ಕರ್ನಾಟಕ
Rain News : ಬೆಂಗಳೂರಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಸುರಿದ ಭಾರಿ ಮಳೆ; ಟ್ರಾಫಿಕ್ ಜಾಮ್!
Rain News : ಸೋಮವಾರ ಸಂಜೆ ಬೆಂಗಳೂರಿನ ಹಲವು ಕಡೆ ಭರ್ಜರಿ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನರು ಹೈರಾಣಾಗಿದ್ದಾರೆ. ಅಲ್ಲದೆ, ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿವೆ.
ಬೆಂಗಳೂರು: ರಾಜ್ಯದಲ್ಲಿ ಮಳೆ ಆರ್ಭಟ ಮತ್ತೆ ಶುರುವಾಗಿದೆ. ಕರಾವಳಿ, ಮಲೆನಾಡು ಭಾಗಗಳ (Coastal and Malnad region) ಅಲ್ಲಲ್ಲಿ ಸೋಮವಾರ (ಸೆಪ್ಟೆಂಬರ್ 18) ಭಾರಿ ಮಳೆಯಾಗಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ (Bangalore Rain) ಭರ್ಜರಿ ವರ್ಷಧಾರೆಯಾಗಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಬಿಟ್ಟೂ ಬಿಡದೆ ಮಳೆ (Rain News) ಸುರಿದಿದೆ.
ಬೆಂಗಳೂರಿನಲ್ಲಿ ಭಾನುವಾರ ಸಂಜೆ ಮತ್ತು ರಾತ್ರಿ ಹಲವು ಕಡೆ ಮಳೆ ಬಂದಿತ್ತು. ಸೋಮವಾರವೂ ತನ್ನ ಆರ್ಭಟವನ್ನು ಮುಂದುವರಿಸಿರುವ ವರುಣರಾಯನಿಂದ ಪಾದಚಾರಿಗಳು, ಸಂಚಾರಿಗಳು ಕಂಗೆಟ್ಟಿದ್ದಾರೆ.
ಇದನ್ನೂ ಓದಿ: Cauvery water dispute : ತಮಿಳುನಾಡಿಗೆ ಕೂಡಲೇ ನೀರು ನಿಲ್ಲಿಸಿ: ಬಸವರಾಜ ಬೊಮ್ಮಾಯಿ ಗುಡುಗು
ನಗರದ ಶಿವಾಜಿನಗರ, ವಸಂತ ನಗರ, ಕೊಲ್ಸ್ ಪಾರ್ಕ್, ಸ್ಯಾಂಕಿ ಟ್ಯಾಂಕ್, ಮೆಜೆಸ್ಟಿಕ್, ಮಾರ್ಕೆಟ್ ಸೇರಿದಂತೆ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಿದೆ. ವಾಹನ ಚಲಾಯಿಸಲು ಕಾಣದಷ್ಟರ ಮಟ್ಟಿಗೆ ಮಳೆ ಸುರಿದಿದೆ. ಆಗಾಗ ಗುಡುಗು ಸಹ ಬಂದಿದ್ದು, ಜನರು ಸುರಕ್ಷಿತ ಪ್ರದೇಶವನ್ನು ನೋಡಿ ಆಶ್ರಯ ಪಡೆದುಕೊಂಡಿದ್ದಾರೆ.
ಟ್ರಾಫಿಕ್ ಜಾಮ್!
ಇನ್ನು ಸ್ವಲ್ಪ ಮಳೆಯಾದರೇ ಟ್ರಾಫಿಕ್ ಕಿರಿಕಿರಿ ಉಂಟಾಗುವ ಬೆಂಗಳೂರಿನಲ್ಲಿ ಈ ಮಳೆಯು ವಾಹನ ಸವಾರರಿಗೆ ಭಾರಿ ಸಂಕಷ್ಟವನ್ನು ತಂದೊಡ್ಡಿದೆ. ಮಳೆಯಿಂದಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳ ಸಂಚಾರಕ್ಕೆ ಕಷ್ಟವಾಗಿದೆ.
ಅಲ್ಲಲ್ಲಿ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ನುಗ್ಗಿವೆ. ಇನ್ನು ಕೆಲವು ಅಂಡರ್ ಪಾಸ್ ಬಳಿ ನೀರು ನಿಂತುಕೊಂಡಿವೆ. ಇದರಿಂದ ಸಹ ವಾಹನ ಸವಾರರಿಗೆ ತೊಂದರೆಯಾಗಿದೆ. ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಓಡಾಟಕ್ಕೆ ಸಮಸ್ಯೆಯಾಗಿದೆ.
ಬುಧವಾರದವರೆಗೆ ರಾಜ್ಯದ ಹಲವು ಕಡೆ ಸಾಧಾರಣ ಮಳೆ
ಮುಂದಿನ ಎರಡು ದಿನಗಳ ಕಾಳ ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಸಾಧಾರಣ ಮಳೆಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Weather Report) ಉಲ್ಲೇಖಿಸಿದೆ.
ಬೆಂಗಳೂರಿನಲ್ಲಿ ಇನ್ನೆರಡು ದಿನ ಭಾರಿ ಮಳೆ
ಇನ್ನು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಬೆಂಗಳೂರು ನಗರದಲ್ಲಿ ಬೆಳಗ್ಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಅಲ್ಲದೆ, ಮಧ್ಯೆ ಮಧ್ಯೆ ಬಿಸಿಲೂ ಸಹ ಬರಲಿದೆ. ಆದರೆ, ಸಂಜೆ ಇಲ್ಲವೇ ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: Cauvery water dispute : ಮತ್ತೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡಲು CWMA ಆದೇಶ!
ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.
ಕರ್ನಾಟಕ
BJP-JDS Alliance: ಅವ್ರು ಗೆಲ್ಲಲ್ಲ; ತುಮಕೂರಿನಲ್ಲಿ ದೇವೇಗೌಡ್ರ ಸ್ಪರ್ಧೆಗೆ ಹಾಲಿ ಬಿಜೆಪಿ ಸಂಸದ ಬಸವರಾಜ್ ತೀವ್ರ ವಿರೋಧ
BJP-JDS Alliance : ತುಮಕೂರಿನಲ್ಲಿ ದೇವೇಗೌಡರ ಸ್ಪರ್ಧೆಗೆ ಬಿಜೆಪಿಯಿಂದ ಮೊದಲ ವಿರೋಧ ವ್ಯಕ್ತವಾಗಿದೆ. ಅವರು ನಿಂತ್ರೆ ಜನ ವೋಟ್ ಹಾಕಲ್ಲ ಎಂದು ಹಾಲಿ ಸಂಸದ ಬಸವರಾಜ್ ನೇರವಾಗಿ ಹೇಳಿದ್ದಾರೆ.
ತುಮಕೂರು: ʻʻತುಮಕೂರಿನಿಂದ ದೇವೇಗೌಡರನ್ನು (HD Devegowda) ನಿಲ್ಲಿಸಲು ಹೊರಟಿದ್ದಾರಂತೆ. ದೇವೇಗೌಡರು ನಿಂತರೆ ತುಮಕೂರು ಜನ ಯಾವತ್ತಿದ್ದರೂ ವೋಟ್ ಹಾಕಲ್ಲʼʼ- ಹೀಗೆಂದು ಖಡಾಖಡಿಯಾಗಿ ಹೇಳಿದ್ದರು ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜ್ (MP GS Basavaraj) ಅವರು.
ಅವರು ಮಾತನಾಡುತ್ತಿದ್ದುದು ಬಿಜೆಪಿ- ಜೆಡಿಎಸ್ ಮೈತ್ರಿ (BJP-JDS Alliance) ವಿಚಾರ. ʻʻನಮ್ಮ ಪಕ್ಷದವರು ಒಪ್ಪಿ ಮೈತ್ರಿ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ನಾನು ಏನೂ ಕಮೆಂಟ್ ಮಾಡಲ್ಲ. ಜೆಡಿಎಸ್‌ನವರು ಐದು ಸೀಟ್ ಕೇಳಿದ್ದಾರಂತೆ. ತುಮಕೂರನ್ನೂ ಜೆಡಿಎಸ್ ನವರು ಕೇಳಿದ್ದಾರಂತೆ. ಜನ ವೋಟ್ ಹಾಕ್ತಾರೋ ಏನೋ ಗೊತ್ತಿಲ್ಲ. ತುಮಕೂರಿನಿಂದ ದೇವೇಗೌಡರನ್ನು ನಿಲ್ಲಿಸಲು ಹೊರಟಿದ್ದಾರಂತೆ. ದೇವೇಗೌಡರು ನಿಂತರೇ ಜನ ಮತ ಹಾಕಲ್ಲʼʼ ಎಂದು ಹೇಳಿದರು ಬಸವರಾಜ್
ʻʻರಕ್ತ ಕೊಟ್ಟರೂ ಕೊಟ್ಟೆನೂ ತುಮಕೂರಿಗೆ ಹೇಮಾವತಿ ನೀರು ಕೊಡಲ್ಲ ಎಂದಿದ್ದ ದೇವೇಗೌಡರನ್ನು ಒಮ್ಮೆ ಜನ ಸೋಲಿಸಿದ್ದಾರೆ. ಅವರ ಸ್ವಂತ ನೆಂಟರೂ ವೋಟ್ ಹಾಕಲ್ಲ. ಒಬ್ಬ ಗೌಡರೂ ಅವರಿಗೆ ಮತ ಹಾಕಲ್ಲʼʼ ಎಂದು ಹೇಳಿದರು ಬಸವರಾಜ್.
ʻʻಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡರು ತುಮಕೂರಿಗೆ ಎಂದೂ ಕಂಡಿರಿಯದ ಮೋಸ ಮಾಡಿದ್ದಾರೆ. ಯಾರಿಗಾದರೂ ವೋಟ್ ಹಾಕಲಿ, ದೇವೇಗೌಡರಿಗೆ ವೋಟ್ ಹಾಕಬಾರದು. ದೇವೇಗೌಡರಿಗೆ ವೋಟ್ ಹಾಕಿದರೆ ಜಿಲ್ಲೆಯ ಜನತೆ ಪಾಪ ಮಾಡಿದಂಗೆʼʼ ಎಂದು ನಿಷ್ಠುರವಾಗಿ ನುಡಿದರು.
ʻʻದೇವೇಗೌಡರು ಎಂದಾದರೂ ಜೀವಮಾನದಲ್ಲಿ ಈಲ್ಡ್ ಆಗಿಲ್ಲ. ಹಿಂದೆ ಜೆಡಿಎಸ್ ನಮ್ಮ ಜತೆ ಮೈತ್ರಿ ಮಾಡಿಕೊಂಡಿತ್ತು. ನಂತರ 2018ರಲ್ಲಿ 39 ಸೀಟ್ ಪಡೆದು ಕಾಂಗ್ರೆಸ್ ಜೊತೆ ಸೇರಿ ಕುಮಾರಸ್ವಾಮಿ ಸಿಎಂ ಆದ್ರುʼʼ ಎಂದು ನೆನಪಿಸಿಕೊಂಡರು ಬಸವರಾಜ್.
