Karnataka Elections 2023 : ಶುರುವಾಗಲಿದೆ ಮೆಗಾ ರ‍್ಯಾಲಿಗಳ ಅಬ್ಬರ; ವಾರದಲ್ಲಿ ಅಮಿತ್‌ ಶಾ, ರಾಹುಲ್‌ ಗಾಂಧಿ, ನರೇಂದ್ರ ಮೋದಿ ಪ್ರಚಾರ - Vistara News

ಕರ್ನಾಟಕ

Karnataka Elections 2023 : ಶುರುವಾಗಲಿದೆ ಮೆಗಾ ರ‍್ಯಾಲಿಗಳ ಅಬ್ಬರ; ವಾರದಲ್ಲಿ ಅಮಿತ್‌ ಶಾ, ರಾಹುಲ್‌ ಗಾಂಧಿ, ನರೇಂದ್ರ ಮೋದಿ ಪ್ರಚಾರ

Election campaign : ರಾಜ್ಯದಲ್ಲಿ ಚುನಾವಣಾ ಪ್ರಚಾರದ ಭರಾಟೆ ಜೋರಾಗಲಿದೆ. ಅಮಿತ್‌ ಶಾ, ರಾಹುಲ್‌ ಗಾಂಧಿ, ನರೇಂದ್ರ ಮೋದಿ ಅವರು ಈ ವಾರದಲ್ಲೇ ಲಗ್ಗೆ ಇಡಲಿದ್ದಾರೆ.

VISTARANEWS.COM


on

Amit Shah Rahul Gandi Narendra Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Elections 2023) ನಾಮಪತ್ರ ಸಲ್ಲಿಕೆಯ ಭರಾಟೆ ಅಂತ್ಯಗೊಳ್ಳುತ್ತಿದ್ದಂತೆಯೇ ಚುನಾವಣೆಯ ಮೆಗಾರ‍್ಯಾಲಿಗಳ ಅಬ್ಬರ ಶುರುವಾಗಲಿದೆ. ಅದರಲ್ಲೂ ಮುಖ್ಯವಾಗಿ ಕೇಂದ್ರ ನಾಯಕರ ಆಗಮನಕ್ಕೆ ಆಗಲೇ ಸಿದ್ಧತೆಗಳು ಜೋರಾಗಿ ನಡೆದಿವೆ. ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಟೂರ್‌ ಪ್ಲ್ಯಾನ್‌ಗಳು ಈಗಾಗಲೇ ರೆಡಿಯಾಗಿದ್ದರೆ ಇನ್ನೊಂದು ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ರಾಜ್ಯಕ್ಕೆ ಲಗ್ಗೆ ಇಡಲಿದ್ದಾರೆ. ಈಗಾಗಲೇ ಮೂರೂ ಪಕ್ಷಗಳು ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅವರೆಲ್ಲರೂ ಹಂತ ಹಂತವಾಗಿ, ರಾಜ್ಯದ ಬೇರೆ ಬೇರೆ ಭಾಗಗಳನ್ನು ಆಕ್ರಮಿಸಿಕೊಳ್ಳಲಿದ್ದಾರೆ.

ನಾಳೆಯೇ ಬರ್ತಾರೆ ಅಮಿತ್‌ ಶಾ

ಚುನಾವಣಾ ಚಾಣಕ್ಯ ಎಂದೇ ಹೆಸರಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಏಪ್ರಿಲ್‌ 21 ಮತ್ತು 22ರಂದು ಬೆಂಗಳೂರಿನಲ್ಲಿ ಇರಲಿದ್ದಾರೆ. ಏಪ್ರಿಲ್‌ 21ರಂದು ಬೆಂಗಳೂರಿಗೆ ಆಗಮಿಸುವ ಅವರು ತಾಜ್‌ ವೆಸ್ಟ್‌ ಎಂಡ್‌ನಲ್ಲಿ ತಂಗುವರು. ಅಂದು ರಾತ್ರಿಯಿಂದಲೇ ವಿವಿಧ ಹಂತಗಳ ಚುನಾವಣಾ ಸಿದ್ಧತಾ ಮೀಟಿಂಗ್‌ಗಳನ್ನು ನಡೆಸಲಿರುವ ಅವರು, ಏಪ್ರಿಲ್‌ 22ರಂದು ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದೇ ಸಂಜೆ ದೇವನಹಳ್ಳಿಯಲ್ಲಿ ನಡೆಯುವ ರೋಡ್‌ ಶೋನಲ್ಲಿ ಭಾಗವಹಿಸುತ್ತಾರೆ. ಅಮಿತ್‌ ಶಾ ಅವರು ಏಪ್ರಿಲ್‌ 24 ಮತ್ತು 25ರಂದು ಮರಳಿ ರಾಜ್ಯಕ್ಕೆ ಬರುವ ಕಾರ್ಯಕ್ರಮವಿದೆ. ಆಗ ನಾನಾ ಕಡೆಗಳಲ್ಲಿ ರೋಡ್‌ ಶೋ ಮತ್ತು ರ‍್ಯಾಲಿಯಲ್ಲಿ ಭಾಗವಹಿಸುವರು ಎಂದು ತಿಳಿದುಬಂದಿದೆ.

ರಾಜ್ಯಕ್ಕೆ ಮತ್ತೊಮ್ಮೆ ರಾಹುಲ್ ಗಾಂಧಿ

ಈ ವಾರದ ಆರಂಭದಲ್ಲಿ ಕೋಲಾರ, ಬೀದರ್‌ನಲ್ಲಿ ಭರ್ಜರಿ ಪ್ರಚಾರ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಏಪ್ರಿಲ್‌ 23ರಂದು ಮರಳಿ ರಾಜ್ಯಕ್ಕೆ ಬರಲಿದ್ದಾರೆ. ಅವರು ಏಪ್ರಿಲ್‌ 23ರಂದು ವಿಜಯಪುರಕ್ಕೆ ಆಗಮಿಸಲಿದ್ದು, ಆ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ.

