Kannada Rajyotsava | ರಾಜ್ಯಾದ್ಯಂತ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ, ಭುವನೇಶ್ವರಿ ಮೆರವಣಿಗೆ - Vistara News

ಉಡುಪಿ

Kannada Rajyotsava | ರಾಜ್ಯಾದ್ಯಂತ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ, ಭುವನೇಶ್ವರಿ ಮೆರವಣಿಗೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನ್ನಡ ಧ್ವಜದ ಮೆರವಣಿಗೆ, ನಾಡಿನ ಮಹಾನ್‌ ವ್ಯಕ್ತಿಗಳ ಸ್ಮರಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಚರಣೆ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮಿಸಲಾಯಿತು.

VISTARANEWS.COM


on

Kannada Rajyotsava
ಬೀದರ್‌ನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿ, ನಾಡಿನ ಪ್ರಸಿದ್ಧ ಸಾಹಿತಿಗಳ ಸ್ತಬ್ದ ಚಿತ್ರಗಳ ಮೆರವಣಿಗೆ ನಡೆಸಲಾಯಿತು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನ್ನಡ ರಾಜ್ಯೋತ್ಸವನ್ನು (Kannada Rajyotsava) ಸಡಗರ ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ಮಾಡಲಾಯಿತು. ವಿವಿಧ ಕನ್ನಡ ಪರ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆ ಮೂಲಕ ಕನ್ನಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದವು.

ಸಕ್ಕರೆನಾಡಿನಲ್ಲೊಬ್ಬ ಅಪ್ಪಟ ಕನ್ನಡಾಭಿಮಾನಿ
ಸಕ್ಕರೆನಾಡು ಮಂಡ್ಯದಲ್ಲೊಬ್ಬ ಅಪ್ಪಟ ಕನ್ನಡಾಭಿಮಾನಿ ಇದ್ದಾನೆ. ಈ ಕನ್ನಡಾಭಿಮಾನಿಯ ಅಭಿಮಾನಕ್ಕೆ ಈತನ ಹಳದಿ ಮತ್ತು ಕೆಂಪು ಬಣ್ಣದ ಮನೆಯೇ ಸಾಕ್ಷಿ. ಹೀಗಾಗಿ ಈತನಿಗೆ ಬಣ್ಣದಮನೆ ಶಿವನಂಜು ಎಂದೇ ಜನರು ಕರೆಯುತ್ತಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕುಪ್ಪೆದಡ ಗ್ರಾಮದ ನಿವಾಸಿ ಶಿವನಂಜುವಿನ‌ ಮನೆಯಲ್ಲಿ ಕನ್ನಡಾಂಬೆಗೆ ಗರ್ಭಗುಡಿ ನಿರ್ಮಾಣ ಮಾಡಿದ್ದು, ನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಮನೆಯಲ್ಲಿ ಕನ್ನಡ ಸಾಹಿತ್ಯದ ಕಂಪು ಹರಡುವ ಕನ್ನಡದ ಕವಿಗಳ ಭಾವಚಿತ್ರಗಳಿವೆ. ಈ ಮನೆಯಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವ ಕನ್ನಡಾಭಿಮಾನಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲೇ ಮೆಚ್ಚುಗೆ ವ್ಯಕ್ತವಾಗಿದೆ.

ಕೊಪ್ಪಳದಲ್ಲಿ ಉಸ್ತುವಾರಿ ಸಚಿವ ಆನಂದಸಿಂಗ್ ಧ್ವಜಾರೋಹಣ
ಕೊಪ್ಪಳ: ಜಿಲ್ಲಾಡಳಿತದಿಂದ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಧ್ವಜಾರೋಹಣ ನೆರವೇರಿಸಿದರು. ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಬಳಿಕ ತೆರೆದ ಅಲಂಕೃತ ವಾಹನದಲ್ಲಿ ತೆರಳಿ ಪರೇಡ್ ವೀಕ್ಷಿಸಿದರು. ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಸುಂದರೇಶಬಾಬು, ಜಿಪಂ ಸಿಇಒ ಫೌಜಿಯಾ ತರನ್ನುಮ್ ಮತ್ತಿತರರು ಭಾಗವಹಿಸಿದ್ದರು.

ಮೈಸೂರು ಅರಮನೆ ಆವರಣದಲ್ಲಿ ಭುವನೇಶ್ವರಿ ದೇವಿಗೆ ಪೂಜೆ
ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನ ಜಗತ್ಪ್ರಸಿದ್ಧ ಅರಮನೆ ಬಳಿಯ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಶ್ರೀ ಭುವನೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ. ರಾಮದಾಸ್, ಎಂಎಲ್‌ಇ ಸಿ.ಎನ್.ಮಂಜೇಗೌಡ ಸೇರಿ ಮತ್ತಿತರ ಉಪಸ್ಥಿತರಿದ್ದರು.

ಕನ್ನಡಾಂಬೆಗೆ ಸಚಿವ ಶ್ರೀರಾಮುಲು ಪುಷ್ಪನಮನ
ಬಳ್ಳಾರಿ: ನಗರದ ಮುನಿಸಿಪಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸಚಿವ ಶ್ರೀರಾಮುಲು ಅವರು ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಹಂಪಿಯಿಂದ ಕನ್ನಡ ಪರ ಸಂಘಟನೆಗಳು ತಂದಿದ್ದ ಕನ್ನಡ ಜ್ಯೋತಿ ಹಸ್ತಾಂತರದ ಬಳಿಕ ಸಚಿವ ಶ್ರೀರಾಮುಲು ರಾಜ್ಯೋತ್ಸವದ ಶುಭಾಶಯ ಕೋರಿದರು. ಶಾಸಕ ಸೋಮಶೇಖರ್ ರೆಡ್ಡಿ, ಸಂಸದ ದೇವೇಂದ್ರಪ್ಪ ಉಪಸ್ಥಿತರಿದ್ದರು.

ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ
ತುಮಕೂರು: ನಗರದ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು. ಜಿಲ್ಲಾಧಿಕಾರಿ ವೈ‌.ಎಸ್.ಪಾಟೀಲ್, ಎಸ್.ಪಿ.ರಾಹುಲ್ ಕುಮಾರ್, ಜಿಪಂ ಸಿ.ಇ.ಒ ವಿದ್ಯಾಕುಮಾರಿ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಸೇರಿ ಹಲವರು ಭಾಗಿಯಾಗಿದ್ದರು.

ಯಾದಗಿರಿಯಲ್ಲಿ ಸ್ಥಬ್ದ ಚಿತ್ರಗಳ ಮೆರವಣಿಗೆ
ಯಾದಗಿರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಪೊಲೀಸ್ ಪಡೆಯಿಂದ ಗೌರವಂದನೆ ಸ್ವೀಕರಿಸಿದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆ ಸ್ತಬ್ದಚಿತ್ರಗಳ ಮೆರವಣಿಗೆ ನಡೆಸಲಾಯಿತು.

ರಾಷ್ಟ್ರಗೀತೆ, ನಾಡಗೀತೆ, ರೈತ ಗೀತೆಯೊಂದಿಗೆ ಧ್ವಜಕ್ಕೆ ಗೌರವ ಸಮರ್ಪಣೆ
ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆ, ನಾಡಗೀತೆ, ರೈತ ಗೀತೆಯೊಂದಿಗೆ ಧ್ವಜಕ್ಕೆ ಗೌರವ ಸಮರ್ಪಣೆ ಮಾಡಲಾಯಿತು. ಜಿಲ್ಲಾಧಿಕಾರಿ ಎಂ.ಎಸ್ ಅರ್ಚನ, ಎಸ್‌ಪಿ ಹರಿರಾಂ ಶಂಕರ್ ಇದ್ದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪೊಲೀಸ್ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು.

This image has an empty alt attribute; its file name is hassan.webp

ಕಾರವಾರದಲ್ಲಿ ಕನ್ನಡ ಹಬ್ಬದ ಸಂಭ್ರಮ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿದರು. ಡಿಎಆರ್, ನಾಗರಿಕ ಪೊಲೀಸ್, ಅರಣ್ಯ ಇಲಾಖೆ, ಮಹಿಳಾ ಪೊಲೀಸ್ ಪಡೆ, ಗೃಹರಕ್ಷಕ ದಳ, 18ನೇ ನೇವಲ್ ಕರ್ನಾಟಕ ಎನ್‌ಸಿಸಿ, 29ನೇ ಕರ್ನಾಟಕ ನೇವಲ್ ಎನ್‌ಸಿಸಿ ಸೇರಿ 13 ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ಶಾಸಕಿ ರೂಪಾಲಿ ನಾಯ್ಕ, ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಿಇಒ ಪ್ರಿಯಾಂಗಾ.ಎಂ, ಎಸ್‌ಪಿ ಸುಮನ ಪೆನ್ನೇಕರ್, ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ನೂರಾರು ಮಂದಿ ಸಾರ್ವಜನಿಕರು ಭಾಗಿಯಾಗಿದ್ದರು.

