ಕರ್ನಾಟಕ
Karnataka Election 2023: ಲವ್ ಯು ಎಂದವಳಿಗೆ ಕೈ ಕೊಟ್ಟ ರಾಹುಲ್ ಗಾಂಧಿ; ಹೇಗಿತ್ತು ಗೊತ್ತಾ ಬೆಂಗಳೂರು ರೌಂಡ್ಸ್
ವಿಧಾನಸಭೆ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಘಟಾನುಘಟಿಗಳಿಂದ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆದಿದೆ. ಬಹಿರಂಗ ಪ್ರಚಾರಕ್ಕೆ ಸೋಮವಾರ (ಮೇ 8) ತೆರೆ ಬಿದ್ದಿದ್ದು, ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandi) ಅಂತಿಮ ಪ್ರಚಾರ ಜೋರಾಗಿತ್ತು.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ (Karnataka Election) ಮತದಾನಕ್ಕೆ (polling day) ಒಂದೇ ದಿನ ಬಾಕಿ ಇದೆ. ಸೋಮವಾರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಕೇಂದ್ರ ನಾಯಕರು ಅಂತಿಮ ಕಸರತ್ತು ಮಾಡಿದ್ದಾರೆ. ರಾಜಧಾನಿ ಬೆಂಗಳೂರಲ್ಲಿ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandi) ಮತಬೇಟೆ ಮಾಡಿದರು. ಎಸಿ ಕಾರು ಬಿಟ್ಟು ರೋಡಿಗಿಳಿದ ರಾಹುಲ್ ಗಾಂಧಿ ಜನಸಾಮಾನ್ಯರ ಸಾರಥಿಯನ್ನು ಏರಿದರು. ಹಾಗಾದರೆ ಹೇಗಿತ್ತು ರಾಹುಲ್ ಗಾಂಧಿ ಮತಯಾಚನೆಯ ಸವಾರಿ? ಇಲ್ಲಿದೆ ಫೋಟೊ ಝಲಕ್.
ಕರ್ನಾಟಕ
ವಿಸ್ತಾರ ಯುಗಾದಿ ಕಥಾಸ್ಪರ್ಧೆ: ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ: ನಾಗತಿಹಳ್ಳಿ ಚಂದ್ರಶೇಖರ್
ಮುದ್ರಣ ಹಾಗೂ ಡಿಜಿಟಲ್- ಟಿವಿ ಇವೆರಡರ ಹಿತವಾದ ಸಮ್ಮಿಶ್ರಣ ಮಾಡಿ ಓದುಗ- ನೋಡುಗರಿಗೆ ನೀಡಬೇಕು ಎಂಬ ಆಶಯದಿಂದ ನಾವು ಕಥಾಸ್ಪರ್ಧೆಯನ್ನು ನಡೆಸಿದ್ದೇವೆ ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದ್ದಾರೆ.
ಬೆಂಗಳೂರು: ಕನ್ನಡ ಸಾರಸ್ವತ ಲೋಕವನ್ನು ಒಳಗೊಳ್ಳುವ ಯತ್ನ, ನೋಡುಗನನ್ನು ಓದುಗನನ್ನಾಗಿಸುವ ಪ್ರಯತ್ನ ವಿಸ್ತಾರ ನ್ಯೂಸ್ ಟಿವಿ ಮಾಧ್ಯಮದಿಂದ ಆಗುತ್ತಿರುವುದು ಸ್ತುತ್ಯರ್ಹ ಎಂದು ಖ್ಯಾತ ಕತೆಗಾರ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ದಾಖಲೆ ಮೊತ್ತದ ʼವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ-2023’ರ ಬಹುಮಾನ ವಿಜೇತರನ್ನು ಘೋಷಿಸಿದ ಬಳಿಕ ಅವರು ಮಾತನಾಡಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಹೋಟೆಲ್ ಮ್ಯಾಸ್ಟಿಫ್‌ನಲ್ಲಿ ಸಮಾರಂಭ ನೆರವೇರಿತು. ಮೊದಲ ಬಹುಮಾನವನ್ನು ಚಂದ್ರಶೇಖರ ಡಿ.ಆರ್., ಎರಡನೇ ಬಹುಮಾನವನ್ನು ದಾದಾಪೀರ್ ಜೈಮನ್, ಮೂರನೇ ಬಹುಮಾನವನ್ನು ಪೂರ್ಣಿಮಾ ಮಾಳಗಿಮನಿ ತಮ್ಮದಾಗಿಸಿಕೊಂಡರು.
