Yellapur News: ಯಲ್ಲಾಪುರದಲ್ಲಿ ಡಿ. 9, 10 ರಂದು ಜಿಲ್ಲಾ ಮಟ್ಟದ ಸಾಹಿತ್ಯ ಮತ್ತು ಗಮಕ ಅಧಿವೇಶನ - Vistara News

ಉತ್ತರ ಕನ್ನಡ

Yellapur News: ಯಲ್ಲಾಪುರದಲ್ಲಿ ಡಿ. 9, 10 ರಂದು ಜಿಲ್ಲಾ ಮಟ್ಟದ ಸಾಹಿತ್ಯ ಮತ್ತು ಗಮಕ ಅಧಿವೇಶನ

Yellapur News: ಎರಡು ದಿನಗಳ ಜಿಲ್ಲಾ ಮಟ್ಟದ ಸಾಹಿತ್ಯ ಮತ್ತು ಗಮಕ ಅಧಿವೇಶನವು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಎಪಿಎಂಸಿ ಅಡಿಕೆ ಭವನದಲ್ಲಿ ನಡೆಯಲಿದೆ.

VISTARANEWS.COM


on

Sahitya and Gamaka Adhiveshana
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಲ್ಲಾಪುರ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿರಸಿ ಜಿಲ್ಲಾ ಘಟಕ, ಅ.ಭಾ.ಸಾ.ಪ ಯಲ್ಲಾಪುರ ಸಮಿತಿ ಹಾಗೂ ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷದ್‌ ವತಿಯಿಂದ ಡಿಸೆಂಬರ್‌ 9 ಮತ್ತು 10 ರಂದು ಎರಡು ದಿನಗಳ ಜಿಲ್ಲಾ ಮಟ್ಟದ ʼಸಾಹಿತ್ಯ ಮತ್ತು ಗಮಕ ಅಧಿವೇಶನʼವನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಎಪಿಎಂಸಿ ಅಡಿಕೆ ಭವನದಲ್ಲಿ (Yellapur News) ಆಯೋಜಿಸಲಾಗಿದೆ.

ಈ ಅಧಿವೇಶನದಲ್ಲಿ ವೈಚಾರಿಕ ಗೋಷ್ಠಿ, ಸಮ್ಮಾನ, ಪ್ರಶಸ್ತಿ ವಿತರಣೆ, ಬಹುಭಾಷಾ ಕವಿಗೋಷ್ಠಿ, ತಾಳಮದ್ದಳೆ, ಗಮಕ ವಾಚನ, ಗಮಕ ಗೋಷ್ಠಿ, ಕವನ ಸಂಕಲನ ಬಿಡುಗಡೆ, ಪ್ರಸಿದ್ಧ ಕವಿಗಳ ಕಾವ್ಯ ಗಾಯನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ಉದ್ಘಾಟನಾ ಸಮಾರಂಭ

ಡಿ.9ರಂದು ಬೆಳಗ್ಗೆ 9.45 ರಿಂದ 11.30 ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಂಗಳೂರಿನ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಉದ್ಘಾಟನೆ ನೆರವೇರಿಸಲಿದ್ದು, ಶಿರಸಿಯ ಜನಮಾಧ್ಯಮ ದೈನಿಕದ ಗೌರವ ಸಂಪಾದಕ ಅಶೋಕ ಹಾಸ್ಯಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅಭ್ಯಾಗತರಾಗಿ ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ತು ಅಧ್ಯಕ್ಷೆ ಗಂಗಮ್ಮಾ ಕೇಶವಮೂರ್ತಿ, ಅ.ಭಾ.ಸಾ.ಪ. ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ನರೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಆಗಮಿಸಲಿದ್ದಾರೆ. ಮಲೆನಾಡು ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಅ.ಭಾ.ಸಾ.ಪ ಶಿರಸಿ ಕಾರ್ಯಕಾರಿ ಸದಸ್ಯ ಜಗದೀಶ ಬಂಡಾರಿ ಉಪಸ್ಥಿತರಿರಲಿದ್ದಾರೆ.

ಗಮಕ ವಾಚನ

ಬೆಳಗ್ಗೆ 11.45ರಿಂದ ಮಧ್ಯಾಹ್ನ 12.45ರವರೆಗೆ ʼಜೈಮಿನಿ ಭಾರತದ ಯಮನ ವಿವಾಹʼ ಗಮಕ ವಾಚನ ನಡೆಯಲಿದೆ. ಬೆಂಗಳೂರಿನ ಗಂಗಮ್ಮಾ ಕೇಶವ ಮೂರ್ತಿ ಗಮಕ ವಾಚನ ಮಾಡಲಿದ್ದು, ವಿನಾಯಕ ಶಿವಮೊಗ್ಗ ವ್ಯಾಖ್ಯಾನ ನೀಡಲಿದ್ದಾರೆ. ಈ ವೇಳೆ ವೆಂಕಟರಮಣ ಮಠ ಅಧ್ಯಕ್ಷ ವಿನಾಯಕ ಪೈ, ಪ್ರಖ್ಯಾತ ಕಾಷ್ಠ ಕಲಾವಿದ ಸಂತೋಷ ಗುಡಿಗಾರ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | ವಿದ್ವಾನ್ ರಂಗನಾಥ ಶರ್ಮ ಪ್ರಶಸ್ತಿಗೆ ಡಾ. ಸುಮಾ ಶಿವಾನಂದ ದೇಸಾಯಿ ಆಯ್ಕೆ

ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್, ಶ್ರೀ ವನರಾಗ ಶರ್ಮಾ ಪ್ರಶಸ್ತಿ ಪ್ರದಾನ