ಕೋಲಾರದಲ್ಲಿ ಮೂರು ದಿನಗಳ ರಾಜ್ಯೋತ್ಸವಕ್ಕೆ ಸಚಿವ ಮುನಿರತ್ನ ಚಾಲನೆ
ಕೋಲಾರ: ಗಡಿನಾಡು ಕೋಲಾರದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಧ್ವಜಾರೋಹಣ ಮಾಡುವ ಮೂಲಕ ಸಚಿವ ಮುನಿರತ್ನ ಚಾಲನೆ ನೀಡಿದರು. ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಹತ್ತಾರು ಕಲಾ ತಂಡಗಳು ಭಾಗಿಯಾಗಿದ್ದವು. ಸ್ತಬ್ದಚಿತ್ರಗಳ ಮೆರವಣಿಗೆ ನಡೆಸಲಾಯಿತು. ಈ ಬಾರಿ ವಿಶೇಷವಾಗಿ ಜಿಲ್ಲಾಡಳಿತದಿಂದ ಮೂರು ದಿನಗಳ ಕಾಲ ಕನ್ನಡ ಹಬ್ಬ ಆಚರಣೆ ಮಾಡಲಾಗುತ್ತಿದೆ. ಸಂಸದ ಎಸ್‌.ಮುನಿಸ್ವಾಮಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಎಸ್‌ಪಿ ದೇವರಾಜ್ ಉಪಸ್ಥಿತರಿದ್ದರು.

ಹಚ್ಚೇವು ಕನ್ನಡದ ದೀಪ ಗೀತೆ ಹಾಡಿದ ಶಶಿಕಲಾ ಜೊಲ್ಲೆ
ವಿಜಯನಗರ: ಹೊಸಪೇಟೆ ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ವೇದಿಕೆ ಮೇಲೆ ಹಚ್ಚೇವು ಕನ್ನಡದ ದೀಪ ಗೀತೆಯನ್ನು ಸಚಿವೆ ಹಾಡಿದರು. ಪೊಲೀಸರು, ಗ್ರಾಮ ಕಾಯಕ ಮಿತ್ರರು, ಪೌರ ಕಾರ್ಮಿಕರಿಂದ ಪರೇಡ್‌ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.

ಡಿಸೆಂಬರ್‌ನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆ
ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಸಚಿವ ಸುನಿಲ್‌ ಕುಮಾರ್‌ ಮಾತನಾಡಿ, ಕನ್ನಡ ಕೆಲವರಿಗೆ ಸ್ವಾರ್ಥದ ಬಳಕೆಯ ವಿಷಯವಾಗಿರಬಹುದು. ಆದರೆ, ನಮ್ಮ ಸರ್ಕಾರ ಕನ್ನಡಕ್ಕೆ ಹಲವು ಕೊಡುಗೆ ನೀಡಿದೆ. ಸಾಹಿತ್ಯ ಕ್ಷೇತ್ರಕ್ಕೆ ದಕ್ಷಿಣ ಕನ್ನಡದ ಕೊಡುಗೆ ಬಹಳ ಇದೆ. ಡಿಸೆಂಬರ್ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸರ್ಕಾರ ಮಂಡಿಸಲಿದೆ. ಸಾರ್ವಜನಿಕರು ಇದರ ಬಗ್ಗೆ ಅಭಿಪ್ರಾಯ ತಿಳಿಸಬೇಕಿದೆ ಎಂದರು.

ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಕೋಟಿ ಜನ ಭಾಗವಹಿಸಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಒಂದು ಭಾಷೆಗೆ ಜನರು ನೀಡಿದ ಅಭೂತಪೂರ್ವ ಬೆಂಬಲವಾಗಿದೆ. ಕನ್ನಡಕ್ಕೆ ನೀಡಿರುವ ಶಾಸ್ತ್ರೀಯ ಸ್ಥಾನಮಾನಕ್ಕೆ ಇನ್ನೂ ಅನುದಾನ ಬೇಕಿದೆ. ಮೈಸೂರು ಕೇಂದ್ರವಾಗಿ ಶಾಸ್ತ್ರೀಯ ಅಧ್ಯಯನ ನಡೆಯಲಿದೆ. ಹೊಸ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದೆ.

ಅಮೃತ ಶಾಲೆ ಮೂಲಕ ಗಣಿತ ಹಾಗೂ ವಿಜ್ಞಾನ ಕಲಿಕೆಗೆ ಒತ್ತು ನೀಡಲಾಗಿದೆ. ಗಡಿ ಜಿಲ್ಲೆಯಲ್ಲಿ 21 ಕೋಟಿ ವೆಚ್ಚದಲ್ಲಿ ಗಡಿ ಗ್ರಾಮದ ಅಭಿವೃದ್ಧಿ ಮಾಡಲಾಗುತ್ತಿದೆ. ಕಯ್ಯಾರ ಕಿಞ್ಞಣ್ಣ ರೈ ಅವರ ಪ್ರತಿಮೆ ನಿರ್ಮಾಣಕ್ಕೆ 50 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ರಾಷ್ಟ್ರ ಕವಿ ಗೋವಿಂದ ಪೈಗಳ ಪುಸ್ತಕ ಬಿಡುಗಡೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಅವಿಭಜಿತ ಜಿಲ್ಲೆಯಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಕನ್ನಡದ ಎಲ್ಲ ಚಟುವಟಿಕೆಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ನೈಜ್ಯ ಸಾಧಕರನ್ನು ಗುರುತಿಸಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.

ಬೀದರ್ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ರಹೀಂಖಾನ್, ಎಂಎಲ್‌ಸಿ ಅರವಿಂದ ಅರಳಿ, ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಎಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ ಕಿಶೋರ್ ಬಾಬು ಮತ್ತಿತರರು ಇದ್ದರು.

ಶಿರಸಿಯಲ್ಲಿ ಸ್ತಬ್ದಚಿತ್ರಗಳ ಪ್ರದರ್ಶನ
ಶಿರಸಿ: ನಗರದ ಶ್ರೀ‌ ಮಾರಿಕಾಂಬಾ ಪ್ರೌಢ ಶಾಲೆ ಆವರಣದಲ್ಲಿ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ, ಸ್ತಬ್ದಚಿತ್ರ ಪ್ರದರ್ಶನ ನಡೆಯಿತು. ಕನ್ನಡ ನಾಡು, ನುಡಿ ಸಂಸ್ಕೃತಿ ಬಿಂಬಿಸುವ ಶಾಲಾ ಮಕ್ಕಳ ಸ್ತಬ್ಧಚಿತ್ರಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿದವು. ಉಪವಿಭಾಗಾಧಿಕಾರಿ ಆರ್. ದೇವರಾಜ್ ಮತ್ತಿತರರು ಭಾಗವಹಿಸಿದ್ದರು.

ಬೆಳಗಾವಿಯಲ್ಲಿ ೧0 ಸಾವಿರ ಅಡಿ ಉದ್ದದ ಕನ್ನಡ ಬಾವುಟ ಮೆರವಣಿಗೆ

ಬೆಳಗಾವಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಯಿ ಭುವನೇಶ್ವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೇರಿ ಗಣ್ಯರು ಪುಷ್ಪನಮನ ಸಲ್ಲಿಸಿದರು. ರಾಷ್ಟ್ರಗೀತೆ, ನಾಡಗೀತೆ ಬಳಿಕ ಪೊಲೀಸ್‌ ವಿವಿಧ ತುಕಡಿಗಳು, ವಿದ್ಯಾರ್ಥಿಗಳಿಂದ ಆಕರ್ಷಕ ಪಂಥ ಸಂಚಲನ ನಡೆಯಿತು. ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್‌, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ಸೇರಿ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಆಯೋಜಿಸಿದ್ದ ಮೆರವಣಿಗೆಯಲ್ಲಿ 10 ಸಾವಿರ ಅಡಿ ಉದ್ದದ ಕನ್ನಡ ಬಾವುಟವನ್ನು ಅನಾವರಣಗೊಳಿಸಲಾಯಿತು.

ಬೆಳಗಾವಿಯಲ್ಲಿ 10 ಸಾವಿರ ಅಡಿ ಉದ್ದದ ಕನ್ನಡ ಬಾವುಟದೊಂದಿಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.