ಬಸವರಾಜ್ ಸೀಟು ಬಿಟ್ಟುಕೊಡುವುದು ಅನಿವಾರ್ಯ!
ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಮಾತುಕತೆಯಲ್ಲಿ ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕು ಎಂಬ ಮಾತುಕತೆ ಆಗಿದೆ ಎಂದು ಹೇಳಲಾಗಿದೆ. ಆದರೆ, ಇದ್ಯಾವುದೂ ಅಂತಿಮ ಆಗಿಲ್ಲ. ಈಗಿರುವ ಸುದ್ದಿಯಂತೆ ಅದು ನಿಜವಾದರೆ ತುಮಕೂರು ಜೆಡಿಎಸ್ ಪಾಲಾಗಲಿದೆ. ಆಗ ಅನಿವಾರ್ಯವಾಗಿ ಜಿ.ಎಸ್. ಬಸವರಾಜ್ ಅವರು ತಮ್ಮ ಸೀಟು ಬಿಟ್ಟುಕೊಡಬೇಕಾಗುತ್ತದೆ. ಅದಲ್ಲದೆ ಹೋದರೂ ಈಗ 82 ವರ್ಷ ಆಗಿರುವ ಬಸವರಾಜ್ ಅವರಿಗೆ ಮುಂದಿನ ಬಾರಿ ಟಿಕೆಟ್ ಸಿಗೋದು ಡೌಟು. ಅವರು ಆಗಲೇ ನಿವೃತ್ತಿ ಘೋಷಿಸಿದ್ದಾರೆ.
ಅಷ್ಟಾದರೂ ಬಸವರಾಜ್ ಅವರು ದೇವೇಗೌಡರು ಬರಲೇಬಾರದು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಜತೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಆಕ್ರೋಶ ಅವರ ಮಾತಿನಲ್ಲಿ ಕಾಣಿಸುತ್ತಿದೆ.
ತುಮಕೂರಿನಿಂದ ಸೋಮಣ್ಣ ಸ್ಪರ್ಧೆ ಮಾಡ್ತಾರಾ?
ಈ ನಡುವೆ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಬಿಜೆಪಿ ನಾಯಕರಾಗಿರುವ ವಿ ಸೋಮಣ್ಣ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹರಡಿದೆ. ಅದರ ಬಗ್ಗೆ ಪ್ರಶ್ನೆ ಮಾಡಿದರೆ, ʻʻಸೋಮಣ್ಣರನ್ನ ನಾನು ಕರೆದಿಲ್ಲ. ಅವರ ಭವಿಷ್ಯಕ್ಕೆ ನಾನು ಅಡ್ಡಿಯಾಗಿಲ್ಲ. ಅಪ್ಪಾ ನೀನು ಎಲ್ಲಿ ನಿಲ್ತೀಯಾ ಅಲ್ಲಿ ಸಪೋರ್ಟ್ ಮಾಡ್ತೀವಿ ಅಂದಿದ್ದೀನಿʼʼ ಎಂದು ಬಸವರಾಜ್ ಹೇಳಿದರು.
ʻʻಪಾರ್ಟಿಯೊಳಗೆ ಇದ್ದು ಕೆಲಸ ಮಾಡು ಅಂದಿದ್ದೇನೆ. ಏನು ಮಾಡ್ತಾರೋ ಗೊತ್ತಿಲ್ಲʼʼ ಎಂದ ಬಸವರಾಜ್, ʻʻಹಿಂದಿನ ಬಾರಿ ನಾನು ಗೆಲ್ಲಲು ವಿ.ಸೋಮಣ್ಣರೇ ಕಾರಣ. ನನ್ನತ್ರ ದುಡ್ಡೇ ಇರಲಿಲ್ಲ. ಸೋಮಣ್ಣರೇ ದುಡ್ಡು ಕೊಟ್ಟಿದ್ದುʼʼ ಎಂದು ಸತ್ಯ ಬಿಚ್ಚಿಟ್ಟರು!
ಇದನ್ನೂ ಓದಿ: BJP-JDS Alliance : ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಶಕೆ ಆರಂಭ!
ತುಮಕೂರಿನ ರಾಜಕೀಯ ಪರಿಸ್ಥಿತಿ ಹೇಗಿದೆ?
ತುಮಕೂರಿನಲ್ಲಿ ಕಳೆದ ಬಾರಿ ಬಿಜೆಪಿಯಿಂದ ಬಸವರಾಜ್ ಅವರು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗಿತ್ತು. ಅಲ್ಲಿ ದೇವೇಗೌಡರು ಸ್ಪರ್ಧೆ ಮಾಡಿದ್ದರು. ತುಮಕೂರಿನಲ್ಲಿ ಹಿಂದಿನಿಂದಲೂ ಕಾಂಗ್ರೆಸ್‌ನಿಂದ ಕಣಕ್ಕಿಳಿಯುತ್ತಿದ್ದ ಮುದ್ದಹನುಮೇ ಗೌಡರು ಬೇಸರಗೊಂಡು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡರು. ಬಳಿಕ ಅಲ್ಲಿಯೂ ಭ್ರಮನಿರಸನಗೊಂಡು ಕಾಂಗ್ರೆಸ್‌ಗೆ ಮರಳಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್ ಕೊಡುವುದು ಡೌಟ್ ಎಂದು ಹೇಳಲಾಗುತ್ತಿದೆ. ಇತ್ತ ಬಸವರಾಜ್ ಅವರಿಗೂ ಬಿಜೆಪಿಯಲ್ಲಿ ಅಷ್ಟೇನೂ ಹಿತಕರ ಅನಿಸುತ್ತಿಲ್ಲ ಎಂಬ ಮಾತಿದೆ. ಇತ್ತ ಸೋಮಣ್ಣ ಅವರು ತುಮಕೂರಿನ ಮೇಲೆ ಕಣ್ಣಿಟ್ಟಿದ್ದಾರೆ.
