Karnataka Election 2023: ಶೃಂಗೇರಿಯಲ್ಲಿ ಚಂಡಿಕಾ ಯಾಗ ನೆರವೇರಿಸಿದ ಡಿ.ಕೆ. ಶಿವಕುಮಾರ್;‌ ಅಧಿಕಾರಕ್ಕಾಗಿ ಪ್ರಾರ್ಥನೆ Vistara News

ಕರ್ನಾಟಕ

Karnataka Election 2023: ಶೃಂಗೇರಿಯಲ್ಲಿ ಚಂಡಿಕಾ ಯಾಗ ನೆರವೇರಿಸಿದ ಡಿ.ಕೆ. ಶಿವಕುಮಾರ್;‌ ಅಧಿಕಾರಕ್ಕಾಗಿ ಪ್ರಾರ್ಥನೆ

Assembly election: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಪತ್ನಿ ಸಹಿತ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದು, ಚಂಡಿಕಾ ಯಾಗವನ್ನು ನೆರವೇರಿಸಿದರು. (Karnataka Election 2023)

VISTARANEWS.COM


on

D K Shivakumar Prayer for Authority. Karnataka Election 2023 updates
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ರಾಜಕೀಯ ನಾಯಕರು ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ದೇವಸ್ಥಾನಗಳಿಗೆ ಭೇಟಿ ನೀಡುವುದು, ವಿಶೇಷ ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಈಗ ಶೃಂಗೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕುಟುಂಬದಿಂದ ಚಂಡಿಕಾ ಯಾಗವನ್ನು ನೆರವೇರಿಸಲಾಗಿದೆ.

ಚಂಡಿಕಾ ಯಾಗದಲ್ಲಿ ಡಿಕೆ ಶಿವಕುಮಾರ್‌ ದಂಪತಿ ಭಾಗಿಯಾಗಿರುವುದು

ಶೃಂಗೇರಿ ಮಠದ ಯಾಗ ಮುಗಿಯುವವರೆಗೆ ಅಲ್ಲಿಯೇ ಇದ್ದ ಡಿ.ಕೆ. ಶಿವಕುಮಾರ್‌ ದಂಪತಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಅಧಿಕಾರಕ್ಕಾಗಿ ರಾಜ-ಮಹಾರಾಜರು ನಡೆಸುತ್ತಿದ್ದ ಯಾಗ ಇದಾಗಿದೆ. 15 ಋತ್ವಿಜರಿಂದ ಯಾಗ ನಡೆದಿದೆ. ಖ್ಯಾತ ಜ್ಯೋತಿಷಿ, ರಾಜಗುರು ಸಿ.ಎಸ್. ದ್ವಾರಕಾನಾಥ್ ಅವರು ಈ ಯಾಗದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: Amit Shah: ಇಂದು ರಾಜ್ಯಕ್ಕೆ ಮತ್ತೆ ಅಮಿತ್‌ ಶಾ; ಮೈಸೂರು, ಚಾಮರಾಜನಗರದಲ್ಲಿ ರಣತಂತ್ರ

ಜನಸೇವೆಗೆ ಅವಕಾಶಕ್ಕಾಗಿ ಬೇಡಿಕೊಂಡಿದ್ದೇನೆ: ಡಿಕೆಶಿ

ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ 141 ಸ್ಥಾನವನ್ನು ಗೆಲ್ಲಲಿದೆ. ಕಾರ್ಯಕರ್ತರು ಸ್ಪೂರ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ದೇವರ ಅನುಗ್ರಹ ಸಹ ಕಾಂಗ್ರೆಸ್‌ಗೆ ಒಲಿದಿದ್ದು, ನಮಗೆ ಹೊಸ ಶಕ್ತಿ ಬಂದಿದೆ. ಬಿಜೆಪಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರ ಉಪಯೋಗವನ್ನು ಪಡೆದುಕೊಂಡು ಹಾಗೇ ಬಿಟ್ಟುಬಿಟ್ಟರು. ಅವರ ಕಣ್ಣಲ್ಲಿ ನೀರು ಹಾಕಿಸಿದರು. ಈ ಬಾರಿ ಅದರ ಫಲ ಅವರಿಗೆ ಸಿಗಲಿದೆ ಎಂದು ಯಾಗದ ಬಳಿಕ ಡಿ.ಕೆ. ಶಿವಕುಮಾರ್ ಹೇಳಿದರು.