ಮಧ್ಯಾಹ್ನ 12.45ರಿಂದ 1.30ರವರೆಗೆ ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್, ಶ್ರೀ ವನರಾಗ ಶರ್ಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 2021ನೇ ಸಾಲಿನ ಪ್ರಶಸ್ತಿಯನ್ನು ಟಿ.ಎಂ.ರಮೇಶ ಸಿದ್ದಾಪುರ (ದಶಕದ ಕಥೆಗಳು ಕಥಾ ಸಂಕಲನ), ಡಾ. ಶೋಭಾ ನಾಯಕ ಬೆಳಗಾವಿ (ಶಯ್ಯಾಗೃಹದ ಸುದ್ದಿಗಳು ಕವನ ಸಂಕಲನ) ಮತ್ತು 2022ನೇ ಸಾಲಿನ ಪ್ರಶಸ್ತಿಯನ್ನು ಗಂಗಾಧರ ಕೊಳಗಿ ಸಿದ್ದಾಪುರ (ಮಿಸ್ಟ್‌ಕಾಲ್‌ ಕಥಾ ಸಂಕಲನ), ಡಾಲಿ ವಿಜಯಕುಮಾರ ಪಾವಗಡ (ನೆಲ್ಲು ಎಸೆಯಬೇಡ ಕವನ ಸಂಕಲನ) ಅವರಿಗೆ ಪ್ರದಾನ ಮಾಡಲಾಗುತ್ತದೆ.

ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮಾತೃಭೂಮಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಶ್ರೀರಂಗ ಕಟ್ಟಿ, ನಾಗರೀಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಉಪಸ್ಥಿತರಿರಲಿದ್ದಾರೆ. ನಂತರ 1.30 ರಿಂದ 2.30ರವರೆಗೆ ಭೋಜನ ವಿರಾಮ ಇರಲಿದೆ.

ಗಮಕ ಗೋಷ್ಠಿ, ಸಾಹಿತ್ಯ ಗೋಷ್ಠಿ, ಗಮಕ ವಾಚನ

ಮಧ್ಯಾಹ್ನ 2.30ರಿಂದ 3.15ರವರೆಗೆ ಗಮಕ ಗೋಷ್ಠಿ ಇರಲಿದೆ. ಗಂಗಮ್ಮಾ ಕೇಶವ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ತೆಕ್ಕೆರೆ ಸುಬ್ರಹ್ಮಣ್ಯ ಭಟ್ಟ, ಎಂ.ಎಸ್.ವಿನಾಯಕ ಶಿವಮೊಗ್ಗ ವ್ಯಾಖ್ಯಾನ ನೀಡಲಿದ್ದಾರೆ.

ಮಧ್ಯಾಹ್ನ 3.15ರಿಂದ 4.15ಕ್ಕೆ ʼಸಂಸ್ಕೃತ ಸಾಹಿತ್ಯದಲ್ಲಿ ಪರಿಸರʼ ವಿಷಯದ ಕುರಿತು ಸಾಹಿತ್ಯ ಗೋಷ್ಠಿ ನಡೆಯಲಿದೆ. ವಿದ್ವಾನ್ ರಾಜಶೇಖರ ಧೂಳಿ ಅಧ್ಯಕ್ಷತೆ ವಹಿಸಲಿದ್ದು, ಡಾ. ನವೀನ ಗಂಗೋತ್ರಿ ಕೊಯಿಮುತ್ತೂರು ಉಪನ್ಯಾಸ ನೀಡಲಿದ್ದು, ಯಲ್ಲಾಪುರದ ವೈಟಿಎಸ್‌ಎಸ್‌ ಅಧ್ಯಕ್ಷ ರವಿ ಶ್ಯಾನಭಾಗ, ಪ್ರಾ.ಶಾ.ಶಿ.ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ ಉಪಸ್ಥಿತರಿರಲಿದ್ದಾರೆ.

ನಂತರ 4.15ರಿಂದ 5.15ರವರೆಗೆ ಗಮಕ ವಾಚನ ನಡೆಯಲಿದ್ದು, ತೆಕ್ಕೆರೆ ಸುಬ್ರಹ್ಮಣ್ಯ ಭಟ್ಟ ಗಮಕ ವಾಚನ ಮಾಡಲಿದ್ದು, ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ ಜಿ.ಎಲ್.ಹೆಗಡೆ ಕುಮಟಾ ವ್ಯಾಖ್ಯಾನ ನೀಡಲಿದ್ದಾರೆ. ವಿಶ್ರಾಂತ ತಹಸೀಲ್ದಾರ್ ಡಿ.ಜಿ.ಹೆಗಡೆ, ಯಲ್ಲಾಪುರದ ತಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ ಉಪಸ್ಥಿತರಿರಲಿದ್ದಾರೆ.

ತಾಳಮದ್ದಳೆ

ಸಂಜೆ 5.30ಕ್ಕೆ ವಾಮನ ಚರಿತ್ರೆ ತಾಳಮದ್ದಳೆ ಇರಲಿದ್ದು, ಹಿಮ್ಮೇಳದಲ್ಲಿ ವಿದ್ವಾನ್‌ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ನರಸಿಂಹ ಹಂಡ್ರಮನೆ, ಅರ್ಥದಾರಿಗಳಾಗಿ ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ, ಪ್ರೊ. ಎಂ.ಎನ್.ಹೆಗಡೆ, ವಿದ್ವಾನ್ ನಾರಾಯಣ ದೇಸಾಯಿ ಡಾ. ಡಿ.ಕೆ.ಗಾಂಕರ ಭಾಗವಹಿಸಲಿದ್ದಾರೆ.

ಇದನ್ನೂ ಓದಿ | Raja Marga Column : ಮಕ್ಕಳು ಬಾಲ್ಯದಲ್ಲಿ ಎಂತಹ ಪುಸ್ತಕ ಓದಬೇಕು? ಹೇಗೆ ಓದಬೇಕು?

