Karnataka election 2023 Release of revised final voter list 23 thousand new people have been added to the list the total number of voters in the district is 10 92 lakh Karnataka election: ಪರಿಷ್ಕೃತ ಮತದಾರರ ಪಟ್ಟಿ; ವಿಜಯನಗರ ಜಿಲ್ಲೆಯಲ್ಲಿ 10.92 ಲಕ್ಷ ವೋಟರ್ಸ್ - Vistara News

ಕರ್ನಾಟಕ

Karnataka election: ಪರಿಷ್ಕೃತ ಮತದಾರರ ಪಟ್ಟಿ; ವಿಜಯನಗರ ಜಿಲ್ಲೆಯಲ್ಲಿ 10.92 ಲಕ್ಷ ವೋಟರ್ಸ್

Assembly Election: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂತನವಾಗಿ 23,098 ಜನ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗಿದ್ದು, ಅಂತಿಮ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 10,92,011 ಜನ ಮತದಾರರು ನೋಂದಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ. ತಿಳಿಸಿದ್ದಾರೆ.

VISTARANEWS.COM


on

Karnataka election 2023 Release of revised final voter list 23 thousand new people have been added to the list the total number of voters in the district is 10 92 lakh
ವಿಜಯನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ. ಅವರ ಭಾವಚಿತ್ರ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸಪೇಟೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ (Karnataka election 2023) ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂತನವಾಗಿ 23,098 ಜನ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗಿದ್ದು, ಅಂತಿಮ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 10,92,011 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ. ಮಾಹಿತಿ ನೀಡಿದ್ದಾರೆ.

ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ಜ.5 ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ನಂತರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶವನ್ನು ಸಹ ಚುನಾವಣಾ ಆಯೋಗ ಕಲ್ಪಿಸಲಾಗಿತ್ತು. ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಶೇ. 2.13ರಷ್ಟು ನೋಂದಣಿ ಹೆಚ್ಚಳವಾಗಿದೆ.

ಪುರುಷ ಮತದಾರರೇ ಮೇಲುಗೈ

ವಿಜಯನಗರ ಜಿಲ್ಲೆಯ ಒಟ್ಟು ಮತದಾರರಲ್ಲಿ ಪುರುಷ ಮತದಾರರೇ ಪಾರಮ್ಯ ಮೆರೆದಿದ್ದು, ಒಟ್ಟು 10,92,011 ಜನ ಮತದಾರರಲ್ಲಿ 5,46,255 ಜನ ಪುರುಷರು, 5,45,610 ಜನ ಮಹಿಳೆಯರು ಹಾಗೂ 146 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.

ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರವಾರು ಒಟ್ಟು ಮತದಾರರ ಅಂಕಿ ಅಂಶ ಈ ರೀತಿ ಇದೆ.

88-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,91,270 ಜನ ಮತದಾರರಿದ್ದು, 96,692 ಜನ ಪುರುಷರು, 94624 ಜನ ಮಹಿಳೆಯರು ಹಾಗೂ 14 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.

89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,29,987 ಜನ ಮತದಾರರಿದ್ದು, 1,14,630 ಜನ ಪುರುಷರು, 1,15,335 ಜನ ಮಹಿಳೆಯರು ಹಾಗೂ 22 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.

90-ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,49,956 ಜನ ಮತದಾರರಿದ್ದು, 1,21,626 ಜನ ಪುರುಷರು, 1,28,253 ಜನ ಮಹಿಳೆಯರು ಹಾಗೂ 77 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.

96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,03,753 ಜನ ಮತದಾರರಿದ್ದು, 1,03,387 ಜನ ಪುರುಷರು, 1,00,352 ಜನ ಮಹಿಳೆಯರು ಹಾಗೂ 14 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.

104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,17,045 ಜನ ಮತದಾರರಿದ್ದು, 1,09,980 ಜನ ಪುರುಷರು, 1,07,046 ಜನ ಮಹಿಳೆಯರು ಹಾಗೂ 19 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.

ಇದನ್ನೂ ಓದಿ: Karnataka Election : ಪ್ರಚಾರ ಕಣಕ್ಕೆ ಎಂಟ್ರಿ ಕೊಡಲಿದ್ದಾರೆ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ; ಯಾರ ಪರ ಪ್ರಚಾರ?

