಸಿಯಾಗಿದ್ದ ಭಕ್ಷೀಸ್‌ ಸಿಂಗ್‌ ಎಂಬ ಯುವಕ ಗುರುದ್ವಾರ(Gurudwara)ಕ್ಕೆ ಪ್ರವೇಶಿಸುತ್ತಿದ್ದಂತೆ ಗುರು ಗ್ರಂಥ ಸಾಹೀಬ್‌ ಪುಸ್ತಕ(Guru Granth Sahib)ದ ಕೆಲವೊಂದು ಪುಟಗಳನ್ನು ಹರಿದು ಹಾಕಿದ್ದಾನೆ. ಇದರಿಂದ ಅಲ್ಲದೇ ಇದ್ದ ಜನರು ಕೋಪಗೊಂಡು ಆತನನ್ನು ಚೆನ್ನಾಗಿ ಥಳಿಸಿದ್ದಾರೆ. ಪರಿಣಾಮವಾಗಿ ಆತನ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಹಲವೆಡೆ ಖಂಡನೆ ವ್ಯಕ್ತವಾಗಿದೆ.

ಮಾನಸಿಕ ಅಸ್ವಸ್ಥ ಎಂದ ತಂದೆ

ಘಟನೆ ಬಗ್ಗೆ ಭಕ್ಷೀಸ್‌ ಸಿಂಗ್‌ ತಂದೆ ಲಖ್ವಿಂದರ್‌ ಸಿಂಗ್‌ ಪ್ರತಿಕ್ರಿಯಿಸಿದ್ದು, ತಮ್ಮ ಮಗ ಮಾನಸಿಕ ಅಸ್ವಸ್ಥನಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಘಟನೆ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಮುಂದುವರೆದಿದೆ. ಇನ್ನು ತಮ್ಮ ಮಗನನ್ನು ಹತ್ಯೆ ಮಾಡಿರುವವರ ವಿರುದ್ಧ ಕೇಸ್‌ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವ ಮೂಲಕ ಮಗನ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪೊಲೀಸರು ಹೇಳೋದೇನು?

ಪೊಲೀಸರ ಮಾಹಿತಿ ಪ್ರಕಾರ ಗುರು ಗ್ರಂಥ ಸಾಹೀಬ್‌ ಗ್ರಂಥದ ಪುಟಗಳನ್ನು ಹರಿದು ಭಕ್ಷೀಸ್‌ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಆಗ ಕೆಲವು ಜನರ ಗುಂಪು ಆತನನ್ನು ಹಿಡಿದಿದ್ದಾರೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಇಡೀ ಗ್ರಾಮಕ್ಕೆ ಹಬ್ಬಿತ್ತು. ತಕ್ಷಣ ಅನೇಕ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಭಕ್ಷೀಸ್‌ನನ್ನು ಮನಬಂದಂತೆ ಥಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಕ್ಷೀಸ್‌ ಸ್ಥಳದಲ್ಲೇ ಅಸುನೀಗಿದ್ದಾನೆ. ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಸೌಮ್ಯ ಮಿಶ್ರಾ ಸೇರಿದಂತೆ ಹಿರಿಯ ಪೊಲೀಸರು ದೌಡಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಮೃತ ಯುವಕ ಮತ್ತು ಆತನ ಕುಟುಂಬದ ವಿರುದ್ಧ ಗುರು ಗ್ರಂಥ ಸಾಹೀಬ್‌ ಸತ್ಕಾರ್‌ ಸಮಿತಿ ಅಧ್ಯಕ್ಷ ಲಖ್ವೀರ್‌ ಸಿಂಗ್‌ ದೂರು ನೀಡಿದ್ದು, ಪೊಲೀಸರು ಸೆಕ್ಷನ್‌ 295-A (ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ)ಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Jyotika Trolled: ಆನ್​ಲೈನ್​ ಮೂಲಕ ವೋಟ್ ಮಾಡಿದ್ದಾರಂತೆ ಜ್ಯೋತಿಕಾ! ಟ್ರೋಲ್‌ ಆದ ಸೂರ್ಯ ಪತ್ನಿ!

ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರಕ್ಕೆ ಆಗ್ರಹ

ಇಷ್ಟೆಲ್ಲದರ ನಡುವೆ ಅಕಾಲ್‌ ಜತೇದರ್‌(ಸಿಖ್‌ ಮುಖಂಡ) ಗೈನಿ ರಗ್ಬೀರ್‌ ಸಿಂಗ್‌ ಗುರುದ್ವಾರದಲ್ಲಿ ನಡೆದಿರುವ ಅಪವಿತ್ರತೆಗೆ ಖಂಡನೆ ವ್ಯಕ್ತಪಡಿಸಿದ್ದು, ಮೃತ ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವಂತೆ ಒತ್ತಾಯಿಸಿದ್ದಾರೆ. ಇಂತಹದ್ದೇ ಘಟನೆಗಳು ಹಿಂದೆ ನಡೆದ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಜರುಗಿಸುವಲ್ಲಿ ವಿಫಲವಾಗಿರುವುದೇ ಮತ್ತೆ ಇಂತಹ ಘಟನೆಗಳು ನಡೆಯಲು ಕಾರಣ. ಸಿಖ್‌ ಸಂಘಟನೆ ಈ ಕುಟುಂಬವನ್ನು ಸಾಮಾಜಿಕ ಮತ್ತು ಧಾರ್ಮಿಕವಾಗಿ ಬಹಿಷ್ಕರಿಸಬೇಕು. ಸಿಖ್‌ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಕೆಂಬ ಉದ್ದೇಶದಿಂದಲೇ ಇಂತಹ ಕೃತ್ಯಗಳಿಗೆ ಸಂಚು ರೂಪಿಸಲಾಗುತ್ತಿದೆ. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದರು.

Continue Reading

ಕ್ರೈಂ

Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್‌ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!

Prajwal Revanna Case: ಈಗಿನ ಮಾಹಿತಿ ಪ್ರಕಾರ, ಪ್ರಜ್ವಲ್‌ ರೇವಣ್ಣ ಅವರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಪ್ರಜ್ವಲ್‌ಗಾಗಿ ಎಸ್ಐಟಿ, ಗುಪ್ತಚರ ತಂಡಗಳು ಕಾದು ಕುಳಿತಿದ್ದು, ವಿದೇಶಿ ವಿಮಾನಗಳ ಪ್ಯಾಸೆಂಜರ್ ಲಿಸ್ಟ್ ಅನ್ನು ಪರಿಶೀಲನೆ ನಡೆಸಲಾಗುತ್ತಿದೆ. ದುಬೈ, ಮಸ್ಕಟ್, ಪ್ರಾಂಕ್ ಫರ್ಟ್ ವಿಮಾನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಪ್ರಜ್ವಲ್‌ ಅವರು ಹಾಸನದ ತಮ್ಮ ನಿವಾಸದಲ್ಲೇ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಸಂಸದರ ನಿವಾಸವನ್ನು ಲಾಕ್‌ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಿಗೆ ಸರ್ಕಾರ ನೀಡಿದ್ದ ಈ ನಿವಾಸವನ್ನು ಪ್ರಜ್ವಲ್‌ ಬಳಸಿಕೊಳ್ಳುತ್ತಿದ್ದರು.

