ಕ್ರೈಂ
Living together : ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿಯ ನಡುವೆ ಜಗಳ; ಕತ್ತು ಹಿಸುಕಿ ಕೊಲೆ ಮಾಡಿದ ಪ್ರಿಯಕರ
Living together: ಅವರದು ಒಂದು ರೀತಿಯ ಲಿವಿಂಗ್ ಟುಗೆದರ್. ಅವಳ ಗಂಡ ಸತ್ತಿದ್ದಾನೆ, ಇವನ ಹೆಂಡತಿ ಸತ್ತಿದ್ದಾಳೆ. ಪರಸ್ಪರ ಆಧರಿಸಿಕೊಂಡು ಬದುಕುತ್ತಿದ್ದ ಅವರ ಬಾಳಿನಲ್ಲಿ ಬಿರುಗಾಳಿ ಎದ್ದಿದೆ.
ಶಿವಮೊಗ್ಗ: ಶಿವಮೊಗ್ಗದ ಭದ್ರಾವತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಜತೆಗಿದ್ದ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಅವರಿಬ್ಬರೂ ಗಂಡ-ಹೆಂಡಿರಂತೆ ಜತೆಯಾಗಿ ಬದುಕುತ್ತಿದ್ದರೂ (Living together) ಗಂಡ-ಹೆಂಡಿರಲ್ಲ. ದೊಡ್ಡ ಪಟ್ಟಣಗಳಲ್ಲಿ ಕಾಣಸಿಗುವ ಲಿವಿಂಗ್ ಟುಗೆದರ್‌ನಂಥ ಸಂಬಂಧವದು. ಅವರ ನಡುವೆ ಹುಟ್ಟಿದ ಜಗಳ ಈಗ ಆಕೆಯ ಕೊಲೆಗೆ (Woman murdered) ಕಾರಣವಾಗಿದೆ.
ಚಿತ್ರದುರ್ಗದ ಬ್ರಹ್ಮಸಾಗರ ಮೂಲದ ರೂಪಾ(30) ಕೊಲೆಯಾದ ಮಹಿಳೆ. ಆಕೆಯ ಜತೆಗಿದ್ದ ಪ್ರಿಯಕರನೇ ಕೊಲೆಗಾರ.
ವಿವಾಹಿತೆಯಾಗಿದ್ದ ರೂಪಾಳ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಬದುಕಿನ ದಾರಿ ಹುಡುಕುತ್ತಾ ಆಕೆ ಭದ್ರಾವತಿಗೆ ಬಂದಿದ್ದಳು. ಕೂಲಿ ಕಾರ್ಮಿಕಳಾಗಿದ್ದ ರೂಪಾ ನೀಲಗಿರಿ ಮರಗಳ ಕಟಾವಿನ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದಳು.
ಈ ನಡುವೆ, ಕೊಲೆ ಮಾಡಿದ ಆತನ ಸಂಗಾತಿ ಕೂಡ ವಿವಾಹಿತನಾಗಿದ್ದು, ಕೆಲ ವರ್ಷಗಳ ಹಿಂದೆ ಪತ್ನಿ ಮೃತಪಟ್ಟಿದ್ದಳು.
ಇತ್ತೀಚೆಗೆ ಅವರಿಬ್ಬರೂ ಕೂಡಿ ಬಾಳುತ್ತಿದ್ದರು. ಒಂದೇ ಮನೆಯಲ್ಲಿದ್ದರು. ಭಾನುವಾರ ರಾತ್ರಿ ಅವರಿಬ್ಬರೂ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ವೇಳೆ, ಸಂಗಾತಿ ಆಕೆಗೆ ಕಾಲಿನಿಂದ ಒದ್ದು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆತ ಪರಾರಿಯಾಗಿದ್ದಾನೆ. ದಿಕ್ಕಿಲ್ಲದೆ ಬಂದವಳಿಗೆ ಒಂದು ದಿಕ್ಕು ತೋರಿಸಿದ ಆತ ಈಗ ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ಮಾಡಿದ್ದಾನೆ. ಭದ್ರಾವತಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಹೆಂಡ್ತಿಗೆ ಗುಂಡು ಹೊಡೆದು ಕೊಂದಿದ್ದ ಪಾಪಿ ಆತ್ಮಹತ್ಯೆಗೆ ಶರಣು!
