Karnataka Elections 2023 : ದೇವರಿಗೆ ಪೂಜೆ ಸಲ್ಲಿಸಿ ಕೇಸರಿ ಶಾಲು ಧರಿಸಿ ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸಿದ ಸಿಎಂ ಬೊಮ್ಮಾಯಿ - Vistara News

ಕರ್ನಾಟಕ

Karnataka Elections 2023 : ದೇವರಿಗೆ ಪೂಜೆ ಸಲ್ಲಿಸಿ ಕೇಸರಿ ಶಾಲು ಧರಿಸಿ ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸಿದ ಸಿಎಂ ಬೊಮ್ಮಾಯಿ

CM Bommai Nomination : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

VISTARANEWS.COM


on

Bommai Nomination
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾವೇರಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಶಿಗ್ಗಾಂವಿ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ನಾಮಪತ್ರ (CM Bommai Nomination) ಸಲ್ಲಿಸಿದರು. ಶ್ರೀ ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಣ್ಣ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ತೆರಳಿದ ಬಸವರಾಜ ಬೊಮ್ಮಾಯಿ ಅವರು ಅಲ್ಲಿ ತಹಸೀಲ್ದಾರ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ಬಿಜೆಪಿಯ ಮೊದಲ ಪಟ್ಟಿಯಲ್ಲಿ ಮೊದಲ ಹೆಸರಾಗಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಪ್ರಕಟಿಸಲಾಗಿತ್ತು. ಶನಿವಾರ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದರೂ ಏಪ್ರಿಲ್‌ 19ರಂದು ದೊಡ್ಡ ಮಟ್ಟದ ರ‍್ಯಾಲಿ ಏರ್ಪಡಿಸಿ ಇನ್ನೊಂದು ಸುತ್ತು ನಾಮಪತ್ರ ಸಲ್ಲಿಸಲಿದ್ದಾರೆ ಸಿಎಂ ಬೊಮ್ಮಾಯಿ.

ಹುಬ್ಬಳ್ಳಿ ದೇವಸ್ಥಾನಲ್ಲಿ ಬೊಮ್ಮಾಯಿ

ನಾಮಪತ್ರ ಸಲ್ಲಿಕೆ ವೇಳೆ ಸಂಸದ ಶಿವಕುಮಾರ್ ಉದಾಸಿ, ಸಚಿವ ಸಿ.ಸಿ ಪಾಟೀಲ್, ಸಿಎಂ ಪುತ್ರ ಭರತ್ ಬೊಮ್ಮಾಯಿ, ಶಿಗ್ಗಾವಿ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡರು ಸಿಎಂ ಬೊಮ್ಮಾಯಿಗೆ ಸಾಥ್ ನೀಡಿದರು.

ನಾಮಪತ್ರ ಸಲ್ಲಿಸಲು ಶಿಗ್ಗಾವಿಗೆ ತೆರಳುವ ಮುನ್ನ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಶಿಗ್ಗಾವಿಗೆ ತೆರಳಿದ ಅವರು ಶಿಗ್ಗಾವಿ ದ್ಯಾಮವ್ವನ ಗುಡಿಯಲ್ಲೂ ಪೂಜೆ ಸಲ್ಲಿಸಿದರು. ಅಲ್ಲಿಂದ ಕೇಸರಿ ಶಾಲು ಧರಿಸಿ ನಾಮಪತ್ರ ಸಲ್ಲಿಕೆಗೆ ತೆರಳಿದರು.

ಹುಬ್ಬಳ್ಳಿಯಲ್ಲಿ ದೇವರ ಮುಂದೆ ಬೊಮ್ಮಾಯಿ

ಅಭೂತಪೂರ್ವ ಬೆಂಬಲ ಸಿಕ್ಕಿದೆ

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಈ ಬಾರಿ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈ ಹಿಂದಿನಕ್ಕಿಂತಲೂ ಹೆಚ್ಚಿನ ಬೆಂಬಲ ನೀಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು. ಎದುರಾಳಿ ಯಾರೇ ಬರಲಿ, ಚುನಾವಣೆ ಅಂದರೆ ಕುಸ್ತಿ ಎಂದರು ಬೊಮ್ಮಾಯಿ.

ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಬಂಡಾಯದ ಬಿರುಗಾಳಿಗೆ ಪ್ರತಿಕ್ರಿಯಿಸಿದ ಅವರು, ಆಡಳಿತ ಪಕ್ಷದಲ್ಲಿರುವ ಹಲವು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿದಾಗ ಬಂಡಾಯ ಸಹಜ. ಎಲ್ಲವೂ ಶಮನ ಆಗುತ್ತದೆ ಎಂದರು.

ನಾಮಪತ್ರ ಸಲ್ಲಿಸಲು ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ನೆಚ್ಚಿನ ವಾಹನದಲ್ಲಿ ಆಗಮಿಸಿದ ಬೊಮ್ಮಾಯಿ

ಮುಖ್ಯಮಂತ್ರಿ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸಲು ತಮ್ಮ ನೆಚ್ಚಿನ ವಾಹನವಾದ ಸ್ಕಾರ್ಪಿಯೊ (ಕೆಎ 25, ಎಂ ಸಿ 2691) ದಲ್ಲಿ ಬಂದಿದ್ದರು. ಇದು ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಬೊಮ್ಮಾಯಿ ಅವರು ಬಳಸುವ ವಾಹನವಾಗಿದೆ.

