ಹಿಂದು ಪದ ಅಶ್ಲೀಲ ಎಂದಿದ್ದ ಸತೀಶ್​ ಜಾರಕಿಹೊಳಿಯನ್ನು ಅಶ್ಲೀಲವಾಗಿ ನಿಂದಿಸಿದ ಹಿಂದು ರಾಷ್ಟ್ರ ಸೇನಾ ಅಧ್ಯಕ್ಷ - Vistara News

ಕರ್ನಾಟಕ

ಹಿಂದು ಪದ ಅಶ್ಲೀಲ ಎಂದಿದ್ದ ಸತೀಶ್​ ಜಾರಕಿಹೊಳಿಯನ್ನು ಅಶ್ಲೀಲವಾಗಿ ನಿಂದಿಸಿದ ಹಿಂದು ರಾಷ್ಟ್ರ ಸೇನಾ ಅಧ್ಯಕ್ಷ

ಇವರೆಲ್ಲ ಚುನಾವಣೆಗೆ ಸ್ಪರ್ಧಿಸುವಾಗ ವಿಧಾನಸಭೆಯಲ್ಲಿ ನೀಡುವ ಫಾರ್ಮ್​ ಮೇಲೆ ಹಿಂದು ಅಂತ ಬರೆದುಕೊಳ್ತಾರೆ. ಬಳಿಕ ಅದನ್ನೇ ಅಶ್ಲೀಲ ಎಂದು ಕರೆಯುತ್ತಾರೆ ಎಂದು ಧನಂಜಯ ಭಾಯಿ ದೇಸಾಯಿ ಕಿಡಿಕಾರಿದ್ದಾರೆ.

VISTARANEWS.COM


on

Jago Hindu Samavesh
ಧನಂಜಯ ಭಾಯಿ ದೇಸಾಯಿ ಮತ್ತು ಸತೀಶ್ ಜಾರಕಿಹೊಳಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಹಿಂದು ಪದಕ್ಕೆ ಪರ್ಷಿಯನ್​ ಭಾಷೆಯಲ್ಲಿ ಅಶ್ಲೀಲ ಅರ್ಥವಿದೆ. ಹಿಂದು ಶಬ್ದ ಅಶ್ಲೀಲ ಅರ್ಥವನ್ನು ಹೊರಸೂಸುತ್ತದೆ ಎಂದು ಹೇಳುವ ಮೂಲಕ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದ ಯಮಕನಮರಡಿ ಕಾಂಗ್ರೆಸ್​ ಶಾಸಕ ಸತೀಶ್​ ಜಾರಕಿಹೊಳಿ ವಿರುದ್ಧ ಯಮಕನಮರಡಿ ಕ್ಷೇತ್ರ ಕಡೋಲಿಯ ಶಿವಾಜಿ ಹೈಸ್ಕೂಲ್ ಎದುರು ದೊಡ್ಡಮಟ್ಟದಲ್ಲಿ ‘ಜಾಗೋ ಹಿಂದೂ’ ಸಮಾವೇಶ ನಡೆಯಿತು. ಇದರಲ್ಲಿ ಪಾಲ್ಗೊಂಡಿದ್ದ ಹಿಂದು ರಾಷ್ಟ್ರ ಸೇನಾ ಅಧ್ಯಕ್ಷ, ಮಹಾರಾಷ್ಟ್ರದ ವಾಗ್ಮಿ ಧನಂಜಯ ಭಾಯಿ ದೇಸಾಯಿ ಅವರು ಸತೀಶ್​ ಜಾರಕಿಹೊಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರು ಸತೀಶ್​ ಜಾರಕಿಹೊಳಿ ವಿರುದ್ಧ ಹಲವು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆ.

