ಕರ್ನಾಟಕ
Dharwad : ಮಕ್ಕಳ ಕಳ್ಳ ಎಂದು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ!
ಕರ್ನಾಟಕ
Panchamasali Reservation : ಮಾ. 24ರಂದು ಪಂಚಮಸಾಲಿ ಸಮುದಾಯಕ್ಕೆ GOOD NEWS ಕೊಡ್ತಾರಂತೆ ಸಿಎಂ ಬೊಮ್ಮಾಯಿ
ಮಾರ್ಚ್ 24ರ ಸಂಪುಟ ಸಭೆಯ ಬಳಿಕ ಪಂಚಮಸಾಲಿ ಮೀಸಲಾತಿಗೆ (Panchamasali Reservation) ಸಂಬಂಧಿಸಿ ಮಹತ್ವದ ಮಾಹಿತಿಯನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಾಗಲಕೋಟೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ ಪಂಚಮಸಾಲಿ ಮೀಸಲಾತಿಗೆ (Panchamasali Reservation) ಸಂಬಂಧಿಸಿ ಮಾರ್ಚ್ 24ರಂದು ಮಹತ್ವದ ಮಾಹಿತಿ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಮುಧೋಳದಲ್ಲಿ ಮಾಧ್ಯಮದವರ ಜತೆ ಮಾತನಾಡುತ್ತಾ ಈ ವಿಚಾರ ತಿಳಿಸಿದರು.
ಪಂಚಮಸಾಲಿ ಸಮಾಜವು 2ಎ ಮೀಸಲಾತಿಗಾಗಿ ಒತ್ತಾಯಿಸಿ ದೊಡ್ಡ ಮಟ್ಟದ ಹೋರಾಟವನ್ನೇ ನಡೆಸುತ್ತಿದೆ. ಈಗ ಸಮುದಾಯಕ್ಕೆ ಕೇಂದ್ರ ಸರ್ಕಾರ ಮೇಲ್ವರ್ಗದ ಮೀಸಲಾತಿಯಲ್ಲಿ ಒಂದು ಪಾಲನ್ನು ಪಂಚಮಸಾಲಿಗಳಿಗೆ ನೀಡಲಾಗುವುದು ಎಂದು ಈ ಹಿಂದೆ ಪ್ರಕಟಿಸಲಾಗಿತ್ತು. ಆದರೆ, ಇದನ್ನು ಪಂಚಮಸಾಲಿ ಮೀಸಲು ಹೋರಾಟಗಾರರು ತಿರಸ್ಕರಿಸಿದ್ದಾರೆ. ತಮಗೆ 2ಎ ಮೀಸಲಾತಿಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಒಂದೊಮ್ಮೆ ಈ ಮೀಸಲಾತಿ ಸಿಗದೆ ಹೋದರೆ ತಾವು ಬಿಜೆಪಿ ವಿರುದ್ಧವೂ ಮತ ಚಲಾಯಿಸಲು ಮತದಾರರಿಗೆ ಕರೆ ನೀಡಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಅವರ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.
ಮಾರ್ಚ್ 24ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯ ನಂತರ ಪಂಚಮಸಾಲಿಗಳಿಗೆ 2 ಎ ಮೀಸಲಾತಿ ನೀಡುವ ಬಗ್ಗೆ ಮಾಹಿತಿ ಸಿಗಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅಂದರೆ, ಅಂದು ನಡೆಯುವ ಸಭೆಯಲ್ಲಿ ಮೀಸಲಾತಿ ಬಗ್ಗೆ ಒಂದು ತೀರ್ಮಾನವನ್ನು ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದೇ ವೇಳೆ ʻ2 ಎ ಸಮುದಾಯಗಳನ್ನು 3ಬಿಗೆ ಹಾಕುವ ಬಗ್ಗೆ ಯಾವುದೇ ವರದಿ ಇಲ್ಲʼʼ ಎಂದೂ ಸಿಎಂ ಸ್ಪಷ್ಟಪಡಿಸಿದ್ದಾರೆ.