ಈ ನಡುವೆ ನಾಮಪತ್ರ ಸಲ್ಲಿಕೆ ವೇಳೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪೊಲೀಸರು ಅವರನ್ನು ಹಿಂದಕ್ಕೆ ಕಳುಹಿಸಿದರು. ಆಗ ಪೊಲೀಸರು ಮತ್ತು ಸಿಎಂ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.

ಇನ್ನೂ ನಿರ್ಧಾರವಾಗದ ಕಾಂಗ್ರೆಸ್‌ ಅಭ್ಯರ್ಥಿ

ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸಿದರೂ ಕಾಂಗ್ರೆಸ್‌ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಒಂದು ಹಂತದಲ್ಲಿ ಕಾಂಗ್ರೆಸ್‌ ವಿನಯ ಕುಲಕರ್ಣಿ ಅವರನ್ನು ಕರೆತಂದು ಸಿಎಂಗೆ ಸಡ್ಡು ಹೊಡೆಯುವ ಪ್ಲ್ಯಾನ್‌ ಮಾಡಿತ್ತಾದರೂ ಅದು ಫಲಿಸಲಿಲ್ಲ. ವಿನಯ ಕುಲಕರ್ಣಿ ಅವರಿಗೆ ಈಗ ಧಾರವಾಡದ ಟಿಕೆಟ್‌ ನೀಡಲಾಗಿದೆ. ಅಂತಿಮವಾಗಿ ಈ ಕ್ಷೇತ್ರದಲ್ಲಿ ಹಿಂದಿನಿಂದಲೂ ಸ್ಪರ್ಧಿಸುತ್ತಿರುವ ಅಜ್ಜಂಪೀರ್‌ ಖಾದ್ರಿ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಕಾಣಿಸುತ್ತಿದೆ.

ಇದನ್ನೂ ಓದಿ : Karnataka Election: ಪಕ್ಷ ಬಿಟ್ಟಿದ್ದು ದುಃಖವಾಗಿದೆ ಎಂದ ಸಿಎಂ ಬೊಮ್ಮಾಯಿ; ನಾನೇನು ಕಣ್ಣೀರು ಒರೆಸಲೇ ಎಂದ ಲಕ್ಷ್ಮಣ ಸವದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ರಾಜ್ಯದ ಹಲವೆಡೆ ಅಬ್ಬರಿಸಲಿದೆ ಗುಡುಗು ಸಹಿತ ಮಳೆ

Rain News : ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನೈರುತ್ಯ ಮುಂಗಾರು ಒಳನಾಡಿನಲ್ಲಿ ಸಾಮಾನ್ಯವಾಗಿದ್ದು, ಕರಾವಳಿ ಭಾಗದಲ್ಲಿ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ತಿಳಿಸಿದೆ. ಈ ದಿನ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದ ಸುತ್ತಮುತ್ತಲೂ ಮಧ್ಯಮ ಮಳೆಯಾಗಲಿದೆ.

ದಕ್ಷಿಣ ಒಳನಾಡಿನ ರಾಮನಗರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಕೋಲಾರ, ವಿಜಯನಗರದ ಒಂದೆರಡು ಕಡಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಉತ್ತರ ಒಳನಾಡಿನ ಕೊಪ್ಪಳ, ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಉಳಿದಂತೆ ಬಾಗಲಕೋಟೆ, ಬೆಳಗಾವಿ, ಬೀದರ್‌, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರಿನಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿಯಂದು ಸಾಧಾರಣದೊಂದಿಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಕೆಲವೊಮ್ಮೆ ಬಿಸಿಲ ಧಗೆಯು ಹೆಚ್ಚಿರಲಿದೆ.

ಇದನ್ನೂ ಓದಿ: Physical Abuse : ಅಪ್ರಾಪ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೊ ಹರಿಬಿಟ್ಟ ಯುವಕ!

ಹುಡುಗಿಯರ ಮಾನ್ಸೂನ್‌ ಡ್ರೆಸ್‌ ಹೇಗಿರಬೇಕು? ಹೇಗಿರಬಾರದು?