ವರುಣ ಕ್ಷೇತ್ರಕ್ಕೂ ನಾನು ಪ್ರಚಾರ ಮಾಡಲು ಹೋಗುತ್ತೇನೆ. ಇನ್ನೂ ಸಮಯ ನಿಗದಿಯಾಗಿಲ್ಲ. ವರುಣ ಮಾತ್ರವಲ್ಲ, ಯಾರೇ, ಎಲ್ಲಿಗೇ ಕರೆದರೂ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಶಾಸಕರು, ಮಂತ್ರಿಗಳು ಸಾಕ್ಷಿ ಬಿಟ್ಟು ಹೋಗಿದ್ದಾರೆ ಎಂದು ಡಿಕೆಶಿ ಹೇಳಿದರು.

ಅಧಿಕಾರಕ್ಕಾಗಿ ಪ್ರಾರ್ಥನೆ- ಡಿ.ಕೆ. ಶಿವಕುಮಾರ್

ಮನಸ್ಸಿನ ಶಾಂತಿ, ನೆಮ್ಮದಿ, ರಾಜ್ಯದಲ್ಲಿ ಪಕ್ಷ ಅಧಿಕಾರ ಬರಬೇಕು, ಜನಸೇವೆಗೆ ಅವಕಾಶಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ದೇವರಲ್ಲಿ ಈ ಸಂಬಂಧ ಬೇಡಿಕೊಂಡಿದ್ದೇನೆ. ನಾವು ಅಧಿಕಾರಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ ಎಂದು ಡಿ.ಕೆ. ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Tumkur Siddaganga Mutt: ತುಮಕೂರಿನ ಸಿದ್ದಗಂಗಾ ಮಠ ಸೇರಿ ಶಾಖಾ ಮಠಗಳ ಉತ್ತರಾಧಿಕಾರಿಗಳಿಗೆ ಪಟ್ಟಾಭಿಷೇಕ

ಎಲ್ಲ ಕಡೆ ದೇವರ ದರ್ಶನ ಮಾಡಿದ್ದೇನೆ. ಆಶೀರ್ವಾದವಾಗಿದೆ. ದೇವರ ಸನ್ನಿದಿಯಿಂದಲೇ ಪ್ರಚಾರ ಕೂಡ ಆರಂಭವಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕರಾ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರೂ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ದೇವೇಗೌಡರಿಂದ ನಡೆದಿದ್ದ ಚಂಡಿಕಾ ಯಾಗ

2018ರ ವಿಧಾನಸಭಾ ಚುನಾವಣೆ ವೇಳೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಕುಟುಂಬ 11 ದಿನಗಳ ಕಾಲ ಶೃಂಗೇರಿ ಶಾರದಾ ಪೀಠದಲ್ಲಿ ಚಂಡಿಕಾ ಯಾಗವನ್ನ ನಡೆಸಿದ್ದರು. ಈಗ ಡಿ.ಕೆ. ಶಿವಕುಮಾರ್ ಕೂಡ ಅದೇ ಹಾದಿಯನ್ನು ಹಿಡಿದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Complaint to CM : ಸಿಎಂಗೆ ದೂರು ನೀಡಬೇಕೇ? ಈ ನಂಬರ್‌ಗೆ ಕರೆ ಮಾಡಿ!