ಕಾಂಗ್ರೆಸ್ ನಿರ್ಲಕ್ಷ್ಯದಿಂದ ಕಾವೇರಿ ಜಲ ವಿವಾದ ಎಂದ ಬಸವರಾಜ್
ʻʻಕಾಂಗ್ರೆಸ್ ನವರ ನಿರ್ಲಕ್ಷ್ಯದಿಂದಾಗಿ ನಾವು ತಮಿಳುನಾಡಿಗೆ ನೀರು ಬಿಡಬೇಕಾದ ಪರಿಸ್ಥಿತಿ ಬಂದಿದೆ. ಅಚ್ಚುಕಟ್ಟಾಗಿ ಒಳ್ಳೆ ಲಾಯರ್ ಗೆ ಇಟ್ಟು ವಾದ ಮಾಡಬೇಕಿತ್ತು. ತಜ್ಞರನ್ನು ಕಳುಹಿಸಿ ನೀರಿನ ಲೆಕ್ಕಾಚಾರ ಮಾಡಬೇಕಿತ್ತುʼʼ ಎಂದು ಬಸವರಾಜ್ ಹೇಳಿದರು.
ʻʻಕಾಂಗ್ರೆಸ್ ನವರು ತಮಿಳುನಾಡಿನವರನ್ನು ಎದುರು ಹಾಕಿಕೊಳ್ಳಲು ಆಗುತ್ತಿಲ್ಲ. ತಮಿಳುನಾಡಿನ ನೆಂಟಸ್ತನ ಬೇಕಾಗಿದೆ. ಹಾಗಾಗಿ ನೀರು ಬಿಟ್ಟಿದೆʼʼ ಎಂದು ಕಾಂಗ್ರೆಸ್ ವಿರುದ್ಧ ಹರಿ ಹಾಯ್ದರು.
ಕರ್ನಾಟಕ
Murder Case : ಮಲಗಿದ್ದವಳ ಮೇಲೆ ಕಲ್ಲು ಎತ್ತಿಹಾಕಿ ಕೊಂದ; ಬಳಿಕ ಮರಕ್ಕೆ ನೇಣು ಬಿಗಿದುಕೊಂಡ ಕುಡುಕ ಪತಿ!
Murder Case : ರಾಯಚೂರಲ್ಲಿ ಮಲಗಿದ್ದ ಪತ್ನಿ ಮೇಲೆ ಕಲ್ಲು ಎತ್ತಿಹಾಕಿ ಕೊಂದು ಬಳಿಕ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಕುಡುಕ ಪತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ರಾಯಚೂರು: ರಾಯಚೂರಿನ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಪತ್ನಿಯನ್ನು ಹತ್ಯೆಗೈದು (Murder case) ಪತಿ ನೇಣಿಗೆ ಶರಣಾಗಿದ್ದಾನೆ. ಅಂಬಮ್ಮ (31) ಹತ್ಯೆಯಾದ ದುರ್ದೈವಿ.
ಅಂಬಮ್ಮ ಪತಿ ಖಾಸಿಂಮಪ್ಪ ಎಂಬಾತ ಪತ್ನಿ ಮಲಗಿದ್ದಾಗ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಕೊಲೆಗೈದು ಬಳಿಕ ಅರೋಲಿ ಸೀಮಾದ ಅಡವಿಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಕೊಲೆ ಬಳಿಕ ಖಾಸಿಂಮಪ್ಪನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಮರಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗಿದೆ. ಖಾಸಿಂಮಪ್ಪ ಕುಡಿತದ ಚಟವನ್ನು ಮೈಗೆ ಅಂಟಿಸಿಕೊಂಡಿದ್ದ. ನಿತ್ಯ ಕುಡಿದು ಬಂದು ಪತ್ನಿಗೆ ಮಾನಸಿಕ , ದೈಹಿಕವಾಗಿ ಕಿರುಕುಳವನ್ನು ನೀಡುತ್ತಿದ್ದ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇತ್ತ ತಂದೆ-ತಾಯಿ ಮೃತಪಟ್ಟಿದ್ದರಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Accident Case : ಚಲಿಸುತ್ತಿದ್ದಾಗಲೇ ಸುಟ್ಟು ಕರಕಲಾದ ಕಾರು; ಬೈಕ್‌ಗೆ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು
3 ವರ್ಷದ ಮಗುವಿನ ಕತ್ತು ಹಿಸುಕಿ ಬಾವಿಗೆ ಹಾರಿದ ತಾಯಿ
ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗುವಿನ ಕತ್ತು ಹಿಸುಕಿ ಕೊಂದು ತಾನು ಬಾವಿಗೆ ಹಾರಿ ಆತ್ಮಹತ್ಯೆ (Mother Kills daugher and self) ಮಾಡಿಕೊಂಡಿದ್ದಾಳೆ. ಕೌಟುಂಬಿಕ ಕಲಹದ (Family dispute) ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ (Mother-child death) ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಸುಧಾಮಣಿ (32) ಎಂಬ ಮಹಿಳೆ ಮೂರು ವರ್ಷದ ಮಗು (Three year old daughter killed) ಸಾನ್ವಿಯ ಕತ್ತು ಹಿಸುಕಿ ಕೊಂದು ಬಳಿಕ ತಾನು ಅಲ್ಲೇ ಇರುವ ಬಾವಿಗೆ ಹಾರಿ ಪ್ರಾಣ (Mother jumps into well) ಕಳೆದುಕೊಂಡಿದ್ದಾಳೆ.