VISTARANEWS.COM


on

Prajwal Revanna Case Prajwal likely to arrive in Bengaluru today SIT decides to arrest him at airport
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣವು (Hassan Pen Drive Case) ದಿನೇ ದಿನೆ ಜಟಿಲವಾಗುತ್ತಾ ಸಾಗಿದೆ. ಈ ನಡುವೆ ಅವರ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ನಡುವೆ ಪ್ರಜ್ವಲ್‌ ಅವರನ್ನು ಭಾರತಕ್ಕೆ ಬರುವಂತೆ ಜೆಡಿಎಸ್‌ ಮುಖಂಡರು ಮನವೊಲಿಸಿದ್ದು, ಅವರು ಇಂದು (ಭಾನುವಾರ – ಮೇ 5) ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ ಆಗಮಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಏರ್‌ಪೋರ್ಟ್‌ ಬಳಿ ಬೀಡು ಬಿಟ್ಟಿರುವ ಎಸ್‌ಐಟಿ ತಂಡವು ಪ್ರಜ್ವಲ್‌ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಇಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಜ್ವಲ್‌ ಯಾವುದೇ ಸಮಯದಲ್ಲಿ ಬೇಕಿದ್ದರೂ ಭಾರತಕ್ಕೆ ಬರಬಹುದು ಎಂಬ ನಿಟ್ಟಿನಲ್ಲಿ ಶನಿವಾರ ರಾತ್ರಿಯಿಂದಲೇ ಏರ್‌ಪೋರ್ಟ್‌ನಲ್ಲಿ ಎಸ್‌ಐಟಿ ಟೀಂ ಬೀಡುಬಿಟ್ಟಿದೆ. ಆದರೆ, ಪ್ರಜ್ವಲ್‌ ರೇವಣ್ಣ ಈವರೆಗೂ ಆಗಮಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗಾಗಿ ಕಾದು ಕಾದು ಅಧಿಕಾರಿಗಳು ಸುಸ್ತಾಗಿದ್ದಾರೆ.

ಆದರೆ, ಈಗಿನ ಮಾಹಿತಿ ಪ್ರಕಾರ, ಪ್ರಜ್ವಲ್‌ ರೇವಣ್ಣ ಅವರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಪ್ರಜ್ವಲ್‌ಗಾಗಿ ಎಸ್ಐಟಿ, ಗುಪ್ತಚರ ತಂಡಗಳು ಕಾದು ಕುಳಿತಿದ್ದು, ವಿದೇಶಿ ವಿಮಾನಗಳ ಪ್ಯಾಸೆಂಜರ್ ಲಿಸ್ಟ್ ಅನ್ನು ಪರಿಶೀಲನೆ ನಡೆಸಲಾಗುತ್ತಿದೆ. ದುಬೈ, ಮಸ್ಕಟ್, ಪ್ರಾಂಕ್ ಫರ್ಟ್ ವಿಮಾನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಹಾಸನ ಸಂಸದರ ನಿವಾಸವನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು

ಸಂಸದ ಪ್ರಜ್ವಲ್‌ ರೇವಣ್ಣ ಅವರು ಹಾಸನದ ತಮ್ಮ ನಿವಾಸದಲ್ಲೇ ಅತ್ಯಾಚಾರ (Physical abuse) ನಡೆಸಿರುವ ಬಗ್ಗೆ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಸಂಸದರ ನಿವಾಸವನ್ನು ಲಾಕ್‌ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಿಗೆ ಸರ್ಕಾರ ನೀಡಿದ್ದ ಈ ನಿವಾಸವನ್ನು ಪ್ರಜ್ವಲ್‌ ಬಳಸಿಕೊಳ್ಳುತ್ತಿದ್ದರು.

ಎಸ್‌ಐಟಿ ಅಧಿಕಾರಿಗಳು ಇದೀಗ ಈ ನಿವಾಸವನ್ನು ವಶಕ್ಕೆ ಪಡೆದಿದ್ದಾರೆ. ಸಂಸದರ ನಿವಾಸದ ರೂಮ್‌ನಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ಪ್ರಜ್ವಲ್ ರೇವಣ್ಣ‌ ವಿರುದ್ಧ ಆರೋಪ ಹೊರಿಸಿದ್ದ ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ದೇವೇಗೌಡ ಅವರಿಗೆ ಸರ್ಕಾರ ಈ ಬಂಗಲೆಯನ್ನು ನೀಡಿತ್ತು. ಇಂದಿಗೂ ದೇವೇಗೌಡರಿಗೆ ಮೀಸಲಾಗಿರುವ ಸಂಸದರ ನಿವಾಸವನ್ನು ಸದ್ಯ ಪ್ರಜ್ವಲ್ ರೇವಣ್ಣ ಬಳಸಿಕೊಳ್ಳುತ್ತಿದ್ದಾರೆ.