ಕಥೆಗಳಿಗೆ ದೃಶ್ಯ ಮಾಧ್ಯಮ ಸದಾ ಉಪಕೃತವಾಗಿರುತ್ತದೆ. ಕಥೆಗಳೇ ಮನರಂಜನೆಯ ಜೀವಾಳ. ಕಥೆ ಹಾಗೂ ಟಿವಿ ಮಾಧ್ಯಮ ಎರಡರ ವ್ಯಾಕರಣವೂ ಭಿನ್ನ. ದೃಶ್ಯ ಮಾಧ್ಯಮ ಅಬ್ಬರದಿಂದ ಹೇಳುವುದನ್ನು ಕಥೆ ಸೌಮ್ಯವಾಗಿ, ಪಿಸುಮಾತಿನಲ್ಲಿ, ದೃಶ್ಯ ಮಾಧ್ಯಮದ ತೋರಿಕೆಯ ನಡುವೆ ಕಥೆ ಸಂಕೋಚ ಹಾಗೂ ಧ್ಯಾನದಲ್ಲಿ ಹೇಳುತ್ತದೆ. ದೃಶ್ಯ ಮಾಧ್ಯಮ ಪ್ರಕಟಿಸಿದರೆ ಸಾಹಿತ್ಯ ಏಕಾಂತದಲ್ಲಿ ಅರಳುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರೇಕ್ಷಕನನ್ನು ಓದುಗನನ್ನಾಗಿಸಿ, ಓದುಗನನ್ನು ಪ್ರೇಕ್ಷಕನನ್ನಾಗಿಸುವ ಕಠಿಣ ಕಾಯಕದ ಸುವರ್ಣ ಸೇತುವೆಯಾಗಿ ವಿಸ್ತಾರ ನ್ಯೂಸ್ ಕೆಲಸ ಮಾಡುತ್ತಿದೆ. ಸಾರಸ್ವತ ಲೋಕವನ್ನು ಟಿವಿ ಮಾಧ್ಯಮದಲ್ಲಿ ಒಳಗೊಳ್ಳುವ ಈ ಯತ್ನ ಸಫಲವಾಗಲಿ ಎಂದು ನಾಗತಿಹಳ್ಳಿ ಹಾರೈಸಿದರು.
ವಿಸ್ತಾರ ನ್ಯೂಸ್ ಟಿವಿ ವಾಹಿನಿಯ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಕಥಾಸ್ಪರ್ಧೆಯ ಆಶಯವನ್ನು ವಿವರಿಸಿದರು. ಸಾಹಿತ್ಯ, ಸಂಸ್ಕೃತಿ ಇವುಗಳಿಗೆ ಆಧುನಿಕ ಮಾಧ್ಯಮದಲ್ಲಿ ಮನ್ನಣೆ ದೊರೆಯುತ್ತಿಲ್ಲ ಎಂದು ಕೂಗು ಕೇಳಿಬರುತ್ತಿರುವುದರ ನಡುವೆಯೇ ನಾವು ಅವುಗಳಿಗೆ ಪ್ರಾಧಾನ್ಯ ನೀಡುವ, ಹಲವು ಅಭಿಪ್ರಾಯಗಳಿಗೆ ಧ್ವನಿಯಾಗುವ ಕಾಯಕವನ್ನು ಮಾಡುತ್ತಿದ್ದೇವೆ. ಮುದ್ರಣ ಹಾಗೂ ಡಿಜಿಟಲ್- ಟಿವಿ ಇವೆರಡರ ಹಿತವಾದ ಸಮ್ಮಿಶ್ರಣ ಮಾಡಿ ಓದುಗ- ನೋಡುಗರಿಗೆ ನೀಡಬೇಕು ಎಂಬ ಆಶಯದಿಂದ ನಾವು ಕಥಾಸ್ಪರ್ಧೆಯನ್ನು ನಡೆಸಿದ್ದೇವೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾದ ಕಥಾಸ್ಪರ್ಧೆಯ ಫಲಿತಾಂಶವು ಹಲವು ತಿಂಗಳ ಪರಿಶ್ರಮದ ಫಲವಾಗಿದೆ ಎಂದು ಅವರು ವಿವರಿಸಿದರು.