ಸುಧಾಮಣಿ ಹಾಗು ಪತಿ ರವಿ ನಡುವೆ ನಡುವೆ ಐದು ವರ್ಷದ ಹಿಂದೆ ಮದುವೆ ನಡೆದಿತ್ತು. ಇವರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಕೌಟುಂಬಿಕ ಕಲಹದಿಂದ ಆಕೆಗೆ ನೆಮ್ಮದಿ ಇರಲಿಲ್ಲ ಎಂದು ಹೇಳಲಾಗಿದೆ.
ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ-ಮಗಳ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐದು ವರ್ಷದಿಂದ ಒಂದು ದಿನವೂ ನೆಮ್ಮದಿ ಇಲ್ಲ
ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಸುಧಾಮಣಿಯ ತಾಯಿ ತನ್ನ ಮಗಳು ಕಳೆದ ಐದು ವರ್ಷಗಳಿಂದಲೂ ನೋವಿನಲ್ಲೇ ಜೀವನ ಕಳೆದಿದ್ದಾಳೆ ಎಂದರು. ಗಂಡ ರವಿ, ಮನೆಯವರು ಚಿತ್ರಹಿಂಸೆ ನೀಡಿದ್ದಾರೆ ಎಂದರು.
ಕುಡಿದು ಬಂದು ಗಲಾಟೆ ಮಾಡುತ್ತಿದ್ದ ರವಿ ಕೆಲವೊಮ್ಮೆ ಮೂರ್ನಾಲ್ಕು ದಿನವೂ ಬರುತ್ತಲೇ ಇರಲಿಲ್ಲ. ಕೊನೆಗೆ ನಾವೇ ಹೋಗಿ ಫೋನ್ ಮಾಡಿ ಕರೆಸಿ ರಾಜೀ ಮಾಡುತ್ತಿದ್ದೆವು. ಅವನು ಮನೆಗೆ ಬಂದರೂ ನೆಮ್ಮದಿ ಇಲ್ಲ, ಬಾರದಿದ್ದರೆ ದಿಕ್ಕಿಲ್ಲ ಎಂಬ ಸ್ಥಿತಿಯಲ್ಲಿದ್ದಳು ಸುಧಾಮಣಿ ಎಂದರು.
ಹಾಗಂತ ನಿನಗೆ ಈ ನರಕ ಬೇಡ, ನಮ್ಮ ಮನೆಗೆ ಬಂದು ಬಿಡು ಎಂದು ಕೇಳಿದರೂ ಆಕೆ ಕೇಳುತ್ತಿರಲಿಲ್ಲ. ನಿಮಗೆ ಭಾರವಾಗಿ ಬದುಕುವುದಿಲ್ಲ ಅನ್ನುತ್ತಿದ್ದಳು. ಈಗ ಅವಳೇ ಹೋಗಿಬಿಟ್ಟಿದ್ದಾಳೆ. ಪುಟ್ಟ ಮಗುವೂ ಇಲ್ಲ ಎಂದು ನೋವಿನಿಂದ ಹೇಳಿದರು.
ಕುತ್ತಿಗೆ ಹಿಸುಕಿ ಚಾಪೆಯಲ್ಲಿ ಮಲಗಿಸಿ…
ಶನಿವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸುಧಾಮಣಿ ಮನೆಯಿಂದ ಹೊರ ಹೋಗಿದ್ದನ್ನು ಕೆಲವರು ನೋಡಿದ್ದಾರೆ. ಆದರೆ, ಆಕೆ ಮರಳಿ ಬಂದಿಲ್ಲ. ಎಷ್ಟು ಹೊತ್ತಾದರೂ ಬಂದಿಲ್ಲವಲ್ಲ, ಮಗು ಏನು ಮಾಡುತ್ತಿದೆ ಎಂದು ಒಳಗೆ ಇಣುಕಿ ನೋಡಿದರೆ ಅದು ಚೆನ್ನಾಗಿ ನಿದ್ದೆ ಮಾಡಿದಂತೆ ಮಲಗಿದೆ. ಆದರೂ ಸಂಶಯದಿಂದ ಅಕ್ಕಪಕ್ಕದವರು ಹೋಗಿ ನೋಡಿದರೆ ಮಗು ಮಲಗಿದ್ದು ನಿಜ. ಆದರೆ ಜೀವ ಇರಲಿಲ್ಲ.