2019ರಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರಿಗಾಗಿಯೇ ಈ ನಿವಾಸ‌ವನ್ನು ನಿರ್ಮಾಣ ಮಾಡಲಾಗಿತ್ತು. ಹಾಸನಕ್ಕೆ ಬಂದಾಗ ತಂಗಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ನಿವಾಸವನ್ನು ನಿರ್ಮಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ದೇವೇಗೌಡರಿಗೆ ನೀಡಿದ್ದ ನಿವಾಸವನ್ನು ಪ್ರಜ್ವಲ್ ರೇವಣ್ಣ ಬಳಸಿಕೊಳ್ಳುತ್ತಿದ್ದರು.

ದೇವೇಗೌಡರು ಹಾಸನ ನಗರಕ್ಕೆ ಬಂದಾಗ ತಂಗುತ್ತಿದ್ದ ಇದೇ ನಿವಾಸದಲ್ಲಿ ವಾರದಲ್ಲಿ ನಾಲ್ಕು ದಿನ ಪ್ರಜ್ವಲ್‌ ವಾಸ್ತವ್ಯ ಹೂಡುತ್ತಿದ್ದರು. ಸದ್ಯ ಈ ನಿವಾಸದಲ್ಲೇ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ. ಅಶ್ಲೀಲ ವಿಡಿಯೊ ರೆಕಾರ್ಡ್ ಕೂಡ ಇದೇ ನಿವಾಸದ ರೂಮ್‌ನಲ್ಲಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ನಿವಾಸ ಹಾಸನದ ಆರ್‌.ಸಿ. ರಸ್ತೆಯಲ್ಲಿದೆ.

ಹೊಳೆನರಸೀಪುರದಲ್ಲಿ ನೀರವ ಮೌನ

ಮಾಜಿ ಸಚಿವ ರೇವಣ್ಣ ಬಂಧನದ ಬಳಿಕ ಹೊಳೆನರಸೀಪುರದಲ್ಲಿ ನೀರವ ಮೌನ ಆವರಿಸಿದೆ. ಸದಾ ಜನರಿಂದ ತುಂಬಿರುತ್ತಿದ್ದ ರೇವಣ್ಣರ ಹೊಳೆನರಸೀಪುರದ ಮನೆ ಖಾಲಿ ಖಾಲಿ ಎನಿಸಿದೆ. ಸದ್ಯ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಮನೆಯಲ್ಲಿಯೇ ಇದ್ದಾರೆ. ಶನಿವಾರ ರೇವಣ್ಣ ಅವರ ಮನೆಯಲ್ಲಿ ಮಹಜರು ನಡೆಸಿದ್ದ ಎಸ್‌ಐಟಿ ತಂಡ ವಶಕ್ಕೆ ಪಡೆದಿತ್ತು. ಹಾಸನ ರಸ್ತೆಯಲ್ಲಿ ರೇವಣ್ಣ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಒಂದು ಕೆಎಸ್ಆರ್‌ಪಿ ತುಕಡಿಯನ್ನ ಮನೆ ಬಳಿ ನಿಯೋಜನೆ ಮಾಡಿ ಭದ್ರತೆ ಖಚಿತಪಡಿಸಲಾಗಿದೆ.