ಅಭಿವೃದ್ಧಿಗೆ ಒತ್ತು ಎಂದ ಸಿಎಂ ಬೊಮ್ಮಾಯಿ
ಕಳೆದ ಮೂರು ವರ್ಷಗಳಲ್ಲಿ ನೀರಾವರಿ, ಕುಡಿಯುವ ನೀರು, ರೈತರಿಗೆ ಅನುಕೂಲವಾಗುವ ಯೋಜನೆ, ಕೈಗಾರಿಕಾ ಅಭಿವೃದ್ಧಿ ಹಾಗೂ ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳಿಗೆ ಒಟ್ಟು ನೀಡಲಾಗಿದೆ. ಹುನಗುಂದ ಮತ್ತು ಮುಧೋಳದಲ್ಲಿ ವಿವಿಧ ಕಟ್ಟಡಗಳ ಉದ್ಘಾಟನೆ ಮಾಡಲಾಗಿದೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ 1600 ಕೋಟಿ ರೂ.ಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರಲ್ಲದೇ ಕಳೆದ ಮೂರು ವರ್ಷಗಳ ಸರ್ಕಾರದ ನಿರ್ಣಯ, ಬಿಡುಗಡೆ ಮಾಡಿರುವ ಅನುದಾನ ಮತ್ತು ಅನುಷ್ಠಾನದ ಫಲವಾಗಿ ಇದಾಗುತ್ತಿದೆ. ನಮ್ಮ ಕೆಲಸಗಳು ಮಾತನಾಡಬೇಕು ಎಂದರು.
ಆರೋಗ್ಯ ಇಲಾಖೆ ನೌಕರರ ವೇತನ ಹೆಚ್ಚಳ
ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಉತ್ತರಿಸಿ ಈಗಾಗಲೇ ಅವರಿಗೆ 15 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿ ನಾನೇ ಎಂದರು ಬೊಮ್ಮಾಯಿ
ಈ ನಡುವೆ ಬೀಳಗಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಬೊಮ್ಮಾಯಿ ಅವರು ಮುಂದಿನ ಮುಖ್ಯಮಂತ್ರಿಯೂ ನಾನೇ ಎಂದು ಹೇಳಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿ ಮತ್ತೆ ಬೀಳಗಿಗೆ ಬರುತ್ತೇನೆ ಎಂದು ಅವರು ಹೇಳಿದ್ದು ಚರ್ಚೆಗೆ ಕಾರಣವಾಗಿದೆ. ಅದೇ ಹೊತ್ತಿಗೆ ಅವರು ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದೂ ಹೇಳಿದರು.
ಇದನ್ನೂ ಓದಿ : Karnataka Election: ಸಿಎಂ ಬೊಮ್ಮಾಯಿಗೇ ಟಿಕೆಟ್ ಸಿಗುವುದು ಡೌಟು ಎಂದ ಕಾಂಗ್ರೆಸ್
ಕರ್ನಾಟಕ
Murder Case: ಕಾವೇರಿಪಟ್ಟಣಂ ಬಳಿ ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನ ಕೊಲೆ
Murder Case: ತಮಿಳುನಾಡಿನ ಕಾವೇರಿಪಟ್ಟಣಂ ಬಳಿ ನಡು ರಸ್ತೆಯಲ್ಲಿ ದುಷ್ಕರ್ಮಿಗಳ ತಂಡ ಯುವಕನನ್ನು ಅಟ್ಟಾಡಿಸಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದೆ.
ಬೆಂಗಳೂರು ಗ್ರಾಮಾಂತರ: ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಾವೇರಿಪಟ್ಟಣಂ ಬಳಿಯ ಕೃಷ್ಣಗಿರಿ ಡ್ಯಾಂ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ದುಷ್ಕರ್ಮಿಗಳ ತಂಡ ನಡುರಸ್ತೆಯಲ್ಲಿ ಯುವಕನನ್ನು ಅಟ್ಟಾಡಿಸಿ ಕೊಲೆ (Murder Case) ಮಾಡಿದೆ.
ಪ್ರೇಮ ಪ್ರಕರಣದಲ್ಲಿ ಯುವಕನ್ನು ಮೂವರು ಯುವಕರ ತಂಡ ಕೊಲೆ ಮಾಡಿದೆ. ಇತ್ತೀಚೆಗೆ ಯುವತಿಯನ್ನು ಪ್ರೀತಿಸಿ ಮೃತ ಯುವಕ ಮದುವೆಯಾಗಿದ್ದ. ಹೀಗಾಗಿ ಯುವತಿ ಕಡೆಯವರಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೃಷ್ಣಗಿರಿ ಡ್ಯಾಂ ಸರ್ವಿಸ್ ರಸ್ತೆಯಲ್ಲಿ ಯುವಕ ಹೋಗುತ್ತಿದ್ದಾಗ ಅಡ್ಡಗಟ್ಟಿರುವ ಆರೋಪಿಗಳು, ತಲ್ವಾರ್‌ನಿಂದ ಹಲ್ಲೆ ನಡೆಸಿದ್ದರಿಂದ ತಲೆ ಹಾಗೂ ಎದೆಯ ಭಾಗದಲ್ಲಿ ಗಂಭೀರ ಗಾಯಗಳಾಗಿ ಯುವಕ ಮೃತಪಟ್ಟಿದ್ದಾನೆ. ಕೊಲೆಯ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕಾವೇರಿಪಟ್ಟಣಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರ ಸಿದ್ಧತೆ
ಬೆಂಗಳೂರು: ಕಳೆದ ಜನವರಿ 10 ರಂದು ನಾಗವಾರ ಬಳಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿದ್ದ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.