ಬಹುಶಃ ಸುಧಾಮಣಿ ಮಗುವನ್ನು ಕತ್ತು ಹಿಸುಕಿ ಕೊಂದು ಹಾಗೇ ಚಾಪೆಯಲ್ಲಿ ಮಲಗಿಸಿ, ಅದರ ಮೇಲೊಂದು ಬಟ್ಟೆಯನ್ನು ಹಾಸಿ ಹೋಗಿದ್ದಾಳೆ ಅನಿಸುತ್ತದೆ. ಈ ನಡುವೆ ಸುಧಾಮಣಿ ಎಲ್ಲಿದ್ದಾಳೆ ಎಂದು ಹುಡುಕಿದರೆ ಆಕೆಯ ಚಪ್ಪಲಿ ಅಲ್ಲಿನ ಒಂದು ಬಾವಿಯ ಬಳಿ ಕಾಣಿಸಿದೆ. ಬಗ್ಗಿ ನೋಡಿದರೆ ಒಳಗೆ ಸುಧಾಮಣಿಯ ಶವ ಕಾಣಿಸಿದೆ. ಅದನ್ನು ಮೇಲೆತ್ತಲಾಗಿದೆ.
ಕಣ್ಮರೆಯಾಗಿದ್ದಾನೆ ರವಿ, ಅವನ ಕೈವಾಡವಿದೆಯಾ?
ಈ ನಡುವೆ, ಸುಧಾಮಣಿಯ ಪತಿ ರವಿ ಘಟನೆ ನಡೆದು ಹಲವು ಗಂಟೆಗಳೇ ಕಳೆದರೂ ನಾಪತ್ತೆಯಾಗಿದ್ದಾನೆ. ಇಡೀ ಊರಿಗೇ ವಿಷಯ ಗೊತ್ತಾಗಿದೆ. ಹಾಗಿದ್ದರೂ ಅವನು ಬಂದಿಲ್ಲ ಎಂದರೆ ಒಂದೋ ಅವನು ಭಯದಿಂದ ತಪ್ಪಿಸಿಕೊಂಡಿರಬೇಕು. ಇಲ್ಲವೇ ಈ ಸಾವಿನಲ್ಲಿ ಅವನ ಕೈವಾಡವೂ ಇರಬೇಕು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಊರಿನಲ್ಲಿ ತಾಯಿ ಮಗುವಿನ ಸಾವು ಎಲ್ಲರನ್ನೂ ಕಂಗೆಡಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Accident Case : ಚಲಿಸುತ್ತಿದ್ದಾಗಲೇ ಸುಟ್ಟು ಕರಕಲಾದ ಕಾರು; ಬೈಕ್‌ಗೆ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು
Road Accident : ರಸ್ತೆ ಅಪಘಾತದಲ್ಲಿ ಡಿಎಸ್‌ಎಸ್ ಮುಖಂಡ ಮೃತಪಟ್ಟಿರುವ ಘಟನೆ ತುಮಕೂರಲ್ಲಿ ನಡೆದಿದೆ. ಇತ್ತ ಚಿಕ್ಕಮಗಳೂರಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಸುಟ್ಟು ಕರಕಲಾಗಿದೆ.
ತುಮಕೂರು/ ಚಿಕ್ಕಮಗಳೂರು: ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ (road Accident) ಜೀವ ಬಿಟ್ಟಿದ್ದಾನೆ. ತುಮಕೂರಿನ ತಿಪಟೂರು ತಾಲೂಕಿನ ಹತ್ಯಾಳು ಬೆಟ್ಟದ ಬಳಿ ಘಟನೆ (Accident Case) ನಡೆದಿದೆ. ಬೈಕ್ ಸವಾರ ಪ್ರಕಾಶ್ (40) ಮೃತ ದುರ್ದೈವಿ.
ಡಿಎಸ್‌ಎಸ್ ಮುಖಂಡರಾಗಿದ್ದ ಪ್ರಕಾಶ್ ಹತ್ಯಾಳು ಬೆಟ್ಟದಿಂದ ಬೆನಾಯ್ಕನಹಳ್ಳಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಕೆ.ಬಿ.ಕ್ರಾಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಹೊತ್ತಿ ಉರಿದ ಕಾರು; ಪ್ರಯಾಣಿಕರು ಅಪಾಯದಿಂದ ಪಾರು
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕುದುರೆಗುಂಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ರಸ್ತೆ ಮಧ್ಯೆಯೇ ಕಾರೊಂದು ಹೊತ್ತಿ ಉರಿದಿದೆ. ಚಲಿಸುತ್ತಿದ್ದಾಗಲೇ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ಮೂವರು ಇಳಿದು ಓಡಿ ಹೋಗಿದ್ದಾರೆ.
ಸಣ್ಣದಾಗಿ ಕಾಣಿಸಿಕೊಂಡ ಕಿಡಿ ಒಮ್ಮೆಲೆ ಪೂರ್ತಿ ಆವರಿಸಿ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರು. ಬೆಂಕಿಯ ತೀವ್ರತೆಯಿಂದ ಕಾರು ಸಂಪೂರ್ಣ ಹಾನಿಯಾಗಿದೆ.