ಜಿಲ್ಲೆಯಲ್ಲಿ ಒಟ್ಟು 16,188 ಜನ ಅಂಗವಿಕಲ ಮತದಾರರು

ವಿಜಯನಗರ ಜಿಲ್ಲೆಯ ಒಟ್ಟು ಮತದಾರರಲ್ಲಿ 16,188 ಜನ ಅಂಗವಿಕಲ ಮತದಾರರಿದ್ದಾರೆ. ಇದರಲ್ಲಿ 8984 ಜನ ಪುರುಷರು, 7199 ಜನ ಮಹಿಳೆಯರು ಹಾಗೂ 5 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.

ಕ್ಷೇತ್ರವಾರು ಅಂಗವಿಕಲ ಮತದಾರರ ವಿವಿರ ಈ ರೀತಿ ಇದೆ.

88-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3598 ಜನ ಅಂಗವಿಕಲ ಮತದಾರರಿದ್ದು, 2075 ಜನ ಪುರುಷರು, 1523 ಜನ ಮಹಿಳಾ ಮತದಾರರಿದ್ದಾರೆ.

89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4218 ಜನ ಅಂಗವಿಕಲ ಮತದಾರರಿದ್ದು, 2327 ಜನ ಪುರುಷರು, 1891 ಜನ ಮಹಿಳಾ ಮತದಾರರಿದ್ದಾರೆ.

90-ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3066 ಜನ ಅಂಗವಿಕಲ ಮತದಾರರಿದ್ದು, 1539 ಜನ ಪುರುಷರು, 1523 ಜನ ಮಹಿಳೆಯರು ಹಾಗೂ 4 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.

96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2970 ಜನ ಅಂಗವಿಕಲ ಮತದಾರರಿದ್ದು, 1727 ಜನ ಪುರುಷರು, 1243 ಜನ ಮಹಿಳಾ ಮತದಾರರಿದ್ದಾರೆ.

104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2336 ಜನ ಅಂಗವಿಕಲ ಮತದಾರರಿದ್ದು, 1316 ಜನ ಪುರುಷರು, 1019 ಜನ ಮಹಿಳೆಯರು ಹಾಗೂ ಒಬ್ಬ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.

9,793 ಜನ ಯುವ ಮತದಾರರ ನೋಂದಣಿ

5 ವಿಧಾನಸಭಾ ಕ್ಷೇತ್ರಗಳಲ್ಲಿ ಯುವಮತದಾರರ ನೋಂದಣಿ ಸಹ ಹೆಚ್ಚಳವಾಗಿದೆ. ಜ.5 ರ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 21,280 ಜನ ಯುವ ಮತದಾರರಿದ್ದು, ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 31,073 ಜನ ಯುವಮತದಾರರಿದ್ದಾರೆ. ನೂತನವಾಗಿ 9,793 ಜನ ಯುವಜನರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿದ್ದಾರೆ. ಇದರಲ್ಲಿ 17,055 ಜನ ಯುವಕರು, 14,016 ಜನ ಯುವತಿಯರು ಹಾಗೂ ಇಬ್ಬರು ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.

ಕ್ಷೇತ್ರವಾರು ಯುವ ಮತದಾರರ ವಿವರ

88-ಹೂವಿನಹಡಗಲಿ: 4876 ಯುವ ಮತದಾರರಿದ್ದು, 2733 ಜನ ಯುವಕರು, 2143 ಜನ ಯುವತಿಯರು.
89-ಹಗರಿಬೊಮ್ಮನಹಳ್ಳಿ: 7334 ಯುವ ಮತದಾರರು, 4126 ಯುವಕರು, 3207 ಯುವತಿಯರು ಹಾಗೂ ಒಬ್ಬ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
90-ವಿಜಯನಗರ: 6216 ಜನ ಯುವ ಮತದಾರರಿದ್ದು, 3372 ಜನ ಯುವಕರು, 2844 ಜನ ಯುವತಿಯರಿದ್ದಾರೆ.
96-ಕೂಡ್ಲಿಗಿ: 6308 ಯುವ ಮತದಾರರು, 3402 ಯುವಕರು, 2905 ಯುವತಿಯರು, ಒಬ್ಬ ಲಿಂಗತ್ವ ಅಲ್ಪಸಂಖ್ಯಾತ.
104-ಹರಪನಹಳ್ಳಿ: 6339 ಜನ ಯುವ ಮತದಾರರಿದ್ದು, 3422 ಜನ ಯುವಕರು, 2917 ಜನ ಯುವತಿಯರಿದ್ದಾರೆ.