ಡಿ. 10ರ ಕಾರ್ಯಕ್ರಮಗಳ ವಿವರ

ಬಹಭಾಷಾ ಕವಿಗೋಷ್ಠಿ

ಡಿ. 10ರಂದು ಬೆಳಗ್ಗೆ 9.30ರಿಂದ 10.30ಕ್ಕೆ ಬಹುಬಾಷಾ ಕವಿಗೋಷ್ಠಿ ನಡೆಯಲಿದೆ. ಮೈಸೂರಿನ ಪತ್ರಕರ್ತರು, ಸಾಹಿತಿ ಶಿವರಂಜಿನಿ ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಯಲ್ಲಾಪುರ ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಅಭಾಸಾಪ ಜಿಲ್ಲಾ ಕಾರ್ಯದರ‍್ಶಿ ಕೃಷ್ಣ ಪದಕಿ, ನಾಟಕ ರಚನಾಕಾರ ಬಿ.ವಿ.ಕೋಮಾರ ಉಪಸ್ಥಿತರಿರಲಿದ್ದಾರೆ. ಕವಿಗೋಷ್ಠಿಯಲ್ಲಿ ಸುಮಾರು 35 ಕವಿಗಳು ಕವನ ಸಾದರಪಡಿಸಲಿದ್ದಾರೆ.

ಗಮಕ ವಾಚನ

ಬೆಳಗ್ಗೆ 11. 45ರಿಂದ 12. 45ಕ್ಕೆ ಗಮಕ ವಾಚನ ನಡೆಯಲಿದೆ. ಮುಕ್ತಾ ಶಂಕರ ಗಮಕ ವಾಚನ ಮಾಡಲಿದ್ದು, ಪ್ರಶಾಮತ ಮೂಡಲಮನೆ ವ್ಯಾಖ್ಯಾನ ನೀಡಲಿದ್ದಾರೆ. ಯಲ್ಲಾಪುರ ಸ.ನೌ. ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ಪ್ರಾ.ಶಾ.ಶಿ.ಸಂ ಅಧ್ಯಕ್ಷ ಆರ್‌.ಆರ್‌.ಭಟ್ಟ ಉಪಸ್ಥಿತರಿರಲಿದ್ದಾರೆ.

12.45ರಿಂದ 1.30 ರವರೆಗೆ ʼಪರಿಸರ ಹೋರಾಟದಲ್ಲಿ ಸಾಹಿತ್ಯʼ ವಿಷಯ ಕುರಿತು ಗೋಷ್ಠಿ ನಡೆಯಲಿದೆ. ವೈಚಾರಿಕ ಪ್ರಮೋದ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ಪರಿಸರ ತಜ್ಞ ಡಾ.ಕೇಶವ ಕೂರ್ಸೆ ಉಪನ್ಯಾಸ ನೀಡಲಿದ್ದು, ಬೀರಣ್ಣ ನಾಯಕ ಮೊಗಟಾ,‌ ವಿಕಾಸ ಅರ್ಬನ್‌ ಬ್ಯಾಂಕ್ ಅಧ್ಯಕ್ಷ ಮುರುಳಿ ಹೆಗ್ಗಡೆ ಉಪಸ್ಥಿತರಿರಲಿದ್ದಾರೆ.

ಪ್ರಸಿದ್ಧ ಕವಿಗಳ ಕಾವ್ಯಗಾಯನ

ಮಧ್ಯಾಹ್ನ 2.30ರಿಂದ 3ರವರೆಗೆ ಪ್ರಸಿದ್ಧ ಕವಿಗಳ ಕಾವ್ಯ ಗಾಯನ ಇರಲಿದೆ. ಸಿಂದೂರ ಎಂ ಹೆಗಡೆ, ಶ್ರೀರಾಮ ಭಟ್ಟ, ಪ್ರಭಾತ ಭಟ್ಟ. ಹರ್ಷಿತಾ ಭಟ್ಟ, ಪ್ರಣತಿ ಮೆಣಸುಮನೆ. ಕೌಸ್ತುಭ ಭಟ್ಟ. ತೇಜಸ್ ಹೆಗಡೆ, ಪ್ರಸಾದಿನಿ ಭಟ್ಟ ಅವರು ಕಾವ್ಯ ಗಾಯನ ಸಾದರಪಡಿಸಲಿದ್ದಾರೆ. ಆರ್.ಎನ್. ದುಂಡಿ, ಸ.ಸೇ.ಸ.ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಉಪಸ್ಥಿತರಿರುವರು. ನಂತರ 3 ರಿಂದ 4ಗಂಟೆವರೆಗೆ ಗಮಕಿ ಭಾರತಿ ಭಟ್ಟ ನಿರ್ದೇಶನದಲ್ಲಿ ಗಮಕ ರೂಪಕ ಗಿರಿಜಾ ಕಲ್ಯಾಣ ನಡೆಯಲಿದೆ.

ಸಮಾರೋಪ ಸಮಾರಂಭ

ಸಂಜೆ 4.10ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಅಭಾಸಾಪ ರಾಜ್ಯ ಉಪಾಧ್ಯಕ್ಷ, ವಿಶ್ವದರ್ಶನ ಶಿಕ್ಷಣ ಸಂಸ್ಥೆ‌ ಅಧ್ಯಕ್ಷ, ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಂತಕ, ಬರಹಗಾರ ರೋಹಿತ್‌ ಚಕ್ರತೀರ್ಥ ಸಮಾರೋಪ ನುಡಿಗಳನ್ನಾಡಲಿದ್ದಾರೆ.