ಮಂಡ್ಯದ ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್ ಭಾಗಿ
ಮಂಡ್ಯ: ನಗರದ ಜಿಲ್ಲಾ ಸಶಸ್ತ್ರ ಮೀಸಲು ಕವಾಯತು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್ ಧ್ವಜಾರೋಹಣ ಮಾಡಿದರು. ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆ ಮೂಲಕ ಧ್ವಜಕ್ಕೆ ಗೌರವ ಸಮರ್ಪಿಸಲಾಯಿತು. ಬಳಿಕ ಪೊಲೀಸ್ ಇಲಾಖೆ ವಿವಿಧ ತುಕಡಿಗಳಿಂದ ಪಥಸಂಚಲನ ನಡೆಸಲಾಯಿತು. ಶಾಸಕ ಎಂ.ಶ್ರೀನಿವಾಸ್,‌ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಎಚ್.ಎನ್.ಗೋಪಾಲಕೃಷ್ಣ, ಸಿಇಒ ಶಾಂತಾ ಎನ್.ಹುಲ್ಮನಿ, ಎಸ್‌ಪಿ ಎನ್.ಯತೀಶ್, ನಗರಸಭೆ ಅಧ್ಯಕ್ಷ ಮಂಜು ಸೇರಿ ಹಲವರು ಭಾಗಿಯಾಗಿದ್ದರು.

ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪೊಲೀಸ್ ಇಲಾಖೆಯಿಂದ ಧ್ವಜವಂದನೆ ಸ್ವೀಕರಿಸಿದರು. ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್, ಸಿಇಒ ಟಿ.ಭೂಬಾಲನ್, ಎಸ್‌ಪಿ ಜಯಪ್ರಕಾಶ್ ಮತ್ತಿತರರು ಭಾಗಿಯಾಗಿದ್ದರು.
ಶಿವಮೊಗ್ಗ ನಗರದ ಡಿಎಆರ್ ಮೈದಾನದಲ್ಲಿ ಉಸ್ತುವಾರಿ ಸಚಿವ ನಾರಾಯಣಗೌಡ ಧ್ವಜಾರೋಹಣ ನೆರವೇರಿಸಿದರು.
ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯಿಂದ 500 ಅಡಿ ಉದ್ದದ ಕನ್ನಡ ಬಾವುಟದ ಮೆರವಣಿಗೆ ನಡೆಸಲಾಯಿತು. ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

34 ಜನ ಸಾಧಕರು, 2 ತಂಡಗಳಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಉಡುಪಿ: ನಗರದ ಜಿಲ್ಲಾ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಉಸ್ತುವಾರಿ, ಮೀನುಗಾರಿಕಾ ಬಂದರು ಸಚಿವ ಎಸ್. ಅಂಗಾರ ಧ್ವಜಾರೋಹಣ ಮಾಡಿದರು‌. ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿ ಪಥ ಸಂಚಲನವನ್ನು ವೀಕ್ಷಿಸಿದರು. ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಒಟ್ಟು 34 ಜನ ಸಾಧಕರಿಗೆ, ಎರಡು ಸಾಮಾಜಿಕವಾಗಿ ಗುರುತಿಸಿಕೊಂಡಿರುವ ತಂಡಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಉಡುಪಿ ನಗರದ ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಂದ ಕನ್ನಡದ ಕಂಪನ್ನು ಪಸರಿಸುವ ಹಾಡುಗಳಿಗೆ ನೃತ್ಯ ಮಾಡಿದರು. ಕಾಂತಾರ ಚಿತ್ರದಲ್ಲಿ ಹಾಡಿ ನಟಿಸಿದ ಕುಂದಾಪುರದ ನಾಗರಾಜ ಪಾಣಾರ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಕಾಡ್ತಿಯಮ್ಮನ ಹಾಡುಗಳು, ಹೊಗಳಿಕೆಗಳನ್ನು ಹೇಳಿದರು. ಕಾಂತಾರ ಚಿತ್ರದ ಲೇಲೇ.. ಲೇಲೇ… ಹಾಡನ್ನು ಹಾಡಿ ಸಾವಿರಾರು ಜನರನ್ನು ರಂಜಿಸಿದರು.

ಮಡಿಕೇರಿಯಲ್ಲಿ ಹಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಮಡಿಕೇರಿ: ಕೊಡಗು ಜಿಲ್ಲಾಡಳಿತದ ವತಿಯಿಂದ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಡಾ.ಬಿ.ಸಿ.ಸತೀಶ್ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿ ಬಳಿಕ ಜಿಲ್ಲಾಧಿಕಾರಿಗಳು ತೆರೆದ ವಾಹನದಲ್ಲಿ ಪಥಸಂಚಲನ ಪರಿವೀಕ್ಷಣೆ ಮಾಡಿದರು.

ನಂತರ ಪೋಲೀಸ್ ಇಲಾಖೆ, ಅರಣ್ಯ ಇಲಾಖೆ, ಗೃಹ ರಕ್ಷಕ ದಳ, ಎನ್.ಸಿ.ಸಿ ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಗೌರವ ಸಮರ್ಪಣೆ ನಡೆಯಿತು. ಇದಾದ ಬಳಿಕ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಒಟ್ಟು ಆರು ಕಲಾ ತಂಡದಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳು ನಡೆದಿದ್ದು, ಕನ್ನಡದ ಹಾಡಿಗೆ ಪುಟಾಣಿ ಭರ್ಜರಿಯಾಗಿ ನೃತ್ಯ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್, ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಜಿ.ಪಂ. ಸಿಇಒ ಡಾ.ಎಸ್. ಆಕಾಶ್ ಮತ್ತಿತರರು ಭಾಗವಹಿಸಿದ್ದರು.

ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯದ ವತಿಯಿಂದ ರಾಜ್ಯೋತ್ಸವ ನಿಮಿತ್ತ ೨೫೦ ಮೀಟರ್ ಉದ್ದದ ಕನ್ನಡ ಧ್ವಜದ ಮೆರವಣಿಗೆ ನಡೆಸಲಾಯಿತು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಕನ್ನಡ ಉಳಿಸಿ ಬೆಳೆಸಿ ಎಂಬ ಭಿತ್ತಿಪತ್ರ ಹಾಗೂ ಕನ್ನಡ ಬಾವುಟವನ್ನು ಹಿಡಿದು ಬಸವರಾಜ ಎಂಬುವವರ ಪತ್ನಿ ಶಾಂತಾ ಜಿಗೇರಿ ಅವರು ಸೀಮಂತ ಕಾರ್ಯಕ್ರಮವನ್ನು ಆಚರಿಸಿಕೊಂಡರು.

ಇದನ್ನೂ ಓದಿ | Appu Namana | ಮಳೆಹನಿಗಳ ಮಂಗಳವೃಷ್ಟಿಯೊಂದಿಗೆ ಪುನೀತ್‌ ಮುಡಿಗೇರಿತು ಕರ್ನಾಟಕ ರತ್ನ ಪ್ರಶಸ್ತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಳೆ

Karnataka Weather : ರಾಜ್ಯದಲ್ಲಿಂದು ಬಿಸಿಲು, ಮಳೆ, ಗಾಳಿ ಒಟ್ಟೊಟ್ಟಿಗೆ ದಾಳಿ

Rain News : ಒಳನಾಡಿನಲ್ಲಿ ಮಳೆ ಜತೆಗೆ ತಾಪಮಾನ ಏರಿಕೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Rain alert issued for Ramanagara and Kalaburagi Rising temperature in coastal areas
Koo

ಬೆಂಗಳೂರು: ರಾಜ್ಯದಲ್ಲಿಂದು ಬಿಸಿಲು, ಮಳೆ, ಗಾಳಿ ಮೂರು ಒಟ್ಟೊಟ್ಟಿಗೆ ದಾಳಿ ಮಾಡಲಿದೆ.ಮಂಗಳವಾರ ಒಳನಾಡಲ್ಲಿ ರಾಮನಗರ ಮತ್ತು ಕಲಬುರಗಿಯಲ್ಲಿ ಹಗುರದಿಂದ ಕೂಡಿದ ಮಳೆಯಾಗುವ (Rain News) ಸಾಧ್ಯತೆ ಇದೆ. ಉಳಿದಂತೆ ಮಲೆನಾಡು, ಕರಾವಳಿಯಲ್ಲಿ ಒಣಹವೆ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಮಂಡ್ಯ ಮತ್ತು ಮೈಸೂರಿನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಹಾವೇರಿ, ಕೊಪ್ಪಳ, ದಾವಣಗೆರೆಯಲ್ಲಿ ಗರಿಷ್ಠ ತಾಪಮಾನವು ದುಪ್ಪಟ್ಟಾಗಲಿದೆ. ಕರಾವಳಿಯ ಪಣಂಬೂರು ತಾಪಮಾನ ಏರಿಕೆ ಆಗಲಿದೆ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ರಾಜಧಾನಿ ಬೆಂಗಳೂರಲ್ಲಿ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಬಹುದು. ಉಳಿದಂತೆ ಬಿಸಿಲ ಧಗೆಯು ಸುಸ್ತು ಮಾಡಲಿದೆ. ರಾತ್ರಿಯಂದು ಬಿಸಿ ಗಾಳಿ ಬೀಸಲಿದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Public Exam: 5,8,9ನೇ ತರಗತಿ ಪಬ್ಲಿಕ್‌ ಪರೀಕ್ಷೆ ಅಯೋಮಯ; ತೀರ್ಪು ಕಾದಿರಿಸಿದ ಹೈಕೋರ್ಟ್‌

ಬೇಸಿಗೆ ಬರುತ್ತಿದ್ದಂತೆ ನಮ್ಮ ದೇಹ ಬಯಸುವ ಆರೋಗ್ಯಕರ ಪೇಯಗಳಿವು!