Complaint to CM : ತಮ್ಮ ಸಮಸ್ಯೆಗಳಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ಪರಿಹಾರ ಸಿಗದೇ ಇದ್ದಾಗ ನಾಗರಿಕರು ಅನಿವಾರ್ಯವಾಗಿ ಮುಖ್ಯಮಂತ್ರಿಯತ್ತ ದೃಷ್ಟಿ ನೆಡುತ್ತಾರೆ. ಹೇಗಾದರೂ ಮಾಡಿ ಅವರಿಗೊಂದು ದೂರು ಕೊಡಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ, ಇದಕ್ಕೆ ಅವರಿಗೆ ಯಾವ ಮಾರ್ಗ ಎಂಬುದು ಮಾತ್ರ ತಿಳಿದಿರುವುದಿಲ್ಲ. ಇದಕ್ಕೆ ಈಗ ಎರಡು ಮಾರ್ಗಗಳು ಇವೆ. ಸಹಾಯವಾಣಿಗೆ ಕರೆ ಮಾಡಿ ದೂರು ನೀಡುವುದು ಸರಳ ಮಾರ್ಗವಾಗಿದೆ.

VISTARANEWS.COM


on

Complaint to CM Siddaramaiah
Koo

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ದೂರು ನೀಡಬೇಕೇ? (Complaint to CM) ಇದಕ್ಕಾಗಿ ನೀವು ಜನತಾ ದರ್ಶನಕ್ಕೆ (Janatha Darshan) ಹೋಗಬೇಕೆಂದೇನೂ ಇಲ್ಲ. ನೀವು ಕುಳಿತಲ್ಲಿಯೇ ದೂರು ದಾಖಲು ಮಾಡಬಹುದು. ಅದಕ್ಕೆ ಇದೊಂದು ನಂಬರ್‌ಗೆ ಕರೆ ಮಾಡಿದರೆ ಸಾಕು ನಿಮ್ಮ ದೂರನ್ನು ದಾಖಲಿಸಿಕೊಳ್ಳಲಾಗುತ್ತದೆ.

ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂದರೆ ತುಸು ಕಷ್ಟವನ್ನೇ ಪಡಬೇಕು. ರೈತರಿಗೆ ಒಂದು ಖಾತೆ ಮಾಡಿಸಿಕೊಳ್ಳಲೋ, ರಸ್ತೆ ಸಮಸ್ಯೆಯೋ ಅದೇ ದೊಡ್ಡದಾಗಿರುತ್ತದೆ. ಆದರೆ, ಇದಕ್ಕೆ ಅಧಿಕಾರಿಗಳು ಸೊಪ್ಪು ಹಾಕುವುದಿಲ್ಲ. ಇನ್ನು ಮಹಿಳೆಯರಿಗೆ, ವೃದ್ಧರಿಗೆ ಸೇರಿದಂತೆ ನಾಗರಿಕರಿಗೆ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ. ಇದಕ್ಕೆ ಸರ್ಕಾರಿ ವ್ಯವಸ್ಥೆಯಲ್ಲಿ ಪರಿಹಾರ ಸಿಗದೇ ಇದ್ದಾಗ ಅನಿವಾರ್ಯವಾಗಿ ಮುಖ್ಯಮಂತ್ರಿಯತ್ತ ದೃಷ್ಟಿ ನೆಡುತ್ತಾರೆ. ಹೇಗಾದರೂ ಮಾಡಿ ಅವರಿಗೊಂದು ದೂರು ಕೊಡಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ, ಇದಕ್ಕೆ ಅವರಿಗೆ ಯಾವ ಮಾರ್ಗ ಎಂಬುದು ಮಾತ್ರ ತಿಳಿದಿರುವುದಿಲ್ಲ. ಇದಕ್ಕೆ ಈಗ ಎರಡು ಮಾರ್ಗಗಳು ಇವೆ. ಒಂದೋ ಸಿಎಂ ನಡೆಸುವ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿ ದೂರು ಸಲ್ಲಿಸುವುದು, ಇಲ್ಲವೇ 1902 ಸಹಾಯವಾಣಿಗೆ (Helpline Number) ಕರೆ ಮಾಡಿ ಜನತಾ ದರ್ಶನದ ಅಡಿ ದೂರನ್ನು ದಾಖಲಿಸುವುದನ್ನು ಮಾಡಬಹುದಾಗಿದೆ. ಹೀಗೆ ಮಾಡಿದರೂ ನೇರವಾಗಿಯೇ ಸಿಎಂಗೆ ದೂರು ದಾಖಲಿಸಿದಂತೆ ಆಗುತ್ತದೆ.