ಲೋಹಿತ್ ಎಂಬುವವರು ತಮ್ಮ ಬೈಕ್‌ನಲ್ಲಿ ಪತ್ನಿ ತೇಜಸ್ವಿನಿ ಹಾಗೂ ಮಗ ವಿಹಾನ್ ಜತೆ ಬೈಕ್‌ನಲ್ಲಿ ಕೆ.ಆರ್.ಪುರಂ ಕಡೆಯಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ನಾಗವಾರ ಬಳಿ ಮೆಟ್ರೊ ಪಿಲ್ಲರ್ ಬೈಕ್ ಮೇಲೆ ಬಿದ್ದು ತಾಯಿ ತೇಜಸ್ವಿನಿ ಹಾಗೂ ಮಗ ವಿಹಾನ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಮೃತ ತೇಜಸ್ವಿನಿ ಪತಿ ಲೋಹಿತ್ ಗೋವಿಂದಪುರ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ | Road accident : ಬೈಕ್- ಲಾರಿ ಮಧ್ಯೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು
ಲೋಹಿತ್ ನೀಡಿದ ದೂರಿನನ್ವಯ ಸೈಟ್ ಎಂಜಿನಿಯರ್, ಮೆಟ್ರೊ ಕಂಟ್ರಾಕ್ಟರ್, ಸೈಟ್ ಇಂಚಾರ್ಜ್, ಬಿಎಂಆರ್‌ಸಿಎಲ್ ಅಧಿಕಾರಿಗಳು ಸೇರಿ 8 ಮಂದಿ ವಿರುದ್ಧ ಕೇಸ್ ದಾಖಲಾಗಿತ್ತು. ಸದ್ಯ ಪ್ರಕರಣದ ತನಿಖೆಯನ್ನು ಗೋವಿಂದಪುರ ಪೊಲೀಸರು ಪೂರ್ಣಗೊಳಿಸಿದ್ದಾರೆ. ಕೇಸ್ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಗೋವಿಂದಪುರ ಪೊಲೀಸರ ವರದಿಯನ್ನು ಖುದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಮುಖ ಅಂಶಗಳನ್ನು ಪರಿಶೀಲನೆ ಮಾಡಲಿದ್ದಾರೆ. ಪೊಲೀಸರು ಪ್ರಮುಖವಾಗಿ ಎರಡು ಅಂಶಗಳ ಮೇಲೆ ಒತ್ತು ಕೊಟ್ಟು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು
ಮೆಟ್ರೋ ಪಿಲ್ಲರ್ ದುರಂತದಲ್ಲಿ ಮೊದಲಿಗೆ ಮೆಟ್ರೋ ಪಿಲ್ಲರ್‌ನ ಪ್ಲಾನ್ ಹಾಗೂ ಎಕ್ಸಿಕ್ಯೂಟಿಂಗ್. ಪಿಲ್ಲರ್ ಬಳಿ ಕೈಗೊಂಡಿದ್ದ ಸುರಕ್ಷತಾ ಕ್ರಮಗಳು. ಸುರಕ್ಷತೆ ಕೈಗೊಳ್ಳಲು ನಿರ್ಲಕ್ಷ್ಯ ಕೈಗೊಂಡಿರುವುದು ಬೆಳಕಿಗೆ ಬಂದಿದೆ. ಸುರಕ್ಷತಾ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಜೆಕ್ಟ್ ಮ್ಯಾನೇಜರ್‌ಗೆ ಇದ್ದು ಪ್ರಾಜೆಕ್ಟ್ ಹೆಡ್‌ಗೆ ಎಲ್ಲರನ್ನೂ ನಿರ್ಧರಿಸುವ ಅಧಿಕಾರವಿದೆ. ಆದರೆ, ಸುರಕ್ಷತಾ ಮುತುವರ್ಜಿ ವಹಿಸದೇ ದುರ್ಘಟನೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ. ಹೀಗೆ ಸುಮಾರು 9 ಮಂದಿ ಅಧಿಕಾರಿಗಳನ್ನು ಹೊಣೆಯಾಗಿಸಿ ತನಿಖೆ ನಡೆಸಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.