ಯಲ್ಲಾಪುರ ಟಿಎಂಎಸ್‌ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಪಿಕುಂಬ್ರಿ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ವಜ್ರಳ್ಳಿ ಸರ್ವೋದಯ ಶಿಕ್ಷಣ ಸಮಿತಿ ಅಧ್ಯಕ್ಷ ಡಿ. ಶಂಕರ ಭಟ್ಟ, ಅಭಾಸಾಪ ಕಾರವಾರದ ಜಿಲ್ಲಾ ಸಂಯೋಜಕ ರಾಜೇಂದ್ರ ಭಟ್ಟ, ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌ.ಶಾ.ಸ.ಪಿ.ಸಂಘ ಅಧ್ಯಕ್ಷ ಅಜಯ ನಾಯಕ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | Prarthana School: ನ.26ರಂದು ಪ್ರಾರ್ಥನಾ. ಇನ್ ವರ್ಲ್ಡ್ ಸ್ಕೂಲ್ ಉದ್ಘಾಟನೆ

ಉತ್ತರ ಕನ್ನಡ ಗಮಕ ಕಲಾ ಪರಿಷತ್ತು ಅಧ್ಯಕ್ಷರಾದ ಮುಕ್ತಾ ಶಂಕರ, ಅ.ಭಾ.ಸಾ.ಪ ಶಿರಸಿ ಜಿಲ್ಲಾ ಸಂಯೋಜಕ ಗಣಪತಿ ಬೋಳಗುಡ್ಡೆ, ಜಿಲ್ಲಾ ಉಪಾಧ್ಯಕ್ಷ ಟಿ.ಶಂಕರ ಭಟ್ಟ, ಅ.ಭಾ.ಸಾ.ಪ ಯಲ್ಲಾಪುರ ಸಮಿತಿ ಅಧ್ಯಕ್ಷ ಗಣಪತಿ ಕಂಚಿಪಾಲ, ಕಾರ್ಯದರ್ಶಿ ಶ್ರೀರಾಮ ಲಾಲಗುಳಿ, ಸಹ ಕಾರ್ಯದರ್ಶಿ ಚಂದ್ರಶೇಖರ ಸಿ.ಎಸ್ ಮತ್ತಿತರರು ಭಾಗವಹಿಸಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Road Accident : ಟಂಟಂ ಪಲ್ಟಿಯಾಗಿ ವೃದ್ಧೆ ಸಾವು; ಐವರು ಗಂಭೀರ ಗಾಯ

Road Accident : ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಸಾವು-ನೋವಿಗೆ ಕಾರಣವಾಗಿದೆ. ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಹತ್ತಾರು ಮಂದಿ ಗಂಭೀರ ಗಾಯಗೊಂಡಿದ್ದಾರೆ.

VISTARANEWS.COM


on

By

Elderly woman dies after road Accident Five seriously injured
ಆಂಬ್ಯುಲೆನ್ಸ್‌ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸುತ್ತಿರುವ ದೃಶ್ಯ
Koo

ಕಲಬುರಗಿ: ಟಂಟಂ ವಾಹನವು ಪಲ್ಟಿಯಾಗಿ ಸ್ಥಳದಲ್ಲೆ (Road Accident) ವೃದ್ಧೆ ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಕ್ರಾಸ್ ಬಳಿ ಘಟನೆ ನಡೆದಿದೆ. ಕಲ್ಲವ್ವ ಪಾಣೆಗಾರ್ (60) ಮೃತ ದುದೈವಿ.

ಗಂಭೀರವಾಗಿ ಗಾಯಗೊಂಡವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೂಲಿ ಕೆಲಸಕ್ಕೆಂದು ಟಂಟಂವೊಂದರಲ್ಲಿ 15 ಮಂದಿ ಅಫಜಲಪುರ ಪಟ್ಟಣದಿಂದ ಸಿಂದಗಿ ತಾಲೂಕಿನ ಕುಮಸಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಂಟಂ ವಾಹನವು ಪಲ್ಟಿಯಾಗಿದೆ.

ವಾಹನದಡಿ ಸಿಲುಕಿದ ವೃದ್ಧೆ ಮೃತಪಟ್ಟರೆ, ಐವರು ಗಂಭೀರ ಗಾಯಗೊಂಡಿದ್ದರು. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸರಣಿ ಅಪಘಾತದಲ್ಲಿ ತುಂಡಾದ ಚಾಲಕನ ಪಾದ

ನೈಸ್‌ ರೋಡ್‌ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಲಾರಿ ಚಾಲಕನ ಪಾದವೇ ತುಂಡಾಗಿದೆ. ಮಾಗಡಿ- ಮೈಸೂರು ರಸ್ತೆ ಟೋಲ್ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಲಾರಿ- ಕಾರು ಸೇರಿ ಹಲವು ವಾಹನಗಳು ಜಖಂಗೊಂಡಿವೆ.

ಲಾರಿ ಚಾಲಕನ ಪಾದವೇ ಕಟ್ ಆಗಿದ್ದು, ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು ಚಾಲಕರಿಗೆ ಸಣ್ಣ- ಪುಟ್ಟ ಗಾಯವಾಗಿದೆ. ಸರಣಿ ಅಪಘಾತದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಚೆಲ್ಲಾಪಿಲ್ಲಿಯಾಗಿದ್ದ ವಾಹನಗಳನ್ನು ತೆರವು ಮಾಡಿದರು. ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Namma Metro : ಗುಡ್‌ ನ್ಯೂಸ್‌- ಫೆ.26 ರಿಂದ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಓಡಾಟ

ಅಕ್ರಮ ಮರಳು ಸಾಗಾಟದ ಟಿಪ್ಪರ್‌ಗೆ ಬೈಕ್‌ ಡಿಕ್ಕಿ, ಸವಾರ ಸಾವು

ಯಾದಗಿರಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಹೊರವಲಯದಲ್ಲಿ ಘಟನೆ ನಡೆದಿದೆ. ಆಲ್ದಾಳ ಗ್ರಾಮದ ಶ್ರೀಶೈಲ (40) ಮೃತ ದುರ್ದೈವಿ.

ಕೆಂಭಾವಿಯಿಂದ ಸ್ವಗ್ರಾಮ ಆಲ್ದಾಳಕ್ಕೆ ಬರುವಾಗ ಈ ಅಪಘಾತ ನಡೆದಿದೆ. ಅಕ್ರಮ ಮರಳು ಸಾಗಾಟದ ಟಿಪ್ಪರ್ ಲಾರಿಯನ್ನು ಚಾಲಕ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ. ಇಂಡಿಕೇಟರ್ ಹಾಕದೇ ರಸ್ತೆ ಬದಿ ನಿಂತಿದ್ದ ಟಿಪ್ಪರ್‌ಗೆ ಬೈಕ್‌ ಡಿಕ್ಕಿಯಾಗಿದೆ. ಈ ವೇಳೆ ಡಿಕ್ಕಿಯ ರಭಸಕ್ಕೆ ಶ್ರೀಶೈಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಸ್‌ ಇಳಿಯುವಾಗ ಆಯತಪ್ಪಿ ಬಿದ್ದ ಬಾಲಕಿ

ಬಸ್ ಇಳಿಯುವಾಗ ವಿದ್ಯಾರ್ಥಿನಿ ಆಯತಪ್ಪಿ‌ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಬಸ್‌ ಸ್ಟ್ಯಾಂಡ್ ಬಳಿ ಘಟನೆ ನಡೆದಿದೆ. ಬಾಚಣಕಿ ಗ್ರಾಮದ ಆಶಾ ಹೊತಗಣ್ಣನವರ ಎಂಬಾಕೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಓದುತ್ತಿದ್ದಳು. ಕಾಲೇಜಿಗೆ ಬಸ್‌ನಲ್ಲಿ ಹೋಗುವಾಗ ಈ ಅಪಘಾತ ನಡೆದಿದೆ. ಗಾಯಾಳು ಬಾಲಕಿಯನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Sirsi News: ಸ್ವರ್ಣವಲ್ಲೀ ಮಠದಲ್ಲಿ ಶಿಷ್ಯೋತ್ಸವ ಸಂಭ್ರಮ

Sirsi News: ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ‌ ಸಂಸ್ಥಾನದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಹಮ್ಮಿಕೊಂಡ ಶಿಷ್ಯ ಸ್ವೀಕಾರ ಮಹೋತ್ಸವದ ಧರ್ಮಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಮಹಾ‌ ಸಂಸ್ಥಾನದ ಶ್ರೀಮಜ್ಜಗದ್ಗುರು ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿ ಆಶೀರ್ವಚನ ನೀಡಿದರು

VISTARANEWS.COM


on

shishya sweekara mahotsava in shree swarnavalli maha samsthana mutt
Koo

ಶಿರಸಿ: ಮಠಕ್ಕೆ ಆಗಮಿಸಿರುವ ಯತಿವರ್ಯೇಣ್ಯರೇ ನೆಂಟರು, ಅವರ ಸಮ್ಮುಖದಲ್ಲಿ ಸಂಭ್ರಮದಿಂದ ಶಿಷ್ಯೋತ್ಸವ ನಡೆಯುತ್ತಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ‌ ಸಂಸ್ಥಾನದ ಶ್ರೀಮಜ್ಜಗದ್ಗುರು ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿ (Sirsi News) ತಿಳಿಸಿದರು.

ಸೋಂದಾ ಸ್ವರ್ಣವಲ್ಲೀ ಮಹಾ‌ ಸಂಸ್ಥಾನದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಹಮ್ಮಿಕೊಂಡ ಶಿಷ್ಯ ಸ್ವೀಕಾರ ಮಹೋತ್ಸವದ ಧರ್ಮಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿದೆ, ಅದರಂತೆ ಫೆಬ್ರವರಿ 22ರಂದು ಸ್ವರ್ಣವಲ್ಲೀ ಮಠದಲ್ಲಿ ರಾಮನ ಪ್ರತಿಷ್ಠಾಪನೆಯಾಗಿದೆ. ನೂತನ ಯತಿಗಳಿಗೆ ಆನಂದಬೋಧೇಂದ್ರ ಹೆಸರಿಡಲು ನನಗಾಗಿರುವ ಆನಂದವೂ ಒಂದು ಕಾರಣ. ಆಧ್ಯಾತ್ಮಿಕತೆ, ಲೌಕಿಕತೆಯನ್ನು ಸಮನ್ವಯ ಮಾಡಿಕೊಂಡು ಹೋಗಬೇಕಾಗಿದೆ. ಮಠದ ಪರಂಪರೆ ಮುಂದುವರೆಯುತ್ತಾ ಹೋಗಬೇಕು ಎನ್ನುವುದೇ ನಮ್ಮೆಲ್ಲರ ಆಶಯ ಎಂದು ಶ್ರೀಗಳು ತಿಳಿಸಿದರು.

ಇದನ್ನೂ ಓದಿ: Swarnavalli Mutt: ಸ್ವರ್ಣವಲ್ಲೀ ನೂತನ ಯತಿಗಳಿಗೆ ಸನ್ಯಾಸ ದೀಕ್ಷೆ; ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಎಂದು ನಾಮಕರಣ

ಮಠದ ಒಳಗೆ ಅನುಷ್ಠಾನ, ಜಪ-ತಪ, ಹೊರಗಡೆ ಬಂದರೆ ಸಾಮಾಜಿಕ ಕಳಕಳಿಯನ್ನು ಭಕ್ತರು ಭಯಸುತ್ತಾರೆ. ನೂತನ ಯತಿಗಳಿಗೆ ದೀರ್ಘಕಾಲ ಮಾರ್ಗದರ್ಶನ ಲಭಿಸಲಿ ಎಂದು ಬೇಗ ಶಿಷ್ಯರನ್ನು ಸ್ವೀಕರಿಸಿದ್ದೇವೆ ಎಂದರು.

ತಂದೆ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುವ ಗುರುಗಳು ಸಿಕ್ಕಿದ್ದಾರೆ ಎನ್ನುವ ಆನಂದ ಬೋಧೇಂದ್ರರ ಮಾತು ಕೇಳಿ ಜವಾಬ್ದಾರಿ ಹೆಚ್ಚಾಗಿದೆ, ಜನರ ಮನಸ್ಸಿನ ಮೂಲೆಯಲ್ಲಿ ಧರ್ಮ ಇನ್ನೂ ಇದೆ ಎನ್ನುವುದಕ್ಕೆ ಶಿಷ್ಯ ಸ್ವೀಕಾರ ಕಾರ್ಯಕ್ರಮದ ಯಶಸ್ಸೇ ಸಾಕ್ಷಿ ಎಂದು ತಿಳಿಸಿದರು.