ಕರೆ ಮಾಡಿ ಸಿಎಂಗೆ ಹೀಗೆ ದೂರು ನೀಡಿ!

1902 ಸಹಾಯವಾಣಿಯನ್ನು ರಾಜ್ಯ ಸರ್ಕಾರ ಈಗಾಗಲೇ ತೆರೆದಿದೆ. ಜನತಾ ದರ್ಶನಕ್ಕೆ ದೂರದ ಊರಿನಿಂದ ಹೋಗಲು ಆಗದವರು, ತೀವ್ರ ಸಮಸ್ಯೆ ಎದುರಿಸುತ್ತಿರುವವರು ಯಾರಾದರೂ ಇದ್ದರೆ ಸಿಎಂ ಗಮನಕ್ಕೆ ತರುವ ಸಂಬಂಧ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಅಲ್ಲಿ ನಿಮ್ಮ ಸಮಸ್ಯೆಗಳನ್ನು ಹೇಳಬೇಕು. ಅವರು ನಿಮ್ಮ ಅಹವಾಲುಗಳನ್ನು ಆಧರಿಸಿ ಅದನ್ನು ಜನತಾ ದರ್ಶನ ಕೆಟಗರಿ ಅಡಿ ದೂರು ದಾಖಲು ಮಾಡಿಕೊಳ್ಳುತ್ತಾರೆ.

ಹೀಗೆ ದೂರು ದಾಖಲು ಮಾಡುವಾಗ ನಿಮ್ಮ ಸಮಸ್ಯೆ, ವಿಳಾಸ, ಮೊಬೈಲ್‌ ಸಂಖ್ಯೆಯನ್ನು ಪಡೆದು ಅದರಲ್ಲಿ ನಮೂದು ಮಾಡಲಾಗುತ್ತದೆ. ಈ ದೂರು ಸಿಎಂ ಜನತಾ ದರ್ಶನ ಕೆಟಗರಿ ಮೂಲಕ ಸಂಬಂಧಪಟ್ಟ ಇಲಾಖೆಗೆ ರವಾನೆ ಮಾಡಲಾಗುತ್ತದೆ. ಆದರೆ, ಮುಂದಿನ ಹಂತದ ಬಗ್ಗೆ ಸ್ಪಷ್ಟತೆಯನ್ನು ನೀಡಲಾಗಿಲ್ಲ.

ಮುಂದಿನ ಕ್ರಮ ಏನು?

ಒಂದು ವೇಳೆ 1092 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಾದರೆ ನಿಮಗೊಂದು ಐಡಿ ಸಂಖ್ಯೆಯನ್ನು ನೀಡಲಾಗುತ್ತದೆ. ನೀವು ದಾಖಲು ಮಾಡಲಾದ ದೂರು ಸಿಎಂ ಕಾರ್ಯಾಲಯಕ್ಕೆ ಹೋಗುತ್ತದೆ. ಅಲ್ಲಿಂದ ಮುಂದಿನ ಪ್ರಕ್ರಿಯೆ ಏನು? ನಿಮ್ಮ ದೂರಿನ ಸ್ಥಿತಿ-ಗತಿ ಏನಾಯಿತು ಎಂಬ ಬಗ್ಗೆ ತಿಳಿಯಬೇಕು ಎಂದಿದ್ದರೆ, ಜನಸ್ಪಂದನ ಪೋರ್ಟಲ್‌ ಅಥವಾ ಜನಸ್ಪಂದನ ಪಿಜಿಆರ್‌ಎಸ್‌ ಪೋರ್ಟಲ್‌ಗೆ ಭೇಟಿ ನೀಡಿ ಅಲ್ಲಿ “ಸಿಪಿಗ್ರಾಮ್ಸ್‌ ಕುಂದುಕೊರತೆ ಸ್ಥಿತಿಯನ್ನು ಪರಿಶೀಲಿಸಿ ಆಯ್ಕೆ ಮೇಲೆ ಕ್ಲಿಕ್‌ ಮಾಡಬೇಕು. ಬಳಿಕ ನಿಮ್ಮ ಸಿಪಿಗ್ರಾಮ್ಸ್‌ ಗ್ರೀವಿಯನ್ಸ್‌ ನಂಬರ್‌ (CPGRAMS Grievance Number) ಅಥವಾ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ನಮೂದು ಮಾಡಿದರೆ ಅಲ್ಲಿ ಅಹವಾಲು ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸುತ್ತದೆ. ಇಲ್ಲವೇ ನೇರವಾಗಿ 1902 ಸಂಖ್ಯೆಗೆ ಕರೆ ಮಾಡಿದರೆ ನಿಮಗೆ ಅಲ್ಲಿನ ಸಿಬ್ಬಂದಿ ಸಹ ಅಹವಾಲಿನ ಸ್ಟೇಟಸ್‌ ಬಗ್ಗೆ ತಿಳಿಸಿಕೊಡಲಿದ್ದಾರೆ.