ಕೋಲಾರ ಸಮಾವೇಶದಲ್ಲಿ ಅಬ್ಬರಿಸಿದ್ದ ರಾಹುಲ್ ಗಾಂಧಿ ಅವರು ಬಾಲ್ಕಿ, ಮತ್ತು ಹುಮ್ನಾಬಾದ್ ನಲ್ಲಿ ಬಿರುಸಿನ ಪ್ರಚಾರ ನಡೆಸಿ ತೆರಳಿದ್ದರು. ಇದೀಗ ಮತ್ತೊಮ್ಮೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಹುಲ್ ಮತ ಬೇಟೆ ನಡೆಸಲಿದ್ದಾರೆ.

ಮೇ 28ಕ್ಕೆ ರಾಜ್ಯಕ್ಕೆ ಎಂಟ್ರಿ ಕೊಡ್ತಾರಾ ಮೋದಿ?

ರಾಜ್ಯದಲ್ಲಿ ಚುನಾವಣಾ ನಾಮಪತ್ರ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಆರಂಭಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಒಂದು ಮೂಲದ ಪ್ರಕಾರ, ಏಪ್ರಿಲ್‌ 28ಕ್ಕೆ ಮೋದಿ ಅವರು ರಾಜ್ಯಕ್ಕೆ ಚುನಾವಣಾ ಪ್ರಚಾರದ ಎಂಟ್ರಿ ಕೊಡಲಿದ್ದಾರೆ. ಒಂದೇ ದಿನದಲ್ಲಿ ಅವರು ಮೂರು ಕಡೆ ರೋಡ್ ಶೋ ನಡೆಸಲಿದ್ದಾರೆ.

ಮೇ 10ರ ಚುನಾವಣೆಗೆ ಮುನ್ನ ಅವರು ಆರು ಬಾರಿ ರಾಜ್ಯಕ್ಕೆ ಆಗಮಿಸಲಿದ್ದು, ಒಂದು ದಿನಕ್ಕೆ ಮೂರರಂತೆ ಆರು ರ‍್ಯಾಲಿಗಳಲ್ಲಿ ಭಾಗವಹಿಸುವರು. ಅಂದರೆ ಒಟ್ಟು 18 ರ‍್ಯಾಲಿಗಳನ್ನು ಬಿಜೆಪಿ ಪ್ಲ್ಯಾನ್‌ ಮಾಡಲಿದೆ.

ಮದ್ಯ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ,ಕಲ್ಯಾಣ ಕರ್ನಾಟಕ, ಹಾಗೂ ಬೆಂಗಳೂರು ವಲಯದಲ್ಲಿ ಮೋದಿ ಅವರು ಮಾಡಲಿರುವ ರೋಡ್ ಶೋ ಮತ್ತು ರ‍್ಯಾಲಿಗಳು 224 ಕ್ಷೇತ್ರಗಳಲ್ಲೂ ಪರಿಣಾಮ ಬೀರುವಂತೆ ಪ್ಲ್ಯಾನ್‌ ಮಾಡಲಾಗುತ್ತಿದೆ.

ಇದರ ಜತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಆಗಮಿಸಲಿದ್ದು, ಅವರನ್ನು ಒಕ್ಕಲಿಗರೇ ಅಧಿಕವಾಗಿರುವ ಹಳೆ ಮೈಸೂರು ಭಾಗದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಲು ಬಿಜೆಪಿ ಪ್ಲ್ಯಾನ್‌ ಮಾಡಿದೆ. ಕಿತ್ತೂರು ಕರ್ನಾಟಕದಲ್ಲಿ ಸ್ಮೃತಿ ಇರಾನಿ ಪ್ರವಾಸ ಮಾಡಿಸಲು ರಾಜ್ಯ ನಾಯಕರು ಸಿದ್ಧತೆ ನಡೆಸಿದ್ದಾರೆ. ಇದರ ಜತೆಗೆ ರಾಜ್ಯ ನಾಯಕರ ಪ್ರವಾಸವೂ ಇರುತ್ತದೆ.

80 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿ

ಇದರ ನಡುವೆ, ಇತರೆ ರಾಜ್ಯಗಳಿಂದ ವಿಧಾನ ಸಭಾ ಚುನಾವಣಾ ಉಸ್ತುವಾರಿ ನೋಡಿಕೊಳ್ಳಲು ಬಿಜೆಪಿ ನಾಯಕರ ದಂಡೇ ಆಗಮಿಸಲಿದೆ. 80ಕ್ಕೂ ಅಧಿಕ ಮುಖಂಡರು ರಾಜ್ಯಕ್ಕೆ ಆಗಮಿಸಲಿದ್ದು, ಪ್ರಮುಖ ವಿಧಾನ ಸಭಾ ಕ್ಷೇತ್ರಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ದೆಹಲಿ, ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾದಿಂದ ಆಗಮಿಸುವ ತಂಡಗಳು ಬಹಿರಂಗ ಪ್ರಚಾರ ಮುಗಿಯುವವರೆಗೂ ಇಲ್ಲೇ ಠಿಕಾಣಿ ಹೂಡಲಿವೆ.