ನೂತನ ಯತಿಗಳಾದ ಆನಂದಬೋಧೇಂದ್ರ ಸರಸ್ವತೀ ಶ್ರೀಗಳು ಮಾತನಾಡಿ, ದೃಢಭಕ್ತಿಯಿಂದ ಪ್ರಾಪ್ತವಾಗುವ ಅನುಗ್ರಹ ಮಾತುಗಳಲ್ಲಿ ವರ್ಣಿಸಲಾಗುವುದಿಲ್ಲ. ಸದ್ಗುರುಗಳ ಅನುಗ್ರಹದಿಂದ ನನ್ನ ಜನ್ಮ ಪಾವನವಾಗಿದೆ. ಪರಮಪೂಜ್ಯ ಗುರುಗಳು ಸನ್ಯಾಸದೀಕ್ಷೆ ನೀಡಿ ನನ್ನನ್ನ ಉದ್ಧರಿಸಿದ್ದಾರೆ. ಶ್ರೀಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Onion Export: ನಾಲ್ಕು ರಾಷ್ಟ್ರಗಳಿಗೆ 54,760 ಟನ್‌ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್

ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಯತಿಗಳಾದ ಯಡತೋರೆ ಶ್ರೀಶಂಕರ ಭಾರತೀ‌ ಮಹಾ ಸ್ವಾಮೀಜಿ, ಹರಿಹರಪುರದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ‌ ಮಹಾಸ್ವಾಮೀಜಿ,‌ ಬೆಂಗಳೂರಿನ‌ ಕೂಡ್ಲಿ ಶೃಂಗೇರಿ‌ ಮಠದ ವಿದ್ಯಾ ವಿಶ್ವೇಶ್ವರ ಭಾರತೀ ‌ಮಹಾ‌ ಸ್ವಾಮೀಜಿ, ಹೋಳೆ‌ನರಸೀಪುರದ ಶ್ರೀಪ್ರಕಾಶಾನಂದೇಂದ್ರ ಮಹಾ ಸ್ವಾಮೀಜಿ , ಶ್ರೀಮನ್ನೆಲಮಾವಿನ ಮಠದ ಶ್ರೀಮಾಧವಾನಂದ‌ ಭಾರತೀ‌‌ ಮಹಾ‌ ಸ್ವಾಮೀಜಿ, ತುರುವೇಕೇರೆಯ ಶ್ರೀಪ್ರಣವಾನಂದ ತೀರ್ಥ ಮಹಾಸ್ವಾಮೀಜಿ ಅವರು ಮಾತನಾಡಿದರು.

ಇದನ್ನೂ ಓದಿ: IPL 2024 : ಆರ್​ಸಿಬಿ ತಂಡದ ವೇಳಾಪಟ್ಟಿ, ಪಂದ್ಯದ ವಿವರಗಳು ಇಲ್ಲಿವೆ

ಈ ಸಂದರ್ಭದಲ್ಲಿ ‌ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ, ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಹಲವು ವಿದ್ವಾಂಸರು, ಸಾವಿರಾರು ಭಕ್ತರು, ಶಿಷ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.

Continue Reading

ಉತ್ತರ ಕನ್ನಡ

Arun Yogiraj : ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್​ ಯೋಗಿರಾಜ್​ಗೆ ‘ಅಭಿನವ ಅಮರ ಶಿಲ್ಪಿ’ ಪುರಸ್ಕಾರ

Arun Yogiraj: ಅಯೋಧ್ಯೆಯ ರಾಮ ಲಲ್ಲಾನ ಮೂರ್ತಿ ಕೆತ್ತಿ ಕರ್ನಾಟಕಕ್ಕೆ ಕೀರ್ತಿ ತಂದ ಮೈಸೂರಿನ ಅರುಣ್​ ಯೋಗಿರಾಜ್​

VISTARANEWS.COM


on

D. hiremath foundation
Koo

ಬೆಂಗಳೂರು : ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾನೆಗೊಂಡಿರುವ ಬಾಲಕರಾಮನ (ರಾಮ ಲಲ್ಲಾ) ಮೂರ್ತಿಯನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರಿಗೆ ಡಾ. ಹಿರೇಮಠ ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಸಹಯೋಗದಲ್ಲಿ “ಅಭಿನವ ಅಮರ ಶಿಲ್ಪಿ” ಬಿರುದು ಘೋಷಣೆಯಾಗಿದೆ. ಮಾರ್ಚ್‌ 4ರಂದು ಕಾರವಾರ ನಗರದ ಸಾಗರ್‌ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಬಿರುದು ನೀಡಿ ಗೌರವಿಸಲಾಗುವುದು ಎಂದು ಡಾ. ಹಿರೇಮಠ ಫೌಂಡೇಶನ್​ನ ಸಂಸ್ಥಾಪಕ ಡಾ. ವಿಶ್ವನಾಥ ಹಿರೇಮಠ ಅವರು ಗುರುವಾರ (ಫೆಬ್ರವರಿ 22) ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

“ರಾಮ ಮಂದಿರ ಭಾರತೀಯರ 500 ವರ್ಷಗಳ ಕನಸು. ಲಕ್ಷಾಂತರ ಕರಸೇವಕರ ಪರಿಶ್ರಮದ ಸಲುವಾಗಿ ಇಂದು ರಾಮ ಮಂದಿರ ಅಯೋಧ್ಯೆಯಲ್ಲಿ ತಲೆ ಎತ್ತಿ ನಿಂತಿದೆ. ರಾಮ ಮಂದಿರದಲ್ಲಿರುವ ಸುಂದರ ರಾಮ ಲಲ್ಲಾ ಮೂರ್ತಿಯ ಕೆತ್ತನೆ ಮಾಡಿರುವುದು ನಮ್ಮ ಕರ್ನಾಟಕದ ಮೈಸೂರಿನವರೇ ಆದ ಅರುಣ್‌ ಯೋಗಿರಾಜ್‌ ಅವರೆಂಬುದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆ. ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಸ್ವಾಗತಿಸಿ ಸನ್ಮಾನಿಸಬೇಕೆಂಬುದು ನಮ್ಮ ಬಯಕೆಯಾಗಿದೆ,” ಎಂದು ಡಾ. ವಿಶ್ವನಾಥ್‌ ಹಿರೇಮಠ ಅವರು ಹೇಳಿದರು.

“ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರು, ಪ್ರಖರ ವಾಗ್ಮಿ, ಹಿಂದೂ ಹುಲಿ ಎಂದು ಖ್ಯಾತಿ ಪಡೆದಿರುವ ಶ್ರೀ ಪ್ರಮೋದ್‌ ಮುತಾಲಿಕ್ ಅವರು ಈ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಡಾ. ಗಜೇಂದ್ರ ನಾಯಕ್‌ ಅವರಲ್ಲದೆ ಹಲವು ಹಿಂದೂ ಮುಖಂಡರು ಈ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ,” ಎಂದು ಅವರು ವಿವರಿಸಿದರು.

“”ಡಾ. ಹಿರೇಮಠ ಫೌಂಡೇಶನ್‌ ಮತ್ತು ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ 200ಕ್ಕೂ ಹೆಚ್ಚಿನ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರಿಗೆ, ಅವರ ನಿಸ್ವಾರ್ಥ ಸೇವೆಗಾಗಿ ಅಭಿನಂದನಾ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿದೆ,” ಎಂದು ಡಾ. ವಿಶ್ವನಾಥ ಹಿರೇಮಠ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ : Uttara Kannada News: ಸಾಧಿಸುವ ಛಲವಿದ್ದರೆ ಸಾಧನೆಯ ಹಾದಿ ಕಷ್ಟವಲ್ಲ: ಜಿ.ಪಂ ಸಿಇಒ ಈಶ್ವರ ಕಾಂದೂ

“ಡಾ. ಹಿರೇಮಠ ಫೌಂಡೇಶನ್ ಡಾ. ವಿಶ್ವನಾಥ ಹಿರೇಮಠ ಅವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಸಾಮಾಜಿಕ ಕೆಲಸಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿಕೊಂಡು ಬರುತ್ತಿದೆ. ಯುವಕರ ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ಸ್ವಚ್ಛ ಉತ್ತರಕನ್ನಡ ಎಂಬ ಹಲವು ಕಾರ್ಯಕ್ರಮಗಳನ್ನು ನಡೆಲಾಗುತ್ತಿದೆ. ಇದೀಗ ಅಭಿನಂದನಾ ಸಮಾರಂಭದದ ಮೂಲಕ ಧಾರ್ಮಿಕತೆಯ ಸಾರವನ್ನು ಎತ್ತಿ ಹಿಡಿಯಲು ಹೊರಟಿದ್ದೇವೆ,” ಎಂದು ಫೌಂಡೇಷನ್​​ನ ಕಾರ್ಯದರ್ಶಿ ಲಕ್ಷ್ಮೀಶ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಹಿರೇಮಠ ಫೌಂಡೇಷನ್​​ನ ಪ್ರಧಾನ ಕಾರ್ಯದರ್ಶಿ ಚೇತನ್​ ಹಾಜರಿದ್ದರು.

Continue Reading

ಉತ್ತರ ಕನ್ನಡ

Uttara Kannada News: ಸಾಧಿಸುವ ಛಲವಿದ್ದರೆ ಸಾಧನೆಯ ಹಾದಿ ಕಷ್ಟವಲ್ಲ: ಜಿ.ಪಂ ಸಿಇಒ ಈಶ್ವರ ಕಾಂದೂ

Uttara Kannada News: ಕುಮಟಾದಲ್ಲಿರುವ ದಯಾನಿಲಯ ವಿಶೇಷ ಚೇತನರ ಶಾಲೆಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಭೇಟಿ ನೀಡಿದರು.

VISTARANEWS.COM


on

Uttara Kannada ZP CEO eshwar Kandu visited Dayanilaya specially abled School in Kumta
Koo

ಕಾರವಾರ: ಮನುಷ್ಯನಿಗೆ ಸಾಧಿಸಲೇಬೇಕೆಂಬ ಛಲವೊಂದಿದ್ದರೆ ಸಾಧನೆಯ (Achievement) ಹಾದಿ ಕಷ್ಟವಲ್ಲ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ (Uttara Kannada News) ಅಭಿಪ್ರಾಯಪಟ್ಟರು.

ಕುಮಟಾದಲ್ಲಿರುವ ದಯಾನಿಲಯ ವಿಶೇಷ ಚೇತನರ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಅಪರೂಪದಲ್ಲಿಯೇ ಅಪರೂಪದಂತಿರುವ ದಯಾನಿಲಯ ಶಾಲೆಯು ತನ್ನದೇ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತದೆ ಎಂದರು.

ಇದನ್ನೂ ಓದಿ: 3 ವರ್ಷದಲ್ಲಿ ಭಾರತ ಜಗತ್ತಲ್ಲೇ 3ನೇ ಬೃಹತ್‌ ಆರ್ಥಿಕ ರಾಷ್ಟ್ರ; ಜಾಗತಿಕ ಸಂಸ್ಥೆ ವರದಿ