ಮಾನ್ಸೂನ್‌ನಲ್ಲಿ ಹುಡುಗಿಯರು ಧರಿಸುವ (Monsoon Fashion do’s & don’ts) ಉಡುಪುಗಳು ನೋಡಲು ಆಕರ್ಷಕವಾಗಿದ್ದರಷ್ಟೇ ಸಾಲದು, ಧರಿಸಿದಾಗ ಕಂಫರ್ಟಬಲ್‌ ಆಗಿರಬೇಕು, ಎಲ್ಲದಕ್ಕಿಂತ ಹೆಚ್ಚಾಗಿ ಸೀಸನ್‌ಗೆ ತಕ್ಕಂತಿರಬೇಕು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಸಮೀಕ್ಷೆಯೊಂದರ ಪ್ರಕಾರ, ಸಾಕಷ್ಟು ಹುಡುಗಿಯರು ಸ್ಟೈಲಿಶ್‌ ಆಗಿ ಕಾಣಿಸಲು ಮಾನ್ಸೂನ್‌ನಲ್ಲೂ ಸಮ್ಮರ್‌ ಫ್ಯಾಷನ್‌ವೇರ್‌ಗಳನ್ನು ಧರಿಸುತ್ತಾರಂತೆ. ಇನ್ನು, ಕೆಲವು ಯುವತಿಯರು ಮಾನ್ಸೂನ್‌ ಸೀಸನ್‌ನಲ್ಲಿ ಹೊದ್ದುಕೊಂಡಂತಿರುವ ಉಡುಪುಗಳನ್ನು ಧರಿಸುತ್ತಾರಂತೆ. ಆದರೆ, ಫ್ಯಾಷನಿಸ್ಟ್‌ಗಳ ಪ್ರಕಾರ, ಆಯಾ ವರ್ಗದ ಅನುಗುಣವಾಗಿ ಹುಡುಗಿಯರು ಧರಿಸುವ ಉಡುಪುಗಳು ಬದಲಾಗುತ್ತವಂತೆ. ಅದರಲ್ಲೂ, ಜೆನ್‌ ಜಿ ಹುಡುಗಿಯರು, ಯಾವುದೇ ಸೀಸನ್‌ ಟ್ರೆಂಡ್‌ ಫಾಲೋ ಮಾಡುವುದಿಲ್ಲ, ಬದಲಾಗಿ ತಮ್ಮದೇ ಆದ ಸ್ಟೈಲಿಶ್‌ ಮಾರ್ಗವನ್ನು ಹಿಡಿಯುತ್ತಾರಂತೆ. ಅಂದ ಹಾಗೆ, ಇದೆಲ್ಲಾ ಓಕೆ, ಹಾಗೆಂದು ಸೀಸನ್‌ಗೆ ವಿರುದ್ಧವಾಗಿ ಕಾಣಿಸುವುದು ದಿನಚರಿಯಾಗಬಾರದು! ಇದು ಆರೋಗ್ಯಕ್ಕೂ ಮಾರಕ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹಾಗಾದಲ್ಲಿ, ಈ ಸೀಸನ್‌ನಲ್ಲಿ ಯಾವ ರೀತಿಯ ಡ್ರೆಸ್‌ಗಳು ಬೆಸ್ಟ್? ಯಾವುದು ನಾಟ್‌ ಓಕೆ ! ಎಂಬುದನ್ನು ಫ್ಯಾಷನಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

Monsoon Fashion

ಮಾನ್ಸೂನ್‌ ಡ್ರೆಸ್‌ಗಳು

ಮಳೆಗಾಲದಲ್ಲಿ ಟ್ರೆಂಡಿಯಾಗುವ ಜಾಕೆಟ್‌ ಡ್ರೆಸ್‌, ಕೋಟ್‌ ಡ್ರೆಸ್‌-ಫ್ರಾಕ್ಸ್, ಸ್ಕೆಟರ್‌ ಡ್ರೆಸ್, ಮಿಡಿ ಡ್ರೆಸ್‌, ಹೈ ವೇಸ್ಟ್ ಶಾಟ್ಸ್ ಆಯ್ಕೆ ಮಾಡಬಹುದು. ಇವು ಸ್ಟೈಲಿಶ್‌ ಆಗಿ ಕಾಣಿಸುವುದರ ಜೊತೆಗೆ ಟ್ರೆಂಡಿಯಾಗಿಯೂ ಬಿಂಬಿಸುತ್ತವೆ.

Monsoon Fashion

ಗಿಡ್ಡ ಪ್ಯಾಂಟ್‌ಗೆ ಓಕೆ ಹೇಳಿ

ಆಂಕೆಲ್‌ ಲೆಂಥ್‌, ಕ್ರಾಪ್ಡ್ ಪ್ಯಾಂಟ್‌, ಲೆಗ್ಗಿಂಗ್ಸ್, ಜೆಗ್ಗಿಂಗ್ಸ್, ಪುಶ್‌ ಬ್ಯಾಕ್‌ನಂತಹ ಪ್ಯಾಂಟ್‌ಗಳನ್ನು ಧರಿಸಬಹುದು. ಆದರೆ, ಯಾವುದೇ ಕಾರಣಕ್ಕೂ ಪಲ್ಹಾಜೋ, ಪ್ಯಾರಲಲ್‌, ಬೂಟ್‌ ಕಟ್‌, ಶರರಾ, ಘರಾರದಂತಹ ಅಗಲವಾದ ನೆಲಹಾಸುವಂತಹ ಪ್ಯಾಂಟ್‌ಗಳನ್ನು ಧರಿಸಬೇಡಿ.

Monsoon Fashion

ನೆಲ ಮುಟ್ಟುವ ಗೌನ್‌ಗಳನ್ನು ದೂರವಿಡಿ

ನಡೆಯುವಾಗ ನೆಲವನ್ನು ಮುಟ್ಟುವಂತಹ ಉದ್ದುದ್ದ ಮ್ಯಾಕ್ಸಿ, ಗೌನ್‌ಗಳಿಗೆ ಸದ್ಯಕ್ಕೆ ಬೈ ಹೇಳಿ. ಇವು ನೋಡಲು ಮಾತ್ರ ಆಕರ್ಷಕವಾಗಿ ಕಾಣಿಸುತ್ತವೆ. ಇವನ್ನು ನಿರ್ವಹಣೆ ಮಾಡುವುದು ಕಷ್ಟ.

Monsoon Fashion

ಭಾರವಿಲ್ಲದ ಲೈಟ್‌ವೈಟ್‌ ಉಡುಗೆ ಧರಿಸಿ

ಲೇಯರಿಂಗ್‌ ಹೆಸರಲ್ಲಿ ದಪ್ಪನೆಯ ಫ್ಯಾಬ್ರಿಕ್‌ನ ಉಡುಗೆಗಳು ಉಸಿರುಕಟ್ಟಿಸಬಹುದು. ಮಳೆಯಲ್ಲಿ ಒದ್ದೆಯಾದರಂತೂ ಕಿರಿಕಿರಿ ಎನಿಸಬಹುದು. ಇದನ್ನು ಅವಾಯ್ಡ್ ಮಾಡಲು, ಬೇಗನೇ ಒಣಗುವ ಲೈಟ್‌ವೈಟ್‌ ಡ್ರೆಸ್‌ಗಳಿಗೆ ಸೈ ಎನ್ನಿ.

ಹೆವಿ ಎಥ್ನಿಕ್‌ ಡಿಸೈನರ್‌ವೇರ್‌ ಅವಾಯ್ಡ್ ಮಾಡಿ

ಹೆವಿ ಎಥ್ನಿಕ್‌ವೇರ್‌ಗಳನ್ನು ಆವಾಯ್ಡ್ ಮಾಡಿ. ಎಥ್ನಿಕ್‌ವೇರ್‌ ಧರಿಸಲೇ ಬೇಕಿದ್ದಲ್ಲಿ ಆದಷ್ಟೂ ಆಂಕೆಲ್‌ ಲೆಂಥ್‌ ಡಿಸೈನರ್‌ವೇರ್ಸ್ ಸೆಲೆಕ್ಟ್ ಮಾಡಿ ಶಾರ್ಟ್ ಕುರ್ತಾ, ಆಂಕೆಲ್‌ ಲೆಂಥ್‌ ಚೂಡಿದಾರ್‌, ಸಲ್ವಾರ್‌ಗಳನ್ನು ಧರಿಸಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೊಪ್ಪಳ

Koppala News: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ನಿರ್ಮಾಣದಲ್ಲೂ ಕಮಿಷನ್ ರಾಜಕೀಯ; ಕಾಂಗ್ರೆಸ್ ಮುಖಂಡನಿಂದಲೇ ಆರೋಪ

Koppala News: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ನಂಬರ್-19 ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ನದಿ ಪಾಲಾಗಿ ರೈತರು ಕಂಗಾಲಾಗುತ್ತಿದ್ದರೆ, ಇತ್ತ ಗೇಟ್ ನಿರ್ಮಾಣ ಕಾಮಗಾರಿಯಲ್ಲಿ ಕಮಿಷನ್ ದಂಧೆ ಜೋರಾಗಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ಆರೋಪಿಸಿದ್ದಾರೆ.

VISTARANEWS.COM


on

Koppala News
Koo

ಗಂಗಾವತಿ: ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ನಂಬರ್-19 ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು (Koppala News) ನದಿ ಪಾಲಾಗಿ ರೈತರು ಕಂಗಾಲಾಗುತ್ತಿದ್ದರೆ, ಇತ್ತ ಗೇಟ್ ನಿರ್ಮಾಣ ಕಾಮಗಾರಿಯಲ್ಲಿ ಕಮಿಷನ್ ದಂಧೆ ಜೋರಾಗಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ಆರೋಪಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 22 ಅಡಿ ಅಗಲದ 60ಕ್ಕೂ ಹೆಚ್ಚು ಅಡಿ ಎತ್ತರದ ಬೃಹತ್ ಕಬ್ಬಿಣದ ಗೇಟ್ ನಿರ್ಮಾಣ ಕಾರ್ಯಕ್ಕೆ ನಾಡಿನ ಹೆಸರಾಂತ ಸಂಸ್ಥೆ ಹಾಗೂ ವಿಜಯನಗರ-ಬಳ್ಳಾರಿ ಜಿಲ್ಲೆಯಲ್ಲಿಯೇ ಇರುವ ಜಿಂದಾಲ್ ಸಂಸ್ಥೆ ಮುಂದೆ ಬಂದಿತ್ತು. ಆದರೆ ಆ ಸಂಸ್ಥೆ ಕಾಮಗಾರಿಗೆ ಕಮಿಷನ್ ನೀಡದು ಎಂಬ ಕಾರಣಕ್ಕೆ ಗೇಟ್ ನಿರ್ಮಾಣ ಕಾಮಗಾರಿಯಿಂದ ಕೊಕ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Tungabhadra Dam: ಜಲಾಶಯ ನಿರ್ವಹಣೆ ಕುರಿತ ಕೇಂದ್ರ ಸಮಿತಿ ಸಲಹೆಯನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ; ಪ್ರಲ್ಹಾದ್‌ ಜೋಶಿ ಆರೋಪ

ಅನುಭವ, ಗುಣಮಟ್ಟದ ಖಾತರಿ ಮತ್ತು ಕಾಮಗಾರಿ ನಿರ್ವಹಿಸಿದ ಯಾವುದೇ ಪ್ರಮಾಣಪತ್ರ ಇಲ್ಲದ ಸ್ಥಳೀಯ ಅಮೀರ್ ಮತ್ತು ನಾರಾಯಣ ಎಂಜಿನಿಯರಿಂಗ್ ಎಂಬ ಎರಡು ಸಂಸ್ಥೆಗಳಿಗೆ ಗೇಟ್ ನಿರ್ಮಾಣದ ಜವಾಬ್ದಾರಿ ವಹಿಸಿರುವುದು ಅನುಮಾನಾಸ್ಪದವಾಗಿದೆ. ಯಾವ ಮಾನದಂಡದ ಮೇಲೆ ಅವರಿಗೆ ಗುತ್ತಿಗೆ ನೀಡಲಾಗಿದೆ ಎಂದು ಭವಾನಿಮಠ ಪ್ರಶ್ನಿಸಿದ್ದಾರೆ.

ತುರ್ತು, ವಿಕೋಪದಂತಹ ಸಂದರ್ಭದಲ್ಲಿ ಮಾಡಲಾಗುವ ಕಾಮಗಾರಿಗಳಿಗೆ ಕರ್ನಾಟಕ ಟೆಂಡರ್ ಪಾರದರ್ಶಕ ನಿಯಮ(ಕೆಟಿಟಿಪಿ)ಗಳ ಪ್ರಕಾರ ಟೆಂಡರ್ ಕರೆಯದೇ ಕಾಮಗಾರಿ ಮಾಡಲು ಅವಕಾಶ ಇರುವುದನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಗೇಟ್ ನಿರ್ಮಾಣ ಕಾಮಗಾರಿಯಲ್ಲೂ ಅಕ್ರಮಕ್ಕೆ ಮುಂದಾಗಿದ್ದಾರೆ.

ಸ್ಥಳೀಯ ಸಂಸ್ಥೆಗಳ ಬಗ್ಗೆ ಪೂರ್ವಪರ ಯಾವ ಮಾಹಿತಿ ನೀಡದೇ ಏಕಾಏಕಿ ಕಾಮಗಾರಿ ನೀಡಿರುವುದು ಏಕೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಜಿಂದಾಲ್‌ನವರು ಯಾವುದೇ ಪರ್ಸಂಟೇಜ್ ನೀಡುವುದಿಲ್ಲ ಎಂಬ ಏಕೈಕ ಕಾರಣಕ್ಕೆ ಆ ಸಂಸ್ಥೆಗೆ ಗೇಟ್ ನಿರ್ಮಾಣ ಕಾಮಗಾರಿಯ ಟೆಂಡರ್ ನಿರಾಕರಿಸಲಾಗಿದೆ ಎಂದು ಮುಕುಂದರಾವ್ ಆರೋಪಿಸಿದ್ದಾರೆ.

ರೈತರಲ್ಲಿ ನಿರಾಸಕ್ತಿ ಏಕೆ?

ತುಂಗಭದ್ರಾ ಜಲಾಶಯದಿಂದ 60ಕ್ಕೂ ಹೆಚ್ಚು ಟಿಎಂಸಿಯಷ್ಟು ಅಪಾರ ಪ್ರಮಾಣದ ನೀರು ಪೋಲಾಗಿ ನಾಟಿ ಮಾಡಿರುವ ಭತ್ತದ ಬೆಳೆಗೆ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಆದರೂ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಲ್ಲಿ ಯಾವುದೇ ಆತಂಕ, ಪ್ರತಿಭಟನೆ ಮಾಡುವ ಮನೋಭಾವ ಕ್ಷೀಣವಾಗಿರುವುದು ಬೇಸರದ ಸಂಗತಿ ಎಂದು ಭವಾನಿಮಠ ಬೇಸರ ವ್ಯಕ್ತಪಡಿಸಿದ್ದಾರೆ.

ರಾಯಚೂರು-ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಒದಗಿ ಬಂದಿರುವ ಆತಂಕ, ಅಪಾಯದ ಬಗ್ಗೆ ರೈತರು, ಈ ಭಾಗದ ಸಂಘಟನೆಗಳು, ಜನರು ಧ್ವನಿ ಎತ್ತದಿದ್ದರೆ ಮುಂದೆ ಭಾರೀ ಪ್ರಮಾಣದ ಗಂಡಾಂತರ ಕಾದಿದೆ. ಜಲಾಶಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವ ಶಿವರಾಜ ತಂಗಡಗಿ ಸೇರಿದಂತೆ ಹಲವರು ಜಲಾಶಯಕ್ಕೆ ಅಪಾಯ ಒದಗಿ ಬಂದಿರುವ ಬಗ್ಗೆ ಮಾತನಾಡಿದ್ದಾರೆ. ಮೊದಲು ಜಲಾಶಯ ಉಳಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Indian Bank Recruitment 2024: 300 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಇಂಡಿಯನ್‌ ಬ್ಯಾಂಕ್‌; ಕರ್ನಾಟಕದಲ್ಲಿಯೂ ಇದೆ ನೇಮಕಾತಿ

ತುಂಗಭದ್ರಾ ಜಲಾಶಯ ವ್ಯಾಪ್ತಿಯ ಜನ ಸಂಘಟಿತರಾಗಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯದೇ ಹೋದಲ್ಲಿ ನಿಜಕ್ಕೂ ಜಲಾಶಯಕ್ಕೆ ದೊಡ್ಡ ಗಂಡಾಂತರ ಎದುರಾಗಲಿದೆ. ಆಪತ್ಕಾಲ ಎದುರಾದಾಗ ಸರ್ಕಾರ ಕೈ ಎತ್ತುವ ಸಾಧ್ಯತೆ ಇದೆ. ಈ ಬಗ್ಗೆ ಸಮಾನ ಮನಸ್ಕರು ಸೇರಿ ಜಲಾಶಯದ ಉಳಿವಿಗೆ ಹೋರಾಟ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಕರೆ ನೀಡಿದ್ದಾರೆ.

Continue Reading

ಕರ್ನಾಟಕ

Koppala News: ಮಕ್ಕಳ ತಟ್ಟೆಯಲ್ಲಿನ ಮೊಟ್ಟೆ ಕಸಿದುಕೊಂಡ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ!

Koppala News: ಮಕ್ಕಳಿಗೆ ಮೊಟ್ಟೆ ಕೊಟ್ಟು ವೀಡಿಯೋ ಮಾಡಿ ವಾಪಸ್ ಕಸಿದುಕೊಂಡು ರಾಜ್ಯಾದ್ಯಂತ ಸುದ್ದಿಯಾಗಿದ್ದ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ಕೊಪ್ಪಳ ಜಿಲ್ಲಾ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್. ದರಗದ, ಗಂಗಾವತಿಯ ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ್ ಎಸ್. ಗಾಣಿಗೇರ ಅವರು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

VISTARANEWS.COM


on

Koppala News
Koo

ಗಂಗಾವತಿ: ಮಕ್ಕಳಿಗೆ ಮೊಟ್ಟೆ ಕೊಟ್ಟು ವೀಡಿಯೋ ಮಾಡಿ ವಾಪಸ್ ಕಸಿದುಕೊಂಡು ರಾಜ್ಯಾದ್ಯಂತ ಸುದ್ದಿಯಾಗಿದ್ದ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ನ್ಯಾಯಾಧೀಶರುಗಳು ದಿಢೀರ್ ಭೇಟಿ ನೀಡಿ, ಪರಿಶೀಲನೆ (Koppala News) ನಡೆಸಿದರು.

ಕೊಪ್ಪಳ ಜಿಲ್ಲಾ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್. ದರಗದ, ಗಂಗಾವತಿಯ ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ್ ಎಸ್. ಗಾಣಿಗೇರ ಅವರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇದನ್ನೂ ಓದಿ: Government Employees: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಆ.17ರಂದು ವಿಶೇಷ ಸಾಂದರ್ಭಿಕ ರಜೆ

ಮೊಟ್ಟೆ ಪ್ರಕರಣ ಪೂರ್ಣ ಮಾಹಿತಿ ಪಡೆದುಕೊಂಡ ನ್ಯಾಯಾಧೀಶರು, ಕೇಂದ್ರದಲ್ಲಿ ಮಕ್ಕಳಿಗೆ ಇರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಶೌಚಾಲಯ, ಕುಡಿಯುವ ನೀರು, ದಾಸ್ತಾನು ಮಾಡಲಾಗಿರುವ ಆಹಾರ, ಮಕ್ಕಳಿಗೆ ನೀಡುವ ಔಷಧಿಗಳನ್ನು ಪರಿಶೀಲಿಸಿದರು.

ಅಂಗನವಾಡಿ ಕೇಂದ್ರದ ಸುತ್ತಲೂ ಇರುವ ಕಸಕಡ್ಡಿ, ತಿಪ್ಪೆಗುಂಡಿ ತೆರವಿಗೆ ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Kannada New Movie: ಸಮರ್ಜಿತ್ ಲಂಕೇಶ್ ಅಭಿನಯದ ʼಗೌರಿʼ ಚಿತ್ರಕ್ಕೆ ನಟ ಉಪೇಂದ್ರ ಸಾಥ್‌; ಆ.15ಕ್ಕೆ ಸಿನಿಮಾ ರಿಲೀಸ್‌

ಕೇಂದ್ರದಲ್ಲಿ ನೀರಿನ ನಳ ಇಲ್ಲದಿರುವುದು, ಮಕ್ಕಳಿಗೆ ನಿತ್ಯ ನೀಡುವ ಆಹಾರದ ಮೆನು ಹಾಕದಿರುವುದು, ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲದಿರುವುದು, ಶೌಚಾಲಯದ ಕಟ್ಟಡ ಬಿರುಕು ಉಂಟಾಗಿರುವುದನ್ನು ನ್ಯಾಯಾಧೀಶರುಗಳು ಗಮನಿಸಿ, ಸೂಕ್ತ ಕ್ರಮ‌ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Continue Reading

ಬೆಂಗಳೂರು

Kannada New Movie: ತೆರೆಗೆ ಬರಲು ಸಿದ್ಧವಾಗಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ʼಸ್ವಪ್ನ ಮಂಟಪʼ ಚಿತ್ರ

Kannada New Movie: `ಸ್ವಪ್ನ ಮಂಟಪ’ ಚಿತ್ರವನ್ನು ಬರಗೂರು ರಾಮಚಂದ್ರಪ್ಪನವರು ತಮ್ಮದೇ ಕಾದಂಬರಿಯನ್ನು ಆಧರಿಸಿ ಚಿತ್ರಕತೆ, ಸಂಭಾಷಣೆ, ಗೀತೆ ರಚನೆ ಮಾಡುವುದರ ಜತೆಗೆ ನಿರ್ದೇಶನ ಮಾಡಿದ್ದು, ಈ ಸಿನಿಮಾವು ಜುಲೈ 31ರಂದು ಸೆನ್ಸಾರ್‌ ಆಗಿದೆ. ಸೆನ್ಸಾರ್‌ ಮಂಡಳಿಯು ಈ ಚಿತ್ರದ ಆಶಯ ಮತ್ತು ಅಭಿವ್ಯಕ್ತಿ ವಿಧಾನವನ್ನು ಮೆಚ್ಚಿ ʼಯುʼ ಪ್ರಮಾಣಪತ್ರ ನೀಡಿದೆ.

VISTARANEWS.COM


on

Kannada New Movie
Koo

ಬೆಂಗಳೂರು: ಬಾಬು ನಾಯ್ಕ್ ಅವರು ತಮ್ಮ ಮಲೈ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಾಣ ಮಾಡಿರುವ ʼಸ್ವಪ್ನ ಮಂಟಪʼ ಚಿತ್ರವು (Kannada New Movie) ಜುಲೈ 31ರಂದು ಸೆನ್ಸಾರ್‌ ಆಗಿದೆ. ಸೆನ್ಸಾರ್‌ ಮಂಡಳಿಯು ಈ ಚಿತ್ರದ ಆಶಯ ಮತ್ತು ಅಭಿವ್ಯಕ್ತಿ ವಿಧಾನವನ್ನು ಮೆಚ್ಚಿ ʼಯುʼ ಪ್ರಮಾಣ ಪತ್ರ ನೀಡಿದೆ.

ಇದನ್ನೂ ಓದಿ: Indian Bank Recruitment 2024: 300 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಇಂಡಿಯನ್‌ ಬ್ಯಾಂಕ್‌; ಕರ್ನಾಟಕದಲ್ಲಿಯೂ ಇದೆ ನೇಮಕಾತಿ

`ಸ್ವಪ್ನ ಮಂಟಪ’ ಚಿತ್ರವನ್ನು ಬರಗೂರು ರಾಮಚಂದ್ರಪ್ಪನವರು ತಮ್ಮದೇ ಕಾದಂಬರಿಯನ್ನು ಆಧರಿಸಿ ಚಿತ್ರಕತೆ, ಸಂಭಾಷಣೆ, ಗೀತೆ ರಚನೆ ಮಾಡುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ.

`ಸ್ವಪ್ನ ಮಂಟಪ’ ಚಿತ್ರವು ಪಾರಂಪರಿಕ ಸ್ಥಳಗಳ ಮಹತ್ವ ಮತ್ತು ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸುವ ಕಥಾ ವಸ್ತುವನ್ನು ಒಳಗೊಂಡಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ಸ್ವಪ್ನ ಮಂಟಪವನ್ನು ಕೆಡವಿ ಹಾಕುವ ಪ್ರಯತ್ನವನ್ನು ಕೆಲವರು ಮಾಡಿದಾಗ ಕಥಾ ನಾಯಕ ಮತ್ತು ನಾಯಕಿ ಒಂದಾಗಿ ಜನರನ್ನು ಸಂಘಟಿಸಿ ಪಾರಂಪರಿಕ ಚಾರಿತ್ರಿಕ ಮಂಟಪವನ್ನು ಉಳಿಸುತ್ತಾರೆ. ಸಾಂಕೇತಿಕವಾದ ಈ ಕಥಾವಸ್ತುವು ಪಾರಂಪರಿಕ ಸ್ಥಳಗಳ ರಕ್ಷಣೆ ವಿಷಯದಲ್ಲಿ ಪ್ರಾತಿನಿಧಿಕವೂ ಆಗುತ್ತದೆ.