ಇದನ್ನೂ ಓದಿ : Karnataka Elections : ಏಪ್ರಿಲ್‌ 24ರ ನಂತರವೇ ರಾಜ್ಯಕ್ಕೆ ಮೋದಿ, ಮಿಲಿಟರಿ ಹೋಟೆಲ್‌ನಿಂದಲೇ ಬಿಜೆಪಿ ಪ್ರಚಾರ ಆರಂಭ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಕರಾವಳಿ, ಮಲೆನಾಡಿಗೆ ಯೆಲ್ಲೋ ಅಲರ್ಟ್‌

Karnataka Weather : ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಇದ್ದು, ಕರಾವಳಿ ಹಾಗೂ ಮಲೆನಾಡಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

VISTARANEWS.COM


on

By

Karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಾಮಾನ್ಯವಾಗಿದ್ದರೆ, ಒಳನಾಡಿನಲ್ಲಿ ದುರ್ಬಲಗೊಂಡಿದೆ. ಭಾನುವಾರದಂದು ಕರಾವಳಿ, ಮಲೆನಾಡು, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣದೊಂದಿಗೆ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಕೆಲವೊಮ್ಮೆ ಗುಡುಗು ಜತೆಗೆ ಗಾಳಿ ವೇಗವು 50 ಕಿ.ಮೀ ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.ಇನ್ನೂ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ನಿರಂತರ ಗಾಳಿಯ ವೇಗ 40-50 ಕಿ.ಮೀ ಇರಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ನಿರಂತರ ಗಾಳಿಯ ವೇಗ 30-40 ಕಿ.ಮೀ ಬೀಸಲಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಯೆಲ್ಲೋ ಅಲರ್ಟ್‌

ಭಾನುವಾರ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಹಗುರ ಮಳೆ

ಮುಂದಿನ 48 ಗಂಟೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

Continue Reading

ಬೆಂಗಳೂರು

Actor Darshan : ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ದರ್ಶನ್ ಹಾಗೂ ಪವಿತ್ರ ಮಾತಾಡಿದ್ದು ಜಸ್ಟ್‌ 16 ಸೆಕೆಂಡ್!

Actor Darshan : ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ದರ್ಶನ್ ಹಾಗೂ ಪವಿತ್ರ ಮಾತಾಡಿದ್ದು ಜಸ್ಟ್‌ 16 ಸೆಕೆಂಡ್ ಅಂತೆ. ಡೆವಿಲ್ ಗ್ಯಾಂಗ್ ರೇಣುಕಾಸ್ವಾಮಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ್ದರಂತೆ.

VISTARANEWS.COM


on

By

Darshan and Pavitra spoke for just 16 seconds before and after Renukaswamys murder
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder) ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೆ ಮತ್ತಷ್ಟು ರಹಸ್ಯಗಳ ಬೆಳಕಿಗೆ ಬರುತ್ತಿವೆ. ಇದರಲ್ಲಿ ಪವಿತ್ರಗೌಡ ಹಾಗೂ ದರ್ಶನ್ (Actor Darshan) ಇಡೀ ಪ್ರಕರಣದಲ್ಲಿ ಮಾತನಾಡಿರುವುದು ಕೇವಲ 16 ಸೆಕೆಂಡ್ ಮಾತ್ರವಂತೆ! ಇಷ್ಟಕ್ಕೂ ಅವರಿಬ್ಬ ನಡುವೆ ನಡೆದ ಸಂಭಾಷಣೆ ಏನು ಎನ್ನುವ ಮಾಹಿಯಿ ಇಲ್ಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನೆದಿನೇ ಡೆವಿಲ್ ಗ್ಯಾಂಗ್ ಪ್ರದರ್ಶಿಸಿರುವ ಮೃಗೀಯ ವರ್ತನೆ ಒಂದು ಕಡೆ ಬಹಿರಂಗವಾಗುತ್ತಿದೆ. ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ಏನೆಲ್ಲಾ‌ ಪಿತೂರಿ, ಸಂಭಾಷಣೆ ನಡಿತು ಎನ್ನುವುದು ಆರೋಪಿಗಳ ಮೊಬೈಲ್ ರಿಟ್ರೀವ್ ವೇಳೆ ಬಯಲಿಗೆ ಬಂದಿದೆ. ಅದರಲ್ಲಿ ರೇಣುಕಾಸ್ವಾಮಿ ಕೊಲೆಗೂ ಮೊದಲು- ಕೊಲೆ ನಂತರ ಪವಿತ್ರಗೌಡ ಹಾಗೂ ದರ್ಶನ್ ವಾಟ್ಸಾಪ್ ಕಾಲ್‌ನಲ್ಲಿ 16 ಸೆಕೆಂಡ್ ಮಾತನಾಡಿರುವುದು ಬೆಳಕಿಗೆ ಬಂದಿದೆ.

ಭೀಕರ ಹಲ್ಲೆ, ಕೊಲೆ ಬಗ್ಗೆ ವೈದ್ಯಕೀಯ ವರದಿ ಕೇಳಿದ ಪೊಲೀಸರು!

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಇದುವರೆಗೂ ಆರು ಪ್ರಮುಖ ವೈದ್ಯಕೀಯ ರಿಪೋರ್ಟ್‌ಗಳು ಪೊಲೀಸರ ಕೈ ಸೇರಿವೆ.  ಆರು ರಿಪೋರ್ಟ್‌ಗಳು ಆರೋಪಿಗಳಿಗೆ ವಿರುದ್ಧವಾಗಿಯೇ ಇದ್ದು, ಆತಂಕ ಉಂಟು ಮಾಡಿದೆ. ಹಾಗಾದರೆ ಪೊಲೀಸರು ಕೇಳಿದ್ದ ಆರು ವರದಿ ಯಾವ್ಯಾವುದು..

1.ಮರಣೋತ್ತರ ಪರೀಕ್ಷೆಯ ಅಭಿಪ್ರಾಯ ವರದಿ
2.ಮೃತದೇಹದ ಮೇಲೆ ಉಂಟಾದ ಗಾಯಗಳ ವಿವರ
3.ಎಫ್ಎಸ್ಎಲ್ ಹಾಗೂ ಡಿಎನ್ಎ ಮ್ಯಾಚಿಂಗ್ ರಿಪೋರ್ಟ್
4.ತಲೆ ಮೇಲಿನ ಗಾಯದ ರೀತಿ ಬಗ್ಗೆ ವರದಿ
5.ಶೂ ಅಥವಾ ಚಪ್ಪಲಿಯಿಂದ ಎದೆಭಾಗಕ್ಕೆ ತುಳಿದ ಬಗ್ಗೆ ವರದಿ
6.ಶೂ ಅಥವಾ ಚಪ್ಪಲಿಯಿಂದ ಮಾರ್ಮಾಂಗಕ್ಕೆ ಒದ್ದ ಬಗ್ಗೆ ವರದಿ

ಈ ಆರು ವಿಚಾರಗಳ ಬಗ್ಗೆ ವೈದ್ಯರಿಂದ ಅಭಿಪ್ರಾಯ ವರದಿ ಪಡೆದ ಪೊಲೀಸರು, ಅವುಗಳ ವರಿದಿಗಳನ್ನು ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ರೇಣುಕಾಸ್ವಾಮಿ ದೇಹದ ಮೇಲಿನ 39 ಗಾಯಗಳ ಬಗ್ಗೆ ಉಲ್ಲೇಖ ಆಗಿದೆ.  ತಲೆ, ಕಿವಿ, ಕಣ್ಣು, ಎದೆ, ಬೆನ್ನು, ಕೈ ಮೇಲಿನ ಗಾಯಗಳ ಬಗ್ಗೆ ವರದಿಯಲ್ಲಿ ಇದೆ. ಎಫ್ಎಸ್ಎಲ್ ಹಾಗೂ ಡಿಎನ್ಎ ಮ್ಯಾಚಿಂಗ್ ವರದಿ ಕೂಡ ಬಂದಿದ್ದು, ಆರೋಪಿಗಳ ಬಟ್ಟೆ, ಶೂ, ಚಪ್ಪಲಿಗಳ ಮೇಲೆ ಡಿಎನ್ಎ ಮ್ಯಾಚ್ ಆಗಿದೆ‌. ತಲೆ ಮೇಲಿನ ಗಾಯದ ಬಗ್ಗೆ ಪ್ರತ್ಯೇಕ ವರದಿ ನೀಡಿದ್ದಾರೆ. ಇದರ ಜತೆಗೆ ಶೂನಿಂದ ಮಾರ್ಮಾಂಗಕ್ಕೆ ಒದ್ದಿದ್ದ ಬಗ್ಗೆಯೂ ವರದಿ ನೀಡಿದ್ದು ಇದೆಲ್ಲ ಆರೋಪಿಗಳಿಗೆ ಮುಂದೆ ಸಂಕಷ್ಟ ತರುವುದು ಪಕ್ಕ.

ಇದನ್ನೂ ಓದಿ: DK Shivakumar :ಮುಡಾ ಕೇಸ್‌ ಡೈವರ್ಟ್‌ಗೆ ದರ್ಶನ್‌ ಫೋಟೊ ರಿಲೀಸ್‌; ಪ್ರಲ್ಹಾದ್ ಜೋಶಿ ಆರೋಪಕ್ಕೆ ಡಿಸಿಎಂ ಡಿಕೆಶಿ ಟಾಂಗ್

ಬಲವಂತವಾಗಿ ಬಿರಿಯಾನಿ ತಿನ್ನಿಸಿದ ಡೆವಿಲ್ ಗ್ಯಾಂಗ್

ಇನ್ನು ಚಾರ್ಜ್ ಶೀಟ್‌ನಲ್ಲಿ ಡೆವಿಲ್ ಗ್ಯಾಂಗ್ ಅಮಾನವೀಯ ಹಲ್ಲೆ ನಡೆಸುವ ಜತೆಗೆ ವಿಕೃತಿ ಮೆರೆದಿದ್ದಾರೆ. ಕಿಡ್ನ್ಯಾಪ್ ಮಾಡಿಕೊಂಡ ಬಳಿಕ ರೇಣುಕಾಸ್ವಾಮಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ್ದಾರೆ. ನಾನು ಜಂಗಮ ನಾನ್ ವೆಜ್ ತಿನ್ನಲ್ಲ ಅಂತ ಹೇಳಿದರೂ ಊಟಕ್ಕೆ ಬೆಲೆ ಕೊಡೋ ಎಂದು ಭಯ ಪಡಿಸಿ, ಬೇಡ ಬೇಡ ಅಂದರು ಚಿಕನ್ ಬಿರಿಯಾನಿ ತಿನ್ನಿಸಿ ಕ್ರೌರ್ಯ ಮೆರೆದಿರುವುದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಕೊಲೆಗೂ ಮುನ್ನ ರಾಬ್ರಿ ಮಾಡಿದ ಡಿ ಗ್ಯಾಂಗ್‌

ಮತ್ತೊಂದೆಡೆ ರೇಣುಕಾಸ್ವಾಮಿ ಕಿಡ್ನಾಪ್ ಹೊತ್ತಲ್ಲಿ ಸುಲಿಗೆ ಮಾಡಿದ್ದಾರೆ. ಮಾರ್ಗ ಮಧ್ಯೆ ರೇಣುಕಾಸ್ವಾಮಿಯ ರಾಬರಿ ಮಾಡಿದ್ದ ಎ4 ಆರೋಪಿ ರಾಘವೇಂದ್ರ ರೇಣುಕಾಸ್ವಾಮಿಯ ಚೈನ್, ರಿಂಗ್, ವಾಚ್ ಮತ್ತು ಲಿಂಗದ ಕರಡಿಕೆ ಸುಲಿಗೆ ಮಾಡಿರೋದು ಸಹ ಉಲ್ಲೇಖಿಸಲಾಗಿದೆ.