‘ಇವರೆಲ್ಲ ಚುನಾವಣೆಗೆ ಸ್ಪರ್ಧಿಸುವಾಗ ವಿಧಾನಸಭೆಯಲ್ಲಿ ನೀಡುವ ಫಾರ್ಮ್​ ಮೇಲೆ ಹಿಂದು ಅಂತ ಬರೆದುಕೊಳ್ತಾರೆ. ಬಳಿಕ ಅದನ್ನೇ ಅಶ್ಲೀಲ ಎಂದು ಕರೆಯುತ್ತಾರೆ. ಇದೊಂತರ ತಾಯಿ ಗರ್ಭವೇ ಅಶ್ಲೀಲ ಎಂದಂತೆ ಅಲ್ಲವೇ’? ಎಂದು ಪ್ರಶ್ನಿಸಿದ ವಾಗ್ಮಿ ಧನಂಜಯ ಭಾಯಿ ದೇಸಾಯಿ, ‘ಸತೀಶ್ ಜಾರಕಿ ಹೊಳಿ ಏನಾದರೂ ಸನ್ನಿ ಲಿಯೋನ್​ ಮಗನಾ? ಇಂಥ ಪಾರ್ನ್​ಸ್ಟಾರ್​ಗಳು ಎಲ್ಲಿಂದ ಬರುತ್ತಾರೆ? ಇವರನ್ನೆಲ್ಲ ವಿಧಾನಸಭೆಗೆ ಕಳಿಸಿ, ನಮ್ಮ ಸಮಾಜಕ್ಕೆ ನಾಚಿಕೆ ತರುವ ಕೆಲಸವನ್ನು ನಾವೇ ಮಾಡುತ್ತಿರುವುದು ನಿಜಕ್ಕೂ ವಿಷಾದನೀಯ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಹಿಂದು ಅಶ್ಲೀಲ ಎಂದು ಹೇಳಿದ ಸತೀಶ್​ ಜಾರಕಿಹೊಳಿಯನ್ನು ಟೀಕಿಸುವ ಭರದಲ್ಲಿ ಧನಂಜಯ ಅವರೇ ತುಂಬ ಅಶ್ಲೀಲ ಮಾತುಗಳನ್ನಾಡಿದ್ದಾರೆ !

‘ಹಿಂದು ಧರ್ಮದ ಹಿತದ ಬಗ್ಗೆ ಯಾರು ಮಾತನಾಡುತ್ತಾರೋ, ಅವರೇ ದೇಶ ನಡೆಸಬೇಕು ಎಂಬ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕು. ಪಂಚಾಯಿತಿ ಸದಸ್ಯನಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರೂ ಹಿಂದೂ ಹಿಂತಚಿಂತಕರೇ ಆಗಿರಬೇಕು. ಹಿಂದೂ ಶಬ್ದ, ಸನಾತನ ಧರ್ಮವನ್ನು ಗೌರವಿಸುವವರು ನಮ್ಮ ರಾಜಕೀಯ ಪ್ರತಿನಿಧಿ ಆಗಬೇಕು. ಕರ್ನಾಟಕ, ಮಹಾರಾಷ್ಟ್ರ ಸೇರಿ ಯಾವುದೇ ರಾಜ್ಯದ ವಿಧಾನಸಭೆಯಲ್ಲಿ ಶಾಸಕರೆಲ್ಲ ಹಿಂದುಗಳೇ ಆಗಿರಬೇಕು. ಸಂಪೂರ್ಣ ಹಿಂದೂ ರಾಷ್ಟ್ರ ನಿರ್ಮಾಣ ಆಗಬೇಕು’ ಎಂದು ಧನಂಜಯ ಭಾಯಿ ದೇಸಾಯಿ ಹೇಳಿದ್ದಾರೆ.