ಕರ್ನಾಟಕ
ವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಕೇಂದ್ರ ಸರ್ಕಾರಕ್ಕೆ 155 ಲಕ್ಷ ಕೋಟಿ ರೂ. ಸಾಲದವರೆಗಿನ ಪ್ರಮುಖ ಸುದ್ದಿಗಳಿವು
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
1. Karnataka Elections : ಹೆಂಡ್ತಿ, ಮಗನ ಜತೆ ಕೇಳಿ ಹೇಳ್ತೇನೆ; ಕೋಲಾರದ ಜನರಿಗೆ ಸಿದ್ದರಾಮಯ್ಯ ಸಮಾಧಾನ!
ʻʻಕೋಲಾರ ಸುರಕ್ಷಿತ ಅಲ್ಲ ಎಂಬ ವರದಿಗಳಿವೆ. ಹೀಗಾಗಿ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿʼʼ ಎಂಬ ಹೈಕಮಾಂಡ್ ಸಂದೇಶದ ಬಳಿಕ ಅಡಕತ್ತರಿಯಲ್ಲಿ ಸಿಲುಕಿರುವ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಕೋಲಾರದ ಅಭಿಮಾನಿಗಳನ್ನು ಸಮಾಧಾನ ಮಾಡಲು ʻಫ್ಯಾಮಿಲಿ ಅಸ್ತ್ರʼ ಪ್ರಯೋಗ ಮಾಡಿದ್ದಾರೆ. ನಾನು ಹೆಂಡತಿ ಮತ್ತು ಮಗನ ಜತೆ ಚರ್ಚೆ ಮಾಡಿ ಗುರುವಾರ ಅಂತಿಮ ತೀರ್ಮಾನ ಪ್ರಕಟಿಸುತ್ತೇನೆ (Karnataka Elections) ಎಂದು ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ
ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕಳೆದ ಎರಡು ತಿಂಗಳಲ್ಲಿ ಬರೊಬ್ಬರಿ 13 ಬಾರಿ ತಮ್ಮ ಕ್ಷೇತ್ರ ಶಿಗ್ಗಾಂವಿಗೆ ಪ್ರವಾಸ ಮಾಡಿದ್ದಾರೆ. ಈ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!
3. Nitin Gadkari : ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಮತ್ತೆ ಜೀವ ಬೆದರಿಕೆ ಕರೆ; ಏನಾಗುತ್ತಿದೆ ಹಿಂಡಲಗಾ ಜೈಲಿನಲ್ಲಿ?
ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಮಾಡಲಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದ ವ್ಯಕ್ತಿ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Amritpal Singh: 80 ಸಾವಿರ ಪೊಲೀಸರು ಏನು ಮಾಡುತ್ತಿದ್ದಾರೆ? ಪಂಜಾಬ್ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಖಲಿಸ್ತಾನಿಗಳ ಪರ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಅಮೃತ್‌ಪಾಲ್ ಸಿಂಗ್ (Amritpal Singh) ಬಂಧನಕ್ಕಾಗಿ ಕಾರ್ಯಾಚರಣೆಯು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆತನನ್ನು ಬಂಧಿಸಲು ರಾಜ್ಯದ ಪೊಲೀಸರು ಹರಸಾಹಸಪಡುತ್ತಿದ್ದರೂ ಇದುವರೆಗೆ ಬಂಧನ ಸಾಧ್ಯವಾಗಿಲ್ಲ. ಆತನ ಆಪ್ತರ ಬಂಧನ, ಕಾರು ವಶ, ಶಸ್ತ್ರಾಸ್ತ್ರಗಳ ಜಪ್ತಿ ಮಾತ್ರ ಸಾಧ್ಯವಾಗಿದೆ. ಇನ್ನು ಬಂಧನ ಕಾರ್ಯಾಚರಣೆ ಕುರಿತು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಪಂಜಾಬ್‌ನ 80 ಸಾವಿರ ಪೊಲೀಸರು ಏನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Karnataka Election: ಯುಗಾದಿಗೆ ಕಾಂಗ್ರೆಸ್ ರಣಕಹಳೆ: ಮೊದಲ ಪಟ್ಟಿ ಬುಧವಾರ ಬಿಡುಗಡೆ ಎಂದ ಕೆ.ಜೆ. ಜಾರ್ಜ್
ಈಗಾಗಲೆ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಎರಡು ಸಭೆಗಳನ್ನು ನಡೆಸಿರುವ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯ ಮೊದಲ ಪಟ್ಟಿಯನ್ನು ಯುಗಾದಿ ದಿನವಾದ ಬುಧವಾರ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಮಾಜಿ ಸಚಿವ ಹಾಗೂ ಚುನಾವಣಾ ಸಮಿತಿಯ ಸದಸ್ಯರೂ ಆಗಿರುವ ಕೆ.ಜೆ. ಜಾರ್ಜ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಒಟ್ಟು 155 ಲಕ್ಷ ಕೋಟಿ ರೂ. ಸಾಲ ಇದೆ ಎಂದ ಸೀತಾರಾಮನ್, ಮೋದಿ ಸರ್ಕಾರದಿಂದಲೇ 100 ಲಕ್ಷ ಕೋಟಿ ಸಾಲ?