ಚಳಿಗಾಲದ ಚಳಿಯಲ್ಲಿ ಬೆಚ್ಚಗೆ ಇದ್ದು, ಈಗ ಇದ್ದಕ್ಕಿದ್ದಂತೆ ಹವಾಮಾನ ಬದಲಾಗುತ್ತಾ ದೇಹ ಮನಸ್ಸು ಅದಕ್ಕೆ ಒಗ್ಗಿಸಿಕೊಳ್ಳಬೇಕಾಗುತ್ತದೆ. ಪ್ರಕೃತಿಯಲ್ಲಿ ಋತು ಬದಲಾವಣೆ ಸಾಮಾನ್ಯ. ಮುಖ್ಯವಾಗಿ ಚಳಿಯಲ್ಲಿ ಮುದುಡಿದ್ದ ದೇಹಕ್ಕೆ ಸೂರ್ಯನ ಬಿಸಿಲನ್ನು ಸರಿಯಾಗಿ ಕಾಣದೆ ಇದ್ದ ಮಂದಿಗೆ ಸ್ವಲ್ಪ ಸ್ವಲ್ಪವೇ ಸೂರ್ಯನ ಬಿಸಿಲು ಮೈ ಸೋಕಿದಾಗ ಆಗುವ ಖುಷಿ ಬೇರೆಯೇ. ಆದರೆ, ಇದ್ದಕ್ಕಿದ್ದಂತೆ ಬದಲಾಗುವ ಹವಾಮಾನದಿಂದಾಗಿ ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನಮ್ಮ ದೇಹ ಒಂದು ಋತುವಿನಿಂದ ಇನ್ನೊಂದು ಋತುವಿಗೆ ಬದಲಾಗುವ ಸಂದರ್ಭ ಸಹಜವಾಗಿಯೇ ಕೊಂಚ ಹೆಚ್ಚಿನ ಕಾಳಜಿಯನ್ನು ಬಯಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಪೇಯಗಳ ಸೇವನೆ, ಆಹಾರ ಸೇವನೆ ಎಲ್ಲವೂ ಅತ್ಯಂತ ಅಗತ್ಯವಾಗಿರುತ್ತದೆ. ಬನ್ನಿ, ಬೇಸಿಗೆ ಹತ್ತಿರ ಬರುತ್ತಿದ್ದಂತೆ ಯಾವೆಲ್ಲ ಪೇಯಗಳನ್ನು ನಾವು ಸೇವಿಸುವುದು ಆರೋಗ್ಯದ ದೃಷ್ಠಿಯಿಂದ ಅತ್ಯಂತ ಒಳ್ಳೆಯದು (Healthy Drinks For Summer) ಎಂಬುದನ್ನು ನೋಡೋಣ.

Coconut water Foods For Fight Against Dengue Fever

ಎಳನೀರು

ಬೇಸಿಗೆ ಬರುತ್ತಿದ್ದಂತೆ ಎಳನೀರು ಕುಡಿಯುವುದು ಅತ್ಯಂತ ಒಳ್ಳೆಯದು. ಎಳನೀರಿನಲ್ಲಿ ಸಾಕಷ್ಟು ಖನಿಜಾಂಶಗಳೂ ಸೇರಿದಂತೆ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ, ಬೇಸಗೆಯ ಕಾವು ಹೆಚ್ಚುತ್ತಿದ್ದಂತೆ ದೇಹಕ್ಕೆ ಬೇಕಾದ ತೇವಾಂಶವನ್ನು ನೀಡಿ ದೇಹವನ್ನು ತಂಪಾಗಿರಿಸುತ್ತದೆ. ಅಷ್ಟೇ ಅಲ್ಲ, ಬೇಸಗೆಯಲ್ಲಿ ಕಾಡುವ ಎದೆಯುರಿ, ಹೊಟ್ಟೆಯುಬ್ಬರ, ಗ್ಯಾಸ್‌, ಅಸಿಡಿಟಿ ಮತ್ತಿತರ ಸಮಸ್ಯೆಗಳಿಗೂ ಎಳನೀರಿನಲ್ಲಿ ಉತ್ತರವಿದೆ. ಜೀರ್ಣಕ್ರಿಯೆಯನ್ನೂ ಇದು ಸರಾಗವಾಗಿಸುತ್ತದೆ. ಬೆಳಗ್ಗಿನ ವಾಕಿಂಗ್‌ ಅಥವಾ ವರ್ಕೌಟ್‌ನ ಮೊದಲೇ ಎಳನೀರನ್ನು ಕುಡಿದರೆ, ಇದರ ಸಂಪೂರ್ಣ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ, ಪೋಷಕಾಂಶಗಳ ತಜ್ಞರು.

ಶುಂಠಿ ಹಾಗೂ ನೆಲ್ಲಿಕಾಯಿ ಶಾಟ್‌

ನಿಮ್ಮ ಏರಿದ ಮಧುಮೇಹದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ನಿಮಗೆ ಬೇಸಗೆಯಲ್ಲಿ ಕುಡಿಯಬಹುದಾದ ಡ್ರಿಂಕ್‌ ಎಂದರೆ ಅದು ನೆಲ್ಲಿಕಾಯಿ ಹಾಗೂ ಶುಂಠಿಯ ಶಾಟ್‌. ಬೆಳಗ್ಗೆ ಎದ್ದ ಕೂಡಲೇ, ನೆಲ್ಲಿಕಾಯಿ ಹಾಗೂ ಸ್ವಲ್ಪ ಶುಂಠಿಯನ್ನು ತುರಿದು, ಜ್ಯೂಸ್‌ ತೆಗೆದು ಹಾಗೆಯೇ ಕುಡಿಯುವುದು ಒಳ್ಲೆಯದು. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವೂ ಹತೋಟಿಗೆ ಬರುತ್ತದೆ. ಸುಮಾರು 30 ಎಂಎಲ್‌ಗಳಾಗುವಷ್ಟು ನೆಲ್ಲಿಕಾಯಿ ಶುಂಠಿ ಶಾಟ್‌ ನಿತ್ಯವೂ ಕುಡಿಯಬಹುದು. ನೆಲ್ಲಿಕಾಯಿಗೆ ಒಂದು ಚಮಚ ಶುಂಠಿರಸ ಸೇರಿಸಿದರೆ ಸಾಕು. ಪ್ರತಿದಿನ ಹೀಗೆ ಮಾಡಿ ಕುಡಿಯುವುದರಿಂದ ನಿಮ್ಮ ಆರೋಗ್ಯದಲ್ಲಿ ಗಣನೀಯ ಸುಧಾರಣೆಯನ್ನು ನೀವು ಕಾಣಬಹುದು.