ಪತಿಗೆ ಜಾಮೀನು ಕೊಡಿಸಲು ಪರದಾಡುತ್ತಿರು ವಿಜಯಲಕ್ಷ್ಮೀ

ಇವೆಲ್ಲ ಒಂದು ಕಡೆಯಾದರೆ ಮತ್ತೊಂದೆಡೆ ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತಿದ್ದಂತೆ ವಕೀಲರ ಜತೆ ಚರ್ಚೆ ಮಾಡಿರುವ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸೋಮವಾರ ಜಾಮೀನು ಅರ್ಜಿ ಸಲ್ಲಿಕೆಗೆ ನಿರ್ಧಾರ ಮಾಡಿದ್ದಾರೆ. ಅದಂತೆ ಬಳ್ಳಾರಿ ಜೈಲಿಗೆ ಹೋದ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ಜಾಮೀನು ವಕಾಲತ್ತಿಗೆ ಸಹಿ ಪಡೆದಿದ್ದಾರೆ. ಸದ್ಯ ಕೋರ್ಟ್ ನಲ್ಲಿ ಸಿಸಿ ನಂಬರ್ ಆಗಿದ್ದು, ಆರೋಪಿಗಳ ಪರ ವಕೀಲರಿಗೆ ಸೋಮವಾರ ಚಾರ್ಜ್ ಶೀಟ್ ಪ್ರತಿ ಸಿಗಲಿದೆ. ಬಳಿಕ ಅದನ್ನು ಪರಿಶೀಲನೆ ನಡೆಸಿ ಸೋಮವಾರ ಅಥವಾ ಮಂಗಳವಾರ ನಟ ದರ್ಶನ್ ಜಾಮೀನು ಕೋರಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಹಾಕುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

DK Shivakumar :ಮುಡಾ ಕೇಸ್‌ ಡೈವರ್ಟ್‌ಗೆ ದರ್ಶನ್‌ ಫೋಟೊ ರಿಲೀಸ್‌; ಪ್ರಲ್ಹಾದ್ ಜೋಶಿ ಆರೋಪಕ್ಕೆ ಡಿಸಿಎಂ ಡಿಕೆಶಿ ಟಾಂಗ್

Muda case : ಸಿಎಂ ಸಿದ್ದರಾಮಯ್ಯರ ಮುಡಾ ಕೇಸ್‌ ಡೈವರ್ಟ್‌ ಮಾಡಲು ನಟ ದರ್ಶನ್‌ ಫೋಟೊ ರಿಲೀಸ್‌ ಮಾಡಿದ್ದಾರೆ ಎಂದು ಸಂಸದ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಮಹದಾಯಿ, ಭದ್ರಾ ಯೋಜನೆಗಳಿಗೆ ಅನುಮತಿ, ಹಣ ಕೊಡಿಸಲು ಪ್ರಹ್ಲಾದ ಜೋಶಿಯವರಿಗೆ ದೀರ್ಘ ದಂಡ ನಮಸ್ಕಾರ ಹಾಕುತ್ತೇನೆ ಎಂದು ಟಾಂಗ್‌ (DK Shivakumar) ಕೊಟ್ಟರು.

VISTARANEWS.COM


on

By

Pralhad Joshi and Dk Shivakumar
Koo

ಬೆಂಗಳೂರು: ಸಂಸದರೇ ನಟ ದರ್ಶನ್, ಮುಡಾ ವಿಚಾರ ಎಲ್ಲವನ್ನು ಬಿಟ್ಟುಬಿಡಿ. ಮಹದಾಯಿಗೆ ಅನುಮತಿ ಹಾಗೂ ಭದ್ರಾ ಮೇಲ್ದಂಡೆಗೆ ಹಣ ಕೊಡಿಸಿ ಎಂದು ಗಣೇಶ ಹಬ್ಬದ ದಿನ ಕೈ ಮುಗಿದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಈ ಎರಡು ಯೋಜನೆಗಳಿಗೆ ಇರುವ ವಿಘ್ನ ನಿವಾರಣೆ ಮಾಡಿಸಿ.. ಇಲ್ಲಿಂದಲೇ ನಿಮಗೆ ದೀರ್ಘ ದಂಡ ನಮಸ್ಕಾರ ಹಾಕುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ವ್ಯಂಗ್ಯ ಮಾಡಿದರು.

ಮುಡಾ, ವಾಲ್ಮೀಕಿ ಪ್ರಕರಣದ ಹಾದಿ ತಪ್ಪಿಸಲು ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜೈಲಿನ ಒಳಗಡೆ ಇರುವ ಫೋಟೋವನ್ನು ಸರ್ಕಾರವೇ ಬಿಡುಗಡೆ ಮಾಡಿದೆ ಎನ್ನುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆರೋಪದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಡಿಸಿಎಂ ಈ ರೀತಿ ಪ್ರತಿಕ್ರಿಯಿಸಿದರು.

ಸದಾಶಿವ ನಗರದ ನಿವಾಸದ ಬಳಿ ಮಾತನಾಡಿದ ಅವರು “ಮಹದಾಯಿ ವಿಚಾರವಾಗಿ ಸರ್ವ ಪಕ್ಷ ಸಭೆ ಅಥವಾ ನಿಯೋಗದ ಸಭೆ ನಡೆಸುವುದೋ ಎನ್ನುವ ಬಗ್ಗೆ 15 ದಿನಗಳಲ್ಲಿ ಮುಖ್ಯಮಂತ್ರಿಗಳ ಬಳಿ ಮಾತನಾಡಲಾಗುವುದು. ಹಾಗೂ ನಮ್ಮ ಹೋರಾಟದ ಸ್ವರೂಪದ ಬಗ್ಗೆ ಚರ್ಚೆ ನಡೆಸಲಾಗುವುದು” ಎಂದರು. ಜೋಶಿ ಅವರು ಸರ್ಕಾರದ ಮೇಲೆ ಮಾಡಿರುವ ಗಂಭೀರ ಆರೋಪದ ಬಗ್ಗೆ ಮರು ಪ್ರಶ್ನಿಸಿದಾಗ “ಅವರು ಮಾಡುತ್ತಿರಲಿ” ಎಂದರು.

ಪ್ರೀತಿಯಿಂದ ಸುಧಾಕರ್ ಸವಾಲನ್ನು ಸ್ವೀಕರಿಸುತ್ತೇನೆ

ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗಕ್ಕೆ ಎರಡು ವರ್ಷಗಳಲ್ಲಿ ಹರಿಸಿದರೆ ಡಿಕೆ ಶಿವಕುಮಾರ್ ಅವರನ್ನು ಭಗೀರಥ ಎಂದು ಕರೆಯುತ್ತೇನೆ ಎನ್ನುವ ಸಂಸದ ಸುಧಾಕರ್ ಅವರ ಹೇಳಿಕೆಯ ಬಗ್ಗೆ ಕೇಳಿದಾಗ “ಸಂಸದ ಡಾ. ಕೆ.ಸುಧಾಕರ್ ಅವರು ಸವಾಲು ಹಾಕಿದ್ದಾರೆ. ಈ ಸವಾಲನ್ನು ನಾನು ಪ್ರೀತಿ, ಗೌರವಗಳಿಂದ ಸ್ವೀಕರಿಸುತ್ತೇನೆ. ಇದು ನನ್ನ ಜವಾಬ್ದಾರಿ ಹಾಗೂ ಸಲಹೆ ಎಂದೂ ಭಾವಿಸುತ್ತೇನೆ. ಅವರೂ ಎತ್ತಿನಹೊಳೆ ಭೂಮಿ ಪೂಜೆಯಲ್ಲಿ ಇದ್ದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗಕ್ಕೆ ನೀರು ದೊರೆಯಲಿ ಎಂಬುದು ಅವರ ಆಸೆ. ಅವರ ಆಸೆ ಈಡೇರಿಸುವ ಕೆಲಸ ಮಾಡೋಣ” ಎಂದರು.

“ಕೋಲಾರ ಭಾಗಕ್ಕೆ ಎತ್ತಿನಹೊಳೆ ನೀರು ತರಬೇಕು ಎಂದು ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಸುಬ್ಬಾರೆಡ್ಡಿ, ಶಿವಶಂಕರ್ ರೆಡ್ಡಿ, ರಮೇಶ್ ಕುಮಾರ್, ಕೃಷ್ಣಬೈರೇಗೌಡ ಹಾಗೂ ಸುಧಾಕರ್ ಸೇರಿದಂತೆ ಅನೇಕರು ಕುಡಿಯುವ ನೀರು ಹಾಗೂ ಶಾಶ್ವತ ನೀರಾವರಿಗಾಗಿ ಹೋರಾಟ ಮಾಡಿದ್ದಾರೆ. ಕೋಲಾರ ಭಾಗದ ಜನರ ನೀರಿನ ಸಂಕಷ್ಟ ನನಗೆ ಅರಿವಿದೆ” ಎಂದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ನಾನು ಊರಿನಲ್ಲಿ ಇರುವುದಿಲ್ಲ. ಆನಂತರ ಎತ್ತಿನಹೊಳೆ ಯೋಜನೆಯಲ್ಲಿ ತುಮಕೂರು, ದೊಡ್ಡಬಳ್ಳಾಪುರ ಭಾಗದ ಸಮಸ್ಯೆಗಳ ವಿವರಣೆ ಹಾಗೂ ಅರಣ್ಯ ಭೂಮಿ ಸ್ವಾಧೀನ ತೊಂದರೆಗಳನ್ನು ಮುಖ್ಯಮಂತ್ರಿಗಳ ಬಳಿ ಒಂದು ವಾರಗಳ ನಂತರ ಮಾತನಾಡಿ ಬಗೆಹರಿಸಲಾಗುವುದು ಎಂದು ಹೇಳಿದರು.

ಇನ್ನು ಒಂದು ತಿಂಗಳಲ್ಲಿ ಕೋವಿಡ್ ವರದಿಯನ್ನು ನೀಡುವಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿರುವ ಕಾರಣಕ್ಕೆ ಸುಧಾಕರ್ ಅವರು ನಿಮ್ಮನ್ನು ಪದೇಪದೇ ಹೊಗಳುತ್ತಿದ್ದಾರೆಯೇ ಎಂದು ಕೇಳಿದಾಗ “ನನಗೆ ಕೋವಿಡ್ ವರದಿಯ ಬಗ್ಗೆ ಏನು ಗೊತ್ತಿಲ್ಲ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಾನು ಭಾಗವಹಿಸಿರಲಿಲ್ಲ. ಸಕಲೇಶಪುರದ ಎತ್ತಿನಹೊಳೆಯಲ್ಲಿದ್ದೆ” ಎಂದರು.

ಈಗ ಎಂಪಿ ಸುಧಾಕರ್ ಅಲ್ಲವೇ?

ಮಾತಿನ ಮಧ್ಯೆ ಡಿಸಿಎಂ ಅವರು “ಸುಧಾಕರ್ ಈಗ ಎಂಪಿ ಅಲ್ಲವೇ? ಎಂದು ಮಾಧ್ಯಮದವರ ಬಳಿ ಪ್ರಶ್ನಿಸಿದರು. ನಮ್ಮಲ್ಲಿ ಇಬ್ಬರು ಸುಧಾಕರ್ ಇದ್ದಾರೆ. ಇವರೂ ಸೇರಿ ಮೂರು ಜನ ಆಗುತ್ತಾರೆ. ನಮ್ಮವರು ಇಬ್ಬರೂ ಮಂತ್ರಿಗಳು. ಇವರು ಸಂಸದರು ಎಂದಾಗ, ಮಾಧ್ಯಮದವರು ‘ಮಾಜಿ ಸಚಿವರು ಆಗಿದ್ದರು’ ಎಂದು ಹೇಳಿದಾಗ ಮಾಜಿ ಸಚಿವ ಸುಧಾಕರ್” ಎಂದರು.

ಬಯಲು ಸೀಮೆಯಲ್ಲಿ ಇನ್ನು ಕೆರೆಗಳು ತುಂಬಿಲ್ಲ

“ಗೌರಿ ಹಬ್ಬದ ದಿನ ಗಂಗೆಯನ್ನು ಪೂಜೆ ಮಾಡಿ ಸಂಭ್ರಮ ಪಟ್ಟಿದ್ದೇವೆ. ಇದನ್ನು ಒಂದು ಒಂದಷ್ಟು ಜನ ನೋಡಿ ಸಂಭ್ರಮಪಟ್ಟಿದ್ದಾರೆ ಟೀಕೆ ಮಾಡಿದ್ದಾರೆ. ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ. ಬರಗಾಲದ ಛಾಯೆ ದೂರವಾಗಿ, ಉತ್ತಮ ಮಳೆಬಿದ್ದು ಜಲಾಶಯಗಳು ತುಂಬಿವೆ. ಬಯಲು ಸೀಮೆಯಲ್ಲಿ ಒಂದಿಷ್ಟು ಕಡೆ ಮಳೆ ಕಡಿಮೆಯಾಗಿದೆ. ಮಂಡ್ಯ ಬೆಂಗಳೂರು ಗ್ರಾಮಾಂತರ ತುಮಕೂರು ಈ ಭಾಗದಲ್ಲಿ ಇನ್ನೂ ಕೆರೆಗಳು ತುಂಬಿಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಎತ್ತಿನಹೊಳೆ ಯೋಜನೆ ಪ್ರಗತಿ ಕಂಡಿರಲಿಲ್ಲ. ಇದಕ್ಕೆ ನಾನಾ ಕಾರಣಗಳು ಇರಬಹುದು” ಎಂದು ಹೇಳಿದರು.

Continue Reading

ಕೊಡಗು

Suspicious Death : ಬಾಣಂತಿ ಅಕ್ಕನನ್ನು ಮನೆಗೆ ಬಿಟ್ಟು ಹೊರಹೋದ ಆಟೋ ಡ್ರೈವರ್‌ ಶೆಡ್‌ನಲ್ಲಿ ಹೆಣವಾಗಿ ಪತ್ತೆ

Suspicious Death: ಆಟೋ ಚಾಲಕನ ಸಾವು ಆ ಗ್ರಾಮಸ್ಥರ ಆತಂಕವನ್ನು ಹೆಚ್ಚಿಸಿದೆ. ಅಕ್ಕನ ಮಗುವಿಗೆ ಸೋಪು ತರಲು ಹೋದವನು ಆಟೋ ಶೆಡ್‌ನಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

VISTARANEWS.COM


on

By

Auto driver found dead under mysterious circumstances
Koo

ಕೊಡಗು: ಆಟೋ ಚಾಲಕನ ಸಾವಿನ ಸುತ್ತ ಅನುಮಾನದ ಹುತ್ತ (Suspicious Death) ಮೂಡಿದೆ. ಇದು ಆತ್ಮಹತ್ಯೆಯಲ್ಲ ಹಲ್ಲೆ ನಡೆಸಿ ಕೊಲೆ ಮಾಡಿ ನೇತು ಹಾಕಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ಹೊರವಲಯದ ಬೆಟ್ಟತ್ತೂರು ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ.

ಬೆಟ್ಟತ್ತೂರು ಗ್ರಾಮದ ಕೊಂಪುಳ್ಳೀರಾ ಕರುಂಬಯ್ಯ ಎಂಬುವವರ ಪುತ್ರ 27 ವರ್ಷದ ವಿನೋದ್ ಅಲಿಯಾಸ್ ದೇವಿಪ್ರಸಾದ್ ಕಳೆದ ಹಲವು ವರ್ಷಗಳಿಂದ ಮದೆನಾಡು ಗ್ರಾಮದಲ್ಲಿ‌ ಆಟೋ‌ ಚಾಲಕನಾಗಿ ಜೀವನ ಸಾಗಿಸುತ್ತಿದ್ದ. ಕಳೆದ ಮೂರು ದಿನಗಳ ಹಿಂದೆ ಆಗ ತಾನೆ ಡೆಲಿವರಿಯಾಗಿದ್ದ ತನ್ನ ಅಕ್ಕನನ್ನು ಆಸ್ಪತ್ರೆಯಿಂದ ಮನೆಗೆ ಬಿಟ್ಟು ಬಂದಿದ್ದ. ಮಗುವಿಗೆ ಬೇಕಾದ ಸಾಬೂನು ಇತರೆ ವಸ್ತುಗಳು ತರಲೆಂದು ಚೇರಂಬಾಣೆ ಎಂಬ ಊರಿಗೆ ಹೋದವನು, ಆಟೋ ಶೆಡ್‌ನಲ್ಲಿ ಹೆಣವಾಗಿದ್ದ.

ಇದನ್ನೂ ಓದಿ: Morarji Desai School : ವಸತಿ ಶಾಲಾ ಶಿಕ್ಷಕನ‌ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ 5 ಸಾವಿರ ನಗ್ನ ವಿಡಿಯೊ, ಫೋಟೊಗಳು ಪತ್ತೆ!

ಈ ಸಾವನ್ನು ಕೊಲೆ ಎಂದು ಊರಿನವರು ಹಾಗೂ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಆತನ ಮುಖದಲ್ಲಿದ್ದ ರಕ್ತದ ಕಲೆಗಳು ಹಾಗೂ ಅನುಮಾನಾಸ್ಪದ ರೀತಿಯಲ್ಲಿ ನೇತಾಡುತ್ತಿದ್ದ ವಿನೋದ್‌ನ ಶವ. ಆಟೋ ಚಾಲಕ ದೇವಿಪ್ರಸಾದ್ ಹಾಗೂ ಊರಿನ ಕೆಲ ಯುವಕರ ನಡುವೆ ವೈ ಮನಸು ಇತ್ತೆಂಬ ಆರೋಪ ಇದ್ದು, ಟೌನ್‌ಗೆ ಹೋಗಿ ಬರುವಾಗ ವಿನೋದ್‌ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಕೊಂದು ಹಾಕಿದ್ದಾರೆ. ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನು ಹಲ್ಲೆ ನಡೆಸಿದ ಕೆಲ ಯುವಕರು ವಿನೋದ್‌ನ ಸಂಬಂಧಿಕರ ಬಳಿ ನಾವು ಹಲ್ಲೆ ನಡೆಸಿದ್ದವಿ ಅಂತನೂ ಹೇಳಿದ್ದಾರಂತೆ.‌ ಏನೆ ಕಷ್ಟ ಬಂದರೂ ಆತ್ಮಹತ್ಯೆ ಮಾಡಿಕೊಳ್ಳುವ ಯುವಕ ಅಲ್ಲ ಎಂದು ಕುಟುಂಬಸ್ಥರು ಗೋಳಾಡುತ್ತಿದ್ದಾರೆ. ಈ ಪ್ರಕರಣ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಅನುಮಾನಸ್ಪಾದ ಸಾವು ಎಂದು ಪ್ರಕರಣ ದಾಖಲಾಗಿದೆ. ಈಗಾಗಲೇ ಕೆಲ ಯುವಕರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ‌. ಆದರೆ ಊರಿನ ಮಂದಿ ಹಾಗೂ ಗ್ರಾಮಸ್ಥರು ಇದು ಒಂದು ಕೊಲೆ, ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಅಕ್ಕನ ಮಗುವಿಗೆ ಸೋಪು ತರಲೆಂದು ಹೋದ ಯುವಕ ತನ್ನದೇ ಆಟೋ ಶೆಡ್‌ನಲ್ಲಿ ಅನುಮಾನಸ್ಪಾದವಾಗಿ ಹೆಣವಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Karnataka Weather Forecast
ಮಳೆ5 hours ago

Karnataka Weather : ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಕರಾವಳಿ, ಮಲೆನಾಡಿಗೆ ಯೆಲ್ಲೋ ಅಲರ್ಟ್‌

Dina Bhavishya
ಭವಿಷ್ಯ5 hours ago

Dina Bhavishya : ಈ ರಾಶಿಯವರಿಗೆ ಹಣ ಗಳಿಸುವ ವಿವಿಧ ಮಾರ್ಗಗಳು ಪುಷ್ಟಿ ನೀಡಲಿವೆ

Darshan and Pavitra spoke for just 16 seconds before and after Renukaswamys murder
ಬೆಂಗಳೂರು15 hours ago

Actor Darshan : ರೇಣುಕಾಸ್ವಾಮಿ ಕೊಲೆಗೂ ಮೊದಲು, ನಂತರ ದರ್ಶನ್ ಹಾಗೂ ಪವಿತ್ರ ಮಾತಾಡಿದ್ದು ಜಸ್ಟ್‌ 16 ಸೆಕೆಂಡ್!

Pralhad Joshi and Dk Shivakumar
ಕರ್ನಾಟಕ16 hours ago

DK Shivakumar :ಮುಡಾ ಕೇಸ್‌ ಡೈವರ್ಟ್‌ಗೆ ದರ್ಶನ್‌ ಫೋಟೊ ರಿಲೀಸ್‌; ಪ್ರಲ್ಹಾದ್ ಜೋಶಿ ಆರೋಪಕ್ಕೆ ಡಿಸಿಎಂ ಡಿಕೆಶಿ ಟಾಂಗ್

Auto driver found dead under mysterious circumstances
ಕೊಡಗು16 hours ago

Suspicious Death : ಬಾಣಂತಿ ಅಕ್ಕನನ್ನು ಮನೆಗೆ ಬಿಟ್ಟು ಹೊರಹೋದ ಆಟೋ ಡ್ರೈವರ್‌ ಶೆಡ್‌ನಲ್ಲಿ ಹೆಣವಾಗಿ ಪತ್ತೆ

Road Accident
ದಕ್ಷಿಣ ಕನ್ನಡ17 hours ago

Road Accident : 2 ದಿನಗಳ ಹಿಂದಷ್ಟೇ ಮದುವೆ ಆಗಿದ್ದ ನವ ವಿವಾಹಿತೆ ಕಾರು ಅಪಘಾತದಲ್ಲಿ ಸಾವು; ಪತಿ ಗಂಭೀರ

Nude video found on Morarji Desai school teachers mobile phone
ಕೋಲಾರ18 hours ago

Morarji Desai School : ವಸತಿ ಶಾಲಾ ಶಿಕ್ಷಕನ‌ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ 5 ಸಾವಿರ ನಗ್ನ ವಿಡಿಯೊ, ಫೋಟೊಗಳು ಪತ್ತೆ!

Deadly accidents on the day of Ganesh festival Five killed on the spot
ಕ್ರೈಂ19 hours ago

Road Accident : ಗಣೇಶ ಹಬ್ಬದ ದಿನವೇ ಡೆಡ್ಲಿ ಆ್ಯಕ್ಸಿಡೆಂಟ್ಸ್‌; ಐವರು ಸ್ಥಳದಲ್ಲೇ ಸಾವು

I lost control of my eyes while driving the car Film director Nagashekhar
ಬೆಂಗಳೂರು21 hours ago

Road Accident: ಕಾರು ಓಡಿಸುವಾಗ ಕಣ್ಣು ಮಂಜು ಆಗಿ ನಿಯಂತ್ರಣ ಕಳೆದುಕೊಂಡೆ; ಚಿತ್ರ ನಿರ್ದೇಶಕ ನಾಗಶೇಖರ್‌

her husband was having an illicit relationship Suicide by setting herself on fire
ಬೆಂಗಳೂರು ಗ್ರಾಮಾಂತರ21 hours ago

Self Harming : ಪತಿಯ ಅನೈತಿಕ ಸಂಬಂಧಕ್ಕೆ ಪತ್ನಿ ಬಲಿ; ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 week ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ1 month ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 month ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 month ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