ರಾಹುಲ್ ಗಾಂಧಿ ಬಗ್ಗೆ ಟೀಕೆ ಮಾಡಿದ ಅವರು, ‘ರಾಹುಲ್ ಗಾಂಧಿ ಭಾರತ್​ ಜೋಡೋ ಅಲ್ಲ, ಭಾರತ್​ ತೋಡೋ ಯಾತ್ರೆ ಮಾಡುತ್ತಿದ್ದಾರೆ. ಅವರು ಯಾವಾಗ ಚೀನಾ ಪರ, ಯಾವಾಗ ಅಮೆರಿಕ ಪರ ಮಾತನಾಡುತ್ತಾರೆ, ಯಾವಾಗ ಸಾವರ್ಕರ್ ವಿರುದ್ಧ ಮಾತಾಡ್ತಾರೆ ಗೊತ್ತಾಗೋದಿಲ್ಲ. ಭಾರತ ವಿರೋಧಿ ವ್ಯಕ್ತಿತ್ವ, ಇಸ್ಲಾಮಿಕ್ ಜಿಹಾದಿ, ಲವ್ ಜಿಹಾದ್, ಪಿಎಫ್ಐ ಬೆಂಬಲಿಸುವರು ರಾಹುಲ್ ಗಾಂಧಿ ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: Satish jarakiholi | ಸತೀಶ್‌ ಜಾರಕಿಹೊಳಿ ವಿರುದ್ಧ ಮತ್ತೆ ಹಿಂದು ಅಸ್ತ್ರ ಪ್ರಯೋಗ: ಇಂದು ಜಾಗೋ ಹಿಂದು ಸಮಾವೇಶ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Raitha Siri Yojana: ಸಿರಿ ಧಾನ್ಯ ಬೆಳೆಯುವವರಿಗೆ ಸಿಹಿ ಸುದ್ದಿ; ನಿಮ್ಮ ಖಾತೆಗೇ ಬರುತ್ತೆ 10 ಸಾವಿರ ರೂ.

ರೈತ ಸಿರಿ ಯೋಜನೆ (Raitha Siri Yojana) ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಸಿರಿಧಾನ್ಯ ಬೆಳೆ ಕುರಿತು ರೈತರಲ್ಲಿ ಅರಿವು ಮೂಡಿಸಲು ಹಂತ ಹಂತವಾಗಿ ಟ್ರೈನಿಂಗ್‌ ಕೂಡ ನೀಡಲು ಉದ್ದೇಶಿಲಾಗಿದೆ. ಈ ಯೋಜನೆಯ ಫಲಾನುಭವ ಪಡೆಯಲು ಬೇಕಾದ ಅರ್ಹತೆಗಳು ಹೀಗಿವೆ.

VISTARANEWS.COM


on

Raitha Siri Yojana
Koo

ಬೆಂಗಳೂರು: ಸಿರಿಧಾನ್ಯ (millet, Siridhanya) ಬೆಳೆಯುವ ಹಾಗೂ ಸಣ್ಣ ಪ್ರಮಾಣದ ಜಮೀನು (small land) ಹೊಂದಿರುವ ರೈತರಿಗೆ (farmers) ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ. ಸಿರಿಧಾನ್ಯ ಬೆಳೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರೈತ ಸಿರಿ ಯೋಜನೆ (Raitha Siri Yojana) ಜಾರಿಗೆ ತಂದಿದ್ದು, ಇದರಡಿಯಲ್ಲಿ ಧಾನ್ಯ ಬೆಳೆಯುವುದಕ್ಕೆ ಬೇಕಾಗಿರುವ ಬೀಜಗಳು (seeds) ಮತ್ತು ರಸಗೊಬ್ಬರ (manure) ಪೂರೈಕೆಗಾಗಿ ಸರ್ಕಾರ 10,000 ರೂ. ನೀಡಲಿದೆ.

ಈ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಸಿರಿಧಾನ್ಯ ಬೆಳೆ ಕುರಿತು ರೈತರಲ್ಲಿ ಅರಿವು ಮೂಡಿಸಲು ಹಂತ ಹಂತವಾಗಿ ಟ್ರೈನಿಂಗ್‌ ಕೂಡ ನೀಡಲು ಉದ್ದೇಶಿಲಾಗಿದೆ. ಈ ಯೋಜನೆಯ ಫಲಾನುಭವ ಪಡೆಯಲು ಬೇಕಾದ ಅರ್ಹತೆಗಳು ಹೀಗಿವೆ:

  • ಅರ್ಜಿದಾರರು ಕರ್ನಾಟಕದ ಕಾಯಂ ನಾಗರಿಕರಾಗಿರಬೇಕು
  • ಅರ್ಜಿದಾರರು ವೃತ್ತಿಯಲ್ಲಿ ರೈತರಾಗಿರಬೇಕು
  • ರೈತ ಪ್ರಾಥಮಿಕವಾಗಿ ರಾಗಿ ಉತ್ಪಾದಕನಾಗಿರಬೇಕು
  • ಈ ಯೋಜನೆಗೆ ಅರ್ಹತೆ ಪಡೆಯಲು ಕನಿಷ್ಠ ಒಂದು ಹೆಕ್ಟೇರ್ ಕೃಷಿ ಆಸ್ತಿ ಅಗತ್ಯವಿದೆ

ಕರ್ನಾಟಕ ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯ:

  • ಆಧಾರ್ ಕಾರ್ಡ್ ಅಥವಾ ಗುರುತಿನ ಪುರಾವೆ
  • ಅರ್ಜಿದಾರರ ಭೂಮಿಗೆ ಸಂಬಂಧಿಸಿದ ದಾಖಲೆಗಳು
  • ಶಾಶ್ವತ ನಿವಾಸಿ ಪ್ರಮಾಣಪತ್ರ
  • ವಿಳಾಸ ಪುರಾವೆ
  • ಪಡಿತರ ಚೀಟಿ
  • ಬ್ಯಾಂಕ್ ಖಾತೆ ವಿವರಗಳು
  • ಮೊಬೈಲ್ ನಂಬರ್
  • ಭೂ ದಾಖಲೆ ವಿವರಗಳು
  • ಪಾಸ್‌ಪೋರ್ಟ್ ಗಾತ್ರದ ಫೋಟೋಗಳು

ರೈತ ಸಿರಿ ಯೋಜನೆಯ ಉದ್ದೇಶ:

  • ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವುದು
  • ಕೃಷಿ ಕ್ಷೇತ್ರವನ್ನು ಉತ್ತೇಜಿಸುವುದು
  • ರಾಜ್ಯದ ರೈತರಿಗೆ ಆರ್ಥಿಕ ನೆರವು ನೀಡುವುದು
  • ರಾಗಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂ ನೆರವು
  • ರಾಜ್ಯದ ಒಣಭೂಮಿಯಲ್ಲಿ ನೀರನ್ನು ಪುನಃಸ್ಥಾಪಿಸಲು ಕೃಷಿ ಹೊಂಡಗಳನ್ನು ನಿರ್ಮಿಸುವುದು

ಹೆಚ್ಚಿನ ಮಾಹಿತಿಗಾಗಿ https://raitamitra.karnataka.gov.in/info-2/Raita+Siri/en ಭೇಟಿ ನೀಡಿ

ಇದನ್ನೂ ಓದಿ: Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

Continue Reading

ಕರ್ನಾಟಕ

Karnataka Weather: ಇಂದು ದಕ್ಷಿಣ ಕನ್ನಡ, ಹಾಸನ, ಕೊಡಗು ಸೇರಿ ವಿವಿಧೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ!

Karnataka Weather: ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಹಗುರವಾದ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

VISTARANEWS.COM


on

Karnataka Weather
Koo

ಬೆಂಗಳೂರು: ರಾಜ್ಯದಲ್ಲಿ ಮೇ 30ರಂದು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಹಾಸನ, ಕೊಡಗು, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಲಘು ಮಳೆಯಾಗುವ (Karnataka Weather) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಮಾರುತಗಳು (ಗಂಟೆಗೆ 40-50 ಕಿಮೀ) ವೇಗದಲ್ಲಿ ಬೀಸುವ ಸಾಧ್ಯತೆ ಮತ್ತು ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ರಾಮನಗರದಲ್ಲಿ (30-40 ಕಿಮೀ) ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಶಿವಮೊಗ್ಗ ಜಿಲ್ಲೆಗಳು. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಹಗುರವಾದ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕೆಲವೊಮ್ಮೆ ಮೇಲೆ ಗಾಳಿಯು ಪ್ರಬಲವಾಗಿರುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32 °C ಮತ್ತು 22 ° C ಆಗಿರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಮೇ 31ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ (30-40 kmph) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಲಘು ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ (ಗಂಟೆಗೆ 30-40 ಕಿ.ಮೀ) ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ.

ಇದನ್ನೂ ಓದಿ | Karnataka weather : ಗುಡುಗು ಸಹಿತ ಮಳೆಯೊಂದಿಗೆ 40 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

ಇದೇ ರೀತಿ ಜೂನ್‌ 5ರವರೆಗೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳು

Continue Reading

ಕರ್ನಾಟಕ

Self Harming: ಶಾಲೆಗೆ ಹೋಗಲು ಬೇಸತ್ತು 11 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Self Harming: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದದ ಮನೆಯಲ್ಲೇ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

VISTARANEWS.COM


on

Self Harming
Koo

ಕಾರವಾರ: ಶಾಲೆಗೆ ಹೋಗಲು ಬೇಸತ್ತು 11 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಹನುಮಾನ್‌ ಗಲ್ಲಿಯಲ್ಲಿ ನಡೆದಿದೆ.

ಬೆಳಗಾವಿಯ ಲೋಂಡಾದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ವರ್ಷ 5ನೇ ತರಗತಿಗೆ ವಿದ್ಯಾರ್ಥಿ ಹೋಗಬೇಕಿದ್ದ. ಇನ್ನೆರಡು ದಿನಗಳಲ್ಲಿ ಶಾಲೆ ಆರಂಭವಾಗಲಿತ್ತು. ಆದರೆ, ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದಿದ್ದ ವಿದ್ಯಾರ್ಥಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಯಿ ಗೋವಾದಲ್ಲಿ ಕೆಲಸಕ್ಕೆ ಹೋಗಿದ್ದು, ತಂದೆ ಮಲಗಿದ್ದ ವೇಳೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Missing Case: ಚಿಕ್ಕಬಳ್ಳಾಪುರದಲ್ಲಿ ಯುವತಿಯರ ನಾಪತ್ತೆ ಕೇಸ್‌ಗಳು ಹೆಚ್ಚಳ; ಒಂದೇ ವಾರದಲ್ಲಿ ಇಬ್ಬರು ಮಿಸ್ಸಿಂಗ್‌!

ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರದ ಮೇಘಾಂಜಲಿ ಕಲ್ಯಾಣ ಮಂಟಪ ಸಮೀಪದ ಕನಕದಾಸ ವೃತ್ತದಲ್ಲಿ ನಡೆದಿದೆ. ಉಮೇಶ್( 51) ಮೃತ ದುರ್ದೈವಿ.

ತಂದೆ-ಮಗ ಬೈಕ್‌ನಲ್ಲಿ ಅರಳುಮಲ್ಲಿಗೆ ಕಡೆಯಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದರು. ಈ ವೇಳೆ ಕ್ಯಾಂಟರ್ ಡಿಕ್ಕಿಯಾಗಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದ ಹಿನ್ನೆಲೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಕೊನೆಯುಸಿರೆದಿದ್ದಾರೆ. ಅದೃಷ್ಟವಶಾತ್ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ

ನಾಪತ್ತೆಯಾಗಿದ್ದ ಯುವ ಶವವಾಗಿ ಪತ್ತೆ

ತುಮಕೂರು: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಬಳಿಯಿರುವ ಲಕ್ಷ್ಮೀಪುರದಲ್ಲಿ ನಡೆದಿದೆ. ಪ್ರದೀಪ್ (30) ಮೃತ ದುರ್ದೈವಿ.