ಕಥೆ ಬರೆಯುವುದಕ್ಕಿಂತಲೂ ದೊಡ್ಡ ಸಮುದಾಯಕ್ಕೆ ಕತೆ ಹೇಳುವುದನ್ನು ಹೆಚ್ಚು ಇಷ್ಟಪಡುತ್ತೇನೆ. ಕಥೆಗಾರನಾಗುವುದರ ಜತೆಗೆ ಉತ್ತಮ ಮನುಷ್ಯನಾಗಿರಲೂ ಪ್ರಯತ್ನಿಸುತ್ತಿದ್ದೇನೆ ಎಂದು ಪ್ರಥಮ ಬಹುಮಾನಿತ ಕಥೆಗಾರ ಚಂದ್ರಶೇಖರ ಡಿ.ಆರ್ ನುಡಿದರು. ಕಥೆಗಳನ್ನು ಹಂಚಿಕೊಳ್ಳುವ ಮೂಲಕ ನಾವು ಇನ್ನಷ್ಟು ಕ್ರಿಯಾಶೀಲವಾಗುತ್ತೇವೆ. ಈ ಕ್ರಿಯಾಶೀಲತೆಗೆ ವಿಸ್ತಾರ ಸ್ಪರ್ಧೆ ಮತ್ತಷ್ಟು ಹುರುಪು ತುಂಬಿದೆ ಎಂದು ದ್ವಿತೀಯ ಬಹುಮಾನಿತ ದಾದಾಪೀರ್ ಜೈಮನ್ ನುಡಿದರು. ವಿಸ್ತಾರ ಸ್ಪರ್ಧೆಗೆ ಬಂದ ಸಾವಿರ ಕಥೆಗಳು ಸಾವಿರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಅಷ್ಟು ವೈವಿಧ್ಯಮಯವಾದ ಕಥಾಲೋಕ ಕನ್ನಡದಲ್ಲಿದೆ ಎಂದು ತೃತೀಯ ಬಹುಮಾನಿತ ಕಥೆಗಾರ್ತಿ ಪೂರ್ಣಿಮಾ ಮಾಳಗಿಮನಿ ನುಡಿದರು.
ಹೊಸ ಕತೆಗಾರರನ್ನು ಗುರುತಿಸುವಲ್ಲಿ ಕನ್ನಡ ಸಾಹಿತ್ಯಲೋಕ ಹಿಂದೆ ಬಿದ್ದಿಲ್ಲ. ಉತ್ತಮ ಸಾಹಿತ್ಯ ಪ್ರಕಟಿಸುವಾಗ ನಾವು ಹಣ ಖರ್ಚಾಗುತ್ತದೆಂದು ಹಿಂದುಳಿದಿಲ್ಲ. ಯುವ ಸಾಹಿತಿಗಳು ಬೆಳೆಯಬೇಕು ಎಂಬುದು ನಮ್ಮ ಆಶಯ ಎಂದು ಬಹುಮಾನ ಆಯೋಜಕರಲ್ಲಿ ಒಬ್ಬರಾದ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಮಾಲಿಕ ಬಸವರಾಜ ಕೊನೇಕ ಹೇಳಿದರು. ಬಹುಮಾನ ಪ್ರಾಯೋಜಕರುಗಳಾದ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಆರ್ ವೆಂಕಟೇಶ್, ವಿ2 ಹೋಲ್ಡಿಂಗ್ಸ್ ಹೌಸಿಂಗ್ ಡೆವಲಪ್‌ಮೆಂಟ್ ಪ್ರೈ. ಲಿ. ಎಂ.ಡಿ ಡಾ.ಪಿ.ಎಲ್ ವೆಂಕಟರಾಮ ರೆಡ್ಡಿ ಸ್ಪರ್ಧೆಯ ಯಶಸ್ಸಿಗೆ ಶುಭ ಹಾರೈಸಿದರು.
ಮೊದಲ ಬಹುಮಾನದ ಮೊತ್ತ ರೂ. 55,000, ಎರಡನೇ ಬಹುಮಾನ ರೂ. 25,000 ರೂ., ಮೂರನೇ ಬಹುಮಾನ 10,000 ರೂ. ಹಾಗೂ ತಲಾ 2,000 ರೂ. ಮೊತ್ತದ ಮೆಚ್ಚುಗೆ ಬಹುಮಾನಗಳನ್ನು 5 ಮಂದಿಗೆ ವಿತರಿಸಲಾಯಿತು. ಕವಿ, ವಿಮರ್ಶಕಿ ಲಲಿತಾ ಸಿದ್ದಬಸವಯ್ಯ, ಕಾದಂಬರಿಕಾರ ಹಾಗೂ ವಿಮರ್ಶಕ ಬಿ. ಜನಾರ್ದನ ಭಟ್ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ್ದರು. ಟಾಪ್ 25 ಪಟ್ಟಿಗೆ ಆಯ್ಕೆಯಾದ ಕತೆಗಾರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಚೇರ್‌ಮನ್ ಎಚ್.ವಿ. ಧರ್ಮೇಶ್, ವಿಸ್ತಾರ ಟಿವಿಯ ಎಕ್ಸಿಕ್ಯೂಟಿವ್ ಎಡಿಟರ್ ಶರತ್ ಎಂ.ಎಸ್, ವಿಸ್ತಾರ ನ್ಯೂಸ್‌ನ ನಿರ್ದೇಶಕ (ಬ್ಯುಸಿನೆಸ್) ವಿನಯ್ ಶೇಷಗಿರಿ, ಸಿಒಒ ಪರಶುರಾಮ್, ವಿಸ್ತಾರ ನ್ಯೂಸ್ ಡಿಜಿಟಲ್ ವಿಭಾಗದ ಸಂಪಾದಕ ರಮೇಶ್ ಕುಮಾರ್ ನಾಯಕ್, ಸ್ಪೆಷಲ್ ಆಪರೇಷನ್ ಎಡಿಟರ್ ಕಿರಣ್ ಕುಮಾರ್ ಡಿ.ಕೆ, ವಿಸ್ತಾರ ಮನರಂಜನಾ ವಾಹಿನಿ ಕಂಟೆಂಟ್ ಹೆಡ್ ಕುಸುಮಾ ಆಯರಹಳ್ಳಿ ಉಪಸ್ಥಿತರಿದ್ದರು. ಎ.ಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಕಥಾಸ್ಪರ್ಧೆ ಬಹುಮಾನಿತರು:
ಪ್ರಥಮ: ಸೋಮನ ಕುಣಿತ- ಚಂದ್ರಶೇಖರ ಡಿ.ಆರ್
ದ್ವಿತೀಯ: ಅಂತಃಕಾರಣದ ಟಿಪ್ಪಣಿಗಳು- ದಾದಾಪೀರ್ ಜೈಮನ್
ತೃತೀಯ: ಅದು ಅವರ ಪ್ರಾಬ್ಲಮ್- ಪೂರ್ಣಿಮಾ ಮಾಳಗಿಮನಿ
ಮೆಚ್ಚುಗೆ: ಹುಣಿಸೆ ಹೂವು- ದೀಪದ ಮಲ್ಲಿ
ಮೆಚ್ಚುಗೆ: ಪಿಂಕ್ ಟ್ರಂಪೆಟ್- ಚೈತ್ರಿಕಾ ಹೆಗಡೆ
ಮೆಚ್ಚುಗೆ: ಪರವೇಶ್ಮಸ್ಥನ ಫಿಕ್ಹ್ ಪ್ರಸಂಗ- ಬಿ.ಎಂ ಹನೀಫ್
ಮೆಚ್ಚುಗೆ: ಕಿತ್ತಳೆ ಚಿಟ್ಟೆ- ಮಂಜುನಾಯಕ್ ಚೆಳ್ಳೂರು
ಮೆಚ್ಚುಗೆ: ನೆಲೆ- ದೀಪಾ ಹಿರೇಗುತ್ತಿ
ಕರ್ನಾಟಕ
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