ಕಲಬುರಗಿ: ತವರು ಮನೆ ಸೇರಿದ್ದಾಳೆ ಎಂಬ ಕಾರಣಕ್ಕೆ ಪತ್ನಿಯನ್ನು ಗುಂಡಿಕ್ಕಿ ಕೊಂದು ತಲೆ ಮರೆಸಿಕೊಂಡಿದ್ದ ಪಾಪಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರ್ ಕೆ ಗ್ರಾಮದಲ್ಲಿ ಬಸವರಾಜ್ ಎಂಬಾತ ಪತ್ನಿಗೆ ಗುಂಡು ಹಾರಿಸಿ (Shoot out) ಕೊಂದು ಹಾಕಿದ್ದ ಪ್ರಕರಣ (Murder case) ಎರಡು ದಿನಗಳ ಹಿಂದೆ ನಡೆದಿತ್ತು. ಇದಾದ ಬಳಿಕ ತಲೆ ಮರೆಸಿಕೊಂಡಿದ್ದ ಪತಿ ಬಸವರಾಜ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಹನಮವ್ವ (36) ಕೊಲೆಯಾದ ದುರ್ದೈವಿಯಾಗಿದ್ದರು. ಪತ್ನಿಯನ್ನು ಬಸವರಾಜ್ ಎಂಬಾತ ಗುಂಡು ಹಾರಿಸಿದ ಪತಿಯಾಗಿದ್ದಾನೆ. ಹೆಂಡತಿಯನ್ಮು ಹತ್ಯೆಗೈದ ಬಳಿಕ ತಲೆ ಮರೆಸಿಕೊಂಡಿದ್ದ ಬಸವರಾಜ್, ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಆದರೆ, ಆರೋಪಿ ಬಂಧನಕ್ಕೆ ಚಿತ್ತಾಪುರ ಪೊಲೀಸರು ಬಲೆ ಬೀಸಿದ್ದರು. ಇನ್ನು ತಾನು ಇಲ್ಲಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಅರಿತ ಬಸವರಾಜ್, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ.
ಅದರಂತೆ ಪುನಃ ತನ್ನ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿತ್ತಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
ಏನಿದು ಘಟನೆ?
ಹನಮವ್ವ ಹಾಗೂ ಬಸವರಾಜ್ ಮದುವೆ ಆದಾಗಿಂದಲೂ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಗಂಡನ ಕಿರುಕುಳಕ್ಕೆ ಬೇಸತ್ತ ಹನಮವ್ವ ಕೊನೆಗೆ ತವರು ಮನೆ ಸೇರಿದ್ದಳು. ಆದರೆ, ಆಕೆಗೆ ಮನೆಗೆ ಬರುವಂತೆ ಬಸವರಾಜ್ ಎಷ್ಟೇ ಹೇಳಿದರೂ ಹನಮವ್ವ ಮಾತ್ರ ಒಪ್ಪಲಿಲ್ಲ. ಕಾರಣ, ಆತನ ಕಿರುಕುಳಕ್ಕೆ ರೋಸಿ ಹೋಗಿದ್ದಳು. ತಾನು ಕರೆದರೂ ಬಾರದೇ ಇರುವುದರಿಂದ ಸಿಟ್ಟಿಗೆದ್ದ ಬಸವರಾಜ್ ಬಂದೂಕು ತೆಗೆದುಕೊಂಡು ಹೋಗಿ ಆಕೆ ಮೇಲೆ ಗುಂಡಿನ ದಾಳಿ ನಡೆಸಿ ಸಾಯಿಸಿದ್ದಾನೆ. ಬಳಿಕ ಅಲ್ಲಿಂದ ಕಣ್ಮರೆಯಾಗಿದ್ದ. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು, ಆತನ ಪತ್ತೆಗೆ ಬಲೆ ಬೀಸಿದ್ದರು. ಈಗ ನೇಣು ಬಿಗಿದ ಸ್ಥಿತಿಯಲ್ಲಿ ಬಸವರಾಜ್ ಮೃತದೇಹ ಪತ್ತೆಯಾಗಿದೆ.
ಕ್ರೈಂ
Vijayanagara News: ಗೋಡೆ ಕಲ್ಲು ಬಿದ್ದು ಮಗು ಸಾವು; ಎಮ್ಮೆ ಗುದ್ದಿದ್ದರಿಂದ ನಡೆಯಿತು ಅನಾಹುತ!
Vijayanagara News: ಎಮ್ಮೆಯೊಂದು ಬೆದರಿ ಗುದ್ದಿದ ಹಿನ್ನೆಲೆಯಲ್ಲಿ ಗೋಡೆ ಕಲ್ಲು ಮುರಿದು ಮಗುವಿನ ಮೇಲೆ ಬಿದ್ದು ದುರಂತ ನಡೆದಿದೆ.
ವಿಜಯನಗರ: ಮನೆಯ ಗೋಡೆ ಕಲ್ಲು ಬಿದ್ದು ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ (Vijayanagara News) ಕೂಡ್ಲಿಗಿ ತಾಲೂಕಿನ ರಾಯಪುರದಲ್ಲಿ ನಡೆದಿದೆ. ಎಮ್ಮೆಯೊಂದು ಬೆದರಿ ಗುದ್ದಿದ್ದರಿಂದ ಗೋಡೆ ಕಲ್ಲು ಮುರಿದು ಬಿದ್ದಿದೆ. ಇದರಿಂದ ತಲೆಗೆ ತೀವ್ರ ಪೆಟ್ಟಾಗಿ ಮಲಗಿದ್ದ ಮಗು ಮೃತಪಟ್ಟಿದೆ.
ಶಾಂತಕುಮಾರ್, ಮಲ್ಲೇಶ್ವರಿ ದಂಪತಿಯ ಪುತ್ರ ತೇಜಸ್ (4) ಎಂಬಾತ ಮೃತ ಬಾಲಕ. ಮನೆ ಪಕ್ಕದಲ್ಲಿ ತೆಂಗಿನ ಮರಕ್ಕೆ ಎಮ್ಮೆಯನ್ನು ಕಟ್ಟಿ ಹಾಕಲಾಗಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಎಮ್ಮೆ ಬೆದರಿ ಚಪ್ಪಡಿ ಕಲ್ಲಿನ ಮನೆಗೆ ಡಿಕ್ಕಿ ಹೊಡೆದಿದೆ. ಕಡಪ ಕಲ್ಲಾಗಿದ್ದರಿಂದ ಗೋಡೆ ಕಲ್ಲು ಮುರಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಬಾಲಕನಿಗೆ ಗಂಭೀರ ಗಾಯಗಳಾಗಿ ಮೃತಪಟ್ಟಿದ್ದಾನೆ.
ಸಚಿವ ಜಮೀರ್ ಅಹ್ಮದ್ ಸಾಂತ್ವನ
ಘಟನಾ ಸ್ಥಳಕ್ಕೆ ಸಚಿವ ಜಮೀರ್ ಅಹ್ಮದ್, ಕೂಡ್ಲಿಗಿ ಶಾಸಕ ಶ್ರೀನಿವಾಸ್ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಈ ವೇಳೆ ಸಚಿವ ಜಮೀರ್ ಅಹ್ಮದ್ ಅವರು 2 ಲಕ್ಷ ರೂ. ವೈಯಕ್ತಿಕ ಧನ ಸಹಾಯ ಮಾಡಿದ್ದಾರೆ. ಜತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ನೆರವು ಕೊಡಿಸುವುದಾಗಿ ತಿಳಿಸಿದ ಸಚಿವರು, ರಾಜೀವ್ ಗಾಂಧಿ ವಸತಿ ನಿಗಮದಿಂದ ಅಂಬೇಡ್ಕರ್ ಆವಾಸ್ ಯೋಜನೆಯಡಿ ಬಾಲಕನ ಕುಟುಂಬಸ್ಥರಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿದರು.
ಇದನ್ನೂ ಓದಿ | Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
ರಾಯಪುರ ಗಣಿ ಬಾಧಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಗ್ರಾಮದಲ್ಲಿ ಸುಸಜ್ಜಿತ ಮನೆಯಿಲ್ಲದರಿಗೆ ಮನೆ ನಿರ್ಮಿಸಿ ಕೊಡುವುದಾಗಿ ಸಚಿವರು ಭರವಸೆ ನೀಡಿದರು.
ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳ ಸಾವು
ಕಲಬುರಗಿ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವುದು ನಗರದ ರಿಂಗ್ ರಸ್ತೆಯ ನಾಗನಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ. ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ (Bike Accident).