ಸಂಸ್ಥಾಪಕ ಸಿರಿಲ್ ಲೊಪಿಸ್ ಅವರು ಸಮಾನ ಮನಸ್ಕರ ಅದ್ಭುತ ತಂಡ ಕಟ್ಟಿಕೊಂಡು ಬುದ್ಧಿಮಾಂದ್ಯ ಮತ್ತು ವಿಶೇಷ ಚೇತನ ಮಕ್ಕಳಿಗೆ ಕಳೆದ ಹನ್ನೆರಡು ವರ್ಷಗಳಿಂದ ಟೇಬಲ್ ಟೆನಿಸ್, ಲಾನ್ ಟೆನಿಸ್, ಜುಡೋ, ಸ್ವಿಮ್ಮಿಂಗ್, ಸ್ಕೇಟಿಂಗ್, ವೇಟ್ ಲಿಫ್ಟಿಂಗ್ ಸೇರಿದಂತೆ ವಿವಿಧ ಕ್ರೀಡೆಯಲ್ಲಿ ತರಬೇತಿ ನೀಡುತ್ತಿರುವುದು ಮಾತ್ರವಲ್ಲದೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಪದಕ ಪಡೆಯುತ್ತಿರುವುದು ಸಂತಸದ ವಿಚಾರ. ವಿಶೇಷ ಚೇತನರ ಸ್ಪೆಷಲ್ ಒಲಿಂಪಿಕ್ ವರ್ಲ್ಡ್ ಗೇಮ್ಸ್ ನಲ್ಲಿ ಈ ಶಾಲೆಯ ಮಕ್ಕಳ ಸಾಧನೆ ಅಭಿನಂದನಾರ್ಹ ಮತ್ತು ಪ್ರೇರಣಾದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಕ ಸಿರಿಲ್ ಶಾಲೆಯ ಪ್ರತಿಭಾನ್ವಿತ ಮಕ್ಕಳು, ಒಳಾಂಗಣ ಕ್ರೀಡಾಂಗಣ, ಮಕ್ಕಳ ಕಚೇರಿ, ಕೈತೋಟ ಸೇರಿದಂತೆ ಎಲ್ಲ ವಿಭಾಗಗಳನ್ನು ಸವಿವರವಾಗಿ ಪರಿಚಯಿಸಿದರು.

ಇದನ್ನೂ ಓದಿ: Affordable Bikes in India : ಕಡಿಮೆ ಬೆಲೆಗೆ ದೊರೆಯುವ ಭಾರತದ ಟಾಪ್ 5 ಬೈಕ್​ಗಳು ಇವು

ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ನಾರಾಯಣ ಜಿ ನಾಯಕ, ಕುಮಟಾ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಎಲ್. ಭಟ್, ಜಿಲ್ಲಾ ಐಇಸಿ ಸಂಯೋಜಕರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Continue Reading
Advertisement
police constable
ಉದ್ಯೋಗ3 mins ago

Job Alert: ಫೆ. 25ರಂದು ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿ ಪರೀಕ್ಷೆ; ಪ್ರವೇಶ ಪತ್ರ ಹೀಗೆ ಡೌನ್‌ಲೋಡ್‌ ಮಾಡಿ

pralhad joshi
ಕರ್ನಾಟಕ6 mins ago

Ram Mandir: ಅಯೋಧ್ಯೆ ಯಾತ್ರಿಕರಿಗೆ ಬೆದರಿಕೆ ಹಾಕಿದವರನ್ನು ಒದ್ದು ಒಳಗೆ ಹಾಕಿ: ಪ್ರಲ್ಹಾದ್‌ ಜೋಶಿ ಆಗ್ರಹ

Narendra Modi
ದೇಶ7 mins ago

Narendra Modi: ಗುಜರಾತ್‌ನವನಾದರೂ ನಾನೀಗ ಬನಾರಸಿ ಎಂದ ಪ್ರಧಾನಿ ಮೋದಿ

BY Vijayendra calls on BJP workers to make 100 votes 200 Attack on CM Siddaramaiah
ರಾಜಕೀಯ11 mins ago

BY Vijayendra: 100 ಮತವನ್ನು 200 ಮಾಡಿ; ಬಿಜೆಪಿ ಕಾರ್ಯಕರ್ತರಿಗೆ ವಿಜಯೇಂದ್ರ ಟಾಸ್ಕ್‌; ಸಿಎಂ ವಿರುದ್ಧ ವಾಗ್ದಾಳಿ

R Ashwin
ಪ್ರಮುಖ ಸುದ್ದಿ11 mins ago

R Ashwin : ಕ್ರಿಕೆಟ್​ ದಂತಕತೆಗಳ ಎಲೈಟ್​ ಪಟ್ಟಿ ಸೇರಿದ ಆರ್​ ಅಶ್ವಿನ್​; ಏನಿದು ಸಾಧನೆ?

Elderly woman dies after road Accident Five seriously injured
ಕ್ರೈಂ27 mins ago

Road Accident : ಟಂಟಂ ಪಲ್ಟಿಯಾಗಿ ವೃದ್ಧೆ ಸಾವು; ಐವರು ಗಂಭೀರ ಗಾಯ

R Ashwin
ಪ್ರಮುಖ ಸುದ್ದಿ34 mins ago

R Ashwin : ಈ ಸಾಧನೆ ಮಾಡಿದ ಮೊಟ್ಟ ಮೊದಲ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾದ ರವಿಚಂದ್ರನ್ ಅಶ್ವಿನ್​

Shah Rukh Khan Friend BREAKS Silence on Rumour of Him Dating
ಸಿನಿಮಾ39 mins ago

Shah Rukh Khan: ಪ್ರಿಯಾಂಕಾ ಜತೆ ರಹಸ್ಯವಾಗಿ ಡೇಟಿಂಗ್ ಮಾಡ್ತಿದ್ರಾ ಶಾರುಖ್‌?

Namma Metro
ಬೆಂಗಳೂರು1 hour ago

Namma Metro : ಗುಡ್‌ ನ್ಯೂಸ್‌- ಫೆ.26 ರಿಂದ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಓಡಾಟ

Talibans
ವಿದೇಶ1 hour ago

Taliban: ತುಂಬಿದ ಸ್ಟೇಡಿಯಂನಲ್ಲಿ ಇಬ್ಬರನ್ನು ಗುಂಡಿಕ್ಕಿ ಸಾಯಿಸಿದ ತಾಲಿಬಾನಿಗಳು; ಯಾಕೆ?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Fire breaks out in auto shed Burnt autos
ಬೆಂಗಳೂರು2 hours ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

read your daily horoscope predictions for february 23 2024
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು23 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ1 day ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ6 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ6 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

ಟ್ರೆಂಡಿಂಗ್‌