Tumkur News: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಎಚ್. ಬಸವನಹಳ್ಳಿಯಲ್ಲಿ ನಡೆದ ಹೆಜ್ಜೇನು ದಾಳಿಯಲ್ಲಿ 9 ಮಂದಿಗೆ ಗಾಯಗಳಾಗಿವೆ.
ತುಮಕೂರು: ಹೊಲದಲ್ಲಿ ಕೆಲಸ ಮಾಡುವಾಗ ಹೆಜ್ಜೇನು ದಾಳಿ ಮಾಡಿದ್ದರಿಂದ ಮೂವರು ಮಕ್ಕಳು ಸೇರಿ ಒಟ್ಟು 9 ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ (Tumkur News) ಮಧುಗಿರಿ ತಾಲೂಕಿನ ಎಚ್. ಬಸವನಹಳ್ಳಿಯಲ್ಲಿ ನಡೆದಿದೆ. ಹೊಲದಲ್ಲಿ ಕೆಲಸ ಮಾಡುವಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಹೀಗಾಗಿ ಗಾಬರಿಗೊಂಡು ದಿಕ್ಕಾಪಾಲಾಗಿ ಜನರು ಓಡಿದ್ದಾರೆ. ಆದರೂ ಜೇನು ನೊಣಗಳು ಬೆನ್ನತ್ತಿ ಕಚ್ಚಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ
ಬೆಂಗಳೂರು: ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಗೌರಿಬಿದನೂರು ಮೂಲದ ನಗರಗೆರೆಯ ರಾಮಕೃಷ್ಣ (19) ಮೃತ ಯುವಕ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೈಕಾಲು ಕಟ್ಟಿ ವೃದ್ಧೆಯ ಬರ್ಬರ ಹತ್ಯೆ
ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕೈಕಾಲು ಕಟ್ಟಿ ವೃದ್ಧೆಯ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕಮಲಮ್ಮ (80) ಕೊಲೆಯಾದವರು. ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದು, ವೃದ್ಧೆಯ ಬಳಿಯಿದ್ದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳನ್ನು ಕಸಿದು ಪರಾರಿಯಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Drowned in Pond: ಸೆಕೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು
ಮೃತ ಕಮಲಮ್ಮಗೆ ಮೂವರು ಮಕ್ಕಳು ಇದ್ದು, ಅವರು ಒಂಟಿಯಾಗಿ ವಾಸವಿದ್ದರು. ಮೂವರು ಮಕ್ಕಳು ಬೇರೆ ಬೇರೆ ಕಡೆ ವಾಸವಿದ್ದು, ಆರು ತಿಂಗಳ ಹಿಂದೆಯಷ್ಟೇ ಪತಿ ನಾಗರಾಜ್ ಮೃತಪಟ್ಟಿದ್ದರು. ನಂತರ ಒಂಟಿಯಾಗಿ ಕಮಲಮ್ಮ ವಾಸವಿದ್ದರು. ಹಂತಕರ ಸುಳಿವು ಪತ್ತೆಗೆ ಶ್ವಾನದಳ, ಎಫ್‌ಎಸ್ಎಲ್ ತಂಟ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಕರ್ನಾಟಕ
Adichunchanagiri Mutt: ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆದ ಯುಪಿಎಸ್‌ಸಿ ಸಾಧಕರು
Adichunchanagiri Mutt: ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಆಕಾಶ್ ಎ.ಎಲ್, ಚೆಲುವರಾಜು. ಆರ್, ಬಿ.ಎಸ್. ಧನುಷ್ ಕುಮಾರ್ ಹಾಗೂ ಡಾ.ವರುಣ್ ಕೆ.ಗೌಡ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದರು.