ಭಾರತ ಸರ್ಕಾರ (Indian Government) ಮಾಡಿರುವ ಒಟ್ಟು ಸಾಲ ಎಷ್ಟಾಗಿದೆ ಗೊತ್ತಾ? ಬರೋಬ್ಬರಿ 155.8 ಲಕ್ಷ ಕೋಟಿ ರೂಪಾಯಿ. ಅಂದರೆ, ನಮ್ಮ ಒಟ್ಟು ಜಿಡಿಪಿಯ ಶೇ.57.3ರಷ್ಟಾಗುತ್ತದೆ ಈ ಮೊತ್ತ! ಅಂದ ಹಾಗೆ, ಈ ಮಾಹಿತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಸೋಮವಾರ ಲೋಕಸಭೆಗೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Zakir Naik: ಒಮಾನ್‌ನಿಂದ ಜಾಕೀರ್ ನಾಯ್ಕ್ ಗಡಿಪಾರು, ಮೂಲಭೂತವಾದಿಯ ಬಂಧನಕ್ಕೆ ಭಾರತ ಮುಹೂರ್ತ ಫಿಕ್ಸ್?
ಇಸ್ಲಾಮಿಕ್ ಮೂಲಭೂತವಾದವನ್ನು ಪಸರಿಸುವುದು, ಉಗ್ರರಿಗೆ ಹಣಕಾಸು ನೆರವು ನೀಡುವುದು, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಭಾಷಣಗಳಿಂದ ಸಂಕಷ್ಟಕ್ಕೆ ಸಿಲುಕಿ, ವಿದೇಶಕ್ಕೆ ಪರಾರಿಯಾಗಿರುವ ವಿವಾದಿತ ಧರ್ಮಗುರು ಜಾಕೀರ್ ನಾಯ್ಕ್‌ನನ್ನು (Zakir Naik) ಬಂಧಿಸಲು ಭಾರತ ಮುಹೂರ್ತ ಫಿಕ್ಸ್ ಮಾಡಿದೆ. ಇಸ್ಲಾಮಿಕ್ ಮೂಲಭೂತವಾದಿಯನ್ನು ಗಡಿಪಾರು ಮಾಡಲು ಒಮಾನ್ ಸರ್ಕಾರದ ಜತೆ ಭಾರತ ಮಾತುಕತೆ ನಡೆಸುತ್ತಿದೆ. ಅಲ್ಲಿಯೇ ಈತನ ಬಂಧನಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳು ಒಮಾನ್ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Modi in Karnataka: ಬೈಯಪ್ಪನಹಳ್ಳಿ-ಕೆ.ಆರ್. ಪುರ ಕಾಮಗಾರಿ ಮುಗಿದಿಲ್ಲ: ಮೋದಿಯಿಂದ ಅಪೂರ್ಣ ಮೆಟ್ರೊ ಕಾಮಗಾರಿ ಉದ್ಘಾಟನೆ ಎಂದ ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25 ರಂದು ಬೆಂಗಳೂರಿನಲ್ಲಿ ಕೆ.ಆರ್. ಪುರದಿಂದ ವೈಟ್‌ಫೀಲ್ಡ್‌ವರೆಗಿನ ಮೆಟ್ರೊ ರೈಲು ಮಾರ್ಗವನ್ನು ಉದ್ಘಾಟಿಸುವ ಕಾರ್ಯಕ್ರಮವಿದೆ. ಆದರೆ ಈ ಮಾರ್ಗ ಇನ್ನೂ ಅಪೂರ್ಣವಾಗಿದೆ ಹಾಗೂ ಹಿಂದಿನ ನಿಲ್ದಾಣದೊಂದಿಗೆ ಸಂಪರ್ಕವೇ ಸಾಧ್ಯವಾಗಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Actor Chetan Ahimsa : ಹಿಂದು ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್; ನಟ ಚೇತನ್ ಅಹಿಂಸಾ ಅರೆಸ್ಟ್
ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟ ಚೇತನ್ ಅಹಿಂಸಾ (Actor Chetan Ahimsa) ಅವರನ್ನು ಮಂಗಳವಾರ ಮುಂಜಾನೆ ಮತ್ತೆ ಬಂಧನಕ್ಕೆ ಒಳಗಾಗಿದ್ದಾರೆ. ಅವರು ಹಿಂದು ಧರ್ವವನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪದಡಿ ಸೋಮವಾರ ರಾತ್ರಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಶೇಷಾದ್ರಿಪುರಂ ಪೊಲೀಸರು ಮಂಗಳವಾರ ಬೆಳಗ್ಗಿನ ಜಾವ ಮನೆಯಿಂದ ಬಂಧಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Brave daughter : ಹಾವು ಕಡಿತಕ್ಕೆ ಒಳಗಾದ ತಾಯಿಯನ್ನು ಬಾಯಿಯಿಂದ ವಿಷ ಹೊರಗೆಳೆದು ರಕ್ಷಿಸಿದ ಮಗಳು
ತಾಯಿಗೆ ವಿಷದ ಹಾವು ಕಚ್ಚಿದ ಸಂದರ್ಭದಲ್ಲಿ ಮಗಳು ಧೃತಿಗೆಡದೆ, ಆ ವಿಷವನ್ನು ಚೀಪಿ ಹೊರ ತೆಗೆದು ಸಿನಿಮೀಯ ರೀತಿಯಲ್ಲಿ ಅಮ್ಮನನ್ನು ರಕ್ಷಿಸಿದ ಘಟನೆ (Brave daughter) ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದಲ್ಲಿ ನಡೆದಿದೆ. ಸಾಹಸ ಮೆರೆದ ಯುವತಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದ್ದು, ತಾಯಿಗೆ ಮರು ಜನ್ಮ ನೀಡಿದ ಮಗಳು ಎಂದು ಜನರು ಕೊಂಡಾಡುತ್ತಿದ್ದಾರೆ. ಮತ್ತಷ್ಟು ವೈರಲ್ ನ್ಯೂಸ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Rupert Murdoch: 92ನೇ ವಯಸ್ಸಲ್ಲಿ ಕೊನೇ ಪ್ರೀತಿ ಕಂಡುಕೊಂಡ ಮಾಧ್ಯಮ ಉದ್ಯಮಿ ರೂಪರ್ಟ್ ಮುರ್ಡೋಕ್; ಶೀಘ್ರದಲ್ಲೇ 5ನೇ ಮದುವೆ
- WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್ಸಿಬಿ
- Pathaan Film: ಒಟಿಟಿಯಲ್ಲೂ ತೆರೆಕಾಣಲು ಸಜ್ಜಾಗಿದೆ ಪಠಾಣ್; ಅಮೇಜಾನ್ ಪ್ರೈಮ್ನಲ್ಲಿ ಈ ದಿನಾಂಕದಂದು ಬಿಡುಗಡೆ
- BJP Important Party: ಜಗತ್ತಿನಲ್ಲೇ ಬಿಜೆಪಿ ಪ್ರಮುಖ ಪಕ್ಷ, 2024ರಲ್ಲೂ ಗೆಲುವು; ವಾಲ್‌ಸ್ಟ್ರೀಟ್ ಜರ್ನಲ್ ವರದಿ
- ಪಾಟ್ನಾ ರೈಲ್ವೆ ಸ್ಟೇಶನ್ನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಆಗಿದ್ದಕ್ಕೆ ಫುಲ್ ಖುಷಿಯಾದ ಪೋರ್ನ್ ಸ್ಟಾರ್; ಅದು ನಂದೇ ಎಂದ ಕೇಂದ್ರಾ ಲಸ್ಟ್
- Tipu Sultan: ಕಾಂಗ್ರೆಸ್ ನನ್ನನ್ನು ನಂಜೇಗೌಡರಿಗೆ ಹೋಲಿಕೆ ಮಾಡಿರುವುದು ಹೆಮ್ಮೆಯ ವಿಚಾರ: ಸಿ.ಟಿ. ರವಿ
ಕರ್ನಾಟಕ
ಕೆಜಿಎಫ್‌ನ ರಾಬರ್ಟಸನ್ ಪೇಟೆ ಸೇರಿ 41 ನಗರಗಳಲ್ಲಿ Jio True 5G ಸೇವೆ ಶುರು
ರಿಲಯನ್ಸ್ ಕಂಪನಿಯ ಜಿಯೋ ದೇಶಾದ್ಯಂತ ತನ್ನ 5ಜಿ ಸೇವೆಯನ್ನು ವಿಸ್ತರಿಸುತ್ತದೆ. ಈವರೆಗೆ ಒಟ್ಟಾರೆ 406 ನಗರಗಳಲ್ಲಿ 5ಜಿ ಸೇವೆ ದೊರೆಯುತ್ತಿದೆ. ಈಗ ಕರ್ನಾಟಕದ ಕೆಜಿಎಫ್ ನಗರದಲ್ಲಿ ಲಾಂಚ್ ಮಾಡಲಾಗಿದೆ(Jio True 5G).