ಲಕ್ಷ್ಮೀಪುರ ಬಳಿಯಿರುವ ಉಲ್ಲಾಳಬೆಟ್ಟದ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಹುಲಿಯೂರುದುರ್ಗ ಬಳಿಯ ಮೂದನಹಳ್ಳಿ ಗ್ರಾಮದ ಪ್ರದೀಪ್ ಟ್ರ್ಯಾಕ್ಟರ್ ಚಾಲಕನಾಗಿದ್ದ. ಕುಡಿತದ ದಾಸನಾಗಿದ್ದರಿಂದ ಆಗಾಗ ಪತ್ನಿ ಹಾಗೂ ತಾಯಿ ಜೊತೆ ಗಲಾಟೆ ಮಾಡುತ್ತಿದ್ದ. ಈತನ ಕಿರುಕುಳಕ್ಕೆ ಬೇಸತ್ತು ಒಂದು ತಿಂಗಳ ಹಿಂದೆ ಪತ್ನಿ ಹಾಗೂ ತಾಯಿ ಮನೆ ಬಿಟ್ಟು ತವರು ಮನೆಗೆ ಹೋಗಿದ್ದರು. ಹೀಗಾಗಿ ಪ್ರದೀಪ್ ಮನೆಯಲ್ಲಿ ಒಬ್ಬನೇ ಇದ್ದ.

ಕಳೆದ ಮೂರು ದಿನಗಳ ಹಿಂದೆ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದ ಪ್ರದೀಪ್‌, ಬುಧವಾರ ಸಂಜೆ ಉಲ್ಲಾಳಬೆಟ್ಟದ ಅರಣ್ಯ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಮೃತದೇಹ ನೋಡಿ ಹುಲಿಯೂರುದುರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Bitcoin Scam: ಬಿಟ್ ಕಾಯಿನ್ ಪ್ರಕರಣದಲ್ಲಿ ಮತ್ತೊಬ್ಬ ಇನ್‌ಸ್ಪೆಕ್ಟರ್‌ನನ್ನು ಬಂಧಿಸಿದ ಎಸ್ಐಟಿ

ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಪತ್ತೆಯಾದ ಜಾಗದಲ್ಲಿ ಮದ್ಯದ ಬಾಟಲ್ ಹಾಗೂ ಚಾಕು ಪತ್ತೆಯಾಗಿದೆ. ಪ್ರದೀಪ್ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಹುಬ್ಬಳ್ಳಿ

Hubballi Train: ಪ್ರಯಾಣಿಕರೇ ಗಮನಿಸಿ; ಹುಬ್ಬಳ್ಳಿಗೆ ಆಗಮಿಸುವ 5 ರೈಲುಗಳ ಸಮಯ ಬದಲಾಗಿದೆ

Hubballi Train: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಪರಿಷ್ಕರಿಸಲಾಗಿದ್ದು, ಈ ರೈಲುಗಳ ಬದಲಾವಣೆಯು ಯಾವ ದಿನಾಂಕದಿಂದ ಜಾರಿ ಬರಲಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

Timing change of 5 trains arriving at Sri Siddharooda Swamiji Railway Station Hubballi
ಸಾಂದರ್ಭಿಕ ಚಿತ್ರ.
Koo

ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಪರಿಷ್ಕರಿಸಲಾಗಿದ್ದು, ಈ ರೈಲುಗಳ (Hubballi Train) ಬದಲಾವಣೆಯು ಯಾವ ದಿನಾಂಕದಿಂದ ಜಾರಿ ಬರಲಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಜೂನ್ 21ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16532 ಕೆಎಸ್ಆರ್ ಬೆಂಗಳೂರು-ಅಜ್ಮೀರ್ ಗರೀಬ್ ನವಾಜ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಇದನ್ನೂ ಓದಿ: LinkedIn: ಉದ್ಯೋಗ ಹುಡುಕಾಟದಲ್ಲಿರುವ ಪದವೀಧರರಿಗೆ ಲಿಂಕ್ಡ್‌ಇನ್‌ ಸಲಹೆಗಳು ಪ್ರಕಟ; ಏನೇನಿವೆ ತಪ್ಪದೇ ಓದಿ

ಜೂ.22ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16506 ಕೆಎಸ್ಆರ್ ಬೆಂಗಳೂರು-ಗಾಂಧಿ ಧಾಮ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಜೂ. 23 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16534 ಕೆಎಸ್ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಜೂ.24 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16508 ಕೆಎಸ್ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.

ಇದನ್ನೂ ಓದಿ: KSET Results 2024:‌ ಕೆ-ಸೆಟ್‌ ಪರೀಕ್ಷೆ ಫಲಿತಾಂಶ; ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ಜೂ.25 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16210 ಮೈಸೂರು-ಅಜ್ಮೀರ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ ಎಂದು ನೈರುತ್ಯ ರೈಲ್ವೆಯಿಂದ ಮಾಹಿತಿ ನೀಡಲಾಗಿದೆ.

Continue Reading
Advertisement
Gold Smuggling
ದೇಶ10 mins ago

Gold Smuggling: ಶಶಿ ತರೂರ್‌ ಪಿಎ ಅರೆಸ್ಟ್‌- ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ ನಾಯಕನಿಗೆ ತೀವ್ರ ಮುಜುಗರ

Firecracker Explosion
ದೇಶ12 mins ago

Firecracker Explosion: ಪುರಿ ಜಗನ್ನಾಥ ದೇಗುಲದಲ್ಲಿ ಅಗ್ನಿ ದುರಂತ; 15 ಮಂದಿಗೆ ಗಾಯ

Raitha Siri Yojana
ಪ್ರಮುಖ ಸುದ್ದಿ38 mins ago

Raitha Siri Yojana: ಸಿರಿ ಧಾನ್ಯ ಬೆಳೆಯುವವರಿಗೆ ಸಿಹಿ ಸುದ್ದಿ; ನಿಮ್ಮ ಖಾತೆಗೇ ಬರುತ್ತೆ 10 ಸಾವಿರ ರೂ.

Nosebleeds In Summer
ಆರೋಗ್ಯ1 hour ago

Nosebleeds In Summer: ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

Karnataka Weather
ಕರ್ನಾಟಕ2 hours ago

Karnataka Weather: ಇಂದು ದಕ್ಷಿಣ ಕನ್ನಡ, ಹಾಸನ, ಕೊಡಗು ಸೇರಿ ವಿವಿಧೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ!

Hair Growth Tips
ಆರೋಗ್ಯ2 hours ago

Hair Growth Tips: ಕೂದಲು ಉದುರುವುದಕ್ಕೆ ಬೀಟಾ ಕ್ಯಾರೊಟಿನ್‌ ಮದ್ದು!

Dina Bhavishya
ಭವಿಷ್ಯ3 hours ago

Dina Bhavishya: ಈ ರಾಶಿಯವರು ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ!

Girlfriend
ದೇಶ8 hours ago

Girlfriend: ‘ಬಾಡಿಗೆ ಗರ್ಲ್‌ಫ್ರೆಂಡ್‌’ ಆಗಲು ಸಿದ್ಧಳೆಂದ ಯುವತಿ; ಈಕೆಯ ‘ದರಪಟ್ಟಿ’ ನೋಡಿ,‌ ನೀವೂ ಟ್ರೈ ಮಾಡಿ

CAA Certificate
ದೇಶ9 hours ago

CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

Modi Meditation
ದೇಶ10 hours ago

Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