ಬೆಂಗಳೂರು: ಆದಿಚುಂಚನಗಿರಿ ಮಠಕ್ಕೆ (Adichunchanagiri Mutt) ಯುಪಿಎಸ್‌ಸಿ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಆಕಾಶ್ ಎ.ಎಲ್, ಚೆಲುವರಾಜು. ಆರ್, ಬಿ.ಎಸ್. ಧನುಷ್ ಕುಮಾರ್ ಹಾಗೂ ಡಾ.ವರುಣ್ ಕೆ.ಗೌಡ ಭೇಟಿ ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ರಾಜ್ಯದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ತೇರ್ಗಡೆಯಾಗಿ ಉತ್ತಮ ರ‍್ಯಾಂಕ್ ಪಡೆದಿದ್ದಾರೆ. ಹೀಗಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಅಭ್ಯರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರೀ ನಿರ್ಮಲಾನಂದನಾಥ ಶ್ರೀಗಳು, ನಾಗರಿಕ ಸೇವೆ ಮೂಲಕ ಉನ್ನತ ಸ್ಥಾನಕ್ಕೇರಬೇಕು ಎಂದು ಮಠಕ್ಕೆ ಆಗಮಿಸಿದ್ದ ನಾಲ್ವರು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಈ ವೇಳೆ ಮುಖಂಡ ನಂಜೇಗೌಡ ನಂಜುಂಡ ಹಾಗೂ ಮಠದ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ | UPSC Prelims 2023: ಮೇ 28ರಂದು ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದಲೇ ಮೆಟ್ರೋ ಸಂಚಾರ ಆರಂಭ
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹಾಸನ ಜಿಲ್ಲೆ ಅರಸೀಕೆರೆಯ ಬಿ.ಎಸ್.ಧನುಷ್ ಕುಮಾರ್ 501 ರ‍್ಯಾಂಕ್, ಬೆಂಗಳೂರಿನ ರಾಜ್ ಕುಮಾರ್ ಅಕಾಡೆಮಿಯ ಅಭ್ಯರ್ಥಿಗಳಾದ ಆಕಾಶ್ ಎ.ಎಲ್. 210, ಚೆಲುವರಾಜು. ಆರ್ 238, ಡಾ.ವರುಣ್ ಕೆ.ಗೌಡ 594 ರ‍್ಯಾಂಕ್ ಪಡೆದಿದ್ದಾರೆ.
ಕರ್ನಾಟಕ
Praveen Nettaru: ಆಕ್ರೋಶದ ಬೆನ್ನಲ್ಲೇ ಔದಾರ್ಯ ಮೆರೆದ ಸಿದ್ದರಾಮಯ್ಯ; ನೆಟ್ಟಾರು ಪತ್ನಿ ಮರುನೇಮಕಕ್ಕೆ ನಿರ್ಧಾರ
Praveen Nettaru: ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಯನ್ನು ಗ್ರೂಪ್ ಸಿ ಹುದ್ದೆಗೆ ರಾಜ್ಯ ಸರ್ಕಾರ ಮರು ನೇಮಕ ಮಾಡಿದೆ.
ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯನ್ನು (Praveen Nettaru) ಗ್ರೂಪ್ ಸಿ ಹುದ್ದೆಗೆ ಮರುನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಬೊಮ್ಮಾಯಿ ಸರ್ಕಾರದಲ್ಲಿ ನೇಮಕ ಮಾಡಿದ್ದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದಕ್ಕೆ ಬಿಜೆಪಿ ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ರಾಜ್ಯ ಸರ್ಕಾರ ಮರು ನೇಮಕ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಆದರೂ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ.
— Siddaramaiah (@siddaramaiah) May 27, 2023
ಇದನ್ನು… pic.twitter.com/Y3hz7EVTVi
ಇದನ್ನೂ ಓದಿ | Karnataka Cabinet: ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯಿತು ಮೂಲ-ವಲಸಿಗ ಜಗಳ: ಸಿಎಂ ವಿರುದ್ಧ ಹರಿಪ್ರಸಾದ್ ಪ್ರಹಾರ
ಬೊಮ್ಮಾಯಿ ಸರ್ಕಾರದಲ್ಲಿ ಗ್ರೂಪ್ ಸಿ ಹುದ್ದೆ
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಮಾನವೀಯ ದೃಷ್ಟಿಯಿಂದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಗೆ ಬೊಮ್ಮಾಯಿ ಸರ್ಕಾರವು ತಾತ್ಕಾಲಿಕ ನೆಲೆಯ ನೇಮಕಾತಿ ಮಾಡಿತ್ತು. ಮೊದಲಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಉದ್ಯೋಗ ನೀಡಲಾಗಿತ್ತು. ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ, 30,350 ರೂ. ವೇತನ ನಿಗದಿಪಡಿಸಲಾಗಿತ್ತು. ನಂತರ ನೂತನ ಕುಮಾರಿ ಅಪೇಕ್ಷೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ಕೆಲಸ ಮಾಡಲು ಅನುಮತಿ ನೀಡಲಾಗಿತ್ತು.
ಈ ಹುದ್ದೆಯ ಅವಧಿಯು ಈ ಹಿಂದಿನ ಮುಖ್ಯಮಂತ್ರಿಗಳ ಪದಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿತ್ತು. ಈಗ ಹೊಸ ಸರ್ಕಾರ ರಚನೆಯಾಗಿರುವುದರಿಂದ ಕೆಲಸದ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಪ್ರವೀಣ್ ನೆಟ್ಟಾರು (Praveen Nettaru) ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು.
2022ರ ಸೆ. 22ರಂದು ಗುತ್ತಿಗೆ ಆಧಾರದಲ್ಲಿ ಗ್ರೂಪ್ ಸಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಹೊಸ ಸರ್ಕಾರ ಬಂದ ಕೂಡಲೇ ನೆಟ್ಟಾರ್ ಪತ್ನಿಯನ್ನು ಕೆಲಸದಿಂದ ವಜಾ ಮಾಡಿದ್ದರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಈಗ, ನೂತನ ಕುಮಾರಿ ಮರು ನೇಮಕಕ್ಕೆ ನಿರ್ಧರಿಸಿದೆ.
-
ಸುವಚನ19 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ10 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ13 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ10 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕ್ರಿಕೆಟ್24 hours ago
IPL 2023: ಟೈಟನ್ಸ್ ರನ್ ಮಳೆಗೆ ಮುಳುಗಿದ ಮುಂಬೈ; ಫೈನಲ್ಗೆ ಹಾರ್ದಿಕ್ ಪಡೆ
-
ಕಿರುತೆರೆ9 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ5 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕಿರುತೆರೆ11 hours ago
Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರು!