Drowned in Lake: ಕನಕಪುರದಲ್ಲಿ ಕೆರೆಗೆ ಬಿದ್ದು ಬಾಲಕಿ ಸಾವು - Vistara News

ಕರ್ನಾಟಕ

Drowned in Lake: ಕನಕಪುರದಲ್ಲಿ ಕೆರೆಗೆ ಬಿದ್ದು ಬಾಲಕಿ ಸಾವು

Ramanagara News: ಅಮ್ಮನ ಜತೆಗೆ ಬಟ್ಟೆ ತೊಳೆಯಲು ಕರೆ ಬಳಿ ಹೋಗಿದ್ದ ಬಾಲಕಿಯೊಬ್ಬಳು ಆಟವಾಡುತ್ತಾ ನೀರಿನೊಳಗೆ ಬಿದ್ದು, ಮೃತಪಟ್ಟಿದ್ದಾಳೆ. ಕನಕಪುರ ತಾಲೂಕಿನ ಹುಚ್ಚೇಗೌಡನ ದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ರಾಮನಗರ: ಕನಕಪುರ ತಾಲೂಕಿನ ಹುಚ್ಚೇಗೌಡನ ದೊಡ್ಡಿ ಗ್ರಾಮದ ಸಣ್ಣ ಕೆರೆಯಲ್ಲಿ ಬಿದ್ದು, ಏಳು ವರ್ಷದ ಬಾಲಕಿಯೊಬ್ಬಳು (Drowned in Lake) ಮೃತಪಟ್ಟಿದ್ದಾಳೆ.

ರಾಮಚಂದ್ರ ಹಾಗೂ ಯಶೋದಾ ದಂಪತಿಯ ಪುತ್ರಿ ರಚನಾ (07) ಮೃತ ದುರ್ದೈವಿ. ಈಕೆ 2ನೇ ತರಗತಿ ಓದುತ್ತಿದ್ದಳು. ಯಶೋದಾ ಅವರು ಪಕ್ಕದ ಗ್ರಾಮದಲ್ಲಿರುವ ಸಣ್ಣ ಕೆರೆಗೆ ಎಂದಿನಂತೆ ಬಟ್ಟೆ ತೊಳೆಯಲು ಹೋಗಿದ್ದಾರೆ. ಹೋಗುವಾಗ ತನ್ನ ಮೂವರು ಮಕ್ಕಳನ್ನೂ ಜತೆಗೆ ಕರೆದೊಯ್ದಿದ್ದಾರೆ.

ಯಶೋದಾ ಅವರು ಬಟ್ಟೆ ತೊಳೆಯಲು ನಿರತರಾಗಿದ್ದರು. ಇತ್ತ ಮಕ್ಕಳು ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಹೀಗಾಗಿ ಮಕ್ಕಳ ಕಡೆ ಗಮನ ಹರಿಸದ ಯಶೋಧಾ ಅವರು ಬಟ್ಟೆ ತೊಳೆಯುತ್ತಿದ್ದರು. ಆದರೆ, ಈ ಸಮಯದಲ್ಲಿ ಮೂರು ಮಕ್ಕಳಲ್ಲಿ 2ನೇ ಪುತ್ರಿ ರಚನಾ ಆಳವಾದ ಗುಂಡಿಗೆ ಬಿದ್ದಿರುವುದು ಗಮನಕ್ಕೆ ಬಂದಿಲ್ಲ.

ಇದನ್ನೂ ಓದಿ: Hero MotoCorp : ಹೀರೊ ಮೊಟೊಕಾರ್ಪ್‌ ಎಲ್ಲ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ (VRS) ಘೋಷಣೆ ಮಾಡಿದ್ದೇಕೆ?

ವಿಷಯ ಗೊತ್ತಾಗುವುದರೊಳಗೆ ಕಾಲ ಮೀರಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಊರಿನ ಜನರೆಲ್ಲರೂ ಸೇರಿದ್ದಾರೆ. ಪೊಲೀಸರಿಗೂ ವಿಷಯ ಮುಟ್ಟಿಸಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮೃತದೇಹವನ್ನು ಹೊರಕ್ಕೆ ತಂದಿದ್ದಾರೆ. ಪ್ರಕರಣ ದಾಖಲಾಗಿದೆ.

ಈಜಲು ಹೋಗಿದ್ದ ಇಬ್ಬರು ಕುರಿಗಾಹಿ ಯುವಕರು ಸಾವು

ದಾವಣಗೆರೆ: ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಕೆರೆಯಲ್ಲಿ ಮಂಗಳವಾರ ಈಜಾಡಲು ಹೋಗಿದ್ದ ಇಬ್ಬರು ಕುರಿಗಾಹಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಅಲೂರು ಗ್ರಾಮದ ರಾಜು (19), ಚಿಕ್ಕಮಲ್ಲನಹೊಳೆ ಗ್ರಾಮದ ವಿಜಯ್ (19) ಮೃತ ಯುವಕರು. ಬೇಸಿಗೆ ರಜೆ ಇದ್ದ ಕಾರಣ ಕುರಿ ಮೇಯಿಸಲು ಕೆರೆಯ ಬಳಿ ಬಂದಿದ್ದ ಯುವಕರು, ಬಿಸಿಲು ಜಾಸ್ತಿ ಇದ್ದ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಾಡಲು ಹೋಗಿದ್ದಾರೆ. ಈ ವೇಳೆ ಚೆನ್ನಾಗಿಯೇ ಈಜಾಡುತ್ತಿದ್ದ ರಾಜು ಸುಸ್ತಾಗಿ ನೀರಿನಲ್ಲಿ ಮುಳುಗಳು ಪ್ರಾರಂಭಿಸಿದ್ದಾನೆ. ಹೀಗಾಗಿ ಆತ ರಕ್ಷಣೆಗೆ ಕೂಗಿಕೊಂಡಿದ್ದಾನೆ. ಸ್ನೇಹಿತನಿಗೆ ತೊಂದರೆಯಾಗಿರುವುದನ್ನು ಗಮನಿಸಿದ ವಿಜಯ್‌ ಆತನನ್ನು ಕಾಪಾಡುವ ಸಂಬಂಧ ಸಮೀಪ ಹೋಗಿದ್ದಾನೆ. ಆದರೆ, ಈ ವೇಳೆ ಆತನಿಂದ ರಾಜುವಿನ ರಕ್ಷಣೆ ಸಾಧ್ಯವಾಗಲಿಲ್ಲ.

ಮೊದಲೇ ಭಯದಲ್ಲಿದ್ದ ರಾಜು, ರಕ್ಷಿಸಲು ಬಂದಿದ್ದ ವಿಜಯ್‌ನನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದರಿಂದ ಆತನಿಗೂ ತಪ್ಪಿಸಿಕೊಂಡು ಬರಲಾಗದೆ, ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಪ್ರಿಲ್‌ 1ರಂದು ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಮೃತಪಟ್ಟಿದ್ದ ಮೂವರು

ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಏಪ್ರಿಲ್‌ 1ರಂದು ಈಜಲು ಹೋದ ಸಂದರ್ಭದಲ್ಲಿ ಇಬ್ಬರು ಯುವತಿರು ಸೇರಿ ಒಬ್ಬ ಯುವಕ ಮುಳುಗಿ (Drowned in Reservoir) ಮೃತಪಟ್ಟಿದ್ದರು. ಮೃತರೆಲ್ಲರೂ ಬೆಂಗಳೂರು ಮೂಲದವರಾಗಿದ್ದು, ಡಿ ಫಾರ್ಮಸಿ ವಿದ್ಯಾರ್ಥಿಗಳಾಗಿದ್ದರು. ರಾಧಿಕಾ, ಪೂಜಾ ಹಾಗೂ ಇಮ್ರಾನ್ ಮೃತರು.

ಬೆಂಗಳೂರಿನಿಂದ ಶ್ರೀನಿವಾಸ ಸಾಗರ ಜಲಾಶಯಕ್ಕೆ ಆರು ಜನರ ತಂಡವು ಪ್ರವಾಸಕ್ಕಾಗಿ ಬಂದಿತ್ತು. ಈ ವೇಳೆ ಜಲಾಶಯದಲ್ಲಿ ಇಳಿದಾಗ ಇವರಲ್ಲಿ ಒಬ್ಬರಿಗೆ ನೀರಿನಲ್ಲಿ ಕಾಲು ಜಾರಿದೆ. ಆಗ ಒಬರನ್ನೊಬ್ಬರು ಮೇಲೆತ್ತಲು ಹೋಗಿ ಈ ಅವಘಡ ಸಂಭವಿಸಿದೆ. ಚನ್ನಾರಾಮ್, ಸುನಿತಾ, ಬಿಕಾಷ್ ಬಚಾವಾಗಿದ್ದಾರೆ. ಇವರೆಲ್ಲರೂ ಬೆಂಗಳೂರಿನ‌ ಸಾರಾಯಿ ಪಾಳ್ಯದ ನಿವಾಸಿಗಳಾಗಿದ್ದಾರೆ.

ಇದನ್ನೂ ಓದಿ: High court order : ಶಾಸಕ ನೆಹರು ಓಲೆಕಾರ್‌ ವಿರುದ್ಧದ 2 ವರ್ಷಗಳ ಶಿಕ್ಷೆಗೆ ತಡೆಯಾಜ್ಞೆ; ಅನರ್ಹತೆ ಭೀತಿಯಿಂದಲೂ ಪಾರು

ಈ ಮೂವರು ಮುಳುಗುತ್ತಿದ್ದಂತೆ ಗಾಬರಿಗೊಂಡ ಉಳಿದ ಮೂವರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಶೋಧ ನಡೆಸಿ ಶವಗಳನ್ನು ಮೇಲಕ್ಕೆ ಎತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ದಾವಣಗೆರೆ ದಕ್ಷಿಣ ʼಕೈʼ ವಶ, ಸಮರ್ಥ್‌ಗೆ ವಿಜಯಮಾಲೆ

VISTARANEWS.COM


on

ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌‌‌ ಅಭ್ಯರ್ಥಿ ಸಮರ್ಥ್​ ಮಲ್ಲಿಕಾರ್ಜುನ್‌‌‌‌‌‌ ವಿಜಯ ಪತಾಕೆ ಹಾರಿಸಿದ್ದಾರೆ. ದಿವಂಗತ ಶಾಮನೂರು ಶಿವಶಂಕರಪ್ಪ ಮೊಮ್ಮಗ ಹಾಗೂ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ಅವರ ಪುತ್ರ ಸಮರ್ಥ್‌ ಉಪಸಮರದಲ್ಲಿ ಗೆದ್ದು ಬೀಗಿದ್ದಾರೆ. ಇವರಿಗೆ ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಸೋಲನುಭವಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಏ.9ರಂದು ಉಪಚುನಾವಣೆ ನಡೆದಿತ್ತು.

Continue Reading

Latest

ಬಾಗಲಕೋಟೆಯಲ್ಲಿ ಕಾಂಗ್ರೆಸ್‌‌‌ನ ಉಮೇಶ್‌ ಮೇಟಿ ಭರ್ಜರಿ ಗೆಲುವು

VISTARANEWS.COM


on

ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌‌ ಮೇಟಿ ಗೆಲುವು ಸಾಧಿಸಿದ್ದಾರೆ. 21,866 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಮಠ ವಿರುದ್ಧ ಕಾಂಗ್ರೆಸ್‌‌ನ ಉಮೇಶ್‌ ಮೇಟಿ ಗೆಲುವು ಪಡೆದಿದ್ದಾರೆ. ಉಮೇಶ್‌ ಮೇಟಿ 97,941 ಮತಗಳನ್ನು ಪಡೆದಿದ್ರೆ, ವೀರಣ್ಣ ಚರಂತಿಮಠ 76,075 ಮತಗಳನ್ನು ಪಡೆದುಕೊಂಡಿದ್ದರು. ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಉಮೇಶ್‌‌ ಮೇಟಿಯವರ ತಂದೆ ಹೆಚ್‌.ವೈ.ಮೇಟಿ ಯವರ ನಿಧನದಿಂದ ತೆರವಾಗಿದ್ದ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಪಕ್ಷ ಯಶಸ್ವಿಯಾಗಿದೆ.

Continue Reading

Latest

ಜೂನಿಯರ್‌ ಡಾಲಿ ಎಂಟ್ರಿ.. ಗಂಡು ಮಗುವಿಗೆ ಜನ್ಮ ನೀಡಿದ ಧನ್ಯತಾ

VISTARANEWS.COM


on

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿಗೆ ಗಂಡು ಮಗುವಿನ ಜನನವಾಗಿದೆ. ಗಂಡು ಮಗು ಜನಿಸಿದ ವಿಚಾರವನ್ನು ಧನಂಜಯ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗುವಿನ ಪುಟ್ಟ ಕೈಗಳ ಫೋಟೋ ಶೇರ್‌ ಮಾಡಿದ್ದಾರೆ. ನಟ ಧನಂಜಯ್ ಹಾಗೂ ವೈದ್ಯೆ ಧನ್ಯತಾ 2025ರ ಫೆಬ್ರವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಒಂದು ವರ್ಷದ ಸಂಭ್ರಮದ ಬೆನ್ನಲ್ಲೇ ಈ ಜೋಡಿ ಈಗ ಗಂಡು ಮಗುವನ್ನು ಸ್ವಾಗತಿಸಿದೆ.

Continue Reading

Latest

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ: ಒಂದೇ ದಿನ 993 ರೂ ಹೆಚ್ಚಳ

VISTARANEWS.COM


on

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 993 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ. ಇಂದಿನಿಂದ (ಮೇ.1) ರಿಂದ ಹೊಸ ದರ ಅನ್ವಯವಾಗಲಿದ್ದು, ಹೋಟೆಲ್‌, ರೆಸ್ಟೋರೆಂಟ್‌, ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 993 ರೂಪಾಯಿ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಈ ಹಿಂದೆ 2161 ರೂ ಇದ್ದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಈಗ 3154 ರೂಪಾಯಿಗೆ ಏರಿದೆ. ಒಂದೇ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಹೆಚ್ಚಳವಾಗಿರುವುದು ವ್ಯಾಪಾರ ವಲಯದಲ್ಲಿ ಆತಂಕ ಮೂಡಿಸಿದೆ. ಈ ಬೆಲೆ ಏರಿಕೆಯಿಂದಾಗಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಉದ್ಯಮಿಗಳಿಗೆ ಹೆಚ್ಚುವರಿ ವೆಚ್ಚದ ಒತ್ತಡ ಎದುರಾಗಲಿದೆ. ಈಗಾಗಲೇ ಹೆಚ್ಚುತ್ತಿರುವ ಇತರೆ ಖರ್ಚುಗಳ ನಡುವೆ ಈ ಏರಿಕೆ ಮತ್ತಷ್ಟು ಭಾರವಾಗಲಿದೆ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಸಿಲಿಂಡರ್‌ ಬೆಲೆ ಏರಿಕೆಯಿಂದ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆ ಸಂಭವಿಸುವ ಸಾಧ್ಯತೆ ಇದೆ.

Continue Reading
Advertisement
ದೇಶ57 minutes ago

ಬಂಗಾಳದಲ್ಲಿ ಬಿಜೆಪಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ, ಯಾರ ಪಾಲಾಗಲಿದೆ ಮುಖ್ಯಮಂತ್ರಿ ಗದ್ದುಗೆ?

ರಾಜಕೀಯ1 hour ago

ವಿಜಯ್‌ ಪ್ರಮಾಣವಚನಕ್ಕೆ ಬ್ರೇಕ್‌, ರಾಷ್ಟ್ರಪತಿಗೆ ಟಿವಿಕೆ ಪತ್ರಚೆನ್ನೈ

ರಾಜಕೀಯ4 hours ago

ತಮಿಳುನಾಡು ರಾಜಕೀಯಕ್ಕೆ ರೋಚಕ ಟ್ವಿಸ್ಟ್‌, ದಳಪತಿ ಪ್ರಮಾಣವಚನಕ್ಕೆ ಬ್ರೇಕ್‌, ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯತೆ

ಕ್ರೈಂ5 hours ago

ಪ.ಬಂಗಾಳ ಶೂಟೌಟ್‌ಗೆ ಟ್ವಿಸ್ಟ್‌, ಅಸಲಿಗೆ ಸುವೇಂದು ಟಾರ್ಗೆಟ್‌ ಆಗಿದ್ರಾ?

ಕ್ರೈಂ5 hours ago

ಪಶ್ಚಿಮ ಬಂಗಾಳದಲ್ಲಿ ರಕ್ತದೋಕುಳಿ, ಸುವೇಂದು ಅಧಿಕಾರಿ ಪಿಎ ಚಂದ್ರನಾಥ್‌ ಶೂಟೌಟ್‌‌..!

Latest1 day ago

ಪಶ್ಚಿಮ ಬಂಗಾಳದಲ್ಲಿ ಕೇಸರಿ ಪರ್ವ: ಯಾರಾಗಲಿದ್ದಾರೆ ʼಸಿಎಂʼ?

Latest1 day ago

ದಳಪತಿʼ ಪಟ್ಟಾಭಿಷೇಕಕ್ಕೆ ಕ್ಷಣಗಣನೆ : ತಮಿಳುನಾಡು ರಾಜಕಾರಣದಲ್ಲಿ ಬಿರುಗಾಳಿ

Latest2 days ago

ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಿಲ್ಲ ಎಂದಿದ್ದೇಕೆ ಮಮತಾ ಬ್ಯಾನರ್ಜಿ?

Latest2 days ago

ಬಿಜೆಪಿ ಬಂಗಾಳ ಗೆದ್ದಾಯ್ತು, ಸಿಎಂ ರೇಸ್‌ನಲ್ಲಿ ಯಾರು?

Latest2 days ago

ತಮಿಳುನಾಡು: ಬಹುಮತ ಪಡೆಯಲು ದಳಪತಿ ಮುಂದಿರುವ ತಂತ್ರಗಳೇನು?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