ಬೂದುಗುಂಬಳ ಜ್ಯೂಸ್‌

ಬೇಸಿಗೆ ಹತ್ತಿರ ಬರುತ್ತಿದ್ದಂತೆ ಹಾಗೂ ಬೇಸಿಗೆಯ ಧಗೆಯಲ್ಲಿ ಕುಡಿಯಬಹುದಾದ ಹಾಗೂ ಕುಡಿಯಬೇಕಾದ ಡ್ರಿಂಕ್‌ ಎಂದರೆ ಅದು ಬೂದುಗುಂಬಳ ಜ್ಯೂಸ್‌. ಇದರಲ್ಲಿ ಅತೀ ಹೆಚ್ಚು ನೀರನಂಶ ಇರುವಿದರಿಂದ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ತೇವಾಂಶ ನೀಡುತ್ತದೆ. ಸೊಪ್ಪು ತರಕಾರಿಗಳಲ್ಲೇ ಅತ್ಯಂತ ಆರೋಗ್ಯಕರ ಸರ್ವಗುಣ ಸಂಪನ್ನ ತಾಜಾ ಜ್ಯೂಸ್‌ ಮಾತಬಹುದಾದ ತರಕಾರಿ ಎಂದರೆ ಬೂದುಕುಂಬಳಕಾಯಿ. ಇದು ದೇಹವನ್ನು ಒಳಗಿನಿಂದಲೇ ತಂಪು ಮಾಡಿ, ಇಡೀ ದಿನ ದೇಹವನ್ನು ಉಲ್ಲಾಸದಾಯಕವನ್ನಾಗಿ ಮಾಡುತ್ತದೆ. ನಿಮಗೆ ಆಗಾಗ ಮಲಬದ್ಧತೆ, ಹೊಟ್ಟೆಯುಬ್ಬರ, ಎದುಯುರಿಯಂತಹ ಸಮಸ್ಯೆಗಳಿದ್ದರೆ, ನೀವು ನಿತ್ಯವೂ ಬೂದುಗುಂಬಳ ಜ್ಯೂಸ್‌ ಮಾಡಿ ಕುಡಿಯುವ ಮೂಲಕ ನಿಮ್ಮ ದಿನವನ್ನು ಆರಂಭಿಸಿ. ಖಂಡಿತವಾಗಿಯೂ ಈ ಸಮಸ್ಯೆಗಳಿಂದ ಮುಕ್ತರಾಗುವಿರಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Vistara News Polling Booth: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯೇ ದೊಡ್ಡಣ್ಣ!

Vistara News Polling Booth: ವಿಸ್ತಾರ ಪೋಲಿಂಗ್‌ ಬೂತ್‌ನಲ್ಲಿ ಸಂಗ್ರಹಿಸಿದ ಜನಾಭಿಪ್ರಾಯದ ಪ್ರಕಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.

VISTARANEWS.COM


on

Udupi-Chikkamagaluru constituency has the highest number of voters in favour of BJP.
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ (Vistara News) ಸೋಮವಾರ (ಮಾ.18) ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಡೆಸಿದ ಪೋಲಿಂಗ್‌ ಬೂತ್‌ ಸಮೀಕ್ಷೆಯಲ್ಲಿ (Vistara news polling booth) ಬಿಜೆಪಿ ಮೇಲುಗೈ ಸಾಧಿಸಿದೆ. ಕ್ಷೇತ್ರದಿಂದ ಸಾವಿರಾರು ಕರೆಗಳು ಬಂದಿದ್ದು, ಅವುಗಳಲ್ಲಿ ಒಟ್ಟು 5861 ಕರೆಗಳನ್ನು ಸ್ವೀಕಾರ ಮಾಡಲಾಗಿದೆ. ಇದರಲ್ಲಿ ಶೇ. 58ರಷ್ಟು ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದರೆ, ಶೇಕಡಾ 42ರಷ್ಟು ಜನರು ಕಾಂಗ್ರೆಸ್‌ ಪರ ಒಲವು ತೋರಿದ್ದಾರೆ.

ವಿಸ್ತಾರ ಪೋಲಿಂಗ್‌ ಬೂತ್‌ನಲ್ಲಿ ಸಂಗ್ರಹಿಸಿದ ಜನಾಭಿಪ್ರಾಯದ ಪ್ರಕಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಗೆ 3423 ಮತದಾರರು ಬೆಂಬಲ ನೀಡಿದ್ದು, ಕಾಂಗ್ರೆಸ್‌ ಪಕ್ಷಕ್ಕೆ 2438 ಮತಗಳು ಬಂದಿವೆ. ಹೀಗಾಗಿ ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಜನ ಬೆಂಬಲ ವ್ಯಕ್ತವಾಗಿರುವುದು ಕಂಡು ಬಂದಿದೆ.

ಕರೆಗಳ ಶೇಕಡಾವಾರು ವಿವರ

ಒಟ್ಟು ಕರೆಗಳು: 5861
ಬಿಜೆಪಿ-3423 (ಶೇ.58)
ಕಾಂಗ್ರೆಸ್-2438 (ಶೇ.42)
ಇತರೆ: 00

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಣಕ್ಕಿಳಿಯುತ್ತಿದ್ದಾರೆ. ಜಯಪ್ರಕಾಶ್‌ ಹೆಗ್ಡೆ ಅವರು ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಸುಧೀರ್‌ ಕುಮಾರ್‌ ಮುರೊಳ್ಳಿ, ವಿನಯ್‌ ಕುಮಾರ್‌ ಸೊರಕೆ, ಡಾ. ಅಂಶುಮಂತ್ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಇದನ್ನೂ ಓದಿ | Vistara News Polling Booth: ತುಮಕೂರು ಕ್ಷೇತ್ರದಲ್ಲಿ ಮತ್ತೆ ಬಿಜೆಪಿಗೆ ಜೈ ಎಂದ ಮತದಾರರು!

ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮತ್ತೊಮ್ಮೆ ಟಿಕೆಟ್‌ ಸಿಗಲಿದೆ ಎನ್ನಲಾಗುತ್ತಿತ್ತು. ಆದರೆ, ಅವರಿಗೆ ಟಿಕೆಟ್‌ ನೀಡೋದಕ್ಕೆ ಕಾರ್ಯಕರ್ತರು, ಮುಖಂಡರ ವಿರೋಧ ವ್ಯಕ್ತವಾಗಿತ್ತು. ಸ್ಥಳೀಯರಿಗೇ ಟಿಕೆಟ್‌ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದ್ದರಿಂದ ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ, ಮಾಜಿ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಬಿಜೆಪಿ ಟಿಕೆಟ್‌ ದೊರಕಿದೆ. ಕ್ಷೇತ್ರದಲ್ಲಿ ಗೋ ಬ್ಯಾಕ್‌ ಶೋಭಾ ಅಭಿಯಾನ ಆರಂಭವಾಗಿದ್ದರಿಂದ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರಕ್ಕೆ ಶಿಫ್ಟ್‌ ಮಾಡಲಾಗಿದೆ.

ಕೋಟ ಶ್ರೀನಿವಾಸ ಪೂಜಾರಿ ಅವರು ಹಿಂದುಳಿದ ವರ್ಗಗಳ ಬಿಲ್ಲವ ಸಮುದಾಯದ ನಾಯಕರಾಗಿದ್ದು, ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬಿಜೆಪಿ ಮಣೆ ಹಾಕಿದೆ. ಜನರ ನಡುವಿನ ನಾಯಕ ಹಾಗೂ ಅತ್ಯಂತ ಸರಳ ವ್ಯಕ್ತಿತ್ವದ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್​ ನೀಡಿರುವುದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳ ಪಾಲಿಗೆ ಸಂತಸದ ಸಂಗತಿಯಾಗಿದೆ. ಇನ್ನು ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ಅವರು ಬಂಟ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಅವರು ಒಂದು ರೀತಿಯಲ್ಲಿ ಪಕ್ಷಾತೀತ ನಾಯಕರಾಗಿದ್ದು, ಪಕ್ಷೇತರರಾಗಿಯೂ ಗೆಲ್ಲಬಲ್ಲ ತಾಕತ್ತನ್ನು ತೋರಿಸಿದವರು. ಜನತಾದಳ, ಕಾಂಗ್ರೆಸ್‌, ಬಿಜೆಪಿ ಎಲ್ಲ ಪಕ್ಷಗಳಲ್ಲೂ ಸೇವೆ ಸಲ್ಲಿಸಿದ್ದಾರೆ.

2009ರಲ್ಲಿ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ, 2014 ಹಾಗೂ 2019ರಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು ಗೆಲುವು ದಾಖಲಿಸಿದ್ದರು. ಇದೀಗ ಉಡುಪಿ-ಚಿಕ್ಕಮಗಳೂರು ಭವಿಷ್ಯದ ಸಂಸದ ಯಾರು ಎಂಬ ಬಗ್ಗೆ ವಿಸ್ತಾರ ಪೋಲಿಂಗ್‌ ಬೂತ್‌ ಸಮೀಕ್ಷೆ ಫಲಿತಾಂಶದಲ್ಲಿ ತಿಳಿದುಬಂದಿದ್ದು, ಮತ್ತೊಮ್ಮೆ ಕಮಲ ಅರಳಲಿದೆ ಎಂದು ಮತದಾರರು ತಿಳಿಸಿದ್ದಾರೆ.

ಪೋಲಿಂಗ್‌ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?

ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್‌ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್‌ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್‌ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.

ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್‌ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ | Vistara News Polling Booth: ಹಾವೇರಿ-ಗದಗ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಪಾರುಪತ್ಯ!