ಅಂಬಿಕಾ ನಗರದ ಅಲಿ ಅಬ್ಬಾಸ್ ಹಾಗೂ ರೆಹಮತ್ ನಗರದ ಇರ್ಫಾನ್ ಮೃತ ವಿದ್ಯಾರ್ಥಿಗಳು. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಬ್ಬಾಸ್ ಅಲಿ, ಸ್ನೇಹಿತ ಇರ್ಫಾನ್ ಜತೆ ಬೈಕ್‌ನಲ್ಲಿ ಪಾರ್ಟಿಗೆ ಹೊರಟಿದ್ದ. ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು 10ನೇ ತರಗತಿ ಓದುತ್ತಿದ್ದರು. ಸ್ಥಳಕ್ಕೆ ಸಂಚಾರ-2 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ
Bangalore Bandh : ಶುಕ್ರವಾರ ಇಡೀ ಕರ್ನಾಟಕ ಬಂದ್; ಸೆಕ್ಷನ್ 144 ಹಾಕಿದ್ರೆ ಹುಷಾರ್ ಎಂದು ಗುಡುಗಿದ ವಾಟಾಳ್
Bangalore News : ಸೆ. 29ರಂದು ನಡೆಯಲಿರುವ ಕರ್ನಾಟಕ ಬಂದ್ ವೇಳೆ ನಿಷೇಧಾಜ್ಞೆ ಹಾಕುವಂತಿಲ್ಲ ಎಂದು ವಾಟಾಳ್ ನಾಗರಾಜ್ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.
ಬೆಂಗಳೂರು: ಮಂಗಳವಾರ ನಡೆದ ಬೆಂಗಳೂರು ಬಂದ್‌ನ್ನು (Bangalore Bandh) ಸರ್ಕಾರ ಪೊಲೀಸ್ ಬಲ ಪ್ರಯೋಗದ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಆದರೆ ಸೆಪ್ಟೆಂಬರ್ 29ರಂದು ನಡೆಯಲಿರುವ ಕನ್ನಡದ ಒಕ್ಕೂಟ ಕರೆ ನೀಡಿರುವ ಅಖಿಲ ಕರ್ನಾಟಕ ಬಂದ್‌ನ್ನು (Karnataka Bandh) ತಡೆಯಲು ಯತ್ನಿಸಿದರೆ ಹುಷಾರ್ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಸರ್ಕಾರವನ್ನು ಎಚ್ಚರಿಸಿದ್ದಾರೆ.
ಅವರು ಮಂಗಳವಾರ ನಡೆದ ಬೆಂಗಳೂರು ಬಂದ್ ನಡುವೆಯೇ ತಮ್ಮ ತಂಡವನ್ನು ಕೂಡಿಕೊಂಡು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆದರೆ, ಪೊಲೀಸರು ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಇದೂ ಸೇರಿದಂತೆ ಹೋರಾಟಗಾರರ ಹಕ್ಕನ್ನು ಕಸಿಯಲಾಗಿದೆ ಎಂದು ಅವರು ಸಂಜೆ ಆಪಾದಿಸಿದರು.
ರಾಜ್ಯ ಸರ್ಕಾರ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ವಿಧಿಸಿ ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಮಾರ್ಗ ಕಂಡುಕೊಂಡಿದೆ. ಆದರೆ, ಶುಕ್ರವಾರ ಈ ತಂತ್ರವನ್ನು ಪ್ರಯೋಗಿಸಿದರೆ ಎಚ್ಚರಿಕೆ ಎಂದು ಹೇಳಿದರು ವಾಟಾಳ್ ನಾಗರಾಜ್
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿರುದ್ಧ ಸೆ. 27ರ ಬುಧವಾರ ಕನ್ನಡ ಪರ ಸಂಘಟನೆಗಳು ಸಿಎಂ ಸಿದ್ದರಾಮಯ್ಯ ಅವರ ಮುಂದೆ ಪ್ರತಿಭಟನೆ ನಡೆಸಲಿವೆ. ಶುಕ್ರವಾರ ಸಂಪೂರ್ಣ ಕರ್ನಾಟಕ ಬಂದ್ ಆಗಲಿದೆ ಎಂದು ಅವರು ಹೇಳಿದರು. ವಾಟಾಳ್ ನಾಗರಾಜ್, ಕನ್ನಡ ಹೋರಾಟಗಾರರ ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್ ಸೇರಿದಂತೆ 50ಕ್ಕೂ ಅಧಿಕ ಸಂಘಟನೆಗಳಿಂದ ಬಂದ್‌ಗೆ ಕರೆ ನೀಡಲಾಗಿದೆ.
ಇದನ್ನೂ ಓದಿ: Bangalore Bandh : ಬೆಂಗಳೂರು ಬಂದ್ ಸಕ್ಸಸ್; ಕಾವೇರಿ ಹೋರಾಟಕ್ಕೆ ಜನತೆ ಸ್ವಯಂಪ್ರೇರಿತ ಬೆಂಬಲ
ಶುಕ್ರವಾರ ಏನಿರುತ್ತೆ ಏನಿರಲ್ಲ: ವಾಟಾಳ್ ಕೊಟ್ಟ ಲಿಸ್ಟ್
-ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್, ಖಾಸಗಿ ಬಸ್, ಓಲಾ, ಉಬರ್, ಟ್ಯಾಕ್ಸಿ, ಆಟೋ ಗೂಡ್ಸ್ ವಾಹನ ಸೇವೆ ಇರುವುದಿಲ್ಲ
-ಶುಕ್ರವಾರ ಮಾಲ್, ಹೋಟೆಲ್, ರೆಸ್ಟೊರೆಂಟ್, ಮಾಲ್, ಮಲ್ಟಿಪ್ಲೆಕ್ಸ್
-ಯಶವಂತಪುರ, ದಾಸನಪುರ ಎಪಿಎಂಸಿ ಮಾರುಕಟ್ಟೆ, ಕೆ.ಆರ್ ಮಾರ್ಕೆಟ್ ಬಂದ್
– ಅಂಗಡಿ ಮಳಿಗೆಗಳು, ಕೈಗಾರಿಕೆಗಳು ಬಂದ್.
ವಾಟಾಳ್ ನಾಗರಾಜ್ ನೇತೃತ್ವದ ಬಂದ್‌ಗೆ ಮಂಗಳವಾರದ ಬಂದ್‌ಗೆ ಕರೆ ಕೊಟ್ಟ ಸಂಘಟನೆಗಳಲ್ಲದೆ ಹೋಟೆಲ್ ಅಸೋಸಿಯೇಷನ್, ಓಲಾ ಊಬರ್ ಚಾಲಕರ ಸಂಘಟನೆ, ಆದರ್ಶ ಆಟೋ ಸಂಘಟನೆಗಳು ಬೆಂಬಲ ನೀಡಿವೆ. ಹೀಗಾಗಿ ಬಂದ್ ಇನ್ನಷ್ಟು ಪ್ರಖವಾಗುವ ನಿರೀಕ್ಷೆ ಇದೆ. ಆದರೆ, ರಾಜ್ಯದ ಎಲ್ಲ ಭಾಗಗಳಲ್ಲಿ ಯಶಸ್ವಿಯಾಗುವುದು ಡೌಟ್. ಕರಾವಳಿ, ಉತ್ತರ ಕರ್ನಾಟಕದಲ್ಲಿ ಕಾವೇರಿ ಹೋರಾಟದ ಕಾವು ಅಷ್ಟಾಗಿ ತಟ್ಟುವುದಿಲ್ಲ. ಆದರೆ, ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಭಾಗದಲ್ಲಿ ಹೆಚ್ಚು ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಮಧ್ಯ ಪ್ರವೇಶಕ್ಕೆ ಆಗ್ರಹ
ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯದ ಸಂಸದರು ಸಂಪೂರ್ಣ ನಾಯಪತ್ತೆಯಾಗಿದ್ದಾರೆ. ಅವರಿಗೆ ಕಾವೇರಿ ನೀರು ಬೇಡ್ವಾ ಎಂದು ಕೇಳಿದರು. ಶುಕ್ರವಾರ ಸಂಪೂರ್ಣ ಬಂದ್‌ಗೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕರ್ನಾಟಕ
Bangalore Bandh : ಬೆಂಗಳೂರು ಬಂದ್ ಸಕ್ಸಸ್; ಕಾವೇರಿ ಹೋರಾಟಕ್ಕೆ ಜನತೆ ಸ್ವಯಂಪ್ರೇರಿತ ಬೆಂಬಲ
Bangalore bandh : ಬೆಂಗಳೂರು ಬಂದ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಎಲ್ಲ ವ್ಯವಸ್ಥೆಗಳು ಇದ್ದರೂ ಜನರೇ ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಿದ್ದು ಕಂಡುಬಂತು.
ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ನೀರು ಬಿಡುಗಡೆ (Cauvery Water Dispute) ಮಾಡಲೇಬೇಕು ಎಂದು ಆದೇಶ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management authority) ಮತ್ತು ಅದು ಹೇಳಿದಂತೆ ನೀರು ಬಿಡುಗಡ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮಗಳನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala samrakshana samiti) ಕರೆ ನೀಡಿದ್ದ ಮಂಗಳವಾರದ (ಸೆ. 26) ಬೆಂಗಳೂರು ಬಂದ್ (Bangalore bandh) ಯಶಸ್ವಿಯಾಗಿದೆ. ಯಾವುದೇ ಗೊಂದಲ, ಗಲಾಟೆ, ಹಿಂಸಾತ್ಮಕ ಘಟನೆಗಳಿಲ್ಲದೆ ಅದು ಸಫಲತೆಯನ್ನು ಕಂಡಿದೆ. ಆದರೆ, ಇದು ಸರ್ಕಾರದ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆಯೇ ಕಾದು ನೋಡಬೇಕು.
ಈ ಬಂದ್ ನೂರಾರು ಸಾಮಾಜಿಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ವ್ಯಾಪಾರಿಗಳು, ವಾಹನ ಮಾಲೀಕರೇ ಆದರೂ ಅಂತಿಮವಾಗಿ ಇದನ್ನು ಯಶಸ್ವಿಗೊಳಿಸಿದ್ದು ಜನ ಬೆಂಬಲ. ಯಾಕೆಂದರೆ, ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ಇರುವುದರಿಂದ ಬೆಂಬಲ ನೀಡುವ ಸಂಘಟನೆಗಳಲ್ಲಿ ವಿಭಜನೆಯಾಗಿತ್ತು. ಕೆಲವರು ತಾವು ಈ ಬಂದ್‌ಗೆ ಬೆಂಬಲ ಕೊಡುವುದಿಲ್ಲ, ಸೆ. 29ರ ಬಂದ್‌ಗೆ ಬೆಂಬ ಕೊಡುವುದಾಗಿ ಪ್ರಕಟಿಸಿದ್ದರು. ಆದರೂ ಒಟ್ಟಾರೆ ಪರಿಣಾಮದಲ್ಲಿ ವ್ಯತ್ಯಾಸವಾಗಲಿಲ್ಲ. ಯಾಕೆಂದರೆ ಸಂಘಟನೆಗಳ ಹಂಗನ್ನು ಮೀರಿ ಜನರು ಈ ಬಂದ್‌ಗೆ ಮೌನ ಬೆಂಬಲವನ್ನು ಸೂಚಿಸಿದ್ದರು.
ಮುಂಜಾನೆಯಿಂದಲೇ ರಾಜಧಾನಿಯಲ್ಲಿ ಬಂದ್‌ನ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಲ್ಲಲ್ಲಿ ಪ್ರತಿಭಟನೆಗಳು ನಡೆದವು. ಪ್ರತಿಭಟನೆಗೆ ಕರೆ ನೀಡಿದ ಸಂಘಟನೆಯ ಮುಖ್ಯಸ್ಥರಲ್ಲಿ ಒಬ್ಬರಾದ ಕುರುಬೂರು ಶಾಂತ ಕುಮಾರ್ ಅವರನ್ನೂ ಪೊಲೀಸರು ವಶಕ್ಕೆ ಪಡೆದರು. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಸಭೆ ನಡೆಯಿತು. ಅಲ್ಲಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಮಂಡಿಸಲಾಯಿತು. ಸರ್ಕಾರದ ಪರವಾಗಿ ಸಚಿವ ರಾಮಲಿಂಗಾ ರೆಡ್ಡಿ ಅವರು ಮನವಿ ಸ್ವೀಕರಿಸಿದರು. ಈ ಭರವಸೆಗಳ ಈಡೇರಿಕೆಗೆ ಮೂರು ದಿನಗಳ ಗಡುವನ್ನು ವಿಧಿಸಲಾಗಿದೆ.
ಎಲ್ಲ ವ್ಯವಸ್ಥೆಗಳಿದ್ದರೂ ಜನರೇ ರಸ್ತೆಗೆ ಬಂದಿಲ್ಲ
ನಿಜವೆಂದರೆ, ರಾಜಧಾನಿಯಲ್ಲಿ ಬಂದ್ ಘೋಷಣೆಯಾಗಿದ್ದರೂ ಬಸ್, ಮೆಟ್ರೋ ರೈಲು, ಆಟೊಗಳು, ಓಲಾ, ಊಬರ್ ಟ್ಯಾಕ್ಸಿಗಳು, ಹೋಟೆಲ್‌ಗಳು ತೆರೆದಿದ್ದವು. ಆದರೆ, ಅದನ್ನು ಬಳಸುವ ಜನರೇ ಇರಲಿಲ್ಲ.
ಬಿಎಂಟಿಸಿ ಬಸ್‌ಗಳು ಓಡಾಡಿದರೂ ಖಾಲಿಯಾಗಿದ್ದವು. ಮೆಟ್ರೋ ರೈಲು ಬಹುಭಾಗ ಖಾಲಿಯಾಗಿಯೇ ಓಡಾಡಿತು. ಆಟೊಗಳಲ್ಲಿ ಹೋಗುವವರು ಕಡಿಮೆ ಇದ್ದರು. ರೆಸ್ಟೋರೆಂಟ್‌ಗಳಲ್ಲಿ ಜನ ಸಂದಣಿ ಇರಲಿಲ್ಲ. ಅಂದರೆ ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಜನರೇ ಮಂಗಳವಾರ ಕಾವೇರಿಗಾಗಿ ಒಂದು ದಿನ ಬಂದ್ ಎಂಬ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸರ್ಕಾರಿ ಕಚೇರಿಗಳಲ್ಲಿ ಜನ ಇರಲಿಲ್ಲ.
ಇದನ್ನೂ ಓದಿ: Bangalore Bandh : 13 ವಿಮಾನ ಸಂಚಾರ ಕ್ಯಾನ್ಸಲ್, ಮೆಟ್ರೋ ಫುಲ್ ಖಾಲಿ, ಬಿಎಂಟಿಸಿ ಬಸ್‌ಗಳಿವೆ, ಜನರೇ ಇಲ್ಲ
ವಿಶೇಷವೆಂದರೆ ಬೆಂಗಳೂರಿನಲ್ಲಿ ಮಂಗಳವಾರ ಬಂದ್ ನಡೆದೇ ನಡೆಯುತ್ತದೆ. ಅಲ್ಲಿ ಹೋಗಿ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುವುದು ಬೇಡ ಎಂದು ವಿಮಾನ ಪ್ರಯಾಣಿಕರು ನಿರ್ಧಾರ ಮಾಡಿದ ಪರಿಣಾಮವಾಗಿ ಬೆಂಗಳೂರಿಗೆ ಮಂಗಳವಾರ ಬರಬೇಕಾಗಿದ್ದ 13 ವಿಮಾನಗಳ ಸಂಚಾರವೇ ರದ್ದಾಗಿತ್ತು.
ಶಾಲೆ, ಕಾಲೇಜು ಬಂದ್; ಮಾಲ್, ಥಿಯೇಟರ್‌ಗಳ ಬೆಂಬಲ
ಈ ನಡುವೆ, ಬಂದ್ ನಿಮಿತ್ತ ಬೆಂಗಳೂರಿನ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹೀಗಾಗಿ ಮಕ್ಕಳು ಮತ್ತು ಮನೆಯವರು ನಿರಾಳರಾಗಿದ್ದರು. ಇತ್ತ ದೊಡ್ಡ ದೊಡ್ಡ ಮಾಲ್‌ಗಳು ಬಂದ್‌ಗೆ ಬೆಂಬಲ ನೀಡಿದ್ದರು. ಚಿತ್ರೋದ್ಯಮದ ಬೆಂಬಲ ಇದ್ದಿದ್ದರಿಂದ ಸಿನಿಮಾ ಥಿಯೇಟರ್‌ಗಳು ಸಂಜೆವರೆಗೆ ಓಪನ್ ಆಗಲಿಲ್ಲ.
ಪೊಲೀಸ್ ಬಲ ಪ್ರಯೋಗದ ಆರೋಪ
ಇದರ ನಡುವೆ ಬಂದ್‌ನ್ನು ವಿಫಲಗೊಳಿಸಲು ಪೊಲೀಸ್ ಬಲ ಪ್ರಯೋಗ ಮಾಡಿದ ಆರೋಪ ಎದುರಾಗಿದೆ. ಬಲವಂತದ ಬಂದ್‌ಗೆ ಅವಕಾಶವಿಲ್ಲ, ಮೆರವಣಿಗೆ ನಡೆಸುವಂತಿಲ್ಲ, ಬಹಿರಂಗ ಪ್ರತಿಭಟನೆಗೆ ಅವಕಾಶವಿಲ್ಲ ಎಂಬ ನಿರ್ಬಂಧಗಳನ್ನು ಹಾಕಿದ ಪೊಲೀಸರು ಬಂದ್‌ನ ಮುನ್ನಾ ದಿನವೇ 1000ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದರು. ಇಷ್ಟೆಲ್ಲ ಮಾಡಿದರೂ ಬಂದ್ ಸಫಲವಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್‌ಗಳು ಸಂಘಟನೆಗಳನ್ನು ಅಭಿನಂದಿಸಿವೆ.
ಇನ್ನು ಸೆ. 29ರ ಬಂದ್. ಈಗ ಈ ಬಂದ್ ಮುಕ್ತಾಯವಾಗಿರುವಂತೆಯೇ ಸೆಪ್ಟೆಂಬರ್ 29ರ ಕರ್ನಾಟಕ ಬಂದ್‌ಗೆ ವೇದಿಕೆ ಸಿದ್ಧವಾಗಿದೆ. ಅಂದು ಪೂರ್ಣವಾಗಿ ಕರ್ನಾಟಕ ಬಂದ್ ಆಗಲಿದೆ ಎಂದಿದ್ದಾರೆ ವಾಟಾಳ್ ನಾಗರಾಜ್.
ಇದನ್ನೂ ಓದಿ: Bangalore Bandh: ಬೆಂಗಳೂರು ಬಂದ್ ಹತ್ತಿಕ್ಕಲು ಪೊಲೀಸ್ ಬಲ ಪ್ರಯೋಗ ನಡೆಯಿತೇ? ಕಮಿಷನರ್ ಹೇಳಿದ್ದೇನು?
ಕರ್ನಾಟಕ
Belagavi News: ಹಣಕಾಸು ವಿಚಾರಕ್ಕೆ ಯೋಧನಿಂದಲೇ ಯೋಧನ ಮೇಲೆ ಗುಂಡಿನ ದಾಳಿ
Belagavi News: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಯೋಧ, ಮತ್ತೊಬ್ಬ ಯೋಧನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಬೆಳಗಾವಿ: ಹಣಕಾಸಿನ ವಿಚಾರಕ್ಕೆ ಯೋಧನ ಮೇಲೆ ಮತ್ತೊಬ್ಬ ಯೋಧ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಯೋಧನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಸುತ್ತಿರುವ ಬಸಪ್ಪ ಮೈಲಪ್ಪ ಬಂಬರಗಾ (32) ಗಾಯಾಳು ಯೋಧ. ನಂಜುಂಡಿ ಲಕ್ಷ್ಮಣ ಬೂದಿಹಾಳ (32) ಗುಂಡಿನ ದಾಳಿಗೈದ ಆರೋಪಿ. ಇಬ್ಬರೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಣಕಾಸಿನ ವಿಚಾರಕ್ಕೆ ನಡುವೆ ಗಲಾಟೆಯಾಗಿದೆ. ಈ ವೇಳೆ ಬಸಪ್ಪ ಮೈಲಪ್ಪ ಬಂಬರಗಾ ಮೇಲೆ ನಂಜುಂಡಿ ಲಕ್ಷ್ಮಣ ಬೂದಿಹಾಳ ಗುಂಡಿನ ದಾಳಿ ನಡೆಸಿದ್ದಾರೆ. ಹೀಗಾಗಿ ಗಾಯಾಳು ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Great robbery: ಅಂಗಡಿಯ ಗೋಡೆಗೆ ರಂಧ್ರ ಕೊರೆದು 25 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಖತರ್ನಾಕ್ ಕಳ್ಳರು!
ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳ ಸಾವು
ಕಲಬುರಗಿ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವುದು ನಗರದ ರಿಂಗ್ ರಸ್ತೆಯ ನಾಗನಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ. ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ (Bike Accident).
ಅಂಬಿಕಾ ನಗರದ ಅಲಿ ಅಬ್ಬಾಸ್ ಹಾಗೂ ರೆಹಮತ್ ನಗರದ ಇರ್ಫಾನ್ ಮೃತ ವಿದ್ಯಾರ್ಥಿಗಳು. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಬ್ಬಾಸ್ ಅಲಿ, ಸ್ನೇಹಿತ ಇರ್ಫಾನ್ ಜತೆ ಬೈಕ್‌ನಲ್ಲಿ ಪಾರ್ಟಿಗೆ ಹೊರಟಿದ್ದ. ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು 10ನೇ ತರಗತಿ ಓದುತ್ತಿದ್ದರು. ಸ್ಥಳಕ್ಕೆ ಸಂಚಾರ-2 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಯುವಕರಿಂದ ಥಳಿತ
ಯಾದಗಿರಿ: ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಥಳಿಸಿರುವ ಘಟನೆ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಕಬಡ್ಡಿ ಪಂದ್ಯದ ವೇಳೆ ದೈಹಿಕ ಶಿಕ್ಷಕ ಔಟ್ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡು ಯುವಕನೊಬ್ಬ, ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ. ಹೀಗಾಗಿ ಆತನ ಮೇಲೆ ಯುವಕರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಗಲಾಟೆ ಬಿಡಿಸಲು ಅಧಿಕಾರಿಗಳು, ಸಿಬ್ಬಂದಿ ಹರಸಾಹಸಪಟ್ಟರು.
-
Live News20 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ10 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ3 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema13 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ14 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್10 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ10 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್14 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