ಪ್ರಕ್ರಿಯೆ ಹೇಗಿರಲಿದೆ?

ಸಾರ್ವಜನಿಕರಿಂದ ಮುದ್ದಾಂ/ಆನ್‌ಲೈನ್‌ನಲ್ಲಿ ಸ್ವೀಕೃತವಾಗುವ ಕುಂದುಕೊರತೆ/ಅಹವಾಲುಗಳನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ದಾಖಲಿಸಿ, ಸ್ವೀಕೃತಿಯನ್ನು ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸ್ವೀಕೃತಿ ಸಂಖ್ಯೆ ಬಳಸಿ ತಮ್ಮ ಕುಂದುಕೊರತೆ/ಅಹವಾಲಿನ ಸ್ಥಿತಿಗತಿಯನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ಅಥವಾ 1902 ಸಂಖ್ಯೆಗೆ ಕರೆಮಾಡಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: Gruha Lakshmi : ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ಲವೇ? ಹಾಗಾದರೆ ದೂರು ಕೊಡೋಕೆ ರೆಡಿ ಆಗಿ!

ಎಪಿಐ ಮೂಲಕ ನಿರ್ವಹಣೆ

ಸ್ವೀಕರಿಸಲಾದ ಕುಂದುಕೊರತೆ/ಅಹವಾಲುಗಳನ್ನು ವಿಷಯದ ಆಧಾರದಲ್ಲಿ ಸಂಬಂಧಿಸಿದ ಇಲಾಖೆಗಳ/ಅಧೀನ ಸಂಸ್ಥೆಗಳ ಅಧಿಕಾರಿಗಳ ಲಾಗಿನ್‌ಗಳಿಗೆ ತಕ್ಷಣ ರವಾನಿಸಲಾಗುತ್ತದೆ. ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸ್ವೀಕೃತವಾದ ಕುಂದುಕೊರತೆ/ಅಹವಾಲುಗಳನ್ನು ಸ್ವಯಂಚಾಲಿತವಾಗಿ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳ ಇ-ಆಫೀಸ್‌ ಲಾಗಿನ್‌ಗೆ ಕಳುಹಿಸುವ ವ್ಯವಸ್ಥೆ ಅಳವಡಿಸಲಾಗಿದೆ. ಇ-ಆಫೀಸ್‌ನಲ್ಲಿ ಸದರಿ ಕಡತದ ಪ್ರತಿ ಹಂತದ ಚಲನೆಯನ್ನು API ಮೂಲಕ ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಗೆ ಒದಗಿಸಲಾಗುತ್ತದೆ. ಸ್ವೀಕೃತವಾದ ಅಹವಾಲುಗಳ ಪ್ರಗತಿ ಪರಿಶೀಲಿಸಲು ಪ್ರತ್ಯೇಕ ಡ್ಯಾಶ್‌ಬೋರ್ಡ್‌ ಅಭಿವೃದ್ಧಿಪಡಿಸಲಾಗಿದೆ. ಈ ಡ್ಯಾಶ್‌ಬೋರ್ಡ್‌ನಲ್ಲಿ ಇಲಾಖಾ/ಜಿಲ್ಲಾವಾರು ಸ್ವೀಕೃತವಾದ ಕುಂದುಕೊರತೆ ಮತ್ತು ಅಹವಾಲುಗಳ ಸಂಖ್ಯೆ, ವಿಲೇ ಮಾಡಲಾದ ಮತ್ತು ಬಾಕಿ ಉಳಿದಿರುವ ಕುಂದುಕೊರತೆ ಮತ್ತು ಅಹವಾಲುಗಳ ವಿವರ ಲಭ್ಯವಿದೆ.