ಇದನ್ನೂ ಓದಿ: Password protected emails : ಬೇರೆಯವರು ಇ-ಮೇಲ್‌ ಓದದಂತೆ ತಡೆಯಲು ಬಂದಿದೆ ಜಿಮೇಲ್‌ ಪಾಸ್‌ವರ್ಡ್‌ ಸೌಲಭ್ಯ

ಜಿಲ್ಲೆಯಲ್ಲಿ 17,701 ಜನ 80 ವರ್ಷ ಮೇಲ್ಪಟ್ಟ ಮತದಾರರು

ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 17,701 ಜನ 80 ವರ್ಷ ಮೇಲ್ಪಟ್ಟ ಮತದಾರರಿದ್ದು, ಇದರಲ್ಲಿ 186 ಜನ 100 ಶತಾಯುಷಿ ಮತದಾರರಿದ್ದಾರೆ.

80-99 ವರ್ಷದ ಕ್ಷೇತ್ರವಾರು ಮತದಾರರ ವಿವರ
ಹೂವಿನಹಡಗಲಿ: 3158, ಹಗರಿಬೊಮ್ಮನಹಳ್ಳಿ: 2862, ವಿಜಯನಗರ: 4744, ಕೂಡ್ಲಿಗಿ: 3239, ಹರಪನಹಳ್ಳಿ: 3512

ಕ್ಷೇತ್ರವಾರು ಶತಾಯುಷಿ ಮತದಾರರ ವಿವರ (ಒಟ್ಟು 186 ಜನ)

88-ಹಡಗಲಿ 20, 89-ಹಗರಿಬೊಮ್ಮನಹಳ್ಳಿ 30, 90-ವಿಜಯನಗರ 77, 96-ಕೂಡ್ಲಿಗಿ 24, 104-ಹರಪನಹಳ್ಳಿ 35.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Darshan Arrested: ಕೊಲೆ ಬಳಿಕ ಮೈಸೂರಲ್ಲಿ ಕೂತು ಕೇಸ್‌ ಮುಚ್ಚಿಹಾಕಲು ದರ್ಶನ್‌ ಯತ್ನ; ಇಂದು ಸ್ಥಳ ಮಹಜರು!

Darshan Arrested: ಡೆವಿಲ್‌ ಸಿನಿಮಾದ ಚಿತ್ರೀಕರಣದ ಹಿನ್ನೆಲೆಯಲ್ಲಿ ದರ್ಶನ್‌ ಮೈಸೂರಿನಲ್ಲಿಯೇ ಬೀಡುಬಿಟ್ಟಿದ್ದರು. ರೇಣುಕಾಸ್ವಾಮಿ ಕೊಲೆಯ ಬಳಿಕವೂ ಮೈಸೂರಿಗೆ ತೆರಳಿದ ದರ್ಶನ್‌, ಅಲ್ಲಿಂದಲೇ ಗಣ್ಯರು ಹಾಗೂ ಆಪ್ತರಿಗೆ ಕರೆ ಮಾಡಿ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ, ಪೊಲೀಸರು ದರ್ಶನ್‌ ಸೇರಿ ಹಲವು ಆರೋಪಿಗಳನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Darshan Arrested
Koo