ಅಗ್ನಿಗೆ ಆಹುತಿಯಾದ ಎರಡು ಅಂಗಡಿಗಳು
ಕೊಪ್ಪಳ ನಗರದ ಗಂಜ್ ಸರ್ಕಲ್ ಬಳಿ ತಡರಾತ್ರಿ ಅಗ್ನಿ ಅವಘಡದಿಂದ ಎರಡು ಅಂಗಡಿಗಳು ಭಸ್ಮವಾಗಿವೆ. ಶಫಿಕ್ ಸಿದ್ದಿಕಿ ಎಂಬುವವರಿಗೆ ಸೇರಿದ ಆಟೋ ಮೊಬೈಲ್ ಹಾಗೂ ಹನುಮಂತಪ್ಪ ಎಂಬುವವರ ಹೋಟೆಲ್ ಸುಟ್ಟು ಹೋಗಿವೆ. ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ ಸವಾರ ಸತ್ತರೂ ನೋಡದೆ ಹೋದ ಕಾರು ಚಾಲಕ!
ಬೆಂಗಳೂರು: ಬೆಂಗಳೂರಿನ ಕೆಂಗೇರಿ ಸಮೀಪದ ಗಾಣಕಲ್ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್‌ಗೆ (Hit And Run case) ಬೈಕ್ ಸವಾರ (Road Accident) ಬಲಿಯಾಗಿದ್ದಾನೆ. ಅಜಯ್ ಕುಮಾರ್ ಮೃತ ದುರ್ದೈವಿ.
ಚಿಕ್ಕೇಗೌಡನಪಾಳ್ಯ ಕಡೆಯಿಂದ ಉತ್ತರಹಳ್ಳಿ ರಸ್ತೆ ಕಡೆಗೆ ವೇಗವಾಗಿ ಬಂದ ಕಾರು, ಮುಂದೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಅಪಘಾತದ ಬಳಿಕ ಸ್ಥಳದಿಂದ ಕಾರು ಸಮೇತ ಚಾಲಕ ಪರಾರಿ ಆಗಿದ್ದಾನೆ. ಘಟನೆ ಸಂಬಂಧ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಕಾರು ಚಾಲಕನಿಗಾಗಿ ಹುಡುಕಾಟ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Mother-Child death : 3 ವರ್ಷದ ಮಗುವಿನ ಕತ್ತು ಹಿಸುಕಿ ಬಾವಿಗೆ ಹಾರಿದ ತಾಯಿ; ಎಷ್ಟು ಕಷ್ಟ ಅನುಭವಿಸಿದ್ದಳೋ?
Mother-child death: ಐದು ವರ್ಷಗಳಿಂದ ಆಕೆಗೆ ನೆಮ್ಮದಿ ಇರಲಿಲ್ಲ. ಈಗ ಮಗುವನ್ನೂ ಕೊಂದು ತಾನೂ ಚಿರನಿದ್ರೆಗೆ ಜಾರಿದ್ದಾಳೆ. ಆಕೆಯ ಈ ಸ್ಥಿತಿಗೆ ಕಾರಣನಾದವನು ಅವಳ ಗಂಡ ಎನ್ನುತ್ತಾರೆ ಆಕೆಯ ಮನೆಯವರು.
ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗುವಿನ ಕತ್ತು ಹಿಸುಕಿ ಕೊಂದು ತಾನು ಬಾವಿಗೆ ಹಾರಿ ಆತ್ಮಹತ್ಯೆ (Mother Kills daugher and self) ಮಾಡಿಕೊಂಡಿದ್ದಾಳೆ. ಕೌಟುಂಬಿಕ ಕಲಹದ (Family dispute) ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ (Mother-child death) ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಸುಧಾಮಣಿ (32) ಎಂಬ ಮಹಿಳೆ ಮೂರು ವರ್ಷದ ಮಗು (Three year old daughter killed) ಸಾನ್ವಿಯ ಕತ್ತು ಹಿಸುಕಿ ಕೊಂದು ಬಳಿಕ ತಾನು ಅಲ್ಲೇ ಇರುವ ಬಾವಿಗೆ ಹಾರಿ ಪ್ರಾಣ (Mother jumps into well) ಕಳೆದುಕೊಂಡಿದ್ದಾಳೆ.
ಸುಧಾಮಣಿ ಹಾಗು ಪತಿ ರವಿ ನಡುವೆ ನಡುವೆ ಐದು ವರ್ಷದ ಹಿಂದೆ ಮದುವೆ ನಡೆದಿತ್ತು. ಇವರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಕೌಟುಂಬಿಕ ಕಲಹದಿಂದ ಆಕೆಗೆ ನೆಮ್ಮದಿ ಇರಲಿಲ್ಲ ಎಂದು ಹೇಳಲಾಗಿದೆ.
ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ-ಮಗಳ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐದು ವರ್ಷದಿಂದ ಒಂದು ದಿನವೂ ನೆಮ್ಮದಿ ಇಲ್ಲ
ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಸುಧಾಮಣಿಯ ತಾಯಿ ತನ್ನ ಮಗಳು ಕಳೆದ ಐದು ವರ್ಷಗಳಿಂದಲೂ ನೋವಿನಲ್ಲೇ ಜೀವನ ಕಳೆದಿದ್ದಾಳೆ ಎಂದರು. ಗಂಡ ರವಿ, ಮನೆಯವರು ಚಿತ್ರಹಿಂಸೆ ನೀಡಿದ್ದಾರೆ ಎಂದರು.
ಕುಡಿದು ಬಂದು ಗಲಾಟೆ ಮಾಡುತ್ತಿದ್ದ ರವಿ ಕೆಲವೊಮ್ಮೆ ಮೂರ್ನಾಲ್ಕು ದಿನವೂ ಬರುತ್ತಲೇ ಇರಲಿಲ್ಲ. ಕೊನೆಗೆ ನಾವೇ ಹೋಗಿ ಫೋನ್ ಮಾಡಿ ಕರೆಸಿ ರಾಜೀ ಮಾಡುತ್ತಿದ್ದೆವು. ಅವನು ಮನೆಗೆ ಬಂದರೂ ನೆಮ್ಮದಿ ಇಲ್ಲ, ಬಾರದಿದ್ದರೆ ದಿಕ್ಕಿಲ್ಲ ಎಂಬ ಸ್ಥಿತಿಯಲ್ಲಿದ್ದಳು ಸುಧಾಮಣಿ ಎಂದರು.
ಹಾಗಂತ ನಿನಗೆ ಈ ನರಕ ಬೇಡ, ನಮ್ಮ ಮನೆಗೆ ಬಂದು ಬಿಡು ಎಂದು ಕೇಳಿದರೂ ಆಕೆ ಕೇಳುತ್ತಿರಲಿಲ್ಲ. ನಿಮಗೆ ಭಾರವಾಗಿ ಬದುಕುವುದಿಲ್ಲ ಅನ್ನುತ್ತಿದ್ದಳು. ಈಗ ಅವಳೇ ಹೋಗಿಬಿಟ್ಟಿದ್ದಾಳೆ. ಪುಟ್ಟ ಮಗುವೂ ಇಲ್ಲ ಎಂದು ನೋವಿನಿಂದ ಹೇಳಿದರು.
ಕುತ್ತಿಗೆ ಹಿಸುಕಿ ಚಾಪೆಯಲ್ಲಿ ಮಲಗಿಸಿ…
ಶನಿವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸುಧಾಮಣಿ ಮನೆಯಿಂದ ಹೊರ ಹೋಗಿದ್ದನ್ನು ಕೆಲವರು ನೋಡಿದ್ದಾರೆ. ಆದರೆ, ಆಕೆ ಮರಳಿ ಬಂದಿಲ್ಲ. ಎಷ್ಟು ಹೊತ್ತಾದರೂ ಬಂದಿಲ್ಲವಲ್ಲ, ಮಗು ಏನು ಮಾಡುತ್ತಿದೆ ಎಂದು ಒಳಗೆ ಇಣುಕಿ ನೋಡಿದರೆ ಅದು ಚೆನ್ನಾಗಿ ನಿದ್ದೆ ಮಾಡಿದಂತೆ ಮಲಗಿದೆ. ಆದರೂ ಸಂಶಯದಿಂದ ಅಕ್ಕಪಕ್ಕದವರು ಹೋಗಿ ನೋಡಿದರೆ ಮಗು ಮಲಗಿದ್ದು ನಿಜ. ಆದರೆ ಜೀವ ಇರಲಿಲ್ಲ.
ಬಹುಶಃ ಸುಧಾಮಣಿ ಮಗುವನ್ನು ಕತ್ತು ಹಿಸುಕಿ ಕೊಂದು ಹಾಗೇ ಚಾಪೆಯಲ್ಲಿ ಮಲಗಿಸಿ, ಅದರ ಮೇಲೊಂದು ಬಟ್ಟೆಯನ್ನು ಹಾಸಿ ಹೋಗಿದ್ದಾಳೆ ಅನಿಸುತ್ತದೆ. ಈ ನಡುವೆ ಸುಧಾಮಣಿ ಎಲ್ಲಿದ್ದಾಳೆ ಎಂದು ಹುಡುಕಿದರೆ ಆಕೆಯ ಚಪ್ಪಲಿ ಅಲ್ಲಿನ ಒಂದು ಬಾವಿಯ ಬಳಿ ಕಾಣಿಸಿದೆ. ಬಗ್ಗಿ ನೋಡಿದರೆ ಒಳಗೆ ಸುಧಾಮಣಿಯ ಶವ ಕಾಣಿಸಿದೆ. ಅದನ್ನು ಮೇಲೆತ್ತಲಾಗಿದೆ.
ಇದನ್ನೂ ಓದಿ: Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
ಕಣ್ಮರೆಯಾಗಿದ್ದಾನೆ ರವಿ, ಅವನ ಕೈವಾಡವಿದೆಯಾ?
ಈ ನಡುವೆ, ಸುಧಾಮಣಿಯ ಪತಿ ರವಿ ಘಟನೆ ನಡೆದು ಹಲವು ಗಂಟೆಗಳೇ ಕಳೆದರೂ ನಾಪತ್ತೆಯಾಗಿದ್ದಾನೆ. ಇಡೀ ಊರಿಗೇ ವಿಷಯ ಗೊತ್ತಾಗಿದೆ. ಹಾಗಿದ್ದರೂ ಅವನು ಬಂದಿಲ್ಲ ಎಂದರೆ ಒಂದೋ ಅವನು ಭಯದಿಂದ ತಪ್ಪಿಸಿಕೊಂಡಿರಬೇಕು. ಇಲ್ಲವೇ ಈ ಸಾವಿನಲ್ಲಿ ಅವನ ಕೈವಾಡವೂ ಇರಬೇಕು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಊರಿನಲ್ಲಿ ತಾಯಿ ಮಗುವಿನ ಸಾವು ಎಲ್ಲರನ್ನೂ ಕಂಗೆಡಿಸಿದೆ.
-
ಪ್ರಮುಖ ಸುದ್ದಿ21 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಗ್ಯಾಜೆಟ್ಸ್24 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ23 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕರ್ನಾಟಕ17 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಉಡುಪಿ20 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
-
ಕ್ರೈಂ22 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ದೇಶ20 hours ago
Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