ಕಥಾ ನಾಯಕರಾಗಿ ವಿಜಯ ರಾಘವೇಂದ್ರ ಮತ್ತು ನಾಯಕಿಯಾಗಿ ರಂಜಿನಿ ರಾಘವನ್ ಅಭಿನಯಿಸಿದ್ದಾರೆ. ಇಬ್ಬರೂ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಒಂದು ವಿಶೇಷ, ಉಳಿದ ತಾರಾಗಣದಲ್ಲಿ ಸುಂದರರಾಜ್, ಶೋಭಾ ರಾಘವೇಂದ್ರ, ರಜಿನಿ, ಸುಂದರರಾಜ ಅರಸು, ಅಂಬರೀಶ್ ಸಾರಂಗಿ, ರಾಜಪ್ಪ ದಳವಾಯಿ, ವೆಂಕಟರಾಜು, ಮೈಸೂರು ಮಂಜುಳ, ಉಮ್ಮತ್ತೂರು ಬಸವರಾಜು, ಶಿವಲಿಂಗ ಪ್ರಸಾದ್, ಭಾರತಿ ರಮೇಶ್, ಗುಂಡಿ ರಮೇಶ್ ಮುಂತಾದವರು ಇದ್ದಾರೆ.

ಇದನ್ನೂ ಓದಿ: Tungabhadra Dam: ಜಲಾಶಯ ನಿರ್ವಹಣೆ ಕುರಿತ ಕೇಂದ್ರ ಸಮಿತಿ ಸಲಹೆಯನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ; ಪ್ರಲ್ಹಾದ್‌ ಜೋಶಿ ಆರೋಪ

ಈ ಚಿತ್ರವು ಸುರೇಶ್ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆಯನ್ನು ಒಳಗೊಂಡಿದೆ. ನಟರಾಜ್ ಶಿವು ಮತ್ತು ಪ್ರವೀಣ್, ಸಹ ನಿರ್ದೇಶಕರಾಗಿ, ಗೋಪಾಲಕೃಷ್ಣ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

Continue Reading
Advertisement
ರಾಜಮಾರ್ಗ ಅಂಕಣ Paris Olympics
ಅಂಕಣ3 mins ago

ರಾಜಮಾರ್ಗ ಅಂಕಣ: ಪ್ಯಾರಿಸ್ ಒಲಿಂಪಿಕ್ಸ್ – ಭಾರತದ ಸಾಧನೆ ಕಳಪೆಯೇ?

Kamikaze Drones
ದೇಶ1 hour ago

Kamikaze Drones : ಸ್ವಾತಂತ್ರ್ಯೋತ್ಸವದ ಸಂಭ್ರಮದ ನಡುವೆ ಸ್ವದೇಶಿ ನಿರ್ಮಿತ ಬಾಂಬರ್​​ ಡ್ರೋನ್​ ಸಿದ್ಧಪಡಿಸಿದ ಭಾರತ

Karnataka Weather Forecast
ಮಳೆ1 hour ago

Karnataka Weather : ರಾಜ್ಯದ ಹಲವೆಡೆ ಅಬ್ಬರಿಸಲಿದೆ ಗುಡುಗು ಸಹಿತ ಮಳೆ

Dina Bhavishya
ಭವಿಷ್ಯ2 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವವರಿಂದ ಹುಷಾರಾಗಿರಿ

Ashwini Ponnappa
ಪ್ರಮುಖ ಸುದ್ದಿ8 hours ago

Ashwini Ponnappa : ಷಟ್ಲರ್​ಗಳನ್ನೇ ಗುರಿಯಾಗಿಸಿದ ಕ್ರೀಡಾ ಇಲಾಖೆ ವಿರುದ್ಧವೇ ತಿರುಗಿ ಬಿದ್ದ ಅಶ್ವಿನಿ ಪೊನ್ನಪ್ಪ

Sowmya Reddy
ರಾಜಕೀಯ8 hours ago

Sowmya Reddy: ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ನೇಮಕ

Cricket News
ಪ್ರಮುಖ ಸುದ್ದಿ8 hours ago

Cricket News : ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳಾಪಟ್ಟಿ ಬದಲಾಯಿಸಿದ ಬಿಸಿಸಿಐ

Koppala News
ಕೊಪ್ಪಳ8 hours ago

Koppala News: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್ ನಿರ್ಮಾಣದಲ್ಲೂ ಕಮಿಷನ್ ರಾಜಕೀಯ; ಕಾಂಗ್ರೆಸ್ ಮುಖಂಡನಿಂದಲೇ ಆರೋಪ

Koppala News
ಕರ್ನಾಟಕ9 hours ago

Koppala News: ಮಕ್ಕಳ ತಟ್ಟೆಯಲ್ಲಿನ ಮೊಟ್ಟೆ ಕಸಿದುಕೊಂಡ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ!

Kannada New Movie
ಬೆಂಗಳೂರು9 hours ago

Kannada New Movie: ತೆರೆಗೆ ಬರಲು ಸಿದ್ಧವಾಗಿದೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ʼಸ್ವಪ್ನ ಮಂಟಪʼ ಚಿತ್ರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