ಇದನ್ನೂ ಓದಿ: Prajwal Revanna Case: ಹಾಸನ ಸಂಸದರ ನಿವಾಸದ ಗೇಟಿಗೆ ಬೀಗ; ನಿವಾಸದ ಕೀ ನಾಪತ್ತೆ! ಎಚ್‌ಡಿ ರೇವಣ್ಣ ಕೂಡ ಗಾಯಬ್!‌

ಈ ಮಧ್ಯೆ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ತಂಡ ಮತ್ತೆ ಇಂದು ವಿಚಾರಣೆಗೆ ಒಳಪಡಿಸಲಿದೆ. ಶನಿವಾರ ರಾತ್ರಿ ತಡರಾತ್ರಿವರೆಗೆ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಮತ್ತೆ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. ಮಹಿಳೆಯ ಅಪಹರಣ ಪ್ರಕರಣದ ಬಗ್ಗೆ ಕೂಲಂಕಷ ವಿಚಾರಣೆ ನಡೆಸಲಿದ್ದಾರೆ. ಇಂದು ಸಂಜೆ ಕೋರಮಂಗಲದ ಎನ್‌ಜಿವಿಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ರೇವಣ್ಣ ಅವರನ್ನು ಹಾಜರುಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ನಿವಾಸದ ಎದುರು ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

Continue Reading

ಕರ್ನಾಟಕ

Prajwal Revanna Case: ಹಾಸನ ಸಂಸದರ ನಿವಾಸವನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು

Prajwal Revanna Case: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ನಿವಾಸದಲ್ಲೇ ಅತ್ಯಾಚಾರ ನಡೆದಿರುವ ಬಗ್ಗೆ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಸಂಸದರ ನಿವಾಸವನ್ನು ಲಾಕ್‌ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಸರ್ಕಾರ ನೀಡಿದ್ದ ಈ ನಿವಾಸವನ್ನು ಪ್ರಜ್ವಲ್‌ ಬಳಸಿಕೊಳ್ಳುತ್ತಿದ್ದರು. ಎಸ್‌ಐಟಿ ಅಧಿಕಾರಿಗಳು ಇದೀಗ ಈ ನಿವಾಸವನ್ನು ವಶಕ್ಕೆ ಪಡೆದಿದ್ದಾರೆ. ಸಂಸದರ ನಿವಾಸದ ರೂಮ್‌ನಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ಪ್ರಜ್ವಲ್ ರೇವಣ್ಣ‌ ವಿರುದ್ಧ ಆರೋಪ ಹೊರಿಸಿದ್ದ ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

VISTARANEWS.COM


on

Prajwal Revanna Case
Koo

ಹಾಸನ: ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ (Prajwal Revanna Case) ನಿವಾಸದಲ್ಲೇ ಅತ್ಯಾಚಾರ (Physical abuse) ನಡೆದಿರುವ ಬಗ್ಗೆ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಸಂಸದರ ನಿವಾಸವನ್ನು ಲಾಕ್‌ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಸರ್ಕಾರ ನೀಡಿದ್ದ ಈ ನಿವಾಸವನ್ನು ಪ್ರಜ್ವಲ್‌ ಬಳಸಿಕೊಳ್ಳುತ್ತಿದ್ದರು.

ಎಸ್‌ಐಟಿ ಅಧಿಕಾರಿಗಳು ಇದೀಗ ಈ ನಿವಾಸವನ್ನು ವಶಕ್ಕೆ ಪಡೆದಿದ್ದಾರೆ. ಸಂಸದರ ನಿವಾಸದ ರೂಮ್‌ನಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ಪ್ರಜ್ವಲ್ ರೇವಣ್ಣ‌ ವಿರುದ್ಧ ಆರೋಪ ಹೊರಿಸಿದ್ದ ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ದೇವೇಗೌಡ ಅವರಿಗೆ ಸರ್ಕಾರ ಈ ಬಂಲೆಯನ್ನು ನೀಡಿತ್ತು. ಇಂದಿಗೂ ದೇವೇಗೌಡರಿಗೆ ಮೀಸಲಾಗಿರುವ ಸಂಸದರ ನಿವಾಸವನ್ನು ಸದ್ಯ ಪ್ರಜ್ವಲ್ ರೇವಣ್ಣ ಬಳಸಿಕೊಳ್ಳುತ್ತಿದ್ದಾರೆ.

2019ರಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರಿಗಾಗಿಯೇ ಈ ನಿವಾಸ‌ವನ್ನು ನಿರ್ಮಾಣ ಮಾಡಲಾಗಿತ್ತು. ಹಾಸನಕ್ಕೆ ಬಂದಾಗ ತಂಗಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ನಿವಾಸವನ್ನು ನಿರ್ಮಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ದೇವೇಗೌಡರಿಗೆ ನೀಡಿದ್ದ ನಿವಾಸವನ್ನು ಪ್ರಜ್ವಲ್ ರೇವಣ್ಣ ಬಳಸಿಕೊಳ್ಳುತ್ತಿದ್ದರು.

ದೇವೇಗೌಡರು ಹಾಸನ ನಗರಕ್ಕೆ ಬಂದಾಗ ತಂಗುತ್ತಿದ್ದ ಇದೇ ನಿವಾಸದಲ್ಲಿ ವಾರದಲ್ಲಿ ನಾಲ್ಕು ದಿನ ಪ್ರಜ್ವಲ್‌ ವಾಸ್ತವ್ಯ ಹೂಡುತ್ತಿದ್ದರು. ಸದ್ಯ ಈ ನಿವಾಸದಲ್ಲೇ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ. ಅಶ್ಲೀಲ ವಿಡಿಯೊ ರೆಕಾರ್ಡ್ ಕೂಡ ಇದೇ ನಿವಾಸದ ರೂಮ್‌ನಲ್ಲಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ನಿವಾಸ ಹಾಸನದ ಆರ್‌.ಸಿ. ರಸ್ತೆಯಲ್ಲಿದೆ.

ಹೊಳೆನರಸೀಪುರದಲ್ಲಿ ನೀರವ ಮೌನ

ಮಾಜಿ ಸಚಿವ ರೇವಣ್ಣ ಬಂಧನದ ಬಳಿಕ ಹೊಳೆನರಸೀಪುರದಲ್ಲಿ ನೀರವ ಮೌನ ಆವರಿಸಿದೆ. ಸದಾ ಜನರಿಂದ ತುಂಬಿರುತ್ತಿದ್ದ ರೇವಣ್ಣರ ಹೊಳೆನರಸೀಪುರದ ಮನೆ ಖಾಲಿ ಖಾಲಿ ಎನಿಸಿದೆ. ಸದ್ಯ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಮನೆಯಲ್ಲಿಯೇ ಇದ್ದಾರೆ. ಶನಿವಾರ ರೇವಣ್ಣ ಅವರ ಮನೆಯಲ್ಲಿ ಮಹಜರು ನಡೆಸಿದ್ದ ಎಸ್‌ಐಟಿ ತಂಡ ವಶಕ್ಕೆ ಪಡೆದಿತ್ತು. ಹಾಸನ ರಸ್ತೆಯಲ್ಲಿ ರೇವಣ್ಣ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಒಂದು ಕೆಎಸ್ಆರ್‌ಪಿ ತುಕಡಿಯನ್ನ ಮನೆ ಬಳಿ ನಿಯೋಜನೆ ಮಾಡಿ ಭದ್ರತೆ ಖಚಿತಪಡಿಸಲಾಗಿದೆ.

ಈ ಮಧ್ಯೆ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ತಂಡ ಮತ್ತೆ ಇಂದು ವಿಚಾರಣೆಗೆ ಒಳಪಡಿಸಲಿದೆ. ಶನಿವಾರ ರಾತ್ರಿ ತಡರಾತ್ರಿವರೆಗೆ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಮತ್ತೆ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. ಮಹಿಳೆಯ ಅಪಹರಣ ಪ್ರಕರಣದ ಬಗ್ಗೆ ಕೂಲಂಕುಷ ವಿಚಾರಣೆ ನಡೆಸಲಿದ್ದಾರೆ. ಇಂದು ಸಂಜೆ ಕೋರಮಂಗಲದ ಎನ್‌ಜಿವಿಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ರೇವಣ್ಣ ಅವರನ್ನು ಹಾಜರುಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ನಿವಾಸದ ಎದುರು ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಇಂದು ಭಾರತಕ್ಕೆ ಮರಳಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿದೆ.