ಮೈಸೂರು: ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣಕ್ಕೆ ಸಂಬಂಧಿಸಿಂದತೆ ಬಗೆದಷ್ಟೂ ಮಾಹಿತಿ ಬಹಿರಂಗವಾಗುತ್ತಿದೆ. ದರ್ಶನ್‌ ಹಾಗೂ ಗ್ಯಾಂಗ್‌ನನ್ನು ಮತ್ತೆ 5 ದಿನ ಕಸ್ಟಡಿಗೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಭಾನುವಾರ ಮೈಸೂರಿನಲ್ಲಿ (Mysore) ಸ್ಥಳ ಮಹಜರು ನಡೆಸಲಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಬಳಿಕ ಮೈಸೂರಿಗೆ ತೆರಳಿದ ನಟ ದರ್ಶನ್‌ (Actor Darshan) ಅಲ್ಲಿಂದಲೇ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಕುರಿತು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಡೆವಿಲ್‌ ಸಿನಿಮಾದ ಚಿತ್ರೀಕರಣದ ಹಿನ್ನೆಲೆಯಲ್ಲಿ ದರ್ಶನ್‌ ಮೈಸೂರಿನಲ್ಲಿಯೇ ಬೀಡುಬಿಟ್ಟಿದ್ದರು. ರೇಣುಕಾಸ್ವಾಮಿ ಕೊಲೆಯ ಬಳಿಕವೂ ಮೈಸೂರಿಗೆ ತೆರಳಿದ ದರ್ಶನ್‌, ಅಲ್ಲಿಂದಲೇ ಗಣ್ಯರು ಹಾಗೂ ಆಪ್ತರಿಗೆ ಕರೆ ಮಾಡಿ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ನಟ, ಜಿಮ್‌ನಲ್ಲಿ ವರ್ಕೌಟ್‌ ಮಾಡುವ ಮೂಲಕ ಏನೂ ನಡೆದೇ ಇಲ್ಲ ಎಂಬಂತೆ ತೋರಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಇದೆಲ್ಲದರ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ.

Actor Darshan ACP Chandan Kumar work salute by people

ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ರ‍್ಯಾಡಿಷನ್‌ ಹೋಟೆಲ್‌, ಕುವೆಂಪು ನಗರದ ಗೋಲ್ಡ್‌ ಜಿಮ್‌ ಸೇರಿದಂತೆ ಪೊಲೀಸರು ಹಲವು ಸ್ಥಳಗಳನ್ನು ಮಹಜರು ಮಾಡಲಿದ್ದಾರೆ. ನಟ ದರ್ಶನ್‌ ಸೇರಿ ಹಲವು ಆರೋಪಿಗಳನ್ನು ಕರೆದುಕೊಂಡು ಹೋಗಿ ಮಹಜರು ಮಾಡಲಿದ್ದಾರೆ. ಮೈಸೂರಿನಲ್ಲಿ ದರ್ಶನ್‌ ಯಾರಿಗೆ ಕರೆ ಮಾಡಿದ್ದರು? ಯಾರ ಮೂಲಕ ಪ್ರಭಾವ ಬೀರಲು ಪ್ರಯತ್ನಿಸಿದರು ಎಂಬುದು ಸೇರಿ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆಯ ಟೀಮ್‌ಗೆ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಸೇರ್ಪಡೆ

ಆರೋಪಿ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಂಡು, ಬೆಂಗಳೂರಿಗೆ ಕರೆತಂದಿದ್ದ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಅವರು ಮತ್ತೆ ತನಿಖಾ ತಂಡವನ್ನು ಸೇರಿಕೊಂಡಿದ್ದು, ತನಿಖೆಗೆ ಬಲ ಬಂದಂತಾಗಿದೆ. ಎಸಿಪಿ ಚಂದನ್‌ ಹಾಗೂ ಗಿರೀಶ್‌ ನಾಯ್ಕ್‌ ಅವರು ದರ್ಶನ್‌ನನ್ನು ಮೈಸೂರಿನಿಂದ ಕರೆತಂದಿದ್ದರು. ಆರಂಭದಲ್ಲಿ ಗಿರೀಶ್‌ ನಾಯ್ಕ್‌ ಅವರೇ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಚುನಾವಣೆ ನಿಮಿತ್ತ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು. ಬಳಿಕ ಮತ್ತೆ ಸಿ.ಕೆ.ಅಚ್ಚುಕಟ್ಟು ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು.

ಇದನ್ನೂ ಓದಿ: Actor Darshan: ದರ್ಶನ್‌ ಬಂಧಿಸಿದ ಎಸಿಪಿ ಚಂದನ್ ಕುಮಾರ್‌ ಕೆಲಸಕ್ಕೆ ಸೆಲ್ಯೂಟ್‌ ಎಂದ ಗ್ರಾಮಸ್ಥರು!

Continue Reading

ಕರ್ನಾಟಕ

Kalaburagi News: ಕಲಬುರಗಿಯಲ್ಲಿ ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರ ಸಾವು; ಮತ್ತೊಬ್ಬನ ಸ್ಥಿತಿ ಗಂಭೀರ

Kalaburagi News: ನೆಲಗೋಗಿ ಕ್ರಾಸ್‌ ಬಳಿ ಲಾರಿ ಹಾಗೂ ಕಾರು ವೇಗವಾಗಿ ಚಲಿಸುತ್ತಿದ್ದವು. ಇದೇ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಲಾರಿಗೆ ಕಾರು ಹಿಂಬದಿಯಿಂದ ಜೋರಾಗಿ ಡಿಕ್ಕಿಯೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ನೆಲೋಗಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

VISTARANEWS.COM


on

Kalaburagi News
Koo

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್‌ ಬಳಿ ಭೀಕರ ಅಪಘಾತ (Kalaburagi News) ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಂತಯ್ಯ ಸ್ವಾಮಿ (35) ಹಾಗೂ ಲೋಕೇಶ್‌ (36) ಮೃತರು. ವೇಗವಾಗಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಗುದ್ದಿದ ಕಾರಣ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನೆಲಗೋಗಿ ಕ್ರಾಸ್‌ ಬಳಿ ಲಾರಿ ಹಾಗೂ ಕಾರು ವೇಗವಾಗಿ ಚಲಿಸುತ್ತಿದ್ದವು. ಇದೇ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಲಾರಿಗೆ ಕಾರು ಹಿಂಬದಿಯಿಂದ ಜೋರಾಗಿ ಡಿಕ್ಕಿಯೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ನೆಲೋಗಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Road Accident

ಶನಿವಾರ (ಜೂನ್‌ 15) ಬೆಳಗ್ಗೆ ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಹಾದು ಹೋಗುವ NH 4 ರಲ್ಲಿ ಭೀಕರ ಅಪಘಾತ ನಡೆದಿತ್ತು. ನ್ಯಾಷನಲ್​ ಹೈವೇನಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಹಿಂಬದಿಂದ ಲಾರಿಯೊಂದು ರಭಸದಿಂದ ಗುದ್ದಿದ ಪರಿಣಾಮ ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು. ಭರಮಸಾಗರ ಹೋಬಳಿಯ ಚಿಕ್ಕಬೆನ್ನೂರು ಗ್ರಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಲಾರಿ ಮತ್ತು ಕಾರು ಚಿತ್ರದುರ್ಗ ಕಡೆಯಿಂದ ದಾವಣಗೆರೆ ಕಡೆಗೆ ಹೊರಟಿದ್ದವು. ಈ ವೇಳೆ ಅತಿ ವೇಗದಲ್ಲಿ ಬಂದ ಲಾರಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾರಿನಲ್ಲಿದ್ದವರು ಒಂದೇ ಕುಟುಂಬಕ್ಕೆ ಸೇರಿದವರು ಇರಬೇಕು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಶನಿವಾರವಾಗಿದ್ದ ಕಾರಣ ಮುಂಜಾನೆ ತಮ್ಮ ಪ್ರಯಾಣ ಆರಂಭಿಸಿರಬಹುದು ಎಂದು ಹೇಳಲಾಗಿದೆ. ನಿಗದಿತ ಕಾರ್ಯಕ್ರಮವನ್ನು ಉದ್ದೇಶವಾಗಿಟ್ಟುಕೊಂಟು ಅವರು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅದರೆ ಯಮಧರ್ಮರಾಯನಂತೆ ನುಗ್ಗಿದ ಲಾರಿಯು ಹಿಂಬದಿಂದ ಜೋರಾಗಿ ಗುದ್ದಿದೆ. ದೊಡ್ಡ ಲಾರಿಯು ಗುದ್ದಿದ ರಭಸಕ್ಕೆ ಕಾರಿನ ಹಿಂಭಾಗದಲ್ಲಿ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಈ ವೇಳೆ ಹಿಂಬದಿ ಸೀಟಿನಲ್ಲಿದ್ದ ಮಕ್ಕಳು ಹಾಗೂ ಮಹಿಳೆಯರಿಬ್ಬರು ಅಲ್ಲೇ ಮೃತಪಟ್ಟಿದ್ದಾರೆ. ಮುಂಬದಿ ಸೀಟು ಹಾಗೂ ಮಧ್ಯದಲ್ಲ ಕುಳಿತಿದ್ದವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಇದನ್ನೂ ಓದಿ: Road Accident: ಬೆಂಗಳೂರು-ಮೈಸೂರು‌ ಎಕ್ಸ್‌ಪ್ರೆಸ್‌ ವೇಯಲ್ಲಿ ಸರಣಿ ಅಪಘಾತ; ಐದು ಕಾರುಗಳು ಜಖಂ

Continue Reading

ಕರ್ನಾಟಕ

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್;‌ ಮೊಬೈಲ್‌ ಪಾಸ್‌ವರ್ಡ್‌ ನೀಡಲು ದರ್ಶನ್‌ & ಗ್ಯಾಂಗ್‌ ತಕರಾರು!

Actor Darshan: ದರ್ಶನ್‌ & ಗ್ಯಾಂಗ್‌ನಿಂದ ಪೊಲೀಸರು ಇದುವರೆಗೆ 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಡೇಟಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನು ಕೆಲವು ಮೊಬೈಲ್‌ಗಳಲ್ಲಿದ್ದ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಇನ್ನೂ ಕೆಲವು ಮೊಬೈಲ್‌ಗಳ ಪಾಸ್‌ವರ್ಡ್‌ ನೀಡುತ್ತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

VISTARANEWS.COM


on

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿರುವ ನಟ ದರ್ಶನ್‌ (Actor Darshan) ಹಾಗೂ ಆತನ ಗ್ಯಾಂಗ್‌ನ ಹಲವು ಆರೋಪಿಗಳನ್ನು ನ್ಯಾಯಾಲಯವು ಮತ್ತೆ ಐದು ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ (Police Custody) ನೀಡಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಮೊಬೈಲ್‌ ಪಾಸ್‌ವರ್ಡ್‌ (Mobile Password) ನೀಡಲು ದರ್ಶನ್‌ ಮತ್ತು ಆತನ ಗ್ಯಾಂಗ್‌ ನಿರಾಕರಿಸುತ್ತಿದೆ. ಇದರಿಂದ ಪೊಲೀಸರ ತನಿಖೆಗೆ ಅಡಚಣೆಯಾಗುತ್ತಿದೆ ಎಂದು ತಿಳಿದುಬಂದಿದೆ.

ದರ್ಶನ್‌ & ಗ್ಯಾಂಗ್‌ನಿಂದ ಪೊಲೀಸರು ಇದುವರೆಗೆ 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಡೇಟಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನು ಕೆಲವು ಮೊಬೈಲ್‌ಗಳಲ್ಲಿದ್ದ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಇನ್ನೂ ಕೆಲವು ಮೊಬೈಲ್‌ಗಳ ಪಾಸ್‌ವರ್ಡ್‌ ನೀಡುತ್ತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇಷ್ಟಾದರೂ ಪಟ್ಟು ಬಿಡದ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Actor Darshan

ಪ್ರಶ್ನೆಗಳ ಸುರಿಮಳೆ

ಶರಣಾಗಿರುವ ಆರೋಪಿಗಳನ್ನು ಡ್ರಿಲ್‌ ಮಾಡುತ್ತಿರುವ ಪೊಲೀಸರು, ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಪ್ರಕರಣದ ಸಂಬಂಧ ನೀವೇನಾದರೂ ಹಣ ಪಡೆದಿದ್ರಾ? ನಿಮ್ಮನ್ನು ಸಂಪರ್ಕಿಸಿದವರು ಯಾರು? ಯಾರ ಮಾತನ್ನು ನೀವು ಕೇಳಿ ನೀವು ಪ್ರಕರಣದಲ್ಲಿ ಭಾಗಿಯಾದಿರಿ? ದರ್ಶನ ಜತೆ ನೀವೇನಾದರೂ ನೇರವಾಗಿ ಸಂಪರ್ಕದಲ್ಲಿ ಇದ್ರಾ? ಆರೋಪಿ ರಘು ನಿಮ್ಮನ್ನು ಭೇಟಿಯಾಗಿ ಹೇಳಿದ್ದೇನು? ಶೆಡ್‌ ಒಳಗೆ ಯಾರೆಲ್ಲ ಹೋದರು? ನೀವೂ ಹೋಗಿದ್ರಾ ಎಂಬುದು ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆಯ ಟೀಮ್‌ಗೆ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಸೇರ್ಪಡೆ

ಆರೋಪಿ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಂಡು, ಬೆಂಗಳೂರಿಗೆ ಕರೆತಂದಿದ್ದ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಅವರು ಮತ್ತೆ ತನಿಖಾ ತಂಡವನ್ನು ಸೇರಿಕೊಂಡಿದ್ದು, ತನಿಖೆಗೆ ಬಲ ಬಂದಂತಾಗಿದೆ. ಎಸಿಪಿ ಚಂದನ್‌ ಹಾಗೂ ಗಿರೀಶ್‌ ನಾಯ್ಕ್‌ ಅವರು ದರ್ಶನ್‌ನನ್ನು ಮೈಸೂರಿನಿಂದ ಕರೆತಂದಿದ್ದರು. ಆರಂಭದಲ್ಲಿ ಗಿರೀಶ್‌ ನಾಯ್ಕ್‌ ಅವರೇ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಚುನಾವಣೆ ನಿಮಿತ್ತ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು. ಬಳಿಕ ಮತ್ತೆ ಸಿ.ಕೆ.ಅಚ್ಚುಕಟ್ಟು ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದರು.

ಗಿರೀಶ್‌ ನಾಯ್ಕ್‌ ಅವರ ವರ್ಗಾವಣೆ ಹಿನ್ನೆಲೆಯಲ್ಲಿ ಎಸಿಪಿ ಚಂದನ್‌ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ಹಿನ್ನೆಲೆಯಲ್ಲಿ ಈಗ ಗಿರೀಶ್‌ ನಾಯ್ಕ್‌ ಅವರನ್ನು ಮತ್ತೆ ಸಹಾಯಕ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ: Actor Darshan: ದರ್ಶನ್‌ ಗ್ಯಾಂಗ್‌ಗೆ ಮತ್ತೆ 5 ದಿನ ಪೊಲೀಸ್‌ ಕಸ್ಟಡಿ; ಜಡ್ಜ್‌ ಮುಂದೆ ಪವಿತ್ರಾ ಗೌಡ ಕಣ್ಣೀರು!

Continue Reading

ಮಳೆ

Karnataka Weather : ರಾಜ್ಯಾದ್ಯಂತ ಮುಂದಿನ ಒಂದು ವಾರ ಗುಡುಗು ಸಹಿತ ಮಳೆ; ಬಿರುಗಾಳಿ ಸಾಥ್‌

Rain news : ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆ ಆಗಿದೆ. ಆದರೆ ಕರಾವಳಿ ಭಾಗದಲ್ಲಿ ವರುಣಾರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ಭಾನುವಾರ ರಾಜ್ಯಾದ್ಯಂತ ಕೆಲವೆಡೆ ಮಳೆಯ ಸಿಂಚನವಾಗಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯೊಂದಿಗೆ (Rain News) ಗುಡುಗು ಸಾಥ್‌ ನೀಡಲಿದೆ. ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಜೂನ್‌ 16ರಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು, ವಿಜಯಪುರ, ಯಾದಗಿರಿಯ ಪ್ರತ್ಯೇಕ ಸ್ಥಳದಲ್ಲಿ ಹಗುರವಾದ ಮಳೆಯಾಗುವ ನಿರೀಕ್ಷೆ ಇದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಆದರೆ ಗಾಳಿ ವೇಗವು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.

ಇದನ್ನೂ ಓದಿ: Bhandara Fair : ಲೋಕಾಪುರದ ಭಂಡಾರ ಜಾತ್ರೆಗೆ ಅದ್ಧೂರಿ ಚಾಲನೆ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ

ಮತ್ತೊಂದು ವಾರ ಮಳೆ ಎಚ್ಚರಿಕೆ ಕೊಟ್ಟ ತಜ್ಞರು

ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ತಜ್ಞರು ಕೊಟ್ಟಿದ್ದಾರೆ. ಮೊದಲ ಮೂರು ದಿನ ಅಂದರೆ ಜೂ. 17, 18, 19 ರಂದು ಕರಾವಳಿಯ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಒಳನಾಡಿನಲ್ಲಿ ಹಗುರದಿಂದ ಕೂಡಿರಲಿದೆ.

ಬಳಿಕ ಜೂನ್‌ 20 ಮತ್ತು 21ರಂದು ಕರಾವಳಿ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದೆಡೆ ಕೆಲವು ಸ್ಥಳಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

ಜಲಾಶಯಗಳ ನೀರಿನ ಮಟ್ಟ ಹೀಗಿದೆ

karnataka weather Forecast Dam Level

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
SCO vs AUS
ಕ್ರೀಡೆ26 mins ago

SCO vs AUS: ಆಸೀಸ್​ಗೆ 5 ವಿಕೆಟ್​ ಗೆಲುವು; ಸೂಪರ್​-8ಗೆ ಲಗ್ಗೆಯಿಟ್ಟ ಇಂಗ್ಲೆಂಡ್​

Darshan Arrested vinish write special message for darshan fathers day
ಸ್ಯಾಂಡಲ್ ವುಡ್42 mins ago

Darshan Arrested: `ಅಪ್ಪ, ನೀವೇ ನನ್ನ ಹೀರೊʼಎಂದ ದರ್ಶನ್‌ ಪುತ್ರ; ಫಾದರ್ಸ್‌ ಡೇಗೆ ಭಾವುಕ ಪೋಸ್ಟ್‌!

INDW vs SAW
ಕ್ರೀಡೆ1 hour ago

INDW vs SAW: ಶುಭಾರಂಭದ ನಿರೀಕ್ಷೆಯಲ್ಲಿ ಹರ್ಮನ್​ಪ್ರೀತ್​ ಬಳಗ; ಇಂದು ಮೊದಲ ಏಕದಿನ

Kannada New Movie Maryade Prashne out now
ಸ್ಯಾಂಡಲ್ ವುಡ್1 hour ago

Kannada New Movie : ಆರ್​ಜೆ ಪ್ರದೀಪ್​ರ ‘ಮರ್ಯಾದೆ ಪ್ರಶ್ನ’ಗೆ ಆಲ್​ ಓಕೆಯ ಸಖತ್‌ ಹಾಡು!

Darshan Arrested
ಕರ್ನಾಟಕ1 hour ago

Darshan Arrested: ಕೊಲೆ ಬಳಿಕ ಮೈಸೂರಲ್ಲಿ ಕೂತು ಕೇಸ್‌ ಮುಚ್ಚಿಹಾಕಲು ದರ್ಶನ್‌ ಯತ್ನ; ಇಂದು ಸ್ಥಳ ಮಹಜರು!

Kotee Movie Review dolly dhanjay News In Kannada
ಸ್ಯಾಂಡಲ್ ವುಡ್1 hour ago

Kotee Movie Review: ಎಲ್ಲರೂ ಬೆತ್ತಲೆಯಾಗಿರುವ ಸಮಾಜದಲ್ಲಿ ಬಟ್ಟೆ ಹಾಕಿಕೊಂಡವನಿಗೆ ನಾಚಿಕೆಯಾದಾಗ?!

Illegal beef trade
ದೇಶ1 hour ago

ಗೋಮಾಂಸ ಅಕ್ರಮ ವ್ಯಾಪಾರ ನಡೆಸುತ್ತಿದ್ದ 11 ಮುಸ್ಲಿಮರ ಮನೆ ಕೆಡವಿದ ಪೊಲೀಸರು; 150 ಹಸುಗಳ ರಕ್ಷಣೆ

Actor Darshan ACP Chandan Kumar work salute by people
ಕ್ರೈಂ1 hour ago

Actor Darshan: ದರ್ಶನ್‌ ಬಂಧಿಸಿದ ಎಸಿಪಿ ಚಂದನ್ ಕುಮಾರ್‌ ಕೆಲಸಕ್ಕೆ ಸೆಲ್ಯೂಟ್‌ ಎಂದ ಗ್ರಾಮಸ್ಥರು!

Euro 2024
ಕ್ರೀಡೆ2 hours ago

Euro 2024: ಕ್ರೊವೇಷಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್

Bihar Women
ದೇಶ2 hours ago

ರಾಹುಲ್‌ ಗಾಂಧಿ ‘ಟಕಾ ಟಕ್’‌ 1 ಲಕ್ಷ ರೂ.ಗಾಗಿ ಬ್ಯಾಂಕ್‌ಗೆ ನುಗ್ಗಿದ ನೂರಾರು ಸ್ತ್ರೀಯರು; ಬಳಿಕ ಆಗಿದ್ದೇನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ20 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