Continue Reading

ಉಡುಪಿ

Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

Rain News : ಇನ್ನೆರಡು ದಿನಗಳು ಹಗುರ ಮಳೆಯೊಂದಿಗೆ ಥಂಡಿ ಗಾಳಿಯು ಬೀಸಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

women enjoying in rain
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದಲ್ಲಿ ಡಿ. 4-5ರಂದು ಮಳೆಯ ಸಿಂಚನವಾಗಲಿದ್ದು, ಪ್ರತಿ ಗಂಟೆಗೆ 30 ಕಿ.ಮೀ ವೇಗದಲ್ಲಿ ನೆಲಗಾಳಿಯು ಬೀಸಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ (Rain News) ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಿಚುಂಗ್ ಚಂಡಮಾರುತದ ಪರಿಣಾಮದಿಂದಾಗಿ ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ (karnataka Weather Forecast) ಸಾಧ್ಯತೆ ಇದೆ.

ಮುಂದಿನ 24 ಗಂಟೆಗಳಲ್ಲಿ ಮಿಚುಂಗ್ ಸೈಕ್ಲೋನ್ ತೀವ್ರಗೊಳ್ಳುವ ನಿರೀಕ್ಷೆ ಇದ್ದು, ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡಿನ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಮಳೆಯಾಗಲಿದೆ.

ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ರಾಯಚೂರಲ್ಲಿ ಮಳೆಯಾಗುವ ನಿರೀಕ್ಷೆ ಇದ್ದು, ಉಳಿದೆಡೆ ಒಣ ಹವೆ ಇರಲಿದೆ. ಕರಾವಳಿಯಲ್ಲಿ ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ ಇರಲಿದ್ದು, ಉತ್ತರ ಕನ್ನಡದಲ್ಲಿ ಶುಷ್ಕ ವಾತಾವರಣ ಇರಲಿದೆ.

ಇದನ್ನೂ ಓದಿ: Cocktail finger ring : ಬ್ರೈಡಲ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಎಥ್ನಿಕ್‌ ಕಾಕ್‌ಟೈಲ್‌ ಉಂಗುರಗಳ ಕಲರವ

ಕನಿಷ್ಠ ತಾಪಮಾನ ಏರಿಕೆ

ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ಮುಂದಿನ 48 ಗಂಟೆಯಲ್ಲಿ ಕನಿಷ್ಠ ಉಷ್ಣಾಂಶವು ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಕೆಲವೆಡೆ ಚಳಿಯು ಮೈ ನಡುಗಿಸಲಿದೆ.

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 27 ಡಿ.ಸೆ -18 ಡಿ.ಸೆ
ಮಂಗಳೂರು: 36 ಡಿ.ಸೆ – 22 ಡಿ.ಸೆ
ಚಿತ್ರದುರ್ಗ: 31 ಡಿ.ಸೆ – 18 ಡಿ.ಸೆ
ಗದಗ: 33 ಡಿ.ಸೆ – 18ಡಿ.ಸೆ
ಹೊನ್ನಾವರ: 36 ಡಿ.ಸೆ- 23 ಡಿ.ಸೆ
ಕಲಬುರಗಿ: 34 ಡಿ.ಸೆ – 20 ಡಿ.ಸೆ
ಬೆಳಗಾವಿ: 32 ಡಿ.ಸೆ – 18 ಡಿ.ಸೆ
ಕಾರವಾರ: 36 ಡಿ.ಸೆ – 23 ಡಿ.ಸೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಕರ್ನಾಟಕ

ಧಾರವಾಡದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

ಧಾರವಾಡದ ಕೊಪ್ಪದಕೇರಿಯ ಶಿವಾಲಯದ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ.

VISTARANEWS.COM


on

Crime news
Koo

ಧಾರವಾಡ: ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ (Murder Case) ಮಾಡಿರುವ ಘಟನೆ ಧಾರವಾಡದ ಕೊಪ್ಪದಕೇರಿಯ ಶಿವಾಲಯದ ಬಳಿ ನಡೆದಿದೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ (60) ಹತ್ಯೆಗೀಡಾದ ವ್ಯಕ್ತಿ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೋಕರ್ಣ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲು

drown in sea

ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣ ಕಡಲತೀರದಲ್ಲಿ (Drown in Sea) ನಡೆದಿದೆ. ಇದೇ ವೇಳೆ ಗಂಭೀರಗೊಂಡ ಮತ್ತೊಬ್ಬ ಪ್ರವಾಸಿಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸುಟ್ಟು ಹಾಕಿ ಎಂದ ಭವಾನಿ ರೇವಣ್ಣ! ವಿಡಿಯೊ ನೋಡಿ

ಕಲಬುರಗಿ ಮೂಲದ ಅಭಿಷೇಕ್, ಆಕಾಶ್ ಮೃತ ಪ್ರವಾಸಿಗರು. ಕಲಬುರಗಿಯಿಂದ ಐವರು ಸ್ನೇಹಿತರು ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು. ಸಮುದ್ರದಲ್ಲಿ ಮೂವರು ಈಜಲು ತೆರಳಿದ್ದಾಗ ಅಲೆಗಳಿಗೆ ಸಿಲುಕಿ ಮುಳುಗಿದ್ದರು. ಈ ವೇಳೆ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದು, ಒಬ್ಬನನ್ನು ರಕ್ಷಣೆ ಮಾಡಲಾಗಿದೆ. ಗಂಭೀರಗೊಂಡ ಪ್ರವಾಸಿಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

ಕರ್ನಾಟಕ

ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸುಟ್ಟು ಹಾಕಿ ಎಂದ ಭವಾನಿ ರೇವಣ್ಣ! ವಿಡಿಯೊ ನೋಡಿ

ಅಪಘಾತ ನಡೆದಾಗ ಬೈಕ್‌ ಸವಾರನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈಯುವ ಮೂಲಕ ಮಾನವೀಯತೆ ಮರೆತ ಭವಾನಿ ರೇವಣ್ಣ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

VISTARANEWS.COM


on

Bhavani Revanna
Koo

ಮೈಸೂರು: ಕಾರಿಗೆ ಡಿಕ್ಕಿ ಹೊಡೆದ ಬೈಕ್ ಚಾಲಕನನ್ನು ಭವಾನಿ ರೇವಣ್ಣ (Bhavani Revanna) ತರಾಟೆಗೆ ತೆಗೆದುಕೊಂಡ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಪಘಾತ ನಡೆದಾಗ ಬೈಕ್‌ ಸವಾರನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈದಿರುವ ಭವಾನಿ ರೇವಣ್ಣ, ಬೈಕ್‌ ಸುಟ್ಟು ಹಾಕಿ ಎಂದು ಆಕ್ರೋಶ ಹೊರಹಾಕಿರುವುದು ಕಂಡುಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಹೊರವಲಯದಲ್ಲಿ ಅಪಘಾತ ನಡೆದಿದೆ. ಹಾಸನ – ಕೆ.ಆರ್.ನಗರ ರಸ್ತೆಯಲ್ಲಿ ಬರುತ್ತಿದ್ದಾಗ ಭವಾನಿ ರೇವಣ್ಣ ಕಾರಿಗೆ ಬೈಕ್‌ ಸವಾರರೊಬ್ಬರು ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಅಕ್ಕಾ ಕಾರು ಸೈಡಿಗೆ ಹಾಕಿ ಅಂದಿದ್ದಕ್ಕೆ ಕಿಡಿಕಾರಿರುವ ಭವಾನಿ ರೇವಣ್ಣ, ನನ್ನ ಕಾರಿಗೆ ಡ್ಯಾಮೇಜ್‌ ಆಗಿದೆ. ರಿಪೇರಿ ಮಾಡಿಸೋಕೆ 50 ಲಕ್ಷ ರೂ. ಹಣ ಬೇಕು. ಯಾರಾದರೂ ನ್ಯಾಯ ಮಾತನಾಡುವವರು ಐವತ್ತು ಲಕ್ಷ ಹಣ ಕೊಟ್ಟು ಮಾತನಾಡಿ. ಒಂದೂವರೆ ಕೋಟಿ ರೂಪಾಯಿ ಗಾಡಿ ಇದು ಎಂದು ದರ್ಪ ತೋರಿದ್ದಾರೆ.

ಸಾಲಿಗ್ರಾಮ ಠಾಣೆಯ ಇನ್ಸ್‌ಪೆಕ್ಟರ್‌ನ ಕರೀರಿ, ತಗೊಂಡು ಹೋಗಿ ಇವನನ್ನು ಒಳಗೆ ಹಾಕಲಿ, ಸಾಯಂಗಿದ್ರೆ ಬಸ್ಸಿಗೆ ಸಿಕ್ಕಿ ಸಾಯಬೇಕಿತ್ತು. ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕೆ ಯೋಚನೆ ಮಾಡ್ತೀಯಾ? ಒಂದೂವರೆ ಕೋಟಿ ರೂಪಾಯಿ ಕಾರು ಬಗ್ಗೆ ಯೋಚನೆ ಮಾಡು ಎಂದಿರುವ ಭವಾನಿ ರೇವಣ್ಣ, ಬೈಕ್ ಸವಾರನ‌ನ್ನು ನಿಲ್ಲಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಇದನ್ನೂ ಓದಿ | ಚಿಕ್ಕಮಗಳೂರು ಪೊಲೀಸ್-ವಕೀಲರ ಸಂಘರ್ಷ; ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

ಅಪಘಾತದಲ್ಲಿ ಗಾಯಗೊಂಡವನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈಯುವ ಮೂಲಕ ಭವಾನಿ ರೇವಣ್ಣ ಮಾನವೀಯತೆ ಮರೆತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Venkataramana Reddy
ದೇಶ7 mins ago

ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

Complaint to CM Siddaramaiah
ಕರ್ನಾಟಕ13 mins ago

Complaint to CM : ಸಿಎಂಗೆ ದೂರು ನೀಡಬೇಕೇ? ಈ ನಂಬರ್‌ಗೆ ಕರೆ ಮಾಡಿ!

women enjoying in rain
ಉಡುಪಿ29 mins ago

Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

Mizoram Election Result
ದೇಶ48 mins ago

Mizoram Election Result: ಮಿಜೋರಾಂ ಫಲಿತಾಂಶಕ್ಕೆ ಕ್ಷಣಗಣನೆ; ಯಾರಿಗೆ ಗೆಲುವು?

4 state election results shows us that, freebies are not the way for win elections
ದೇಶ1 hour ago

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

ead your daily horoscope predictions for december 4th 2023
ಪ್ರಮುಖ ಸುದ್ದಿ2 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Mizoram Election Result will be announced on December 4, 2023
ದೇಶ6 hours ago

Mizoram Election Result: ಇಂದು ಮಿಜೋರಾಂ ಎಲೆಕ್ಷನ್ ರಿಸಲ್ಟ್; ಮತ ಎಣಿಕೆ ಒಂದು ದಿನ ಮುಂದೂಡಿದ್ದೇಕೆ?

Congress delegation met Telangana Governor and stake claim to form govt
ದೇಶ7 hours ago

ತೆಲಂಗಾಣ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿದ ಕಾಂಗ್ರೆಸ್

Crime news
ಕರ್ನಾಟಕ7 hours ago

ಧಾರವಾಡದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ2 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ19 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