ಈಗಾಗಲೇ ಮಂಡ್ಯ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಸಮೀಕ್ಷೆ ಮುಕ್ತಾಯಗೊಂಡಿವೆ.

ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488

Continue Reading

ಮಳೆ

Karnataka Weather : ಬೇಸಿಗೆ ಬಿಸಿ ನಡುವೆಯು ಇಲ್ಲೆಲ್ಲ ಮಳೆಯ ಸಿಂಚನ

Karnataka Weather Forecast : ರಾಜ್ಯಾದ್ಯಂತ ಬಿಸಿಲ ಧಗೆ ನಡೆವೆಯೂ ಮಳೆಯ ಸಿಂಚನವಾಗುತ್ತಿದೆ. ಇನ್ನೆರಡು ದಿನಗಳು ಒಳನಾಡಲ್ಲಿ ಮಳೆ (Rain News) ಸೂಚನೆ ಇದ್ದರೆ, ಕರಾವಳಿಯಲ್ಲಿ ಶುಷ್ಕ ವಾತಾವರಣವೇ (Dry Weather) ಇರಲಿದೆ.

VISTARANEWS.COM


on

By

rain likely to occur at isolated places over Interior Karnataka and Dry weather prevail over Coastal Karnataka
ಸಾಂದರ್ಭಿಕ ಚಿತ್ರ
Koo

ಬೆಂಗಳೂರು/ಕೊಡಗು: ಕಾದ ಕಾವಲಿಯಾಗಿದ್ದ ಕಾವೇರಿ ತವರು ಕೊಡಗಿನಲ್ಲಿ ಸೋಮವಾರ ಸಂಜೆ ಮಳೆ ತಂಪೆರೆದಿದೆ. ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ವರ್ಷದ ಮೊದಲ ಮಳೆಯಾಗಿದೆ. ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ಮಳೆಯ ಸಿಂಚನವಾಗಿದೆ. ಇತ್ತ ಮಡಿಕೇರಿ ತಾಲೂಕಿನ ನಾಪೋಕ್ಲು ಭಾಗದಲ್ಲೂ ವರ್ಷಾಧಾರೆಗೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಮಳೆಯಿಲ್ಲದೆ ಕಾಫಿ ಗಿಡಗಳು ಹಾಗೂ ಕಾಳುಮೆಣಸು ಬಳ್ಳಿ ಒಣಗುತ್ತಿದ್ದವು. ಸದ್ಯ ಮಳೆಯಿಂದಾಗಿ ಬೆಳಗಾರರಲ್ಲಿ ಸಂತಸ ಮೂಡಿದೆ.

ಮುಂದಿನ 24 ಗಂಟೆಯಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ (Rain News) ಬಹಳಷ್ಟು ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ದಕ್ಷಿಣ ಒಳನಾಡಿನ ರಾಮನಗರ ಮತ್ತು ಉತ್ತರ ಒಳನಾಡಿನ ಕಲಬುರಗಿಯಲ್ಲಿ ಮಳೆಯಾಗಬಹುದು.

ತಾಪಮಾನದ ಬಿಸಿ

ಕರಾವಳಿಯ ಪಣಂಬೂರು ಹಾಗೂ ಒಳನಾಡಿನ ಬಾಗಲಕೋಟೆ, ಹಾವೇರಿ, ಕೊಪ್ಪಳ, ದಾವಣಗೆರೆ ಹಾಗೂ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ.

ರಾಜಧಾನಿ ಬೆಂಗಳೂರಲ್ಲಿ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಉಳಿದಂತೆ ಬಿಸಿಲ ಧಗೆಯು ಸುಸ್ತು ಮಾಡಲಿದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Road Accident : ರಸ್ತೆ ತಿರುವಿನಲ್ಲಿತ್ತು ಆಪತ್ತು; ಬೈಕ್‌ ಸವಾರನ ಜೀವ ತೆಗೆದ ಟಿಪ್ಪರ್‌ ಲಾರಿ

ಬೀದರ್‌ನಲ್ಲಿ 4 ಸೆಂ.ಮೀ ಮಳೆ

ರಾಜ್ಯದಲ್ಲಿ ಭಾನುವಾರಂದು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಬೀದರ್ 4 ಸೆಂ.ಮೀನಷ್ಟು ಮಳೆಯಾಗಿರುವ ವರದಿ ಆಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆ ಇತ್ತು.

ಗರಿಷ್ಠ ಉಷ್ಣಾಂಶ 38.7 ಡಿ.ಸೆ ತುಮಕೂರಿನ ಚಿಕ್ಕನಹಳ್ಳಿಯಲ್ಲಿ ಎ ಡಬ್ಲ್ಯೂ ಎಸ್ ದಾಖಲಾಗಿದೆ. ಕನಿಷ್ಠ ಉಷ್ಣಾಂಶ 17.3 ಡಿ.ಸೆ. ಚಾಮರಾಜನಗರದಲ್ಲಿ ದಾಖಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 17.9 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ರಾಮನಗರ ಮತ್ತು ಕೋಲಾರ, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ನಿಂದ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಾವೇರಿ, ಉತ್ತರ ಕನ್ನಡ, ರಾಯಚೂರು, ಕೊಪ್ಪಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 42 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಹೋಳಿಯಲ್ಲಿ ಮಿಂದೇಳುವಾಗ ಕೂದಲು ಕಾಪಾಡಿಕೊಳ್ಳುವುದು ಹೇಗೆ?

ಹೋಳಿ (Holi 2024) ಹಬ್ಬದಂದು ಬಣ್ಣಗಳಲ್ಲಿ ಮಿಂದೇಳುವ ಬಯಕೆಯನ್ನು ಹತ್ತಿಕ್ಕುವುದು ಕಷ್ಟ. ವರ್ಷಕ್ಕೊಮ್ಮೆ ಬರುವ ರಂಗಿನಾಟ ನೀಡುವ ಖುಷಿಯೇ ಅಂಥದ್ದು. ಹಾಗೆಂದು ಬಣ್ಣಗಳಲ್ಲಿ ತೋಯ್ದ ಮೇಲೆ, ಆ ಬಣ್ಣಗಳಿಂದ ತ್ವಚೆ, ಕೂದಲುಗಳಿಗೆ ಆಗುವ ಹಾನಿಯನ್ನು ಸರಿ ಮಾಡಿಕೊಳ್ಳುವುದು ಇನ್ನೂ ಕಷ್ಟ. ಕೂದಲುಗಳಿಂದ ಬಣ್ಣ ತೆಗೆಯುವುದು, ತಲೆಯ ಚರ್ಮ ಒಣಗಿದಂತಾಗುವುದು, ಹೊಟ್ಟಾಗುವುದು, ತುರಿಕೆಯಂಥ ಕಿರಿಕಿರಿಗಳೇ ಮುಗಿಯುವುದಿಲ್ಲ.
ಇವುಗಳನ್ನೆಲ್ಲ ನಿವಾರಿಸುವುದಾಗಿ ಭರವಸೆ ನೀಡುವಂಥ ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯಬಹುದು. ಆದರೆ ಇಂಥ ಎಷ್ಟೋ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಕೂದಲಿಗೆ ಆರೈಕೆ ಮಾಡುವ ಬದಲು ಹಾನಿ ಮಾಡುವ ಸಂದರ್ಭಗಳೇ ಹೆಚ್ಚು. ಹಾಗಾದರೆ ರಂಗಿನಾಟ ಬೇಡ ಎನ್ನುವುದೇ? ಅಗತ್ಯವಿಲ್ಲ! ಹಬ್ಬಕ್ಕೆ ಪೂರ್ವದಲ್ಲೇ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಬಣ್ಣದಾಟದ ನಂತರ ಇನ್ನಷ್ಟು ಆರೈಕೆ ಮಾಡಿದರೆ, ಕೂದಲಿಗೆ ಹಾನಿಯಾಗಿ ಉದುರದಂತೆ ಕಾಪಾಡಿಕೊಳ್ಳಬಹುದು. ಹೋಳಿಯಲ್ಲಿ ರಂಗಿನಾಟ ಆಡಿದಾಗ ಕೂದಲಿಗೆ ಹಾನಿಯಾಗದಂತೆ (Hair care tips for Holi) ಏನು ಮಾಡಬೇಕು?

Curry Leaves and Coconut Oil Hair Pack Discover the Best Herbal Hair Pack for Hair Growth

ಪೂರ್ವ ತಯಾರಿ

ಹಬ್ಬಕ್ಕೆ ಒಂದು ವಾರ ಮೊದಲಿನಿಂದಲೇ ಕೂದಲಿಗೆ ಆರೈಕೆ ಬೇಕು. ಮೊದಲಿನಿಂದಲೂ ಹೋಳಿ ಆಡುವಾಗ ದೇಹಕ್ಕೆಲ್ಲಾ ಚೆನ್ನಾಗಿ ಎಣ್ಣೆ ಲೇಪಿಸಿದ್ದರೆ ಬಣ್ಣ ಅಷ್ಟಾಗಿ ಅಂಟುವುದಿಲ್ಲ; ಒಂದೊಮ್ಮೆ ಅಂಟಿದರೂ ತೊಳೆಯುವುದು ಸುಲಭ ಎಂಬ ಮಾತಿದೆ. ಇದು ನಿಜಕ್ಕೂ ಹೌದು. ಕೂದಲಿಗೆ ಪ್ರತಿ ದಿನ ತಪ್ಪದಂತೆ ಕೊಬ್ಬರಿ ಎಣ್ಣೆ ಲೇಪಿಸಿ. ಸಾಧ್ಯವಾದರೆ ಬುಡಕ್ಕೆಲ್ಲ ಭೃಂಗರಾಜದ ತೈಲ ಲೇಪಿಸಿದರೆ ಇನ್ನೂ ಒಳ್ಳೆಯದು. ಒರಟಾಗಿ ನೆತ್ತಿಯನ್ನಷ್ಟೇ ಉಜ್ಜದೆ, ನವಿರಾಗಿ ತಲೆಯಿಡೀ ಮಸಾಜ್‌ ಮಾಡಿ. ಇಡೀ ತಲೆಯೂ ಭೃಂಗರಾಜದ ಸದ್ಗುಣಗಳಲ್ಲಿ ನೆನೆಯಲಿ. ಇದರಿಂದ ಬಣ್ಣ ಮತ್ತು ತಲೆಯ ಚರ್ಮದ ನಡುವೆ ರಕ್ಷಾ ಕವಚವೊಂದು ರೂಪುಗೊಳ್ಳುತ್ತದೆ. ಈ ರೀತಿಯಲ್ಲಿ ತಲೆಯ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸಬಹುದು. ಜೊತೆಗೆ ಕೂದಲಿನ ಬುಡವನ್ನೂ ಬಲಗೊಳಿಸಬಹುದು.

Happy People Crowd Partying under Colorful Powder Cloud at Holi

ರಂಗಿನಾಟದ ನಂತರ

ಬಣ್ಣವನ್ನು ದೀರ್ಘ ಕಾಲ ಕೂದಲಿನಲ್ಲಿ ಒಣಗಲು ಬಿಡಬೇಡಿ. ಇದರಿಂದ ರಂಗು ತೊಳೆಯುವಾಗ ಉಜ್ಜಬೇಕಾಗಬಹುದು. ಕೂದಲಿಗೆ ಹಾನಿ ಇಲ್ಲಿಂದಲೂ ಆಗಬಹುದು. ತಲೆ ಸ್ನಾನ ಮಾಡುವಾಗ ಆದಷ್ಟೂ ರಾಸಾಯನಿಕಗಳಿಲ್ಲದ ಮೃದುವಾಗ ಶಾಂಪೂದಿಂದ ರಂಗು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲ ಬುಡದಲ್ಲಿರುವ ನೈಸರ್ಗಿಕವಾದ ತೈಲದಂಶ ಹೊರಟುಹೋಗದಂತೆ ಕಾಪಾಡಿಕೊಳ್ಳಬಹುದು. ಸ್ನಾನದ ನಂತರ ಕೂದಲನ್ನು ಟವೆಲ್‌ನಿಂದ ಒರಟಾಗಿ ಉಜ್ಜಬೇಡಿ. ಕೆಲವು ನಿಮಿಷಗಳ ಕಾಲ ಬಿಸಿಲಲ್ಲಿ ಒಣಗಿಸಬಹುದು ಅಥವಾ ಗಾಳಿಯಲ್ಲೂ ಆರಿಸಿಕೊಳ್ಳಬಹುದು.

Lady Sitting on the Couch Gives Herself a Scalp Massage Gooseberry Benefits

ಹೇರ್‌ ಮಾಸ್ಕ್‌

ಕೂದಲಿಗೆ ಒಳ್ಳೆಯ ಹೇರ್‌ಮಾಸ್ಕ್‌ ಹಾಕುವುದು ಹೆಚ್ಚಿನ ಪೋಷಣೆಯನ್ನು ನೀಡಿ, ರಂಗಿನಾಟದಿಂದ ಹಾನಿ ಆಗಿದ್ದರೆ, ಅದನ್ನು ಸರಿಪಡಿಸುತ್ತದೆ. ಮೊಸರು, ಮೆಂತೆಯ ಪೇಸ್ಟ್‌ ಸೇರಿಸಿದ ಹೇರ್‌ ಮಾಸ್ಕ್‌ ಬಳಸಬಹುದು. ಅದಿಲ್ಲದಿದ್ದರೆ, ತೆಂಗಿನಹಾಲಿಗೆ ನಾಲ್ಕಾರು ಚಮಚದಷ್ಟು ಭೃಂಗರಾಜದ ರಸ ಸೇರಿಸಿ ಕೂದಲಿಗೆ ಹಚ್ಚಬಹುದು. ಒಂದೊಮ್ಮೆ ತಾಜಾ ಭೃಂಗರಾಜ ದೊರೆಯದಿದ್ದರೆ ಒಂದು ಚಮಚದಷ್ಟು ಭೃಂಗದ ಎಣ್ಣೆಯನ್ನೇ ಉಪಯೋಗಿಸಬಹುದು. 20-30 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತಲೆಸ್ನಾನ ಮಾಡಿದರೆ ಸಾಕಾಗುತ್ತದೆ.
ತಲೆಸ್ನಾನಕ್ಕೆ ಕಠೋರವಾದ ಶಾಂಪೂ ಅಥವಾ ಕ್ಲೆನ್ಸರ್‌ಗಳ ಬಳಕೆ ಯೋಗ್ಯವಲ್ಲ. ಮೃದುವಾದ, ರಾಸಾಯನಿಕಗಳಿಲ್ಲದ ಶಾಂಪೂ ಒಳ್ಳೆಯದು. ಅಂಟುವಾಳಕಾಯಿ ಅಥವಾ ಸೀಗೆಕಾಯಿ ದೊರೆಯುವಂತಿದ್ದರೆ, ಅದನ್ನು ಹಿಂದಿನ ರಾತ್ರಿ ನೀರಿಗೆ ಹಾಕಿದ್ದರೆ ಸಾಕು. ಮಾರನೇದಿನ ಅದೇ ನೀರನ್ನು ಶಾಂಪೂ ಆಗಿ ಬಳಸಬಹುದು. ಜೊತೆಗೆ ದಾಸವಾಳ ಸೊಪ್ಪಿನ ಲೋಳೆಯಂಥ ರಸವನ್ನೂ ಸೇರಿಸಿಕೊಂಡರೆ, ನೈಸರ್ಗಿಕ ಕಂಡೀಶನರ್‌ ಸಹ ಕೂದಲಿಗೆ ದೊರೆಯುತ್ತದೆ.

Massage Hair Care Habits

ನಿಯಮಿತ ಮಸಾಜ್‌

ತಲೆಗೂದಲಿಗೆ ನಿಯಮಿತವಾಗಿ ಆರೈಕೆ ಅಗತ್ಯವಿದೆ. ಇಲ್ಲದಿದ್ದರೆ ಕೂದಲು ಉದುರುವುದು, ತುಂಡಾಗುವುದು, ಬೇಗನೇ ಬಿಳಿಯಾಗುವುದು- ಇಂಥವನ್ನು ತಡೆಯಲು ಸಾಧ್ಯವಿಲ್ಲ. ಕಹಿಬೇವು, ಲೋಳೆಸರದ ರಸಗಳನ್ನು ವಾರಕ್ಕೊಮ್ಮೆ ಕೂದಲ ಬುಡಕ್ಕೆ ಮಸಾಜ್‌ ಮಾಡಿ, ಕೆಲ ಸಮಯದ ನಂತರ ತೊಳೆಯಬಹುದು. ಭೃಂಗರಾಜ ಮತ್ತು ಮದರಂಗಿ ಪುಡಿಗಳನ್ನು ಮೊಸರಿನಲ್ಲಿ ಸೇರಿಸಿ ಹೇರ್‌ಮಾಸ್ಕ್‌ ಮಾಡಬಹುದು. ಇಂಥ ಕ್ರಮಗಳಿಂದ ಕೂದಲ ಬುಡ ಭದ್ರವಾಗುತ್ತದೆ. ಹೋಳಿಯಲ್ಲಿ ರಂಗಿನಾಟ ಆಡುವಾಗ ಕೂದಲ ಗತಿಯೇನು ಎಂಬ ಚಿಂತೆಯೂ ದೂರವಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಮಳೆ ನಡುವೆಯೂ ಬಿಸಿ ಮುಟ್ಟಿಸುವ ಸೂರ್ಯನ ಶಾಖ

Rain News : ತಾಪಮಾನವು ಬಿಸಿ ಮುಟ್ಟಿಸುತ್ತಿದ್ದರೂ, ಇದರ ನಡುವೆ ಸುರಿಯುತ್ತಿರುವ ಮಳೆಯಿಂದಾಗಿ ನಿಟ್ಟುಸಿರು (karnataka Weather Forecast) ಬಿಡುವಂತಾಗಿದೆ.

VISTARANEWS.COM


on

By

rain alert to North Interior Karnataka And Dry weather in coastal and south interior
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯಾದ್ಯಂತ ಬಿಸಿಲ ಧಗೆ ಹೆಚ್ಚಾಗುತ್ತಿದೆ. ಇದರ ನಡುವೆಯೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ (Rain News) ಸೂಚನೆ ಇದೆ. ಈ ಬಗ್ಗೆ ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣಹವೆ (Dry Weather) ಮುಂದುವರಿದಿದೆ.

ಇಲ್ಲೆಲ್ಲ ಬಿಸಿಲ ಧಗೆ

ಉತ್ತರ ಒಳನಾಡಿನ ಬಾಗಲಕೋಟೆ, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗಲಿದೆ. ಇದರಿಂದಾಗಿ ಬಿಸಿಲ ಧಗೆ ಹೆಚ್ಚಾಗಿರಲಿದೆ.

ಇನ್ನೂ ಬೆಂಗಳೂರಲ್ಲಿ ಕೆಲವೊಮ್ಮೆ ಮೋಡ ಕವಿದ ವಾತಾವರಣ ಇದ್ದರೂ, ಸೆಕೆ ಹೆಚ್ಚಾಗಿರಲಿದೆ. ಗರಿಷ್ಠ ಉಷ್ಣಾಂಶ 35 ಹಾಗೂ ಕನಿಷ್ಠ ಉಷ್ಣಾಂಶ 23 ಡಿ.ಸೆ ಇರಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್‌, ಧಾರವಾಡ ಹಾಗೂ ಗದಗ, ಹಾವೇರಿ, ಕಲಬುರಗಿ ಸೇರಿದಂತೆ ರಾಯಚೂರು, ವಿಜಯಪುರ, ಯಾದಗಿರಿಯ ಒಣ ಹವೆ ಇರಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲೂ ಬಿಸಿಲ ತಾಪ ಹೆಚ್ಚಾಗಿರಲಿದೆ. ದಕ್ಷಿಣ ಒಳನಾಡಿನ ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗದಲ್ಲೂ ಒಣ ವಾತಾವರಣ ಮೇಲುಗೈ ಸಾಧಿಸಲಿದೆ.

ಚಿಕ್ಕಮಗಳೂರಲ್ಲಿ ತಂಪೆರದ ಮಳೆ

ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಮಲೆನಾಡಿಗರಿಗೆ ಭಾನುವಾರ ಸಂಜೆ ಮಳೆಯು ತಂಪೆದಿದೆ. ಐದಳ್ಳಿ, ಕಣತಿ, ಮಾಗೋಡು ಹುಣಸೇಹಳ್ಳಿ, ಕಡಬಗೆರೆ ಸುತ್ತಮುತ್ತ ಮಳೆಯಾಗಿದೆ. ಮಧ್ಯಾಹ್ನದ ನಂತರ ಮೋಡ ಕವಿದ ವಾತವರಣವಿತ್ತು. ಸಂಜೆ ಆಗುತ್ತಿದ್ದಂತೆ ಸಾಧಾರಣದಿಂದ ಶುರುವಾದ ಮಳೆಯು ನಂತರ ಜೋರಾಗಿತ್ತು.

ಬಿಸಿಲ ಧಗೆಗೆ ಕಾಫಿ-ಮೆಣಸು ಉಳಿಸಿಕೊಳ್ಳುವುದು ಸವಾಲಾಗಿತ್ತು. ಮಳೆಯಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಐದು ದಿನದ ಹಿಂದೆ ಮಲೆನಾಡಿನಲ್ಲಿ ಮೊದಲ ಮಳೆಯಾಗಿತ್ತು.

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 35 ಡಿ.ಸೆ – 23 ಡಿ.ಸೆ
ಮಂಗಳೂರು: 34 ಡಿ.ಸೆ – 25 ಡಿ.ಸೆ
ಚಿತ್ರದುರ್ಗ: 36 ಡಿ.ಸೆ – 22 ಡಿ.ಸೆ
ಗದಗ: 37 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 23 ಡಿ.ಸೆ
ಕಲಬುರಗಿ: 39 ಡಿ.ಸೆ – 27 ಡಿ.ಸೆ
ಬೆಳಗಾವಿ: 36 ಡಿ.ಸೆ – 18 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Pralhad Joshi Santhosh lad
ವೈರಲ್ ನ್ಯೂಸ್9 mins ago

Pralhad Joshi : ಸಂತೋಷ್‌ ಲಾಡ್‌ ದಿನಾ ಮೋದಿಗೆ ಬಯ್ಯೋದ್ಯಾಕೆ: ರಹಸ್ಯ ಬಿಚ್ಚಿಟ್ಟ ಜೋಶಿ!

hanuman chalisa case
ಪ್ರಮುಖ ಸುದ್ದಿ15 mins ago

ಹನುಮಾನ್‌ ಚಾಲೀಸಾ ಕೇಸ್:‌ ಐದು ಮಂದಿ ಬಂಧನ, ಇಂದು ನಗರ್ತಪೇಟೆಯಲ್ಲಿ ಕೇಸರಿ ಹವಾ

Delhi
ದೇಶ38 mins ago

Delhi Pollution: ಮತ್ತೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾದ ದೆಹಲಿ

Kannada New Movie Pavan Kumar Wadeyar New Movie
ಸ್ಯಾಂಡಲ್ ವುಡ್43 mins ago

Kannada New Movie: ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ

Prabhas Vs Allu Arjun
ಟಾಲಿವುಡ್60 mins ago

Prabhas Vs Allu Arjun: ‘ಪುಷ್ಪ 2’ ಜತೆ ಪೈಪೋಟಿಗಿಳಿದ ಶಿವಣ್ಣ, ಪ್ರಭಾಸ್!

Firing in JewelleryFiring in Jewellery
ಕ್ರೈಂ1 hour ago

Firing in Jewellery : ಕೊಡಿಗೇಹಳ್ಳಿ ಜುವೆಲ್ಲರಿ ಫೈರಿಂಗ್‌ ಕೇಸಿಗೆ ಟ್ವಿಸ್ಟ್‌; ದರೋಡೆಕೋರನೇ ಗುಂಡಿಗೆ ಬಲಿ!

meghana foods it raid
ಬೆಂಗಳೂರು1 hour ago

IT Raid: ಬೆಂಗಳೂರಿನಲ್ಲಿ 10 ಕಡೆ ಐಟಿ ದಾಳಿ, ತೆರಿಗೆ ಪಾವತಿಸದ ರೆಸ್ಟೋರೆಂಟ್‌ಗಳ ಪರಿಶೀಲನೆ

Israeli Forces
ದೇಶ1 hour ago

Israel Palestine War: ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ; 20 ಸಾವು

RCB Unbox
ಕ್ರೀಡೆ2 hours ago

RCB Unbox Event: ಇಂದಿನ ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ವಿರಾಟ್​ ಕೊಹ್ಲಿಯೂ ಹಾಜರ್​!

Thalapathy Vijay
ಮಾಲಿವುಡ್2 hours ago

Thalapathy Vijay: 14 ವರ್ಷಗಳ ಬಳಿಕ ಕೇರಳಕ್ಕೆ ಬಂದ ದಳಪತಿ ವಿಜಯ್‌!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina Bhavishya
ಭವಿಷ್ಯ5 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು16 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

Different Danny Filed Case Against Ravi Varma
ಬೆಂಗಳೂರು5 days ago

Different Danny : ಫೈಟ್‌ ಮಾಸ್ಟರ್ಸ್‌ ಫೈರ್‌ ಫೈಟಿಂಗ್‌; ರವಿವರ್ಮ ವಿರುದ್ಧ ಡಿಫರೆಂಟ್‌ ಡ್ಯಾನಿ ಸಮರ

ಟ್ರೆಂಡಿಂಗ್‌