ಇದನ್ನೂ ಓದಿ: Prajwal Revanna Case: ಹಾಸನ ಸಂಸದರ ನಿವಾಸದ ಗೇಟಿಗೆ ಬೀಗ; ನಿವಾಸದ ಕೀ ನಾಪತ್ತೆ! ಎಚ್‌ಡಿ ರೇವಣ್ಣ ಕೂಡ ಗಾಯಬ್!‌

Continue Reading
Advertisement
arrest
ದೇಶ7 mins ago

ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೌಲ್ವಿಯ ಬಂಧನ

108 ambulance
ಬೆಂಗಳೂರು11 mins ago

108 Ambulance : 3 ತಿಂಗಳ ವೇತನ ಬಾಕಿ; ನಾಳೆ ರಾತ್ರಿಯಿಂದಲೇ 108 ಆಂಬ್ಯುಲೆನ್ಸ್‌ ಸೇವೆ ಬಂದ್‌!

Viral Video
ವೈರಲ್ ನ್ಯೂಸ್11 mins ago

Viral Video: ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದೇ ಬಿಟ್ಟ ಜನ; ಶಾಕಿಂಗ್‌ ವಿಡಿಯೋ ವೈರಲ್‌

Prajwal Revanna Case Prajwal likely to arrive in Bengaluru today SIT decides to arrest him at airport
ಕ್ರೈಂ19 mins ago

Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್‌ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!

viral news
ಕ್ರೀಡೆ35 mins ago

Viral News: ಎಐ ತಂತ್ರಜ್ಞಾನದ ಮೂಲಕ ತಂಡ ಆಯ್ಕೆ ಮಾಡಿ ಟಿ20 ಸರಣಿ ಗೆದ್ದ ಇಂಗ್ಲೆಂಡ್​ ಮಹಿಳಾ ತಂಡ

Kareena Kapoor appointed Unicef India National Ambassador
ಸಿನಿಮಾ36 mins ago

Kareena Kapoor: ʻಯುನಿಸೆಫ್ ಇಂಡಿಯಾʼಗೆ ರಾಯಭಾರಿಯಾದ ಕರೀನಾ ಕಪೂರ್

Accident News Drowned in water
ವಿಜಯಪುರ48 mins ago

Accident News: ಸೆಕೆ ಎಂದು ಕೆರೆಗೆ ಜಿಗಿದ ವ್ಯಕ್ತಿ ಸಾವು; ವಿದ್ಯುತ್‌ ತಂತಿ ತುಳಿದು ಪ್ರಾಣಬಿಟ್ಟ ರೈತ

Sunidhi Chauhan audience member throws bottle at her
ಬಾಲಿವುಡ್1 hour ago

Sunidhi Chauhan: ಗಾಯಕಿ ಸುನಿಧಿ ಚೌಹಾಣ್ ಮೇಲೆ ಬಾಟಲಿ ಎಸೆತ: ವಿಡಿಯೊ ವೈರಲ್‌!

Vijay Sankeshwar
Lok Sabha Election 20241 hour ago

Vijay Sankeshwar: 2014ರಲ್ಲಿ ಮೋದಿ ಕೈಗೆ ಮೌನಿ ಬಾಬಾ ಖಾಲಿ ಚೊಂಬು ಕೊಟ್ಟಿದ್ದರು; ಉದ್ಯಮಿ ವಿಜಯ ಸಂಕೇಶ್ವರ ವಾಗ್ದಾಳಿ

Gold Rate
ಕರ್ನಾಟಕ1 hour ago

Gold Rate Today: ಯಥಾಸ್ಥಿತಿ ಕಾಪಾಡಿಕೊಂಡ ಚಿನ್ನ- ಬೆಳ್ಳಿಯ ದರ; 22, 24 ಕ್ಯಾರಟ್‌ ದರಗಳು ಇಲ್ಲಿವೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