ಬೆಂಗಳೂರು: ಕರ್ನಾಟಕದ ಕೋಲಾರ ಜಿಲ್ಲೆಯ ಕೆಜಿಎಫ್‌ನ ರಾಬರ್ಟಸನ್‌ಪೇಟೆ ಸೇರಿದಂತೆ ದೇಶದ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 41 ಹೆಚ್ಚುವರಿ ನಗರಗಳಲ್ಲಿ ರಿಲಯನ್ಸ್ ಜಿಯೋ ತನ್ನ ಟ್ರೂ 5ಜಿ ಸೇವೆಗಳನ್ನು (Jio True 5G) ಮಂಗಳವಾರ ಪ್ರಾರಂಭಿಸಿದೆ. ರಿಲಯನ್ಸ್ ಜಿಯೋ ಭಾರತದ ಡಿಜಿಟಲ್ ರೂಪಾಂತರದ ಕಡೆಗೆ ದಣಿವರಿಯದೆ ಕೆಲಸ ಮಾಡುತ್ತಿದೆ ಮತ್ತು ಈ ನಗರಗಳಲ್ಲಿ ಹೆಚ್ಚಿನವುಗಳಲ್ಲಿ ಟ್ರೂ 5ಜಿ ಸೇವೆಗಳನ್ನು ವಿಸ್ತರಿಸಿದ ಮೊದಲ ಟೆಲಿಕಾಂ ಆಪರೇಟರ್ ಜಿಯೋ ಆಗಿದೆ. ಇದರೊಂದಿಗೆ ದೇಶದ 406 ನಗರಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.
ಜಿಯೋ ತನ್ನ ಸುಧಾರಿತ ಟ್ರೂ 5ಜಿ ಸೇವೆಗಳನ್ನು ಶೀಘ್ರವಾಗಿ ಹೊರ ತರುತ್ತಿದೆ. ಆದರೂ ಗ್ರಾಹಕರಿಗೆ ಬಹು ನೆಚ್ಚಿನ ಆಪರೇಟರ್ ಆದ ಜಿಯೋ ಉತ್ತಮ ಗ್ರಾಹಕ ಅನುಭವವನ್ನು ಖಚಿತಪಡಿಸಿಕೊಳ್ಳಲು ಆ ನಗರವು ಅದರ ಟ್ರೂ 5ಜಿ ನೆಟ್‌ವರ್ಕ್‌ನಿಂದ ಗಣನೀಯ ಪ್ರಮಾಣದಲ್ಲಿ ಕವರ್ ಆದಾಗ ಮಾತ್ರ ಟ್ರೂ 5ಜಿ ಅನ್ನು ಹೊಸ ನಗರಕ್ಕೆ ವಿಸ್ತರಿಸುತ್ತದೆ. ಜಿಯೋ ಟ್ರೂ 5ಜಿ ಅನುಭವವನ್ನು ಈಗಾಗಲೇ ನೂರಾರು ನಗರಗಳಲ್ಲಿ ಲಕ್ಷಾಂತರ ಬಳಕೆದಾರರು ಪಡೆಯುತ್ತಿದ್ದಾರೆ.
16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 41 ನಗರಗಳೆಂದರೆ ಅದೋನಿ, ಬದ್ವೇಲ್, ಚಿಲಕಲೂರಿಪೇಟೆ, ಗುಡಿವಾಡ, ಕದಿರಿ, ನರಸಾಪುರ, ರಾಯಚೋಟಿ, ಶ್ರೀಕಾಳಹಸ್ತಿ, ತಾಡೆಪಲ್ಲಿಗುಡೆಂ (ಆಂಧ್ರಪ್ರದೇಶ), ಮಾರ್ಗೋವಾ (ಗೋವಾ) ಫತೇಹಾಬಾದ್, ಗೋಹಾನ, ಹಂಸಿ, ನರ್ನಾಲ್, ಪಲ್ವಾಲ್ (ಹರಿಯಾಣ), ಪೌಂಟಾ ಸಾಹಿಬ್ (ಹಿಮಾಚಲ ಪ್ರದೇಶ), ರಜೌರಿ (ಜಮ್ಮು ಮತ್ತು ಕಾಶ್ಮೀರ) ದುಮ್ಕಾ (ಜಾರ್ಖಂಡ್), ರಾಬರ್ಟ್‌ಸನ್‌ಪೇಟೆ(ಕರ್ನಾಟಕ), ಕಾಞಂಗಾಡ್, ನೆಡುಮಂಗಡ, ತಳಿಪರಂಬ, ತಲಸ್ಸೆರಿ, ತಿರುವಲ್ಲಾ (ಕೇರಳ), ಬೇತುಲ್, ವಿದಿಶಾ, ದೇವಾಸ್, (ಮಧ್ಯಪ್ರದೇಶ) ಭಂಡಾರಾ, ವಾರ್ಧಾ (ಮಹಾರಾಷ್ಟ್ರ), ಲುಂಗ್ಲೇ (ಮಿಜೋರಾಂ), ಬ್ಯಾಸನಗರ, ರಾಯಗಡ (ಒಡಿಶಾ), ಹೋಶಿಯಾರ್‌ಪುರ (ಪಂಜಾಬ್), ಟೋಂಕ್ (ರಾಜಸ್ಥಾನ), ಕಾರೈಕುಡಿ, ಕೃಷ್ಣಗಿರಿ, ರಾಣಿಪೇಟ್, ಥೇನಿ ಅಲ್ಲಿನಗರಂ, ಉದಗಮಂಡಲಂ, ವಾನಂಬಾಡಿ (ತಮಿಳುನಾಡು) ಮತ್ತು ಕುಮಾರ್‌ಘಾಟ್ (ತ್ರಿಪುರ)
ಇಂದಿನ ಟ್ರೂ 5ಜಿ ಆರಂಭದ ಕುರಿತು ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, “ದೇಶಾದ್ಯಂತ ಲಕ್ಷಾಂತರ ಬಳಕೆದಾರರು ಜಿಯೋ ಟ್ರೂ 5ಜಿ ಬಳಸಲು ಪ್ರಾರಂಭಿಸಿದ್ದಾರೆ. ನಮ್ಮ ನೆಟ್‌ವರ್ಕ್‌ನ ಬಲವು ನಮ್ಮ ಗ್ರಾಹಕರ ಜೀವನವನ್ನು ಹೆಚ್ಚಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಜಿಯೋ ತನ್ನ ಟ್ರೂ 5ಜಿ ವ್ಯಾಪ್ತಿಯನ್ನು ವೇಗವಾಗಿ ವಿಸ್ತರಿಸುತ್ತಿದೆ. ನಾವು ದೇಶದ ಹೆಚ್ಚಿನ ಭಾಗವನ್ನು ಆವರಿಸಿದ್ದೇವೆ, ಇದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ.
“2023ರಲ್ಲಿ ಜಿಯೋ ಟ್ರೂ 5ಜಿ ತಂತ್ರಜ್ಞಾನದ ಪರಿವರ್ತನೆಯ ಪ್ರಯೋಜನಗಳನ್ನು ಪ್ರತಿ ಭಾರತೀಯ ಆನಂದಿಸಬೇಕೆಂದು ನಾವು ಬಯಸುತ್ತೇವೆ. ರಾಜ್ಯ ಸರ್ಕಾರಗಳು ಮತ್ತು ಆಡಳಿತಗಾರರು ತಮ್ಮ ಪ್ರದೇಶಗಳನ್ನು ಡಿಜಿಟಲೈಸ್ ಮಾಡುವುದಕ್ಕೆ ಬೆಂಬಲ ನೀಡಿದ್ದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ,” ಎಂದಿದ್ದಾರೆ.
ಇದನ್ನೂ ಓದಿ: ಈಗ ದೇಶದ 304 ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆ ಲಭ್ಯ, ಕೋಲಾರದಲ್ಲೂ ಲಾಂಚ್
ಮಾರ್ಚ್ 21ರಿಂದ ಈ 41 ನಗರಗಳಲ್ಲಿರುವ ಜಿಯೋ ಬಳಕೆದಾರರಿಗೆ ಜಿಯೋ ವೆಲ್ಕಮ್ ಆಫರ್ ಅನ್ನು ಪ್ರಯತ್ನಿಸಲು ಆಹ್ವಾನಿಸಲಾಗುತ್ತದೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಬಹುದು.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ11 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ11 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು